Tag: police

  • ವಿದ್ಯುತ್ ಟ್ರಾನ್ಸ್‌ಫಾರ್ಮರ್ ಕಳ್ಳತನಕ್ಕೆ ಯತ್ನ – ಶಾಕ್‌ ಹೊಡೆದವನನ್ನು ನದಿಗೆ ಎಸೆದು ಪರಾರಿಯಾದ‌ ಕಳ್ಳರ ಗ್ಯಾಂಗ್‌!

    ವಿದ್ಯುತ್ ಟ್ರಾನ್ಸ್‌ಫಾರ್ಮರ್ ಕಳ್ಳತನಕ್ಕೆ ಯತ್ನ – ಶಾಕ್‌ ಹೊಡೆದವನನ್ನು ನದಿಗೆ ಎಸೆದು ಪರಾರಿಯಾದ‌ ಕಳ್ಳರ ಗ್ಯಾಂಗ್‌!

    ಲಕ್ನೋ: ಕಳ್ಳರ ಗ್ಯಾಂಗ್‌ ಒಂದು ವಿದ್ಯುತ್‌ ಟ್ರಾನ್ಸ್‌ಫಾರ್ಮರ್ ಕದಿಯಲು ಹೋಗಿದ್ದಾಗ ಗ್ಯಾಂಗ್‌ನ ಸದಸ್ಯನೊಬ್ಬನಿಗೆ ವಿದ್ಯುತ್‌ ಶಾಕ್‌ ಹೊಡೆದಿದ್ದು, ಆತನನ್ನು ಗಂಗಾ ನದಿಗೆ (Ganga River) ಎಸೆದು ಹೋದ ಘಟನೆ ಉತ್ತರ ಪ್ರದೇಶದ (Uttar Pradesh) ಕಾನ್ಪುರದ (Kanpur) ಕರ್ನಲ್ ಗಂಜ್‌ನಲ್ಲಿ ನಡೆದಿದೆ.

    ಅ.26 ರಂದು ಸ್ಕ್ರ್ಯಾಪ್ ಡೀಲರ್ ಹಿಮಾಂಶು ಹಾಗೂ ಆತನ ಗ್ಯಾಂಗ್‌ನ ಶಾನ್ ಅಲಿ, ಅಸ್ಲಾಂ, ವಿಶಾಲ್ ಮತ್ತು ರವಿ ಎಂಬವರು ಕಾನ್ಪುರದ ಗುರುದೇವ್ ಪ್ಯಾಲೇಸ್ ಬಳಿ ಟ್ರಾನ್ಸ್‌ಫಾರ್ಮರ್‌ನ್ನು ಕದಿಯಲು ನಿರ್ಧರಿಸಿದ್ದರು. ದರೋಡೆ ವೇಳೆ ಹಿಮಾಂಶುಗೆ ವಿದ್ಯುತ್ ತಂತಿ ತಗುಲಿ ಶಾಕ್‌ ಹೊಡೆದು ಗಂಭೀರ ಸ್ಥಿತಿ ತಲುಪಿದ್ದಾನೆ. ಇದರಿಂದ ಗಾಬರಿಗೊಂಡ ಇತರ ನಾಲ್ವರು ಕಳ್ಳರು ಆತನ ಕಾಲು ಮತ್ತು ಕೈಗಳನ್ನು ಕಟ್ಟಿ, ಜೀವಂತವಾಗಿರುವಾಗಲೇ ಶುಕ್ಲಗಂಜ್ ಸೇತುವೆಯಿಂದ ಗಂಗಾ ನದಿಗೆ ಎಸೆದಿದ್ದಾರೆ.

    ಹಿಮಾಂಶು ಮನೆಗೆ ಹಿಂತಿರುಗದಿದ್ದಾಗ, ಅವನ ತಾಯಿ ಮಂಜು ದೇವಿ ಅ.31 ರಂದು ಗ್ವಾಲ್ಟೋಲಿ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ನೀಡಿದ್ದರು. ದೂರಿನ ಅನ್ವಯ ಶಾನ್ ಅಲಿ, ಅಸ್ಲಾಂ ಮತ್ತು ವಿಶಾಲ್‌ನನ್ನು ಪೊಲೀಸರು (Police) ಬಂಧಿಸಿ ವಿಚಾರಣೆ ನಡೆಸಿದಾಗ ಈ ವಿಚಾರ ಬೆಳಕಿಗೆ ಬಂದಿತ್ತು.

    ವಿಚಾರಣೆ ವೇಳೆ ಆರೋಪಿಗಳು ದರೋಡೆಗೆ ಯತ್ನಿಸಿದ ಹಿಮಾಂಶುವಿಗೆ ವಿದ್ಯುತ್ ಶಾಕ್ ತಗುಲಿದ್ದು, ಆತನನ್ನು ಗಂಗಾ ನದಿಗೆ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗಳ ಹೇಳಿಕೆಗಳನ್ನು ಖಚಿತಪಡಿಸಲು, ಪೊಲೀಸರು ಟ್ರಾನ್ಸ್‌ಫಾರ್ಮರ್ ಕಳ್ಳತನದ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹಿಮಾಂಶುನನ್ನು ಆಟೋಗೆ ಹಾಕುತ್ತಿರುವುದು ಸಿಸಿ ಟಿವಿಯಲ್ಲಿ ದಾಖಲಾಗಿರುವುದು ಕಂಡುಬಂದಿದೆ. ಹಿಮಾಂಶು ಈ ಹಿಂದೆ ಟ್ರಾನ್ಸ್‌ಫಾರ್ಮರ್ ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದ.

    ಬಂಧಿತ ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಜೈಲಿಗೆ ಕಳುಹಿಸಲಾಗಿದೆ.

  • 25 ಲಕ್ಷ ಮೌಲ್ಯದ ಜಲ ಜೀವನ್ ಯೋಜನೆ ಪೈಪ್‌ ಸುಟ್ಟು ಹಾಕಿದ ಕಿಡಿಗೇಡಿಗಳು

    25 ಲಕ್ಷ ಮೌಲ್ಯದ ಜಲ ಜೀವನ್ ಯೋಜನೆ ಪೈಪ್‌ ಸುಟ್ಟು ಹಾಕಿದ ಕಿಡಿಗೇಡಿಗಳು

    ಚಿಕ್ಕಮಗಳೂರು:‌ ಕುಡಿಯುವ ನೀರಿನ ಯೋಜನೆಗೆ ತಂದು ಹಾಕಿದ್ದ ನೀರಿನ ಪೈಪ್‌ಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ಮೂಡಿಗೆರೆ (Mudigere) ತಾಲೂಕಿನ ತ್ರಿಪುರ ಗ್ರಾಮದಲ್ಲಿ ನಡೆದಿದೆ.

    ಬೆಂಕಿಯಿಂದ 25 ಲಕ್ಷ ರೂ. ಮೌಲ್ಯದ ನೀರಿನ ಪೈಪ್‌ಗಳು ಸುಟ್ಟು ಕರಕಲಾಗಿವೆ. ಪ್ರಧಾನ ಮಂತ್ರಿಯವರ ಕನಸಿನ ಯೋಜನೆಯಾದ ಹರ್‌ ಘರ್‌ ಜಲ್‌ ಯೋಜನೆಯಡಿ ನೀರಿನ ಪೈಪ್‌ಗಳನ್ನು ತಂದು ಹಾಕಲಾಗಿತ್ತು. ನವೆಂಬರ್ 4ರ ಸೋಮವಾರದಿಂದ ಕೆಲಸ ಕೂಡ ಆರಂಭವಾಗಬೇಕಿತ್ತು. ಆದರೆ ಕಿಡಿಗೇಡಿಗಳು ಪೈಪ್‌ಗಳಿಗೆ ಬೆಂಕಿ ಹಚ್ಚಿದ್ದು, ಎಲ್ಲಾ ಪೈಪ್‌ಗಳು ಸುಟ್ಟು ಕರಕಲಾಗಿವೆ.

    ಹರೀಶ್ ಎಂಬವರು ಯೋಜನೆಯ ಗುತ್ತಿಗೆ ಪಡೆದು ಪೈಪ್‌ಗಳನ್ನು ತಂದು ಹಾಕಿದ್ದರು. ಇದೀಗ 25 ಲಕ್ಷ ರೂ. ಮೌಲ್ಯದ ಪೈಪ್‌ಗಳು ಸುಟ್ಟು ಹೋಗಿದ್ದು, ಗುತ್ತಿಗೆದಾರ ಕಣ್ಣೀರಿಟ್ಟಿದ್ದಾರೆ.

    ಸ್ಥಳಕ್ಕೆ ಬಣಕಲ್‌ ಪೊಲೀಸರು (Police) ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ‌

  • ನೀರಿನ ಹೊಂಡದಲ್ಲಿ ಈಜಲು ತೆರಳಿದ್ದ ಯುವತಿ ಸೇರಿ ಮೂವರ ದುರ್ಮರಣ

    ನೀರಿನ ಹೊಂಡದಲ್ಲಿ ಈಜಲು ತೆರಳಿದ್ದ ಯುವತಿ ಸೇರಿ ಮೂವರ ದುರ್ಮರಣ

    ಚಿಕ್ಕಬಳ್ಳಾಪುರ: ನೀರಿನ ಹೊಂಡದಲ್ಲಿ ಈಜಲು (Swimming) ತೆರಳಿದ್ದ ಮೂವರು ನೀರುಪಾಲಾಗಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಕಂಬತ್ತನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಮೃತರನ್ನು ರಂಜಿತ್ (27) ಅಭಿಲಾಷ್ (21) ಹಾಗೂ ರಮ್ಯ (24) ಎಂದು ಗುರುತಿಸಲಾಗಿದೆ. ಮೂವರು ಬೆಂಗಳೂರಿನಲ್ಲಿ (Bengaluru) ವ್ಯಾಸಂಗ ಮಾಡುತ್ತಿದ್ದರು. ದೀಪಾವಳಿ ಹಬ್ಬಕ್ಕೆ ಸ್ವಗ್ರಾಮಕ್ಕೆ ಬಂದಿದ್ದರು. ಈ ವೇಳೆ ನೀರಿನ ಹೊಂಡದಲ್ಲಿ ಈಜಲು ಹೋಗಿದ್ದಾಗ ಈ ಅವಘಡ ಸಂಭವಿಸಿದೆ.

    ಸ್ಥಳೀಯರು, ಆಗ್ನಿಶಾಮಕ ದಳ ಸಿಬ್ಬಂದಿ ನೆರವಿನೊಂದಿಗೆ ಮೃತದೇಹಗಳನ್ನು ಹೊರ ತೆಗೆದು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಪೇರೇಸಂದ್ರ ಪೊಲೀಸರು (Police) ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

  • ರಾಜ್ಯೋತ್ಸವದಂದು ಕರಾಳ ದಿನ ಆಚರಿಸಿದ ಎಂಇಎಸ್ ಪುಂಡರ ವಿರುದ್ಧ ಕೇಸ್

    ರಾಜ್ಯೋತ್ಸವದಂದು ಕರಾಳ ದಿನ ಆಚರಿಸಿದ ಎಂಇಎಸ್ ಪುಂಡರ ವಿರುದ್ಧ ಕೇಸ್

    ಬೆಳಗಾವಿ: ಕರ್ನಾಟಕ ರಾಜ್ಯೋತ್ಸವಕ್ಕೆ (Karnataka Rajyotsava) ಪ್ರತಿಯಾಗಿ ಎಂಇಎಸ್ (MES) ನಡೆಸಿದ ಕರಾಳ ದಿನಾಚರಣೆ ಸಂಬಂಧ 45ಕ್ಕೂ ಹೆಚ್ಚು ಎಂಇಎಸ್ ನಾಯಕರು ಹಾಗೂ ಕಾರ್ಯಕರ್ತರ ವಿರುದ್ಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಜಿಲ್ಲಾಡಳಿತ ಕರಾಳ ದಿನಾಚರಣೆಗೆ ಅನುಮತಿ ನೀಡದಿದ್ದರೂ ಮಹಾರಾಷ್ಟ್ರ ಏಕೀಕರಣ ಸಮಿತಿಯ ಮನವಿಗೆ ಸ್ಪಂದಿಸಿ ಕಾರ್ಯಕರ್ತರು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದ್ದರು.  ಇದನ್ನೂ ಓದಿ: ನಾಲ್ಕು ಅನುಮಾನಗಳಿಗೆ ಕಾರಣವಾದ ಗುರುಪ್ರಸಾದ್ ಸಾವು!

    ಕರ್ನಾಟಕ ಸರ್ಕಾರವು ಕಾಲಕಾಲಕ್ಕೆ ನಾಯಕರು ಮತ್ತು ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸುವ ಮೂಲಕ ಗಡಿ ಒಡೆಯಲು ಪ್ರಯತ್ನಿಸುತ್ತಿದೆ. ಆದರೆ ಕರ್ನಾಟಕ ಸರ್ಕಾರವು ಈ ಬಾರಿ ಮರಾಠಿ ಭಾಷಿಕ ಪತ್ರಕರ್ತರು ಮತ್ತು ವಕೀಲರ ವಿರುದ್ಧವೂ ಪ್ರಕರಣಗಳನ್ನು ದಾಖಲಿಸಿದೆ ಎಂದು ಸಮಿತಿ ಈಗ ಆರೋಪ ಮಾಡಿದೆ.

     

    ಮಾಜಿ ಶಾಸಕ ಮನೋಹರ ಕಿಣೇಕರ, ಮಾಜಿ ಮೇಯರ್ ಮಾಲೋಜಿ ಅಷ್ಟೇಕರ, ಪ್ರಕಾಶ ಮರಗಾಳೆ, ರಮಾಕಾಂತ ಕೊಂಡುಸ್ಕರ್, ರಂಜಿತ್ ಚವ್ಹಾಣ, ಅಮರ ಯಳೂರಕರ, ಗಜಾನನ ಪಾಟೀಲ, ನೇತಾಜಿ ಜಾಧವ, ಅಂಕುಶ ಕೇಸರಕರ, ವಿಕಾಸ ಕಲಘಟಗಿ, ಮದನ ಬಾಮನೆ, ಸಚಿನ ಕೇಳೇಕರ, ಪ್ರಶಾಂತ ಭಾಮನೆ, ಪ್ರಶಾಂತ್, ಕಿರಣ್ ಗಾವಡೆ, ಮಹಾದೇವ ಪಾಟೀಲ, ಶುಭಂ ಶೆಲ್ಕೆ, ರೇಣು ಕಿಲ್ಲೇಕರ್, ಸರಸ್ವತಿ ಪಾಟೀಲ, ಸರಿತಾ ಪಾಟೀಲ, ಕಿರಣ ಹುದ್ದಾರ್, ದತ್ತಾ ಉಘಾಡೆ, ಶ್ರೀಕಾಂತ ಕದಂ, ಚಂದ್ರಕಾಂತ ಕೊಂಡುಸ್ಕರ, ಸಂತೋಷ ಕೃಷ್ಣಾಚೆ, ಗುಂಡು ಕದಂ, ಸುನೀಲ ಬಾಳೇಕುಂದ್ರಿ, ಗಣೇಶ ದಡ್ಡಿಕರ, ಪ್ರಕಾಶ ಶಿರೋಲ್ಕರ್, ಆರ್. ಎಂ. ಚೌಗುಲೆ, ಸುಧೀರ ಚವ್ಹಾಣ, ಮಲ್ಲಪ್ಪ ಪಾಟೀಲ, ನಾಗೇಶ ಪಾಟೀಲ, ಸೂರಜ್ ಯಳ್ಳೂರಕರ, ಶ್ರೀಕಾಂತ ಚವ್ಹಾಣ, ಸದಾ ಚವ್ಹಾಣ, ಕಿರಣ ಮೋದಗೇಕರ, ಶಿವಾಜಿ ಮಂಡೋಳಕರ ಸೇರಿದಂತೆ ಹಲವು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:ಆತ್ಮಹತ್ಯೆ ಮಾಡಿಕೊಂಡ ಪತಿ ಗುರುಪ್ರಸಾದ್‌ ನೋಡಲು ಕಣ್ಣೀರಿಡುತ್ತಲೇ ಧಾವಿಸಿದ 2ನೇ ಪತ್ನಿ

     

  • ಮಣಿಪುರ | ಇನ್ಸ್‌ಪೆಕ್ಟರ್‌ನನ್ನು ಗುಂಡಿಕ್ಕಿ ಹತ್ಯೆಗೈದ ಕಾನ್ಸ್‌ಟೇಬಲ್‌!

    ಮಣಿಪುರ | ಇನ್ಸ್‌ಪೆಕ್ಟರ್‌ನನ್ನು ಗುಂಡಿಕ್ಕಿ ಹತ್ಯೆಗೈದ ಕಾನ್ಸ್‌ಟೇಬಲ್‌!

    ಇಂಫಾಲ: ಪೊಲೀಸ್ (Police) ಪೇದೆಯೊಬ್ಬ ಸಬ್ ಇನ್ಸ್‌ಪೆಕ್ಟರ್ ಶ್ರೇಣಿಯ ಪೊಲೀಸ್ ಅಧಿಕಾರಿಯನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಮಣಿಪುರದ (Manipur) ಮೊಂಗ್‌ಬಂಗ್ ಗ್ರಾಮದಲ್ಲಿ ನಡೆದಿದೆ.

    ಶನಿವಾರ ಮೊಂಗ್‌ಬಂಗ್ ಪೊಲೀಸ್‌ ಪೋಸ್ಟ್‌ನಲ್ಲಿ ಕಾನ್‌ಸ್ಟೆಬಲ್ ಬಿಕ್ರಮ್‌ಜಿತ್ ಸಿಂಗ್ ಹಾಗೂ ಸಬ್ ಇನ್‌ಸ್ಪೆಕ್ಟರ್ ಷಹಜಹಾನ್ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಕಾನ್ಸ್‌ಟೇಬಲ್‌ ಸಬ್ ಇನ್‌ಸ್ಪೆಕ್ಟರ್ ಮೇಲೆ ಏಕಾಏಕಿ ಗುಂಡು ಹಾರಿಸಿದ್ದಾನೆ. ಇದರಿಂದ ಸಬ್ ಇನ್‌ಸ್ಪೆಕ್ಟರ್ ಷಹಜಹಾನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಕ್ಷಣ ಆರೋಪಿ ಕಾನ್‌ಸ್ಟೆಬಲ್‌ನನ್ನು ಇತರ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ವರ್ಷದಲ್ಲಿ ಮೂರು ಮನೆಯನ್ನು ಬದಲಿಸಿದ್ದ ಗುರುಪ್ರಸಾದ್‌

    ಜನಾಂಗೀಯ ಹಿಂಸಾಚಾರದಿಂದ ನಲಗುತ್ತಿರುವ ಮಣಿಪುರದ ಭಾಗದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಈ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ.

    ಜಿರಿಬಾಮ್‌ನಲ್ಲಿ ಈ ವರ್ಷ ಜೂನ್‌ನಲ್ಲಿ ಒಂದು ಸಮುದಾಯಕ್ಕೆ ಸೇರಿದ 59 ವರ್ಷದ ವ್ಯಕ್ತಿಯನ್ನು ಮತ್ತೊಂದು ಸಮುದಾಯದವರು ಹತ್ಯೆಗೈದಿದ್ದರು. ನಂತರ ಈ ಭಾಗದಲ್ಲಿ ಹಿಂಸಾಚಾರ ಸ್ಫೋಟಗೊಂಡಿತ್ತು. ಬಳಿಕ ಎರಡೂ ಕಡೆಯವರಿಂದ ಘರ್ಷಣೆ ನಡೆದಿತ್ತು. ಇದಾದ ನಂತರ ಸಾವಿರಾರು ಜನರನ್ನು ಪುನರ್ವಸತಿ ಶಿಬಿರಗಳಿಗೆ ಸ್ಥಳಾಂತರಿಸಲಾಗಿತ್ತು.

    ಕಳೆದ ವರ್ಷ ಮೇ ತಿಂಗಳಿನಿಂದ ಇಂಫಾಲ ಕಣಿವೆಯಲ್ಲಿ ಮೇಟಿ ಮತ್ತು ಕುಕಿ ಗುಂಪುಗಳ ನಡುವೆ ಜನಾಂಗೀಯ ಹಿಂಸಾಚಾರದ ನಡೆದಿತ್ತು. ಈ ಹಿಂಸಾಚಾರದಲ್ಲಿ 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಇದನ್ನೂ ಓದಿ: ಗುರುಪ್ರಸಾದ್ ಕೊನೆಯ ಚಾಟ್ ಏನಾಗಿತ್ತು?: ಸಂಬಂಧಿ ರವಿ ದೀಕ್ಷಿತ್ ಹೇಳೋದೇನು?

  • ತಲೆಮರೆಸಿಕೊಳ್ಳಲು 8 ಮೊಬೈಲ್‌, 20 ಸಿಮ್‌, 6 ನಕಲಿ ಹೆಸರು – ಆರೋಪಿಯನ್ನು 1,600 ಕಿ.ಮೀ ಬೆನ್ನಟ್ಟಿ ಹಿಡಿದ ಪೊಲೀಸರು!

    ತಲೆಮರೆಸಿಕೊಳ್ಳಲು 8 ಮೊಬೈಲ್‌, 20 ಸಿಮ್‌, 6 ನಕಲಿ ಹೆಸರು – ಆರೋಪಿಯನ್ನು 1,600 ಕಿ.ಮೀ ಬೆನ್ನಟ್ಟಿ ಹಿಡಿದ ಪೊಲೀಸರು!

    ನವದೆಹಲಿ: ಈ ವರ್ಷ ಮೇನಲ್ಲಿ ದಕ್ಷಿಣ ದೆಹಲಿಯ (Delhi) ಜಂಗ್‌ಪುರದಲ್ಲಿ ನಡೆದ ಖ್ಯಾತ ವೈದ್ಯರೊಬ್ಬರ ಕೊಲೆ ಪ್ರಕರಣದ ಮಾಸ್ಟರ್‌ಮೈಂಡ್‌ ಪೊಲೀಸರಿಂದ (Police) ತಪ್ಪಿಸಿಕೊಳ್ಳಲು ಎಂಟು ಮೊಬೈಲ್‌ ಫೋನ್‌ ಹಾಗೂ 20 ಸಿಮ್‌ ಕಾರ್ಡ್‌ಗಳನ್ನು ಬದಲಾಯಿಸಿದ್ದ. ಅಲ್ಲದೇ ಸುಮಾರು 6 ನಕಲಿ ಹೆಸರುಗಳನ್ನು ಬಳಸಿಕೊಂಡಿದ್ದ. ಆತನನ್ನು ಅಂತಿಮವಾಗಿ ಭಾರತ-ನೇಪಾಳ (Nepal ) ಗಡಿಯಲ್ಲಿ ಸುಮಾರು 1,600 ಕಿ.ಮೀ ವರೆಗೂ ಚೇಸ್‌ ಮಾಡಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬಂಧಿತ ಆರೋಪಿಯನ್ನು ವಿಷ್ಣುಸ್ವರೂಪ್ ಶಾಹಿ ಎಂದು ಗುರುತಿಸಲಾಗಿದೆ. ಅವನು ಹೋದಲ್ಲೆಲ್ಲಾ ನಕಲಿ ಗುರುತಿನ ಚೀಟಿ ಹಾಗೂ ನಕಲಿ ಹೆಸರನ್ನು ಬಳಸುತ್ತಿದ್ದ. ವಿಷ್ಣು ಸ್ವರೂಪ್ ಶಾಹಿ, ಶಕ್ತಿ ಸಾಯಿ, ಸತ್ಯ ಸಾಯಿ, ಸೂರ್ಯ ಪ್ರಕಾಶ್ ಶಾಹಿ, ಗಗನ್ ಓಲಿ ಮತ್ತು ಕೃಷ್ಣ ಶಾಹಿ ಎಂಬ ಹೆಸರಿನ ಗುರುತಿನ ಚೀಟಿಗಳನ್ನು ಆತ ಹೊಂದಿದ್ದ. ಆತನನ್ನು ಬಂಧಿಸುವಾಗ ಗಗನ್ ಒಲಿ ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಬಂಧಿತ ಆರೋಪಿ ಹಾಗೂ ಆತನ ಸಹಚರರು ವೈದ್ಯ ಯೋಗೀಶ್ ಚಂದ್ರ ಪಾಲ್ (63) ಅವರನ್ನು ಜಂಗ್‌ಪುರದ ಅವರ ಮನೆಯಲ್ಲಿ ಈ ವರ್ಷ ಮೇ ತಿಂಗಳಲ್ಲಿ ಹತ್ಯೆಗೈದಿದ್ದರು. ಕೊಲೆಗೂ ಮುನ್ನ ಆರೋಪಿಗಳು ಮನೆಯನ್ನು ಲೂಟಿ ಮಾಡಿದ್ದರು ಎಂದು ಅಪರಾಧ ವಿಭಾಗದ ಉಪ ಪೊಲೀಸ್ ಆಯುಕ್ತ ಸಂಜಯ್ ಸೇನ್ ಹೇಳಿದ್ದಾರೆ.

    ಮನೆಯ ಸುತ್ತ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಹಲವು ಆರೋಪಿಗಳನ್ನು ಪೊಲೀಸರು ಗುರುತಿಸಿದ್ದರು. ತನಿಖೆ ಸಂದರ್ಭದಲ್ಲಿ ಕೆಲವರನ್ನು ಬಂಧಿಸಲಾಗಿತ್ತು. ಪ್ರಕರಣದ ಮಾಸ್ಟರ್‌ ಮೈಂಡ್‌ ಯಾರು ಎಂದು ತನಿಖೆಗೆ ಇಳಿದಾಗ ಈತನ ಬಗ್ಗೆ ಮಾಹಿತಿ ಸಿಕ್ಕಿತ್ತು. ಈತ ಡೆಹ್ರಾಡೂನ್‌ನಲ್ಲಿ ತಲೆ ಮರೆಸಿಕೊಂಡಿದ್ದ, ಪೊಲೀಸರು ಅಲ್ಲಿಗೆ ತೆರಳುವ ಮುನ್ನ ಅಲ್ಲಿಂದ ಪರಾರಿಯಾಗಿದ್ದ. ಬಳಿಕ ನೇಪಾಳಕ್ಕೆ ಪರಾರಿಯಾಗಲು ಯೋಜಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಅಲ್ಲಿಂದ ವಿಷ್ಣುಸ್ವರೂಪ್ ಶಾಹಿ ಭಾರತ-ನೇಪಾಳ ಗಡಿಯತ್ತ ಧಾವಿಸುತ್ತಿದ್ದಂತೆ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಮಾಹಿತಿ ಸಿಕ್ಕಿತ್ತು. ಪೊಲೀಸರ ತಂಡವು ತಂಡವು 24 ಗಂಟೆಗಳ ಕಾಲ 1,600 ಕಿಮೀ ಆತನ ಬೆನ್ನಟ್ಟಿ, ಶನಿವಾರ ಬೆಳಗ್ಗೆ ಗಡಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆತನನ್ನು 2018 ಮತ್ತು 2020ರಲ್ಲಿ ಪೊಲೀಸರು ಕೆಲವು ಪ್ರಕರಣ ಸಂಬಂಧ ಬಂಧಿಸಿದ್ದರು.

  • ಚಿಕನ್ ನೀಡದ್ದಕ್ಕೆ ಹೋಟೆಲ್ ಸಪ್ಲೈಯರ್‌ನನ್ನು ಹತ್ಯೆಗೈದ ಯುವಕರು!

    ಚಿಕನ್ ನೀಡದ್ದಕ್ಕೆ ಹೋಟೆಲ್ ಸಪ್ಲೈಯರ್‌ನನ್ನು ಹತ್ಯೆಗೈದ ಯುವಕರು!

    ಚಂಡೀಗಢ: ಚಿಕನ್‌ ನೀಡಿಲ್ಲ ಎಂದು ಹೋಟೆಲ್‌ನ ಸಪ್ಲೈಯರ್‌ನನ್ನು ಯುವಕರ ಗುಂಪೊಂದು ಹತ್ಯೆಗೈದ ಘಟನೆ ಚಂಡೀಗಢದಲ್ಲಿ (
    Chandigarh) ನಡೆದಿದೆ.

    ಹತ್ಯೆಗೀಡಾದ ವ್ಯಕ್ತಿಯನ್ನು ಜಸ್ಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಹೋಟೆಲ್‌ನ ಮತ್ತೋರ್ವ ಸಿಬ್ಬಂದಿಗೆ ಗಾಯಗೊಂಡಿದ್ದಾರೆ. ಗಾಯಗೊಂಡ ವ್ಯಕ್ತಿಯನ್ನು ಆಕಾಶ್ ಎಂದು ಗುರುತಿಸಲಾಗಿದೆ. ನಾಲ್ವರು ಯುವಕರು ರಾತ್ರಿ 11 ಗಂಟೆ ಸುಮಾರಿಗೆ ಹೋಟೆಲ್‌ಗೆ ಬಂದಿದ್ದರು. ಈ ವೇಳೆ ಚಿಕನ್ ಬೇಕು ಎಂದು ಕೇಳಿದ್ದು, ಹೋಟೆಲ್‌ ಮುಚ್ಚುವ ಸಮಯವಾಯ್ತು ಎಂದು ಅವರಿಗೆ ಹೋಟೆಲ್‌ ಸಿಬ್ಬಂದಿ ಹೇಳಿದ್ದಾರೆ. ಈ ವೇಳೆ ಗಲಾಟೆ ನಡೆಸಿ ಗುಂಪು ಅಲ್ಲಿಂದ ತೆರಳಿದೆ.

    ಸುಮಾರು 45 ನಿಮಿಷಗಳ ನಂತರ ಯುವಕರ ಗುಂಪು, ಕ್ರಿಕೆಟ್ ವಿಕೆಟ್ ಮತ್ತು ಹರಿತವಾದ ಆಯುಧಗಳನ್ನು ತಂದು ಹೋಟೆಲ್‌ನಲ್ಲಿದ್ದ ಜಸ್ಪ್ರೀತ್ ಮತ್ತು ಆಕಾಶ್ ಮೇಲೆ ದಾಳಿ ನಡೆಸಿದ್ದಾರೆ. ಇದರಿಂದ ಇಬ್ಬರೂ ತೀವ್ರ ಗಾಯಗೊಂಡಿದ್ದಾರೆ. ಬಳಿಕ ಆಕಾಶ್ ಹೋಟೆಲ್‌ ಮಾಲೀಕರ ಮಗನಿಗೆ ಕರೆ ಮಾಡಿದ್ದು, ಆತ ಬಂದು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆಸ್ಪತ್ರೆಯಲ್ಲಿ ಜಸ್ಪ್ರೀತ್‌ ಸಾವಿಗೀಡಾಗಿದ್ದಾನೆ ಎಂದು ಪೊಲೀಸರು (Police) ತಿಳಿಸಿದ್ದಾರೆ.

    ಈ ಸಂಬಂಧ ಅಪ್ರಾಪ್ತ ಬಾಲಕ ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಬಂಧಿತರನ್ನು ಸಾಗರ್, ಜೋಗಿಂದರ್, ಗುರ್ಮೀತ್, ವೀರು ಮತ್ತು ರಾಜಿ ಎಂದು ಗುರುತಿಸಲಾಗಿದೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

  • ಬೆಂಗಳೂರು| ಇಸ್ಪೀಟ್‌ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರ ಮೇಲೆ ಪೆಪ್ಪರ್‌ ಸ್ಪ್ರೇ

    ಬೆಂಗಳೂರು| ಇಸ್ಪೀಟ್‌ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರ ಮೇಲೆ ಪೆಪ್ಪರ್‌ ಸ್ಪ್ರೇ

    ಬೆಂಗಳೂರು: ಇಸ್ಪೀಟ್‌ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರ ಮೇಲೆಯೇ ಪೆಪ್ಪರ್‌ ಸ್ಪ್ರೇ ದಾಳಿ ಮಾಡಿರುವ ಘಟನೆ ನಗರದ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ನವಿಲುನಗರದ ಇಟ್ಟಿಗೆ ಗೂಡಿನಲ್ಲಿ ನಡೆದಿದೆ.

    ರೌಡಿಶೀಟರ್ ಕ್ಯಾಟ್ ರಾಜನ ಸಹಚರರು ಇಸ್ಪೀಟ್ ಅಡ್ಡೆ ನಡೆಸುತ್ತಿದ್ದ ಆರೋಪ ಕೇಳಿಬಂದಿತ್ತು. ಮಾಹಿತಿ ಮೇರೆಗೆ ಇಂದು ಸಂಜೆ ಎಸಿಪಿ ಚಂದನ್ & ಟೀಂ ದಾಳಿ ನಡೆಸಿತು. ಸುಮಾರು 30 ಜನ ಲಕ್ಷ ಲಕ್ಷ ಹಣ ಬಾಜಿ ಕಟ್ಟಿ ಇಸ್ಪೀಟ್ ಆಡುತ್ತಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

    ಇಸ್ಪೀಟ್ ಅಡ್ಡೆ ಮೇಲಿನ ದಾಳಿ ವೇಳೆ ಪೊಲೀಸರ ಮೇಲೆ ಆರೋಪಿಗಳು ಪೆಪ್ಪರ್ ಸ್ಪ್ರೇ ಹೊಡೆದಿದ್ದಾರೆ. ಆ ಬಳಿಕ ಮಚ್ಚಿನಿಂದ ಹಲ್ಲೆಗೆ ಮುಂದಾಗಿದ್ದಾರೆ. ಇನ್ನೂ ಕೆಲವರು ಸ್ಥಳದಲ್ಲಿ ಹಣದ ಸಮೇತ ಎಸ್ಕೇಪ್ ಆಗಿದ್ದಾರೆ. ಸದ್ಯ ಇಸ್ಪೀಟ್ ಆಡುತ್ತಿದ್ದ 13 ಆರೋಪಿಗಳನ್ನು ಬಂಧಿಸಲಾಗಿದೆ.

    3.80 ಲಕ್ಷ ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಗರ್ಲ್‌ಫ್ರೆಂಡ್ಸ್‌ ಜೊತೆ ಸೇರಿ ಪತ್ನಿಗೆ ಅನಸ್ತೇಷಿಯಾ ನೀಡಿ ಹತ್ಯೆ – ಮೂವರು ಅರೆಸ್ಟ್‌

    ಗರ್ಲ್‌ಫ್ರೆಂಡ್ಸ್‌ ಜೊತೆ ಸೇರಿ ಪತ್ನಿಗೆ ಅನಸ್ತೇಷಿಯಾ ನೀಡಿ ಹತ್ಯೆ – ಮೂವರು ಅರೆಸ್ಟ್‌

    ಭುವನೇಶ್ವರ: ವ್ಯಕ್ತಿಯೊಬ್ಬ ತನ್ನ ಇಬ್ಬರು ಗೆಳತಿಯರ ಜೊತೆ ಸೇರಿ ಪತ್ನಿಯನ್ನೇ (Wife) ಹತ್ಯೆಗೈದ ಘಟನೆ ಒಡಿಶಾದ (Odisha) ಭುವನೇಶ್ವರದಲ್ಲಿ ನಡೆದಿದೆ.

    ತನ್ನ ಅನೈತಿಕ ಸಂಬಂಧದ ಬಗ್ಗೆ ಪತ್ನಿಗೆ ತಿಳಿದ ಬಳಿಕ ಆತ ತನ್ನ ಗೆಳತಿಯರ ಸಹಾಯದಿಂದ ಪತ್ನಿಯನ್ನು ಕೊಂದಿದ್ದಾನೆ. ಈ ಸಂಬಂಧ ಪೊಲೀಸರು (Police) ಕೊಲೆಯಾದ ಮಹಿಳೆಯ ಪತಿ ಹಾಗೂ ಆತನ ಗೆಳತಿಯರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪ್ರದ್ಯುಮ್ನ ಕುಮಾರ್ ದಾಸ್‌ ಎಂದು ಗುರುತಿಸಲಾಗಿದೆ.

    ಕೊಲೆಯಾದ ಮಹಿಳೆಯನ್ನು ಸುಭಾಶ್ರೀ ಎಂದು ಗುರುತಿಸಲಾಗಿದೆ. ಆಕೆ ಅಕ್ಟೋಬರ್ 28 ರಂದು ಸಾವನ್ನಪ್ಪಿದ್ದಳು. ಈ ವೇಳೆ ಪತಿ ಆಕೆಯ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿ, ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಹೇಳಿಕೊಂಡಿದ್ದ. ಆಸ್ಪತ್ರೆಯಲ್ಲಿ ಆಕೆ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದರು.

    ಬಳಿಕ ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಕೈಗಳು ಮತ್ತು ಕುತ್ತಿಗೆಯ ಮೇಲೆ ಪೆಟ್ಟಾಗಿರುವುದು ಬೆಳಕಿಗೆ ಬಂದಿತ್ತು. ಅಲ್ಲದೇ ಮಿತಿಮೀರಿದ ಅನಸ್ತೇಷಿಯಾ ನೀಡಲಾಗಿತ್ತು ಎಂದು ತಿಳಿದು ಬಂದಿತ್ತು.

    ಮರಣೋತ್ತರ ಪರೀಕ್ಷೆಯ ಆಧಾರದ ಮೇಲೆ ಮಹಿಳೆಯ ಪತಿಯನ್ನು ವಿಚಾರಣೆ ನಡೆಸಿದಾಗ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಈ ಸಂಬಂಧ ಮೂವರನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ.

    ಆರೋಪಿ ದಾಸ್ ಇಬ್ಬರು ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಈತನ ಅನೈತಿಕ ಸಂಬಂಧ ಪತ್ನಿಗೆ ತಿಳಿದು ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಕಳೆದ ಎಂಟು ತಿಂಗಳಿಂದ ಸುಭಾಶ್ರೀ ಪೋಷಕರ ಮನೆಯಲ್ಲಿ ವಾಸವಾಗಿದ್ದರು ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ.

    ಅ.28 ರಂದು, ದಾಸ್ ತನ್ನ ಗೆಳತಿಯ ಮನೆಯಲ್ಲಿ ಸುಭಾಶ್ರೀ ಅವರನ್ನು ಭೇಟಿಯಾಗುವಂತೆ ತಿಳಿಸಿದ್ದ. ಭೇಟಿಯಾದ ವೇಳೆ, ಸ್ನೇಹಿತನ ಫಾರ್ಮಸಿಯಿಂದ ತಂದಿದ್ದ ಅರಿವಳಿಕೆ ಚುಚ್ಚುಮದ್ದನ್ನು ನೀಡಿ ಆಕೆಯನ್ನು ಹತ್ಯೆ ಮಾಡಲಾಗಿತ್ತು.

  • ಕುಂದಾನಗರಿಯಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ: 2200ಕ್ಕೂ ಅಧಿಕ ಪೊಲೀಸರ ನಿಯೋಜನೆ!

    ಕುಂದಾನಗರಿಯಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ: 2200ಕ್ಕೂ ಅಧಿಕ ಪೊಲೀಸರ ನಿಯೋಜನೆ!

    ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ (Belagavi) ಅದ್ಧೂರಿ ಕನ್ನಡ ರಾಜ್ಯೋತ್ಸವ ಹಿನ್ನೆಲೆ ರಾಜ್ಯೋತ್ಸವ ಮೆರವಣಿಗೆ ಭದ್ರತೆಗಾಗಿ 2,200ಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದೆ ಎಂದು ಡಿಸಿಪಿ ರೋಹನ್ ಜಗದೀಶ್ (DCP Rohan Jagadish) ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯೋತ್ಸವದ ಭದ್ರತೆಗಾಗಿ ಆಯಕಟ್ಟಿನ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಕಣ್ಗಾವಲು ನಿಗಾವಹಿಸಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳಲಾಗಿದೆ ಎಂದರು‌.ಇದನ್ನೂ ಓದಿ: ದೀಪಾವಳಿಯಲ್ಲಿ ಪಟಾಕಿ ಸಿಡಿಸುವುದರ ಮಹತ್ವವೇನು?

    ಬೆಳಗಾವಿ ಕಮಿಷನರೇಟ್ ವ್ಯಾಪ್ತಿಯಲ್ಲಿನ 800 ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಹೊರ ಜಿಲ್ಲೆಯಿಂದ ಮೂವರು ಎಸಿಪಿ ದರ್ಜೆಯ ಅಧಿಕಾರಿಗಳು 8 ಎಸಿಪಿಗಳು, 25 ಸಿಪಿಐಗಳು, 55 ಪಿಎಸ್ಐಗಳನ್ನು ನಿಯೋಜನೆ ಮಾಡಲಾಗಿದೆ.

    ಅಲ್ಲದೇ 130 ಎಎಸೈಗಳು, 1,300 ಪೊಲೀಸ್ ಕಾನ್‌ಸ್ಟೇಬಲ್‌ಗಳು ಭದ್ರತೆಗೆ ನಿಯೋಜನೆ ಮಾಡಿದ್ದು, ಜನರ ಚಲನವಲನಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಶಾಂತಿಯುತ ಕರ್ನಾಟಕ ರಾಜ್ಯೋತ್ಸವಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಬೆನ್ನುನೋವಿನಿಂದ ದಿನವಿಡೀ ವಿಶ್ರಾಂತಿ – ಇಂದು ದರ್ಶನ್ ಆಸ್ಪತ್ರೆಗೆ ದಾಖಲು?