Tag: police

  • ಕೊಲೆ ಕೇಸ್‌ನಲ್ಲಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅರೆಸ್ಟ್‌

    ಕೊಲೆ ಕೇಸ್‌ನಲ್ಲಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅರೆಸ್ಟ್‌

    ಬೆಂಗಳೂರು: ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ (Darshan) ಅವರನ್ನು ಪೊಲೀಸರು ಬಂಧಿಸಿದ್ದಾರೆ.

    ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಅವರ ಕೊಲೆ ಪ್ರಕರಣದಲ್ಲಿ ದರ್ಶನ್‌ ಅವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧನ ಮಾಡಿದ್ದಾರೆ.

    ಕೊಲೆ ಮಾಡಿದ ಆರೋಪಿಗಳ ಜೊತೆ ನಿರಂತರ ಸಂಪರ್ಕ ಹೊಂದಿದ ಹಿನ್ನೆಲೆಯಲ್ಲಿ ಇಂದು ಮೈಸೂರಿನ ತೋಟದ ಮನೆಯಲ್ಲಿ ದರ್ಶನ್‌ ಅವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಈಗ ಪೊಲೀಸರು ದರ್ಶನ್‌ ಅವರನ್ನು ವೈದ್ಯಕೀಯ ಪರೀಕ್ಷೆ ನಡೆಸಿ ನ್ಯಾಯಾಲಯಕ್ಕೆ  ಹಾಜರು ಪಡಿಸಲು ಸಿದ್ಧತೆ ನಡೆಸುತ್ತಿದ್ದಾರೆ.

    ಕೊಲೆಯಾದ ರೇಣುಕಾಸ್ವಾಮಿ
    ಕೊಲೆಯಾದ ರೇಣುಕಾಸ್ವಾಮಿ

    ಬಂಧನ ಮಾಡಿದ್ದು ಯಾಕೆ? 
    ಚಿತ್ರದುರ್ಗದ  ರೇಣುಕಾಸ್ವಾಮಿ ಅವರು ಪವಿತ್ರಾ ಗೌಡ  ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಪೋಸ್ಟ್‌ ಮಾಡಿದ್ದರು.  ಈ ಪೋಸ್ಟ್‌ ಮಾಡಿದ ನಂತರ  ಅವರನ್ನು ರೇಣುಕಾಸ್ವಾಮಿ  ಅವರನ್ನು ಜೂನ್‌ 9 ಭಾನುವಾರ  ಹತ್ಯೆ ಮಾಡಲಾಗಿತ್ತು. ಕೊಲೆ ಮಾಡಿದ ಇಬ್ಬರು ಅರೋಪಿಗಳ ಜೊತೆ ದರ್ಶನ್‌ ನಿರಂತರ  ಸಂಪರ್ಕದಲ್ಲಿದ್ದರು ಎಂಬ ಆರೋಪ ಕೇಳಿ ಬಂದಿದೆ. ಪೊಲೀಸ್‌ ವಿಚಾರಣೆಯ ಸಂದರ್ಭದಲ್ಲಿ ಕೊಲೆ ಆರೋಪಿಗಳು ದರ್ಶನ್‌ ಸೂಚನೆಯಂತೆ ಕೊಲೆ ಮಾಡಿದ್ದೇವೆ. ಕೊಲೆಗೆ ದರ್ಶನ್‌ ಸುಪಾರಿ  ನೀಡಿದ್ದರು ಎಂದು ಆರೋಪಿಗಳು ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ದರ್ಶನ್‌ ಅವರನ್ನು ಬಂಧಿಸಲಾಗಿದೆ.

    This Is A Breaking Story More Details Awaited

  • ಬಾಡಿಗೆ ಹಣಕ್ಕೆ ಕಿರಿಕ್ – ಪತ್ನಿಯನ್ನು ಹತ್ಯೆಗೈದಿದ್ದ ಪಾಪಿ ಪತಿ ಅರೆಸ್ಟ್

    ಬಾಡಿಗೆ ಹಣಕ್ಕೆ ಕಿರಿಕ್ – ಪತ್ನಿಯನ್ನು ಹತ್ಯೆಗೈದಿದ್ದ ಪಾಪಿ ಪತಿ ಅರೆಸ್ಟ್

    ಬೆಂಗಳೂರು: ಪತ್ನಿಯನ್ನು (Wife) ಚಾಕುವಿನಿಂದ ಇರಿದು ಹತ್ಯೆಗೈದು ತಲೆಮರೆಸಿಕೊಂಡಿದ್ದ ಪಾಪಿ ಪತಿಯನ್ನು ಸರ್ಜಾಪುರ ಪೊಲೀಸರು (Police) ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಗಂಗಿರೆಡ್ಡಿ ಎಂದು ಗುರುತಿಸಲಾಗಿದೆ. ಮನೆ ಬಾಡಿಗೆ ಹಣ ಪಡೆಯುವ ವಿಚಾರವಾಗಿ ಹಾಗೂ ಆಕೆಯ ಶೀಲವನ್ನು ಶಂಕಿಸಿ ಹೆಂಡತಿಯ ಜೊತೆ ಆರೋಪಿ ಆಗಾಗ ಗಲಾಟೆ ನಡೆಸುತ್ತಿದ್ದ. ಅಲ್ಲದೇ ಆರೋಪಿ ಬಾಡಿಗೆ ಹಣವನ್ನು ಕುಡಿದು ಹಾಳು ಮಾಡುತ್ತಿದ್ದ ಎಂದು ಪತ್ನಿಯೇ ಹಣ ಪಡೆಯುತ್ತಿದ್ದಳು. ಇದೇ ಕಾರಣಕ್ಕೆ ಗಂಗರೆಡ್ಡಿ ತನ್ನ ಪತ್ನಿ ಸುಜಾತ (41) ಎಂಬಾಕೆಯನ್ನು ಜೂ.3 ರಂದು ಚಾಕುವಿನಿಂದ ಇರಿದು ಹತ್ಯೆಗೈದಿದ್ದ. ಇದನ್ನೂ ಓದಿ: ಬಿಜೆಪಿ ವಿಜಯೋತ್ಸವದ ಬಳಿಕ ಚಾಕು ಇರಿತ ಪ್ರಕರಣ- ಮೂವರು ಪೊಲೀಸ್ ವಶಕ್ಕೆ

    ಹತ್ಯೆಯ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದ. ಇದೀಗ ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ವಿರುದ್ಧದ ಅತ್ಯಾಚಾರ ಕೇಸ್ – ಬಸವನಗುಡಿ ನಿವಾಸದಲ್ಲಿ ಎಸ್‍ಐಟಿ ಮಹಜರು

  • ಹಾವೇರಿಯಲ್ಲಿ 7.91 ಲಕ್ಷ ರೂ. ಮೌಲ್ಯದ ಗಾಂಜಾ ಜಪ್ತಿ – ನಾಲ್ವರು ಆರೋಪಿಗಳು ಅರೆಸ್ಟ್

    ಹಾವೇರಿಯಲ್ಲಿ 7.91 ಲಕ್ಷ ರೂ. ಮೌಲ್ಯದ ಗಾಂಜಾ ಜಪ್ತಿ – ನಾಲ್ವರು ಆರೋಪಿಗಳು ಅರೆಸ್ಟ್

    ಹಾವೇರಿ: ಹಾವೇರಿ (Haveri) ನಗರ ಠಾಣೆ ಪೊಲೀಸರು (Police) ಕಾರ್ಯಾಚರಣೆ ನಡೆಸಿ ಬರೋಬ್ಬರಿ 10 ಕೆ.ಜಿ ಗಾಂಜಾ (Marijuana) ಜಪ್ತಿ ಮಾಡಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ಹಾವೇರಿ ನಗರದ ಸುಭಾಶ್ ಸರ್ಕಲ್ ಮತ್ತು ನಾಗೇಂದ್ರನಮಟ್ಟಿಯ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ದಿಳ್ಳೆಪ್ಪ ಅಳಲಗೇರಿ ಎಂಬಾತ ಒಡಿಶಾದಿಂದ ಅಕ್ರಮವಾಗಿ ಗಾಂಜಾ ತಂದು ತನ್ನ ಅಂಗಡಿಯಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ. ಅಲ್ಲದೆ ಆರೋಪಿಗಳಾದ ಫಾರೂಕ್ ಅಹಮ್ಮದ್ ಕುಂಚೂರು, ಇಸ್ಮಾಯಿಲ್ ನದಾಫ ಮತ್ತು ಸಾಹಿಲ್ ಕರ್ಜಗಿ ಗಾಂಜಾವನ್ನು ಸಣ್ಣಸಣ್ಣ ಪ್ಯಾಕೆಟ್‌ಗಳಲ್ಲಿ ತುಂಬಿಸಿ ಮಾರಾಟ ಮಾಡುತ್ತಿದ್ದರು.ಇದನ್ನೂ ಓದಿ: ನವೀನ್‌ ಪಟ್ನಾಯಕ್‌ ಆಪ್ತ ವಿ.ಕೆ.ಪಾಂಡಿಯನ್‌ ಸಕ್ರಿಯ ರಾಜಕಾರಣಕ್ಕೆ ವಿದಾಯ

    ಬಂಧಿತರಿಂದ 4 ಮೊಬೈಲ್ ಮತ್ತು 7,91,000 ರೂ. ಮೌಲ್ಯದ ಗಾಂಜಾವನ್ನ ವಶಪಡಿಸಿಕೊಳ್ಳಲಾಗಿದೆ. ಹಾವೇರಿ ಶಹರ ಪೊಲೀಸ್ ಠಾಣೆ ಸಿಪಿಐ ಡಾ.ಮೋತಿಲಾಲ್ ಪವಾರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಮತ್ತೆ ಪ್ರಧಾನಿಯಾಗಿ ಮೋದಿ ಪದಗ್ರಹಣ – ಪುರಿ ಬೀಚ್‌ನಲ್ಲಿ ಮರಳು ಕಲಾಕೃತಿ ರಚಿಸಿ ಶುಭಕೋರಿದ ಕಲಾವಿದ

  • ಬಾಯ್ಲರ್ ರಿಪೇರಿ ವೇಳೆ ಹೊರಬಂದ ಬಿಸಿ ಗಾಳಿ – ಸುಟ್ಟು ಕರಕಲಾದ ಯುವಕ

    ಬಾಯ್ಲರ್ ರಿಪೇರಿ ವೇಳೆ ಹೊರಬಂದ ಬಿಸಿ ಗಾಳಿ – ಸುಟ್ಟು ಕರಕಲಾದ ಯುವಕ

    ಚಿಕ್ಕಮಗಳೂರು: ಬಾಯ್ಲರ್ ರಿಪೇರಿ ಮಾಡುವಾಗ ಹೊರಬಂದ ಭಾರೀ ಪ್ರಮಾಣದ ಬಿಸಿ ಗಾಳಿಗೆ ಯುವಕನೊಬ್ಬ ಸಾವಿಗೀಡಾದ ಘಟನೆ ಹರಿಹರದಹಳ್ಳಿ ಸಮೀಪದ ಕಾಫಿ ಕ್ಯೂರಿಂಗ್‍ನಲ್ಲಿ (Coffee curing) ನಡೆದಿದೆ.

    ಮೃತನನ್ನ ಕೊಡಗಿನ (Kodagu) ಕುಶಾಲನಗರ ಮೂಲದ ಉದಯ್ (28) ಎಂದು ಗುರುತಿಸಲಾಗಿದೆ. ರಿಪೇರಿ ವೇಳೆ ಬಾಯ್ಲರ್‌ನಿಂದ ಸುಮಾರು 340 ಡಿಗ್ರಿ ಸೆಲ್ಸಿಯಸ್ ಬಿಸಿ ಗಾಳಿಗೆ ಯುವಕ ಹಾರಿ ಬಿದ್ದಿದ್ದಾನೆ. ಬಿಸಿಯ ತೀವ್ರತೆಗೆ ಆತನ ದೇಹ ಸುಟ್ಟು ಕರಕಲಾಗಿದ್ದು, ಆತನನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾವಿಗೀಡಾಗಿದ್ದಾನೆ. ಇದನ್ನೂ ಓದಿ: ಅಪ್ರಾಪ್ತನಿಂದ ಟ್ರ್ಯಾಕ್ಟರ್ ಅಪಘಾತ – ಬಾಲಕನ ತಂದೆ, ತಾಯಿ ವಿರುದ್ಧ ಎಫ್‍ಐಆರ್

    ಯುವಕನ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮದ ಬಹುಕೋಟಿ ಭ್ರಷ್ಟಾಚಾರ ಕೇಸ್‌ – ಆರೋಪಿಗಳು 6 ದಿನ ಪೊಲೀಸ್‌ ಕಸ್ಟಡಿಗೆ

  • ಅಪ್ರಾಪ್ತನಿಂದ ಟ್ರ್ಯಾಕ್ಟರ್ ಅಪಘಾತ – ಬಾಲಕನ ತಂದೆ, ತಾಯಿ ವಿರುದ್ಧ ಎಫ್‍ಐಆರ್

    ಅಪ್ರಾಪ್ತನಿಂದ ಟ್ರ್ಯಾಕ್ಟರ್ ಅಪಘಾತ – ಬಾಲಕನ ತಂದೆ, ತಾಯಿ ವಿರುದ್ಧ ಎಫ್‍ಐಆರ್

    ಮಡಿಕೇರಿ: ಕುಶಾಲನಗರದಲ್ಲಿ (Kushalanagar) ಅಪ್ರಾಪ್ತನೊಬ್ಬ ಟ್ರ್ಯಾಕ್ಟರ್ ಚಲಾಯಿಸಿ ಬೈಕ್‍ಗೆ ಡಿಕ್ಕಿಯಾದ ಪರಿಣಾಮ ಸವಾರ ಸಾವನ್ನಪ್ಪಿದ್ದು, ಬಾಲಕನ ತಂದೆ ಹಾಗೂ ತಾಯಿಯ ವಿರುದ್ಧ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ.

    ಕುಶಾಲನಗರ ಗ್ರಾಮಾಂತರ ಪೊಲೀಸ್ (Police) ಠಾಣಾ ವ್ಯಾಪ್ತಿಯ ಸುಂದರನಗರದಲ್ಲಿ ಮೇ 31 ರಂದು ಬಾಲಕ ಟ್ರ್ಯಾಕ್ಟರ್ ಚಲಾಯಿಸಿ ಬೈಕ್ ಸವಾರ ಶಿವಶಂಕರ್ (22) ಎಂಬವರ ಸಾವಿಗೆ ಕಾರಣನಾಗಿದ್ದ. ಈ ಸಂಬಂಧ ಪೊಲೀಸರು ಐಪಿಸಿ ಸೆಕ್ಷನ್ 279, 304(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಈ ಸಂಬಂಧ ವಿನಾಯಕ ಬಡವಾಣೆ ನಿವಾಸಿ ತುಳಸಿ.ಟಿ ಹಾಗೂ ಪರಮೇಶ್ ಅವರ ಅಪ್ರಾಪ್ತ ವಯಸ್ಸಿನ ಪುತ್ರ ಟ್ರ್ಯಾಕ್ಟರ್‌ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ದ್ವಿಚಕ್ರ ವಾಹನಕ್ಕೆ ಅಪಘಾತ ಎಸಗಿರುವುದು ಬೆಳಕಿಗೆ ಬಂದಿತ್ತು. ಇದನ್ನೂ ಓದಿ: ಮತ್ತೆ ನರೇಂದ್ರ ಮೋದಿ, 400 ಗಡಿ ದಾಟುವುದೇ ನಮ್ಮ ಅಜೆಂಡಾ: ಆರ್‌.ಅಶೋಕ್‌

    ಆರೋಪಿ ಅಪ್ರಾಪ್ತನಾಗಿರುವುದರಿಂದ ಟ್ರ್ಯಾಕ್ಟರ್ ಮಾಲೀಕರಾದ ತುಳಸಿ.ಟಿ ಹಾಗೂ ಪತಿ ಪರಮೇಶ್‍ನನ್ನು ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

    ಅಪ್ರಾಪ್ತ ಈ ಹಿಂದೆ 2023 ರಲ್ಲಿ ಸುಂದರನಗರ ಹಾರಂಗಿ ರಸ್ತೆಯಲ್ಲಿ ಟ್ರ್ಯಾಕ್ಟರ್ ಅಪಘಾತವೆಸಗಿ ಪಾದಾಚಾರಿಯೊಬ್ಬರ ಸಾವಿಗೆ ಕಾರಣನಾಗಿದ್ದ. ಈ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೇ ನ್ಯಾಯಾಲಯದ ಶಿಕ್ಷೆಯನ್ನು ಪ್ರಕಟಿಸಿತ್ತು. ಇದನ್ನೂ ಓದಿ: ಚುನಾವಣೋತ್ತರ ಸಮೀಕ್ಷೆಗಳಲ್ಲಿ ನಂಬಿಕೆ ಇಲ್ಲ, ಕಾಂಗ್ರೆಸ್‌ ಡಬಲ್‌ ಡಿಜಿಟ್‌ ದಾಟುತ್ತೆ: ಡಿಕೆಶಿ

  • ಚನ್ನಗಿರಿ ಗಲಭೆ ಕೇಸ್‌ – ಬಂಧನ ಭೀತಿಯಿಂದ ಗ್ರಾಮವನ್ನೇ ತೊರೆದ ಜನ

    ಚನ್ನಗಿರಿ ಗಲಭೆ ಕೇಸ್‌ – ಬಂಧನ ಭೀತಿಯಿಂದ ಗ್ರಾಮವನ್ನೇ ತೊರೆದ ಜನ

    ದಾವಣಗೆರೆ: ಚನ್ನಗಿರಿ (Channagiri Violence) ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿಯಿಂದ ಹೊನ್ನೆಬಾಗಿ ಗ್ರಾಮದಲ್ಲಿ ಬಹುತೇಕ ಜನರು ಮನೆ ಖಾಲಿ ಮಾಡಿದ್ದಾರೆ.

    ಈಗಾಗಲೇ 39 ಜನರನ್ನು ಬಂಧನ (Arrest) ಮಾಡಿದ ಬೆನ್ನಲ್ಲೇ ಮತ್ತಷ್ಟು ಜನರನ್ನು ಪೊಲೀಸರು (Police) ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ತನ್ನನ್ನು ಬಂಧಿಸಬಹುದು ಎಂಬ ಭೀತಿಯಿಂದ ಕೆಲ ಪುರುಷರು ಗ್ರಾಮವನ್ನೇ ಬಿಟ್ಟು ಹೋಗಿದ್ದಾರೆ. ಕೆಲ ಮನೆಗಳಿಗ ಬೀಗ ಬಿದ್ದಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ 87 ಕೋಟಿ ಗೋಲ್ಮಾಲ್ – ಏನಿದು ಹಗರಣ? ಅಕ್ರಮ ಹಣ ವರ್ಗಾವಣೆ ಆಗಿದ್ದು ಯಾಕೆ?

    ಮಾವಿನ ಹಣ್ಣು ವ್ಯಾಪಾರಕ್ಕೆ ತುಮಕೂರಿನ ಗುಬ್ಬಿಗೆ ಹೋಗಿದ್ದ ಸೈಯ್ಯದ್ ತನ್ವೀರ್‌ನನ್ನು ಪೊಲೀಸರು ಬಂಧನ ಮಾಡಿದ್ದಾರೆ. ಗಲಾಟೆಗೂ ಆತನಿಗೂ ಸಂಬಂಧ ಇಲ್ಲದಿದ್ದರೂ ಕೂಡ ಬಂಧನ ಮಾಡಿದ್ದಾರೆ ಎಂದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.

    ಸೈಯ್ಯದ್‌ ತನ್ವೀರ್‌ನ ಒಂದೂವರೆ ವರ್ಷದ ಪುತ್ರನಿಗೆ ಹೃದಯ ಸಂಬಂಧಿ ಕಾಯಿಲೆ ಇದೆ. ಇನ್ನು ಎರಡು ದಿನಗಳಲ್ಲಿ ಬೆಂಗಳೂರು ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲು ಮಾಡಬೇಕಿದೆ. ಆದರೆ ತಂದೆ ಜೈಲು ಸೇರಿದ ಹಿನ್ನಲೆ ಕುಟುಂಬಸ್ಥರು ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ.  ಕಲ್ಲು ಹೊಡೆದವರನ್ನು ಬಿಟ್ಟು ಕಷ್ಟ ಪಟ್ಟು ದುಡಿಯುತ್ತಿರುವರನ್ನು ಬಂಧನ ಮಾಡಿದ್ದಾರೆ. ದಾಂಧಲೆ ಮಾಡಿದ ಕಿಡಿಗೇಡಿಗಳನ್ನು ಬಂಧನ ಮಾಡಿ, ಆದರೆ ಅಮಾಯಕರಿಗೆ ಕಿರುಕುಳ ನೀಡಿಬೇಡಿ ಎಂದು ಬಂಧನಕ್ಕೆ ಒಳಗಾದ ಕುಟುಂಬಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

     

  • ಚನ್ನಗಿರಿ ಗಲಭೆ ಕೇಸ್‌ – ಮತ್ತೆ 3 ಎಫ್‌ಐಆರ್‌ ಸೇರ್ಪಡೆ, ಎಸ್‌ಐ ಸಸ್ಪೆಂಡ್‌

    ಚನ್ನಗಿರಿ ಗಲಭೆ ಕೇಸ್‌ – ಮತ್ತೆ 3 ಎಫ್‌ಐಆರ್‌ ಸೇರ್ಪಡೆ, ಎಸ್‌ಐ ಸಸ್ಪೆಂಡ್‌

    ದಾವಣಗೆರೆ: ಚನ್ನಗಿರಿ ಗಲಭೆ ಪ್ರಕರಣದ (Channagiri violence) ಸಿಐಡಿ ತನಿಖೆ ಚುರುಕಾಗಿದ್ದು ಡಿಜೆ ಹಳ್ಳಿ, ಕೆ.ಜಿ.ಹಳ್ಳಿ ಮಾದರಿ ಗಲಭೆಗೆ ಸಂಚು ರೂಪಿಸಿದ್ದ ಹಿನ್ನೆಲೆಯಲ್ಲಿ ಪೊಲೀಸರು ಮತ್ತೆ ಮೂರು ಎಫ್‌ಐಆರ್ (FIR) ಹಾಕಿದ್ದಾರೆ. ಇದರೊಂದಿಗೆ ಎಫ್‌ಐಆರ್‌ಗಳ ಸಂಖ್ಯೆ ಏರಕ್ಕೇರಿದೆ.

    ಬಂಧಿತ 25 ಕಿಡಿಗೇಡಿಗಳ ವಿರುದ್ಧ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ, ಕೊಲೆ ಯತ್ನ ಸೆಕ್ಷನ್‌ಗಳನ್ನು ಸೇರಿಸಿದ್ದಾರೆ. ಸದ್ಯ 30ಕ್ಕೂ ಹೆಚ್ಚು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಇನ್ನಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆಗಳಿವೆ.  ಇದನ್ನೂ ಓದಿ: ಗೌತಮ್‌ ಗಂಭೀರ್‌ಗೆ ಬ್ಲ್ಯಾಂಕ್‌ ಚೆಕ್‌ ಆಫರ್‌ ಕೊಟ್ಟಿದ್ದೇಕೆ ಶಾರುಖ್‌?

    ಹಲ್ಲೆಗೊಳಗಾದ ಪೊಲೀಸರನ್ನು, ಗಲಭೆಗೆ ಸಾಕ್ಷಿಯಾಗಿದ್ದ ಪೊಲೀಸ್ ಸಿಬ್ಬಂದಿಯನ್ನು ಸಿಐಡಿ ವಿಚಾರಣೆಗೆ ಒಳಪಡಿಸಿದೆ. ಠಾಣೆಯ ಸಿಸಿಟಿವಿಯನ್ನು ವಶಕ್ಕೆ ಪಡೆಯಲಾಗಿದೆ.

    ಇದೇ ವೇಳೆ ಎಸ್‌ಐ ಅಖ್ತರ್‌ ಅವರನ್ನು ಸರ್ಕಾರ ಅಮಾನತು (Suspend) ಮಾಡಿದೆ. ಮೊನ್ನೆಯಷ್ಟೇ ಡಿವೈಎಸ್‌ಪಿ ಪ್ರಶಾಂತ್, ಸಿಪಿಐ ನಿರಂಜನ್‌ರನ್ನು ಸರ್ಕಾರ ಸಸ್ಪೆಂಡ್ ಮಾಡಿತ್ತು. ಸರ್ಕಾರದ ಈ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.  ಇದನ್ನೂ ಓದಿ: ಅದಾನಿ ಗ್ರೂಪ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡದಂತೆ ಮೋದಿ, ರಾಹುಲ್‌ಗೆ ನಿರ್ದೇಶಿಸಿ: ಕೋರ್ಟ್‌ಗೆ ಅರ್ಜಿ ಸಲ್ಲಿಕೆ

    ಚನ್ನಗಿರಿ ಗಲಭೆ ಖಂಡಿಸಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಕಿಡಿಗೇಡಿಗಳು ಮಾಡಿದ ಕೃತಕ್ಕೆ ಅಧಿಕಾರಿಗಳನ್ನು ತಲೆದಂಡ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರದ ಅತಿಯಾದ ತುಷ್ಟೀಕರಣದಿಂದ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

     

  • ಕಲ್ಲು ತೂರಾಟ ನಡೆಸಿದವರ ಸವಲತ್ತು ವಾಪಸ್‍ಗೆ ಯತ್ನಾಳ್ ಆಗ್ರಹ

    ಕಲ್ಲು ತೂರಾಟ ನಡೆಸಿದವರ ಸವಲತ್ತು ವಾಪಸ್‍ಗೆ ಯತ್ನಾಳ್ ಆಗ್ರಹ

    ಬೆಂಗಳೂರು: ದಾವಣಗೆರೆ (Davanagere) ಜಿಲ್ಲೆಯ ಚನ್ನಗಿರಿ (Channagiri) ಪೊಲಿಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದವರಿಗೆ ಸರ್ಕಾರದಿಂದ ನೀಡಲಾದ ಸವಲತ್ತುಗಳನ್ನು ವಾಪಸ್ ಪಡೆಯಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.

    ಪೊಲೀಸ್ (Police) ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದ ವಿಚಾರವಾಗಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಚನ್ನಗಿರಿಯಲ್ಲಿ ಬಾಂಧವರ ಗುಂಪೊಂದು ಪೊಲೀಸ್ ಠಾಣೆಗೆ ಕಲ್ಲು ತೂರಾಟ ನಡೆಸಿದೆ. ಪೊಲೀಸ್ ವಾಹನಗಳಿಗೆ ಬೆಂಕಿ ಇಟ್ಟಿದೆ. ಈ ಘಟನೆ ಅವರ ಮನಃಸ್ಥಿತಿ ಎಂತದ್ದು ಎಂಬುದು ತೋರಿಸುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಚನ್ನಗಿರಿ ಠಾಣೆಯ ಮೇಲೆ ಕಲ್ಲು ತೂರಾಟ – 11 ಮಂದಿ ವಶಕ್ಕೆ

    ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡಿದವರ ಮೇಲೆ ಕೇಸ್ ದಾಖಲಿಸಬೇಕು. ಸರ್ಕಾರಕ್ಕೆ ನಷ್ಟ ಮಾಡಿರುವ ಅಷ್ಟು ವೆಚ್ಚವನ್ನು ಅವರಿಂದ ಭರಿಸಬೇಕು. ಅಲ್ಲದೇ, ಸ್ಥಳೀಯ ಡಿವೈಎಸ್‍ಪಿ ಮನವಿ ಮಾಡಿದರೂ ಸಹ ಚದುರದ ಗುಂಪಿನ ಮುಖ್ಯಸ್ಥ ಹಾಗೂ ಪ್ರಚೋದನೆ ಮಾಡಿದವರ ಮೇಲೆ ಕೇಸ್ ದಾಖಲಿಸಬೇಕು. ಅವರಿಗೆ ಸರ್ಕಾರ ನೀಡಿರುವ ಎಲ್ಲಾ ರೀತಿಯ ಸವಲತ್ತನ್ನು ವಾಪಸ್ ಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

    ಏನಿದು ಪ್ರಕರಣ? ಶುಕ್ರವಾರ ರಾತ್ರಿ ಚನ್ನಗಿರಿ ಪೊಲೀಸ್ ಠಾಣೆ ಮುಂಭಾಗ ರಣರಂಗವಾಗಿ ಸೃಷ್ಟಿಯಾಗಿತ್ತು. ಚನ್ನಗಿರಿ ಪಟ್ಟಣದ ಟಿಪ್ಪು ನಗರದಲ್ಲಿ ಮಟ್ಕಾ ದಂಧೆ ನಡೆಸುತ್ತಿದ್ದ ಅದಿಲ್‌ನನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದರು. ಅದೇ ಸಂದರ್ಭದಲ್ಲಿ ಅದಿಲ್ ಲೋ ಬಿಪಿಯಿಂದ ಕುಸಿದು ಬಿದ್ದಿದ್ದ. ಕೂಡಲೇ ತಾಲೂಕು ಆಸ್ಪತ್ರೆಗೆ ಪೊಲೀಸರು ಆತನನನ್ನು ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅದಿಲ್ ಸಾವನ್ನಪ್ಪಿದ್ದ.

    ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅಕ್ರೋಶಗೊಂಡ ಅದಿಲ್ ಕುಟುಂಬಸ್ಥರು ಮೃತದೇಹವನ್ನು ಪೊಲೀಸ್ ಠಾಣೆಯ ಮುಂದಿಟ್ಟು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದರು. ನಂತರ ಆದಿಲ್‌ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿದ್ದ ಸಿಸಿಟಿವಿಯನ್ನು ಪರಿಶೀಲನೆ ನಡೆಸುತ್ತಿದ್ದಾಗ ಕೆಲ ಕಿಡಿಗೇಡಿಗಳ ಗುಂಪು ಏಕಾಏಕಿ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿತ್ತು. ಠಾಣೆಯ ಮುಂಭಾಗ ಇರುವ ವಾಹನಗಳು, ಗಿಡ, ಕಿಟಕಿ ಗಾಜುಗಳನ್ನು ಧ್ವಂಸ ಮಾಡಿತ್ತು. ಏಕಾಏಕಿ ನಡೆಸಿದ ಕಲ್ಲು ತೂರಾಟದ ವೇಳೆ 11 ಜನ ಪೊಲೀಸ್ ಸಿಬ್ಬಂದಿಗೆ ಗಾಯಗಾಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದನ್ನೂ ಓದಿ: ಹಣ ಡಬಲ್ ಮಾಡೋದಾಗಿ 30 ಕೋಟಿ ರೂ. ವಂಚಿಸಿದ ದಂಪತಿ

  • 1 ಲಕ್ಷಕ್ಕೂ ಅಧಿಕ ಮೌಲ್ಯದ ನಶೆ ಏರಿಸುವ ಡ್ರಗ್ಸ್, ಮಾತ್ರೆ ಜಪ್ತಿ

    1 ಲಕ್ಷಕ್ಕೂ ಅಧಿಕ ಮೌಲ್ಯದ ನಶೆ ಏರಿಸುವ ಡ್ರಗ್ಸ್, ಮಾತ್ರೆ ಜಪ್ತಿ

    ಬೀದರ್: ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 1 ಲಕ್ಷ ರೂ. ಅಧಿಕ ಮೌಲ್ಯದ ನಶೆ ಏರಿಸುವ ಡ್ರಗ್ಸ್ (Drugs) ಔಷಧಿ ಹಾಗೂ ಮಾತ್ರೆಗಳನ್ನು (Tablet) ಜಪ್ತಿ ಮಾಡಿದ ಘಟನೆ ಬೀದರ್ (Bidar) ನಗರದ ನ್ಯೂ ಆದರ್ಶ ಕಾಲೋನಿಯಲ್ಲಿ ನಡೆದಿದೆ.

    ಮನೆಯಲ್ಲಿ ಅಕ್ರಮವಾಗಿ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ ನಶೆ ಏರಿಸುವ ನಾರ್ಕೋಟಿಕ್ ಔಷಧಿ ಹಾಗೂ ಮಾತ್ರೆಗಳನ್ನು ಬೀದರ್ ಪೊಲೀಸರು (Bidar Police) ಕಾರ್ಯಾಚರಣೆ ಮಾಡಿ ಜಪ್ತಿ ಮಾಡಿಕೊಂಡಿದ್ದಾರೆ.

     

    ಖಚಿತ ಮಾಹಿತಿ ಮೇರೆಗೆ ಮನೆ ಮೇಲೆ ದಾಳಿ ಮಾಡಿದ ಪೊಲೀಸರು ನಶೆ ಭರಿಸುವ ಲಕ್ಷಾಂತರ ಮೌಲ್ಯದ ಡ್ರಗ್ಸ್ ಹಾಗೂ ಮೂರು ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾದ ಉಪನಾಯಕ ಹಾರ್ದಿಕ್‌ ಪಾಂಡ್ಯ ಈಗ ಎಲ್ಲಿದ್ದಾರೆ?

    ಈ ಕುರಿತು ಬೀದರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಎಸ್ಪಿ ಚೆನ್ನಬಸವಣ್ಣ ಲಂಗೋಟಿ ಮಾರ್ಗದರ್ಶನದಲ್ಲಿ ಈ ಕಾರ್ಯಚರಣೆ ಮಾಡಲಾಗಿದೆ.

  • ಚನ್ನಗಿರಿ ಠಾಣೆಯ ಮೇಲೆ ಕಲ್ಲು ತೂರಾಟ – 11 ಮಂದಿ ವಶಕ್ಕೆ

    ಚನ್ನಗಿರಿ ಠಾಣೆಯ ಮೇಲೆ ಕಲ್ಲು ತೂರಾಟ – 11 ಮಂದಿ ವಶಕ್ಕೆ

    – ಸಿಸಿಟಿವಿ, ಮೊಬೈಲ್‌ ದೃಶ್ಯ ಆಧಾರಿಸಿ ಪತ್ತೆ
    – ಈಗಾಗಲೇ 40ಕ್ಕೂ ಹೆಚ್ಚು ಮಂದಿಯನ್ನು ಗುರುತಿಸಿದ ಪೊಲೀಸರು

    ದಾವಣಗೆರೆ: ಚನ್ನಗಿರಿ ಪೊಲೀಸ್‌ ಠಾಣೆಯ (Channagiri Police Station) ಮೇಲೆ ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಮೊಬೈಲ್  ವಿಡಿಯೋ, ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಿ ಕಿಡಿಗೇಡಿಗಳನ್ನು ಗುರುತಿಸಲಾಗಿದೆ. ಅದಿಲ್‌ (Adil) ಅಂತ್ಯಸಂಸ್ಕಾರ ಬಳಿಕ ಪೋಲೀಸರು, ಕಿಡಿಗೇಡಿಗಳ ಹೆಡೆಮುರಿ ಕಟ್ಟಲು ಮುಂದಾಗಿದ್ದಾರೆ. ಇದನ್ನೂ ಓದಿ: ಸಿಎಂ, ಡಿಸಿಎಂ ಧರ್ಮಸ್ಥಳ ಪ್ರವೇಶಿಸ್ತಿದ್ದಂತೆಯೇ ಜೈ ಶ್ರೀರಾಮ್ ಘೋಷಣೆ ಕೂಗಿದ ಭಕ್ತರು!

    ವಿಡಿಯೋ ಪರಿಶೀಲನೆ ವೇಳೆ 40ಕ್ಕೂ ಹೆಚ್ವು ಕಿಡಿಗೇಡಿಗಳನ್ನು ಈಗಾಗಲೇ ಗುರುತಿಸಲಾಗಿದ್ದು ಪ್ರಮುಖ ಹತ್ತು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಕುರಾನ್ ಸತ್ಯವಾಗಿ ನನ್ನ ಗಂಡನಿಗೆ ಯಾವ್ದೇ ರೋಗ ಇರಲಿಲ್ಲ, ಪೊಲೀಸರೇ ಹೊಡೆದು ಕೊಂದಿದ್ದಾರೆ: ಮೃತ ಆದಿಲ್ ಪತ್ನಿ

    ಗಲಾಟೆ ಹೇಗಾಯ್ತು?
    ಶುಕ್ರವಾರ ರಾತ್ರಿ ಚನ್ನಗಿರಿ ಪೊಲೀಸ್ ಠಾಣೆ ಮುಂಭಾಗ ರಣರಂಗವಾಗಿ ಸೃಷ್ಟಿಯಾಗಿತ್ತು. ಚನ್ನಗಿರಿ ಪಟ್ಟಣದ ಟಿಪ್ಪು ನಗರದಲ್ಲಿ ಮಟ್ಕಾ ದಂಧೆ ನಡೆಸುತ್ತಿದ್ದ ಅದಿಲ್‌ನನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದರು. ಅದೇ ಸಂದರ್ಭದಲ್ಲಿ ಅದಿಲ್ ಲೋ ಬಿಪಿಯಿಂದ ಕುಸಿದು ಬಿದ್ದಿದ್ದ. ಕೂಡಲೇ ತಾಲೂಕು ಆಸ್ಪತ್ರೆಗೆ ಪೊಲೀಸರು ಆತನನನ್ನು ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅದಿಲ್ ಸಾವನ್ನಪ್ಪಿದ್ದ.

     

    ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅಕ್ರೋಶಗೊಂಡ ಅದಿಲ್ ಕುಟುಂಬಸ್ಥರು ಮೃತದೇಹವನ್ನು ಪೊಲೀಸ್ ಠಾಣೆಯ ಮುಂದಿಟ್ಟು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದರು. ನಂತರ ಆದಿಲ್‌ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿದ್ದ ಸಿಸಿಟಿವಿಯನ್ನು ಪರಿಶೀಲನೆ ನಡೆಸುತ್ತಿದ್ದಾಗ ಕೆಲ ಕಿಡಿಗೇಡಿಗಳ ಗುಂಪು ಏಕಾಏಕಿ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿತ್ತು. ಠಾಣೆಯ ಮುಂಭಾಗ ಇರುವ ವಾಹನಗಳು, ಗಿಡ, ಕಿಟಕಿ ಗಾಜುಗಳನ್ನು ಧ್ವಂಸ ಮಾಡಿತ್ತು. ಏಕಾಏಕಿ ನಡೆಸಿದ ಕಲ್ಲು ತೂರಾಟದ ವೇಳೆ 11 ಜನ ಪೊಲೀಸ್ ಸಿಬ್ಬಂದಿಗೆ ಗಾಯಗಾಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.