Tag: Polices

  • ನಟ ಚಿರಂಜೀವಿ ಪುತ್ರನ ಅಭಿಮಾನಿಗಳಿಗೆ ಶಾಕ್

    ನಟ ಚಿರಂಜೀವಿ ಪುತ್ರನ ಅಭಿಮಾನಿಗಳಿಗೆ ಶಾಕ್

    ಚಿಕ್ಕಬಳ್ಳಾಪುರ: ನಗರದ ಕೃಷ್ಣಾ ಚಿತ್ರಮಂದಿರದಲ್ಲಿ ಬಹುನೀರೀಕ್ಷಿತ ‘ವಿನಯ್ ವಿಧೇಯ ರಾಮ್’ ಚಿತ್ರದ ಮೊದಲ ಫ್ಯಾನ್ಸ್ ಶೋ ಪ್ರದರ್ಶನಕ್ಕೆ ಬ್ರೇಕ್ ಬಿದ್ದಿದೆ.

    ಖ್ಯಾತ ನಟ ಚಿರಂಜೀವಿ ಪುತ್ರ ರಾಮ್ ಚರಣ್ ಅಭಿನಯದ ತೆಲುಗು ಭಾಷೆಯ ಚಿತ್ರ ಇಂದು ಬಿಡುಗಡೆಯಾಗಿದೆ. ಚಿಕ್ಕಬಳ್ಳಾಪುರ ನಗರದ ಕೃಷ್ಣಾ ಚಿತ್ರಮಂದಿರದಲ್ಲಿ ಬೆಳ್ಳಂಬೆಳಗ್ಗೆ 6 ಗಂಟೆ 30 ನಿಮಿಷಕ್ಕೆ ಫ್ಯಾನ್ಸ್ ಶೋ ನಿಗದಿಯಾಗಿತ್ತು. ಹೀಗಾಗಿ ಮೊದಲೇ 150 ಹಾಗೂ 200 ರೂ. ಕೊಟ್ಟ ಅಭಿಮಾನಿಗಳು ಟಿಕೆಟ್ ಖರೀದಿಸಿದ್ದಾರೆ.

    ತಾಲೂಕಿನ ವಿವಿಧ ಕಡೆಗಳಿಂದ ಮುಂಜಾನೆ 3 ಹಾಗೂ 4 ಗಂಟೆಗೆ ಆಗಮಿಸಿದ್ದ ಅಭಿಮಾನಿಗಳು ಚಿತ್ರ ನೋಡಿ ಕಣ್ತುಂಬಿಕೊಳ್ಳಬೇಕು ಎನ್ನುವಷ್ಟರಲ್ಲಿ ಚಿಕ್ಕಬಳ್ಳಾಪುರ ಪೊಲೀಸರು ಅಭಿಮಾನಿಗಳ ಆಸಗೆ ಬ್ರೇಕ್ ಹಾಕಿದ್ದಾರೆ. ಹೆಚ್ಚುವರಿ ಪ್ರದರ್ಶನಕ್ಕೆ ಚಿತ್ರಮಂದಿರದ ಮಾಲೀಕರು ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಚಿತ್ರಪ್ರದರ್ಶನಕ್ಕೆ ಪೊಲೀಸರು ತಡೆಯೊಡ್ಡಿದ್ದಾರೆ.

    ಪ್ರತಿದಿನ ನಿಗದಿಯಂತೆ ಬೆಳಗ್ಗೆ 10, ಮಧ್ಯಾಹ್ನ 01, ಸಂಜೆ 4 ಹಾಗೂ 7 ಗಂಟೆಗೆ ಮಾತ್ರ ಚಿತ್ರ ಪದರ್ಶನ ಮಾಡಲು ಅನುಮತಿ ಪಡೆದಿದ್ದರು. ಆದರೆ ಇಂದು ಬಿಡುಗಡೆಯಾಗಿರುವ ವಿವಿಆರ್ ಚಿತ್ರವನ್ನ ಹೆಚ್ಚುವರಿಯಾಗಿ ಪ್ರದರ್ಶನ ಮಾಡಲು ಚಿತ್ರಮಂದಿರ ಮಾಲೀಕರು ಮುಂದಾಗಿದ್ದರು. ಹೀಗಾಗಿ ಚಿತ್ರ ನೋಡಲು ಆಗಮಿಸಿದ್ದ ಅಭಿಮಾನಿಗಳನ್ನು ಚಿತ್ರಮಂದಿರದಿಂದ ಪೊಲೀಸರು ಹೊರಕಳುಹಿಸಿದ್ದರು.

    ಹೀಗಾಗಿ ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿದ್ದ ಅಭಿಮಾನಿಗಳನ್ನು ಹೊರಕಳುಹಿಸಲು ಪೊಲೀಸರು ಹರಸಾಹಸಪಟ್ಟರು. ಮತ್ತೊಂದೆಡೆ ಫ್ಯಾನ್ಸ್ ಶೋ ರದ್ದಾದ ಹಿನ್ನೆಲೆಯಲ್ಲಿ ಟಿಕೆಟ್ ವಾಪಾಸ್ ಪಡೆದ ಚಿತ್ರಮಂದಿರದ ಮಾಲೀಕರು ನಿಗದಿತ ಟಿಕೆಟ್ ಕೊಟ್ಟು ಎಂದಿನಂತೆ 10 ಗಂಟೆಗೆ ಮೊದಲ ಪ್ರದರ್ಶನ ನಡೆಸಲು ಮುಂದಾದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಜ್ಯದ 2016-17ನೇ ಸಾಲಿನ ಇ-ಆಡಳಿತ ಪ್ರಶಸ್ತಿ- ಬೆಂಗ್ಳೂರು ನಗರ ಪೊಲೀಸರಿಗೆ ಲಭ್ಯ

    ರಾಜ್ಯದ 2016-17ನೇ ಸಾಲಿನ ಇ-ಆಡಳಿತ ಪ್ರಶಸ್ತಿ- ಬೆಂಗ್ಳೂರು ನಗರ ಪೊಲೀಸರಿಗೆ ಲಭ್ಯ

    ಬೆಂಗಳೂರು: ರಾಜ್ಯದ 2016 ಮತ್ತು 17ನೇ ಸಾಲಿನ ಇ- ಆಡಳಿತ ಪ್ರಶಸ್ತಿ ಈ ಬಾರಿ ಬೆಂಗಳೂರು ನಗರ ಪೊಲೀಸರಿಗೆ ಲಭಿಸಿದೆ. ರಾಜ್ಯ ಸರ್ಕಾರ ಈ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. ನಗರ ಪೊಲೀಸರ ಘಟಕದ ಎರಡು ವಿಭಾಗಳಿಗೆ ಬೆಸ್ಟ್ ಇ-ಆಡಳಿತ ಪ್ರಶಸ್ತಿ ಸಿಕ್ಕಿದೆ.

    ಕಳೆದ ವರ್ಷ ಸ್ಥಾಪನೆಯಾದ ಸಾಮಾಜಿಕ ಜಾಲತಾಣದ ಕಮಾಂಡ್ ಸೆಂಟರ್ ನ ನಮ್ಮ 100 ಜಿಐಎಸ್ ತಂತ್ರಜ್ಞಾನ ಮತ್ತು ಮೊಬೈಲ್ ತಂತ್ರಜ್ಞಾನದ ಇ ಲಾಸ್ಟ್ ಮತ್ತು ಫೌಂಡ್ ಆ್ಯಪ್‍ಗೆ ಪ್ರಶಸ್ತಿ ಲಭಿಸಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಪ್ರಶಸ್ತಿ ಘೋಷಣೆ ಮಾಡಿದ್ದು. ನಗರ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್ ಪ್ರಶಸ್ತಿ ಪತ್ರದ ಜೊತೆಗೆ ಹತ್ತು ಲಕ್ಷ ಬಹುಮಾನ ಸ್ವೀಕರಿಸಿದ್ರು.

    ಈ ಆ್ಯಪ್‍ಗಳ ಮುಖ್ಯ ಉದ್ದೇಶ ಸಾರ್ವಜನಿಕ ಸೇವೆಗಳನ್ನು ಮಿತವ್ಯಯದೊಂದಿಗೆ ತ್ವರಿತವಾಗಿ ಬಳಕೆದಾರರಿಗೆ ನೀಡುವುದರೊಂದಿಗೆ ಇ ಆಡಳಿತ ಕ್ಷೇತ್ರದಲ್ಲಿ ಸುಸ್ಥಿರ ಮತ್ತು ತಾಂತ್ರಿಕ ಉಪಕ್ರಮಿಕೆಗಳನ್ನು ವಿನ್ಯಾಸ ಮತ್ತು ಅನುಷ್ಠಾನ ಹೊಚ್ಚ ಹೊಸ ಅವಿಷ್ಕಾರಗಳಿಗೆ ಪ್ರೋತ್ಸಾಹ ನೀಡುವುದಾಗಿದೆ.

    ಈ ಎರಡು ವಿಭಾಗ ಸಿಬ್ಬಂದಿಗೆ ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಅಭಿನಂದನೆ ಸಲ್ಲಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv