Tag: police

  • ಚಿಕ್ಕಬಳ್ಳಾಪುರ | ಎಲ್ಲಿ ಕಂಡ್ರೂ ಆವಾಜ್, ಬೇಸತ್ತು ಜೆಡಿಎಸ್ ಮುಖಂಡನ ಮರ್ಡರ್ – ಆರೋಪಿಗಳು ಅರೆಸ್ಟ್

    ಚಿಕ್ಕಬಳ್ಳಾಪುರ | ಎಲ್ಲಿ ಕಂಡ್ರೂ ಆವಾಜ್, ಬೇಸತ್ತು ಜೆಡಿಎಸ್ ಮುಖಂಡನ ಮರ್ಡರ್ – ಆರೋಪಿಗಳು ಅರೆಸ್ಟ್

    ಚಿಕ್ಕಬಳ್ಳಾಪುರ: ಜೆಡಿಎಸ್ (JDS) ಮುಖಂಡ ಎನ್.ವೆಂಕಟೇಶ್ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಚಿಕ್ಕಬಳ್ಳಾಪುರ (Chikkaballapura) ಗ್ರಾಮಾಂತರ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳನ್ನು ಧನು ಅಲಿಯಾಸ್ ಧನರಾಜ್ ಹಾಗೂ ಆತನ ಸಹಚರ ಸತೀಶ್ ಎಂದು ಗುರುತಿಸಲಾಗಿದೆ. ಹಳೆಯ ದ್ವೇಷ ಹಿನ್ನಲೆ ಹತ್ಯೆ ಮಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸೆ ಮಾಹಿತಿ ನೀಡಿದ್ದಾರೆ.

    ವೆಂಕಟೇಶ್ ತೆರಳುತ್ತಿದ್ದ ಸ್ಕೂಟಿಯನ್ನು ಅಡ್ಡಗಟ್ಟಿದ್ದ ಧನರಾಜ್ ಹಾಗೂ ಸತೀಶ್ ಮೊದಲು ಹಂದಿ ಕೊಯ್ಯುವ ಚಾಕುವಿನಿಂದ ಬೆನ್ನಿಗೆ ಇರಿದಿದ್ದರು. ನಂತರ ಹೊಟ್ಟೆ, ಮುಖಕ್ಕೆ ಮೂರು ಬಾರಿ ಹೊಡೆದಿದ್ದರು. ಅಲ್ಲದೇ ಕೈ ಕಟ್ ಮಾಡಿ ಸ್ಥಳದಿಂದ ಪರಾರಿಯಾಗಿದ್ದರು. ಬಳಿಕ ಆರೋಪಿಗಳು ಬೆಂಗಳೂರಿನಲ್ಲಿ ರೂಮ್ ಮಾಡಿಕೊಂಡಿದ್ದರು. ಆರೋಪಿಗಳನ್ನು ಬಂಧಿಸಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

    ಕೊಲೆಗೆ ಕಾರಣ ಏನು?
    ಎಂಪಿ ಚುನಾವಣೆಯಲ್ಲಿ ಅರವಿಂದ್ ಎಂಬವರಿಗೆ ಹಣ ನೀಡಲಿಲ್ಲ ಎಂದು ಚುನಾವಣೆ ವೇಳೆ ಬಾರ್ ಒಂದರಲ್ಲಿ ಗಲಾಟೆ ನಡೆದಿತ್ತು. ಈ ವೇಳೆ ಧನು ಹಾಗೂ ಅರವಿಂದ್‍ಗೆ ವೆಂಕಟೇಶ್ ಹಿಗ್ಗಾ ಮುಗ್ಗಾ ಹೊಡೆದಿದ್ದ. ನಂತರ ಧನು ಪರವಾಗಿ ವೆಂಕಟೇಶ್ ಬಳಿ ರಾಜೀ ಮಾಡಲು ಮುಂದಾಗಿದ್ದ ಸತೀಶ್‍ಗೂ ಹೊಡೆದು ಕಳಿಸಿದ್ದ. ಇದಾದ ಬಳಿಕ ಧನು, ಸತೀಶ್ ಹಾಗೂ ಅರವಿಂದ್ ಎಲ್ಲಿ ಸಿಕ್ಕರೂ ವೆಂಕಟೇಶ್ ವಾರ್ನಿಂಗ್ ಕೊಡ್ತಿದ್ದ. ದೂರು ಕೊಟ್ರೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಆವಾಜ್ ಹಾಕಿದ್ದ ಎನ್ನಲಾಗಿದೆ. ಇದೇ ವಿಚಾರಕ್ಕೆ ವೆಂಕಟೇಶ್‍ನನ್ನು ಆರೋಪಿಗಳು ಜ.3ರ ರಾತ್ರಿ ಹತ್ಯೆ ಮಾಡಿದ್ದರು.

  • ವ್ಯಕ್ತಿಯ ಹತ್ಯೆಗೈದು 30 ಮೇಕೆಗಳನ್ನು ಕದ್ದೊಯ್ದಿದ್ದ ಆರೋಪಿ ಅರೆಸ್ಟ್

    ವ್ಯಕ್ತಿಯ ಹತ್ಯೆಗೈದು 30 ಮೇಕೆಗಳನ್ನು ಕದ್ದೊಯ್ದಿದ್ದ ಆರೋಪಿ ಅರೆಸ್ಟ್

    ತುಮಕೂರು: ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆಗೈದು 30 ಮೇಕೆಗಳನ್ನು ಕದ್ದೊಯ್ದಿದ್ದ ಆರೋಪಿಯನ್ನು ಪೊಲೀಸರು (Police) ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಮಣಿಕಂಠ ಎಂದು ಗುರುತಿಸಲಾಗಿದೆ. ಆರೋಪಿ ಪಾವಗಡ (Pavagada) ತಾಲೂಕಿನ ದೇವಲಕೆರೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ನರಸಿಂಹಪ್ಪ (60) ಎಂಬಾತನನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದಿದ್ದ. ಬಳಿಕ 30 ಮೇಕೆಗಳನ್ನು ಕದ್ದುಕೊಂಡು ಹೋಗಿದ್ದ.

    ಕದ್ದ ಮೇಕೆಗಳನ್ನು ಚಿತ್ರದುರ್ಗದ ಹಿರಿಯೂರಿನ ಕುರಿಸಂತೆಯಲ್ಲಿ ಮಾರಾಟಕ್ಕೆ ಯತ್ನಿಸಿದ್ದ. ಮೇಯಲು ಹೋಗಿದ್ದ ಮೇಕೆಗಳು ಮತ್ತು ನರಸಿಂಹಪ್ಪ ಮನೆಗೆ ಬಾರದಿದ್ದಕ್ಕೆ ಕುಟುಂಬಸ್ಥರ ಹುಡುಕಾಟ ನಡೆಸಿದ್ದರು.

    ಅನುಮಾನದಿಂದ ನರಸಿಂಹಪ್ಪ ಪುತ್ರ ಹಿರಿಯೂರು ಸಂತೆಗೆ ತೆರಳಿ ನೋಡಿದಾಗ, ಮೇಕೆಗಳ ಸಮೇತ ಸಂತೆಯಲ್ಲಿ ಆರೋಪಿ ಮಣಿಕಂಠ ಸಿಕ್ಕಿಬಿದ್ದಿದ್ದ. ಈ ವೇಳೆ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿತ್ತು. ತನಿಖೆ ವೇಳೆ ಮೇಕೆಗಳಿಗಾಗಿ ಕೊಲೆ ಮಾಡಿರುವುದಾಗಿ ಆರೋಪಿ ಬಾಯಿ ಬಿಟ್ಟಿದ್ದ.

    ಪೊಲೀಸರು ಸ್ಥಳ ಮಹಜರಿಗೆ ಆರೋಪಿಯನ್ನು ಕರೆದೊಯ್ದಾಗ, ಅರಣ್ಯ ಪ್ರದೇಶದಲ್ಲಿ ಕೊಲೆ ಮಾಡಿ ಎಸೆದಿದ್ದ ಮೃತ ದೇಹವನ್ನು ತೋರಿಸಿದ್ದಾನೆ. ಈ ಸಂಬಂಧ ಅರಸಿಕೆರೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

  • ಕೋಲಾರ | ಮದುವೆ ಮಾಡ್ಕೊಡಿ ಎಂದಿದ್ದಕ್ಕೆ ವಿವಾಹಿತನನ್ನು ಅಟ್ಟಾಡಿಸಿ ಕೊಂದ ಪ್ರೇಯಸಿ ಮನೆಯವ್ರು!

    ಕೋಲಾರ | ಮದುವೆ ಮಾಡ್ಕೊಡಿ ಎಂದಿದ್ದಕ್ಕೆ ವಿವಾಹಿತನನ್ನು ಅಟ್ಟಾಡಿಸಿ ಕೊಂದ ಪ್ರೇಯಸಿ ಮನೆಯವ್ರು!

    ಕೋಲಾರ: ವಿವಾಹಿತ ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯ ಮನೆಗೆ ಹೋಗಿ ಹಿಂತಿರುಗುತ್ತಿದ್ದಾಗ ಆಕೆಯ ಕುಟುಂಬಸ್ಥರು ಹಾಗೂ ಸ್ಥಳೀಯರು ಅಟ್ಟಾಡಿಸಿ ಹೊಡೆದು ಹತ್ಯೆಗೈದ ಘಟನೆ ಕೋಲಾರದ ನೂರ್ ನಗರದಲ್ಲಿ ಶನಿವಾರ ಮಧ್ಯರಾತ್ರಿ ನಡೆದಿದೆ.

    ಕೊಲೆಯಾದ ವ್ಯಕ್ತಿಯನ್ನು ಉಸ್ಮಾನ್ ಎಂದು ಗುರುತಿಸಲಾಗಿದೆ. ಆತ ತನ್ನ ಪ್ರೇಯಸಿ ಮನೆಗೆ ಹೋಗಿ ಬರುವಾಗ ಆಕೆಯ ಕುಟುಂಬಸ್ಥರು ಹಾಗೂ ಸ್ಥಳೀಯರು ಅಟ್ಟಾಡಿಸಿ ಹೊಡೆದಿದ್ದಾರೆ. ಬಳಿಕ ಪೊಲೀಸರು ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ.

    ಉಸ್ಮಾನ್ ಕಳೆದೆ ಐದು ವರ್ಷಗಳ ಹಿಂದೆ ಜಬೀನ್ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಆಕೆಗೆ ಕಿಡ್ನಿ ವಿಫಲವಾಗಿ ಅನಾರೋಗ್ಯದಿಂದ ಬಳಲುತ್ತಿದ್ದು, ಈ ವೇಳೆ ಆರೋಗ್ಯ ವಿಚಾರಿಸಲು ಬಂದಿದ್ದ ಜಬೀನಾ ಸಂಬಂಧಿ ಯುವತಿಯೊಂದಿಗೆ ಉಸ್ಮಾನ್‍ಗೆ ಪ್ರೀತಿಯಾಗಿದೆ. ಈ ವಿಷಯ ತಿಳಿದು ಆತನ ಪತ್ನಿ ಮಹಿಳಾ ಠಾಣೆಗೆ ದೂರು ನೀಡಿದ್ದಳು. ಬಳಿಕ ತನ್ನ ಪತಿಯಿಂದ ದೂರಾಗಿ ತವರು ಮನೆ ಸೇರಿದ್ದಳು ಎಂದು ತಿಳಿದು ಬಂದಿದೆ.

    ಕೊಲೆಯಾದ ಉಸ್ಮಾನ್ ಕಳೆದ ರಾತ್ರಿ ತನ್ನ ಪ್ರೇಯಸಿಯ ಮನೆಗೆ ತೆರಳಿದ್ದ. ಅಲ್ಲದೇ ಆಕೆಯನ್ನು ಮದುವೆ ಮಾಡಿಕೊಡುವಂತೆ ಹೇಳಿದ್ದ. ಇದರಿಂದ ಆತ ವಾಪಸ್ ತೆರಳುತ್ತಿದ್ದಾಗ ಯುವತಿಯ ಕುಟುಂಬಸ್ಥರು ಹಾಗೂ ಸ್ಥಳೀಯರು, ಉಸ್ಮಾನ್‍ನನ್ನು ಏರಿಯಾದಲ್ಲಿ ಅಟ್ಟಾಡಿಸಿ ಹಲ್ಲೆ ನಡೆಸಿದ್ದರು.

    ಈ ಸಂಬಂಧ ಗಲ್‌ಪೇಟೆ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತರನ್ನು ಅಫ್ರೀದ್, ಜಮೀರ್, ನಜೀರ್ ಮತ್ತು ಸಲ್ಮಾನ್ ಪಾಷಾ ಎಂದು ಗುರುತಿಸಲಾಗಿದೆ.

  • ಕೇರಳ | ಮಹಿಳೆ, ಅವಳಿ ಮಕ್ಕಳ ಕೊಲೆ ಕೇಸ್ – 19 ವರ್ಷಗಳ ಬಳಿಕ ಇಬ್ಬರು ಮಾಜಿ ಸೈನಿಕರು ಅರೆಸ್ಟ್!

    ಕೇರಳ | ಮಹಿಳೆ, ಅವಳಿ ಮಕ್ಕಳ ಕೊಲೆ ಕೇಸ್ – 19 ವರ್ಷಗಳ ಬಳಿಕ ಇಬ್ಬರು ಮಾಜಿ ಸೈನಿಕರು ಅರೆಸ್ಟ್!

    ತಿರುವನಂತಪುರಂ: ಮಹಿಳೆ ಹಾಗೂ ಆಕೆಯ 17 ದಿನದ ಅವಳಿ ಮಕ್ಕಳನ್ನು ಕೊಲೆಗೈದು 19 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಇಬ್ಬರು ಮಾಜಿ ಸೈನಿಕರನ್ನು ಕೇರಳ (Kerala) ಪೊಲೀಸರು (Police) ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳನ್ನು ದಿಬಿಲ್ ಕುಮಾರ್ ಬಿ ಹಾಗೂ ರಾಜೇಶ್.ಪಿ ಎಂದು ಗುರುತಿಸಲಾಗಿದೆ. ಆರೋಪಿಗಳು ಫೆಬ್ರವರಿ 10, 2006 ರಂದು ಕೃತ್ಯ ಎಸಗಿದ್ದರು. ಪಿತೃತ್ವ ಪರೀಕ್ಷೆಯಲ್ಲಿ ಅವಳಿ ಹೆಣ್ಣುಮಕ್ಕಳ ತಂದೆ ಎಂದು ಸಾಬೀತಾಗುತ್ತದೆ ಎಂದು ಹೆದರಿ ಆರೋಪಿ ಕುಮಾರ್ ತನ್ನ ಸಹ ಸೈನಿಕನ ಸಹಾಯದಿಂದ ಅವಳನ್ನು ಮತ್ತು ಶಿಶುಗಳನ್ನು ಕೊಲೆಗೈದಿದ್ದ. ಬಳಿಕ ಇಬ್ಬರು ಸೈನ್ಯವನ್ನು ತೊರೆದಿದ್ದರು.

    ಕೇರಳದ ಕೊಲ್ಲಂ ಜಿಲ್ಲೆಯ ಆಂಚಲ್ ಬಳಿಯ ಯೆರಮ್‍ನಲ್ಲಿ ರಂಜಿನಿ (24) ಮತ್ತು ಅವಳ ನವಜಾತ ಹೆಣ್ಣುಮಕ್ಕಳನ್ನು ಅವರ ಬಾಡಿಗೆ ಮನೆಯಲ್ಲಿ ಹತ್ಯೆ ಮಾಡಲಾಗಿತ್ತು. ಅವಳಿ ಮಕ್ಕಳ ಜನನ ಪ್ರಮಾಣ ಪತ್ರ ಪಡೆಯಲು ಹೋಗಿದ್ದ ರಂಜಿನಿ ಅವರ ತಾಯಿ ಪಂಚಾಯತ್ ಕಚೇರಿಯಿಂದ ಹಿಂತಿರುಗಿದಾಗ ಮನೆಯಲ್ಲಿ ಶವಗಳು ಪತ್ತೆಯಾಗಿದ್ದವು.

    ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದಾಗ, ಪಠಾಣ್‍ಕೋಟ್‍ನಲ್ಲಿ ಭಾರತೀಯ ಸೇನೆಯ 45 ಎಡಿ ರೆಜಿಮೆಂಟ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಂಚಲ್‍ನ ದಿಬಿಲ್ ಕುಮಾರ್ ಬಿ (28) ರಂಜಿನಿ ಅವರೊಂದಿಗೆ ಸಂಬಂಧ ಹೊಂದಿದ್ದ ಎಂದು ತಿಳಿದುಬಂದಿತ್ತು. ಜನವರಿ 24, 2006 ರಂದು ಅವಳಿ ಮಕ್ಕಳು ಜನಿಸಿದ ನಂತರ, ಅವರು ಅವಳಿಂದ ದೂರವಾಗಲು ಪ್ರಾರಂಭಿಸಿದ್ದರು.

    ನಂತರ ಮಹಿಳೆಯ ತಾಯಿ ಕೇರಳ ರಾಜ್ಯ ಮಹಿಳಾ ಆಯೋಗವನ್ನು ಸಂಪರ್ಕಿಸಿದ್ದರು. ಇದು ಅವಳಿ ಮಕ್ಕಳ ಡಿಎನ್‍ಎ ಪರೀಕ್ಷೆಗೆ ಆದೇಶಿಸಿತ್ತು. ಇದರಿಂದ ಕುಮಾರ್ ಆಕೆಯ ಕೊಲೆಗೆ ಸಂಚು ರೂಪಿಸಿದ್ದ. ಬಳಿಕ ಸೈನ್ಯದಲ್ಲಿದ್ದ ರಾಜೇಶ್.ಪಿ ಎಂಬಾತ ರಂಜಿನಿಯನ್ನು ಮದುವೆಯಾಗಲು ಕುಮಾರ್‌ಗೆ ಮನವರಿಕೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದ. ಆದರೆ ಆತ ಕುಮಾರ್ ಜೊತೆ ಸೇರಿಕೊಂಡು ಹತ್ಯೆಗೆ ಕೈ ಜೋಡಿಸಿದ್ದ.

    ಸ್ಥಳೀಯ ಪೊಲೀಸರು ವ್ಯಾಪಕ ತನಿಖೆ ನಡೆಸಿದರೂ ಮತ್ತು ಅವರ ಸೆರೆಗೆ ಕಾರಣವಾಗುವ ಮಾಹಿತಿಗೆ 2 ಲಕ್ಷ ರೂಪಾಯಿ ಬಹುಮಾನ ನೀಡಿದ್ದರೂ ಸಹ ಇಬ್ಬರ ಸುಳಿವು ಸಿಕ್ಕಿರಲಿಲ್ಲ. ಕೇರಳ ಹೈಕೋರ್ಟ್‍ನ (Court) ಆದೇಶದ ಮೇರೆಗೆ 2010 ರಲ್ಲಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿತು.

    ಸಿಬಿಐ (CBI) ತನಿಖೆ ವೇಳೆ ಕುಮಾರ್ ಮತ್ತು ರಾಜೇಶ್ ಪುದುಚೇರಿಯಲ್ಲಿ ನಕಲಿ ಹೆಸರಿನಲ್ಲಿ ವಾಸಿಸುತ್ತಿದ್ದಾರೆ ಮತ್ತು ಆಧಾರ್ ಕಾರ್ಡ್ ಸೇರಿದಂತೆ ಹೊಸ ದಾಖಲೆಗಳನ್ನು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸುಳಿವು ಸಿಕ್ಕಿತ್ತು. ಅಲ್ಲದೇ ಇಬ್ಬರು ಶಿಕ್ಷಕಿಯರನ್ನು ಮದುವೆಯಾಗಿದ್ದರು ಎಂದು ತಿಳಿದು ಬಂದಿತ್ತು.

    ಸಿಬಿಐನ ಚೆನ್ನೈ ಘಟಕವು ಶುಕ್ರವಾರ ಇಬ್ಬರನ್ನು ಬಂಧಿಸಿ ಕೊಚ್ಚಿಗೆ ಕರೆತಂದಿದೆ. ಅಲ್ಲಿ ಅವರನ್ನು ಶನಿವಾರ ಎರ್ನಾಕುಲಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳನ್ನು ಜ.18ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

  • ತಾಯಿಯನ್ನು ಮನೆಗೆ ಕಳುಹಿಸದ್ದಕ್ಕೆ ಸಿಟ್ಟು – ನಡು ರಸ್ತೆಯಲ್ಲೇ ಮಾವನ ಮೇಲೆ ಮಚ್ಚು ಬೀಸಿದ ಅಳಿಯ

    ತಾಯಿಯನ್ನು ಮನೆಗೆ ಕಳುಹಿಸದ್ದಕ್ಕೆ ಸಿಟ್ಟು – ನಡು ರಸ್ತೆಯಲ್ಲೇ ಮಾವನ ಮೇಲೆ ಮಚ್ಚು ಬೀಸಿದ ಅಳಿಯ

    – ಕಡೂರು ಪಟ್ಟಣದ ವಿಜಯ ಟಾಕೀಸ್‌ ಬಳಿ ಕೃತ್ಯ
    – ಅಳಿಯ ಹಾಗೂ ಆತನ ಮಗನ ವಿರುದ್ಧ ದೂರು ನೀಡಿದ್ದ ಮಾವ

    ಚಿಕ್ಕಮಗಳೂರು: ತಾಯಿ ಮನೆಗೆ ಬರಲಿಲ್ಲ ಎಂದು ಅಳಿಯ ಸೋದರ ಮಾವನ ಮೇಲೆಯೇ ಮಚ್ಚು ಬೀಸಿರುವ ಘಟನೆ ಜಿಲ್ಲೆಯ ಕಡೂರು (Kaduru) ಪಟ್ಟಣದ ವಿಜಯಲಕ್ಷ್ಮಿ ಟಾಕೀಸ್ ಬಳಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ಕಡೂರು ಪಟ್ಟಣದಲ್ಲಿ ಆಟೋ ಓಡಿಸುತ್ತಿರುವ ಭರತ್ ಮಾವನ ಮೇಲೆ ಮಚ್ಚು ಬೀಸಿದ ಯುವಕ. ಭರತ್ ತಾಯಿ ಗಂಡನ ಜೊತೆ ಜಗಳವಾಡಿ ತವರು ಸೇರಿದ್ದರು. ಗಂಡನ ಮನೆಗೆ ಬಂದಿರಲಿಲ್ಲ. ಮಗ ಭರತ್ ತಾಯಿ ಬಳಿ ಮನೆಗೆ ಬರುವಂತೆ ಹೇಳಿದ್ದನು. ಜೊತೆಗೆ ತಾಯಿಯನ್ನು (Mother) ಮನೆಗೆ ಕಳುಹಿಸುವಂತೆ ಮಾವ ಮಹಾಲಿಂಗ ಅವರ ಬಳಿ ಹೇಳಿದ್ದನು. ಆದರೂ ತಾಯಿ ಗಂಡನ ಮನೆಗೆ ಹೋಗಿರಲಿಲ್ಲ. ಇದನ್ನೂ ಓದಿ: KSRTC Ticket Price Hike – ಬೆಂಗಳೂರಿನಿಂದ ನಿಮ್ಮ ಜಿಲ್ಲೆಗೆ ಎಷ್ಟು ದರ ಏರಿಕೆ? ಇಲ್ಲಿದೆ ಕಂಪ್ಲೀಟ್‌ ಲಿಸ್ಟ್‌

    ಈ ಬಗ್ಗೆ ಮಾವ ಮಹಾಲಿಂಗ ಭರತ್ ಹಾಗೂ ಆತನ ತಂದೆ ರಾಮಸ್ವಾಮಿ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ನೀವು ನನ್ನ ತಂಗಿಗೆ ಸಾಕಷ್ಟು ಹಿಂಸೆ ನೀಡಿದ್ದೀರಿ. ಹಾಗಾಗಿ ಅವಳನ್ನು ಕಳಿಸುವುದಿಲ್ಲ. ಅಪ್ಪ-ಮಗ ಇಬ್ಬರನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು. ಆದರೂ ಭರತ್ ಮೇಲಿಂದ ಮೇಲೆ ಫೋನ್ ಮಾಡಿ ಅಮ್ಮನನ್ನು ಕಳುಹಿಸುವಂತೆ ಬಲವಂತ ಮಾಡಿದ ಪರಿಣಾಮ ಮಾವ ಮಹಾಲಿಂಗ ಡಿಸೆಂಬರ್ 31ರಂದು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.  ಇದನ್ನೂ ಓದಿ: ಮದುವೆ ಮಾಡಿಸಿ 4 ಲಕ್ಷ ಹಣ ಪಡೆದು ಬ್ರೋಕರ್ ಎಸ್ಕೇಪ್ – ಇತ್ತ ಮದುವೆಯಾದ ಹೆಣ್ಣೂ ಪರಾರಿ

    ಪೊಲೀಸ್ ಸ್ಟೇಷನ್ ಗೆ ಹೋಗಿ ದೂರು ನೀಡಿದ್ದಾರೆ ಎಂಬ ಸಿಟ್ಟಿನಿಂದ ಜ.2 ರಂದು ಭರತ್ ಹಾಡಹಗಲೇ ನಡು ರಸ್ತೆಯಲ್ಲಿ ಮಾವನ ಮೇಲೆ ಮನಸ್ಸು ಇಚ್ಚೆ ಮಚ್ಚು ಬೀಸಿದ್ದಾನೆ. ಕಡೂರು ಪಟ್ಟಣದಲ್ಲಿ ಆಟೋ ಡ್ರೈವರ್ ವೃತ್ತಿ ಮಾಡುತ್ತಿರುವ ಭರತ್ ಆಟೋ ಹಿಂದೆ ಲಾಂಗ್ ಇಟ್ಟು ಮಾವನನ್ನ ಹುಡುಕಾಡಿದ್ದಾನೆ. ಕಡೂರು ಪಟ್ಟಣದ ವಿಜಯಲಕ್ಷ್ಮಿ ಟಾಕೀಸ್ ಬಳಿ ಕ್ಯಾಂಟೀನ್ ಹತ್ತಿರ ಟೀ ಕುಡಿಯುತ್ತಿದ್ದ ಮಾವನ ಮೇಲೆ ಮನಸ್ಸು ಇಚ್ಛೆ ಲಾಂಗ್ ಬೀಸಿದ್ದಾನೆ. ಲಾಂಗ್ ಬೀಸಿದ ಬಳಿಕ ರಾಜರೋಷವಾಗಿ ಬಂದು ಆಟೋದಲ್ಲಿ ಲಾಂಗ್ ಇಟ್ಟುಕೊಂಡು ಹೋಗಿದ್ದಾನೆ.

    ಹಲ್ಲೆಗೊಳಗಾದ ಮಹಾಲಿಂಗ ಅವರ ಸ್ಥಿತಿ ಗಂಭೀರವಾಗಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ರಾಮಸ್ವಾಮಿ ಹಾಗೂ ಮಗ ಭರತ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.‌ ನ್ಯಾಯಾಲಯ ಇಬ್ಬರಿಗೂ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

  • ತಂದೆಯನ್ನೇ ಹತ್ಯೆಗೈದು ಹೃದಯಾಘಾತದ ಕತೆಕಟ್ಟಿದ್ದ ಮಗ ಅರೆಸ್ಟ್

    ತಂದೆಯನ್ನೇ ಹತ್ಯೆಗೈದು ಹೃದಯಾಘಾತದ ಕತೆಕಟ್ಟಿದ್ದ ಮಗ ಅರೆಸ್ಟ್

    ಹಾಸನ: ತಂದೆಯನ್ನೇ ಹತ್ಯೆಗೈದು ಹೃದಯಾಘಾತ ಎಂದು ಬಿಂಬಿಸಿದ್ದ ಆರೋಪಿಯನ್ನು ಪೊಲೀಸರು (Police) ಸಕಲೇಶಪುರದ (Sakleshpura) ಲಿಂಗಾಪುರ ಗ್ರಾಮದಲ್ಲಿ ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ದಿನೇಶ್ (34) ಎಂದು ಗುರುತಿಸಲಾಗಿದೆ. ಆರೋಪಿ ತನ್ನ ತಂದೆ ಶಶಿಧರ್ (58) ಎಂಬವರನ್ನು ಹತ್ಯೆ ಮಾಡಿದ್ದ. ಆರೋಪಿ ಕಂಠಪೂರ್ತಿ ಕುಡಿದು ಬಂದು ತಂದೆ ಜೊತೆ ಜಗಳವಾಡಿದ್ದ. ಬಳಿಕ ತಂದೆಗೆ ಕಾಲಿನಿಂದ ಒದ್ದಿದ್ದ. ಈ ವೇಳೆ ಶಶಿಧರ್ ಕುಸಿದು ಬಿದ್ದಿದ್ದರು. ಇದನ್ನು ಕಂಡು ದಿನೇಶ್ ತಾಯಿ ಗಾಬರಿಗೊಂಡು ಮನೆಯಿಂದ ಸಹೋದರನ ತೆರಳಿದ್ದರು. ನಂತರ ದಿನೇಶ್, ತಂದೆಗೆ ಹೃದಯಾಘಾತವಾಗಿದೆ ಎಂದು ಅರೇಹಳ್ಳಿ ಆಸ್ಪತ್ರೆಗೆ ದಾಖಲಿಸಿದ್ದ.

    ಆಸ್ಪತ್ರೆಯಲ್ಲಿ ಶಶಿಧರ್ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದರು. ಬಳಿಕ ಮೃತದೇಹವನ್ನು ಅಂತ್ಯ ಸಂಸ್ಕಾರಕ್ಕೆ ತಂದಿದ್ದಾಗ ತಂದೆ ಜೊತೆ ಜಗಳವಾಡುವುದನ್ನು ನೋಡಿದ್ದ ಗ್ರಾಮಸ್ಥರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಬಳಿಕ ದಿನೇಶ್ ವಿರುದ್ಧ ಆತನ ತಾಯಿ ಅರೇಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು.

    ಈ ಸಂಬಂಧ ಅರೇಹಳ್ಳಿ ಪೊಲೀಸರು ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

  • ಚಿಕ್ಕಮಗಳೂರಿನ ಕೋಟೆ ದರ್ಗಾ ಜಾಗದಲ್ಲಿ ಕಾಮಗಾರಿಗೆ ಸ್ಥಳೀಯರ ವಿರೋಧ – ನಗರದಲ್ಲಿ ಬೂದಿ ಮುಚ್ಚಿದ ಕೆಂಡ

    ಚಿಕ್ಕಮಗಳೂರಿನ ಕೋಟೆ ದರ್ಗಾ ಜಾಗದಲ್ಲಿ ಕಾಮಗಾರಿಗೆ ಸ್ಥಳೀಯರ ವಿರೋಧ – ನಗರದಲ್ಲಿ ಬೂದಿ ಮುಚ್ಚಿದ ಕೆಂಡ

    ಚಿಕ್ಕಮಗಳೂರು: ನಗರದ (Chikkamagaluru) ಕೋಟೆ ಬಡಾವಣೆಯಲ್ಲಿರುವ ದರ್ಗಾದಲ್ಲಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲಾಗಿದೆ ಹಾಗೂ ಖಾಲಿ ಜಾಗದಲ್ಲಿ ನೂತನ ಕಾಮಗಾರಿ ನಡೆಸಲಾಗುತ್ತಿದೆ ಎಂದು ಆರೋಪಿಸಿ ಕಾಮಗಾರಿಯನ್ನು ತಡೆದು ನೂರಾರು ಸ್ಥಳೀಯರು ಪ್ರತಿಭಟನೆ (Protest) ನಡೆಸಿದ್ದಾರೆ.

    ದರ್ಗಾಕ್ಕೆ ದಾನ ನೀಡಿರುವ ಜಾಗದಲ್ಲಿ ನೂತನ ಕಾಮಗಾರಿ ನಡೆಸಬಾರದು ಎಂದು ಸ್ಥಳೀಯರು ಹೇಳಿದ್ದರು. ಆದರೂ ನೂತನ ಕಾಮಗಾರಿ ನಡೆಸಲಾಗುತ್ತಿದೆ. ಕಳೆದ ಕೆಲವು ತಿಂಗಳ ಹಿಂದೆ ಸಹ ಇದೇ ರೀತಿ ಘಟನೆ ನಡೆದಿತ್ತು. ಆಗ ಕ್ರಮ ಕೈಗೊಳ್ಳುವುದಾಗಿ ಅಂದಿನ ನಗರಸಭೆ ಅಧ್ಯಕ್ಷರು ಹಾಗೂ ನಗರಸಭೆ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಸ್ಥಳಕ್ಕೆ ಬಂದು ಮಾಹಿತಿ ಪಡೆದಿದ್ದಾರೆ. ಈ ವೇಳೆ ದರ್ಗಾಕ್ಕೆ ದಾನ ನೀಡಿರುವ ಜಾಗದಲ್ಲಿ ನೂತನವಾಗಿ ಕಾಮಗಾರಿ ನಡೆಸಲಾಗುತ್ತಿದೆ. ಅಕ್ರಮವಾಗಿ ದರ್ಗಾ ಸಮೀಪದಲ್ಲಿರುವ ವಿದ್ಯುತ್ ಕಂಬದಿಂದ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲಾಗಿದೆ. ನೂತನವಾಗಿ ನಡೆಸುತ್ತಿರುವ ಕಾಮಗಾರಿಯನ್ನು ಜೆಸಿಬಿ ಮೂಲಕ ತೆರವುಗೊಳಿಸಬೇಕು ಅಲ್ಲಿಯವರೆಗೂ ಸ್ಥಳದಿಂದ ಕದಲುವುದಿಲ್ಲವೆಂದು ಪಟ್ಟುಹಿಡಿದ್ದಾರೆ.

    ಪ್ರತಿಭಟನಾನಿರತರ ಮನವೊಲಿಸಲು ನಗರಸಭೆ ಅಧ್ಯಕ್ಷೆ ಮುಂದಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಸ್ಥಳೀಯರು ತಮ್ಮ ಪಟ್ಟು ಸಡಿಲಿಸದೆ ಪ್ರತಿಭಟನೆ ಮುಂದುವರೆಸಿದರು.

    ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್ ಸ್ಥಳಕ್ಕೆ ಆಗಮಿಸಿ, ಅಲ್ಲಿಂದ ಹಿಂತಿರುಗಲು ಯತ್ನಿಸುತ್ತಿದ್ದಾಗ ಪ್ರತಿಭಟನಾನಿರತರು ಅವರ ಕಾರನ್ನು ಹಿಂಬಾಲಿಸಿ ಕಾರಿನಿಂದ ಕೆಳಗಿಳಿಸಿ ಸಮಸ್ಯೆಯನ್ನು ಪರಿಹರಿಸುವಂತೆ ಪಟ್ಟು ಹಿಡಿದರು. ಸಮಸ್ಯೆಯನ್ನು ಪರಿಹರಿಸದಿದ್ದರೇ ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಸಿದರು. ಈ ವೇಳೆ ನಗರಸಭೆ ಆಯುಕ್ತರು ಪ್ರತಿಭಟನಕಾರರ ಮನವೊಲಿಸಲು ಮುಂದಾದರೂ ಯಾವುದೇ ಪ್ರಯೋಜನವಾಗಲಿಲ್ಲ.

    ಸ್ಥಳದಲ್ಲಿ ಬೀಗುವಿನ ವಾತಾವರಣ ನಿರ್ಮಾಣವಾಗಿದ್ದು, ಬೂದಿ ಮುಚ್ಚಿದ ಕೆಂಡದಂತಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಿರುವ ಪೊಲೀಸ್ ಇಲಾಖೆ ಸ್ಥಳದಲ್ಲಿ ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜಿಸಿ ಬೀಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

  • ಚಿಕ್ಕಬಳ್ಳಾಪುರದಲ್ಲಿ ಹೆಚ್‌ಡಿಕೆ ಅಪ್ಪಟ ಅಭಿಮಾನಿ, ಜೆಡಿಎಸ್ ಮುಖಂಡನ ಭೀಕರ ಹತ್ಯೆ

    ಚಿಕ್ಕಬಳ್ಳಾಪುರದಲ್ಲಿ ಹೆಚ್‌ಡಿಕೆ ಅಪ್ಪಟ ಅಭಿಮಾನಿ, ಜೆಡಿಎಸ್ ಮುಖಂಡನ ಭೀಕರ ಹತ್ಯೆ

    ಚಿಕ್ಕಬಳ್ಳಾಪುರ: ಕೆಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿಯವರ (H.D Kumaraswamy) ಅಪ್ಪಟ ಅಭಿಮಾನಿ ಹಾಗೂ ಜೆಡಿಎಸ್ (JDS) ಮುಖಂಡನನ್ನು ರಸ್ತೆ ಮಧ್ಯದಲ್ಲೆ ಲಾಂಗ್‌ನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರದ (Chikkaballapur) ತಮ್ಮನಾಯಕನಹಳ್ಳಿ ಗ್ರಾಮದ ಬಳಿ ನಡೆದಿದೆ.

    ಹತ್ಯೆಗೊಳಗಾದ ವ್ಯಕ್ತಿಯನ್ನು ಗ್ರಾಮದ ವೆಂಕಟೇಶ್ ಅಲಿಯಾಸ್ ಗೋಲ್ಡ್ ವೆಂಕಟೇಶ್ (50) ಎಂದು ಗುರುತಿಸಲಾಗಿದೆ. ಎಂದಿನಂತೆ ವೆಂಕಟೇಶ್ ರಾತ್ರಿ 9 ಗಂಟೆ ಸುಮಾರಿಗೆ ತಮ್ಮನಾಯಕನಹಳ್ಳಿ ಗೇಟ್ ನಲ್ಲಿರುವ ಮೆಡಿಕಲ್ ಸ್ಟೋರ್‌ನಿಂದ ಮನೆಗೆ ತೆರಳುತ್ತಿದ್ದರು. ಈ ವೇಳೆ ಸಂಚು ರೂಪಿಸಿ, ಮನೆಯತ್ತ ಸ್ಕೂಟಿ ಮೂಲಕ ಹೊರಟಿದ್ದ ವೆಂಕಟೇಶ್‌ ಅವರಿಗೆ ಅಡ್ಡ ಬಂದು ಲಾಂಗ್‌ನಿಂದ ಬಲವಾಗಿ ಬೀಸಲಾಗಿದೆ. ಪರಿಣಾಮ ಎಡಗೈ ತೋಳಿನ ಭಾಗ ಕಟ್ ಆಗಿ, ಗಾಡಿ ಸಮೇತ ವೆಂಕಟೇಶ್ ನೆಲಕ್ಕೆ ಬಿದ್ದಿದ್ದಾರೆ. ಕೂಡಲೇ ಮನಸ್ಸೋ ಇಚ್ಛೆ ಮುಖಕ್ಕೆ ಲಾಂಗ್ ನಿಂದ ಕೊಚ್ಚಲಾಗಿದೆ. ಹೊಟ್ಟೆಯ ಭಾಗಕ್ಕೆ ಬಲವಾಗಿ ಬೀಸಲಾಗಿದೆ. ಪರಿಣಾಮ ವೆಂಕಟೇಶ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

    ಹತ್ಯೆಯಾಗುವುದಕ್ಕೂ ಕೆಲವು ನಿಮಿಷಗಳ ಮುನ್ನ ವೆಂಕಟೇಶ್‌, ಮಗನಿಗೆ ಕರೆ ಮಾಡಿ ಮನೆಗೆ ಬರುತ್ತಿದ್ದು, ಮುದ್ದೆ ಮಾಡುವಂತೆ ತಿಳಿಸಿದ್ದರಂತೆ. ಆದರೆ ಅಷ್ಟರಲ್ಲೇ ದಾರಿ ಮಧ್ಯೆ ಕೊಚ್ಚಿ ಕೊಲೆ ಮಾಡಲಾಗಿದ್ದು, ದಾರಿ ಹೋಕರು ನೋಡಿ ಮಗನಿಗೆ ಪೋನ್ ಮಾಡಿ ವಿಷಯ ತಿಳಿಸಿದ್ದಾರೆ.

    ಹತ್ಯೆಯಾದವರ ಮಗ ಪೊಲೀಸರ ಬಳಿ, ತಮ್ಮ ತಂದೆ ತಮ್ಮೂರಿನ ರಸ್ತೆಯಲ್ಲಿರುವ ಬಾರ್ ಬಳಿ ಕೆಲವು ಅಕ್ಕ ಪಕ್ಕದ ಗ್ರಾಮದ ಯುವಕರು ಕುಡಿದು ಗಲಾಟೆ ಮಾಡುತ್ತಿದ್ದರು. ಮೂರು ದಿನಗಳ ಹಿಂದೆ ಬೈದು ಬುದ್ದಿವಾದ ಹೇಳಿದ್ದರು. ಹಾಗಾಗಿ ಆ ಹುಡುಗರು ಕೊಲೆ ಮಾಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾನೆ.

    ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್‌ಪಿ ಕುಶಾಲ್ ಚೌಕ್ಸಿ ಹಾಗೂ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಸೇರಿದಂತೆ ಸೋಕೋ ತಂಡ ಪರಿಶೀಲನೆ ನಡೆಸಿದೆ.

  • ಬಿಜೆಪಿ ಕಾರ್ಯಕರ್ತರ ವಿರುದ್ಧ ಚಿಕ್ಕಮಗಳೂರಿನಲ್ಲಿ ಕೇಸ್‌, ತರೀಕೆರೆಯಲ್ಲಿ ವಿಚಾರಣೆ!

    ಬಿಜೆಪಿ ಕಾರ್ಯಕರ್ತರ ವಿರುದ್ಧ ಚಿಕ್ಕಮಗಳೂರಿನಲ್ಲಿ ಕೇಸ್‌, ತರೀಕೆರೆಯಲ್ಲಿ ವಿಚಾರಣೆ!

    – 30 ಕಾರ್ಯಕರ್ತರಿಗೆ ನೋಟಿಸ್‌
    – ತನಿಖಾಧಿಕಾರಿ ತರೀಕೆರೆಯವರೇ ಯಾಕೆ? – ಬಿಜೆಪಿ ಪ್ರಶ್ನೆ

    ಚಿಕ್ಕಮಗಳೂರು: ಡಿಸೆಂಬರ್ 19ರಂದು ಬೆಳಗಾವಿಯ ಸುವರ್ಣಸೌಧದಲ್ಲಿ ಸಿ.ಟಿ.ರವಿ (CT Ravi) ಮೇಲಿನ ಹಲ್ಲೆ ಯತ್ನ ಹಾಗೂ ಬಂಧನವನ್ನು ಖಂಡಿಸಿ ಚಿಕ್ಕಮಗಳೂರಿನಲ್ಲಿ (Chikkamagaluru) ಪ್ರತಿಭಟನೆ ನಡಸಿದ್ದ 30ಕ್ಕೂ ಹೆಚ್ಚು ಕಾರ್ಯಕರ್ತರಿಗೆ ಪೊಲೀಸರು (Police) ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದ್ದಾರೆ.

    ಡಿ.19ರಂದು ರಾಷ್ಟ್ರೀಯ ಹೆದ್ದಾರಿ 173 ತಡೆದು ಪ್ರತಿಭಟನೆ ನಡೆಸಿದ್ದರು. 20 ರಂದು ಚಿಕ್ಕಮಗಳೂರು (Chikkamagaluru) ನಗರ ಬಂದ್‍ಗೆ ಕರೆ ನೀಡಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ನಗರದಲ್ಲಿ ಅಲ್ಲಲ್ಲೇ ಬೈಕ್-ಟಯರ್‌ಗಳಿಗೆ ಬೆಂಕಿ ಹಾಕಲಾಗಿತ್ತು, ಗಲಾಟೆ ಕೂಡ ನಡೆದಿತ್ತು. ಅಂದು ಪೊಲೀಸರು ಸುಮಾರು 100ಕ್ಕೂ ಹೆಚ್ಚು ಜನರನ್ನ ವಶಕ್ಕೆ ಪಡೆದು ಚಿಕ್ಕಮಗಳೂರು ನಗರದಿಂದ ಸುಮಾರು 80 ಕಿ.ಮೀ. ದೂರದ ಕಡೂರು ತಾಲೂಕಿನ ಸಿಂಗಟಗೆರೆ ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಿ ಬಿಡುಗಡೆ ಮಾಡಿದ್ದರು.

    ಇಂದು ತರೀಕೆರೆ ಪೊಲೀಸರು (Tarikere Police) 30ಕ್ಕೂ ಹೆಚ್ಚು ಜನರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದ್ದಾರೆ. 100 ರಲ್ಲಿ ಹೆಸರು ತಿಳಿದ 30ಕ್ಕೂ ಹೆಚ್ಚು ಜನರಿಗೆ ನೋಟಿಸ್‌ ನೀಡಿ ಜನವರಿ 4 ರಂದು ತರೀಕೆರೆ ಠಾಣೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ:ʼಇಂಡಿಯಾʼಗೆ ಬನ್ನಿ, ಬಾಗಿಲು ಸದಾ ತೆರೆದಿದೆ: ನಿತೀಶ್‌ಗೆ ಲಾಲೂ ಆಫರ್‌

    ಬಿಜೆಪಿ ಕಾರ್ಯಕರ್ತರು ಪೊಲೀಸರ ನೋಟಿಸ್‌ ವಿರುದ್ಧ ಕಿಡಿಕಾರಿದ್ದು ಅಸಮಾಧಾನ ಹೊರಹಾಕಿದ್ದಾರೆ. ಪ್ರತಿಭಟನೆ ನಡೆಸಿ ವಶಕ್ಕೆ ಪಡೆದು ಪ್ರಕರಣ ದಾಖಲಾಗಿದ್ದು ಎಲ್ಲಾ ಚಿಕ್ಕಮಗಳೂರು ನಗರ ಠಾಣೆಯಲ್ಲಿ. ಆದರೆ ವಿಚಾರಣೆ ತರೀಕೆರೆಯಲ್ಲೇ ಯಾಕೆ? ತನಿಖಾಧಿಕಾರಿ ತರೀಕೆರೆಯವರೇ ಯಾಕೆ ಎಂದು ಬಿಜೆಪಿ ಕಾರ್ಯಕರ್ತರು ಪ್ರಶ್ನಿಸಿ ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ. ಸರ್ಕಾರ ಹಾಗೂ ಪೊಲೀಸರು ಹೋರಾಟಗಾರರನ್ನ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್, ಮಾಜಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ, ವೆಂಕಟೇಶ್, ಕೇಶವ, ಸಚಿನ್, ಅಂಕಿತ ಸೇರಿ ಹಲವರ ಮೇಲೆ ಕೇಸ್ ದಾಖಲಾಗಿತ್ತು. ಇದೀಗ, ಪೊಲೀಸರು 30 ಜನರಿಗೆ ನೋಟೀಸ್ ನೀಡಿ ಜನವರಿ 4ಕ್ಕೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದಾರೆ.

     

  • ಸೈಬರ್‌ ಕ್ರೈಂ ಪೇದೆಗೆ ಹನಿಟ್ರ್ಯಾಪ್‌ – ಪತ್ನಿ ಆತ್ಮಹತ್ಯೆಗೆ ಯತ್ನ

    ಸೈಬರ್‌ ಕ್ರೈಂ ಪೇದೆಗೆ ಹನಿಟ್ರ್ಯಾಪ್‌ – ಪತ್ನಿ ಆತ್ಮಹತ್ಯೆಗೆ ಯತ್ನ

    ಕಲಬುರಗಿ: ಸೈಬರ್ ಕ್ರೈಂ (Cyber Crime) ಪೊಲೀಸ್ ಠಾಣೆಯ ಪೇದೆಯೊಬ್ಬರನ್ನು ಹನಿಟ್ರ್ಯಾಪ್ (Honey Trap) ಖೆಡ್ಡಾಕ್ಕೆ ಕೆಡವಿ ಆ ಪೇದೆಯ ಪತ್ನಿಯಿಂದ ಲಕ್ಷಗಟ್ಟಲೆ ಹಣ ಪೀಕಿದ ಘಟನೆ ಕಲಬುರಗಿಯಲ್ಲಿ (Kalaburagi) ನಡೆದಿದೆ.

    ಸೆನ್ ಪೊಲೀಸ್ ಠಾಣೆಯ ಪೇದೆಯನ್ನು ಮೋಹದ ಪಾಶಕ್ಕೆ ಬೀಳಿಸಿದ್ದ ಪೂಜಾ ಡೊಂಗರಗಾಂವ್ ನಂತರ ಪೇದೆ (Constable) ಪತ್ನಿಗೆ ಫೋಟೋ ತೋರಿಸಿ 8 ಲಕ್ಷ ರೂ. ವಸೂಲಿ ಮಾಡಿದ್ದಳು. ಈ ಕೃತ್ಯಕ್ಕೆ ಪೂಜಾ ಸಹಚರ ಅಮರಸಿಂಗ್ ಎಂಬಾತ ಸಾಥ್ ನೀಡಿದ್ದ.  ಇದನ್ನೂ ಓದಿ: ಮಗುವಿಗೆ ಸೌತೆಕಾಯಿ ತಿನ್ನಿಸಬೇಡ ಅಂದಿದ್ದಕ್ಕೆ ತಂಗಿಯನ್ನೇ ಕೊಂದ ಅಣ್ಣ!

     

    ಪೂಜಾ ಮತ್ತು ಅಮರ್ ಸಿಂಗ್ ಒಂದಾಗಿ 15 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಪೂಜಾ ಮತ್ತಷ್ಟು ಹಣ ಕೇಳಲು ಮುಂದಾಗುತ್ತಿದ್ದಂತೆ ಮನನೊಂದ ಪೇದೆ ಪತ್ನಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌. ಪ್ರಕರಣ ದಾಖಲಾದ ಬಳಿಕ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.