Tag: police

  • ಹೊಸ ವರ್ಷಕ್ಕೆ ಬೆಂಗಳೂರಿನಲ್ಲಿರುವ ಎಲ್ಲಾ ಡಿಸಿಪಿಗಳಿಗೆ ಮೊಬೈಲ್‌ ಗಿಫ್ಟ್‌

    ಹೊಸ ವರ್ಷಕ್ಕೆ ಬೆಂಗಳೂರಿನಲ್ಲಿರುವ ಎಲ್ಲಾ ಡಿಸಿಪಿಗಳಿಗೆ ಮೊಬೈಲ್‌ ಗಿಫ್ಟ್‌

    ಬೆಂಗಳೂರು: ಹೊಸ ವರ್ಷಕ್ಕೆ (New Year) ರಾಜಧಾನಿ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಿಸಿಪಿ (DCP) ರ‍್ಯಾಂಕ್ ಅಧಿಕಾರಿಗಳಿಗೆ ಹೊಸ ಮೊಬೈಲ್(Mobile Phone) ಉಡುಗೊರೆಯಾಗಿ ದೊರೆತಿದೆ.

    ಹೊಸ ವರ್ಷಕ್ಕೆ ನಗರ ಪೊಲೀಸ್ ಆಯುಕ್ತರ ಕಚೇರಿಯಿಂದ ವಿಶೇಷ ಜಿಪಿಎಸ್ ಟೆಕ್ನಾಲಜಿ ಅಳವಡಿಸಿರುವ ಸ್ಯಾಮ್‌ಸಂಗ್‌ ಮೊಬೈಲ್ ಉಡುಗೊರೆಯಾಗಿ (Gift) ನೀಡಲಾಗಿದೆ. ಇದನ್ನೂ ಓದಿ: ಮಗುವಿಗೆ ಸೌತೆಕಾಯಿ ತಿನ್ನಿಸಬೇಡ ಅಂದಿದ್ದಕ್ಕೆ ತಂಗಿಯನ್ನೇ ಕೊಂದ ಅಣ್ಣ!

    ಇಂದು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹೊಸ ವರ್ಷದ ಹಿನ್ನೆಲೆಯಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ದಯಾನಂದ್ (Dayananda) ಅವರು ಈ ಫೋನ್‌ ವಿತರಿಸಿದ್ದಾರೆ.

    ಎಲ್ಲಾ ಡಿಸಿಪಿ ರ‍್ಯಾಂಕ್ ಅಧಿಕಾರಿಗಳು ಕಡ್ಡಾಯವಾಗಿ ಜಿಪಿಎಸ್ ಮೊಬೈಲ್ ಬಳಸಲು ಆದೇಶ ನೀಡಲಾಗಿದೆ.

     

  • ಡ್ಯೂಟಿ ಚೇಂಜ್ ಮಾಡಿದ್ದಕ್ಕೆ ಆತ್ಮಹತ್ಯೆಗೆ ಯತ್ನ ಬೆದರಿಕೆ – ಠಾಣೆಯಲ್ಲಿ ಪೊಲೀಸ್ ಪೇದೆ ಹೈಡ್ರಾಮಾ

    ಡ್ಯೂಟಿ ಚೇಂಜ್ ಮಾಡಿದ್ದಕ್ಕೆ ಆತ್ಮಹತ್ಯೆಗೆ ಯತ್ನ ಬೆದರಿಕೆ – ಠಾಣೆಯಲ್ಲಿ ಪೊಲೀಸ್ ಪೇದೆ ಹೈಡ್ರಾಮಾ

    – ಪೇದೆ ಹೈಡ್ರಾಮಾಕ್ಕೆ ಹೆದರಿದ ಇನ್‌ಸ್ಪೆಕ್ಟರ್‌ಗೆ ಬಿಪಿ ಲೋ; ಆಸ್ಪತ್ರೆಗೆ ದಾಖಲು

    ಬೆಳಗಾವಿ: ಡ್ಯೂಟಿ ಚೇಂಜ್ ಮಾಡಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸುವ ರೀತಿಯಲ್ಲಿ ಪೇದೆ ಹೈಡ್ರಾಮಾ ಮಾಡಿದ ಘಟನೆ ಬೆಳಗಾವಿ (Belagavi) ನಗರದ ಉದ್ಯಮಬಾಗ ಪೊಲೀಸ್  (Udyambag) ಠಾಣೆಯಲ್ಲಿ ನಡೆದಿದೆ.

    ಆತ್ಮಹತ್ಯೆಗೆ ಯತ್ನಿಸಿದ ಪೇದೆಯನ್ನು ಮುದಕಪ್ಪ ಉದಗಟ್ಟಿ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಆರ್ಥಿಕ ಸಂಕಷ್ಟದಲ್ಲಿ ಹಿಮಾಚಲ ಸರ್ಕಾರ – ಜನರಿಗೆ ನೀಡಿದ್ದ ‘ಗ್ಯಾರಂಟಿ’ ವಾಪಸ್ ಅಭಿಯಾನ ಶುರು

    ಎರಡು ದಿನ ರಜೆಗೆ ಹೋಗಿ ಬಂದಿದ್ದ ಪೇದೆ ಮುದಕಪ್ಪನಿಗೆ ಡ್ಯೂಟಿ ಬದಲಿಸಿದ್ದರು. ಇದನ್ನು ಪ್ರಶ್ನೆ ಮಾಡಿದಾಗ ಬೆಳಗ್ಗೆ ನಿಯೋಜಿಸಿದ್ದ ಜಾಗಕ್ಕೆ ಹೋಗಬೇಕು ಎಂದು ಸೂಚನೆ ನೀಡಿದ್ದರು. ಇದರಿಂದ ತಾನು ವಿಷ ಸೇವಿಸುತ್ತೇನೆಂದು ಹೇಳಿ ಇನ್ಸ್ಪೆಕ್ಟರ್ ಡಿ.ಕೆ ಪಾಟೀಲ್ ಚೇಂಬರ್‌ನಲ್ಲಿ ಆತ್ಮಹತ್ಯೆ ಡ್ರಾಮಾ ಮಾಡಿ ಬಿದ್ದು ಉರುಳಾಡಿದ್ದ. ತಕ್ಷಣವೇ ಆಸ್ಪತ್ರೆಗೆ ರವಾನಿಸಿ, ಆರೋಗ್ಯ ತಪಾಸಣೆ ಮಾಡಿದಾಗ ವೈದ್ಯರು ಯಾವುದೇ ವಿಷ ಸೇವಿಸಿಲ್ಲ ಎಂದು ಹೇಳಿದ್ದರು. ಬಳಿಕ ಮೇಲಾಧಿಕಾರಿಗಳು ಪೇದೆಗೆ ಬುದ್ಧಿವಾದ ಹೇಳಿ ಮನೆಗೆ ಕಳುಹಿಸಿದ್ದರು.

    ಪೇದೆಯ ನಡೆಯಿಂದ ಇನ್ಸ್ಪೆಕ್ಟರ್ ಡಿ.ಕೆ ಪಾಟೀಲ್ ಅವರ ಬೀಪಿ ಲೋ ಆಗಿ ತಕ್ಷಣವೇ ಅವರನ್ನು ಯಳ್ಳೂರ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಸುದ್ದಿ ತಿಳಿದು ಖಡೇಬಜಾರ್ ಎಸಿಪಿ ಶೇಖರಪ್ಪ ಉದ್ಯಮಬಾಗ ಠಾಣೆಗೆ ಆಗಮಿಸಿದರು. ಠಾಣೆಯಲ್ಲಿರುವ ಸಿಬ್ಬಂದಿಯಿಂದ ಘಟನೆ ಕುರಿತು ಮಾಹಿತಿ ಪಡೆದರು. ಹೈಡ್ರಾಮಾ ಕುರಿತು ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್‌ಗೆ ಮಾಹಿತಿ ನೀಡಿದರು.

    ನ.28ರಂದು ಪೇದೆ ವಿಠ್ಠಲ್ ಮುನಿಹಾಳ ಎಂಬಾತ ನಾಲ್ಕು ಪುಟಗಳ ಡೆತ್‌ನೋಟ್ ಬರೆದಿಟ್ಟು ಹೋಗಿದ್ದ. ಡೆತ್‌ನೋಟ್‌ನಲ್ಲಿ ಸಿಪಿಐ ಕಿರುಕುಳ ನೀಡ್ತಿದ್ದಾರೆಂದು ಉಲ್ಲೇಖಿಸಿದ್ದ. ತಕ್ಷಣ ಆತನನ್ನು ಹುಡುಕಿ ಸಹೋದ್ಯೋಗಿಗಳು ಜೀವ ಉಳಿಸಿದ್ದರು.ಇದನ್ನೂ ಓದಿ: ನಮ್ಮ ಮೆಟ್ರೋ ‘ಯೆಲ್ಲೋ ಲೈನ್’‌ ಸೇವೆ ಆರಂಭ ಯಾವಾಗ?- ವಿಳಂಬಕ್ಕೆ ಕಾರಣ ಬಿಚ್ಚಿಟ್ಟ ತೇಜಸ್ವಿ ಸೂರ್ಯ

  • ಪಾರ್ಟಿ ಮೂಡಲ್ಲಿದ್ದ ಪ್ರಿಯತಮನಿಗೆ ಏಕಾಏಕಿ ಚಾಕು ಇರಿದ ಪ್ರೇಯಸಿ!

    ಪಾರ್ಟಿ ಮೂಡಲ್ಲಿದ್ದ ಪ್ರಿಯತಮನಿಗೆ ಏಕಾಏಕಿ ಚಾಕು ಇರಿದ ಪ್ರೇಯಸಿ!

    ಹಾಸನ: ಪ್ರಿಯತಮೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಜಗಳ ಮಾಡಿ, ಏಕಾಏಕಿ ಚಾಕು ಇರಿದ ಘಟನೆ ನಗರದ (Hassan) ಬಿ.ಎಂ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ಬಳಿ ನಡೆದಿದೆ.

    ಚಾಕು ಇರಿತಕ್ಕೊಳಗಾದ ಯುವಕನನ್ನು ಎ.ಗುಡುಗನಹಳ್ಳಿ ಗ್ರಾಮದ ಮನುಕುಮಾರ್ (25) ಎಂದು ಗುರುತಿಸಲಾಗಿದೆ. ಚಾಕು ಇರಿದ ಯುವತಿಯನ್ನು ಭವಾನಿ ಎಂದು ಗುರುತಿಸಲಾಗಿದೆ. ಇಬ್ಬರೂ ಒಂದೇ ಗ್ರಾಮದವರಾಗಿದ್ದಾರೆ. ಮನುಕುಮಾರ್ ಹಾಗೂ ಭವಾನಿ ಜೊತೆಯಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದರು. ಪರಸ್ಪರ ಪ್ರೀತಿಸುತ್ತಿದ್ದರು, ಕೆಲ ದಿನಗಳಿಂದ ಇಬ್ಬರು ದೂರವಾಗಿದ್ದರು ಎಂದು ತಿಳಿದು ಬಂದಿದೆ.

    ಮಂಗಳವಾರ ರಾತ್ರಿ ಹೊಸ ವರ್ಷಾಚರಣೆಗೆ ಸ್ನೇಹಿತರ ಜೊತೆ ಖಾಸಗಿ ಹೋಟೆಲ್‍ಗೆ ಮನುಕುಮಾರ್ ಬಂದಿದ್ದ. ಈ ವೇಳೆ ಯುವತಿ ಪದೇ ಪದೇ ಮನುಕುಮಾರ್‌ಗೆ ಕರೆ ಮಾಡಿದ್ದಾಳೆ. ಬಳಿಕ ತಡರಾತ್ರಿ 12:30ರ ವೇಳೆಗೆ ಹೋಟೆಲ್ ಬಳಿ ಬಂದ ಭವಾನಿ, ಅಲ್ಲೇ ಬಿದ್ದಿದ್ದ ಪಾಸ್ ಹಾಕಿಕೊಂಡು ಗೇಟ್ ಒಳಗೆ ಪ್ರವೇಶಿಸಿದ್ದಾಳೆ. ಅಷ್ಟರಲ್ಲಿ ಗೇಟ್ ಬಳಿ ಬಂದ ಮನುಕುಮಾರ್ ಬಂದಿದ್ದಾನೆ. ಆಗ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಈ ವೇಳೆ ಸ್ನೇಹಿತರು ಜಗಳ ಬಿಡಿಸಲು ಮುಂದಾಗಿದ್ದಾರೆ. ಅಷ್ಟರಲ್ಲೇ ಯುವತಿ ಆತನಿಗೆ ಏಕಾಏಕಿ ಚಾಕು ಇರಿದಿದ್ದಾಳೆ.

    ಗಾಯಗೊಂಡಿರುವ ಯುವಕನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ನಡೆದ ಸ್ಥಳಕ್ಕೆ ಕೆ.ಆರ್.ಪುರಂ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಕೌಟುಂಬಿಕ ಕಲಹ – ನದಿಗೆ ಹಾರಿ ಪ್ರಾಣ ಬಿಟ್ಟ ಇಂಜಿನಿಯರ್

    ಕೌಟುಂಬಿಕ ಕಲಹ – ನದಿಗೆ ಹಾರಿ ಪ್ರಾಣ ಬಿಟ್ಟ ಇಂಜಿನಿಯರ್

    ಹಾಸನ: ಕೌಟುಂಬಿಕ ಕಲಹದಿಂದ ಬೇಸತ್ತು ಇಂಜಿನಿಯರ್ (Engineer) ಒಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನದ (Hassan) ಶೆಟ್ಟಿಹಳ್ಳಿ ಗ್ರಾಮದ ಬಳಿಯ ಹೇಮಾವತಿ ನದಿಯಲ್ಲಿ ನಡೆದಿದೆ.

    ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಹಾಸನದ ಇಂದಿರಾನಗರದ ನಿವಾಸಿ ಪ್ರಮೋದ್ (35) ಎಂದು ಗುರುತಿಸಲಾಗಿದೆ. ಪ್ರಮೋದ್‌ ಹಾಗೂ ಅವರ ಪತ್ನಿ ನಡುವೆ ಪದೇ ಪದೇ ಜಗಳವಾಗುತ್ತಿತ್ತು. ಆಕೆಯ ತಮ್ಮಂದಿರು ಅವರಿಗೆ ಕಿರುಕುಳ ನೀಡುತ್ತಿದ್ದರು, ಇದರಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

    ಡಿ.29 ರಂದು ಸಂಜೆ ಪ್ರಮೋದ್ ಮನೆಯಲ್ಲಿಯೇ ಮೊಬೈಲ್ ಬಿಟ್ಟು ತೆರಳಿದ್ದರು. ಪ್ರಮೋದ್‌ಗಾಗಿ ಪೋಷಕರು ಹುಡುಕಾಟ ನಡೆಸಿದ್ದು, ನಂತರ ಕೆ.ಆರ್.ಪುರಂ ಪೊಲೀಸ್ ಠಾಣೆಗೆ ಕಾಣೆಯಾದ ಬಗ್ಗೆ ದೂರು ನೀಡಿದ್ದರು. ಅಂದು ರಾತ್ರಿ ಹೇಮಾವತಿ ನದಿಯ ಸೇತುವೆ ಬಳಿ ಪ್ರಮೋದ್ ಬೈಕ್ ಪತ್ತೆಯಾಗಿತ್ತು. ಅದನ್ನು ಕಂಡ ಸ್ಥಳೀಯರು ಪರಿಶೀಲನೆ ನಡೆಸಿದ ವೇಳೆ ಬೈಕ್‌ನಲ್ಲಿ ಬ್ಯಾಂಕ್‌ನ ಪಾಸ್‌ಬುಕ್‌ಗಳು ಪತ್ತೆಯಾಗಿದ್ದವು. ಪಾಸ್‌ಬುಕ್‌ನಲ್ಲಿದ್ದ ಫೋನ್ ನಂಬರ್‌ಗೆ ಕರೆ ಮಾಡಿದ ವೇಳೆ ಪ್ರಮೋದ್ ತಂದೆ ಕರೆ ಸ್ವೀಕರಿಸಿದ್ದು, ನದಿಯ ಬಳಿ ದ್ವಿಚಕ್ರ ವಾಹನ ನಿಂತಿರುವ ಬಗ್ಗೆ ಮಾಹಿತಿ ನೀಡಿದ್ದರು.

    ಡಿ.30 ರಿಂದ ಹೇಮಾವತಿ ನದಿಯಲ್ಲಿ ಪೊಲೀಸರು (Police) ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದು, ಬುಧವಾರ ಬೆಳಗ್ಗೆ ಪ್ರಮೋದ್ ಶವ ನದಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಆಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಅಸ್ಸಾಂನಲ್ಲಿ ಅಲ್‌ ಖೈದಾ ಉಗ್ರ ಅರೆಸ್ಟ್‌ – ಬಂಧಿತರ ಸಂಖ್ಯೆ 12ಕ್ಕೆ ಏರಿಕೆ

    ಅಸ್ಸಾಂನಲ್ಲಿ ಅಲ್‌ ಖೈದಾ ಉಗ್ರ ಅರೆಸ್ಟ್‌ – ಬಂಧಿತರ ಸಂಖ್ಯೆ 12ಕ್ಕೆ ಏರಿಕೆ

    ದಿಸ್ಪುರ್:‌ ಅಲ್ ಖೈದಾ (Al Qaeda) ಉಗ್ರರ ಸಂಪರ್ಕದಲ್ಲಿದ್ದ ವ್ಯಕ್ತಿಯೊಬ್ಬನನ್ನು ಅಸ್ಸಾಂ ವಿಶೇಷ ಕಾರ್ಯಾಚರಣೆ ಪಡೆ ಅಸ್ಸಾಂನ (Assam) ಕೊಕ್ರಜಾರ್ ಜಿಲ್ಲೆಯಲ್ಲಿ ಬಂಧಿಸಿದೆ.

    ಬಂಧಿತನನ್ನು ಗಾಜಿ ರೆಹಮಾನ್ (35) ಎಂದು ಗುರುತಿಸಲಾಗಿದೆ. ಆರೋಪಿ ಬಾಂಗ್ಲಾದೇಶ ಮೂಲದ ಭಯೋತ್ಪಾದಕ ಸಂಘಟನೆ ಅನ್ಸರುಲ್ಲಾ ಬಾಂಗ್ಲಾ ತಂಡದ (ಎಬಿಟಿ) ಪ್ರಮುಖ ಸದಸ್ಯ ಎಂದು ತಿಳಿದು ಬಂದಿದೆ. ಆತ ಅಲ್‌ ಖೈದಾ ಉಗ್ರರ ಸಂಪರ್ಕದಲ್ಲಿದ್ದ. ಅಸ್ಸಾಂನ ವಿಶೇಷ ಕಾರ್ಯಪಡೆ ಆಪರೇಷನ್ ಪರ್ಘಾಟ್ ಅಡಿಯಲ್ಲಿ ಭಯೋತ್ಪಾದಕರನ್ನು ಬಂಧಿಸಲು ಕಾರ್ಯಾಚರಣೆ ನಡೆಸುತ್ತಿದೆ. ಅದರ ಭಾಗವಾಗಿ ರೆಹಮಾನ್ ಬಂಧನವಾಗಿದೆ.

    ಭಯೋತ್ಪಾದನಾ ಘಟಕದ ಕನಿಷ್ಠ 12 ಸಹಚರರನ್ನು ಇದುವರೆಗೆ ಬಂಧಿಸಲಾಗಿದೆ. ಈ ತಿಂಗಳ ಆರಂಭದಲ್ಲಿ, ಅಸ್ಸಾಂ ಪೊಲೀಸರು ‘ಸ್ಲೀಪರ್ ಸೆಲ್’ ನೆಟ್‌ವರ್ಕ್ ಮೇಲೆ ದಾಳಿ ನಡೆಸಿದ್ದರು. ಅಲ್ಲಿ ಭಯೋತ್ಪಾದನಾ ಘಟಕದ ಸದಸ್ಯರು ಭಾರತದ ವಿವಿಧ ಭಾಗಗಳಲ್ಲಿ ‘ಸ್ಲೀಪರ್ ಸೆಲ್’ಗಳನ್ನು ರಚಿಸಿ ಹಿಂದೂ ಸಮುದಾಯಕ್ಕೆ ಸೇರಿದ ನಾಯಕರನ್ನು ಹತ್ಯೆ ಮಾಡಲು ಯೋಜಿಸಿದ್ದರು ಎಂದು ಪೊಲೀಸರು (Police) ತಿಳಿಸಿದ್ದಾರೆ.‌

    ಡಿ.17 ಮತ್ತು 18ರ ಮಧ್ಯರಾತ್ರಿ, ಭಯೋತ್ಪಾದನಾ ಘಟಕದ 8 ಸದಸ್ಯರನ್ನು ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಬಂಧಿಸಲಾಗಿತ್ತು. ಅವರು ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ನಿರ್ವಾಹಕರಾಗಿದ್ದರು ಎಂದು ವರದಿಯಾಗಿದೆ. ಡಿ.24 ರಂದು ಇತರ ಇಬ್ಬರನ್ನು ಬಂಧಿಸಲಾಗಿತ್ತು. ಇದಾದ ಬಳಿಕ ಮೂರು ದಿನಗಳ ನಂತರ ಮತ್ತೋರ್ವನನ್ನು ಬಂಧಿಸಲಾಗಿತ್ತು. ಅಲ್ಲದೇ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳು ಸೇರಿದಂತೆ ಇತರೆ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

  • ಹೊಟ್ಟೆ ನೋವು ತಾಳಲಾರದೆ ವ್ಯಕ್ತಿ ನೇಣಿಗೆ ಶರಣು

    ಹೊಟ್ಟೆ ನೋವು ತಾಳಲಾರದೆ ವ್ಯಕ್ತಿ ನೇಣಿಗೆ ಶರಣು

    ಶಿವಮೊಗ್ಗ: ಹೊಟ್ಟೆ ನೋವು ತಾಳಲಾರದೇ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಾಗರ (Sagar) ತಾಲೂಕಿನ ಮಂಚಾಲೆ ಗ್ರಾಮದಲ್ಲಿ ನಡೆದಿದೆ.

    ಮೃತ ವ್ಯಕ್ತಿಯನ್ನು ನಟೇಶ್ (45) ಎಂದು ಗುರುತಿಸಲಾಗಿದೆ. ಮೃತ ನಟೇಶ್ ಕಳೆದ ಹಲವು ದಿನಗಳಿಂದ ಉದರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ. ಹೀಗಾಗಿ ಡೆತ್‍ನೋಟ್ ಬರೆದಿಟ್ಟು ತನ್ನ ಮನೆಯ ಹಿಂಭಾಗದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಈ ಸಂಬಂಧ ಆನಂದಪುರ (Anandapura) ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪ್ರಿಯಕರನ ಜೊತೆ ಸೇರಿ ಪತಿಯ ಹತ್ಯೆಗೈದ ಪತ್ನಿ – 3 ದಿನ ಪೆಟ್ರೋಲ್ ಹಾಕಿ ಶವ ಸುಟ್ಟಿದ್ದ ಪಾಪಿಗಳು

    ಪ್ರಿಯಕರನ ಜೊತೆ ಸೇರಿ ಪತಿಯ ಹತ್ಯೆಗೈದ ಪತ್ನಿ – 3 ದಿನ ಪೆಟ್ರೋಲ್ ಹಾಕಿ ಶವ ಸುಟ್ಟಿದ್ದ ಪಾಪಿಗಳು

    ಹಾಸನ: ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನೆ ಕೊಲೆಗೈದ ಘಟನೆ ಅರಸೀಕೆರೆಯ (Arasikere) ಹೊರ ವಲಯದ ತಿರುಪತಿ ಕ್ರಾಸ್ ಬಳಿ ನಡೆದಿದೆ.

    ಕೊಲೆಯಾದ (Murder) ವ್ಯಕ್ತಿಯನ್ನು ಮುಜಾಮಿಲ್ ಎಂದು ಗುರುತಿಸಲಾಗಿದೆ. ಆತನ ಪತ್ನಿ ಹಾಗೂ ಆಕೆಯ ಪ್ರಿಯಕರ ಯಾಸೀನ್ ಕೊಲೆಗೈದ ಆರೋಪಿಗಳಾಗಿದ್ದಾರೆ. ಅಕ್ರಮ ಸಂಬಂಧಕ್ಕೆ ಮುಜಾಮಿಲ್ ಅಡ್ಡಿಯಾಗಿದ್ದಕ್ಕೆ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.

    ಕೊಲೆಯಾದ ಮುಜಾಮಿಲ್‍ನ ಪತ್ನಿ ಜೊತೆ ಯಾಸೀನ್ ಅಕ್ರಮ ಸಂಬಂಧ ಹೊಂದಿದ್ದ. ಇದೇ ವಿಚಾರಕ್ಕೆ ಪತ್ನಿ ಜೊತೆ ಮುಜಾಮಿಲ್ ಜಗಳವಾಡುತ್ತಿದ್ದ. ಇದರಿಂದ ಆತನ ಕೊಲೆಗೆ ಸ್ಕೆಚ್ ಹಾಕಿದ್ದ ಪತ್ನಿ ಹಾಗೂ ಯಾಸೀನ್ ಡಿ.15ರಂದು ಮದ್ಯ ಸೇವಿಸಿದ್ದ ಮುಜಾಮಿಲ್‍ನನ್ನು ನಗರದ ಹೊರ ವಲಯಕ್ಕೆ ಕರೆದೊಯ್ದು ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದಿದ್ದರು. ಬಳಿಕ ಶವವನ್ನು ಚರಂಡಿಗೆ ಹಾಕಿ ಮೂರು ದಿನಗಳ ಕಾಲ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಅಲ್ಲದೇ ಹೊಗೆ ಬರದಂತೆ ಗುಜರಿ ಅಂಗಡಿಯಿಂದ ಕಬ್ಬಿಣದ ವಸ್ತುಗಳನ್ನು ತಂದು ಚರಂಡಿ ಮುಚ್ಚಿದ್ದರು.

    ಎರಡು ದಿನಗಳ ನಂತರ ಆರೋಪಿ ಮಹಿಳೆ ಹಾಗೂ ಆಕೆಯ ಪುತ್ರ ಜಾಹೀದ್ ಖಾನ್ ಪೊಲೀಸ್ ಠಾಣೆಗೆ ತೆರಳಿ ಮುಜಾಮಿಲ್ ಕಾಣೆಯಾಗಿದ್ದ ಬಗ್ಗೆ ದೂರು ದಾಖಲಿಸಿದ್ದರು. ತನಿಖೆ ನಡೆಸಿದ್ದ ಪೊಲೀಸರು ಸುಟ್ಟ ಸ್ಥಿತಿಯಲ್ಲಿದ್ದ ಮುಜಾಮಿಲ್ ಶವವನ್ನು ಪತ್ತೆ ಹಚ್ಚಿದ್ದರು. ಬಳಿಕ ಆರೋಪಿಯನ್ನು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.

    ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು (Police) ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

  • ಅಪ್ರಾಪ್ತೆ ಮೇಲೆ ಪ್ರೇಮ – ಬಾಲಕಿ ಮನೆ ಮುಂದೆ ಜಿಲೆಟಿನ್ ಸ್ಫೋಟಿಸಿಕೊಂಡು ಯುವಕ ಆತ್ಮಹತ್ಯೆ

    ಅಪ್ರಾಪ್ತೆ ಮೇಲೆ ಪ್ರೇಮ – ಬಾಲಕಿ ಮನೆ ಮುಂದೆ ಜಿಲೆಟಿನ್ ಸ್ಫೋಟಿಸಿಕೊಂಡು ಯುವಕ ಆತ್ಮಹತ್ಯೆ

    ಮಂಡ್ಯ: ಯುವಕನೊಬ್ಬ ತಾನು ಪ್ರೀತಿಸುತ್ತಿದ್ದ ಅಪ್ರಾಪ್ತೆಯ ಮನೆ ಮುಂದೆ ಜಿಲೆಟಿನ್ ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಾಗಮಂಗಲದ (Nagamangala) ಗ್ರಾಮವೊಂದರಲ್ಲಿ ನಡೆದಿದೆ.

    ಆತ್ಮಹತ್ಯೆಗೆ ಶರಣಾದ ಯುವಕನನ್ನು ರಾಮಚಂದ್ರ (21) ಎಂದು ಗುರುತಿಸಲಾಗಿದೆ. ಯುವಕ ಕಲ್ಲು ಗಣಿಗಾರಿಕೆಗೆ ಬಳಸುವ ಜಿಲೆಟಿನ್ ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪರಿಣಾಮ ಯುವಕನ ಹೊಟ್ಟೆ ಭಾಗ ಛಿದ್ರವಾಗಿದೆ.

    ರಾಮಚಂದ್ರ ಒಂದು ವರ್ಷದ ಹಿಂದೆ ತಾನು ಪ್ರೀತಿಸುತ್ತಿದ್ದ ಅಪ್ರಾಪ್ತೆಯನ್ನು ಕರೆದುಕೊಂಡು ಹೋಗಿದ್ದ. ಈ ಹಿನ್ನೆಲೆ ಆತನ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿತ್ತು. ಬಳಿಕ 6 ತಿಂಗಳು ಜೈಲುವಾಸ ಅನುಭವಿಸಿದ್ದ. ಬಳಿಕ 2 ಕುಟುಂಬಗಳ ರಾಜಿ ಸಂಧಾನದ ಬಳಿಕ ಕೇಸ್ ವಾಪಾಸ್ ಪಡೆಯಲಾಗಿತ್ತು. ನಂತರ ರಾಮಚಂದ್ರನ ಸಂಪರ್ಕಕ್ಕೆ ಬಾಲಕಿ ಸಿಕ್ಕಿರಲಿಲ್ಲ. ಇದರಿಂದ ಮನನೊಂದು ಆಕೆಯ ಮುನೆಯ ಮುಂದೆ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಮಂಡ್ಯ (Mandya) ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಯುವಕ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆತ ಪೋಕ್ಸೋ ಕೇಸಲ್ಲಿ ಜೈಲಿಗೆ ಹೋಗಿ ಬಂದಿದ್ದ. ಶನಿವಾರ ರಾತ್ರಿ ಸ್ನೇಹಿತರ ಜೊತೆ ಮದ್ಯ ಸೇವನೆ ಕೂಡ ಮಾಡಿದ್ದ. ಆತನಿಗೆ ಸ್ಫೋಟಕ ಎಲ್ಲಿ ಸಿಕ್ಕಿದೆ ಎಂಬ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಸ್ಫೋಟಕ ನೀಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

    ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಬೆಳಗಾವಿ | ಬೆಡ್ ರೂಮ್‍ನಲ್ಲಿ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ

    ಬೆಳಗಾವಿ | ಬೆಡ್ ರೂಮ್‍ನಲ್ಲಿ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ

    ಬೆಳಗಾವಿ: ಗೃಹಿಣಿಯೊಬ್ಬಳು ನೇಣು ಬೀಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿಯ (Belagavi) ಸಾಂಬ್ರಾ ಗ್ರಾಮದಲ್ಲಿ ನಡೆದಿದೆ.

    ಸವಿತಾ ಮಾರುತಿ ಜೋಗಾಣಿ (32) ಆತ್ಮಹತ್ಯೆಗೆ ಶರಣಾದ ಮಹಿಳೆ. ಮನೆಯ ಮೊದಲ ಮಹಡಿಯ ಬೆಡ್‍ರೂಮ್‍ನಲ್ಲಿ ಮಹಿಳೆ ವೇಲ್‍ನಿಂದ ನೇಣು ಬಿಗಿದುಕೊಂಡಿದ್ದಾಳೆ. ಆಕೆಯನ್ನು ಕೂಡಲೇ ಬೀಮ್ಸ್ ಆಸ್ಪತ್ರೆ ಕರೆದುಕೊಂಡು ಬರಲಾಗಿದೆ. ಆದರೆ ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.

    ಈ ಸಂಬಂಧ ಮೃತಳ ತಾಯಿ ಭಾರತಾ ಮೋರೆ ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತಪಡಿಸಿ, ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


    ಮಾರುತಿ ಎಂಬವರ ಜೊತೆ ಸವಿತಾ ಮದುವೆಯಾಗಿ 6 ವರ್ಷವಾಗಿತ್ತು. ದಂಪತಿಗೆ 4 ವರ್ಷದ ಗಂಡು ಮಗುವಿದೆ. ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬೀಮ್ಸ್ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ.

  • ಮೂರನೇ ಬಾರಿಯೂ ಹೆಣ್ಣು ಮಗುವಿಗೆ ಜನ್ಮಕೊಟ್ಟ ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೈದ ಪತಿ

    ಮೂರನೇ ಬಾರಿಯೂ ಹೆಣ್ಣು ಮಗುವಿಗೆ ಜನ್ಮಕೊಟ್ಟ ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೈದ ಪತಿ

    ಮುಂಬೈ: ಮೂರನೇ ಬಾರಿಯೂ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ವ್ಯಕ್ತಿಯೊಬ್ಬ ತನ್ನ ಪತ್ನಿಯ (Wife) ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಹತ್ಯೆಗೈದ ಘಟನೆ ಮಹಾರಾಷ್ಟ್ರದ (Maharashtra) ಪರ್ಭಾನಿ ಜಿಲ್ಲೆಯ ಗಂಗಾಖೇಡ್ ನಾಕಾ ಎಂಬ ಗ್ರಾಮದಲ್ಲಿ ನಡೆದಿದೆ.

    ಹತ್ಯೆಯಾದ ಮಹಿಳೆಯನ್ನು ಮೈನಾ ಎಂದು ಗುರುತಿಸಲಾಗಿದೆ. ಹತ್ಯೆಗೈದ ಆರೋಪಿಯನ್ನು ಕುಂಡ್ಲಿಕ್ ಉತ್ತಮ್ ಕಾಳೆ (32) ಎಂದು ಗುರುತಿಸಲಾಗಿದೆ. ಆರೋಪಿಯು ಮೂರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಳೆ ಎಂದು ಆಕೆಗೆ ನಿಂದಿಸುತ್ತಿದ್ದ. ಈ ವಿಷಯವಾಗಿ ಆಗಾಗ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು ಎಂದು ಮೈನಾ ಅವರ ಸಹೋದರಿ ಆರೋಪಿಸಿದ್ದಾರೆ.

    ಗುರುವಾರ ರಾತ್ರಿ ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಈ ವೇಳೆ ಪತ್ನಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಈ ವೇಳೆ ಆಕೆ ಕಿರುಚುತ್ತಾ ಮನೆಯಿಂದ ಹೊರಗೆ ಓಡಿಹೋಗಿದ್ದಾಳೆ. ಜನರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾರೆ. ಆದರೆ ತೀವ್ರವಾಗಿ ಗಾಯಗೊಂಡಿದ್ದ ಆಕೆ ಆಸ್ಪತ್ರೆಗೆ ಸಾಗಿಸುವಾಗ ಸಾವನ್ನಪ್ಪಿದ್ದಾಳೆ.

    ಪೊಲೀಸರು (Police) ಕೊಲೆ ಆರೋಪಿ ಕಾಳೆಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.