Tag: Policy Commission

  • ಇಂದು, ನಾಳೆ ನೀತಿ ಆಯೋಗದ ಸಮಾಲೋಚಕರ ಸಭೆ – ಕರ್ನಾಟಕದ ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಾಂಕಗಳ ಪ್ರಗತಿ ಬಗ್ಗೆ ಚರ್ಚೆ

    ಇಂದು, ನಾಳೆ ನೀತಿ ಆಯೋಗದ ಸಮಾಲೋಚಕರ ಸಭೆ – ಕರ್ನಾಟಕದ ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಾಂಕಗಳ ಪ್ರಗತಿ ಬಗ್ಗೆ ಚರ್ಚೆ

    ಬೆಂಗಳೂರು: ಕರ್ನಾಟಕದ ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಾಂಕಗಳ ಪ್ರಗತಿ ಕುರಿತು ಚರ್ಚಿಸಲು ರಾಜ್ಯಕ್ಕೆ ಆಗಮಿಸಿರುವ ನೀತಿ ಆಯೋಗದ ಸಮಾಲೋಚಕರಾದ ಸನ್ಯುಕ್ತಾ ಸಮದ್ದಾರ್ ಅವರನ್ನು ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರು ಹೂಗುಚ್ಛ ನೀಡುವ ಮೂಲಕ ಸ್ವಾಗತ ಕೋರಿದರು.

    ಇಂದು ಮತ್ತು ನಾಳೆ ವಿಕಾಸಸೌಧದಲ್ಲಿ ನಡೆಯಲಿರುವ ಸಭೆಯಲ್ಲಿ ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳು ಭಾಗವಹಿಸಲಿದ್ದು ಮುಖ್ಯ ಕಾರ್ಯದರ್ಶಿಗಳು ಅಧ್ಯಕ್ಷತೆವಹಿಲಿದ್ದಾರೆ.

    ಕರ್ನಾಟಕದ ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಾಂಕಗಳ ಪ್ರಗತಿಯನ್ನು ಇನ್ನಷ್ಟು ಸುಧಾರಿಸಲು ಹಾಗೂ ಇತರ ರಾಜ್ಯಗಳಲ್ಲಿ ಆಗುತ್ತಿರುವ ಉತ್ತಮ ಯೋಜನೆಗಳ/ಸಾಧನೆಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಅಲ್ಲದೇ ವಿಶೇಷವಾಗಿ ಕೇಂದ್ರ ಸರ್ಕಾರದ ಬಡತನ ನಿರ್ಮೂಲನೆಗಾಗಿ ಬಹು ಆಯಾಮದ ಬಡತನ ಸೂಚ್ಯಾಂಕಗಳ ಬಗ್ಗೆ ಎಲ್ಲಾ ರಾಜ್ಯಗಳೊಂದಿಗೆ ನೀತಿ ಆಯೋಗದ ಮೂಲಕ ಕೆಲವು ಕಾರ್ಯತಂತ್ರಗಳನ್ನು ಹಂಚಿಕೊಳ್ಳಲಾಗುವುದು.

    ಇಂದಿನ ಸಭೆಯಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ವಂದಿತಾ ಶರ್ಮಾ ಹಾಗೂ ಶಾಲಿನಿ ರಜನೀಶ್ ಅವರು ಸೇರಿದಂತೆ ಅನೇಕ ಉನ್ನತ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

  • ಆರೋಗ್ಯಕರ ರಾಜ್ಯಗಳ ಪಟ್ಟಿ ಬಿಡುಗಡೆ- ಕೇರಳ ಫಸ್ಟ್, ಉತ್ತರ ಪ್ರದೇಶ ಲಾಸ್ಟ್

    ಆರೋಗ್ಯಕರ ರಾಜ್ಯಗಳ ಪಟ್ಟಿ ಬಿಡುಗಡೆ- ಕೇರಳ ಫಸ್ಟ್, ಉತ್ತರ ಪ್ರದೇಶ ಲಾಸ್ಟ್

    -8ನೇ ಸ್ಥಾನದಲ್ಲಿ ಕರ್ನಾಟಕ

    ನವದೆಹಲಿ: ದೇಶದಲ್ಲಿ ಆರೋಗ್ಯಕರ ರಾಜ್ಯಗಳ ಪಟ್ಟಿ ಬಿಡುಗಡೆಯಾಗಿದ್ದು, ಅದರಲ್ಲಿ ಕೇರಳ ಮೊದಲ ಸ್ಥಾನ ಪಡೆದುಕೊಂಡರೆ ಕರ್ನಾಟಕ 8 ನೇ ಸ್ಥಾನದಲ್ಲಿದೆ.

    ಮಂಗಳವಾರ ನೀತಿ ಆಯೋಗವು ದೇಶದ ಆರೋಗ್ಯಕರ ರಾಜ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕೇರಳ ಟಾಪರ್ ಆದರೆ ಕರ್ನಾಟಕ 8ನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶಕ್ಕೆ ಕೊನೆಯ ಸ್ಥಾನ ಸಿಕ್ಕಿದೆ.

    23 ಮಾನದಂಡಗಳನ್ನು ಗಣನೆಗೆ ತೆಗೆದುಕೊಂಡು ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಆಧಾರದ ಮೇಲೆ ತಯಾರು ಮಾಡಿದ್ದ ‘ಆರೋಗ್ಯಕರ ರಾಜ್ಯಗಳು ಮತ್ತು ಪ್ರಗತಿಶೀಲ ಭಾರತ’ “Healthy States, Progressive India” ಎಂಬ ವರದಿಯನ್ನು ನೀತಿ ಆಯೋಗದ ಉಪಾಧ್ಯಕ್ಷ ಡಾ. ರಾಜೀವ್ ಕುಮಾರ್ ಬಿಡುಗಡೆ ಮಾಡಿದರು. ಈ ವರದಿಯ ಪ್ರಕಾರ ಆರೋಗ್ಯ ಸೂಚ್ಯಂಕದಲ್ಲಿ ಬಿಹಾರ ಹಾಗೂ ಉತ್ತರ ಪ್ರದೇಶ ತೀರಾ ಹಿಂದುಳಿದಿದೆ ಎಂದು ಹೇಳಿದೆ.

    ಕೇರಳದ ನಂತರದ ಸ್ಥಾನದಲ್ಲಿ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದು, ಉತ್ತಮ ಆರೋಗ್ಯ ಮಟ್ಟವನ್ನು ಕಾಪಾಡಿಕೊಂಡು ಬಂದಿವೆ. ಇವುಗಳನ್ನು ಬಿಟ್ಟರೆ ಹರಿಯಾಣ, ರಾಜಸ್ಥಾನ ಮತ್ತು ಜಾರ್ಖಂಡ್ ಆರೋಗ್ಯ ಗುಣಮಟ್ಟದಲ್ಲಿ ಸುಧಾರಣೆ ಆಗಿದೆ. ಆದರೆ ಛತ್ತೀಸ್‍ಗಢ ಅತಿ ಕಡಿಮೆ ಗುಣಮಟ್ಟ ಸಾಧಿಸಿರುವ ರಾಜ್ಯವಾಗಿದೆ.

    2018ರ ಫೆಬ್ರವರಿಯಲ್ಲಿ ಬಿಡುಗಡೆಯಾಗಿದ್ದ ಮೊದಲ ಹಂತದ ಆರೋಗ್ಯ ಸೂಚ್ಯಂಕಕ್ಕಾಗಿ 2014-15 ರಿಂದ 2015-16ರ ಅವಧಿಯ ನಿರ್ವಹಣೆಯನ್ನು ಪರಿಗಣಿಸಲಾಗಿತ್ತು. ಎರಡನೇ ಹಂತದ ಆರೋಗ್ಯ ಸೂಚ್ಯಂಕಕ್ಕಾಗಿ 2015-16 ರಿಂದ 2017-18ರ ಅವಧಿಯ ನಿರ್ವಹಣೆಯನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.

    ಮೊದಲ ಹತ್ತು ಆರೋಗ್ಯಕರ ರಾಜ್ಯಗಳು
    1. ಕೇರಳ
    2. ಆಂಧ್ರ ಪ್ರದೇಶ
    3. ಮಹಾರಾಷ್ಟ್ರ
    4. ಗುಜರಾತ್
    5. ಪಂಜಾಬ್
    6. ಹಿಮಾಚಲ ಪ್ರದೇಶ
    7. ಜಮ್ಮು -ಕಾಶ್ಮೀರ
    8. ಕರ್ನಾಟಕ
    9. ತಮಿಳುನಾಡು
    10. ತೆಲಂಗಾಣ

  • ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ

    ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ

    – ಆರ್ಥಿಕ ಸದೃಢ 3 ರಾಷ್ಟ್ರಗಳಲ್ಲಿ ಭಾರತ ಒಂದಾಗಲಿ
    – ಮುಂದಿನ ಪೀಳಿಗೆಗೆ ನಾವು ನೀರು ಉಳಿಸಬೇಕು

    ನವದೆಹಲಿ: 17ನೇ ಲೋಕಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ರಮಾನಾಥ್ ಕೋವಿಂದ ಇಂದು ಮಾತನಾಡಿದರು. ಭಾರತವನ್ನು ಪ್ರಬಲ ಆರ್ಥಿಕ ಶಕ್ತಿ ಕೇಂದ್ರವನ್ನಾಗಿ ಮಾಡಲು ನೂತನ ಸರ್ಕಾರ ಕೆಲಸ ಮಾಡಬೇಕಿದ ಎಂದು ಹೇಳಿದರು.

    ನೂತನ ಮೋದಿ ಸರ್ಕಾರ ತ್ರಿಪಲ್ ತಲಾಖ್ ನಿಷೇಧ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ಮುಂದಿನ ಕಾರ್ಯ ನಿರ್ವಹಿಸಬೇಕಿದೆ. ದೇಶದ 75ನೇ ಸ್ವತಂತ್ರ ದಿನಾಚರಣೆಯ ವೇಳೆ ದೇಶ ಅಭಿವೃದ್ಧಿಯ ಕನಸು ಸಾಕಾರಗೊಳ್ಳುವಂತೆ ಮಾಡುವ ಮೂಲಕ ನಿಮ್ಮ ಕಾರ್ಯವನ್ನು ರೈತರು ಮತ್ತು ಸೈನಿಕರಿಗೆ ಅರ್ಪಿಸಬೇಕು.

    ದೇಶದ ಜನತೆ ದೀರ್ಘ ಅವಧಿಯಿಂದ ಮೂಲಭೂತ ಸೌಲಭ್ಯಗಳನ್ನು ನಿರೀಕ್ಷಿಸುತ್ತಿದ್ದಾರೆ. ಆದ್ರೆ ಆ ಸ್ಥಿತಿ ಬದಲಾವಣೆಯತ್ತ ಸಾಗುತ್ತಿದೆ. ವಿಶ್ವದ ಅತಿದೊಡ್ಡ ಸದೃಢ ಮೂರು ದೇಶಗಳಲ್ಲಿ ಭಾರತ ಸಹ ಒಂದಾಗುವಂತೆ ನೂತನ ಸರ್ಕಾರ ಕಾರ್ಯ ನಿರ್ವಹಿಸಬೇಕೆಂದು ಗುರಿಯನ್ನು ನೀಡಿದರು.

    ಕಿಸಾನ್ ಸಮ್ಮಾನ್ ಯೋಜನೆ ದೇಶದ ಪ್ರತಿಯೊಬ್ಬ ರೈತರಿಗೆ ತಲುಪಿದೆ. ರೈತರಿಗೆ ಪಿಂಚಣಿ ನೀಡುವ ಕಾರ್ಯ ಸಹ ಆರಂಭಗೊಂಡಿದೆ. ಸಣ್ಣ ವ್ಯಾಪಾರಸ್ಥನ ಆರ್ಥಿಕ ಸುರಕ್ಷತೆಯನ್ನು ಗಮನದಲ್ಲಿರಿಸಿ ಮೊದಲ ಬಾರಿಗೆ ಸರ್ಕಾರವೊಂದು ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. 3 ಕೋಟಿಗೂ ಅಧಿಕ ಸಣ್ಣ ವ್ಯಾಪಾರಸ್ಥರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.

    ಜಲ ಸಂರಕ್ಷಣೆ:
    ಮುಂದಿನ ಪೀಳಿಗೆಗಾಗಿ ನಾವು ನೀರು ಉಳಿಸುವ ಅಚಲ ನಿರ್ಧಾರ ಮಾಡಬೇಕು. ಸಂಸತ್ತಿನ ಅಧಿವೇಶನದಲ್ಲಿ ಜೂನ್ 14 ರಂದು ಬಿಡುಗಡೆಯಾದ ನೀತಿ ಆಯೋಗದ ವರದಿಯನ್ನು ಆಧಾರವಾಗಿ ಇಟ್ಟುಕೊಂಡು ಮಾತನಾಡಿದ ಅವರು, ಭಾರತ ತನ್ನ ಇತಿಹಾಸದಲ್ಲೇ ಅತ್ಯಂತ ಕೆಟ್ಟ ನೀರಿನ ಬಿಕ್ಕಟ್ಟಿನಿಂದ ಬಳಲುತ್ತಿದೆ. ನಾವು ನಮ್ಮ ಮಕ್ಕಳಿಗೆ ಮತ್ತು ಮುಂದಿನ ಪೀಳಿಗೆಗೆ ನೀರನ್ನು ಉಳಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಹೊಸ ಜಲಶಕ್ತಿ ಸಚಿವಾಲಯವನ್ನು ರಚಿಸುವುದು ನಿರ್ಣಾಯಕ ಹೆಜ್ಜೆಯಾಗಿದ್ದು, ಇದು ನೀರಿನ ಸಮಸ್ಯೆ ಮೇಲೆ ಬಹುದೊಡ್ಡ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.

    ಈ ವರದಿಯ ಪ್ರಕಾರ ಸುರಕ್ಷಿತ ನೀರಿನ ಕೊರೆತೆಯಿಂದಾಗಿ ಸುಮಾರು 60 ಕೋಟಿ ಜನರು ತೀವ್ರ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಪ್ರತೀ ವರ್ಷ ಸುಮಾರು ಎರಡು ಲಕ್ಷ ಜನರು ಇದರಿಂದ ಸಾಯುತ್ತಿದ್ದಾರೆ ಎಂದು ವರದಿ ಹೇಳಿದೆ. ಸಂಯೋಜಿತ ನೀರು ನಿರ್ವಹಣಾ ಸೂಚ್ಯಂಕ ಮತ್ತು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಬಿಡುಗಡೆ ಮಾಡಿದ ಈ ವರದಿ ಮುಂದಿನ ದಿನಗಳಲ್ಲಿ ಭಾರತದಲ್ಲಿ ನೀರಿನ ಸಮಸ್ಯೆ ತುಂಬ ಉಲ್ಬಣಗೊಳ್ಳಬಹುದು ಎಂದು ಅತಂಕ ವ್ಯಕ್ತಪಡಿಸಿದೆ.

    2030ರ ಹೊತ್ತಿಗೆ ದೇಶದಲ್ಲಿ ನೀರಿನ ಬೇಡಿಕೆಯು ಈಗ ಇರುವ ಬೇಡಿಕೆಗಿಂತ ಎರಡು ಪಟ್ಟು ಹೆಚ್ಚಾಗುತ್ತದೆ ಎಂದು ಊಹಿಸಲಾಗಿದೆ. ಇಂದು ಬಹಳ ಜನರಿಗೆ ನೀರಿನ ಕೊರೆತೆಯನ್ನು ಸೂಚಿಸುತ್ತದೆ ಮತ್ತು ದೇಶದ ಜಿಡಿಪಿಯಲ್ಲಿ ಶೇ. 6 ರಷ್ಟು ನಷ್ಟವಾಗುತ್ತದೆ ಎಂದು ಹೇಳಲಾಗಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಆರೋಗ್ಯ ಹಾಗೂ ಪೋಷಣೆಯಲ್ಲಿ 4ನೇ ಸ್ಥಾನದಲ್ಲಿದೆ ರಾಯಚೂರು

    ಆರೋಗ್ಯ ಹಾಗೂ ಪೋಷಣೆಯಲ್ಲಿ 4ನೇ ಸ್ಥಾನದಲ್ಲಿದೆ ರಾಯಚೂರು

    ರಾಯಚೂರು: ಇಡೀ ದೇಶದಲ್ಲೇ ಅಪೌಷ್ಟಿಕತೆಗೆ ಹೆಸರಾಗಿದ್ದ ರಾಯಚೂರು ಜಿಲ್ಲೆ ಈಗ ಆರೋಗ್ಯ ಹಾಗೂ ಪೋಷಣೆಯಲ್ಲಿ ಅತೀ ವೇಗದಲ್ಲಿ ಸುಧಾರಿಸುತ್ತಿರುವ ದೇಶದ ನಾಲ್ಕನೇ ಜಿಲ್ಲೆಯಾಗಿದೆ ಅಂತ ನೀತಿ ಆಯೋಗ ತಿಳಿಸಿದೆ.

    ಮೊದಲೆಲ್ಲ ಅಪೌಷ್ಟಿಕತೆಗೆ ಯಾವ ಜಿಲ್ಲೆ ಫೇಮಸ್ ಎಂದು ಕೇಳದ್ರೆ ಎಲ್ಲರು ಹೇಳ್ತಿದಿದ್ದು ರಾಯಚೂರು ಜಿಲ್ಲೆ. ಆದ್ರೆ ಇನ್ಮುಂದೆ ಹಾಗಲ್ಲ, ನೀತಿ ಆಯೋಗ ಕಳೆದ ವರ್ಷ ಸರ್ವೆ ಮಾಡಿ ಆರೋಗ್ಯ ಮತ್ತು ಪೋಷಣೆಯಲ್ಲಿ ದೇಶದ ಯಾವ ಜಿಲ್ಲೆ ಯಾವ ಸ್ಥನದಲ್ಲಿದೆ ಅನ್ನೋದನ್ನ ವರದಿ ಮಾಡಿದೆ. 2018ರ ಜೂನ್ ಮತ್ತು ಅಕ್ಟೋಬರ್ ವರದಿಯನ್ನ ಪ್ರಕಟಿಸಿರುವ ಕೇಂದ್ರ ಸರ್ಕಾರದ ನೀತಿ ಆಯೋಗ ರಾಯಚೂರಿಗೆ ನಾಲ್ಕನೇ ಸ್ಥಾನ ನೀಡಿದೆ.

    ಹಾಗೆಯೇ ಉತ್ತರ ಪ್ರದೇಶದ ಚಿತ್ರಕೂಟ, ಮಧ್ಯಪ್ರದೇಶದ ಬರ್ವಾನಿ, ಮಧ್ಯಪ್ರದೇಶದ ವಿದಿಶಾ ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿವೆ. ಜಾರ್ಖಂಡ್ ರಾಜ್ಯದ ಐದು ಜಿಲ್ಲೆಗಳು ಕೊನೆಯ ಐದು ಸ್ಥಾನದಲ್ಲಿವೆ. ರಾಯಚೂರು ಜಿಲ್ಲೆಯ ಈ ಸಾಧನೆಗೆ ಹಿಂದಿನ ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರ ಪರಿಶ್ರಮ ಕಾರಣ ಅಂತ ಜಿಲ್ಲಾಧಿಕಾರಿ ಬಿ.ಶರತ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅವಧಿಗೆ ಮುನ್ನವೇ ರಾಜೀನಾಮೆ ನೀಡಿದ ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ ಪನಗರಿಯಾ

    ಅವಧಿಗೆ ಮುನ್ನವೇ ರಾಜೀನಾಮೆ ನೀಡಿದ ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ ಪನಗರಿಯಾ

    ನವದೆಹಲಿ: ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ ಪನಗರಿಯಾ ಅವರು ಮಂಗಳವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

    64 ವರ್ಷದ ಭಾರತೀಯ ಅಮೆರಿಕನ್ ಅರ್ಥ ಶಾಸ್ತ್ರಜ್ಞ, ಪನಗರಿಯಾ ಅವರ ಕಾರ್ಯಾವಧಿ ಇದೇ ಆಗಸ್ಟ್ 31ರಂದು ಮುಗಿಯುತಿತ್ತು. ಆದರೆ ಅವರು ಅವಧಿಗೂ ಮುನ್ನವೇ ಹುದ್ದೆಗೆ ರಾಜೀನಾಮೆ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.

    ಕ್ಯಾಬಿನೆಟ್ ದರ್ಜೆಯ ಸ್ಥಾನಮಾನವನ್ನು ಹೊಂದಿದ್ದ ಹುದ್ದೆಗೆ ಪನಗರಿಯಾ ಅವರನ್ನು ಮೋದಿ ಸರ್ಕಾರ 2015ರ ಜನವರಿಯಲ್ಲಿ ಆಯ್ಕೆ ಮಾಡಿತ್ತು. ರಾಜೀನಾಮೆ ನೀಡಿದ ಬಳಿಕ ತಾನು ನ್ಯೂಯಾರ್ಕ್‍ನ ಕೊಲಂಬಿಯ ವಿಶ್ವವಿದ್ಯಾಲಯಕ್ಕೆ ಅಧ್ಯಾಪನಕ್ಕೆ ಮರಳುತ್ತಿದ್ದೇನೆ ಎಂದು ಪನಗರಿಯಾ ತಿಳಿಸಿದ್ದಾರೆ.

    ನೀತಿ ಆಯೋಗದ ಉಪಾಧ್ಯಕ್ಷರಾಗುವುದಕ್ಕೂ ಮೊದಲು ಏಷ್ಯನ್ ಡೆವಲಪ್‍ಮೆಂಟ್ ಬ್ಯಾಂಕ್ ನ ಮುಖ್ಯ ಅರ್ಥಶಾಸ್ತ್ರಜ್ಞರಾಗಿದ್ದರು. ವಿಶ್ವ ಬ್ಯಾಂಕ್, ಐಎಂಎಫ್, ಡಬ್ಲ್ಯುಟಿಓ ಹಾಗೂ ವಿಶ್ವಸಂಸ್ಥೆಯ ವಾಣಿಜ್ಯ ಅಭಿವೃದ್ಧಿ ಮಂಡಳಿಯಲ್ಲೂ ಕೆಲಸ ಮಾಡಿರುವ ಪನಗರಿಯಾ ಪ್ರಿನ್ಸ್‍ಟನ್ ಯುನಿವರ್ಸಿಟಿಯಿಂದ ಅರ್ಥಶಾಸ್ತ್ರದಲ್ಲಿ ಪಿಎಚ್‍ಡಿ ಪಡೆದಿದ್ದಾರೆ.

    ಏನಿದು ನೀತಿ ಆಯೋಗ?
    ಯೋಜನಾಬದ್ಧ ಆರ್ಥಿಕ ಬೆಳವಣಿಗೆಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ 2014 ರವರೆಗೆ ಯೋಜನಾ ಆಯೋಗ ಸಲಹೆ ನೀಡುತಿತ್ತು. 2015ರ ಜನವರಿಯಲ್ಲಿ ಮೋದಿ ಸರ್ಕಾರ ಯೋಜನ ಆಯೋಗವನ್ನು ನೀತಿ ಆಯೋಗ ಎಂದು ಬದಲಿಸಿತ್ತು. ಈ ನೀತಿ ಆಯೋಗದ ಅಧ್ಯಕ್ಷರಾಗಿ ಪ್ರಧಾನಿ ನರೇಂದ್ರ ಮೋದಿ ಇದ್ದರೆ, ಉಪಾಧ್ಯಕ್ಷರಾಗಿ ಅರವಿಂದ ಪನಗರಿಯಾ ಇಲ್ಲಿಯವರೆಗೆ ಕಾರ್ಯನಿರ್ವಹಿಸಿದ್ದರು.