Tag: politics

  • ರಜಿನಿಕಾಂತ್ ಅನಕ್ಷರಸ್ಥ, ಮಾಧ್ಯಮ ಪ್ರಚಾರಕ್ಕಾಗಿ ರಾಜಕೀಯ ಎಂಟ್ರಿ: ಬಿಜೆಪಿ ಮುಖಂಡ ಸುಬ್ರಹ್ಮಣ್ಯ ಸ್ವಾಮಿ ಕಿಡಿ

    ರಜಿನಿಕಾಂತ್ ಅನಕ್ಷರಸ್ಥ, ಮಾಧ್ಯಮ ಪ್ರಚಾರಕ್ಕಾಗಿ ರಾಜಕೀಯ ಎಂಟ್ರಿ: ಬಿಜೆಪಿ ಮುಖಂಡ ಸುಬ್ರಹ್ಮಣ್ಯ ಸ್ವಾಮಿ ಕಿಡಿ

    ಚೆನ್ನೈ: ತಮಿಳುನಾಡಿನಲ್ಲಿ ರಾಜಕೀಯ ಪ್ರವೇಶದ ಬಗ್ಗೆ ರಜನಿಕಾಂತ್ ಅಧಿಕೃತವಾಗಿ ಘೋಷಣೆ ಮಾಡಿದ್ದು, ಇದ್ದಕ್ಕೆ ಬಿಜೆಪಿ ಮುಖಂಡ ಸುಬ್ರಹ್ಮಣ್ಯ ಸ್ವಾಮಿ ಮಾಧ್ಯಮ ಪ್ರಚಾರಕ್ಕಾಗಿ ರಜಿನಿಕಾಂತ್ ರಾಜಕೀಯ ಪ್ರವೇಶಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

    ಕೇವಲ ಪ್ರಚಾರಕ್ಕಾಗಿ ರಜಿನಿಕಾಂತ್ ರಾಜಕೀಯ ಪ್ರವೇಶಿಸಿದ್ದಾರೆ. ತಮಿಳುನಾಡು ಜನರು ಬುದ್ಧಿವಂತರು. ರಜನಿಕಾಂತ್ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ್ದು, ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದ್ದಾರೆ.


    ರಜನಿಕಾಂತ್ ಅನಕ್ಷರಸ್ಥರಾಗಿದ್ದು, ಗೊತ್ತು ಗುರಿ ಇಲ್ಲದ ವ್ಯಕ್ತಿ. ಅವರು ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ್ದು, ಅದರ ಬಗ್ಗೆ ಯಾವುದೇ ದಾಖಲೆ ನೀಡಿಲ್ಲ. ತಮಿಳುನಾಡಿನ ಜನ ಬುದ್ಧಿವಂತರು ಯಾರಿಗೆ ಮತ ಹಾಕಬೇಕೆಂದು ಗೊತ್ತಿದೆ ಎಂದು ಟೀಕಿಸಿದ್ರು.

    ಚೆನ್ನೈನ ರಾಘವೇಂದ್ರ ಹಾಲ್‍ನಲ್ಲಿ ನಡೆದ ಅಭಿಮಾನಿಗಳ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ರಜನಿಕಾಂತ್, ಸ್ವಂತ ಪಕ್ಷ ಸ್ಥಾಪಿಸುತ್ತಿರುವುದಾಗಿ ಘೋಷಿಸಿದ್ರು. ಬಾಬಾನ ಮುದ್ರೆ ಪ್ರದರ್ಶಿಸಿ, ಭಗವದ್ಗೀತೆಯ ಶ್ಲೋಕ ಪಠಿಸಿದ್ರು.

    ಬಳಿಕ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಬೇಕಾಗಿರುವ ಕಾರಣ, ತಮಿಳರಿಗಾಗಿ ನನ್ನ ಹೋರಾಟ ಮುಂದುವರೆಸುವುದಾಗಿ ಹೇಳಿದ್ರು. ಪಕ್ಷದ ಹೆಸರನ್ನ ಲೋಕಸಭಾ ಚುನಾವಣೆ ಹೊತ್ತಲ್ಲಿ ಬಹಿರಂಗಗೊಳಿಸುತ್ತೇನೆ. ತಮಿಳುನಾಡಿನ ಎಲ್ಲಾ 234 ಕ್ಷೇತ್ರಗಳಲ್ಲೂ ತಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡುವುದಾಗಿ ತಿಳಿಸಿರುವ ರಜನಿ, ನಿಮ್ಮೆಲ್ಲರ ಸಹಕಾರ ನನಗೆ ಅಗತ್ಯವಾಗಿ ಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ನಮ್ಮ ಜನರೇ ನಮ್ಮ ಶಕ್ತಿ. ಸರ್ಕಾರ ರಚನೆ ಅಷ್ಟು ಸುಲಭವಲ್ಲ. ಕಳೆದ ಒಂದು ವರ್ಷದಿಂದ ತಮಿಳುನಾಡು ಜನ ರೋಸಿ ಹೋಗಿದ್ದಾರೆ. ನಿಮ್ಮೆಲ್ಲರ ಆಶಿರ್ವಾದ ಇದ್ದರೆ ಉತ್ತಮ ಆಡಳಿತ ನಡೆಸುತ್ತೇನೆ ಅಂದ್ರು.

    ಇತ್ತ ರಜಿನಿಕಾಂತ್ ಗೆಳೆಯ ಕಮಲ್ ಹಾಸನ್ ಅವರ ನಿರ್ಧಾರವನ್ನು ಸ್ವಾಗತಿಸಿ ಶುಭಾಶಯ ತಿಳಿಸಿದ್ದರು.

  • ಅಭಿಮಾನಿಗಳೆದುರು ತಲೈವಾ ರಾಜಕೀಯ ಪ್ರವೇಶ ಘೋಷಣೆ- ಬಾಬಾ ಮುದ್ರೆ ಪ್ರದರ್ಶಿಸಿ ಭಗವದ್ಗೀತೆ ಪಠಣ

    ಅಭಿಮಾನಿಗಳೆದುರು ತಲೈವಾ ರಾಜಕೀಯ ಪ್ರವೇಶ ಘೋಷಣೆ- ಬಾಬಾ ಮುದ್ರೆ ಪ್ರದರ್ಶಿಸಿ ಭಗವದ್ಗೀತೆ ಪಠಣ

    ಚೆನ್ನೈ: ತಮಿಳುನಾಡಿನಲ್ಲಿ ರಜಿನಿ ಯುಗಾರಂಭವಾಗಿದೆ. ರಾಜಕೀಯ ಪ್ರವೇಶದ ಬಗ್ಗೆ ತಲೈವಾ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

    ಚೆನ್ನೈನ ರಾಘವೇಂದ್ರ ಹಾಲ್‍ನಲ್ಲಿ ನಡೆದ ಅಭಿಮಾನಿಗಳ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ರಜನಿಕಾಂತ್, ಸ್ವಂತ ಪಕ್ಷ ಸ್ಥಾಪಿಸುತ್ತಿರುವುದಾಗಿ ಘೋಷಿಸಿದ್ರು. ಬಾಬಾನ ಮುದ್ರೆ ಪ್ರದರ್ಶಿಸಿ, ಭಗವದ್ಗೀತೆಯ ಶ್ಲೋಕ ಪಠಿಸಿದ್ರು. ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಬೇಕಾಗಿರುವ ಕಾರಣ, ತಮಿಳರಿಗಾಗಿ ನನ್ನ ಹೋರಾಟ ಮುಂದುವರೆಸುವುದಾಗಿ ಹೇಳಿದ್ರು.

    ಪಕ್ಷದ ಹೆಸರನ್ನ ಲೋಕಸಭಾ ಚುನಾವಣೆ ಹೊತ್ತಲ್ಲಿ ಬಹಿರಂಗಗೊಳಿಸುತ್ತೇನೆ. ತಮಿಳುನಾಡಿನ ಎಲ್ಲಾ 234 ಕ್ಷೇತ್ರಗಳಲ್ಲೂ ತಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡುವುದಾಗಿ ತಿಳಿಸಿರುವ ರಜನಿ, ನಿಮ್ಮೆಲ್ಲರ ಸಹಕಾರ ನನಗೆ ಅಗತ್ಯವಾಗಿ ಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ನಮ್ಮ ಜನರೇ ನಮ್ಮ ಶಕ್ತಿ. ಸರ್ಕಾರ ರಚನೆ ಅಷ್ಟು ಸುಲಭವಲ್ಲ. ಕಳೆದ ಒಂದು ವರ್ಷದಿಂದ ತಮಿಳುನಾಡು ಜನ ರೋಸಿ ಹೋಗಿದ್ದಾರೆ. ನಿಮ್ಮೆಲ್ಲರ ಆಶಿರ್ವಾದ ಇದ್ದರೆ ಉತ್ತಮ ಆಡಳಿತ ನಡೆಸುತ್ತೇನೆ ಅಂದ್ರು.

    ತಲೈವಾ ರಾಜಕೀಯ ಪ್ರವೇಶ ಘೋಷಿಸುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಈ ಸಂಭ್ರಮಾಚರಣೆ ವೇಳೆ ರಜಿನಿ ಅಭಿಮಾನಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದ ಘಟನೆಯೂ ನಡೆದಿದೆ.

    https://www.youtube.com/watch?v=0PzGj6rn8yc

    https://www.youtube.com/watch?v=8PQP7EkcPPk

  • ಮೊದಲ ಬಾರಿ ರಾಜ್ ಕುಮಾರ್ ಕಂಡಾಗ ಮೈ ಮರೆತು ನಿಂತೆ ಬಿಟ್ಟೆ : ರಜನಿಕಾಂತ್

    ಮೊದಲ ಬಾರಿ ರಾಜ್ ಕುಮಾರ್ ಕಂಡಾಗ ಮೈ ಮರೆತು ನಿಂತೆ ಬಿಟ್ಟೆ : ರಜನಿಕಾಂತ್

    ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅವರು ಅಭಿಮಾನಿ ದೇವರು ಡಾ. ರಾಜ್ ಕುಮಾರ್ ಅವರ ಬಹುದೊಡ್ಡ ಅಭಿಮಾನಿ ಎಂಬುದು ಎಲ್ಲರಿಗೂ ತಿಳಿದ ವಿಷಯವೇ, ಆದರೆ ಮತ್ತೊಮ್ಮೆ ರಜನಿ ಅವರು ತಮ್ಮ ಬಾಲ್ಯದ ನೆನಪು ಮಾಡಿಕೊಳ್ಳುವ ಮೂಲಕ ರಾಜ್ ಕುಮಾರ್ ಅವರ ಬಗೆಗಿನ ತಮ್ಮ ಅಭಿಮಾನವನ್ನು ಹಂಚಿಕೊಂಡಿದ್ದಾರೆ.

    ಚೆನ್ನೈನ ಕೂಡಂಬಾಕಂ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ತಮ್ಮ ಅಭಿಮಾನಿಗಳ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನಗೆ ನಿಮ್ಮ ತವಕ ಅರ್ಥವಾಗುತ್ತದೆ, ನಾನು ಸಹ ನನ್ನ ಬಾಲ್ಯದ ದಿನಗಳಲ್ಲಿ ರಾಜ್ ಕುಮಾರ್ ಅವರನ್ನು ನೋಡಲು ಇದೇ ರೀತಿ ಹೋಗಿದ್ದೆ ಎಂದು ತಮ್ಮ ಹಿಂದಿನ ದಿನಗಳನ್ನು ಮೆಲುಕು ಹಾಕಿ ಕೊಂಡಿದ್ದಾರೆ.

    ನನ್ನ 16 ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ ಕುಮಾರ್ ಅವರ ಚಲನಚಿತ್ರದ 100 ನೇ ದಿನದ ಕಾಯಕ್ರಮಕ್ಕೆ ಹೋಗಿದ್ದೆ. ಶಿವಾಜಿ ಗಣೇಶನ್ ಸರ್, ಎಂ ಜಿ ಆರ್ ಸರ್ ಸೇರಿದರೆ ಹೇಗೆ, ಹಾಗೆ ಕರ್ನಾಟಕದಲ್ಲಿ ರಾಜ್‍ಕುಮಾರ್. ಮೊದಲ ಬಾರಿ ಅವರನ್ನು ನೋಡಿದ ಕ್ಷಣ ನಾನು ಮೈರೆತು ನಿಂತು ಬಿಟ್ಟೆ. ನನ್ನ ಕಣ್ಣ ಮುಂದೆ ಅವರ ಚಲನಚಿತ್ರದ ದೃಶ್ಯಗಳು ಮಾತ್ರ ಕಾಣಿಸುತ್ತಿತ್ತು. ಈ ವೇಳೆ ಅವರನ್ನು ನಾನು ಮುಟ್ಟಲು ಹೋಗಿದ್ದೆ. ಹಾಗೆಯೇ ಪ್ರಸ್ತುತ ನಿಮ್ಮ ತವಕ ನನಗೇ ಅರ್ಥವಾಗುತ್ತದೆ ಎಂದರು.

    ಇದೇ ವೇಳೆ ಕಾರ್ಯಕ್ರಮದಲ್ಲಿ ಅಭಿಮಾನಿಗಳು ತಮ್ಮ ಕಾಲ ಮೇಲೆ ಬೀಳದಂತೆ ಮನವಿ ಮಾಡಿದ ಅವರು, ನಿಮ್ಮ ತಂದೆ ತಾಯಿ, ದೇವರು ಇವರ ಪಾದಕ್ಕೆ ಮಾತ್ರ ನಮಸ್ಕರಿಸಿ. ಒಳ್ಳೆ ಆರೋಗ್ಯ, ಉತ್ತಮ ಜೀವನ ಪಡೆಯಲು ಪ್ರಾರ್ಥನೆ ಮಾಡಿ ಎಂದರು. ಆದರೂ ಅಭಿಮಾನಿಗಳು ರಜನಿ ಅವರ ಮನವಿಯನ್ನು ಸ್ವೀಕರಿಸದೆ ಅವರ ಕಾಲಿಗೆ ಬಿದ್ದು ಆರ್ಶೀವಾದ ಪಡೆಯವುದು ಸಾಮಾನ್ಯವಾಗಿತ್ತು.

    ಅಂದ ಹಾಗೇ ರಜನಿ ಅವರ ರಾಜಕೀಯ ರಂಗ ಪ್ರವೇಶ ಕುರಿತು ಹಲವು ವರ್ಷಗಳಿಂದ ಚರ್ಚೆ ನಡೆಯುತ್ತಿದ್ದರು, ಅವರು ಯಾವುದೇ ನಿರ್ಣಯವನ್ನು ಸ್ಪಷ್ಟಪಡಿಸಿರಲಿಲ್ಲ. ಆದರೆ ಪ್ರಸ್ತುತ ನಡೆಯುತ್ತಿರುವ ಅಭಿಮಾನಿಗಳ ಜೊತೆಗಿನ ಭೇಟಿ ಕಾರ್ಯಕ್ರಮದ ಕೊನೆಯ ದಿನವಾದ ಡಿಸೆಂಬರ್ 31 ರಂದು ಈ ಕುರಿತು ತಮ್ಮ ನಿರ್ಣಯವನ್ನು ಘೋಷಣೆ ಮಾಡುವ ಸಾಧ್ಯತೆಗಳಿವೆ.

    2014ರ ನವೆಂಬರ್ 29 ರಂದು ಬೆಂಗಳೂರಿನ ಕಂಠಿರವ ಸ್ಟುಡಿಯೋದಲ್ಲಿ ರಾಜ್ ಸ್ಮಾರಕ ಲೋಕರ್ಪಣೆಯಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಜನಿಕಾಂತ್ ಕನ್ನಡದಲ್ಲೇ ಮಾತನಾಡಿ ರಾಜ್ ಅವರ ನೆನಪು ಮಾಡಿ ಹಾಡಿ ಹೊಗಳಿದ್ದರು.

    https://www.youtube.com/watch?v=NRhhZ2qMh80

  • ರಾಜಕಾರಣಿಗಳು ಬಚ್ಚಲು ಮನೆ ಇದ್ದಂತೆ: ಅನಂತ್ ಕುಮಾರ್ ಹೆಗ್ಡೆ

    ರಾಜಕಾರಣಿಗಳು ಬಚ್ಚಲು ಮನೆ ಇದ್ದಂತೆ: ಅನಂತ್ ಕುಮಾರ್ ಹೆಗ್ಡೆ

    ಬೆಂಗಳೂರು: ರಾಜಕಾರಣಿಗಳು ದೇವರ ಮನೆಗೆ ಹೋಲಿಕೆ ಇಲ್ಲ. ರಾಜಕಾರಣಿಗಳು ಬಚ್ಚಲು ಮನೆ ಇದ್ದಂತೆ ಎಂದು ಕೇಂದ್ರ ಕೌಶಾಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಹೇಳಿದ್ದಾರೆ.

    ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯವರ ಹುಟ್ಟಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಟಾಟಾ ಇನ್ಸ್ ಟ್ಯೂಟ್ ಅಡಿಟೋರಿಯಂನಲ್ಲಿ ಮಲ್ಲೇಶ್ವರಂ ಶಾಸಕ ಡಾ.ಅಶ್ವಥ್ ನಾರಾಯಣ ನೇತೃತ್ವದಲ್ಲಿ ಗುಡ್ ಗರ್ವನರ್ಸ್ ಡೇ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿ ಮಾತನಾಡಿದರು.

    ದೇವರ ಮನೆ ಒಂದು ದಿನ ಸ್ವಚ್ಛ ಮಾಡಿದರೂ ಪರವಾಗಿಲ್ಲ. ಆದರೆ ಬಚ್ಚಲು ಮನೆ ಕ್ಲೀನ್ ಮಾಡದೇ ಇದ್ರೆ ಏನಾಗುತ್ತೆ ಹೇಳಿ? ಹಾಗೇ ಇಂದಿನ ರಾಜಕಾರಣಿಗಳು ಆಗಿದ್ದಾರೆ. ನಮ್ಮ ಸರ್ಟಿಫಿಕೇಟ್‍ಗಳಿಂದ ಸಂಸ್ಕಾರ ಬಂದಿಲ್ಲ. ತಂದೆ-ತಾಯಿಗಳಿಂದ ನಮಗೆ ಸಂಸ್ಕಾರ ಬಂದಿದೆ ಎಂದು ಹೇಳಿದರು.

    ಒಳ್ಳೆಯ ಆಡಳಿತ ಹೇಗಿರಬೇಕು ಅಂತ ಹೇಳಿಕೊಟ್ಟವರು ವಾಜಪೇಯಿಯವರು. ಆರೋಗ್ಯ ಸರಿಯಿಲ್ಲದಿದ್ದರೂ ದೇಶ ಹೇಗೆ ನಡೆಯುತ್ತಿದೆ ಅಂತ ಕೇಳುತ್ತಿರುತ್ತಾರೆ. ಪ್ರಜಾಪ್ರಭುತ್ವದಲ್ಲಿ ಓಟು ಪಡೆದವರಿಗೆ ಎಷ್ಟು ಜವಾಬ್ದಾರಿ ಇದೆಯೋ ಅಷ್ಟೇ ಜವಾಬ್ದಾರಿ ಓಟ್ ಹಾಕಿದವನಿಗೂ ಇರುತ್ತದೆ ಎಂದರು.

    ಆಡಳಿತ ಅಂದ್ರೆ ಅದು ಮೋದಿಯವರ ಆಡಳಿತದಂತೆ ಇರಬೇಕು. ಇಡೀ ವಿಶ್ವವೇ ತಲೆಬಾಗುವ ಆಡಳಿತ ನೀಡುತ್ತಿರುವುದು ನರೇಂದ್ರ ಮೋದಿಯವರು. ಇವತ್ತು ಮೋದಿ ಬಗ್ಗಿದ್ರೆ ವಿಶ್ವದ ನಾಯಕರು ಬಗ್ಗುತ್ತಾರೆ. ಎದ್ರೆ ವಿಶ್ವದ ನಾಯಕರು ಏಳುತ್ತಾರೆ. ಯೋಗವನ್ನು ವಿಶ್ವಕ್ಕೆ ಹರಡಿಸಿದವರು ನರೇಂದ್ರ ಮೋದಿ. ಇದು ಉತ್ತಮ ಆಡಳಿತಕ್ಕೆ ಉದಾಹರಣೆ ಎಂದರು.

    ಪ್ರಧಾನಿ ಮೋದಿ ಟೀಕೆ ಮಾಡಿದವರಿಗೆ ಹೆಗ್ಡೆ ಟಾಂಗ್ ಕೊಟ್ಟ ಸಚಿವರು, ಪ್ರತಿಯೊಂದಕ್ಕೂ ಇಂದಿನ ಪ್ರಧಾನಿ ಲೆಕ್ಕ ನೀಡುತ್ತಿದ್ದಾರೆ. ಹಿಂದಿನ ಸರ್ಕಾರಗಳು ಯಾವತ್ತಾದ್ರು ಲೆಕ್ಕ ಕೊಟ್ಟಿದ್ದವಾ? ಜನರ ಪ್ರತಿಯೊಂದು ಹಣಕ್ಕೂ ಮೋದಿಯವರು ಲೆಕ್ಕ ಕೊಡುತ್ತಿದ್ದಾರೆ. ಗ್ಯಾಸ್ ಸಬ್ಸಿಡಿ ಹಣದಿಂದ ಹಳ್ಳಿ ಬಡವರಿಗೆ ಗ್ಯಾಸ್ ನೀಡುತ್ತಿದ್ದಾರೆ. ಪ್ರತಿಯೊಂದಕ್ಕೂ ಲೆಕ್ಕ ನೀಡುತ್ತಿರೋರು ಮೋದಿ. ನಮ್ಮದು ಏನಿದ್ರು ಮಾಡು ಇಲ್ಲವೇ ಮಡಿ ಸಿದ್ಧಾಂತ ಎಂದರು.

    ಅಭಿವೃದ್ಧಿ ಮಾಡಬೇಕು ಎಂದು ಹೇಳುತ್ತೇವೆ. ಆದರೆ ಹೇಗೆ ಅಭಿವೃದ್ಧಿ ಮಾಡಬೇಕು ಎನ್ನುವುದು ಗೊತ್ತಿಲ್ಲ. ಸೋಗಲಾಡಿ ವಿಷಯಗಳನ್ನು ಇಟ್ಟುಕೊಂಡು ಇಂದು ಚರ್ಚೆ ಮಾಡಲಾಗುತ್ತಿದೆ. ದುಡ್ಡು-ಜಾತಿ ನೋಡಿ ಇವತ್ತು ಓಟ್ ನೀಡುತ್ತಿದ್ದಾರೆ. ಸರ್ಕಾರ ಕಾಮಗಾರಿಗಳನ್ನು ಕೊಡುವುದೇ ಅಭಿವೃದ್ಧಿ ಅಂದುಕೊಂಡವರು 100ಕ್ಕೆ 99 ಜನ ಇದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಅಪ್ಪ-ಅಮ್ಮನ ಗುರುತು ಇಲ್ಲದೇ ಇರೋ ರಕ್ತವನ್ನು ಹೊಂದಿರುವವರು ಜಾತ್ಯತೀತರು: ಅನಂತಕುಮಾರ ಹೆಗ್ಡೆ

    ಕಾಮಗಾರಿಗಳನ್ನು ಇಟ್ಟುಕೊಂಡು ಚರ್ಚೆ ಮಾಡುವವರು ವಿಚಾರವಾದಿಗಳು. ಜಾತಿ, ದುಡ್ಡಿನ ಹೆಸರು ಹೇಳಿಕೊಂಡು ಗೆದ್ದು ಬಂದವರು ನಿಮ್ಮನ್ನ ಅಭಿವೃದ್ಧಿ ಮಾಡ್ತಾರೆ ಎನ್ನುವುದು ನಿಮ್ಮ ಮೂರ್ಖತನ. ಜಾತಿ, ಧರ್ಮ, ಹಣ ಬಿಟ್ಟು ಆಡಳಿತ ನಡೆಸುವವನು ನಿಜವಾಗಿ ಉತ್ತಮ ಆಡಳಿತ ನೀಡುತ್ತಾನೆ. ಈ ಕೆಲಸವನ್ನ ನರೇಂದ್ರ ಮೋದಿ ಮಾಡ್ತಿದ್ದಾರೆ. ಇಡೀ ವಿಶ್ವ ಪ್ರಧಾನಿ ಮೋದಿಯವರ ಕಾರ್ಯವೈಖರಿಗೆ ಗೌರವ ನೀಡುತ್ತಿದೆ ಎಂದು ಹೇಳಿದರು.

    ನನಗೆ ಪ್ರಧಾನಿಯವರು ಕೌಶಲ್ಯಾಭಿವೃದ್ಧಿ ಇಲಾಖೆಯನ್ನು ನೀಡಿದ್ದಾರೆ. ಈ ಹೊಣೆ ನೀಡುವ ವೇಳೆ ನನಗೆ ಈ ಇಲಾಖೆ ಬಗ್ಗೆ ಗೊತ್ತಿರಲಿಲ್ಲ. ಆದರೆ ಜವಾಬ್ದಾರಿ ಸಿಕ್ಕಿದ ಮೇಲೆ ತಿಳಿದುಕೊಳ್ಳುತ್ತಾ ಹೋದಾಗ ನನಗೆ ನೀಡಿರುವ ಕೌಶಲ್ಯಾಭಿವೃದ್ಧಿ ಇಲಾಖೆ ನೀರಿಲ್ಲದ ಬಾವಿ ಇದ್ದ ಹಾಗೆ ಎನ್ನುವುದು ಅರಿವಿಗೆ ಬಂತು. ನಮ್ಮ ಯುವಕರು ಸರ್ಟಿಫಿಕೇಟ್ ಮಾತ್ರ ಸಂಪಾದಿಸುತ್ತಾರೆ. ಆದರೆ ಅದಕ್ಕೆ ತಕ್ಕ ಯೋಗ್ಯತೆಗಳು ಅವರಲ್ಲಿ ಇಲ್ಲ. ಶ್ರಮ ಇಲ್ಲದೇ ಇಂದಿನ ಯುವಕರು ದೊಡ್ಡ ಕನಸು ಕಾಣುತ್ತಿದ್ದಾರೆ. ಬದುಕಿನಲ್ಲಿ ಯಶಸ್ವಿಯಾದವರ ಬದುಕಿನ ಹಿಂದೆ ಪರಿಶ್ರಮ ಇರುತ್ತದೆ. ಬೆವರನ್ನು ಚೆಲ್ಲದೇ ಸಾಧನೆ ಸಾಧ್ಯವಿಲ್ಲ. ಬದುಕು ಲಾಟರಿ ಟಿಕೆಟ್ ಅಲ್ಲ. ಪರಿಶ್ರಮ ಇಲ್ಲದೆ ಬದುಕು ಕಟ್ಟಲು ಸಾಧ್ಯವಿಲ್ಲ. ಈ ಸ್ವಭಾವ ಯುವ ಜನತೆಯಲ್ಲಿ ಇಲ್ಲ ಎಂದರು. ಇದನ್ನೂ ಓದಿ: ತಪರಾಕಿ ಸಿದ್ದರಾಮಯ್ಯನವರೇ ಸಾಕಾ, ಬೇಕಾ?-ಸಿಎಂ ವಿರುದ್ಧ ಅನಂತ್ ಕುಮಾರ್ ಹೆಗಡೆ ಕಿಡಿ

    ದೇಶದ ಬದಲಾವಣೆ ಪ್ರಾರಂಭವಾಗಿದೆ. 120 ಕೋಟಿ ಜನರ ಬದಲಾವಣೆ ದಿಢೀರ್ ಅಂತ ಸಾಧ್ಯವಿಲ್ಲ. ದಿನಕ್ಕೆ 18 ಗಂಟೆ ಕೆಲಸ ಮಾಡುವ ಪ್ರಧಾನಿಗಳು ಸಿಕ್ಕಿರೋದು ನಮ್ಮ ಪುಣ್ಯ ಎಂದು ಹೇಳಿ ಮೋದಿ ಕಾರ್ಯವನ್ನು ಹೊಗಳಿದರು.

    ಪ್ರತಿಕ್ರಿಯೆ ನೀಡಲ್ಲ: ಅನಂತ್ ಕುಮಾರ್ ಹೆಗ್ಡೆ ನಾಲಾಯಕ್ ಮಂತ್ರಿ ಎಂದು ಸಿದ್ದರಾಮಯ್ಯ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ಕೇಳಲು ಮುಂದಾದಾಗ, ನಾನು ಯಾವುದಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿ ಭಾಷಣ ಮುಗಿದ ಕೂಡಲೇ ಅವರು ತೆರಳಿದರು.

  • ರಾಹುಲ್‍ಗೆ ಪಟ್ಟಾಭಿಷೇಕ: ಸೋನಿಯಾ ರಾಜಕೀಯ ನಿವೃತ್ತಿ?

    ರಾಹುಲ್‍ಗೆ ಪಟ್ಟಾಭಿಷೇಕ: ಸೋನಿಯಾ ರಾಜಕೀಯ ನಿವೃತ್ತಿ?

    ನವದೆಹಲಿ: ಸತತ 19 ವರ್ಷಗಳ ಕಾಲ ಅಧ್ಯಕ್ಷೆಯಾಗಿ, ಪಕ್ಷವನ್ನು ಮುನ್ನಡೆಸಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜಕೀಯ ನಿವೃತ್ತಿಯ ಸುಳಿವು ನೀಡಿದ್ದಾರೆ.

    ಶನಿವಾರ ಪುತ್ರ ರಾಹುಲ್‍ಗಾಂಧಿ ಎಐಸಿಸಿ ಅಧ್ಯಕ್ಷರಾಗಿ ಪಟ್ಟಾಭಿಷೇಕದ ನಂತರ ಸಕ್ರಿಯ ರಾಜಕೀಯಕ್ಕೆ ಗುಡ್‍ಬೈ ಹೇಳಲಿದ್ದಾರೆ ಎನ್ನಲಾಗಿದೆ. ರಾಜಕೀಯದಿಂದ ದೂರ ಉಳಿಯಲು ಇದು ಸಕಾಲ ಎಂದು ಹೇಳಿದ್ದಾರೆ ಎನ್ನಲಾಗಿದೆ.

    ಈ ಸುದ್ದಿ ಮಧ್ಯಮಗಳಲ್ಲಿ ಪ್ರಕಟವಾದ ಬಳಿಕ ಅಧ್ಯಕ್ಷೆ ಸ್ಥಾನದಿಂದ ಮಾತ್ರವೇ ಕೆಳಗಿಳಿಯುತ್ತಿದ್ದಾರೆಯೇ ವಿನಃ ಸಂಪೂರ್ಣ ರಾಜಕೀಯದಿಂದಲ್ಲ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೆವಾಲ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಆಯ್ಕೆ: ಯುವರಾಜನ ಮುಂದಿರುವ ಸವಾಲು ಏನು?

    ಅಧ್ಯಕ್ಷ ಪಟ್ಟ ಅಲಂಕರಿಸುವ ಮುನ್ನವೇ ರಾಹುಲ್ ತೆಗೆದುಕೊಂಡ ಕೆಲ ನಿರ್ಣಯಗಳು ಅವರ ರಾಜಕೀಯ ಪ್ರಬುದ್ಧತೆಯನ್ನ ತೋರಿಸಿವೆ ಅನ್ನೋ ಮಾತೂ ಕೈ ಪಾಳಯದಲ್ಲಿ ಕೇಳಿ ಬಂದಿದೆ. ರಾಹುಲ್ ಪಟ್ಟಾಭಿಷೇಕಕ್ಕೆ ದೆಹಲಿ ಕಾಂಗ್ರೆಸ್ ಕಚೇರಿ ಸಜ್ಜಾಗಿದೆ. ರಾಜ್ಯದ ಕೆಪಿಸಿಸಿ ನಾಯಕರು ದೆಹಲಿಗೆ ತೆರಳಿದ್ದಾರೆ. ಇದನ್ನೂ ಓದಿ: ರಾಹುಲ್ ಜಯಗಳಿಸಿರೋ ಅಮೇಥಿ ಕಾಂಗ್ರೆಸ್ಸಿನ ಭದ್ರಕೋಟೆ ಯಾಕೆ?

  • ನಟ, ಕೆಪಿಜೆಪಿ ಸ್ಥಾಪಕ ಉಪೇಂದ್ರಗೆ ಎಸ್.ಆರ್. ಹಿರೇಮಠ ಕಿವಿಮಾತು!

    ನಟ, ಕೆಪಿಜೆಪಿ ಸ್ಥಾಪಕ ಉಪೇಂದ್ರಗೆ ಎಸ್.ಆರ್. ಹಿರೇಮಠ ಕಿವಿಮಾತು!

    ರಾಯಚೂರು: ನಟ ಉಪೇಂದ್ರ ಅಕ್ರಮವಾಗಿ ರೈತರ ಭೂಮಿಯನ್ನು ಕಬಳಿಸಿದ್ದಾರೆ. ಮೊದಲು ಅವರು ಮೆನೆ ಗೆದ್ದು, ಮಾರು ಗೆಲ್ಲಲಿ ಅಂತ ಸಮಾಜ ಪರಿವರ್ತನಾ ಸಮುದಾಯದ ಸ್ಥಾಪಕ ಎಸ್.ಆರ್.ಹಿರೇಮಠ್ ಹೇಳಿದ್ದಾರೆ.

    ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪಕ್ಷ ಕಟ್ಟಲು, ಸಂಘಟನೆ ಮಾಡಲು ಅವಕಾಶಗಳಿವೆ. ಸಾರ್ವಜನಿಕ ಜೀವನಕ್ಕೆ ಬರುವವರಿಗೆ ಅವರ ಅಕ್ರಮವೇ ಅವರಿಗೆ ಸುಳಿಯಾಗಬಾರದು. ಅಕ್ರಮವಾಗಿ ರೈತರ ಭೂಮಿಯಲ್ಲಿ ರುಪ್ಪೀಸ್ ರೆಸಾರ್ಟ್ ಕಟ್ಟಿರುವ ಉಪೇಂದ್ರ ಅಕ್ರಮ ಸುರಳಿಯಿಂದ ಹೊರಬಂದು ಸಾರ್ವಜನಿಕ ಜೀವನಕ್ಕೆ ಕಾಲಿಡಲಿ ಅಂತ ಸಲಹೆ ನೀಡಿದ್ದಾರೆ.

    ತಮ್ಮ ಅಕ್ರಮದಿಂದ ಹೊರ ಬಂದು ಇತರರಿಗೆ ಒಳ್ಳೆಯದು ಮಾಡಲಿ. ನ್ಯಾಯಾಲಯದಲ್ಲಿ ಪ್ರಕರಣ ಹೇಗಾಯ್ತು, ಏನಾಯ್ತು ಅನ್ನೋದು ನಮಗೆ ಗೊತ್ತಿದೆ. ನಾವು ಇದರ ವಿರುದ್ದ ಧ್ವನಿ ಎತ್ತಿದಾಗ ನ್ಯಾಯಾಧೀಶರು ಪ್ರಕರಣದ ವಿಚಾರಣೆಗೆ ರೀಕಾಲ್ ಮಾಡಿದ್ದರು. ಉಪೇಂದ್ರ ಬಡ ರೈತರಿಗೆ ಅವರ ಜಮೀನು ಮರಳಿಸಬೇಕು ಅಂತ ಎಸ್.ಆರ್ .ಹಿರೇಮಠ್ ಆಗ್ರಹಿಸಿದ್ದಾರೆ.

    ಇದನ್ನೂ ಓದಿ: ಜಮೀನು ವಿವಾದದಲ್ಲಿ ನಟ ಉಪೇಂದ್ರಗೆ ಹೈ ಕೋರ್ಟ್ ನಿಂದ ಬಿಗ್ ರಿಲೀಫ್

    https://youtu.be/7C5QPHui87Y

     

  • ನಾನೇ ಸಿಹಿಯಾಗಿದ್ದೇನೆ, ಹುಡ್ಗಿಯಾಗಿ ಬೇಗ ಮದ್ವೆಯಾಗ್ತೀನಿ: ಪೂಜಾ ಗಾಂಧಿ

    ನಾನೇ ಸಿಹಿಯಾಗಿದ್ದೇನೆ, ಹುಡ್ಗಿಯಾಗಿ ಬೇಗ ಮದ್ವೆಯಾಗ್ತೀನಿ: ಪೂಜಾ ಗಾಂಧಿ

    ರಾಯಚೂರು: ಹುಡುಗಿಯಾಗಿ ನಾನು ಬೇಗ ಮದುವೆಯಾಗುತ್ತೇನೆ. ಮದುವೆ ಸಂದರ್ಭದಲ್ಲಿ ಎಲ್ಲರಿಗೂ ಹೇಳುತ್ತೇನೆ ಎಂದು ನಟಿ ಪೂಜಾ ಗಾಂಧಿ ಹೇಳಿದ್ದಾರೆ.

    ರಾಯಚೂರಿನಲ್ಲಿ ಚುನಾವಣಾ ನೀತಿ ಸಂಹಿತೆ ಪ್ರಕರಣ ವಿಚಾರಣೆ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಆಗಮಿಸಿದ್ದ ವೇಳೆ ಮಾತನಾಡಿದ ಪೂಜಾ ಗಾಂಧಿ ಈಗ ನಾನು ಸಂತೋಷವಾಗಿದ್ದೇನೆ. ನಾನೇ ಸಿಹಿಯಾಗಿದ್ದೇನೆ. ಸಿಹಿ ಸುದ್ದಿನೂ ಕೊಡುತ್ತೇನೆ ಎಂದು ಹೇಳಿದ್ದಾರೆ.

    ದಂಡುಪಾಳ್ಯ-3 ಸಿನಿಮಾ ಬಿಡುಗಡೆಗೆ ಸಿದ್ಧಗೊಂಡಿದ್ದು, ಜನವರಿ ತಿಂಗಳಲ್ಲಿ ಟೆಲಿಫಿಲ್ಮ್ ಪ್ರೊಡಕ್ಷನ್ ಮಾಡುತ್ತೇನೆ ಎಂದರು. ರಾಜಕಾರಣಕ್ಕೆ ಪುನಃ ಬರುವ ಬಗ್ಗೆ ಆಲೋಚನೆ ಇಲ್ಲ ಎಂದು ನಟಿ ಪೂಜಾ ಗಾಂಧಿ ತಿಳಿಸಿದರು.

    ಇನ್ನೂ 2013 ರಲ್ಲಿ ರಾಯಚೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಬಿಎಸ್ ಆರ್ ಪಕ್ಷದಿಂದ ಸ್ಪರ್ಧಿಸಿದ್ದ ವೇಳೆ ದಾಖಲಾಗಿದ್ದ ನೀತಿ ಸಂಹಿತೆ ಪ್ರಕರಣದ ತೀರ್ಪು ಡಿಸೆಂಬರ್ 13 ಕ್ಕೆ ಮುಂದೂಡಲಾಗಿದೆ. ನಗರದ ಎರಡನೇ ಜೆಎಂಎಫ್ ಸಿ ತೀರ್ಪು ಮುಂದೂಡಿದೆ. ಚುನಾವಣಾ ಪ್ರಚಾರಕ್ಕೆ ಅನುಮತಿ ಇಲ್ಲದ ವಾಹನ ಬಳಸಿ ನೀತಿ ಸಂಹಿತೆ ಉಲ್ಲಂಘಿಸಿರುವ ಪ್ರಕರಣವನ್ನ ಪೂಜಾಗಾಂಧಿ ಎದುರಿಸುತ್ತಿದ್ದಾರೆ.

     

  • ರಾಜಕೀಯಕ್ಕೆ ಧುಮುಕ್ತಾರಾ ನಿಖಿಲ್ ಗೌಡ? – ಎಚ್‍ಡಿಕೆ ಉತ್ತರಿಸಿದ್ದು ಹೀಗೆ

    ರಾಜಕೀಯಕ್ಕೆ ಧುಮುಕ್ತಾರಾ ನಿಖಿಲ್ ಗೌಡ? – ಎಚ್‍ಡಿಕೆ ಉತ್ತರಿಸಿದ್ದು ಹೀಗೆ

    ತುಮಕೂರು/ಬೆಂಗಳೂರು: ಎಚ್.ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ ರಾಜಕೀಯ ಪ್ರವೇಶ ಮಾಡ್ತಾ ಇದ್ದಾರಾ? ತುಮಕೂರು ಜಿಲ್ಲೆ ಮಧುಗಿರಿ ಕ್ಷೇತ್ರದಿಂದ ಅವರು ಸ್ಪರ್ಧಿಸೋದು ಖಚಿತನಾ? ಹೀಗೊಂದು ಸುದ್ದಿ ತುಮಕೂರು ಜಿಲ್ಲೆಯ ರಾಜಕೀಯ ಪಡಸಾಲೆಯಲ್ಲಿ ಬಿಸಿಬಿಸಿಯಾಗಿ ಚರ್ಚೆಯಾಗುತ್ತಿದೆ.

    ಪ್ರಜ್ವಲ್ ರೇವಣ್ಣಗೆ ಟಿಕೆಟ್ ಕೊಟ್ಟರೆ ತಮ್ಮ ಮಗನಿಗೂ ಮಧುಗಿರಿಯಿಂದ ಟಿಕೆಟ್ ಕೊಡಿ ಎಂದು ಅನಿತಾ ಕುಮಾರಸ್ವಾಮಿ, ಪತಿ ಎಚ್‍ಡಿ ಕುಮಾರಸ್ವಾಮಿ ಬಳಿ ಬೇಡಿಕೆ ಇಟ್ಟಿದ್ದಾರೆ. ಪತ್ನಿಯ ಮಾತನ್ನು ತಳ್ಳಿಹಾಕಲಾಗದ ಕುಮಾರಸ್ವಾಮಿ ಟಿಕೆಟ್ ನೀಡುವ ಅಭಯ ನೀಡಿದ್ದಾರೆ ಎಂದೆಲ್ಲಾ ಚರ್ಚೆಯಾಗ್ತಿದೆ.

    2013 ರಲ್ಲಿ ಆಪರೇಷನ್ ಕಮಲ ನಡೆದ ಸಂದರ್ಭದಲ್ಲಿ ಅನಿತಾ ಕುಮಾರಸ್ವಾಮಿ ಮಧುಗಿರಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ರು. ಹಾಗಾಗಿ ಮಧುಗಿರಿಯಿಂದಲೇ ತಮ್ಮ ಮಗನಿಗೆ ಟಿಕೆಟ್ ಕೊಡಿ ಎಂದು ಪಟ್ಟು ಹಿಡಿದಿದ್ದಾರೆ ಎಂಬ ಮಾತುಗಳು ಕೇಳಿಬರ್ತಿವೆ.

    ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಎಚ್‍ಡಿಕೆ, ನಿಖಿಲ್‍ಗೌಡ ಸದ್ಯಕ್ಕೆ ರಾಜಕಾರಣಕ್ಕೆ ಬರುವ ಪ್ರಶ್ನೆಯೇ ಇಲ್ಲ. ಪಕ್ಷದಲ್ಲಿ ಯಾವುದೇ ಪದಾಧಿಕಾರಿಯ ಹುದ್ದೆಯನ್ನೂ ನೀಡಲ್ಲ ಅಂದ್ರು.

    ನನ್ನ ಆರೋಗ್ಯ ಸರಿಯಿಲ್ಲದ ಕಾರಣ ನನ್ನ ಪರ ಪ್ರಚಾರ ಮಾಡ್ತಾನೆ ಅಷ್ಟೇ. ನಿಖಿಲ್ ಗೌಡ ಸ್ಪರ್ಧೆ ಮಾಡಲ್ಲ, ಪ್ರಜ್ವಲ್ ರಾಜರಾಜೇಶ್ವರಿನಗರದಿಂದ ಸ್ಪರ್ಧಿಸಲ್ಲ. ಇದನ್ನು ದೇವೇಗೌಡರೇ ಈಗಾಗಲೇ ಹೇಳಿದ್ದಾರೆ ಎಂದು ತಿಳಿಸಿದ್ರು.

  • ಹಾಸ್ಯನಟನಿಂದ ರಾಜಕೀಯ ಅದೃಷ್ಟ ಪರೀಕ್ಷೆ: ಮುಂದಿನ ವರ್ಷ ತೆನೆ ಹೊರಲಿದ್ದಾರೆ ರಂಗಾಯಣ ರಘು!

    ಹಾಸ್ಯನಟನಿಂದ ರಾಜಕೀಯ ಅದೃಷ್ಟ ಪರೀಕ್ಷೆ: ಮುಂದಿನ ವರ್ಷ ತೆನೆ ಹೊರಲಿದ್ದಾರೆ ರಂಗಾಯಣ ರಘು!

    ಬೆಂಗಳೂರು: ಸ್ಯಾಂಡಲ್‍ ವುಡ್ ನಲ್ಲಿ ಮತ್ತೊಬ್ಬ ಖ್ಯಾತ ನಟ ರಾಜಕೀಯ ರಂಗದಲ್ಲಿ ತನ್ನ ರಂಗನ್ನು ಪಸರಿಸಲು ಮುಂದಾಗಿದ್ದಾರೆ. ಇಷ್ಟು ದಿನ ಫೇಮಸ್ ಹೀರೋ ಅಥವಾ ಹೀರೋಯಿನ್ಸ್ ಹೆಸರುಗಳು ಕೇಳಿ ಬರುತಿತ್ತು. ಆದರೆ ಈ ಬಾರಿ ಕನ್ನಡ ಚಿತ್ರರಂಗದ ಬಹುಬೇಡಿಕೆಯ ಪೋಷಕ ನಟ ರಂಗಾಯಣ ರಘು ಅವರ ಹೆಸರು ಕೇಳಿ ಬರುತ್ತಿದೆ.

    ತುಮಕೂರಿನ ಮಧುಗಿರಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ರಂಗಾಯಣ ರಘು ನಿಲ್ಲುತ್ತಾರೆ ಎನ್ನುವ ಬಲವಾದ ಮಾತುಗಳು ಕೇಳಿ ಬರುತ್ತಿವೆ. ಮೂಲತಃ ತುಮಕೂರಿನ ಪಾವಗಡ ತಾಲೂಕಿನವರಾಗಿರುವ ರಂಗಾಯಣ ರಘು ಮಧುಗಿರಿ ಕ್ಷೇತ್ರದ ಜನರ ವಿಶ್ವಾಸ ಪಡೆದಿದ್ದಾರೆ. ಅಲ್ಲಿನ ಕೆಲ ಹಿರಿಯ ಮುಖಂಡರು ರಂಗಾಯಣ ರಘು ಅವರನ್ನು ಈ ಬಾರಿ ಎಲೆಕ್ಷನ್ ನಿಲ್ಲುವಂತೆ ಒತ್ತಾಯಿಸಿದ್ದಾರೆ ಎನ್ನಲಾಗುತ್ತಿದೆ.

    ರಂಗಾಯಣ ಜೀವನ ಚರಿತ್ರೆ: ರಂಗಾಯಣ ರಘು ಎಂದೇ ಖ್ಯಾತಿ ಗಳಿಸಿರುವ ಕೊಟ್ಟೂರು ಚಿಕ್ಕರಂಗಪ್ಪ ರಘುನಾಥ್ ಇವರು ಚಿಕ್ಕರಂಗಯ್ಯ ಮತ್ತು ವೀರಮ್ಮ ದಂಪತಿಗಳ ಪುತ್ರನಾಗಿ 17 ಏಪ್ರಿಲ್ 1965 ರಲ್ಲಿ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಜನಿಸಿದ್ದಾರೆ.

    ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪೂರ್ಣಗೊಳಿಸಿ ನಂತರ ಇವರು ಮೈಸೂರಿನಲ್ಲಿರುವ ರಂಗಾಯಣ ರಂಗಭೂಮಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಆ ಸಮಯದಲ್ಲಿ ಇವರು ತಿಂಗಳಿಗೆ 800 ರೂ. ಗಳನ್ನು ಪಡೆದಕೊಂಡು ಜೀವನ ಸಾಗಿಸುತ್ತಿದ್ದರು.

    ಮೈಸೂರಿನ ರಂಗಾಯಣದಲ್ಲಿ ಕೆಲ ಪಾತ್ರಗಳಲ್ಲಿ ನಟಿಸಲು ಪ್ರಾರಂಭಿಸಿ ನಂತರ ಇವರಿಗೆ 1995 ರಲ್ಲಿ ತೆರೆ ಕಂಡ ಸುಗ್ಗಿ ಚಿತ್ರದಲ್ಲಿ ನಟಿಸುವ ಭಾಗ್ಯ ಇವರಿಗೆ ದೊರೆಯಿತು. ಇವರು ಮಾಡುತ್ತಿದ್ದ ಆಕ್ಟಿಂಗ್ ಗೆ ಕನ್ನಡ ಚಿತ್ರರಂಗದಲ್ಲಿ ನಟಿಸುವ ಅವಕಾಶಗಳು ದೊರೆತವು. 2007 ರಲ್ಲಿ ಬಿಡುಗಡೆಗೊಂಡಿರುವ ದುನಿಯಾ ಚಿತ್ರ ರಾಜ್ಯದಲ್ಲಿ ಅಭೂತ ಪೂರ್ವ ಯಶಸ್ಸು ಗಳಿಸಿತು. ಈ ಚಿತ್ರದಲ್ಲಿ ಇವರು ಸಹಾಯಕಪಾತ್ರದಲ್ಲಿ ಕಾಣಿಸಿಕೊಂಡು ವಿಭಿನ್ನ ರೀತಿಯಲ್ಲಿ ನಟಿಸಿ ಸೈ ಎನಿಸಿಕೊಂಡರು. ಈ ಚಿತ್ರ ಇವರಿಗೆ ಒಳ್ಳೆ ಇಮೇಜ್ ತಂದುಕೊಟ್ಟಿತು.

    ದುನಿಯಾ ಯಶಸ್ಸಿನ ನಂತರ ಇವರಿಗೆ ಹಲವು ಚಿತ್ರಗಳಲ್ಲಿ ನಟಿಸುವ ಅವಕಾಶಗಳು ಸಿಕ್ಕವು. ಸಿಕ್ಕ ಅವಕಾಶಗಳನ್ನು ಬಳಸಿಕೊಂಡ ಇವರು ವಿವಿಧ ಪಾತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡರು.

    ರಂಗಾಯಣ ರಘು ಅವರಿಗೆ ಲಭಿಸಿದ ಪ್ರಶಸ್ತಿಗಳು:-
    * ಕರ್ನಾಟಕ ರಾಜ್ಯ ಫಿಲ್ಮ್ ಪ್ರಶಸ್ತಿ- ಅತ್ಯುತ್ತಮ ಸಹಾಯಕ ನಟ- ಮಣಿ(2003-04)
    * ಕರ್ನಾಟಕ ರಾಜ್ಯ ಫಿಲ್ಮ್ ಪ್ರಶಸ್ತಿ- ಅತ್ಯುತ್ತಮ ಸಹಾಯಕ ನಟ- ದುನಿಯಾ(2006-07).
    * ಸೌತ್ ಫಿಲ್ಮ್ ಫೇರ್ ಪ್ರಶಸ್ತಿ- ಅತ್ಯುತ್ತಮ ಸಹಾಯಕ ನಟ-2008.
    * ಸೌತ್ ಫಿಲ್ಮ್ ಫೇರ್ ಪ್ರಶಸ್ತಿ- ಅತ್ಯುತ್ತಮ ಸಹಾಯಕ ನಟ-ರಾಮ್(2009).
    * ಸೌತ್ ಫಿಲ್ಮ್ ಫೇರ್ ಪ್ರಶಸ್ತಿ- ಅತ್ಯುತ್ತಮ ಸಹಾಯಕ ನಟ-ಮೊದಲ ಸಲ(2010).
    * ಸೌತ್ ಫಿಲ್ಮ್ ಫೇರ್ ಪ್ರಶಸ್ತಿ- ಅತ್ಯುತ್ತಮ ಸಹಾಯಕ ನಟ- ಒಲವೇ ಮಂದಾರ(2011).
    * ಸೌತ್ ಫಿಲ್ಮ್ ಫೇರ್ ಪ್ರಶಸ್ತಿ- ಅತ್ಯುತ್ತಮ ಸಹಾಯಕ ನಟ- ಜಯಮ್ಮನ ಮಗ(2013).
    * ದಕ್ಷಿಣ ಭಾರತ ಅಂತರಾಷ್ಟ್ರೀಯ ಫಿಲ್ಮ್ ಪ್ರಶಸ್ತಿ- ಅತ್ಯುತ್ತಮ ಖಳ ನಟ ಸಂಜು ವೆಡ್ಸ್ ಗೀತಾ(2011).
    * ದಕ್ಷಿಣ ಭಾರತ ಅಂತರಾಷ್ಟ್ರೀಯ ಫಿಲ್ಮ್ ಪ್ರಶಸ್ತಿ- ಅತ್ಯುತ್ತಮ ಪೋಷಕ ನಟ ರೋಮಿಯೊ(2012).
    * ದಕ್ಷಿಣ ಭಾರತ ಅಂತರಾಷ್ಟ್ರೀಯ ಫಿಲ್ಮ್ ಪ್ರಶಸ್ತಿ- ಅತ್ಯುತ್ತಮ ಹಾಸ್ಯ ನಟ-ಶಿವ(2012).
    * ದಕ್ಷಿಣ ಭಾರತ ಅಂತರಾಷ್ಟ್ರೀಯ ಫಿಲ್ಮ್ ಪ್ರಶಸ್ತಿ- ಅತ್ಯುತ್ತಮ ಹಾಸ್ಯ ನಟ-ಜಯಮ್ಮನ ಮಗ(2013).
    * ಉದಯ ಫಿಲ್ಮ್ ಪ್ರಶಸ್ತಿ- ಅತ್ಯುತ್ತಮ ಸಹಾಯಕ ನಟ- 2010.
    * ಉದಯ ಫಿಲ್ಮ್ ಪ್ರಶಸ್ತಿ- ಅತ್ಯುತ್ತಮ ಹಾಸ್ಯ ನಟ- ಮಿಸ್ಟರ್ 420(2012).
    * ಸುವರ್ಣ ಫಿಲ್ಮ್ ಪ್ರಶಸ್ತಿ- ಅತ್ಯುತ್ತಮ ಸಹಾಯಕ ನಟ- ದುನಿಯಾ(2007).
    * ಸುವರ್ಣ ಫಿಲ್ಮ್ ಪ್ರಶಸ್ತಿ- ಅತ್ಯುತ್ತಮ ಸಹಾಯಕ ನಟ- ಮೊದಲ ಸಲ(2009).

  • ಮೂರು ದಿನಗಳ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದು ತೆರೆ

    ಮೂರು ದಿನಗಳ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದು ತೆರೆ

    ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ನಡೆಯುತ್ತಿರುವ ಮೂರು ದಿನಗಳ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜಾತ್ರೆಗೆ ಇವತ್ತು ಅಧಿಕೃತವಾಗಿ ತೆರೆ ಬೀಳಲಿದೆ.

    ನಗರದ ಮಹಾರಾಜ ಕಾಲೇಜ್ ಮೈದಾನದಲ್ಲಿ ಮೂರು ದಿನಗಳ ಕನ್ನಡ ಅಕ್ಷರ ಜಾತ್ರೆ ನಡೆದಿದ್ದು, ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ್ ಈ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಮುಂದಿನ ಕನ್ನಡ ಸಾಹಿತ್ಯ ಸಮ್ಮೇಳನ ವಿದ್ಯಾಕಾಶಿ ಧಾರವಾಡದಲ್ಲಿ ನಡೆಯಲಿದ್ದು, ಇಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಅಂತಿಮ ನಿರ್ಧಾರವನ್ನು ಪ್ರಕಟಿಸಲಾಗುತ್ತದೆ.

     

    ಸುಮಾರು 11 ಸಾವಿರ ಪ್ರತಿನಿಧಿಗಳು ಸಮ್ಮೇಳನಕ್ಕೆ ಹೆಸರು ನೋಂದಾಯಿಸಿಕೊಂಡಿದ್ದರು. ಅವರಿಗಾಗಿ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಲು 200 ಕೌಂಟರ್ ತೆರೆಯಲಾಗಿದ್ದು, ಊಟಕ್ಕಾಗಿ 2,75 ಕೋಟಿ ರೂ. ವೆಚ್ಚ ಮಾಡಲಾಗಿತ್ತು.

    ಆದರೆ ಕನ್ನಡದ ಕಂಪು ಬೀರಬೇಕಿದ್ದ ಕನ್ನಡ ಸಾಹಿತ್ಯ ಸಮ್ಮೇಳನ, ಆರಂಭದಲ್ಲೇ ರಾಜಕೀಯ ಮತ್ತು ವಿವಾದಾತ್ಮಕ ಹೇಳಿಕೆಗಳ ಮೂಲಕ ಸದ್ದು ಗದ್ದಲವನ್ನು ಸೃಷ್ಟಿಸಿದೆ. ಸಮ್ಮೇಳನಾಧ್ಯಕ್ಷ ಸಾಹಿತಿ ಚಂದ್ರಶೇಖರ ಪಾಟೀಲ ಮೋದಿ ಬಗ್ಗೆ ಟೀಕೆ ಮಾಡುತ್ತಾ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಹೊಗಳುವ ಮೂಲಕ ಕನ್ನಡ ಹಬ್ಬದಲ್ಲಿ ರಾಜಕೀಯವನ್ನು ಬೆರಸಿದರು.

    ಸಚಿವ ತನ್ವೀರ್ ಸೇಠ್‍ಗೆ ಕನ್ನಡ ಪ್ರೇಮವಿಲ್ಲ, ಸಚಿವ ಸ್ಥಾನದಿಂದ ಕೈ ಬಿಟ್ಟು ಕನ್ನಡ ಪ್ರೇಮ ಇರುವವರನ್ನು ಸಚಿವರನ್ನಾಗಿ ನೇಮಿಸಿ ಅಂತಾ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ಪ್ರಗತಿಪರ ಚಿಂತಕ ಭಗವಾನ್ ರಾಮನ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದು, ರಾಮ ದೇವರಲ್ಲ, ಆತ ಜಾತಿವಾದಿ, ಕೊಲೆಗಡುಕ, ದೇವಸ್ಥಾನ, ಚರ್ಚ್, ಮಸೀದಿಗಳಿಗೆ ಯಾರು ಹೋಗಬೇಡಿ ದಡ್ಡರಾಗುತ್ತೀರಾ ಎನ್ನುವ ಮೂಲಕ ಕೆಲವರ ಧಾರ್ಮಿಕ ಭಾವನೆಯನ್ನು ಕದಡಿದರು. ಅಂತಿಮ ದಿನವಾದ ಇವತ್ತು ಸಮ್ಮೇಳನದ ನಿರ್ಣಯವನ್ನು ಅಂಗೀಕರಿಸಲಾಗುತ್ತದೆ.

    ಮೈಸೂರಿನಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನ ಸನ್ಮಾನ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಅಧಿಕಾರವಧಿಯ ದಿನಗಳನ್ನು ನೆನೆದರು. ನಾನು ಪ್ರಧಾನಿಯಾಗಿದ್ದು, ಒಂದು ಘಟನೆ. ನಮ್ಮ ಸರ್ಕಾರವನ್ನು 5 ವರ್ಷ ಆಡಳಿತ ಮಾಡಲು ಬಿಡಲ್ಲ ಎಂದು ವಿರೋಧ ಪಕ್ಷದವರು ಶಪಥ ತೊಟ್ಟಿದ್ದರು. ನಾನು 5 ವರ್ಷವಾಗಲಿ, 5 ದಿನವಾಗಲೀ ಜನರ ಋಣ ತೀರಿಸುತ್ತೇನೆ ಎಂದಿದ್ದೆ. ಅಂತೆಯೇ ನಾನು ಪ್ರಧಾನಿ ಆಗಿದ್ದ ವೇಳೆ ಜನರ ಋಣ ತೀರಿಸುವಂತೆ ಮಾತಾಡಿದ್ದೇನೆ ಎಂದರು.