Tag: police

  • ಮೋದಿ, ಸಿಜೆಐ ಬಳಿ ಮಾತಾಡ್ಬೇಕೆಂದು ಹೈಟೆನ್ಷನ್ ವಿದ್ಯುತ್ ಕಂಬ ಏರಿದ ಭೂಪ!

    ಮೋದಿ, ಸಿಜೆಐ ಬಳಿ ಮಾತಾಡ್ಬೇಕೆಂದು ಹೈಟೆನ್ಷನ್ ವಿದ್ಯುತ್ ಕಂಬ ಏರಿದ ಭೂಪ!

    ನವದೆಹಲಿ: ಪ್ರಧಾನಿ ಮೋದಿ (Narendra Modi), ಸಿಜೆಐ ಬಳಿ ಮಾತಾಡಬೇಕೆಂದು ವ್ಯಕ್ತಿಯೊಬ್ಬ ಹೈಟೆನ್ಷನ್ ವಿದ್ಯುತ್ ಕಂಬವನ್ನು ಏರಿದ ಘಟನೆ ದೆಹಲಿಯ (Delhi) ಯಮುನಾ ಖಾದರ್ ಪ್ರದೇಶದಲ್ಲಿ ನಡೆದಿದೆ.

    ಮಾಹಿತಿ ಪಡೆದ ಪೊಲೀಸರು (Police) ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಆತನನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ವಿಚಾರಿಸಿದಾಗ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ, ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿಯೊಂದಿಗೆ ಮಾತನಾಡಬೇಕೆಂದು ಆತ ಹೇಳಿಕೊಂಡಿದ್ದಾನೆ ಎಂದು ದೆಹಲಿ ಅಗ್ನಿಶಾಮಕ ಸೇವೆ ಎಡಿಒ ಯಶವಂತ್ ಸಿಂಗ್ ಮೀನಾ ತಿಳಿಸಿದ್ದಾರೆ.

    ಬುಧವಾರ ಬೆಳಿಗ್ಗೆ 10:30 ಕ್ಕೆ, ಹೈಟೆನ್ಷನ್ ತಂತಿಯ ಕಂಬವನ್ನು ಆತ ಹತ್ತಿದ್ದ. ಈ ಬಗ್ಗೆ ಸ್ಥಳೀಯರು ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಆತನನ್ನು ರಕ್ಷಣೆ ಮಾಡಲಾಯಿತು. ಆತ ಸರಿಯಾದ ಮಾಹಿತಿಯನ್ನು ನೀಡದ ಕಾರಣ ಎಲ್ಲಿಂದ ಬಂದಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಆ ವ್ಯಕ್ತಿ ಬಂಗಾಳ ಅಥವಾ ಬಿಹಾರದವನಾಗಿರಬಹುದು. ಶಿಕ್ಷಕನಾಗಿ ಕೆಲಸ ಮಾಡುವುದಾಗಿ ಹೇಳಿಕೊಂಡಿದ್ದಾನೆ ಎಂದು ಅವರು ಹೇಳಿದರು. ಈ ಸಂಬಂಧ ವಿಚಾರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಗೃಹಲಕ್ಷ್ಮಿ ಹಣ ಕೊಡದಿದ್ದಕ್ಕೆ ಪತ್ನಿಯನ್ನು ವಿದ್ಯುತ್‌ ತಂತಿಗೆ ನೂಕಿ ಹತ್ಯೆ ಆರೋಪ

    ಗೃಹಲಕ್ಷ್ಮಿ ಹಣ ಕೊಡದಿದ್ದಕ್ಕೆ ಪತ್ನಿಯನ್ನು ವಿದ್ಯುತ್‌ ತಂತಿಗೆ ನೂಕಿ ಹತ್ಯೆ ಆರೋಪ

    ದಾವಣಗೆರೆ: ಗೃಹಲಕ್ಷ್ಮಿ (Gruha Lakshmi) ಯೋಜನೆಯ ಹಣವನ್ನು (Money) ಕೊಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಪತ್ನಿಯನ್ನೇ (Wife) ಕೊಲೆ ಮಾಡಿದ ಘಟನೆ ಜಗಳೂರು ತಾಲೂಕಿನ ಉಜ್ಜಪ್ಪರವಡೇರಹಳ್ಳಿಯಲ್ಲಿ ನಡೆದಿದೆ.

    ಹತ್ಯೆಗೀಡಾದ ಮಹಿಳೆಯನ್ನು ಸತ್ಯಮ್ಮ (40) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿಯನ್ನು ಅಣ್ಣಪ್ಪ ಎಂದು ಗುರುತಿಸಲಾಗಿದೆ. ನೆಲಕ್ಕೆ ತಾಗುವಂತಿದ್ದ ವಿದ್ಯುತ್ ತಂತಿಯತ್ತ ಸತ್ಯಮ್ಮಳನ್ನು ನೂಕಿ ಆರೋಪಿ ಕೊಲೆ ಮಾಡಿದ್ದಾನೆ ಎಂದು ಮೃತಳ ಸಹೋದರ ಸತೀಶ್ ಎಂಬವರು ಆರೋಪಿಸಿದ್ದಾರೆ.

    ಕೆಲಸ ಇಲ್ಲದೇ ಹಣಕ್ಕೆ ಪರದಾಡುತ್ತಿದ್ದ ಅಣ್ಣಪ್ಪ ಗೃಹಲಕ್ಷ್ಮಿ ಹಣ ಕೊಡುವಂತೆ ಪತ್ನಿಯನ್ನು ಪೀಡಿಸುತ್ತಿದ್ದ. ಹಣ ತರಲು ಮಗನೊಂದಿಗೆ ಬ್ಯಾಂಕ್‌ಗೆ ಹೋದ ಸತ್ಯಮ್ಮನನ್ನು ಹಿಂಬಾಲಿಸಿದ್ದ ಅಣ್ಣಪ್ಪ, ಹಣಕ್ಕಾಗಿ ಪತ್ನಿ ಜತೆ ಜಗಳವಾಡಿ, ಹಲ್ಲೆ ಮಾಡಿದ್ದ. ಬಳಿಕ ಪತ್ನಿಯನ್ನು ಊರಿಗೆ ಬಿಡುವುದಾಗಿ ಬೈಕ್‌ನಲ್ಲಿ ಕರೆದುಕೊಂಡು ಹೋಗಿ ಉಜ್ಜಪ್ಪರವಡೇರಹಳ್ಳಿ ಸಮೀಪದ ನಿರ್ಜನ ಪ್ರದೇಶದಲ್ಲಿ ಬೈಕ್‌ನಿಂದ ಇಳಿಸಿ ಹಲ್ಲೆ ನಡೆಸಿ ಕೊಲೆ‌‌ ಮಾಡಿದ್ದಾನೆ. ಅಲ್ಲದೆ ಕರೆಂಟ್ ಶಾಕ್ ಹೊಡೆದಿದೆ ಎಂದು ಕಥೆ ಕಟ್ಟಿದ್ದ.

    ಮೃತದೇಹವನ್ನು ದಾವಣಗೆರೆ‌ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಮಾರಾಟ ಮಾಡಿದ ಮನೆ ಖಾಲಿ ಮಾಡದ್ದಕ್ಕೆ ಬಾವನನ್ನೇ ಹತ್ಯೆಗೈದ ಬಾಮೈದ!

    ಮಾರಾಟ ಮಾಡಿದ ಮನೆ ಖಾಲಿ ಮಾಡದ್ದಕ್ಕೆ ಬಾವನನ್ನೇ ಹತ್ಯೆಗೈದ ಬಾಮೈದ!

    ಚಿಕ್ಕಮಗಳೂರು: ಮನೆ ಮಾರಾಟ ಮಾಡಿ ಮೂರು ವರ್ಷಗಳಾಗಿದ್ದರೂ ಮನೆ ಖಾಲಿ ಮಾಡದ ಬಾವನನ್ನ ಬಾಮೈದನೇ ಕೊಲೆ ಮಾಡಿರುವ ಘಟನೆ ನಗರದ (Chikkamagaluru) ತಮಿಳು ಕಾಲೋನಿಯಲ್ಲಿ ನಡೆದಿದೆ.

    ಹತ್ಯೆಯಾದ ವ್ಯಕ್ತಿಯನ್ನು ಮಂಜು (50) ಎಂದು ಗುರುತಿಸಲಾಗಿದೆ. ಮೃತ ಮಂಜು ಬಾಮೈದ ಗೋಪಾಲ್ ಎಂಬಾತ ಕೊಲೆಗೈದ ಆರೋಪಿಯಾಗಿದ್ದಾನೆ.

    ಮಂಜು ಹಾಗೂ ಗೋಪಾಲ್ ಒಂದೇ ಏರಿಯಾದ ನಿವಾಸಿಗಳಾಗಿದ್ದರು. ಮೃತ ಮಂಜು ತನ್ನ ಮನೆಯನ್ನ 25 ಸಾವಿರ ರೂ.ಗೆ ಬಾಮೈದ ಗೋಪಾಲ್‌ಗೆ ಮಾರಿದ್ದನು. ಮನೆ ಮಾರಾಟ ಮಾಡಿಯೂ, 3 ವರ್ಷಗಳಿಂದ ಮನೆಯನ್ನು ಖಾಲಿ ಮಾಡಿರಲಿಲ್ಲ. ಮನೆ ಖಾಲಿ ಮಾಡುವಂತೆ ಸಾಕಷ್ಟು ಬಾರಿ ಆರೋಪಿ ಎಚ್ಚರಿಕೆ ನೀಡಿದ್ದ.

    ಇದೇ ವಿಚಾರಕ್ಕೆ ಆಗಾಗ ಇಬ್ಬರಿಗೂ ಗಲಾಟೆಯಾಗುತ್ತಿತ್ತು. ಇಂದು (ಮಂಗಳವಾರ) ಸಹ ಮಾತಿಗೆ ಮಾತು ಬೆಳೆದು ಜಗಳವಾಗಿದೆ.‌ ಈ ವೇಳೆ ಅಲ್ಲೇ ಇದ್ದ ಇಟ್ಟಿಗೆಯನ್ನು ತೆಗೆದುಕೊಂಡು ಗೋಪಾಲ್ ಬಾವ ಮಂಜು ತಲೆಗೆ ಹೊಡೆದಿದ್ದಾನೆ. ಈ ವೇಳೆ ತೀವ್ರ ರಕ್ತಸ್ರಾವವಾಗುತ್ತಿದ್ದ ಮಂಜುನನ್ನ ಆಸ್ಪತ್ರೆಗೆ ಕರೆತಂದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

    ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು (Police) ಆರೋಪಿ ಗೋಪಾಲ್‌ನನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ.

  • ದೃಶ್ಯ ಸಿನಿಮಾ ಮಾದರಿಯಲ್ಲಿ ಗೆಳತಿಯ ಹತ್ಯೆ – ಯೋಧ ಅರೆಸ್ಟ್‌

    ದೃಶ್ಯ ಸಿನಿಮಾ ಮಾದರಿಯಲ್ಲಿ ಗೆಳತಿಯ ಹತ್ಯೆ – ಯೋಧ ಅರೆಸ್ಟ್‌

    ಮುಂಬೈ: ದೃಶ್ಯ ಸಿನಿಮಾ ಮಾದರಿಯಲ್ಲಿ, ಯೋಧನೊಬ್ಬ (Soldier) ತನ್ನ ಗೆಳತಿಯನ್ನು ಹತ್ಯೆಗೈದು ಹೂತು ಸಿಮೆಂಟ್‌ ಹಾಕಿ ಮುಚ್ಚಿದ ಪ್ರಕರಣ (Nagpur) ನಾಗ್ಪುರದಲ್ಲಿ ನಡೆದಿದೆ.

    ಹತ್ಯೆಗೊಳಗಾದ ಮಹಿಳೆಯನ್ನು ಜ್ಯೋತ್ಸ್ನಾ ಆಕ್ರೆ (32) ಎಂದು ಗುರುತಿಸಲಾಗಿದೆ. ಹತ್ಯೆಗೈದ ಆರೋಪಿಯನ್ನು ಅಜಯ್ ವಾಂಖೆಡೆ (33) ಎಂದು ಗುರುತಿಸಲಾಗಿದೆ. ಆತ ನಾಗ್ಪುರದ ಕೈಲಾಶ್ ನಗರ ಪ್ರದೇಶದ ನಿವಾಸಿಯಾಗಿದ್ದು, ನಾಗಾಲ್ಯಾಂಡ್‌ನಲ್ಲಿ ನೆಲೆಸಿದ್ದ.

    ಆರೋಪಿ ತನ್ನ ಗೆಳತಿಯನ್ನು ಕೊಲೆಗೈದು ಆಕೆಯ ದೇಹವನ್ನು ಸಿಮೆಂಟ್‌ನಿಂದ ಮುಚ್ಚಿದ್ದ. ಬಳಿಕ ಆಕೆಯ ಮೊಬೈಲ್‌ನ್ನು ಲಾರಿಯೊಂದರ ಮೇಲೆ ಎಸೆದಿದ್ದ. ಇದು ದೃಶ್ಯ ಚಿತ್ರದ ಕತೆಯನ್ನು ಹೋಲುತ್ತದೆ. ಆರೋಪಿ ಕೊಲೆಗೆ ಯೋಜನೆ ರೂಪಿಸಿ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ವಾಂಖೆಡೆ ವಿವಾಹ ಪೋರ್ಟಲ್ ಮೂಲಕ ವಿಚ್ಛೇದಿತ ಜ್ಯೋತ್ಸ್ನಾ ಆಕ್ರೆ ಅವರನ್ನು ಪರಿಚಯ ಮಾಡಿಕೊಂಡಿದ್ದ. ಬಳಿಕ ಇಬ್ಬರೂ ಸ್ನೇಹ, ಪ್ರೇಮಕ್ಕೆ ತಿರುಗಿ, ಪರಸ್ಪರ ಸಂಬಂಧ ಹೊಂದಿದ್ದರು. ಆದರೆ ವಾಂಖೆಡೆ ಅವರ ಕುಟುಂಬ ಇದಕ್ಕೆ ವಿರೋಧಿಸಿ ಬೇರೆ ಮದುವೆ ಮಾಡಿದ್ದರು. ಬಳಿಕ ಆಕ್ರೆಯನ್ನು ಆರೋಪಿ ಕಡೆಗಣಿಸಿದ್ದ. ಅಲ್ಲದೇ ಆಕೆಯ ಹತ್ಯೆಗೆ ಯೋಜನೆ ರೂಪಿಸಿ, ನಿದ್ರೆ ಮಾತ್ರೆಗಳನ್ನು ತಂಪು ಪಾನಿಯದಲ್ಲಿ ಬೆರಸಿ ಕೊಲೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆಕ್ರೆ ಮನೆಗೆ ಬಾರದೇ ಇದ್ದಾಗ ಆಕೆಯ ಮನೆಯವರು ಆಕೆ ಕಾಣೆಯಾಗಿರುವ ಬಗ್ಗೆ ಆ.29 ರಂದು ಬೆಲ್ತರೋಡಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಆರಂಭಿಸಿದ್ದ ಪೊಲೀಸರು ಸೆ.17ರಂದು ಅಪಹರಣ ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆಯ ಸಮಯದಲ್ಲಿ, ಪೊಲೀಸರು ಕರೆ ವಿವರಗಳ ದಾಖಲೆಗಳನ್ನು ಪರಿಶೀಲಿಸಿದಾಗ ವಾಂಖೆಡೆ ಮತ್ತು ಆಕ್ರೆ ನಡುವೆ ನಿಯಮಿತವಾಗಿ ಫೋನ್ ಕರೆಗಳು ಬೆಳಕಿಗೆ ಬಂದಿತ್ತು.

    ವಾಂಖೆಡೆ ನಾಗ್ಪುರದ ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ. ಆತನ ಮನವಿಯನ್ನು ತಿರಸ್ಕರಿಸಲಾಗಿತ್ತು. ನಂತರ ಆತ ಹೈಕೋರ್ಟ್ ಮೊರೆ ಹೋಗಿದ್ದ. ಹೈಕೋರ್ಟ್‌ ಸಹ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು. ನಿರೀಕ್ಷಣಾ ಜಾಮೀನು ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಬೆಲ್ತರೋಡಿ ಪೊಲೀಸರು ವಾಂಖೆಡೆಯನ್ನು ಬಂಧಿಸಿದ್ದಾರೆ.

  • ಚಿಕ್ಕೋಡಿ | ಜೂಜು ಅಡ್ಡೆ ಮೇಲೆ ದಾಳಿ – 20 ಮಂದಿ ಅರೆಸ್ಟ್‌

    ಚಿಕ್ಕೋಡಿ | ಜೂಜು ಅಡ್ಡೆ ಮೇಲೆ ದಾಳಿ – 20 ಮಂದಿ ಅರೆಸ್ಟ್‌

    ಬೆಳಗಾವಿ: ಜೂಜು (Gambling) ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ 20 ಮಂದಿಯನ್ನು ಬಂಧಿಸಿದ ಘಟನೆ ಚಿಕ್ಕೋಡಿ (Chikkodi) ಪಟ್ಟಣದಲ್ಲಿ ನಡೆದಿದೆ.

    ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ 20 ಮಂದಿಯನ್ನು ಬಂಧಿಸಿ 13 ಸಾವಿರ ರೂ. ಹಣವನ್ನು ಪೊಲೀಸರು (Police) ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಬೆಳಗಾವಿ| ಉದ್ಯಮಿ ಹತ್ಯೆ ಕೇಸ್ – 13 ಹಾರ್ಡ್ ಡಿಸ್ಕ್‌ಗಳಲ್ಲಿ ಸಂತೋಷ್‍ನ ಖಾಸಗಿ ವೀಡಿಯೋ ಪತ್ತೆ!

    ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಾಬಾ ಸಿದ್ದಿಕಿ ಹತ್ಯೆ ಕೇಸ್‌ | ಮತ್ತೋರ್ವ ಆರೋಪಿ ಅರೆಸ್ಟ್‌ – ಬಂಧಿತರ ಸಂಖ್ಯೆ 10ಕ್ಕೆ ಏರಿಕೆ

    ಬಾಬಾ ಸಿದ್ದಿಕಿ ಹತ್ಯೆ ಕೇಸ್‌ | ಮತ್ತೋರ್ವ ಆರೋಪಿ ಅರೆಸ್ಟ್‌ – ಬಂಧಿತರ ಸಂಖ್ಯೆ 10ಕ್ಕೆ ಏರಿಕೆ

    ಮುಂಬೈ: ಬಾಬಾ ಸಿದ್ದಿಕಿ (Baba Siddique) ಹತ್ಯೆ ಪ್ರಕರಣದಲ್ಲಿ ಮುಂಬೈ (Mumbai) ಪೊಲೀಸರು (Police) ಸ್ಕ್ರ್ಯಾಪ್ ಡೀಲರ್ ಒಬ್ಬನನ್ನು ಬಂಧಿಸಿದ್ದಾರೆ. ಈ ಮೂಲಕ ಇಲ್ಲಿಯವರೆಗೂ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 10ಕ್ಕೆ ಏರಿಕೆ ಕಂಡಿದೆ.

    ಬಂಧಿತ ಆರೋಪಿಯನ್ನು ರಾಜಸ್ಥಾನದ ಉದಯಪುರ ಮೂಲದ ಭಗವತ್ ಓಂ ಸಿಂಗ್ (32) ಎಂದು ಗುರುತಿಸಲಾಗಿದೆ. ಆತ ಈಗ ಮುಂಬೈನಲ್ಲಿ ನೆಲೆಸಿದ್ದ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಅ.26 ರವರೆಗೆ ಆತನನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬಾಬಾ ಸಿದ್ದಿಕಿ ಹತ್ಯೆ ಕೇಸ್‌ – ಆರೋಪಿ ಮೊಬೈಲ್‌ನಲ್ಲಿ ಸಿದ್ದಿಕಿ ಪುತ್ರನ ಫೋಟೋ ಪತ್ತೆ

    ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ ಐವರನ್ನು ಪಿಸ್ತೂಲ್‌ ಒದಗಿಸಿದ ಕಾರಣಕ್ಕಾಗಿ ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣದ ಗುರ್ಮೈಲ್ ಬಲ್ಜಿತ್ ಸಿಂಗ್ (23) ಧರ್ಮರಾಜ್ ಕಶ್ಯಪ್ (19) ಹರೀಶ್‌ಕುಮಾರ್ ಬಾಲಕ್ರಮ್ ನಿಸಾದ್ (23) ಮತ್ತು ಪ್ರವೀಣ್ ಲೋಂಕರ್ (28) ಎಂಬಾತನನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿ ಶಿವಕುಮಾರ್ ಗೌತಮ್‌ಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.

    ಅ.12 ರಂದು, ಬಾಂದ್ರಾದಲ್ಲಿರುವ ಪುತ್ರ ಶಾಸಕ ಜೀಶನ್ ಸಿದ್ದಿಕಿ ಅವರ ಕಚೇರಿಯ ಹೊರಗೆ ಸಿದ್ದಿಕಿ ಅವರನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿತ್ತು.

    ಬಾಬಾ ಸಿದ್ದಿಕಿಯವರ ಹತ್ಯೆಯ ಆರೋಪಿಗಳಾದ ಮೂವರು ಶೂಟರ್‌ಗಳು ಮುಂಬೈನ ಕುರ್ಲಾ ಪ್ರದೇಶದಲ್ಲಿ ಬಾಡಿಗೆಗೆ ವಾಸಿಸುತ್ತಿದ್ದರು. ಈ ವೇಳೆ ಯೂಟ್ಯೂಬ್‌ನಲ್ಲಿ ಟ್ಯುಟೋರಿಯಲ್ ವೀಡಿಯೊಗಳನ್ನು ನೋಡಿ ಬಂದೂಕುಗಳನ್ನು ಹೇಗೆ ಬಳಸಬೇಕೆಂದು ಕಲಿತಿದ್ದರು ಎಂದು ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಆರೋಪಿಗಳು ಸುಮಾರು ನಾಲ್ಕು ವಾರಗಳ ಕಾಲ ಅಂತಹ ವೀಡಿಯೊಗಳನ್ನು ವೀಕ್ಷಿಸಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿತ್ತು. ಇದನ್ನೂ ಓದಿ: ಮಾಧ್ಯಮಗಳ ಎದುರು ನಕಲಿ ಎನ್‌ಕೌಂಟರ್‌ ಆರೋಪ ಮಾಡಿದ ಬಿಷ್ಣೋಯ್ ಗ್ಯಾಂಗ್‌ನ ಶೂಟರ್‌!

  • ಬೆಳಗಾವಿ| ಉದ್ಯಮಿ ಹತ್ಯೆ ಕೇಸ್ – 13 ಹಾರ್ಡ್ ಡಿಸ್ಕ್‌ಗಳಲ್ಲಿ ಸಂತೋಷ್‍ನ ಖಾಸಗಿ ವೀಡಿಯೋ ಪತ್ತೆ!

    ಬೆಳಗಾವಿ| ಉದ್ಯಮಿ ಹತ್ಯೆ ಕೇಸ್ – 13 ಹಾರ್ಡ್ ಡಿಸ್ಕ್‌ಗಳಲ್ಲಿ ಸಂತೋಷ್‍ನ ಖಾಸಗಿ ವೀಡಿಯೋ ಪತ್ತೆ!

    ಬಳ್ಳಾರಿ: ಬೆಳಗಾವಿಯಲ್ಲಿ ಉದ್ಯಮಿ ಸಂತೋಷ್ ಪದ್ಮನ್ನವರ ಹತ್ಯೆ ಪ್ರಕರಣ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಆತನ ಕರಾಳ ಮುಖದ ಪರಿಚಯವಾಗಿದೆ. ಹತ್ಯೆಯಾದ ಉದ್ಯಮಿಯ ಮನೆ ತಪಾಸಣೆ ವೇಳೆ ಆತ ಬೇರೆ ಬೇರೆ ಹೆಣ್ಣುಗಳ ಜೊತೆ ಕಳೆದ ಖಾಸಗಿ ವೀಡಿಯೋಗಳಿರುವ 13 ಹಾರ್ಡ್ ಡಿಸ್ಕ್‌ಗಳು ಪತ್ತೆಯಾಗಿವೆ.

    ಡಿಸ್ಕ್‌ಗಳು, ಸಿಸಿಟಿವಿ ಡಿವಿಆರ್, ಮೂರು ಪೆನ್‍ಡ್ರೈವ್‍ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇವುಗಳನ್ನು ಪರಿಶೀಲನೆಗಾಗಿ ಎಫ್‍ಎಸ್‍ಎಲ್‍ಗೆ ಕಳಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿ ಉದ್ಯಮಿ ಹತ್ಯೆ – ಪತ್ನಿ ಸೇರಿ ಮೂವರು ಆರೋಪಿಗಳು ಹಿಂಡಲಗಾ ಜೈಲಿಗೆ ಶಿಫ್ಟ್‌

    ಅ.9ರಂದು ಹೃದಯಾಘಾತದಿಂದ ಸಂತೋಷ್ ಮೃತಪಟ್ಟಿದ್ದಾನೆ ಎಂದು ಅಂತ್ಯಸಂಸ್ಕಾರ ಮಾಡಲಾಗಿತ್ತು. ಈ ಬಗ್ಗೆ ಸಂಶಯ ಬಂದು ಅ.14ರಂದು ತಾಯಿ ಸೇರಿ 5 ಜನರ ವಿರುದ್ಧ ಸಂತೋಷ್‍ನ ಮಗಳು ಕೊಲೆ ಕೇಸ್ ದಾಖಲಿಸಿದ್ದರು. ಪ್ರಕರಣ ತನಿಖೆ ನಡೆಸಿದಾಗ, ಪತ್ನಿ ಉಮಾ ಹಾಗೂ ಇಬ್ಬರು ಫೇಸ್‍ಬುಕ್ ಗೆಳೆಯರು ಸೇರಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು.

    ತನಿಖೆ ವೇಳೆ ಹಾರ್ಡ್ ಡಿಸ್ಕ್‌ನಲ್ಲಿರುವ ಗಂಡನ ಅಶ್ಲೀಲ ವೀಡಿಯೋ ಕುರಿತು ಪತ್ನಿ ಉಮಾ ಮಾಹಿತಿ ನೀಡಿದ್ದಳು. ಅಲ್ಲದೇ ಮಕ್ಕಳೆದುರು ಕೂಡ ಬೆತ್ತಲಾಗಿ ಸಂತೋಷ್ ಓಡಾಡುತ್ತಿದ್ದ ಎಂದು ಹೇಳಿದ್ದಳು.

    ಪ್ರಕರಣ ಸಂಬಂಧ ಸಂತೋಷ್ ಪತ್ನಿ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಮಾಳಮಾರುತಿ ಠಾಣೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಬೆಳಗಾವಿ| ತಂದೆಯ ಸಾವಿನ ಬಗ್ಗೆ ಮಗಳ ಅನುಮಾನ – ಹೂತಿದ್ದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ

  • ಕಾಶ್ಮೀರದ ಹಲವೆಡೆ ಗ್ರೆನೇಡ್ ದಾಳಿ ನಡೆಸಿದ್ದ ಇಬ್ಬರು ಉಗ್ರರು ಅರೆಸ್ಟ್‌

    ಕಾಶ್ಮೀರದ ಹಲವೆಡೆ ಗ್ರೆನೇಡ್ ದಾಳಿ ನಡೆಸಿದ್ದ ಇಬ್ಬರು ಉಗ್ರರು ಅರೆಸ್ಟ್‌

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಘಜ್ನವಿ ಪಡೆಯ (ಜೆಕೆಜಿಎಫ್) ಇಬ್ಬರು ಭಯೋತ್ಪಾದಕರನ್ನು ಪೊಲೀಸರು (Police) ಬಂಧಿಸಿದ್ದಾರೆ.

    ಬಂಧಿತರನ್ನು ಹರಿ ಗ್ರಾಮದ ಅಬ್ದುಲ್ ಅಜೀಜ್ ಮತ್ತು ಮನ್ವರ್ ಹುಸೇನ್ ಎಂದು ಗುರುತಿಸಲಾಗಿದೆ. ಇಬ್ಬರು ಪೂಂಚ್‌ನಲ್ಲಿ ಹಲವಾರು ಗ್ರೆನೇಡ್ ದಾಳಿ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಪೊಲೀಸರು, 37ನೇ ರಾಷ್ಟ್ರೀಯ ರೈಫಲ್ಸ್ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) 38 ನೇ ಬೆಟಾಲಿಯನ್ ಪಡೆಗಳೊಂದಿಗೆ ಭಯೋತ್ಪಾದಕ ಅಜೀಜ್‌ನನ್ನು ಬಂಧಿಸಿದ್ದಾರೆ. ಈ ವೇಳೆ 3 ಗ್ರೆನೇಡ್‌ಗಳನ್ನು ಆತನಿಂದ ವಶಪಡಿಸಿಕೊಂಡಿದ್ದಾರೆ. ಹುಸೇನ್‌ನಿಂದ ಪಿಸ್ತೂಲ್, ಒಂದು ಮ್ಯಾಗಜೀನ್ ಮತ್ತು ಒಂಬತ್ತು ಸುತ್ತಿನ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಧಾರ್ಮಿಕ ಸ್ಥಳಗಳು ಮತ್ತು ಆಸ್ಪತ್ರೆಗಳ ಮೇಲೆ ಗ್ರೆನೇಡ್ ದಾಳಿ, ಭಯೋತ್ಪಾದಕರಿಗೆ ಹಣಕಾಸು ನೆರವು, ದೇಶ ವಿರೋಧಿ ಪ್ರಚಾರ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆ ಸೇರಿದಂತೆ ಭಯೋತ್ಪಾದಕ ಚಟುವಟಿಕೆಗಳಿಗೆ ಜನರನ್ನು ಸಂಘಟಿಸುವಲ್ಲಿ ಇಬ್ಬರೂ ತೊಡಗಿಸಿಕೊಂಡಿದ್ದರು. ಈ ಕಾರ್ಯಾಚರಣೆಯು ಭಯೋತ್ಪಾದಕ ಜಾಲಗಳನ್ನು ಕಿತ್ತುಹಾಕುವಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ ಎಂದು ಭದ್ರತಾ ಪಡೆಗಳು ತಿಳಿಸಿವೆ.

    ವಿಚಾರಣೆ ವೇಳೆ ಇಬ್ಬರೂ ಗಡಿಯಾಚೆಗಿನ ತಮ್ಮ ಹ್ಯಾಂಡ್ಲರ್‌ಗಳಿಂದ ನಾಲ್ಕು ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು 1.5 ಲಕ್ಷ ರೂ. ನೆರವು ಪಡೆದಿದ್ದಾರೆ. ಪಿಸ್ತೂಲ್‌ಗಳನ್ನು ನಿರ್ವಹಿಸುವಲ್ಲಿ ತರಬೇತಿ ಪಡೆದಿದ್ದರು ಮತ್ತು ಅರಣ್ಯ ಪ್ರದೇಶದಲ್ಲಿ ಅಭ್ಯಾಸಕ್ಕಾಗಿ ಕೆಲವು ಸುತ್ತು ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕಳೆದ ವರ್ಷ ನವೆಂಬರ್ 15 ರಂದು ಸುರನ್‌ಕೋಟೆಯ ಶಿವ ದೇವಾಲಯದ ಮೇಲೆ ಗ್ರೆನೇಡ್‌ ದಾಳಿ ಪ್ರಕರಣದಲ್ಲಿ ಅಜೀಜ್ ಭಾಗಿಯಾಗಿದ್ದ. ಮಾರ್ಚ್ 26 ರಂದು ಪೂಂಚ್‌ನಲ್ಲಿರುವ ಗುರುದ್ವಾರ ಮಹಂತ್ ಸಾಹಿಬ್, ಜೂನ್‌ನಲ್ಲಿ ಪೂಂಚ್‌ನ ಕಮ್ಸಾರ್‌ನಲ್ಲಿ ಸೇನಾ ಸೆಂಟ್ರಿ ಪೋಸ್ಟ್ ಮತ್ತು ಆಗಸ್ಟ್ 14 ರಂದು CRPF ಸೆಂಟ್ರಿ ಪೋಸ್ಟ್ ಬಳಿ ಶಾಲೆಯ ಮೈದಾನದ ಮೇಲೆ ನಡೆದ ದಾಳಿಯಲ್ಲೂ ಇಬ್ಬರ ಕೈವಾಡ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಜುಲೈ 18 ರಂದು ಜಿಲ್ಲಾ ಆಸ್ಪತ್ರೆಯ ಕ್ವಾರ್ಟರ್ಸ್ ಬಳಿ ಹುಸೇನ್ ಗ್ರೆನೇಡ್ ದಾಳಿ ನಡೆಸಿದ್ದ. ಇಬ್ಬರು ಸೇರಿ ಸುರನ್‌ಕೋಟೆಯ ವಿವಿಧ ಸ್ಥಳಗಳಲ್ಲಿ ದೇಶ ವಿರೋಧಿ ಪೋಸ್ಟರ್‌ಗಳನ್ನು ಅಂಟಿಸಿದ್ದರು. ಇದರಲ್ಲಿ ಹರಿ, ಧುಂಡಕ್, ಸನಾಯಿ, ಈದ್ಗಾ-ಹರಿ ಮತ್ತು ಇತರ ಪಕ್ಕದ ಪ್ರದೇಶಗಳ ಸರ್ಕಾರಿ ಪ್ರೌಢಶಾಲೆ ಸೇರಿದೆ. ಈ ಪೋಸ್ಟರ್‌ಗಳನ್ನು ಹುಸೇನ್‌ನ ಮನೆಯಲ್ಲಿ ಮುದ್ರಿಸಿ, ಸಾರ್ವಜನಿಕರಲ್ಲಿ ಭಯವನ್ನು ಸೃಷ್ಟಿಸಲು ಅಂಟಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

  • ಬೆಂಗ್ಳೂರಲ್ಲಿ 1 ಕೆಜಿ ಚಿನ್ನ ಕದ್ದು ತೀರ್ಥಹಳ್ಳಿಯಲ್ಲಿ ಹೂತಿಟ್ಟಿದ್ದ ಖತರ್ನಾಕ್ ಕಳ್ಳ!

    ಬೆಂಗ್ಳೂರಲ್ಲಿ 1 ಕೆಜಿ ಚಿನ್ನ ಕದ್ದು ತೀರ್ಥಹಳ್ಳಿಯಲ್ಲಿ ಹೂತಿಟ್ಟಿದ್ದ ಖತರ್ನಾಕ್ ಕಳ್ಳ!

    ಶಿವಮೊಗ್ಗ: ಖತರ್ನಾಕ್ ಕಳ್ಳನೊಬ್ಬ ಬೆಂಗಳೂರಿನಲ್ಲಿ (Bengaluru) ಚಿನ್ನವನ್ನು ಕದ್ದು ತೀರ್ಥಹಳ್ಳಿಯ (Thirthahalli) ತನ್ನ ಮನೆಗೆ ತಂದು ಹೂತಿಟ್ಟಿದ್ದ ಪ್ರಕರಣವನ್ನು ಮಾಗಡಿ ಪೊಲೀಸರು (Police) ಬಯಲಿಗೆ ತಂದಿದ್ದಾರೆ.

    ಹಮೀದ್ ಹಂಜ ಎಂಬಾತ ಬೆಂಗಳೂರಿನ ಮಾಗಡಿಯಲ್ಲಿ ಕಳ್ಳತನ ಮಾಡಿ ತೀರ್ಥಹಳ್ಳಿಯ ಬೆಟ್ಟಮಕ್ಕಿಯಲ್ಲಿರುವ ತನ್ನ ಮನೆಯಲ್ಲಿ ತಂದು ಹೂತಿಟ್ಟಿದ್ದ. ಆರೋಪಿಯನ್ನು ಕರೆ ತಂದಿದ್ದ ಮಾಗಡಿ ಪೊಲೀಸರು ಸುಮಾರು 1 ಕೆಜಿಗೂ ಹೆಚ್ಚು ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

    ಮೂಲತಃ ಆಗುಂಬೆ ಸಮೀಪದ ಗುಡ್ಡೇಕೇರಿಯವನಾದ ಹಂಜನ ಮೇಲೆ 70 ರಿಂದ 80ಕ್ಕೂ ಹೆಚ್ಚು ಕೇಸ್‍ಗಳಿವೆ. ಆಗುಂಬೆ ಸಮೀಪದಲ್ಲಿ ನಡೆದಿದ್ದ ಹೊಸಳ್ಳಿ ವೆಂಕಟೇಶ್ ಕೊಲೆ ಪ್ರಕರಣದಲ್ಲೂ ಹಂಜ ಭಾಗಿಯಾಗಿದ್ದ. ಕೊಲೆ, ವಸೂಲಿ, ವಂಚನೆ ಪ್ರಕರಣಗಳಲ್ಲಿ ಈತ ಭಾಗಿಯಾಗಿರುವುದು ತಿಳಿದು ಬಂದಿದೆ.

    ಹಲವಾರು ಪ್ರಕರಣಗಳಲ್ಲಿ ಭಾಗಿಯಾದ್ದ ಹಂಜ ಈಗ ಮಾಗಡಿ ಪೊಲೀಸರ ಅತಿಥಿಯಾಗಿದ್ದಾನೆ.

  • ಪದೇ ಪದೇ ನಿಯಮ ಉಲ್ಲಂಘನೆ – ಕಾರು ಚಾಲಕನಿಗೆ ಮೂರು ಮೀಟರ್ ಉದ್ದದ ರಶೀದಿ!

    ಪದೇ ಪದೇ ನಿಯಮ ಉಲ್ಲಂಘನೆ – ಕಾರು ಚಾಲಕನಿಗೆ ಮೂರು ಮೀಟರ್ ಉದ್ದದ ರಶೀದಿ!

    ಶಿವಮೊಗ್ಗ: ಸಾಲು ಸಾಲು ಸಂಚಾರ ನಿಯಮ ಉಲ್ಲಂಘಿಸಿದ ಕಾರು (Car) ಚಾಲಕನಿಗೆ ಶಿವಮೊಗ್ಗದ (Shivamogga) ಪಶ್ಚಿಮ ಸಂಚಾರ ಪೊಲೀಸರು (Traffic Police) ಮೂರು ಮೀಟರ್‌ ಉದ್ದದ ಬಿಲ್‌ ನೀಡಿದ್ದಾರೆ. ಬಳಿಕ 11,000 ರೂ, ದಂಡ ಕಟ್ಟಿಸಿಕೊಂಡಿದ್ದಾರೆ.

    ಶಿವಪ್ಪನಾಯಕ ವೃತ್ತದ ಬಳಿ ವಾಹನ ತಪಾಸಣೆ ವೇಳೆ ಸಂಚಾರ ಪೊಲೀಸರು ಕಾರನ್ನು ತಡೆದು ಪರಿಶೀಲಿಸಿದ್ದಾರೆ. ಈ ವೇಳೆ‌ ಕಾರು ಚಾಲಕ ಹಲವು ಕಡೆ ಸಂಚಾರ ನಿಯಮ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ. ಬಳಿಕ ಚಾಲಕನಿಗೆ ಅತಿ ದೊಡ್ಡ ಬಿಲ್‌ ನೀಡಲಾಗಿದೆ.

    ಚಾಲಕನಿಂದ ದಂಡವನ್ನು ಕಟ್ಟಿಸಿಕೊಂಡು ಬಳಿಕ ಆತನನ್ನು ಕಳಿಸಲಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.