Tag: Policeman

  • ಡ್ಯೂಟಿ ಚೇಂಜ್ ಮಾಡಿದ್ದಕ್ಕೆ ಆತ್ಮಹತ್ಯೆಗೆ ಯತ್ನ ಬೆದರಿಕೆ – ಠಾಣೆಯಲ್ಲಿ ಪೊಲೀಸ್ ಪೇದೆ ಹೈಡ್ರಾಮಾ

    ಡ್ಯೂಟಿ ಚೇಂಜ್ ಮಾಡಿದ್ದಕ್ಕೆ ಆತ್ಮಹತ್ಯೆಗೆ ಯತ್ನ ಬೆದರಿಕೆ – ಠಾಣೆಯಲ್ಲಿ ಪೊಲೀಸ್ ಪೇದೆ ಹೈಡ್ರಾಮಾ

    – ಪೇದೆ ಹೈಡ್ರಾಮಾಕ್ಕೆ ಹೆದರಿದ ಇನ್‌ಸ್ಪೆಕ್ಟರ್‌ಗೆ ಬಿಪಿ ಲೋ; ಆಸ್ಪತ್ರೆಗೆ ದಾಖಲು

    ಬೆಳಗಾವಿ: ಡ್ಯೂಟಿ ಚೇಂಜ್ ಮಾಡಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸುವ ರೀತಿಯಲ್ಲಿ ಪೇದೆ ಹೈಡ್ರಾಮಾ ಮಾಡಿದ ಘಟನೆ ಬೆಳಗಾವಿ (Belagavi) ನಗರದ ಉದ್ಯಮಬಾಗ ಪೊಲೀಸ್  (Udyambag) ಠಾಣೆಯಲ್ಲಿ ನಡೆದಿದೆ.

    ಆತ್ಮಹತ್ಯೆಗೆ ಯತ್ನಿಸಿದ ಪೇದೆಯನ್ನು ಮುದಕಪ್ಪ ಉದಗಟ್ಟಿ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಆರ್ಥಿಕ ಸಂಕಷ್ಟದಲ್ಲಿ ಹಿಮಾಚಲ ಸರ್ಕಾರ – ಜನರಿಗೆ ನೀಡಿದ್ದ ‘ಗ್ಯಾರಂಟಿ’ ವಾಪಸ್ ಅಭಿಯಾನ ಶುರು

    ಎರಡು ದಿನ ರಜೆಗೆ ಹೋಗಿ ಬಂದಿದ್ದ ಪೇದೆ ಮುದಕಪ್ಪನಿಗೆ ಡ್ಯೂಟಿ ಬದಲಿಸಿದ್ದರು. ಇದನ್ನು ಪ್ರಶ್ನೆ ಮಾಡಿದಾಗ ಬೆಳಗ್ಗೆ ನಿಯೋಜಿಸಿದ್ದ ಜಾಗಕ್ಕೆ ಹೋಗಬೇಕು ಎಂದು ಸೂಚನೆ ನೀಡಿದ್ದರು. ಇದರಿಂದ ತಾನು ವಿಷ ಸೇವಿಸುತ್ತೇನೆಂದು ಹೇಳಿ ಇನ್ಸ್ಪೆಕ್ಟರ್ ಡಿ.ಕೆ ಪಾಟೀಲ್ ಚೇಂಬರ್‌ನಲ್ಲಿ ಆತ್ಮಹತ್ಯೆ ಡ್ರಾಮಾ ಮಾಡಿ ಬಿದ್ದು ಉರುಳಾಡಿದ್ದ. ತಕ್ಷಣವೇ ಆಸ್ಪತ್ರೆಗೆ ರವಾನಿಸಿ, ಆರೋಗ್ಯ ತಪಾಸಣೆ ಮಾಡಿದಾಗ ವೈದ್ಯರು ಯಾವುದೇ ವಿಷ ಸೇವಿಸಿಲ್ಲ ಎಂದು ಹೇಳಿದ್ದರು. ಬಳಿಕ ಮೇಲಾಧಿಕಾರಿಗಳು ಪೇದೆಗೆ ಬುದ್ಧಿವಾದ ಹೇಳಿ ಮನೆಗೆ ಕಳುಹಿಸಿದ್ದರು.

    ಪೇದೆಯ ನಡೆಯಿಂದ ಇನ್ಸ್ಪೆಕ್ಟರ್ ಡಿ.ಕೆ ಪಾಟೀಲ್ ಅವರ ಬೀಪಿ ಲೋ ಆಗಿ ತಕ್ಷಣವೇ ಅವರನ್ನು ಯಳ್ಳೂರ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಸುದ್ದಿ ತಿಳಿದು ಖಡೇಬಜಾರ್ ಎಸಿಪಿ ಶೇಖರಪ್ಪ ಉದ್ಯಮಬಾಗ ಠಾಣೆಗೆ ಆಗಮಿಸಿದರು. ಠಾಣೆಯಲ್ಲಿರುವ ಸಿಬ್ಬಂದಿಯಿಂದ ಘಟನೆ ಕುರಿತು ಮಾಹಿತಿ ಪಡೆದರು. ಹೈಡ್ರಾಮಾ ಕುರಿತು ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್‌ಗೆ ಮಾಹಿತಿ ನೀಡಿದರು.

    ನ.28ರಂದು ಪೇದೆ ವಿಠ್ಠಲ್ ಮುನಿಹಾಳ ಎಂಬಾತ ನಾಲ್ಕು ಪುಟಗಳ ಡೆತ್‌ನೋಟ್ ಬರೆದಿಟ್ಟು ಹೋಗಿದ್ದ. ಡೆತ್‌ನೋಟ್‌ನಲ್ಲಿ ಸಿಪಿಐ ಕಿರುಕುಳ ನೀಡ್ತಿದ್ದಾರೆಂದು ಉಲ್ಲೇಖಿಸಿದ್ದ. ತಕ್ಷಣ ಆತನನ್ನು ಹುಡುಕಿ ಸಹೋದ್ಯೋಗಿಗಳು ಜೀವ ಉಳಿಸಿದ್ದರು.ಇದನ್ನೂ ಓದಿ: ನಮ್ಮ ಮೆಟ್ರೋ ‘ಯೆಲ್ಲೋ ಲೈನ್’‌ ಸೇವೆ ಆರಂಭ ಯಾವಾಗ?- ವಿಳಂಬಕ್ಕೆ ಕಾರಣ ಬಿಚ್ಚಿಟ್ಟ ತೇಜಸ್ವಿ ಸೂರ್ಯ

  • ಊಟ, ತಿಂಡಿ ಆಮಿಷವೊಡ್ಡಿ ಅಪ್ರಾಪ್ತ ಬಾಲಕಿ ಮೇಲೆ 63ರ ವೃದ್ಧನಿಂದ ಅತ್ಯಾಚಾರ

    ಊಟ, ತಿಂಡಿ ಆಮಿಷವೊಡ್ಡಿ ಅಪ್ರಾಪ್ತ ಬಾಲಕಿ ಮೇಲೆ 63ರ ವೃದ್ಧನಿಂದ ಅತ್ಯಾಚಾರ

    ಮಂಡ್ಯ: ಊಟ ತಿಂಡಿ ಆಮಿಷ ತೋರಿಸಿ ಅಪ್ರಾಪ್ತ ಬಾಲಕಿಯ ಮೇಲೆ 63 ವರ್ಷದ ವೃದ್ಧ ಬಲವಂತವಾಗಿ ಅತ್ಯಾಚಾರವೆಸಗಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.

    ಮಂಡ್ಯ ಜಿಲ್ಲೆಯ ಮಳವಳ್ಳಿ (Malavalli) ತಾಲೂಕಿನ ವ್ಯಾಪ್ತಿಯ ಗ್ರಾಮವೊಂದರಲ್ಲಿ 63 ವರ್ಷದ ವಯೋವೃದ್ಧ ಗ್ರಾಮದ ಹದಿನೈದು ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಹಲಗೂರು ಪಟ್ಟಣಕ್ಕೆ ಕರೆದುಕೊಂಡು ಬಂದಿದ್ದನು. ಈ ವೇಳೆ ಬಾಲಕಿಗೆ ಊಟ ತಿಂಡಿ ಕೊಡಿಸಿ ನಂತರ ಬಲವಂತವಾಗಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಳಿಕ ಬಾಲಕಿ ಆರೋಪಿ ವಿರುದ್ಧ ಹಲಗೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಇದನ್ನೂ ಓದಿ: IIT ಉದ್ಘಾಟನೆಗೆ ಪ್ರಧಾನಿ ಮೋದಿಯವರನ್ನು ಆಹ್ವಾನಿಸಿದ್ದೇನೆ: ಪ್ರಹ್ಲಾದ್ ಜೋಶಿ

    ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಹಲಗೂರು ವೃತ್ತ ನಿರೀಕ್ಷಕರು ಶ್ರೀಧರ್ ಮತ್ತು ಪಿಎಸ್‍ಐ ನೇತೃತ್ವದಲ್ಲಿ ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಪಿಯು ವಿದ್ಯಾರ್ಥಿನಿಗೆ ಬಸ್ ನಿಲ್ದಾಣದಲ್ಲೇ ತಾಳಿ ಕಟ್ಟಿದ 17 ವರ್ಷದ ಹುಡುಗ!

    Live Tv
    [brid partner=56869869 player=32851 video=960834 autoplay=true]

  • ಚಲಿಸುತ್ತಿರುವ ಕಾರಿನಲ್ಲಿಯೇ ತಾಯಿ, ಆಕೆಯ 6 ವರ್ಷದ ಮಗಳ ಮೇಲೆ ಅತ್ಯಾಚಾರ

    ಚಲಿಸುತ್ತಿರುವ ಕಾರಿನಲ್ಲಿಯೇ ತಾಯಿ, ಆಕೆಯ 6 ವರ್ಷದ ಮಗಳ ಮೇಲೆ ಅತ್ಯಾಚಾರ

    ಡೆಹ್ರಾಡೂನ್: ಚಲಿಸುತ್ತಿರುವ ಕಾರಿನಲ್ಲಿ ಮಹಿಳೆ ಮತ್ತು ಆಕೆಯ ಆರು ವರ್ಷದ ಮಗಳ ಮೇಲೆ ದುಷ್ಕರ್ಮಿಗಳು ಅತ್ಯಾಚಾರಗೈದಿರುವ ಘಟನೆ ಹರಿದ್ವಾರದ ರೂರ್ಕಿಯಲ್ಲಿ ನಡೆದಿದೆ.

    ಭಾನುವಾರ ಮುಸ್ಲಿಂ ಧಾರ್ಮಿಕ ಕ್ಷೇತ್ರವಾದ ಪಿರಾನ್ ಕಲಿಯಾರ್‌ನಿಂದ ಮಹಿಳೆ ತನ್ನ ಆರು ವರ್ಷದ ಮಗಳೊಂದಿಗೆ ಮನೆಗೆ ಹೋಗುತ್ತಿದ್ದ ವೇಳೆ ಸೋನು ಎಂಬ ವ್ಯಕ್ತಿ ಲಿಫ್ಟ್ ನೀಡುವ ನೆಪದಲ್ಲಿ ಕೃತ್ಯವೆಸಗಿದ್ದಾನೆ. ಇದೇ ವೇಳೆ ಸೋನು ಜೊತೆಗೆ ಕಾರಿನಲ್ಲಿದ್ದ ಕೆಲವು ಸ್ನೇಹಿತರು ಕೂಡ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: ರಾಜಧಾನಿಯಲ್ಲಿ ಪ್ರಯಾಣಿಕರಿಗೆ ತಟ್ಟಲಿದೆ ಡೀಸೆಲ್ ಕೊರತೆ ಬಿಸಿ – ಬಸ್ ಸಂಚಾರದಲ್ಲಿ ವ್ಯತ್ಯಯ

    ಕಾರು ಹತ್ತಿದ ಮಹಿಳೆ ಮತ್ತು ಆಕೆಯ ಮಗಳ ಮೇಲೆ ಸೋನು ಮತ್ತು ಆತನ ಸಹಚರರು ಅತ್ಯಾಚಾರವೆಸಗಿ ನಂತರ ಕಾಲುವೆವೊಂದರ ಬಳಿ ಇಬ್ಬರನ್ನು ತಳ್ಳಿ ಪರಾರಿಯಾಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಪ್ರಮೇಂದ್ರ ದೋವಲ್ ಹೇಳಿದ್ದಾರೆ.

    RAPE CASE

    ನಂತರ ಮಹಿಳೆ ಸ್ಥಳೀಯರ ಸಹಾಯದಿಂದ ಮಧ್ಯರಾತ್ರಿ ಪೊಲೀಸ್ ಠಾಣೆಗೆ ತಲುಪಿ ಪೊಲೀಸರಿಗೆ ನಡೆದ ಘಟನೆಯನ್ನು ವಿವರಿಸಿದ್ದಾರೆ. ವಿಚಾರಣೆ ವೇಳೆ ಕಾರಿನಲ್ಲಿ ಎಷ್ಟು ಮಂದಿ ಇದ್ದರು ಎಂಬುವುದು ನಿಖರವಾಗಿ ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಹೆಸರು ಸೋನು ಎಂದು ಗುರುತಿಸಿದ್ದಾರೆ. ಇದನ್ನೂ ಓದಿ: ಅಂಜನಾದ್ರಿ ಪರ್ವತಕ್ಕೆ ಮೈಸೂರು ರಾಜವಂಶಸ್ಥ ಯದುವೀರ್ ದಂಪತಿ ಭೇಟಿ

    ಸದ್ಯ ಇಬ್ಬರನ್ನು ರೂರ್ಕಿ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಇದೀಗ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

     

    Live Tv

  • ಹೆಂಡತಿ ಮನೆಗೆ ಬಂದಿದ್ದ ವ್ಯಕ್ತಿಯನ್ನು ಮಾರಕಾಸ್ತ್ರದಿಂದ ಕೊಚ್ಚಿ ಬರ್ಬರ ಹತ್ಯೆ

    ಹೆಂಡತಿ ಮನೆಗೆ ಬಂದಿದ್ದ ವ್ಯಕ್ತಿಯನ್ನು ಮಾರಕಾಸ್ತ್ರದಿಂದ ಕೊಚ್ಚಿ ಬರ್ಬರ ಹತ್ಯೆ

    ಬೆಳಗಾವಿ: ಹೆಂಡತಿ ಮನೆಗೆ ಬಂದಿದ್ದ ವ್ಯಕ್ತಿಯೊಬ್ಬರನ್ನು ಮಾರಕಾಸ್ತ್ರದಿಂದ ಕೊಚ್ಚಿ ಬರ್ಬರ ಹತ್ಯೆಗೈದಿರುವ ಘಟನೆ ಗೋಕಾಕ್ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ನಡೆದಿದೆ.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ನಿವಾಸಿ ದುಂಡಯ್ಯಾ ನಂದಿಕೊಳ್ಳಮಠ (42) ಕೊಲೆಯಾದ ವ್ಯಕ್ತಿ. ದುಂಡಯ್ಯಾ ನಂದಿಕೊಳ್ಳಮಠ ಅವರು ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿದ ಹೆಂಡತಿ ಮನೆಗೆ ಬಂದಿದ್ದರಂತೆ, ಈ ವೇಳೆ ತಡರಾತ್ರಿ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ತಲೆಯ ಭಾಗಕ್ಕೆ ಹಲ್ಲೆಗೈದು ಕೊಂದು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಬ್ಯಾಂಕ್ ಮ್ಯಾನೇಜರ್ ಗುಂಡಿಕ್ಕಿ ಹತ್ಯೆ

    ನಂತರ ಘಟನಾ ಸ್ಥಳಕ್ಕೆ ಆಗಮಿಸಿದ ಗೋಕಾಕ್ ಗ್ರಾಮೀಣ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತು ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಯೋಧರು ಪ್ರಯಾಣಿಸುತ್ತಿದ್ದ ವಾಹನ ಸ್ಫೋಟ: 3 ಸೈನಿಕರ ಸ್ಥಿತಿ ಗಂಭೀರ

  • ಹಳೆಯ ವೈಷಮ್ಯ – ಗೆಳೆಯನನ್ನೇ ಕೊಂದ ಪಾಪಿ

    ಹಳೆಯ ವೈಷಮ್ಯ – ಗೆಳೆಯನನ್ನೇ ಕೊಂದ ಪಾಪಿ

    ಬೀದರ್: ಹಳೆಯ ವೈಷಮ್ಯ ಹಿನ್ನೆಲೆ ವ್ಯಕ್ತಿಯನ್ನು ಕೊಲೆ ಮಾಡಿದ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಸಂತಪೂರ್ ಗ್ರಾಮದ ಬಳಿ ನಡೆದಿದೆ.

    ಮೃತ ದುರ್ದೈವಿಯನ್ನು ಅಂತೇಷ್(40) ಎಂದು ಗುರುತಿಸಲಾಗಿದ್ದು, ಪ್ರವೀಣ್ ಕುಮಾರ್ ಆರೋಪಿಯಾಗಿದ್ದಾನೆ. ಹಳೆ ವೈಷಮ್ಯ ಹಿನ್ನೆಲೆ ಪ್ರವೀಣ್ ಕುಮಾರ್ ಗೆಳೆಯ ಅಂತೇಷ್‍ನನ್ನು ಕಟ್ಟಿಗೆಯಿಂದ ಹೊಡೆದು ಹತ್ಯೆಗೈದಿದ್ದಾನೆ. ಹೀಗಾಗಿ ಆರೋಪಿಯನ್ನು ಕೂಡಲೇ ಬಂಧಿಸಬೇಕು ಎಂದು ಮನೆಯ ಮುಂದೆ ಶವವಿಟ್ಟು ಮೃತರ ಕುಟುಂಬಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ನಾನು ಅಧಿಕಾರದಲ್ಲಿದ್ದಾಗ ಅಪಾಯಕಾರಿಯಾಗಿರಲಿಲ್ಲ, ಆದ್ರೆ ಈಗ ಆಗಿದ್ದೇನೆ: ಇಮ್ರಾನ್ ಖಾನ್

    ಮೂಲತಃ ಕಮಲನಗರ ತಾಲೂಕಿನ ಡಿಗ್ಗಿ ಗ್ರಾಮದ ಅಂತೇಷ್ ಕೊಲೆಯಾಗಿದ್ದು, ಅದೇ ಗ್ರಾಮದ ಪ್ರವೀಣ್ ಕುಮಾರ್ ಊಟಕ್ಕೆಂದು ಡಾಬಾಗೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ. ಸದ್ಯ ಈ ಸಂಬಂಧ ಸಂತಪೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ. ಇದನ್ನೂ ಓದಿ: ಗಿಫ್ಟ್‌ ಆಗಿ ಬಂದ ನೆಕ್ಲೆಸ್‌ನ್ನು 18 ಕೋಟಿಗೆ ಮಾರಿದ್ದಕ್ಕೆ ಇಮ್ರಾನ್‌ ಖಾನ್‌ ವಿರುದ್ಧ ತನಿಖೆ

  • ಸೌಂಡ್ ಕಡಿಮೆ ಮಾಡಲು ಹೇಳಿದ ಕಾನ್‍ಸ್ಟೇಬಲ್- ಬಿಯರ್ ಬಾಟ್ಲಿಯಲ್ಲಿ ಹೊಡೆದು ಎಸ್ಕೇಪ್

    ಸೌಂಡ್ ಕಡಿಮೆ ಮಾಡಲು ಹೇಳಿದ ಕಾನ್‍ಸ್ಟೇಬಲ್- ಬಿಯರ್ ಬಾಟ್ಲಿಯಲ್ಲಿ ಹೊಡೆದು ಎಸ್ಕೇಪ್

    ನವದೆಹಲಿ: ಕಾರಿನಲ್ಲಿ ಜೋರಾಗಿ ಮ್ಯೂಸಿಕ್ ಹಾಕಿರುವ ಕುರಿತಾಗಿ ಆಕ್ಷೇಪ ವ್ಯಕ್ತಪಡಿಸಿದ್ದಕ್ಕಾಗಿ, ದೆಹಲಿ ಪೊಲೀಸ್ ಮೇಲೆ ಬಿಯರ್ ಬಾಟ್ಲಿಯಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ.

    ನಡೆದಿದ್ದೇನು?: ಉತ್ತರ ದೆಹಲಿಯ ಗುಲಾಬಿ ಬಾಗ್ ಪ್ರದೇಶದಲ್ಲಿ ಕಾರಿನಲ್ಲಿ ಮೂವರು ಜೋರಾಗಿ ಸೌಂಡ್ ಇಟ್ಟು ಹಾಡು ಕೇಳುತ್ತಿದ್ದರು. ಈ ವೇಳೆ ಗಸ್ತು ತಿರುಗುತ್ತಿದ್ದ ಪೊಲೀಸ್ ಪೇದೆಯೊಬ್ಬರು ಸೌಂಡ್ ಕಡಿಮೆ ಮಾಡುವಂತೆ ಹೇಳಿದ್ದಾರೆ. ಕಾರಿನಲ್ಲಿದ್ದವರು ಗಸ್ತು ತೀರುಗುತ್ತಿದ್ದ ಸಿಬ್ಬಂದಿಯನ್ನು ನಿಂದಿಸಲು ಪ್ರಾರಂಭಿಸಿದರು. ಪೊಲೀಸ್ ಕಾರಿನ ಸಂಖ್ಯೆಯನ್ನು ನಮೂದಿಸಿದರು. ತಮ್ಮ ಕಾರಿನ ನಂಬರ್ ನೋಟ್ ಆಗಿರುವುದನ್ನು ಅರಿತುಕೊಂಡ ಆರೋಪಿಗಳು ಮತ್ತೊಮ್ಮೆ ಯು-ಟರ್ನ್ ತೆಗೆದುಕೊಂಡು ಕಾರನ್ನು ಗಸ್ತು ತಿರುಗುತ್ತಿದ್ದ ಸಿಬ್ಬಂದಿಯತ್ತ ವೇಗವಾಗಿ ಚಲಾಯಿಸಿ ಕಾನ್‍ಸ್ಟೇಬಲ್‌ಗೆ ಡಿಕ್ಕಿ ಹೊಡೆಯಲು ಯತ್ನಿಸಿದರು ಆದರೆ ಎಚ್ಚೆತ್ತ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಕಾರಿನಲ್ಲಿದ್ದ ಮೂವರು ಕೈಯಲ್ಲಿ ಬಿಯರ್ ಬಾಟಲಿಗಳನ್ನು ಹಿಡಿದಿದ್ದರು. ಕಾರಿನಲ್ಲಿದ್ದವರಲ್ಲಿ ಒಬ್ಬನು ಬಿಯರ್ ಬಾಟಲಿಯಿಂದ ಕಾನ್‍ಸ್ಟೆಬಲ್ ಪ್ರದೀಪ್ ಅವರ ತಲೆಗೆ ಹೊಡೆದಿದ್ದಾನೆ. ತಕ್ಷಣವೇ ಮೂವರು ಎಸ್ಕೇಪ್ ಆಗಿದ್ದಾರೆ. ನಂತರ ಕಾನ್‍ಸ್ಟೇಬಲ್ ಪ್ರದೀಪ್ ಅವರನ್ನು ಚಿಕಿತ್ಸೆಗಾಗಿ ಗುಲಾಬಿ ಬಾಗ್‍ನ ಎನ್‍ಕೆಎಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದನ್ನೂ ಓದಿ : ಇರುವೆ ಪಾತ್ರವಾಗಿ ಬಂದ ಸಂಚಾರಿ ವಿಜಯ್

    ಪ್ರತ್ಯಕ್ಷದರ್ಶಿಯೊಬ್ಬರು ಕಾರು ಚಾಲಕನನ್ನು ಅಶೋಕ್ ಅಲಿಯಾಸ್ ಅಶು ಎಂದು ಗುರುತಿಸಿದ್ದಾರೆ. ಚಾಲಕನ ಪಕ್ಕದ ಸೀಟಿನಲ್ಲಿದ್ದ ವ್ಯಕ್ತಿ ಯಶು ಚೌಹಾನ್ ಇಬ್ಬರೂ ದೆಹಲಿಯ ಸರಾಯ್ ರೋಹಿಲ್ಲಾದ ಪದಮ್ ನಗರದ ನಿವಾಸಿಗಳು ಎಂದು ಹೇಳಿದ್ದಾರೆ. ಇದನ್ನೂ ಓದಿ : ಜೇಮ್ಸ್ ಚಿತ್ರದ ಬೆಳಗ್ಗಿನ 6 ಗಂಟೆಯ 200 ಶೋಗಳ ಟಿಕೆಟ್ ಸೋಲ್ಡ್ ಔಟ್: ಏನೆಲ್ಲ ದಾಖಲೆ?

    ಐಪಿಸಿಯ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಕಾನ್‍ಸ್ಟೇಬಲ್ ಪ್ರದೀಪ್ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಘಟನೆಯ ನಂತರ ಅಶೋಕ್ (22), ಯಶ್ ಪ್ರತಾಪ್ ಸಿಂಗ್ (22) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಕಾರ್ ವಶಪಡಿಸಿಕೊಳ್ಳಲಾಗಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

  • ರಾಡ್‍ನಿಂದ ಹೊಡೆದು ಪತ್ನಿಯ ಹತ್ಯೆಗೈದು ಪತಿಯೂ ಆತ್ಮಹತ್ಯೆಗೆ ಶರಣು

    ರಾಡ್‍ನಿಂದ ಹೊಡೆದು ಪತ್ನಿಯ ಹತ್ಯೆಗೈದು ಪತಿಯೂ ಆತ್ಮಹತ್ಯೆಗೆ ಶರಣು

    ಧಾರವಾಡ: ಪತ್ನಿಯನ್ನು ಕೊಲೆ ಮಾಡಿ ಪತಿ ಕೂಡ ಆತ್ಮಹತ್ಯೆಗೆ ಶರಣಾದ ಘಟನೆ ಧಾರವಾಡದಲ್ಲಿ ನಡೆದಿದೆ.

    ನಗರದ ಹೊರವಲಯದ ಗಣೇಶನಗರದಲ್ಲಿ ಈ ಘಟನೆ ನಡೆದಿದ್ದು, ಚಟ್ಟು ತನ್ನ ಪತ್ನಿ ಮನಿಷಾಳನ್ನು ಹತ್ಯೆಗೈದು ನೇಣಿಗೆ ಶರಣಾಗಿದ್ದಾನೆ. ಕಳೆದ ರಾತ್ರಿ ಇದೇ ಬಡಾವಣೆಯ ತನ್ನ ತಾಯಿಯ ಮನೆಯಲ್ಲಿ ಇದ್ದ ಮನಿಷಾ, ಪತಿಗೆ ಊಟ ಕೊಡಲು ಬಂದು, ಪತಿಯ ಮನೆಯಲ್ಲಿಯೇ ಮಲಗಿದ್ದಳು. ರಾತ್ರಿ ಕುಡಿದು ಪತ್ನಿಯ ಜೊತೆ ಜಗಳ ಮಾಡಿದ ಚಟ್ಟು, ಪತ್ನಿ ಮಲಗಿದ್ದಾಗ ಕಬ್ಬಿಣದ ರಾಡ್‍ನಿಂದ ಹೊಡೆದು ಕೊಲೆ ಮಾಡಿ, ನಂತರ ತಾನು ಕೂಡ ನೇಣು ಹಾಕಿಕೊಂಡಿದ್ದಾನೆ. ಇದನ್ನೂ ಓದಿ: ಯುಪಿ ಚುನಾವಣಾ ಫಲಿತಾಂಶ ನಮಗೊಂದು ಪಾಠ: ಮಾಯಾವತಿ

    POLICE JEEP

    ಕಳೆದ ಮೂರು ದಿನಗಳ ಹಿಂದೆ ಕೂಡಾ ಚಟ್ಟು ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ತಿಳಿದು ಬಂದಿದೆ. ಆದರೆ ಪತ್ನಿ ಇದನ್ನು ತಡೆದಿದ್ದಳು. ಗೋವಾದಲ್ಲಿ ಪೈಪ್ ಲೈನ್ ಕೆಲಸ ಮಾಡುತಿದ್ದ ಚಟ್ಟು ಕಳೆದ ವಾರವಷ್ಟೇ ಧಾರವಾಡಕ್ಕೆ ಬಂದಿದ್ದ. ಈ ದಂಪತಿಗೆ ಇಬ್ಬರು ಮಕ್ಕಳು ಕೂಡಾ ಇದ್ದಾರೆ. ಸದ್ಯ ಉಪನಗರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ವಿಶ್ವ ಮಹಿಳಾ ದಿನಾಚರಣೆ – ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕರಿಗೆ ಗೌರವ


    Husband, wife, policeman, Dharwad

  • ಬಾಂಬ್ ಸ್ಫೋಟ 30 ಮಂದಿ ಸಾವು, 50 ಮಂದಿಗೆ ಗಾಯ

    ಬಾಂಬ್ ಸ್ಫೋಟ 30 ಮಂದಿ ಸಾವು, 50 ಮಂದಿಗೆ ಗಾಯ

    ಇಸ್ಲಾಮಾಬಾದ್: ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟಿಸಿದ್ದು, 30 ಮಂದಿ ಸಾವನ್ನಪಿದ್ದು, 50 ಮಂದಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಪಾಕಿಸ್ತಾನದ ಪೇಶಾವರದಲ್ಲಿ ಇಂದು ಪ್ರಾರ್ಥನೆಯ ಸಮಯದಲ್ಲಿ ಬಾಂಬ್ ಸ್ಫೋಟಿಸಿದ್ದು, ಕನಿಷ್ಠ 30 ಮಂದಿ ಸಾವಿಗೀಡಾಗಿದ್ದಾರೆ. ಮಸೀದಿಯಲ್ಲಿ ಪ್ರಾರ್ಥನೆ ನಡೆಯುತ್ತಿದ್ದಾಗ ಬಾಂಬ್ ಸ್ಫೋಟಿಸಿದೆ. ಘಟನೆಯಲ್ಲಿ ಕನಿಷ್ಠ 30 ಮಂದಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಜನರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: Karnataka Budget: ಈ ವರ್ಷ ಯಾವುದೇ ತೆರಿಗೆ ಹೆಚ್ಚಳ ಇಲ್ಲ

    ಪ್ರಾರ್ಥನೆಯ ವೇಳೆ ಇಬ್ಬರು ದಾಳಿಕೋರರು ಮಸೀದಿ ಪ್ರವೇಶಿಸಿದ್ದಾರೆ. ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿ ಬಳಿಕ ಬಾಂಬ್ ಸ್ಫೋಟ ನಡೆದಿದೆ. ಕಿಸಾ ಖ್ವಾನಿ ಬಜಾರ್ ಪ್ರದೇಶದಲ್ಲಿರುವ ಜಾಮಿಯಾ ಮಸೀದಿಯಲ್ಲಿ ಈ ಘಟನೆ ನಡೆದಿದೆ.   ಇದನ್ನೂ ಓದಿ: ಗುಂಡ್ಲುಪೇಟೆಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ಗುಡ್ಡ ಕುಸಿತ – ಇಬ್ಬರು ಗಣಿ ಕಾರ್ಮಿಕರು ಸಾವು?

    ಇಬ್ಬರು ದಾಳಿಕೋರರು ಮಸೀದಿಗೆ ಪ್ರವೇಶಿಸಲು ಪ್ರಯತ್ನಿಸಿದರು ಮತ್ತು ಕಾವಲು ನಿಂತ ಪೊಲೀಸರ ಮೇಲೆ ಗುಂಡು ಹಾರಿಸಿದರು. ಗಾಯಗೊಂಡಿರುವ 10 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಓರ್ವ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದು, ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ರಾಜಧಾನಿ ನಗರ ಪೊಲೀಸ್ ಅಧಿಕಾರಿ ಪೇಶಾವರ್ ಇಜಾಜ್ ಅಹ್ಸಾನ್ ಹೇಳಿದ್ದಾರೆ.

  • ಪೊಲೀಸ್ ಪೇದೆ ದಾಂಪತ್ಯದಲ್ಲಿ ಕಲಹ – ಪತ್ನಿ ಆತ್ಮಹತ್ಯೆ

    ಪೊಲೀಸ್ ಪೇದೆ ದಾಂಪತ್ಯದಲ್ಲಿ ಕಲಹ – ಪತ್ನಿ ಆತ್ಮಹತ್ಯೆ

    ಚಿಕ್ಕಬಳ್ಳಾಪುರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗಂಡ-ಹೆಂಡತಿ ಜಗಳವಾಡಿದ್ದು, ಪರಿಣಾಮ ಹೆಂಡತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಅಣಕನೂರು ಗ್ರಾಮದಲ್ಲಿ ನಡೆದಿದೆ.

    ಚಿಕ್ಕಬಳ್ಳಾಪುರ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೇದೆ ಸುರೇಂದ್ರ ಅವರ ಪತ್ನಿ ಸ್ನೇಹಾ(25) ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುದ್ದಿ ತಿಳಿದ ತಕ್ಷಣ ಸುರೇಂದ್ರ ಸಹ ಚಾಕುವಿನಿಂದ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪ್ರಸ್ತುತ ಸುರೇಂದ್ರ ಅವರಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇದನ್ನೂ ಓದಿ: ಪುಟ್ಟ ಕಂದಮ್ಮನೊಂದಿಗೆ ಪತಿಯನ್ನು ಹುಡುಕುತ್ತಾ ಕಾಡಿಗೆ ತೆರಳಿದ ಪತ್ನಿ..!

    ಸ್ನೇಹಾ ಮೃತದೇಹವನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿಲಾಗಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಮೃತಳ ಪೋಷಕರು ಹಾಗೂ ಸಂಬಂಧಿಕರ ಆಗಮನಕ್ಕಾಗಿ ಕಾದಿದ್ದು, ಪೋಷಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಮುಂದಾಗಿದ್ದಾರೆ.

  • ಕ್ಯಾಬ್ ಚಾಲಕನಿಗೆ ಚಾಕುವಿನಿಂದ ಇರಿದ ವಿದೇಶಿ ಮಹಿಳೆ

    ಕ್ಯಾಬ್ ಚಾಲಕನಿಗೆ ಚಾಕುವಿನಿಂದ ಇರಿದ ವಿದೇಶಿ ಮಹಿಳೆ

    ಚಂಡೀಗಢ: ಕ್ಯಾಬ್ ಚಾಲಕನಿಗೆ ಮಹಿಳೆಯೊಬ್ಬಳು ಚಾಕುವಿನಿಂದ ಇರಿದ ಘಟನೆ ಗುರುಗ್ರಾಮದಲ್ಲಿ ನಡೆದಿದ್ದು, ಇದೀಗ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.

    ಮಹಿಳೆ ಬುರ್ಕಾ ಧರಿಸಿ ಬೆಳಗ್ಗೆ 11 ಗಂಟೆ ಸುಮಾರಿಗೆ ಗುರುಗ್ರಾಮದ ಸೈಬರ್ ಸಿಟಿ ಪ್ರದೇಶದಿಂದ ಕ್ಯಾಬ್ ಹತ್ತಿದ್ದಾಳೆ. ನಂತರ ಚಾಲಕನಿಗೆ ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದ್ದಾಳೆ. ಆದರೆ ಮಹಿಳೆಯನ್ನು ಪಿಸಿಆರ್ ಪೊಲೀಸರು ಹಿಂಬಾಲಿಸಿ ಬಂಧಿಸಿದ್ದಾರೆ. ಇದನ್ನೂ ಓದಿ: ಹಿಜಬ್‍ಗಾಗಿ ಪಟ್ಟು ಹಿಡಿದ ವಿದ್ಯಾರ್ಥಿನಿಯರ ಮನವೊಲಿಸಿದ ಅಧಿಕಾರಿಗಳು

    ನಂತರ ಆಕೆಯನ್ನು ವಿಚಾರಣೆ ನಡೆಸಿದ ವೇಳೆ ಮಹಿಳೆಗೆ 30 ವರ್ಷದವಳಾಗಿದ್ದು, ಈಜಿಪ್ಟ್ ಮೂಲದವಳಾಗಿದ್ದಾಳೆ ಎಂಬ ಸತ್ಯ ಬಹಿರಂಗಗೊಂಡಿದೆ ಮತ್ತು ಮಹಿಳೆ ಮಾನಸಿಕ ಅಸ್ವಸ್ಥೆಯಾಗಿದ್ದು, ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಅನುವಾದಕರನ್ನು ಕರೆಸಲಾಗಿತ್ತು. ಮಹಿಳೆ ಹೇಳಿಕೆ ದಾಖಲಿಸಿಕೊಂಡ ಬಳಿಕ ಘಟನೆಯ ಹಿಂದಿನ ಕಾರಣ ತಿಳಿದುಬಂದಿದೆ. ಸದ್ಯ ಕ್ಯಾಬ್ ಚಾಲಕನನ್ನು ಸ್ಥಳೀಯ ಗುರುಗ್ರಾಮ್‍ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದನ್ನೂ ಓದಿ: ಸೆಲ್ಫಿ ತೆಗೆದುಕೊಳ್ಳಲು ಹೋಗಿ ರೈಲಿಗೆ ಡಿಕ್ಕಿ – ನಾಲ್ವರ ಸಾವು