Tag: police

  • ಸಮಾಧಿಯಿಂದ ಎದ್ದು ಬಂದು ದೂರು ಕೊಟ್ಟ ಮಹಿಳೆ – ಸುಪಾರಿ ಕೊಟ್ಟಿದ್ದ ಮಹಿಳೆ ಸೇರಿ ಕಿಡ್ನಾಪರ್ಸ್ ಅರೆಸ್ಟ್

    ಸಮಾಧಿಯಿಂದ ಎದ್ದು ಬಂದು ದೂರು ಕೊಟ್ಟ ಮಹಿಳೆ – ಸುಪಾರಿ ಕೊಟ್ಟಿದ್ದ ಮಹಿಳೆ ಸೇರಿ ಕಿಡ್ನಾಪರ್ಸ್ ಅರೆಸ್ಟ್

    – ಗಂಡನ ಜೊತೆ ಅನೈತಿಕ ಸಂಬಂಧ ಹೊಂದಿದ್ದಕ್ಕೆ ಯೋಗ ಶಿಕ್ಷಕಿ ಕಿಡ್ನಾಪ್‍ಗೆ ಸುಪಾರಿ

    ಚಿಕ್ಕಬಳ್ಳಾಪುರ: ತನ್ನ ಗಂಡನ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಅಂತ ಯೋಗ ಶಿಕ್ಷಕಿಯ ಕಿಡ್ನಾಪ್ ಮಾಡಿ ಕೊಲೆ ಮಾಡಲು ಸುಪಾರಿ ನೀಡಿದ್ದ ಮಹಿಳೆ ಸೇರಿದಂತೆ 6 ಮಂದಿ ಅಪಹರಣಕಾರರನ್ನ ಚಿಕ್ಕಬಳ್ಳಾಪುರ  (Chikkaballapura) ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.

    ಅಂದಹಾಗೆ ಬೆಂಗಳೂರು (Bengaluru) ಮೂಲದ ಸುಲೋಚನಾ ಕಿಡ್ನಾಪ್ (Kidnap) ಆಗಿದ್ದ ಮಹಿಳೆ, ಇನ್ನೂ ಕಿಡ್ನಾಪ್‌ಗೆ ಸುಪಾರಿ ನೀಡಿದ್ದು ಬಿಂದು ಎಂಬಾಕೆ. ಅಸಲಿಗೆ ಬಿಂದು ಪತಿ ಸಂತೋಷ್ ಕುಮಾರ್ ಜೊತೆ ಯೋಗ ಶಿಕ್ಷಕಿ ಸುಲೋಚನಾ ಅನೈತಿಕ ಸಂಬಂಧ ಹೊಂದಿದ್ದಾಳೆ ಅಂತ ಬಿಂದು ಸತೀಶ್ ರೆಡ್ಡಿ ಎಂಬಾತನಿಗೆ ಕೊಲೆ ಮಾಡಲು ಸುಪಾರಿ ನೀಡಿದ್ದಳಂತೆ. ಸುಪಾರಿ ಮೇರೆಗೆ ಸತೀಶ್ ರೆಡ್ಡಿ ಸುಲೋಚನಾ ಬಳಿ ಯೋಗ ಕಲಿಯುವ ನೆಪದಲ್ಲಿ ಆಕಯೆನ್ನ ಪರಿಚಯ ಮಾಡಿಕೊಂಡು ಸಲುಗೆ ಬೆಳೆಸಿಕೊಂಡಿದ್ದನಂತೆ. ಇನ್ನೂ ಆಕ್ಟೋಬರ್ 23 ರಂದು ಸುಲೋಚನಾಗೆ ಗನ್ ಶೂಟ್ ಟ್ರೈನಿಂಗ್ (Shoot Training) ಕೊಡುವುದಾಗಿ ಹೇಳಿ ನಂಬಿಸಿ ಸತೀಶ್ ರೆಡ್ಡಿ ಮನೆಯಿಂದ ಕರೆದುಕೊಂಡು ಹೋಗಿದ್ದಾನೆ.

    ಸತೀಶ್ ರೆಡ್ಡಿ ತನ್ನ ಸಹಚರರಾದ ನಾಗೇಂದ್ರ ರೆಡ್ಡಿ, ರಮಣಾರೆಡ್ಡಿ, ರವಿಚಂದ್ರನ ಜೊತೆ ಸೇರಿ ಸುಲೋಚನಾ ಕಾರಿನಲ್ಲಿ ಹೊರಟಿದ್ದು, ಇಡೀ ದಿನ ಬೆಂಗಳೂರಿನ ಹಲವು ಕಡೆ ಇಡಿ ಸುತ್ತಾಡಿ ಕೊನೆಗೆ ರಾತ್ರಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಧನಮಿಟ್ಟೇನಹಳ್ಳಿ ಬಳಿಯ ಅರಣ್ಯ ಪ್ರದೇಶದಲ್ಲಿ ಸುಲೋಚನಾಳನ್ನ ಕಾರಿನಿಂದ ಕೆಳೆಗೆ ಇಳಿಸಿ ಆಕೆಯ ಮೇಲೆ ಹಲ್ಲೆ ಮಾಡಿ ಅರೆಬೆತ್ತಲೆಗೊಳಿಸಿ ಲೈಂಗಿಕ ದೌರ್ಜನ್ಯ ನಡೆಸಿ ಕೊನೆಗೆ ಕಾರಿನಲ್ಲಿದ್ದ ಚಾರ್ಜರ್ ವೈರ್ ನಿಂದ ಕುತ್ತಿಗೆಗೆ ಬಲವಾಗಿ ಬಿಗಿದು ಕೊಲೆ ಮಾಡಲು ಯತ್ನಿಸಿದ್ದಾರೆ. ಆದ್ರೆ ಯೋಗ ಶಿಕ್ಷಕಿಯಾಗಿದ್ದ ಸುಲೋಚನಾ ಕುತ್ತಿಗೆ ಬಿಗಿದಾಗ ನಾಲಿಗೆ ಹೊರ ಚಾಚಿ ಸತ್ತಂತೆ ನಾಟಕ ಮಾಡಿ ಉಸಿರು ಬಿಗಿದು ಇಟ್ಟುಕೊಂಡಿದ್ದಾಳಂತೆ.

    ಈ ವೇಳೆ ಸುಲೋಚನಾ ಸತ್ತಿದ್ದಾಳೆ ಅಂತ ಅಲ್ಲಿಂದ ಅಪಹರಣಕಾರರರು ಎಸ್ಕೇಪ್ ಆಗಿದ್ದಾರೆ. ನಂತರ ಸುಲೋಚನಾ ಬೆಳಿಗ್ಗೆ ಎದ್ದು ಬಂದು ಧನಮಿಟ್ಟೇನ ಹಳ್ಳಿಯಲ್ಲಿ ಸ್ಥಳೀಯರ ಮನೆಗೆ ಹೋಗಿ ಘಟನೆ ವಿವರಿಸಿ, ದಿಬ್ಬೂರಹಳ್ಳಿ ಪೊಲೀಸರನ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿ ದೂರು ನೀಡಿದ್ದಳು. ದೂರಿನನ್ವಯ ಪೊಲೀಸರು ಸುಪಾರಿ ನೀಡಿದ್ದ ಬಿಂದು ಹಾಗೂ ಕಿಡ್ನಾಪ್ ಮಾಡಿದ್ದ ಸರ್ತೀಶ್ ರೆಡ್ಡಿ, ನಾಗೇಂದ್ರ ರೆಡ್ಡಿ, ರಮಣಾರೆಡ್ಡಿ, ರವಿ ಸೇರಿಂದತೆ ಕಿಡ್ನಾಪ್ ಮಾಡಲು ಕಳ್ಳತನ ಮಾಡಿದ್ದ ಕಾರು ವಶಕ್ಕೆ ಪಡೆದು ಕಳ್ಳತನ ಮಾಡಿದ್ದ ಅಪ್ರಾಪ್ತ ಬಾಲಕನನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

  • ಶಿವಮೊಗ್ಗ | ಎಟಿಎಂ, ಬ್ಯಾಂಕ್‍ಗಳಿಗೆ ಭದ್ರತಾ ಸಿಬ್ಬಂದಿ ನೇಮಕಕ್ಕೆ ಎಸ್‍ಪಿ ಸೂಚನೆ

    ಶಿವಮೊಗ್ಗ | ಎಟಿಎಂ, ಬ್ಯಾಂಕ್‍ಗಳಿಗೆ ಭದ್ರತಾ ಸಿಬ್ಬಂದಿ ನೇಮಕಕ್ಕೆ ಎಸ್‍ಪಿ ಸೂಚನೆ

    ಶಿವಮೊಗ್ಗ: ಇತ್ತೀಚೆಗೆ ಹೊನ್ನಾಳ್ಳಿಯಲ್ಲಿ ನಡೆದಿದ್ದ ಬ್ಯಾಂಕ್ (Bank) ಕಳ್ಳತನದ ಬಳಿಕ ಪೊಲೀಸ್‌ (Police) ಇಲಾಖೆ ಎಚ್ಚೆತ್ತಿದೆ. ಬ್ಯಾಂಕ್‌ ಹಾಗೂ ಎಟಿಎಂಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಿ, ನುರಿತ ಭದ್ರತಾ ಸಿಬ್ಬಂದಿಯನ್ನು ನೇಮಿಸುವಂತೆ ಎಸ್‌ಪಿ ಮಿಥುನ್ ಕುಮಾರ್ ಸೂಚನೆ ನೀಡಿದ್ದಾರೆ.

    ಶಿವಮೊಗ್ಗದ (Shivamogga) ಡಿಎಆರ್ ಸಭಾಂಗಣದಲ್ಲಿ 90ಕ್ಕೂ ಹೆಚ್ಚು ಬ್ಯಾಂಕ್‌ಗಳ ಅಧಿಕಾರಿಗಳೊಂದಿಗೆ ಅವರು ಸಭೆ ನಡೆಸಿದರು. ಈ ವೇಳೆ ನ್ಯಾಮತಿಯಲ್ಲಿ ಇತ್ತೀಚೆಗೆ ಬ್ಯಾಂಕ್ ಲೂಟಿಯಾದ ಉದಾಹರಣೆ ನೀಡಿ, ಭದ್ರತಾ ವ್ಯವಸ್ಥೆ ಇಲ್ಲದ ಬ್ಯಾಂಕ್‌ನಲ್ಲಿ ಕಳುವಾಗಿದೆ. ಅದಕ್ಕಾಗಿ ಬ್ಯಾಂಕ್ ಹಾಗೂ ಎಟಿಎಂ ಬಳಿ ಭದ್ರತಾ ಸಿಬ್ಬಂದಿ ನೇಮಿಸಿಕೊಳ್ಳಬೇಕು. ಬ್ಯಾಂಕ್ ಮತ್ತು ಎಟಿಎಂಗೆ ಸಿಸಿಟಿವಿ ಅಳವಡಿಕೆಗೆ ಹಣ ಬರುವುದಿಲ್ಲ ಎಂದರೆ ಅದಕ್ಕೆ ಪೊಲೀಸ್ ಇಲಾಖೆ ಜವಬ್ದಾರಿಯಲ್ಲ ಎಂದು ಎಚ್ಚರಿಸಿದರು.

    ಹೆಚ್ಚುವರಿ ಎಸ್‌ಪಿ ಅನಿಲ್ ಕುಮಾರ್ ಭೂಮರೆಡ್ಡಿ ಮಾತನಾಡಿ, ಎಟಿಎಂ ಲೂಟಿಗಳಲ್ಲಿ ಸುರಕ್ಷತೆಯ ಕೊರತೆಗಳು ಎದ್ದು ಕಾಣುತ್ತಿದೆ. ವಿನೋಬ ನಗರದಲ್ಲಿ ಎಟಿಎಂನ್ನು ಜೆಸಿಬಿ ಮೂಲಕ ಲೂಟಿ ಮಾಡಲು ಯತ್ನಿಸಿದ ಪ್ರಕರಣ ಇತ್ತೀಚಿಗೆ ನಡೆದಿತ್ತು. ಅಲ್ಲದೇ ಬ್ಯಾಂಕ್‌ನಲ್ಲಿಯೇ ಕಳ್ಳತನ ನಡೆದಿತ್ತು. ಕೆಲ ಬ್ಯಾಂಕ್‌ನವರಿಗೆ ನಮ್ಮ ಬ್ಯಾಂಕ್‌ನಲ್ಲಿ ಇದುವರೆಗೂ ಕಳುವಾಗಿಲ್ಲ ಎಂಬ ಭಾವನೆ ಇದೆ. ಈ ವಿಚಾರದಲ್ಲಿ ನಿರ್ಲಕ್ಷ್ಯ ಮಾಡದೇ ಅರ್ಹ ಭದ್ರತಾ ಸಿಬ್ಬಂದಿಯನ್ನು ನೇಮಿಸಬೇಕು ಎಂದು ತಿಳಿಸಿದ್ದಾರೆ.

    ರಜಾದಿನಗಳಲ್ಲಿ ಕೆಲವು ಬ್ಯಾಂಕ್‌ಗಳಲ್ಲಿ ಕಳ್ಳತನ ನಡೆದಿದೆ. ರಜೆ ಇರುವ ಸಂದರ್ಭದಲ್ಲಿ ಸಿಸಿ ಟಿವಿಯನ್ನ ಗಂಟೆಗೆ ಒಮ್ಮೆ ತಪಾಸಣೆ ಮಾಡಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

  • ಬೆಂಗಳೂರು | ಕುಡಿದ ಮತ್ತಲ್ಲಿ ಯುವತಿಗೆ ನಾಲ್ಕೈದು ಇಂಜೆಕ್ಷನ್ ಕೊಟ್ಟ ವೈದ್ಯ!

    ಬೆಂಗಳೂರು | ಕುಡಿದ ಮತ್ತಲ್ಲಿ ಯುವತಿಗೆ ನಾಲ್ಕೈದು ಇಂಜೆಕ್ಷನ್ ಕೊಟ್ಟ ವೈದ್ಯ!

    ಬೆಂಗಳೂರು: ಕುಡಿದ ಮತ್ತಲ್ಲಿ ವೈದ್ಯ (Doctor) ಹಾಗೂ ನರ್ಸ್ ಸೇರಿ ಆಸ್ಪತ್ರೆಗೆ ಬಂದಿದ್ದ ಯುವತಿಗೆ ನಾಲ್ಕೈದು ಇಂಜೆಕ್ಷನ್ ಕೊಟ್ಟ ಘಟನೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಆಸ್ಪತ್ರೆಯಲ್ಲಿ (Hospital) ನಡೆದಿದೆ.

    ನ.3ರಂದು ಯುವತಿಯೊಬ್ಬಳು ತೀವ್ರ ಜ್ವರದಿಂದ ಆಸ್ಪತ್ರೆಗೆ ಹೋಗಿದ್ದಳು. ಈ ವೇಳೆ ಡಾ.ಪ್ರದೀಪ್ ಹಾಗೂ ನರ್ಸ್ ಮಹೇಂದ್ರ ಕುಡಿದ ಮತ್ತಿನಲ್ಲಿದ್ದರು. ಈ ವೇಳೆ ಯುವತಿಗೆ ಮಹೇಂದ್ರ ಇಂಜೆಕ್ಷನ್‌ ನೀಡಿದ್ದಾನೆ. ಬಳಿಕ ಡಾ.ಪ್ರದೀಪ್‌ನನ್ನು ಕರೆದು ಚಿಕಿತ್ಸೆ ಕೊಡುವಂತೆ ಹೇಳಿದ್ದಾನೆ. ಡಾ.ಪ್ರದೀಪ್ ಇಂಜೆಕ್ಷನ್ ಹಿಡಿದು ಯುವತಿಯ ಮೈಕೈಗೆ 4-5 ಬಾರಿ ಇಂಜೆಕ್ಷನ್ ಚುಚ್ಚಿದ್ದಾನೆ. ಅಲ್ಲದೇ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.

    ತಕ್ಷಣ ಯುವತಿಯ ಪೋಷಕರು ಕುಡಿದು ಬಂದಿದ್ದೀರಾ ಎಂದು ವೈದ್ಯ ಹಾಗೂ ನರ್ಸ್‌ ಮಹೇಂದ್ರನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ವೈದ್ಯ ಸ್ಥಳದಿಂದ ಪರಾರಿಯಾಗಿದ್ದಾನೆ.

    ಈ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಗೆ‌ ಯುವತಿ ದೂರು ನೀಡಿದ್ದಾಳೆ. ಈ ಬಗ್ಗೆ ಪೊಲೀಸರು ಎನ್‍ಸಿಆರ್ ದಾಖಲು ಮಾಡಿಕೊಂಡಿದ್ದಾರೆ.

  • ಇನ್ಶೂರೆನ್ಸ್ ಹಣಕ್ಕಾಗಿ ಸಂಬಂಧಿಯ ಹತ್ಯೆ – 24 ಗಂಟೆಯಲ್ಲೇ ಆರೋಪಿಗಳು ಅಂದರ್

    ಇನ್ಶೂರೆನ್ಸ್ ಹಣಕ್ಕಾಗಿ ಸಂಬಂಧಿಯ ಹತ್ಯೆ – 24 ಗಂಟೆಯಲ್ಲೇ ಆರೋಪಿಗಳು ಅಂದರ್

    ದಾವಣಗೆರೆ: ಇನ್ಶೂರೆನ್ಸ್ (Insurance) ಹಣಕ್ಕಾಗಿ (Money) ಸಂಬಂಧಿಯನ್ನೇ ಹತ್ಯೆಗೈದಿದ್ದ ನಾಲ್ವರು ಆರೋಪಿಗಳನ್ನು ಪ್ರಕರಣ ನಡೆದ 24 ಗಂಟೆಗಳಲ್ಲೇ ದಾವಣಗೆರೆಯ (Davanagre) ಅಜಾದ್ ನಗರ ಪೊಲೀಸರು (Police) ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳನ್ನು ಬಂಬೂಬಜಾರ್‌ನ ಗಣೇಶ್‌ (24), ಹರಳಯ್ಯ ನಗರದ ಅನಿಲ್ (18) ಹಳೆ ಚಿಕ್ಕನಹಳ್ಳಿಯ ಶಿವಕುಮಾರ್ (25) ಮತ್ತು ಭಾರತ್ ಕಾಲೋನಿಯ ಮಾರುತಿ (24) ಎಂದು ಗುರುತಿಸಲಾಗಿದೆ. ಆರೋಪಿಗಳು ದಾವಣಗೆರೆ ಜಿಲ್ಲೆಯ ಇಮಾಂ ನಗರದ ಹಣ್ಣಿನ ವ್ಯಾಪಾರಿ ದುಗ್ಗೇಶಿ ಎಂಬಾತನನ್ನು ಕೊಲೆಗೈದಿದ್ದರು.

    ಕೊಲೆಯಾದ ದುಗ್ಗೇಶಿ ಹಾಗೂ ಆರೋಪಿ ಗಣೇಶ್ ಇಬ್ಬರೂ ಸಂಬಂಧಿಕರು. ದುಗ್ಗೇಶಿಯ ಮೇಲೆ ಗಣೇಶ್ ಫೆಬ್ರವರಿಯಲ್ಲಿ 40 ಲಕ್ಷ ರೂ. ಇನ್ಶೂರೆನ್ಸ್ ಮಾಡಿಸಿದ್ದ. ಇನ್ನೂ ಜನವರಿ ತಿಂಗಳಲ್ಲಿ ಪ್ರೀಮಿಯಂ ಹಣ ಕಟ್ಟಬೇಕಾಗಿದ್ದರಿಂದ ಮೊದಲೇ ಕೊಲೆಗೆ ಸಂಚು ನಡೆಸಿದ್ದ ಗಣೇಶ್, ದುಗ್ಗೇಶಿ ಹಾಗೂ ಆತನ ತಾಯಿಯ ಸಹಿ ಇರುವ ಚೆಕ್ ಮತ್ತು ಬಾಂಡ್‌ಗಳನ್ನು ಆತನ ಬಳಿಯೇ ಇಟ್ಟುಕೊಂಡಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ.

    ಆರೋಪಿಗಳು ಮಂಗಳವಾರ ದುಗ್ಗೇಶಿಯನ್ನು ಬಸಾಪುರಕ್ಕೆ ಕರೆದುಕೊಂಡು ಹೋಗಿ ಕತ್ತು ಹಿಸುಕಿ ಕೊಲೆ ಮಾಡಿದ್ದರು. ಬಳಿಕ ಅನಾರೋಗ್ಯದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ ಎಂದು ಕತೆ ಕಟ್ಟಿದ್ದರು. ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿ, ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ನಡೆಸಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.

  • ಅಥಣಿ | ಅಂತರರಾಜ್ಯ ಕಳ್ಳರ ಸೆರೆ : 40 ಲಕ್ಷ ರೂ. ಚಿನ್ನಾಭರಣ ವಶಕ್ಕೆ

    ಅಥಣಿ | ಅಂತರರಾಜ್ಯ ಕಳ್ಳರ ಸೆರೆ : 40 ಲಕ್ಷ ರೂ. ಚಿನ್ನಾಭರಣ ವಶಕ್ಕೆ

     ಬೆಳಗಾವಿ: ಅಂತರರಾಜ್ಯ ಕಳ್ಳರನ್ನು ಸೆರೆಹಿಡಿದು ಬಂಧಿತರಿಂದ 40 ಲಕ್ಷ ರೂ. ಚಿನ್ನಾಭರಣವನ್ನ (Gold) ಅಥಣಿ ಪೊಲೀಸರು (Athani Police) ವಶಪಡಿಸಿಕೊಂಡಿದ್ದಾರೆ.

    ಬೆಳಗಾವಿ ಜಿಲ್ಲೆಯ ಅಥಣಿ, ಐಗಳಿ, ಕಾಗವಾಡ, ಸೇರಿದಂತೆ ಹಲವು ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳರನ್ನ ವಶಕ್ಕೆ ಪಡೆದು ಸುಮಾರು 40 ಲಕ್ಷ ರೂಪಾಯಿ ಮೌಲ್ಯದ 522 ಗ್ರಾಂ ಚಿನ್ನಾಭರಣ ಮತ್ತು ಮೋಟಾರ್ ಸೈಕಲನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

     
    ಕಾರ್ಯಾಚರಣೆ ಮಾಡಿ ಕಳ್ಳರನ್ನ ಸೆರೆ ಹಿಡಿದು ಹೆಡೆಮುರಿ ಕಟ್ಟಿದ ಅಥಣಿ ಪೊಲೀಸರಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅಥಣಿ ಪೊಲೀಸರ ಕಾರ್ಯಾಚರಣೆಗೆ ಬೆಳಗಾವಿ ಎಸ್‌ಪಿ ಭೀಮಾಶಂಕರ ಗುಳೇದ ಅವರು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.

  • ಜೈಲಿಂದ ಹೊರಬಂದು ಪತ್ನಿ, 3 ಮಕ್ಕಳನ್ನು ಗುಂಡಿಕ್ಕಿ ಕೊಂದು ಆತ್ಮಹತ್ಯೆಗೆ ಶರಣಾದ ಭೂಪ!

    ಜೈಲಿಂದ ಹೊರಬಂದು ಪತ್ನಿ, 3 ಮಕ್ಕಳನ್ನು ಗುಂಡಿಕ್ಕಿ ಕೊಂದು ಆತ್ಮಹತ್ಯೆಗೆ ಶರಣಾದ ಭೂಪ!

    ಲಕ್ನೋ: ಜೈಲಿಂದ ಜಾಮೀನಿನ ಮೇಲೆ ಹೊರ ಬಂದಿದ್ದ ಕೊಲೆ ಆರೋಪಿಯೊಬ್ಬ ಮನೆಯಲ್ಲಿ ಮಲಗಿದ್ದ ಪತ್ನಿ ಮತ್ತು ಮೂವರು ಮಕ್ಕಳನ್ನು ಗುಂಡಿಕ್ಕಿ ಕೊಂದ ಅಮಾನವೀಯ ಘಟನೆ ಉತ್ತರ ಪ್ರದೇಶದ (Uttar Pradesh) ವಾರಣಾಸಿಯ (Varanasi) ಭೈದಾನಿ ಪ್ರದೇಶದಲ್ಲಿ ನಡೆದಿದೆ.

    ಹತ್ಯೆಗೀಡಾದವರನ್ನು ನೀತು ಗುಪ್ತಾ (43), ಅವರ ಪುತ್ರರಾದ ನವೇಂದ್ರ (25) ಮತ್ತು ಸುಬೇಂದ್ರ (15) ಮತ್ತು ಪುತ್ರಿ ಗೌರಂಗಿ (16) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಹೆಂಡತಿ ಮತ್ತು ಮಕ್ಕಳು ಮಲಗಿದ್ದ ವೇಳೆ ಆರೋಪಿ ರಾಜೇಂದ್ರ ಗುಪ್ತಾ (45) ಈ ಕೃತ್ಯ ಎಸಗಿದ್ದಾನೆ.

    ಘಟನೆಯ ನಂತರ ನಗರದ ರೊಹನಿಯಾ ಪ್ರದೇಶದಲ್ಲಿ ರಾಜೇಂದ್ರ ಗುಪ್ತಾ ಶವ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯ ವೇಳೆ ಪತ್ನಿ ಹಾಗೂ ಮೂವರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

    ಘಟನೆಯ ಕುರಿತು ವಾರಾಣಸಿಯ ಡಿಸಿಪಿ ಗೌರವ್ ಬನ್ಸ್ವಾಲ್ ಮಾತನಾಡಿ, ರಾಜೇಂದ್ರ ಗುಪ್ತಾ ಹಾಗೂ ಆತನ ಕುಟುಂಬದ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನಾ ಅಥವಾ ಕೊಲೆಯಾಗಿದೆಯೋ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

    1997ರಲ್ಲಿ ರಾಜೇಂದ್ರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿತ್ತು. ಆತ ಜಾಮೀನಿನ ಮೇಲೆ ಹೊರಬಂದಿದ್ದ ಎಂದು ಪೊಲೀಸರು (Police) ತಿಳಿಸಿದ್ದಾರೆ.

  • ಶಿವಮೊಗ್ಗ | ಅಕ್ರಮವಾಗಿ ಚಿರತೆಯ ಹಲ್ಲು, ಉಗುರು ಸಾಗಾಟಕ್ಕೆ ಯತ್ನ – ಆರೋಪಿ ಅರೆಸ್ಟ್

    ಶಿವಮೊಗ್ಗ | ಅಕ್ರಮವಾಗಿ ಚಿರತೆಯ ಹಲ್ಲು, ಉಗುರು ಸಾಗಾಟಕ್ಕೆ ಯತ್ನ – ಆರೋಪಿ ಅರೆಸ್ಟ್

    ಶಿವಮೊಗ್ಗ: ಚಿರತೆ (Leopard) ಉಗುರು ಹಾಗೂ ಹಲ್ಲುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪಿಯನ್ನು ಸಾಗರದ (Sagar) ಅರಣ್ಯ ಸಂಚಾರಿ ದಳ ಬಂಧಿಸಿದೆ.

    ಬಂಧಿತ ಆರೋಪಿಯನ್ನು ಲೋಕೇಶ್ ಎಂದು ಗುರುತಿಸಲಾಗಿದೆ. ಪೊಲೀಸರ (Police) ಕಾರ್ಯಾಚರಣೆ ವೇಳೆ ಆತನ ಬಳಿ ಚಿರತೆಯ ಉಗುರು ಮತ್ತು ಹಲ್ಲುಗಳು ಪತ್ತೆಯಾಗಿವೆ. ಮಾಲು ಸಮೇತ ಆತನನ್ನು ಬಂಧಿಸಲಾಗಿದೆ.

    ಬಂಧಿತ ಆರೋಪಿಯಿಂದ 16 ಚಿರತೆ ಉಗುರು ಮತ್ತು 3 ಚಿರತೆ ಹಲ್ಲುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.

  • ಬಿಷ್ಣೋಯ್ ಹೆಸರಲ್ಲಿ ಸಲ್ಮಾನ್‌ ಖಾನ್‌ಗೆ ಬೆದರಿಕೆ – ತುಮಕೂರಲ್ಲಿ ಆರೋಪಿ ಅರೆಸ್ಟ್‌

    ಬಿಷ್ಣೋಯ್ ಹೆಸರಲ್ಲಿ ಸಲ್ಮಾನ್‌ ಖಾನ್‌ಗೆ ಬೆದರಿಕೆ – ತುಮಕೂರಲ್ಲಿ ಆರೋಪಿ ಅರೆಸ್ಟ್‌

    ತುಮಕೂರು: ಲಾರೆನ್ಸ್‌ ಬಿಷ್ಣೋಯ್ ಗ್ಯಾಂಗ್‌ (Lawrence Bishnoi)  ಹೆಸರಲ್ಲಿ ಬಾಲಿವುಡ್‌ ನಟ ಸಲ್ಮಾನ್ ಖಾನ್‌ಗೆ (Salman Khan) ಬೆದರಿಕೆ ಹಾಕಿದ್ದ ಆರೋಪಿಯನ್ನು ತುಮಕೂರಿನಲ್ಲಿ (Tumakuru) ಪೋಲೀಸರು (Police) ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ವಿಕ್ರಮ್‌ ಎಂದು ಗುರುತಿಸಲಾಗಿದೆ. ಆರೋಪಿಯ, ಸಲ್ಮಾನ್‌ ಖಾನ್ 5 ಕೋಟಿ ರೂ. ಹಣ ನೀಡಬೇಕು ಮತ್ತು ದೇವಾಲಯಕ್ಕೆ ಬಂದು ಕ್ಷಮೆ ಕೋರಬೇಕು ಎಂದು ಮುಂಬೈ (Mumbai) ಪೊಲೀಸರಿಗೆ ಮೆಸೇಜ್‌ ಕಳುಹಿಸಿದ್ದ.

    ಆರೋಪಿಯನ್ನು ಬಂಧಿಸಲಾಗಿದ್ದು ಹೆಚ್ಚಿನ ವಿಚಾರಣೆ ನಡೆಯುತ್ತಿದೆ.

    ಜೀವಂತವಾಗಿರಲು ಬಯಸಿದರೆ ದೇವಸ್ಥಾನದಲ್ಲಿ ಕ್ಷಮೆಯಾಚಿಸಿ ಇಲ್ಲವೇ 5 ಕೋಟಿ ಹಣ ಕೊಡಿ ಎಂದು ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ಗೆ (Salman Khan) ಮತ್ತೆ ಬಿಷ್ಣೋಯ್‌ ಗ್ಯಾಂಗ್‌ ಹೆಸರಿಂದ ಬೆದರಿಕೆ ಬಂದಿತ್ತು. ಆರೋಪಿ ಮುಂಬೈ ಪೊಲೀಸರಿಗೆ ವಾಟ್ಸಪ್‌ ಸಂದೇಶ ಕಳುಹಿಸಿದ್ದ. ಒಂದು ವಾರದಲ್ಲಿ ಸಲ್ಮಾನ್ ಖಾನ್‌ಗೆ ಬಂದ ಎರಡನೇ ಕೊಲೆ ಬೆದರಿಕೆ ಇದಾಗಿದೆ.

    ಕಳೆದ ವಾರ, ಅ.30 ರಂದು ಮುಂಬೈ ಸಂಚಾರ ನಿಯಂತ್ರಣವು ಸಲ್ಮಾನ್ ಖಾನ್ ವಿರುದ್ಧ ಇದೇ ರೀತಿಯ ಬೆದರಿಕೆಯನ್ನು ಸ್ವೀಕರಿಸಿತ್ತು. 2 ಕೋಟಿಗೆ ಬೇಡಿಕೆಯಿಡಲಾಗಿತ್ತು. ಈ ಸಂಬಂಧ ಬಾಂದ್ರಾ ಪೂರ್ವದ ನಿವಾಸಿ ಅಜಮ್ ಮೊಹಮ್ಮದ್ ಮುಸ್ತಫಾ ಎಂಬಾತನನ್ನು ತಕ್ಷಣವೇ ಬಂಧಿಸಲಾಗಿತ್ತು.

  • ಅಪ್ರಾಪ್ತೆಯ ಮೇಲೆ ಅತ್ಯಾಚಾರ – ಕಾಮುಕನನ್ನು ಮರಕ್ಕೆ ಕಟ್ಟಿ ಬಡಿದು ಕೊಂದ ಗ್ರಾಮಸ್ಥರು

    ಅಪ್ರಾಪ್ತೆಯ ಮೇಲೆ ಅತ್ಯಾಚಾರ – ಕಾಮುಕನನ್ನು ಮರಕ್ಕೆ ಕಟ್ಟಿ ಬಡಿದು ಕೊಂದ ಗ್ರಾಮಸ್ಥರು

    ಕೋಲ್ಕತ್ತಾ: ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ವ್ಯಕ್ತಿಯನ್ನು ಗ್ರಾಮಸ್ಥರು ಮರಕ್ಕೆ ಕಟ್ಟಿ ಥಳಿಸಿ ಹತ್ಯೆಗೈದ ಘಟನೆ ಪಶ್ಚಿಮ ಬಂಗಾಳದ (West Bengal) ಫಲಕಟಾ ಗ್ರಾಮದಲ್ಲಿ ನಡೆದಿದೆ.

    ಮೋನಾ ರಾಯ್ (40) ಎಂಬಾತನನ್ನು ಗ್ರಾಮಸ್ಥರು ಮರಕ್ಕೆ ಕಟ್ಟಿ ಥಳಿಸಿದ್ದಾರೆ. ಪೊಲೀಸರು ಆತನನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಆತ ಮೃತಪಟ್ಟಿದ್ದಾನೆ.

    6 ವರ್ಷದ ಅಪ್ರಾಪ್ತೆ ಕಾಣೆಯಾದ ಬಗ್ಗೆ ಆಕೆಯ ಪೋಷಕರು ಸಮೀಪದ ಪೊಲೀಸ್‌ (Police) ಠಾಣೆಗೆ ದೂರು ನೀಡಿದ್ದರು. ಪೊಲೀಸರ ಹುಡುಕಾಟದ ವೇಳೆ ಆಕೆಯ ಬಟ್ಟೆ ಪತ್ತೆಯಾಗಿತ್ತು. ಬಳಿಕ ಬಾಲಕಿಯ ಶವ ಕೊಳ ಒಂದರಲ್ಲಿ ಪತ್ತೆಯಾಗಿತ್ತು. ಬಳಿಕ ಆಕೆಯ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು.

    ಈ ಬಗ್ಗೆ ಪ್ರತಿಕ್ರಿಯಿಸಿರು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ (Suvendu Adhikari), ಸಂತ್ರಸ್ತೆಯ ಪೋಷಕರನ್ನು ಭೇಟಿ ಮಾಡಿದ್ದೇನೆ. ಅಲ್ಲದೇ ಮರಣೋತ್ತರ ಪರೀಕ್ಷೆಯ ಬಗ್ಗೆ ಕೆಲವು ಅನುಮಾನಗಳಿವೆ. ನ್ಯಾಯಾಲಯದಲ್ಲಿ ಸಂತ್ರಸ್ತೆಯ ಕುಟುಂಬಕ್ಕೆ ಅದು ತೊಡಕಾಗಬಹುದು. ಅವರ ಕಾನೂನು ಸಹಾಯಕ್ಕೆ ನಾವು ಇರಲಿದ್ದೇವೆ ಎಂದು ತಿಳಿಸಿದ್ದಾರೆ.

    ಟ್ಯೂಷನ್‌ಗೆ ಹೋಗುತ್ತಿದ್ದ ಯುವತಿಯನ್ನು ಅಪಹರಿಸಿ ಅತ್ಯಾಚಾರ
    ಕೋಲ್ಕತ್ತಾದ ಪಕ್ಕದಲ್ಲಿರುವ ಗೈಘಾಟದಲ್ಲಿ ಶುಕ್ರವಾರ ಸಂಜೆ ಟ್ಯೂಷನ್‌ಗೆ ಹೋಗುತ್ತಿದ್ದ ಯುವತಿಯೊಬ್ಬಳನ್ನು ಅಪಹರಿಸಿ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಘಟನೆ ಬಳಿಕ ಆಕೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎನ್ನಲಾಗಿದೆ. ಶಂಕಿತ ವ್ಯಕ್ತಿ ಸ್ಥಳೀಯ ತೃಣಮೂಲ ನಾಯಕನ ಸೋದರಳಿಯ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಆರೋಪಿ ಒಂದು ವರ್ಷದಿಂದ ಆಕೆಗೆ ಕಿರುಕುಳ ನೀಡುತ್ತಿದ್ದ ಎಂದು ಆಕೆಯ ಪೋಷಕರು ಹೇಳಿಕೊಂಡಿದ್ದಾರೆ. ಯುವತಿಯ ಪೋಷಕರು ನೀಡಿದ ದೂರಿನ ಅನ್ವಯ ಆತನನ್ನು ಬಂಧಿಸಲಾಗಿದೆ.

    ಈ ಹಿಂದೆ ಗ್ರಾಮದಲ್ಲಿ ವಿಷಯ ಪ್ರಸ್ತಾಪಿಸಿದಾಗ ಆತ ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದ್ದ. ಆದರೆ ಅದನ್ನು ಲೆಕ್ಕಿಸದೆ ಈಗ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಳಿಕ ಆಕೆ ಮನೆಯಲ್ಲಿ ನೇಣು ಬಿಗಿದುಕೊಳ್ಳಲು ಯತ್ನಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಮೈಸೂರಲ್ಲಿ ಯುವತಿ ಮೇಲೆ ಗ್ಯಾಂಗ್ ರೇಪ್ – ಕೇಸ್ ದಾಖಲು

    ಮೈಸೂರು: ಮಡಿಕೇರಿ ಮೂಲದ ಯುವತಿಯೊಬ್ಬರು ನಗರದ ಹೊರವಲಯದಲ್ಲಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಭಾನುವಾರ ಘಟನೆ ನಡೆದಿದ್ದು, ಯುವತಿ ಇಂದು (ಸೋಮವಾರ) ಪೊಲೀಸ್ ಠಾಣೆಗೆ ಹಾಜರಾಗಿ ದೂರು ದಾಖಲಿಸಿದ್ದಾರೆ.

    ಅತ್ಯಾಚಾರ ಎಸಗಿದ ಯುವಕರು ಸಹ ಮಡಿಕೇರಿ ಮೂಲದವರು ಎನ್ನಲಾಗುತ್ತಿದೆ. ನಗರದ ಹೊರ ವಲಯದ ಭಾಗದಲ್ಲಿ ಕೆಲವೊಂದು ಲಾಡ್ಜ್‌ಗಳಿವೆ. ಈ ಪ್ರದೇಶದಲ್ಲಿ ಗ್ಯಾಂಗ್ ರೇಪ್ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಈ ಸಂಬಂಧ ಮೂರು ಜನರನ್ನು ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.