Tag: Politicians

  • ಹುಲಿ ಉಗುರು ಪ್ರಕರಣ – ಸ್ಯಾಂಡಲ್‌ವುಡ್ ನಟರ ಬಳಿಕ ರಾಜಕಾರಣಿಗಳಿಗೂ ಸಂಕಷ್ಟ

    ಹುಲಿ ಉಗುರು ಪ್ರಕರಣ – ಸ್ಯಾಂಡಲ್‌ವುಡ್ ನಟರ ಬಳಿಕ ರಾಜಕಾರಣಿಗಳಿಗೂ ಸಂಕಷ್ಟ

    ಬೆಂಗಳೂರು: ಹುಲಿ ಉಗುರು (Tiger Claw) ಪೆಂಡೆಂಟ್ ಪ್ರಕರಣದಲ್ಲಿ ಸ್ಯಾಂಡಲ್‌ವುಡ್ ನಟರ ಬಳಿಕ ಈಗ ರಾಜಕಾರಣಿಗಳಿಗೂ ಸಂಕಷ್ಟ ಶುರುವಾಗಿದೆ. ಕೆಲ ರಾಜಕಾರಣಿಗಳ ಆಪ್ತರು, ಮಕ್ಕಳು ಹುಲಿ ಉಗುರಿನ ಸುಳಿಯಲ್ಲಿ ಸಿಲುಕಿದ್ದಾರೆ.

    ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್, ಹುಬ್ಬಳ್ಳಿ ಕಾಂಗ್ರೆಸ್ ಯುವ ನಾಯಕ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಂಬಂಧಿ ರಜತ್ ಉಳ್ಳಾಗಡ್ಡಿಮಠ ಮದುವೆ ವೇಳೆ ವ್ಯಾಘ್ರನಖ ಮಾದರಿ ಪೆಂಡೆಂಟ್ ಧರಿಸಿದ್ದ ಫೋಟೋಗಳು ವೈರಲ್ ಆಗಿವೆ. ಈ ವಿಚಾರದಲ್ಲಿ ಅರಣ್ಯ ಅಧಿಕಾರಿಗಳ ನಡೆ ಕುತೂಹಲ ಕೆರಳಿಸಿದೆ.

    ವಿಜಯಪುರದ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಪುತ್ರನ ಕೊರಳಲ್ಲಿ ವ್ಯಾಘ್ರನಖ ಮಾದರಿ ಕಂಡುಬಂದ ಕಾರಣ ಅರಣ್ಯಾಧಿಕಾರಿಗಳು, ಅವರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಲಾಕೆಟ್‌ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಇದನ್ನೂ ಓದಿ: PublicTV Explainer: ಉಗುರಿಗೆ ಹೆದರಿದ ‘ಹೀರೋಸ್‌’; ವನ್ಯಜೀವಿ ಸಂರಕ್ಷಣಾ ಕಾಯ್ದೆ ಏನು ಹೇಳುತ್ತೆ? – ಅಪರಾಧಕ್ಕೆ ಶಿಕ್ಷೆ ಏನು?

    ಕಾಂಗ್ರೆಸ್ ಮುಖಂಡ ಜೇಡರಹಳ್ಳಿ ಕೃಷ್ಣಪ್ಪನ ಆರ್‌ಆರ್ ನಗರದ ಮನೆಯನ್ನು ಇದೇ ಕಾರಣಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ರೇಡ್ ಮಾಡಿದರು. ಬರೀ ಇವರಷ್ಟೇ ಅಲ್ಲ, ಉದ್ಯಮಿ ಚೇತನ್, ಬೈರತಿ ಸುರೇಶ್ ಸಂಬಂಧಿ, ಮಾಜಿ ಮಂತ್ರಿ ಜಿಟಿ ದೇವೇಗೌಡ ಆಪ್ತ ಶ್ರೀಧರ್ ನಾಯಕ್ ಕೊರಳಲ್ಲಿ ವ್ಯಾಘ್ರನಖ ಮಾದರಿ ಲಾಕೆಟ್ ಇರೋ ಫೋಟೋಗಳು ವೈರಲ್ ಆಗಿವೆ. ಇದನ್ನೂ ಓದಿ: ಕಲ್ಲಾಗಿ ಬದಲಾದ ಏಡಿ – ಅಘನಾಶಿನಿ ನದಿಯಲ್ಲಿ ವಿಸ್ಮಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾರಿನಲ್ಲಿ ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ- ಡೆತ್‌ನೋಟ್‌ನಲ್ಲಿ ಪ್ರಭಾವಿ ರಾಜಕಾರಣಿ ಹೆಸರು ಉಲ್ಲೇಖ

    ಕಾರಿನಲ್ಲಿ ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ- ಡೆತ್‌ನೋಟ್‌ನಲ್ಲಿ ಪ್ರಭಾವಿ ರಾಜಕಾರಣಿ ಹೆಸರು ಉಲ್ಲೇಖ

    ರಾಮನಗರ: ಪ್ರಭಾವಿ ರಾಜಕಾರಣಿ ಸೇರಿ 6 ಮಂದಿ ಉದ್ಯಮಿಗಳ (Businessman) ಹೆಸರು ಬರೆದಿಟ್ಟು ವ್ಯಕ್ತಿಯೊಬ್ಬ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರು (Bengaluru) ದಕ್ಷಿಣ ತಾಲೂಕಿನ ನೆಟ್ಟಗೆರೆ ಬಳಿ ನಡೆದಿದೆ.

    ಬೆಂಗಳೂರಿನ ಎಚ್‌ಎಸ್ಆರ್ ಲೇಔಟ್ ಬಳಿಯ ಅಮಲೀಪುರದ ನಿವಾಸಿ ಪ್ರದೀಪ್ (47) ಆತ್ಮಹತ್ಯೆಗೆ ಶರಣಾಗಿರುವ ಉದ್ಯಮಿ. ಸಾವಿಗೂ ಮುನ್ನ ರಾಜಕಾರಣಿಯ (Politician) ಹೆಸರು, ಉದ್ಯಮಿಗಳ ಹೆಸರನ್ನು ಡೆತ್‌ನೋಟ್‌ನಲ್ಲಿ ಬರೆದಿದ್ದಾನೆ.

    ಹೊಸ ವರ್ಷಾಚರಣೆ ಸಲುವಾಗಿ ಕುಟುಂಬ ಸಮೇತ ರಾಮನಗರದ ಕಗ್ಗಲೀಪುರ ಸಮೀಪವಿರುವ ನೆಟ್ಟಗೆರೆ ಬಳಿ ಇರುವ ರೆಸಾರ್ಟ್‌ಗೆ ಕುಟುಂಬ ಸಮೇತ ಬಂದಿದ್ದ ಪ್ರದೀಪ್ ರಾತ್ರಿ ಪಾರ್ಟಿ ಮಾಡಿ, ಬೆಳಗ್ಗೆ ಶಿರಾಗೆ ಹೋಗಬೇಕು ಎಂದು ಹೇಳಿ ರೆಸಾರ್ಟ್‌ನಿಂದ ಭಾನುವಾರ ಬೆಳಗ್ಗೆ ಒಬ್ಬರೆ ಬೆಂಗಳೂರಿನಲ್ಲಿನ ತಮ್ಮ ನಿವಾಸಕ್ಕೆ ಹೋಗಿ ಡೆತ್ ನೋಟ್ ಬರೆದಿದ್ದಾನೆ. ಬಳಿಕ ರೆಸಾರ್ಟ್‌ಗೆ ವಾಪಸ್ಸು ಬರುವಾಗ ಕಾರಿನಲ್ಲೆ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಡೆತ್ ನೋಟ್‌ನಲ್ಲಿ ಕಾರಣ ಉಲ್ಲೇಖಿಸಿರುವ ಪ್ರದೀಪ್, ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ ಬಳಿ ರೆಸಾರ್ಟ್ ತೆರೆಯಲು 5 ಮಂದಿ ನನ್ನ ಬಳಿ ಮಾತನಾಡಿ, ಒಂದೂವರೆ ಕೋಟಿ ಹಣ ಪಡೆದುಕೊಂಡಿದ್ದರು. ನನ್ನನ್ನು ಪಾಲುದಾರನನ್ನಾಗಿ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಹೀಗಾಗಿ ಮನೆ ಮಾರಿದ್ದೆ. ಸಾಕಷ್ಟು ಸಾಲ ಮಾಡಿಕೊಂಡಿದ್ದೆ. ಆದರೆ, ಪಾಲುದಾರಿಕೆ ಹೆಸರಿನಲ್ಲಿ ನನಗೆ ಮೋಸ ಮಾಡಿದ್ದಾರೆ. ಒಟ್ಟು ಎರಡೂವರೆ ಕೋಟಿ ಹಣ ನನಗೆ ಬರಬೇಕು. ಈ ನಡುವೆ ರಾಜಕಾರಣಿಯೊಬ್ಬರು ರಾಜಿ ಮಾಡುವ ಪ್ರಯತ್ನ ಮಾಡಿದ್ದರು. ಆದರೂ ನನಗೆ ಪೂರ್ಣ ಹಣ ನೀಡದೇ ಮೋಸ ಮಾಡಲಾಗಿದೆ‌. ಆಂಧ್ರದ ಮಾಜಿ ಸಿಎಂ ರ‍್ಯಾಲಿ ವೇಳೆ ಕಾಲ್ತುಳಿತಕ್ಕೆ ಮತ್ತೆ 3 ಬಲಿ

    ಈ ಬಗ್ಗೆ ಕೇಳಿದರೆ ಆ ರಾಜಕಾರಣಿಯವರು ಸಹ ನನಗೆ ಸಹಾಯ ಮಾಡಿಲ್ಲ. ಹಾಗಾಗಿ ನನ್ನ ಸಾವಿಗೆ ಈ 6 ಮಂದಿ ಕಾರಣ, ಎಲ್ಲರಿಗೂ ಶಿಕ್ಷೆ ಆಗಬೇಕು ಎಂದು ಪ್ರದೀಪ್ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಘಟನಾ ಸ್ಥಳಕ್ಕೆ ಎಫ್ಎಸ್ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರಾಮನಗರ ಎಸ್ಪಿ ಸಂತೋಷ್ ಬಾಬು ಕೂಡಾ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಈ ಸಂಬಂಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋಲಾರ ಸಂಸದ ಮುನಿಸ್ವಾಮಿಗೆ ಮುತ್ತು ಕೊಟ್ಟ ಮಾಜಿ ಸಚಿವ ವರ್ತೂರು ಪ್ರಕಾಶ್

    Live Tv
    [brid partner=56869869 player=32851 video=960834 autoplay=true]

  • ರಾಜಕಾರಣಿಗಳು ಧರ್ಮ, ಜಾತಿಗಳ ಮಧ್ಯೆ ಸಂಘರ್ಷ ಹುಟ್ಟುಹಾಕುತ್ತಿದ್ದಾರೆ: ರಂಭಾಪುರಿ ಶ್ರೀ

    ರಾಜಕಾರಣಿಗಳು ಧರ್ಮ, ಜಾತಿಗಳ ಮಧ್ಯೆ ಸಂಘರ್ಷ ಹುಟ್ಟುಹಾಕುತ್ತಿದ್ದಾರೆ: ರಂಭಾಪುರಿ ಶ್ರೀ

    ಬೆಳಗಾವಿ: ಧರ್ಮ ಮತ್ತು ಜಾತಿಗಳ (Religion And Caste)  ಮಧ್ಯೆ ವ್ಯಾಪಕ ಸಂಘರ್ಷ ಹುಟ್ಟು ಹಾಕುವಂತ ಕೆಲಸವನ್ನು ಕೆಲ ರಾಜಕಾರಣಿಗಳು (Politicians) ಮಾಡುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಬಾಳೆಹೊನ್ನೂರು ರಂಭಾಪುರಿ ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

    ಬೈಲಹೊಂಗಲ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜಕೀಯ ಧುರೀಣರು ಸರ್ವ ಜನಾಂಗದ ಶ್ರೇಯೋಭಿವೃದ್ಧಿಗೆ ಗಮನ ಹರಿಸದೇ ಶಾಂತಿ ಮತ್ತು ಸೌಹಾರ್ದತೆ ಬೆಳೆಸದೇ ಅಧಿಕಾರದ ಗದ್ದುಗೆಗಾಗಿ ಜಾತಿಯಲ್ಲಿ ವಿಷ ಬೀಜ ಬಿತ್ತುತ್ತಿದ್ದಾರೆ. ಜನರ ಭಾವನೆಗಳನ್ನು ಕೆರಳಿಸುವಂತ ಕೆಲಸ ಮಾಡುತ್ತಿದ್ದಾರೆ. ಇಂತಹ ಕೃತ್ಯವನ್ನು ಯಾರೂ ಮಾಡಬಾರದೆಂಬ ಸಂದೇಶ ನಾವು ನೀಡಲು ಇಚ್ಚಿಸುತ್ತೇವೆ ಎಂದರು. ಇದನ್ನೂ ಓದಿ: ರವಿ.ಡಿ ಚನ್ನಣ್ಣನವರ್ ಸೇರಿ 11 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ

    ಭಾರತೀಯ ಉತ್ಕೃಷ್ಟ ಸಂಸ್ಕೃತಿಯಲ್ಲಿ ಎಲ್ಲರೂ ಒಂದಾಗಿ ಬಾಳಬೇಕು. ಶಾಂತಿ, ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳಬೇಕು. ಪ್ರತಿಯೊಬ್ಬರೂ ತಮ್ಮ, ತಮ್ಮ ಧರ್ಮಗಳಲ್ಲಿ ನಿಷ್ಠೆ ಹೊಂದಿರಬೇಕು. ಆದರೆ, ಪರಧರ್ಮದ ಬಗ್ಗೆ ಸಂಹಿಷ್ಣತಾ ಮನೋಭಾವ ಬೆಳೆಸಿಕೊಂಡು ಬಂದಾಗ ಮಾತ್ರ ಧರ್ಮ, ಜಾತಿಗಳ ಮಧ್ಯೆ ಯಾವುದೇ ಸಂಘರ್ಷ ಉಂಟಾಗುವುದಿಲ್ಲ. ಪ್ರತಿಯೊಬ್ಬರಲ್ಲಿ ಸ್ವಾಭಿಮಾನ ಇರಬೇಕು. ಸ್ವಾಭಿಮಾನದ ಕೊರತೆಯಿಂದಾಗಿ ಎಲ್ಲ ರಂಗಗಳಲ್ಲಿ ಅನೇಕ ಸಂಘರ್ಷ ಉಂಟಾಗುತ್ತಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಪ್ರತಾಪ್‌ಸಿಂಹನಿಗೆ ಬಸ್‌ನಿಲ್ದಾಣದ ಗುಂಬಜ್‌ಗಳೂ ಮುಸ್ಲಿಮರ ಮಸೀದಿಯೆಂತೆ ಕಾಣ್ತಿದೆ – ಸೇಠ್ ತಿರುಗೇಟು

    ಕಾರ್ಯಕ್ರಮದಲ್ಲಿ ಸಂಗೊಳ್ಳಿ ಗುರುಲಿಂಗ ಸ್ವಾಮೀಜಿ, ಶಿರಕೊಳ್ಳ ಗುರುಸಿದ್ದೇಶ್ವರ ಸ್ವಾಮೀಜಿ, ಸುಳ್ಳದ ಶಿವಸಿದ್ಧರಾಮೇಶ್ವರ ಸ್ವಾಮೀಜಿ ಸೇರಿ ಅನೇಕರು ಇದ್ದರು.

    Live Tv
    [brid partner=56869869 player=32851 video=960834 autoplay=true]

  • ಹಾಸನದಲ್ಲಿ ದೇವೇಗೌಡರು, ಅವರ ಕುಟುಂಬ ಬಿಟ್ಟು ರಾಜಕಾರಣ ಮಾಡಲು ಆಗಲ್ಲ: ಸೂರಜ್‍ರೇವಣ್ಣ

    ಹಾಸನದಲ್ಲಿ ದೇವೇಗೌಡರು, ಅವರ ಕುಟುಂಬ ಬಿಟ್ಟು ರಾಜಕಾರಣ ಮಾಡಲು ಆಗಲ್ಲ: ಸೂರಜ್‍ರೇವಣ್ಣ

    ಹಾಸನ: ಜಿಲ್ಲೆಯಲ್ಲಿ ದೇವೇಗೌಡರು, ಅವರ ಕುಟುಂಬ ಬಿಟ್ಟು ರಾಜಕಾರಣ ಮಾಡಲು ಆಗಲ್ಲ. ಯಾವ ಶಾಸಕರು ಪಕ್ಷ ಬಿಡಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಹೇಳಿದ್ದಾರೆ.

    ಹಾಸನ ತಾಲೂಕಿಗೆ ಕಳಂಕ ಬಂದಿದೆ. ಇಡೀ ಜಿಲ್ಲೆಯಲ್ಲಿ ಕಪ್ಪು ಚುಕ್ಕೆಯಾಗಿ ಉಳಿದುಕೊಂಡಿದೆ. ಅದನ್ನು ಅಳಿಸಬೇಕು, ಅದನ್ನು ಅಳಿಸಲು ನಮ್ಮ ಕಾರ್ಯಕರ್ತರ ಜೊತೆ ಸೇರಿಕೊಂಡು ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತೇನೆ. ಈಗಾಗಲೇ ಪಂಚಾಯ್ತಿವಾರು ಕಾರ್ಯಕರ್ತರ ಸಭೆ ಶುರು ಮಾಡಿದ್ದೇನೆ. ಐದು ಪಂಚಾಯ್ತಿ ಮುಗಿದಿದ್ದು, ಇನ್ನು ಎರಡು ವಾರದಲ್ಲಿ ಎಲ್ಲಾ ಪಂಚಾಯ್ತಿಗಳು ಮುಗಿಯುತ್ತದೆ. ಕಾರ್ಯಕರ್ತರ ಅಭಿಪ್ರಾಯ ಏನಿದೆ ಎಂಬುದನ್ನು ದೇವೇಗೌಡರು, ಕುಮಾರಸ್ವಾಮಿ, ಜಿಲ್ಲೆಯ ಶಾಸಕರ ಗಮನಕ್ಕೆ ತರುತ್ತೇನೆ. ಆಮೇಲೆ ಹಾಸನಕ್ಕೆ ಯಾವ ಅಭ್ಯರ್ಥಿ ಸೂಕ್ತ ಎಂದು ನಿರ್ಧಾರ ಮಾಡುತ್ತೇವೆ. ಮತ್ತೆ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಪಕ್ಷದ ಶಾಸಕ ಆಯ್ಕೆಯಾಗಬೇಕು, ಆ ಕೆಲಸ ಮಾಡುವ ಜವಾಬ್ದಾರಿ ನನ್ನದು, ಅವರಿಗೆ, ಇವರಿಗೆ ಟಿಕೆಟ್ ಕೊಡಿ ಅಂತ ಹೇಳಲು ನಾನು ಯಾವ ಹೈಕಮಾಂಡ್ ಅಲ್ಲ ಎಂದು ಗುಡುಗಿದ್ದಾರೆ.

     

    ಹಾಸನದ ದೇವಿಗೆರೆಗೆ ಬಾಗಿನ ಅರ್ಪಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾರ್ಚ್ ತಿಂಗಳಿನಿಂದ ಹಾಸನ ತಾಲೂಕನ್ನು ನೂಡಲ್ ತಾಲೂಕಾಗಿ ಆಯ್ಕೆ ಮಾಡಿಕೊಂಡಿದ್ದೇನೆ. ನನ್ನ ಕಾರ್ಯವ್ಯಾಪ್ತಿಯಲ್ಲಿ ಏನು ಜವಾಬ್ದಾರಿ ಇದೆ, ಕಾರ್ಯಕರ್ತರನ್ನು ‌ಪ್ರೋತ್ಸಾಹಿಸಿ, ಪಕ್ಷ ಸಂಘಟನೆ ಮಾಡುತ್ತೇನೆ ಎಂದಿದ್ದಾರೆ.

    ಶಾಸಕರುಗಳಾದ ಕೆ.ಎಂ.ಶಿವಲಿಂಗೇಗೌಡ, ಎ.ಟಿ.ರಾಮಸ್ವಾಮಿ ಪಕ್ಷ ಬಿಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಸೂರಜ್ ಜಿಲ್ಲೆಯಲ್ಲಿ ದೇವೇಗೌಡರು, ಅವರ ಕುಟುಂಬ ಬಿಟ್ಟು ರಾಜಕಾರಣ ಮಾಡಲು ಆಗಲ್ಲ. ನನಗೆ ಇನ್ನೂ ಹೆಚ್ಚಿನ ವಿಶ್ವಾಸವಿದೆ. ಇಬ್ಬರು ಶಾಸಕರು ಎಲ್ಲೂ ಹೋಗಲ್ಲ. ಚುನಾವಣೆ 2022ಕ್ಕೆ ಇಲ್ಲ 2023ಕ್ಕೆ ಬರತ್ತೋ, ಇದೇ ಹಾಲಿ ಶಾಸಕರು ಸ್ಪರ್ಧೆ ಮಾಡಿ ಜಯಭೇರಿ ಭಾರಿಸುತ್ತಾರೆ ಎಂದಿದ್ದಾರೆ.

    ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾಗಿರುವ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೇನೆ. ಕಾಫಿ, ಭತ್ತ, ಜೋಳ ನಾಶವಾಗಿ ರೈತರಿಗೆ ಅನಾನುಕೂಲ ಪರಿಸ್ಥಿತಿ ಇದೆ. ಬೆಳೆ ನಷ್ಟದ ಬಗ್ಗೆ ವರದಿ ಕೊಡಲು ಆರ್‍ಐ, ವಿಐಗಳಿಗೆ ಸೂಚನೆ ಕೊಡಿ ಎಂದು ಎಲ್ಲಾ ತಹಸೀಲ್ದಾರ್‌ಗಳಿಗೆ ಹೇಳಿದ್ದೇನೆ. ಪಕ್ಷಾತೀತವಾಗಿ ಕೆಲಸ ಮಾಡಿ ಅಂಥ ಹೇಳಿದ್ದೇನೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಂತರಾಷ್ಟ್ರೀಯ ಯೋಗ ದಿನ: ನಾಡಿನ ಜನತೆಗೆ ಯೋಗದ ಪ್ರಾಮುಖ್ಯತೆ ಸಾರಿದ ಗಣ್ಯರು

    ಅಂತರಾಷ್ಟ್ರೀಯ ಯೋಗ ದಿನ: ನಾಡಿನ ಜನತೆಗೆ ಯೋಗದ ಪ್ರಾಮುಖ್ಯತೆ ಸಾರಿದ ಗಣ್ಯರು

    ಬೆಂಗಳೂರು: ಇಂದು ‘ಅಂತರಾಷ್ಟ್ರೀಯ ಯೋಗ ದಿನ’. ಎಲ್ಲಕಡೆ ಯೋಗ ಮಾಡುವ ವಾತಾವರಣ ಸೃಷ್ಟಿಯಾಗಿದ್ದು, ನಾಡಿನ ಹಲವು ಜನರು ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಅದರಲ್ಲಿಯೂ ರಾಜಕಾರಣಿಗಳು, ಸೆಲೆಬ್ರಿಟಿಗಳು ಯೋಗ ದಿನದ ಶುಭ ಕೋರುವ ಮೂಲಕ ಯೋಗದ ಪ್ರಾಮುಖ್ಯತೆಯನ್ನು ತಿಳಿಸಿದ್ದಾರೆ.

    ಕೂ ಮಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು, ರಾಜ್ಯದ ಜನರಿಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯಗಳು. ‘ಮಾನವೀಯತೆಗಾಗಿ ಯೋಗ’ ಎಂಬ ಘೋಷವಾಕ್ಯದೊಂದಿಗೆ ಜಗತ್ತಿನೆಲ್ಲೆಡೆ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆಯಾಗುತ್ತಿದೆ. ಬೆಂಗಳೂರು ನಿವಾಸದಲ್ಲಿ ಇಂದು ಯೋಗಾಭ್ಯಾಸ ಮಾಡಲಾಯಿತು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:  ಯೋಗಕ್ಕೆ ಒಂದು ಧರ್ಮದ ಹಣೆಪಟ್ಟಿ ಕಟ್ಟಲಾಗಿದೆ: ಅದಿತಿ ಪ್ರಭುದೇವ 

    ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಸಹ ಕೂ ಮಾಡಿದ್ದು, ಯೋಗವು ಜಗತ್ತಿಗೆ ಭಾರತ ನೀಡಿದ ಅಮೂಲ್ಯ ಕೊಡುಗೆಯಾಗಿದೆ. ಈ ಅಂತರಾಷ್ಟ್ರೀಯ ಯೋಗ ದಿನದಂದು, ಮಾನವಕುಲದ ಸುಧಾರಣೆಗಾಗಿ ಈ ಕಾಲಾತೀತ ಜ್ಞಾನವನ್ನು ಪಡೆದುಕೊಳ್ಳಲು ಪ್ರತಿಜ್ಞೆ ಮಾಡೋಣ ಎಂದು ಮನವಿ ಮಾಡಿದ್ದಾರೆ.

    ಸಿಎಂ ಬಸವರಾಜ ಬೊಮ್ಮಾಯಿ ಅವರು, ಎಲ್ಲರಿಗೂ ಅಂತಾರಾಷ್ಟ್ರೀಯ ಯೋಗ ದಿನದ ಹಾರ್ದಿಕ ಶುಭಾಶಯಗಳು. ಆರೋಗ್ಯಪೂರ್ಣ ಶರೀರ ಮತ್ತು ಮನಸ್ಸಿನ ಜೊತೆಗೆ ಸಾರ್ಥಕ ಜೀವನ ರೂಪಿಸಿಕೊಳ್ಳಲು ನೆರವಾಗುವ ಯೋಗ ಎಲ್ಲರ ಜೀವನದ ಅವಿಭಾಜ್ಯ ಅಂಗವಾಗಲಿ ಎಂದಿದ್ದಾರೆ.

    ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಯೋಗ ನಮ್ಮ ಹೆಮ್ಮೆಯ ಪರಂಪರೆ. ಸನ್ಮಾನ್ಯ ಪ್ರಧಾನಿ @narendramodi ಅವರ ದಿಟ್ಟ ಪ್ರಯತ್ನದಿಂದ ಯೋಗಕ್ಕೆ ಇಂದು ಅಂತಾರಾಷ್ಟ್ರೀಯ ಮಾನ್ಯತೆ ದೊರಕಿದೆ. ದೇಹ ಹಾಗೂ ಮನಸ್ಸನ್ನು ಕೇಂದ್ರೀಕರಿಸಿ ಶಿಸ್ತಿನ ಪಾಠ ಹೇಳುವ ಯೋಗ ಕುರಿತು ಜಾಗೃತಿ ಹೆಚ್ಚಿಸೋಣ. ಎಲ್ಲರಿಗೂ ಅಂತಾರಾಷ್ಟ್ರೀಯ ಯೋಗದಿನದ ಶುಭಾಶಯಗಳು ಎಂದು ಹೇಳಿದ್ದಾರೆ. ಇದನ್ನೂ ಓದಿ: ತಂದೆಯೊಂದಿಗಿನ ಸಂಬಂಧ ಕಡಿದುಕೊಳ್ಳಲು ಸಿದ್ಧವಾದ ಮಸ್ಕ್ ತೃತೀಯ ಲಿಂಗಿ ಮಗಳು

    ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಯೋಗದ ಶ್ಲೋಕವನ್ನು ಕೂ ಮಾಡುವ ಮೂಲಕ ಜನರಿಗೆ ಯೋಗ ದಿನದ ಶುಭಕೋರಿದ್ದಾರೆ.

    ಯೋಗೇನ ಚಿತ್ತಸ್ಯ ಪದೇನ ವಾಚಂ |
    ಮಲಂ ಶರೀರಸ್ಯ ಚ ವೈದ್ಯಕೇನ
    ಯೋಪಾಕರೋತ್ತಂ ಪ್ರವರಂ ಮುನೀನಾಂ |
    ಪತಂಜಲಿಂ ಪ್ರಾಂಜಲಿರಾನ ತೋಸ್ಮಿ ||

    Koo App

    ಯೋಗೇನ ಚಿತ್ತಸ್ಯ ಪದೇನ ವಾಚಂ | ಮಲಂ ಶರೀರಸ್ಯ ಚ ವೈದ್ಯಕೇನ ಯೋಪಾಕರೋತ್ತಂ ಪ್ರವರಂ ಮುನೀನಾಂ | ಪತಂಜಲಿಂ ಪ್ರಾಂಜಲಿರಾನ ತೋಸ್ಮಿ || ಪತಂಜಲಿ ಮಹಾಮುನಿಗಳಿಂದ ರಚನೆಯಾದ ಜಗತ್ತಿನ ಅತ್ಯುತ್ತಮ ವಿದ್ಯೆ ಯೋಗಶಾಸ್ತ್ರ. ಭಾರತದ ಈ ಪುರಾತನ ವಿದ್ಯೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಹಾಗೂ ಜಗತ್ತಿಗೆ ಯೋಗದಿನಾಚರಣೆಯನ್ನ ಪರಿಚಯಿಸಿದ ಕೀರ್ತಿ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಸರ್ವರಿಗೂ ಯೋಗದಿನಾಚರಣೆಯ ಶುಭಾಶಯಗಳು.

    C T Ravi (@ctravibjp) 21 June 2022

    ಪತಂಜಲಿ ಮಹಾಮುನಿಗಳಿಂದ ರಚನೆಯಾದ ಜಗತ್ತಿನ ಅತ್ಯುತ್ತಮ ವಿದ್ಯೆ ಯೋಗಶಾಸ್ತ್ರ. ಭಾರತದ ಈ ಪುರಾತನ ವಿದ್ಯೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಹಾಗೂ ಜಗತ್ತಿಗೆ ಯೋಗದಿನಾಚರಣೆಯನ್ನ ಪರಿಚಯಿಸಿದ ಕೀರ್ತಿ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ. ಸರ್ವರಿಗೂ ಯೋಗದಿನಾಚರಣೆಯ ಶುಭಾಶಯಗಳು ಎಂದು ತಿಳಿಸಿದ್ದಾರೆ.

    Live Tv

  • ಪಾಕಿಸ್ತಾನಕ್ಕೆ ಹೋಗಿ ಅಂತಾರೆ, ಪಾಕ್ ಇವರಪ್ಪನ ಮನೆನಾ..? – ರಾಜಕಾರಣಿಗಳ ವಿರುದ್ಧ ಉಡುಪಿ ವಿದ್ಯಾರ್ಥಿನಿಯರ ಕಿಡಿ

    ಪಾಕಿಸ್ತಾನಕ್ಕೆ ಹೋಗಿ ಅಂತಾರೆ, ಪಾಕ್ ಇವರಪ್ಪನ ಮನೆನಾ..? – ರಾಜಕಾರಣಿಗಳ ವಿರುದ್ಧ ಉಡುಪಿ ವಿದ್ಯಾರ್ಥಿನಿಯರ ಕಿಡಿ

    ಉಡುಪಿ: ರಾಜ್ಯದಲ್ಲಿ ಹಿಜಬ್ ಫೈಟ್ ದಿನದಿಂದ ದಿನಕ್ಕೆ ಹೊಸ ರೂಪ ಪಡೆದುಕೊಳ್ಳುತ್ತಿದೆ. ಈ ಬೆನ್ನಲ್ಲೇ ಉಡುಪಿ ಸರ್ಕಾರಿ ಪದವಿ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರು ರಾಜಕಾರಣಿಗಳ ಹೇಳಿಕೆಗಳಿಗೆ ತಿರುಗೇಟು ನೀಡಿದ್ದಾರೆ.

    ಹಿಜಬ್-ಕೇಸರಿ ವಿವಾದಕ್ಕೆ ರಾಜಕಾರಣಿಗಳೇ ಕಾರಣ. ಪಾಕಿಸ್ತಾನಕ್ಕೆ ಹೋಗಿ ಅಂತೀರಲ್ಲ, ಪಾಕಿಸ್ತಾನ ನಿಮ್ಮಪ್ಪನ ಮನೆಯಾ..? ನಮ್ಮನ್ನ ಟೆರರಿಸ್ಟ್ ಹೇಳ್ತೀರಾ..? ನಮ್ಮ ಬ್ಯಾಗ್‍ನಲ್ಲಿ ಎಕೆ 47 ಇದ್ಯಾ ಎಂದು ಪ್ರಶ್ನಿಸುವ ಮೂಲಕ ಉಡುಪಿಯಲ್ಲಿ ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿನಿಯರು ವಾಗ್ದಾಳಿ ನಡೆಸಿದ್ದಾರೆ.

    ನಾವು ಭಾರತೀಯರು. ಇಲ್ಲೇ ಹುಟ್ಟಿದ್ದೇವೆ, ಇಲ್ಲೇ ಸಾಯ್ತೀವಿ. ನಾವು ಪಾಕಿಸ್ತಾನಕ್ಕೆ ಹೋದರೆ ಅವರೇನು ನಮ್ಮನ್ನು ಆರತಿ ಮಾಡಿ ಬರಮಾಡಿಕೊಳ್ಳುತ್ತಾರಾ?. ನೀವು ಮೊದಲು ಪಾಕಿಸ್ತಾನಕ್ಕೆ ಹೋಗಿ. ನಿಮ್ಮ ಹಿಂದೆ ನಾವು ಬರುತ್ತೇವೆ. ನೀವು ಕೊರೋನಾಗೆ ಹೆದರಿ ಮಾಸ್ಕ್ ಹಾಕಲ್ವಾ..? ನಾವು ದೇವರಿಗೆ ಹೆದರಿ ಹಿಜಬ್ ಹಾಕ್ತೀವಿ ಎಂದು ರಾಜಕಾರಣಿಗಳ ವಿರುದ್ಧ ವಿದ್ಯಾರ್ಥಿನಿಯರು ಗರಂ ಆಗಿದ್ದಾರೆ. ಇದನ್ನೂ ಓದಿ: ಸಂಘ ಪರಿವಾರದ ತಾಳಕ್ಕೆ ಕುಣಿಯುತ್ತಾ ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣ ಕಸಿಯುತ್ತಿದೆ ಬಿಜೆಪಿ: ಸಿದ್ದು

    ನಾವು ನಮ್ಮ ತಲೆಗೆ ಸ್ಕಾರ್ಸ್ ಕಟ್ಟಿಕೊಳ್ಳುತ್ತೇವೆ ಮೆದುಳಿಗೆ ಅಲ್ಲ ಎಂದು ಚಾಟಿ ಬೀಸಿದ್ದಾರೆ. ಆರು ಹಿಜಬ್ ಹೋರಾಟಗಾರ್ತಿಯಿಗೆ ಎಲ್ಲರೂ ಬೆಂಬಲ ಕೊಡುತ್ತೇವೆ. ನಮ್ಮ ಪೋಷಕರು ನಮಗೆ ಸಂಪೂರ್ಣ ಬೆಂಬಲ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿಂಧೂರ,ಕುಂಕುಮಕ್ಕೆ ನಿರಾಕರಣೆ: ಸ್ಪಷ್ಟನೆ ನೀಡಿದ ಇಂಡಿ ಕಾಲೇಜು ಪ್ರಿನ್ಸಿಪಾಲ್‌

  • ರಾಜಕೀಯ ನಾಯಕರಿಗೆ ಕೈ ಮುಗಿದ ಜೂನಿಯರ್ ಎನ್‍ಟಿಆರ್

    ರಾಜಕೀಯ ನಾಯಕರಿಗೆ ಕೈ ಮುಗಿದ ಜೂನಿಯರ್ ಎನ್‍ಟಿಆರ್

    ಹೈದರಾಬಾದ್: ಟಾಲಿವುಡ್ ನಟ ಜೂನಿಯರ್ ಎನ್‍ಟಿಆರ್ ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಆಡಳಿತಾರೂಢ ವೈಎಸ್‍ಆರ್ ಕಾಂಗ್ರೆಸ್ ನಡುವೆ ನಡೆಯುತ್ತಿರುವ ವಾಕ್ಸಮರ ಕುರಿತಾಗಿ ಸಮಧಾನ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

    ಆಂಧ್ರಪ್ರದೇಶದಲ್ಲಿ ಟಿಡಿಪಿ ನಾಯಕ, ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಆಡಳಿತಾರೂಢ ವೈಎಸ್‍ಆರ್ ಕಾಂಗ್ರೆಸ್ ನಡುವಿನ ವಾಕ್ಸಮರ ವಿಕೋಪಕ್ಕೆ ಹೋಗಿದೆ. ಎರಡೂ ಬಣದವರು ವೈಯಕ್ತಿಕ ಮಟ್ಟಕ್ಕೆ ಇಳಿದು ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಟ್ವಿಟರ್‌ನಲ್ಲಿ  ವೀಡಿಯೋ ಹಂಚಿಕೊಂಡಿರುವ ನಟ ಜೂನಿಯರ್ ಎನ್‍ಟಿಆರ್, ರಾಜಕೀಯ ನಾಯಕರಿಗೆ ಕೈ ಮುಗಿದು ಬೇಡಿಕೊಂಡಿದ್ದಾರೆ.

    ವೀಡಿಯೋದಲ್ಲಿ ಏನಿದೆ?: ದಯವಿಟ್ಟು ರಾಜಕೀಯ ಏನೇ ಇರಲಿ. ವೈಯಕ್ತಿಕ ಮಟ್ಟಕ್ಕೆ ಇಳಿದು ಯಾರೂ ಜಗಳವಾಡಬೇಡಿ. ಈ ದೇಶದ ಜನ ನಿಮ್ಮನ್ನು ನೋಡುತ್ತಿದ್ದಾರೆ. ದಯವಿಟ್ಟು ಮಾದರಿಯಾಗಿರಿ. ನಿಮ್ಮ ನಿಮ್ಮ ಜಗಳದಲ್ಲಿ ಕುಟುಂಬವನ್ನು ಎಳೆ ತರಬೇಡಿ. ನಾನೊಬ್ಬ ಪ್ರಜೆಯಾಗಿ ನಿಮ್ಮನ್ನು ಕೈ ಮುಗಿದು ಬೇಡಿಕೊಳ್ಳುತ್ತಿದ್ದೇನೆ ಎಂದು ಪರೋಕ್ಷವಾಗಿ ವೈಎಸ್‍ಆರ್ ಕಾಂಗ್ರೆಸ್ ಹಾಗೂ ಟಿಡಿಪಿ ನಾಯಕರಿಗೆ ಕೇಳಿಕೊಂಡಿದ್ದಾರೆ. ಇದನ್ನೂ ಓದಿ:  ರಾಜ್ಯದಲ್ಲಿ ಅಕಾಲಿಕ ಮಳೆಗೆ ಜನಜೀವನ ಅಸ್ತವ್ಯಸ್ತ – ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಕಟ್ಟೆಚ್ಚರ

    ಕಳೆದ ಶುಕ್ರವಾರ ಆಂಧ್ರ ವಿಧಾನಸಭೆಯಲ್ಲಿ ವೈಎಸ್‍ಆರ್ ಕಾಂಗ್ರೆಸ್ ಶಾಸಕ ಅಂಬಟ್ಟಿ ರಾಂಬಾಬು ಅವರು, ಚಂದ್ರಬಾಬು ನಾಯ್ಡು ಅವರ ಪತ್ನಿ ನಾರಾ ಭುವನೇಶ್ವರಿ ಅವರ ಬಗ್ಗೆ ಕೀಳು ಮಟ್ಟದಿಂದ ಮಾತನಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಅಲ್ಲದೇ ಇದೇ ವಿಷಯವಾಗಿ ಹಾಗೂ ವೈಎಸ್‍ಆರ್ ಕಾಂಗ್ರೆಸ್ ನಾಯಕರು ಕಳೆದ ಎರಡು ವರ್ಷದಿಂದ ನನಗೆ ಹಾಗೂ ನನ್ನ ಕುಟುಂಬಕ್ಕೆ ತೀವ್ರ ಅಪಮಾನ ಮಾಡುತ್ತಿದ್ದಾರೆ ಎಂದು ಚಂದ್ರಬಾಬು ನಾಯ್ಡು ಕಣ್ಣೀರು ಹಾಕಿದ್ದರು. ತಾವು ಮುಂದಿನ ಚುನಾವಣೆಯಲ್ಲಿ ಗೆದ್ದು ಸಿಎಂ ಆಗಿಯೇ ವಿಧಾನಸಭೆ ಪ್ರವೇಶ ಮಾಡುತ್ತೇನೆ ಎಂದು ಶಪಥ ಮಾಡಿದ್ದಾರೆ. ವೈಎಸ್‍ಆರ್ ಕಾಂಗ್ರೆಸ್ ಶಾಸಕಿ ಹಾಗೂ ನಟಿ ರೋಜಾ ಕೂಡ ನಾಯ್ಡು ಅವರಿಗೆ ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡು ನಿಂದಿಸಿದ್ದಾರೆ. ಪ್ರವಾಹ ಸಂಕಷ್ಟದಲ್ಲಿರುವವರಿಗೆ ನೆರವು ನೀಡಿ : ರಾಹುಲ್ ಗಾಂಧಿ

  • ಪ್ರವಾಸಿ ಮಂದಿರದಲ್ಲಿ ಗುಂಡು, ತುಂಡು ಪಾರ್ಟಿ – ಕಣ್ಮುಚ್ಚಿ ಕುಳಿತಿದ್ಯಾ ಲೋಕೋಪಯೋಗಿ ಇಲಾಖೆ..?

    ಪ್ರವಾಸಿ ಮಂದಿರದಲ್ಲಿ ಗುಂಡು, ತುಂಡು ಪಾರ್ಟಿ – ಕಣ್ಮುಚ್ಚಿ ಕುಳಿತಿದ್ಯಾ ಲೋಕೋಪಯೋಗಿ ಇಲಾಖೆ..?

    ವಿಜಯಪುರ: ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಗುಂಡು, ತುಂಡು ಪಾರ್ಟಿ ನಡೆದ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಮುಳವಾಡ ಗ್ರಾಮದಲ್ಲಿ ನಡೆದಿದೆ.

    ಕಳೆದ ರಾತ್ರಿ ಕ್ಲಾಸ್ 1 ಗುತ್ತಿಗೆದಾರನೊಬ್ಬ ಮುಳವಾಡ ಪ್ರವಾಸಿ ಮಂದಿರದಲ್ಲಿ ಪೆಂಡಾಲ್ ಹಾಕಿಸಿ ಭರ್ಜರಿಯಾಗಿ ಗುಂಡು ತುಂಡು ಪಾರ್ಟಿ ನಡೆಸಿದ್ದಾನೆ. ಈ ಪಾರ್ಟಿಯಲ್ಲಿ ಅನೇಕ ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು ಸೇರಿದಂತೆ 200ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಪಾರ್ಟಿಯಲ್ಲಿ ಎಣ್ಣೆ, ಮಾಂಸದೂಟ ಎಲ್ಲವೂ ರಾಜಾರೋಷವಾಗಿ ನಡೆದಿದೆ.

    ಪ್ರವಾಸಿ ಮಂದಿರದಲ್ಲೇ ಅಡುಗೆ ಮಾಡಲಾಗಿದ್ದು, ಉಳ್ಳವರು ಇಲ್ಲಿ ಏನು ಮಾಡಿದರೂ ಹೇಳೋರಿಲ್ಲ, ಕೇಳೋರಿಲ್ಲದಂತಾಗಿದೆ. ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 218ರ ಪಕ್ಕದಲ್ಲಿರುವ ಐಬಿಯಲ್ಲೇ ಇಷ್ಟೊಂದು ರಾಜಾರೋಷವಾಗಿ ದರ್ಬಾರ್ ನಡೆಸಿದರೂ ಸರ್ಕಾರಿ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

    ಪ್ರಥಮ ದರ್ಜೆಯ ಗುತ್ತಿಗೆದಾರನಿಗೆ ಐಬಿಯನ್ನೇ ಅಧಿಕಾರಿಗಳು ಬರೆದು ಕೊಟ್ರಾ..? ಸರ್ಕಾರಿ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ ಗುತ್ತಿಗೆದಾರ ವಿರುದ್ಧ ಕ್ರಮ ಕೈಗೊಳ್ಳದೆ ಕಣ್ಮುಚ್ಚಿ ಕುಳಿತಿದೆ ಲೋಕೋಪಯೋಗಿ ಇಲಾಖೆ ಎಂದು ಜನರು ಹಿಡಿಶಾಪ ಹಾಕುತ್ತಿದ್ದಾರೆ.

  • ರಾಜಕಾರಣಿಗಳು ಮಠ ಪ್ರವೇಶಿಸಿದರೆ ಅಶಾಂತಿ: ದಿಂಗಾಲೇಶ್ವರ ಶ್ರೀ

    ರಾಜಕಾರಣಿಗಳು ಮಠ ಪ್ರವೇಶಿಸಿದರೆ ಅಶಾಂತಿ: ದಿಂಗಾಲೇಶ್ವರ ಶ್ರೀ

    ಧಾರವಾಡ: ಮಠಗಳಲ್ಲಿ ಭಕ್ತರು ಹೊರ ಹೋಗಿ, ರಾಜಕಾರಣಿಗಳು ಒಳ ಹೋದರೆ ಅಲ್ಲಿ ಅಶಾಂತಿ ಗ್ಯಾರಂಟಿ ಎಂದು ಬಾಲೇಹೊಸೂರು ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಮೂರು ಸಾವಿರ ಮಠದ ಆಸ್ತಿಯನ್ನು ಕೆಲವರಿಗೆ ದಾನವಾಗಿ, ಇನ್ನೂ ಕೆಲವರಿಗೆ ಕರೆದು ಕೊಡಲಾಗಿದೆ. ಅಲ್ಲದೆ ಹಲವರಿಗೆ ಕೆಲವು ಅಗ್ರಿಮೆಂಟ್ ಮೇಲೆ ಜಮೀನು ಕೊಡಲಾಗಿದೆ. ಈ ಎಲ್ಲ ಆಸ್ತಿ ಮಠಕ್ಕೆ ಉಳಿಯಬೇಕು, ಅದಕ್ಕೆ ನಾವು ಎಲ್ಲ ಕಡೆ ಜನಜಾಗೃತಿ ಮಾಡುತಿದ್ದೇವೆ ಎಂದು ತಿಳಿಸಿದರು.

    ನಮ್ಮ ಹೋರಾಟ ತೀವ್ರಗೊಳ್ಳುವ ಮೊದಲು ಯಾರು ಮಠದ ಭೂಮಿ ತೆಗೆದುಕೊಂಡಿದ್ದಾರೆ ಅವರೇ ಸ್ವ ಇಚ್ಛೆಯಿಂದ ವಾಪಸ್ ಮಾಡುತ್ತೇವೆ ಎಂದು ಘೋಷಣೆ ಮಾಡಬೇಕು. ಮಠದ ಆಸ್ತಿ ವಾಪಸ್ ಬರುವವರೆಗೆ ನಾವು ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದರು.

    ಯಾವಾಗ ಮಠಗಳಲ್ಲಿ ಭಕ್ತರು ಹೊರ ಹೋಗಿ, ರಾಜಕಾರಣಿಗಳು ಒಳ ಹೋಗುತ್ತಾರೋ ಅಲ್ಲಿ ಅಶಾಂತಿ ಗ್ಯಾರಂಟಿ ಎಂದು ರಾಜಕಾರಣಿಗಳ ಮೇಲೆ ಹರಿಹಾಯ್ದರು. ರಾಜಕಾರಣಿಗಳು ಇರುವ ಜಾಗ ವಿಧಾನಸೌಧವೇ ಹೊರತು ಮಠ ಅಲ್ಲ. ಮಠದಲ್ಲಿ ಸ್ವಾಮಿಗಳು ಇರಬೇಕು, ವಿಧಾನಸೌಧದಲ್ಲಿ ರಾಜಕಾರಣಿಗಳು ಇರಬೇಕು. ಬಹಳಷ್ಟು ಮಠಗಳಲ್ಲಿ ರಾಜಕಾರಣಿಗಳ ಪ್ರವೇಶ ಆಗಿ, ಇಡೀ ಮಠದ ಆಸ್ತಿ ಕಬಳಿಸುವ ಹಾಗೂ ಮಠದ ಆಸ್ತಿ ನಾಶ ಮಾಡುವ ಪ್ರಯತ್ನ ನಡೆದಿದೆ. ಇದು ಒಳ್ಳೆಯದಲ್ಲ ಎಂದು ಶ್ರೀಗಳು ಹೇಳಿದರು.

  • ರಾಮ, ಅಯೋಧ್ಯೆ, ಹಿಂದುತ್ವ ಅಂದ್ರೆ ರಾಜಕಾರಣಿಗಳು ನೆಟ್ಟಗಾಗ್ತಾರೆ ಅಷ್ಟೇ – ದತ್ತ

    ರಾಮ, ಅಯೋಧ್ಯೆ, ಹಿಂದುತ್ವ ಅಂದ್ರೆ ರಾಜಕಾರಣಿಗಳು ನೆಟ್ಟಗಾಗ್ತಾರೆ ಅಷ್ಟೇ – ದತ್ತ

    – ನಮ್ಮ ಅಕ್ಕ ತಂಗಿಯರನ್ನು ಕಳೆದುಕೊಳ್ತೇವೆ

    ಚಿಕ್ಕಮಗಳೂರು: ರಾಮ, ಅಯೋಧ್ಯೆ, ಹಿಂದುತ್ವ ಅಂದ್ರೆ ಪ್ರಪಂಚ ನೆಟ್ಟಗೆ ಆಗುತ್ತೆ ಅಂತ ನಮ್ಮ ಯುವ ಸಮೂಹ ತಿಳಿದಿದೆ. ಆದರೆ ಪ್ರಪಂಚ ನೆಟ್ಟಗೆ ಆಗುತ್ತೊ ಇಲ್ವೋ ರಾಜಕಾರಣಿಗಳು ನೆಟ್ಟಗಾಗುತ್ತಾರೆ ಎಂದು ವೈ.ಎಸ್.ವಿ.ದತ್ತ ಆತಂಕ ವ್ಯಕ್ತಪಡಿಸಿದ್ದಾರೆ.

    ಜಿಲ್ಲೆಯ ಕಡೂರು ತಾಲೂಕಿನ ಹೋಚಿಹಳ್ಳಿಯಲ್ಲಿ ಗಾಂಧಿ ಜಯಂತಿ ಅಂಗವಾಗಿ ದಲಿತರ ಮನೆಯಲ್ಲಿ ಸಹಪಂಕ್ತಿ ಭೋಜನದ ಬಳಿಕ ಮಾತನಾಡಿದ ಅವರು, ಹೀಗೆ ನಮ್ಮ ಅಕ್ಕತಂಗಿಯರನ್ನು ಕಳೆದುಕೊಳ್ಳಬೇಕಾಗುತ್ತೆ ಎಂದು ನಮ್ಮ ಯುವಕರಿಗೆ ತಿಳುವಳಿಕೆ ಕೊಡಬೇಕಿದೆ ಎಂದು ತಿಳಿಸಿದರು.

    ಉತ್ತರ ಪ್ರದೇಶದಲ್ಲಿ ನಡೆದಿರುವ ಘಟನೆ ನಾಗರಿಕ ಸಮಾಜ ತಲೆ ತಗ್ಗಿಸುವಂತದ್ದು. ರಾಮರಾಜ್ಯ ಅಂತಾರೆ, ಮರ್ಯಾದೆ ಪುರುಷೋತ್ತಮ ರಾಮ ಅಂತಾರೆ. ರಾಮನಿಗೆ ದೇವಸ್ಥಾನ ಕಟ್ಟಿಸಿದ್ದಕ್ಕೆ ಸಂಭ್ರಮಿಸ್ತಾರೆ. ರಾಮ ದೇವಾಲಯ ಬಿಡುಗಡೆಯಾಗಿದ್ದಕ್ಕೆ ಸಿಹಿ ಹಂಚುತ್ತಾರೆ. ಆದರೆ ಓರ್ವ ದಲಿತ ಹೆಣ್ಣು ಮಗಳನ್ನು ರಾತ್ರಿ ಆತ್ಯಾಚಾರ ಮಾಡಿ ಅವಳನ್ನು ಕೊಂದು ಶಿಕ್ಷೆಯನ್ನು ತಪ್ಪಿಸೋದಕ್ಕೆ ರಾತ್ರೋರಾತ್ರಿ ಗುಟ್ಟಾಗಿ ಕುಟುಂಬಕ್ಕೂ ಹೇಳದೇ ಅಂತ್ಯಕ್ರಿಯೆ ಮಾಡುತ್ತಾರೆ ಎಂದು ಕಿಡಿಕಾರಿದರು.

    ಈ ರೀತಿಯ ಕೆಲಸಕ್ಕೆ ಸರ್ಕಾರವೇ ಬೆಂಬಲವಾಗಿ ನಿಲ್ಲುತ್ತೆ ಅಂದ್ರೆ ಇಂತಹಾ ಸರ್ಕಾರವನ್ನ ಮನುಷ್ಯ ಸರ್ಕಾರ ಅನ್ನಬೇಕೋ ಅಥವ ಮೃಗಿಯ ಸರ್ಕಾರ ಅನ್ನಬೇಕೋ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.