Tag: Policeman

  • 7 ರಾಜ್ಯಗಳಲ್ಲಿ 14 ಮಹಿಳೆಯರನ್ನು ಮದುವೆಯಾಗಿದ್ದ ಭೂಪ ಅರೆಸ್ಟ್

    7 ರಾಜ್ಯಗಳಲ್ಲಿ 14 ಮಹಿಳೆಯರನ್ನು ಮದುವೆಯಾಗಿದ್ದ ಭೂಪ ಅರೆಸ್ಟ್

    ನವದೆಹಲಿ: 48 ವರ್ಷಗಳಲ್ಲಿ ಏಳು ರಾಜ್ಯಗಳಲ್ಲಿ 14 ಮಹಿಳೆಯರನ್ನು ಮದುವೆಯಾದ ಲಿಂಗಾಕಾಮಿಯೊಬ್ಬನನ್ನು ಭುವನೇಶ್ವರದಲ್ಲಿ ಪೊಲೀಸರು ಬಂಧಿಸಿದ್ದಾರೆ.

    ಆರೋಪಿ ಒಡಿಶಾದ ಕೇಂದ್ರಪಾರ ಜಿಲ್ಲೆಯ ಪಟ್ಕುರಾ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರ ನಿವಾಸಿಯಗಿದ್ದು, ತಾನು ಸರ್ಕಾರಿ ಉದ್ಯೋಗಿ ಎಂದು ಬಿಂಬಿಸಿಕೊಂಡು ಅನೇಕ ಮಹಿಳೆಯರನ್ನು ಮದುವೆಯಾಗುತ್ತಿದ್ದ. ಬಳಿಕ ಓಡಿಹೋಗುವ ಮುನ್ನ ಮಹಿಳೆಯರಿಂದ ಹಣವನ್ನು ಪಡೆದು ವಂಚಿಸಿ ಪರಾರಿಯಾಗುತ್ತಿದ್ದ ಎಂದು ಆರೋಪಿಸಲಾಗಿದೆ. ಆದರೆ ಬಂಧಿತ ಆರೋಪಿ ಈ ಹೇಳಿಕೆಯನ್ನು ನಿರಾಕರಿಸಿದ್ದಾನೆ.

    1982 ರಲ್ಲಿ ಆರೋಪಿ ಮೊದಲ ಬಾರಿಗೆ ಮದುವೆಯಾದನು. ನಂತರ 2002ರಲ್ಲಿ ಎರಡನೇ ಬಾರಿಗೆ ಮತ್ತೊಂದು ವಿವಾಹವಾದನು. ತನ್ನ ಎರಡು ಪತ್ನಿಯರಿಂದ ಐದು ಮಕ್ಕಳಿಗೆ ತಂದೆಯಾಗಿದ್ದನು. 2002 ಮತ್ತು 2020ರ ನಡುವೆ ಮತ್ತೆ ಮ್ಯಾಟ್ರಿಮೋನಿ ವೆಬ್‍ಸೈಟ್‍ಗಳ ಮೂಲಕ ಇತರ ಮಹಿಳೆಯರೊಂದಿಗೆ ಸ್ನೇಹ ಬೆಳೆಸಿ ವಿವಾಹವಾಗಿದ್ದಾನೆ ಎಂದು ಭುವನೇಶ್ವರ ಪೊಲೀಸ್ ಉಪ ಆಯುಕ್ತ ಉಮಾಶಂಕರ್ ದಾಶ್ ಹೇಳಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಟ್ವೀಟ್ ವಿರುದ್ಧ ಒಂದು ಸಾವಿರಕ್ಕೂ ಹೆಚ್ಚು ಕೇಸ್ ದಾಖಲು

    ಆರೋಪಿ ಕೊನೆಯದಾಗಿ ಶಾಲಾ ಶಿಕ್ಷಕಿಯೊಬ್ಬರನ್ನು ಮದುವೆಯಾಗಿ ದೆಹಲಿಯಲ್ಲಿ ತಂಗಿದ್ದ, ಆದರೆ ಆಕೆಯ ಹೇಗೋ ಸತ್ಯ ತಿಳಿದು ಪೊಲೀಸರಿಗೆ ದೂರು ನೀಡಿದ್ದಾಳೆ. ಇದೀಗ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಆತನನ್ನು ಪೊಲೀಸರು ಬಂಧಿಸಿದ್ದು, ಆರೋಪಿ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದನು. ಅದರಲ್ಲಿಯೂ ಹೆಚ್ಚಾಗಿ ಮ್ಯಾಟ್ರಿಮೋನಿ ವೆಬ್‍ಸೈಟ್‍ನಲ್ಲಿರುವ ವಿಚ್ಛೇದಿತ ಮಹಿಳೆಯರ ಜೊತೆ ಸ್ನೇಹ ಬೆಳೆಸಿ ವಿವಾಹವಾಗಿ ನಂತರ ಅವರನ್ನು ಬಿಟ್ಟು ಹೋಗುವ ಮುನ್ನ ಹಣದೋಚಿ ಪರಾರಿಯಾಗುತ್ತಿದ್ದ ಎಂದು ತಿಳಿಸಲಾಗಿದೆ.

    ಆರೋಪಿ ಇಲ್ಲಿಯವರೆಗೂ ದೆಹಲಿ, ಪಂಜಾಬ್, ಅಸ್ಸಾಂ, ಜಾರ್ಖಂಡ್ ಮತ್ತು ಒಡಿಶಾ ಸೇರಿದಂತೆ ಏಳು ರಾಜ್ಯಗಳಲ್ಲಿ ಮಹಿಳೆಯರನ್ನು ವಂಚಿಸಿದ್ದಾನೆ. ಅವರ ಮೊದಲ ಇಬ್ಬರು ಪತ್ನಿಯರು ಒಡಿಶಾದವರಾಗಿದ್ದಾರೆ. ಸದ್ಯ ಆರೋಪಿಯ ಕೊನೆಯ ಪತ್ನಿ 2018 ರಲ್ಲಿ ತನ್ನನ್ನು ನವದೆಹಲಿಯಲ್ಲಿ ಮದುವೆಯಾಗಿ ಭುವನೇಶ್ವರಕ್ಕೆ ಕರೆದೊಯ್ದಿದ್ದು, ಕಳೆದ ವರ್ಷ ಜುಲೈನಲ್ಲಿ ಶಾಲಾ ಶಿಕ್ಷಕಿ ಮಹಿಳಾ ಪೊಲೀಸರಿಗೆ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಇದೀಗ ಶಿಕ್ಷಕಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಜೊತೆಗೆ ಆತನ ಬಳಿಯಿದ್ದ 11 ಎಟಿಎಂ ಕಾರ್ಡ್‍ಗಳು, ನಾಲ್ಕು ಆಧಾರ್ ಕಾರ್ಡ್‍ಗಳು ಮತ್ತು ಇತರ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ತ್ರಿವಳಿ ತಲಾಕ್ ವಿರುದ್ಧದ ಕಾನೂನು ಮುಸ್ಲಿಂ ಮಹಿಳೆಯರ ಕುಟುಂಬ ಉಳಿಸಿದೆ: ಮೋದಿ


    Woman, accused, policeman, New Delhi

  • ಹೆಲ್ಮೆಟ್ ಧರಿಸದ್ದನ್ನು ಪ್ರಶ್ನಿಸಿದ ಪತ್ರಕರ್ತನ ಮೇಲೆ ಪೊಲೀಸರಿಂದ ಹಲ್ಲೆ

    ಹೆಲ್ಮೆಟ್ ಧರಿಸದ್ದನ್ನು ಪ್ರಶ್ನಿಸಿದ ಪತ್ರಕರ್ತನ ಮೇಲೆ ಪೊಲೀಸರಿಂದ ಹಲ್ಲೆ

    ಡಿಸ್ಪುರ್: ಬೈಕ್‍ನಲ್ಲಿ ಹೋಗುತ್ತಿದ್ದ ವೇಳೆ ಹೆಲ್ಮೆಟ್ ಧರಿಸದೇ ಇರುವುದನ್ನು ಪ್ರಶ್ನಿಸಿದ ಪತ್ರಕರ್ತರೊಬ್ಬರ ಮೇಲೆ ಇಬ್ಬರು ಪೊಲೀಸ್ ಪೇದೆಗಳು ಹಲ್ಲೆ ನಡೆಸಿರುವ ಘಟನೆ ಅಸ್ಸಾಂನ ಬಸುಗಾಂವ್‍ನಲ್ಲಿ ನಡೆದಿದೆ.

    ಈ ಕುರಿತಂತೆ ಮಾತನಾಡಿದ ಪತ್ರಕರ್ತ ಜಯಂತ್ ದೇಬನಾಥ್, ಬೈಕ್‍ನಲ್ಲಿ ಬಂದ ಇಬ್ಬರು ಪೊಲೀಸರು ಹೆಲ್ಮೆಟ್ ಧರಿಸಿರಲಿಲ್ಲ. ನೀವೇ ಈ ರೀತಿ ತಪ್ಪು ಮಾಡಿದರೆ ಸಾರ್ವಜನಿಕರಿಗೆ ಹೇಗೆ ಸಂದೇಶ ನೀಡುತ್ತೀರಾ ಎಂದು ಪ್ರಶ್ನಿಸಿದೆ. ಆಗ ಹಗಲು ಹೊತ್ತಿನಲ್ಲಿಯೇ ನಡುರಸ್ತೆಯಲ್ಲಿ ನನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ನಡೆಸಿದರು. ಈ ವೇಳೆ ನಾನು ಪತ್ರಕರ್ತ ಎಂದು ಹೇಳಿದ್ದಕ್ಕೆ ಮತ್ತಷ್ಟು ಸಿಟ್ಟಿಗೆದ್ದರು ಎಂದಿದ್ದಾರೆ. ಇದನ್ನೂ ಓದಿ: ಗುರಾಯಿಸಿಕೊಂಡು ನೋಡದಂತೆ ವಾರ್ನ್ ಮಾಡಿದ್ದಕ್ಕೆ ಮಹಿಳೆ ಮೇಲೆ ಹಲ್ಲೆ

    ಅಸ್ಸಾಂನಲ್ಲಿ ಪೊಲೀಸರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ನೀವೇ ಕಾನೂನುಗಳನ್ನು ಮಾಡಿ, ಅದನ್ನು ಪೊಲೀಸರೆ ಉಲ್ಲಂಘಿಸಿದರೆ ಹೇಗೆ ಎಂದು ಪ್ರಶ್ನಿಸಲು ನಾನು ಅಸ್ಸಾಂ ಸರ್ಕಾರಕ್ಕೆ ಪ್ರಶ್ನಿಸಲು ಬಯಸುತ್ತೇನೆ. ಈ ಕುರಿತಂತೆ ಕಠಿಣ ಕ್ರಮ ಕೈಗೊಳ್ಳುವಂತೆ ನಾನು ಸರ್ಕಾರಕ್ಕೆ ಒತ್ತಾಯಿಸುತ್ತೇನೆ. ಈ ಘಟನೆ ರಾತ್ರಿ ಏನಾದರೂ ನಡೆದಿದ್ದರೆ, ಅವರು ನನ್ನನ್ನು ಗುಂಡಿಕ್ಕಿ ಕೊಲ್ಲಬಹುದಾಗಿತ್ತು. ಅವರ ವರ್ತನೆಯಿಂದ ನನಗೆ ಆಘಾತವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತಹಶೀಲ್ದಾರ್ ಮೇಲೆ ಪೆಟ್ರೋಲ್ ಎರಚಿ ಜೀವ ಬೆದರಿಕೆ ಹಾಕಿದ ಮಾಜಿ ಬಿಜೆವೈಎಂ ನಾಯಕ

    ಈ ವಿಚಾರವಾಗಿ ಮಾತನಾಡಿದ ಚಿರಾಂಗ್ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಲಾಬಾ ಕ್ರಿ ದೇಕಾ ಅವರು, ಈ ವಿಷಯದಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದೇವೆ. ಇಬ್ಬರು ಕಾನ್‌ಸ್ಟೆಬಲ್‌ಗಳ ವಿರುದ್ಧ ಜಯಂತ್ ದೇಬನಾಥ್ ಅವರ ಎಫ್‍ಐಆರ್ ಆಧರಿಸಿ, ನಾವು ಈ ವಿಷಯದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ನಾವು ಇಬ್ಬರು ಕಾನ್‍ಸ್ಟೆಬಲ್‍ಗಳನ್ನು ಕಾಯ್ದಿರಿಸಿದ್ದೇವೆ ಎಂದಿದ್ದಾರೆ.


    Helmet, journalist, policeman, Assam

  • ಗುರಾಯಿಸಿಕೊಂಡು ನೋಡದಂತೆ ವಾರ್ನ್ ಮಾಡಿದ್ದಕ್ಕೆ ಮಹಿಳೆ ಮೇಲೆ ಹಲ್ಲೆ

    ಗುರಾಯಿಸಿಕೊಂಡು ನೋಡದಂತೆ ವಾರ್ನ್ ಮಾಡಿದ್ದಕ್ಕೆ ಮಹಿಳೆ ಮೇಲೆ ಹಲ್ಲೆ

    ಗಾಂಧಿನಗರ: ತನ್ನನ್ನು ಗುರಾಯಿಸಿಕೊಂಡು ನೋಡುವುದನ್ನು ನಿಲ್ಲಿಸುವಂತೆ ಎಚ್ಚರಿಕೆ ನೀಡಿದ 28 ವರ್ಷದ ಮಹಿಳೆ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿ ಕಿರುಕುಳ ನೀಡಿರುವ ಘಟನೆ ಶನಿವಾರ ರಾತ್ರಿ ಅಹಮದಾಬಾದ್‍ನ ಥಾಲ್ತೇಜ್ ಪ್ರದೇಶದಲ್ಲಿ ನಡೆದಿದೆ.

    ಈ ಘಟನೆ ಆಕೆಯ ಪತಿ ಕೆಲಸಕ್ಕೆ ಹೋಗಿದ್ದ ವೇಳೆ ನಡೆದಿದೆ ಎಂದು ಸಂತ್ರಸ್ತೆ ಆರೋಪಿಸಿದ್ದು, ಈ ಕುರಿತಂತೆ ಸಂತ್ರಸ್ತೆ ಆರೋಪಿ ವಿರುದ್ಧ ಸೋಲಾ ಪೊಲೀಸರಿಗೆ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ತಹಶೀಲ್ದಾರ್ ಮೇಲೆ ಪೆಟ್ರೋಲ್ ಎರಚಿ ಜೀವ ಬೆದರಿಕೆ ಹಾಕಿದ ಮಾಜಿ ಬಿಜೆವೈಎಂ ನಾಯಕ

    ಬೆಳಗ್ಗೆ 8.30ರ ಸುಮಾರಿಗೆ ತನ್ನ ಮನೆಯ ಬಾಲ್ಕನಿಯಲ್ಲಿ ಕುಳಿತುಕೊಂಡಿದ್ದ ವೇಳೆ ಆರೋಪಿ ಸಾಹಿಲ್ ಠಾಕೋರ್ ತಿರುಗಾಡುತ್ತಿರುವುದನ್ನು ಸಂತ್ರಸ್ತೆ ಗಮನಿಸಿದ್ದಾರೆ. ನಂತರ ಆತ ತನ್ನತ್ತ ನೋಡಲು ಆರಂಭಿಸಿ, ಅಹಿತಕರ ಮತ್ತು ಅಶ್ಲೀಲ ಸನ್ನೆಗಳನ್ನು ತೋರಿಸಿದ್ದಾನೆ.

    ನಂತರ ಸಿಟ್ಟಿಗೆದ್ದ ಮಹಿಳೆ ಆತನ್ನನ್ನು ತನ್ನತ್ತ ನೋಡುವುದನ್ನು ನಿಲ್ಲಿಸಿ ಹೋಗುವಂತ ಹೇಳಿ ನೆರೆಹೊರೆಯವರನ್ನು ಕರೆಯುವುದಾಗಿ ಬೆದರಿಕೆಯೊಡ್ಡಿದ್ದಾಳೆ. ಆದರೆ ಇದಕ್ಕೂ ಹೆದರದ ವ್ಯಕ್ತಿ, ಬದಲಾಗಿ ಆಕೆಯ ಮೇಲೆ ಹಲ್ಲೆ ನಡೆಸಿ ಅತ್ಯಾಚಾರಕ್ಕೂ ಯತ್ನಿಸಿದ್ದಾನೆ. ಇದನ್ನೂ ಓದಿ: 8 ತಿಂಗಳ ಮಗುವಿನ ಮೇಲೆ ಹಲ್ಲೆಗೈದ Caretaker – ಮೆದುಳಿನಲ್ಲಿ ರಕ್ತಸ್ರಾವ

    ಸಂತ್ರೆಸ್ತೆಯ ಪತಿ ಮನೆಗೆ ಹಿಂದಿರುಗಿದ ಬಳಿಕ ಆರೋಪಿ ತನ್ನ ಸಹಚರರೊಂದಿಗೆ ಥಳಿಸಿ, ದಂಪತಿಗೆ ಬೆದರಿಕೆಯೊಡ್ಡಿರುವುದಾಗಿ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ, ಆರೋಪಿ ಮತ್ತು ಇತರ ಮೂವರ ವಿರುದ್ಧ ಕಿರುಕುಳ, ನೋವುಂಟುಮಾಡುವುದು, ನಿಂದನೀಯ ಭಾಷೆ ಬಳಕೆ ಮತ್ತು ಕ್ರಿಮಿನಲ್ ಬೆದರಿಕೆಯ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.

  • ಮಾತನಾಡಲು ನಿರಾಕರಿಸಿದಕ್ಕೆ ಯುವತಿಗೆ ಆ್ಯಸಿಡ್ ದಾಳಿ ಬೆದರಿಕೆ ಹಾಕ್ದ

    ಮಾತನಾಡಲು ನಿರಾಕರಿಸಿದಕ್ಕೆ ಯುವತಿಗೆ ಆ್ಯಸಿಡ್ ದಾಳಿ ಬೆದರಿಕೆ ಹಾಕ್ದ

    ಗಾಂಧಿನಗರ: ಮಾತನಾಡಲು ನಿರಾಕರಿಸಿದ 25 ವರ್ಷದ ಯುವತಿಗೆ ಆ್ಯಸಿಡ್ ದಾಳಿ ನಡೆಸುವುದಾಗಿ ವ್ಯಕ್ತಿಯೋರ್ವ ಬೆದರಿಕೆ ಹಾಕಿರುವ ಘಟನೆ ಅಹಮದಬಾದ್‍ನಲ್ಲಿ ನಡೆದಿದೆ.

    ಇದೀಗ ಯುವತಿ ಆ್ಯಸಿಡ್ ದಾಳಿ ಬೆದರಿಕೆಯೊಡ್ಡಿದ್ದ ಆರೋಪಿ ವಿರುದ್ಧ ವೆಜಾಲ್‍ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಹಮದಾಬಾದ್‍ನ ಜುಹಾಪುರದ ನಿವಾಸಿಯಾಗಿರುವ ಸಂತ್ರಸ್ತೆ, ವೆಜಲ್‍ಪುರದಲ್ಲಿ ವಾಸಿಸುವ ಮನ್ಸೂರಿ ಇಬ್ಬರೂ ಸುಮಾರು ಏಳು ವರ್ಷಗಳಿಂದ ಸ್ನೇಹಿತರಾಗಿದ್ದರು. ಆದರೆ ಇದೀಗ ಯುವತಿ ಆತನೊಂದಿಗೆ ಮಾತನಾಡುವುದನ್ನು ನಿಲ್ಲಿಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಗ್ಯಾಂಗ್‌ರೇಪ್ ಬಳಿಕ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು!

    ಮನ್ಸೂರಿ ಶನಿವಾರ ಮಧ್ಯಾಹ್ನ ಸಂತ್ರಸ್ತೆ ಮನೆಗೆ ಆಗಮಿಸಿ ಮತನಾಡುವುದನ್ನು ನಿಲ್ಲಿಸಿರುವ ಕುರಿತಂತೆ ಪ್ರಶ್ನಿಸಿದ್ದಾನೆ. ಆಗ ಯುವತಿ ನಿನ್ನೊಂದಿಗೆ ಸ್ನೇಹ ಬೆಳೆಸಲು ಇಷ್ಟವಿಲ್ಲ ಎಂದು ಹೇಳಿದ್ದು, ಇಬ್ಬರ ನಡುವೆ ವಾಗ್ವಾದ ನಡೆದಿದೆ. ಇದರಿಂದ ಕೋಪಗೊಂಡ ಮನ್ಸೂರಿ ಆಕೆಯ ಮೇಲೆ ದೌರ್ಜನ್ಯ ಎಸಗಲು ಮುಂದಾಗಿದ್ದಾನೆ. ಈ ವೇಳೆ ಯುವತಿ ಕಿರುಚಾಡಿದ್ದರಿಂದ ಅವರ ನೆರೆಹೊರೆಯವರು ಧಾವಿಸಿದಾರೆ. ಆಗ ವ್ಯಕ್ತಿ ಸಂತ್ರಸ್ತೆಗೆ ಆ್ಯಸಿಡ್ ದಾಳಿ ನಡೆಸುವುದಾಗಿ ಬೆದರಿಕೆಯೊಡ್ಡಿ ಅಲ್ಲಿಂದ ಪರಾರಿಯಾಗಿದ್ದಾನೆ.

    ಈ ಘಟನೆ ಕುರಿತಂತೆ ಯುವತಿ ತನ್ನ ತಂದೆಗೆ ವಿವರಿಸಿದಾಗ ಕೂಡಲೇ ಪೊಲೀಸರನ್ನು ಸಂಪರ್ಕಿಸಲು ತಿಳಿಸಿದ್ದಾರೆ. ಇದೀಗ ಪೊಲೀಸರು ಆರೋಪಿ ವಿರುದ್ಧ ಕ್ರಮಿನಲ್ ಬೆದರಿಕೆ ಮತ್ತು ಇತರ ದೂರುಗಳನ್ನು ದಾಖಲಿಸಿದ್ದಾರೆ. ಇದನ್ನೂ ಓದಿ: ಹಿರಿಯರ ಕಿರುಕುಳ – ಚರ್ಚಿನಲ್ಲಿಯೇ ಪಾದ್ರಿ ಆತ್ಮಹತ್ಯೆಗೆ ಯತ್ನ

  • ಪತ್ನಿಯ ಶಿರಚ್ಛೇದ ಮಾಡಿ ಪೊಲೀಸ್ ಠಾಣೆಗೆ ಹೊತ್ತೊಯ್ದ

    ಪತ್ನಿಯ ಶಿರಚ್ಛೇದ ಮಾಡಿ ಪೊಲೀಸ್ ಠಾಣೆಗೆ ಹೊತ್ತೊಯ್ದ

    ಹೈದರಾಬಾದ್: ವ್ಯಕ್ತಿಯೊಬ್ಬ ತನ್ನ ಪತ್ನಿಯ ಶಿರಚ್ಛೇದ ಮಾಡಿ ನಂತರ ಆಕೆಯ ತಲೆಯೊಂದಿಗೆ ಪೊಲೀಸ್ ಠಾಣೆಗೆ ಹೋಗಿ ಶರಣಾಗಿರುವ ಘಟನೆ ಹೈದರಾಬಾದ್‍ನ ರಾಜೇಂದ್ರನಗರದ ಎಂಎಂ ಪಹಾಡಿಯಲ್ಲಿ ನಡೆದಿದೆ.

    ಸಮ್ರೀನ್ ಮೃತದುರ್ದೈವಿಯಾಗಿದ್ದು, ಆರೋಪಿ ಪರ್ವೇಜ್ ಎಂದು ಗುರುತಿಸಲಾಗಿದೆ. ಆರೋಪಿ ಆಗಾಗಾ ತನ್ನ ಪತ್ನಿಯೊಂದಿಗೆ ಜಗಳವಾಡುತ್ತಿದ್ದನು. ಅಲ್ಲದೇ ದಂಪತಿ ಜಗಳದಿಂದಾಗಿ ವಿಚ್ಛೇದನವನ್ನು ಸಹ ಪಡೆದುಕೊಂಡಿದ್ದರು. ಆದರೆ ಒಂದು ವರ್ಷದ ಹಿಂದೆ ಪರ್ವೇಜ್ ತನ್ನ ಬಳಿಗೆ ಮರಳಲು ಸಮ್ರೀನ್‍ಗೆ ವಿನಂತಿಸಿದ್ದನು. ಹೀಗಾಗಿ ಮತ್ತೆ ಒಂದಾಗಿ ದಂಪತಿ ಒಟ್ಟಿಗೆ ಇದ್ದರು. ಇದನ್ನೂ ಓದಿ: ನಾನು ಜೆಡಿಎಸ್‍ನಲ್ಲಿ ಇರಬೇಕಾ? ಬೇಡ್ವಾ?: ಜಿ.ಟಿ.ದೇವೆಗೌಡ

    ಗುರುವಾರ ಮಧ್ಯರಾತ್ರಿ ಪರ್ವೇಜ್ ಇದೇ ವಿಚಾರವಾಗಿ ಜಗಳ ತೆಗೆದು ಹರಿತವಾದ ಆಯುಧದಿಂದ ಸಮ್ರೀನ್ ಕತ್ತು ಸೀಳಿ ಹತ್ಯೆಗೈದಿದ್ದಾನೆ. ನಂತರ ಮೃತಪಟ್ಟ ಪತ್ನಿಯ ತಲೆಯೊಂದಿಗೆ ರಾಜೇಂದ್ರನಗರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ದೂರು ದಾಖಲಿಸಿಕೊಂಡಿದ್ದು, ಪ್ರಕರಣ ಕುರಿತಂತೆ ತನಿಖೆ ಕೈಗೊಂಡಿದ್ದಾರೆ.

  • ಮಾತು ಬಾರದ, ಕಿವಿ ಕೇಳದ ಮಹಿಳೆ ಮೇಲೆ ನಿರಂತರ ಅತ್ಯಾಚಾರ – ಆರೋಪಿ ಅರೆಸ್ಟ್

    ಮಾತು ಬಾರದ, ಕಿವಿ ಕೇಳದ ಮಹಿಳೆ ಮೇಲೆ ನಿರಂತರ ಅತ್ಯಾಚಾರ – ಆರೋಪಿ ಅರೆಸ್ಟ್

    ನವದೆಹಲಿ: ಮಾತು ಬಾರದ ಹಾಗೂ ಕಿವಿ ಕೇಳದ 30 ವರ್ಷದ ಅಮಾಯಕ ಮಹಿಳೆ ಮೇಲೆ ನಿರಂತರ ಅತ್ಯಾಚಾರ ವೆಸಗಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

    ಮಹಿಳೆ ತನ್ನ ತಾಯಿ ಮತ್ತು ಸಹೋದರಿಯೊಂದಿಗೆ ಭಾನುವಾರ ಭಜನಪುರ ಪೊಲೀಸ್ ಠಾಣೆಗೆ ಭೇಟಿ ನೀಡಿ ನವೆಂಬರ್ 22 ರಿಂದ ರೆಹಾನ್ ಎಂಬ ವ್ಯಕ್ತಿ ತನ್ನ ಮೇಲೆ ಅನೇಕ ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರು ನೀಡಿದ್ದಾಳೆ. ಇದನ್ನೂ ಓದಿ: ಬೀದಿಯಲ್ಲಿ ಪೆನ್ನು ಮಾರ್ತಿದ್ದ ಬಾಲಕಿಗೆ ಐಫೋನ್ ಗಿಫ್ಟ್ ಕೊಟ್ರು ತೇಜ್ ಪ್ರತಾಪ್ ಯಾದವ್!

    RAPE

    ಮಹಿಳೆಗೆ ಮಾತು ಮತ್ತು ಶ್ರವಣದೋಷವನ್ನು ಹೊಂದಿದ್ದರಿಂದ ಆಕೆಯ ಹೇಳಿಕೆಯನ್ನು ದಾಖಲಿಸಲು ಇಂಟರ್ ಪ್ರಿಟರ್ ಅಗತ್ಯವಿತ್ತು. ಹಾಗಾಗಿ ಖಾಸಗಿ ಇಂಟರ್ ಪ್ರಿಟರ್ ವ್ಯವಸ್ಥೆಗೊಳಿಸಲಾಗಿತ್ತು. ನಂತರ ಡಿಸಿಡಬ್ಲ್ಯೂ ಕೌನ್ಸಿಲರ್ ಇಂಟರ್ ಪ್ರಿಟರ್ ಸಹಾಯದಿಂದ ಮಹಿಳೆಯೊಂದಿಗೆ ಸಂವಹನ ನಡೆಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಸಾಲದ ಹಣ ವಾಪಸ್ ಕೊಡುವುದಾಗಿ ನಂಬಿಸಿ ವ್ಯಕ್ತಿಯ ಹತ್ಯೆ

    RAPE CASE

    ಮಹಿಳೆಯ ದೂರಿನ್ವಯ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು 506 (ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ) ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನಂತರ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಯಿತು. ಸದ್ಯ ಆರೋಪಿ ರೆಹಾನ್ ಅನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಮತ್ತು ಈ ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.

  • ಉಗ್ರಗಾಮಿಗಳ ಗುಂಡಿಗೆ ಪೊಲೀಸ್ ಸಿಬ್ಬಂದಿ ಹುತಾತ್ಮ

    ಉಗ್ರಗಾಮಿಗಳ ಗುಂಡಿಗೆ ಪೊಲೀಸ್ ಸಿಬ್ಬಂದಿ ಹುತಾತ್ಮ

    ಶ್ರೀನಗರ: ಉಗ್ರಗಾಮಿಗಳ ಗುಂಡಿಗೆ ಜಮ್ಮು ಕಾಶ್ಮೀರದ ಪೊಲೀಸ್ ಸಿಬ್ಬಂದಿಯೊಬ್ಬರು ಹುತಾತ್ಮರಾಗಿದ್ದಾರೆ.

    ತೌಸೀಫ್ ಅಹಮದ್ ಹುತಾತ್ಮ ಪೊಲೀಸ್ ಸಿಬ್ಬಂದಿಯಾಗಿದ್ದಾರೆ. ಶ್ರೀನಗರದ ಬಾಟ್‍ಮಲೂ ಪ್ರದೇಶದಲ್ಲಿ ಭಯೋತ್ಪಾದಕರ ಗುಂಡಿಗೆ ಹುತಾತ್ಮರಾಗಿದ್ದಾರೆ.

    ಜಮ್ಮು ಕಾಶ್ಮೀರ ಪೊಲೀಸ್ ಇಲಾಖೆಯ ಕಾನ್‍ಸ್ಟೆಬಲ್ ತೌಸೀಫ್ ಅಹಮದ್ ಅವರ ಮೇಲೆ ಅವರ ಮನೆಯ ಹತ್ತಿರವೇ ರಾತ್ರಿ 8 ಗಂಟೆಗೆ ಉಗ್ರರು ಗುಂಡು ಹಾರಿಸಿದ್ದಾರೆ. ತೀವ್ರವಾಗಿ ಗಾಯಗೊಂಡ ಕಾನ್‍ಸ್ಟೆಬಲ್ ತೌಸೀಫ್ ಅವರನ್ನು ತಕ್ಷಣವೇ ಎಸ್‍ಎಂಎಚ್‍ಎಸ್ ಆಸ್ಪತ್ರೆಗೆ ಕರೆದೊಯ್ಯವ ವೇಳೆ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದರು. ಈ ಪ್ರದೇಶದಲ್ಲಿ ಸಂಪೂರ್ಣವಾಗಿ ನಿಬರ್ಂಧ ಆದೇಶ ಜಾರಿಗೊಳಿಸಲಾಗಿದ್ದು, ಭಯೋತ್ಪಾದಕನ್ನು ಪತ್ತೆಹಚ್ಚಲು ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ಜಿಮ್ ಮಾಡೋವ್ರಿಗೆ ಅಪ್ಪು ಸಾವು ಬಿಗ್ ಶಾಕ್ – ಜಿಮ್‍ಗೆ ಹೋಗದಂತೆ ಮಕ್ಕಳಿಗೆ ಪೋಷಕರ ಆಕ್ಷೇಪ

    ಜಮ್ಮು ಕಾಶ್ಮೀರದ ಶ್ರೀನಗರದ ಆಸ್ಪತ್ರೆಯೊಂದರಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಕೆಲ ಕಾಲ ಗುಂಡಿನ ಚಕಮಕಿ ನಡೆಯಿತು. ಆಸ್ಪತ್ರೆಯಲ್ಲೇ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಒಬ್ಬರು ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಭದ್ರತಾ ಪಡೆಗಳು ಸ್ಥಳಕ್ಕೆ ದೌಡಾಯಿಸಿವೆ. ಶ್ರೀನಗರ-ಬಾರಾಮುಲ್ಲಾ ಹೆದ್ದಾರಿಯಲ್ಲಿ ನಗರದ ಬೆಮಿನಾ ಪ್ರದೇಶದ ಎಸ್‍ಕೆಐಎಂಎಸ್ ಆಸ್ಪತ್ರೆ ಬಳಿ ಈ ಘಟನೆ ನಡೆದಿದೆ. ಬೆಮಿನಾದ  SKIMS ಆಸ್ಪತ್ರೆಯಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಸ್ವಲ್ಪ ಸಮಯದ ಗುಂಡಿನ ಚಕಮಕಿ ನಡೆಯಿತು. ಆ ಆಸ್ಪತ್ರೆಯ ಸುತ್ತ ಸೇರಿದ್ದ ಜನಸಂದಣಿಯ ಲಾಭವನ್ನು ಪಡೆದುಕೊಂಡು ಭಯೋತ್ಪಾದಕರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಶ್ರೀನಗರ ಪೊಲೀಸರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

  • ಮಾತು ಬಾರದ ಮಹಿಳೆಯ ಮೇಲೆ ಅತ್ಯಾಚಾರ

    ಮಾತು ಬಾರದ ಮಹಿಳೆಯ ಮೇಲೆ ಅತ್ಯಾಚಾರ

    ಮಂಡ್ಯ: ಮಾತು ಬಾರದ ಮಹಿಳೆಯ ಮೇಲೆ ಮೂವರು ಯುವಕರು ಅತ್ಯಾಚಾರ ನಡೆಸಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹೊನಗನಹಳ್ಳಿ ಗ್ರಾಮದ ಬಳಿ ಜುರುಗಿದೆ.

    ಹೊನಗನಹಳ್ಳಿ ಗ್ರಾಮದ ಮಾತು ಬಾರದ 48 ವರ್ಷದ ಮಹಿಳೆಯ ಮೇಲೆ ಅದೇ ಗ್ರಾಮದ ಮೂವರು ಯುವಕರು ಅತ್ಯಾಚಾರವೆಸಗಿದ್ದಾರೆ. ಏಪ್ರಿಲ್ 1 ರಂದು ಈ ಮಹಿಳೆ ತನ್ನ ಹೊಲದಲ್ಲಿ ಹಸು ಮೇಯಿಸಲು ಹೋಗಿದ್ದಾರೆ. ಸಂಜೆ ನಾಲ್ಕು ಗಂಟೆಯ ವೇಳೆಯಲ್ಲಿ ಮಹಿಳೆ ಇದ್ದ ಹೊಲಕ್ಕೆ ಹೊನಗನಹಳ್ಳಿ ಗ್ರಾಮದ ಪ್ರಸನ್ನ, ಶೇಖರ್, ಪವನ್ ಎಂಬ ಯುವಕರು ಹೋಗಿದ್ದಾರೆ. ಈ ವೇಳೆ ಮಹಿಳೆಯನ್ನು ಎಳೆದಾಡಿದ್ದಾರೆ, ಬಳಿಕ ಮೂವರು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ.

     

    ಈ ಮೂವರು ಯುವಕರು ಕೇವಲ 25 ವರ್ಷದ ಒಳಗಿನವರಾಗಿದ್ದಾರೆ. ಈ ಪ್ರಕರಣವಾದ ಬಳಿಕ ಗ್ರಾಮದಲ್ಲೇ ರಾಜಿ ಪಂಚಾಯ್ತಿ ಮಾಡಿ ಪ್ರಕರಣವನ್ನು ಮುಚ್ಚಿ ಹಾಕಲು ಸಹ ಯತ್ನ ಮಾಡಲಾಗಿತ್ತು. ಆದರೆ ರಾಜಿ ಸಂಧಾನಕ್ಕೆ ಮಹಿಳೆಯ ಕಡೆಯವರು ಒಪ್ಪಿಲ್ಲ. ನಂತರ ನಿನ್ನೆ ಪಾಂಡವಪುರ ಪೊಲೀಸ್ ಠಾಣೆಗೆ ಮಹಿಳೆಯ ಸಂಬಂಧಿಕರು ದೂರು ನೀಡಿದ್ದಾರೆ. ದೂರಿನ ಅನ್ವಯ ಇದೀಗ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

  • ಕಾಫಿನಾಡಿಗೆ ಆತಂಕ ಸೃಷ್ಠಿಸಿದ ಕೈದಿ, ಪೊಲೀಸ್, ಎಂಜಿನಿಯರ್, ತರಕಾರಿ ವ್ಯಾಪಾರಿ

    ಕಾಫಿನಾಡಿಗೆ ಆತಂಕ ಸೃಷ್ಠಿಸಿದ ಕೈದಿ, ಪೊಲೀಸ್, ಎಂಜಿನಿಯರ್, ತರಕಾರಿ ವ್ಯಾಪಾರಿ

    ಚಿಕ್ಕಮಗಳೂರು: ಏಳೆಂಟು ದಿನಗಳ ಹಿಂದೆ ಜೈಲಿನಲ್ಲಿದ್ದ ಕೈದಿಗೂ ಸೋಂಕು ದೃಢವಾಗಿದ್ದರಿಂದ ಜಿಲ್ಲೆಯ ಜನ ಕಂಗಾಲಾಗಿದ್ದರು. ಏಕಂದರೆ ಆರು ತಿಂಗಳಿಂದ ಜೈಲಿನಲ್ಲಿರುವ ಖ್ಯೆದಿಗೆ ಹೇಗೆ ಕೊರೊನಾ ಬಂತು ಎನ್ನುವುದು ಎಲ್ಲರಲ್ಲೂ ಪ್ರಶ್ನೆ ಹುಟ್ಟಿಸಿತ್ತು.

    ಕಳೆದೊಂದು ವಾರದ ಹಿಂದೆ ನಾಲ್ವರು ಪೊಲೀಸರು ತೀವ್ರ ಆತಂಕ ಸೃಷ್ಠಿಸಿದ್ದರು. ಮೂರು ದಿನದ ಹಿಂದೆ ರಸ್ತೆ ಮೇಲೆ ತಳ್ಳುವ ಗಾಡಿಯಲ್ಲಿ ತರಕಾರಿ ಮಾರುವ ವ್ಯಾಪಾರಿ ಕೂಡ ಭಯ ಹುಟ್ಟಿಸಿದ್ದ. ಬುಧವಾರ ಎಂಜಿನಿಯರ್ ಸರದಿ. ಚಿಕ್ಕಮಗಳೂರು ನಗರದ ಹೊಸಮನೆ ಬಡಾವಣೆ ನಿವಾಸಿಯಾದ ಕೊರೊನಾ ಸೋಂಕಿತ ಎಂಜಿನಿಯರ್ ಕೂಡ ಸರ್ಕಾರಿ, ಖಾಸಗಿ ಆಸ್ಪತ್ರೆ ವೈದ್ಯರು ಹಾಗೂ ದಾದಿಯರಲ್ಲೂ ಭೀತಿ ಹುಟ್ಟಿಸಿದ್ದಾರೆ.

    ಜಿಲ್ಲೆಯಲ್ಲಿ ಬುಧವಾರ ಒಂದು ಕೊರೊನಾ ಪಾಸಿಟಿವ್ ಕೇಸ್ ದಾಖಲಾಗಿದೆ. ಬೆಂಗಳೂರಿಗೆ ಹೋಗಿ ಬಂದ 28 ವರ್ಷದ ಎಂಜಿನಿಯರ್ ಯುವಕನಲ್ಲಿ ಸೋಂಕು ದೃಢವಾಗಿದ್ದು, ಆತ ಕೂಡ ಚಿಕ್ಕಮಗಳೂರು ನಗರ ನಿವಾಸಿಗಳ ನಿದ್ದೆಗೆಡಿಸಿದ್ದಾನೆ. ಕೊರೊನಾ ಆರಂಭವಾದ ಮೂರು ತಿಂಗಳ ಬಳಿಕ ಚಿಕ್ಕಮಗಳೂರು ನಗರದಲ್ಲಿ ಅಧಿಕೃತ ದಾಖಲಾದ ಮೊದಲ ಪ್ರಕರಣವಿದು. ಇಲ್ಲಿವರೆಗೂ ನಗರದಲ್ಲಿ ಒಂದೇ ಒಂದು ಕೇಸ್ ಇರಲಿಲ್ಲ.

    ಬೆಂಗಳೂರಿಗೆ ಹೋಗಿ ಹಿಂದುರಿಗಿದ ಎಂಜಿನಿಯರ್ ಆರೋಗ್ಯ ಸಮಸ್ಯೆಯಿಂದ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗೂ ಭೇಟಿ ನೀಡಿದ್ದ. ಬುಧವಾರ ಆತನಿಗೆ ಕೊರೊನಾ ದೃಢವಾದ ಹಿನ್ನೆಲೆ ಸರ್ಕಾರಿ, ಖಾಸಗಿ ಆಸ್ಪತ್ರೆಯ ವೈದ್ಯರು ಹಾಗೂ ದಾದಿಯರಿಗೂ ಆತಂಕ ಸೃಷ್ಟಿಯಾಗಿದೆ. ಸೋಂಕಿತನ ಮನೆಯವರು ಸೇರಿದಂತೆ ವೈದ್ಯರು, ದಾದಿಯರು ಎಲ್ಲರಿಗೂ ಕ್ವಾರಂಟೈನ್‍ಗೆ ಸೂಚಿಸಲಾಗಿದೆ.

    ಈ ಮಧ್ಯೆ ಮೂರು ದಿನಗಳ ಹಿಂದೆ ಬಂದ ಪ್ರಕರಣ ಕೂಡ ನಗರಕ್ಕೆ ಕಂಟಕವಾಗಿದೆ. ಹಾಸನ ಮಾರುಕಟ್ಟೆಗೆ ಹೋಗಿ ತರಕಾರಿ ತಂದು ಚಿಕ್ಕಮಗಳೂರು ನಗರದಲ್ಲಿ ಮಾರುತ್ತಿದ್ದ ವ್ಯಕ್ತಿಗೂ ಸೋಂಕು ದೃಢವಾಗಿದ್ದು, ನಗರದ ಹಲವು ಏರಿಯಾಗಳ ಜನ ಕೂಡ ಕಂಗಾಲಾಗಿದ್ದಾರೆ. ಬುಧವಾರದ ಪ್ರಕರಣದಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 43ಕ್ಕೆ ಏರಿದೆ. 23 ಜನ ಬಿಡುಗಡೆಯಾಗಿ, 19 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹೆಮ್ಮಾರಿಗೆ 72 ವರ್ಷದ ವೃದ್ಧೆ ಪ್ರಾಣ ತೆತ್ತಿದ್ದಾರೆ.

  • ನಿಜವಾದ ಸಿಂಗಂ: ಪೇದೆ ಕೆಲಸಕ್ಕೆ ನೆಟ್ಟಿಗರಿಂದ ಮೆಚ್ಚುಗೆ

    ನಿಜವಾದ ಸಿಂಗಂ: ಪೇದೆ ಕೆಲಸಕ್ಕೆ ನೆಟ್ಟಿಗರಿಂದ ಮೆಚ್ಚುಗೆ

    ಬೆಂಗಳೂರು: ಆಟೋ ಚಾಲಕನಿಗೆ ಸಹಾಯ ಮಾಡಿದ ಪೊಲೀಸ್ ಪೇದೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

    ಬೆಂಗಳೂರು ನಗರದ ಪೊಲೀಸ್ ಟ್ವಿಟ್ಟರ್ ಖಾತೆಯಲ್ಲಿ ಪೇದೆಯೊಬ್ಬರು ಆಟೋ ಚಾಲಕನಿಗೆ ಸಹಾಯ ಮಾಡುತ್ತಿರುವ ಫೋಟೋವನ್ನು ಟ್ವೀಟ್ ಮಾಡಿ, ಫೋಟೋ, ಸ್ಟೋರಿ, ಹ್ಯಾಪಿ ಎಂಡಿಂಗ್ ಎಂದು ಬರೆಯಲಾಗಿದೆ.

    ಟ್ವೀಟ್‍ನಲ್ಲಿ ಆಟೋಗೆ ಅಥವಾ ಚಾಲಕನಿಗೆ ಏನಾಗಿತ್ತು ಎಂದು ಉಲ್ಲೇಖಿಸಿಲ್ಲ. ಆದರೆ ಆಟೋ ಕೆಟ್ಟು ನಿಂತಿದ್ದರಿಂದ ಪೇದೆ ಸಹಾಯ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಟ್ವೀಟ್ ಅನ್ನು ನೆಟ್ಟಿಗರು ರಿಟ್ವೀಟ್ ಮಾಡಿ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಕೆಲ ನೆಟ್ಟಿಗರು ನಮ್ಮ ಸಿಂಗಂ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ರಿಟ್ವೀಟ್ ಮಾಡಿ, ಪೊಲೀಸರು ಶವವನ್ನು ಹೊರುವುದರಿಂದ ಹಿಡಿದು ಆಟೋವನ್ನು ತಳ್ಳುವವರೆಗೂ ಎಲ್ಲ ಕೆಲಸವನ್ನೂ ಮಾಡುತ್ತಾರೆ. ಎಲ್ಲದಕ್ಕೂ ಅವರು ಸಿದ್ಧವಾಗಿರುತ್ತಾರೆ ಎಂದು ತಿಳಿಸಿದ್ದಾರೆ.

    ಕೆಲ ದಿನಗಳ ಹಿಂದೆಯಷ್ಟೇ ಮಳೆಯಿಂದಾಗಿ ಕೆಲ ಕಡೆ ರಸ್ತೆಯ ಮೇಲೆ ನೀರು ನಿಂತು ಸವಾರರು ಪರದಾಡುವಂತಾಗಿತ್ತು. ಬಿನ್ನಿಮಿಲ್ ರಸ್ತೆಯ ಮೇಲೆ ಮಳೆ ನೀರು ನಿಂತ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಇಂದರಿಂದಾಗಿ ಚಿಕ್ಕಪೇಟೆ ಠಾಣೆಯ ಮೂರು ಜನ ಟ್ರಾಫಿಕ್ ಪೊಲೀಸರು ಸಲಿಕೆ ಹಿಡಿದು, ಗುಂಡಿಗಳನ್ನು ಮುಚ್ಚಿ ರಸ್ತೆಯಲ್ಲಿ ನಿಂತಿದ್ದ ನೀರನ್ನು ಚರಂಡಿಗೆ ಹರಿಸಿದ್ದರು. ಟ್ರಾಫಿಕ್ ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.