Tag: Policía

  • ಸರ್ಕಾರಿ ಉದ್ಯೋಗದ ಆಮಿಷವೊಡ್ಡಿ ಮಹಿಳೆಯಿಂದ ವಂಚನೆ

    ಸರ್ಕಾರಿ ಉದ್ಯೋಗದ ಆಮಿಷವೊಡ್ಡಿ ಮಹಿಳೆಯಿಂದ ವಂಚನೆ

    ಬೆಂಗಳೂರು: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ನಯ ವಂಚಕಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಪಾರ್ವತಿ ಬಂಧಿತ ವಂಚಕಿ. ಪಾರ್ವತಿ ಸಿಎ ವಿದ್ಯಾರ್ಥಿಗಳಿಗೆ ಹೆಚ್‍ಎಎಲ್‍ನಲ್ಲಿ ನನಗೆ ಸಾಕಷ್ಟು ಅಧಿಕಾರಿಗಳ ಪರಿಚಯವಿದೆ. ನಾನು ನಿಮಗೆ ಸರ್ಕಾರಿ ಕೆಲಸ ಉದ್ಯೋಗ ಕೊಡಿಸುತ್ತೇನೆ. ಈಗಾಗಲೇ ನನ್ನ ಮನೆಯಲ್ಲಿ ಕೆಲಸ ಮಾಡುವ ಮಹಿಳೆಯ ಮಗಳಿಗೆ ಹೆಚ್‍ಎಎಲ್‍ನಲ್ಲಿ ಕೆಲಸ ಕೊಡಿಸಿದ್ದು, ಅವರು ಡ್ಯೂಟಿಗೆ ಹೋಗುತ್ತಿದ್ದಾರೆಂದು ಆಕಾಂಕ್ಷಿಗಳಿಗೆ ನಂಬಿಸಿ ವಂಚಿಸಿದ್ದಾಳೆ. ಇದನ್ನೂ ಓದಿ:  ಹಾಸನದಲ್ಲಿ ಜೆಡಿಎಸ್- ಬಿಜೆಪಿ ಎರಡೇ ಆಯ್ಕೆ, ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ: ಪ್ರೀತಂಗೌಡ

    ಕೆಲಸ ಸಿಗಬೇಕು ಅಂದರೆ ಒಂದಷ್ಟು ಹಣ ಖರ್ಚಾಗುತ್ತದೆ ಎಂದು ಹೇಳಿ ಪ್ರತಿಯೊಬ್ಬರ ಬಳಿ ಆರು ಲಕ್ಷ ಹಣ ಪಡೆದಿದ್ದಾಳೆ. ಎರಡು ತಿಂಗಳಲ್ಲಿ ನಿಮ್ಮ ಮನೆಗೆ ಆರ್ಡರ್ ಕಾಪಿ ಬರುತ್ತದೆ ಅಂತ ಹೇಳಿ ಕಳುಹಿಸಿದ್ದಾಳೆ. ಎರಡು ಇಪ್ಪತ್ತು ತಿಂಗಳಾದರು ಆರ್ಡರ್ ಕಾಪಿ ಮನೆಗೆ ಬರುವುದಿಲ್ಲ. ಹಾಗಾಗಿ ಪಾರ್ವತಿಯನ್ನು ಸಂಪರ್ಕಿಸಿ ಕೇಳಿದಾಗ ಆಕಾಂಕ್ಷಿಗಳಿಗೆ ಕೊರೊನಾ ಇದ್ದ ಕಾರಣ ಸ್ವಲ್ಪ ತಡವಾಗಿದೆ. ವಾರದಲ್ಲಿ ಆರ್ಡರ್ ಕಾಪಿ ಬರುತ್ತದೆ ಎಂದು ಕಳಿಸಿಕೊಟ್ಟಿದ್ದಾಳೆ. ವಾರ ಕಳೆದರೂ ಯಾವುದೇ ಸಂದೇಶ ಬರದ ಕಾರಣ ಆಕಾಂಕ್ಷಿಗಳು ಪಾರ್ವತಿ ಬಳಿ ಹೋಗಿ ನಮಗೆ ಕೆಲಸ ಬೇಡ ನಾವು ಕೊಟ್ಟಿರುವ ಹಣವನ್ನು ಮರಳಿ ಕೊಡುವಂತೆ ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ಮೋದಿಯನ್ನು ಭೇಟಿಯಾಗಿ ರುದ್ರಾಕ್ಷಿ ಮಾಲೆ ನೀಡಿದ ಅನುಪಮ್ ಖೇರ್

    ಈ ವೇಳೆ ಆಕಾಂಕ್ಷಿಗಳ ಮಾತಿನಿಂದ ಕೋಪಗೊಂಡ ಪಾರ್ವತಿ ಆಕಾಂಕ್ಷಿಗಳಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾಳೆ. ಪಾರ್ವತಿಗೆ ಹಣಕೊಟ್ಟಿದ್ದ ಆಕಾಂಕ್ಷಿಗಳು ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ವಂಚಕಿ ಪಾರ್ವತಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿ ಪಾರ್ವತಿಯನ್ನು ವಿಚಾರಣೆಗೆ ಒಳಪಡಿಸಿದಾಗ ನಗರದ ಬೇರೆ, ಬೇರೆ ಕಡೆ ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

  • ಸೌಂದರ್ಯ ಜಗದೀಶ್ ಕುಟುಂಬದಿಂದ ಹಲ್ಲೆ ಕೇಸ್ – ಪತ್ನಿ ರೇಖಾ, ಪುತ್ರ ಸ್ನೇಹಿತ್‍ಗೆ ಪೊಲೀಸರಿಂದ ನೋಟಿಸ್

    ಸೌಂದರ್ಯ ಜಗದೀಶ್ ಕುಟುಂಬದಿಂದ ಹಲ್ಲೆ ಕೇಸ್ – ಪತ್ನಿ ರೇಖಾ, ಪುತ್ರ ಸ್ನೇಹಿತ್‍ಗೆ ಪೊಲೀಸರಿಂದ ನೋಟಿಸ್

    ಬೆಂಗಳೂರು: ಸ್ಯಾಂಡಲ್‍ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ಕುಟುಂಬದಿಂದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ. ಈ ಮಧ್ಯೆ ಸ್ಟಾರ್ ನಟರೊಬ್ಬರು ಮಂಜುಳ ಪುರುಷೋತ್ತಮ್‍ಗೆ ಕರೆ ಮಾಡಿ ರಾಜಿ ಮಾಡಿಕೊಳ್ಳುವಂತೆ ತಿಳಿ ಹೇಳಿದ್ದಾರೆ.

    ಸೌಂದರ್ಯ ಜಗದೀಶ್ ಪತ್ನಿ ರೇಖಾ ಜಗದೀಶ್, ಅಪ್ಪುಪಪ್ಪು ಖ್ಯಾತಿಯ ಸ್ನೇಹಿತ್ ಮತ್ತು ಬೌನ್ಸರ್‌ಗಳು ಮಂಜುಳ ಪುರುಷೋತ್ತಮ್ ಅವರ ಮನೆಯ ಮಹಿಳಾ ಕೆಲಸಗಾರರ ಬಟ್ಟೆ ಹರಿದು ದೌರ್ಜನ್ಯ ಎಸಗಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಕಳುಹಿಸಿದ್ದಾರೆ. ಹಲ್ಲೆ ನಡೆದ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ, ಹಲ್ಲೆಗೆ ಒಳಗಾದವರಿಂದ ಮಾಹಿತಿ ಪೊಲೀಸರು ಈಗಾಗಲೇ ಮಾಹಿತಿ ಪಡೆದಿದ್ದಾರೆ. ಇದನ್ನೂ ಓದಿ: ಠಾಣೆ ಮೆಟ್ಟಿಲೇರಿದ ಕಸ ಫೈಟ್ – ಪ್ರೊಡ್ಯೂಸರ್ ಪುತ್ರ, ಪತ್ನಿ ವಿರುದ್ಧ FIR

    ಇನ್ನೊಂದು ಕಡೆ ಮಂಜುಳ ಪುರುಷೋತ್ತಮ್‍ಗೆ ಸ್ಟಾರ್ ನಟರೊಬ್ಬರು ಕರೆ ಮಾಡಿ ಗಲಾಟೆ ದೊಡ್ಡದು ಮಾಡದಂತೆ ತಿಳಿಸಿ ರಾಜೀ ಪಂಚಾಯತಿ ಮಾಡಲು ಯತ್ನಿಸಿದ್ದಾರೆ. ಆದರೆ ಎರಡು ದಿನ ಕಳೆದರೂ ಪೊಲೀಸರು ಆರೋಪಿಗಳನ್ನು ಬಂಧಿಸಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ ಎಫ್‍ಐಆರ್ ನಂತರ ರಾಜಿ ನಡೆಸಲು ಪೊಲೀಸರು ಪರೋಕ್ಷವಾಗಿ ಪ್ರಯತ್ನಿಸಿದ್ದಾರೆ. ಇದನ್ನೂ ಓದಿ: ಸಿಗದ ಜಾಮೀನು – ಜೈಲಿನಲ್ಲಿ ರಾಮನ ಮೊರೆ ಹೋದ ಆರ್ಯನ್ ಖಾನ್

    ಕಸ ಹಾಕುವ ವಿಚಾರಕ್ಕೆ ಸೌಂದರ್ಯ ಜಗದೀಶ್ ಕುಟುಂಬಕ್ಕೂ ಹಾಗೂ ಮಾಜಿ ಮೇಯರ್ ಪುತ್ರಿ ಮಂಜುಳ ಪುರುಷೋತ್ತಮ ನಡುವೆ ಗಲಾಟೆ ನಡೆದಿದ್ದು, ಮಂಜುಳ ಪುರುಷೋತ್ತಮ್ ಅವರ ಮನೆ ಕೆಲಸದ ಇಬ್ಬರು ಮಹಿಳೆಯರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿತ್ತು. ಸೌಂದರ್ಯ ಜಗದೀಶ್ ಕುಟುಂಬಸ್ಥರು, ಬೌನ್ಸರ್ ಸೇರಿ ಹಲ್ಲೆ ಮಾಡಿರುವುದಾಗಿ ಮಂಜುಳಾ ಪುರುಷೋತ್ತಮ್ ತಿಳಿಸಿದ್ದರು. ಇಷ್ಟೇ ಅಲ್ಲದೇ ಸೌಂದರ್ಯ ಜಗದೀಶ್ ಮತ್ತು ಮಂಜುಳಾ ಪುರುಷೋತ್ತಮ್ ನಡುವೆ ಈ ಹಿಂದೆಯೂ ಹಲವು ಬಾರಿ ಜಗಳ ನಡೆದಿತ್ತು ಎನ್ನಲಾಗಿತ್ತು. ಹೀಗಾಗಿ ಕಸ ಗಲಾಟೆ ಸಂಬಂಧ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಕಿನ್ನೌರ್‌ನಲ್ಲಿ ಭಾರೀ ಹಿಮಪಾತಕ್ಕೆ ಮೂವರು ಬಲಿ – 10 ಮಂದಿಯ ರಕ್ಷಣೆ

    ಈ ವಿಚಾರವಾಗಿ ಈ ಮುನ್ನ ಪ್ರತಿಕ್ರಿಯಿಸಿದ್ದ ರೇಖಾ ಜಗದೀಶ್, ಇದು ಉದ್ದೇಶಪೂರ್ವಕವಾಗಿ ಮಾಡಿರುವ ಗಲಾಟೆ ಎಂದಿದ್ದರು. ನಾವು ಬೆಳೆಯುತ್ತಿರುವುದನ್ನು ಸಹಿಸಿಕೊಳ್ಳಲಾಗದೇ ಈ ರೀತಿ ಮಾಡಿದ್ದಾರೆ. ನನ್ನ ಮಕ್ಕಳು ದೇವರಿದ್ದಂತೆ ಎಂದು ಸಮರ್ಥನೆ ಮಾಡಿಕೊಂಡಿದ್ದರು. ಸೋಮವಾರ ಕೂತು ಮಾತಾಡೋಣ ಎಂದಿದ್ದೆ. ಆದರೆ ಬೇಕು ಅಂತಲೇ ಹೀಗೆಲ್ಲ ಮಾಡಿದ್ದಾರೆ ಎಂದು ಮಂಜುಳ ಪುರುಷೋತ್ತಮ್ ವಿರುದ್ಧ ಆರೋಪಿಸಿದ್ದರು.