ಬೆಂಗಳೂರು: ಕೇವಲ 1 ಅಂಕದಿಂದ ಫಸ್ಟ್ ರ‍್ಯಾಂಕ್ ಕಳೆದುಕೊಂಡಿದ್ದ ಮಿಥುನ್ ಯುಪಿ ಸಿಎಂ ಆದಿತ್ಯನಾಥ್ ಅವರಂತೆ ರಾಜಕಾರಣಿಯಾಗಬೇಕು ಎಂಬ ವಿಶೇಷ ಆಸೆಯನ್ನು ಬಿಚ್ಚಿಟ್ಟಿದ್ದಾರೆ.
ಬನಶಂಕರಿಯ (Banashankari) ಹೋಲಿ ಚೈಲ್ಡ್ ಇಂಗ್ಲಿಷ್ ಕಾನ್ವೆಂಟ್ ಶಾಲೆಯ ಮಿಥುನ್ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ (SSLC exam) 624 ಅಂಕ ಗಳಿಸಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ವಿದ್ಯಾರ್ಥಿಯ ಆಸಕ್ತಿ ನೋಡಿ ಶಾಲೆಯ ಶಿಕ್ಷಕರೇ ಆಶ್ಚರ್ಯರಾಗಿದ್ದಾರೆ. ಇದನ್ನೂ ಓದಿ: ಚಾಮರಾಜನಗರ ಡಿಸಿ ಕಚೇರಿ ಸ್ಫೋಟಿಸುತ್ತೇವೆ – ಬೆದರಿಕೆ ಸಂದೇಶ, ಎಫ್‌ಐಆರ್ ದಾಖಲು
ನನಗೆ ರಾಜಕೀಯ ಕ್ಷೇತ್ರ ಅಂದರೆ ಇಷ್ಟ. ನಾನೊಬ್ಬ ರಾಜಕಾರಣಿ ಆಗಬೇಕು. ಉತ್ತರ ಪ್ರದೇಶದ (UttaraPradesh) ಸಿಎಂ ಯೋಗಿ ಆದಿತ್ಯನಾಥ್ (Yogi Adithyanath) ಅವರು ಅಂದ್ರೆ ತುಂಬಾ ಇಷ್ಟ. ಅವರ ಧೈರ್ಯ, ನಿರ್ಣಯಗಳು ತುಂಬಾ ಇಷ್ಟ ಎಂದು ರಾಜಕೀಯ ಆಸಕ್ತಿಯ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಹಂಚಿಕೊಂಡಿದ್ದಾರೆ.
ಚೆನ್ನೈ: 2026ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಬೇಕೆಂಬ ಗುರಿ ಹೊಂದಿರುವ ತಮಿಳಗ ವೆಟ್ರಿ ಕಳಗಂ (TVK) ವಿರುದ್ಧ ಡಿಎಂಕೆ ಹಾಗೂ ಎಐಡಿಎಂಕೆ ನಾಯಕರು (AIDMK Leaders) ಮುಗಿಬಿದ್ದಿದ್ದಾರೆ. ವಿಜಯ್ ನಾಯಕತ್ವದ ಟಿವಿಕೆ ಪಕ್ಷವು ಬಿಜೆಪಿಯ ʻಸಿʼಟೀಂ ಎಂದು ಡಿಎಂಕೆ ಕರೆದರೆ, ಎಐಡಿಎಂಕೆ ಹೊಸ ಬಾಟಲಿಯಲ್ಲಿ ಹಳೆಯ ವೈನ್ ಮಿಕ್ಸ್ ಮಾಡಿದಂತಿದೆ ಎಂದು ಟೀಕಿಸಿದೆ.
ತಮಿಳಿಗ ವೆಟ್ರಿಕಳಗಂ ಪಕ್ಷದ ತತ್ವ ಸಿದ್ಧಾಂತಗಳು ವಿವಿಧ ಪಕ್ಷಗಳ ಪ್ರಸ್ತುತ ರಾಜಕೀಯ ನಿಲುವುಗಳ ಕಾಕ್‌ಟೈಲ್ ಆಗಿದೆ ಎಂದು ಗುಡುಗಿರುವ ಎಐಎಡಿಎಂಕೆ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಟ ಕಮಲ್ ಹಾಸನ್ ಅವರ ಮಕ್ಕಳ ನೀಡಿ ಮೈಯಮ್ (MNM) ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: 2026ರ ಚುನಾವಣೆಯಲ್ಲಿ ಬಹುದೊಡ್ಡ ಪಕ್ಷವಾಗಿ ಗೆಲ್ತೀವಿ – ದಳಪತಿ ವಿಜಯ್ ʻವಿಕ್ಟರಿʼ ಮಾತು
ಭಾನುವಾರ ನಡೆದ ಪಕ್ಷದ ಮೊದಲ ರಾಜ್ಯಮಟ್ಟದ ಸಮಾವೇಶದಲ್ಲಿ ಮಾತನಾಡಿದ್ದ ವಿಜಯ್ (Thalapathy Vijay) ಅವರು, ಬಿಜೆಪಿ ಹಾಗೂ ಭ್ರಷ್ಟ ಡಿಎಂಕೆಯು ನಮ್ಮ ಸೈದ್ಧಾಂತಿಕ ಮತ್ತು ರಾಜಕೀಯ ವಿರೋಧಿಗಳು ಎಂದು ಘೋಷಿಸಿದ್ದರು. ಇದೇ ವೇಳೆ ಜಾತ್ಯತೀತತೆ ಮತ್ತು ‘ಸಾಮಾಜಿಕ ನ್ಯಾಯವು ಟಿವಿಕೆಯ ಸಿದ್ಧಾಂತಗಳು ಎಂದು ಪ್ರಕಟಿಸಿದರು. ದ್ರಾವಿಡವಾದ ಹಾಗೂ ತಮಿಳು ರಾಷ್ಟ್ರೀಯತೆಯನ್ನು ತಮಿಳುನಾಡಿನ ಎರಡು ಕಣ್ಣುಗಳು ಎಂದು ಬಣ್ಣಿಸಿದ್ದರು. ಟಿವಿಕೆಯ ಸಿದ್ಧಾಂತ ಮತ್ತು ನನ್ನ ನಾಯಕತ್ವ ಒಪ್ಪಿಕೊಳ್ಳುವ ರಾಜಕೀಯ ಪಕ್ಷಗಳೊಂದಿಗೆ ಅಧಿಕಾರ ಹಂಚಿಕೊಳ್ಳಲು ಸಿದ್ಧನಿದ್ದೇನೆ ಎಂದು ದಳಪತಿ ವಿಜಯ್ ಹೇಳಿದ್ದಾರೆ.
ನಟ ವಿಜಯ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ತಮಿಳುನಾಡು ಕಾನೂನು ಸಚಿವ ರಘುಪತಿ, ವಿಜಯ್ ಅವರ ತಮಿಳಿಗ ವೆಟ್ರಿ ಕಳಗಂ ಪಕ್ಷವು. ಎ ಟೀಂ, ಬಿ ಟೀಂ ಅಲ್ಲ, ಬಿಜೆಪಿಯ ಸಿ ಟೀಂ. ದ್ರಾವಿಡ ಮಾದರಿಯ ಆಡಳಿತವನ್ನು ಜನರ ಮನಸ್ಸಿನಿಂದ ತೆಗೆದುಹಾಕಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ತೇಜಸ್ವಿ ಸೂರ್ಯ ಈಗ ಐರನ್ ಮ್ಯಾನ್ – 70.3 ರೇಸ್‌ನಲ್ಲಿ ವಿಜೇತರಾದ ಪ್ರಥಮ ಜನಪ್ರತಿನಿಧಿ!
ಡಿಎಂಕೆ ನಾಯಕ ಇವಿಕೆಎಸ್ ಇಳಂಗೋವನ್ ಪ್ರತಿಕ್ರಿಯಿಸಿ, ನಮ್ಮ ಪಕ್ಷದ ನೀತಿಗಳನ್ನು ವಿಜಯ್ ಕಾಪಿ ಮಾಡಿ, ಹೊಸದಾಗಿ ಘೋಷಿಸಿದ್ದಾರೆ. ಅವರು (ವಿಜಯ್) ಏನು ಹೇಳಿದ್ದಾರೋ ಅದನ್ನು ನಾವು ಈಗಾಗಲೇ ಹೇಳಿದ್ದೇವೆ ಮತ್ತು ನಾವು ಅನುಸರಿಸುತ್ತಿದ್ದೇವೆ. ನಮ್ಮ ಪಕ್ಷವು (ಡಿಎಂಕೆ) ಜನರ ಸಮಸ್ಯೆಗಳಿಗಾಗಿ ನಿರಂತರವಾಗಿ ಹೋರಾಟ ನಡೆಸಿದೆ. ಆದರೆ, ವಿಜಯ್ ಅವರ ಪಕ್ಷವು ರಾಜಕೀಯಕ್ಕೆ ಪ್ರವೇಶಿಸಿದ ತಕ್ಷಣವೇ ಅಧಿಕಾರದಲ್ಲಿರಲು ಹಾತೊರೆಯುತ್ತಿದೆ. ಇದಲ್ಲದೇ, ಟಿವಿಕೆ ನಾಯಕರು ಡಿಎಂಕೆ ನಾಯಕರಂತೆ ಜೈಲಿಗೆ ಹೋಗಿ ಜನರಿಗಾಗಿ ಹೋರಾಡುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಎಐಡಿಎಂಕೆ ವಕ್ತಾರ ಕೋವೈ ಸತ್ಯನ್ ಮಾತನಾಡಿ, ಡಿಎಂಕೆ, ಟಿವಿಕೆ ಸೇರಿದಂತೆ ಇತರ ಪಕ್ಷಗಳ ನಡುವಿನ ವ್ಯತ್ಯಾಸವೆಂದರೆ ನಾವು ಅವರಿಗಿಂತ ಹೆಚ್ಚು ಬಲಿಷ್ಠರಾಗಿದ್ದೇವೆ. ಜನರಿಂದ, ಜನರಿಗಾಗಿ, ಜನರಿಗೋಸ್ಕರವೇ ಕೆಲಸ ಮಾಡುತ್ತೇವೆ. ಹೊಸದಾಗಿ ರಾಜಕೀಯಕ್ಕೆ ಬಂದಿರುವ ವಿಜಯ್ ಅವರಿಗೆ ಅಭಿನಂದನೆಗಳು ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಸರ್ಕಾರದ ಮುಖ್ಯಸ್ಥರ ಭೇಟಿಯಾದ್ರೆ ಡೀಲ್ ಎಂದರ್ಥವಲ್ಲ: ಮೋದಿ ಭೇಟಿ ಬಗ್ಗೆ ಮೌನ ಮುರಿದ ಸಿಜೆಐ
ಟಿವಿಕೆ ಪಕ್ಷದ ಸಿದ್ಧಾಂತವು ಇತರೆ ಪಕ್ಷಗಳ ಸಿದ್ಧಾಂತ ಮತ್ತು ಹೊಸ ಬಾಟಲಿಯಲ್ಲಿ ಹಳೆಯ ವೈನ್ ಮಿಕ್ಸ್ ಮಾಡಿದಂತಿದೆ. ತಮಿಳುನಾಡಿನ ಎಲ್ಲಾ ರಾಜಕೀಯ ಪಕ್ಷಗಳಿಂದ ತೆಗೆದುಕೊಂಡ ಕಾನ್ಸೆಲ್ ಸಿದ್ಧಾಂತವಾಗಿದೆ. ವಿಜಯ್ ಅವರು ಜಾತಿಗಣತಿ ಸೇರಿದಂತೆ ಹಲವು ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಇದನ್ನು ಕಾರ್ಯರೂಪಕ್ಕೆ ತರಲು ನಾವು ಅವರಿಗೆ ಸಮಯ ನೀಡುತ್ತೇವೆ ಎಂದು ಸತ್ಯನ್ ತಿಳಿಸಿದ್ದಾರೆ.
– ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ?
ಚೆನ್ನೈ: ತಮಿಳುನಾಡಿನ ರಾಜಕಾರಣದಲ್ಲಿ ನಟ ಇಳಯ ದಳಪತಿ ವಿಜಯ್ (Thalapathy Vijay) ಸಂಚಲನ ಸೃಷ್ಟಿಸಿದ್ದಾರೆ. ವಿಲ್ಲುಪುರಂನ ವಿಕ್ರವಾಂಡಿಯಲ್ಲಿ `ತಮಿಳಿಗ ವೆಟ್ರಿ ಕಾಳಗಂʼ (Tamizhaga Vetri Kazhagam) ಪಕ್ಷದ ಮೊದಲ ಬೃಹತ್ ಸಮಾವೇಶ ನಡೆಯಿತು. ಮೆಗಾ ರ‍್ಯಾಲಿಯಲ್ಲಿ ಕಣ್ಣು ಹಾಯಿಸಿದ ದೂರವೂ ಜನಸಾಗರವೇ ಸೇರಿತ್ತು. `ನಮ್ಮ ನಾಡು’ ಹೆಸರಿನಲ್ಲಿ ನಡೆಸಿದ ಮೊದಲ ರಾಜಕೀಯ ಭಾಷಣದಲ್ಲೇ ವಿಜಯ್ ಅಬ್ಬರದ ಭಾಷಣ ಮಾಡಿದರು.
ಇನ್ಮೇಲೆ ನಾನು..ನೀನು.. ಅವರು.. ಇವರು.. ಅನ್ನೋದಿಲ್ಲ. ಇನ್ನು ಮಂದೆ ತಮಿಳುನಾಡಿನಲ್ಲಿ `ನಾವುʼ ಆಗಿ ಹೋರಾಡೋಣ. ಕೇವಲ ವಿಜ್ಞಾನ ತಂತ್ರಜ್ಞಾನ ಬದಲಾದರೆ ಸಾಕಾ..? ಯಾಕೆ ರಾಜಕೀಯ.. ರಾಜಕಾರಣಿಗಳು ಬದಲಾಗಬಾರದಾ? ಇನ್ಮೇಲೆ ರಾಜಕಿಯವನ್ನು ಬದಲಾಯಿಸೋಣ.. ಅಭಿವೃದ್ಧಿ ರಾಜಕಾರಣ ಮಾಡೋಣ. ಪೆರಿಯಾರ್, ಕಾಮರಾಜ್ ಅವರ ಮಾರ್ಗದರ್ಶನ, ಮಹಾನ್ ನಾಯಕ ಅಂಬೇಡ್ಕರ್ ಸಂವಿಧಾನದ ಮಾರ್ಗದಲ್ಲಿ ನಡೆಯೋಣ ಅಂತ ಸಮಾಜಸುಧಾರಕಾರು ಹಾಗೂ ತಮಿಳುನಾಡಿನ ಹೋರಾಟಗಾರರನ್ನು ನೆನೆದು ವಿಜಯ್ ಭಾಷಣ ಮಾಡಿದರು.
ಭ್ರಷ್ಟಾಚಾರದ ವಿರುದ್ಧ ನಮ್ಮದು ಶೂನ್ಯ ಸಹಿಷ್ಣುತೆ. ನಾನು ಪಕ್ಕಾ ಪ್ರಾಕ್ಟಿಕಲ್, ಈಜೋಕೆ ಬರದವನು ಮೀನು ಹಿಡೀತಾನಾ ಅಂತ ಟೀಕಿಸ್ತಿದ್ದಾರೆ. ನಾವು ಮೀನು ಹಿಡಿದೇ ತೋರಿಸೋಣ. ಆಲ್ಟರ್‌ನೇಟಿವ್ ಪಾಲಿಟಿಕ್ಸ್ ಮಾತಿಲ್ಲ. ನಾನು ಎಕ್ಟ್ರಾ ಲಗೇಜ್ ಆಗಲು ಇಲ್ಲಿ ಬಂದಿಲ್ಲ. ನಮ್ಮ ನಾಡಿಗಾಗಿ ಎಕ್ಟ್ರಾ ಮಾಡಲು ಬಂದಿದ್ದೇನೆ. ಇಲ್ಲಿ ನೀವೆಲ್ಲಾ ಸೇರಿರೋದು ಹಣದಿಂದ ಅಲ್ಲ. ಒಂದು ಒಳ್ಳೇ ಕಾರಣಕ್ಕಾಗಿ ಸ್ವಯಂಪ್ರೇರಿತವಾಗಿ ಸೇರಿದ್ದೀರಿ. ನಾವೆಲ್ಲಾ ಒಳ್ಳೆಯದನ್ನು ಮಾಡಲು ಇರುವ ಸೈನಿಕರಿದ್ದಂತೆ. ಸೋಷಿಯಲ್ ಮೀಡಿಯಾದ ಟ್ರೋಲ್‌ಗೆಲ್ಲಾ ಅಂಜಲ್ಲ. ಅಂದ್ರು. 2026ರ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರದಲ್ಲಿ ನಿಲ್ತೇವೆ, ಬಹುದೊಡ್ಡ ಪಕ್ಷವಾಗಿ ಗೆಲ್ತೇವೆ ಅಂತ ವಿಜಯ ಹೇಳಿದ್ದಾರೆ. ಇದನ್ನೂ ಓದಿ: ವಕ್ಫ್ ಆಸ್ತಿ ವಿವಾದ | 1964-1974ರ ದಾಖಲೆ ಪರಿಶೀಲಿಸಿ ಕ್ರಮವಹಿಸಲು ಟಾಸ್ಕ್ ಫೋರ್ಸ್ ರಚನೆ
ಹಾಸನ: ಹೊಗಳಿಕೆಯಿಂದ ಎಲ್ಲಾ ರಾಜಯಕೀಯ ಪಕ್ಷಗಳು (Political Parties) ಹಾಳಾಗಿ ಹೋಗಿವೆ. ಪಕ್ಷ ರಾಜಕಾರಣ ಹಾಳಾಗಿ, ವ್ಯಕ್ತಿ ರಾಜಕಾರಣ ಮೆರೆಯುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ (H Vishwanath) ಬೇಸರ ಹೊರಹಾಕಿದರು.
ಹಾಸನ (Hassan) ಜಿಲ್ಲೆಯ ಹೊಳೆನರಸೀಪುರ ತಾಲೂಕಿನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಹೊಗಳಿಕೆಯಿಂದ ಎಲ್ಲಾ ರಾಜಕೀಯ ಪಕ್ಷಗಳು ಹಾಳಾಗಿ ಹೋಗಿವೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ವಾದ, ವಿವಾದ, ಪ್ರತಿವಾದ ಟೀಕೆ ಸಹಜ. ಅದು ಇಲ್ಲದೇ ಇದ್ದರೇ ಚಮಚಾಗಿರಿ ಮಾಡಿಕೊಂಡು ಕೂರಬೇಕಾಗುತ್ತದೆ. ಯಾರನ್ನೋ ಮೆಚ್ಚಿಸಲು ನೀನು ಸತ್ಯವಂತ ಎಂದು ಹೇಳೋದು ಎಷ್ಟು ಸರಿ? ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮುಂದಿನ ಶುಕ್ರವಾರದಿಂದ ಚಾಮುಂಡಿ ಬೆಟ್ಟದಲ್ಲಿ ಆಷಾಢ ಪೂಜೆ ಆರಂಭ – ವಿಶೇಷ ಪಾಸ್ ರದ್ದು
ಭ್ರಷ್ಟನನ್ನ ಭ್ರಷ್ಟ ಎಂದೇ ಹೇಳಬೇಕು. ಹಾಗೆ ಹೇಳಿದರೆ ವಿಶ್ವನಾಥ್ ಎಲ್ಲರ ಬಗ್ಗೆನು ಮಾತಾಡ್ತಾರೆ ಅಂತಾರೆ. ಜನತಂತ್ರ ವ್ಯವಸ್ಥೆಯಲ್ಲಿ ಟೀಕೆ ಟಿಪ್ಪಣಿ ಇಲ್ಲದೇ ಬರೀ ಹೊಗಳಿಕೆ ಇದ್ದರೆ ಹೇಗೆ? ಎಲ್ಲಾ ರಾಜಕೀಯ ಪಕ್ಷಗಳು ಹೊಗಳಿಕೆಯಿಂದಲೇ ಹಾಳಾಗಿ ಹೋಗಿವೆ. ಒಂದು ಪಕ್ಷದ ಕಾರ್ಯಕರ್ತರು ನಾಯಕ ಏನೇ ತಪ್ಪು ಮಾಡಿದರೂ ಅವನನ್ನು ಹೊಗಳುತ್ತಾರೆ. ನೀನು ತಪ್ಪು ಮಾಡಿದ್ದೀಯ ಅಂತ ಹೇಳುವುದಿಲ್ಲ. ಹಾಗಾಗಿ ಇವತ್ತು ಪಕ್ಷ ರಾಜಕಾರಣ ಹಾಳಾಗಿದೆ ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಎರಡನೇ ವಿಮಾನ ನಿಲ್ದಾಣದ ಬಗ್ಗೆ ವಿಸ್ತೃತ ಚರ್ಚೆ ಬಳಿಕ ಸೂಕ್ತ ತೀರ್ಮಾನ: ಎಂ.ಬಿ.ಪಾಟೀಲ್
ಇಂದು ಹೊಗಳುವಿಕೆಯಿಂದ ಪಕ್ಷ ರಾಜಕಾರಣ ಹಾಳಾಗಿ, ವ್ಯಕ್ತಿ ರಾಜಕಾರಣ ಮೆರೆಯುತ್ತಿದೆ. ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಹೀಗೆ ವ್ಯಕ್ಯಿ ರಾಜಕಾರಣ ಶುರುವಾಗಿದೆ. ದೇಶದಲ್ಲೇ ಈಗ ಪಕ್ಷ ರಾಜಕಾರಣ ಇಲ್ಲದಂತಾಗಿದೆ. ಎಲ್ಲರೂ ಮಾಡುವ ತಪ್ಪನ್ನೇ ನಾನು ಮಾಡಿದ್ರೆ ವಿಶೇಷ ಹೇಗಾಗ್ತೀನಿ? ಹಾಗಾಗಿ ನಾನು ಆ ತಪ್ಪು ನಾನು ಮಾಡೋಕೆ ಹೋಗಲ್ಲ. ಮತ್ತೊಬ್ಬನನ್ನು ಟೀಕೆ ಮಾಡಬೇಕಾದ್ರೆ ಮೊದಲು ನಾನು ಸರಿ ಇರಬೇಕು. ಇದನ್ನ ಎಲ್ಲರೂ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಹೊಸ ಕ್ರಿಮಿನಲ್ ಕಾನೂನಿನಡಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಕೇಸ್ ದಾಖಲು
ತಮ್ಮ ಸಿನಿಮಾದಲ್ಲಿ ನಟಿಸಿದ್ದ ನಟಿಯೊಬ್ಬರಿಗೆ ರಾಜಕಾರಣಿಯೊಬ್ಬರು ಕೋಟ್ಯಂತರ ಮೌಲ್ಯದ ಫ್ಲ್ಯಾಟ್ ಕೊಡಿಸಿ, ದುಬೈನಲ್ಲಿ ಇಟ್ಟಿದ್ದಾರೆ ಎನ್ನುವ ವಿಚಾರ ತಮಿಳು ಚಿತ್ರರಂಗದಲ್ಲಿ ಭಾರೀ ಸದ್ದು ಮಾಡಿತ್ತು. ನಟಿ ನಿವೇತಾ ಪೇತುರಾಜ್, ಆ ರಾಜಕಾರಣಿಯಿಂದ (Politician) ಸಾಕಷ್ಟು ದುಬಾರಿ ಗಿಫ್ಟ್ ಗಳನ್ನು ಪಡೆದುಕೊಂಡಿದ್ದಾರೆ ಎಂದೂ ಹೇಳಲಾಗಿತ್ತು.
ಸೋಷಿಯಲ್ ಮೀಡಿಯಾದಲ್ಲಿ ಈ ಸುದ್ದಿ ಸಾಕಷ್ಟು ಹರಿದಾಡಿದ್ದರಿಂದ ನಿವೇತಾ ಪೇತುರಾಜ್ (Nivetha Pethuraj) ಗರಂ ಆಗಿದ್ದಾರೆ. ಈ ಸುದ್ದಿಯನ್ನು ಹರಡುತ್ತಿರುವವರಿಗೆ ವಾರ್ನ್ ಕೂಡ ನೀಡಿದ್ದಾರೆ. ನಾನು 16ನೇ ವಯಸ್ಸಿನಲ್ಲೇ ದುಡಿಯಲು ಪ್ರಾರಂಭಿಸಿದವಳು. ಅತ್ಯಂತ ಸುಂಸ್ಕೃತ ಮನೆತನದಿಂದ ಬಂದವಳು. ದುಡ್ಡು ಮಾಡಲು ಅಡ್ಡ ದಾರಿ ಹಿಡಿಯುವವಳು ಅಲ್ಲ. ಈ ಸುದ್ದಿಯನ್ನು ಹಬ್ಬಿಸುವಾಗ ಎಚ್ಚರವಿರಲಿ ಎಂದಿದ್ದಾರೆ ನಿವೇತಾ.
ತಮ್ಮ ಕುಟುಂಬ ಹತ್ತಾರು ವರ್ಷಗಳಿಂದ ದುಬೈನಲ್ಲಿ (Dubai) ನೆಲೆಸಿದೆ. ನಾನೂ ಕೂಡ ಸಂಪಾದನೆ ಮಾಡಿಕೊಂಡು ಬಂದಿದ್ದೇನೆ. ಅದಕ್ಕಾಗಿ ಈವರೆಗೂ ಯಾವುದೇ ಅಡ್ಡದಾರಿ ತುಳಿದಿಲ್ಲ. ಅದರ ಅವಶ್ಯಕತೆಯೂ ತಮಗಿಲ್ಲ. ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಹಾಗಾಗಿ ಇಂತಹ ವಿಷಯಗಳು ಬಂದಾಗ ನೋವಾಗತ್ತೆ ಎನ್ನುವುದು ನಿವೇತಾ ಮಾತು.
ತಮಗೆ ಯಾವುದೇ ರಾಜಕಾರಣಿಯ ಜೊತೆ ನಂಟಿಲ್ಲ. ಅವರೊಂದಿಗೆ ಕೆಲಸ ಮಾಡಿದ್ದೇನೆ. ಅದು ಆಯಾ ಸಿನಿಮಾಗೆ ಮಾತ್ರ ಸಿಮೀತ. ಅದರಾಚೆ ಯಾವ ಸ್ನೇಹವೂ ಇಲ್ಲ ಎನ್ನುವುದನ್ನು ಅವರು ಸ್ಪಷ್ಟ ಪಡಿಸಿದ್ದಾರೆ.
ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ರಾಜಕಾರಣಕ್ಕೆ ಬರುವುದು ಪಕ್ಕಾ ಆದಂತೆ ಕಾಣುತ್ತಿದೆ. ಅಭಿಮಾನಿಗಳು ಮತ್ತು ಆಪ್ತರ ಜೊತೆ ವಿಜಯ್ ನಿರಂತರ ಮೀಟಿಂಗ್ ಮಾಡುತ್ತಿದ್ದಾರೆ ಎನ್ನುವುದು ಸಿಕ್ಕಿರುವ ವರ್ತಮಾನ. ಈ ನಡುವೆ ವಿಜಯ್ ರಾಜಕಾರಣಕ್ಕೆ ಬಂದರೆ, ಅವರನ್ನು ಬೆಂಬಲಿಸುವುದಾಗಿ ಅಜಿತ್ ಫ್ಯಾನ್ಸ್ ಹೇಳಿಕೊಂಡಿದ್ದಾರೆ. ಹಾಗಾಗಿ ವಿಜಯ್ ಎಂಟ್ರಿ ಬಹುತೇಕ ಖಚಿತ ಎಂದೇ ಹೇಳಲಾಗುತ್ತಿದೆ.
ತಮಿಳುನಾಡಿನ (Tamil Nadu) ರಾಜಕಾರಣದಲ್ಲಿ ಬಿರುಗಾಳಿ, ಸುನಾಮಿ ಏಕಕಾಲಕ್ಕೆ ಎದ್ದು ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿವೆ. ಒಂದು ಕಡೆ ಬಿಜೆಪಿಯು ಮಾಜಿ ಐಪಿಎಸ್ ಆಫೀಸರ್ ಅಣ್ಣಾಮಲೈ ನೇತೃತ್ವದಲ್ಲಿ ಈಗಿನಿಂದಲೇ ಚುನಾವಣೆಗೆ ಸಿದ್ಧತೆ ನಡೆಸಿದ್ದರೆ, ಮತ್ತೊಂದು ಕಡೆ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ನಟ ದಳಪತಿ ವಿಜಯ್ (Dalpati Vijay) ಕೂಡ ಈ ಬಾರಿ ಚುನಾವಣೆ ಅಖಾಡಕ್ಕೆ ಇಳಿಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಚುನಾವಣೆಯನ್ನೇ ಗುರಿಯಾಗಿರಿಸಿಕೊಂಡು ವಿಜಯ್, ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ದಳಪತಿ ವಿಜಯ್ ರಾಜಕಾರಣಕ್ಕೆ (Politics) ಬರುತ್ತಾರೆ ಎನ್ನುವ ಸುದ್ದಿ ಹೊಸದೇನೂ ಅಲ್ಲ. ಈಗಾಗಲೇ ಹಲವಾರು ಬಾರಿ ಅವರ ಹೆಸರು ತೇಲಿ ಬಂದಿದೆ. ವಿಜಯ್ ಅವರ ತಂದೆ ರಾಜಕಾರಣಿಯೂ ಆಗಿರುವುದರಿಂದ ಪದೇ ಪದೇ ವಿಜಯ್ ಹೆಸರು ಚುನಾವಣಾ ಕಣದಲ್ಲಿ ಕೇಳಿ ಬಂದಿದೆ. ಪ್ರತಿ ಸಲವೂ ಅದು ಠುಸ್ ಪಟಾಕಿ ಆಗಿದೆ. ಆದರೆ, ಈ ಬಾರಿ ಅವರು ಕಣಕ್ಕೆ ಇಳಿಯೋದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಅಮೆರಿಕಾದಲ್ಲಿ ಅವಳಿ ಮಕ್ಕಳಿಗೆ ಕೇಶ ಮುಂಡನ ಮಾಡಿಸಿದ ಪ್ರೀತಿ ಜಿಂಟಾ
ಸೋಷಿಯಲ್ ಮೀಡಿಯಾಗಳಿಂದ ದೂರವಿದ್ದ ವಿಜಯ್, ಇದೀಗ ಎಲ್ಲ ಸೋಷಿಯಲ್ ಮೀಡಿಯಾ ವೇದಿಕೆಗೆ ಬಂದಿದ್ದಾರೆ. ನಿರಂತರವಾಗಿ ಅಭಿಮಾನಿಗಳ ಜೊತೆ ಸಂವಹನ ಮಾಡುತ್ತಿದ್ದಾರೆ. ಅಲ್ಲದೇ, ಮೊನ್ನೆಯಷ್ಟೇ ತಮಿಳುನಾಡಿನಾದ್ಯಂತ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಟಾಪ್ ಬಂದ ಮಕ್ಕಳಿಗೆ ಬಹುಮಾನ ನೀಡಿದ್ದಾರೆ. ಅದು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಪರಿಗಣನೇ ತೆಗೆದುಕೊಳ್ಳದೇ ಮತಕ್ಷೇತ್ರವನ್ನು ಗುರಿಯಾಗಿರಿಸಿಕೊಂಡು ಬಹುಮಾನ ನೀಡಿದ್ದಾರೆ.
ವಿಜಯ್ ಮಕ್ಕಳ್ ಇಯಕ್ಕಮ್ (Vijay Makkal Iyakkam) ಎನ್ನುವ ಸಂಸ್ಥೆಯ ಮೂಲಕ ವಿಜಯ್ ಈ ಕೆಲಸಗಳನ್ನು ಮಾಡುತ್ತಿದ್ದಾರೆ. ಒಟ್ಟು 235 ವಿಧಾನಸಭಾ ಕ್ಷೇತ್ರಗಳ ಮಕ್ಕಳಿಗೆ ಬಹುಮಾನ ನೀಡಿದ್ದು, ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಮಕ್ಕಳಿಗೆ ನಗದು ಬಹುಮಾನ ಮತ್ತು ಸನ್ಮಾನವನ್ನು ಹಮ್ಮಿಕೊಂಡಿದ್ದರು. ಹೀಗಾಗಿ ಈ ಬಾರಿ ಅಷ್ಟೂ ಕ್ಷೇತ್ರಗಳಲ್ಲೂ ವಿಜಯ್ ಅವರ ಪಕ್ಷ ಸ್ಪರ್ಧಿಸಲಿದೆ ಎಂದು ಹೇಳಲಾಗುತ್ತಿದೆ.
ಕಿರುತೆರೆಯ ಖ್ಯಾತ ನಟಿ, ನಿರೂಪಕಿ ಸ್ನೇಹಲ್ ರೈ (Snehal Rai) ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಈವರೆಗೂ ಮದುವೆಯ (Marriage) ಬಗ್ಗೆ ಮಾತನಾಡದೇ ಇರುವ ಸ್ನೇಹಲ್, ಮೊನ್ನೆಯಷ್ಟೇ ಅದರ ಬಗ್ಗೆ ಕುರುಹು ನೀಡಿದ್ದರು. ಇದೀಗ ಹತ್ತು ವರ್ಷಗಳ ಹಿಂದೆಯೇ ತಾವು ಮದುವೆ ಆಗಿರುವುದಾಗಿ ಹೇಳಿಕೊಂಡಿದ್ದಾರೆ.
ತಮಗಿಂತ ವಯಸ್ಸಿನಲ್ಲಿ 21 ವರ್ಷ ಹಿರಿಯರಾಗಿರುವ ರಾಜಕಾರಣಿಯನ್ನು (Politician) ಹತ್ತು ವರ್ಷಗಳ ಹಿಂದೆಯೇ ತಾವು ಮದುವೆ ಆಗಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಅವರು ಬರೆದುಕೊಂಡಿದ್ದಾರೆ. ಅದಕ್ಕೂ ಮೊದಲು ಅನುಮಾನ ಮೂಡಿಸುವಂತಹ ಬರಹವನ್ನು ಅವರು ಹಂಚಿಕೊಂಡಿದ್ದರು. ಆ ಮೂಲಕ ಮದುವೆಯ ವಿಚಾರವನ್ನು ಹೊರ ಹಾಕಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ಸ್ನೇಹಲ್, ‘ವಿವಾಹಿತ ಮಹಿಳೆಯರಿಗಾಗಿ ನಡೆಯುವ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವೆ’ ಎಂದು ಅವರು ಬರೆದುಕೊಂಡಿದ್ದರು. ಆಗ ಅಭಿಮಾನಿಗಳು, ‘ನಿಮಗೆ ಮದುವೆಯೇ ಆಗಿಲ್ಲ, ಅದು ಹೇಗೆ ಸಾಧ್ಯ?’ ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಉತ್ತರವಾಗಿ ಪತಿಯೊಂದಿಗಿನ ಫೋಟೋವನ್ನೂ ಅವರು ಹಂಚಿಕೊಂಡಿದ್ದರು. ಇದನ್ನೂ ಓದಿ:ಚಡ್ಡಿ ಧರಿಸಿ ದೇವಸ್ಥಾನಕ್ಕೆ ಬಂದ ಹುಡುಗಿ: ನೀತಿ ಪಾಠ ಮಾಡಿದ ಕಂಗನಾ
ಹತ್ತು ವರ್ಷಗಳ ಹಿಂದೆ ಮಧ್ವೇಂದ್ರ ಕುಮಾರ್ ರೈ (Madhvendra Kumar Rai) ಎನ್ನುವ ರಾಜಕಾರಣಿಯ ಜೊತೆ ಮದುವೆ ಆಗಿರುವುದಾಗಿ ಸ್ನೇಹಲ್ ರೈ ಸ್ಪಷ್ಟಪಡಿಸಿದ್ದಾರೆ. ಕಾರ್ಯಕ್ರವೊಂದರಲ್ಲಿ ತಮ್ಮಿಬ್ಬರ ಭೇಟಿ ಆಯಿತು ಎಂದು, ನಂತರ ಕುಟುಂಬದ ಸಮ್ಮತಿಯೊಂದಿಗೆ ಮದುವೆ ಆಗಿರುವುದಾಗಿಯೂ ಅವರು ಹೇಳಿಕೊಂಡಿದ್ದಾರೆ. ಅಲ್ಲದೇ, ಪತಿ ಮತ್ತು ತಮ್ಮ ನಡುವಿನ ವಯಸ್ಸಿನ ಅಂತರವನ್ನೂ ಅವರು ಹೇಳಿದ್ದಾರೆ.
ಜನ್ಮೋ ಕಾ ಬಂಧನ್, ಪರ್ಫೆಕ್ಟ್ ಪತಿ ಸೇರಿದಂತೆ ಹಲವು ಶೋಗಳಲ್ಲಿ ಭಾಗಿಯಾಗಿರುವ ಸ್ನೇಹಲ್, ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅಲ್ಲದೇ, ಅವರೇ ಇವೆಂಟ್ ಮ್ಯಾನೇಜ್ ಮೆಂಟ್ ಕಂಪೆನಿಯನ್ನೂ ನಡೆಸುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಟಿಯರ ಕಾಸ್ಟ್ಯೂಮ್ (Costume) ಬಗ್ಗೆ ರಾಜಕಾರಣಿಗಳು ವಿಪರೀತವಾಗಿ ಮಾತನಾಡುತ್ತಿದ್ದಾರೆ. ಅದರಲ್ಲೂ ಪಠಾಣ್ (Pathan) ಸಿನಿಮಾದಲ್ಲಿ ದೀಪಿಕಾ ಪಡುಕೋಣೆ (Deepika Padukone) ಹಾಕಿರುವ ಬಟ್ಟೆಯ ಬಗ್ಗೆ ವಾರಗಟ್ಟಲೆ ರಾಜಕಾರಣಿಗಳು (Politician) ಮಾತನಾಡಿದ್ದಾರೆ. ಆಕೆ ಹೆಣ್ಣು ಅನ್ನುವುದನ್ನೂ ಮರೆತು ಬಾಯಿಗೆ ಬಂದಂತೆ ಕಾಮೆಂಟ್ ಮಾಡಿದರು. ಈ ರೀತಿಯ ಮನಸ್ಥಿತಿಯನ್ನು ರಾಜಕಾರಣಿಗಳು ಬಿಡಬೇಕು ಎಂದು ಬಾಲಿವುಡ್ ನಟಿ ಸ್ವರಾ ಭಾಸ್ಕರ್ (Swara Bhaskar) ಹೇಳಿಕೆ ನೀಡಿದ್ದಾರೆ.
ರಾಜಕಾರಣಿಗಳಿಗೆ ಈ ರೀತಿ ಟಾಂಗ್ ಕೊಡುವ ಮೂಲಕ ಪರೋಕ್ಷವಾಗಿ ಪಠಾಣ್ ಸಿನಿಮಾಗೆ ಬೆಂಬಲ ವ್ಯಕ್ತ ಪಡಿಸಿದ್ದಾರೆ ಸ್ವರಾ. ಅವರವರ ಕೆಲಸ ಅವರು ಮಾಡಿದರೆ ಯಾವುದೇ ವಿವಾದ ಆಗುವುದಿಲ್ಲ. ಒಬ್ಬರ ವೃತ್ತಿಗೆ ಮತ್ತೊಬ್ಬರು ಮೂಗು ತೂರಿಸುವುದು ಬೇಡ ಎಂದು ಪಠಾಣ್ ಸಿನಿಮಾದ ಹಾಡು ವಿರೋಧಿಸಿದ್ದ ಅನೇಕ ರಾಜಕಾರಣಿಗಳಿಗೆ ಚಳಿ ಬಿಡಿಸಿದ್ದಾರೆ ಸ್ವರಾ ಭಾಸ್ಕರ್. ಇದನ್ನೂ ಓದಿ: ಗೆಳೆಯ ವಸಿಷ್ಠ ಸಿಂಹಗೆ ವಿಭಿನ್ನವಾಗಿ ವಿಶ್ ಮಾಡಿದ ಡಾಲಿ ಧನಂಜಯ್
ಪಠಾಣ್ ಸಿನಿಮಾದ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಧರಿಸಿದ್ದರ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಅದರಲ್ಲೂ ಕೇಸರಿ ಬಣ್ಣಕ್ಕೆ ಅವಮಾನಿಸಲಾಗಿದೆ ಎಂದು ಹೋರಾಟ ಕೂಡ ಮಾಡಲಾಗಿತ್ತು. ಈ ವಿವಾದ ದೊಡ್ಡದಾಗುತ್ತಿದ್ದಂತೆಯೇ ಸೆನ್ಸಾರ್ ಮಂಡಳಿ ಕೂಡ ಅಶ್ಲೀಲ ಅನಿಸುವಂತಹ ಚಿತ್ರಿಕೆಗಳಿಗೆ ಕತ್ತರಿ ಹಾಕುವಂತೆ ಹೇಳಲಾಗಿತ್ತು. ಇನ್ನೆರಡು ವಾರದಲ್ಲಿ ಸಿನಿಮಾ ರಿಲೀಸ್ ಆಗುತ್ತಿದ್ದರೂ ವಿವಾದ ಮಾತ್ರ ಇನ್ನೂ ತಣ್ಣಗಾಗಿಲ್ಲ. ಇನ್ನು ಬಾಯ್ಕಾಟ್ ರೀತಿಯ ಮಾತುಗಳು ಕೇಳುತ್ತಲೇ ಇವೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಮೂವತ್ತಕ್ಕೂ ಹೆಚ್ಚು ಕೇಸ್‍ಗಳಲ್ಲಿ ಭಾಗಿಯಾಗಿ ರೌಡಿ ಶೀಟರ್ (Rowdy Sheeter) ಆಗಿರುವ ಸೈಲೆಂಟ್ ಸುನೀಲ (Silent Sunila) ರಾಜಕಾರಣಿಗಳ ಮಧ್ಯೆ ದರ್ಬಾರ್ ನಡೆಸುತ್ತಿದ್ದರೆ, ಇತ್ತ ಪೊಲೀಸರು (Police) ಮಾತ್ರ ಕಣ್ಮುಂದೆ ರೌಡಿ ಇದ್ದರು ಸೈಲೆಂಟ್ ಆಗಿದ್ದಾರೆ. ಇದು ಬಾರಿ ಅನುಮಾನಕ್ಕೆ ಕಾರಣವಾಗಿದೆ.
ಕೆಲದಿನಗಳ ಹಿಂದೆ ಬೆಂಗಳೂರಿನ 80ಕ್ಕೂ ಹೆಚ್ಚು ರೌಡಿಶೀಟರ್‌ಗಳ ಮನೆ ಮೇಲೆ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ 23 ಪುಡಿರೌಡಿಗಳನ್ನು ವಶಕ್ಕೆ ಪಡೆದು ವಾರ್ನ್ ಮಾಡಿದ್ದರು. ಸೈಲೆಂಟ್ ಸುನೀಲ, ವಿಲ್ಸನ್ ಗಾರ್ಡನ್ ನಾಗ, ಸೈಕಲ್ ರವಿ, ಒಂಟೆ ರೋಹಿತ, ಕಾಡುಬೀಸನಹಳ್ಳಿ ರೋಹಿತ, ಕಾಡಬೀಸನಹಳ್ಳಿ ಲೋಕಿ ದಾಳಿ ವೇಳೆ ಪರಾರಿಯಾಗಿದ್ದರು ಎಂದು ಸಿಸಿಬಿ ಪೊಲೀಸರು ಹೇಳಿದ್ದರು. ಆದರೆ ನಿನ್ನೆ ರಾಜಕಾರಣಿಗಳ ಸಭೆಯಲ್ಲಿ ಸೈಲೆಂಟ್ ಸುನೀಲ ಪ್ರತ್ಯಕ್ಷನಾಗಿದ್ದಾನೆ. ಈ ಕಾರ್ಯಕ್ರಮದಲ್ಲಿ ರಾಜಕಾರಣಿಗಳ ಜೊತೆ ಪೊಲೀಸರು ಇದ್ದರು ಆದರೂ ಸುನೀಲ ರಾಜಾರೋಷವಾಗಿ ಮೆರೆದಾಡಿದ್ದಾನೆ. ಇದನ್ನು ಗಮನಿಸಿದಾಗ ರೌಡಿಶೀಟರ್ ಸೈಲೆಂಟ್ ಸುನೀಲನ ಬೆನ್ನಿಗೆ ಪ್ರಭಾವಿ ರಾಜಕಾರಣಿಗಳು ನಿಂತ್ರಾ ಎಂಬ ಅನುಮಾನ ಮೂಡಿದೆ. ಇದನ್ನೂ ಓದಿ: ಮದರಸಾಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಕಟ್
ಕುಖ್ಯಾತ ರೌಡಿಶೀಟರ್ ಆಗಿರುವ ಸೈಲೆಂಟ್ ಸುನೀಲ ನಿನ್ನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ರಕ್ತದಾನ ಶಿಬಿರದಲ್ಲಿ ಭಾಗಿಯಾಗಿದ್ದ. ಇದೇ ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ, ಪಿ.ಸಿ ಮೋಹನ್, ಶಾಸಕ ಉದಯ್ ಗರುಡಾಚಾರ್, ಎನ್.ಆರ್.ರಮೇಶ್ ಭಾಗಿಯಾಗಿದ್ದರು. ಇದೇ ವೇದಿಕೆಯಲ್ಲೇ ಸುನೀಲ ಕೂಡ ಕಾಣಿಸಿಕೊಂಡಿದ್ದು, ಚಾಮರಾಜಪೇಟೆಯ ಮುಂದಿನ ಬಿಜೆಪಿ ಎಮ್‍ಎಲ್‍ಎ ಅಭ್ಯರ್ಥಿ ಅಂತಲೇ ಬಿಂಬಿತನಾಗಿದ್ದಾನೆ. ಇದನ್ನೂ ಓದಿ: ಜೋಡೋ ಯಾತ್ರೆ ವೇಳೆ ಪಾಕ್ ಪರ ಘೋಷ – ಕಾಂಗ್ರೆಸ್ ನಾಯಕರ ವಿರುದ್ಧ ಎಫ್‌ಐಆರ್
ಅಂದು ಪೊಲೀಸರು ದಾಳಿ ವೇಳೆ ಪರಾರಿಯಾಗಿದ್ದಾನೆ. ಹೆದರಿ ಬೆಂಗಳೂರು ಬಿಟ್ಟು ತಮಿಳುನಾಡು ಸೇರಿಕೊಂಡಿದ್ದಾನೆ ಎಂದು ಸಿಸಿಬಿ ಪೊಲೀಸರು ಹೇಳಿದ್ದರು. ಆದರೆ ನಿನ್ನೆ ಸೈಲೆಂಟ್ ಸುನೀಲ ಬಹಿರಂಗವಾಗಿ ಕಾಣಿಸಿಕೊಂಡಿದ್ದ. ಆದರೂ ಅಲ್ಲೇ ಇದ್ದ ಪೊಲೀಸರು ಸೈಲೆಂಟ್ ಆಗಿದ್ದರು.
ಒಂದು ಕಾಲದಲ್ಲಿ ರಕ್ತ ಹರಿಸಿದ್ದ ರೌಡಿಶೀಟರ್‌ನಿಂದ ಈಗ ರಕ್ತ ದಾನ ಶಿಬಿರ ನಡೆಯುತ್ತಿದೆ. ಇದೇ ಕಾರ್ಯಕ್ರಮದಲ್ಲಿ ಸುನೀಲನ ಹತ್ರ ಸೆಲ್ಫಿ ತೆಗೆದುಕೊಳ್ಳೋಕೆ ಪುಡಿ ರೌಡಿಗಳು ಮುಗಿಬಿದ್ದಿದ್ದರು. ಇಷ್ಟೇಲ್ಲಾ ರಾಜಕೀಯ ಮುಖಂಡರು, ಪೊಲೀಸರ ಮುಂದೆಯೇ ನಡೀತಿದ್ರು ಪೊಲೀಸರು ಮಾತ್ರ ಫುಲ್ ಸೈಲೆಂಟ್ ಆಗಿದ್ದಿದ್ದು ಅಚ್ಚರಿ ಮೂಡಿಸಿದೆ.
Live Tv
[brid partner=56869869 player=32851 video=960834 autoplay=true]
ನಟ ಕಮ್ ರಾಜಕಾರಣಿ (Actor & Politician) ಮನೋಜ್ ತಿವಾರಿ (Manoj Tiwari) ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. 51ನೇ ವಯಸ್ಸಿನಲ್ಲಿ ತಂದೆಯಾಗುತ್ತಿದ್ದಾರೆ. ಸದ್ಯ ಪತ್ನಿ ಸುರಭಿ ತಿವಾರಿ ಬೇಬಿ ಶವರ್ ವೀಡಿಯೋ ಹಂಚಿಕೊಳ್ಳುವ ಮೂಲಕ ಮನೋಜ್ ತಿವಾರಿ ಸದ್ದು ಮಾಡ್ತಿದ್ದಾರೆ.
ಚಿತ್ರರಂಗದಲ್ಲಿ ನಟ, ಗಾಯಕ, ರಾಜಕಾರಣಿಯಾಗಿ ಗುರುತಿಸಿ ಸೈ ಎನಿಸಿಕೊಂಡಿರುವ ಮನೋಜ್ ತಿವಾರಿ ತಂದೆಯಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ಮನೋಜ್ ಮತ್ತು ಸುರಭಿ ದಂಪತಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ. ಈಗ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ನಡೆದ ಪತ್ನಿ ಬೇಬಿ ಶವರ್ ಕಾರ್ಯಕ್ರಮದ ವೀಡಿಯೋವನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: EXCLUSIVE:ಆಗಿದ್ದು ಎಂಗೇಜ್‌ಮೆಂಟ್ ಅಲ್ಲ, ನಾನಿನ್ನೂ ಒಪ್ಪಿಲ್ಲ: ವೈಷ್ಣವಿ
ಎರಡನೇ ಪತ್ನಿಯ ಬೇಬಿ ಶವರ್ ಕಾರ್ಯಕ್ರಮ ತುಂಬಾ ಗ್ರಾö್ಯಂಡ್ ಆಗಿ ನಡೆದಿದ್ದು, ಸುರಭಿ ತಿವಾರಿ ಕೆಂಪು ಡ್ರೆಸ್‌ನಲ್ಲಿ ಮಿಂಚಿದ್ದರೆ, ಮನೋಜ್ ಬೀಜ್ ಕುರ್ತಾದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಬೇಬಿ ಶವರ್ ವೀಡಿಯೋ ಸಂಭ್ರಮದ ಮೂಲಕ ಸದ್ದು ಮಾಡ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]