Tag: political pary

  • ಬಿಜೆಪಿ ಆದಾಯ 81.18% ಏರಿಕೆ, ಕಾಂಗ್ರೆಸ್ 14% ಇಳಿಕೆ: ಯಾವ ಪಕ್ಷದ ಆದಾಯ, ಖರ್ಚು ಎಷ್ಟು?

    ಬಿಜೆಪಿ ಆದಾಯ 81.18% ಏರಿಕೆ, ಕಾಂಗ್ರೆಸ್ 14% ಇಳಿಕೆ: ಯಾವ ಪಕ್ಷದ ಆದಾಯ, ಖರ್ಚು ಎಷ್ಟು?

    ನವದೆಹಲಿ: 2015- 16 ಮತ್ತು 2016-17ರ ಹಣಕಾಸು ವರ್ಷದಲ್ಲಿ ಬಿಜೆಪಿಯ ಆದಾಯ 81.18%ರಷ್ಟು ಏರಿಕೆಯಾಗಿದ್ದರೆ ಕಾಂಗ್ರೆಸ್ ಆದಾಯ 14% ಇಳಿಕೆಯಾಗಿದೆ.

    ಅಸೋಸಿಯೇಷನ್ ಫಾರ್ ಡೆಮೊಕ್ರಾಟಿಕ್ ರಿಫಾರ್ಮ್ಸ್  ಸಂಸ್ಥೆ ರಾಷ್ಟ್ರೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವಿವರಗಳನ್ನು ಲೆಕ್ಕಾಚಾರ ಮಾಡಿ ಈ ವರದಿಯನ್ನು ಬಿಡುಗಡೆ ಮಾಡಿದೆ. ಈ ಅವಧಿಯಲ್ಲಿ ಬಿಜೆಪಿಯ ಆದಾಯ 1,034.27 ಕೋಟಿ ರೂ. ಇದ್ದರೆ, ಕಾಂಗ್ರೆಸ್ ಆದಾಯ 225.36 ಕೋಟಿ ರೂ. ಇತ್ತು ಎಂದು ವರದಿ ತಿಳಿಸಿದೆ.

    ಬಿಜೆಪಿ, ಕಾಂಗ್ರೆಸ್, ಬಿಎಸ್‍ಪಿ, ಎನ್‍ಸಿಪಿ, ಸಿಪಿಐ(ಎಂ), ಸಿಪಿಐ ಪಕ್ಷಗಳು ಘೋಷಿಸಿರುವ ಒಟ್ಟು ಆದಾಯದ ಮೊತ್ತ 1,559.17 ಕೋಟಿ ರೂ. ಆಗಿದೆ. ಈ ಪಕ್ಷಗಳು ಒಟ್ಟು 1,228.26 ಕೋಟಿ ರೂ. ಖರ್ಚು ಮಾಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    2016-17 ರ ಹಣಕಾಸು ವರ್ಷದಲ್ಲಿ ಬಿಜೆಪಿ 1,034.27 ಕೋಟಿ ರೂ. ಆದಾಯ ಗಳಿಸಿದ್ದರೆ, 710 ಕೋಟಿ ರೂ. ಖರ್ಚು ಮಾಡಿದೆ. ಕಾಂಗ್ರೆಸ್ ಈ ಅವಧಿಯಲ್ಲಿ 225.36 ಕೋಟಿ ರೂ. ಆದಾಯ ಗಳಿಸಿದ್ದು, 321.66 ಕೋಟಿ ರೂ. ಖರ್ಚು ಮಾಡಿದೆ. ಕಾಂಗ್ರೆಸ್ ಖರ್ಚು ಮಾಡಿದ ಮೊತ್ತ ಅದರ ಆದಾಯಕ್ಕಿಂತಲೂ 96.3 ಕೋಟಿ ರೂ. ಅಧಿಕ ಎಂದು ಹೇಳಿದೆ.  ಇದನ್ನೂ ಓದಿ: ಸಿದ್ದರಾಮಯ್ಯ ದೇಶದ 6ನೇ ಶ್ರೀಮಂತ ಸಿಎಂ: ದೇಶದ ಸಿಎಂಗಳ ಆಸ್ತಿ ಎಷ್ಟಿದೆ? ಇಲ್ಲಿದೆ ಮಾಹಿತಿ

    2015-16 ರಲ್ಲಿ ಬಿಜೆಪಿ ಆದಾಯ 570.86 ಕೋಟಿ ರೂ. ಇದ್ದರೆ ಕಾಂಗ್ರೆಸ್ ಆದಾಯ 261.56 ಕೋಟಿ ರೂ. ಇತ್ತು. 2016-17ರಲ್ಲಿ ಬಿಜೆಪಿ 1,034 ಕೋಟಿ ರೂ.ಗೆ ಏರಿಕೆಯಾಗಿದ್ದರೆ ಕಾಂಗ್ರೆಸ್ ಆದಾಯ 225.36 ಕೋಟಿ ರೂ.ಗೆ ಇಳಿಕೆಯಾಗಿದೆ.

    ಯಾವ ಪಕ್ಷದ ಆದಾಯ ಎಷ್ಟಿದೆ? ಪಾಲು ಎಷ್ಟು?
    ಬಿಜೆಪಿ – 1,034.27 ಕೋಟಿ ರೂ.(66.34%)
    ಕಾಂಗ್ರೆಸ್ – 225.36 ಕೋಟಿ ರೂ.(14.45%)
    ಬಿಎಸ್‍ಪಿ – 173.58 ಕೋಟಿ ರೂ.(11.13%)
    ಸಿಪಿಎಂ – 100.256 ಕೋಟಿ ರೂ.(6.43%)
    ಎನ್‍ಸಿಪಿ – 17.235 ಕೋಟಿ ರೂ.(1.11%)
    ಎಐಟಿಸಿ – 3.39 ಕೋಟಿ ರೂ.(0.41%)
    ಸಿಪಿಐ – 2.079 ಕೋಟಿ ರೂ.(0.13%)

    ಆಯೋಗಕ್ಕೆ ವಿವರ ನೀಡಿದ್ದು ಯಾವಾಗ?
    2017ರ ಅಕ್ಟೋಬರ್ 30 ಕೊನೆಯ ದಿನಾಂಕವಾಗಿದ್ದರೂ, ಬಿಎಸ್‍ಪಿ ಮತ್ತು ಸಿಪಿಎಂ ಅಕ್ಟೋಬರ್ 26 ರಂದು ನೀಡಿದ್ದರೆ, ಎಐಟಿಸಿ ಅಕ್ಟೋಬರ್ 27 ರಂದು ನೀಡಿತ್ತು. ಸಿಪಿಐ ನವೆಂಬರ್ 23ರಂದು ನೀಡಿದ್ದರೆ ಎನ್‍ಸಿಪಿ 2018ರ ಜನವರಿ 19 ರಂದು ನೀಡಿತ್ತು. ಬಿಜೆಪಿ 99 ದಿನಗಳ ನಂತರ ಅಂದರೆ ಫೆಬ್ರವರಿ 8 ರಂದು ನೀಡಿದ್ದರೆ ಕಾಂಗ್ರೆಸ್ 138 ದಿನಗಳ ನಂತರ ಮಾರ್ಚ್ 19 ರಂದು ತನ್ನ ವಿವರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿತ್ತು. ಇದನ್ನೂ ಓದಿ: 4 ವರ್ಷದಲ್ಲಿ ರಾಜಕೀಯ ಪಕ್ಷಗಳಿಗೆ 956.77 ಕೋಟಿ ರೂ. ದೇಣಿಗೆ: ಯಾವ ಪಕ್ಷಕ್ಕೆ ಎಷ್ಟು ಕೋಟಿ ಬಂದಿದೆ? ಕೊಟ್ಟವರು ಯಾರು?