Tag: police

  • ಹಾಸನದಲ್ಲಿ ಹಾಡಹಗಲೇ ಶೂಟೌಟ್‌- ಇಬ್ಬರು ಬಲಿ

    ಹಾಸನದಲ್ಲಿ ಹಾಡಹಗಲೇ ಶೂಟೌಟ್‌- ಇಬ್ಬರು ಬಲಿ

    ಹಾಸನ : ಹಾಸನದಲ್ಲಿ (Hassana) ಹಾಡಹಗಲೇ ನಡೆದ ಶೂಟೌಟ್‌ಗೆ (Shootout) ಇಬ್ಬರು ಯುವಕರು ಬಲಿಯಾಗಿದ್ದಾರೆ.

    ಹೊಯ್ಸಳ ನಗರದಲ್ಲಿ ಘಟನೆ ನಡೆದಿದ್ದು ಗುಂಡು ಹಾರಿಸಿ ಇಬ್ಬರು ಸಾವನಪ್ಪಿದ್ದಾರೆ. ಮಧ್ಯಾಹ್ನ12:30ರ ವೇಳೆಗೆ ಈ ಘಟನೆ ನಡೆದಿದೆ.  ಸ್ಥಳಕ್ಕೆ ಎಸ್‌ಪಿ ಮೊಹಮದ್ ಸುಜೇತಾ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಎಫ್‌ಎಸ್‌ಎಲ್ ತಂಡ ಭೇಟಿ ನೀಡಿದೆ.

    ಹಾಸನದ ಶರಫತ್ ಅಲಿ, ಬೆಂಗಳೂರಿನ ಆಶಿಫ್ ಮೃತರಾಗಿದ್ದಾರೆ. ಸ್ಥಳಕ್ಕೆ ಶರಫತ್ ಅಲಿ ಪತ್ನಿ ಆಗಮಿಸಿದ್ದಾರೆ. ನಿವೇಶನ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆಯುತಿತ್ತು. ಈ ವಿಚಾರದ ಬಗ್ಗೆ ಇಂದು ಮಾತುಕತೆ ನಡೆಸಲು ಬಂದಾಗ ನಡೆದ ಗಲಾಟೆ ವಿಕೋಪಕ್ಕೆ ಹೋಗಿ ಹತ್ಯೆಯಲ್ಲಿ ಅಂತ್ಯವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

    ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಎಸ್‌ಪಿ ಮೊಹಮದ್ ಸುಜೇತಾ, ಇಬ್ಬರು ವ್ಯಕ್ತಿಗಳು ಸ್ಥಳದಲ್ಲಿ ಮಾತನಾಡುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಒಬ್ಬರು ಶೂಟ್‌ ಮಾಡಿ, ಇನ್ನೊಬ್ಬರು ತಾನೇ ಶೂಟ್‌ ಮಾಡ ಹತ್ಯೆ ಮಾಡಿರಬಹುದು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಇದು ಪ್ರಾಥಮಿಕ ಮಾಹಿತಿ. ಸದ್ಯಕ್ಕೆ ಕಾರಿನ ಒಳಗಡೆ ಒಂದು ವೆಪನ್‌ ಸಿಕ್ಕಿದೆ. ಮೃತರು ಯಾರು ಎನ್ನುವುದು ತಿಳಿದು ಬಂದಿಲ್ಲ ಎಂದು ಹೇಳಿದರು.

    ಶರಫತ್ ಅಲಿಗೆ ಗುಂಡು ಹಾರಿಸಿ ನಂತರ ಕಾರಿನಲ್ಲೇ ಆಶಿಫ್ ಗುಂಡು ಹಾರಿಸಿ ಆತ್ಮಹತ್ಯೆ ಶರಣಾಗಿದ್ದಾರೆ. ಇಬ್ಬರ ಮೃತದೇಹಗಳನ್ನು ಹಾಸನ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ.

  • ಮದ್ದೂರು ಶಾಸಕ ಉದಯ್‌ ಮನೆಯಲ್ಲೇ ಗನ್‌ಮ್ಯಾನ್‌ ಮೇಲೆ ಹಲ್ಲೆ ನಡೆಸಿತ್ತು ದರ್ಶನ್‌ ಗ್ಯಾಂಗ್‌!

    ಮದ್ದೂರು ಶಾಸಕ ಉದಯ್‌ ಮನೆಯಲ್ಲೇ ಗನ್‌ಮ್ಯಾನ್‌ ಮೇಲೆ ಹಲ್ಲೆ ನಡೆಸಿತ್ತು ದರ್ಶನ್‌ ಗ್ಯಾಂಗ್‌!

    – ಲೋಕಸಭಾ ಚುನಾವಣಾ ಸಮಯದಲ್ಲಿ ಶಾಸಕರ ಮನೆಯಲ್ಲೇ ಹಲ್ಲೆ
    – ಗನ್‌ಮ್ಯಾನ್‌ ಜೊತೆ ರಾಜಿ ಸಂಧಾನ ನಡೆಸಿದ್ದ ಉದಯ್‌

    ಮಂಡ್ಯ: ದರ್ಶನ್ ಗ್ಯಾಂಗ್ (Darshan Gang) ಪೊಲೀಸ್ ಪೇದೆ (Police Constable) ಮೇಲೆಯೇ ಹಲ್ಲೆ ನಡೆಸಿದ್ದ ವಿಚಾರ ಈಗ ತಡವಾಗಿ ಬೆಳಕಿಗೆ ಬಂದಿದೆ.

    ಹೌದು. ಲೋಕಸಭಾ ಚುನಾವಣೆ (Lok Sabha Election) ಸಮಯದಲ್ಲಿ ದರ್ಶನ್‌ ಅವರು ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು (Star Chandru) ಪರ ಪ್ರಚಾರಕ್ಕೆ ಮಂಡ್ಯಕ್ಕೆ (Mandya) ಆಗಮಿಸಿದ್ದರು. ಏಪ್ರಿಲ್ 22 ರಂದು ಮದ್ದೂರು (Madduru) ಕ್ಷೇತ್ರದಲ್ಲಿ ಸ್ಟಾರ್ ಚಂದ್ರು ಪರ ದರ್ಶನ್ ಪ್ರಚಾರ ನಡೆಸುತ್ತಿದ್ದಾಗ ಮದ್ದೂರು ಶಾಸಕ ಉದಯ್ (MLA Uday) ಅವರ ಗನ್‌ ಮ್ಯಾನ್‌ ಆಗಿದ್ದ ನಾಗೇಶ್ (Nagesh) ಜೊತೆ ದರ್ಶನ್ ಪಟಾಲಂ ಗಲಾಟೆ ನಡೆಸಿತ್ತು.

    ಮುಖಂಡರನ್ನ ಹತ್ತಿರಕ್ಕೆ ಬಿಟ್ಟುಕೊಳ್ಳುವ ವಿಚಾರದಲ್ಲಿ ಲಕ್ಷ್ಮಣ್, ನಾಗರಾಜು ಹಾಗೂ ಇತರರು ಡಿಎಆರ್ ಪೇದೆ ನಾಗೇಶ್ ಜೊತೆ ಜಗಳ ಮಾಡಿದ್ದರು. ಇದೇ ಜಗಳ ಮುಂದುವರಿಸಿ ಕದಲೂರು ಉದಯ್ ಮನೆ ಮುಂದೆ ಪೇದೆ ನಾಗೇಶ್‌ ಅವರ ಮೇಲೆ ಹಲ್ಲೆ ಮಾಡಿತ್ತು. ಇದನ್ನೂ ಓದಿ: ದರ್ಶನ್ ಪರ ಜಾಮೀನು ಅರ್ಜಿ ಸಲ್ಲಿಸಿಲ್ಲವೇ? – ವಕೀಲರು ಕೊಟ್ಟ ಉತ್ತರವೇನು?

    ಪೊಲೀಸರು ನಮ್ಮನ್ನ ಏನು ಮಾಡಲು ಆಗಲ್ಲ. ನಮ್ಮ ಹತ್ತಿರ ಏನು ಕಿತ್ತುಕೊಳ್ಳಲು ಆಗಲ್ಲ ಎಂದು ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿ ಹಲ್ಲೆ ಮಾಡಿದ್ದರು. ಹಲ್ಲೆ ಮಾಡಿದವರ ವಿರುದ್ಧ ಕೆಸ್ತೂರು ಪೊಲೀಸ್ ಠಾಣೆಗೆ ನಾಗೇಶ್‌ ಅವರು ದೂರು ನೀಡಲು ಹೋಗಿದ್ದರು. ಅಷ್ಟೇ ಅಲ್ಲದೇ ಮದ್ದೂರಿನ ತಾಲೂಕು ಆಸ್ಪತ್ರೆಯಲ್ಲಿ ನಾಗೇಶ್‌ ಅವರಿಗೆ ಚಿಕಿತ್ಸೆ ಸಹ ನಡೆದಿತ್ತು.

    ಈ ವಿಚಾರ ದೊಡ್ಡದಾಗುತ್ತಿದ್ದಂತೆ ಶಾಸಕ ಉದಯ್ ಅವರು ರಾಜಿ ಸಂಧಾನ ಮಾಡಿ ನಾಗೇಶ್‌ ಅವರನ್ನು ಮನವೊಲಿಸಿದ್ದರು. ನಂತರ ಉದಯ್ ಗನ್‌ ಮ್ಯಾನ್ ಹುದ್ದೆಯಿಂದ ಹೊರಬಂದಿದ್ದ ನಾಗೇಶ್ ಅವರು ಈಗ ಡಿಎಆರ್ ತುಕಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

     

  • ಏನೋ ಯಡವಟ್ಟು ಮಾಡ್ಕೊಂಡುಬಿಟ್ಟಿದ್ದಾನೆ, ಏನಾದ್ರೂ ಮಾಡಿ: ಪಕ್ಷಬೇಧ ಮರೆತು ತನಿಖಾಧಿಕಾರಿಗಳ ಮೇಲೆ ಒತ್ತಡ

    ಏನೋ ಯಡವಟ್ಟು ಮಾಡ್ಕೊಂಡುಬಿಟ್ಟಿದ್ದಾನೆ, ಏನಾದ್ರೂ ಮಾಡಿ: ಪಕ್ಷಬೇಧ ಮರೆತು ತನಿಖಾಧಿಕಾರಿಗಳ ಮೇಲೆ ಒತ್ತಡ

    ಬೆಂಗಳೂರು: ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದ ತನಿಖೆ ತೀವ್ರಗೊಂಡಿದೆ. ಇದೇ ಸಮಯದಲ್ಲಿ ಕೆಲ ಸಚಿವರು ಸೇರಿ ಪ್ರಭಾವಿ ರಾಜಕಾರಣಿಗಳು ಪಕ್ಷ ಬೇಧ ಮರೆತು ದರ್ಶನ್ (Darshan) ಪರವಾಗಿ ತನಿಖಾಧಿಕಾರಿಗಳಿಗೆ (Investigation Officer) ಫೋನ್ ಮೇಲೆ ಫೋನ್ ಮಾಡುತ್ತಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಕುಡಿದ ಮತ್ತಿನಲ್ಲಿ ಏನೋ ಯಡವಟ್ಟು ಮಾಡ್ಕೊಂಡುಬಿಟ್ಟಿದ್ದಾನೆ. ಅವನ ಕೆರಿಯರ್ ಹಾಳಾಗಿ ಹೋಗುತ್ತೆ. ಏನಾದರೂ ಮಾಡಿ ಎಂದು ಮನವಿ ಮಾಡುತ್ತಿದ್ದಾರೆ. ಆದರೆ ಯಾರ ಒತ್ತಡಕ್ಕೂ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ (DCP Girish) ಅಂಡ್ ಟೀಂ ತಲೆಬಾಗಿಲ್ಲ.  ಇದನ್ನೂ ಓದಿ: ನ್ಯಾಯವು ಮೇಲುಗೈ ಸಾಧಿಸಲಿ- ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ದರ್ಶನ್‌ ಪತ್ನಿ ಪ್ರತಿಕ್ರಿಯೆ

    ಯಾವುದೇ ಒತ್ತಡಕ್ಕೆ ಒಳಗಾಗಬೇಡಿ, ನಿಮ್ಮ ಕೆಲಸ ನೀವು  ಮಾಡಿ ಎಂದು ಪೊಲೀಸ್ ಆಯುಕ್ತರು ಕೂಡ ತಿಳಿಸಿದ್ದಾರೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು. ಇಂತಹ ನಟರಿಗೆ ಬುದ್ದಿ ಕಲಿಸಬೇಕು ಎಂದು ಹಠಕ್ಕೆ ಬಿದ್ದು ತನಿಖಾ ತಂಡ ಕೆಲಸ ಮಾಡುತ್ತಿದೆ. ಡಿಸಿಪಿ ಗಿರೀಶ್ ಟೀಂ ವೈಖರಿಗೆ ಇಲಾಖೆಯ ಪಡಸಾಲೆಯಲ್ಲೇ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಆರೋಪಿ ಪ್ರದೂಷ್ ಬಿಜೆಪಿಗರ ಜೊತೆ ನೇರ ಸಂಬಂಧ ಹೊಂದಿದ್ದಾರೆ. ಅವರು ಒತ್ತಡ ಹೇರಲು ನೋಡಿದ್ದಾರೆ. ಆದರೆ ಇದಕ್ಕೆ ಪೊಲೀಸರು ಮಣಿದಿಲ್ಲ. ಈ ಬಗ್ಗೆ ತನಿಖೆ ಆಗಬೇಕು ಎಂದು ಕಾಂಗ್ರೆಸ್ ಶಾಸಕ ಪೊನ್ನಣ್ಣ ಆರೋಪಿಸಿದ್ದಾರೆ.

     

    ಈ ಮಧ್ಯೆ ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷಾ ವರದಿ ತಿರುಚಲು ವೈದ್ಯಾಧಿಕಾರಿಗಳಿಗೆ ದರ್ಶನ್ ಕಡೆಯವರು ಹಣದ ಆಮಿಷ ಒಡ್ಡಲು ಯತ್ನಿಸಿದ್ದರು ಎಂಬ ಆರೋಪ ಕೂಡ ಕೇಳಿಬಂದಿದೆ. ಆದರೆ ಇಂಥಾದ್ದು ನಮ್ಮ ಗಮನಕ್ಕೆ ಬಂದಿಲ್ಲ. ಪರಿಶೀಲನೆ ಮಾಡುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಸ್ಪಷ್ಟಪಡಿಸಿದ್ದಾರೆ.

  • ರೇಪ್‌ ಮಾಡಲು ಸಹಕರಿಸದ ಚಿಕ್ಕಮ್ಮನನ್ನೇ ಕೊಲೆಗೈದ ಬಾಲಕ!

    ರೇಪ್‌ ಮಾಡಲು ಸಹಕರಿಸದ ಚಿಕ್ಕಮ್ಮನನ್ನೇ ಕೊಲೆಗೈದ ಬಾಲಕ!

    ಮಂಗಳೂರು: ಅಪ್ರಾಪ್ತ ಬಾಲಕನೋರ್ವ ತನ್ನ ಚಿಕ್ಕಮ್ಮನ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿ, ಆಕೆ ಸಹಕರಿಸದ ಹಿನ್ನೆಲೆಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಉಪ್ಪಿನಂಗಡಿಯ (Uppinangady) ಪೆರ್ನೆ ಬಳಿ ನಡೆದಿದೆ.

    ಪೆರ್ನೆಯ ಬಿಳಿಯೂರು ನಿವಾಸಿ ಹೇಮಾವತಿ (37) ಕೊಲೆಯಾದ ದುರ್ದೈವಿ. ಕಳೆದ ಜೂ.17 ರಂದು ಮಲಗಿದ್ದಲ್ಲೇ‌ ಸಾವನ್ನಪ್ಪಿದ್ದ ಸ್ಥಿತಿಯಲ್ಲಿದ್ದ ಹೇಮಾವತಿ ಹೃದಯಾಘಾತದಿಂದ ಸಾವನ್ನಪ್ಪಿದರು ಎಂದು ಪೊಲೀಸರಿಗೆ ಮನೆಯವರು‌ ಮಾಹಿತಿ ನೀಡಿದ್ದರು. ಆದರೆ ಪೊಲೀಸರು ಅನುಮಾನದಿಂದ ತನಿಖೆ ನಡೆಸಿದ್ದರು.

    ಈ ವೇಳೆ 10 ನೇ ತರಗತಿಯ ವಿದ್ಯಾರ್ಥಿ 15 ವರ್ಷದ ಅಪ್ರಾಪ್ತ ಬಾಲಕ ತನ್ನ ಚಿಕ್ಕಮ್ಮನನ್ನೇ ಕೊಲೆ ಮಾಡಿರೋದು ಬೆಳಕಿಗೆ ಬಂದಿದ್ದು, ಬಾಲಕ ಕೃತ್ಯವನ್ನ ಒಪ್ಪಿಕೊಂಡಿದ್ದಾನೆ. ಕೊಲೆಗೀಡಾದ ಹೇಮಾವತಿಯ ಅಕ್ಕನ ಮಗನಾದ ಈ ಅಪ್ರಾಪ್ತ ಬಾಲಕ ಜೂ.17ರಂದು ಹೇಮಾವತಿ ಮನೆಗೆ ಬಂದು ತಂಗಿದ್ದ. ರಾತ್ರಿ ವೇಳೆ ಮಲಗಿದ್ದ ಚಿಕ್ಕಮ್ಮನನ್ನು ಅತ್ಯಾಚಾರ ಮಾಡಲು ಯತ್ನಿಸಿದ್ದು, ಈ ವೇಳೆ ಹೇಮಾವತಿ ತಡೆದು ಬಳಿಕ ಬಾಲಕನಿಗೆ ಬುದ್ದಿಮಾತು ಹೇಳಿ ಮಲಗಿಸಿದ್ದರು. ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆಗೆ ಮೈಸೂರಿನ ಹೋಟೆಲ್‌ನಲ್ಲಿ ನಡೆದಿತ್ತಾ ಸ್ಕೆಚ್‌? – ಇಡೀ ಪ್ಲಾನ್ ಮಾಸ್ಟರ್ ಮೈಂಡ್‌ ಯಾರು?

    ಈ ಅತ್ಯಾಚಾರ ಬೆಳಕಿಗೆ ಬರುತ್ತೆ ಅನ್ನೋ ಹೆದರಿಕೆಯಿಂದ ಬಾಲಕ ಬಳಿಕ ಚಿಕ್ಕಮ್ಮನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮಾರನೇ ದಿನ ಎಲ್ಲರಿಗೂ ಆತನೇ ಕರೆ ಮಾಡಿ ಚಿಕ್ಕಮ್ಮ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದ. ಈ ಕಾರಣದಿಂದಲೇ‌ ಪೊಲೀಸರಿಗೆ ಅನುಮಾನವಾಗಿ ತನಿಖೆ ನಡೆಸಿದಾಗ ಕೊಲೆ ಕೃತ್ಯ ಬೆಳಕಿಗೆ ಬಂದಿದೆ. ಉಪ್ಪಿನಂಗಡಿ ಪೊಲೀಸರು ಆರೋಪಿ ಬಾಲಕನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಆನ್‍ಲೈನ್ ಆಪ್‍ನಲ್ಲಿ ಹಣ ಹೂಡಿ ನಷ್ಟ – ಮಹಾರಾಣಿ ವಿವಿ ಹಾಸ್ಟೆಲ್‍ನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು

    ಆನ್‍ಲೈನ್ ಆಪ್‍ನಲ್ಲಿ ಹಣ ಹೂಡಿ ನಷ್ಟ – ಮಹಾರಾಣಿ ವಿವಿ ಹಾಸ್ಟೆಲ್‍ನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು

    ಬೆಂಗಳೂರು: ನಗರದ ಮಹಾರಾಣಿ ವಿವಿಯ ಹಾಸ್ಟೆಲ್‍ನಲ್ಲಿ ವಿದ್ಯಾರ್ಥಿನಿಯೊಬ್ಬಳು ಆನ್‍ಲೈನ್ ಆಪ್‍ನಲ್ಲಿ ಹಣ ಹೂಡಿ, ನಷ್ಟಕ್ಕೆ ಒಳಗಾಗಾದ ಹಿನ್ನೆಲೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

    ನೇಣಿಗೆ ಶರಣಾದ ವಿದ್ಯಾರ್ಥಿನಿಯನ್ನು ಪಾವನಾ (19) ಎಂದು ಗುರುತಿಸಲಾಗಿದೆ. ಆಕೆ ಪ್ರಥಮ ವರ್ಷದ ಬಿಎಸ್ಸಿ ವ್ಯಾಸಾಂಗ ಮಾಡುತ್ತಿದ್ದಳು. ಆಕೆ ನೇಣಿಗೆ ಶರಣಾದ ರೂಮ್ ನಂಬರ್ 17ರಲ್ಲಿ ಡೆತ್‍ನೋಟ್ ಪತ್ತೆಯಾಗಿದೆ. ಅದರಲ್ಲಿ ಆನ್‍ಲೈನ್ ಆಪ್‍ನಲ್ಲಿ 15,000 ರೂ. ಹೂಡಿಕೆ ಮಾಡಿರುವುದಾಗಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: NIA ದಾಳಿ- ಶಿರಸಿಯ ಅಬ್ದುಲ್ ಶುಕ್ಕೂರ್ ಮೇಲಿದೆ ಶಿವಮೊಗ್ಗ ಸ್ಫೋಟದ ಸಂಚಿನ ಆರೋಪ

    ಆನ್‍ಲೈನ್‍ನಲ್ಲಿ ಹಣ ಹೂಡಿಕೆ ಮಾಡಿ ಗೇಮ್‍ನಲ್ಲಿ 15 ಸಾವಿರ ರೂ. ನಷ್ಟ ಅನುಭವಿಸಿದ್ದಾಳೆ. ಇದಕ್ಕಾಗಿ ಆಕೆ ಸ್ನೇಹಿತರ ಬಳಿ ಸಾಲಮಾಡಿದ್ದು, 10 ಸಾವಿರ ರೂ. ಹೊಂದಿಸಿದ್ದ ಯುವತಿ, ಉಳಿದ 5 ಸಾವಿರ ರೂ. ಹೊಂದಿಸಲು ಆಗದೆ ಚಿಂತೆಗೆ ಒಳಗಾಗಿದ್ದಳು. ಕೊನೆಗೆ ಸಾಲ ತೀರಸಲು ಆಗದೆ ಆತಂಕದಿಂದ ಭಾನುವಾರ ರಾತ್ರಿ ಡೆತ್‍ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ.

    ಜೂ.16ರ ರಾತ್ರಿ 11:30ಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗುವ ವೇಳೆ ಚೇರ್ ಬಿದ್ದ ಶಬ್ದ ಕೇಳಿ ಬಂದಿತ್ತು. ಈ ವೇಳೆ ಪಕ್ಕದ ರೂಮ್‍ನ ವಿದ್ಯಾರ್ಥಿನಿಯರು ಬಂದು ನೋಡಿದಾಗ, ಆಕೆ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಪಾವನಾ ಗೆಳತಿಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

    ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಪ್ರತಿದಿನ ಸರಾಸರಿ 27 ಸೈಬರ್ ವಂಚನೆ ಪ್ರಕರಣ – 25,000 ಕೋಟಿ ರೂ. ಕಳೆದುಕೊಂಡ ಭಾರತೀಯರು

  • 30 ನಿಮಿಷದ ಹಲ್ಲೆ ವಿಡಿಯೋ ಆಧಾರಿಸಿಯೇ ದರ್ಶನ್‌ ಅರೆಸ್ಟ್‌

    30 ನಿಮಿಷದ ಹಲ್ಲೆ ವಿಡಿಯೋ ಆಧಾರಿಸಿಯೇ ದರ್ಶನ್‌ ಅರೆಸ್ಟ್‌

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renuka Swamy) ದರ್ಶನ್‌ (Darshan) ಮತ್ತು ಪವಿತ್ರಾ ಗೌಡರನ್ನು (Pavithra Gowda) ಪೊಲೀಸರು ವಿಡಿಯೋವನ್ನು ಆಧಾರಿಸಿ ಬಂಧನ ಮಾಡಿದ್ದಾರೆ.

    ಹೌದು, ಚಿತ್ರದುರ್ಗದಿಂದ ಅಪಹರಣ ಮಾಡಿದ ಬಳಿಕ ರೇಣುಕಾಸ್ವಾಮಿಯನ್ನು ಆರ್‌ಆರ್‌ ನಗರದಲ್ಲಿರುವ ಪಟ್ಟಣಗೆರೆ ಶೆಡ್‌ಗೆ ಕರೆ ತಂದಿದ್ದರು. ಈ ಶೆಡ್‌ನಲ್ಲಿ ದರ್ಶನ್‌ ಗ್ಯಾಂಗ್‌ (Darshan Gang) ಹಲ್ಲೆ ನಡೆಸಿ ಹತ್ಯೆ ನಡೆಸಿತ್ತು.

    ದರ್ಶನ್‌ ಗ್ಯಾಂಗ್‌ ಹಲ್ಲೆ ನಡೆಸುತ್ತಿರುವ ದೃಶ್ಯ ಶೆಡ್‌ನಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ (CCTV) ಸೆರೆಯಾಗಿತ್ತು. ದರ್ಶನ್‌ ಮತ್ತು ಪವಿತ್ರಾ ಗೌಡ ಇಬ್ಬರು ಸೇರಿ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ- ಚಿಕ್ಕಣ್ಣ ಬಳಿಕ ಮತ್ತೊಬ್ಬ ನಟನಿಗೆ ವಿಚಾರಣೆ ಭೀತಿ!

     

    ಪ್ರಕರಣ ಬೆಳಕಿಗೆ ಬಂದಾಗ ಆರೋಪಿಗಳ ಹೇಳಿಕೆ ನೀಡಿ ಪೊಲೀಸರು ದರ್ಶನ್‌ ಅವರನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು. ಆದರೆ ಪೊಲೀಸರು ಸಿಸಿಟಿವಿ ದೃಶ್ಯವನ್ನು ಆಧಾರಿಸಿ ಬಂಧಿಸಿದ್ದಾರೆ ಎಂಬ ವಿಚಾರ ಈಗ ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ.

    ದರ್ಶನ್, ಪವಿತ್ರಗೌಡ ಇಬ್ಬರೂ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ. ಇಬ್ಬರೂ ಒಟ್ಟೊಟ್ಟಿಗೆ ಬಂದು ಹೋಗಿರುವ ದೃಶ್ಯಗಳು ಸೆರೆಯಾಗಿದೆ. ಸದ್ಯ ಪೊಲೀಸರ ಬಳಿಕ 30 ನಿಮಿಷದ ವಿಡಿಯೋವಿದ್ದು ಇದೇ ಪ್ರಕರಣಕ್ಕೆ ಪ್ರಮುಖ ಸಾಕ್ಷಿಯಾಗಲಿದೆ. ಸಿಸಿಟಿವಿ ವಿಚಾರವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದ ಬಳಿಕ ದರ್ಶನ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಹಲ್ಲೆಯ ತೀವ್ರತೆಗೆ ಪ್ರಜ್ಞೆ ತಪ್ಪಿದ್ದ ರೇಣುಕಾಸ್ವಾಮಿ ಕೈ, ಕಿವಿ, ಹೊಟ್ಟೆಗೆ ಕರೆಂಟ್ ಶಾಕ್

    ಕೆಲ ದಿನಗಳ ಹಿಂದೆ ಪೊಲೀಸ್‌ ಅಧಿಕಾರಿಯೊಬ್ಬರು ಸ್ನೇಹಿತನ ಜೊತೆ ಮಾತನಾಡಿದ್ದರು. ಮಾತುಕತೆಯ ವೇಳೆ ಅಧಿಕಾರಿ ದರ್ಶನ್‌ ಮತ್ತು ಗ್ಯಾಂಗ್‌ (Darshan Gang) ಬರೆ ಹಾಕಿಸಿ ಸಿಕ್ಕಾಪಟ್ಟೆ ಟಾರ್ಚರ್‌ ನೀಡಿದ್ದಾರೆ. ಎಲೆಕ್ಟ್ರಿಕ್‌ ಶಾಕ್‌ ನೀಡಿ ಕೋಳಿ ಎಸೆದಂತೆ ಎಸೆದು ಮಿನಿ ಟ್ರಕ್‌ಗೆ ಗುದ್ದಿ ಹತ್ಯೆ ಮಾಡಿದ್ದಾರೆ ಎಂದು ವಿವರಿಸಿದ್ದರು.

    ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪವಿತ್ರಾ ಗೌಡ ಮೊದಲ ಆರೋಪಿಯಾಗಿದ್ದರೆ ದರ್ಶನ್‌ ಎರಡನೇ ಆರೋಪಿಯಾಗಿದ್ದಾರೆ.

     

  • ಫ್ರಿಡ್ಜ್‌ನಲ್ಲಿಟ್ಟಿದ್ದ ಗೋಮಾಂಸ ವಶ- ಅಕ್ರಮವಾಗಿ ನಿರ್ಮಿಸಿದ್ದ 11 ಮನೆಗಳು ನೆಲಸಮ

    ಫ್ರಿಡ್ಜ್‌ನಲ್ಲಿಟ್ಟಿದ್ದ ಗೋಮಾಂಸ ವಶ- ಅಕ್ರಮವಾಗಿ ನಿರ್ಮಿಸಿದ್ದ 11 ಮನೆಗಳು ನೆಲಸಮ

    ಭೋಪಾಲ್:‌ ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗೋಮಾಂಸ ವ್ಯಾಪಾರದ ವಿರುದ್ಧದ ಕ್ರಮದ ಭಾಗವಾಗಿ ಮಧ್ಯಪ್ರದೇಶದ ಮಾಂಡ್ಲಾದಲ್ಲಿ (Madhyapradesh Mandla) ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಿದ 11 ಮನೆಗಳನ್ನು ಸ್ಥಳೀಯ ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

    ಮಂಡ್ಲಾದ ನೈನ್‌ಪುರದ ಭೈನ್‌ವಾಹಿ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಗೋವುಗಳನ್ನು ಕೂಡಿಹಾಕಲಾಗಿದೆ ಎಂಬ ಸುಳಿಸು ಪೊಲೀಸರಿಗೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಜತ್ ಸಕ್ಲೇಚಾ ತಿಳಿಸಿದ್ದಾರೆ.

    ಸುಳಿವು ದೊರೆಯುತಿದ್ದಂತೆಯೇ ಪೊಲೀಸ್‌ ಅಧಿಕಾರಿಗಳ ತಂಡ ಸ್ಥಳಕ್ಕೆ ದೌಡಾಯಿಸಿದೆ. ಈ ವೇಳೆ ಮನೆಗಳ ಹಿತ್ತಲಲ್ಲಿ ಗೋವುಗಳನ್ನು ಕಟ್ಟಿ ಹಾಕಲಾಗಿತ್ತು. ಕೂಡಲೇ 150 ಗೋವುಗಳನ್ನು ವಶಕ್ಕೆ ಪಡೆದುಕೊಂಡೆವು. ಅಲ್ಲದೇ ಮನೆಗಳಲ್ಲಿ ಫ್ರಿಡ್ಜ್‌ನಲ್ಲಿನಲ್ಲಿಟ್ಟಿದ್ದ ಗೋಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಾಣಿಗಳ ಕೊಬ್ಬು, ದನದ ಚರ್ಮ ಮತ್ತು ಮೂಳೆಗಳನ್ನು ಕೂಡ ಕೊಠಡಿಯಲ್ಲಿ ಪತ್ತೆ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.

    ಸ್ಥಳೀಯ ಸರ್ಕಾರಿ ಪಶುವೈದ್ಯರು ವಶಪಡಿಸಿಕೊಂಡ ಮಾಂಸವು ದನದ ಮಾಂಸ ಎಂಬುದನ್ನು ದೃಢಪಡಿಸಿದ್ದಾರೆ. ಇನ್ನು ಡಿಎನ್‌ಎ ಟೆಸ್ಟ್‌ಗಾಗಿ ವಶಕ್ಕೆ ಪಡೆದ ಮಾದರಿಗಳನ್ನು ಹೈದರಾಬಾದ್‌ಗೆ ಕಳುಹಿಸಿದ್ದೇವೆ. 11 ಆರೋಪಿಗಳ ಮನೆಗಳು ಸರ್ಕಾರಿ ಭೂಮಿಯಲ್ಲಿರುವುದರಿಂದ ಅವುಗಳನ್ನು ನೆಲಸಮಗೊಳಿಸಲಾಗಿದೆ ಎಂದು ಎಸ್‌ಪಿ ವಿವರಿಸಿದ್ದಾರೆ. ಇದನ್ನೂ ಓದಿ: ತನ್ನ ಉಗುಳಿನಿಂದ ಗ್ರಾಹಕನ ಮುಖಕ್ಕೆ ಮಸಾಜ್‌ ಮಾಡಿದ ಕ್ಷೌರಿಕ!

    ಶುಕ್ರವಾರ ರಾತ್ರಿ ಹಸುಗಳು ಮತ್ತು ಗೋಮಾಂಸ ಪತ್ತೆಯಾದ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ 10 ಮಂದಿ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದರು.

    ವಶಕ್ಕೆ ಪಡೆದ 150 ಗೋವುಗಳನ್ನು ಗೋಶಾಲೆಗೆ ಕಳುಹಿಸಲಾಗಿದೆ. ಭೈನಸ್ವಾಹಿ ಪ್ರದೇಶವು ಕೆಲವು ಸಮಯದಿಂದ ಗೋವು ಕಳ್ಳಸಾಗಣೆಯ ಕೇಂದ್ರವಾಗಿದೆ. ಗೋಹತ್ಯೆ ಮಾಡಿದರೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಸಕ್ಲೇಚಾ ಹೇಳಿದ್ದಾರೆ.

  • ಪೊಲೀಸ್ ಕಸ್ಟಡಿಯಲ್ಲಿ ಪವಿತ್ರಾ ಗೌಡ ಧಿಮಾಕು!

    ಪೊಲೀಸ್ ಕಸ್ಟಡಿಯಲ್ಲಿ ಪವಿತ್ರಾ ಗೌಡ ಧಿಮಾಕು!

    ಬೆಂಗಳೂರು: ರೇಣುಕಾಸ್ವಾಮಿ (Renukaswamy) ಹತ್ಯೆ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ (Police Custody) ಆರೋಪಿ ಪವಿತ್ರಾ ಗೌಡ (Pavithra Gowda) ಧಿಮಾಕು ವರ್ತನೆ ತೋರಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಮನೆಯಲ್ಲಿದ್ದಾಗ  ಹೈಫೈ ಜೀವನ ನಡೆಸುತ್ತಿದ್ದ ಪವಿತ್ರಾ ಗೌಡ ಈಗ ಕಸ್ಟಡಿಯಲ್ಲಿ ಸುಚಿರುಚಿಯ ಬಗ್ಗೆ ಪೊಲೀಸರಿಗೇ ಪ್ರಶ್ನೆ ಕೇಳಿ ಸುದ್ದಿಯಾಗಿದ್ದಾರೆ. ಇದನ್ನೂ ಓದಿ: ಫ್ಯಾನ್ಸ್ ಬಳಸಿಕೊಂಡು ಕೊಲೆ ಮಾಡುವುದು ಎಷ್ಟು ಸರಿ? – ದರ್ಶನ್ ಕೃತ್ಯ ಖಂಡಿಸಿದ ರಮ್ಯಾ

     

    ಶುಕ್ರವಾರ ಮಧ್ಯಾಹ್ನ ಎಲ್ಲಾ ಆರೋಪಿಗಳಿಗೆ ಮೊಸರನ್ನ ನೀಡಲಾಗಿತ್ತು. ಎರಡು ತುತ್ತು ಸೇವಿಸಿದ ಪವಿತ್ರಾ ತಾನು ಪೊಲೀಸ್‌ ಕಸ್ಟಡಿಯಲ್ಲಿ ನಾನು ಇದ್ದೇನೆ ಎನ್ನುವುದನ್ನೇ ಮರೆತು ಇದು ಇಷ್ಟೊಂದು ಹುಳಿ ಇದೆ ಹೇಗೆ ತಿನ್ನೋದು ಎಂದು ಅಲ್ಲಿದ್ದ ಪೊಲೀಸ್‌ ಸಿಬ್ಬಂದಿಗೆ ಪ್ರಶ್ನಿಸಿದ್ದಾರೆ.  ಇದನ್ನೂ ಓದಿ: ರೀಲ್ ಗಜನ ಪಳಗಿಸಿದ ರಿಯಲ್ ಸಲಗ | ಆಪರೇಷನ್‌ ’36’ ಸೂಪರ್ ಕಾಪ್ಸ್ – ಸೂಪರ್ ಸ್ಟೋರಿ ಓದಿ

    ಪವಿತ್ರಾ ಪ್ರಶ್ನೆಗೆ, ನಾನು ಊಟ ಮಾಡ್ತಿರೋದು ಕೂಡ ಅದೇ ಮೊಸರನ್ನ. ಬೇಕಾದ್ರೆ ಊಟ ಮಾಡು. ಇಷ್ಟ ಇಲ್ಲದೇ ಇದ್ರೆ ಬಿಟ್ಟು ಬಿಡು ಎಂದು ಅಷ್ಟೇ ಖಡಕ್‌ ಆಗಿ ಉತ್ತರ ನೀಡಿದ್ದಾರೆ. ಈ ಉತ್ತರಕ್ಕೆ ಪೆಚ್ಚಾದ ಪವಿತ್ರಾ ಗೌಡ ಕೊನೆಗೆ ಮೊಸರನ್ನ ಸೇವಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಆರೋಪಿಯಾಗಿದ್ದರೆ ದರ್ಶನ್‌ ಎ2 ಆರೋಪಿಯಾಗಿದ್ದಾರೆ.

  • ನಾನು ಶೆಡ್‌ನಿಂದ ಬಂದ ಮೇಲೆ ಇವ್ರೆಲ್ಲಾ ಸೇರಿ ಹಿಂಗೆ ಮಾಡಿ ನನ್‌ ತಲೆಗೆ ತಂದಿದ್ದಾರೆ: ದರ್ಶನ್‌ ಅಳಲು

    ನಾನು ಶೆಡ್‌ನಿಂದ ಬಂದ ಮೇಲೆ ಇವ್ರೆಲ್ಲಾ ಸೇರಿ ಹಿಂಗೆ ಮಾಡಿ ನನ್‌ ತಲೆಗೆ ತಂದಿದ್ದಾರೆ: ದರ್ಶನ್‌ ಅಳಲು

    ಬೆಂಗಳೂರು: ನಾನು ಶೆಡ್‌ನಿಂದ ಬಂದ ಮೇಲೆ ಇವ್ರೆಲ್ಲಾ ಸೇರಿ ಹೀಗೆ ಮಾಡಿ ನನ್ನ ತಲೆಗೆ ತಂದಿದ್ದಾರೆ ಎಂದು ದರ್ಶನ್‌ (Darshan) ಅಳಲು ತೋಡಿಕೊಂಡಿದ್ದಾರೆ.

    ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ (Renuka Swamy Murder Case) ಸಂಬಂಧಿಸಿದಂತೆ ದರ್ಶನ್‌ ಮತ್ತು ಗ್ಯಾಂಗ್‌ ಸದಸ್ಯರನ್ನು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ನಿರಂತರ ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ, ಸರ್ ನನಗೇನು ಗೊತ್ತಿಲ್ಲ ಅವನನ್ನ ಕರ್ಕೊಂಡ್ ಬಂದಿರೋದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ ಎಂಬ ವಿಚಾರ ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ.

    ದರ್ಶನ್‌ ಹೇಳಿದ್ದು ಏನು?
    ರೇಣುಕಾಸ್ವಾಮಿಯನ್ನು ಕರ್ಕೊಂಡ್ ಬಂದಿದ್ದ ದಿನ ನಾನು ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ನಲ್ಲಿದ್ದೆ. ಹುಡುಗರ ಜೊತೆ ಮದ್ಯ ಹಾಕುತ್ತಿದ್ದಾಗ ಪವನ ಅಲ್ಲಿಗೆ ಬಂದಿದ್ದ. ನನ್ನ ಕಿವಿಯಲ್ಲಿ ರೇಣುಕಾಸ್ವಾಮಿಯನ್ನು ಕರೆದುಕೊಂಡು ಬಂದಿರುವುದಾಗಿ ಹೇಳಿದ. ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಕೇಸ್‌: ಕಣ್ಣೆದುರೇ ಮಗ ಅರೆಸ್ಟ್‌ – ಮನನೊಂದ ತಂದೆ ಹೃದಯಾಘಾತದಿಂದ ಸಾವು!

    ನಾನು ಸೀದಾ ಅಲ್ಲಿಂದ ಮನೆಗೆ ಹೋಗಿ ಪವಿತ್ರಾಳನ್ನು ಕರೆದುಕೊಂಡು ಶೆಡ್‌ಗೆ ಹೋದೆ. ಅವನನ್ನು ಕೊಲೆ ಮಾಡಬೇಕು ಎಂಬ ಉದ್ದೇಶ ನನಗೆ ಇರಲಿಲ್ಲ.  ಅವನಿಗೆ ಹೊಡೆದು ಆತನ ಕೈಯಿಂದಲೇ ಕ್ಷಮೆ ಕೇಳಿಸಬೇಕು ಅಂತ ಇದ್ದೆ.

    ನನ್ನ ಪವಿತ್ರಾಳನ್ನು ನೋಡುತ್ತಿದ್ದಂತೆ ಅವನು ತಪ್ಪಾಯ್ತು ಅಂತ ಕೇಳಿಕೊಂಡ. ಆಮೇಲೆ ನಾನು ಅವನಿಗೆ ಅವನಿಗೆ ಊಟಕ್ಕೆ ದುಡ್ಡು ಕೊಟ್ಟು ಊಟ ಮಾಡಿಕೊಂಡು ಊರಿಗೆ ಹೋಗು ಅಂತ ಹೇಳಿ ಬಂದೆ. ನಾನು ಶೆಡ್‌ನಿಂದ ಬಂದ ಮೇಲೆ ಇವ್ರೆಲ್ಲಾ ಸೇರಿ ಹೀಗೆ ಮಾಡಿ ನನ್ನ ತಲೆಗೆ ತಂದಿದ್ದಾರೆ. ಅಷ್ಟೇ ಸರ್‌ ವಿಷಯ. ನನಗೆ ಬೇರೆ ಏನು ಗೊತ್ತಿಲ್ಲ.

     

  • ಕೋಳಿ ಎಸೆದಂತೆ ಎಸೆದು ಟ್ರಕ್‌ಗೆ ಗುದ್ದಿ, ಸಿಕ್ಕ ಸಿಕ್ಕ ವಸ್ತುಗಳಲ್ಲಿ ಹೊಡೆದು ಹತ್ಯೆ

    ಕೋಳಿ ಎಸೆದಂತೆ ಎಸೆದು ಟ್ರಕ್‌ಗೆ ಗುದ್ದಿ, ಸಿಕ್ಕ ಸಿಕ್ಕ ವಸ್ತುಗಳಲ್ಲಿ ಹೊಡೆದು ಹತ್ಯೆ

    – ಆರ್‌ಆರ್‌ನಗರದ ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಹತ್ಯೆ
    – ಪೊಲೀಸ್‌ ಅಧಿಕಾರಿ ತನ್ನ ಸ್ನೇಹಿತನ ಜೊತೆ ಮಾತನಾಡಿದ್ದ ಆಡಿಯೋ ವೈರಲ್‌

    ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ (Renuka Swamy) ಅವರನ್ನು ದರ್ಶನ್‌ ಮತ್ತು ಗ್ಯಾಂಗ್‌ (Darshan Gang) ಬರೆ ಹಾಕಿಸಿ, ಕೋಳಿ ಎಸೆದಂತೆ ಎಸೆದು ಮಿನಿ ಟ್ರಕ್‌ಗೆ ಗುದ್ದಿ ಹತ್ಯೆ ಮಾಡಿದ್ದಾರೆ.

    ಹೌದು. ರೇಣುಕಾಸ್ವಾಮಿ ಅವರನ್ನು ಹತ್ಯೆ ಮಾಡಿದ ಬಗ್ಗೆ ಪೊಲೀಸ್‌ ಅಧಿಕಾರಿಯೊಬ್ಬರು ಸ್ನೇಹಿತನ ಜೊತೆ ಮಾತನಾಡಿರುವ ಆಡಿಯೋ ಈಗ ವೈರಲ್‌ ಆಗಿದೆ. ಈ ಆಡಿಯೋದಲ್ಲಿ ಕೊಲೆಯನ್ನು ಹೇಗೆ ಮಾಡಲಾಗಿದೆ ಎಂಬುದರ ಬಗ್ಗೆ ಪೊಲೀಸ್‌ ಅಧಿಕಾರಿ ವಿವರಿಸಿದ್ದಾರೆ. ಇದನ್ನೂ ಓದಿ: ದರ್ಶನ್ ಇರೋ ಠಾಣೆಗೆ ಶಾಮಿಯಾನ ಹಾಕಿದ್ದರ ಹಿಂದಿನ ಸೀಕ್ರೆಟ್ ರಿವೀಲ್

    ಆಡಿಯೋದಲ್ಲಿ ಏನಿದೆ?
    ಪೊಲೀಸ್ ಅಧಿಕಾರಿ: ಅಷ್ಟೊಂದು ಎವಿಡೆನ್ಸ್ ಇದೆ. 302 ಎಫ್‌ಐಆರ್‌ಗೆ ಹೆಸರು ತರಬೇಕು ಅಂದರೆ ಸುಮ್ಮಸುಮ್ಮನೆ ತರಲ್ಲ. ಈಗ ಲೈಫ್ ಅಲ್ವಾ? ಸುಮ್ಮನೆ ಒಂದು ವಾರ್ನಿಂಗ್ ಮಾಡಿ ಬಿಟ್ಟಿದ್ದರೆ ಆಗ್ತಿತ್ತು.

    ಸ್ನೇಹಿತ: ಹುಡುಗರು ಮಾಡಿದ್ದಾರೆ ಅಂತಾರೆ ನಿಜನಾ?

    ಪೊಲೀಸ್ ಅಧಿಕಾರಿ: ಎಲ್ಲರೂ ಸೇರಿ ಹೊಡೆದಿದ್ದಾರೆ. ಬರೆ ಎಲ್ಲಾ ಹಾಕಿದ್ದಾರಲ್ಲ. ಕಬ್ಬಿಣ ಕಾಯಿಸಿ ಬರೆ ಹಾಕಿ, ಲಾರಿಗೆ ತಲೆ ಹೊಡೆದು, ಎಲ್ಲಾ ಮಾಡಿದ್ದಾರೆ.  ಶೆಡ್‌ನಲ್ಲಿ ಸೀಜ್‌ ಮಾಡಿದ ಗಾಡಿಗಳಿರುತ್ತೆ. ಲಾರಿ, ಬಸ್, ಆಟೋಗಳು ಎಲ್ಲಾ. ಆ ಚಿಕ್ಕ ಹುಡುಗನಿಗೆ ಕೋಳಿ ಎಸೆದಂಗೆ ದರ್ಶನ್ ಎಸಿದಿದ್ದಾನೆ.

    ಸ್ನೇಹಿತ: ವಿಡಿಯೋ ಇದ್ಯಾ?

    ಪೊಲೀಸ್ ಅಧಿಕಾರಿ: ಹಾ. ಎಲ್ಲಾ ಇದೆ. ಸಿಸಿಟಿವಿ ದೃಶ್ಯಗಳಿವೆ. ಸಿಕ್ಕಾಪಟ್ಟೆ ಟಾರ್ಚರ್ ಮಾಡಿದ್ದಾರೆ ಸಾರ್. ಬೌನ್ಸರ್‌ಗಳು ಹೊಡೆಯೋ ಏಟು ತಡೆಯೋಕೆ ಆಗುತ್ತಾ? ಆ ಚಿಕ್ಕ ಹುಡುಗ. ಎಲ್ಲಾ ಕುಡಿದು ಬಂದು ಹೊಡೀಯೋದು.ಸುಮ್ಮನೆ ವಾರ್ನ್ ಮಾಡಿದ್ದರೆ ಆಗ್ತಿತ್ತು. ಇಲ್ಲಾ ಒಂದು ದೂರು ಕೊಟ್ಟಿದ್ದರೆ ಆಗ್ತಿತ್ತು. ಎಷ್ಟು ಭೀಕರ ಹತ್ಯೆ ಗೊತ್ತಾ ಇದು. ತುಂಬಾ ಹೀನಾಯವಾಗಿ ಹೊಡೆದಿದ್ದಾರೆ.

    ಸ್ನೇಹಿತ: ಹೌದಾ

     
    ಪೊಲೀಸ್ ಅಧಿಕಾರಿ: ಪವಿತ್ರಾ ಗೌಡಗೂ ಹೊಡೆದಿದ್ದಾನೆ. ಅವಳು ಹೋಗಿ ಆರ್.ಆರ್.ನಗರ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದರು. ಸೋಮವಾರ ಡಿಸ್ಚಾರ್ಜ್ ಆಗಿ ಬಂದಿದ್ದಾಳೆ.

    ಸ್ನೇಹಿತ: ಹೌದಾ

    ಪೊಲೀಸ್ ಅಧಿಕಾರಿ: ನಾಲ್ವರು ಬಂದು ಕಾಮಾಕ್ಷಿಪಾಳ್ಯ ಠಾಣೆಗೆ ಬಂದು ಶರಣಾಗಿ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡಿ ತಗ್ಲಾಕೊಂಡ್ರು.ಹೌದಾ