Tag: politics

  • ಡೆತ್ ನೋಟ್ ಬರೆದಿಟ್ಟು ಹಾವೇರಿ ದಂಪತಿ ಧರ್ಮಸ್ಥಳದಲ್ಲಿ ನೇಣಿಗೆ ಶರಣು!

    ಡೆತ್ ನೋಟ್ ಬರೆದಿಟ್ಟು ಹಾವೇರಿ ದಂಪತಿ ಧರ್ಮಸ್ಥಳದಲ್ಲಿ ನೇಣಿಗೆ ಶರಣು!

    ಮಂಗಳೂರು: ಹಾವೇರಿಯ ಬ್ಯಾಡಗಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಆರ್ ಪಾಟೀಲ್ ಸೋದರ ಸಂಬಂಧಿ ಮೃತ್ಯುಂಜಯ ಪಾಟೀಲ್ ಮತ್ತು ಪತ್ನಿ ನೇತ್ರಾವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

    ಧರ್ಮಸ್ಥಳಕ್ಕೆ ಆಗಮಿಸಿದ್ದ ಈ ದಂಪತಿ ಮಂಗಳವಾರ ಸಂಜೆ ತಾವು ತಂಗಿದ್ದ ವಸತಿ ಗೃಹದಲ್ಲಿ ನೇಣಿಗೆ ಶರಣಾಗಿದ್ದಾರೆ. ಸಾವಿಗೂ ಮುನ್ನ ಮೃತ್ಯುಂಜಯ ಪಾಟೀಲ್ ಡೆತ್ ನೋಟ್ ಬರೆದಿದ್ದಾರೆ. ರಾಜ್ಯ ರಾಜಕೀಯ ಹಣ, ಹೆಂಡದಿಂದ ಕೀಳುಮಟ್ಟಕ್ಕೆ ಇಳಿದಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಹಾಳಾಗಿದೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆಂದು ಉಲ್ಲೇಖಿಸಿದ್ದಾರೆ.

    ಹಾಳಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ನೋಡಿಕೊಳ್ಳಬೇಕು. ಅವರು ಸರಿದಾರಿಗೆ ತರಬೇಕೆಂಬ ನಿರೀಕ್ಷೆಯಿಂದ ಇಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಅಂತಾ ಡೆತ್‍ನೋಟ್‍ನಲ್ಲಿ ಬರೆದಿಟ್ಟಿದ್ದಾರೆ.

    ಈ ಸಂಬಂಧ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತ ಮೃತ್ಯುಂಜಯ ಪಾಟೀಲ್ ಈ ಸಲದ ಚುನಾವಣೆಯಲ್ಲಿ ಹಣದ ವ್ಯವಹಾರ ನೋಡಿಕೊಳ್ಳುತ್ತಿದ್ದರು ಎನ್ನಲಾಗುತ್ತಿದೆ.

  • ನಾನು ನಿಷ್ಪಕ್ಷಪಾತಿ, ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ- ಯೋಗರಾಜ್ ಭಟ್

    ನಾನು ನಿಷ್ಪಕ್ಷಪಾತಿ, ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ- ಯೋಗರಾಜ್ ಭಟ್

    ಬೆಂಗಳೂರು: ನಾನು ನಿಷ್ಪಕ್ಷಪಾತಿ, ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ ನಿರ್ದೇಶಕ ಯೋಗರಾಜ್ ಭಟ್ ಹೇಳಿದ್ದಾರೆ.

    “ನಾನು ನಿಷ್ಪಕ್ಷಪಾತಿ, ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ. ಯಾವುದಾದರೂ ಸರ್ಕಾರದ ಕೆಲಸ ಇದ್ದರೆ ಮಾಡುತ್ತೇನೆ ಹೊರತು ನಾನು ಯಾರ ಪರವೂ ಇಲ್ಲ ವಿರೋಧಿಯೂ ಅಲ್ಲ” ಎಂದು ಯೋಗರಾಜ್ ಭಟ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

    ಹಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಪಕ್ಷವೊಂದಕ್ಕೆ ಸಪೋರ್ಟ್ ಮಾಡಿ ಎಂದು ಹೇಳಿಕೆಯೊಂದಿಗೆ ನಿರ್ದೇಶಕ ಯೋಗರಾಜ್ ಭಟ್ ಭಾವಚಿತ್ರವಿರುವ ಪೋಸ್ಟ್  ವೈರಲ್ ಆಗಿತ್ತು. ಹೀಗಾಗಿ ತಾವು ಯಾವುದೇ ಪಕ್ಷಕ್ಕೂ ಸೇರಿಲ್ಲ ಎಂಬುದನ್ನು ಯೋಗರಾಜ್ ಭಟ್ ಟ್ವಿಟ್ಟರ್ ಮೂಲಕ ಟ್ವೀಟ್ ಮಾಡಿ ಖಚಿತಪಡಿಸಿದ್ದಾರೆ.

    ಟ್ವೀಟ್ ನಲ್ಲಿ ಏನಿದೆ?
    ನನ್ನ ಫೋಟೋವನ್ನು ರಾಜಕೀಯವಾಗಿ ಬಳಸಿರುವುದು ಕಂಡು ಬಂದಿದೆ ಹಾಗಾಗಿ ನನ್ನ ನಿಲುವನ್ನು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇನೆ. ನಾನು ನಿಷ್ಪಕ್ಷಪಾತಿ, ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ, ಯಾವುದಾದರೂ ಸರ್ಕಾರದ ಕೆಲಸ ಇದ್ದರೆ ಮಾಡುತ್ತೇನೆ ಹೊರತು ನಾನು ಯಾರ ಪರವೂ ಅಲ್ಲ ವಿರೋಧಿಯೂ ಅಲ್ಲ. ಜೈ ಭಾರತಾಂಬೆ ಜೈ ಕರ್ನಾಟಕ. ಜೈ ಹಿಂದ್ ಜೈ ಮುಂದ್.

  • ರಾಜಕಾರಣಿಗಳ ಎಲೆಕ್ಷನ್ ರಿಸಲ್ಟ್ ಹೇಳುತ್ತೆ ಈ ವಿಸ್ಮಯಕಾರಿ ಕಲ್ಲು!

    ರಾಜಕಾರಣಿಗಳ ಎಲೆಕ್ಷನ್ ರಿಸಲ್ಟ್ ಹೇಳುತ್ತೆ ಈ ವಿಸ್ಮಯಕಾರಿ ಕಲ್ಲು!

    ಸಾಮಾನ್ಯ ಮನುಷ್ಯನೊಬ್ಬನಿಗೆ ಭವಿಷ್ಯತ್ತಿನಲ್ಲಿ ಆಗಿಹೋಗೋ ಘಟನೆಗಳ ಬಗ್ಗೆ ಕಲ್ಪನೆ ಇರೋಕೆ ಸಾಧ್ಯಾನಾ? ಅಥವಾ ನಾಳೆ ಏನಾಗುತ್ತೆ ಅನ್ನೋದನ್ನ ಇಂದೇ ಊಹಿಸೋದಕ್ಕೆ ಸಾಧ್ಯಾನಾ? ಖಂಡಿತಾ ಇಲ್ಲ. ಇಂತಹಾ ಒಂದು ಶಕ್ತಿ ಸಿದ್ಧಿಸಿದ್ರೆ, ಅದನ್ನ ಅತೀಂದ್ರಿಯ ಅಂತಾರೆ. ಇಂಥದ್ದೇ ಒಂದು ಪವಾಡ ಧಾರವಾಡದಲ್ಲಿ ನಡೀತಿದೆ. ಧಾರವಾಡದ ರಾಯಣ್ಣ ಅನ್ನೋ ವ್ಯಕ್ತಿ ತಮ್ಮ ಜೀವನದ 18 ವರ್ಷಗಳನ್ನ ದೇಶ ಸೇವೆಯಲ್ಲೇ ಕಳೆದವರು. ಏರ್ ಫೋರ್ಸ್ ನ ನಿವೃತ್ತ ಅಧಿಕಾರಿಯಾಗಿ ಸೇವೆ ಸಲ್ಲಿಸಿದವರು.

    1958ನಿಂದ ದೇಶಸೇವೆಗೆ ಕಟಿಬದ್ಧರಾಗಿ ನಿಂತ ರಾಯಣ್ಣ ನಂತರ ಪ್ಯಾರಚೂಟ್ ಜಂಪಿಂಗ್ ಇನ್ಸ್ ಪೆಕ್ಟರ್ ಆಗಿ ಕೆಲಸ ಮಾಡಿದ್ರು. ಈಗ ನಿವೃತ್ತಿ ತೆಗೆದುಕೊಂಡು ತಮ್ಮ ಪರಿವಾರದ ಜೊತೆ ನೆಮ್ಮದಿಯ ಜೀವನ ನಡೆಸ್ತಿದ್ದಾರೆ. ಅದೊಂದು ದಿನ ರಾಯಣ್ಣರಿಗೆ ವಿಸ್ಮಯಕಾರಿ ವಸ್ತುವೊಂದು ಕಣ್ಣಿಗೆ ಬಿತ್ತು. ಅದುವೇ ಇಲ್ಲಿ ಕಾಣ್ತಿರೋ ದೊಡ್ಡ ಕಲ್ಲು. ಹಾಗಂತ ಇದು ಬರೀ ಕಲ್ಲು ಅಂತಾ ಹೇಳಿ ಹಾಗೇ ಸುಮ್ಮನೆ ದಾರಿಯಲ್ಲಿ ಬಿಡೋ ಹಾಗಿರ್ಲಿಲ್ಲ. ಅದೇನನಿಸಿತೋ ಏನೋ. ರಾಯಣ್ಣ ಗಟ್ಟಿ ನಿರ್ಧಾರ ಮಾಡೇ ಬಿಟ್ರು. ಅದನ್ನು ನೇರವಾಗಿ ಮನೆಗೆ ತಂದಿಟ್ರು.

    ಹೀಗೆ ಮನೆಗೆ ಕಲ್ಲನ್ನ ತಂದಿಟ್ಟ ನಂತ್ರ, ರಾಯಣ್ಣನವರ ಬದುಕಿನಲ್ಲಿ, ಮನೆಯಲ್ಲಿ ಅನೇಕ ಬದಲಾವಣೆಗಳಾಗ್ತಿರೋದು ಗಮನಕ್ಕೆ ಬಂತು. ಒಂದು ರೀತಿಯ ಸಕಾರಾತ್ಮಕ ಶಕ್ತಿ ತುಂಬ್ತಾ ಇರೋದನ್ನ ರಾಯಣ್ಣ ಗಮನಿಸಿದ್ರು. ಮನೆಯವರಿಗೂ ಇದು ಅನುಭವಕ್ಕೆ ಬಂದಿತ್ತು. ಹೀಗಾಗಿ, ಈ ಕಲ್ಲಿಗೆ ನಿತ್ಯ ಪೂಜೆ ಮಾಡೋಕೆ ಶುರು ಮಾಡಿದ್ರು. ಅಷ್ಟೇ. ಆ ಬಳಿಕ ಅನೇಕ ವಿಸ್ಮಯಗಳು ನಡೆಯೋದಕ್ಕೆ ಶುರುವಿಟ್ಕೊಳ್ತು. ಅಂದ ಹಾಗೆ, ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಮೊದಲು ಚಾಯ್ ವಾಲಾ ಆಗಿದ್ರು ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಆದ್ರೆ, ಇದೇ ಟೀ ಮಾರ್ತಿದ್ದ ವ್ಯಕ್ತಿ ಮುಂದೊಂದು ದಿನ ಪ್ರಧಾನಿಯಾಗ್ತಾರೆ ಅಂತಾ ಹೇಳಿದ್ದು ಇದೇ ಕಲ್ಲು ಅಂದ್ರೆ ನೀವು ನಂಬ್ಲೇಬೇಕು. ಅಂದು ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ನರೇಂದ್ರ ಮೋದಿಯವರು ಗೆಲ್ತಾರೆ ಅಂತ ಈ ಕಲ್ಲು ಮೊದಲೇ ಭವಿಷ್ಯ ನುಡಿದಿತ್ತಂತೆ.

    ಪ್ರಧಾನಿ ನರೇಂದ್ರ ಮೋದಿ ಮಾತ್ರವಲ್ಲ. ಆರ್ಟ್ ಆಫ್ ಲೀವಿಂಗ್ ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಕೂಡಾ ಈ ಆದಿಶಕ್ತಿಯ ಪವಾಡಗಳನ್ನು ನೋಡಿ ಬೆರಗಾಗಿದ್ದಾರೆ. ಧಾರವಾಡಕ್ಕೆ ಬಂದು ದರ್ಶನ ಕೂಡಾ ಪಡೆದುಕೊಂಡಿದ್ದಾರೆ. ರಾಯಣ್ಣನವರನ್ನು ತಮ್ಮ ಆಶ್ರಮಕ್ಕೂ ಆಹ್ವಾನಿಸಿ ತಮ್ಮ ಭಕ್ತರಿಗೂ ಇದ್ರ ಬಗ್ಗೆ ಹೇಳಿದ್ರು. ಇನ್ನು ಅಡ್ವಾಣಿ, ಅರುಣ್ ಜೇಟ್ಲಿ, ಕಿರಣ್ ಬೇಡಿ ಹೀಗೆ ಸಾಕಷ್ಟು ಜನ ಈ ದೇವಿಯ ಚಮತ್ಕಾರವನ್ನು ಕಂಡು ಚಕಿತರಾಗಿದ್ದಾರೆ.

    ಹಾಗಂತ ಈ ಕಲ್ಲು ಮಾತಾಡುತ್ತಾ ಅಂತಾ ನೀವ್ ಕೇಳ್ಬೋದು. ಖಂಡಿತಾ ಮಾತಾಡಲ್ಲ. ರಾಯಣ್ಣ ಅವ್ರ ದೇಹದಲ್ಲಿ ಆವಾಹಿಸಲ್ಪಡೋ ದೇವಿ ಮಾತಾಡ್ತಾಳೆ. ರಾಯಣ್ಣ ಹೇಳೋ ಪ್ರಕಾರ ಈ ಆದಿಶಕ್ತಿಯ ಸ್ವರೂಪವಾದ ಕಲ್ಲು ಪ್ರಪಂಚದ ಎಲ್ಲಾ ಭಾಷೆಗಳನ್ನೂ ಗ್ರಹಿಸಬಲ್ಲದು. ರಾಯಣ್ಣ ತಮಗೆ ಸಿದ್ಧಿಸಿದ ಈ ಅತಿಮಾನುಷ ಶಕ್ತಿಯಿಂದ ಆದಿಶಕ್ತಿಯ ಜೊತೆ ಮಾತಾಡೋಕೆ ಶುರು ಮಾಡಿದ್ರಂತೆ. ಉದಾಹರಣೆಗೆ, ಈ ವರ್ಷ ತನಗೆ ಒಳ್ಳೆ ಕೆಲಸ ಸಿಗುತ್ತಾ ಇಲ್ವಾ ಅಂತಾ ಯಾರಾದ್ರೂ ಪ್ರಶ್ನೆ ಕೇಳಿದ್ರು ಅಂತಿಟ್ಕೊಳ್ಳಿ. ಒಂದ್ವೇಳೆ ಕೆಲಸ ಆಗುತ್ತೆ ಅಂತಂದ್ರೆ, ಈ ಕಲ್ಲನ್ನ ಸುಲಭವಾಗಿ ಎತ್ತೋಕೆ ಸಾಧ್ಯ. ಒಂದು ವೇಳೆ ನೀವು ಯೋಚಿಸ್ತಿರೋ ಕೆಲಸ ಆಗಲ್ಲ ಅಂತಾದ್ರೆ, ಈ ಕಲ್ಲು ಜಪ್ಪಯ್ಯ ಅಂದ್ರೂ ಇರೋ ಜಾಗದಿಂದ ಒಂದಿಂಚೂ ಕದಲೋದಿಲ್ಲ. ಇದೊಂದೇ ಅಲ್ಲ, ಅನೇಕ ಸಮಸ್ಯೆಗಳಿಗೂ ಇಲ್ಲಿ ಪರಿಹಾರ ಸಿಗುತ್ತೆ. ಎಲೆಕ್ಷನ್ ಸಂದರ್ಭದಲ್ಲಂತೂ ಈ ಕಲ್ಲಿಗೆ ಸಿಕ್ಕಾಪಟ್ಟೆ ಡಿಮಾಂಡ್ ಕ್ರಿಯೇಟ್ ಆಗಿದೆ.

    -ಕ್ಷಮಾ ಭಾರದ್ವಾಜ್, ಉಜಿರೆ

  • ರಾಜಕೀಯ ಪ್ರವೇಶದ ಬಗ್ಗೆ ಖಡಕ್ ಉತ್ತರ ನೀಡಿದ ರಾಜಮಾತೆ ಪ್ರಮೋದಾದೇವಿ!

    ರಾಜಕೀಯ ಪ್ರವೇಶದ ಬಗ್ಗೆ ಖಡಕ್ ಉತ್ತರ ನೀಡಿದ ರಾಜಮಾತೆ ಪ್ರಮೋದಾದೇವಿ!

    ಮೈಸೂರು: ಯದುವಂಶದ ಪ್ರಮೋದಾದೇವಿ ಒಡೆಯರ್ ರಾಜಕೀಯ ಪ್ರವೇಶಿಸುತ್ತಾರೆ ಎಂಬ ಊಹಾಪೋಹಗಳಿಗೆ ಸ್ವತಃ ಪ್ರಮೋದಾದೇವಿ ಒಡೆಯರ್ ಅವರೇ ಇಂದು ತೆರೆ ಎಳೆದಿದ್ದಾರೆ.

    ಮೈಸೂರಿನ ಅರಮನೆಯಲ್ಲಿ ಎಂದು ಸುದ್ದಿಗೋಷ್ಠಿ ನಡೆಸಿ ರಾಜಕೀಯದ ಬಗ್ಗೆ ಸ್ಪಷ್ಟನೆ ನೀಡಿದರು. ನನಗೆ ರಾಜಕಾರಣ ಬಗ್ಗೆ ಆಸಕ್ತಿ ಇಲ್ಲ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಮ್ಮನ್ನು ಭೇಟಿಯಾಗಿದ್ದರಲ್ಲಿ ಯಾವುದೇ ವಿಶೇಷ ಇಲ್ಲ. ಈ ಹಿಂದೆ ತುಂಬಾ ಜನ ರಾಜಕಾರಣಿಗಳು ಅರಮನೆಗೆ ಬಂದಿದ್ದಾರೆ. ಆಗ ಮಾಧ್ಯಮಗಳು ಹೆಚ್ಚು ಇರಲಿಲ್ಲ. ಇದೀಗ ಮಾಧ್ಯಮಗಳು ಹೆಚ್ಚಾಗಿದ್ದರಿಂದ ವಿಷಯ ದೊಡ್ಡದಾಗಿದೆ ಅಷ್ಟೇ ಎಂದು ಪ್ರಮೋದಾದೇವಿ ತಿಳಿಸಿದರು.

    ಅಮೀತ್ ಶಾ ಭೇಟಿ ಸೌಜನ್ಯದ ಭೇಟಿ ಎಂದು ಸ್ಪಷ್ಟಪಡಿಸಿದರು. ಅವರು ರಾಜ್ಯಸಭಾ ಸ್ಥಾನದ ಆಫರ್ ಕೊಟ್ಟಿಲ್ಲ. ಹಾಗೇನಾದ್ದರು ಕೊಟ್ಟರೆ ತಕ್ಷಣ ನಿಮ್ಮನ್ನ ಕರೆದು ಹೇಳುತ್ತೇನೆ. ನನಗೆ ಖಂಡಿತವಾಗಲೂ ರಾಜಕೀಯ ಮತ್ತು ಚುನಾವಣೆಯಲ್ಲಿ ಆಸಕ್ತಿ ಇಲ್ಲ. ಹೀಗಾಗಿ ಯಾವುದೇ ಪಕ್ಷದ ಜೊತೆ ಗುರುತಿಸಿಕೊಳ್ಳುವುದಿಲ್ಲ. ಯಾರ ಪರವಾಗಿಯೂ ಪ್ರಚಾರ ಮಾಡುವುದಿಲ್ಲ. ಕೇವಲ ಜನರ ಪರವಾಗಿ ಕೆಲಸ ಮಾಡುತ್ತೇವೆ ಅಷ್ಟೇ ಎಂದು ಹೇಳಿದರು.

    ನನ್ನ ಮಗ ಯದುವೀರ್‍ಗೆ ರಾಜಕೀಯ ಇಷ್ಟವಿದ್ದರೆ ಹೋಗಬಹುದು. ಅವರು ಅದಕ್ಕೆ ನನ್ನ ಅನುಮತಿ ಪಡೆಯುವ ಅಗತ್ಯವಿಲ್ಲ. ಅವರಿಗೆ ಏನು ಇಷ್ಟ ಅದನ್ನು ಮಾಡಬಹುದು. ನನ್ನ ಸಮ್ಮತಿ ಕೇಳಿ ಅವರು ರಾಜಕೀಯಕ್ಕೆ ಬರಬೇಕಿಲ್ಲ. ಆದರೆ ಯದುವೀರ್ ತಮಗೆ ರಾಜಕೀಯ ಇಷ್ಟವಿಲ್ಲ ಎಂದು ಹೇಳಿದ್ದಾರೆ. ಈ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲು ಅವರು ಸ್ವತಂತ್ರರೂ ಎಂದು ಕೂಡ ಸ್ಪಷ್ಟಪಡಿಸಿದರು.

    ಇದೇ ವೇಳೆ ಪ್ರಮೋದಾ ದೇವಿ ಒಡೆಯರ್ ನಾ ರಾಜಕೀಯಕ್ಕೆ ಬರಬೇಕಾ ಬೇಡವಾ ನೀವೇ ಹೇಳಿ ಎಂದು ಮಾಧ್ಯಮದವರನ್ನು ಪ್ರಶ್ನಿಸಿ, ಈಗ ನಮ್ಮ ಕೆಲ ವಿಚಾರಗಳನ್ನು ಮಾಧ್ಯಮಗಳಲ್ಲೇ ತಿಳಿದುಕೊಳ್ಳುವಂತಾಗಿದೆ. ಹಾಗಾಗಿ ನೀವೇ ಹೇಳಿ ನಾ ರಾಜಕೀಯಕ್ಕೆ ಬರಬೇಕೇ? ಬೇಡವೇ ಎಂದು ಅವರು ಪತ್ರಕರ್ತರಿಗೆ ಪ್ರಶ್ನೆ ಮಾಡಿದರು.

  • ಮಾಜಿ ಸಿಎಂ ಎಚ್‍ಡಿಕೆ ಮನೆಗೆ ಸುದೀಪ್ ಭೇಟಿ – 2 ಗಂಟೆಗಳ ಕಾಲ ಸುದೀರ್ಘ ಚರ್ಚೆ

    ಮಾಜಿ ಸಿಎಂ ಎಚ್‍ಡಿಕೆ ಮನೆಗೆ ಸುದೀಪ್ ಭೇಟಿ – 2 ಗಂಟೆಗಳ ಕಾಲ ಸುದೀರ್ಘ ಚರ್ಚೆ

    ಬೆಂಗಳೂರು: ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಮನೆಗೆ ಕಿಚ್ಚ ಸುದೀಪ್ ಭೇಟಿ ನೀಡಿದ್ದಾರೆ.

    ಕಿಚ್ಚ ಸುದೀಪ್ ಬೆಂಗಳೂರಿನಲ್ಲಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿಕೆ ಮನೆಗೆ ಭೇಟಿ ನೀಡಿ 2 ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದ್ದಾರೆ. ರಾಜಕೀಯ ವಿದ್ಯಮಾನಗಳ ಹಾಗೂ ಜೆಡಿಎಸ್ ಪರ ಪ್ರಚಾರ ಮಾಡುವ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.

    ಸುದೀಪ್ ಸಕ್ರಿಯ ರಾಜಕಾರಣದ ಬಗ್ಗೆ ಒಲವು ತೋರಲಿಲ್ಲ. ಆದರೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದು, ಸ್ಟಾರ್ ಕ್ಯಾಂಪೇನರ್ ಆಗೋ ಸಾಧ್ಯತೆಯಿದೆ. ಭೇಟಿ ವೇಳೆ ಇವರಿಬ್ಬರು ಯಾವ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನುವ ಬಗ್ಗೆ ಅಧಿಕೃತವಾಗಿ ಯಾರು ಹೇಳಿಕೆ ನೀಡಿಲ್ಲ.

    ಈ ಹಿಂದೆ ಬೆಂಗಳೂರು ಹೊರವಲಯ ನೆಲಮಂಗಲ ಶಾಸಕ ಶ್ರೀನಿವಾಸಮೂರ್ತಿ ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿದ್ದರು. ಶಾಸಕ ಶ್ರೀನಿವಾಸಮೂರ್ತಿ ಹಾಗೂ ಸುದೀಪ್ ಭೇಟಿಯಾದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

  • ಅಮಿತ್ ಶಾ, ರಾಜಮಾತೆ ಪ್ರಮೋದಾದೇವಿ ಗುಟ್ಟಾಗಿ ಮಾತಾಡಿದ್ದನ್ನ ರಿವೀಲ್ ಮಾಡಿದ ಯದುವೀರ್!

    ಅಮಿತ್ ಶಾ, ರಾಜಮಾತೆ ಪ್ರಮೋದಾದೇವಿ ಗುಟ್ಟಾಗಿ ಮಾತಾಡಿದ್ದನ್ನ ರಿವೀಲ್ ಮಾಡಿದ ಯದುವೀರ್!

    ಚಿತ್ರದುರ್ಗ: ಮೈಸೂರಿನ ಯುವರಾಜ ಯದುವೀರ್ ಭಾನುವಾರ ರಜೆ ಇದ್ದ ಪ್ರಯುಕ್ತ ಕಲ್ಲಿನ ಕೋಟೆ ಚಿತ್ರದುರ್ಗಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದ್ದಾರೆ.

    ಯುವರಾಜ ಯದುವೀರ್ ಕೋಟೆ ವೀಕ್ಷಣೆ ಮಾಡಿ ಕೋಟೆಯ ಬಗ್ಗೆ ವಿವರಣೆ ಪಡೆದಿದ್ದಾರೆ. ಈ ವೇಳೆ ಮೈಸೂರಿನ ಯುವರಾಜ ನನ್ನು ನೋಡಿದ ಕೋಟೆನಾಡಿನ ಜನರು ಪುಳಕಿತರಾಗಿದ್ದು, ಅವರನ್ನು ನೋಡಲು ಪ್ರವಾಸಿಗರು ಮುಗಿಬಿದ್ದಿದ್ದರು.

    ಕೋಟೆ ವೀಕ್ಷಣೆ ಬಳಿಕ ಮಾತನಾಡಿದ ಯದುವೀರ್, ಇದೇ ಮೊದಲ ಬಾರಿಗೆ ನಾನು ಕೋಟೆಗೆ ಭೇಟಿ ನೀಡಿದ್ದೇನೆ. ಐತಿಹಾಸಿಕ ಕೋಟೆ ನೋಡಿ ತುಂಬಾ ಸಂತೋಷವಾಗಿದೆ. ರಾಜ್ಯದ ರಾಜ ಮನೆತನಗಳಿಗೆ ಅವಿನಾಭಾವ ಸಂಬಂಧವಿದೆ. ನನ್ನ ಅಜ್ಜಿ ಗಾಯಿತ್ರಿದೇವಿ ಅವರ ಹೆಸರಿನಲ್ಲಿ ವಾಣಿ ವಿಲಾಸ ಜಲಾಶಯಗಳಿವೆ ಎಂದು ತಮ್ಮ ಸಂತಸವನ್ನು ವ್ಯಕ್ತ ಪಡಿಸಿದ್ದಾರೆ.

    ಈ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ರಾಜಮಾತೆ ಪ್ರಮೋದಾದೇವಿ ಮಾತನಾಡಿದ್ದ ಬಗ್ಗೆ ತಿಳಿಸಿದ್ದಾರೆ. ರಾಜಕೀಯಕ್ಕೆ ಬರುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಅಮಿತ್ ಶಾ ಅವರು ರಾಜಮಾತೆ ಪ್ರಮೋದಾದೇವಿ ಮತ್ತು ನನ್ನನ್ನು ಭೇಟಿ ಮಾಡಿದ್ದರು. ಆದರೆ ರಾಜ್ಯ ಸಭೆಗೆ ಆಯ್ಕೆ ಮಾಡುವ ಬಗ್ಗೆ ಯಾವುದೇ ರೀತಿಯ ಆಫರ್ ನೀಡಿಲ್ಲ ಎಂದು ಹೇಳಿದ್ದಾರೆ. ಇದನ್ನು ಓದಿ: ರಾಜಮಾತೆ ಪ್ರಮೋದಾ ದೇವಿ ಜೊತೆ ಶಾ ಮಹತ್ವದ ಚರ್ಚೆ – ಇನ್‍ಸೈಡ್ ಸ್ಟೋರಿ ಇಲ್ಲಿದೆ

    ಜನರು ಬಯಸಿದರೆ ಮುಂದೆ ರಾಜಕೀಯಕ್ಕೆ ಬರುತ್ತೇನೆ. ಸದ್ಯಕ್ಕೆ ರಾಜಕೀಯ ನನ್ನ ದಾರಿಯಲ್ಲಿ ಇಲ್ಲ. ರಾಜ್ಯದ ಎಲ್ಲಾ ಸಂಸ್ಥಾನಗಳನ್ನು ಸಂಪರ್ಕಿಸುವ ಕಾರಿಡಾರ್ ಮಾಡುವ ಚಿಂತನೆ ಇದೆ. ಆ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಬಹುದು. ಪ್ರವಾಸಿಗರೂ ಕೂಡ ಇಂತಹ ಐತಿಹಾಸಿಕ ಸ್ಥಳಗಳ ಸ್ವಚ್ಚತೆ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

    ಮಾರ್ಚ್ 30 ಶುಕ್ರವಾರದಂದು ರಾಜ್ಯ ವಿಧಾನಸಭಾ ಚುನಾವಣೆಯಲ್ಲೇ ಅಮಿತ್ ಶಾ ಅವರ ಮೈಸೂರಿಗೆ ಭೇಟಿ ನೀಡಿದ್ದರು. ಈ ವೇಳೆ ಅಮಿತ್ ಶಾ ರಾಜಮಾತೆ ಪ್ರಮೋದಾ ದೇವಿ ಹಾಗೂ ಯದುವೀರ್ ಒಡೆಯರ್ ಅವರ ಚರ್ಚೆ ನಡೆಸಿದ್ದರು. ಬಳಿಕ ಮೈಸೂರು ಅರಮನೆಯ ಗಣಪತಿ ದೇವಸ್ಥಾನ ಮುಂಭಾಗ ಅಮಿತ್ ಶಾ ಹಾಗೂ ಪ್ರಮೋದಾ ದೇವಿ ಒಡೆಯರ್ ಅವರು ಗೌಪ್ಯ ಮಾತುಕತೆ ನಡೆಸಿದ್ದರು. ಈ ವೇಳೆ ಯದುವೀರ್ ಒಡೆಯರ್ ಅವರನ್ನು ಬಿಟ್ಟು ಇಬ್ಬರೇ ಮಾತುಕತೆ ನಡೆಸಿದ್ದರು.

  • ರಾಜಕೀಯ ಪ್ರವೇಶದ ಕುರಿತು ಕೊನೆಗೂ ಸ್ಪಷ್ಟನೆ ನೀಡಿದ್ರು ಪಲಿಮಾರು ಶ್ರೀಗಳು

    ರಾಜಕೀಯ ಪ್ರವೇಶದ ಕುರಿತು ಕೊನೆಗೂ ಸ್ಪಷ್ಟನೆ ನೀಡಿದ್ರು ಪಲಿಮಾರು ಶ್ರೀಗಳು

    ಉಡುಪಿ: ನಾನು ರಾಜಕೀಯ ಪ್ರವೇಶ ಮಾಡುವುದಿಲ್ಲ. ನಾನು ರಾಜಕೀಯಕ್ಕೆ ಬರುತ್ತೇನೆ ಎಂಬ ಸುದ್ದಿಯೇ ಬಹಳ ಆಘಾತಕಾರಿ ಎಂದು ಉಡುಪಿ ಪಲಿಮಾರು ಮಠಾಧೀಶ ವಿದ್ಯಾಧೀಶ ಸ್ವಾಮೀಜಿಗಳು ಸ್ಪಷ್ಟಪಡಿಸಿದ್ದಾರೆ.

    ಉಡುಪಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸ್ವಾಮೀಜಿ, ನಾನು ಸ್ವಪ್ನದಲ್ಲೂ ರಾಜಕೀಯಕ್ಕೆ ಬರುವ ಬಗ್ಗೆ ಆಲೋಚಿಸಿಲ್ಲ. ರಾಜಕೀಯ ನನ್ನ ಕ್ಷೇತ್ರವೂ ಅಲ್ಲ. ನಾನು ಧರ್ಮ ಪೀಠದಲ್ಲಿದ್ದೇನೆ. ಧಾರ್ಮಿಕವಾಗಿ ಮಾಡಬೇಕಾದ ಕೆಲಸ ಸಾಕಷ್ಟು ಬಾಕಿಯಿದೆ. ರಾಜಕೀಯದವರು ಧರ್ಮ ಪೀಠಕ್ಕೆ ಮಣಿಯುತ್ತಾರೆ. ನಾನು ಏಕೆ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಲಿ ಎಂದು ಪ್ರಶ್ನಿಸಿದರು.

    ತಾನು ರಾಜಕೀಯ ಪ್ರವೇಶ ಮಾಡುತ್ತೇನೆ ಎಂಬುವುದು ಕಲ್ಪಿತವಾದ ವಿಚಾರ. ಖಂಡಿತವಾಗಿ ನಾನು ರಾಜಕೀಯ ಪ್ರವೇಶ ನಿರಾಕರಣೆ ಮಾಡುತ್ತಿದ್ದೇನೆ. ಯಾವ ರಾಜಕಾರಣಿಗಳೂ ನನ್ನನ್ನು ಇದುವರೆಗೂ ಸಂಪರ್ಕಿಸಿಯೇ ಇಲ್ಲ. ಸಂಪರ್ಕಿಸಿದರೂ ನಾನು ಒಪ್ಪುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಮುಂದೆ ಪ್ರಚಾರ ಕೂಡಾ ಬೇಡ. ಆದರೆ ಇಂತಹ ಸುದ್ದಿಯಿಂದ ನನ್ನ ಮನಸ್ಸಿಗೆ ಬಹಳ ನೋವಾಗಿದೆ ಎಂದರು.

    ಹಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿಯಿಂದ ರಾಜ್ಯದ ಐದು ಮಠಾಧೀಶರಿಗೆ ಟಿಕೆಟ್ ಎಂಬುವುದಾಗಿ ಸುದ್ದಿಯಾಗಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿದ ಪಾಲಿಮಾರು ಶ್ರೀ ಗಳು ರಾಜಕೀಯ ಪ್ರವೇಶ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

  • ರಾಜಮಾತೆ ಪ್ರಮೋದಾ ದೇವಿ ಜೊತೆ ಶಾ ಮಹತ್ವದ ಚರ್ಚೆ – ಇನ್‍ಸೈಡ್ ಸ್ಟೋರಿ ಇಲ್ಲಿದೆ

    ರಾಜಮಾತೆ ಪ್ರಮೋದಾ ದೇವಿ ಜೊತೆ ಶಾ ಮಹತ್ವದ ಚರ್ಚೆ – ಇನ್‍ಸೈಡ್ ಸ್ಟೋರಿ ಇಲ್ಲಿದೆ

    ಮೈಸೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮೊದಲ ಬಾರಿಗೆ ಮೈಸೂರು ಅರಮನೆಗೆ ಭೇಟಿ ನೀಡಿ ರಾಜ ಮನೆತನದವರ ಜೊತೆ ಮಾತುಕತೆ ನಡೆಸಿದ್ದಾರೆ.

    ರಾಜ್ಯ ವಿಧಾನಸಭಾ ಚುನಾವಣೆಯಲ್ಲೇ ಅಮಿತ್ ಶಾ ಅವರ ಮೈಸೂರು ಭೇಟಿ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.ಇಂದು ಮೈಸೂರಿನ ಖಾಸಗಿ ಅರಮನೆಗೆ ಭೇಟಿ ನೀಡಿದ ಅಮಿತ್ ಶಾ ರಾಜಮಾತೆ ಪ್ರಮೋದಾ ದೇವಿ ಹಾಗೂ ಯದುವೀರ್ ಒಡೆಯರ್ ಅವರ ಚರ್ಚೆ ನಡೆಸಿದರು. ಬಳಿಕ ಮೈಸೂರು ಅರಮನೆಯ ಗಣಪತಿ ದೇವಸ್ಥಾನ ಮುಂಭಾಗ ಅಮಿತ್ ಶಾ ಹಾಗೂ ಪ್ರಮೋದಾ ದೇವಿ ಒಡೆಯರ್ ಅವರು ಗೌಪ್ಯ ಮಾತುಕತೆ ನಡೆಸಿದ್ದಾರೆ. ಈ ವೇಳೆ ಯದುವೀರ್ ಒಡೆಯರ್ ಅವರನ್ನು ಬಿಟ್ಟು ಇಬ್ಬರೇ ಮಾತುಕತೆ ನಡೆಸಿದರು.

    ಅಮಿತ್ ಶಾ ಅವರು ತಮ್ಮ ಮಾತುಕತೆ ವೇಳೆ ಒಡೆಯರ್ ಅವರಿಗೆ ರಾಜ್ಯ ರಾಜಕೀಯಕ್ಕೆ ಎಂಟ್ರಿ ಕೊಡಬೇಕು. ಇದಕ್ಕಾಗಿ ಬಿಜೆಪಿಗೆ ಸೇರ್ಪಡೆಯಾಗಬೇಕು ಎಂದು ಮನವಿ ಮಾಡಿದ್ದಾರೆ. ಒಂದು ವೇಳೆ ರಾಜಕೀಯ ಪ್ರವೇಶಕ್ಕೆ ಒಪ್ಪಿಗೆ ಸೂಚಿಸಿದರೆ ಮೈಸೂರಿನ ಕೃಷ್ಣರಾಜ ಕ್ಷೇತ್ರದಿಂದ ಟಿಕೆಟ್ ನೀಡಲಾಗುವುದು ಎಂದು ಖಚಿತ ಭರವಸೆ ನೀಡಿದರು ಎಂಬುದಾಗಿ ಮೂಲಗಳು ತಿಳಿಸಿವೆ.

    ಅಮಿತ್ ಶಾ ಅವರ ರಾಜಕೀಯ ಪ್ರವೇಶದ ಮನವಿಯನ್ನು ಪ್ರಮೋದಾ ದೇವಿ ಅವರು ನಯವಾಗಿ ತಿರಸ್ಕರಿಸಿದ್ದಾರೆ. ಈ ಕುರಿತು ಒಡೆಯರ್ ಅವರು ಸಮಾನ ಅಭಿಪ್ರಾಯ ವ್ಯಕ್ತಪಡಿಸಿದ್ದು, ರಾಜಕೀಯ ಪ್ರವೇಶದ ಕುರಿತು ಆಸಕ್ತಿ ಇದೆ. ಆದರೆ ಇದು ಸೂಕ್ತ ಸಮಯವಲ್ಲ ಎಂದು ಅಮಿತ್ ಶಾ ಅವರ ಮನವಿಯನ್ನು ನಗುತ್ತಲೇ ತಿರಸ್ಕರಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. ಇದನ್ನೂ ಓದಿ: ರಾಜಕೀಯ ಎಂಟ್ರಿ ಸುದ್ದಿ ಬಗ್ಗೆ ಸ್ಪಷ್ಟನೆ ಕೊಟ್ಟ ಯದುವೀರ್ ಒಡೆಯರ್

    ಭೇಟಿ ವೇಳೆ ಯದುವೀರ್ ಪುತ್ರ ಆದ್ಯವೀರ್ ನನ್ನು ಶಾ ಮುದ್ದಾಡಿದರು. ರಾಜಮನೆತನದ ಭೇಟಿ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್, ಸಂಸದ ಪ್ರತಾಪ್ ಸಿಂಹ ಉಪಸ್ಥಿತರಿದ್ದರು.

  • ರಾಜಕೀಯ ಎಂಟ್ರಿ ಸುದ್ದಿ ಬಗ್ಗೆ ಸ್ಪಷ್ಟನೆ ಕೊಟ್ಟ ಯದುವೀರ್ ಒಡೆಯರ್

    ರಾಜಕೀಯ ಎಂಟ್ರಿ ಸುದ್ದಿ ಬಗ್ಗೆ ಸ್ಪಷ್ಟನೆ ಕೊಟ್ಟ ಯದುವೀರ್ ಒಡೆಯರ್

    ಮಡಿಕೇರಿ: ನಾನು ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬರುವುದಿಲ್ಲ. ಯಾವುದೇ ಪಕ್ಷದ ಪ್ರಚಾರ ಕಾರ್ಯದಲ್ಲೂ ತೊಡಗಿಸಿಕೊಳ್ಳುವುದಿಲ್ಲ ಎಂದು ಹೇಳುವ ಮೂಲಕ ರಾಜಕೀಯ ಸೇರ್ಪಡೆ ಸಂಬಂಧಿಸಿದಂತೆ ಬರುತ್ತಿದ್ದ ವದಂತಿ ಸುದ್ದಿಗಳಿಗೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತೆರೆ ಎಳೆದಿದ್ದಾರೆ.

    ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪದಲ್ಲಿರುವ ಕಾವೇರಿ ಕಾಲೇಜು ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತನ್ನ ರಾಜಕೀಯ ಪ್ರವೇಶದ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಸಮಾಜ ಸೇವೆಗಳಲ್ಲೇ ತನ್ನನ್ನು ತಾನು ತೊಡಗಿಸಿಕೊಳ್ಳುತ್ತೇನೆ ವಿನಃ ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬರುವುದಿಲ್ಲ ಎಂದು ಹೇಳಿದರು.  ಇದನ್ನೂ ಓದಿ: ತವರಿನಲ್ಲಿಯೇ ಸಿಎಂ ಸಿದ್ದರಾಮಯ್ಯರನ್ನ ಸೋಲಿಸಲು ಬಿಜೆಪಿ ಹೈಕಮಾಂಡ್ ನಿಂದ ಮಹತ್ವದ ಸೂಚನೆ ರವಾನೆ

    ಇದೇ ವೇಳೆ ಅಮಿತ್ ಶಾ ಭೇಟಿ ಕುರಿತು ಮಾತನಾಡಿದ ಅವರು, ಮಾರ್ಚ್ 30 ರಂದು ಅಮಿತ್ ಷಾ ಮೈಸೂರು ಅರಮನೆಗೆ ಭೇಟಿ ನೀಡುವ ಬಗ್ಗೆ ನನಗೆ ತಿಳಿದಿಲ್ಲ. ನನ್ನ ಗಮನಕ್ಕೂ ಇಲ್ಲಿವರೆಗೂ ಬಂದಿರಲಿಲ್ಲ, ನಿಮ್ಮಿಂದಲೇ ಗೊತ್ತಾಗ್ತಿದೆ ಅಂತ ಹೇಳಿದ್ರು.

    ಒಂದು ವೇಳೆ ಅಮಿತ್ ಶಾ ಅರಮನೆಗೆ ಬಂದ್ರೆ ಭೇಟಿ ಮಾಡುತ್ತೇನೆ. ಆದರೆ ನಾನು ರಾಜಕೀಯಕ್ಕೆ ಯಾವುದೇ ಕಾರಣಕ್ಕೂ ಬರಲ್ಲ. ಈಗಾಗಲೇ ಅನೇಕ ಬಾರಿ ಹೇಳಿದ್ದೇನೆ. ರಾಜಕಾರಣದಲ್ಲಿ ಆಸಕ್ತಿಯೂ ಇಲ್ಲ. ನನ್ನ ಆಸಕ್ತಿ ಏನಿದ್ರೂ ಜನರ ಜೊತೆ ಬೆರೆಯುವುದು ಅಷ್ಟೇ ಅಂದ್ರು.

  • ರಾಜಕೀಯ ಪ್ರವೇಶದ ಕುರಿತು ಅಭಿಮಾನಿಗಳಿಗೆ ಸ್ಪಷ್ಟನೆ ನೀಡಿದ ಹ್ಯಾಟ್ರಿಕ್ ಹೀರೋ

    ರಾಜಕೀಯ ಪ್ರವೇಶದ ಕುರಿತು ಅಭಿಮಾನಿಗಳಿಗೆ ಸ್ಪಷ್ಟನೆ ನೀಡಿದ ಹ್ಯಾಟ್ರಿಕ್ ಹೀರೋ

    ದಾವಣಗೆರೆ: ನಾನು ರಾಜಕೀಯಕ್ಕೆ ಬರೋದಿಲ್ಲ ಮತ್ತು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ನನ್ನ ಪತ್ನಿ ಗೀತಾ ಶಿವರಾಜ್‍ಕುಮಾರ್ ಮಾತ್ರ ರಾಜಕೀಯದಲ್ಲಿ ಇರುತ್ತಾರೆ ಎಂದು ಶಿವರಾಜ್‍ಕುಮಾರ್ ಸ್ಪಷ್ಟಣೆ ನೀಡಿದ್ದಾರೆ.

    ಟಗರು ಸಿನಿಮಾದ ವಿಜಯೋತ್ಸವದಲ್ಲಿ ಭಾಗಿಯಾದ ಶಿವರಾಜ್‍ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯಕ್ಕೆ ನಾನು ಸ್ವಾಗತ ಮಾಡುತ್ತೇನೆ. ಉಪೇಂದ್ರ ಯಾವಾಗಲೂ ಸಮಾಜದಲ್ಲಿ ಬದಲಾವಣೆ ತರಬೇಕು ಎಂಬುದರ ಬಗ್ಗೆ ಚಿಂತಿಸುತ್ತಿರುತ್ತಾರೆ. ನಾನು ಯಾವಾಗಲೂ ಉಪೇಂದ್ರ ಅವರಿಗೆ ಬೆಂಬಲ ನೀಡುತ್ತೇನೆ ಅಂತಾ ಅಂದ್ರು. ಇದನ್ನೂ ಓದಿ: ಗೀತಾ ಶಿವರಾಜ್‍ಕುಮಾರ್ ಚುನಾವಣೆಗೆ ಸ್ಪರ್ಧಿಸ್ತಾರಾ?- ಸಹೋದರ ಮಧು ಬಂಗಾರಪ್ಪ ಹೇಳಿದ್ದು ಹೀಗೆ

    ಟಗರು ಸಿನಿಮಾ ವಿಜಯೋತ್ಸವದ ಹಿನ್ನೆಲೆಯಲ್ಲಿ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದಿಂದ ಅಶೋಕ ಚಿತ್ರಮಂದಿರದ ವರೆಗೂ ಮೆರವಣಿಗೆ ಮಾಡಲಾಯ್ತು. ನಗರಕ್ಕೆ ಆಗಮಿಸಿದ್ದ ಶಿವರಾಜ್‍ಕುಮಾರ್ ರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಚಿತ್ರಮಂದಿರದ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರಿಂದ ನೂಕು ನುಗ್ಗಲು ಸಹ ಉಂಟಾಯಿತು. ಪೊಲೀಸರು ಅಭಿಮಾನಿಗಳ ನ್ನು ನಿಯಂತ್ರಿಸಲು ಲಘು ಲಾಠಿ ಚಾರ್ಜ್ ಕೂಡ ನಡೆಸಿದ್ರು.