Tag: Policeman

  • ಕೈಯಲ್ಲಿ ಪೆಟ್ರೋಲ್, ಕೊರಳಲ್ಲಿ ಬಾಂಬ್‍ಗಳು: ಪತ್ನಿಗಾಗಿ ಅತ್ತೆ-ಮಾವನ ಮುಂದೆ ಅಳಿಯನ ಹೈಡ್ರಾಮಾ

    ಕೈಯಲ್ಲಿ ಪೆಟ್ರೋಲ್, ಕೊರಳಲ್ಲಿ ಬಾಂಬ್‍ಗಳು: ಪತ್ನಿಗಾಗಿ ಅತ್ತೆ-ಮಾವನ ಮುಂದೆ ಅಳಿಯನ ಹೈಡ್ರಾಮಾ

    ಚೆನ್ನೈ: ನನ್ನೊಂದಿಗೆ ಸಂಸಾರ ನಡೆಸಲು ಪತ್ನಿಯನ್ನು ಕಳುಹಿಸಿ, ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ವ್ಯಕ್ತಿಯೊಬ್ಬ ವಿಚಿತ್ರವಾಗಿ ಅತ್ತೆ-ಮಾವನ ಮುಂದೆ ಹೈಡ್ರಾಮಾ ಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ಕಡಲೂರು ಜಿಲ್ಲೆಯ ನಿವಾಸಿ ಮಣಿಕಂಠನ್ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ. ಅದೇ ಜಿಲ್ಲೆಯ ನೈವೇಲಿಯಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ವಿಷ ಸೇವಿಸಿದ್ದ ಮಣಿಕಂಠನ್‍ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇದನ್ನೂ ಓದಿ: ಸಂಸಾರ ನಡೆಸೋಣ ಬಾ ಎಂದ ಪತಿಯ ಮರ್ಮಾಂಗವನ್ನೇ ಕತ್ತರಿಸಿದ ಪತ್ನಿ

    ಮಣಿಕಂಠನ್ ನೈವೇಲಿಯ ಯುವತಿಯೊಂದಿಗೆ ಮದುವೆಯಾಗಿದ್ದಾನೆ. ದಂಪತಿಗೆ ಒಂದು ಮಗು ಕೂಡ ಇದೆ. ಆದರೆ ಕೌಟುಂಬಿಕ ಕಲಹದಿಂದಾಗಿ ಪತ್ನಿ ತವರು ಮನೆ ಸೇರಿದ್ದಾಳೆ. ಪತ್ನಿ ಮತ್ತೆ ಮನೆಗೆ ಬರುತ್ತಾಳೆ ಎಂದು ಕಾಯುತ್ತಿದ್ದ ಮಣಿಕಂಠನ್ ಭರವಸೆ ಹುಸಿಯಾಗಿತ್ತು. ಅಷ್ಟೇ ಅಲ್ಲದೆ ದಂಪತಿಯ ವಿಚ್ಛೇದನವು ಕೋರ್ಟ್ ಮೆಟ್ಟಿಲೇರಿದೆ. ಇದನ್ನೂ ಓದಿ: ಪ್ರೀತಿ ನಿರಾಕರಿಸಿದ್ದಕ್ಕೆ ಗುಪ್ತಾಂಗಕ್ಕೆ ಸ್ಕ್ರೂ ಡ್ರೈವರ್‌ನಿಂದ ಇರಿತ – ಐಸಿಯುನಲ್ಲಿದ್ದ ಯುವತಿ ಸಾವು

    ನನಗೆ ವಿಚ್ಛೇದನ ಬೇಡ, ಮಗು-ಪತ್ನಿಯನ್ನು ನನ್ನ ಜೊತೆಗೆ ಕಳುಹಿಸಿ ಎಂದು ಮಣಿಕಂಠನ್ ಅತ್ತೆ-ಮಾವರನ್ನು ಒತ್ತಾಯಿಸಿದ್ದ. ಆದರೆ ಅವರು ನಿರಾಕರಿಸಿದ್ದರಿಂದ ಅಸಮಾಧಾನಗೊಂಡ ಮಣಿಕಂಠನ್, ಕೈಯಲ್ಲಿ ಪೆಟ್ರೋಲ್, ಕೊರಳಲ್ಲಿ ಬಾಬ್‍ಗಳನ್ನು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಮಾವನ ಮನೆಯ ಮುಂದೆ ಹೈಡ್ರಾಮಾ ಸೃಷ್ಟಿಸಿದ್ದ. ಇದರಿಂದ ಗಾಬರಿಕೊಂಡ ಮಣಿಕಂಠನ್ ಅತ್ತೆ-ಮಾವ ತಡೆಯಲು ಯತ್ನಿಸಿದ್ದಾರೆ. ಆದರೆ ಮಣಿಕಂಠನ್ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಮತ್ತಷ್ಟು ಆತಂಕ ಸೃಷ್ಟಸಿದ್ದ. ಇದೇ ವೇಳೆ ಘಟನಾ ಸ್ಥಳದಲ್ಲಿ ಹಾದು ಹೋಗುತ್ತಿದ್ದ ಪೊಲೀಸ್ ಪೇದೆಯೊಬ್ಬರು ಮಣಿಕಂಠನ್ ಹೈಡ್ರಾಮಾ ಗಮನಿಸಿ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು, ಮಣಿಕಂಠನ್‍ನ ಮನವೊಲಿಸಲು ಪ್ರಯತ್ನಿಸಿದರು. ಆದರೆ ಆತ ಮಾತ್ರ ಯಾವುದಕ್ಕೂ ಕಿವಿಗೊಡಲಿಲ್ಲ. ಬಳಿಕ ಅಧಿಕಾರಿಗಳು ಮಣಿಕಂಠನ್‍ನ ಎರಡು ವರ್ಷದ ಮಗುವನ್ನು ಮನೆಯಿಂದ ಹೊರ ಕರೆತಂದರು. ಆಗ ಮಗುವನ್ನು ನೋಡಿದ ಮಣಿಕಂಠನ್‍ನ ಮನಸ್ಸು ಕರಗಿತು. ತಾನು ಹಾಕಿಕೊಂಡಿದ್ದ ಬಾಂಬ್‍ಗಳ ಸರವನ್ನು ತೆಗೆದ ಎಂದು ಪೊಲೀಸರು ತಿಳಿಸಿದ್ದಾರೆ.

    ಹೈಡ್ರಾಮಾ ವೇಳೆ ತಾನು ವಿಷ ಕುಡಿದಿರುವುದಾಗಿ ಮಣಿಕಂಠನ್ ಪೊಲೀಸರಿಗೆ ಮಾಹಿತಿ ನೀಡಿದ್ದ. ಹೀಗಾಗಿ ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದೃಷ್ಟವಶಾತ್ ಮಣಿಕಂಠನ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವರದಿಯಾಗಿದೆ.

    ಈ ಸಂಬಂಧ ಪೊಲೀಸರು ಮಣಿಕಂಠನ್, ಆತನ ಪತ್ನಿ ಹಾಗೂ ಕುಟುಂಬದವರನ್ನು ವಿಚಾರಣೆ ನಡೆಸಿದ್ದಾರೆ. ಜೊತೆಗೆ ಮಣಿಕಂಠನ್‍ಗೆ ಕಚ್ಚಾ ಬಾಂಬ್‍ಗಳು ಎಲ್ಲಿಂದ ಲಭ್ಯವಾದವು ಎನ್ನುವ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • `ನನ್ನ ಎಲ್ಲ ಬೇಡಿಕೆಯನ್ನು ಆದಿತ್ಯನಾಥ್ ಒಪ್ಪಿಕೊಂಡಿದ್ದಾರೆ’- ಖಾಕಿಗಳ ಗುಂಡೇಟಿಗೆ ಬಲಿಯಾದ ಆಪಲ್ ಸಿಬ್ಬಂದಿಯ ಪತ್ನಿ

    `ನನ್ನ ಎಲ್ಲ ಬೇಡಿಕೆಯನ್ನು ಆದಿತ್ಯನಾಥ್ ಒಪ್ಪಿಕೊಂಡಿದ್ದಾರೆ’- ಖಾಕಿಗಳ ಗುಂಡೇಟಿಗೆ ಬಲಿಯಾದ ಆಪಲ್ ಸಿಬ್ಬಂದಿಯ ಪತ್ನಿ

    ಲಕ್ನೋ: ಪೊಲೀಸರ ಗುಂಡಿಗೆ ಬಲಿಯಾಗಿದ್ದ ಆ್ಯಪಲ್ ಕಂಪನಿ ಸೇಲ್ಸ್ ಮಾನೇಜರ್ ವಿವೇಕ್ ತಿವಾರಿ ಕುಟುಂಬಕ್ಕೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು 35 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

    ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿವಾಸಕ್ಕೆ ಇಂದು ವಿವೇಕ್ ತಿವಾರಿ ಪತ್ನಿ ಕಲ್ಪನಾ ತಿವಾರಿ ಭೇಟಿ ನೀಡಿದ್ದರು. ಅವರ ಜೊತೆಗೆ 25 ನಿಮಿಷಗಳ ಕಾಲ ಮಾತುಕತೆ ನಡೆಸಿ, ಅಳಲು ಕೇಳಿದ ಸಿಎಂ ಆದಿತ್ಯನಾಥ್ ಅವರು, ಮಕ್ಕಳ ಶಿಕ್ಷಣ, ಕುಟುಂಬ ನಿರ್ವಹಣೆಗೆ ಉದ್ಯೋಗ, ವಿವೇಕ್ ತಾಯಿಗೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

    ಎಷ್ಟು ಪರಿಹಾರ?
    ಮೃತ ವಿವೇಕ್ ತಿವಾರಿ ಕುಟುಂಬಕ್ಕೆ ಒಟ್ಟು 35 ಲಕ್ಷ ರೂ. ಪರಿಹಾರ ನೀಡಲು ಸಿಎಂ ಯೋಗಿ ಆದಿತ್ಯನಾಥ್ ನಿರ್ಧರಿಸಿದ್ದಾರೆ. ಅದರಲ್ಲಿ 25 ಲಕ್ಷ ರೂ. ಕುಟುಂಬ ನಿರ್ವಹಣೆಗೆ, 5 ಲಕ್ಷ ರೂ. ಮಕ್ಕಳ ಶಿಕ್ಷಣಕ್ಕೆ ಹಾಗೂ 5 ಲಕ್ಷ ರೂ. ವಯಸ್ಸಾಗಿರುವ ವಿವೇಕ್ ತಾಯಿಗೆ ನೀಡಲು ಮುಂದಾಗಿದ್ದಾರೆ.

    ಸಿಎಂ ಭೇಟಿ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಕಲ್ಪನಾ ತಿವಾರಿ ಅವರು, ಯೋಗಿ ಆದಿತ್ಯವಾಥ್ ಅವರು ನನ್ನ ಸಮಸ್ಯೆಯನ್ನು ಆಲಿಸಿದರು. ಮುಂದಿನ ಜೀವನ ನಡೆಸಲು ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಅವರ ಮೇಲೆ ನನಗೆ ವಿಶ್ವಾಸವಿದೆ. ನನ್ನ ಎಲ್ಲ ಬೇಡಿಕೆಯನ್ನು ಈಡೇರಿಸುವುದಾಗಿ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದರು.

    ಮಾಯಾವತಿ ಕಿಡಿ: ಉತ್ತರ ಪ್ರದೇಶದಲ್ಲಿ ಕಾನೂನು ವ್ಯವಸ್ಥೆ ಹಾಳಾಗಿದೆ. ರಾಜ್ಯದ ಜನತೆ ಆತಂಕದ ವಾತಾವರಣದಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಆರೋಪಿಸಿದ್ದಾರೆ. ವಿವೇಕ್ ತಿವಾರಿ ಕೊಲೆಯ ಆರೋಪಿ ಪೊಲೀಸ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ನಂತರ ಮೃತರ ಕುಟುಂಬ ಭೇಟಿ ಆಗಬೇಕಿತ್ತು ಎಂದು ವಾಗ್ದಾಳಿ ನಡೆಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗರ್ಭಿಣಿಯನ್ನು ಹೊತ್ತು ಆಸ್ಪತ್ರೆಗೆ ಸಾಗಿಸಿದ ರೈಲ್ವೇ ಪೊಲೀಸ್- ಫೋಟೋ ವೈರಲ್

    ಗರ್ಭಿಣಿಯನ್ನು ಹೊತ್ತು ಆಸ್ಪತ್ರೆಗೆ ಸಾಗಿಸಿದ ರೈಲ್ವೇ ಪೊಲೀಸ್- ಫೋಟೋ ವೈರಲ್

    ಲಕ್ನೋ: ಉತ್ತರ ಪ್ರದೇಶದ ರೈಲ್ವೇ ಪೊಲೀಸ್ ಅಧಿಕಾರಿಯೊಬ್ಬರು ಜನಸಮೂಹವಿದ್ದ ಸ್ಥಳದಿಂದ ಗರ್ಭಿಣಿಯನ್ನು ಹೊತ್ತು, ಆಸ್ಪತ್ರೆಗೆ ದಾಖಲಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗೆ ಕಾರಣವಾಗಿದೆ.

    ರೈಲ್ವೇ ಪೊಲೀಸ್ ಸೋನು ಕುಮಾರ್ ರಾಜೋರಾ ಇಂತಹ ಮಾನವೀಯತೆ ಮೆರೆದ ಅಧಿಕಾರಿ. ಸರಿಯಾದ ಸಮಯದಲ್ಲಿಯೇ ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಿ ಹಿರೋ ಎನಿಸಿಕೊಂಡಿದ್ದಾರೆ.

    ನಡೆದದ್ದು ಏನು?
    ಶುಕ್ರವಾರ ಮಥುರಾ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದಲ್ಲಿ ಭಾವನಾ ಎಂಬವರು ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಇದನ್ನು ನೋಡಿದ ಸೋನು ಕುಮಾರ್ ಅವರು ಅಂಬುಲೆನ್ಸ್‍ಗೆ ಕರೆ ಮಾಡಿ ತಕ್ಷಣವೇ ನಿಲ್ದಾಣಕ್ಕೆ ಬರುವಂತೆ ಹೇಳಿದ್ದಾರೆ. ಆದರೆ ಅಂಬುಲೆನ್ಸ್ ಬರುವುದು ತಡವಾಗುತ್ತದೆ ಎಂದು ಗೊತ್ತಾಗುತ್ತಿದ್ದು, ಗರ್ಭಿಣಿಯನ್ನು ಹೊತ್ತುಕೊಂಡೇ 100 ಮೀ. ಸಮೀಪದಲ್ಲಿದ್ದ ಆಸ್ಪತ್ರೆಗೆ ಹೆಜ್ಜೆ ಹಾಕಿದ್ದಾರೆ.

    ಆಸ್ಪತ್ರೆಗೆ ಸೇರುತ್ತಿದ ಸ್ವಲ್ಪ ಸಮಯಲ್ಲಿ ಹೆರಿಗೆಯಾಗಿದ್ದು, ಭಾವನಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಹಾಗೂ ಮಗು ಆರೋಗ್ಯವಾಗಿದ್ದು, ಸೋನು ಕುಮಾರ್ ನಿಸ್ವಾರ್ಥ ಸೇವೆಗೆ ಎಲ್ಲೆಡೆ ಅಭಿನಂದನೆ ವ್ಯಕ್ತವಾಗಿದೆ.

    ನನ್ನ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸುವುದು ಸ್ವಲ್ಪ ತಡವಾಗಿದ್ದರೂ ಆಕೆ ಮತ್ತು ಮಗು ಪ್ರಾಣಕ್ಕೆ ಅಪಾಯ ಇತ್ತು ಅಂತಾ ವೈದ್ಯರು ಹೇಳಿದ್ದರು ಎಂದು ಭಾವನಾ ಪತಿ ಮಹೇಶ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಮತ್ತೊಬ್ಬರಿಗೆ ಸಹಾಯ ಮಾಡುವುದು ನನ್ನ ಕೆಲಸ. ಗರ್ಭಿಣಿಯನ್ನು ನೋಡುತ್ತಿದ್ದಂತೆ 108 ಹಾಗೂ 102 ನಂಬರ್ ಗೆ ಕರೆ ಮಾಡಿದ್ದೆ. ಭಾವನಾ ಹಾಗೂ ಅವರ ಪತಿ ನಗರಕ್ಕೆ ಹೊಸಬರಾಗಿದ್ದು, ಹೇಗೆ ಹೋಗುವುದು ಎಂದು ತಿಳಿದಿರಲಿಲ್ಲ. ಹೀಗಾಗಿ ನಾನೇ ಎತ್ತಿಕೊಂಡು ಆಸ್ಪತ್ರೆಗೆ ಸಾಗಿಸಿದೆ ಎಂದು ಸೋನು ಕುಮಾರ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv