Tag: Policemen

  • ಜಮ್ಮು-ಕಾಶ್ಮೀರದ ಕಥುವಾದಲ್ಲಿ ಎನ್‌ಕೌಂಟರ್‌ – ನಾಲ್ವರು ಪೊಲೀಸರು ಹುತಾತ್ಮ, ಇಬ್ಬರು ಉಗ್ರರ ಹತ್ಯೆ

    ಜಮ್ಮು-ಕಾಶ್ಮೀರದ ಕಥುವಾದಲ್ಲಿ ಎನ್‌ಕೌಂಟರ್‌ – ನಾಲ್ವರು ಪೊಲೀಸರು ಹುತಾತ್ಮ, ಇಬ್ಬರು ಉಗ್ರರ ಹತ್ಯೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu And Kashmir) ಕಥುವಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರೊಂದಿಗೆ (Terrorists) ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಪೊಲೀಸರು ಹುತಾತ್ಮರಾಗಿದ್ದು, ಇಬ್ಬರು ಉಗ್ರರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

    ಭದ್ರತಾ ಪಡೆಗಳು ಶೋಧ ನಡೆಸುತ್ತಿದ್ದಾಗ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ DSP ಧೀರಜ್ ಕಟೋಚ್, 1 PARA (Special Forces) ಯೋಧ ಸೇರಿ ಐವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂರರಿಂದ ನಾಲ್ಕು ಭಯೋತ್ಪಾದಕರು ಇನ್ನೂ ಅವಿತುಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಸದ್ಯ ಸ್ಥಳದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಶೋಧಕಾರ್ಯ ಮುಂದುವರಿದಿದೆ. ಇದನ್ನೂ ಓದಿ: Jammu Terrorist Attack: ಜಮ್ಮುವಿನಲ್ಲಿ ದಿಢೀರ್‌ ಭಯೋತ್ಪಾದಕ ದಾಳಿ ಹೆಚ್ಚಾಗುತ್ತಿರುವುದು ಏಕೆ?

    Jammui 3

    ಕಥುವಾ ಜಿಲ್ಲೆಯ ಸುಫೈನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕಾಡಿನಲ್ಲಿ ಅಡಗಿದ್ದ ಉಗ್ರರು ಗುಂಡಿನ ದಾಳಿ ನಡೆಸಿದರು. ಮೃತಪಟ್ಟ ಪೊಲೀಸರಲ್ಲಿ ಹೆಡ್ ಕಾನ್ಸ್‌ಟೇಬಲ್‌ ಮತ್ತು ಇಬ್ಬರು ಕಾನ್ಸ್‌ಟೇಬಲ್‌ ಇದ್ದಾರೆ. ಗುಂಡಿನ ದಾಳಿ ತೀವ್ರವಾಗಿದ್ದರಿಂದ ಮೃತದೇಹಗಳನ್ನು ಸ್ಥಳದಿಂದ ಸಾಗಿಸಲು ಸಾಧ್ಯವಾಗಿಲ್ಲ. ಗ್ರೆನೇಡ್ ಮತ್ತು ರಾಕೆಟ್ ದಾಳಿಯಿಂದ ಪ್ರದೇಶವು ತತ್ತರಿಸಿದೆ. ಇದನ್ನೂ ಓದಿ: Jammu & Kashmir | 40 ಅಡಿ ಆಳದ ಕಂದಕಕ್ಕೆ ಉರುಳಿದ ಸೇನೆಯ ಬಸ್‌ – ಮೂವರು ಯೋಧರು ದುರ್ಮರಣ

    ಪ್ರತಿಕೂಲ ಭೂಪ್ರದೇಶದಲ್ಲಿ ಹೆಚ್ಚಿನ ಭಯೋತ್ಪಾದಕರು ಇರುವ ಕಾರಣ ಈವರೆಗೆ ಸಾವನ್ನಪ್ಪಿದ್ದ ಪೊಲೀಸರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಆನೇಕಲ್‌ | ಪತ್ನಿ ತುಂಡರಿಸಿ ಸೂಟ್‌ಕೇಸ್‌ಗೆ ತುಂಬಿದ್ದ ಟೆಕ್ಕಿ ಪತಿ – ಮಹಾರಾಷ್ಟ್ರದಲ್ಲಿ ಹಂತಕ ಅರೆಸ್ಟ್

    ಕಥುವಾ ಉಗ್ರರ ಸ್ವರ್ಗವಾಗುತ್ತಿದೆಯೇ?
    1990ರ ದಶಕದಲ್ಲಿ ಕಥುವಾ (Kathua) ಭಯೋತ್ಪಾದಕರ ದೊಡ್ಡ ನೆಲೆಯಾಗಿ ಗುರುತಿಸಿಕೊಂಡಿತ್ತು. ಇಡೀ ಜಮ್ಮು ಮತ್ತು ಕಾಶ್ಮೀರದಾದ್ಯಂತ ದಾಳಿ ನಡೆಸಲು ಇಲ್ಲಿಯೇ ಉಗ್ರರು ಪ್ಲ್ಯಾನ್‌ ರೂಪಿಸುತ್ತಿದ್ದರು. ಸೇನೆ ವಿರುದ್ಧ ಯುದ್ಧಗಳ ತಯಾರಿಯೂ ಇಲ್ಲಿಯೇ ನಡೆಸುತ್ತಿದ್ದರು. ಕಥುವಾ ಉಧಂಪುರ, ಸಾಂಬಾ ಮತ್ತು ದೋಡಾ ಜಿಲ್ಲೆಗಳ ಪಕ್ಕದಲ್ಲಿದ್ದ ಕಾರಣ ಭದ್ರತಾ ಪಡೆಗಳು ಉಗ್ರರ ಹೆಡೆಮುರಿ ಕಟ್ಟಲು ಇಲ್ಲಿಯೇ ಬೀಡುಬಿಟ್ಟಿರುತ್ತಿದ್ದವು ಎಂದು ಅಲ್ಲಿನ ಪ್ರಾಥಮಿಕ ಮೂಲಗಳು ತಿಳಿಸಿವೆ. ಈಗ ಮತ್ತೆ ಕಥುವಾ ಉಗ್ರರ ನೆಲೆಯಾಗುತ್ತಿದೆಯೇ ಎಂಬ ಸಂಶಯ ಹುಟ್ಟಿಕೊಂಡಿದೆ. ಏಕೆಂದರೆ ಇಲ್ಲಿನ ಭೌಗೋಳಿಕತೆ ವಿಶೇಷವಾಗಿದೆ. ಒಂದು ಬದಿಯಲ್ಲಿ ಪಾಕಿಸ್ತಾನ ಗಡಿ ಇದ್ದರೆ, ಮತ್ತೊಂದು ಬದಿಯಲ್ಲಿ ಹಿಮಾಚಲ ಪ್ರದೇಶ ಇದೆ. ಮುಖ್ಯವಾಗಿ ಅರಣ್ಯ ಪ್ರದೇಶ ದಟ್ಟವಾಗಿರುವುದರಿಂದ ಉಗ್ರರು ತಪ್ಪಿಸಿಕೊಳ್ಳಲು ಅನುಕೂಲಕರ ವಾತಾವರಣ ಇದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಉಗ್ರರು ಈ ಭಾಗದ ನೆಲೆಯನ್ನು ಗುರಿಯಾಗಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

  • ನೂಪುರ್ ಶರ್ಮಾ ಪ್ರತಿಕೃತಿ ಗಲ್ಲಿಗೇರಿಸಿದ ಪ್ರಕರಣ – ಮೂವರು ದುಷ್ಕರ್ಮಿಗಳು ವಶಕ್ಕೆ

    ನೂಪುರ್ ಶರ್ಮಾ ಪ್ರತಿಕೃತಿ ಗಲ್ಲಿಗೇರಿಸಿದ ಪ್ರಕರಣ – ಮೂವರು ದುಷ್ಕರ್ಮಿಗಳು ವಶಕ್ಕೆ

    ಬೆಳಗಾವಿ: ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಹೇಳಿಕೆ ಖಂಡಿಸಿ ನೂಪುರ್ ಶರ್ಮಾ ಅವರ ಪ್ರತಿಕೃತಿಯನ್ನು ನಡುರಸ್ತೆಯಲ್ಲೇ ಗಲ್ಲಿಗೇರಿಸಿದ್ದ ಪ್ರಕರಣ ಸಂಬಂಧ ಬೆಳಗಾವಿ ಪೊಲೀಸರು ಮೂವರು ದುಷ್ಕರ್ಮಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ದೇಶಪಾಂಡೆ ಗಲ್ಲಿಯ ಮೊಹ್ಮದ್ ಶೋಯೆಬ್ ಅಬ್ದುಲ್ ಗಫರ್ ಹಕೀಮ್, ಅಮನ್ ಮೊಕಾಶಿ ಹಾಗೂ ಅರ್ಬಾಜ್ ಮೊಕಾಶಿ ವಶಕ್ಕೆ ಪಡೆಯಲಾದ ಆರೋಪಿಗಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ನೂಪುರ್ ಶರ್ಮಾ ಪ್ರತಿಕೃತಿ ಮಾಡಿ ನೇಣು ಹಾಕಿದ ಕಿಡಿಗೇಡಿಗಳು

    ದೇಶಪಾಂಡೆ ಗಲ್ಲಿಯ ಕಾಂಪ್ಲೆಕ್ಸ್‌ಗೆ ನುಗ್ಗಿ ಹಗ್ಗ ಕಟ್ಟಿ ನೂಪುರ್ ಶರ್ಮಾ ಪ್ರತಿಕೃತಿ ನೇತು ಹಾಕಲಾಗಿತ್ತು. ಕಾಂಪ್ಲೆಕ್ಸ್ ಒಳಗೆ ನುಗ್ಗುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜೂನ್ 9ರ ರಾತ್ರಿ 10.54ಕ್ಕೆ ಕಾಂಪ್ಲೆಕ್ಸ್‌ಗೆ ನುಗ್ಗಿ ಮಧ್ಯರಾತ್ರಿ ವೇಳೆ ಹಗ್ಗ ಕಟ್ಟಿ ಪ್ರತಿಕೃತಿ ನೇತು ಹಾಕಿದ್ದರು. ಕ್ಯಾಮೆರಾದ ದೃಶ್ಯಾವಳಿಗಳು ಹಾಗೂ ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ರಾಜ್ಯಸಭೆಗೆ ಆಯ್ಕೆ ಹಿನ್ನೆಲೆ ಮಂತ್ರಾಲಯ ರಾಯರ ಮಠಕ್ಕೆ ನಟ ಜಗ್ಗೇಶ್ ಭೇಟಿ

  • ಎಸ್‍ಡಿಪಿಐ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ಪೊಲೀಸರು

    ಎಸ್‍ಡಿಪಿಐ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ಪೊಲೀಸರು

    ಬೆಂಗಳೂರು: ಬಿಜೆಪಿ ನಾಯಕಿ ನೂಪರ್ ಶರ್ಮಾ ಹೇಳಿಕೆ ಖಂಡಿಸಿ ನಗರದ ಪ್ರೀಡಂ ಪಾರ್ಕ್‍ನಲ್ಲಿ ಎಸ್‍ಡಿಪಿಐ ಸಂಘಟನೆಯ ಪ್ರತಿಭಟನೆಗೆ ಬೆಂಗಳೂರು ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.

    police (1)

    ಇಂದು ಪ್ರತಿಭಟನೆ ಮಾಡಲು ಎಸ್‍ಡಿಪಿಐ ಸಂಘಟನೆ ಅಧ್ಯಕ್ಷ ಸಲೀಂ ಅನುಮತಿ ಕೇಳಿದ್ದರು. ದೇಶದಲ್ಲಾಗುತ್ತಿರೋ ಬೆಳವಣಿಗೆಯಿಂದ ಎಚ್ಚೆತ್ತ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಇದನ್ನೂ ಓದಿ: ಜಮ್ಮು- ಕಾಶ್ಮೀರದಲ್ಲಿ ಎನ್‍ಕೌಂಟರ್ – ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಓರ್ವ ಹತ್ಯೆ

    ಪ್ರತಿಭಟನೆಗೆ ಸೋಮವಾರದ ನಂತರ ಅನುಮತಿ ನೀಡುವುದಾಗಿ ಪೊಲೀಸರು ಹೇಳಿದ್ದಾರೆ.

  • ಆನ್‍ಲೈನ್‍ನಲ್ಲಿ ಲ್ಯಾಪ್‍ಟಾಪ್ ಮಾರಾಟ ಮಾಡುವುದಾಗಿ ವಂಚನೆ – ಆರೋಪಿ ಅರೆಸ್ಟ್

    ಆನ್‍ಲೈನ್‍ನಲ್ಲಿ ಲ್ಯಾಪ್‍ಟಾಪ್ ಮಾರಾಟ ಮಾಡುವುದಾಗಿ ವಂಚನೆ – ಆರೋಪಿ ಅರೆಸ್ಟ್

    ಬೆಂಗಳೂರು: ಆನ್‍ಲೈನ್‍ನಲ್ಲಿ ಲ್ಯಾಪ್‍ಟಾಪ್ ಮಾರಾಟ ಮಾಡುವುದಾಗಿ ವಂಚಸಿದ್ದ ಆರೋಪಿಯನ್ನು ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

    ದೆಹಲಿ ಮೂಲದ ಅಮನ್ ಕುಮಾರ್ (20) ಬಂಧಿತ ಆರೋಪಿ. ಅಮನ್ ಓಎಲ್‍ಎಕ್ಸ್ ನಲ್ಲಿ 1.50 ಲಕ್ಷ ಮೌಲ್ಯದ ಲ್ಯಾಪ್‍ಟಾಪ್ ಜಾಹೀರಾತು ನೀಡಿದ್ದನು. ಈ ವೇಳೆ ದೂರುದಾರನೊಬ್ಬನು ವಂಚನೆಕೋರನನ್ನು ಸಂಪರ್ಕಿಸಿದ್ದನು. ಈ ಸಂದರ್ಭದಲ್ಲಿ ಆರೋಪಿಯು ಪ್ಯಾಕಿಂಗ್ ಚಾರ್ಜ್, ಶಿಪ್ಪಿಂಗ್ ಚಾರ್ಜ್ ಎಂದು 72 ಸಾವಿರ ರೂ. ಪಡೆದಿದ್ದ. ಇದನ್ನೂ ಓದಿ: ಹಿಜಬ್ ಸಂಘರ್ಷ ಮಧ್ಯೆ ಸಾವರ್ಕರ್ ಫೋಟೋ ವಿವಾದ – ವಿದ್ಯಾರ್ಥಿಗಳ ಮೇಲೆ ಹಲ್ಲೆ

    ದುಡ್ಡು ಪಡೆದ ಬಳಿಕ ಲ್ಯಾಪ್‍ಟಾಪ್ ಬದಲು ಖಾಲಿ ಪಾರ್ಸೆಲ್ ರವಾನಿಸಿದ್ದಾನೆ. ಈ ಕುರಿತು ಈಶಾನ್ಯ ವಿಭಾಗದ ಸೈಬರ್ ಕ್ರೈಮ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಸೆರೆಹಿಡಿಯಲಾಗಿದೆ. ಇದನ್ನೂ ಓದಿ: ಮುಸ್ಲಿಂ ಸಂಘಟನೆಗಳ ಪ್ರತಿಭಟನೆ – ಬೆಂಗಳೂರಿನ ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ

  • ಮುಸ್ಲಿಂ ಸಂಘಟನೆಗಳ ಪ್ರತಿಭಟನೆ – ಬೆಂಗಳೂರಿನ ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ

    ಮುಸ್ಲಿಂ ಸಂಘಟನೆಗಳ ಪ್ರತಿಭಟನೆ – ಬೆಂಗಳೂರಿನ ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ

    ಬೆಂಗಳೂರು: ದೇಶದೇಲ್ಲಡೆ ಮುಸ್ಲಿಂ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆ ಬೆಂಗಳೂರು ಪೊಲೀಸರು ಅಲರ್ಟ್ ಆಗಿದ್ದಾರೆ.

    ನಗರದ ಸೂಕ್ಷ್ಮಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ. ಸ್ಥಳೀಯ ಪೊಲೀಸರ ಜೊತೆಗೆ ಕೆಎಸ್‍ಆರ್‌ಪಿ ತುಕಡಿಗಳ ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಹಿಜಬ್ ಸಂಘರ್ಷ ಮಧ್ಯೆ ಸಾವರ್ಕರ್ ಫೋಟೋ ವಿವಾದ – ವಿದ್ಯಾರ್ಥಿಗಳ ಮೇಲೆ ಹಲ್ಲೆ

    ನಗರದ ಯಶವಂತಪುರ ಸರ್ಕಲ್, ಗೋರಿಪಾಳ್ಯ, ಪಾದರಾಯನಪುರ, ಅಜಾದ್ ನಗರ, ಶಿವಾಜಿ ನಗರ, ನಿಲಸಂದ್ರ, ಬಕ್ಷಿ ಗಾರ್ಡನ್, ಕೆ.ಆರ್ ಮಾರ್ಕೆಟ್ ಸೇರಿದಂತೆ ಹಲವು ಕಡೆ ಬೀಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.

    ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸುವಂತೆ ಪೊಲೀಸ್ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

  • ಗೋಮಾಂಸ ಸಾಗಿಸುತ್ತಿದ್ದ ಇಬ್ಬರು ಅರೆಸ್ಟ್

    ಗೋಮಾಂಸ ಸಾಗಿಸುತ್ತಿದ್ದ ಇಬ್ಬರು ಅರೆಸ್ಟ್

    ಬೆಳಗಾವಿ: ಕರ್ನಾಟಕದಿಂದ ಗೋವಾ ರಾಜ್ಯಕ್ಕೆ ಗೋಮಾಂಸ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ತಡರಾತ್ರಿ ಹಿರೇಬಾಗೇವಾಡಿ ಪೊಲೀಸರು ಬಂಧಿಸಿದ್ದರು.

    ಗೋವಾದ ಮಡಗಾವ್‍ನ ಹುಸೇನ್ ದೇಸಾಯಿ ಹಾಗೂ ಆಜಾದ್ ಕಾದ್ರೊಳ್ಳಿ ಎಂಬ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರು ಬೆಳಗಾವಿ ತಾಲೂಕಿನ ಹಾಲಗಿಮರಡಿ ಕ್ರಾಸ್ ಮೂಲಕ ಎರಡು ವಾಹನಗಳಲ್ಲಿ ಅಕ್ರಮವಾಗಿ ಗೋವಾ ರಾಜ್ಯಕ್ಕೆ ಗೋಮಾಂಸವನ್ನು ಸಾಗಿಸುತ್ತಿದ್ದರು.

    ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಹಿರೇಬಾಗೆವಾಡಿ ಪೊಲೀಸರು ಗೋಮಾಂಸ ಸಮೇತ ಇಬ್ಬರು ಆರೋಪಿಗಳು ಮತ್ತು ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳನ್ನು ಬಂಧಿಸುವ ವೇಳೆ ಪೊಲೀಸ್ ಸಿಬ್ಬಂದಿ ನಾಗಪ್ಪ ಸುತಗಟ್ಟಿ ಕೂಡ ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ದೊರೆತಿದ್ದು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಕಾರ್ಯಾಚರಣೆಯಲ್ಲಿ ಹಿರೇಬಾಗೇವಾಡಿ ಠಾಣೆ ಸಿಪಿಐ ವಿಜಯಕುಮಾರ್ ಸಿನ್ನೂರ್ ಮಾರ್ಗದರ್ಶನದಲ್ಲಿ ಪಿಎಸ್‍ಐ ಶಶಿಕುಮಾರ್ ಕೊರಲೆ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಭಾಗಿಯಾಗಿದ್ದರು.

  • ಕಾನ್ಪುರ ಹಿಂಸಾಚಾರ – 40 ದಂಗೆಕೋರರ ಫೋಟೋ ರಿಲೀಸ್, ಇಬ್ಬರು ಅರೆಸ್ಟ್

    ಕಾನ್ಪುರ ಹಿಂಸಾಚಾರ – 40 ದಂಗೆಕೋರರ ಫೋಟೋ ರಿಲೀಸ್, ಇಬ್ಬರು ಅರೆಸ್ಟ್

    ಲಕ್ನೋ: ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಕಾನ್ಪುರ ಪೊಲೀಸರು ಗಂಟೆಗಳ ಸಿಸಿಟಿವಿ ಮತ್ತು ವೀಡಿಯೋ ತುಣುಕಿನ ಮೂಲಕ 40 ಗಲಭೆಕೋರರ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ.

    ಶುಕ್ರವಾರದ ಹಿಂಸಾಚಾರದಲ್ಲಿ ಈ ವ್ಯಕ್ತಿಗಳು ಸಕ್ರಿಯ ಪಾತ್ರ ವಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ 40 ಗಲಭೆಕೋರರ ಫೋಟೋಗಳನ್ನು ಬಿಡುಗಡೆ ಮಾಡಿದ ಪೊಲೀಸರು, ಸಾರ್ವಜನಿಕರಿಗೆ ಇವರ ಬಗ್ಗೆ ಯಾವುದೇ ಮಾಹಿತಿ ಸಿಕ್ಕರೂ ಕೂಡಲೇ ತಿಳಿಸಿ ಎಂದು ಘೋಷಿಸಿದ್ದಾರೆ.

    ಫೋಟೋಗಳು ಸಾರ್ವಜನಿಕವಾಗಿ ಪ್ರಕಟವಾದಾಗಿನಿಂದ ಪೊಲೀಸರಿಗೆ ಫೋನ್ ಕರೆಗಳು ಬರುತ್ತಿವೆ. 40 ಶಂಕಿತರ ಪೈಕಿ ನಾಲ್ವರ ಬಗ್ಗೆ ಅವರಿಗೆ ಮಾಹಿತಿ ಸಿಕ್ಕಿದ್ದು, ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಈದ್ಗಾ ಮೈದಾನ ವಿವಾದ- ಇಕ್ಕಟ್ಟಿಗೆ ಸಿಲುಕಿದ ಚಾಮರಾಜಪೇಟೆ ಪೊಲೀಸರು

    ಉತ್ತರ ಪ್ರದೇಶ ಪೊಲೀಸರು ಹಿಂಸಾಚಾರದ ಪ್ರಮುಖ ಶಂಕಿತ ವ್ಯಕ್ತಿಗಳ ಫೋಟೋಗಳನ್ನು ಪೀಡಿತ ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರಮುಖ ಸ್ಥಳಗಳಲ್ಲಿ ಹಾಕಲು ನಿರ್ಧರಿಸಿದ್ದಾರೆ. ಅಲ್ಲದೇ ಶಂಕಿತರ ಬಗ್ಗೆ ಮಾಹಿತಿ ನೀಡಲು ಫೋಟೋಗಳ ಕೆಳಗೆ ಸ್ಟೇಷನ್ ಹೌಸ್ ಅಧಿಕಾರಿಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಸಂಪರ್ಕ ಸಂಖ್ಯೆಯನ್ನು ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಜೂನ್ 3 ರ ಹಿಂಸಾಚಾರದಲ್ಲಿ ಭಾಗವಹಿಸಿದ್ದಾರೆ ಎನ್ನಲಾದ ಸುಮಾರು 20 ಪ್ರಮುಖ ಆರೋಪಿಗಳ ಭಾವಚಿತ್ರವಿರುವ 25 ಫೋಟೋಗಳನ್ನು ಪೀಡಿತ ಪ್ರದೇಶಗಳು ಮತ್ತು ಸುತ್ತಮುತ್ತಲಿನ ಪ್ರಮುಖ ಸ್ಥಳಗಳಲ್ಲಿ ಹಾಕಲಾಗುವುದು ಎಂದು ಉಪ ಪೊಲೀಸ್ ಆಯುಕ್ತ (ಪೂರ್ವ), ಪ್ರಮೋದ್ ಕುಮಾರ್ ತಿಳಿಸಿದರು. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಸಂಪೂರ್ಣ ಪಠ್ಯ ಪುಸ್ತಕ ಪರಿಷ್ಕರಣೆ ಕೈ ಬಿಡೋಲ್ಲ: ಬಿ.ಸಿ.ನಾಗೇಶ್

    ನಾವು ಇನ್ನೂ 100 ಗಲಭೆಕೋರರನ್ನು ಸಿಸಿಟಿವಿ ದೃಶ್ಯಗಳು ಮತ್ತು ವೀಡಿಯೊ ತುಣುಕುಗಳ ಮೂಲಕ ಗುರುತಿಸಿದ್ದೇವೆ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್, ಕಾನೂನು ಮತ್ತು ಸುವ್ಯವಸ್ಥೆ ಆನಂದ್ ಪ್ರಕಾಶ್ ತಿವಾರಿ ತಿಳಿಸಿದ್ದಾರೆ.

    ಟಿವಿ ಚರ್ಚೆಯೊಂದರಲ್ಲಿ ಪ್ರವಾದಿ ಮುಹಮ್ಮದ್ ವಿರುದ್ಧ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರು ಮಾಡಿದ ಟೀಕೆ ಖಂಡಿಸಿ ಜನರು ಬಲವಂತವಾಗಿ ಅಂಗಡಿ ಮುಚ್ಚಲು ಮುಂದಾಗಿದ್ದರು. ಇದಕ್ಕೆ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದ್ದಕ್ಕೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಕಲ್ಲು ತೂರಾಟ ನಡೆದಿತ್ತು. ಪೊಲೀಸರು ಟಿಯರ್ ಗ್ಯಾಸ್ ಬಳಸಿ ಘರ್ಷಣೆಯನ್ನು ನಿಲ್ಲಿಸಿದ್ದರು.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 38 ಮಂದಿಯನ್ನು ಬಂಧಿಸಿದ್ದಾರೆ.

  • ಮಾರುವೇಶದಲ್ಲಿ ಪೊಲೀಸರ ದಾಳಿ – 400 ಕೆ.ಜಿ ದನದ ಮಾಂಸ ವಶ

    ಮಾರುವೇಶದಲ್ಲಿ ಪೊಲೀಸರ ದಾಳಿ – 400 ಕೆ.ಜಿ ದನದ ಮಾಂಸ ವಶ

    ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ಬಡಾ ಉಚ್ಚಿಲ ಗ್ರಾಮ ಪಂಚಾಯತ್ ಸದಸ್ಯ ರಫೀಕ್ ಯಾನೇ, ಡಿಯೋ ರಫೀಕ್ ಉಸ್ತುವಾರಿವಾರಿಯಲ್ಲಿ ಉಚ್ಚಿಲ ಭಾಸ್ಕರ ನಗರದಲ್ಲಿ ನಡೆಯುತ್ತಿದ್ದ ಬೃಹತ್ ಅಕ್ರಮ ಕಸಾಯಿಖಾನಿಗೆ ಪೊಲೀಸರು ದಾಳಿ ಮಾಡಿದ್ದಾರೆ.

    ಸರ್ಕಲ್ ಇನ್ಸ್‌ಪೆಕ್ಟರ್ ಹಾಗೂ ಪಡುಬಿದ್ರಿ ಎಸ್‍ಐ ನೇತೃತ್ವದಲ್ಲಿ ದಾಳಿ ನಡೆಸಿದ ವೇಳೆ ಭಾರೀ ದನದ ಮಾಂಸ ಸಹಿತ ಜೀವಂತ ದನ ಪತ್ತೆಯಾಗಿದೆ. ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಪಡುಬಿದ್ರೆ ವ್ಯಾಪ್ತಿಯಲ್ಲಿ ಹಲವು ಮನೆಗಳಲ್ಲಿ ಅಕ್ರಮವಾಗಿ ದನವನ್ನು ಕಡಿಯಲಾಗುತ್ತದೆ ಎಂಬ ಮಾಹಿತಿ ಪೊಲೀಸರಿಗೆ ತಿಳಿದಿತ್ತು. ಮಾಂಸ ಮಾರುವವರು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಓಡಾಡಿಕೊಂಡಿದ್ದರು. ಪಡುಬಿದ್ರಿ ಪೊಲೀಸ್ ಠಾಣೆಯ ಸಿಬ್ಬಂದಿ ಮಾರುವೇಷದಲ್ಲಿ ಮನೆಯೊಂದಕ್ಕೆ ದಾಳಿ ಮಾಡಿದಾಗ ಜೀವಂತ ಜನ ದನದ ಮಾಂಸ ಮತ್ತು ಆರೋಪಿಗಳು ಸಿಕ್ಕಿಹಾಕಿಕೊಂಡಿದ್ದಾರೆ.  ಇದನ್ನೂ ಓದಿ: ಉಡದ ಮೇಲೆ ಅತ್ಯಾಚಾರಗೈದ ನಾಲ್ವರು ಅರೆಸ್ಟ್

    ದಿನಕ್ಕೊಂದು ಮನೆಗಳೇ ಹಸುವಿನ ವಧಾ ಸ್ಥಳ. ಪ್ರಮುಖ ಆರೋಪಿ ರಫೀಕ್ ಯಾನೇ, ಡಿಯೋ ರಫೀಕ್ ಪೊಲೀಸ್ ದಾಳಿ ವೇಳೆ ಪರಾರಿಯಾಗಿದ್ದು, ಇನ್ನೊರ್ವ ಆರೋಪಿ ಮನೆ ಮಾಲೀಕ ಸಾಬನ್ ತಲೆ ಮರೆಸಿಕೊಂಡಿದ್ದಾನೆ. ಉಳಿದಂತೆ ಕಳತ್ತೂರು ಸೂರ್ಯಗುಡ್ಡೆ ನಿವಾಸಿಗಳಾದ ಮಹಮ್ಮದ್ ರಫೀಕ್ (44), ಇಲಿಯಾಸ್ (38), ಉಚ್ಚಿಲ ಭಾಸ್ಕರ ನಗರ ಬಿಸ್ಮಿಲ್ಲಾ ಸ್ಕೋರ್ ಬಳಿ ನಿವಾಸಿ ಮೋಹಿನ್ ಉದ್ಧೀನ್ (17), ಮೂಳೂರು ಸುನ್ನಿ ಸೆಂಟರ್ ಬಳಿ ನಿವಾಸಿ ಮೊಯಿದಿನಬ್ಬ (40) ಬಂಧಿತ ಆರೋಪಿಗಳು ಯಾರಿಗೂ ಸಂಶಯ ಬರಬಾರದು ಎಂದು ದಿನಕ್ಕೊಂದು ಮನೆಯಲ್ಲಿ ಮಾಂಸ ಮಾಡುತ್ತಿದ್ದರು.

    ನಿಖರ ಮಾಹಿತಿ ದೊರೆತ ಹಿನ್ನಲೆಯಲ್ಲಿ ಕಾಪು ಸರ್ಕಲ್ ಇನ್ಸ್‌ಪೆಕ್ಟರ್ ಪ್ರಕಾಶ್ ಹಾಗೂ ಪಡುಬಿದ್ರಿ ಎಸ್‍ಐ ಪುರುಷೋತ್ತಮ್ ತಂಡ ಮಸೀದಿ ಸಮೀಪ ಸುತ್ತಲೂ ಮುಸ್ಲಿಂ ಮನೆಗಳಿರುವ ಪ್ರದೇಶದ ಮಧ್ಯೆ ಭಾಗದ ಸಾಬನ್ ಮನೆಯನ್ನೇ ಅಕ್ರಮ ಕಸಾಯಿಖಾನೆಯನ್ನಾಗಿ ಮಾಡಿಕೊಂಡು, ರಾಜಾರೋಷವಾಗಿ ದನಗಳನ್ನು ಕಡಿದು ಮಾಂಸ ಮಾಡುತ್ತಿದ್ದರು. ಈ ವೇಳೆ ದಿಢೀರ್ ದಾಳಿ ನಡೆಸಿದಾಗ ಡಿಯೋ ರಫೀಕ್ ತಪ್ಪಿಸಿಕೊಂಡಿದ್ದಾನೆ. ಸ್ಥಳದಲ್ಲಿದ್ದ ಉಳಿದವರನ್ನು ಪೊಲೀಸ್ ತಂಡ ಬಂಧಿಸಿದೆ. ಮೂರು ದನಗಳನ್ನು ಕಡಿದು ಮಾಂಸ ಮಾಡಲಾದ 400 ಕೆ.ಜಿ ಮಾಂಸ ಸ್ಥಳದಲ್ಲೇ ಪತ್ತೆಯಾಗಿದೆ. ಇದನ್ನೂ ಓದಿ: ಹಸು ಜೊತೆಗೆ ಸೆಕ್ಸ್ – ವಿಕೃತ ಕಾಮಿ ಅರೆಸ್ಟ್

    ಪೊಲೀಸ್ ದಾಳಿಯಾಗುತ್ತಿದಂತೆ ಒಂದು ದನದ ಕತ್ತಿಗೆ ಚೂರಿ ಇರಿದ ಪರಿಣಾಮ ಪೊಲೀಸ್ ಮುಂಭಾಗದಲ್ಲೇ ಒದ್ದಾಟ ನಡೆಸಿ ಪ್ರಾಣ ಬಿಟ್ಟಿರುವ ದೃಶ್ಯ ಪೊಲೀಸರ ಕೋಪ ನೆತ್ತಿಗೇರುವಂತೆ ಮಾಡಿದೆ. ಜೀವಂತ ದನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಂದ ಒಂದು ಸ್ಕೂಟರ್ ಸಹಿತ ಕೃತ್ಯಕ್ಕೆ ಬಳಸಲಾಗಿದ್ದ ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.

  • ಪುಷ್ಪ ಸಿನಿಮಾ ಮಾದರಿಯಲ್ಲಿ ರಕ್ತಚಂದನ ಸಾಗಾಟ- ಶ್ವಾನದೊಂದಿಗೆ ರೋಚಕ ಆಪರೇಷನ್

    ಪುಷ್ಪ ಸಿನಿಮಾ ಮಾದರಿಯಲ್ಲಿ ರಕ್ತಚಂದನ ಸಾಗಾಟ- ಶ್ವಾನದೊಂದಿಗೆ ರೋಚಕ ಆಪರೇಷನ್

    ಬೆಂಗಳೂರು: ಪುಷ್ಪ ಸಿನಿಮಾ ಮಾದರಿಯಲ್ಲಿ ಖತರ್ನಾಕ್ ಗ್ಯಾಂಗ್ ರಕ್ತಚಂದನ ಸಾಗಾಟ ನಡೆಸುತ್ತಿದ್ದ ವೇಳೆ ಅರಣ್ಯ ಇಲಾಖೆಯ ಶ್ವಾನವೊಂದು ಅವರ ಇಡೀ ಪ್ಲ್ಯಾನ್‍ನ್ನು ತಲೆಕೆಳಗೆ ಮಾಡಿಬಿಟ್ಟಿದೆ.

    ಪುಷ್ಪ ಸಿನಿಮಾದ ರಕ್ತಚಂದನದ ಕಳ್ಳತನದ ಸೀನ್ ಅನ್ನು ಈಗ ನಕಲು ಮಾಡಿಕೊಂಡು ಖತರ್ನಾಕ್ ಗ್ಯಾಂಗ್‍ಗಳು ಕಳ್ಳತನ ಮಾಡಲಾರಂಭಿಸಿದೆ. ಈಗ ಅಂಥದ್ದೇ ಗ್ಯಾಂಗ್‍ನಿಂದ 28 ಲಕ್ಷ ಮೌಲ್ಯದ ರಕ್ತಚಂದನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ. ರಾತ್ರಿ ವೇಳೆಯಲ್ಲಿ ಬೆಂಗಳೂರು ಗ್ರಾಮಾಂತರದ ಕಟ್ಟಿಗೇನಹಳ್ಳಿಯಲ್ಲಿ ತರಕಾರಿ ಕ್ರೇಟ್ ಹಾಕಿ ಕೆಳಭಾಗದಲ್ಲಿ ರಕ್ತಚಂದನ ಹಾಕಿ ಸಾಗಾಟ ಮಾಡುತ್ತಿದ್ದ ಗ್ಯಾಂಗ್‍ನ್ನು ಅರಣ್ಯ ಇಲಾಖೆಯ ಗಾರ್ಡ್ ಮಲ್ಲಿಕಾರ್ಜುನ್ ಚೇಸ್ ಮಾಡಿದ್ದಾರೆ. ಇದನ್ನೂ ಓದಿ: ದೇಶದ ಒಳಿತಿಗಾಗಿ ಪ್ರಧಾನಿ ಸ್ಥಾನವನ್ನು ತ್ಯಾಗ ಮಾಡಿದವರಿಗೆ ಕೊಡುವ ಬೆಲೆ ಇದೆಯೇ?: ಕೇಂದ್ರ ಸರ್ಕಾರಕ್ಕೆ ಡಿಕೆಶಿ ಪ್ರಶ್ನೆ

    ಅವರ ಜೊತೆ ಇದ್ದ ಇಲಾಖೆ ಶ್ವಾನ ಸೀಸರ್ ಅಲಿಯಾಸ್ ಸ್ವೀಟಿ ಕೂಡ ಈ ಕಳ್ಳರನ್ನು ಚೇಸ್ ಮಾಡಿದೆ. ಗಾಬರಿಯಾಗಿ ಅಡ್ಡಾದಿಡ್ಡಿ ಗಾಡಿ ಚಲಾಯಿಸಿದ ಕಳ್ಳರು, ಬಯಲಿನಲ್ಲಿ ಗಾಡಿ ನಿಲ್ಲಿಸಿ ಗಾಡಿ ಲಾಕ್ ಮಾಡಿ ಕೀ ಸಮೇತ ಪರಾರಿಯಾಗಿದ್ದಾರೆ. ಸದ್ಯ 28 ಲಕ್ಷ ಮೌಲ್ಯದ 497 ಕೆಜಿ ರಕ್ತಚಂದನ ಮರದ ತುಂಡು, 61 ಕೆಜಿ ಚಿಕ್ಕ ಚಕ್ಕೆಯನ್ನು ಜಪ್ತಿಮಾಡಿದ್ದಾರೆ. ಅರಣ್ಯ ಇಲಾಖೆಯ ಹಿರಿಯ ಡಿಸಿಎಫ್ ಗಂಗಾಧರ್, ಸಿಬ್ಬಂದಿಯ ಈ ಕಾರ್ಯವನ್ನು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಸಚಿವ ಬಿ.ಸಿ ನಾಗೇಶ್ ಮನೆ ಮೇಲೆ NSUI ದಾಳಿ

    ಸದ್ಯ ಕಮ್ಮಗೊಂಡನಹಳ್ಳಿಯಲ್ಲಿ ರಕ್ತಚಂದನ ಇಡಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗೆ ಬಲೆಬೀಸಲಾಗಿದೆ.

  • ಪೊಲೀಸರಿಂದ ದೌರ್ಜನ್ಯ ಆರೋಪ – ನಾಲ್ವರ ಹೆಸರು ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ

    ಪೊಲೀಸರಿಂದ ದೌರ್ಜನ್ಯ ಆರೋಪ – ನಾಲ್ವರ ಹೆಸರು ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ

    ಕಲಬುರಗಿ: ಶಹಬಾದ ತಾಲೂಕಿನ ಮರತೂರ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದೀಗ ಪೊಲೀಸರ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ.

    ಮಂಜುನಾಥ್ ಅಲಿಯಾಸ್ ಮನೋಜ್ ಸಿಂದೆ (32) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮನೋಜ್ ಅವರ ಪತ್ನಿಯ ಅಣ್ಣ ಮತ್ತು ಆತನ ಪತ್ನಿಯ ನಡುವೆ ಕೌಟುಂಬಿಕ ಕಲಹ ಇದೆ ಎನ್ನಲಾಗಿದೆ. ಈ ನಡುವೆ ಅಣ್ಣನ ಮಗು ಕಾಣೆಯಾಗಿದೆ. ಮಗು ಕಾಣೆಯಾಗಲು ನೀವೇ ಕಾರಣ ಅಂತ ಮನೋಜ್ ಹಾಗೂ ಅವರ ಪತ್ನಿ ಹೆಸರಿನಲ್ಲಿ ಠಾಣೆಗೆ ದೂರು ನೀಡಲಾಗಿತ್ತು. ಇದನ್ನೂ ಓದಿ: ತೃತೀಯ ರಂಗ ರಚನೆಗೆ ದೇವೇಗೌಡರ ಜೊತೆ ಚಂದ್ರಶೇಖರ್ ರಾವ್ ಚರ್ಚೆ

    police (1)

    ದೂರಿನ ಹಿನ್ನೆಲೆ ಆತನನ್ನು ಠಾಣೆಗೆ ಎಳೆದೊಯ್ದ ಪೊಲೀಸರು, ಎರಡು ದಿನ ಠಾಣೆಯಲ್ಲಿ ಕೂಡಿ ಹಾಕಿ ಮನಬಂದಂತೆ ಥಳಿಸಿದ್ದಾರೆ. ಈ ವೇಳೆ ವ್ಯಕ್ತಿಯು ಮಗುವಿನ ನಾಪತ್ತೆಯಲ್ಲಿ ನಮ್ಮ ಕೈವಾಡ ಇಲ್ಲ ಅಂತ ಹೇಳಿದರೂ ಕೇಳದ ಪೊಲೀಸರು ಇವತ್ತು ನಿನ್ನನ್ನು ಮಾತ್ರ ಎಳೆದು ತಂದಿದ್ದೇವೆ. ನಾಳೆ ನಿನ್ನ ಹೆಂಡತಿಯನ್ನೂ ಕೂಡ ಎಳೆದು ತರುತ್ತೇವೆ ಅಂತ ಅವಾಜ್ ಹಾಕಿದ್ದಾರೆ. ಪೊಲೀಸರ ದೌರ್ಜನ್ಯ, ಹೊಡೆತದಿಂದ ಮಾನಸಿಕ ಹಾಗೂ ದೈಹಿಕ ಹಿಂಸೆ ಅನುಭವಿಸಿದ ಮನೋಜ್ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ:  ತಲೆಗೆ 25 ಲಕ್ಷ ಬಹುಮಾನ ಘೋಷಣೆಗೆಯಾಗಿದ್ದ ನಕ್ಸಲ್‌ ನಾಯಕ ಶವವಾಗಿ ಪತ್ತೆ

    ವಿನಾಕಾರಣ ನನ್ನ ಹಾಗೂ ನನ್ನ ಹೆಂಡತಿ ಮೇಲೆ ಪೊಲೀಸ್ ಠಾಣೆಗೆ ದೂರು ನೀಡಿ ಮರ್ಯಾದೆ ಹರಾಜು ಮಾಡಿದ್ದಾರೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಸಾಯಬಣ್ಣಾ ಜೋಗುರ, ಶರಣಮ್ಮ ನಾಟೀಕರ್, ಪ್ರತಿಭಾ ನಾಗೇಶ್ ಹಾಗೂ ಪ್ರತಿಭಾಳ ತಾಯಿ ನಾಲ್ವರ ಹೆಸರು ಡೆತ್‍ನೋಟ್‍ನಲ್ಲಿ ಬರೆದಿದ್ದಾರೆ.

    ಘಟನೆಯ ಕುರಿತು ಮನೋಜ್ ಶವವನ್ನು ಶಹಬಾದ್ ಪೊಲೀಸ್ ಠಾಣೆ ಎದುರಿಗಿಟ್ಟು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.