Tag: police

  • ಬದ್ಲಾಪುರ ಶಾಲೆಯಲ್ಲಿ ದೌರ್ಜನ್ಯ – ಕಾಮುಕನನ್ನು ಗುಂಡಿಕ್ಕಿ ಹತ್ಯೆಗೈದ ಪೊಲೀಸರು

    ಬದ್ಲಾಪುರ ಶಾಲೆಯಲ್ಲಿ ದೌರ್ಜನ್ಯ – ಕಾಮುಕನನ್ನು ಗುಂಡಿಕ್ಕಿ ಹತ್ಯೆಗೈದ ಪೊಲೀಸರು

    ಮುಂಬೈ: ಬದ್ಲಾಪುರದಲ್ಲಿ ಇಬ್ಬರು ನರ್ಸರಿ ಮಕ್ಕಳ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಪೊಲೀಸರು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.

    ಆರೋಪಿ ಅಕ್ಷಯ್ ಶಿಂಧೆ, ಪೊಲೀಸ್ ಅಧಿಕಾರಿಯೊಬ್ಬರ ಗನ್ ಕಸಿದುಕೊಂಡು ಅವರ ಮೇಲೆ ಗುಂಡು ಹಾರಿಸಿದ್ದಾನೆ. ಈ ವೇಳೆ ಪೊಲೀಸರು ಪ್ರತಿ ದಾಳಿ ನಡೆಸಿದ್ದು ಆರೋಪಿ ಸಾವನ್ನಪ್ಪಿದ್ದಾನೆ.

    ಅಕ್ಷಯ್ ಶಿಂಧೆ ಥಾಣೆಯ ಶಾಲೆಯಲ್ಲಿ ಅಟೆಂಡರ್ ಆಗಿದ್ದು, ಶಾಲೆಯ ಶೌಚಾಲಯದಲ್ಲಿ ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ್ದಾನೆ. ಆಗಸ್ಟ್ 17 ರಂದು ಆತನನ್ನು ಬಂಧಿಸಲಾಗಿತ್ತು.

    ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿದ್ದ ಬಾಂಬೆ ಹೈಕೋರ್ಟ್ (High Court), ಪೊಲೀಸ್ ತನಿಖೆಯನ್ನು ಕಟುವಾಗಿ ಟೀಕಿಸಿತ್ತು. ಅಲ್ಲದೇ ಕಾನೂನಿನ ಆದೇಶವನ್ನು ಬದ್ಲಾಪುರ ಪೊಲೀಸರು ಅನುಸರಿಸುತ್ತಿಲ್ಲ. ಸಂತ್ರಸ್ತೆ ಮತ್ತು ಆಕೆಯ ಪೋಷಕರ ಹೇಳಿಕೆ ದಾಖಲಿಸಲು ಪೊಲೀಸ್ ಠಾಣೆಗೆ ಬರುವಂತೆ ಹೇಳುವುದು ಸರಿಯಾದ ಕ್ರಮವಲ್ಲ. ಇದು ಕಾನೂನಿಗೆ ವಿರುದ್ಧವಾಗಿದೆ ಎಂದು ಪೊಲೀಸರ ನಡೆಯ ವಿರುದ್ಧ ಚಾಟಿ ಬೀಸಿತ್ತು.

    ನಂತರ ಸರ್ಕಾರವು ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಗಾಗಿ ಹಿರಿಯ ಐಪಿಎಸ್ ಅಧಿಕಾರಿ ಅರ್ತಿ ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿತ್ತು.

    ಈ ಸಂಬಂಧ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಪ್ರತಿಕ್ರಿಯಿಸಿದ್ದು, ಅಕ್ಷಯ್ ಶಿಂಧೆಯ ಮಾಜಿ ಪತ್ನಿ ಲೈಂಗಿಕ ದೌರ್ಜನ್ಯದ ದೂರು ದಾಖಲಿದ್ದರು. ಈ ಸಂಬಂಧ ಪೊಲೀಸರು ಆತನನ್ನು ತನಿಖೆಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಆತ ಪೊಲೀಸರ ಬಂದೂಕನ್ನು ಕಸಿದುಕೊಂಡು ಸಿಬ್ಬಂದಿ ಮೇಲೆ ಮತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಆತ್ಮರಕ್ಷಣೆಗಾಗಿ ಆತನ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಈ ವೇಳೆ ಆತ ಸಾವಿಗೀಡಾಗಿದ್ದಾನೆ. ಪೊಲೀಸರ ಮೇಲೆ ಹಲ್ಲೆ ನಡೆಸಿದರೆ, ಪೊಲೀಸರು ಆತ್ಮರಕ್ಷಣೆ ಮಾಡಿಕೊಳ್ಳುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ, ಪ್ರತಿಪಕ್ಷಗಳು ಆತನನ್ನು ನೇಣು ಹಾಕುವಂತೆ ಕೇಳಿಕೊಳ್ಳುತ್ತಿದ್ದವು ಎಂಬುದನ್ನು ಅವರು ಹೇಳಿದ್ದಾರೆ.

  • ಮಹಿಳೆಯ ಭೀಕರ ಕೊಲೆ ಪ್ರಕರಣ – ಕೊನೆಗೂ ಅವಳ ಜೊತೆ ಮಾತಾಡೋಕೆ ಆಗ್ಲಿಲ್ಲ ಕಣ್ಣೀರಿಟ್ಟ ಸಹೋದರಿ

    ಮಹಿಳೆಯ ಭೀಕರ ಕೊಲೆ ಪ್ರಕರಣ – ಕೊನೆಗೂ ಅವಳ ಜೊತೆ ಮಾತಾಡೋಕೆ ಆಗ್ಲಿಲ್ಲ ಕಣ್ಣೀರಿಟ್ಟ ಸಹೋದರಿ

    ಬೆಂಗಳೂರು: ಒಂದು ವರ್ಷ ಆಯ್ತು ಅವಳನ್ನ ನೋಡಿ, ಕೊನೆಗೂ ಅವಳ ಬಳಿ ಮಾತಾಡೋಕು ಆಗಿಲ್ಲ. ನಿನ್ನೆ ಈ ರೀತಿ ಪೀಸ್‌ ಪೀಸ್‌ ಆದ ರೀತಿಯಲ್ಲಿ ನೋಡಿದೆ ಎಂದು ಕೊಲೆಯಾದ ಮಹಾಲಕ್ಷ್ಮಿಯ ಅಕ್ಕ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾರೆ.

    ತುಂಬಾ ಕ್ರೂರವಾಗಿ ಆಕೆಯನ್ನು ಸಾಯಿಸಿದ್ದಾರೆ. ಕೊಲೆಗೈದ ಪಾಪಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಅವರು ಕಣ್ಣೀರಿಟ್ಟಿದ್ದಾರೆ.

    ಮಹಿಳೆಯೊಬ್ಬರನ್ನು ಭೀಕರವಾಗಿ ಕೊಲೆ ಮಾಡಿ 20ಕ್ಕೂ ಹೆಚ್ಚು ತುಂಡುಗಳನ್ನಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟು (Fridge) ಆರೋಪಿ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನ (Bengaluru) ವೈಯಾಲಿಕಾವಲ್‌ನ (Vyalikaval) ವಿನಾಯಕನಗರದಲ್ಲಿ (Vinayaka Nagar) ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಶ್ರಫ್‌ ಸೇರಿದಂತೆ ನಾಲ್ವರ ಮೇಲೆ ಕೊಲೆಯಾದ ಮಹಿಳೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.

    ಅಶ್ರಫ್‌, ಮುಕ್ತ, ಶಶಿಧರ್, ಸುನೀಲ್ ನಾಲ್ವರ ಹೆಸರನ್ನು ಕೊಲೆಯಾದ ಮಹಿಳೆ ಕುಟುಂಬಸ್ಥರು ಹೇಳಿದ್ದಾರೆ. ಮುಕ್ತ, ಶಶಿಧರ್‌, ಸುನೀಲ್ ಮೂವರು ಮೃತ ಮಹಾಲಕ್ಷ್ಮಿ ಸಹೋದ್ಯೋಗಿಗಳು.‌ ಕೆಲಸ ಮಾಡುವ ಕಡೆಯಲ್ಲಿ ಮಹಾಲಕ್ಷ್ಮಿ ಜಗಳ ಮಾಡಿಕೊಂಡಿದ್ದಳು.

    ಮಹಾಲಕ್ಷ್ಮಿ ಜೊತೆ ಅಶ್ರಫ್‌ ಸಲುಗೆಯಿಂದ ಇದ್ದ. ಈತ ಉತ್ತರಾಖಂಡ ಮೂಲದವ. ಸಲೂನ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಈಗ ಮಹಾಲಕ್ಷ್ಮಿ ಕುಟುಂಬಸ್ಥರು ನಾಲ್ವರ ಮೇಲೆ ಅನುಮಾನ ಇದೆ ಎಂದಿದ್ದಾರೆ.

  • ಲೈಂಗಿಕ ಕಿರುಕುಳ – ವಿರೋಧಿಸಿದ ಬಾಲಕಿಯನ್ನೇ ಹತ್ಯೆಗೈದ ಕಾಮುಕ ಶಿಕ್ಷಕ ಅರೆಸ್ಟ್

    ಗಾಂಧಿನಗರ: ಗುಜರಾತ್‍ನ (Gujarat) ದಾಹೋದ್ ಜಿಲ್ಲೆಯ ಸಿಂಗ್ವಾಡ್ ಗ್ರಾಮದ ಸರ್ಕಾರಿ ಶಾಲೆಯೊಂದರ ಮುಖ್ಯ ಶಿಕ್ಷಕನೊಬ್ಬ ಲೈಂಗಿಕ ಕಿರುಕುಳ ನೀಡುವ ಪ್ರಯತ್ನವನ್ನು ವಿರೋಧಿಸಿದ 6 ವರ್ಷದ ವಿದ್ಯಾರ್ಥಿನಿಯನ್ನು ಹತ್ಯೆಗೈದಿದ್ದಾನೆ ಎಂದು ಪೊಲೀಸರು (Police) ತಿಳಿಸಿದ್ದಾರೆ.

    ಗುರುವಾರ ಸಿಂಗ್ವಾಡ್ ಗ್ರಾಮದ ಶಾಲಾ ಕಾಂಪೌಂಡ್‍ನಲ್ಲಿ ಮಗುವಿನ ಶವ ಪತ್ತೆಯಾದ ನಂತರ ಪೊಲೀಸರು ತನಿಖೆ ಆರಂಭಿಸಿದ್ದರು. ಬಳಿಕ ಪ್ರಕರಣ ಸಂಬಂಧ ಶಾಲೆಯ ಮುಖ್ಯ ಶಿಕ್ಷಕ ಗೋವಿಂದ್ ನಾಥ್‍ನನ್ನು ಬಂಧಿಸಿದ್ದರು. ತನಿಖೆ ವೇಳೆ ಆರೋಪಿ ಬಾಲಕಿಯನ್ನು ಹತ್ಯೆಗೈದಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹಣಕಾಸು ವಿಚಾರಕ್ಕೆ ವ್ಯಕ್ತಿಗೆ ಜೀವ ಬೆದರಿಕೆ – ಯುಪಿ ಸಂಸದನ ಪುತ್ರನ ವಿರುದ್ಧ ಎಫ್‍ಐಆರ್

    ಗುರುವಾರ ಬೆಳಗ್ಗೆ 10:20ರ ಸುಮಾರಿಗೆ ಕಾರಿನಲ್ಲಿ ಹೋಗುತ್ತಿದ್ದ ಶಿಕ್ಷಕ, ಬಾಲಕಿಯನ್ನು ಶಾಲೆಗೆ ಬಿಡುವುದಾಗಿ ಕರೆದುಕೊಂಡು ಹೋಗಿದ್ದ. ಬಳಿಕ ದಾರಿಯಲ್ಲಿ ಬಾಲಕಿಯ ಮೇಲೆ ಲೈಂಗಿಕ ಕಿರುಕುಳಕ್ಕೆ ಯತ್ನಿಸಿದ್ದಾನೆ. ಅವಳು ವಿರೋಧಿಸಿ, ಕಿರುಚುವುದನ್ನು ತಡೆಯಲು ಅವಳ ಬಾಯಿ ಮತ್ತು ಮೂಗನ್ನು ಮುಚ್ಚಿದ್ದಾನೆ ಈ ವೇಳೆ ಅವಳು ಪ್ರಜ್ಞೆ ಕಳೆದುಕೊಂಡಿದ್ದಳು. ಬಳಿಕ ಶಾಲೆಗೆ ಹೋಗಿ ಕಾರು ನಿಲ್ಲಿಸಿ, ಶಾಲೆಯ ಅವಧಿ ಮುಗಿದ ಬಳಿಕ ಶಾಲೆಯ ಆವರಣದಲ್ಲಿ ಬಾಲಕಿಯ ಶವವನ್ನು ಆತ ಎಸೆದಿದ್ದ. ಅಲ್ಲದೇ ಬ್ಯಾಗ್ ಮತ್ತು ಚಪ್ಪಲಿಯನ್ನು ತರಗತಿಯಲ್ಲಿ ಇಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ತನಿಖೆಯ ಆರಂಭದಲ್ಲಿ ಬಾಲಕಿಯನ್ನು ತನ್ನ ಕಾರಿನಲ್ಲಿ ಕರೆದೊಯ್ದ ನಂತರ ಶಾಲೆಗೆ ಬಿಟ್ಟಿದ್ದೇನೆ ಎಂದು ಆರೋಪಿ ಹೇಳಿದ್ದ. ಬಳಿಕ ವಿದ್ಯಾರ್ಥಿಗಳು ಹಾಗೂ ಉಳಿದ ಶಿಕ್ಷಕರನ್ನು ವಿಚಾರಿಸಿದಾಗ ಬಾಲಕಿ ಆ ದಿನ ಶಾಲೆಗೆ ಬಂದಿರಲಿಲ್ಲ ಎಂದು ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಮಹಿಳೆ ಭೀಕರ ಹತ್ಯೆ; ಅಶ್ರಫ್‌ ಸೇರಿ ನಾಲ್ವರ ಮೇಲೆ ಕುಟುಂಬಸ್ಥರ ಅನುಮಾನ

  • ಕೆಲಸ ಬಿಟ್ಟು ಬೈಕ್ ಸಾಲ ಹೇಗೆ ಕಟ್ತೀಯಾ?: ಬುದ್ಧಿವಾದ ಹೇಳಿದ್ದಕ್ಕೆ ನೇಣಿಗೆ ಶರಣಾದ ಯುವಕ

    ಕೆಲಸ ಬಿಟ್ಟು ಬೈಕ್ ಸಾಲ ಹೇಗೆ ಕಟ್ತೀಯಾ?: ಬುದ್ಧಿವಾದ ಹೇಳಿದ್ದಕ್ಕೆ ನೇಣಿಗೆ ಶರಣಾದ ಯುವಕ

    ಚಿಕ್ಕಬಳ್ಳಾಪುರ: ಇದ್ದ ಕೆಲಸ ಬಿಟ್ಟು, ಈಗ ಬೈಕ್ (Bike) ಇಎಂಐ ಕಂತು (Loan) ಹೇಗೆ ಕಟ್ತೀಯಾ? ಎಂದು ತಂದೆ ತಾಯಿ ಬುದ್ಧಿವಾದ ಹೇಳಿದ್ದಕ್ಕೆ ಮಗ ನೇಣಿಗೆ ಶರಣಾದ ಘಟನೆ ಮಾಡೇಶ್ವರ ಗ್ರಾಮದ ಹೊರವಲಯದಲ್ಲಿ ನಡೆದಿದೆ.

    ಗ್ರಾಮದ ನಿಖಿಲ್ (25) ನೇಣಿಗೆ ಶರಣಾಗಿರುವ ಯುವಕ. ಆತ ಖಾಸಗಿ ಕಾರ್ಖಾನೆಗೆ ಕೆಲಸಕ್ಕೆ ತೆರಳುತ್ತಿದ್ದ. ಇತ್ತೀಚೆಗೆ ಕೆಲಸ ಬಿಟ್ಟು ಹಸು ಮೇಯುಸುತ್ತಿದ್ದ. ಅಲ್ಲದೇ ಇತ್ತೀಚೆಗಷ್ಟೇ ಸಾಲ ಮಾಡಿ ಬೈಕ್ ಖರೀದಿಸಿದ್ದ. ಇದಕ್ಕೆ ಪೋಷಕರು ಈಗ ಬೈಕ್ ಅಗತ್ಯವೆನಿತ್ತು? ಕೆಲಸ ಬೇರೆ ಬಿಟ್ಟಿದ್ದೀಯಾ ತಿಂಗಳು ತಿಂಗಳು ಇಎಂಐ ಹೇಗೆ ಕಟ್ತೀಯಾ ಎಂದು ಬೈದು ಬುದ್ಧಿವಾದ ಹೇಳಿದ್ದರು.

    ಪೋಷಕರ ಮಾತಿಗೆ ಬೇಸತ್ತು, ಹಸು ಮೇಯಿಸಲು ತೆರಳಿದ್ದ ವೇಳೆ ಮರಕ್ಕೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ದೊಡ್ಡಬೆಳವಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ಸಂಬಂಧ ದೊಡ್ಡಬೆಳವಂಗಲ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Chhattisgarh | ತಲೆಗೆ 11 ಲಕ್ಷ ಬಹುಮಾನ ಹೊಂದಿದ್ದ ಮೂವರು ಸೇರಿ 8 ನಕ್ಸಲರು ಶರಣು

    Chhattisgarh | ತಲೆಗೆ 11 ಲಕ್ಷ ಬಹುಮಾನ ಹೊಂದಿದ್ದ ಮೂವರು ಸೇರಿ 8 ನಕ್ಸಲರು ಶರಣು

    ರಾಯ್‌ಪುರ್: ಛತ್ತೀಸ್‌ಗಢದ (Chhattisgarh) ಬಿಜಾಪುರ ಜಿಲ್ಲೆಯಲ್ಲಿ ‌8 ನಕ್ಸಲರು (Naxalites) ಪೊಲೀಸರಿಗೆ (Police) ಶರಣಾಗಿದ್ದಾರೆ. ಅವರಲ್ಲಿ ಮೂವರ ತಲೆಗೆ 11 ಲಕ್ಷ ರೂ. ನಗದು ಬಹುಮಾನವನ್ನು ಘೋಷಿಸಲಾಗಿತ್ತು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಓರ್ವ ಮಹಿಳೆ ಸೇರಿದಂತೆ 8 ನಕ್ಸಲರು ಗಂಗಲೂರು ಮತ್ತು ಉಸೂರ್ ಪಮೇಡ್ ಪ್ರದೇಶಗಳಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ (ಮಾವೋವಾದಿ) ವಿವಿಧ ವಿಭಾಗಗಳಲ್ಲಿ ಸಕ್ರಿಯರಾಗಿದ್ದರು ಎಂದು ಬಿಜಾಪುರ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ಯಾದವ್ ಹೇಳಿದ್ದಾರೆ. ಇದನ್ನೂ ಓದಿ: ಅಮರ್ ಪ್ರೀತ್ ಸಿಂಗ್ ವಾಯುಸೇನಾ ಮುಖ್ಯಸ್ಥರಾಗಿ ನೇಮಕ

    ಶರಣಾದ ನಕ್ಸಲ್‌ ಚಂದರ್ ಕುರ್ಸಮ್ (38) ಕಮಾಂಡರ್ ಆಗಿದ್ದು, ಅವನ ತಲೆಗೆ 8 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಆತ 2003 ರಿಂದ ಕಾನೂನುಬಾಹಿರ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದ. 2008 ರ ಮೋದಕ್‌ಪಾಲ್-ತುಂಕಿಗುಟ್ಟಾ (ಬಿಜಾಪುರ) ದಾಳಿಯಲ್ಲಿ 10 ಪೊಲೀಸ್ ಸಿಬ್ಬಂದಿ ಮತ್ತು ನೂಕನ್‌ಪಾಲ್-ಧಾರಾವರಂ ಹೊಂಚುದಾಳಿಯಲ್ಲಿ ಇಬ್ಬರು ಜವಾನರು ಕೊಲ್ಲಲ್ಪಟ್ಟ ಪ್ರಕರಣದಲ್ಲಿ ಭಾಗಿಯಾಗಿದ್ದ.

    ಮಹಿಳಾ ಕೇಡರ್ ಮಾಂಗ್ಲಿ ಪೋತಮ್ (25), ಮತ್ತು ಆಯ್ತು ಕೊರ್ಸಾ (52) ಮಂಕೇಲಿ ‘ಜನ್ತಾನ ಸರ್ಕಾರ್’ ತಂಡದ ಮುಖ್ಯಸ್ಥರಾಗಿದ್ದರು. ಪೋತಮ್ ಮತ್ತು ಕೊರ್ಸಾ ತಲೆಗೆ ಕ್ರಮವಾಗಿ 2 ಲಕ್ಷ ರೂ. ಮತ್ತು 1 ಲಕ್ಷ ರೂ. ನಗದು ಬಹುಮಾನ ಘೋಷಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ಶರಣಾದ ನಕ್ಸಲೀಯರಿಗೆ ತಲಾ 25,000 ರೂ. ನೆರವು ನೀಡಲಾಗಿದ್ದು, ರಾಜ್ಯ ಸರ್ಕಾರದ ನೀತಿಯಂತೆ ಮತ್ತಷ್ಟು ಪುನರ್ವಸತಿ ಕಲ್ಪಿಸಲಾಗುತ್ತದೆ. ಜಿಲ್ಲೆಯಲ್ಲಿ ಈ ವರ್ಷ ಇದುವರೆಗೆ 178 ನಕ್ಸಲೀಯರು ಶರಣಾಗಿದ್ದು, 378 ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ರೈಲು ಹಳಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು- ಫಿಶ್‌ ಪ್ಲೇಟ್‌ ಕತ್ತರಿಸಿದ ದುಷ್ಕರ್ಮಿಗಳು

  • ಮಹಿಳಾ ಪಿಎಸ್‍ಐ ಮೇಲೆ ಹಲ್ಲೆಗೈದು ಪರಾರಿಯಾಗಲು ಯತ್ನ – ಕೊಲೆ ಆರೋಪಿಗೆ ಗುಂಡೇಟು

    ಮಹಿಳಾ ಪಿಎಸ್‍ಐ ಮೇಲೆ ಹಲ್ಲೆಗೈದು ಪರಾರಿಯಾಗಲು ಯತ್ನ – ಕೊಲೆ ಆರೋಪಿಗೆ ಗುಂಡೇಟು

    ಕಲಬುರಗಿ: ಮಹಿಳಾ ಪಿಎಸ್‍ಐ ಮೇಲೆ ಹಲ್ಲೆ ಎಸಗಿ ಪರಾರಿಯಾಗುತ್ತಿದ್ದ ಕೊಲೆ ಆರೋಪಿಯ ಕಾಲಿಗೆ ಪೊಲೀಸರು (Police) ಗುಂಡೇಟು ನೀಡಿದ ಘಟನೆ ಕಲಬುರಗಿಯಲ್ಲಿ (Kalaburagi) ನಡೆದಿದೆ.

    ಗ್ರಾಮ ಪಂಚಾಯತಿ ಮಾಜಿ ಸದಸ್ಯ ವಿಶ್ವನಾಥ್ ಜಮಾದರ್ ಹತ್ಯೆ ಪ್ರಕರಣದ ಆರೋಪಿ ಲಕ್ಷ್ಮಣ್ ಪೂಜಾರಿಯನ್ನು ಬಂಧಿಸಲು ಪೊಲೀಸರು ತೆರಳಿದ್ದರು. ಈ ವೇಳೆ ಆರೋಪಿ ಚಾಕುವಿನಿಂದ ನಿಂಬರ್ಗಾ ಠಾಣೆ ಪಿಎಸ್‍ಐ ಇಂದುಮತಿಯವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಅಫಜಲ್‍ಪುರ ಠಾಣೆ ಪಿಎಸ್‍ಐ ಸೋಮಲಿಂಗ ಒಡೆಯರ್ ಆರೋಪಿಯ ಬಲಗಾಲಿಗೆ ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ | ಕೊನೆಗೂ ನಾಪತ್ತೆಯಾಗಿದ್ದ ಟ್ರಕ್‌ ಪತ್ತೆ

    ಆರೋಪಿ ಲಕ್ಷ್ಮಣ್ ಪೂಜಾರಿಯನ್ನು ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇತ್ತ ಗಾಯಾಳು ಪಿಎಸ್‍ಐ ಇಂದುಮತಿಯವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಹಣಕಾಸು ವಿಚಾರಕ್ಕೆ ಸೆ.13 ರಂದು ಆಳಂದ ತಾಲೂಕಿನ ಖಾನಾಪುರ ಬಳಿ ಆರೋಪಿ, ವಿಶ್ವನಾಥ್ ಅವರನ್ನು ಗುಂಡಿಕ್ಕಿ ಹತ್ಯೆಗೈದಿದ್ದ. ಹತ್ಯೆಯಾದ ವಿಶ್ವನಾಥ್ ಜಮಾದರ್ ಮತ್ತು ಆರೋಪಿ ಲಕ್ಷ್ಮಣ್ ಪೂಜಾರಿ ಇಬ್ಬರು ರೌಡಿಶೀಟರ್‌ಗಳು. ಕಳೆದ ಹತ್ತು ವರ್ಷಗಳ ಹಿಂದೆ ತಮ್ಮ ಸಂಬಂಧಿಯನ್ನ ಕೊಲೆ ಮಾಡಬೇಕೆಂದು ವಿಶ್ವನಾಥ್ ಜಮಾದರ್‍ಗೆ, ಲಕ್ಷ್ಮಣ್ ಪೂಜಾರಿ ಐದು ಲಕ್ಷ ರೂ. ಸುಪಾರಿ ನೀಡಿದ್ದ. ಅದರಂತೆ ವಿಶ್ವನಾಥ್ ಜಮಾದರ್, ಲಕ್ಷ್ಮಣ್ ಪೂಜಾರಿ ಸಂಬಂಧಿಯನ್ನು ಮಹಾರಾಷ್ಟ್ರದಲ್ಲಿ ಹತ್ಯೆ ಮಾಡಿದ್ದ. ಬಳಿಕ ಹಣ ಕೊಡುವಂತೆ ಲಕ್ಷ್ಮಣ್‍ಗೆ ಕೇಳಿದ್ರೆ ಹಣ ಕೊಡದೆ ಸತಾಯಿಸುತ್ತಿದ್ದ. ಆಗ ಡಿಲ್‍ನ 5 ಲಕ್ಷ ಹಣಕ್ಕೆ ಬಡ್ಡಿ ಸೇರಿಸಿ 10 ಲಕ್ಷ ರೂ. ಕೊಡುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ.

    ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಸಾಕಷ್ಟು ಬಾರಿ ಜಗಳ ಕೂಡ ನಡೆದಿತ್ತು. ನಂತರ ಹಣ ಕೊಡದಿದ್ದಾಗ ಲಕ್ಷ್ಮಣ್ ಪೂಜಾರಿ ಮಾವನನ್ನು ಅಪಹರಿಸಿ ತಂದು ಮನೆಯಲ್ಲಿಟ್ಟುಕೊಂಡಿದ್ದ. ಹಣ ಕೊಟ್ಟರೆ ಮಾತ್ರ ನಿಮ್ಮ ಮಾವನನ್ನ ಬಿಡುವುದಾಗಿ ವಿಶ್ವನಾಥ್ ಜಮಾದರ್ ಎಚ್ಚರಿಕೆ ನೀಡಿದ್ದ. ಈ ವೇಳೆ ವಿಶ್ವನಾಥ್‍ನನ್ನ ಮುಗಿಸಿದ್ರೆ ಯಾವ ಹಣನು ಕೊಡುವುದು ಇರುವುದಿಲ್ಲ ಎಂದು ಕೊಲೆಗೈದಿದ್ದ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಪೇಜರ್‌ ಬ್ಲಾಸ್ಟ್‌ ಕೇಸ್‌ನಲ್ಲಿ ಟ್ಟಿಸ್ಟ್‌ – ಘಟನೆ ಹಿಂದೆ ಭಾರತೀಯ ಮೂಲದ ಉದ್ಯಮಿಯ ಕೈವಾಡ ಇರೋದು ನಿಜವೇ?

  • ಚೆನ್ನೈ ರಸ್ತೆಯಲ್ಲಿ ಪೀಸ್ ಪೀಸ್ ಮಾಡಿದ ಮಹಿಳೆಯ ಶವ ತುಂಬಿದ ಸೂಟ್‍ಕೇಸ್ ಪತ್ತೆ – ಕೊಲೆಯಾಗಿದ್ದು ಸೆಕ್ಸ್ ವರ್ಕರ್!

    ಚೆನ್ನೈ ರಸ್ತೆಯಲ್ಲಿ ಪೀಸ್ ಪೀಸ್ ಮಾಡಿದ ಮಹಿಳೆಯ ಶವ ತುಂಬಿದ ಸೂಟ್‍ಕೇಸ್ ಪತ್ತೆ – ಕೊಲೆಯಾಗಿದ್ದು ಸೆಕ್ಸ್ ವರ್ಕರ್!

    -ಸೆಕ್ಸ್‌ಗೆ ಕರೆಸಿ ಕೊಂಡವನೇ ಹಣ ಕೇಳಿದ್ದಕ್ಕೆ ಕೊಲೆ ಮಾಡಿ ಕೊಚ್ಚಿ ಕೊಂದ!

    ಚೆನ್ನೈ: ರಸ್ತೆ ಬದಿಯಲ್ಲಿ ಪತ್ತೆಯಾದ ಸೂಟ್‍ಕೇಸ್‍ನಲ್ಲಿ ಮಹಿಳೆಯ ತುಂಡರಿಸಿದ ದೇಹದ ಭಾಗಗಳು ಪತ್ತೆಯಾಗಿರುವ ಘಟನೆ ಚೆನ್ನೈ (Chennai) ತೊರೈಪಾಕ್ಕಂನಲ್ಲಿ ಬೆಳಕಿಗೆ ಬಂದಿದೆ.

    ಚೆನ್ನೈನ ಐಟಿ ಕಾರಿಡಾರ್ ಬಳಿ ಬೆಳಗ್ಗೆ ವಾಕಿಂಗ್ ಹೋಗುವವರಿಗೆ ಮೃತ ದೇಹ ಕೊಳೆತ ವಾಸನೆ ಬಂದಿದೆ. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ ವೇಳೆ ರಸ್ತೆ ಬದಿಯಲ್ಲಿ ಸೂಟ್‍ಕೇಸ್ ಒಂದು ಪತ್ತೆಯಾಗಿತ್ತು. ಇದನ್ನು ಗಮನಿಸಿದ ಸ್ಥಳೀಯರು ಸೂಟ್‍ಕೇಸ್ ಓಪನ್ ಮಾಡಿದ್ದಾರೆ ಈ ವೇಳೆ ಅದರಲ್ಲಿ ಮಹಿಳೆಯ ತುಂಡರಿಸಿದ್ದ ದೇಹ ಪತ್ತೆಯಾಗಿದೆ ಗಾಬರಿಗೊಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು.

    ಸ್ಥಳಕ್ಕೆ ಧಾವಿಸಿದ ಪೊಲೀಸರು (Police), ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಮಹಿಳೆಯ ಮೊಬೈಲ್‍ನ ಕರೆಯ ದಾಖಲೆ ಹಾಗೂ ಸೂಟ್‍ಕೇಸ್ ಪತ್ತೆಯಾದ ಪ್ರದೇಶದ ಸುತ್ತ ಮುತ್ತಲಿನ ಸಿಸಿ ಟಿವಿ ಪರಿಶೀಲನೆ ನಡೆಸಿದ ವೇಳೆ ಅದೇ ಪ್ರದೇಶದ ನಿವಾಸಿಯಾಗಿರುವ ಮಣಿಕಂದನ್‍ನನ್ನು (22) ಪೊಲೀಸರು ಬಂಧಿಸಿದ್ದಾರೆ.

    ಮಹಿಳೆ ಚೆನ್ನೈನ ಮಾಧವರಂ ಬಳಿಯ ಪೊನ್ನಿಯಮ್ಮನ್ ಮೇಡು ನಿವಾಸಿಯಾಗಿದ್ದು, ಆಕೆ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಆಕೆಯ ಸಹೋದರ ಮೊಬೈಲ್ ಅಪ್ಲಿಕೇಶನ್ ಬಳಸಿ ನಗರದ ತೊರೈಪಕ್ಕಂನಲ್ಲಿ ಆಕೆಯ ಫೋನ್ ಇರುವ ಸ್ಥಳವನ್ನು ಪತ್ತೆಹಚ್ಚಿದ್ದರು. ಅಲ್ಲದೇ ತೋರೈಪಕ್ಕಂಗೆ ಧಾವಿಸಿ ಬುಧವಾರ (ಸೆಪ್ಟೆಂಬರ್ 18, 2024) ರಾತ್ರಿ ಪೊಲೀಸ್ ಗಸ್ತು ತಂಡದ ಸಹಾಯವನ್ನು ಕೋರಿದ್ದರು ಎಂದು ಪೊಲಿಸರು ತಿಳಿಸಿದ್ದಾರೆ.

    ಬೇರೆ ವ್ಯಕ್ತಿಯ ಮೂಲಕ ಮಹಿಳೆಯ ಸ್ನೇಹ ಬೆಳೆಸಿದ್ದ ಮಣಿಕಂದನ್, ಆಕೆಯನ್ನು ಸೆಕ್ಸ್‌ಗಾಗಿ ಮನೆಗೆ ಕರೆಸಿಕೊಂಡಿದ್ದ. ನಂತರ ಹಣದ ವಿಚಾರಕ್ಕೆ ಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಆಕೆಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

  • ಗಣೇಶ ವಿಸರ್ಜನೆ ವೇಳೆ ಬ್ಲೇಡ್‍ನಿಂದ ಹಲ್ಲೆ – ಯುವಕನ ಕಿವಿ ಕಟ್

    ಗಣೇಶ ವಿಸರ್ಜನೆ ವೇಳೆ ಬ್ಲೇಡ್‍ನಿಂದ ಹಲ್ಲೆ – ಯುವಕನ ಕಿವಿ ಕಟ್

    ಚಿಕ್ಕಮಗಳೂರು: ಗಣಪತಿ ವಿಸರ್ಜನೆ ವೇಳೆ ಕುಣಿಯುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಯುವಕನೊಬ್ಬನ ಮೇಲೆ ಬ್ಲೇಡ್‍ನಿಂದ ಹಲ್ಲೆ ನಡೆಸಿದ ಘಟನೆ ಗವನಗಳ್ಳಿಯಲ್ಲಿ ನಡೆದಿದೆ.

    ಹಲ್ಲೆಗೊಳಗಾದ ಯುವಕನನ್ನು ಗೌತಮ್ (23) ಎಂದು ಗುರುತಿಸಲಾಗಿದೆ. ತಿಮ್ಮರಾಜ್ ಅರಸ್ ಎಂಬಾತ ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾದ ಯುವಕನ ಕಿವಿ ಕತ್ತರಿಸಿ ಹೋಗಿದೆ. ಅಲ್ಲದೇ ಮುಖದಿಂದ ಕತ್ತಿನ ಭಾಗದವರೆಗೆ ತೀವ್ರ ಗಾಯವಾಗಿದೆ. ಇದನ್ನೂ ಓದಿ: ಕೊಲೆ‌ ಆರೋಪಿಯನ್ನು ಕಸಾಪ ತಾಲೂಕು ಅಧ್ಯಕ್ಷನನ್ನಾಗಿ ಮಾಡಲು ಶಾಸಕ ಶಿಫಾರಸು

    ಗಣಪತಿ ವಿಸರ್ಜನೆ ವೇಳೆ ಕುಣಿಯುವ ವೇಳೆ ಗುಂಪಿನ ಮಧ್ಯೆ ತಳ್ಳಿದ್ದಕ್ಕೆ ಗಲಾಟೆ ನಡೆದಿದೆ. ಈ ವೇಳೆ ಯುವಕನ ಮುಖದ ಮೇಲೆ ಬ್ಲೇಡ್‍ನಿಂದ ಮನಸ್ಸೋ ಇಚ್ಛೆ ಹಲ್ಲೆ ನಡೆಸಲಾಗಿದೆ. ಗಾಯಾಳು ಗೌತಮ್‍ಗೆ ಮಂಗಳೂರಿನ (Mangaluru) ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ಸಂಬಂಧ ಚಿಕ್ಕಮಗಳೂರು (Chikkamagaluru) ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ವಿಚ್ಛೇದನ ಪಡೆದ ನಂತರವೂ ಮುಗಿಯದ ದ್ವೇಷ – ಕೌಟುಂಬಿಕ ಕಲಹಕ್ಕೆ ಪತ್ನಿ ಬೆಳೆದಿದ್ದ ಬೆಳೆ ನಾಶ ಮಾಡಿದ್ನಾ ಪತಿ?

  • ಅಪ್ರಾಪ್ತೆಗೆ ಗನ್ ತೋರಿಸಿ 2 ಗಂಟೆಗಳ ಕಾಲ ಅತ್ಯಾಚಾರ – ಪ್ರಕರಣ ಮುಚ್ಚಿ ಹಾಕಲು ಪೋಷಕರಿಗೆ ಹಣದ ಆಮಿಷ

    ಪಾಟ್ನಾ: ಇಬ್ಬರು ವ್ಯಕ್ತಿಗಳು ಗನ್ ತೋರಿಸಿ 14 ವರ್ಷದ ಬಾಲಕಿಯನ್ನು ಅತ್ಯಾಚಾರವೆಸಗಿರುವುದು ಪಾಟ್ನಾದಿಂದ ಸುಮಾರು 180 ಕಿಮೀ ದೂರದಲ್ಲಿರುವ ಸಹರ್ಸಾದಲ್ಲಿ ನಡೆದಿದೆ.

    ಶನಿವಾರ ಮಧ್ಯಾಹ್ನ ಮೇಕೆಗಳನ್ನು ಮೇಯಿಸಲು ಬಾಲಕಿ ಹೋಗಿದ್ದಳು. ಬಳಿಕ ಅವಳು ಮನೆಗೆ ಹಿಂದಿರುಗುತ್ತಿದ್ದಾಗ ಕಾರಿನಲ್ಲಿ ಬಂದ ಮೂವರು ಆಕೆಯನ್ನು ಕರೆದಿದ್ದಾರೆ. ಬಳಿಕ ಅವರಲ್ಲಿ ಓರ್ವ ಆಕೆಯ ತಲೆಗೆ ಗನ್ ಹಿಡಿದು ಕಾರಿನೊಳಗೆ ಹತ್ತಿಸಿಕೊಂಡಿದ್ದಾನೆ. ಬಳಿಕ ಆಕೆಯ ಮೇಲೆ ಇಬ್ಬರು 2 ಗಂಟೆಗಳ ಕಾಲ ಅತ್ಯಾಚಾರ ಎಸಗಿದ್ದಾರೆ. ಈ ವೇಳೆ ಬಾಲಕಿಯ ಕಿರುಚಾಟ ಕೇಳಿಸದಂತೆ ಹಾಡನ್ನು ಹೆಚ್ಚಿನ ಸೌಂಡ್‍ನಲ್ಲಿ ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚಾದ ರೋಡ್ ರೇಜ್ – ಶಾಲಾ ಬಸ್ ಮೇಲೆ ಪುಂಡರ ಅಟ್ಟಹಾಸ

    ಮನೆಗೆ ಬಂದ ಬಳಿಕ ವಿಷಯವನ್ನು ಬಾಲಕಿ ಪೋಷಕರಿಗೆ ತಿಳಿಸಿದ್ದಾಳೆ. ಬಳಿಕ ಪ್ರಕರಣ ಮುಚ್ಚಿ ಹಾಕಲು ಆರೋಪಿಗಳ ಕುಟುಂಬದವರು ತಮಗೆ ಹಣ ನೀಡುವುದಾಗಿ ಆಮಿಷ ಒಡ್ಡಿದ್ದರು ಎಂದು ಬಾಲಕಿಯ ಚಿಕ್ಕಮ್ಮ ತಿಳಿಸಿದ್ದಾರೆ.

    ಆರೋಪಿಗಳು ಎಷ್ಟು ಹಣ ನೀಡುತ್ತಾರೆ? ನನಗೆ ಅದು ಬೇಡ, ನನಗೆ ನ್ಯಾಯ ಬೇಕು ಎಂದು ಬಾಲಕಿಯ ತಂದೆ ಮಾಧ್ಯಮಗಳ ಮುಂದೆ ಹೇಳಿದ್ದಾರೆ.

    ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ. ದೌರ್ಜನ್ಯ ಎಸಗಿರುವ ಆರೋಪಿಗಳನ್ನು ಬಿಟ್ಟು ಮತ್ತು ಅಂಕುಶ್ ಎಂದು ಗುರುತಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕೊಲೆ ಆರೋಪಿ ದರ್ಶನ್ ಸೆಲ್‌ಗೆ ಬರಲಿದೆ 32 ಇಂಚಿನ ಟಿವಿ

  • ಮುಂಬೈ ಮೂಲದ ಮಾಡೆಲ್‍ಗೆ ಕಿರುಕುಳ – ಆಂಧ್ರದ ಮೂವರು ಐಪಿಎಸ್ ಅಧಿಕಾರಿಗಳು ಸಸ್ಪೆಂಡ್

    ಮುಂಬೈ ಮೂಲದ ಮಾಡೆಲ್‍ಗೆ ಕಿರುಕುಳ – ಆಂಧ್ರದ ಮೂವರು ಐಪಿಎಸ್ ಅಧಿಕಾರಿಗಳು ಸಸ್ಪೆಂಡ್

    ಅಮರಾವತಿ: ಮುಂಬೈ (Mumbai) ಮೂಲದ ಮಾಡೆಲ್ ಕಮ್ ನಟಿಯೊಬ್ಬರನ್ನು ಅಕ್ರಮವಾಗಿ ಬಂಧಿಸಿ, ಕಿರುಕುಳ ನೀಡಿದ ಆರೋಪದ ಮೇಲೆ ಆಂಧ್ರಪ್ರದೇಶದ (Andhra Pradesh) ಮೂವರು ಐಪಿಎಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

    ಡೈರೆಕ್ಟರ್ ಜನರಲ್ ಶ್ರೇಣಿಯ ಒಬ್ಬರು, ಇನ್ಸ್ ಪೆಕ್ಟರ್ ಜನರಲ್ ಮತ್ತು ಸೂಪರಿಂಟೆಂಡೆಂಟ್ ಶ್ರೇಣಿಯ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಪಿಎಸ್ ಆರ್ ಆಂಜನೇಯುಲು (ಡಿಜಿ ಶ್ರೇಣಿ), ಕಂಠಿ ರಾಣಾ ಟಾಟಾ (ಐಜಿ ಶ್ರೇಣಿ) ಮತ್ತು ವಿಶಾಲ್ ಗುನ್ನಿ (ಎಸ್‍ಪಿ ಶ್ರೇಣಿ) ಅಮಾನತುಗೊಂಡ ಮೂವರು ಹಿರಿಯ ಅಧಿಕಾರಿಗಳಾಗಿದ್ದಾರೆ.

    ವೈಎಸ್ ಜಗನ್ ಮೋಹನ್ ರೆಡ್ಡಿ (YS Jagan Mohan Reddy) ಸರ್ಕಾರದ ಆಡಳಿತದ ಇರುವಾಗ ನಟಿ ಪೊಲೀಸರಿಂದ ಕಿರುಕುಳಕ್ಕೊಳಗಾಗಿದ್ದಾರೆ ಎಂದು ಆರೋಪಿಸಿದ್ದರು. ಮುಂಬೈನ ಕಾರ್ಪೋರೇಷನ್‌ನ ಉನ್ನತ ಕಾರ್ಯನಿರ್ವಾಹಕರ ವಿರುದ್ಧ ತಾನು ಈ ಹಿಂದೆ ದಾಖಲಿಸಿದ ಪ್ರಕರಣವನ್ನು ಹಿಂದೆಗೆದುಕೊಳ್ಳಬೇಕು. ಇಲ್ಲದಿದ್ದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಬೆದರಿಕೆ ಹಾಕಿದ್ದರು. ಅಲ್ಲದೇ ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಬಂಧಿಸಿದ್ದರು ಎಂದು ನಟಿ ಆರೋಪಿಸಿದ್ದರು.

    ಆಂಧ್ರಪ್ರದೇಶ ಪೊಲೀಸರು ಆರೋಪಗಳ ವಿಚಾರಣೆ ನಡೆಸಿದ್ದು, ಅಧಿಕಾರಿಗಳ ವಿರುದ್ಧ ಕರ್ತವ್ಯ ಲೋಪ ಮತ್ತು ದುರ್ನಡತೆ ಆರೋಪದಡಿ ಅಮಾನತು ಆದೇಶ ಹೊರಡಿಸಲಾಗಿದೆ. ಅಖಿಲ ಭಾರತ ಸೇವೆಗಳ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳು, 1969 ರ ನಿಯಮ 3 (1) ರ ಅಡಿಯಲ್ಲಿ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಆಗ ರಾಜ್ಯ ಗುಪ್ತಚರ ಮುಖ್ಯಸ್ಥರಾಗಿದ್ದ ಪಿ ಎಸ್ ಆರ್ ಆಂಜನೇಯುಲು ಅವರು ಫೆಬ್ರವರಿ 2 ರಂದು ಎಫ್‍ಐಆರ್ ದಾಖಲಿಸುವ ಮೊದಲೇ ಕಂಠಿ ರಾಣಾ ಟಾಟಾ ಮತ್ತು ವಿಶಾಲ್ ಗುನ್ನಿ ಅವರನ್ನು ಕರೆಸಿ ಜನವರಿ 31 ರಂದು ನಟನ ಬಂಧನಕ್ಕೆ ನಿರ್ದೇಶನ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು. ಅಮಾನತು ಆದೇಶದಲ್ಲಿ ಆಂಜನೇಯುಲು ಅವರು ತಮ್ಮ ಅಧಿಕಾರ ಮತ್ತು ಅಧಿಕೃತ ಸ್ಥಾನವನ್ನು ದುರುಪಯೋಗಪಡಿಸಿಕೊಂಡು, ಸಮರ್ಪಕ ಪರಿಶೀಲನೆಯಿಲ್ಲದೆ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಿದ್ದಾರೆ. ಇದು ಅಧಿಕಾರದ ದುರುಪಯೋಗ ಎಂದು ಆದೇಶದಲ್ಲಿ ಹೇಳಲಾಗಿದೆ.

    ವಿಜಯವಾಡದ ಮಾಜಿ ಕಮಿಷನರ್ ಆಗಿದ್ದ ಕಂಠಿ ರಾಣಾ ಟಾಟಾ ಅವರು ತನಿಖೆಯನ್ನು ಸರಿಯಾಗಿ ಮೇಲ್ವಿಚಾರಣೆ ಮಾಡಲು ವಿಫಲರಾಗಿದ್ದಾರೆ ಮತ್ತು ಎರಡು ದಿನಗಳ ನಂತರ ಎಫ್‍ಐಆರ್ ದಾಖಲಿಸುವ ಮೊದಲು ಜನವರಿ 31 ರಂದು ತಮ್ಮ ಮೇಲಧಿಕಾರಿಗಳ ಮೌಖಿಕ ಸೂಚನೆಯ ಮೇರೆಗೆ ನಟಿಯನ್ನು ಬಂಧಿಸಲು ಆದೇಶ ಹೊರಡಿಸಿದ್ದಾರೆ ಎಂದು ಆರೋಪಿಸಲಾಗಿದೆ.

    ಪ್ರಕರಣ ದಾಖಲಾದ 1 ಗಂಟೆ ಬಳಿಕ, ಸರಿಯಾದ ಲಿಖಿತ ಆದೇಶ ಇಲ್ಲದೇ ನಟಿಯ ಬಂಧನಕ್ಕಾಗಿ ಮುಂಬೈಗೆ ತೆರಳಲು ಪೊಲೀಸ್ ಅಧಿಕಾರಿಗಳಿಗೆ ಟಿಕೆಟ್‍ಗಳನ್ನು ಕಾಯ್ದಿರಿಸುವಂತೆ ಅವರು ಆದೇಶಿಸಿದ್ದರು ಎಂದು ವರದಿಯಾಗಿದೆ.

    ನಟನನ್ನು ಬಂಧಿಸುವ ಮುನ್ನ ದೂರನ್ನು ಕೂಲಂಕಷವಾಗಿ ಪರಿಶೀಲಿಸಲು ವಿಫಲವಾದ ಆರೋಪವನ್ನು ವಿಶಾಲ್ ಗುನ್ನಿ ಮೇಲೆ ಹೊರಿಸಲಾಗಿದೆ. ಸರಿಯಾದ ಲಿಖಿತ ಆದೇಶವಿಲ್ಲದೆ ಬಂಧನಕ್ಕಾಗಿ ಫೆಬ್ರವರಿ 2 ರಂದು ಮುಂಬೈಗೆ ಪ್ರಯಾಣಿಸಿದ್ದರು ಮತ್ತು ಮೇಲಧಿಕಾರಿಗಳ ಮೌಖಿಕ ಸೂಚನೆಯಂತೆ ಕಾರ್ಯನಿರ್ವಹಿಸಿದ್ದರು ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ನಟಿ ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿ ಇಬ್ರಾಹಿಂಪಟ್ಟಣಂ ಜಿಲ್ಲಾ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ದೂರು ದಾಖಲಿಸಿದ್ದರು.