ಶಿವಮೊಗ್ಗ: ವ್ಯಕ್ತಿಯೊಬ್ಬ ತನ್ನ ಪತ್ನಿಯ (Wife) ಕತ್ತಿಗೆ ಟವೆಲ್ ಬಿಗಿದು ಹತ್ಯೆಗೈದ ಘಟನೆ ಶಿಕಾರಿಪುರ (Shikaripura) ತಾಲೂಕಿನ ಅಂಬ್ಲಿಗೊಳ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಗೌರಮ್ಮ (28) ಎಂದು ಗುರುತಿಸಲಾಗಿದೆ. ಹತ್ಯೆಗೈದ ಆರೋಪಿಯನ್ನು ಮಹಿಳೆಯ ಪತಿ ಮನೋಜ್ ಎಂದು ಗುರುತಿಸಲಾಗಿದೆ. ಆರೋಪಿ ಶನಿವಾರ ಮಧ್ಯಾಹ್ನ ಮದ್ಯ ಸೇವಿಸಿ ಮನೆಗೆ ಬಂದು ಪತ್ನಿ ಜೊತೆ ಜಗಳವಾಡಿದ್ದ. ಅಲ್ಲದೇ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಬಳಿಕ ಜಗಳ ವಿಕೋಪಕ್ಕೆ ತಿರುಗಿ ಟವೆಲ್‍ನಿಂದ ಪತ್ನಿ ಗೌರಮ್ಮಳ ಕತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು (Police) ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಶಿಕಾರಿಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು, ಪರಿಶೀಲನೆ ನಡೆಸಿದ್ದಾರೆ.
ಆರೋಪಿ ಮನೋಜ್‍ನನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.
ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಉಸ್ತಿಯಲ್ಲಿರುವ ಪಕ್ಷದ ಕಚೇರಿಯಲ್ಲಿ ಬಿಜೆಪಿ (BJP) ಕಾರ್ಯಕರ್ತನ ಶವ ಪತ್ತೆಯಾಗಿದ್ದು, ಕೊಲೆ ಆರೋಪದ ಮೇಲೆ ಮಹಿಳೆಯೊಬ್ಬಳನ್ನು ಪೊಲೀಸರು (Police) ಬಂಧಿಸಿದ್ದಾರೆ.
ಪೃಥ್ವಿರಾಜ್ ನಸ್ಕರ್ ಎಂಬ ಕಾರ್ಯಕರ್ತ ಪಕ್ಷದ ಸಾಮಾಜಿಕ ಜಾಲತಾಣ ಖಾತೆಗಳನ್ನು ನಿರ್ವಹಿಸುತ್ತಿದ್ದರು. ಶುಕ್ರವಾರ ರಾತ್ರಿ ಪಕ್ಷದ ಕಚೇರಿಯಲ್ಲಿ ನಸ್ಕರ್ ಅವರ ರಕ್ತಸಿಕ್ತ ಶವ ಪತ್ತೆಯಾಗಿತ್ತು. ನವೆಂಬರ್ 5 ರಿಂದ ಅವರು ನಾಪತ್ತೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಕರ್ತನ ಕೊಲೆಗೆ ಸಂಬಂಧಿಸಿದಂತೆ ಬಿಜೆಪಿಯು ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಕೈವಾಡವಿದೆ ಎಂದು ಆರೋಪಿಸಿದೆ. ಕೊಲೆ ಸಂಬಂಧ ಪೊಲೀಸರು ಮಹಿಳೆಯನ್ನು ಬಂಧಿಸಿದ್ದು, ಈ ಕೊಲೆ ವೈಯಕ್ತಿಕ ವಿಚಾರಕ್ಕೆ ನಡೆದಿರಬಹುದು ಎಂದು ಪೊಲೀಸರು ಹೇಳಿದ್ದಾರೆ.
ಬಂಧಿತ ಮಹಿಳೆ, ನಾಸ್ಕರ್‌ಗೆ ಹರಿತವಾದ ಆಯುಧಗಳಿಂದ ಹೊಡೆದು ಆತನನ್ನು ಹತ್ಯೆಗೈದಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆ. ಆಕೆಗೆ ಬೇರೆ ಯಾರಾದರೂ ನೆರವು ನೀಡಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದರ ನಡುವೆ, ಇತ್ತೀಚೆಗೆ ನಡೆದ ದುರ್ಗಾಪೂಜಾ ಹಬ್ಬದ ಸಂದರ್ಭದಲ್ಲಿ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ನಡೆದ ಅತ್ಯಾಚಾರ ಪ್ರಕರಣದ ವಿರುದ್ಧದ ಪ್ರತಿಭಟನೆ ನಂತರ ಟಿಎಂಸಿ ಕಾರ್ಯಕರ್ತರು ಮತ್ತು ಪೊಲೀಸರ ಕೋಪಕ್ಕೆ ಆತ ಗುರಿಯಾಗಿದ್ದ ಎಂದು ನಸ್ಕರ್ ಅವರ ತಂದೆ ಆರೋಪಿಸಿದ್ದಾರೆ.
ಚಿಕ್ಕಬಳ್ಳಾಪುರ: ಯೋಗ ಶಿಕ್ಷಕಿ ಕಿಡ್ನ್ಯಾಪ್ (Yoga Teacher Kidnap) ಮತ್ತು ಕೊಲೆಯತ್ನ ಜೀವಂತ ಸಮಾಧಿ ಪ್ರಕರಣದಲ್ಲಿ ನಾಲ್ವರು ಪ್ರಮುಖ ಆರೋಪಿಗಳನ್ನ ಬಂಧಿಸಿರುವ ಚಿಕ್ಕಬಳ್ಳಾಪುರ ಪೊಲೀಸರು (Chikkaballapura Police) ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ತೀವ್ರ ವಿಚಾರಣೆ ಮುಂದುವರೆಸಿದ್ದಾರೆ. ವಿಚಾರಣೆ ವೇಳೆ 4 ಲಕ್ಷ ರೂಪಾಯಿಗೆ ಪ್ರಿಯಕರನ ಪತ್ನಿ ಬಿಂದು ಸುಪಾರಿ ನೀಡಿರೋದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ.
ಸುಪಾರಿಯಂತೆ ಮೊದಲು 1 ಲಕ್ಷ ರೂ. ಫೋನ್‌ಪೇ (Phone Pay) ಮೂಲಕ ಅಡ್ವಾನ್ಸ್ ಆಗಿ ಪಡೆದುಕೊಂಡಿದ್ದಾರೆ. 1 ಲಕ್ಷದಲ್ಲೇ ಇಷ್ಟೆಲ್ಲಾ ಕೃತ್ಯ ನಡೆಸಿದ್ದು, ಇನ್ನೂ ಯೋಗಶಿಕ್ಷಕಿಯ ಮಾಂಗಲ್ಯ ಸರ ಚಿನ್ನಾಭರಣಗಳನ್ನ ಸಹ ಆರೋಪಿಗಳು ದೋಚಿದ್ರು. ಆದ್ರೆ ಅವುಗಳನ್ನ ಸಹ ಪೊಲೀಸರು ರಿಕವರಿ ಮಾಡಿದ್ದಾರೆ. ಮಂತ್ರಾಲಯದಲ್ಲಿದ್ದ ಆರೋಪಿಗಳನ್ನ ಎಡೆಮುರಿ ಕಟ್ಟಿ ತಂದಿದ್ರು. ಇದನ್ನೂ ಓದಿ: ಕಿಡ್ನ್ಯಾಪ್ ಕೇಸ್‌ಗೆ ಟ್ವಿಸ್ಟ್ – ಅರೆಬೆತ್ತಲೆ ಮೈಗೆ ಸೊಪ್ಪು ಸುತ್ತಿಕೊಂಡು ಬಂದಿದ್ದ ಯೋಗ ಶಿಕ್ಷಕಿ!
ಆರೋಪಿಗಳಿಗೆ ಖಾಕಿ ಪುಲ್ ಡ್ರಿಲ್:
ಬೆಂಗಳೂರಿನ (Bengaluru) ಯೋಗ ಶಿಕ್ಷಕಿ ಜೀವಂತ ಸಮಾಧಿ ಮಾಡಿದ್ದ ಪ್ರಕರಣದ 4 ಮಂದಿ ಆರೋಪಿಗಳಿಗೆ ಚಿಕ್ಕಬಳ್ಳಾಪುರ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಯೋಗ ಶಿಕ್ಷಕಿ ಕಿಡ್ನಾಪ್‌ಗೆ ಸುಪಾರಿ ನೀಡಿದ್ದ ಬಿಂದು ಈಗಾಗಲೇ ಜೈಲು ಸೇರಿದ್ದಾಳೆ. ಇನ್ನೂ ಕಿಡ್ನ್ಯಾಪ್ ಮಾಡಿದ್ದ ಪ್ರಮುಖ ಆರೋಪಿಗಳಾದ ಸತೀಶ್ ರೆಡ್ಡಿ, ನಾಗೇಂದ್ರ ರೆಡ್ಡಿ, ರಮಣಾರೆಡ್ಡಿ, ರವಿಚಂದ್ರ ನಾಲ್ಕು ಮಂದಿಯನ್ನ ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ಚಿಕ್ಕಬಳ್ಳಾಪುರ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.
ಕಿಡ್‌ನ್ಯಾಪ್‌ಗೆ 3 ತಿಂಗಳ ಹಿಂದೆಯೇ ಪ್ಲ್ಯಾನ್:
5 ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದು ಶುಕ್ರವಾರ ಮತ್ತು ಶನಿವಾರವಾದ ಇಂದು ಆರೋಪಿಗಳ ಸ್ಥಳ ಮಹಜರು ನಡೆಸಿ ಮಹತ್ವದ ಸಾಕ್ಷ್ಯಗಳನ್ನ ಕಲೆ ಹಾಕಿದ್ದಾರೆ. ಇನ್ನೂ ವಿಚಾರಣೆ ವೇಳೆ ರೋಚಕ ಅಂಶಗಳು ಬೆಳಕಿಗೆ ಬಂದಿವೆ. ಆರೋಪಿಗಳು ಯೋಗ ಶಿಕ್ಷಕಿಯ ಕಿಡ್ನಾಪ್ ಗೆ ಮೂರು ತಿಂಗಳಿಂದಲೇ ಪ್ಲ್ಯಾನ್ ಮಾಡಿರೋದಾಗಿ ಬಾಯ್ಬಿಟ್ಟಿದ್ದಾರೆ. ಇದನ್ನೂ ಓದಿ: ಯೋಗ ಶಿಕ್ಷಕಿ ಕಿಡ್ನ್ಯಾಪ್ ಕೇಸ್: ಘಟನೆ ಬಳಿಕ ಟೆಂಪಲ್ ರನ್ ನಡೆಸಿದ್ದ ಆರೋಪಿಗಳು ಅರೆಸ್ಟ್
ಬಿಂದು ನೀಡಿದ ಸುಪಾರಿ ಮೇರೆಗೆ ಕಿಡ್ನಾಪರ್ ಸತೀಶ್ ರೆಡ್ಡಿ ತಾನು ಕುದುರೆ ಸವಾರಿ ಮಾಡುವಾಗ ಕೆಳಗೆ ಬಿದ್ದು ಕಾಲಿಗೆ ಗಾಯವಾಗಿದೆ. ಹಾಗಾಗಿ ನನಗೆ ಯೋಗ ಕಲಿತು ಕಾಲು ನೋವು ಸರಿ ಮಾಡಿಕೊಳ್ಳಬೇಕಿದೆ ಅಂತ ಸುಳ್ಳು ಹೇಳಿ ಯೋಗ ಶಿಕ್ಷಕಿಯ ಸಂಪರ್ಕ ಸಾಧಿಸಿದ್ದನಂತೆ, ದಿನೇ ದಿನೇ ಸಲುಗೆ ಹೆಚ್ಚಾಗಿ ಆಕೆಗೆ ಜಮೀನು ತೋರಿಸ್ತೀನಿ, ಗನ್ ಶೂಟಿಂಗ್ ಟ್ರೈನಿಂಗ ಕೊಡುವುದಾಗಿ ಹೇಳಿಕೊಂಡಿದ್ದನಂತೆ..ಆದೇ ರೀತಿ ಆಕೆಯನ್ನ ಪುಸಲಾಯಿಸಿ ಕಿಡ್ನಾಪ್ ಮಾಡಿದೀವಿ ಅಂತ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಇನ್ನೂ ಆರೋಪಿಗಳ ಕಸ್ಟಡಿ ಸೋಮವಾರಕ್ಕೆ ಅಂತ್ಯವಾಗಲಿದ್ದು ನ್ಯಾಯಾಧೀಶರ ಮುಂದೆ ಆರೋಪಿಗಳನ್ನ ಹಾಜರುಪಡಿಸುವುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಈ ಸರ್ಕಾರ ತೆಗೆಯೋವರೆಗೆ ಮನೆಯಲ್ಲಿ ಮಲಗಲ್ಲ – ಗುಡುಗಿದ ಗೌಡರು
ಬಿಂದು ಪತಿ ಸಂತೋಷ್ ವಿಚಾರಣೆ:
ಯೋಗ ಶಿಕ್ಷಕಿ ಕಿಡ್ನಾಪ್‌ಗೆ ಸುಪಾರಿ ನೀಡಿದ್ದ ಬಿಂದು ಪತಿ ಸಂತೋಷ್ ಕುಮಾರ್ ನನ್ನ ಚಿಕ್ಕಬಳ್ಳಾಪುರ ಪೊಲೀಸರು ಕರೆಸಿ ವಿಚಾರಣೆ ನಡೆಸಿದ್ದಾರೆ. ಅಂದಹಾಗೆ ಯೋಗ ಶಿಕ್ಷಕಿಯ ಜೊತೆ ಸಂತೋಷ್ ಕುಮಾರ್ ಅನೈತಿಕ ಸಂಬಂಧ ಹೊಂದಿದ್ದಾರೆ ಅಂತ ಬಿಂದು 4 ಲಕ್ಷಕ್ಕೆ ಸುಪಾರಿ ನೀಡಿದ್ದಳು. ಸುಪಾರಿ ಮೇರೆಗೆ ಸತೀಶ್ ರೆಡ್ಡಿ ಆಕೆಯನ್ನ ಕಿಡ್ನಾಪ್ ಮಾಡಿದ್ದ. ಈ ಪ್ರಕರಣದಲ್ಲಿ ಸಂತೋಷ್ ಕುಮಾರ್ ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ಸಂತೋಷ್ ಕುಮಾರ್, ಯೋಗಿ ಶಿಕ್ಷಕಿಯ ಪತಿ ವಿಶ್ವನಾಥ್ ನಾನು ಒಂದೇ ಕಡೆ ಕೆಲಸ ಮಾಡುತ್ತಿದ್ದು ಸ್ನೇಹಿತರಾಗಿದ್ದೇವು. ವಿಶ್ವನಾಥ್‌ಗೆ ಅಪಘಾತವಾದ ಸಂದರ್ಭದಲ್ಲಿ ಆತನ ಬ್ಯಾಂಕ್ ಖಾತೆ ಪ್ರೀಝ್ ಆಗಿದ್ದ ಕಾರಣ ಆತನ ವಿಮೆ ಹಣ ನನ್ನ ಖಾತೆಗೆ ವರ್ಗಾಯಿಸಿದ್ರು.
ಈ ಹಣ ಕೊಟ್ಟು ತೆಗೆದುಕೊಳ್ಳುವ ವಿಚಾರದಲ್ಲಿ ವಿಶ್ವನಾಥ್ ಪತ್ನಿ ಯೋಗ ಶಿಕ್ಷಕಿ ಪರಿಚಯವಾಯಿತು. ಸಲುಗೆಯಿಂದ ಇದ್ದೇವು, ಅಂತ ತಿಳಿಸಿದ್ದಾನೆ. ಆದ್ರೆ ತನ್ನ ಹೆಂಡತಿ ಹೀಗೆ ಮಾಡುತ್ತಾಳೆಂದು ಅಂದುಕೊಂಡರಲಿಲ್ಲ ಅಂತ ಪೊಲೀಸರ ಬಳಿ ಅವಲತ್ತುಕೊಂಡಿದ್ದಾನೆ.
ನವದೆಹಲಿ: ಈಶಾನ್ಯ ದೆಹಲಿಯ (Delhi) ಕಬೀರ್ ನಗರದಲ್ಲಿ ಮೂವರು ಸ್ನೇಹಿತರ ಮೇಲೆ ಅಪ್ರಾಪ್ತರು ನಡೆಸಿದ ಗುಂಡಿನ ದಾಳಿಯಲ್ಲಿ (Delhi Shootout) ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು (Police) ತಿಳಿಸಿದ್ದಾರೆ.
ನದೀಮ್ ಮತ್ತು ಆತನ ಇಬ್ಬರು ಸ್ನೇಹಿತರು ಊಟಕ್ಕೆ ಹೊರಟಿದ್ದರು ಈ ವೇಳೆ ಮೂವರು ಅಪ್ರಾಪ್ತರು ಬೈಕ್‌ನಲ್ಲಿ ಬಂದು 13 ಸುತ್ತು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ನದೀಮ್ ಮತ್ತು ಆತನ ಸ್ನೇಹಿತರು ಗಂಭೀರ ಗಾಯಗೊಂಡಿದ್ದರು. ಈ ವೇಳೆ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ನದೀಮ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಇನ್ನಿಬ್ಬರು ಸ್ನೇಹಿತರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮೂವರು ಅಪ್ರಾಪ್ತರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮೂವರು ಅಪ್ರಾಪ್ತರಲ್ಲಿ ಒಬ್ಬ ನದೀಮ್‌ನಿಂದ ಸಾಲ ಪಡೆದಿದ್ದ. ಮರುಪಾವತಿಗೆ ಒತ್ತಡ ಹೇರಿದ್ದಕ್ಕೆ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಂಧಿತರು ದೆಹಲಿಯ ಜ್ಯೋತಿ ನಗರದಲ್ಲಿ ನಡೆದ ಗುಂಡಿನ ದಾಳಿಗೂ ಸಂಬಂಧ ಹೊಂದಿದ್ದಾರೆ. ಬಂಧಿತರಿಂದ ಮೂರು ಕಂಟ್ರಿ ಪಿಸ್ತೂಲ್‌ಗಳೊಂದಿಗೆ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಮತ್ತು ಸಚಿವರ ಆಪ್ತ ಕಾರ್ಯದರ್ಶಿ ಹಾಗೂ ವಿಶೇಷಾಧಿಕಾರಿ ಎಂದು ಹೇಳಿಕೊಂಡು ಅಧಿಕಾರಿಗಳಿಗೆ ವಂಚಿಸುತ್ತಿದ್ದ ವ್ಯಕ್ತಿಯನ್ನು ವಿಧಾನಸೌಧ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ತುಮಕೂರು ಮೂಲದ ರಘುನಾಥ್ ಎಂದು ಗುರುತಿಸಲಾಗಿದೆ. ಆರೋಪಿ ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ ವರ್ಗಾವಣೆ ಮಾಡಿಸಿಕೊಡುವುದಾಗಿ ಆಮಿಷವೊಡ್ಡಿ ಹಣ (Money) ಪಡೆದು ವಂಚಿಸುತ್ತಿದ್ದ.
ಸಚಿವ ಪ್ರಿಯಾಂಕ್ ಖರ್ಗೆಯವರ ಹೆಸರನ್ನು ಹೇಳಿಕೊಂಡು ಇತ್ತೀಚೆಗೆ ರಘುನಾಥ್ ಇಂಜಿನಿಯರ್ ಒಬ್ಬರಿಗೆ ಕರೆ ಮಾಡಿದ್ದ. ಬಳಿಕ ವರ್ಗಾವಣೆ ಮಾಡಿಸಿಕೊಡುವುದಾಗಿ 2 ಲಕ್ಷ ರೂ. ಬೇಡಿಕೆ ಇಟ್ಟಿದ್ದ. ಇವನ ಮಾತನ್ನು ನಂಬಿದ್ದ ಇಂಜಿನಿಯರ್ 80 ಸಾವಿರ ರೂ. ಹಣ ಕೊಟ್ಟಿದ್ದರು. ಬಳಿಕ ಈತನ ವಂಚನೆ ಬಗ್ಗೆ ತಿಳಿದು ಸಚಿವರ ಆಪ್ತ ಕಾರ್ಯದರ್ಶಿಗಳು ದೂರು ನೀಡಿದ್ದರು.
ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭವನೇಶ್ವರ್: ಒಡಿಶಾದ (Odisha) ಕಟಕ್ ಜಿಲ್ಲೆಯಲ್ಲಿ 19 ವರ್ಷದ ಕಾಲೇಜು ವಿದ್ಯಾರ್ಥಿನಿಯ ಮೇಲೆ ಹಲವು ಬಾರಿ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಅಪ್ರಾಪ್ತ ಸೇರಿದಂತೆ ಆರು ಜನರನ್ನು ಪೊಲೀಸರು (Police) ಬಂಧಿಸಿದ್ದಾರೆ.
ಹುಟ್ಟುಹಬ್ಬವನ್ನು ಆಚರಿಸಲು ದಸರಾ (Dasara) ಹಬ್ಬದ ಸಂದರ್ಭದಲ್ಲಿ ಕಟಕ್‌ನ ಪುರಿಘಾಟ್ ಪೊಲೀಸ್ ಠಾಣಾ ವ್ಯಾಪ್ತಿಯ ಕೆಫೆಗೆ ಯುವತಿ ಹೋಗಿದ್ದಳು. ಈ ವೇಳೆ ಆಕೆಯ ಪ್ರಿಯಕರ, ಕೆಫೆ ಮಾಲೀಕರ ಸಹಾಯದಿಂದ ಖಾಸಗಿ ಕ್ಷಣಗಳನ್ನು ತನ್ನ ಫೋನ್‌ನಲ್ಲಿ ವಿಡಿಯೋ ಮಾಡಿಸಿದ್ದಾನೆ. ಆ ವಿಡಿಯೋಗಳನ್ನು ತೋರಿಸಿ ಬ್ಲ್ಯಾಕ್‌ಮೇಲ್ ಮಾಡಿ ಪ್ರಿಯಕರ ಸೇರಿದಂತೆ ಆರೋಪಿಗಳು ತನ್ನ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ಪೊಲೀಸರು ಆರೋಪಿಗಳ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಅವುಗಳನ್ನು ಭುವನೇಶ್ವರದಲ್ಲಿರುವ ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಯುವತಿಯ ಪ್ರಿಯಕರ, ಕೆಫೆ ಮಾಲೀಕ, ಓರ್ವ ಅಪ್ರಾಪ್ತ ಮತ್ತು ಇತರ ಮೂವರನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಬಿಎನ್‌ಎಸ್, ಐಟಿ ಕಾಯ್ದೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಚಿಕ್ಕೋಡಿ : ದೂರು ಕೊಡಲು ಪೊಲೀಸ್ ಠಾಣೆಗೆ ಬಂದ ದಲಿತ ಯುವತಿಯೊಬ್ಬಳಿಗೆ ನಿಂದಿಸಿದ ಆರೋಪದ ಹಿನ್ನೆಲೆಯಲ್ಲಿ ಡಿವೈಎಸ್‌ಪಿ (DySP) ಪ್ರಶಾಂತ್ ಮುನ್ನೋಳಿ (Prashant Munnolli) ಮತ್ತು ಪೊಲೀಸ್ ಪೇದೆ ಸದಾಶಿವ ಪಾಟೀಲ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಅಥಣಿ ಪಟ್ಟಣದ ಆಸ್ಪತ್ರೆಯೊಂದರ ವೈದ್ಯರಾಗಿರುವ ಸಾಗರ ಭಾವಿ ಅದೇ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ, ಕಳೆದ ಆರು ತಿಂಗಳಿಂದ ನಿರಂತರ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಕೊನೆಗೆ ಮದುವೆಯಾಗುವುದಿಲ್ಲವೆಂದು ಹೇಳಿದ್ದಾನೆ ಎಂದು ಆರೋಪಿಸಿ ಯುವತಿಯು ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಇದನ್ನೂ ಓದಿ: ಕರ್ನಾಟಕವನ್ನ ಲೂಟಿ ಹೊಡೀತಿದ್ದಾರೆ.. ರಕ್ಷಣೆ ಮಾಡಿ – ನಿರ್ಮಲಾ ಸೀತಾರಾಮನ್ ಎದುರು ಹೈಡ್ರಾಮಾ
ನೊಂದ ಯುವತಿಯು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈ ಕುರಿತು ವಿವರಿಸಿದಾಗ ಡಿವೈಎಸ್‌ಪಿ ಮತ್ತು ಪೊಲೀಸ್ ಪೇದೆ ಮೇಲೆ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಅಥಣಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಚಿಕ್ಕಬಳ್ಳಾಪುರ: ಬೆಂಗಳೂರಿನ ಯೋಗ ಶಿಕ್ಷಕಿಯನ್ನ (Yoga Teacher) ಕಿಡ್ನ್ಯಾಪ್ ಮಾಡಿ ಜೀವಂತ ಸಮಾಧಿ ಮಾಡಿದ್ದ ಪ್ರಕರಣ ಯಾವುದೇ ಸಿನಿಮಾ ಕಥೆಗೂ ಕಮ್ಮಿಯಿಲ್ಲ ಎನ್ನುವಂತಿದೆ.
ಹೌದು. ಬೆಂಗಳೂರಿನ (Bengaluru) ಯೋಗ ಶಿಕ್ಷಕಿಯನ್ನ ಸಂತೋಷ್ ಕುಮಾರ್ ಪತ್ನಿ ಬಿಂದು ಕೊಟ್ಟ ಸುಪಾರಿ ಮೇರೆಗೆ ಸತೀಶ್ ರೆಡ್ಡಿ ಅಂಡ್ ಕಿಡ್ನಾಪರ್ಸ್ ಗ್ಯಾಂಗ್ ಆಕ್ಟೋಬರ್ 23 ರಂದು ಅಪಾರ್ಟ್ಮೆಂಟ್‌ನಿಂದ (Apartment) ಕಾರಿನಲ್ಲಿ ಕರೆದುಕೊಂಡು ಬಂದಿದ್ರು. ಪ್ರೀ ಪ್ಲಾನ್‌ನಂತೆ ಆಕೆಯನ್ನ ಕಾರಲ್ಲಿ ಇಡೀ ದಿನ ಬೆಂಗಳೂರಿನ ನಾನಾ ಕಡೆ ಸುತ್ತಾಡಿಸಿ ಕೊನೆಗೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ರಸ್ತೆಯಲ್ಲಿನ ಗೌಡನಹಳ್ಳಿ ಧನಮಿಟ್ಟೇನಹಳ್ಳಿ ಬಳಿ ಮಾರ್ಗ ಮಧ್ಯೆ ನಿರ್ಜನ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಕಾರಿಂದ ಕೆಳಗೆ ಇಳಿಸಿ ಹಲ್ಲೆ ನಡೆಸಿದ್ದರು. ಆಕೆಯ ಮೈಮೇಲೆ ಇದ್ದ ಚಿನ್ನಾಭರಣ ಕಸಿದು, ಲೈಂಗಿಕ ದೌರ್ಜನ್ಯ ಮಾಡಿದ್ದರು. ಅರೆಬೆತ್ತಲೆಯಾಗಿದ್ದ ಆಕೆಯ ಕುತ್ತಿಗೆಗೆ ಚಾರ್ಜರ್ ವೈರ್‌ನಿಂದ ಬಲವಾಗಿ ಬಿಗಿದು ಉಸಿರುಗಟ್ಟಿಸಿದ್ದರು.. ಇನ್ನೇನು ಆಕೆ ಸತ್ತಳು ಅಂತ ಅಲ್ಲಿಂದ ಎಸ್ಕೇಪ್ ಆಗಿದ್ದರು. ಆದ್ರೆ ಯೋಗ ಶಿಕ್ಷಕಿಯಾಗಿದ್ದ ಅರ್ಚನಾ ಪ್ರಾಣಾಯಾಮದ ಟೆಕ್ನಿಕ್‌ಗಳ ಮೂಲಕ ಸತ್ತವಳಂತೆ ನಾಟಕ ಮಾಡಿದ್ರು, ಕಿಡ್ನಾಪರ್ಸ್ ಎಸ್ಕೇಪ್ ಆದ ನಂತರ ಮೆಲ್ಲಗೆ ಎದ್ದು ಅಲ್ಲಿಂದ ಊರಿನತ್ತ ಬಂದಿದ್ದಾರೆ.
ಮೊದಲೇ ಅರಬೆತ್ತಲೆಯಾಗಿದ್ದ ಆಕೆ ಮೈ ಮುಚ್ಚಿಕೊಳ್ಳಲು ಅಲ್ಲೇ ಎಲ್ಲೋ ಬಿದ್ದಿದ್ದ ಹಳೆಯ ಶರ್ಟ್ ಧರಿಸಿಕೊಂಡಿದ್ದಾಳೆ. ಇನ್ನೂ ಸೊಂಟದ ಕೆಳಭಾಗಕ್ಕೆ ಕಾಡು ಮನುಷ್ಯರಂತೆ ಸೊಪ್ಪು ಸುತ್ತಿಕೊಂಡು ದಾರಿಯುದ್ದಕ್ಕೂ ನಡೆದುಕೊಂಡೇ ಬಂದಿದ್ದು. ಕೋಳಿ ಕೂಗುವ ಶಬ್ದ ಕೇಳಿ ವೆಂಕಟೇಶ್ ಎಂಬುವವರ ಮನೆಯತ್ತ ಧಾವಿಸಿದ್ದಾರೆ. ಮುಂಜಾನೆ 5 ಗಂಟೆ ಸುಮಾರಿಗೆ ಇದ್ಯಾರಪ್ಪ ಅಂತ ಎದ್ದವರು ಶಾಕ್ ಆಗಿ ನೋಡಿ ಈಕೆಗೆ ಸಹಾಯ ಮಾಡಿದ್ದಾರೆ. ಇದನ್ನೂ ಓದಿ: ಜಮಾತ್-ಎ-ಇಸ್ಲಾಮಿ ಬೆಂಬಲದೊಂದಿಗೆ ಪ್ರಿಯಾಂಕಾ ವಯನಾಡಿನಲ್ಲಿ ಸ್ಪರ್ಧೆ – ಪಿಣರಾಯಿ ವಿಜಯನ್
ಇನ್ನೂ ಯೋಗ ಶಿಕ್ಷಕಿಯನ್ನ ಕೊಲೆ ಮಾಡಿದ್ದ ಜಾಗ ನಿರ್ಜನ ಅರಣ್ಯ ಪ್ರದೇಶವಾಗಿದ್ದು, ಕುರಚಲು ಗಿಡಗಳು ಬೆಳೆದುಕೊಂಡಿವೆ. ಎತ್ತ ನೊಡಿದರೂ ಮಳೆಯ ನೀರು ಹರಿದಿರೋ ದೊಡ್ಡ ಗುಂಡಿಗಳಿವೆ. ಆದೇ ಗುಂಡಿಯೊಳಗೆ ಈಕೆಯನ್ನ ಮುಚ್ಚಿ ಹಾಕಿದ್ದ ಕಿಡ್ನಾಪರ್ಸ್ ಆ ಗುಂಡಿ ಮೇಲೆ ಕುರಚಲು ಗಿಡಗಳ ಸೊಪ್ಪು ಸೆದೆ ಹಾಕಿ ಮುಚ್ಚಿ ಹಾಕಿದ್ದಾರೆ. ಆದ್ರೆ ಪ್ರಾಣಾಯಾಮದ ಟೆಕ್ನಿಕ್ ಮೂಲಕ ಬದುಕಿ ಬಂದಿದ್ದಾರೆ. ಸದ್ಯ ಆರೋಪಿಗಳನ್ನ ಬಂಧಿಸಿರುವ ಪೊಲೀಸರು ಕೃತ್ಯಕ್ಕೂ ಮುನ್ನ ಆಕೆಯನ್ನ ಹತ್ತಿಸಿಕೊಂಡಿದ್ದ ಅಪಾರ್ಟ್ಮೆಂಟ್, ಹಾಗೂ ಕಿಡ್ನಾಪರ್ ಸತೀಶ್ ರೆಡ್ಡಿ ಆಫೀಸ್, ಸೇರಿದಂತೆ ಪ್ಲಾನ್ ಮಾಡಲು ಸೇರಿದ್ದ ಸ್ಥಳವೊಂದರಲ್ಲಿ ಮಹಜರು ನಡೆಸಿದ್ದಾರೆ. ಇದನ್ನೂ ಓದಿ: ಕರ್ನಾಟಕವನ್ನ ಲೂಟಿ ಹೊಡೀತಿದ್ದಾರೆ.. ರಕ್ಷಣೆ ಮಾಡಿ – ನಿರ್ಮಲಾ ಸೀತಾರಾಮನ್ ಎದುರು ಹೈಡ್ರಾಮಾ
ಈ ಯೋಗ ಟೀಚರ್ ಅರ್ಚನಾಗೆ ಗುಂಡಿ ತೋಡಿಸಿದ್ದೇ ಈ ಬಿಂದು. ಈ ಬಿಂದುಗೆ ಅರ್ಚನಾ ತನ್ನ ಗಂಡನ ಜೊತೆ ಸಲುಗೆಯಿಂದ ಇರೋದು ಇಷ್ಟವಿರಲಿಲ್ಲ. ಗಂಡನೊಂದಿಗೆ ಈಕೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಅನ್ನೋ ಸಿಟ್ಟಿತ್ತು. ತನ್ನ ಗಂಡನನ್ನ ತನ್ನತ್ತಲೇ ಉಳಿಸಿಕೊಳ್ಳಬೇಕು ಅಂತ ಬಿಂದು ಯೋಚನೆ ಮಾಡಿದಳು, ಅದಕ್ಕೆ ದಾರಿ ಹುಡುಕೋಕೆ ಶುರು ಮಾಡಿದ್ಳು. ಈಗಂತೂ ಯಾರಿಗೆ ಯಾವ ಡೌಟ್ ಬಂದ್ರೂ ಹುಡುಕೋದೇ ಗೂಗಲ್‌ನಲ್ಲಿ. ಅದೇ ರೀತಿ ಬಿಂದು ಕೂಡ ಈ ಅರ್ಚನಾಗೆ ಒಂದು ಗತಿ ಕಾಣಿಸಬೇಕು ಅಂದ್ರೆ ಏನ್ ಮಾಡೋದು ಅಂತ ಗೂಗಲ್‌ನಲ್ಲಿ ಸರ್ಚ್ ಮಾಡಿದ್ದಾಳೆ. ಹೀಗೆ ಸರ್ಚ್ ಮಾಡಿದವಳಿಗೆ ಸಿಕ್ಕಿದ್ದು ಡಿಟೆಕ್ಟಿವ್ ಏಜೆನ್ಸಿ.. ಈ ಡಿಟೆಕ್ಟಿವ್ ಏಜೆನ್ಸಿಗೆ ಕಾಲ್ ಮಾಡ್ತಿದ್ದವಳಿಗೆ ಇಲ್ಲಿದ್ದಾನಲ್ಲ ಈ ಸತೀಶ್ ರೆಡ್ಡಿಯ ಕಾಂಟ್ಯಾಕ್ಟ್ ಸಿಕ್ಕಿಬಿಟ್ಟಿತ್ತು. ಡಿಟೆಕ್ಟಿವ್ ಏಜೆನ್ಸಿ ನಡೆಸುತ್ತಿದ್ದ ಸತೀಶ್ ರೆಡ್ಡಿಗೆ 4 ಲಕ್ಷ ರೂ. ಸುಪಾರಿ ಕೊಟ್ಟಿದ್ದಾಳೆ.
ಶಿವಮೊಗ್ಗ: ಜಾಹಿರಾತು ಫಲಕದ ಕಂಬಕ್ಕೆ ಬೈಕ್ (Bike) ಡಿಕ್ಕಿಯಾದ (Accident) ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವಿಗೀಡಾದ ಘಟನೆ ಶಿವಮೊಗ್ಗದ (Shivamogga) ಕಾನೇಹಳ್ಳ ಕ್ರಾಸ್ ಬಳಿ ನಡೆದಿದೆ.
ಮೃತರನ್ನು ಆರ್‍ಎಂಎಲ್ ನಗರದ ನಿವಾಸಿ ನಿಸಾರ್, ಮಂಜುನಾಥ ಬಡಾವಣೆ ನಿವಾಸಿ ಯಶವಂತ್ ಎಂದು ಗುರುತಿಸಲಾಗಿದೆ. ಮೃತರು ಗಾಜನೂರಿನ ಐಟಿಐ ಕಾಲೇಜು ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.
ವಿದ್ಯಾರ್ಥಿಗಳು ಕಾಲೇಜಿಗೆ ತೆರಳುತ್ತಿದ್ದರು. ಈ ವೇಳೆ ರಸ್ತೆ ಬದಿಯಲ್ಲಿದ್ದ ಜಾಹೀರಾತು ಕಂಬಕ್ಕೆ ಬೈಕ್ ಡಿಕ್ಕಿಯಾಗಿದೆ. ಈ ವೇಳೆ ಸವಾರರ ತಲೆಗೆ ಬಲವಾದ ಹೊಡೆತ ಬಿದ್ದಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತ ಯಶವಂತ್ ದ್ವಿತೀಯ ವರ್ಷದ ಹಾಗೂ ನಿಸಾರ್ ಮೊದಲನೆ ವರ್ಷದ ಐಟಿಐ ವಿದ್ಯಾರ್ಥಿಯಾಗಿದ್ದರು.
ಸ್ಥಳಕ್ಕೆ ತುಂಗಾ ನಗರ ಠಾಣೆ ಪೊಲೀಸರು (Police) ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು, ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು: ನಗರದ (Bengaluru) ಸಂಪಿಗೆ ಥಿಯೇಟರ್ ಮಾಲೀಕನ ಕೈಕಾಲು ಕಟ್ಟಿ ಮನೆಯಲ್ಲಿದ್ದ ಹಣ (Money) ಹಾಗೂ ಚಿನ್ನಾಭರಣ (Gold) ದೋಚಿದ್ದ ದಂಪತಿಯನ್ನು ಜಯನಗರ ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ.
ಬಂಧಿತರನ್ನು ನೇಪಾಳ ಮೂಲದ ಗಣೇಶ್ ಹಾಗೂ ಗೀತಾ ಎಂದು ಗುರುತಿಸಲಾಗಿದೆ. ಆರೋಪಿಗಳು ಸಂಪಿಗೆ ಥಿಯೇಟರ್ ಮಾಲೀಕ ನಾಗೇಶ್ ಅವರ ಮನೆಯಲ್ಲಿ 2 ವರ್ಷದಿಂದ ಕೆಲಸ ಮಾಡಿಕೊಂಡಿದ್ದರು. ಅ.2 ರಂದು ಜಯನಗರ 3ನೇ ಬ್ಲಾಕ್‍ನಲ್ಲಿರುವ ಮನೆಯಲ್ಲಿ ನಾಗೇಶ್ ಒಬ್ಬರೇ ಇದ್ದ ವೇಳೆ ದಂಪತಿ ಅವರ ಕೈಕಾಲು ಕಟ್ಟಿ 2ಲಕ್ಷ ರೂ. ನಗದು ಹಾಗೂ 1 ಕೆಜಿ ಚಿನ್ನವನ್ನು ದೋಚಿದ್ದರು.
ಈ ಸಂಬಂಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಸಿಟಿವಿ ಹಾಗೂ ಮೊಬೈಲ್ ನೆಟ್‍ವರ್ಕ್ ಆಧರಿಸಿ ಪೊಲೀಸರು (Police) ಆರೋಪಿಗಳನ್ನು ಮುಂಬೈನಲ್ಲಿ ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.