ಚಿತ್ರದುರ್ಗ: ವ್ಯಕ್ತಿಯೊಬ್ಬ ತನ್ನ ಪತ್ನಿಯ (Wife) ಶೀಲ ಶಂಕಿಸಿ ಇಸ್ತ್ರಿ ಪೆಟ್ಟಿಗೆಯಿಂದ ಆಕೆಯ ಮೈ ಸುಟ್ಟಿರುವುದು ಮೊಳಕಾಲ್ಮೂರು ಪಟ್ಟಣದಲ್ಲಿ ನಡೆದಿದೆ.
ನಾಗೇಶ್ ಎಂಬಾತ ಆ.15 ರಂದು ಪತ್ನಿ ಮೇಲೆ ದೌರ್ಜನ್ಯ ಎಸಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರೋಪಿ, ಪತ್ನಿಯ ಮುಖ, ಕೈ-ಕಾಲು, ತೊಡೆ ಸೇರಿ ಹಲವೆಡೆ ಸುಟ್ಟು ವಿಕೃತಿ ಮೆರೆದಿದ್ದಾನೆ. ಮಹಿಳೆಗೆ ಬಳ್ಳಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಆಕೆ ಚೇತರಿಸಿಕೊಂಡಿದ್ದಾರೆ. ಗಾಯಾಳು ಮಹಿಳೆ ಬಳ್ಳಾರಿಯ ತವರುಮನೆಯಲ್ಲಿದ್ದು, ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಇದನ್ನೂ ಓದಿ: ಕೋರ್ಟ್‍ಗೆ ಹಾಜರಾಗದೇ ಕಳ್ಳಾಟ – ಗೋವಾದಲ್ಲಿ ಲಾಯರ್ ಜಗದೀಶ್ ಅರೆಸ್ಟ್
ನಾಗೇಶ್‍ನ ತಂದೆ ಚಂದ್ರಣ್ಣನ ವಿರುದ್ಧವೂ ದೌರ್ಜನ್ಯ ಆರೋಪ ಕೇಳಿ ಬಂದಿದೆ.
ಬೆಂಗಳೂರು: ಅಂಗಡಿಯ ಮುಂದೆ ಕಾರ್ ಪಾಕಿರ್ಂಗ್ ವಿಚಾರಕ್ಕೆ ಎರಡು ಗುಂಪುಗಳ ನಡುವೆ ನಡೆದ ಗಲಾಟೆ (Parking dispute) ಯುವಕನೊಬ್ಬನ ಕೊಲೆಯಲ್ಲಿ (Murder) ಅಂತ್ಯವಾಗಿರುವುದು ನಗರದ ಹೊರವಲಯದ ಸೊಂಡೆಕುಪ್ಪ ಗ್ರಾಮ ಪಂಚಾಯಿತಿ ಬಳಿ ನಡೆದಿದೆ.
ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ರೆಹಮಾನ್ (17) ಕೊಲೆಯಾದ ಯುವಕ. ಅದೇ ಗ್ರಾಮದ ರೇಣುಕಾ ಹಾಗೂ ಪರ್ಮಿ ಎಂಬವರು ರೆಹಮಾನ್ ಎದೆಗೆ ಚಾಕು ಇರಿದು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗದೆ. ಕೊಲೆಯಾದ ಯುವಕ ಹುಟ್ಟು ಹಬ್ಬಕ್ಕೆಂದು ಮಂಗಳವಾರ ಕೇಕ್ ತರಲು ಬೇಕರಿ ಬಳಿ ಹೋಗಿದ್ದ. ಈ ವೇಳೆ ಆರೋಪಿಗಳು ಅಂಗಡಿ ಮುಂದೆ ಕಾರು ಪಾರ್ಕಿಂಗ್ ಮಾಡಿದ್ದು, ಇದನ್ನು ರೆಹಮಾನ್ ಪ್ರಶ್ನೆ ಮಾಡಿದ್ದ ಇದೇ ವಿಚಾರಕ್ಕೆ ಕಾರಿನಲ್ಲಿದ್ದವರು ಯುವಕನ ಮೇಲೆ ಗಲಾಟೆ ಮಾಡಿದ್ದರು.
ಇದೇ ಕಾರಣಕ್ಕೆ ಬುಧವಾರ ರಾತ್ರಿ ಎರಡು ಗುಂಪುಗಳ ನಡುವೆ ಮತ್ತೆ ಗಲಾಟೆ ನಡೆದಿದೆ. ಈ ವೇಳೆ ಆರೋಪಿಗಳಾದ ರೇಣುಕಾ ಹಾಗೂ ಪರ್ಮಿ ಎಂಬವರು ಕಾರಿನಲ್ಲಿದ್ದ ಚಾಕು ಹಾಗೂ ಪಿಸ್ತೂಲ್ ತೋರಿಸಿ ಬೆದರಿಸಿದ್ದಾರೆ. ಬಳಿಕ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಆರೋಪಿ ರೇಣುಕಾನನ್ನು ಮಾದನಾಯಕನಹಳ್ಳಿ ಪೊಲೀಸರು (Police) ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತಲೆಮರೆಸಿಕೊಂಡಿರುವ ಮತ್ತೋರ್ವ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ರಾಮನಗರ: ಆತ 5 ವರ್ಷಗಳ ಹಿಂದೆ ಹೆಂಡತಿಯನ್ನು ಕೊಲೆ ಮಾಡಿ ಹೂತುಹಾಕಿದ್ದ. ಬಳಿಕ ಹೆಂಡತಿ ಬೇರೊಬ್ಬನ ಜೊತೆ ಓಡಿಹೋಗಿದ್ದಾಳೆಂದು ಕುಟುಂಬಸ್ಥರಿಗೆ ನಂಬಿಸಿ ಪ್ರಕರಣವನ್ನು ಮುಚ್ಚಿ ಹಾಕಿ ಸೈಲೆಂಟ್ ಆಗಿದ್ದ. ಆದರೆ, ಇತ್ತೀಚೆಗೆ ಸ್ನೇಹಿತನ ಹೆಂಡತಿ ಕೊಲೆಯಲ್ಲಿ ಭಾಗಿಯಾಗಿ ಪೊಲೀಸರಿಗೆ ತಗಲಾಕಿಕೊಂಡಿರುವ ಆರೋಪಿ ತನ್ನ ಪತ್ನಿ ಕೊಲೆ ಬಗ್ಗೆಯೂ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.
ಹೌದು, ಆರೋಪಿ ಹೆಸರು ಕಿರಣ್ ಕುಮಾರ್. ಮಾಗಡಿ ತಾಲೂಕಿನ ಹೂಜಗಲ್ ಗ್ರಾಮದ ನಿವಾಸಿ. ಕಳೆದ 10 ವರ್ಷಗಳ ಹಿಂದೆ ತಾವರೆಕೆರೆಯ ಪೂಜಾ ಎಂಬಾಕೆಯನ್ನು ಮದುವೆ ಆಗಿದ್ದ. ನಂತರ ಸಂಸಾರದಲ್ಲಿ ಬಿರುಕು ಉಂಟಾಗಿ ಅಗಾಗ್ಗೆ ನ್ಯಾಯ ಪಂಚಾಯಿತಿ ಕೂಡ ಆಗಿತ್ತು. ನಂತರ 2019 ರಲ್ಲಿ ಹೆಂಡತಿಯ ನಡತೆ ಶಂಕಿಸಿ ಕೊಲೆಗೈದು ಗ್ರಾಮದ ಪಕ್ಕದ ಚೀಲೂರು ಫಾರೆಸ್ಟ್‌ನಲ್ಲಿ ಸ್ನೇಹಿತರಿಬ್ಬರ ಜೊತೆಗೂಡಿ ಹೂತುಹಾಕಿದ್ದ. ಆದರೆ ಫಾರೆಸ್ಟ್‌ನಲ್ಲಿ ಟ್ರಂಚ್ ತೋಡುವ ಕೆಲಸ ಆರಂಭವಾದಾಗ ನಾಲ್ಕು ತಿಂಗಳ ನಂತರ ಹೆಣವನ್ನು ಹೊರತೆಗೆದು, ಕಳೆಬರಗಳನ್ನ ಸುಟ್ಟು ಮಣ್ಣು ಮುಚ್ಚಿದ್ದ. ಸಂಬಂಧಿಕರಿಗೆ ತನ್ನ ಹೆಂಡತಿ ಬೇರೊಬ್ಬನ ಜೊತೆ ಓಡಿಹೋಗಿ ಮದುವೆಯಾಗಿದ್ದಾಳೆಂದು ನಂಬಿಸಿದ್ದ ಆಸಾಮಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಇದನ್ನೂ ಓದಿ: Video | ಆ.31ಕ್ಕೆ ಪವಿತ್ರಾಗೌಡ ಬೇಲ್ ಭವಿಷ್ಯ – ಅಲ್ಲಿವರೆಗೂ ಜೈಲೇ ಗತಿ
ಕಳೆದ 20 ದಿನಗಳ ಹಿಂದೆ ಇದೆ ಹೂಜಗಲ್ ಪಕ್ಕದ ಬೆಟ್ಟದಲ್ಲಿ ಸ್ನೇಹಿತ ಹೆಂಡತಿ ಕೊಲೆ ಕೇಸ್‌ನಲ್ಲಿ ಮಾಗಡಿ ಪೊಲೀಸರಿಗೆ ತಗಲಾಕಿಕೊಂಡಿದ್ದ ಕಿರಣ್ ಪೊಲೀಸರ ವಿಚಾರಣೆ ವೇಳೆ ತನ್ನ ಹೆಂಡತಿ 10 ವರ್ಷಗಳ ಹಿಂದೆಯೆ ಕಾಣೆಯಾಗಿದ್ದಾಳೆ. ಮಿಸ್ಸಿಂಗ್ ಪ್ರಕರಣ ಕೂಡಾ ದಾಖಲಿಸಿದ್ದಾಗಿ ಹೇಳಿದ್ದ. ಇದರಿಂದ ಅನುಮಾನಗೊಂಡ ಪೊಲೀಸರು ಮೃತ ಪೂಜಾಳ ತಾಯಿ ಗೌರಮ್ಮಳನ್ನು ಸಂಪರ್ಕಿಸಿದ 5 ವರ್ಷದ ಹಿಂದೆ ಮಗಳು ಬೇರೊಬ್ಬನ ಜೊತೆ ಓಡಿಹೋಗಿದ್ದಾಳೆಂದು ತನ್ನ ಅಳಿಯ ಹೇಳಿದ್ದಾನೆ ಎಂದಿದ್ದಳು. ಇದರಿಂದ ಪೊಲೀಸರಿಗೆ ಮತ್ತಷ್ಟು ಅನುಮಾನ ಹೆಚ್ಚಾಗಿ, ಬಳಿಕ ಮಿಸ್ಸಿಂಗ್ ಕಂಪ್ಲೆಂಟ್ ಹುಡುಕಿದ ಪೊಲೀಸರಿಗೆ ಆ ಕಂಪ್ಲೆಂಟ್ ಸಿಕ್ಕದಿದ್ದಾಗ ಆತನ ಸ್ನೇಹಿತರಾದ ಭರತ್ ಹಾಗೂ ಕುಮಾರ್‌ನನ್ನು ವಿಚಾರಿಸಿದ್ದಾರೆ. ಆಗ ಸತ್ಯ ಬಯಲಾಗಿದೆ.
ಒಂದು ಕೊಲೆ ಕೇಸ್ ಭೇದಿಸಲು ಹೋದ ಪೊಲೀಸರಿಗೆ 5 ವರ್ಷದ ಹಳೆಯ ಪ್ರಕರಣ ಬೆಳಕಿಗೆ ಬಂದಾಕ್ಷಣ ಜೈಲಿನಲ್ಲಿದ್ದ ಆರೋಪಿ ಕಿರಣ್ ನನ್ನ ಮತ್ತೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕಿರಣ್ ಸತ್ಯ ಬಾಯ್ಬಿಟ್ಟಿದ್ದಾನೆ. ಆದರೆ ಕುತೂಹಲದ ವಿಷಯ ಏನಂದರೆ ದೃಶ್ಯ ಸಿನಿಮಾದಲ್ಲಿ ಹೂತಿಟ್ಟಿದ್ದ ಶವವನ್ನು ಬೇರೆಡೆಗೆ ಸ್ಥಳಾಂತರಿಸುವುದನ್ನ ಗಮನಿಸಿದ್ದ ಈತ, ಅರಣ್ಯದಲ್ಲಿ ಟ್ರಂಚ್ ಕಾಮಗಾರಿ ಆರಂಭವಾಗುತ್ತಿದ್ದಂತೆ, ಎಲ್ಲಿ ಹೆಣ ಹೂತಿರುವುದು ಗೊತ್ತಾಗುತ್ತೋ ಎಂದು ಹೆಣವನ್ನು ಹೊರತೆಗೆದು ತನ್ನ ಜಮೀನಿನಲ್ಲಿ ಸುಟ್ಟು ಮತ್ತೆ ಮಣ್ಣು ಮುಚ್ಚಿದ್ದಾನೆ. ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಸ್ಥಳಕ್ಕೆ ಕರೆತಂದು ಪರಿಶೀಲನೆ ನಡೆಸಿದಾಗ ಹೂತಿಟ್ಟ ಶವದ ಮೂಳೆಗಳು ಪತ್ತೆಯಾಗಿವೆ. ಬಳಿಕ ಕಿರಣ್ ಹಾಗೂ ಆತನ ಸ್ನೇಹಿತರ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಜೈಲಿಗಟ್ಟಿದ್ದಾರೆ. ಇದನ್ನೂ ಓದಿ: ಐವನ್ ಡಿಸೋಜಾ ಮನೆಗೆ ಕಲ್ಲು ತೂರಾಟ ಪ್ರಕರಣ – ಇಬ್ಬರು ಹಿಂದೂ ಸಂಘಟನೆ ಕಾರ್ಯಕರ್ತರ ಬಂಧನ
ಮುಂಬೈ: ಮಹಾರಾಷ್ಟ್ರದ (Maharashtra) ಜಲ್ನಾ ನಗರದ ಎಂಐಡಿಸಿ ಪ್ರದೇಶದಲ್ಲಿರುವ ಉಕ್ಕಿನ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡ (Boiler Explosion) ಪರಿಣಾಮ 22 ಕಾರ್ಮಿಕರು ಗಾಯಗೊಂಡಿದ್ದಾರೆ. ಇದರಲ್ಲಿ ಮೂವರು ಕಾರ್ಮಿಕರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು (Police ) ತಿಳಿಸಿದ್ದಾರೆ.
ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮದ ಕಾರ್ಕಡ ಹೆದ್ದಾರಿ ಅಂಗನವಾಡಿ ಕೇಂದ್ರದ ಸಮೀಪದಲ್ಲಿ ಕಿರಣ್ ಮತ್ತು ಜಯಶ್ರೀ ದಂಪತಿ ಬಾಡಿಗೆ ಮನೆ ಮಾಡಿಕೊಂಡಿದ್ದರು. ಬೀದರ್ ಮೂಲದ ಜಯಶ್ರೀ ಜೊತೆ 8 ತಿಂಗ ಹಿಂದೆ ಕಿರಣ್ ಮದುವೆಯಾಗಿತ್ತು. ಕಿರಣ್ ಸಾಲಿಗ್ರಾಮದ ಗುರು ನರಸಿಂಹ ದೇವಸ್ಥಾನದಲ್ಲಿ ಎರಡು ವರ್ಷದಿಂದ ಅಡುಗೆ ಕೆಲಸ ಮಾಡುತ್ತಿದ್ದ. ಮನೆಯ ಟೆರೇಸ್‌ನಿಂದ ಬಿದ್ದು ಗಾಯಗೊಂಡಿರುವುದಾಗಿ ಪತಿ ಕಿರಣ್ ಗಾಯಾಳು ಪತ್ನಿಯನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ಆಕೆ ಮೃತರಾಗಿರುವುದು ಬೆಳಕಿಗೆ ಬಂದಿದೆ.
ಜಯಶ್ರೀ ಕುಟುಂಬಸ್ಥರ ಆಗಮನಕ್ಕಾಗಿ ಪೊಲೀಸರು ಕಾಯುತ್ತಿದ್ದಾರೆ. ಜಯಶ್ರೀ ಸದಾ ಮೊಬೈಲ್‌ನಲ್ಲಿ, ರೀಲ್ಸ್‌ನಲ್ಲಿ ಬ್ಯುಸಿ ಇರುತ್ತಿದ್ದ ಬಗ್ಗೆ ಪತಿ ಕಿರಣ್ ದೂರುತ್ತಿದ್ದ. ಇಂದು ಬೆಳಗ್ಗೆ ಇದೇ ಕಾರಣಕ್ಕೆ ಜಗಳ ನಡೆದು ಪತಿ ಚಾಕುವಿನಿಂದ ಹಲ್ಲೆ ನಡೆಸಿರುವ ಸಾಧ್ಯತೆಯಿದೆ. ಬೀದರ್ ದೊಣಗಪುರದಿಂದ ಕುಟುಂಬಸ್ಥರು ಉಡುಪಿಗೆ ಬರುತ್ತಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಕಲಿ ಎನ್ಸಿಸಿ ಶಿಬಿರದಲ್ಲಿ ಲೈಂಗಿಕ ದೌರ್ಜನ್ಯ ಕೇಸ್ – ಪ್ರಕರಣದ ಪ್ರಮುಖ ಆರೋಪಿ ಆತ್ಮಹತ್ಯೆಗೆ ಶರಣು
ಮೈಸೂರು: ಟಿ.ನರಸೀಪುರದ ( T.Narasipura) ಕೆಂಪಯ್ಯನಹುಂಡಿ ಗೇಟ್ ಬಳಿಯ ಹೋಟೆಲ್ ಸಮೀಪ 10 ಸ್ಫೋಟಕ ವಸ್ತುಗಳು ಪತ್ತೆಯಾಗಿವೆ.
ಸ್ಫೋಟಕ ವಸ್ತುಗಳನ್ನು ಅಪರಿಚಿತರು ನೀಲಿ ಬಣ್ಣದ ಪ್ಲಾಸ್ಟಿಕ್ ಕವರ್‌ನಲ್ಲಿ ಇಟ್ಟು ಹೋಗಿದ್ದರು. ಸ್ಥಳೀಯರು ಹಾಗೂ ಹೋಟೆಲ್ ಸಿಬ್ಬಂದಿ ಅನುಮಾನಗೊಂಡು ನೋಡಿದಾಗ ಸ್ಫೋಟಕ ವಸ್ತುಗಳು ಎಂದು ತಿಳಿದು ಬಂದಿದೆ. ಬಳಿಕ ಹೋಟೆಲ್ ಸಿಬ್ಬಂದಿ ಪ್ಲಾಸ್ಟಿಕ್ ಕವರ್‍ನ್ನು ಪಕ್ಕದಲ್ಲಿರುವ ಮರಕ್ಕೆ ನೇತು ಹಾಕಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: Kolkata Horror | 36 ಗಂಟೆಗಳ ಅಮಾನುಷ ಶಿಫ್ಟ್ ಸರಿಯಲ್ಲ ಎಂದ ಸುಪ್ರೀಂ – ಸುಳ್ಳುಪತ್ತೆ ಪರೀಕ್ಷೆಗೆ ಅಸ್ತು!
ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ಭೇಟಿ ನೀಡಿ ಸ್ಫೋಟಕಗಳಿದ್ದ ಕವರ್‌ನ್ನು ಪರಿಶೀಲಿಸಿದ್ದಾರೆ. ಈ ವೇಳೆ ಟ್ಯೂಬ್ ಆಕಾರದಲ್ಲಿರುವ 9 ಸ್ಪೋಟಕಗಳು ಮತ್ತು ಒಂದು ನಾಡ ಬಾಂಬ್ ಆಕಾರದ ವಸ್ತು ಪತ್ತೆಯಾಗಿದೆ. ಸ್ಫೋಟಕ ವಸ್ತುಗಳು ಕಲ್ಲು ಗಣಿಗಾರಿಕೆಗೆ ಹಾಗೂ ನಾಡ ಬಾಂಬ್ ಕಾಡು ಪ್ರಾಣಿಗಳ ಬೇಟೆಗೆ ಬಳಕೆಗೆ ಬಳಸಲಾಗುವ ವಸ್ತುಗಳಂತೆ ಕಂಡುಬಂದಿವೆ.
ಬೈಕ್ ಸವಾರ ಪೃಥ್ವಿರಾಜ್ ಕೆಲ ದಿನಗಳ ಹಿಂದೆ ಟ್ರೆಕ್ಕಿಂಗ್ ಹೋಗಿದ್ದ. ಈ ಸಂದರ್ಭ ಮಗ ಮಿಸ್ ಆಗಿದ್ದಾನೆ ಎಂದು ಪೃಥ್ವಿರಾಜ್ ತಾಯಿ ಚಳ್ಳಕೆರೆ ಪೊಲೀಸ್ ಠಾಣೆಗೆ ಹೋಗಿದ್ದರು. ಈ ವೇಳೆ ಪೊಲೀಸರು ಪೃಥ್ವಿ ತಾಯಿಯನ್ನು ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂದು ಆರೋಪಿಸಲಾಗಿದೆ. ಆ ಕೋಪಕ್ಕೆ ವಿಧಾನಸೌಧ ಮುಂಭಾಗ ಬೈಕ್ ನಿಲ್ಲಿಸಿ ಪೃಥ್ವಿರಾಜ್ ಬೈಕ್‌ಗೆ ಬೆಂಕಿ ಹಚ್ಚಿದ್ದಾನೆ. ಸದ್ಯ ಯುವಕನನ್ನು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಬಾಲ ರಾಮನ ಮೂರ್ತಿ ಕೆತ್ತಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್‌ಗೆ ಅಮೆರಿಕ ವೀಸಾ ನಿರಾಕರಣೆ
ಮಂಗಳೂರು: ಒಂದು ವಾರದ ಹಿಂದಷ್ಟೇ ಜೈಲಿನಿಂದ ಹೊರಬಂದಿದ್ದ ನಟೋರಿಯಸ್ ರೌಡಿಶೀಟರ್ ಓರ್ವನನ್ನು ಅಟ್ಟಾಡಿಸಿ ಹತ್ಯೆ ನಡೆಸಿದ ಘಟನೆ ಮಂಗಳೂರು (Mangaluru) ಹೊರವಲಯದ ಕಲ್ಲಾಪು ಎಂಬಲ್ಲಿ ನಡೆದಿದೆ.
ಉಳ್ಳಾಲದ ಕಡಪ್ಪಾರದ ಸಮೀರ್ ಎಂಬಾತ ಕೊಲೆಯಾದ ರೌಡಿಶೀಟರ್. ನಟೋರಿಯಸ್ ರೌಡಿ ಟಾರ್ಗೆಟ್ ಇಲಿಯಾಸ್‌ನ ಹತ್ಯೆ ಪ್ರಕರಣದ ಆರೋಪಿಯಾಗಿರುವ ಸಮೀರ್, ವಾರದ ಹಿಂದೆ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದ. ಭಾನುವಾರ ರಾತ್ರಿ ಹೋಟೆಲ್‍ಗೆ ತಾಯಿಯೊಂದಿಗೆ ಊಟಕ್ಕೆ ಬಂದಿದ್ದ. ಈ ವೇಳೆ ಹೋಟೆಲ್‍ನಿಂದ ಹೊರ ಬರುತ್ತಿದ್ದಂತೆ ದುಷ್ಕರ್ಮಿಗಳ ತಂಡ ಅಟ್ಟಾಡಿಸಿ ಬೆನ್ನಟ್ಟಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆಗೈದು ಪರಾರಿಯಾಗಿತ್ತು. ಇದನ್ನೂ ಓದಿ: ಪ್ರೀತಿಸಿ ಎಲ್ಲಾ ಮುಗಿದ್ಮೇಲೆ ಕೈಕೊಟ್ಟ ಪ್ರಿಯಕರ – ಮದುವೆ ದಿನವೇ ಆಸಿಡ್ ದಾಳಿಗೆ ಮುಂದಾದ ವಿಧವೆ ಪ್ರೇಯಸಿ!
ಇತ್ತೀಚೆಗೆ ಮಂಗಳೂರು ಜೈಲಿನೊಳಗೆ ಸಹ ಕೈದಿಗಳು ಸಮೀರ್ ಮೇಲೆ ದಾಳಿ ನಡೆಸಿದ್ದರು.
ರೇಣುಕಾ ಅಪಾರ್ಟ್‌ಮೆಂಟ್ ಬಳಿ ತೆರಳಿ, ನನಗೆ ಅಡುಗೆ ಮಾಡಲು ಬರುತ್ತದೆ. ದಕ್ಷಿಣ-ಉತ್ತರ ಭಾರತ ಸೇರಿದಂತೆ ಎಲ್ಲಾ ಶೈಲಿಯ ಅಡುಗೆ ಮಾಡುತ್ತೇನೆ. ಅಡುಗೆ ಮಾಡುವ ಕೆಲಸ ಇದ್ದರೆ ಹೇಳಿ ಎಂದು ಅಲ್ಲಿನ ಸೆಕ್ಯೂರಿಟಿ ಹತ್ತಿರ ಕೇಳುತ್ತಿದ್ದಳು.
ಸೆಕ್ಯೂರಿಟಿ ಗಾರ್ಡ್ ಅಪಾರ್ಟ್ಮೆಂಟ್‌ನಲ್ಲಿರುವ ಮಾಲೀಕರಿಗೆ ಈಕೆಯನ್ನು ಪರಿಚಯ ಮಾಡುತ್ತಿದ್ದರು. ಇದೇ ರೀತಿ ಕೆಲಸ ಕೇಳಿಕೊಂಡು ಮಾರತ್ತಳ್ಳಿ ಪೂರ್ವ ಪೌಂಟೇನ್ ಅಪಾರ್ಟ್ಮೆಂಟ್‌ನ ಎರಡು ಫ್ಲ್ಯಾಟ್‌ಗಳಲ್ಲಿ ಕೆಲಸಕ್ಕೆ ಸೇರಿದ್ದಳು. ಆ ಎರಡೂ ಮನೆಗಳಲ್ಲಿ ತನ್ನ ಕೈಚಳಕ ತೋರಿಸಿ ಸುಮಾರು 100 ಗ್ರಾಂ ಚಿನ್ನಾಭರಣ ಕದ್ದಿದ್ದಳು. ಚಿನ್ನದ ಆಸೆಗೆ ಕೆಲಸ ಮಾಡುತ್ತಿದ್ದ ಈಕೆ ಮನೆ ಒಡತಿಯ ತಾಳಿಯನ್ನೂ ಸಹ ದೋಚಿದ್ದಳು.
ಮನೆ ಮಾಲೀಕರು ಈಕೆಯ ಮೇಲೆ ಸಂಶಯ ವ್ಯಕ್ತಪಡಿಸಿ ಠಾಣೆಗೆ ದೂರು ನೀಡಿದ್ದರು. ಹೆಚ್‌ಎಎಲ್ ಪೊಲೀಸರು ಕರೆಸಿ ವಿಚಾರಣೆ ಮಾಡಿದಾಗ ನನಗೆ ಏನೂ ಗೊತ್ತಿಲ್ಲ ಎಂದು ನಾಟಕವಾಡಿದ್ದಳು. ಸಭ್ಯಸ್ಥಳಂತೆ ವರ್ತನೆ ತೋರಿದ್ದರಿಂದ ಆಕೆಯನ್ನು ವಿಚಾರಣೆ ಮಾಡಿ ಬಿಟ್ಟು ಕಳುಹಿಸಿದ್ದರು.
ನಾನು ಕಳ್ಳತನ ಮಾಡಿದರೂ ಸಿಕ್ಕಿಬೀಳುವುದಿಲ್ಲ ಎಂದು ಮನಗಂಡಿದ್ದ ಆಕೆ ಒಂದು ದಿನ ಕದ್ದ ನೆಕ್ಲೆಸ್‌ನ್ನು ಧರಿಸಿ ಪೋಟೋ ತೆಗೆದುಕೊಂಡು ತನ್ನ ವಾಟ್ಸಾಪ್ ಡಿಪಿಗೆ ಹಾಕಿಕೊಂಡಿದ್ದಳು.
ವಾಟ್ಸಪ್ ಡಿಪಿಯನ್ನು ಗಮನಿಸಿದ ಫ್ಲ್ಯಾಟ್ ಮಾಲೀಕರು ಈ ವಿಚಾರವನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ. ಪೊಲೀಸರು ಮತ್ತೆ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಹೊರ ಬಂದಿದೆ. ಪೊಲೀಸರು ಬಂಧಿತಳಿಂದ 80 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.