Tag: police

  • Exclusive | ಧರ್ಮಸ್ಥಳ ಪ್ರಕರಣದ‌ ಅನಾಮಿಕನ ಹುಟ್ಟೂರಲ್ಲಿ ʻಪಬ್ಲಿಕ್‌ ಟಿವಿʼ – ಒಂದೂವರೆ ಲಕ್ಷ ಸಾಲ ಪಡೆದು ಎಸ್ಕೇಪ್‌ ಆಗಿದ್ದ ಮಾಸ್ಕ್‌ ಮ್ಯಾನ್‌

    Exclusive | ಧರ್ಮಸ್ಥಳ ಪ್ರಕರಣದ‌ ಅನಾಮಿಕನ ಹುಟ್ಟೂರಲ್ಲಿ ʻಪಬ್ಲಿಕ್‌ ಟಿವಿʼ – ಒಂದೂವರೆ ಲಕ್ಷ ಸಾಲ ಪಡೆದು ಎಸ್ಕೇಪ್‌ ಆಗಿದ್ದ ಮಾಸ್ಕ್‌ ಮ್ಯಾನ್‌

    – ಮಂಡ್ಯದ ಈ ಗ್ರಾಮದಲ್ಲಿ ಗ್ರಾಮಸ್ಥರೊಂದಿಗೂ ಕಿರಿಕ್‌ ಮಾಡ್ಕೊಂಡಿದ್ದ ಮಾಸ್ಕ್‌ ಮ್ಯಾನ್‌
    – ಚಿಕ್ಕ ವಯಸ್ಸಿನಲ್ಲೇ ಮದ್ವೆ, ಕೆಲಸವಿಲ್ಲದೇ ಉಂಡಾಣಿ ಗುಂಡನಂತಿದ್ದ ದೂರುದಾರ

    ಮಂಡ್ಯ: ಧರ್ಮಸ್ಥಳ ಪ್ರಕರಣಕ್ಕೆ (Dharmasthala Case) ಸಂಬಂಧಿಸಿದಂತೆ ಸ್ಫೋಟಕ ವಿಚಾರಗಳನ್ನು ಬಯಲಿಗೆಳೆಯುತ್ತಿರುವ ನಿಮ್ಮ ʻಪಬ್ಲಿಕ್‌ ಟಿವಿʼ ಬುರುಡೆ ಪ್ರಕರಣದ ಮಾಸ್ಕ್‌ ಮ್ಯಾನ್‌ ಕುರಿತು ಇನ್ನಷ್ಟು ಎಕ್ಸ್‌ಕ್ಲೂಸಿವ್‌ ಮಾಹಿತಿಗಳನ್ನ ಬಯಲಿಗೆಳೆದಿದೆ. ಮಾಸ್ಕ್‌ ಮ್ಯಾನ್‌ನ ಹುಟ್ಟೂರು ಯಾವುದು? ಆತ ಓದಿದ್ದೇನು? ಊರಲ್ಲಿ ಏನು ಕೆಲಸ ಮಾಡಿಕೊಂಡಿದ್ದ? ಎಂಬೆಲ್ಲ ಮಾಹಿತಿಗಳನ್ನ ಬಹಿರಂಗಪಡಿಸಿದೆ.

    ಹೌದು. ಬುರುಡೆ ಪ್ರಕರಣದ ಮಾಸ್ಕ್‌ ಮ್ಯಾನ್‌ (Mask Man) ಮೂಲತಃ ಮಂಡ್ಯ ತಾಲೂಕಿನ ಚಿಕ್ಕಬಳ್ಳಿ ಗ್ರಾಮದಲ್ಲಿ ಹುಟ್ಟಿ ಬೆಳದವನಂತೆ. 1ನೇ ತರಗತಿಯಿಂದ 3ನೇ ತರಗತಿವರೆಗೆ ಇದೇ ಗ್ರಾಮದಲ್ಲಿ ವಿದ್ಯಾಭ್ಯಾಸ ಕೂಡ ಮಾಡಿಕೊಂಡಿದ್ದ. ಈತನ ತಂದೆ-ತಾಯಿಗೂ ಒಳ್ಳೆಯ ಹೆಸರಿದೆ. 1994ರ ವರೆಗೆ ಮಂಡ್ಯ ಜಿಲ್ಲೆಯ ಚಿಕ್ಕಬಳ್ಳಿ ಗ್ರಾಮದಲ್ಲಿಲ್ಲೇ ಇದ್ದ. ಇಲ್ಲಿದ್ದಾಗ ಉಂಡಾಣಿ ಗುಂಡನ ರೀತಿ ಇದ್ದ. ಏನು ಕೆಲಸ ಮಾಡದೇ ಬೀದಿ ಬೀದಿ ತಿರುಗುತ್ತಿದ್ದ. ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿದ್ದ ಅಂತ ಖುದ್ದು ಅಲ್ಲಿನ ಗ್ರಾಮಸ್ಥರೇ ಪಬ್ಲಿಕ್‌ ಟಿವಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನೂರಾರು, ಸಾವಿರಾರು ಹೆಣ ಹೂತಿದ್ದೇನೆ ಎನ್ನುವುದು ಸುಳ್ಳು: ಮಾಸ್ಕ್‌ಮ್ಯಾನ್‌ ಜೊತೆ ಕೆಲಸ ಮಾಡಿದ್ದ ಕೆಲಸಗಾರ

    ಸರ್ಕಾರಿ ಜಾಗ ಬರೆದುಕೊಡುವಂತೆ ಕೇಳಿದ್ದ
    ಮೊದಲು ಮುಸುಕುದಾರಿ ಅಣ್ಣ ತನ್ಯಾಸಿ ಧರ್ಮಸ್ಥಳಕ್ಕೆ ಹೋಗಿದ್ದ. ಬಳಿಕ ಈ ಅನಾಮಿಕ ಕೂಡ 1994ರಲ್ಲಿ ಧರ್ಮಸ್ಥಳಕ್ಕೆ ಹೋದ. 2014ರಲ್ಲಿ ಇದೇ ಗ್ರಾಮಕ್ಕೆ ಅನಾಮಿಕ ಮೂರನೇ ಹೆಂಡತಿಯ ಜೊತೆ ಗ್ರಾಮಕ್ಕೆ ವಾಪಸ್ಸಾಗಿದ್ದ. ಈ ವೇಳೆ ಒಂದು ವರ್ಷ ಇದೇ ಗ್ರಾಮದಲ್ಲಿ ವಾಸವಿದ್ದ. ಈ ವೇಳೆ ಸರ್ಕಾರಿ ಜಾಗದಲ್ಲಿ ಗ್ರಾ.ಪಂ ನಿಂದ ಮಾಸ್ಕ್‌ ಮ್ಯಾನ್‌ಗೆ ಶೆಡ್‌ ಕೂಡ ಹಾಕಿಕೊಡಲಾಗಿತ್ತು. ಕೆಲ ದಿನಗಳ ನಂತರ ಗ್ರಾಮಸ್ಥರೊಂದಿಗೆ ಗಲಾಟೆ ಮಾಡಿಕೊಂಡಿದ್ದ. ಶೆಡ್ ಜಾಗವನ್ನು ನನ್ನ ಹೆಸರಿಗೆ ಬರೆದುಕೊಡಿ ಎಂದು ಗಲಾಟೆ ಕೂಡ ಮಾಡಿಕೊಂಡಿದ್ದ. ಆಗ ಗ್ರಾಮಸ್ಥರೊಂದಿಗೆ ಗಲಾಟೆ ಮಾಡಿಕೊಂಡು ಊರಿಂದ ಹೋರಟುಹೋಗಿದ್ದ. ಕಳೆದ ವರ್ಷದ ಪಿತೃಪಕ್ಷದ ವೇಳೆ ಇದೇ ಗ್ರಾಮಕ್ಕೆ ಮತ್ತೆ ಬಂದಿದ್ದ. ಈಗ ಧರ್ಮಸ್ಥಳದಲ್ಲಿ ಪ್ರತ್ಯಕ್ಷವಾಗಿ ಈ ರೀತಿ ಮಾತನಾಡ್ತಿರೋದು ತಪ್ಪು ಅಂತ ಗ್ರಾಮಸ್ಥರು ಎಳೆಎಳೆಯಾಗಿ ಮಾಸ್ಕ್‌ ಮ್ಯಾನ್‌ ಬಗೆಗಿನ ರಹಸ್ಯಗಳನ್ನ ಬಿಚ್ಚಿಟ್ಟಿದ್ದಾರೆ.

    ಧರ್ಮಸ್ಥಳದ ಬಗ್ಗೆ ಸುಳ್ಳುಗಳನ್ನೇ ಆತ ಹೇಳ್ತಿದ್ದಾನೆ. ದುಡ್ಡಿಗಾಗಿ ಈ ರೀತಿಯ ಕೆಲಸ ಮಾಡ್ತಾ ಇದ್ದಾನೇನೋ ಅನಿಸ್ತಿದೆ ಅಂತ ಅನಾಮಿಕನ ವಿರುದ್ಧ ಗ್ರಾಮಸ್ಥರ ಆಕ್ರೋಶದ ನುಡಿಗಳನ್ನಾಡಿದ್ದಾರೆ. ಇದನ್ನೂ ಓದಿ: Exclusive ಸುಜಾತ ಭಟ್‌ ತೋರಿಸಿದ ಫೋಟೋ ನನ್ನ ತಂಗಿಯದ್ದು: ಸಹೋದರ ವಿಜಯ್‌

    ಗ್ರಾಮದ ಮುಖಂಡನಿಗೆ ಒಂದೂವರೆ ಲಕ್ಷ ಪಂಗನಾಮ
    2014ರಲ್ಲಿ ಗ್ರಾಮಕ್ಕೆ ವಾಪಸ್ಸಾದಾಗ ಹಸು ಸಾಕಬೇಕು ಎಂದಿದ್ದ. ಈ ವೇಳೆ ಬ್ಯಾಂಕ್‌ವೊಂದರಲ್ಲಿ ಗ್ರಾಮದ ಮುಖಂಡರು ಒಂದೂವರೆ ಲಕ್ಷ ಸಾಲ ಕೊಡಿಸಿದ್ದರು. ನಂತರ ಹಸುಗಳನ್ನು ಮಾರಿ ಎಸ್ಕೇಪ್‌ ಆದ. ಸಾಲಕೊಡಿಸಿದವರು ಸಾಲ ಕಟ್ಟುವ ಸ್ಥಿತಿ ಬಂತು. ಕಳೆದ ಒಂದೂವರೆ ವರ್ಷದ ಹಿಂದೆ ಮತ್ತೆ ಗ್ರಾಮದ ಒಬ್ಬರಿಗೆ ಕರೆ ಮಾಡಿ, ಲೋನ್ ತೆಗೆದುಕೊಳ್ಳಲು ಡಾಕ್ಯುಮೆಂಟ್ ಕೇಳಿದ್ದ. ನಂತರ ಡಾಕ್ಯುಮೆಂಟ್ ಕೊಡಲು ಆಗಲ್ಲ ಅಂತ ಗ್ರಾಮಸ್ಥರು ಹೇಳಿದ್ದರು ಎಂದು ಗ್ರಾಮದ ಮುಖಂಡರು ಹೇಳಿದ್ದಾರೆ.

  • ನೂರಾರು, ಸಾವಿರಾರು ಹೆಣ ಹೂತಿದ್ದೇನೆ ಎನ್ನುವುದು ಸುಳ್ಳು: ಮಾಸ್ಕ್‌ಮ್ಯಾನ್‌ ಜೊತೆ ಕೆಲಸ ಮಾಡಿದ್ದ ಕೆಲಸಗಾರ

    ನೂರಾರು, ಸಾವಿರಾರು ಹೆಣ ಹೂತಿದ್ದೇನೆ ಎನ್ನುವುದು ಸುಳ್ಳು: ಮಾಸ್ಕ್‌ಮ್ಯಾನ್‌ ಜೊತೆ ಕೆಲಸ ಮಾಡಿದ್ದ ಕೆಲಸಗಾರ

    – ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ಮಂಡ್ಯ ಮೂಲದ ರಾಜು 
    – ಆತ ಹಣಕ್ಕಾಗಿ ಈ ರೀತಿಯ ಆರೋಪ ಮಾಡಿರುವ ಸಾಧ್ಯತೆಯಿದೆ
    – ಈಗ ಏನು ಹೇಳಿದ್ದೇನೋ ಅದನ್ನೇ ನಾನು ಎಸ್‌ಐಟಿಗೆ ತಿಳಿಸಿದ್ದೇನೆ

    ಬೆಂಗಳೂರು: ಅನಾಮಿಕ ವ್ಯಕ್ತಿ ಹಣಕ್ಕೆ ಧರ್ಮಸ್ಥಳ ದೇವಸ್ಥಾನದ ಮೇಲೆ ಆರೋಪ ಮಾಡಿರುವ ಸಾಧ್ಯತೆಯಿದೆ ಎಂದು ಈ ಹಿಂದೆ ದೇವಸ್ಥಾನದಲ್ಲಿ ಕಸ ಗುಡಿಸುತ್ತಿದ್ದ ಮಂಡ್ಯ ಮೂಲದ ರಾಜು ಹೇಳಿದ್ದಾರೆ.

    ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ಅವರು, ನಾನು ನಾಲ್ಕು ವರ್ಷಗಳ ಕಾಲ ಧರ್ಮಸ್ಥಳದಲ್ಲಿ‌ 10 ವರ್ಷಗಳ ಹಿಂದೆ ಕೆಲಸ ಮಾಡಿದ್ದೇನೆ. ನಮಗೆ ಮಾಹಿತಿ ಕಚೇರಿಯಿಂದ ವಿಷಯ ತಿಳಿಸಲಾಗಿತ್ತು. ಆಗ ನಾವು ಹೆಣಗಳನ್ನು ಎತ್ತಿ ದಡಕ್ಕೆ ತರುತ್ತಿದ್ದೆವು. ನಂತರ ಅದನ್ನು ಅಂಬುಲೆನ್ಸ್‌ ಮೂಲಕ ಬೆಳ್ತಂಗಡಿಗೆ ಸಾಗಿಸಲಾಗುತ್ತಿತ್ತು ಎಂದು ತಿಳಿಸಿದರು.

    ನೂರಾರು, ಸಾವಿರಾರು ಹೆಣ ಹೂತಿದ್ದೇನೆ ಎನ್ನುವುದು ಸುಳ್ಳು. ಶವ ಹೂತಿದ್ದರೆ ಮೂಳೆಗಳು ಸಿಗಬೇಕಿತ್ತು. ಜೆಸಿಬಿ ತಂದರೂ ಮೂಳೆ ಸಿಕ್ಕಿಲ್ಲ. ಕೆಲಸ ಕೊಟ್ಟ ಧಣಿಗಳ ಮೇಲೆ ಈ ರೀತಿ ಆರೋಪ ಮಾಡುವುದು ಸರಿಯಲ್ಲ. ಇದು ಬಹಳ ತಪ್ಪು ಎಂದು ಹೇಳಿದರು. ಇದನ್ನೂ ಓದಿ: Exclusive ಸುಜಾತ ಭಟ್‌ ತೋರಿಸಿದ ಫೋಟೋ ನನ್ನ ತಂಗಿಯದ್ದು: ಸಹೋದರ ವಿಜಯ್

     
    ಪಬ್ಲಿಕ್‌ ಟಿವಿಗೆ ರಾಜು ತಿಳಿಸಿದ್ದೇನು?
    ಮೊದಲು ಇಲ್ಲಿ ನನ್ನ ಅತ್ತೆ, ಮಾವ ಇಲ್ಲಿ ಸಚ್ಛತಾ ಕೆಲಸ ಮಾಡುತ್ತಿದ್ದರು. ನಂತರ ಅವರಿಗೆ ಹುಷಾರಿಲ್ಲದ ಕಾರಣ ನಾನು ಹೋಗಿದ್ದೆ. ಈ ಸಂದರ್ಭದಲ್ಲಿ ನಮ್ಮ ಕುಟುಂಬ ಮತ್ತು ಮಾಸ್ಕ್‌ ಮ್ಯಾನ್‌ ಕುಟುಂಬ ಹತ್ತಿರ ಹತ್ತಿರ ನೆಲೆಸಿದ್ದೆವು.

    ನಾನು ದೇವಸ್ಥಾನ, ನೇತ್ರಾವತಿ ಸ್ನಾನಘಟ್ಟ, ಬಾಹುಬಲಿ ಬೆಟ್ಟದಲ್ಲಿ ಕೆಲಸ ಮಾಡಿದ್ದೇನೆ. ಮೂರು ತಿಂಗಳಿಗೊಮ್ಮೆ ಕೆಲಸದ ಜಾಗ ಬದಲಾವಣೆ ಆಗುತ್ತಿತ್ತು. ಧಣಿಗಳು ಯಾವತ್ತೂ ಆ ಕೆಲಸ ಮಾಡು ಈ ಕೆಲಸ ಮಾಡು ಎಂದು ಹೇಳುತ್ತಿರಲಿಲ್ಲ. ಎದುರು ಸಿಕ್ಕಿದಾಗ ನಾವು ನಮಸ್ಕಾರ ಮಾಡುತ್ತಿದ್ದೆವು.

    ಮಾಹಿತಿ ಕಚೇರಿಯಿಂದ ಬರುತ್ತಿದ್ದ ಸೂಚನೆಯ ಮೇರೆಗೆ ಕೆಲಸ ಮಾಡುತ್ತಿದ್ದೆವು. ಮಕ್ಕಳು ನಾಪತ್ತೆಯಾಗಿದ್ದರೆ ಮೈಕ್‌ ಮೂಲಕ ಪ್ರಕಟಣೆ ಹೊರಡಿಸಲಾಗುತ್ತಿತ್ತು. ಮಾಹಿತಿ ಕಚೇರಿ ಮತ್ತು ನೇತ್ರಾವತಿ ಬಳಿ ಪ್ರಕಟಣೆಯಾಗುತ್ತಿತ್ತು. ಮಕ್ಕಳು ಸಿಕ್ಕಿದರೆ ಮಾಹಿತಿ ಕಚೇರಿಗೆ ಬಿಡುತ್ತಿದ್ದರು. ನಂತರ ಪೋಷಕರ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಅವರಿಗೆ ಮಕ್ಕಳನ್ನು ಅವರಿಗೆ ಹಸ್ತಾಂತರ ಮಾಡಲಾಗುತ್ತಿತ್ತು.

    ನಾನು ನಾಲ್ಕು ವರ್ಷದ ಕೆಲಸ ಅವಧಿಯಲ್ಲ ನೇತ್ರಾವತಿ ಬಳಿ ಎರಡು ಶವ ಸಿಕ್ಕಿತ್ತು. ಸಿಕ್ಕಿದ ಕೂಡಲೇ ಹೆಣವನ್ನು ಹೂಳುತ್ತಿರಲಿಲ್ಲ. ಶವ ಎತ್ತಿದ ನಂತರ ಅಂಬುಲೆನ್ಸ್‌ ಬರುತ್ತಿತ್ತು. ವೈದ್ಯರು, ಪೊಲೀಸರು ಬರುತ್ತಿದ್ದರು. ನಂತರ ಆ ದೇಹವನ್ನು ಬೆಳ್ತಂಗಡಿಗೆ ಕಳುಹಿಸಲಾಗುತ್ತಿತ್ತು. ನಾನು ಇದ್ದಾಗ ಪುರುಷ ಮತ್ತು ಮಹಿಳೆಯ ಶವ ಸಿಕ್ಕಿತ್ತು. ಅದನ್ನು ಬೆಳ್ತಂಗಡಿಗೆ ತೆಗೆದುಕೊಂಡು ಹೋಗಲಾಗಿತ್ತು. ಸಾವಿರಾರು ಶವ ಸಿಕ್ಕಿದೆ ಎನ್ನುವುದು ಸುಳ್ಳು.

     

    ಯಾರು ನೇತ್ರಾವತಿ ಬಳಿ ಕೆಲಸ ಮಾಡುತ್ತಿದ್ದರೋ ಅವರು ಶವವನ್ನು ಎತ್ತುತ್ತಿದ್ದರು. ಶವ ಎತ್ತಿದ ದಿವಸ ನಮ್ಮ ಕೆಲಸಕ್ಕೆ ರಜೆ ಇರುತ್ತಿತ್ತು. ಒಟ್ಟು ನಾಲ್ಕು ಕುಟುಂಬಗಳು ಸ್ವಚ್ಛತಾ ಕೆಲಸ ಮಾಡುತ್ತಿದ್ದವು. ಮಾಹಿತಿ ಕಚೇರಿ ಬಿಟ್ಟರೆ ಬೇರೆ ಯಾರೂ ನಮಗೆ ಆ ಕೆಲಸ ಮಾಡು, ಈ ಕೆಲಸ ಮಾಡು ಎಂದು ಹೇಳುತ್ತಿರಲಿಲ್ಲ. ನಮಗೆ ಧಣಿಗಳು ಕೈಯಾರೆ ಸಂಬಳ ಕೊಡುತ್ತಿರಲಿಲ್ಲ.

    ನಮ್ಮ ಜೊತೆ ಕೆಲಸ ಮಾಡುವಾಗ ಮಾಸ್ಕ್‌ಮ್ಯಾನ್‌ ಚೆನ್ನಾಗಿಯೇ ಇದ್ದ. ನಾವು ಬರುವ ಮೊದಲೇ ಅವರ ಕುಟುಂಬ ಅಲ್ಲಿ ನೆಲೆಸಿತ್ತು. ನಾನು ಕೆಲಸ ಬಿಟ್ಟು ಬಂದ ನಂತರವೂ ಆತ ಅಲ್ಲಿ ಕೆಲಸ ಮಾಡುತ್ತಿದ್ದ. ಆತ ಶವದಿಂದ ಚಿನ್ನ ಕದಿಯುತ್ತಿದ್ದ ವಿಚಾರ ನನಗೆ ಗೊತ್ತಿಲ್ಲ. ನಾನು ಬಿಟ್ಟ ಬಂದ ನಂತರ ಆತ ಯಾಕೆ ಕೆಲಸ ಬಿಟ್ಟ ಅನ್ನೋದು ಗೊತ್ತಿಲ್ಲ.

    ಎಸ್‌ಐಟಿಯವರು ನನ್ನನ್ನು ವಿಚಾರಣೆ ನಡೆಸಿದ್ದರು. ನಾನು ಟಿವಿಗೆ ಈಗ ಏನು ಹೇಳುತ್ತಿದ್ದೇನೋ ಅದನ್ನೇ ಹೇಳಿದ್ದೇನೆ. ಮುಂದೆ ಕೋರ್ಟ್‌ನವರು ಏನಾದರೂ ಹೇಳಬೇಕಾದರೂ ಇದನ್ನೇ ಹೇಳುತ್ತೇನೆ. ನಮಗೆ ಉದ್ಯೋಗ, ಅನ್ನ ಕೊಟ್ಟ ಧಣಿಯ ವಿರುದ್ಧ ಈ ರೀತಿ ಸುಳ್ಳು ಹೇಳುವುದು ಸರಿಯಲ್ಲ.

  • ಕಾಲೇಜು ಅಡ್ಮಿಷನ್ ಮುಗಿಸಿ ಹಿಂತಿರುಗುವಾಗ ಭೀಕರ ಅಪಘಾತ – ಅಣ್ಣ, ತಂಗಿ ದುರ್ಮರಣ

    ಕಾಲೇಜು ಅಡ್ಮಿಷನ್ ಮುಗಿಸಿ ಹಿಂತಿರುಗುವಾಗ ಭೀಕರ ಅಪಘಾತ – ಅಣ್ಣ, ತಂಗಿ ದುರ್ಮರಣ

    ಕೋಲಾರ: ತಂಗಿಯ ಅಡ್ಮಿಷನ್ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಅಣ್ಣ-ತಂಗಿಯಿದ್ದ ಬೈಕ್‌ಗೆ ಇನ್ನೋವಾ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಮೃತಪಟ್ಟಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.

    ಕೋಲಾರ ತಾಲೂಕು ಶ್ರೀನಿವಾಸಪುರ ರಸ್ತೆಯಲ್ಲಿರುವ ವೀರಾಪುರ ಗೇಟ್ ಬಳಿಯ ಮಹರ್ಷಿ ಶಾಲೆ ಬಳಿ ಈ ಘಟನೆ ನಡೆದಿದೆ. ಕೋಲಾರ ತಾಲೂಕಿನ ಕೊಂಡೇನಹಳ್ಳಿ ನಿವಾಸಿಗಳಾದ ಯಶಸ್ವಿನಿ ಬಾಯಿ (16) ಹಾಗೂ ಹರ್ಷಿತ್ ಸಿಂಗ್ (20) ಮೃತ ಅಣ್ಣ-ತಂಗಿ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ವರುಣಾರ್ಭಟಕ್ಕೆ ತತ್ತರಿಸಿದ ಮುಂಬೈ – ವಿಮಾನ, ರೈಲು ಸಂಚಾರದಲ್ಲಿ ವ್ಯತ್ಯಯ, ರೆಡ್ ಅಲರ್ಟ್ ಘೋಷಣೆ

    ತಂದೆ, ತಾಯಿ ಇಬ್ಬರು ಕೂಲಿ ನಾಲಿ ಮಾಡಿ ತನ್ನಿಬ್ಬರು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ರು. ಪಿಯುಸಿ ಓದುತ್ತಿದ್ದ ಮಗಳು, ಮಗ ಪದವಿ ವ್ಯಾಸಂಗ ಮಾಡುತ್ತಿದ್ದ. ಹರ್ಷಿತ್ ಕಾಲೇಜು ಮುಗಿಸಿಕೊಂಡು ತಂಗಿ ಯಶಸ್ವಿನಿಯನ್ನ ಕಾಲೇಜಿಗೆ ದಾಖಲು ಮಾಡಿ, ವಾಪಸ್ ತೆರಳುವ ವೇಳೆ ಈ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಸೆಲ್‌ನಲ್ಲೇ ವಾಕಿಂಗ್, ತೆಳುವಾದ ಬೆಡ್ ಮೇಲೆ ಸ್ಲೀಪಿಂಗ್ – ರಾಜಾತಿಥ್ಯ ಇಲ್ದೇ `ಡಿ’ ಗ್ಯಾಂಗ್ ಫುಲ್ ಸೈಲೆಂಟ್

    ಪ್ರತಿನಿತ್ಯ ಅಣ್ಣ-ತಂಗಿ ಇಬ್ಬರು ಬಸ್‌ನಲ್ಲೇ ಕಾಲೇಜಿಗೆ ತೆರಳುತ್ತಿದ್ದರು. ಆದ್ರೆ ತಂಗಿ ಕಾಲೇಜು ದಾಖಲಾತಿಗೆ ಕೆಲವು ದಾಖಲೆಗಳನ್ನ ಮರೆತಿದ್ದರು. ಈ ವೇಳೆ ಯಶಸ್ವಿನಿ ಹಾಗೂ ಹರ್ಷಿತ್ ಮನೆಯಿಂದ ಬೈಕ್‌ನಲ್ಲಿ ಹೋಗಿ ದಾಖಲೆ ಕೊಟ್ಟು ವಾಪಸ್ ಮನೆಗೆ ತೆರಳುವ ವೇಳೆ ಇನ್ನೋವಾ ಚಾರ್ಸಿ ತುಂಡಾಗಿ ಬೈಕ್‌ಗೆ ಡಿಕ್ಕಿಯಾದ ಪರಿಣಾಮ ಈ ಅಪಘಾತ ಸಂಭವಿಸಿದೆ. ಇನ್ನೂ ಅಪಘಾತದಲ್ಲಿ ಯಶಸ್ವಿನಿ ಸ್ಥಳದಲ್ಲೇ ಸಾವನ್ನಪ್ಪಿದ್ರೆ ಆಸ್ಪತ್ರೆಯಲ್ಲಿ ಹರ್ಷಿತ್ ಸಿಂಗ್ ಮೃತಪಟ್ಟಿದ್ದಾನೆ.

    ಇದೀಗ ಇಬ್ಬರು ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕೋಲಾರ ಗ್ರಾಮಾಂತರ ಪೊಲೀಸರು ಪ್ರಕರಣವನ್ನ ದಾಖಲಿಸಿಕೊಂಡು, ಇನ್ನೋವಾ ಕಾರು ಹಾಗೂ ಚಾಲಕನನ್ನ ವಶಕ್ಕೆ ಪಡೆದಿದ್ದಾರೆ.

  • ಕುಡಿದ ಮತ್ತಲ್ಲಿ ಅಪ್ಪನನ್ನೇ ಕೊಂದ – ಸದ್ದಿಲ್ಲದೆ ಶವ ಸಂಸ್ಕಾರಕ್ಕೆ ಸ್ಕೆಚ್ ಹಾಕಿ ಲಾಕ್ ಆದ ಮಗ

    ಕುಡಿದ ಮತ್ತಲ್ಲಿ ಅಪ್ಪನನ್ನೇ ಕೊಂದ – ಸದ್ದಿಲ್ಲದೆ ಶವ ಸಂಸ್ಕಾರಕ್ಕೆ ಸ್ಕೆಚ್ ಹಾಕಿ ಲಾಕ್ ಆದ ಮಗ

    ಚಿಕ್ಕಮಗಳೂರು: ಕುಡಿದ ಮತ್ತಿನಲ್ಲಿ ಮಗನೇ ತಂದೆಯನ್ನ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು (Chikkamagaluru) ತಾಲೂಕಿನ ಆಲ್ದೂರು (Alduru) ಸಮೀಪದ ಗುಪ್ತಶೆಟ್ಟಿಹಳ್ಳಿಯಲ್ಲಿ ನಡೆದಿದೆ.

    ಗ್ರಾಮದ ಮಂಜುನಾಥ್ (51) ಮಗನಿಂದಲೇ ಕೊಲೆಯಾದ ದುರ್ದೈವಿ, ರಂಜನ್ (21) ಕೊಲೆಗೈದ ಆರೋಪಿಯಾಗಿದ್ದಾನೆ. ಪೋಷಕರ ನಡುವೆ ನಡೆದ ಗಲಾಟೆಯ ವೇಳೆ ಆರೋಪಿ ಈ ಕೃತ್ಯ ಎಸಗಿದ್ದಾನೆ. ಬಳಿಕ ಸದ್ದಿಲ್ಲದೇ ತಂದೆಯ ಅಂತ್ಯಸಂಸ್ಕಾರಕ್ಕೆ ಮುಂದಾಗಿದ್ದ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಚಿಕ್ಕಮಗಳೂರು | ಪೊಲೀಸರ ಕಿರುಕುಳಕ್ಕೆ ಆಟೋ ಚಾಲಕ ಆತ್ಮಹತ್ಯೆ – ಕಾನ್‌ಸ್ಟೇಬಲ್‌ ಅರೆಸ್ಟ್‌

    ಆರೋಪಿ ರಂಜನ್‌ ಆ.16ರ ಸಂಜೆ ಆಲ್ದೂರಿಗೆ ಹೋಗಿ ಸಂತೆ ಮುಗಿಸಿಕೊಂಡು, ಮಧ್ಯಪಾನ ಮಾಡಿ ಮನೆಗೆ ಬಂದಿದ್ದ. ಈ ವೇಳೆ ತಂದೆ-ತಾಯಿ ನಡುವೆ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದೆ. ಜಗಳ ಬಿಡಿಸಲು ಹೋದ ರಂಜನ್, ತಂದೆಗೆ ಹಿಂದಿನಿಂದ ಚಾಕು ಇರಿದ್ದಿದ್ದಾನೆ. ಕೊನೆಗೆ ಜಗಳ ಬಿಡಿಸಿದ ತಾಯಿ ಚಾಕುವಿನಿಂದ ಆದ ಗಾಯಕ್ಕೆ ಅರಿಶಿನ ಪುಡಿ ಹಚ್ಚಿ ಮಲಗಿಸಿದ್ದಾರೆ. ರಾತ್ರಿ ರಕ್ತಸ್ರಾವ ಹೆಚ್ಚಾಗಿ ಮಂಜುನಾಥ್ ಪ್ರಾಣ ಪಕ್ಷಿ ಹಾರಿಹೋಗಿದೆ.

    ತಂದೆಯ ಪ್ರಾಣ ಪಕ್ಷಿ ಹಾರಿಹೋಗುತ್ತಿದ್ದಂತೆ ರಂಜನ್ ಒಬ್ಬೊಬ್ಬರ ಬಳಿ ಒಂದೊಂದು ಕಥೆ ಕಟ್ಟಿದ್ದಾನೆ. ತಂದೆ-ತಾಯಿ ಜಗಳದಲ್ಲಿ ನಾನು ಬಿಡಿಸುವ ವೇಳೆ ತಂದೆಗೆ ಮಚ್ಚು ತಾಗಿ ಗಾಯವಾಗಿ ತೀರಿಕೊಂಡ್ರು ಎಂದು ಕೆಲವರ ಬಳಿ ಹೇಳಿದ್ದನಂತೆ. ಇನ್ನೂ ಕೆಲವರ ಬಳಿ ತಂದೆ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ ಎಂದು ಕತೆ ಕಟ್ಟಿದ್ದ. ಆರೋಪಿಯ ಕಥೆ ಕೇಳಿದ್ದವರು ನಿಜವೆಂದು ಮಂಜುನಾಥ್ ಶವ ಸಂಸ್ಕಾರಕ್ಕೆ ತಯಾರಿ ಮಾಡಿಕೊಂಡಿದ್ದರು.

    ಪ್ರಕರಣದ ಮಾಹಿತಿ ಪಡೆದ ಆಲ್ದೂರು ಪೊಲೀಸರು, ಅನುಮಾನದ ಮೇಲೆ, ಮಗನನ್ನು ವಿಚಾರಣೆ ನಡೆಸಿದಾಗ ಗುಟ್ಟು ರಟ್ಟಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮೋಟೆಬೆನ್ನೂರಿನಲ್ಲಿ ಖಾಸಗಿ ಬಸ್‌ ಪಲ್ಟಿ – ಇಬ್ಬರು ಸಾವು, 6 ಜನರಿಗೆ ಗಂಭೀರ ಗಾಯ

  • ಚಿಕ್ಕಮಗಳೂರು | ಪೊಲೀಸರ ಕಿರುಕುಳಕ್ಕೆ ಆಟೋ ಚಾಲಕ ಆತ್ಮಹತ್ಯೆ – ಕಾನ್‌ಸ್ಟೇಬಲ್‌ ಅರೆಸ್ಟ್‌

    ಚಿಕ್ಕಮಗಳೂರು | ಪೊಲೀಸರ ಕಿರುಕುಳಕ್ಕೆ ಆಟೋ ಚಾಲಕ ಆತ್ಮಹತ್ಯೆ – ಕಾನ್‌ಸ್ಟೇಬಲ್‌ ಅರೆಸ್ಟ್‌

    ಚಿಕ್ಕಮಗಳೂರು: ಕಳಸ (Kalasa) ತಾಲೂಕಿನ ಬಸ್ತಿಗದ್ದೆ ಗ್ರಾಮದಲ್ಲಿ ಇತ್ತಿಚೆಗೆ ಡೆತ್‌ನೋಟ್‌ ಬರೆದಿಟ್ಟು ಆಟೋ ಚಾಲಕ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುದುರೆಮುಖ (Kudremukh )ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್‌ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಸಿದ್ದೇಶ್‌ ಎಂದು ಗುರುತಿಸಲಾಗಿದೆ. ಆ.13ರಂದು ಆಟೋ ಚಾಲಕ ನಾಗೇಶ್ (32) ಡೆತ್‌ನೋಟ್‌ ಬರೆದಿಟ್ಟು, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಡೆತ್‌ನೋಟ್‌ನಲ್ಲಿ ಪೊಲೀಸರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು. ಆಟೋ ಚಾಲಕ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ, ಆರೋಪಿ ಸಿದ್ದೇಶ್‌ ಗೋವಾಕ್ಕೆ ತೆರಳಿದ್ದ. ಪೊಲೀಸರು ಪತ್ತೆ ಹಚ್ಚಿ ಆತನನ್ನು ಬಂಧಿಸಿದ್ದಾರೆ. ಆರೋಪಿ ಪೇದೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: Tumakuru | ಗಂಡನ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ

    ನಾಗೇಶ್ ಸಾವಿನ ನಂತರ ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ್ದವು. ಈ ನಡುವೆ ಚಿಕ್ಕಮಗಳೂರು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ್ ಮೃತರ ಕುಟುಂಬವನ್ನು ಮನವೊಲಿಸಲು ಪ್ರಯತ್ನಿಸಿದರೂ, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಮರಣೋತ್ತರ ಪರೀಕ್ಷೆ ಮಾಡಲು ಬಿಡುವುದಿಲ್ಲ ಎಂದು ಕುಟುಂಬಸ್ಥರು ಹಠ ಹಿಡಿದು ಕುಳಿತಿದ್ದರು. ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಮೃತ ನಾಗೇಶ್ ಕುಟುಂಬಸ್ಥರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ನ್ಯಾಯ ದೊರಕಿಸುವ ಭರವಸೆ ನೀಡಿದ್ದರು. ಇದನ್ನೂ ಓದಿ: Haveri | ಮಾದಕ ವಸ್ತು ಮಾರಾಟ – ನಾಲ್ವರು ಅರೆಸ್ಟ್

  • ಕಡಿಮೆ ಅಂಕ ಪಡೆದಿದ್ದಕ್ಕೆ ಪೋಷಕರ ಟಾರ್ಚರ್‌ – ಮನೆ ಬಿಟ್ಟು ತೆರಳಿದ್ದ ಶಿರಸಿಯ ಮಕ್ಕಳು ಮುಂಬೈನಲ್ಲಿ ಪತ್ತೆ

    ಕಡಿಮೆ ಅಂಕ ಪಡೆದಿದ್ದಕ್ಕೆ ಪೋಷಕರ ಟಾರ್ಚರ್‌ – ಮನೆ ಬಿಟ್ಟು ತೆರಳಿದ್ದ ಶಿರಸಿಯ ಮಕ್ಕಳು ಮುಂಬೈನಲ್ಲಿ ಪತ್ತೆ

    ಕಾರವಾರ: ಕಾಣೆಯಾಗಿದ್ದ ಶಿರಸಿಯ (Sirsi) ಇಬ್ಬರು ಮಕ್ಕಳು ಮುಂಬೈನಲ್ಲಿ (Mumbai) ಪತ್ತೆಯಾಗಿದ್ದಾರೆ.

    ಶಿರಸಿ ಪೊಲೀಸರ(Police) ನಿರಂತರ ಕಾರ್ಯಾಚರಣೆಯಿಂದ ನಾಪತ್ತೆಯಾಗಿದ್ದ ಕಸ್ತೂರ್ಬಾ ನಗರದ ನಿವಾಸಿಗಳಾದ ಶ್ರೀಶಾ (13), ಪರಿಧಿ(10) ಈಗ ಪತ್ತೆಯಾಗಿದ್ದಾರೆ.

    ಪರೀಕ್ಷೆಯಲ್ಲಿ ಕಡಿಮೆ ಅಂಕಗಳಿಸಿದಕ್ಕೆ ಓದುವಂತೆ ಪೋಷಕರು ಒತ್ತಾಯಿಸಿದ್ದಕ್ಕೆ ಇಬ್ಬರು ಆ.16 ರಂದು ಕಾಣೆಯಾಗಿದ್ದರು.  ಶಿರಸಿಯಿಂದ- ಹುಬ್ಬಳ್ಳಿಗೆ ತೆರಳಿ ಅಲ್ಲಿಂದ ಪುಣೆಗೆ ತೆರಳಿ ಅಲ್ಲಿಂದ ಮುಂಬೈಗೆ ತೆರಳಿದ್ದರು. ಮಕ್ಕಳು ಬಸ್ಸಿನಲ್ಲಿ ಪ್ರಯಾಣಿಸಿದ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಪತ್ನಿ ಶವ ಪತ್ತೆ ಪತಿ ವಿರುದ್ಧ ಕೊಲೆ ಆರೋಪ

    ಈ ದೃಶ್ಯ ಆಧಾರಿಸಿ ಶಿರಸಿ ಪೊಲೀಸರು ಮುಂಬೈ ಪೊಲೀಸರಿಗೆ ತಿಳಿಸಿದ್ದರು. ಮುಂಬೈನಲ್ಲಿ ಇಳಿದ ಮಕ್ಕಳು ಶಿರಡಿಗೆ ಹೋಗಬೇಕೆಂದು ಸಾರ್ವಜನಿಕರಲ್ಲಿ ಹಣ ಕೇಳುತ್ತಿದ್ದರು.

    ಅನುಮಾನಗೊಂಡ ಸ್ಥಳಿಯ ಪೊಲೀಸರು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಎಲ್ಲಿಂದ ಬಂದಿರುವುದು ಎಂದು ಮಕ್ಕಳಿಗೆ ವಿಚಾರಿಸಿದಾಗ ಶಿರಸಿ ಎಂದು ಹೇಳಿದ್ದಾರೆ. ಕೂಡಲೇ ಈ ವಿಚಾರವನ್ನು ಶಿರಸಿ ಪೊಲೀಸರಿಗೆ ಮುಂಬೈ ಪೊಲೀಸರು ತಿಳಿಸಿದ್ದಾರೆ.

    ಸದ್ಯ ಮಕ್ಕಳು ಮುಂಬೈಯಿಂದ ಶಿರಸಿ ಕಡೆ ಬರುತ್ತಿದ್ದಾರೆ. ಮಕ್ಕಳ ಶೋಧಕ್ಕಾಗಿ ಉತ್ತರ ಕನ್ನಡ ಎಸ್ಪಿ ಎಂ.ಎನ್.ದೀಪನ್ ಆರು ತಂಡ ಮಾಡಿದ್ದರು.

  • ಪತಿಯನ್ನು ಹತ್ಯೆಗೈದವರು ಈಗ ಸಮಾಧಿಯಾಗಿದ್ದಾರೆ – ಯೋಗಿಯನ್ನು ಹೊಗಳಿದ್ದಕ್ಕೆ ಪಕ್ಷದಿಂದಲೇ ಎಸ್‌ಪಿ ಶಾಸಕಿ ಉಚ್ಚಾಟನೆ

    ಪತಿಯನ್ನು ಹತ್ಯೆಗೈದವರು ಈಗ ಸಮಾಧಿಯಾಗಿದ್ದಾರೆ – ಯೋಗಿಯನ್ನು ಹೊಗಳಿದ್ದಕ್ಕೆ ಪಕ್ಷದಿಂದಲೇ ಎಸ್‌ಪಿ ಶಾಸಕಿ ಉಚ್ಚಾಟನೆ

    ಲಕ್ನೋ: ಉತ್ತರ ಪ್ರದೇಶದ (Uttar Pradesh) ಸಿಎಂ ಯೋಗಿ ಆದಿತ್ಯನಾಥ್‌ (Yogi Adityanath) ಅವರನ್ನು ಸದನದಲ್ಲೇ ಹೊಗಳಿದ್ದಕ್ಕೆ ಸಮಾಜವಾದಿ ಪಕ್ಷದ ಶಾಸಕಿ ಪೂಜಾ ಪಾಲ್ (Pooja Pal) ಅವರನ್ನು ಅಖಿಲೇಶ್‌ ಯಾದವ್‌ ಪಕ್ಷದಿಂದಲೇ ಹೊರಹಾಕಿದ್ದಾರೆ.

    ನೀವು ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸಿದ್ದೀರಿ. ಎಚ್ಚರಿಕೆ ನೀಡಿದ ನಂತರವೂ ನೀವು ಈ ಚಟುವಟಿಕೆಗಳನ್ನು ಮುಂದುವರಿಸಿದ್ದೀರಿ. ನೀವು ಮಾಡಿದ ಕೆಲಸ ಪಕ್ಷ ವಿರೋಧಿ ಮತ್ತು ಗಂಭೀರ ಅಶಿಸ್ತಿನ ಕೃತ್ಯವಾಗಿದೆ. ಆದ್ದರಿಂದ ನಿಮ್ಮನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಮಾಜವಾದಿ ಪಕ್ಷದಿಂದ (SP) ಉಚ್ಚಾಟಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

    ಪಕ್ಷದಿಂದ ಉಚ್ಚಾಟಿಸಿದ ಬಳಿಕವೂ ಪೂಜಾ ಪಾಲ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಯೋಗಿ ಸರ್ಕಾರ ಬಂದ ನಂತರ ರಾಜ್ಯದಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಣೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಪ್ರಯಾಗ್‌ರಾಜ್‌ನಲ್ಲಿ ನನಗಿಂತ ಹೆಚ್ಚು ನೋವನ್ನು ಅನುಭವಿಸಿದ ಮಹಿಳೆಯರ ಧ್ವನಿಯನ್ನು ನೀವು ಕೇಳಲು ಸಾಧ್ಯವಾಗದಿರಬಹುದು. ಆದರೆ ನಾನು ಅವರ ಧ್ವನಿ. ನನ್ನನ್ನು ಶಾಸಕಿಯಾಗಿ ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸಲಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ತಾಯಂದಿರು ಮತ್ತು ಸಹೋದರಿಯರ ಧ್ವನಿ ನಾನು. ಪ್ರಯಾಗ್‌ರಾಜ್‌ನಲ್ಲಿರುವ ಪೂಜಾ ಪಾಲ್‌ಗೆ ಮಾತ್ರವಲ್ಲದೆ ಅತಿಕ್ ಅಹ್ಮದ್‌ನಿಂದ ತೊಂದರೆಗೊಳಗಾದ ಎಲ್ಲಾ ಜನರಿಗೆ ಮುಖ್ಯಮಂತ್ರಿಗಳು ನ್ಯಾಯ ಒದಗಿಸಿದ್ದಾರೆ. ನಾನು ಪಕ್ಷದಲ್ಲಿ ಇದ್ದರೂ ಮೊದಲ ದಿನದಿಂದಲೇ ಇದನ್ನೇ ಹೇಳುತ್ತಿದ್ದೇನೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಗ್ಯಾಂಗ್‌ಸ್ಟರ್ಅತೀಕ್ಅಹ್ಮದ್ತಲೆಗೆ 1, ದೇಹಕ್ಕೆ 8 ಗುಂಡೇಟು

     

    ಪೂಜಾ ಪಾಲ್ ಯಾರು?
    ಪೂಜಾ ಪಾಲ್ ಅಲಹಾಬಾದ್ ನಗರದ ಪಶ್ಚಿಮ ಕ್ಷೇತ್ರದ ಬಿಎಸ್‌ಪಿ ಶಾಸಕ ರಾಜು ಪಾಲ್ ಅವರ ಪತ್ನಿ. 2005 ರಲ್ಲಿ ಪೂಜಾ ಪಾಲ್ ಮದುವೆಯಾದ 10 ದಿನದಲ್ಲೇ ರಾಜು ಪಾಲ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಮಾಫಿಯಾ ಡಾನ್ ಅತಿಕ್ ಅಹ್ಮದ್ (Atiq Ahmed) ಸಹೋದರ ಅಶ್ರಫ್ ಮೇಲೆ ಈ ಹತ್ಯೆ ಮಾಡಿದ ಆರೋಪ ಬಂದಿತ್ತು. ನಂತರ ಈ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಅತಿಕ್ ಅಹ್ಮದ್ ಸಹೋದರ ಖಾಲಿದ್ ಅಜೀಮ್ ವಿರುದ್ಧ ಬಿಎಸ್‌ಪಿಯಿಂದ ಪೂಜಾ ಪಾಲ್ ಸ್ಪರ್ಧಿಸಿದ್ದರು. ಆದರೆ ಈ ಚುನಾವಣೆಯಲ್ಲಿ ಪೂಜಾ ಸೋತಿದ್ದರು. ನಂತರ 2007 ಮತ್ತು 2012 ರ ಚುನಾವಣೆಯಲ್ಲಿ ಪೂಜಾ ಪಾಲ್ ಈ ಕ್ಷೇತ್ರದಿಂದ ಜಯಗಳಿಸಿದ್ದರು.

    ಈ ಮಧ್ಯೆ ಬಿಜೆಪಿ ನಾಯಕ ಮತ್ತು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರನ್ನು ಭೇಟಿಯಾಗಿದ್ದಕ್ಕೆ ಫೆಬ್ರವರಿ 2018 ರಲ್ಲಿ ಬಿಎಸ್‌ಪಿಯಿಂದ ಉಚ್ಚಾಟಿಸಲಾಗಿತ್ತು. 2019 ರಲ್ಲಿ ಸಮಾಜವಾದಿ ಪಕ್ಷವನ್ನು ಸೇರಿದ್ದ ಪೂಜಾ ಪಾಲ್ ಕೌಶಂಬಿ ಜಿಲ್ಲೆಯ ಚೈಲ್ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕಿಯಾಗಿ ಆಯ್ಕೆಯಾಗಿದ್ದರು.

    ಪೂಜಾ ಪಾಲ್‌ ಹೇಳಿದ್ದೇನು?
    ನನ್ನ ಪತಿಯನ್ನು ಹತ್ಯೆ ಮಾಡಿದವರು ಯಾರು ಎನ್ನುವುದು ಎಲ್ಲರಿಗೂ ಗೊತ್ತಿತ್ತು. ಯಾರಿಂದಲೂ ನ್ಯಾಯ ಸಿಗದೇ ಇದ್ದಾಗ ನನ್ನ ಮಾತು ಕೇಳಿ ನನಗೆ ನ್ಯಾಯ ಒದಗಿಸಿದ್ದಕ್ಕೆ ಯೋಗಿ ಆದಿತ್ಯನಾಥ್‌ ಅವರಿಗೆ ಧನ್ಯವಾದಗಳು. ಅಪರಾಧಿಗಳ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಗಳನ್ನು ತರುವ ಮೂಲಕ ಮುಖ್ಯಮಂತ್ರಿ ಪ್ರಯಾಗ್‌ರಾಜ್‌ನಲ್ಲಿ ನನ್ನಂತಹ ಅನೇಕ ಇತರ ಮಹಿಳೆಯರಿಗೆ ನ್ಯಾಯ ಒದಗಿಸಿದ್ದಾರೆ. ಇಂದು ಇಡೀ ರಾಜ್ಯವೇ ಸಿಎಂ ಅವರನ್ನು ವಿಶ್ವಾಸದಿಂದ ನೋಡುತ್ತಿದೆ. ಮುಖ್ಯಮಂತ್ರಿಗಳು ನನ್ನ ಪತಿಯ ಕೊಲೆಗಾರ ಅತಿಕ್ ಅಹ್ಮದ್‌ನನ್ನು ಸಮಾಧಿ ಮಾಡಿದ್ದಾರೆ ಎಂದು ಶ್ಲಾಘಿಸಿದ್ದರು.

    ಗುಂಡಿಕ್ಕಿ ಹತ್ಯೆ:
    ರಾಜು ಪಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಅವರನ್ನು ಫೆಬ್ರವರಿ 2023 ರಲ್ಲಿ ಪ್ರಯಾಗ್‌ರಾಜ್‌ನ ಸುಲೇಮ್ ಸರಾಯ್ ಪ್ರದೇಶದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

    ಈ ಪ್ರಕರಣದ ಪ್ರಮುಖ ಆರೋಪಿಗಳಾದ ಅತಿಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಅಹ್ಮದ್‌ನನ್ನು ಪೊಲೀಸರು ಬಂಧಿಸಿದ್ದರು. ಏಪ್ರಿಲ್ 15, 2023 ರಂದು ಇಬ್ಬರನ್ನು ಪ್ರಯಾಗ್‌ರಾಜ್‌ನಲ್ಲಿ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಪತ್ರಕರ್ತರಂತೆ ನಟಿಸಿದ್ದ ಇಬ್ಬರು ಇವರ ಮೇಲೆ ಗುಂಡಿನ ದಾಳಿ ನಡೆಸಿ ಅಣ್ಣ, ತಮ್ಮನನ್ನು ಹತ್ಯೆ ಮಾಡಿದ್ದರು.

  • ಕಾರಲ್ಲಿ ಇಬ್ರು ಬಾಲಕಿಯರಿದ್ರೂ.. ಕಣ್ಣೀರಿಡುತ್ತಾ ಓಡಿ ಬಂದ ವಿದ್ಯಾರ್ಥಿನಿ – ಕಿಡ್ನ್ಯಾಪ್‌ಗೆ ನಡೆಯಿತಾ ಯತ್ನ?

    ಕಾರಲ್ಲಿ ಇಬ್ರು ಬಾಲಕಿಯರಿದ್ರೂ.. ಕಣ್ಣೀರಿಡುತ್ತಾ ಓಡಿ ಬಂದ ವಿದ್ಯಾರ್ಥಿನಿ – ಕಿಡ್ನ್ಯಾಪ್‌ಗೆ ನಡೆಯಿತಾ ಯತ್ನ?

    ಹಾಸನ: ಕಾರಲ್ಲಿ (Car) ಇಬ್ರು ಬಾಲಕಿಯರಿದ್ರೂ… ಕಾರಲ್ಲಿದ್ದವರು ನನ್ನನ್ನೂ ಕಿಡ್ನ್ಯಾಪ್‌ ಮಾಡಲು ಯತ್ನಿಸಿದ್ರೂ ಎಂದು ಶಾಲಾ ವಿದ್ಯಾರ್ಥಿನಿಯೊಬ್ಬಳು (Student) ಅಳುತ್ತ ಓಡಿ ಶಾಲೆಗೆ ಬಂದ ಪ್ರಸಂಗ ಆಲೂರು ತಾಲೂಕಿನ ಹಂಚೂರು ಗ್ರಾಮದಲ್ಲಿ ನಡೆದಿದೆ.

    ಶಾಲೆಗೆ (School) ಓಡಿ ಬಂದ ವಿದ್ಯಾರ್ಥಿನಿ, ಬಿಳಿ ಬಣ್ಣದ ಮಾರುತಿ ಓಮ್ನಿಯಲ್ಲಿ ಬಂದವರು ಅಪಹರಣಕ್ಕೆ ಯತ್ನಿಸಿದ್ರು, ಕಾರಿನಲ್ಲಿ ಮತ್ತಿಬ್ಬರು ವಿದ್ಯಾರ್ಥಿನಿಯರು ಇದ್ದರು ಎಂದು ಹೇಳಿಕೊಂಡಿದ್ದಾಳೆ. ಈ ವೇಳೆ ಗಾಬರಿಯಿಂದ ಬಾಲಕಿ ಬ್ಯಾಗ್‌ ಸಹ ಎಸೆದು ಬಂದಿದ್ದಾಳೆ. ಈ ಮಾಹಿತಿಯನ್ನು ಶಾಲಾ ಮುಖ್ಯ ಶಿಕ್ಷಕರು ಪೊಲೀಸರಿಗೆ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಆಲೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದನ್ನೂ ಓದಿ: ಮನೆಯವರಿಂದ ನನ್ನನ್ನು ಕಾಪಾಡು – ಬಾಯ್‌ಫ್ರೆಂಡ್‌ಗೆ ಮೆಸೇಜ್‌ ಕಳಿಸಿದವಳು ಶವವಾಗಿ ಪತ್ತೆ

    ಪ್ರಕರಣ ಸುಖಾಂತ್ಯ
    ಪೊಲೀಸರ ಮಾಹಿತಿ ಕಲೆಹಾಕಿದಾಗ, ಅದೇ ಶಾಲೆಯ ವಿದ್ಯಾರ್ಥಿನಿಯೊಬ್ಬಳನ್ನು ಕಾರಿನಲ್ಲಿ ಪರಿಚಯಸ್ಥ ಯುವಕ ಶಾಲೆಗೆ ಬಿಡಲು ಕರೆದುಕೊಂಡು ಬರುತ್ತಿದ್ದ. ಈ ಬಾಲಕಿಯನ್ನು ಸಹ ಕಾರಿಗೆ ಹತ್ತಿಸಿಕೊಂಡು ಶಾಲೆಯ ಬಳಿ ಬಿಡಲು ಸಮೀಪ ಬಂದು ಕಾರು ನಿಲ್ಲಿಸಿ ಡೋರ್‌ ತೆಗೆದಿದ್ದಾನೆ. ಅಷ್ಟರಲ್ಲೇ ಬಾಲಕಿ ಕೂಗಾಡಿಕೊಂಡು ಅಲ್ಲಿಂದ ಓಡಿದ್ದಾಳೆ ಎಂದು ತಿಳಿದು ಬಂದಿದೆ. ಯುವಕನನ್ನು ಪೊಲೀಸರು ಠಾಣೆಗೆ ಕರೆಸಿ ಮಾಹಿತಿ ಪಡೆದುಕೊಂಡು ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಚಿಕ್ಕಮಗಳೂರು | ಬ್ರೆಡ್‌ ಜೊತೆ ಮತ್ತು ಬರೋ ಔಷಧಿ ತಿನ್ನಿಸಿ ದನ ಕದ್ದೊಯ್ದ ಕಳ್ಳರು

  • ಧರ್ಮಸ್ಥಳ ಅಲ್ಲ ಈಗ ಕನ್ಯಾಡಿಯ ಕಾಡಿನಲ್ಲೂ ಸಿಗಲಿಲ್ಲ ಯಾವುದೇ ಮೂಳೆ!

    ಧರ್ಮಸ್ಥಳ ಅಲ್ಲ ಈಗ ಕನ್ಯಾಡಿಯ ಕಾಡಿನಲ್ಲೂ ಸಿಗಲಿಲ್ಲ ಯಾವುದೇ ಮೂಳೆ!

    ಮಂಗಳೂರು: ಧರ್ಮಸ್ಥಳ ಬುರುಡೆ ರಹಸ್ಯ ಪ್ರಕರಣಕ್ಕೆ (Dharmasthala Mass Burial) ಇಂದು ಕನ್ಯಾಡಿಯಲ್ಲಿ (Kanyadi) ನಡೆದ ಶೋಧ ಕಾರ್ಯ ಅಂತ್ಯಗೊಂಡಿದ್ದು ಅನಾಮಿಕ ಬರಿಗೈಯಲ್ಲಿ ವಾಪಸ್‌ ಆಗಿದ್ದಾನೆ.

    ಇಲ್ಲಿಯವರೆಗೆ ನೇತ್ರಾವತಿ ನದಿ (Netravathi River) ತಟ, ನದಿ ಪಕ್ಕ ಇರುವ ಅರಣ್ಯ, ಬಾಹುಬಲಿ ಬೆಟ್ಟದಲ್ಲಿ ಶೋಧ ಕಾರ್ಯ ನಡೆದಿತ್ತು. ಆದರೆ ಇಂದು ಧರ್ಮಸ್ಥಳದಿಂದ 5 ಕಿ.ಮೀ ದೂರದಲ್ಲಿರುವ ಕನ್ಯಾಡಿಯಲ್ಲಿ ಶೋಧ ನಡೆಸಲಾಯಿತು.

    ಕನ್ಯಾಡಿಯ ಖಾಸಗಿ ತೋಟದ ಪಕ್ಕದ ಅರಣ್ಯ (Forest) ಭಾಗದಲ್ಲಿ ಅನಾಮಿಕ ಶವ ಹೂತಿದ್ದೇನೆ ಎಂದು ತಿಳಿಸಿದ್ದ. ಈ ಹಿನ್ನೆಲೆಯಲ್ಲಿ ಎ.ಸಿ ಸ್ಟೆಲ್ಲಾ ವರ್ಗೀಸ್ ಸಮ್ಮುಖದಲ್ಲಿ ಹಿಟಾಚಿ ಮೂಲಕ 6 ಅಡಿಯಷ್ಟು ಆಳಕ್ಕೆ ಅಗೆಯಲಾಯಿತು. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ರಹಸ್ಯ| ಇದೊಂದು ಖಾಲಿ ಡಬ್ಬ, ದೊಡ್ಡ ಷಡ್ಯಂತ್ರ ನಡೆದಿದೆ: ಡಿಕೆಶಿ

    ಮಳೆಯ ನಡುವೆಯೂ ಎಸ್‌ಐಟಿ ತಂಡ ಅನಾಮಿಕ ಹೇಳಿದಂತೆ ಗುಂಡಿ ತೋಡಿತು. ಯಾವುದೇ ಕುರುಹು ಪತ್ತೆಯಾಗದ ಕಾರಣ ಸಂಜೆ ಉತ್ಕನನ ಕೆಲಸವನ್ನು ಸ್ಥಗಿತಗೊಳಿಸಿ ಎಸ್‌ಐಟಿ ಅಧಿಕಾರಿಗಳು ವಾಪಸ್‌ ಆಗಿದ್ದಾರೆ.

  • ಜಾಮೀನು ರದ್ದು – ಪತ್ನಿ ಮನೆಯಲ್ಲಿದ್ದ ದರ್ಶನ್‌ ಅರೆಸ್ಟ್‌

    ಜಾಮೀನು ರದ್ದು – ಪತ್ನಿ ಮನೆಯಲ್ಲಿದ್ದ ದರ್ಶನ್‌ ಅರೆಸ್ಟ್‌

    ಬೆಂಗಳೂರು: ಸುಪ್ರೀಂ ಕೋರ್ಟ್‌ನಿಂದ ಜಾಮೀನು ರದ್ದಾದ ಬೆನ್ನಲ್ಲೇ ನಟ ದರ್ಶನ್‌ (Darshan) ಅವರನ್ನು ಪೊಲೀಸರು ಬಂಧಿಸಿದ್ದಾರೆ.

    ಹೊಸಕೆರೆಹಳ್ಳಿಯ ವಿಜಯಲಕ್ಷ್ಮಿ ನೆಲೆಸಿದ್ದ ಅಪಾರ್ಟ್‌ಮೆಂಟ್‌ನಲ್ಲಿ ಇದ್ದ ದರ್ಶನ್‌ ಅವರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ. ಈ ಮೊದಲು ದರ್ಶನ್‌ ಅವರು ನ್ಯಾಯಾಲಯಕ್ಕೆ ಶರಣಾಗುತ್ತಾರೆ ಎಂಬ ಸುದ್ದಿ ಬಂದಿತ್ತು. ಆದರೆ ಪೊಲೀಸರು ದರ್ಶನ್‌ ನ್ಯಾಯಾಲಯಕ್ಕೆ ಶರಣಾಗುವ ಮೊದಲೇ ಪೊಲೀಸರು ಅಪಾರ್ಟ್‌ಮೆಂಟ್‌ಗೆ  ತೆರಳಿ ಅವರನ್ನು ಅರೆಸ್ಟ್‌ ಮಾಡಿದ್ದಾರೆ.  ಇದನ್ನೂ ಓದಿ: ನಟ ದರ್ಶನ್ಜಾಮೀನು ರದ್ದು ಸುಪ್ರೀಂ ಕೋರ್ಟ್ತೀರ್ಪಿನಲ್ಲೇನಿದೆ?

     

    ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಎರಡನೇ ಆರೋಪಿಯಾಗಿದ್ದಾರೆ. ಮೊದಲ ಆರೋಪಿಯಾಗಿರುವ ಪವಿತ್ರಾ ಗೌಡ ಅವರನ್ನು ಈ ಮೊದಲೇ ಪೊಲೀಸರು ಅರೆಸ್ಟ್‌ ಮಾಡಿದ್ದರು.  ಇದನ್ನೂ ಓದಿ: ಜಾಮೀನು ರದ್ದು ಬೆನ್ನಲ್ಲೇ ದರ್ಶನ್‌ ಆಪ್ತ ಪ್ರದೂಷ್ ಅರೆಸ್ಟ್‌