Tag: police

  • ಮೀಟರ್ ಬಡ್ಡಿ ದಂಧೆಕೋರರ ಟಾರ್ಚರ್ – ಯುವಕ ನೇಣಿಗೆ ಶರಣು

    ಮೀಟರ್ ಬಡ್ಡಿ ದಂಧೆಕೋರರ ಟಾರ್ಚರ್ – ಯುವಕ ನೇಣಿಗೆ ಶರಣು

    ಮಂಡ್ಯ: ಮೀಟರ್ ಬಡ್ಡಿ ದಂಧೆಕೋರರ ಕಿರುಕುಳದಿಂದ (Meter Interest Torture) ಯುವಕನೊಬ್ಬ ನೇಣಿಗೆ ಶರಣಾದ ಘಟನೆ ಕೆ.ಆರ್.ಪೇಟೆಯ ವಳಗೆರೆ ಮೆಣಸ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಲೋಹಿತ್ (35) ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಆತ ಖಾಸಗಿ ವ್ಯಕ್ತಿಗಳಿಂದ ಮೀಟರ್ ಬಡ್ಡಿಗೆ ಸಾಲ (Loan) ಪಡೆದಿದ್ದ. ಸುಮಾರು 30 ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ಅಲ್ಲದೇ ಲಕ್ಷ ಲಕ್ಷ ಬಡ್ಡಿ ಕೂಡ ಕಟ್ಟಿದ್ದ. ಆದರೂ ಮೀಟರ್ ಬಡ್ಡಿ ದಂಧೆಕೋರರ ಹಾವಳಿ ತಪ್ಪಿರಲಿಲ್ಲ.

    ಯುವಕ ಮೈಕ್ರೋ ಫೈನಾನ್ಸ್‌ನಲ್ಲಿ ಸಾಲ ಪಡೆದಿರುವ ಬಗ್ಗೆ ಶಂಕೆ ಇದೆ. ಆತ ಮೂರು ದಿನದ ಹಿಂದೆ ಕೆ.ಆರ್.ಪೇಟೆ ಪಟ್ಟಣದ ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ಮುಂದಾಗಿದ್ದ. ಬಳಿಕ ದೂರು ನೀಡದೆ ಗ್ರಾಮಸ್ಥರ ಸಮ್ಮುಖದಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ ಎಂದು ವಾಪಸ್ಸಾಗಿದ್ದ.

    ಇದೀಗ ಮೈಕ್ರೋ ಫೈನಾನ್ಸ್ ಹಾಗೂ ಮೀಟರ್ ಬಡ್ಡಿ ದಂಧೆಕೋರರ ಕಾಟಕ್ಕೆ ಬೇಸತ್ತು ನೇಣಿಗೆ ಶರಣಾಗಿದ್ದಾನೆ. ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

  • ಮೈಕ್ರೋ ಫೈನಾನ್ಸ್ ಟಾರ್ಚರ್ – ದೂರು ನೀಡಲು ಬಂದಿದ್ದ ಮಹಿಳೆಯರಿಗೆ ಪೊಲೀಸರಿಂದ ದಂಡ ಆರೋಪ

    ಮೈಕ್ರೋ ಫೈನಾನ್ಸ್ ಟಾರ್ಚರ್ – ದೂರು ನೀಡಲು ಬಂದಿದ್ದ ಮಹಿಳೆಯರಿಗೆ ಪೊಲೀಸರಿಂದ ದಂಡ ಆರೋಪ

    ಹಾವೆರಿ: ಮೈಕ್ರೋ ಫೈನಾನ್ಸ್ (Microfinance) ಸಿಬ್ಬಂದಿ ಕಿರುಕುಳಕ್ಕೆ ನೊಂದು ದೂರು ನೀಡಲು ಹೋಗಿದ್ದ ರಾಣೆಬೆನ್ನೂರಿನ (Ranebennur) ಗುಡ್ಡದ ಬೇವಿನಹಳ್ಳಿಯ ಇಬ್ಬರು ಮಹಿಳೆಯರಿಗೆ ಪೊಲೀಸರು ಗದರಿಸಿ ದಂಡ ವಸೂಲಿ ಮಾಡಿದ ಆರೋಪ ಕೇಳಿ ಬಂದಿದೆ.

    ನಮ್ಮ ದೂರಿಗೆ ಸ್ಪಂದಿಸದ ಹಲಗೇರಿ ಪೊಲೀಸರು, ಮೈಕ್ರೋ ಫೈನಾನ್ಸ್ ಸಿಬ್ಬಂದಿ ದೂರಿಗೆ ಸ್ಪಂದಿಸಿದ್ದಾರೆ. ನಮ್ಮನ್ನು ಠಾಣೆಗೆ ಕರೆಸಿ ಗದರಿಸಿ ದಂಡ ಕಟ್ಟಿಸಿದ್ರು ಎಂದು ಗ್ರಾಮದ ನಾಗಮ್ಮ ಹಾಗೂ ರಹೀಮಾ ಆರೋಪಿಸಿದ್ದಾರೆ.

    ಮೈಕ್ರೋ ಫೈನಾನ್ಸ್ ಸಿಬ್ಬಂದಿ ನಿಮ್ಮ ಮಗಳು ಸಾಲ ಕಟ್ಟೋದು ಬಿಟ್ಟು, ಯಾರ ಜೊತೆ ಓಡಿ ಹೋಗಿದ್ದಾಳೆ ಎಂದು ಅವಾಚ್ಯವಾಗಿ ನಿಂದನೆ ಮಾಡಿದ್ದರು. ಹೀಗಾಗಿ ಮೈಕ್ರೋ ಪೈನಾನ್ಸ್ ಸಿಬ್ಬಂದಿಗೆ ಮಹಿಳೆಯರು ತರಾಟೆಗೆ ತೆಗೆದುಕೊಂಡಿದ್ದರು. ಈ ವೇಳೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಯನ್ನು ಮಹಿಳೆಯರು ತಳ್ಳಾಡಿದ್ದರು ಎನ್ನಲಾಗಿದೆ.

    ಮಹಿಳೆಯರ ವಿರುದ್ಧ ಮೈಕ್ರೋ ಫೈನಾನ್ಸ್ ಸಿಬ್ಬಂದಿ ದೂರು ದಾಖಲಿಸಿದ್ದರು. ಈ ಹಿನ್ನಲೆ ಪೊಲೀಸರು ಮಹಿಳೆಯರನ್ನು ಠಾಣೆಗೆ ಕರೆಸಿ 1,000 ರೂ. ದಂಡ ವಸೂಲಿ ಮಾಡಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ.

  • ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ – ಕಾಮುಕನಿಗೆ 21 ವರ್ಷ ಜೈಲು

    ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ – ಕಾಮುಕನಿಗೆ 21 ವರ್ಷ ಜೈಲು

    ದಾವಣಗೆರೆ: ಅಪ್ರಾಪ್ತ ಬಾಲಕಿಯನ್ನು ಬಲಾತ್ಕಾರ ಮಾಡಿದ್ದ ವ್ಯಕ್ತಿಗೆ 21 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 30 ಸಾವಿರ ರೂ. ದಂಡ ವಿಧಿಸಿ ದಾವಣಗೆರೆ (Davanagere) ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್ ಸಿ-1 ನ್ಯಾಯಾಲಯ (Court) ಆದೇಶಿಸಿದೆ.

    ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಸಂತೋಷ್ ಅಲಿಯಾಸ್ ಶಾಂತಕುಮಾರ್‌ (35) ಶಿಕ್ಷೆಗೆ ಗುರಿಯಾದ ಅಪರಾಧಿಯಾಗಿದ್ದಾನೆ. ಆತ 15 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ. 2 ತಿಂಗಳ ನಂತರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಬಾಲಕಿಯನ್ನು ಶಿವಮೊಗ್ಗದ ವೈದ್ಯರ ಬಳಿ ಕರೆದೊಯ್ದು ಪರೀಕ್ಷಿಸಿದಾಗ ಆಕೆ 2 ತಿಂಗಳ ಗರ್ಭಿಣಿಯಾಗಿರುವುದು ಗೊತ್ತಾಗಿತ್ತು.

    ವೈದ್ಯರ ಸೂಚನೆ ಮೇರೆಗೆ ಬಾಲಕಿಯನ್ನು ಶಿವಮೊಗ್ಗ (Shivamogga) ಮೆಗ್ಗಾನ್ ಆಸ್ಪತ್ರೆಯಲ್ಲಿರುವ ಸಖಿ ಕೇಂದ್ರಕ್ಕೆ ದಾಖಲಿಸಲಾಗಿತ್ತು. ನಂತರ ಆಕೆ ನೀಡಿದ ದೂರಿನ ಮೇರೆಗೆ ಹೊನ್ನಾಳಿ ಪೊಲೀಸ್ (Police) ಠಾಣೆಯಲ್ಲಿ ಸಂತೋಷ್ ವಿರುದ್ಧ ಪೋಕ್ಸೋ ಪ್ರಕರಣ (POCSO Case) ದಾಖಲಾಗಿತ್ತು.

    ಪ್ರಕರಣದ ತನಿಖೆ ನಡೆಸಿದ ಪೊಲೀಸ್ ನಿರೀಕ್ಷಕ ಟಿ.ವಿ.ದೇವರಾಜ್, ಸಂತೋಷ್‌ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾ.ಶ್ರೀರಾಮ ನಾರಾಯಣ ಹೆಗಡೆಯವರಿದ್ದ ಏಕಸದಸ್ಯ ಪೀಠ, ಆಪರಾಧಿಯ ಆರೋಪ ಸಾಬೀತಾಗಿದ್ದರಿಂದ 21 ವರ್ಷ ಕಠಿಣ ಕಾರಾಗೃಹ ಶಿಕ್ಷೆ, 30 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

    ವಸೂಲು ಮಾಡಿದ ದಂಡದ ಒಟ್ಟು ಮೊತ್ತ 30,000 ರೂ.ಗಳನ್ನು ಪ್ರಕರಣದ ಸಂತ್ರಸ್ತೆಗೆ ನೀಡುವಂತೆ ಹಾಗೂ ಸಂತ್ರಸ್ತೆಗೆ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ನೀಡುವಂತೆ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

  • ಯುಪಿ ಕಾಲುವೆಯೊಂದರಲ್ಲಿ ವ್ಯಕ್ತಿಯ ಶವ ಪತ್ತೆ – ಆತ್ಮಹತ್ಯೆಗೆ ಒಳ್ಳೆಯ ಜಾಗ ಯಾವ್ದು ಅಂತ ಸರ್ಚ್‌ ಮಾಡಿದ್ದ ಭೂಪ!

    ಯುಪಿ ಕಾಲುವೆಯೊಂದರಲ್ಲಿ ವ್ಯಕ್ತಿಯ ಶವ ಪತ್ತೆ – ಆತ್ಮಹತ್ಯೆಗೆ ಒಳ್ಳೆಯ ಜಾಗ ಯಾವ್ದು ಅಂತ ಸರ್ಚ್‌ ಮಾಡಿದ್ದ ಭೂಪ!

    ಲಕ್ನೋ: ಉತ್ತರ ಪ್ರದೇಶದ (Uttar Pradesh) ಗುರುಗ್ರಾಮ್‌ನ (Gurugram) ವ್ಯಕ್ತಿಯೊಬ್ಬನ ಕೊಳೆತ ಶವ ಗಾಜಿಯಾಬಾದ್‌ನ ಕಾಲುವೆ ಒಂದರಲ್ಲಿ ಪತ್ತೆಯಾಗಿದೆ. ಆತ ಮನೆಯಿಂದ ಒಂದು ವಾರದ ಹಿಂದೆ ನಾಪತ್ತೆಯಾಗಿದ್ದ ಎಂದು ಪೊಲೀಸರು (Police) ತಿಳಿಸಿದ್ದಾರೆ.

    ಸಾವಿಗೀಡಾದ ವ್ಯಕ್ತಿಯನ್ನು ಪ್ರಿನ್ಸ್ ರಾಣಾ ಎಂದು ಗುರುತಿಸಲಾಗಿದೆ. ಆತ ಉತ್ತರ ಪ್ರದೇಶದ ಬಿಜ್ನೋರ್‌ನವನು. ಗುರುಗ್ರಾಮ್‌ನಲ್ಲಿ ಆ್ಯಪ್ ಅಗ್ರಿಗೇಟರ್‌ನಲ್ಲಿ ಯೋಜನಾ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದ.

    ಕಳೆದ ಬುಧವಾರ, ಪ್ರಿನ್ಸ್ ತಾನು ಎಲ್ಲಿಗೆ ಹೋಗುತ್ತಿದ್ದೇನೆಂದು ತಿಳಿಸದೆ ಮನೆಯಿಂದ ಹೊರಗೆ ಹೋಗಿದ್ದ. ತಮ್ಮ ಫೋನ್‌ನ್ನು ಸಹ ಬಿಟ್ಟು ಹೋಗಿದ್ದ. ಮರುದಿನ ಆತನ ಪತ್ನಿ ಪೊಲೀಸರನ್ನು ಸಂಪರ್ಕಿಸಿ, ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದರು. ಬಳಿಕ ಪ್ರಿನ್ಸ್‌ ಫೋನ್‌ನ ಬ್ರೌಸಿಂಗ್ ಹಿಸ್ಟರಿ  (Search History) ಪರಿಶೀಲಿಸಿದಾಗ ಆತ ಆತ್ಮಹತ್ಯೆಗೆ ಸೂಕ್ತ ಜಾಗದ ಬಗ್ಗೆ ಹುಡುಕಿದ್ದ ಎಂದು ತಿಳಿದು ಬಂದಿದೆ.

    ಮಂಗಳವಾರ ಸಂಜೆ ಗಾಜಿಯಾಬಾದ್‌ನ ಗಂಗನಹರ್ ಕಾಲುವೆಯ ಬಳಿ ಶವ ಪತ್ತೆಯಾಗಿದೆ. ಪೊಲೀಸರು ಕೊಳೆತ ಶವವನ್ನು ವಶಕ್ಕೆ ಪಡೆದಾಗ ಪ್ರಿನ್ಸ್‌ನ ಆಧಾರ್ ಕಾರ್ಡ್ ಇರುವ ಕೈಚೀಲ ಸಿಕ್ಕಿತು. ನಂತರ, ಆತನ ಕುಟುಂಬದ ಸದಸ್ಯರು ಗುರುತನ್ನು ದೃಢಪಡಿಸಿದರು. ಶವಪರೀಕ್ಷೆಯು ಸಾವಿಗೆ ಕಾರಣವನ್ನು ಬಹಿರಂಗಪಡಿಸುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ದಾವಣಗೆರೆ | ಪ್ರೀತಿಸುವಂತೆ ಯುವತಿಗೆ ಪೀಡಿಸಿದ ಯುವಕನಿಗೆ 3 ತಿಂಗಳ ಜೈಲು!

    ದಾವಣಗೆರೆ | ಪ್ರೀತಿಸುವಂತೆ ಯುವತಿಗೆ ಪೀಡಿಸಿದ ಯುವಕನಿಗೆ 3 ತಿಂಗಳ ಜೈಲು!

    ದಾವಣಗೆರೆ: ಪ್ರೀತಿಸುವಂತೆ (Love) ಯುವತಿಗೆ ಪೀಡಿಸಿದ್ದ ಯುವಕನಿಗೆ ದಾವಣಗೆರೆಯ (Davangere) ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (Court) ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಿದೆ.

    ನಗರದ ಎಸ್‌ಓಜಿ ಕಾಲನಿ ಸಿ ಬ್ಲಾಕ್ ನಿವಾಸಿಯಾದ ನವೀನ್ ಶಿಕ್ಷೆಗೆ ಗುರಿಯಾದ ಅಪರಾಧಿಯಾಗಿದ್ದಾನೆ. ಆತ 2021ರ ಜೂ.19 ರಂದು ಹದಡಿ ರಸ್ತೆಯ ಮಾಲ್ ಮುಂಭಾಗ ತಂದೆಯೊಂದಿಗೆ ಬೈಕ್‌ನಲ್ಲಿ ಹೊರಟಿದ್ದ ಯುವತಿಯನ್ನು ಅಡ್ಡ ಹಾಕಿ ಪ್ರೀತಿಸುವಂತೆ ಅವಾಜ್‌ ಹಾಕಿದ್ದ. ಅಲ್ಲದೇ ಅವಾಚ್ಯವಾಗಿ ನಿಂದಿಸಿ, ಪ್ರಾಣ ಬೆದರಿಕೆ ಹಾಕಿ, ಲಾಂಗ್‌ನಿಂದ ಹಲ್ಲೆ ಮಾಡಿದ್ದ. ಯುವತಿಗೆ ಸಣ್ಣ ಪುಟ್ಟ ಗಾಯಗಳಾಗಿ ಅಪಾಯದಿಂದ ಪಾರಾಗಿದ್ದಳು. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ನವೀನ್‌ ವಿರುದ್ಧ ದೂರು ದಾಖಲಾಗಿತ್ತು.

    ಪೊಲೀಸ್‌ ಅಧಿಕಾರಿ ರೂಪಾ ತೆಂಬದ್ ತನಿಖೆ ಮಾಡಿ, ಆರೋಪಿ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ, ಅಪರಾಧಿಗೆ 3 ತಿಂಗಳು ಜೈಲು ಶಿಕ್ಷೆ, 15 ಸಾವಿರ ರೂ. ದಂಡ ವಿಧಿಸಿ ತೀಪು ನೀಡಿದ್ದಾರೆ.

    ಆರೋಪಿಯು ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದುದರಿಂದ ಈ ಬಂಧನದ ಅವಧಿಯನ್ನು ಪರಿಗಣಿಸಿ, ಶಿಕ್ಷಾ ಅವಧಿಯನ್ನು ಕಡಿತಗೊಳಿಸಲಾಗಿದೆ. ಅಪರಾಧಿಯಿಂದ ವಸೂಲು ಮಾಡಿದ 10 ಸಾವಿರ ರೂ. ಹಣವನ್ನು ಸಂತ್ರಸ್ತೆಗೆ ಪರಿಹಾರ ನೀಡಲು, ಉಳಿದ 5 ಸಾವಿರ ರೂ.ಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಲಾಗಿದೆ.

    ಸರ್ಕಾರದ ಪರ ಸರ್ಕಾರಿ ವಕೀಲ ಬಿ.ಮಂಜುನಾಥ ವಾದ ಮಂಡಿಸಿದ್ದರು.

  • 4 ವರ್ಷದ ಮಗಳ ಹತ್ಯೆ – 8 ತಿಂಗಳ ಬಳಿಕ ಮಲತಾಯಿ ಅರೆಸ್ಟ್!

    4 ವರ್ಷದ ಮಗಳ ಹತ್ಯೆ – 8 ತಿಂಗಳ ಬಳಿಕ ಮಲತಾಯಿ ಅರೆಸ್ಟ್!

    ಬೆಳಗಾವಿ: ಮಗಳ ಹೊಟ್ಟೆಗೆ ಹೊಡೆದು ಹತ್ಯೆ ಮಾಡಿದ್ದ ಮಲತಾಯಿಯನ್ನು 8 ತಿಂಗಳ ಬಳಿಕ ಬೆಳಗಾವಿ (Belagavi) ಪೊಲೀಸರು (Police) ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಸಪ್ನಾ ನಾವಿ ಎಂದು ಗುರುತಿಸಲಾಗಿದೆ. ಆರೋಪಿ, 4 ವರ್ಷದ ಮಗಳ ಮೇಲೆ ಹಲ್ಲೆ ಮಾಡಿ ಹತ್ಯೆಗೈದು ತಾನೇನೂ ಮಾಡಿಲ್ಲ ಎಂಬಂತೆ ಇದ್ದಳು. ಮರಣೋತ್ತರ ಪರೀಕ್ಷೆಯಲ್ಲಿ ಮಹಿಳೆಯ ಕ್ರೌರ್ಯ ಬೆಳಕಿಗೆ ಬಂದಿದ್ದು, ಮಲತಾಯಿಯ ಅಸಲಿ ಬಣ್ಣ ಬಯಲಾಗಿದೆ. ಇದನ್ನೂ ಓದಿ: ಸರ್ಕಾರಿ ಬಸ್, ಟ್ರ‍್ಯಾಕ್ಟರ್ ಡಿಕ್ಕಿ – ಓರ್ವ ಯುವತಿ ಸಾವು, 18 ಜನರಿಗೆ ಗಾಯ

    2024ರ ಮೇ ತಿಂಗಳಲ್ಲಿ ಸಮೃದ್ಧಿ ರಾಯಣ್ಣ ನಾವಿ (4) ಸಾವನ್ನಪ್ಪಿದ್ದಳು. ಮಗುವಿನ ಅಜ್ಜ ಹಾಗೂ ಅಜ್ಜಿ ಸಪ್ನಾ ನಾವಿ ವಿರುದ್ಧ ಕೊಲೆ ಆರೋಪ ಮಾಡಿದ್ದರು. ಈ ಸಂಬಂಧ ಅಸಹಜ ಸಾವು ಪ್ರಕರಣ ದಾಖಲಾಗಿತ್ತು. ಬಳಿಕ ಮೃತಪಟ್ಟ ಮಗುವಿನ ಶವವನ್ನು ಬಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಇದಾದ ಬೆನ್ನಲ್ಲೇ ಸಪ್ನಾ ನಾವಿ ನಿರೀಕ್ಷಣಾ ಜಾಮೀನು ಪಡೆದಿದ್ದಳು.

    ಸದ್ಯ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಮಗುವಿನ ಹೊಟ್ಟೆಗೆ ಹೊಡೆದು, ಅಥವಾ ಒದ್ದು ಗಾಯಗೊಳಿಸಿ ಕೊಲೆ ಎಂದು ಸಾಬೀತಾಗಿದೆ. ಈ ಹಿನ್ನೆಲೆ ನಿರೀಕ್ಷಣಾ ಜಾಮೀನನ್ನು ರದ್ದು ಮಾಡುವಂತೆ ಪೊಲೀಸರು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಜಾಮೀನು ರದ್ದಾಗುತ್ತಿದ್ದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರಾಯಣ್ಣ, ಸಮೃದ್ಧಿ ಹೆತ್ತ ತಾಯಿ ಸಾವಿನ ನಂತರ ಎರಡನೇ ಮದುವೆ ಆಗಿದ್ದರು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ನಿಂತಿದ್ದ ಕಾರಿಗೆ ಟ್ರಕ್ ಡಿಕ್ಕಿ – ಆರು ಮಂದಿಗೆ ಗಂಭೀರ ಗಾಯ

  • ವೃದ್ಧನನ್ನು ಕೊಂದು ಶವ ಮುಚ್ಚಿಟ್ಟ ಕಾಡಾನೆ!

    ವೃದ್ಧನನ್ನು ಕೊಂದು ಶವ ಮುಚ್ಚಿಟ್ಟ ಕಾಡಾನೆ!

    ಹಾಸನ: ಕಾಡಾನೆಯೊಂದು (Elephant) ವೃದ್ಧನ ಮೇಲೆ ಏಕಾಏಕಿ ದಾಳಿ ನಡೆಸಿ ಕೊಂದು, ಶವದ ಮೇಲೆ ಕಾಫಿ ಗಿಡ ಮುಚ್ಚಿದ ಘಟನೆ ಆಲೂರು ತಾಲೂಕಿನ ಅಡಿಬೈಲು ಗ್ರಾಮದಲ್ಲಿ ನಡೆದಿದೆ.

    ಕಾಡಾನೆ ದಾಳಿಗೆ ಬಲಿಯಾದ ವೃದ್ಧರನ್ನು ಪುಟ್ಟಯ್ಯ (78) ಎಂದು ಗುರುತಿಸಲಾಗಿದೆ. ಮಂಗಳವಾರ ಸಂಜೆ ಮಗ್ಗೆ ಗ್ರಾಮದಿಂದ ಅಡಿಬೈಲು ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಆನೆ ದಾಳಿ ನಡೆಸಿದೆ. ಕಾಲಿನಿಂದ ತುಳಿದು ಮರಕ್ಕೆ ಅಪ್ಪಳಿಸಿದೆ. ಇದರಿಂದ ವೃದ್ಧ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬಳಿಕ ಆನೆ ಶವಕ್ಕೆ ಕಾಫಿ ಗಿಡಗಳನ್ನು ಮುಚ್ಚಿ ಹೋಗಿದೆ.

    ಬುಧವಾರ ಮುಂಜಾನೆ ಕಾಫಿ ತೋಟದಲ್ಲಿ ಪುಟ್ಟಯ್ಯ ಶವ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ( Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಸ್ನೇಹಿತರ ಹೆಸರಲ್ಲಿ ನಕಲಿ ಚಿನ್ನ ಅಡವಿಟ್ಟು 49 ಲಕ್ಷ ವಂಚಿಸಿದ ಬ್ಯಾಂಕ್ ಮ್ಯಾನೇಜರ್!

    ಸ್ನೇಹಿತರ ಹೆಸರಲ್ಲಿ ನಕಲಿ ಚಿನ್ನ ಅಡವಿಟ್ಟು 49 ಲಕ್ಷ ವಂಚಿಸಿದ ಬ್ಯಾಂಕ್ ಮ್ಯಾನೇಜರ್!

    ದಾವಣಗೆರೆ: ಬ್ಯಾಂಕ್ (Bank) ಮ್ಯಾನೇಜರ್ ಒಬ್ಬ ಸ್ನೇಹಿತರ ಹೆಸರಲ್ಲಿ ನಕಲಿ ಚಿನ್ನ (Gold) ಅಡವಿಟ್ಟು ಬರೋಬ್ಬರಿ 49 ಲಕ್ಷ ರೂ. ವಂಚನೆ ಮಾಡಿದ ಪ್ರಕರಣ ಜಗಳೂರಿನಲ್ಲಿ (Jagalur) ನಡೆದಿದೆ.

    ಜಗಳೂರು ಪಟ್ಟಣದಲ್ಲಿರುವ ಕೆಎಲ್‍ಎಂ ಆಕ್ಸಿವಾ ಫಿನ್ ವೆಸ್ಟ್ ಬ್ಯಾಂಕ್ ಈ ವಂಚನೆ ನಡೆದಿದೆ. ಬ್ಯಾಂಕ್‍ನ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಅರವಿಂದ್ ರೆಡ್ಡಿ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ.

    ಅರವಿಂದ್ ರೆಡ್ಡಿ, 2024ರ ನವೆಂಬರ್‌ನಲ್ಲಿ ತನ್ನ 9 ಮಂದಿ ಸ್ನೇಹಿತರ ಹೆಸರಿನಲ್ಲಿ 84.5 ತೊಲ ನಕಲಿ ಬಂಗಾರ ಅಡವಿಟ್ಟು, ಬರೋಬ್ಬರಿ 49 ಲಕ್ಷ ರೂ.ಗೂ ಹೆಚ್ಚಿನ ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ಕಣ್ಮರೆಯಾಗಿದ್ದ.

    ಮ್ಯಾನೇಜರ್‌ನ ಸ್ನೇಹಿತರಿಗೆ ಅಕ್ಸಿವಾ ಬ್ಯಾಂಕ್‍ನಿಂದ ಬಡ್ಡಿ ಹಣ ಕಟ್ಟುವಂತೆ ನೋಟಿಸ್ ಬಂದಾಗ ಪ್ರಕರಣ ಬಯಲಿಗೆ ಬಂದಿದೆ. ತಾವು ಯಾವುದೇ ಬಂಗಾರ ಅಡವಿಟ್ಟಿಲ್ಲ ಎಂದು ಬ್ಯಾಂಕ್‍ಗೆ 9 ಜನ ಸ್ನೇಹಿತರು ಬಂದಿದ್ದಾರೆ. ಈ ವೇಳೆ ವಂಚನೆ ನಡೆದಿರುವುದು ಗೊತ್ತಾಗಿದೆ.

    ಈ ಸಂಬಂಧ ಬ್ಯಾಂಕ್‍ನ ಸಹಾಯಕ ವ್ಯವಸ್ಥಾಪಕ ವಸಂತ್ ಕುಮಾರ್, ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  • ಮೆಟ್ರೋ ಹಳಿ ಮೇಲೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ನಿವೃತ್ತ ಯೋಧ

    ಮೆಟ್ರೋ ಹಳಿ ಮೇಲೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ನಿವೃತ್ತ ಯೋಧ

    ಬೆಂಗಳೂರು: ನಮ್ಮ ಮೆಟ್ರೋದಲ್ಲಿ (Namma Metro) ಆತ್ಮಹತ್ಯೆಗೆ ಯತ್ನಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು ಇಂದು ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ (Jalahalli Metro Station) ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ಇಂದು (ಜ.20) ಬೆಳಗ್ಗೆ 10:30 ರ ಸುಮಾರಿಗೆ ಜಾಲಹಳ್ಳಿ ಮೆಟ್ರೋ ನಿಲ್ದಾಣದ ಪ್ಲಾಟ್‌ಟ್‌ಫಾರಂಗೆ ರೈಲು ಆಗಮಿಸುತ್ತಿದ್ದಂತೆ ಹಳಿಗೆ ಜಿಗಿದು ಹಳಿ ಮೇಲೆ ಅಡ್ಡಲಾಗಿ ಮಲಗಿದ್ದಾರೆ. ಕೂಡಲೇ ಎಚ್ಚೆತ್ತ ಬಿಎಂಆರ್‌ಸಿಎಲ್ (BMRCL) ಸಿಬ್ಬಂದಿ ತುರ್ತು ಟ್ರಿಪ್ ಸಿಸ್ಟಮ್ ಇಟಿಎಸ್ ಅನ್ನು ಸ್ಥಗಿತಗೊಳಿಸಿ ವ್ಯಕ್ತಿಯನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ.

    ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಬಿಹಾರ ಮೂಲದ ವಾಯುಪಡೆ ನಿವೃತ್ತ ಯೋಧ 49 ವರ್ಷದ ಅನಿಲ್ ಕುಮಾರ್ ಪಾಂಡೆ ಎನ್ನುವುದು ತಿಳಿದುಬಂದಿದೆ. ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿರುವ ಜಾಲಹಳ್ಳಿ ಭದ್ರತಾ ವಿಭಾಗದ ಸಿಬ್ಬಂದಿ ಅವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಮದ್ಯಪ್ರಿಯರಿಗೆ ಸರ್ಕಾರದಿಂದ ಶಾಕ್ | ಇಂದಿನಿಂದಲೇ ದರ ಏರಿಕೆ – ಯಾವುದು ಎಷ್ಟು?

     

    ಘಟನೆಯಿಂದಾಗಿ ಕೆಲ ಕಾಲ ಹಸಿರು ಮಾರ್ಗದಲ್ಲಿ ಮೆಟ್ರೋ ಸಂಚಾರ ಸ್ಥಗಿತಗೊಂಡಿತ್ತು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಯಶವಂತಪುರದಿಂದ ಸಿಲ್ಕ್ ಇನ್‌ಸ್ಟಿಟ್ಯೂಟ್‌ವರೆಗೆ ಮಾತ್ರ ಸಂಚಾರ ಕಲ್ಪಿಸಲಾಗಿತ್ತು.

    ಅನಿಲ್‌ ಕುಮಾರ್ ಪಾಂಡೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಒಂದು ವಾರದ ಹಿಂದೆಯಷ್ಟೇ ಚಿಕಿತ್ಸೆ ಪಡೆದು ಮನೆಗೆ ವಾಪಸ್‌ ಬಂದಿದ್ದರು. ಆತ್ಮಹತ್ಯೆಗೆ ಯತ್ನಿಸಿದ ವಿಚಾರ ತಿಳಿದು ಮೆಟ್ರೋ ನಿಲ್ದಾಣಕ್ಕೆ ಕುಟುಂಬ ಆಗಮಿಸಿತ್ತು. ಈಗ ಮತ್ತೆ ಪಾಂಡೆಯನ್ನು ಸೇನಾ ಆಸ್ಪತ್ರೆಗೆ ದಾಖಲಿಸಲು ಕುಟುಂಬಸ್ಥರು ಮುಂದಾಗಿದ್ದಾರೆ.

    ಮೆಟ್ರೋ ಹಳಿಗೆ ಜಿಗಿದಿದ್ದಕ್ಕೆ 5 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.

  • ವಿಶೇಷ ಕಾರ್ಯಾಚರಣೆ – ರಾತ್ರಿ ಕುಡುಕರಿಗೆ ಚಳಿ ಬಿಡಿಸಿದ ಗದಗ ಎಸ್‌ಪಿ

    ವಿಶೇಷ ಕಾರ್ಯಾಚರಣೆ – ರಾತ್ರಿ ಕುಡುಕರಿಗೆ ಚಳಿ ಬಿಡಿಸಿದ ಗದಗ ಎಸ್‌ಪಿ

    ಗದಗ: ಕುಡಿದ ಮತ್ತಲ್ಲಿ ನಗರದಲ್ಲಿ ಚಾಕು ಇರಿತ, ಗಲಾಟೆಗಳು ಇತ್ತೀಚೆಗೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕುಡುಕರಿಗೆ ಎಸ್‌ಪಿ ಚಳಿ ಬಿಡಿಸಿದ ಘಟನೆ ಗದಗ್‌ನಲ್ಲಿ (Gadag) ನಡೆದಿದೆ.

    ಗದಗ ಬೆಟಗೇರಿ ಅವಳಿ ನಗರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ ನೇಮಗೌಡ ನೇತೃತ್ವದಲ್ಲಿ ಡ್ರಿಂಕ್ & ಡ್ರೈವ್ ಬಗ್ಗೆ ವಿಶೇಷ ಕಾರ್ಯಾಚರಣೆ ನಡೆಯಿತು.

    ಹೊಸ ಬಸ್ ನಿಲ್ದಾಣ, ಓಲ್ಡ್ ಡಿಸಿ ಆಫೀಸ್ ಸರ್ಕಲ್, ಮಹಾತ್ಮ ಗಾಂಧಿ ಸರ್ಕಲ್, ಹುಯಿಲಗೋಳ ನಾರಾಯಣರಾವ್ ಸರ್ಕಲ್, ಮುಳಗುಂದ ನಾಕಾ, ಬೆಟಗೇರಿ ಬಸ್ ನಿಲ್ದಾಣ ಭಾಗ ಸೇರಿದಂತೆ ಅನೇಕ ಕಡೆಗಳಲ್ಲಿ ಎಸ್‌ಪಿ ಕಾರ್ಯಾಚರಣೆ ನಡೆಸಿದರು. ಇದನ್ನೂ ಓದಿ: ಸೈಫ್‌ ಮೇಲೆ ಹಲ್ಲೆ: ಅಂತಾರಾಷ್ಟ್ರೀಯ ಪಿತೂರಿ ಶಂಕೆಯನ್ನು ತಳ್ಳಿಹಾಕುವಂತಿಲ್ಲ – ಆರೋಪಿ 5 ದಿನ ಪೊಲೀಸ್‌ ಕಸ್ಟಡಿಗೆ

    ರಾತ್ರೋರಾತ್ರಿ ದಿಢೀರ್ ಎಸ್‌ಪಿ ಹಾಗೂ ಅನೇಕ ಪೊಲೀಸ್ ಅಧಿಕಾರಿಗಳು ಡ್ರೈವಿಂಗ್ ಮಾಡುವವರನ್ನು ತಡೆದು ತಪಾಸಣೆ ಮಾಡಿದರು. ಪಾನ ಮತ್ತರಾದವರಿಗೆ ದಂಡ ವಿಧಿಸುವುದರ ಮೂಲಕ ನಶೆ ಇಳಿಸುವ ಕೆಲಸ ಮಾಡಿದರು. ಈ ವೇಳೆ ಪ್ರಬಾರಿ ಎಸ್.ಪಿ, ಡಿವೈಎಸ್ಪಿ, ಸಿಪಿಐ ಸೇರಿದಂತೆ ಅನೇಕ ಸಿಬ್ಬಂದಿ ಇದ್ದರು.