Tag: politician

  • ಡೇರ್ ಡೆವಿಲ್ ಸ್ಟಂಟ್ ಮಾಡಿದ ನಟ ಪವನ್ – ಕೇಸ್ ದಾಖಲಿಸಿದ ಪೊಲೀಸರು

    ಡೇರ್ ಡೆವಿಲ್ ಸ್ಟಂಟ್ ಮಾಡಿದ ನಟ ಪವನ್ – ಕೇಸ್ ದಾಖಲಿಸಿದ ಪೊಲೀಸರು

    ಹೈದರಾಬಾದ್: ಕಾರಿನ ರೂಫ್‌ನಲ್ಲಿ ಡೇರ್ ಡೆವಿಲ್ ಸ್ಟಂಟ್ (Car dare Devil Stunt) ಮಾಡಿದ್ದ ನಟ ಪವನ್ ಕಲ್ಯಾಣ್ ವಿರುದ್ಧ ಪೊಲೀಸರು ಕೇಸ್ (Police Case) ದಾಖಲಿಸಿದ್ದಾರೆ. ಅತಿವೇಗದ ಕಾರು ಚಾಲನೆ ಮತ್ತು ಇತರರ ಜೀವ ಹಾಗೂ ವೈಯಕ್ತಿಕ ಸುರಕ್ಷತೆಗೆ ಅಪಾಯ ತಂದೊಡ್ಡಿದ್ದ ಆರೋಪದ ಮೇಲೆ ಪವನ್ ಕಲ್ಯಾಣ್ (Pawan Kalyan) ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ.

    ಕಳೆದ ವಾರ ಪವನ್ ಕಲ್ಯಾಣ್ ವೇಗವಾಗಿ ಚಲಿಸುತ್ತಿದ್ದ ಕಾರಿನ ರೂಫ್ ಮೇಲೆ ಕುಳಿತಿದ್ದರು. ಅದೇ ಕಾರಿನಲ್ಲಿ ಅಕ್ಕಪಕ್ಕ ಐದಾರು ಜನ ಡೋರ್ ಹಿಡಿದು ನಿಂತಿದ್ದರು. ಈ ವೀಡಿಯೋ ಜಾಲತಾಣದಲ್ಲಿ (Social Media) ವೈರಲ್ ಆಗಿತ್ತು. ಇದನ್ನೂ ಓದಿ: ಡ್ಯಾನ್ಸ್ ಮಾಡ್ಬೇಕು ಸಾಂಗ್ ಹಾಕಿ ಅಂದಿದ್ದೆ ತಪ್ಪಾ? – ದಲಿತ ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು

    ಈ ವೇಳೆ ಬೈಕ್ ಸವಾರನೊಬ್ಬ ನಿಯಂತ್ರಣತಪ್ಪಿ ಬಿದ್ದಿದ್ದಾನೆ ಎಂದು ದೂರುದಾರ ಪಿ.ಶಿವಕುಮಾರ್ ಎಂಬವರು ದೂರು ನೀಡಿದ್ದಾರೆ. ಡೇರ್ ಡೆವಿಲ್ ಸ್ಟಂಟ್‌ನಲ್ಲಿ ಭಾಗಿಯಾಗಿದ್ದ ಪವನ್ ಕಲ್ಯಾಣ್ ಮತ್ತು ಇತರರ ವಿರುದ್ಧ ಪೊಲೀಸ್ ಕ್ರಮಕ್ಕೆ ಅವರು ಒತ್ತಾಯಿಸಿದ್ದಾರೆ. ಶಿವಕುಮಾರ್ ದೂರಿನ ಮೇರೆಗೆ ಕೇಸ್ ದಾಖಲಾಗಿದೆ. ಇದನ್ನೂ ಓದಿ: ‘ಬಿಗ್ ಬಾಸ್’ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ: ಅಚ್ಚರಿಯ ಮತ್ತೊಂದು ಹೆಸರು

    ಪವನ್ ಕಲ್ಯಾಣ್ ಅವರು ಕಾರಿನ ರೂಫ್‌ನಲ್ಲಿ ಕುಳಿತಿದ್ದರೂ ಚಾಲಕ ಅದನ್ನು ಲೆಕ್ಕಿಸಿದೇ ಮಿತಿ ಮೀರಿದ ವೇಗದಲ್ಲಿ ಚಲಿಸುತ್ತಿದ್ದ. ಅಲ್ಲದೇ ಇತರ ಬೆಂಗಾವಲು ವಾಹನಗಳೂ ಇದೇ ವೇಗದಲ್ಲಿ ಅವರನ್ನು ಹಿಂಬಾಲಿಸಿದ್ದವು.

    ಜನಸೇನಾ ಪಕ್ಷದ (Jana Sena Party) ಅಧ್ಯಕ್ಷರಾಗಿರುವ ಪವನ್ ಕಲ್ಯಾಣ್ ಕಳೆದ ವಾರ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಇಪ್ಪಟ್ಟಂ ಗ್ರಾಮಕ್ಕೆ ಭೇಟಿ ನೀಡಿದ್ದರು. ಅಲ್ಲಿ ರಸ್ತೆ ಅಗಲೀಕರಣ ಮಾಡುವುದಕ್ಕಾಗಿ ಮನೆಗಳನ್ನು ಕೆಡವಲಾಗಿದೆ ಎಂಬ ಅರೋಪ ಕೇಳಿ ಬಂದಿದ್ದರಿಂದ ಸ್ಥಳೀಯರನ್ನು ಭೇಟಿ ಮಾಡಲು ತೆರಳಿದ್ದರು.

    Live Tv
    [brid partner=56869869 player=32851 video=960834 autoplay=true]

  • ಕನ್ನಡದ ವಿಷಯದಲ್ಲಿ ರಾಜಕಾರಣಿಗಳು ರಣಹೇಡಿಗಳು: ಕರವೇ ನಾರಾಯಣಗೌಡ

    ಕನ್ನಡದ ವಿಷಯದಲ್ಲಿ ರಾಜಕಾರಣಿಗಳು ರಣಹೇಡಿಗಳು: ಕರವೇ ನಾರಾಯಣಗೌಡ

    ಬೆಳಗಾವಿ: ಕನ್ನಡ (Kannada) ವಿಷಯದಲ್ಲಿ ಬೆಳಗಾವಿಯ (Belagavi) ರಾಜಕಾರಣಿಗಳು ರಣ ಹೇಡಿಗಳು. ಕನ್ನಡದ ಉಳಿವಿಗಾಗಿ ಕೇವಲ ಕನ್ನಡ ಸಂಘಟನೆಗಳು ಮಾತ್ರ ಹೋರಾಟ ಮಾಡುತ್ತಿವೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ (Narayana Gowda) ಹರಿಹಾಯ್ದಿದ್ದಾರೆ.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಬಸ್‍ಗಳ ಮೇಲೆ ಮರಾಠಿ ಅಕ್ಷರಗಳಿವೆ. ಆದರೆ ಮಹಾರಾಷ್ಟ್ರದ ಬಸ್‍ಗಳ ಮೇಲೆ ಕನ್ನಡದ ಅಕ್ಷರಗಳಿಲ್ಲ. ಈ ಸಂಬಂಧ ನಿಮ್ಮ ಸಂಘಟನೆ ಹೋರಾಟ ಮಾಡಿ ಸರ್ಕಾರದ ಮೇಲೆ ಒತ್ತಡ ಹಾಕಬಹುದಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಕನ್ನಡದ ವಿಷಯದಲ್ಲಿ ರಾಜಕಾರಣಿಗಳು ರಣಹೇಡಿಗಳು. ಕನ್ನಡದ ವಿಷಯ, ಕನ್ನಡಿಗರ ಪರವಾಗಿ ಇವರು ಎಂದೂ ಧ್ವನಿ ಎತ್ತಿಲ್ಲ. ಬೆಳಗಾವಿಯಲ್ಲಿ ಕಾರ್ಯಕ್ರಮ ಮಾಡಿದಾಗ ಇಲ್ಲಿನ ರಾಜಕಾರಣಿಗಳ ಮನೆಗೆ ಹೋಗಿ ಬನ್ನಿ ಎಂದರೆ ಒಬ್ಬರೂ ಬರಲಿಲ್ಲ. ಅಂತಹ ರಣಹೇಡಿಗಳಿದ್ದಾರೆ. ಅವರ ವಿರುದ್ಧ ನಾವು ನಿರಂತರವಾಗಿ ಪ್ರತಿಭಟನೆ ಮಾಡಿಕೊಂಡು ಬಂದಿದ್ದೇವೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮದ್ಯದ ಅಮಲಿನಲ್ಲಿ ಯುವತಿಯ ರಂಪಾಟ – ತಣ್ಣೀರು ಎರಚಿ ನಶೆ ಇಳಿಸಿದ ಸ್ಥಳೀಯರು

    ಕಲ್ಯಾಣ ಕರ್ನಾಟಕದ ಮತ್ತೊಂದು ಭಾಗದಲ್ಲಿ ಬೆಳ್ಳಿ ಹಬ್ಬ ಆಚರಣೆ ಮಾಡಬೇಕೆಂದು ನಮ್ಮ ಕೇಂದ್ರ ಸಮಿತಿ ನಿರ್ಧಾರ ಮಾಡಿದೆ. ಉತ್ತರ ಕರ್ನಾಟಕ ಎಂದಾಗ ಬೆಳಗಾವಿಯಲ್ಲಿ ಆಯೋಜನೆ ಮಾಡಬೇಕು. ಕಲ್ಯಾಣ ಕರ್ನಾಟಕ ಎಂದಾಗ ಕಲಬುರಗಿಯಲ್ಲಿ ಕಾರ್ಯಕ್ರಮ ಮಾಡಬೇಕೆಂಬ ತೀರ್ಮಾನ ಮಾಡಿದ್ದೇವೆ. ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಎಲ್ಲರೂ ಒಮ್ಮತದಿಂದ, ಒಗ್ಗಟ್ಟಿನಿಂದ ಆಚರಣೆ ಮಾಡಿದ್ದೇವೆ. ಅದಕ್ಕಾಗಿ ಬೆಳಗಾವಿಯ ಎಲ್ಲ ಕನ್ನಡ ಸಂಘಟನೆಗಳಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದಿದ್ದಾರೆ.

    ಕರ್ನಾಟಕ ಹಾಗೂ ಮಹಾರಾಷ್ಟ್ರದ ರಾಜ್ಯಪಾಲರು ಸಭೆ ಮಾಡಿದ್ದಾರೆ. ಇಲ್ಲಿ ಹಾಗೂ ಅಲ್ಲಿ ಇರುವ ಪುಣ್ಯ ಕ್ಷೇತ್ರದಲ್ಲಿ ಅವರು ಅಲ್ಲಿ ಕನ್ನಡ ಹಾಗೂ ಇಲ್ಲಿ ಮರಾಠಿ ಬಳಸಬೇಕು ಎಂದು ಸಭೆಯಲ್ಲಿ ತಿರ್ಮಾನ ಮಾಡಿದ್ದಾರೆ. ಸರ್ಕಾರ ಯಾವ ರೀತಿ ತೀರ್ಮಾನ ತೆಗೆದುಕೊಳ್ಳುತ್ತದೆ ನೋಡೋಣ. ನಾವು ಮರಾಠಿ ಬಳಸಿದರೆ ಸಾಲದು ಅವರು ಅಲ್ಲಿ ಕನ್ನಡ ಬಳಕೆ ಮಾಡಬೇಕು. ಕನ್ನಡ ಪರ ಸಂಘಟನೆಗಳು ಬೆಂಗಳೂರಿಗೆ ಸೀಮಿತ ಆಗಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನಗೆ ಪ್ರತಿಕ್ರಿಯೆ ನೀಡಿದ ಅವರು, ಬೆಳಗಾವಿಯಲ್ಲಿ ಒಂದು ಭಾಷೆಯ ಜನರ ಕಾಟವಾದರೆ ಬೆಂಗಳೂರಿನಲ್ಲಿ ನೂರಾರು ಭಾಷೆಯ ಜನರ ಕಾಟವಿದೆ. ಹಾಗಾಗಿ ನಾವು ಅಲ್ಲಿ ಕಾರ್ಯಕ್ರಮ ಮಾಡುತ್ತೇವೆ. ಕನ್ನಡ ಪರ ಸಂಘಟನೆಗಳಿಗೆ ಬೆಳಗಾವಿಯಲ್ಲಿ ಸರ್ಕಾರ ಅನುದಾನ ನೀಡದ ವಿಚಾರಕ್ಕೆ ಮಹಾರಾಷ್ಟ್ರ ಸರ್ಕಾರ ಎಂಇಎಸ್‍ಗೆ (MES) ಕೋಟ್ಯಂತರ ರೂಪಾಯಿ ಅನುದಾನ ನೀಡುವಾಗ ಇಲ್ಲಿ ನಮ್ಮವರಿಗೆ ಅನುದಾನ ಯಾಕೆ ನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸಾವಿಗೂ ಮುನ್ನ ಕ್ಲಾಸ್‍ಮೇಟ್‍ಗಳ ಭೇಟಿಗೆ ಹಾತೊರೆದಿದ್ದ ಚಂದ್ರಶೇಖರ್!

    ಬೆಳಗಾವಿಯಲ್ಲಿ ರಾಜ್ಯೋತ್ಸವ ಸಮಯದಲ್ಲಿ ನಿರ್ಬಂಧ ಹೇರಿರುವ ವಿಚಾರಕ್ಕೆ, ಅದಕ್ಕೆ ಸ್ಥಳೀಯ ನಾಯಕರು ಉತ್ತರ ನೀಡಬೇಕು. ಕನ್ನಡಿಗರ ಸಂಭ್ರಮಕ್ಕೆ ಯಾರು ಅಡ್ಡಿ ಆಗಬಾರದು. ಕನ್ನಡಿಗರ ಮೇಲೆ ಲಾಠಿ ಚಾರ್ಜ್ ಮಾಡಿರುವುದು ಖಂಡನೀಯ. ಈ ವಿಚಾರವಾಗಿ ಗೃಹ ಸಚಿವರ ಬಳಿ ಚರ್ಚೆ ಮಾಡುತ್ತೇವೆ. ನಮ್ಮ ರಾಜಕಾರಣಿಗಳು ರಣಹೇಡಿಗಳು, ಎಲ್ಲವನ್ನು ನಾವೇ ಒತ್ತಾಯ ಮಾಡಬೇಕು. ಕಾರ್ಯಕ್ರಮಕ್ಕೆ ಬರಲು ಮನೆಗೆ ಹೋಗಿ ಆಹ್ವಾನ ನೀಡಿದರು ಅವರು ಬರುವುದಿಲ್ಲ ಎಂದು ನಾರಾಯಣಗೌಡ ಕಿಡಿಕಾರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪಾಕ್ ರಾಜಕಾರಣಿ ಸಂಬಂಧಿ ಕಾರ್ ಓವರ್‌ಟೇಕ್ – ಹಿಂದೂ ಕುಟುಂಬದ ಮೇಲೆ ದಾಳಿ

    ಪಾಕ್ ರಾಜಕಾರಣಿ ಸಂಬಂಧಿ ಕಾರ್ ಓವರ್‌ಟೇಕ್ – ಹಿಂದೂ ಕುಟುಂಬದ ಮೇಲೆ ದಾಳಿ

    ಇಸ್ಲಾಮಬಾದ್: ರಾಜಕಾರಣಿ ಸಂಬಂಧಿಯ ಕಾರ್ ಓವರ್‌ಟೇಕ್ ಮಾಡಿದಕ್ಕೆ ಹಿಂದೂ ಕುಟುಂಬದ ಮೇಲೆ ಹಲ್ಲೆ ಮಾಡಿದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

    ಭಾನುವಾರ ಸಂಜೆ ರಾಜಕಾರಣಿಯ ಸಂಬಂಧಿಕರು ಮತ್ತು ಅವರ ಸಹಚರರು ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಹಿಂದೆಯಿಂದ ಬಂದ ಹಿಂದೂ ಕುಟುಂಬದವರು ಕಾರನ್ನು ಓವರ್‌ಟೇಕ್ ಮಾಡಿದ್ದಾರೆ. ಈ ಹಿನ್ನೆಲೆ ಸಿಟ್ಟಿಗೆದ್ದ ರಾಜಕಾರಣಿ ಸಂಬಂಧಿಗಳ ಗ್ಯಾಂಗ್ ಹಿಂದೂ ಕುಟುಂಬದ ವಿರುದ್ಧ ವಾಗ್ದಾಳಿ ಮಾಡಿ ಹಲ್ಲೆ ಮಾಡಿದ್ದಾರೆ. ಈ ಹಿನ್ನೆಲೆ ಆ ಕುಟುಂಬ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಿಯರನ್ನು ವಿಚಾರಿಸಿದಾಗ ವಿಷಯ ತಿಳಿದುಬಂದಿದೆ. ಇದನ್ನೂ ಓದಿ:  ಮೈಸೂರು ಉದ್ಯಮಿಯ ಕೊಲೆ ಕೇಸ್‍ಗೆ ಟ್ವಿಸ್ಟ್ – ತಂದೆಯನ್ನೇ ಬರ್ಬರ ಹತೈಗೈದ 16ರ ಮಗ! 

    ನಡೆದಿದ್ದೇನು?
    ಸಿಂಧ್‍ನ ಕುಟುಂಬವು ಒಬ್ಬ ಪುರುಷ, ಮೂವರು ಮಹಿಳೆಯರು ಮತ್ತು ಇಬ್ಬರು ಮಕ್ಕಳನ್ನು ಕಾರಿನಲ್ಲಿ ಹೋಗುತ್ತಿದ್ದರು. ಮೀರ್‍ಪುರ್ ಮಾಥೆಲೋ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಘೋಟ್ಕಿ ಬಳಿಯ ರೆಸ್ಟೋರೆಂಟ್‍ನಲ್ಲಿ ರಹರ್ಕಿ ಸಾಹಿಬ್ ಎಂಬ ಪ್ರದೇಶದ ದೇವಸ್ಥಾನದಿಂದ ಹಿಂದಿರುಗುತ್ತಿದ್ದಾಗ ಅವರ ಮೇಲೆ ರಾಜಕಾರಣಿ ಸಂಬಂಧಿ ದಾಳಿ ಮಾಡಿದ್ದಾನೆ.

    ಸ್ಥಳೀಯ ರಾಜಕಾರಣಿಯೊಬ್ಬರ ಸೋದರಸಂಬಂಧಿ ಶಂಶೇರ್ ಪಿತಾಫಿ ಅವರ ವಾಹನವನ್ನು ಅಡ್ಡಗಟ್ಟಲು ಯತ್ನಿಸಿದರೂ ಪದೇ ಪದೇ ನಾವು ಅವರನ್ನು ಓವರ್‌ಟೇಕ್ ಮಾಡಿ ಮುಂದೆ ಹೋಗುತ್ತಿದ್ದೆವು. ಆದರೂ ಅವರು ನಮ್ಮನ್ನು ಹಿಂದಿಕ್ಕಿ, ನಮ್ಮ ಕಾರನ್ನು ನಿಲ್ಲಿಸಿ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

    ಮಾಧ್ಯಮದವರೊಂದಿಗೆ ಮಾತನಾಡಿದ ಪೊಲೀಸ್ ಅಧಿಕಾರಿಯೊಬ್ಬರು, ಹೆದ್ದಾರಿಯಲ್ಲಿ ಕುಟುಂಬದವರ ಕಾರಿನಲ್ಲಿ ಬರಬೇಕಾದ್ರೆ ಎದುರಿದ್ದ ಕಾರನ್ನು ಓವರ್‍ಟೇಕ್ ಮಾಡಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ಮಕ್ಕಳಲ್ಲೊಬ್ಬರು ಐಸ್ ಕ್ರೀಮ್ ಪೇಪರ್‌ನ್ನು ಹೊರಗೆ ಎಸೆದರು. ಅದು ಕಾರಿನ ವಿಂಡ್‍ಶೀಲ್ಡ್‍ಗೆ ಅಪ್ಪಳಿಸಿತು. ಇದರಿಂದ ಕೋಪಗೊಂಡಿದ್ದು, ಆ ಕಾರನ್ನು ಓವರ್‌ಟೇಕ್ ಮಾಡಿದ್ದಾರೆ. ಆದರೆ ಅವರು ನಿಲ್ಲಿಸದೇ ಅಲ್ಲಿಂದ ವೇಗವಾಗಿ ಹೋಗಿದ್ದಾರೆ ಎಂದು ವಿವರಿಸಿದರು.

    ಆದರೂ ಅವರ ಕುಟುಂಬವನ್ನು ಬಿಡದ ಇವರು, ಅವರನ್ನು ಹಿಂಬಾಲಿಸಿಕೊಂಡು ರೆಸ್ಟೋರೆಂಟ್‍ಗೆ ಬಂದಿದ್ದಾರೆ. ಸುಮಾರು 12 ಪುರುಷರು ಕಾರನ್ನು ಒಡೆದು ಕಾರಿನಲ್ಲಿದ್ದ ಅಜಯ್‍ಕುಮಾರ್‌ಗೆ ಗಾಯಗೊಳಿಸಿದ್ದಾರೆ. ಪ್ರಸ್ತುತ ಪ್ರಕರಣ ದಾಖಲಾಗಿದ್ದು, ದಾಳಿಕೋರರನ್ನು ಬಂಧಿಸಲಾಗುವುದು ಎಂದು ಭರವಸೆ ಕೊಟ್ಟರು. ಇದನ್ನೂ ಓದಿ: ಮೊಹರಂ ಹಬ್ಬದಲ್ಲೂ ಅಪ್ಪು – ಹೊಂಡದಲ್ಲಿ ಪುನೀತ್ ಫೋಟೋ ಹಿಡಿದು ಬಂದ ಬಾಲಕ 

    ಮುಖ್ಯ ಆರೋಪಿಯನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದರೂ ಸಹ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಮಾಜಿ ಸಂಸದ ಸೇರಿ ನಾಲ್ವರಿಗೆ ಗಲ್ಲು

    ಮಾಜಿ ಸಂಸದ ಸೇರಿ ನಾಲ್ವರಿಗೆ ಗಲ್ಲು

    ಬ್ಯಾಂಕಾಕ್: ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿಯ ಮಾಜಿ ಸಂಸದ, ಡೆಮಾಕ್ರಸಿ ಪಕ್ಷದ ಕಾರ್ಯಕರ್ತ ಸೇರಿದಂತೆ ನಾಲ್ವರನ್ನು ಗಲ್ಲಿಗೇರಿಸಿದ ಘಟನೆ ಮ್ಯಾನ್ಮಾರ್‌ಲ್ಲಿ  ನಡೆದಿದೆ.

    ಡೆಮಾಕ್ರಸಿ ಪ್ರಚಾರಕ ಕ್ಯಾವ್ ಮಿನ್ ಯು ಮಾಜಿ ಸಂಸದ ಮತ್ತು ಹಿಪ್-ಹಾಪ್ ಕಲಾವಿದ ಫಿಯೋ ಝೆಯಾ ಥಾವ್, ಹ್ಲಾ ಮೈಯೋ ಆಂಗ್ ಮತ್ತು ಆಂಗ್ ತುರಾ ಜಾವ್ ಮರಣ ದಂಡನೆಗೆ ಒಳಗಾದವರಾಗಿದ್ದಾರೆ. ಸುಮಾರು 50 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮರಣದಂಡನೆಯ ಶಿಕ್ಷೆಯಾಗಿದೆ ಎಂದು ಮ್ಯಾನ್ಮಾರ್‌ ಸರ್ಕಾರ ತಿಳಿಸಿದೆ. ನಾಲ್ವರು ರಾಜಕೀಯ ಕೈದಿಗಳಿಗೆ ಕ್ಷಮಾದಾನಕ್ಕಾಗಿ ವಿಶ್ವಾದ್ಯಂತ ಮನವಿ ಮಾಡಿದ್ದರೂ ಮರಣದಂಡನೆಯನ್ನು ವಿಧಿಸಿದೆ. ಇದನ್ನೂ ಓದಿ: ಅಭಿವೃದ್ಧಿಗೆ ಕ್ರಿಶ್ಚಿಯನ್ನರೇ ಕಾರಣ, ಕ್ರಿಶ್ಚಿಯನ್ನರು ಇಲ್ಲದಿದ್ರೆ ರಾಜ್ಯ ಬಿಹಾರ ಆಗ್ತಿತ್ತು: ತಮಿಳುನಾಡು ಸ್ಪೀಕರ್

    ಕಳೆದ ವರ್ಷ ಸೇನೆಯು ದೇಶದ ಆಡಳಿತವನ್ನು ತನ್ನ ವಶಕ್ಕೆ ಪಡೆದ ಬಳಿಕ ಹಿಂಸಾತ್ಮಕ ಮತ್ತು ಅಮಾನವೀಯ ಕೃತ್ಯಗಳನ್ನು ಪ್ರೇರೇಪಿಸಿದ ಆರೋಪ ಸಂಬಂಧ ಕಾನೂನಿಗೆ ಅನುಗುಣವಾಗಿ ನಾಲ್ವರನ್ನು ಬಂಧಿಸಿತ್ತು. ಇದೀಗ ಗಲ್ಲಿಗೇರಿಸಲಾಗಿದೆ. ಇದನ್ನೂ ಓದಿ: ಟ್ರಯಲ್ ಬ್ಲಾಸ್ಟ್ ಆಧರಿಸಿ ಗಣಿಗಾರಿಕೆಗೆ ಅವಕಾಶ ಕೊಡಬಾರದು: ಸಿಎಂಗೆ ಸುಮಲತಾ ಪತ್ರ

    Live Tv
    [brid partner=56869869 player=32851 video=960834 autoplay=true]

  • ಮಗನ ಪ್ರಿಯತಮೆಗೆ ರೌಡಿಗಳಿಂದ ಧಮ್ಕಿ ಹಾಕಿಸಿದ ಪ್ರಭಾವಿ ರಾಜಕಾರಣಿ

    ಮಗನ ಪ್ರಿಯತಮೆಗೆ ರೌಡಿಗಳಿಂದ ಧಮ್ಕಿ ಹಾಕಿಸಿದ ಪ್ರಭಾವಿ ರಾಜಕಾರಣಿ

    ಬೆಂಗಳೂರು: ಪ್ರಭಾವಿ ರಾಜಕಾರಣಿಯೊಬ್ಬರು ಮಗನ ಪ್ರಿಯತಮೆಗೆ ರೌಡಿಗಳಿಂದ ಧಮ್ಕಿ ಹಾಕಿಸಿದ್ದಾರೆ.

    ರಾಜಕಾರಣಿ ಪುತ್ರನ ಗರ್ಲ್‍ಫ್ರೆಂಡ್‍ಗೆ ಹುಳಿಮಾವು ರೌಡಿಶೀಟರ್ ನಂದೀಶ್‍ನಿಂದ ಧಮ್ಕಿ ಆರೋಪ ವ್ಯಕ್ತವಾಗಿದೆ. ಬೆಂಗಳೂರು ಬಿಟ್ಟು ಹೋಗು, ಇಲ್ಲ ನಿನ್ನ ಖಾಸಗಿ ಫೋಟೋ ವೀಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಯುವತಿಯ ಖಾಸಗಿ ಫೋಟೋ ವೀಡಿಯೋಗಳನ್ನು ಅವಳ ತಂದೆ ಹಾಗೂ ಆಕೆಯ ಬಾಯ್‍ಫ್ರೆಂಡ್‍ಗೆ ವಾಟ್ಸಾಪ್ ಮಾಡಿದ್ದಾನೆ. ಇದನ್ನೂ ಓದಿ: ಮೊಬೈಲ್‍ಗಾಗಿ ಪೆಟ್ರೋಲ್ ಸುರಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ

    ಉತ್ತರ ಭಾರತದ 25 ವರ್ಷದ ಯುವತಿಯು ಆಗ್ನೇಯ ವಿಭಾಗ ಸೈಬರ್ ಕ್ರೈಂ ಪೊಲೀಸರಿಗೆ ರೌಡಿಶೀಟರ್ ನಂದೀಶ್‍ನ ವಿರುದ್ಧ ದೂರು ದಾಖಲಿಸಿದ್ದಾಳೆ. ಈ ವೇಳೆ ಯುವತಿಯ ದೂರಿನನ್ವಯ ಆರೋಪಿಯನ್ನು ಬಂಧಿಸಲಾಗಿದೆ. ರೌಡಿಶೀಟರ್ ನಂದೀಶ್ ಪ್ರಬಲ ರಾಜಕಾರಣಿಯ ಬಲಗೈ ಬಂಟನಾಗಿದ್ದಾನೆ.

  • ಸಿದ್ದರಾಮಯ್ಯ ಜನಾಭಿಪ್ರಾಯ ಕಳೆದುಕೊಂಡ ರಾಜಕಾರಣಿ: ಸುನಿಲ್ ಕುಮಾರ್

    ಸಿದ್ದರಾಮಯ್ಯ ಜನಾಭಿಪ್ರಾಯ ಕಳೆದುಕೊಂಡ ರಾಜಕಾರಣಿ: ಸುನಿಲ್ ಕುಮಾರ್

    ಉಡುಪಿ: ರಾಜಕಾರಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಜನಾಭಿಪ್ರಾಯ ಕಳೆದುಕೊಂಡಿದ್ದಾರೆ ಎಂದು ರಾಷ್ಟ್ರ ರಾಜಕಾರಣ ಬಗ್ಗೆ ಆಸಕ್ತಿ ತೋರದ ಸಿದ್ದುಗೆ ಇಂಧನ ಸಚಿವ ಸುನಿಲ್ ಕುಮಾರ್ ತಿರುಗೇಟು ನೀಡಿದ್ದಾರೆ.

    ರಾಷ್ಟ್ರ ರಾಜಕಾರಣಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಸ್ವಾಗತ ಮಾಡಿದ್ದಾರೆ. ದೆಹಲಿಗೆ ಕರೆಸಿಕೊಂಡು ಈ ಬಗ್ಗೆ ಅವರು ಚರ್ಚೆ ಮಾಡಿದ್ದಾರೆ. ಈ ಕುರಿತಂತೆ ಉಡುಪಿಯಲ್ಲಿ ಮಾತನಾಡಿದ ಸುನೀಲ್ ಕುಮಾರ್, ಇದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರವಾಗಿದೆ. ಸಿದ್ದರಾಮಯ್ಯ ಜನಾಭಿಪ್ರಾಯ ಕಳೆದುಕೊಂಡಿದ್ದಾರೆ. ಎಲ್ಲ ಉಪಚುನಾವಣೆ ಸೋತಿದ್ದಾರೆ. ಮೈಸೂರಿನಲ್ಲಿ ಸಿದ್ದರಾಮಯ್ಯಗೆ ಅಸ್ತಿತ್ವ ಇಲ್ಲ. ಪರಿಸ್ಥಿತಿ ಹೀಗಿರುವಾಗ ಸಿದ್ಧರಾಮಯ್ಯ ಯಾವ ರಾಜಕಾರಣ ಮಾಡಬೇಕೆಂದು ಅವರು ತೀರ್ಮಾನಿಸಬೇಕು ಎಂದು ಟಾಂಗ್ ಕೊಟ್ಟರು.ಇದನ್ನೂ ಓದಿ: ಪಿಡಿಒನಿಂದ ರಾಷ್ಟ್ರಪತಿವರೆಗೆ RSS ಕಾರ್ಯಕರ್ತರೇ ಇರೋದು- ಹೆಚ್‍ಡಿಕೆಗೆ ಸುನೀಲ್ ಕುಮಾರ್ ತಿರುಗೇಟು

    ಹಾನಗಲ್ ಮತ್ತು ಸಿಂದಗಿಯ ಉಪಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯ ಅಥವಾ ಯಾರೇ ನೇತೃತ್ವ ತೆಗೆದುಕೊಂಡರು ಅಡ್ಡಿ ಇಲ್ಲ. ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಎರಡು ಉಪ ಚುನಾವಣೆ ಗೆಲ್ಲುತ್ತೇವೆ ಎಂದಿದ್ದಾರೆ. ಇದನ್ನೂ ಓದಿ:RSS ಜಾತಿ, ಧರ್ಮ ಮೀರಿದ ಮಾತೃಹೃದಯಿ ಸಂಘಟನೆ: ಜಗ್ಗೇಶ್

  • ಸಿದ್ದರಾಮಯ್ಯ ಜಾತ್ಯಾತೀತ ನಾಯಕನಲ್ಲ, ಅವನೊಬ್ಬ ಜಾತಿ ರಾಜಕಾರಣಿ: ಶ್ರೀರಾಮುಲು

    ಸಿದ್ದರಾಮಯ್ಯ ಜಾತ್ಯಾತೀತ ನಾಯಕನಲ್ಲ, ಅವನೊಬ್ಬ ಜಾತಿ ರಾಜಕಾರಣಿ: ಶ್ರೀರಾಮುಲು

    ಬಳ್ಳಾರಿ: ಸಿದ್ದರಾಮಯ್ಯ ಜಾತ್ಯಾತೀತ ನಾಯಕನಲ್ಲ. ಅವನೊಬ್ಬ ಜಾತಿ ರಾಜಕಾರಣಿ ಎಂದು ಸಾರಿಗೆ ಸಚಿವ ಶ್ರೀರಾಮುಲು ಕಿಡಿಕಾರಿದ್ದಾರೆ.

    ಬಳ್ಳಾರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯ ಹ್ಯಾಟ್ರಿಕ್ ಗೆಲುವು ಕಾರ್ಯಕರ್ತರಿಗೆ ಸಲ್ಲಬೇಕು. ಬೆಳಗಾವಿಯಲ್ಲಿ ರಾಜಕೀಯ ಷಡ್ಯಂತ್ರ ನಡೆದರು ಸಹ ಅಭಿವೃದ್ಧಿ ಹಿನ್ನೆಲೆಯಲ್ಲಿ ಮತದಾರರು ಬಿಜೆಪಿಯ ಕೈ ಹಿಡಿದಿದ್ದಾರೆ. 25 ವರ್ಷಗಳ ಬಳಿಕ ಬೆಳಗಾವಿ ಪಾಲಿಕೆಯಲ್ಲಿ ಅಧಿಕಾರ ಸಿಕ್ಕಿದೆ ಎಂದಿದ್ದಾರೆ.

    ಇದೇ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಿದ್ದರಾಮಯ್ಯ ಜಾತ್ಯಾತೀತ ನಾಯಕನಲ್ಲ, ಅವನೊಬ್ಬ ಜಾತಿ ನಾಯಕನಾಗಿದ್ದಾನೆ. ಚುನಾವಣೆ ಬಂದಾಗ ಮಾತ್ರ ಸಿದ್ದರಾಮಯ್ಯರಿಗೆ ಜಾತಿ ನೆನಪಾಗುತ್ತದೆ. ಆದರೆ ಬಿಜೆಪಿ ಜಾತಿ ಹಿಡಿದು ರಾಜಕೀಯ ಮಾಡಿಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಜಾತಿ ಸಮೀಕ್ಷೆ ಕೊಟ್ಟಿಲ್ಲ. ಸಿದ್ದರಾಮಯ್ಯರಿಗೆ ಚುನಾವಣೆ ಬಂದರೆ ಜಾತಿ ಸಮೀಕ್ಷೆ, ಅಹಿಂದ ಕುರಿತು ನೆನಪಾಗುತ್ತದೆ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಾಲಿಕೆ ಚುನಾವಣೆ- ಒಂದೇ ಕುಟುಂಬದ ಮೂವರ ಗೆಲುವು

    2023ರ ಸಾರ್ವತ್ರಿಕ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್ ಹಗಲುಗನಸು ಕಾಣುತ್ತಿದೆ. ಅವರ ಎಲ್ಲರ ಕನಸು ಕನಸಾಗಿಯೇ ಉಳಿಯಲಿದೆ. ಮುಂದಿನ ಭಾರಿಯೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

  • ಕೋವಿಡ್ ಲಸಿಕೆ ಪಡೆದುಕೊಂಡ 6 ದಿನಕ್ಕೆ ನಗ್ಮಾಗೆ ಕೊರೊನಾ

    ಕೋವಿಡ್ ಲಸಿಕೆ ಪಡೆದುಕೊಂಡ 6 ದಿನಕ್ಕೆ ನಗ್ಮಾಗೆ ಕೊರೊನಾ

    ಮುಂಬೈ: ನಟಿ ಕಂ ರಾಜಕಾರಣಿ ನಗ್ಮಾ ಅವರಿಗೆ ಬುಧವಾರ ಕೊರೊನಾ ಪಾಸಿಟಿವ್ ಬಂದಿದ್ದು, ಸದ್ಯ ಅವರು ಹೋಂ ಕ್ವಾರಂಟೈನ್ ನಲ್ಲಿದ್ದಾರೆ.

    50 ವರ್ಷ ನಗ್ಮಾ ಅವರು ಟ್ವೀಟ್ ಮಾಡಿದ್ದು, ಕೆಲ ದಿನಗಳ ಹಿಂದೆ ಕೋವಿಡ್ 19 ಮೊದಲನೇ ಡೋಸ್ ಲಸಿಕೆ ತೆಗೆದುಕೊಂಡಿದ್ದೆ. ಇದೀಗ ಮತ್ತೆ ಕೊರೊನಾ ಟೆಸ್ನ್ ನಲ್ಲಿ ಪಾಸಿಟಿವ್ ಬಂದಿದೆ. ಹೀಗಾಗಿ ಸದ್ಯ ಮನೆಯಲ್ಲೇ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ಈ ಹಿನ್ನೆಲೆಯಲ್ಲಿ ದಯವಿಟ್ಟು ಎಲ್ಲಾರೂ ಜಾಗರೂಕರಾಗಿರಿ. ಅಲ್ಲದೆ ಈಗಾಗಲೇ ಮೊದಲೇ ಡೋಸ್ ಪಡೆದುಕೊಂಡವರು ಕೂಡ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ನಗ್ಮಾ ಅವರು ಏಪ್ರಿಲ್ 2ರಂದು ಮೊದಲನೇ ಲಸಿಕೆ ಹಾಕಿಸಿಕೊಂಡಿದ್ದರು. ಆ ಬಳಿಕ ಇದೀಗ ಮತ್ತೆ ಟೆಸ್ಟ್ ಮಾಡಿದಾಗ ಪಾಸಿಟಿವ್ ಇರುವುದು ಗೊತ್ತಾಗಿದ್ದು, ಸದ್ಯ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.

    ನಗ್ಮಾ ಅವರು ತೆಲುಗು, ತಮಿಳು, ಭೊಜ್ ಪುರಿ, ಮಲಯಾಳಂ, ಕನ್ನಡ ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿ ಮಿಂಚಿದ್ದಾರೆ.

  • ರೋಜಾ ಆಸ್ಪತ್ರೆಗೆ ದಾಖಲು

    ರೋಜಾ ಆಸ್ಪತ್ರೆಗೆ ದಾಖಲು

    ಚೆನ್ನೈ: ನಟಿ, ರಾಜಕಾರಣಿ ಆರ್.ಕೆ ರೋಜಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೀಗ ಐಸಿಯುನಿಂದ ಸಾಮಾನ್ಯ ವಾರ್ಡ್ ಗೆ ಸ್ಥಳಾಂತರಿಸಲಾಗಿದೆ.

    ವೈಎಸ್‍ಆರ್‍ಸಿಪಿ ಶಾಸಕಿ ಮತ್ತು ಎಪಿಐಐಸಿ ಮುಖ್ಯಸ್ಥೆ ರೋಜಾ ಶಸ್ತ್ರಚಿಕಿತ್ಸೆಗೆಂದು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ರೋಜಾ ಅವರ ಪತಿ ಸೆಲ್ವಮಣಿ ಆಡಿಯೋ ಸಂದೇಶದ ಮೂಲಕವಾಗಿ ತಿಳಿಸಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ವಾರ್ಡಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.

    ರೋಜಾ ಅವರ ಮೇಲೆ ವೈದ್ಯರು 2 ವಾರಗಳ ಕಾಲ ನಿಗಾ ಇಡಲಿದ್ದಾರೆ. ಕೊರೊನಾ ವೈರಸ್ ಸೋಂಕಿನ ಕಾರಣದಿಂದ ಕುಟುಂಬಸ್ಥರು ಸೇರಿದಂತೆ ರೋಜಾರ ಭೇಟಿಗೆ ಯಾರಿಗೂ ಅನುಮತಿ ಇಲ್ಲ ಎಂದು ಸೆಲ್ವಮಣಿ ಹೇಳಿದ್ದಾರೆ.

    ಕಳೆದ ವರ್ಷವೇ ರೋಜಾ ಅವರಿಗೆ ಆಪರೇಷನ್ ಆಗಬೇಕಿತ್ತು. ಆದರೆ ಕೊರೊನಾ ಕಾರಣದಿಂದಾಗಿ ಮುಂದೂಡಲಾಗಿತ್ತು. ಜನವರಿಯಲ್ಲಿ ಸ್ಥಳೀಯ ಚುನಾವಣೆ ಇರುವುದರಿಂದ ಚಿಕಿತ್ಸೆ ತೆಗೆದುಕೊಳ್ಳುವುದು ವಿಳಂಬವಾಯಿತು. ಹೀಗಾಗಿ ಅವರ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

  • ಸ್ಪೀಕರ್ ಸರಳತೆ ನೋಡಿ ಬೆನ್ನಿನ ಮೇಲೆ ಟ್ಯಾಟೂ ಹಾಕಿಸಿದ ಅಭಿಮಾನಿ

    ಸ್ಪೀಕರ್ ಸರಳತೆ ನೋಡಿ ಬೆನ್ನಿನ ಮೇಲೆ ಟ್ಯಾಟೂ ಹಾಕಿಸಿದ ಅಭಿಮಾನಿ

    ಕೋಲಾರ: ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಅಭಿಮಾನಿಯೋರ್ವ ಬೆನ್ನ ಮೇಲೆ ಅವರ ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಅಭಿಮಾನ ಮೆರೆದಿದ್ದಾನೆ.

    ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಯುವಕ ಶ್ರೀನಾಥ್ ತನ್ನ ಬೆನ್ನ ಮೇಲೆ ಸ್ಪೀಕರ್ ರಮೇಶ್ ಕುಮಾರ್ ಅವರ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಶ್ರೀನಾಥ್‍ಗೆ ರಮೇಶ್ ಕುಮಾರ್ ಅವರ ಟ್ಯಾಟೂ ಹಾಕಿಸಿಕೊಳ್ಳಲು ಅವರ ಆದರ್ಶ ನಡೆಯೇ ಕಾರಣವಂತೆ, ಅವರನ್ನು ಚಿಕ್ಕವಯಸ್ಸಿನಿಂದಲೂ ಬಹಳ ಆರಾಧಿಸುತ್ತೇನೆ. ದೊಡ್ಡ ದೊಡ್ಡ ಪದವಿಯಲ್ಲಿದ್ದರೂ ಜನರ ಜೊತೆ ಬೆರೆಯುವ ಅವರ ಸರಳತೆ ನೋಡಿ ನಾನು ಅವರ ಪಕ್ಕ ಅಭಿಮಾನಿಯಾಗಿಬಿಟ್ಟೆ ಎಂದು ಹೇಳಿದ್ದಾರೆ.

    ಮೊದಲಿನಿಂದಲೂ ಅವರನ್ನು ಆರಾಧಿಸುತ್ತಿದ್ದ ನನಗೆ ಅವರು ಸಿದ್ದರಾಮಯ್ಯ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ವೇಳೆ ಬಡವರಿಗಾಗಿ ಜಾರಿಗೆ ತಂದ ಆರೋಗ್ಯ ಯೋಜನೆಗಳು, ಬರಗಾಲದಿಂದ ತತ್ತರಿಸಿದ್ದ ಕೋಲಾರ ಜಿಲ್ಲೆಗೆ ಕೆ.ಸಿ.ವ್ಯಾಲಿ ನೀರು ತಂದಿದ್ದು ಇವೆಲ್ಲವೂ ನನಗೆ ಆದರ್ಶ ಎನ್ನಿಸಿ ಜೀವನ ಪರ್ಯಂತ ಅವರ ನೆನಪು ಇರುವಂತೆ ಮಾಡಲು ತನ್ನ ಬೆನ್ನು ಮೇಲೆ ಸುಮಾರು 50 ಸಾವಿರ ಖರ್ಚು ಮಾಡಿ ಟ್ಯಾಟೂ ಹಾಕಿಸಿಕೊಂಡಿದ್ದೇನೆ ಎಂದು ಶ್ರೀನಾಥ್ ಹೇಳಿದ್ದಾರೆ.

    ರಮೇಶ್‍ಕುಮಾರ್ ಒಬ್ಬ ಅಪರೂಪದ ಸಂವಿಧಾನವನ್ನು ಪರಿಪಾಲಿಸುವ ರಾಜಕಾರಣಿ. ಅವರು ಯಾವುದೇ ಒತ್ತಡಕ್ಕೆ ಒಳಗಾಗುವ ರಾಜಕಾರಣಿ ಅಲ್ಲ ಎನ್ನುತ್ತಾರೆ ಶ್ರೀನಾಥ್.