Tag: police

  • ಕುಂಭ ಮೇಳ ಕಾಲ್ತುಳಿತದ ಹಿಂದೆ ಇದ್ಯಾ ಪಿತೂರಿ? – ಸಕ್ರಿಯವಾಗಿದ್ದ 16 ಸಾವಿರ ಮೊಬೈಲ್‌ಗಳ ಪೈಕಿ ಬಹುತೇಕ ಸ್ವಿಚ್‌ ಆಫ್‌!

    ಕುಂಭ ಮೇಳ ಕಾಲ್ತುಳಿತದ ಹಿಂದೆ ಇದ್ಯಾ ಪಿತೂರಿ? – ಸಕ್ರಿಯವಾಗಿದ್ದ 16 ಸಾವಿರ ಮೊಬೈಲ್‌ಗಳ ಪೈಕಿ ಬಹುತೇಕ ಸ್ವಿಚ್‌ ಆಫ್‌!

    ಪ್ರಯಾಗ್‌ರಾಜ್‌: ಮೌನಿ ಅಮಾವಾಸ್ಯೆಯಂದು ಮಹಾಕುಂಭ ಮೇಳದಲ್ಲಿ ನಡೆದ ಕಾಲ್ತುಳಿತ (Kumbh Stampede) ಪ್ರಕರಣದ ಹಿಂದೆ ದೊಡ್ಡ ಸಂಚು ಇದ್ಯಾ ಹೀಗೊಂದು ಶಂಕೆ ಈಗ ಎದ್ದಿದೆ.

    ಹೌದು. ಜನವರಿ 29 ರಂದು ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ನಡೆದ ಕಾಲ್ತುಳಿತದ ಬಗ್ಗೆ ಈಗ ತನಿಖೆ ಆರಂಭವಾಗಿದೆ. ತನಿಖೆಯ ಭಾಗವಾಗಿ ಕಾಲ್ತುಳಿತ ಸಂಭವಿಸಿದ ಸ್ಥಳದಲ್ಲಿ ಸಕ್ರಿಯವಾಗಿದ್ದ ಸುಮಾರು 16 ಸಾವಿರ ಮೊಬೈಲ್‌ ಫೋನ್‌ಗಳನ್ನು (Mobile Phone) ದತ್ತಾಂಶಗಳನ್ನು ವಿಶ್ಲೇಷಣೆ ಮಾಡಲಾಗುತ್ತಿದೆ.

    ವಿಶ್ಲೇಷಣೆಯ ಸಂದರ್ಭದಲ್ಲಿ ಬಹುತೇಕ ಮೊಬೈಲ್‌ ಫೋನ್‌ಗಳು ಸ್ವಿಚ್‌ ಆಫ್‌ ಆಗಿರುವ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಈಗ ತನಿಖಾಧಿಕಾರಿಗಳು ಸ್ವಿಚ್‌ ಆಫ್‌ ಆಗಿರುವ ಮೊಬೈಲ್‌ ಸಂಖ್ಯೆಗಳ ಗ್ರಾಹಕರ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಇದನ್ನೂ ಓದಿ: ಬಸಂತ ಪಂಚಮಿ – ಪ್ರಯಾಗ್‌ರಾಜ್‌ನಲ್ಲಿ ಸೋಮವಾರ 3 ಕೋಟಿ ಭಕ್ತರಿಂದ ಪವಿತ್ರ ಸ್ನಾನ

    ಈಗ ಪೊಲೀಸ್‌ ಕಂಟ್ರೋಲ್‌ ರೂಮ್‌ನಲ್ಲಿ ಸಂಗ್ರಹಿಸಲಾದ ಸಿಸಿಟಿವಿ ದೃಶ್ಯಗಳಿಂದ ಮುಖ ಗುರುತಿಸುವಿಕೆ ಅಪ್ಲಿಕೇಶನ್ ಮೂಲಕ ಶಂಕಿತರನ್ನು ಗುರುತಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

    ಮೌನಿ ಅಮಾವಾಸ್ಯೆಯಂದು ಸ್ನಾನ ಮಾಡಲು ನೂಕು ನುಗ್ಗಲು ಉಂಟಾಗಿ ಸುಮಾರು 30 ಮಂದಿ ಕಾಲ್ತುಳಿತಕ್ಕೆ ಬಲಿಯಾಗಿದ್ದರು. ಜನಸಮೂಹವು ಬ್ಯಾರಿಕೇಡ್‌ಗಳನ್ನು ಹಾರಿ ಮುನ್ನುಗ್ಗಿದ್ದರಿಂದ ಈ ದುರಂತ ಸಂಭವಿಸಿತ್ತು.

    ಯೋಗಿ ಅದಿತ್ಯನಾಥ್‌ ಸರ್ಕಾರ ಈ ಪ್ರಕರಣ ಸಂಬಂಧ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಮೂವರು ಸದಸ್ಯರ ನ್ಯಾಯಾಂಗ ಆಯೋಗವು ಶುಕ್ರವಾರ ಘಟನೆಯ ಸ್ಥಳಕ್ಕೆ ಭೇಟಿ ನೀಡಿತ್ತು. ಸಮಿತಿಯು ತನ್ನ ತನಿಖೆಯನ್ನು ಮುಗಿಸಿ ವರದಿ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶವಿದೆ.

    12 ವರ್ಷಗಳ ನಂತರ ನಡೆಯುತ್ತಿರುವ ಮಹಾ ಕುಂಭ ಮೇಳವು ಜನವರಿ 13 ರಂದು ಪ್ರಾರಂಭವಾಗಿದ್ದು ಫೆಬ್ರವರಿ 26 ರವರೆಗೆ ನಡೆಯಲಿದೆ. ಸುಮಾರು 40 ಕೋಟಿ ಭಕ್ತರು ಈ ಕುಂಭಮೇಳದಲ್ಲಿ ಭಾಗಿಯಾಗಬಹುದು ಎಂದು ಉತ್ತರಪ್ರದೇಶ ಸರ್ಕಾರ ಆಂದಾಜಿಸಿದೆ.

     

  • ಪೊಲೀಸ್ ಅಧಿಕಾರಿ ಸೋಗಿನಲ್ಲಿ ಯುವತಿಯರ ರೂಮ್‍ಗೆ ನುಗ್ಗಿ ಕಿರುಕುಳ – ಹೋಮ್‌ಗಾರ್ಡ್‌ ಅರೆಸ್ಟ್‌

    ಪೊಲೀಸ್ ಅಧಿಕಾರಿ ಸೋಗಿನಲ್ಲಿ ಯುವತಿಯರ ರೂಮ್‍ಗೆ ನುಗ್ಗಿ ಕಿರುಕುಳ – ಹೋಮ್‌ಗಾರ್ಡ್‌ ಅರೆಸ್ಟ್‌

    ಬೆಂಗಳೂರು: ಕ್ರೈಂ ಬ್ರಾಂಚ್ ಪೊಲೀಸ್ ಅಧಿಕಾರಿಯ ಸೋಗಿನಲ್ಲಿ ಯುವತಿಯರಿಗೆ ಕಿರುಕುಳ ಕೊಡುತ್ತಿದ್ದ ಆರೋಪಿಯನ್ನು ಪೊಲೀಸರು (Police) ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ರಮೇಶ್ ಎಂದು ಗುರುತಿಸಲಾಗಿದೆ. ಆರೋಪಿ ಹೋಮ್‌ಗಾರ್ಡ್‌ ಅಗಿದ್ದು, ಪೊಲೀಸ್ ಅಧಿಕಾರಿಯಂತೆ ಯುವತಿಯರ ರೂಮ್‍ಗೆ ರಾತ್ರಿ ವೇಳೆ ನುಗ್ಗುತ್ತಿದ್ದ. ಅಲ್ಲದೇ ಯುವತಿಯರ ಬಳಿ ಅಶ್ಲೀಲವಾಗಿ ಮಾತನಾಡಿ ಕಿರುಕುಳ ಕೊಡುತ್ತಿದ್ದ. ಇದನ್ನೂ ಓದಿ: ಆಕಸ್ಮಿಕ ಬೆಂಕಿ – 40 ಕುರಿಗಳು ಸಜೀವ ದಹನ

    ಕೇರಳದಿಂದ ಬೆಂಗಳೂರಿಗೆ (Bengaluru) ಬಂದು ಕಾಲೇಜೊಂದರಲ್ಲಿ 2ನೇ ವರ್ಷದ ಬಿಎಸ್‍ಸಿ ಓದುತ್ತಿದ್ದ ವಿದ್ಯಾರ್ಥಿನಿ ಮೂವರು ಸ್ನೇಹಿತೆಯರ ಜೊತೆ ರೂಮ್ ಮಾಡಿಕೊಂಡಿದ್ದಳು. ಜ.25ರಂದು ಊಟ ಮಾಡಿ ಮಲಗಿದ್ದಾಗ ಆರೋಪಿ ಬಾಗಿಲು ತಟ್ಟಿದ್ದ. ಬಾಗಿಲು ತೆಗೆದಾಗ ನಾನು ಪೊಲೀಸ್ ಅಂತ ಹೇಳಿ ಒಳಗಡೆ ಹೋಗಿದ್ದ.

    ಆತ ಒಳಗೆ ಬರುತ್ತಿದ್ದಂತೆ ಯುವತಿ ಆಕೆಯ ಸ್ನೇಹಿತನಿಗೆ ಕರೆ ಮಾಡಿ ಪೊಲೀಸರು ಬಂದಿದ್ದಾರೆ ಎಂದು ತಿಳಿಸಿದ್ದಳು. ಆರೋಪಿ ಡೋರ್ ಲಾಕ್ ಮಾಡಿ, ಎಲ್ಲರ ಮೊಬೈಲ್‍ನ್ನು ಹೆದರಿಸಿ ಕಸಿದುಕೊಂಡಿದ್ದ. ಬಳಿಕ ಯುವತಿ ಕೈಯಲ್ಲಿದ್ದ ಹಾವಿನ ಟ್ಯಾಟೋ ನೋಡಿ ಅಶ್ಲಿಲವಾಗಿ ಮಾತನಾಡಿದ್ದ. ಅಲ್ಲದೇ ಯುವತಿ ಕರೆ ಮಾಡಿದ್ದಕ್ಕೆ ಬಂದಿದ್ದ ಆಕೆಯ ಸ್ನೇಹಿತರ ಮೊಬೈಲ್ ವಶಕ್ಕೆ ಪಡೆದು, ಯುವತಿರಿಗೆ ಮಂಡಿಕಾಲಿನಲ್ಲಿ ನಿಲ್ಲಿಸಿ ಟಾರ್ಚರ್ ನೀಡಿದ್ದ. 1:30 ಸುಮಾರಿಗೆ ಇನ್ನೊಬ್ಬ ಯುವಕ ಬಂದು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದ. ಸ್ಥಳಕ್ಕೆ ಸದಾಶಿವನಗರ (Sadashiva Nagar) ಠಾಣೆ ಪೊಲೀಸರು ಬರುತ್ತಿದ್ದಂತೆ ವ್ಯಕ್ತಿಯ ಬಣ್ಣ ಬಯಲಾಗಿದೆ.

    ಆರೋಪಿ ಕಳೆದ 6 ತಿಂಗಳಿನಿಂದ ಕ್ರೈಂ ಬ್ರಾಂಚ್ ಪೊಲೀಸ್ ಅಂತ ಹೇಳಿಕೊಂಡು ಯುವತಿಯರಿಗೆ ಹಾಗೂ ಆಕೆ ಗೆಳೆಯರಿಗೆ ಟಾರ್ಚರ್ ಕೊಡುತ್ತಿದ್ದ. ಈ ಸಂಬಂಧ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ರಮೇಶ್ ವಿರುದ್ಧ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಾರ್ ಡೋರ್‌ಗೆ ಬೈಕ್ ಡಿಕ್ಕಿ – ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್!

  • ಕಾರ್ ಡೋರ್‌ಗೆ ಬೈಕ್ ಡಿಕ್ಕಿ – ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್!

    ಕಾರ್ ಡೋರ್‌ಗೆ ಬೈಕ್ ಡಿಕ್ಕಿ – ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್!

    ಬೆಂಗಳೂರು: ಕಾರಿನ (Car) ಡೋರ್‌ಗೆ ಬೈಕ್ ಡಿಕ್ಕಿಯಾಗಿ (Accident) ಕೆಳಗೆ ಬಿದ್ದಿದ್ದ ಮಹಿಳೆ ಮೇಲೆ ಬಿಎಂಟಿಸಿ ಬಸ್ (BMTC Bus) ಹರಿದು ಸಾವನ್ನಪ್ಪಿದ ಘಟನೆ ಮೈಸೂರು ರಸ್ತೆಯ ನಾಯಂಡಹಳ್ಳಿ ಬಳಿ ನಡೆದಿದೆ.

    ಮೃತ ಮಹಿಳೆಯನ್ನು ಕಾಮಕ್ಷಿಪಾಳ್ಯದ ನಿವಾಸಿ ಸರೋಜಾ (42) ಎಂದು ಗುರುತಿಸಲಾಗಿದೆ. ಜ್ಞಾನಭಾರತಿಯಲ್ಲಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ಸಹೋದರನ ಜೊತೆ ಮಹಿಳೆ ಬರುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಮುಂದೆ ನಿಂತಿದ್ದ ಕಾರಿನ ಡೋರ್‌ನ್ನು ತಕ್ಷಣ ತೆಗೆಯಲಾಗಿದೆ. ಇದರಿಂದ ಡೋರ್‌ಗೆ ಬೈಕ್ ಡಿಕ್ಕಿಯಾಗಿ ಕೆಳಗೆ ಬಿದ್ದಿದ್ದಾರೆ. ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ 8 ನಕ್ಸಲರ ಎನ್‌ಕೌಂಟರ್

    ಈ ಸಮಯದಲ್ಲಿ ಹಿಂಬದಿಯಿಂದ ಬಂದ ಬಿಎಂಟಿಸಿ ಬಸ್ ಸರೋಜಾಯವರ ಮೇಲೆ ಹರಿದಿದೆ. ಪರಿಣಾಮ ಸ್ಥಳದಲ್ಲೇ ಅವರು ಸಾವಿಗೀಡಾಗಿದ್ದಾರೆ.

    ಘಟನಾ ಸ್ಥಳಕ್ಕೆ ಬ್ಯಾಟರಾಯನಪುರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇದನ್ನೂ ಓದಿ: Maha Kumbh 2025 – 77 ದೇಶಗಳ ರಾಜತಾಂತ್ರಿಕರು ಸೇರಿ 30 ಕೋಟಿ ಭಕ್ತರಿಂದ ಪುಣ್ಯಸ್ನಾನ

  • ರಾಜ್ಯದಲ್ಲಿ ಕೆಂಪು ಉಗ್ರರ ಯುಗಾಂತ್ಯ – ನಕ್ಸಲರ ಕೊನೆ ವಿಕೆಟ್ ಪತನ!

    ರಾಜ್ಯದಲ್ಲಿ ಕೆಂಪು ಉಗ್ರರ ಯುಗಾಂತ್ಯ – ನಕ್ಸಲರ ಕೊನೆ ವಿಕೆಟ್ ಪತನ!

    – ಇಂದು ಕೋಟೆಹೊಂಡ ರವೀಂದ್ರ  ಪೊಲೀಸರಿಗೆ ಶರಣು 
    -ನಾಳೆ ನಕ್ಸಲ್ ಲಕ್ಷ್ಮಿ ಶರಣಾಗತಿಗೆ ಸಿದ್ಧತೆ

    ಚಿಕ್ಕಮಗಳೂರು: ನಕ್ಸಲ್ (Naxal) ಕೋಟೆಹೊಂಡ ರವೀಂದ್ರ ಶರಣಾಗತಿಗೆ ಸಿದ್ಧನಾಗಿದ್ದು, ಕರ್ನಾಟಕದಲ್ಲಿ ಕೆಂಪು ಉಗ್ರರ ಇತಿಹಾಸ ಯುಗಾಂತ್ಯವಾಗುತ್ತಿದೆ.

    ಇಂದು (ಶನಿವಾರ) ಎಸ್ಪಿ ಕಚೇರಿಯಲ್ಲಿ ಶಾಂತಿಗಾಗಿ ನಾಗರೀಕ ವೇದಿಕೆ ಸದಸ್ಯರ ಸಮ್ಮುಖದಲ್ಲಿ ಶರಣಾಗಲಿದ್ದಾನೆ. ಕಳೆದೊಂದು ದಶಕದಿಂದ ಈತ ಭೂಗತನಾಗಿದ್ದ. ಆತನ ವಿರುದ್ಧ ಜಿಲ್ಲೆಯ ವಿವಿಧ ಪೊಲೀಸ್‌ (Police) ಠಾಣೆಯಲ್ಲಿ ಒಟ್ಟು 14 ಪ್ರಕರಣಗಳಿವೆ.

    ರವೀಂದ್ರ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದ ಕೋಟೆಹೊಂಡ ಗ್ರಾಮದವನು.

    ಜನವರಿ 8 ರಂದು 6 ಜನ ನಕ್ಸಲರು ಸಿಎಂ ಎದುರು ಶರಣಾಗಿದ್ದರು. ಆದರೆ ಈತ ಕಾಡಲ್ಲಿ ಒಬ್ಬನೇ ಉಳಿದು ಕೊಂಡಿದ್ದ. ಇನ್ನೂ ತಲೆಮರೆಸಿಕೊಂಡಿದ್ದ ನಕ್ಸಲ್ ಲಕ್ಷ್ಮಿ ಸಹ ನಾಳೆ (ಭಾನುವಾರ) ಪೊಲೀಸರ ಮುಂದೆ ಶರಣಾಗಲು ತಯಾರಾಗಿದ್ದು ರಾಜ್ಯದಲ್ಲಿ ಕೆಂಪು ಉಗ್ರರ ಯುಗ ಕೊನೆಯಾಗಲಿದೆ.

  • ಬೆಂಗಳೂರು – ಮಂಗಳೂರು ಬಸ್ಸು ತಡೆದು ಮಾರಕಾಸ್ತ್ರದಿಂದ ಹಲ್ಲೆ- ಪುಡಿ ರೌಡಿಯ ಕಾಲಿಗೆ ಗುಂಡೇಟು, ಅರೆಸ್ಟ್‌

    ಬೆಂಗಳೂರು – ಮಂಗಳೂರು ಬಸ್ಸು ತಡೆದು ಮಾರಕಾಸ್ತ್ರದಿಂದ ಹಲ್ಲೆ- ಪುಡಿ ರೌಡಿಯ ಕಾಲಿಗೆ ಗುಂಡೇಟು, ಅರೆಸ್ಟ್‌

    ಹಾಸನ: ಬೆಂಗಳೂರಿನಿಂದ ಮಂಗಳೂರಿಗೆ (Bengaluru to Mangaluru) ತೆರಳುತ್ತಿದ್ದ ಖಾಸಗಿ ಬಸ್ (Private Bus) ತಡೆದು ಲಾಂಗ್‌ನಿಂದ ಹಲ್ಲೆ ಮಾಡಿ ಅಟ್ಟಹಾಸ ಮೆರೆದಿದ್ದ ಪುಡಿರೌಡಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಶಾಂತಿಗ್ರಾಮ ಬಳಿ ನಡೆದಿದೆ.

    ಒಂದು ಕೊಲೆ,  ಮೂರು ಕೊಲೆ ಯತ್ನ ಪ್ರಕರಣಗಳ ಆರೋಪಿಯಾಗಿರುವ ಮನುವನ್ನು (23) ಬೆಂಗಳೂರಿನಲ್ಲಿ ಬಂಧಿಸಿ ನಗರ ಠಾಣೆ ಪೊಲೀಸರು ಹಾಸನಕ್ಕೆ ಕರೆ ತರುತ್ತಿದ್ದರು. ಈ ವೇಳೆ ಮೂತ್ರ ವಿಸರ್ಜನೆಗೆ ಅನುಮತಿ ನೀಡಬೇಕೆಂದು ಕೇಳಿದ್ದಾನೆ.

    ಶಾಂತಿಗ್ರಾಮ ಬಳಿ ರಸ್ತೆ ಬದಿ ಜೀಪ್ ನಿಲ್ಲಿಸಿ ಮೂತ್ರ ವಿಸರ್ಜನೆಗೆ ಅವಕಾಶ ನೀಡಿದಾಗ ಪೊಲೀಸರ ಮೇಲೆಯೇ ಕಲ್ಲಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಮನು ಯತ್ನಿಸಿದ್ದಾನೆ.

    ಈ ಸಂದರ್ಭದಲ್ಲಿ ಹಾಸನ ನಗರಠಾಣೆ ಇನ್ಸ್‌ಪೆಕ್ಟರ್ ಮೋಹನ್‌ಕೃಷ್ಣ ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ನಂತರ ಸಬ್‌ಇನ್ಸ್‌ಪೆಕ್ಟರ್ ಕುಮಾರ್ ಆರೋಪಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ‌. ಇದನ್ನೂ ಓದಿ: ಪೊಲೀಸ್ ವಿಚಾರಣೆಗೆ ಹೆದರಿ ಯುವಕ ಆತ್ಮಹತ್ಯೆ!


    ಬುಧವಾರ ನಸುಕಿನ ಜಾವ 2 ಗಂಟೆಗೆ ಬೈಪಾಸ್‌ ರಸ್ತೆಯ ದೇವರಾಯಪಟ್ಟಣದ ಬಳಿ ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್‌ ಸಂಚರಿಸುತ್ತಿತ್ತು. ಈ ಸಂದರ್ಭದಲ್ಲಿ ಕೆಎ 51 ಎಂವಿ 8912 ನಂಬರ್‌ನ ಸ್ವಿಫ್ಟ್ ಕಾರನ್ನು ಬಸ್ಸಿನ ಮುಂದೆ ಮನು ಅಡ್ಡ ಹಾಕಿ ನಿಲ್ಲಿಸಿದ್ದ. ಕಾರಿನಿಂದ ಇಳಿದ ಬಳಿಕ ಗಲಾಟೆ ಮಾಡಿ ಬಸ್ಸಿನ ಗ್ಲಾಸನ್ನು ಒಡೆದು ಹಾಕಿದ್ದ. ಪುಡಿ ರೌಡಿ ಮನುವಿನ ಹುಚ್ಚಾಟ ಬಸ್ಸಿನಲ್ಲಿದ್ದವರ ಮೊಬೈಲಿನಲ್ಲಿ ಸೆರೆಯಾಗಿತ್ತು. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದ್ದಂತೆ ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಇದನ್ನೂ ಓದಿ: ತನ್ನನ್ನು ಮೋದಿ ಕೈಗೊಂಬೆ ಎಂದ ಡೆಮಾಕ್ರಟಿಕ್‌ ಸಂಸದರ ವಿರುದ್ಧ US ಗುಪ್ತಚರ ವಿಭಾಗದ ಬಾಸ್‌ ಕೆಂಡಾಮಂಡಲ

    ಬಸ್ಸಿಗೆ ಹೀಗೆ ಆದರೆ ಇನ್ನೂ ಕಾರು, ಬೈಕಿನಂತ ವಾಹನದಲ್ಲಿ ‌ಪ್ರಯಾಣ ಮಾಡುವವರು ಏನು ಮಾಡಬೇಕು ಎಂದು ನೆಟ್ಟಿಗರು ಪೊಲೀಸರನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದರು.

  • ಪೊಲೀಸ್ ವಿಚಾರಣೆಗೆ ಹೆದರಿ ಯುವಕ ಆತ್ಮಹತ್ಯೆ!

    ಪೊಲೀಸ್ ವಿಚಾರಣೆಗೆ ಹೆದರಿ ಯುವಕ ಆತ್ಮಹತ್ಯೆ!

    – ಕುಟುಂಬಸ್ಥರ ಆರೋಪ

    ವಿಜಯಪುರ: ಪೊಲೀಸ್ (Police) ವಿಚಾರಣೆಗೆ ಹೆದರಿ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ನಿಡಗುಂದಿ (Nidgundi) ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ನಡೆದಿದೆ.

    ಮೃತ ಯುವಕನನ್ನು ಮೌನೇಶ್ ಅಬ್ಬಿಹಾಳ (30) ಎಂದು ಗುರುತಿಸಲಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಮೃತನ ಸೋದರ ಮಾವ ಬಸವರಾಜ್ ಕಾಣೆಯಾಗಿದ್ದ. ಈ ಸಂಬಂಧ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆ ಮೌನೇಶ್‌ನನ್ನು ಠಾಣೆಗೆ ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದರು.

    ಗುರುವಾರ ಸಹ ಮತ್ತೆ ವಿಚಾರಣೆಗೆ ಬರುವಂತೆ ಹೇಳಿದ್ದರು. ಆದರೆ ವಿಚಾರಣೆಗೆ ಹೆದರಿ ಯುವಕ ಜಮೀನಿನಲ್ಲಿ ನೇಣಿಗೆ ಶರಣಾಗಿದ್ದಾನೆ ಎಂದು ಯುವಕನ ಕುಟುಂಬಸ್ಥರು ಆರೋಪಿಸಿದ್ದಾರೆ. ಯುವಕ ಆತ್ಮಹತ್ಯೆ ಮಾಡಿಕೊಂಡಿರುವುದು ಹಲವಾರು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

    ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • 2 ವರ್ಷದ ಬಳಿಕ ಬೆಂಗಳೂರಿನಲ್ಲಿ ಟೋಯಿಂಗ್‌! – ಎಲ್ಲೆಲ್ಲಿ ಬಿಸಿ ತಟ್ಟಲಿದೆ?

    2 ವರ್ಷದ ಬಳಿಕ ಬೆಂಗಳೂರಿನಲ್ಲಿ ಟೋಯಿಂಗ್‌! – ಎಲ್ಲೆಲ್ಲಿ ಬಿಸಿ ತಟ್ಟಲಿದೆ?

    – ಟ್ರಾಫಿಕ್‌ ಹೆಚ್ಚಾದ ಬೆನ್ನಲ್ಲೇ ಪೊಲೀಸ್‌ ಇಲಾಖೆಯಿಂದ ಚಿಂತನೆ
    – ಮಾನದಂಡ ನಿಗದಿಯಾದ ಬಳಿಕ ಟೋಯಿಂಗ್‌ ಕಾರ್ಯಾಚರಣೆ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ವಾಹನ ಸಂಚಾರ (Traffic) ದಟ್ಟಣೆ ಹಿನ್ನೆಲೆಯಲ್ಲಿ ಮತ್ತೆ ಟೋಯಿಂಗ್ (Towing) ಕಾರ್ಯಾಚರಣೆ ನಡೆಸುವ ಬಗ್ಗೆ ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ.

    ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ನಗರದಲ್ಲಿ ವಾಹನಗಳ ಟೋಯಿಂಗ್ ನಿಲ್ಲಿಸಲಾಗಿತ್ತು. ಆದರೆ ಇತ್ತೀಚಿಗೆ ಸವಾರರು ವಾಹನಗಳನ್ನು ಎಲ್ಲೆಂದರಲ್ಲಿ ಅಡ್ಡಾದಿಡ್ಡಿ ಪಾರ್ಕ್‌ ಮಾಡುತ್ತಿರುವ ಪ್ರವೃತ್ತಿ ಹೆಚ್ಚಾಗಿದೆ.

    ಈ ರೀತಿ ಪಾರ್ಕ್‌ ಮಾಡುತ್ತಿರುವುದರಿಂದ ಆ ಜಾಗಗಳಲ್ಲಿ ಟ್ರಾಫಿಕ್ ಹೆಚ್ಚಾಗುವುದರ ಜೊತೆಗೆ ಇತರೇ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಜನರು ಸಾಮಾಜಿಕ ಜಾಲತಾಣದಲ್ಲಿ ಪೊಲೀಸರಿಗೆ ದೂರು ನೀಡುತ್ತಿದ್ದಾರೆ. ದೂರುಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಮತ್ತೆ ಅಗತ್ಯ ಸ್ಥಳಗಳಲ್ಲಿ ಟೋಯಿಂಗ್ ಮಾಡಲು ಪೊಲೀಸರು ಚಿಂತನೆ ನಡೆಸಿದ್ದಾರೆ.

     

    ಎಲ್ಲೆಲ್ಲಿ ಟೋಯಿಂಗ್‌?
    ಎಂಜಿ ರೋಡ್, ಬ್ರಿಗೇಡ್ ರೋಡ್, ಇಂದಿರಾನಗರ, ಕೋರಮಂಗಲ, ಕಮರ್ಷಿಯಲ್ ಸ್ಟ್ರೀಟ್, ಕೆಆರ್‌ ಮಾರ್ಕೆಟ್‌, ಚಿಕ್ಕಪೇಟೆ, ಸೇರಿದಂತೆ 70 ಸಿಬಿಡಿ ಜಂಕ್ಷನ್‌ಗಳನ್ನು ಗುರುತಿಸಲಾಗಿದೆ. ಈ ಜಂಕ್ಷನ್‌ಗಳಲ್ಲಿ ಮಾತ್ರ ಟೋಯಿಂಗ್ ಮಾಡಲು ಚಿಂತನೆ ನಡೆಸಲಾಗಿದೆ. ಇದನ್ನೂ ಓದಿ: ಕ್ಯಾಬ್ ಬುಕ್ ಮಾಡಿದ್ದ ಯುವತಿಗೆ ಲೈಂಗಿಕ ಕಿರುಕುಳ – ಕಮ್ಮನಹಳ್ಳಿಯಲ್ಲಿ ಕಾಮುಕರ ಅಟ್ಟಹಾಸ!

    ಟೋಯಿಂಗ್ ಜವಾಬ್ದಾರಿಯನ್ನು ಖಾಸಗಿಯವರಿಗೆ ನೀಡಬೇಕೇ? ಅಥವಾ ಪೊಲೀಸ್ ಇಲಾಖೆಯೇ ಮಾಡಬೇಕೇ? ಸೇರಿದಂತೆ ಟೋಯಿಂಗ್‌ ಮಾಡಲು ಏನೇನು ಮಾನದಂಡ ಹಾಕಬೇಕು ಎಂಬುದರ ಬಗ್ಗೆ ಹಿರಿಯ ಪೊಲೀಸ್‌ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.

     

  • ಬೆಂಗಳೂರಿನಲ್ಲಿ ಅಗ್ನಿ ಅವಘಡ – ಕಾರು, ಬೈಕ್‌ ಸೇರಿ 100ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿ

    ಬೆಂಗಳೂರಿನಲ್ಲಿ ಅಗ್ನಿ ಅವಘಡ – ಕಾರು, ಬೈಕ್‌ ಸೇರಿ 100ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿ

    ಬೆಂಗಳೂರು: ಜೆಡಿಎಸ್ ಕಚೇರಿ ಪಕ್ಕದ ಮೈದಾನದಲ್ಲಿ ಅಗ್ನಿ ಅವಘಡ ಸಂಭವಿಸಿ 100ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿಯಾಗಿದೆ.

    ಜಪ್ತಿ ಮಾಡಿದ್ದ ವಾಹನಗಳನ್ನು ಪೊಲೀಸರು ಶೇಷಾದ್ರಿಪುರಂ ಬಳಿಯ ಜಕ್ಕರಾಯನ ಕೆರೆ ಗ್ರೌಂಡ್‌ನಲ್ಲಿ ಪಾರ್ಕ್ ಮಾಡಿದ್ದರು. ಈ ಜಾಗಕ್ಕೆ ಇಂದು ಬೆಳಗ್ಗೆ ಬೆಂಕಿ ಬಿದ್ದಿದೆ.

    ಈಗಾಗಲೇ ಐದು ಕಾರು, ಐದು ಆಟೋ, 50 ಕ್ಕೂ ಹೆಚ್ಚು ಬೈಕ್‌ಗಳು ಸುಟ್ಟು ಹೋಗಿವೆ. ಮತ್ತಷ್ಟು ವಾಹನಗಳಿಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದು ನಾಲ್ಕು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಬಂದು ನಂದಿಸುವ ಕೆಲಸ ಮಾಡುತ್ತಿದೆ.

    ಮೈದಾನದಲ್ಲಿ ಹುಲ್ಲು, ಗಿಡ ಬೆಳೆದುಕೊಂಡಿತ್ತು. ಇಂದು ಯಾರೋ ಸಿಗರೇಟ್‌ಗಾಗಿ ಬೆಂಕಿ ಕಡ್ಡಿ ಗೀರಿ ಎಸೆದು ಹೋಗಿದ್ದರಿಂದ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

  • ಸಾಲ ಪಡೆದವರ ಮನೆಯ ಮೇಲೆ ಗೋಡೆ ಬರಹ ತಡೆಗಟ್ಟಬೇಕು: ಫೈನಾನ್ಸ್‌ ಹಾವಳಿ ನಿಯಂತ್ರಣಕ್ಕೆ ಗೈಡ್‌ಲೈನ್ಸ್‌

    ಸಾಲ ಪಡೆದವರ ಮನೆಯ ಮೇಲೆ ಗೋಡೆ ಬರಹ ತಡೆಗಟ್ಟಬೇಕು: ಫೈನಾನ್ಸ್‌ ಹಾವಳಿ ನಿಯಂತ್ರಣಕ್ಕೆ ಗೈಡ್‌ಲೈನ್ಸ್‌

    – ಮೈಕ್ರೋ ಫೈನಾನ್ಸ್ ಕಂಪನಿಗೆ ಮೂಗುದಾರ ಹಾಕಲು ಮುಂದಾದ ಪೊಲೀಸರು

    ಬೆಂಗಳೂರು: ಮೈಕ್ರೋ ಫೈನಾನ್ಸ್‌ಗಳ (Micro Finance) ವಿರುದ್ಧ ಸಮರ ಸಾರಲು ಪೊಲೀಸರು ಮುಂದಾಗಿದ್ದಾರೆ. ಮೈಕ್ರೋ ಫೈ‌ನಾನ್ಸರ್ಸ್ ಹಾವಳಿಗೆ ಕಡಿವಾಣ ಹಾಕಲು ಪೊಲೀಸರು ಹೊಸ ಗೈಡ್‌ಲೈನ್ ಹೊರಡಿಸಿದ್ದಾರೆ.

    ಪೊಲೀಸ್ ಮಹಾನಿರ್ದೇಶಕರು, ಬೆಂಗಳೂರು ಕಮಿಷನರ್ ಹಾಗೂ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಕಠಿಣ ಕ್ರಮದ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಮೈಕ್ರೋ ಫೈನಾನ್ಸರ್ಸ್‌ ಬಡವರ ರಕ್ತ ಹಿರುತ್ತಿದ್ದು, ಮರ್ಯಾದೆಗೆ ಅಂಜಿ ಹಲವರು ಊರು ಬಿಟ್ಟು ಹೋಗುತ್ತಿದ್ದಾರೆ. ಇನ್ನೂ ಕೆಲವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಹಾಗಾಗಿ, ಮೈಕ್ರೋ ಫೈನಾನ್ಸ್‌ ವಿರುದ್ಧ ಕ್ರಮಕೈಗೊಳ್ಳಲು ಸಂಬಂಧಪಟ್ಟ ಪೊಲೀಸರಿಗೆ ಹಿರಿಯ ಅಧಿಕಾರಿಗಳಿಂದ ಒಂದಷ್ಟು ಅಂಶಗಳನ್ನು ಒಳಗೊಂಡ ಹೊಸ ಗೈಡ್‌ಲೈನ್ ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: ಫೈನಾನ್ಸ್ ಕಿರುಕುಳ: 3 ವರ್ಷ ಜೈಲು, 1 ಲಕ್ಷದ ವರೆಗೆ ದಂಡ – ಗುರುವಾರ ಸರ್ಕಾರದಿಂದ ಸುಗ್ರೀವಾಜ್ಞೆ

    ಮಾರ್ಗಸೂಚಿಯಲ್ಲೇನಿದೆ?
    * ಸಾಲ ಪಡೆದವರ ಮನೆಯ ಮೇಲೆ ಗೋಡೆ ಬರಹ ಬರೆಯವುದನ್ನ ತಡೆಗಟ್ಟಬೇಕು
    * ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಸಾಲ ಪಡೆದಿರೋ ಬಗ್ಗೆ ಗೋಡೆ ಬರಹ ಬರೆಯುವವರ ವಿರುದ್ಧ ಕ್ರಮ ವಹಿಸಬೇಕು
    * ಅಕ್ರಮವಾಗಿ ಮೈಕ್ರೋ ಫೈನಾನ್ಸ್ ವ್ಯವಹಾರ ಮಾಡುತ್ತಿರುವ ಫೈನಾನ್ಸರ್ಸ್‌ ವಿರುದ್ಧ ಕಾನೂನು ಕ್ರಮ ಜರಗಿಸಬೇಕು
    * ಫೈನಾನ್ಸರ್ಸ್ ಕಿರುಕುಳದಿಂದ ನೊಂದ ಜನರು ಪೊಲೀಸ್ ಠಾಣೆಗೆ ಬಂದರೆ ಪೊಲೀಸರು ಸ್ಪಂದಿಸಬೇಕು
    * ಆರ್‌ಬಿಐ ಮಾರ್ಗಸೂಚಿ ಉಲ್ಲಂಘನೆ ಮಾಡಿ ಸಾಲ ನೀಡಿರುವಂತಹ ಕಂಪನಿಗಳ ಪಟ್ಟಿ ಮಾಡಿ ಅಗತ್ಯ ಕ್ರಮ‌ಕೈಗೊಳ್ಳಬೇಕು
    * ಮೈಕ್ರೋ ಫೈನಾನ್ಸ್ ಕಂಪನಿಗಳ ಮುಖ್ಯಸ್ಥರ ಸಭೆ ಕರೆದು ಮಾತನಾಡಲು ಸಂಬಂಧಪಟ್ಟ ಎಸ್ಪಿಗಳಿಗೆ ಸೂಚನೆ

    ಹೀಗೆ, ರಾಜ್ಯ ಸರ್ಕಾರದ ಮಟ್ಟದಲ್ಲಿ ಫೈನಾನ್ಸ್ ಕಂಪನಿಗಳ ವಿರುದ್ಧ ಕಾನೂನು ಕ್ರಮ ಜರಗಿಸುವ ಸೂಚನೆ ಕೊಡಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

  • ಗೋಹತ್ಯೆ ಮಾಡಿ ಹೊಟ್ಟೆಯಲ್ಲಿದ್ದ ಕರುವಿನ ಮಾಂಸ ಕೊಂಡೊಯ್ದಿದ್ದ ಪಾಪಿ ಅರೆಸ್ಟ್

    ಗೋಹತ್ಯೆ ಮಾಡಿ ಹೊಟ್ಟೆಯಲ್ಲಿದ್ದ ಕರುವಿನ ಮಾಂಸ ಕೊಂಡೊಯ್ದಿದ್ದ ಪಾಪಿ ಅರೆಸ್ಟ್

    ಕಾರವಾರ: ಗರ್ಭಧರಿಸಿದ್ದ ಗೋವನ್ನು ಹತ್ಯೆ ಮಾಡಿ ಮಾಂಸ ಕದ್ದೊಯ್ದಿದ್ದ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಹೊನ್ನಾವರ (Honnavara) ಪೊಲೀಸರು (Police) ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಹೊನ್ನಾವರ ತಾಲೂಕಿನ ವಲ್ಕಿಯ ತೌಫಿಕ್ ಅಹ್ಮದ್ ಜಿದ್ದಾ ಎಂದು ಗುರುತಿಸಲಾಗಿದೆ. ಆರೋಪಿ ಜ.19 ರಂದು ಗರ್ಭಧರಿಸಿದ್ದ ಗೋವಿನ ವಧೆ ಮಾಡಿ, ರುಂಡ, ಕಾಲುಗಳನ್ನು ಬಿಟ್ಟು ಗೋಮಾಂಸ ಹಾಗೂ ಹೊಟ್ಟೆಯಲ್ಲಿದ್ದ ಕರುವಿನ ಮಾಂಸ ಹೊತ್ತೊಯ್ದಿದ್ದ.

    ಉತ್ತರ ಕನ್ನಡ (Uttara Kannada) ಜಿಲ್ಲೆಯ ಹೊನ್ನಾವರದ ಸಾಲ್ಕೋಡು ಗ್ರಾಮದ ಅರಣ್ಯದಲ್ಲಿ ಗೋವನ್ನು ಹತ್ಯೆ ನಡೆದಿತ್ತು. ಬಂಧಿತ ಆರೋಪಿ, ಗೋವಿನ ವಧೆಗೆ ಸಹಕರಿಸಿ, ಬೈಕ್ ಮೂಲಕ ಮಾಂಸವನ್ನು ಕೊಂಡೊಯ್ದಿದ್ದ. ಕೃತ್ಯದಲ್ಲಿ ಭಾಗಿಯಾದ ಮೂರು ಜನ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

    ಈ ಸಂಬಂಧ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಸ್‍ಪಿ ಎಂ.ನಾರಾಯಣ್ ಅವರು ಆರು ವಿಶೇಷ ತಂಡ ರಚಿಸಿ ಪ್ರಕರಣದ ತನಿಖೆ ಕೈಗೊಂಡಿದ್ದಾರೆ.