Tag: police

  • ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣಕ್ಕೆ GRAP-III ಜಾರಿ – ನಿಯಮ ಉಲ್ಲಂಘಿಸಿದವರಿಂದ 5 ಕೋಟಿಗೂ ಅಧಿಕ ದಂಡ ವಸೂಲಿ

    ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣಕ್ಕೆ GRAP-III ಜಾರಿ – ನಿಯಮ ಉಲ್ಲಂಘಿಸಿದವರಿಂದ 5 ಕೋಟಿಗೂ ಅಧಿಕ ದಂಡ ವಸೂಲಿ

    ನವದೆಹಲಿ: ವಾಯು ಮಾಲಿನ್ಯದಿಂದ ದೆಹಲಿ (Delhi Air Pollution) ತತ್ತರಿಸಿದೆ. ಸತತ 4ನೇ ದಿನವೂ ಗಾಳಿಯ ಗುಣಮಟ್ಟ ವಿಪರೀತವಾಗಿ ಹಾಳಾಗಿದೆ. ಎಷ್ಟರ ಮಟ್ಟಿಗೆ ಅಂದ್ರೆ ಇಲ್ಲಿನ ಪ್ರಜೆಗಳು ಏಕಕಾಲದಲ್ಲಿ 4 ಸಿಗರೇಟ್‌ಗೆ ಸಮಾನವಾದ ಹೊಗೆಯನ್ನು ಸೇವನೆ ಮಾಡ್ತಿದ್ದಾರೆ. ಪರಿಣಾಮ ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆ ಸೇರುವವರ ಸಂಖ್ಯೆ ಹೆಚ್ಚಿದೆ. ಮಾಸ್ಕ್ ಧರಿಸಿ.. ವಾಕಿಂಗ್ ಮಾಡ್ಬೇಡಿ.. ಉಗುರುಬೆಚ್ಚಗಿನ ನೀರು ಕುಡೀರಿ ಎಂದು ವೈದ್ಯರು ಸೂಚಿಸಿದ್ದಾರೆ.

    ಇನ್ನೂ ದೆಹಲಿಯಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರದಿಂದ (Delhi Government) ಮೂರನೇ ಹಂತದ ಕ್ರಮ ಜಾರಿಗೊಳಿಸಿದ್ದು, BS 3 ಪೆಟ್ರೋಲ್, BS IV ಡೀಸೇಲ್ ವಾಹನಗಳ ಸಂಚಾರಕ್ಕೆ ತಡೆ ನೀಡಲಾಗಿದೆ. ಗಡಿ ಪ್ರದೇಶಗಳಲ್ಲಿ ತಪಾಸಣೆ ತೀವ್ರಗೊಳಿಸಿದ್ದು, ಅಂತರರಾಜ್ಯ ಬಸ್‌ಗಳನ್ನು ಸಹ ಪರಿಶೀಲಿಸಲಾಗುತ್ತಿದೆ.

    ಇದರ ಹೊರತಾಗಿಯೂ ನಿಯಮವನ್ನು ಗಾಳಿಗೆ ತೂರಿದವರಿಗೆ ಅಧಿಕಾರಿಗಳು ದಂಡದ ಬಿಸಿ ಮುಟ್ಟಿಸಿದ್ದಾರೆ. ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಸುಮಾರು 550 ಚಲನ್‌ ವಿಧಿಸಿದ್ದು, 1 ಕೋಟಿ ರೂ.ಗಿಂತಲೂ ಅಧಿಕ ದಂಡ ವಿಧಿಸಲಾಗಿದೆ. ಇದರೊಂದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUCC) ಹೊಂದಿರದಿದ್ದಕ್ಕಾಗಿ 4,855 ವಾಹನಗಳಿಗೆ ಚಲನ್‌ ನೀಡಿದ್ದು, ಒಟ್ಟು 4.8 ಕೋಟಿ ದಂಡ ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ʻಬ್ಯಾಗ್‌ ಗದ್ದಲʼದ ನಡುವೆ ಅಮರಾವತಿಯಲ್ಲಿ ರಾಹುಲ್‌ ಗಾಂಧಿ ಹೆಲಿಕಾಪ್ಟರ್‌ ತಪಾಸಣೆb

    ಮಾನ್ಯ ಮಾಲಿನ್ಯ ನಿಯಂತ್ರಣ (PUC) ಪ್ರಮಾಣಪತ್ರ ಹೊಂದಿರದ ವಾಹನ ಚಾಲಕರಿಗೆ 10,000 ರೂ. ದಂಡ ವಿಧಿಸಲಾಗುತ್ತದೆ. ಹಾಗಾಗಿ ನಗರದ ಪೂರ್ವ, ಮಧ್ಯ ಮತ್ತು ಉತ್ತರ ವ್ಯಾಪ್ತಿಯಲ್ಲಿ BS-III ಪೆಟ್ರೋಲ್‌ ಮತ್ತು BS-IV ಡೀಸೇಲ್‌ ವಾಹನಗಳಿಗೆ ಒಟ್ಟು 293 ಚಲನ್‌, ಪಿಯುಸಿಸಿ ಸರ್ಟಿಫಿಕೇಟ್ ಇಲ್ಲದ ಕಾರಣಕ್ಕೆ ಒಟ್ಟು 2,404 ಚಲನ್‌ಗಳನ್ನು ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ, ಕಾಂಗ್ರೆಸ್ ದೂರು – ನಡ್ಡಾ, ಖರ್ಗೆಯಿಂದ ಸ್ಪಷ್ಟನೆ ಕೇಳಿದ ಚುನಾವಣಾ ಆಯೋಗ

    ಎಲ್ಲೆಲ್ಲಿ ಎಷ್ಟು ಚಲನ್‌ ವಿತರಣೆ?
    GRAP -III ನಿಯಮ ಉಲ್ಲಂಘಿಸಿದವರ ವಿರುದ್ಧ ನವದೆಹಲಿ ವ್ಯಾಪ್ತಿಯಲ್ಲಿ 63 ಚಲನ್‌, ಪಶ್ಚಿಮ ವಲಯದಲ್ಲಿ 73 ಮತ್ತು ದಕ್ಷಿಣ ವಲಯದಲ್ಲಿ 121 ಚಲನ್‌, ನವದೆಹಲಿ, ದಕ್ಷಿಣ ಮತ್ತು ಪಶ್ಚಿಮ ಶ್ರೇಣಿಗಳು ಪಿಯುಸಿಸಿ ಹೊಂದಿಲ್ಲದ ಕಾರಣ ಕ್ರಮವಾಗಿ 322, 894 ಮತ್ತು 1,235 ಚಲನ್‌ಗಳನ್ನು ವಿತರಿಸಲಾಗಿದೆ. ಸಂಚಾರ ಪೊಲೀಸರ ಮೂರು ವ್ಯಾಪ್ತಿಯಲ್ಲಿ ಶುಕ್ರವಾರ ಸುಮಾರು 3,000 ವಾಹನಗಳ ತಪಾಸಣೆ ನಡೆಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಸಂಚಾರ) ರಾಜೀವ್ ಕುಮಾರ್ ರಾವಲ್ ತಿಳಿಸಿದ್ದಾರೆ.

  • ಕಾರಿನೊಳಗೆ ಬೆಂಕಿ ಹಚ್ಚಿಕೊಂಡು ವ್ಯಕ್ತಿ ಆತ್ಮಹತ್ಯೆ? – ಗುರುತು ಪತ್ತೆಗೆ ಪೊಲೀಸರ ಹರಸಾಹಸ

    ಕಾರಿನೊಳಗೆ ಬೆಂಕಿ ಹಚ್ಚಿಕೊಂಡು ವ್ಯಕ್ತಿ ಆತ್ಮಹತ್ಯೆ? – ಗುರುತು ಪತ್ತೆಗೆ ಪೊಲೀಸರ ಹರಸಾಹಸ

    ಬೆಂಗಳೂರು: ಕಾರಿನೊಳಗೆ (Car) ವ್ಯಕ್ತಿಯೊಬ್ಬ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಬ್ಯಾಡರಹಳ್ಳಿ ಪೊಲೀಸ್ (Police) ಠಾಣಾ ವ್ಯಾಪ್ತಿಯ ಮುದ್ದಿನಪಾಳ್ಯದಲ್ಲಿ ನಡೆದಿದೆ. ಕಾರಿನಲ್ಲೇ ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

    ಮಧ್ಯಾಹ್ನ 3:30ರ ವೇಳೆಗೆ ಈ ಘಟನೆ ನಡೆದಿದೆ. ಕಾರಿಗೆ ಬೆಂಕಿ ಬಿದ್ದಿರುವ ಮಾಹಿತಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದಾರೆ. ಈ ವೇಳೆ ಕಾರಿನಲ್ಲಿ ವ್ಯಕ್ತಿಯ ಸುಟ್ಟು ಕರಕಲಾದ ಮೃತದೇಹ ಪತ್ತೆಯಾಗಿದೆ.

    ಸಾವನ್ನಪ್ಪಿದ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಸ್ಥಳಕ್ಕೆ ಬ್ಯಾಡರಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಸ್ಕೋಡಾ ಕಾರು ದೆಹಲಿ ನೋಂದಣಿ ನಂಬರ್ ಹೊಂದಿದ್ದು, ದೆಹಲಿಯ ಮಾಲೀಕರ ಎನ್‍ಒಸಿ ಪಡೆದುಕೊಳ್ಳಲಾಗಿದೆ. ಕಳೆದ ಮಾರ್ಚ್‍ನಲ್ಲಿ ಎನ್‍ಒಸಿಯನ್ನು ಜಯನಗರ ಆರ್‌ಟಿಒಗೆ ಸಲ್ಲಿಸಲಾಗಿದೆ. ಆದರೆ ಕಾರಿನ ಮಾಲೀಕತ್ವ ವರ್ಗಾವಣೆಗೆ ಹೆಸರು, ವಿಳಾಸ, ಫೋನ್ ನಂಬರ್ ನೀಡಿಲ್ಲ. ಹೀಗಾಗಿ ಕಾರಿನಲ್ಲಿ ಸುಟ್ಟುಹೋದ ವ್ಯಕ್ತಿ ಯಾರು ಎಂಬುದು ತಿಳಿಯುತ್ತಿಲ್ಲ.


    ಉಡುಪಿಯಲ್ಲಿ (Udupi) ಒಮ್ಮೆ ಕಾರಿನ ಎಮಿಷನ್ ಟೆಸ್ಟ್ ಮಾಡಿಸಲಾಗಿದ್ದು, ಅಲ್ಲಿ ದಾಖಲೆ ಸಿಗಬಹುದಾ ಎಂದು ಪೊಲೀಸರು ಪರಿಶೀಲಿಸುತ್ತಿದ್ದಾರೆ.

  • ಬೆಳಗಾವಿ| ಸಾರ್ವಜನಿಕವಾಗಿ ಮಹಿಳೆಯ ಬಟ್ಟೆ ಹರಿದು ಹಾಕಿ ಹಲ್ಲೆ

    ಬೆಳಗಾವಿ| ಸಾರ್ವಜನಿಕವಾಗಿ ಮಹಿಳೆಯ ಬಟ್ಟೆ ಹರಿದು ಹಾಕಿ ಹಲ್ಲೆ

    ಬೆಳಗಾವಿ: ನಗರದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದ್ದು ಸಾರ್ವಜನಿಕವಾಗಿ ಮಹಿಳೆಯ ಬಟ್ಟೆ ಹರಿದು ಹಾಕಿ ಹಲ್ಲೆ (Assault) ಮಾಡಿದ ಘಟನೆ ನಗರದ ವಡ್ಡರವಾಡಿಯಲ್ಲಿ ನಡೆದಿದೆ.

    ಮಗಳು ವೇಶ್ಯಾವಾಟಿಕೆ (Prostitution) ಮಾಡುತ್ತಿದ್ದಾಳೆ ಎಂದು ಆರೋಪಿಸಿ ಮನೆಗೆ ನುಗ್ಗಿ ಎಳೆದು ತಂದು ತಾಯಿ, ಮಗಳ ಮೇಲೆ ಮನೆಯ ಪಕ್ಕದ ಅಷ್ಟೇಕರ್ ಕುಟುಂಬ ಹಲ್ಲೆ (Assault) ಮಾಡಿರುವ ಆರೋಪ ಕೇಳಿಬಂದಿದೆ.

    ಈ ಸಂಬಂಧ ತಾಯಿ ಮತ್ತು ಮಗಳು ಎರಡು ದಿನ ಮಾಳಮಾರುತಿ ಠಾಣೆಗೆ ದೂರು ನೀಡಿದ್ದಾರೆ. ಆದರೆ ಠಾಣೆಯಲ್ಲಿ ದೂರು ಸ್ವೀಕರಿಸದ ಕಾರಣ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ನಗರ ಪೊಲೀಸ್‌ ಆಯುಕ್ತರ ಸೂಚನೆಯ ಮೇರೆಗೆ ಬಿಎನ್‌ಎಸ್ ಕಾಯ್ದೆಯಡಿ ಮೂವರ ವಿರುದ್ದ ಕೇಸ್‌ ದಾಖಲಾಗಿದೆ. ಇದನ್ನೂ ಓದಿ: ಉತ್ತರ ಪ್ರದೇಶ ಆಸ್ಪತ್ರೆಯಲ್ಲಿ ಅಗ್ನಿ ಅವಘಡ – 10 ಮಕ್ಕಳು ಸಜೀವ ದಹನ

     

    ಬಾಲಕಿಯ ಜೊತೆಗೆ ನಾಲ್ಕು ವರ್ಷದಿಂದ ತಾಯಿ ಮಗಳು ಮನೆಯಲ್ಲಿ ವಾಸವಾಗಿದ್ದಾರೆ. ಸಾರ್ವಜನಿಕವಾಗಿ ವೃದ್ಧೆಯ ಬ್ಲೌಸ್ ಹರಿದು ಹಾಕಿ ಅಮಾನವೀಯವಾಗಿ ವರ್ತನೆ ತೋರಿ ಹಲ್ಲೆ ಮಾಡುತ್ತಿರುವ ದೃಶ್ಯ ಮೊಬೈಲಿನಲ್ಲಿ ಸೆರೆಯಾಗಿದೆ.

    ದೂರಿನಲ್ಲಿ ಏನಿದೆ?
    ಸಂಬಂಧ ಇಲ್ಲದವರು ಮನೆಗೆ ಬಂದು ಹೋಗುತ್ತಿದ್ದಾರೆ. ವೇಶ್ಯಾವಾಟಿಕೆ ಮಾಡುತ್ತಿದ್ದೀರಿ ಎಂದು ಆರೋಪಿಸಿ ನಮ್ಮ ಮೇಲೆ ಅಮಾನವೀಯವಾಗಿ ವರ್ತಿಸಿ ಹಲ್ಲೆ ಮಾಡಿದ್ದಾರೆ. ನಾವು ಇರುವ ಮನೆಯನ್ನು ತೊರೆಯುವಂತೆ ಮಾಡಲು ಸುಖಾಸುಮ್ಮನೆ ಜಗಳ ತೆಗೆದು ಹಲ್ಲೆ ಮಾಡುತ್ತಿದ್ದಾರೆ. ಹೀಗಾಗಿ ನಮಗೆ ಜೀವ ಭಯ ಇದೆ ರಕ್ಷಣೆ ನೀಡಿ ಎಂದು ತಾಯಿ ಮತ್ತು ಮಗಳು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

    ಮೂವರು ಅರೆಸ್ಟ್‌:
    ಬೆಳಗಾವಿ ನಗರದ ವಡ್ಡರವಾಡಿಯಲ್ಲಿ ಮಹಿಳೆ ಮೇಲೆ ಅಮಾನವೀಯ ಘಟನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನ ಬಂಧನ ಮಾಡಲಾಗಿದೆ ಎಂದು ಕಮಿಷನರ್ ಯಡಾ ಮಾರ್ಟಿನ್ ಹೇಳಿದರು.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೇರೆ ವಿಷಯಕ್ಕೆ ದೂರುದಾರರು ಮತ್ತು ಅಕ್ಕ ಪಕ್ಕದ‌ ಮನೆಯವರ ಮಧ್ಯೆ ಜಗಳ ನಡೆದಿದೆ. ಪ್ರಕರಣ ಸಂಬಂಧ ವರದಿ ನೀಡುವಂತೆ ಡಿಸಿಪಿ ಅವರಿಗೆ ಸೂಚಿಸಿದ್ದೇನೆ. ಇನ್ನು ದೂರು ತೆಗೆದುಕೊಳ್ಳಲು ವಿಳಂಬ ಆಗಿರುವುದಕ್ಕೆ ಮತ್ತು ದೂರು ವಾಪಸ್ಸು ಪಡೆಯಲು ಪಂಚರು ಒತ್ತಡ ಹಾಕಿರುವ ಬಗ್ಗೆಯೂ ಪರಿಶೀಲನೆ ನಡೆಸುವುದಾಗಿ ಸ್ಪಷ್ಟಪಡಿಸಿದರು.

     

  • ದೆಹಲಿಯಲ್ಲಿ 900 ಕೋಟಿ ಮೌಲ್ಯದ ಕೊಕೇನ್‌ ವಶ – ಇಬ್ಬರು ಅರೆಸ್ಟ್‌

    ದೆಹಲಿಯಲ್ಲಿ 900 ಕೋಟಿ ಮೌಲ್ಯದ ಕೊಕೇನ್‌ ವಶ – ಇಬ್ಬರು ಅರೆಸ್ಟ್‌

    ನವದೆಹಲಿ: ಕೊರಿಯರ್ (Courier) ಒಂದರಲ್ಲಿ ಸುಮಾರು 900 ಕೋಟಿ ರೂ. ಮೌಲ್ಯದ 82.53 ಕೆಜಿ ಹೈಗ್ರೇಡ್ ಕೊಕೇನ್‌ನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ದೆಹಲಿಯಲ್ಲಿ (Delhi) ಅಧಿಕಾರಿಗಳು ನಡೆಸಿದ ಮಾದಕ ವಸ್ತುಗಳ ವಿರುದ್ಧದ ಕಾರ್ಯಾಚರಣೆಯಲ್ಲಿ 900 ಕೋಟಿ ರೂ. ಮೌಲ್ಯದ ಉನ್ನತ ದರ್ಜೆಯ ಕೊಕೇನ್‌ನ್ನು ವಶಪಡಿಸಿಕೊಂಡಿದ್ದಾರೆ. ಇನ್ನೂ ಗುಜರಾತ್‌ನಲ್ಲೂ ಅಧಿಕಾರಿಗಳು 700 ಕೆಜಿ ಮಾದಕ ವಸ್ತು ವಶಕ್ಕೆ ಪಡೆದಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

    ಒಂದೇ ದಿನ ಡ್ರಗ್ಸ್ ವಿರುದ್ಧದ ಪ್ರಮುಖ ಕಾರ್ಯಾಚರಣೆ ನಡೆದಿದೆ. ಇದು ಮಾದಕ ದ್ರವ್ಯ ಮುಕ್ತ ಭಾರತವನ್ನು ನಿರ್ಮಿಸುವ ಮೋದಿ ಸರ್ಕಾರದ ಅಚಲ ಸಂಕಲ್ಪವನ್ನು ತೋರಿಸುತ್ತದೆ ಎಂದು ಅವರು ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.

    ಡ್ರಗ್ ಸಿಂಡಿಕೇಟ್‌ನ್ನು ವಿದೇಶಗಳಲ್ಲಿನ ಗುಂಪು ನಡೆಸುತ್ತಿದೆ ಎಂದು ತನಿಖೆಗಳು ಬಹಿರಂಗಪಡಿಸಿವೆ. ವಶಪಡಿಸಿಕೊಂಡ ಕೊಕೇನ್‌ನ ಒಂದು ಭಾಗವನ್ನು ಕೊರಿಯರ್ ಕಾರ್ಗೋ ಮೂಲಕ ಆಸ್ಟ್ರೇಲಿಯಾಕ್ಕೆ ಕಳುಹಿಸಲು ತಯಾರಿ ನಡೆದಿತ್ತು. ಇನ್ನೂ ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಗುಪ್ತ ಹೆಸರುಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ವೃದ್ಧನಿಗೆ ಬೆದರಿಸಿ 41 ಲಕ್ಷ ವಂಚಿಸಿದ್ದ ನಕಲಿ ಸಿಬಿಐ ಅಧಿಕಾರಿಗಳು ಅರೆಸ್ಟ್‌!

    ವೃದ್ಧನಿಗೆ ಬೆದರಿಸಿ 41 ಲಕ್ಷ ವಂಚಿಸಿದ್ದ ನಕಲಿ ಸಿಬಿಐ ಅಧಿಕಾರಿಗಳು ಅರೆಸ್ಟ್‌!

    ಶಿವಮೊಗ್ಗ: ಸಿಬಿಐ (CBI) ಅಧಿಕಾರಿಗಳ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಕರೆ ಮಾಡಿ 41 ಲಕ್ಷ ರೂ. ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಶಿವಮೊಗ್ಗದ (Shivamogga) ಸಿಇಎನ್‌ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳನ್ನು ಉತ್ತರ ಪ್ರದೇಶ (Uttar Pradesh) ಮೂಲದ ಮೊಹಮ್ಮದ್ ಅಹಮದ್ (45), ಅಭಿಷೇಕ್ ಕುಮಾರ್ (27) ಎಂದು ಗುರುತಿಸಲಾಗಿದೆ. ಆರೋಪಿಗಳು ನಗರದ ಗೋಪಾಳ ಬಡಾವಣೆ ನಿವಾಸಿ ಆನಂದ್ (72) ಎಂಬವರಿಗೆ ಕರೆ ಮಾಡಿ ನಾವು ಸಿಬಿಐ ಅಧಿಕಾರಿಗಳು, ನಿಮ್ಮ ಆಧಾರ್ ಕಾರ್ಡ್ ನಂಬರಿನಿಂದ ದೊಡ್ಡ ಮಟ್ಟದ ಹಣ ವರ್ಗಾವಣೆ ಆಗಿದೆ. ನಿಮ್ಮ ಬ್ಯಾಂಕ್ ಖಾತೆ ಫ್ರೀಜ್ ಮಾಡಿದ್ದೇವೆ. ನಿಮ್ಮನ್ನು ಅರೆಸ್ಟ್ ಮಾಡಲು ವಾರೆಂಟ್ ಜಾರಿಯಾಗಿದೆ ಎಂದು ಬೆದರಿಸಿದ್ದರು.

    ನಿಮ್ಮನ್ನು ಅರೆಸ್ಟ್ ಮಾಡಬಾರದು ಎಂದರೆ ನಮ್ಮ ಬಳಿಯೇ ಸೆಟ್ಲ್‌ಮೆಂಟ್ ಮಾಡಿಕೊಳ್ಳಿ. ಇದಕ್ಕಾಗಿ 41 ಲಕ್ಷ ರೂ. ಹಣ ನೀಡುವಂತೆ ಹೇಳಿದ್ದರು. ನಕಲಿ ಸಿಬಿಐ ಅಧಿಕಾರಿಗಳ ಮಾತಿಗೆ ಹೆದರಿ ವ್ಯಕ್ತಿ ಹಣವನ್ನು ಕೊಟ್ಟಿದ್ದರು. ನಂತರದ ದಿನಗಳಲ್ಲಿ ಅವರು ಮೋಸ ಹೋಗಿರುವುದು ತಿಳಿದಿದೆ. ಬಳಿಕ ಶಿವಮೊಗ್ಗದ ಸಿಇಎನ್ ಠಾಣೆಗೆ ತೆರಳಿ ದೂರು ನೀಡಿದ್ದರು.

    ದೂರು ಸ್ವೀಕರಿಸಿದ್ದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ‌ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 23.89 ಲಕ್ಷ ರೂ. ನಗದನ್ನು ವಶಕ್ಕೆ ಪಡೆಯಲಾಗಿದೆ.

  • ಮುಸ್ಲಿಂ ಸಮುದಾಯದ ಕುರಿತು ಪ್ರಚೋದನಕಾರಿ ಹೇಳಿಕೆ – ಈಶ್ವರಪ್ಪ ವಿರುದ್ಧ ಸುಮೋಟೋ ಕೇಸ್

    ಮುಸ್ಲಿಂ ಸಮುದಾಯದ ಕುರಿತು ಪ್ರಚೋದನಕಾರಿ ಹೇಳಿಕೆ – ಈಶ್ವರಪ್ಪ ವಿರುದ್ಧ ಸುಮೋಟೋ ಕೇಸ್

    ಶಿವಮೊಗ್ಗ: ಸುದ್ದಿಗೋಷ್ಠಿಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ (K.S Eshwarappa) ವಿರುದ್ಧ ಜಯನಗರ ಪೊಲೀಸ್ (Police) ಠಾಣೆಯಲ್ಲಿ ಸುಮೋಟೋ ಕೇಸ್ (ಸ್ವಯಂಪ್ರೇರಿತ ಪ್ರಕರಣ) ದಾಖಲಾಗಿದೆ.

    ರೈತರಿಗೆ ವಕ್ಫ್ ಬೋರ್ಡ್ (Waqf Board) ನೋಟಿಸ್ ನೀಡಿದ್ದ ವಿವಾದದ ಬಗ್ಗೆ ನಗರದಲ್ಲಿ (Shivamogga) ನ.13 ರಂದು ಅವರು ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ, ಮುಸ್ಲಿಮರ ವಿರುದ್ಧ ಅವರು ತೀವ್ರ ವಾಗ್ದಾಳಿ ನಡೆಸಿದ್ದರು. ಸಾಧು ಸಂತರ ನೇತೃತ್ವದಲ್ಲಿ ದಂಗೆ ಏಳಬೇಕಾಗುತ್ತದೆ. ಹೇಗೆ ಆದರೆ ಮುಸಲ್ಮಾನರಿಗೆ ರಸ್ತೆಯಲ್ಲಿ ಹುಡುಕಿ ಹುಡುಕಿ ಹೊಡೆಯುತ್ತಾರೆ. ಮುಸ್ಲಿಮರನ್ನು ಕೊಲ್ಲುವಂತಹ ದಿನ ಬರುತ್ತದೆ ಎಂದು ಹೇಳಿದ್ದರು.

    ಇದೇ ವೇಳೆ, ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಮೀಸಲಾತಿ ವಿಚಾರವಾಗಿ ಮಾತನಾಡಿ, ಮೀಸಲಾತಿ ಕೊಡುತ್ತೇವೆ ಎನ್ನುತ್ತಾರೆ. ಹಿಂದೂಸ್ಥಾನ ಏನು ಪಾಕಿಸ್ತಾನ ಮಾಡಲು ಹೊರಟ್ಟಿದ್ದೀರಾ? ಸಾಧು ಸಂತರ ನೇತೃತ್ವದಲ್ಲಿ ದಂಗೆ ಏಳುತ್ತಾರೆ. ಬಾಂಗ್ಲಾದೇಶದಲ್ಲಿ ಹಲ್ಲೆ, ಕೊಲೆ ಆಯ್ತು. ಬಾಂಗ್ಲಾದೇಶದ ಪ್ರಧಾನಿಗೆ ಭಾರತದಲ್ಲಿ ರಕ್ಷಣೆ ಕೊಟ್ಟು ಇಟ್ಟಿದ್ದೇವೆ. ಪಾಕಿಸ್ತಾನದಲ್ಲಿ ಹಿಂದೂಗಳ ಹತ್ಯೆಯಾಯ್ತು. ಭಾರತದಲ್ಲಿಯೂ ಮುಸ್ಲಿಮರು ಈ ರೀತಿ ಮಾಡಲು ಹೊರಟ್ಟಿದ್ದಾರೆ ಎಂದು ಕಿಡಿಕಾರಿದ್ದರು.

    ಕಾಂಗ್ರೆಸ್‍ನವರು ವೋಟಿಗಾಗಿ ಭಾರತವನ್ನೇ ಮತಾಂತರ ಮಾಡಲು ಹೊರಟ್ಟಿದ್ದಾರೆ. ನೇರಾ ನೇರ ಖಂಡನೆ ಮಾಡಬೇಕು. ಹಿಂದೂಗಳಿಗೆ ಅಪಮಾನ ಮಾಡುತ್ತಿದ್ದಾರೆ. ಅವರ ಮೀಸಲಾತಿ ಕಿತ್ತುಕೊಳ್ಳಲು ಹೊರಟ್ಟಿದ್ದಾರೆ. ಹಿಂದೂ ಸಮಾಜ ದಂಗೆ ಎದ್ದರೆ ಈ ಸರ್ಕಾರ, ನೀವೇ ಕಾರಣರಾಗುತ್ತೀರಿ ಎಂದು ಎಚ್ಚರಿಕೆ ನೀಡಿದ್ದರು.

    ಅವರ ಈ ಹೇಳಿಕೆಯಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುತ್ತದೆ ಎಂಬ ಕಾರಣದಿಂದ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದಾರೆ.

  • ಮ್ಯಾಟ್ರಿಮೋನಿಯಲ್ಲಿ ಯುವತಿಯರನ್ನು ಪರಿಚಯಿಸಿಕೊಂಡು ಲಕ್ಷ ಲಕ್ಷ ವಂಚನೆ – ಆರೋಪಿ ಅರೆಸ್ಟ್

    ಮ್ಯಾಟ್ರಿಮೋನಿಯಲ್ಲಿ ಯುವತಿಯರನ್ನು ಪರಿಚಯಿಸಿಕೊಂಡು ಲಕ್ಷ ಲಕ್ಷ ವಂಚನೆ – ಆರೋಪಿ ಅರೆಸ್ಟ್

    ದಾವಣಗೆರೆ: ಮ್ಯಾಟ್ರಿಮೋನಿಯಲ್ಲಿ (Matrimony) ಯುವತಿಯರನ್ನು ಪರಿಚಯಿಸಿಕೊಂಡು ಮದುವೆಯಾಗುವುದಾಗಿ 62.83 ಲಕ್ಷ ರೂ. ಹಣ ಪಡೆದು ವಂಚಿಸಿದ (Fraud Case) ಆರೋಪಿಯನ್ನು ದಾವಣಗೆರೆಯ (Davanagere) ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಮಂಡ್ಯ ತಾಲ್ಲೂಕಿನ ಮಾಚಹಳ್ಳಿಯ ಎಂ.ಮಧು ಅಲಿಯಾಸ್ ಮಾದು (31) ಎಂದು ಗುರುತಿಸಲಾಗಿದೆ. ಆರೋಪಿ ಮ್ಯಾಟ್ರಿಮೋನಿಯಲ್ಲಿ ಯುವತಿಯರನ್ನು ಪರಿಚಯಿಸಿಕೊಂಡು ಮದುವೆಯಾಗುವುದಾಗಿ ಭರವಸೆ ಕೊಡುತ್ತಿದ್ದ. ಅಲ್ಲದೇ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಅವರಿಂದ ಹಣ ಪಡೆಯುತ್ತಿದ್ದ. ಹೀಗೆ ಹಲವಾರು ಯುವತಿಯರಿಗೆ ಆರೋಪಿ ವಂಚಿಸಿದ್ದ.

    ದಾವಣಗೆರೆ ನಗರದ ಯುವತಿಯೊಬ್ಬಳನ್ನು ಅರೋಪಿ ಪರಿಚಯಿಸಿಕೊಂಡು, ವಿವಾಹವಾಗುವುದಾಗಿ ನಂಬಿಸಿದ್ದ. ಆಕೆಗೆ ಮೈಸೂರಿನಲ್ಲಿ ರೈಲ್ವೆ ಇಲಾಖೆಯ ವರ್ಕ್‍ಶಾಪ್‍ನಲ್ಲಿ ಉದ್ಯೋಗ ಕೊಡಿಸುವುದಾಗಿ ಹಂತ ಹಂತವಾಗಿ 21 ಲಕ್ಷ ರೂ. ಹಣ ಪಡೆದು ವಂಚಿಸಿದ್ದ. ಯುವತಿಗೆ ವಂಚನೆಗೊಳಗಾಗಿದ್ದು ಅರಿವಾಗುತ್ತಿದ್ದಂತೆ ಆಕೆ ದೂರು ದಾಖಲಿಸಿದ್ದಳು.

    ಆರೋಪಿ ಮಧು ವಿರುದ್ಧ ಮಂಡ್ಯ, ದಾವಣಗೆರೆ, ಹರಿಹರ, ಬೆಂಗಳೂರು ಕಾಟನ್ ಪೇಟೆ, ಮೈಸೂರು, ಕೆ ಆರ್ ನಗರ, ಚಿಕ್ಕಮಗಳೂರು ಪೊಲೀಸ್ ಠಾಣೆಗಳಲ್ಲಿ ಕೂಡ ವಂಚನೆ ಪ್ರಕರಣ ದಾಖಲಾಗಿದೆ. ಇದುವರೆಗೂ ಆರೋಪಿ ಹಲವು ಯುವತಿಯರಿಗೆ 62.83 ಲಕ್ಷ ರೂ. ವಂಚಿಸಿದ್ದಾನೆ ಎಂದು ತನಿಖೆ ವೇಳೆ ತಿಳಿದುಬಂದಿದೆ.

    ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ.

  • ಪತಿಯ ಮೇಲೆ ಪಡಿತರ ಅಕ್ರಮ ಕೇಸ್‌ ದಾಖಲಾದ್ರೂ ಈಗ ಪತ್ನಿಗೆ ಸಿಕ್ತು ರೇಷನ್‌ ಅಂಗಡಿ ಲೈಸೆನ್ಸ್‌!

    ಪತಿಯ ಮೇಲೆ ಪಡಿತರ ಅಕ್ರಮ ಕೇಸ್‌ ದಾಖಲಾದ್ರೂ ಈಗ ಪತ್ನಿಗೆ ಸಿಕ್ತು ರೇಷನ್‌ ಅಂಗಡಿ ಲೈಸೆನ್ಸ್‌!

    – ಹಲವು ಠಾಣೆಗಳಲ್ಲಿ ತೇಲಿ ಮೇಲೆ ಹಲವು ಎಫ್‌ಐಆರ್‌ ದಾಖಲು
    – ಅಕ್ರಮ ಗೊತ್ತಿದ್ದರೂ ಪತ್ನಿಗೆ ಲೈಸೆನ್ಸ್‌ ಸಿಕ್ಕಿದ್ದು ಹೇಗೆ?

    ಬಾಗಲಕೋಟೆ: ‌ಜಿಲ್ಲೆಯಲ್ಲಿ ಪಡಿತರ (Ration), ಅಕ್ಷರದಾಸೋಹ ಯೋಜನೆ ಹಾಗೂ ಅಂಗನವಾಡಿಗಳಿಗೆ ಬರುವ ಆಹಾರ (Food) ಧಾನ್ಯಗಳ ಅಕ್ರಮ ದಂಧೆ ಎಗ್ಗಿಲ್ಲದೇ ಸಾಗುತ್ತಿದೆ. ಅಕ್ರಮ ದಂಧೆ ನಡೆಯುತ್ತಿದ್ದರೂ ಪೊಲೀಸರು (Police) ಕೇವಲ ಎಫ್‌ಐಆರ್‌ (FIR) ಹಾಕಿ ಬಿಡುತ್ತಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

    ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರ ನಿವಾಸಿ ರಾಘವೇಂದ್ರ ತೇಲಿ ಕಳೆದ ಹಲವು ವರ್ಷಗಳಿಂದ ಆಹಾರಧಾನ್ಯ ಅಕ್ರಮ ದಂಧೆ ಮಾಡುತ್ತಾ ಬಂದಿದ್ದಾನೆ. ಈತನ ಮೇಲೆ ಹಲವು ಎಫ್‌ಐಆರ್‌ ದಾಖಲಾಗಿದ್ದರೂ ತನ್ನ ಪತ್ನಿ ಹೆಸರಲ್ಲಿ ಪುನಃ ರೇಷನ್ ಅಂಗಡಿ ಆರಂಭಿಸಿ ಅಕ್ರಮ ದಂಧೆ ಶುರುವಿಟ್ಟುಕೊಂಡಿದ್ದಾನೆ ಎಂದು ಸ್ಥಳೀಯ ಜನರು ಗಂಭೀರ ಆರೋಪ ಮಾಡಿದ್ದಾರೆ.

    ಏನೇನು ಆರೋಪವಿದೆ?
    ಪಡಿತರ ಅಕ್ಕಿ,  ಅಕ್ಷರದಾಸೋಹ ಯೋಜನೆಯಡಿ ಬರುವ ಆಹಾರ ಧಾನ್ಯ, ಅಂಗನವಾಡಿಗೆ ಬರುವ ಮಕ್ಕಳ ಆಹಾರ ಧಾನ್ಯಗಳನ್ನು  ಅಕ್ರಮವಾಗಿ ಶೇಖರಣೆ ಮಾಡಿ ನೆರೆಯ ಮಹಾರಾಷ್ಟ್ರಕ್ಕೆ ಕಳ್ಳ ಸಾಗಾಣಿಕೆ ಮಾಡಿದ ಆರೋಪ ರಾಘವೇಂದ್ರ ತೇಲಿ ಮೇಲಿದೆ.

    ಈತನ ಮೇಲೆ ವಿವಿಧ ಪೊಲೀಸ್ ಠಾಣೆಯಲ್ಲಿ ಕಳ್ಳ ಸಾಗಾಣಿಕೆ ಮಾಡಿದ ಪ್ರಕರಣ ದಾಖಲಾಗಿದ್ದರೂ ಇಲ್ಲಿಯವರೆಗೆ ಪೊಲೀಸರು ಬಂಧಿಸಿಲ್ಲ ಎಂಬ ಆರೋಪ ಸ್ಥಳೀಯ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ. ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಮಾತ್ರ ಬರೀ ಅಕ್ರಮ ಸಾಗಣೆ ವಾಹನ ಚಾಲಕರ ಮೇಲೆ ಕೇಸ್ ದಾಖಲಿಸಿ ಸುಮ್ಮನಾಗುತ್ತಿದ್ದಾರೆ. ಇದನ್ನೂ ಓದಿ: ಕಬ್ಬು ಬೆಲೆ ನಿಗದಿಗಾಗಿ ಹೋರಾಟ- ಬಾಗಲಕೋಟೆಯಲ್ಲಿ ಸಿಎಂಗೆ ಘೇರಾವ್ ಹಾಕಲು ನಿರ್ಧರಿಸಿದ ಮುಧೋಳ ರೈತರು

    ರಾಘವೇಂದ್ರ ತೇಲಿ ವಿವಿಧ ಉದ್ದೇಶಗಳ‌ ಸಹಕಾರಿ ಸಂಘದ ಹೆಸರಲ್ಲಿ ಪಡಿತರ ಅಂಗಡಿ ನಡೆಸುತ್ತಿದ್ದ. ಈತನ ಅಕ್ರಮಗಳು ಬೆಳಕಿಗೆ ಬಂದ ನಂತರ ಆತನ ಹೆಸರಿನಲ್ಲಿದ್ದ ರೇಷನ್ ಅಂಗಡಿ ಲೈಸೆನ್ಸ್ ರದ್ದು ಮಾಡಲಾಗಿತ್ತು. ಕಳೆದ ಸೆಪ್ಟೆಂಬರ್‌ನಲ್ಲೂ ತೇಲಿ ವಿರುದ್ಧ ಅಕ್ರಮ ಅಕ್ಕಿ ಸಾಗಾಣಿಕೆ ಕೇಸ್ ದಾಖಲಾಗಿತ್ತು,

    ರಾಘವೇಂದ್ರ ತೇಲಿ ಮೇಲೆ ಕಳ್ಳಸಾಗಣೆ ಮಾಡಿದ ಪ್ರಕರಣ ದಾಖಲಾಗಿದ್ದರೂ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ ಯಾಕೆ? ಈತನ ಅಕ್ರಮ ಗೊತ್ತಿದ್ದರೂ ಪತ್ನಿಗೆ ಲೈಸೆನ್ಸ್‌ ಸಿಕ್ಕಿದ್ದು ಹೇಗೆ?  ಅಕ್ರಮದಲ್ಲಿ ಅಧಿಕಾರಿಗಳು, ಪೊಲೀಸರು ಭಾಗಿಯಾಗಿದ್ದಾರಾ ಎಂದು ಪ್ರಶ್ನಿಸಿ ಸ್ಥಳಿಯ ಜನರು ಪೊಲೀಸ್ ಇಲಾಖೆ ವಿರುದ್ಧವೇ ಆಕ್ರೋಶ ಹೊರ ಹಾಕುತ್ತಿದ್ದಾರೆ.

     

  • ಹಾವೇರಿ | ಯತ್ನಳ್ಳಿ ಬಳಿ 10 ಬ್ಯಾಲೇಟ್ ಬಾಕ್ಸ್ ಪತ್ತೆ!

    ಹಾವೇರಿ | ಯತ್ನಳ್ಳಿ ಬಳಿ 10 ಬ್ಯಾಲೇಟ್ ಬಾಕ್ಸ್ ಪತ್ತೆ!

    ಹಾವೇರಿ: ಶಿಗ್ಗಾಂವಿ ಉಪಚುನಾವಣೆಯ ಬಳಿಕ ಹಾವೇರಿ (Haveri) ತಾಲ್ಲೂಕಿನ ಯತ್ನಳ್ಳಿ ಬಳಿಯ ಖಾಲಿ ಲೇಔಟ್‌ನಲ್ಲಿ 10 ಬ್ಯಾಲೆಟ್ ಬಾಕ್ಸ್‌ಗಳು (Ballot Boxes) ಪತ್ತೆಯಾಗಿವೆ.

    ಎಪಿಎಂಸಿಯಲ್ಲಿ ಇರುವ ಒಂದು ಗೋದಾಮಿನಲ್ಲಿ ಹಳೆಯ ನಿರುಪಯುಕ್ತ ಬ್ಯಾಲೆಟ್ ಬಾಕ್ಸ್‌ಗಳನ್ನು ಕಂದಾಯ ಇಲಾಖೆಯವರು ಹಲವು ವರ್ಷಗಳ ಹಿಂದೆ ತಂದಿಟ್ಟಿದ್ದರು. ಯಾರೋ ಕಿಡಿಗೇಡಿಗಳು ಬಾಕ್ಸ್‌ಗಳನ್ನು ಮಾರುವ ಉದ್ದೇಶದಿಂದ ಕಳ್ಳತನ ಮಾಡಿದ್ದಾರೆ. ಮಾರಲು ಆಗುವುದಿಲ್ಲ ಎಂದು ತಿಳಿದು ಯತ್ನಳ್ಳಿ ಗ್ರಾಮದ ಬಳಿ ಇರುವ ಲೇಔಟ್ ಒಂದರ ಬಳಿ ಎಸೆದು ಹೋಗಿದ್ದಾರೆ.

    ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ ಡಾ.ವಿಜಯಮಾಹಂತೇಶ ದಾನಮ್ಮನವರ, ಪತ್ತೆಯಾಗಿರುವುದು‌ 2020ರ ಚುನಾವಣೆಯಲ್ಲಿ ಬಳಕೆ ಮಾಡಿದ ಬ್ಯಾಲೇಟ್ ಬಾಕ್ಸ್‌ಗಳಾಗಿವೆ. ಯಾರೋ ಕಳ್ಳರು ಕದ್ದು ಇಲ್ಲಿ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.

    ಹಾವೇರಿ (Haveri) ನಗರ ಪೊಲೀಸರು (Police) ಈ ಬಗ್ಗೆ ತನಿಖೆ ಮಾಡುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

  • ಭತ್ತ ಖರೀದಿಸಿ ಕೋಟಿ ಕೋಟಿ ವಂಚನೆ, ತಿರುಪತಿಯಲ್ಲೂ ರೈತರಿಗೆ ನಾಮ – ಆರೋಪಿ ಅರೆಸ್ಟ್!

    ಭತ್ತ ಖರೀದಿಸಿ ಕೋಟಿ ಕೋಟಿ ವಂಚನೆ, ತಿರುಪತಿಯಲ್ಲೂ ರೈತರಿಗೆ ನಾಮ – ಆರೋಪಿ ಅರೆಸ್ಟ್!

    ದಾವಣಗೆರೆ: ರೈತರಿಂದ (Farmers) ಮೆಕ್ಕೆಜೋಳ ಹಾಗೂ ಭತ್ತ ಖರೀದಿಸಿ ಅವರಿಗೆ ಹಣ ನೀಡದೆ ಕೋಟ್ಯಂತರ ರೂ. ವಂಚನೆ ಮಾಡಿದ್ದ ಆರೋಪಿಯನ್ನು ದಾವಣಗೆರೆಯ (Davanagere) ಸಿಇಎನ್ ಪೊಲೀಸರು (Police) ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಶ್ರೀನಿವಾಸ್ ಭೋವಿ ಎಂದು ಗುರುತಿಸಲಾಗಿದೆ. ಆರೋಪಿ ರಾಜ್ಯದ ಹಲವು ಕಡೆಗಳಲ್ಲಿ ರೈತರಿಂದ ಮೆಕ್ಕೆಜೋಳ ಹಾಗೂ ಭತ್ತ ಖರೀದಿ ಮಾಡಿದ್ದ. ಆದರೆ ರೈತರಿಗೆ ಹಣ ಕೊಡದೇ ವಂಚಿಸಿದ್ದ. ಆತನ ವಿರುದ್ಧ ದಾವಣಗೆರೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು.

    ಶ್ರೀನಿವಾಸ್ ಭೋವಿ ರಾಜ್ಯದಲ್ಲಿ ಮಾತ್ರವಲ್ಲದೇ ಆಂಧ್ರ ಪ್ರದೇಶದ ತಿರುಪತಿ (Tirupati) ಜಿಲ್ಲೆಯಲ್ಲೂ ರೈತರಿಗೆ ವಂಚನೆ ಮಾಡಿದ್ದಾನೆ. ಆತನ ವಿರುದ್ದ ಸತ್ಯವೇಡು ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

    ಬಾಡಾ ಕ್ರಾಸ್ ಬಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.