ಬೆಳಗಾವಿ: ಅಥಣಿ (Athani) ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ಕಳೆದ ಭಾನುವಾರ ನಡೆದಿದ್ದ ತಾಯಿ, ಮಗನ ಜೋಡಿ ಕೊಲೆ (Double Murder) ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿ ನೇಣಿಗೆ ಶರಣಾಗಿದ್ದಾನೆ.
ಪೊಲೀಸರ (Police) ತನಿಖೆಗೆ ಹೆದರಿ ಶೇಗುನಶಿ ಗ್ರಾಮದ ಸುರೇಶ ರಾಮಪ್ಪ ಸವದತ್ತಿ (36) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಶ್ರೀಶೈಲ್ ಸಂಗಪ್ಪ ಹೊರಟ್ಟಿ (35) ಕೊಲೆ ಆರೋಪಿ ಆತ್ಮಹತ್ಯೆಗೆ ವಿಫಲ ಯತ್ನ ನಡೆಸಿದ್ದಾನೆ. ಇದನ್ನೂ ಓದಿ: ಇನ್ನು ಮುಂದೆ ಪಿಯುಸಿಯಲ್ಲಿ ಕಲೆ, ವಾಣಿಜ್ಯ ಓದಿದವರೂ ಪೈಲಟ್ ಆಗಬಹುದು!
ಜೋಡಿ ಕೊಲೆ ಹಿನ್ನೆಲೆ ಶೇಗುಣಶಿ ಮೂಲದ ಇಬ್ಬರು ಆರೋಪಿಗಳ ತನಿಖೆ ಆರಂಭವಾದ ಹಿನ್ನೆಲೆ ಓರ್ವ ಆತ್ಮಹತ್ಯಗೆ ಶರಣಾಗಿದ್ದಾನೆ. ಒಬ್ಬ ಬಚಾವ್ ಆಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಬೆಂಗಳೂರು: ರಸ್ತೆ ಮಧ್ಯೆ ಚಯರ್ ಹಾಕಿಕೊಂಡು ಟೀ ಕುಡಿಯುತ್ತಾ ರೀಲ್ಸ್ (Reels) ಮಾಡಿ ಹುಚ್ಚಾಟ ಮಾಡಿದವನಿಗೆ ಬೆಂಗಳೂರು ಪೊಲೀಸರು (Bengaluru Police) ಬಿಸಿ ಮುಟ್ಟಿಸಿದ್ದಾರೆ.
ಪ್ರಚಾರದ ತೆವಲಿಗೆ ಕಳೆದ ಏಪ್ರಿಲ್ 12 ರಂದು ವಾಹನ ಸಂಚಾರ ಹೆಚ್ಚಾಗಿರುವ ಎಸ್.ಜೆ.ಪಾರ್ಕ್ ಬಳಿ ರಸ್ತೆಯಲ್ಲಿ ರೀಲ್ಸ್ ಮಾಡುತ್ತಾ ಕಿರಿಕ್ ಮಾಡಿದ್ದ. ನಂತರ ಆ ರೀಲ್ಸ್ ಅನ್ನು ತನ್ನ ಇನ್‌ಸ್ಟಾಗ್ರಾಮ್ ಖಾತೆ simbu_str_123 ನಲ್ಲಿ ಅಪ್ಲೋಡ್ ಮಾಡಿದ್ದ. ಇದನ್ನೂ ಓದಿ:ವಕ್ಫ್ ತಿದ್ದುಪಡಿ ಕಾಯ್ದೆ ಜಾರಿ – ಮೋದಿಯನ್ನು ಭೇಟಿಯಾಗಿ ಧನ್ಯವಾದ ಹೇಳಿದ ಮುಸ್ಲಿಮರು
ಬೆಂಗಳೂರು ಪೊಲೀಸರು ಈಗ ಪುಂಡನ ರೀಲ್ಸ್ ಮತ್ತು ಬಂಧನ ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಮುಂದೆ ಯಾರಾದರೂ ಈ ರೀತಿ ಹುಚ್ಚಾಟ ಮಾಡಿದವರಿಗೆ ಬಿಸಿ ಮುಟ್ಟಿಸಲಾಗುವುದು ಎಚ್ಚರಿಕೆ ನೀಡಿದ್ದಾರೆ.
– ಫೋನ್ ಬಳಸದೆ ಬರಿ ನಗದು ವ್ಯವಹಾರ ಮಾಡ್ತಿದ್ದ ಹಂತಕ – ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪೆರೋಲ್ ಪಡೆದು ಪರಾರಿ
ನವದೆಹಲಿ: ಪತ್ನಿಯ (Wife) ಹತ್ಯೆ ಕೇಸ್‌ನಲ್ಲಿ ಶಿಕ್ಷೆಗೊಳಗಾಗಿ ಪೆರೋಲ್ ಮೇಲೆ ಹೊರಗೆ ಬಂದು ತಲೆಮರೆಸಿಕೊಂಡಿದ್ದ ಭಾರತೀಯ ಸೇನೆಯ (Indian Army) ಮಾಜಿ ಸೈನಿಕನನ್ನು 20 ವರ್ಷಗಳ ನಂತರ ದೆಹಲಿ (Delhi) ಪೊಲೀಸರು (Police) ಮಧ್ಯಪ್ರದೇಶದಲ್ಲಿ (Madhya Pradesh) ಬಂಧಿಸಿದ್ದಾರೆ.
ಬಂಧಿತನನ್ನು ಅನಿಲ್ ಕುಮಾರ್ ತಿವಾರಿ ಎಂದು ಗುರುತಿಸಲಾಗಿದೆ. ಆರೋಪಿ, 1989 ರಲ್ಲಿ ತನ್ನ ಪತ್ನಿಯನ್ನು ಬೆಂಕಿ ಹಚ್ಚಿ ಕೊಲೆಗೈದಿದ್ದ. ಆತನನ್ನು 1989ರ ಮೇ 31 ರಂದು ಬಂಧಿಸಲಾಗಿತ್ತು. ಬಳಿಕ ನ್ಯಾಯಾಲಯವು ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆತ 2005ರ ನವೆಂಬರ್ 21ರಂದು ರಂದು ದೆಹಲಿ ಹೈಕೋರ್ಟ್‌ನಲ್ಲಿ ಪೆರೋಲ್ ಪಡೆದಿದ್ದ. ಬಳಿಕ ಆತ ಜೈಲಿಗೆ ವಾಪಸ್ ಆಗದೇ ತಲೆಮರೆಸಿಕೊಂಡಿದ್ದ.
ಪೊಲೀಸರು ಪತ್ತೆಹಚ್ಚಿದ್ದು ಹೇಗೆ?
ಇತ್ತೀಚೆಗೆ ದೆಹಲಿ ಅಪರಾಧ ವಿಭಾಗದ ತಂಡ ಪ್ರಯಾಗರಾಜ್‌ನಲ್ಲಿ ತಿವಾರಿ ಓಡಾಡಿದ್ದ ಬಗ್ಗೆ ಮಾಹಿತಿ ಕಲೆಹಾಕಿತ್ತು. ಇದೇ ಮಾಹಿತಿಯ ಆಧಾರದ ಮೇಲೆ, ತಂಡವು ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಚುರ್ಹತ್ ಗ್ರಾಮದ ಮೇಲೆ ದಾಳಿ ನಡೆಸಿ ಬಂಧಿಸಿದೆ.
ಪೊಲೀಸರಿಗೆ ಆತ ಚಳ್ಳೆಹಣ್ಣು ತಿನ್ನಿಸಿದ್ದು ಹೇಗೆ?
ಅನಿಲ್ ತಿವಾರಿಗೆ ಪೊಲೀಸರು ತನ್ನನ್ನು ಹುಡುಕುತ್ತಿದ್ದಾರೆಂದು ತಿಳಿದಿತ್ತು. ಅದಕ್ಕಾಗಿ ಮೊಬೈಲ್ ಫೋನ್‌ನ್ನು ಆತ ಬಳಸುತ್ತಿರಲಿಲ್ಲ. ಅಲ್ಲದೇ ಅಡಗುತಾಣ ಮತ್ತು ಕೆಲಸದ ಸ್ಥಳವನ್ನು ನಿರಂತರವಾಗಿ ಬದಲಾಯಿಸುತ್ತಿದ್ದ. ಚಾಲಕನಾಗಿ ಕೆಲಸ ಮಾಡುತ್ತಿದ್ದು, ಎಲೆಕ್ಟ್ರಾನಿಕ್ ಪುರಾವೆಗಳು ಸಿಗದಂತೆ ಯಾವಾಗಲೂ ನಗದು ವ್ಯವಹಾರ ಮಾಡುತ್ತಿದ್ದ ಎಂದು ಆತ ಒಪ್ಪಿಕೊಂಡಿದ್ದಾನೆ. ಇನ್ನೂ ತಲೆಮರೆಸಿಕೊಂಡಿದ್ದ ಸಮಯದಲ್ಲಿ ಮತ್ತೊಂದು ಮದುವೆಯಾಗಿದ್ದು, ಈಗ ಆತನಿಗೆ ನಾಲ್ಕು ಮಕ್ಕಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅನಿಲ್ ತಿವಾರಿ 1986 ರಲ್ಲಿ ಭಾರತೀಯ ಸೇನೆಯ ಆರ್ಡನೆನ್ಸ್ ಕಾರ್ಪ್ಸ್ ಘಟಕಕ್ಕೆ ಚಾಲಕನಾಗಿ ಸೇರಿದ್ದ. ನ್ಯಾಯಾಲಯವು ಆತನನ್ನು ದೋಷಿ ಎಂದು ತೀರ್ಪು ನೀಡಿದ ಬಳಿ ಅವನನ್ನು ಸೈನ್ಯದಿಂದ ವಜಾಗೊಳಿಸಲಾಗಿತ್ತು.
ಶಿವಮೊಗ್ಗ: ನಗರದ (Shivamogga) ಬಿಹೆಚ್ ರಸ್ತೆಯ ಲಾಡ್ಜ್ ಒಂದರಲ್ಲಿ ಹುಬ್ಬಳ್ಳಿ (Hubballi) ಮೂಲದ ಉದ್ಯಮಿಯ ಶವ ಪತ್ತೆಯಾಗಿದ್ದು, ಹಲವು ಶಂಕೆಗೆ ಕಾರಣವಾಗಿದೆ.
ಮೃತ ಉದ್ಯಮಿಯನ್ನು ಬಸವರಾಜ್ (50) ಎಂದು ಗುರುತಿಸಲಾಗಿದೆ. ಏ.10 ರಂದು ಅವರು ಲಾಡ್ಜ್‌ನಲ್ಲಿ ರೂಮ್ ಮಾಡಿದ್ದರು. ರೂಮ್‍ನಿಂದ ಹೊರ ಬರದ ಕಾರಣ ಲಾಡ್ಜ್ ಸಿಬ್ಬಂದಿ ಅನುಮಾನದಿಂದ ದೊಡ್ಡಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರ ಸಮ್ಮುಖದಲ್ಲಿ ರೂಮ್ ಬಾಗಿಲು ಒಡೆದಾಗ, ಬಾತ್ ರೂಮ್‍ನಲ್ಲಿ ಅವರ ಶವ ಪತ್ತೆಯಾಗಿದೆ. ಇದನ್ನೂ ಓದಿ: ಹುಬ್ಬಳ್ಳಿ | ಬಾಲಕಿ ಕೊಲೆ ಕೇಸ್ – ಆರೋಪಿಗೆ ಗುಂಡಿಟ್ಟ `ಲೇಡಿ ಸಿಂಗಂ’ಗೆ ಮುಂದಿನ ತಿಂಗಳಲ್ಲೇ ಮದುವೆ!
ದಿಸ್ಪುರ್: ಅಪರೂಪದ ಟೋಕೆ ಗೆಕ್ಕೊ ಹಲ್ಲಿಗಳನ್ನು (Tokay Gecko Lizards) ಕಳ್ಳಸಾಗಾಣಿಕೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಅಸ್ಸಾಂನ (Assam) ದಿಬ್ರುಗಢದಲ್ಲಿ ಪೊಲೀಸರು ಬಂಧಿಸಿದ್ದಾರೆ.
₹60 lakhs + for a lizard? Not on our watch.
Acting on intel from @WJCommission South Asia, @STFAssam & @dibrugarhpolice rescued 11 Tokay Geckos from traffickers, 3 persons have been arrested & vehicles seized.
ಬಂಧಿತರನ್ನು ದೇಬಾಶಿಸ್ ದೋಹುಟಿಯಾ (34), ಮನಾಶ್ ದೋಹುಟಿಯಾ (28) ಮತ್ತು ದೀಪಂಕರ್ ಘರ್ಫಾಲಿಯಾ (40) ಎಂದು ಗುರುತಿಸಲಾಗಿದೆ. ಆರೋಪಿಗಳು ವಿಚಾರಣೆಯ ವೇಳೆ, ಅರುಣಾಚಲ ಪ್ರದೇಶದಿಂದ (Arunachal Pradesh) 11 ಟೋಕೆ ಗೆಕ್ಕೊಗಳನ್ನು ತಂದಿದ್ದಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೇ ಪ್ರತಿಯೊಂದನ್ನು 60 ಲಕ್ಷ ರೂ.ಗೆ ಮಾರಾಟ ಮಾಡಲು ಯೋಜಿಸಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಸಮರ ಸಾರಿದ ಸೇನೆ – ಜೈಶ್ ಕಮಾಂಡೋ ಸೇರಿ ಮೂವರು ಭಯೋತ್ಪಾದಕರ ಹತ್ಯೆ
ದಿಬ್ರುಗಢದಲ್ಲಿ ಟೋಕೆ ಗೆಕ್ಕೊ ಹಲ್ಲಿಗಳ ಕಳ್ಳಸಾಗಣೆ ಬಗ್ಗೆ ಸುಳಿವಿನ ಮೇರೆಗೆ ಪೊಲೀಸರ ತಂಡವನ್ನು ರಚಿಸಲಾಗಿತ್ತು. ಈ ತನಿಖಾ ತಂಡವು ತಂಡವು ದಿಬ್ರುಗಢ ಜಿಲ್ಲಾ ಪೊಲೀಸರು, ವನ್ಯಜೀವಿ ನ್ಯಾಯ ಆಯೋಗ ಮತ್ತು ಗುಪ್ತಚರ ದಳದ ಸಹಾಯದೊಂದಿಗೆ ಕಳ್ಳಸಾಗಾಣಿಕೆದಾರರನ್ನು ಗುರುತಿಸಿತ್ತು.
ಆರೋಪಿಗಳಲ್ಲಿ ಇಬ್ಬರು ಕಾರಿನಲ್ಲಿ ಹಾಗೂ ಮತ್ತೋರ್ವ ಬೈಕ್‌ನಲ್ಲಿ ಬಂದು, ದಿಬ್ರುಗಢದ ಡಾಬಾದೊಳಗೆ ತೆರಳಿದ್ದರು. ಸ್ವಲ್ಪ ಸಮಯದ ನಂತರ, ಒಬ್ಬ ಕಾರಿನಿಂದ ಬ್ಯಾಗ್ ತೆಗೆದುಕೊಂಡು ಡಾಬಾದೊಳಗೆ ತೆರಳಿದ್ದ. ಈ ವೇಳೆ ಅಧಿಕಾರಿಗಳು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.
ಟೋಕೆ ಗೆಕ್ಕೊಗಳು ಅಳಿವಿನಂಚಿನಲ್ಲಿರುವ ಪ್ರಾಣಿಗಳಾಗಿವೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಅವುಗಳ ರಫ್ತನ್ನು ನಿಷೇಧಿಸಲಾಗಿದೆ. ಕಳ್ಳಸಾಗಾಣಿಕೆಯಲ್ಲಿ ಭಾಗಿಯಾದ ಆರೋಪಿಗಳು ತಪ್ಪಿತಸ್ಥರೆಂದು ಸಾಬೀತಾದರೆ, ಅವರಿಗೆ ಗರಿಷ್ಠ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಇದನ್ನೂ ಓದಿ: ವಾಟ್ಸಪ್ ಫೋಟೋ ಡೌನ್‌ಲೋಡ್ ಮಾಡೋ ಮುನ್ನ ಎಚ್ಚರವಾಗಿರಿ – ನಿಮ್ಮ ಫೋನ್ ಹ್ಯಾಕ್ ಆಗಬಹುದು!
ಕೋಲ್ಕತ್ತಾ: ವಕ್ಫ್ ಕಾಯ್ದೆಯ (Waqf Act) ವಿರುದ್ಧ ಪಶ್ಚಿಮ ಬಂಗಾಳದ (West Bengal) ಮುರ್ಷಿದಾಬಾದ್‌ನಲ್ಲಿ ಮುಸ್ಲಿಮರು (Muslims) ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ನಿಮ್ತಿತಾ ನಿಲ್ದಾಣದಲ್ಲಿ ನಿಂತಿದ್ದ ರೈಲಿನ (Rail) ಮೇಲೆ ಕಲ್ಲು ತೂರಾಟ ನಡೆ ಎರಡು ರೈಲನ್ನು ಜಖಂಗೊಳಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನ ಪ್ರತಿಭಟನೆ ನಡೆದಿತ್ತು. ಸಂಜೆ ಬಳಿಕ ನಡೆದ ಪ್ರತಿಭಟನೆ ಹಿಂಸಚಾರಕ್ಕೆ ತಿರುಗಿದೆ. ಘಟನೆಯ ಹಿನ್ನೆಲೆಯಲ್ಲಿ ಕನಿಷ್ಠ ಎರಡು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ. ದಾಳಿಯಲ್ಲಿ ಕೆಲವು ಪ್ರಯಾಣಿಕರು ಮತ್ತು ಏಳರಿಂದ ಹತ್ತು ಪೊಲೀಸರು ಗಾಯಗೊಂಡಿದ್ದಾರೆ. ಹಿಂಸಾಚಾರವನ್ನು ನಿಯಂತ್ರಿಸಲು ಗಡಿ ಭದ್ರತಾ ಪಡೆಗಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಬಿಜೆಪಿ-ಎಐಎಡಿಎಂಕೆ ಮೈತ್ರಿ: ಅಮಿತ್ ಶಾ ಘೋಷಣೆ
Look at what the Islamists have done at the BDO office in Jalangi, Murshidabad.
The police claim everything is under control.
Then how did so many goons manage to enter such a high-profile area? Didn’t the police have any prior intel? Thousands took to the streets — how was… pic.twitter.com/vyZdJoVIvW
ಅಲ್ಪಸಂಖ್ಯಾತರ ಪ್ರಾಬಲ್ಯ ಇರುವ ಮುರ್ಷಿದಾಬಾದ್ ಜಿಲ್ಲೆಯ ನಿಮ್ತಿತಾ ಮತ್ತು ಸುಟಿಯಲ್ಲಿ ಉದ್ವಿಗ್ನತೆ ಉಂಟಾಗಿತ್ತು. ನಿಮ್ತಿತಾ ರೈಲು ನಿಲ್ದಾಣದಲ್ಲಿ, ಪ್ರತಿಭಟನಾಕಾರರು ಗಂಟೆಗಟ್ಟಲೆ ರೈಲ್ವೆ ಹಳಿಗಳನ್ನು ತಡೆದು ರೈಲ್ವೇ ಆಸ್ತಿಗಳನ್ನು ಧ್ವಂಸಗೊಳಿಸಿದ್ದಾರೆ.
Bengal is on the brink — and Mamata Banerjee is to blame.
Violent Muslim mobs, stirred up after Friday prayers, are vandalizing temples and torching Hindu homes in Dhulian, Malancha Farraka, Malda. All over a WAQF Amendment most haven’t even read.
ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ಹಿಂಸಾಚಾರ ಮಾಡುವವರಿಗೆ ಎಚ್ಚರಿಕೆ ನೀಡಿದ್ದು, ಮುರ್ಷಿದಾಬಾದ್ ಮತ್ತು ಉತ್ತರ 24 ಪರಗಣಗಳ ಇತರ ಸ್ಥಳಗಳು ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಗಲಭೆಗೆ ಕಾರಣರಾದ ದುಷ್ಕರ್ಮಿಗಳ ವಿರುದ್ಧ ತಕ್ಷಣ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಭಟನೆಯ ವಿಡಿಯೋಗಳನ್ನು ಹಾಕಿ ಮಮತಾ ಸರ್ಕಾರದ ವಿರುದ್ಧ ಕಿಡಿಕಾರಿದೆ.
#WATCH | West Bengal | Morning visuals from Jangipur, Murshidabad, where people staged a protest against the Waqf Amendment Act. Several vehicles were torched. Security has been heightened in the area.
ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ, ಒಂದು ನಿರ್ದಿಷ್ಟ ಗುಂಪಿನ ತೀವ್ರಗಾಮಿಗಳಿಂದ ಪ್ರತಿಭಟನೆಗಳ ಹೆಸರಿನಲ್ಲಿ ರಾಜ್ಯವು ದೊಡ್ಡ ಪ್ರಮಾಣದ ಹಿಂಸಾಚಾರ, ಅರಾಜಕತೆ ಮತ್ತು ಕಾನೂನುಬಾಹಿರತೆಯನ್ನು ನೋಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಭಾರತದ ಸಂವಿಧಾನವನ್ನು ವಿರೋಧಿಸುತ್ತೇವೆ ಮತ್ತು ದೇಶದ ಕಾನೂನನ್ನು ವಿರೋಧಿಸುತ್ತೇವೆ ಎಂದು ಸ್ಪಷ್ಟವಾಗಿ ಹೇಳಿರುವ ಈ ಜನರು ಬೀದಿಗಳನ್ನು ವಶಪಡಿಸಿಕೊಂಡಿದ್ದಾರೆ. ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳನ್ನು ತಮ್ಮ ಇಚ್ಛೆಯಂತೆ ಧ್ವಂಸ ಮಾಡುತ್ತಿದ್ದಾರೆ ಎಂದು ಸಿಟ್ಟು ಹೊರಹಾಕಿದ್ದಾರೆ.
ಬಳ್ಳಾರಿ: ರಾತ್ರಿ ಕೊಲೆ ಮಾಡಿದ್ದ ರೌಡಿಶೀಟರ್ ಒಬ್ಬ ಬೆಳಗ್ಗೆ ಪೊಲೀಸರ (Police) ಮೇಲೆ ದಾಳಿ ನಡೆಸಲು ಹೋಗಿ ಗುಂಡೇಟು ತಿಂದಿರುವುದು ಹೊಸಪೇಟೆಯಲ್ಲಿ (Hospet) ನಡೆದಿದೆ.
ಗುಂಡೇಟು ತಿಂದ ಆರೋಪಿಯನ್ನು ಹುಚ್ಚಕಾಳಿ ಎಂದು ಗುರುತಿಸಲಾಗಿದೆ. ಹುಚ್ಚಕಾಳಿ, ಬುಧವಾರ (ಏ.9) ರಾತ್ರಿ ಹೊನ್ನೂರಸ್ವಾಮಿ (30) ಎಂಬವರ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದ. ಹಳೆ ದ್ವೇಷ ಹಿನ್ನೆಲೆ ಹತ್ಯೆ ಮಾಡಿ, ಆರೋಪಿ ತಲೆಮರೆಸಿಕೊಂಡಿದ್ದ.
ಆರೋಪಿಯನ್ನು ಬಂಧಿಸಿ, ಕೊಲೆಗೆ ಬಳಸಿದ್ದ ಚಾಕು ವಶಕ್ಕೆ ಪಡೆಯುವ ವೇಳೆ, ಆತ ಪೊಲೀಸರ ಮೇಲೆ ದಾಳಿಗೆ ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಆತ್ಮ ರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಆರೋಪಿಗೆ ಹಾಗೂ ದಾಳಿಯಿಂದ ಗಾಯಗೊಂಡ ಪೊಲೀಸ್ ಸಿಬ್ಬಂದಿಗೆ ಹೊಸಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೊಲೆಯಾಗಿರುವ ಹೊನ್ನೂರಸ್ವಾಮಿ ದಾವಣಗೆರೆಯಲ್ಲಿ ವಾಸವಿದ್ದ. ಹೊಸಪೇಟೆಯಲ್ಲಿ ಜಂಬುನಾಥ ಸ್ವಾಮಿ ಜಾತ್ರೆ ಹಿನ್ನಲೆ ಆತ ಕುಟುಂಬ ಸಮೇತ ಬಂದಿದ್ದ. ಈ ವೇಳೆ ಆರೋಪಿ ಜಗಳ ತೆಗೆದು ಚಾಕು ಇರಿದಿದ್ದ. ಬಳಿಕ ಕಲ್ಲು ಎತ್ತಿಹಾಕಿ ಕೊಲೆಗೈದಿದ್ದ.
ವಿಜಯನಗರ (Vijayanagar) ಎಸ್‍ಪಿ ಡಾ. ಶ್ರೀಹರಿಬಾಬು ಬಿಎಲ್, ಎಎಸ್‍ಪಿ ಸಲೀಂಪಾಷಾ ಹಾಗೂ ಡಿವೈಎಸ್‍ಪಿ ಡಾ.ಮಂಜುನಾಥ್ ತಳವಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ತುಮಕೂರು: ಎಂಎಲ್‌ಸಿ ರಾಜೇಂದ್ರ ರಾಜಣ್ಣರ (MLC Rajendra Rajanna) ಕೊಲೆಗೆ ಸುಪಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನ ಆರೋಪಿಗಳನ್ನು ಬಂಧಿಸಿ 9 ದಿನ ಕಳೆದರೂ ಪೊಲೀಸರು ಕೋರ್ಟಿಗೆ ಹಾಜರುಪಡಿಸದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಆರೋಪಿಗಳಾದ ಸೋಮು, ಅಮಿತ್, ಭರತ್, ಯತೀಶ್ ಹಾಗೂ ಆಡಿಯೋದಲ್ಲಿ ಮಾತನಾಡಿದ ಮಹಿಳೆ ಪುಷ್ಪಾ, ಆಕೆಯ ಸ್ನೇಹಿತೆ ಯಶೋಧಾ ಸೇರಿದಂತೆ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿಸಿ 9 ದಿನ ಕಳೆದಿದೆ. ಬಂಧನವಾದ 24 ಗಂಟೆಯೊಳಗೆ ಕೋರ್ಟ್ (Court) ಮುಂದೆ ಹಾಜರುಪಡಿಸಬೇಕಿತ್ತು. ಆದರೆ ಇಲ್ಲಿಯವರೆಗೂ ಯಾವುದೇ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸದೇ ಲೋಪ ಎಸಗಿದ್ದಾರೆ. ಎಲ್ಲಾ ಆರೋಪಿಗಳ ಬಳಿ ಬಲವಂತವಾಗಿ ವಿಚಾರಣೆಗೆ ಬಂದು ವಾಪಸ್ ಹೋಗಿದ್ದೇವೆ ಎಂದು ಪ್ರತಿದಿನ ಬರೆಸಿಕೊಂಡು ಸಹಿ ಹಾಕಿಸಿಕೊಳ್ಳುತಿದ್ದಾರೆ ಎಂದು ಬಂಧಿತರ ಸಂಬಂಧಿಕರು ಆರೋಪಿಸಿದ್ದಾರೆ. ಇದನ್ನೂ ಓದಿ: ದೇಶ ತೊರೆಯಿರಿ ಅಥವಾ ಜೈಲು ಶಿಕ್ಷೆ ಅನುಭವಿಸಿ: ವಿದೇಶಿ ಭಯೋತ್ಪಾದಕರಿಗೆ ಅಮೆರಿಕ ಎಚ್ಚರಿಕೆ
ಅಲ್ಲದೇ ಏ5 ಆರೋಪಿ ಯತೀಶ್ ಅವರ ಸಂಬಂಧಿಗಳು ಪೊಲೀಸರ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದಾರೆ. ಇವರ ಅರ್ಜಿ ಪುರಸ್ಕರಿಸಿದ ಕೋರ್ಟ್ ಪೊಲೀಸರಿಗೆ ಛಿಮಾರಿ ಹಾಕಿ ಕಳುಹಿಸಿದೆ. ಕೋರ್ಟ್ ಎಚ್ಚರಿಕೆಯಿಂದ ಎಚ್ಚೆತ್ತುಕೊಂಡ ಪೊಲೀಸರು ಯತೀಶ್‌ನನ್ನು ಬಿಟ್ಟು ಕಳುಹಿಸಿದ್ದಾರೆ. ಅಲ್ಲದೇ ಈ ಪ್ರಕರಣದಲ್ಲಿ ನಿಮ್ಮ ಪಾತ್ರ ಇಲ್ಲ ಎಂದು ಹಿಂಬರಹ ಕೊಟ್ಟು ಬಿಡುಗಡೆಗೊಳಿಸಿದ್ದಾರೆ. ಇದನ್ನೂ ಓದಿ: ಗ್ಯಾಸ್ ಕಟರ್ ಬಳಸಿ ಎಟಿಎಂನಿಂದ 18 ಲಕ್ಷ ರೂ. ದೋಚಿದ ಖದೀಮರು
ಅಮಾಯಕರನ್ನು ಫಿಟ್ ಮಾಡಲು ಒತ್ತಡ?
ಕೊಲೆ ಸುಪಾರಿ ಪ್ರಕರಣ ಒಂದು ಕಟ್ಟು ಕಥೆ ಎಂಬುದು ಆರೋಪಿಗಳ ವಿಚಾರಣೆಯಿಂದ ಪೊಲೀಸರಿಗೆ ದೃಢಪಟ್ಟಿದೆ. ಪುಷ್ಪಾ ಎಂಬ ಮಹಿಳೆ ತನ್ನ ಸ್ನೇಹಿತ ಸೋಮು ಮೇಲಿನ ವೈಮನಸ್ಸಿನಿಂದ ಅವರ ಮೇಲೆ ಕೆಟ್ಟ ಹೆಸರು ಬರಲಿ ಎಂದು ಕೊಲೆ ಸುಪಾರಿ ವದಂತಿ ಹಬ್ಬಿಸಿದ್ದಳು. ವಿಚಾರಣೆ ವೇಳೆ ಆಕೆ ಇದನ್ನು ಒಪ್ಪಿಕೊಂಡಿದ್ದಾಳೆ. ಆದರೂ ಪೊಲೀಸರು ಎಲ್ಲಾ ಆರೋಪಿಗಳನ್ನು ಊರ್ಡಿಗೆರೆ ಹಾಗೂ ಸದಾಶಿವನಗರ ಉಪ ಠಾಣೆಯಲ್ಲಿ ಇರಿಸಿದ್ದಾರೆ ಹೊರತು ಕೋರ್ಟ್‌ಗೆ ಹಾಜರುಪಡಿಸಿಲ್ಲ. ಜೊತೆಗೆ ಅಮಾಯಕರನ್ನು ಫಿಟ್ ಮಾಡಲು ಸಂಚು ನಡೆಯುತ್ತಿದ್ಯಾ ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ಲೈನ್‍ಮೆನ್ ಬೈಕ್‍ಗೆ ಕಾರು ಡಿಕ್ಕಿ – ಸವಾರ ಹಾರಿ ಬಿದ್ರೂ ನಿಲ್ಲಿಸದೇ ಪರಾರಿಯಾದ ಚಾಲಕ
ಆಡಿಯೋದಲ್ಲಿದ್ದ ರಾಕಿಗೆ ವಿಐಪಿ ಟ್ರೀಟ್‌ಮೆಂಟ್:
ಪುಷ್ಪಾ ಜೊತೆ ಆಡಿಯೋದಲ್ಲಿ ಮಾತನಾಡಿದ ಯುವಕ ರಾಕಿಯನ್ನು ಪೊಲೀಸರು ಬಂಧಿಸಿ ವಿಚಾರಿಸಬೇಕಿತ್ತು. ತನಿಖಾ ತಂಡದಲ್ಲಿ ಇದ್ದ ಸಿಪಿಐ ಒಬ್ಬರ ಸಂಬಂಧಿ ರಾಕಿ. ಹಾಗಾಗಿ ರಾಕಿಯನ್ನು ವಿಚಾರಣೆ ಮಾಡಿ ಕಳುಹಿಸಿದ್ದಾರೆ ಎಂಬ ಆರೋಪ ಈಗ ಬಂದಿದೆ. ಇದನ್ನೂ ಓದಿ: ಭಾರೀ ಗಾಳಿ ಮಳೆಯಿಂದ ಶಾರ್ಟ್ ಸರ್ಕ್ಯೂಟ್ – ನೂರಾರು ಮನೆಗಳ ಟಿವಿ, ಫ್ರಿಡ್ಜ್‌ಗಳಿಗೆ ಹಾನಿ
ಬೆಂಗಳೂರು: ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವಕನ ಅಸಭ್ಯ ವರ್ತನೆ (Molestation) ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯನ್ನು ಪತ್ತೆಹಚ್ಚುವುದೇ ದೊಡ್ಡ ಸವಾಲಾಗಿದೆ.
ಪೊಲೀಸ್ (Police) ತಂಡಗಳು ಎಷ್ಟೇ ಹುಡುಕಾಟ ನಡೆಸಿದರೂ ಸಂತ್ರಸ್ತ ಯುವತಿ ಪತ್ತೆಯಾಗಿಲ್ಲ. ಏಪ್ರಿಲ್ 3 ರ ಮಧ್ಯರಾತ್ರಿ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ಹಿಂದಿನಿಂದ ತಬ್ಬಿದ ಯುವಕ ಅಸಭ್ಯವಾಗಿ ವರ್ತಿಸಿ ಪರಾರಿಯಾಗಿದ್ದ.
ಏನಿದು ಪ್ರಕರಣ?
ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ಹಿಂಬಾಲಿಸಿ ಬಂದ ಯುವಕನೊಬ್ಬ ಬಲವಂತವಾಗಿ ತಬ್ಬಿಕೊಳ್ಳಲು ಯತ್ನಿಸಿ ಎದೆಯ ಭಾಗವನ್ನು ಮುಟ್ಟಿ ಪರಾರಿಯಾಗಿದ್ದ.
ಸುದ್ದಗುಂಟೆಪಾಳ್ಯದ ಭಾರತಿ ಲೇಔಟ್‌ನ 1ನೇ ಕ್ರಾಸ್‌ನಲ್ಲಿ ಏಪ್ರಿಲ್ 3ರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಈ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಘಟನೆ ಸಂಬಂಧ ಸ್ಥಳೀಯ ನಿವಾಸಿಯೊಬ್ಬರ ದೂರು ಆಧರಿಸಿ, ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: 19ರ ಯುವತಿಯ ಕಿಡ್ನ್ಯಾಪ್ – 22 ಮಂದಿ ಕಾಮುಕರಿಂದ ದಿನವಿಡೀ ಗ್ಯಾಂಗ್ ರೇಪ್
ಇಬ್ಬರು ಯುವತಿಯರು ಸುದ್ದಗುಂಟೆ ಪಾಳ್ಯದ ಭಾರತಿ ಲೇಔಟ್‌ನ 1ನೇ ಕ್ರಾಸ್‌ನಲ್ಲಿ ರಾತ್ರಿ 1.52ರ ವೇಳೆ ನಡೆದುಕೊಂಡು ಬಂದಿದ್ದಾರೆ. ಈ ವೇಳೆ ಅವರನ್ನು ಹಿಂಬಾಲಿಸಿಕೊಂಡ ಬಂದ ಯುವಕ, ಏಕಾಏಕಿ ಒಬ್ಬ ಯುವತಿಯನ್ನು ಎಳೆದಾಡಿ, ತಬ್ಬಿಕೊಳ್ಳಲು ಯತ್ನಿಸಿದ್ದ. ಈ ವೇಳೆ ಯುವತಿಯರು ಜೋರಾಗಿ ಕಿರುಚಿಕೊಂಡಾಗ ಆತ ಸ್ಥಳದಿಂದ ಪರಾರಿಯಾಗಿದ್ದ.
ಘಟನೆ ಸಂಬಂಧ ಸಂತ್ರಸ್ತ ಯುವತಿಯರು ದೂರು ನೀಡಿಲ್ಲ. ಆದರೆ ಸ್ಥಳೀಯ ನಿವಾಸಿಯೊಬ್ಬರು ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯದೊಂದಿಗೆ ಠಾಣೆಗೆ ದೂರು ನೀಡಿದ್ದಾರೆ.
ಹಾವೇರಿ: ಸ್ನೇಹಿತೆಯ ಜೊತೆಗೆ ಹೋಗಿದ್ದ ಯುವಕನ ಮೇಲೆ ಆಕೆಯ ಪ್ರಿಯಕರ ಮತ್ತು ಆತನ ಗ್ಯಾಂಗ್ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಹಾವೇರಿಯಲ್ಲಿ (Haveri) ನಡೆದಿದೆ.
ಹಲ್ಲೆಗೊಳಗಾದ ಯುವಕನನ್ನು ಚೇತನ್ ಎಂದು ಗುರುತಿಸಲಾಗಿದೆ. ಅರುಣ್, ನಾಗರಾಜ್, ಅಕ್ಷಯ್, ಚೇತನ್ ಹಾಗೂ ಅಣ್ಣಪ್ಪ ಎಂಬವರು ಹಲ್ಲೆ ನಡೆಸಿದ ಆರೋಪಿಗಳಾಗಿದ್ದು, ಇವರನ್ನು ಹಾವೇರಿ ನಗರ ಪೊಲೀಸರು (Police) ಬಂಧಿಸಿದ್ದಾರೆ.
ಖಾಸಗಿ ಕಾಲೇಜ್‍ವೊಂದರಲ್ಲಿ ಬಿ.ಕಾಂ ಓದುತ್ತಿದ್ದ ಚೇತನ್, ತನ್ನದೇ ತರಗತಿಯ ಯುವತಿ ಜೊತೆ ಸ್ನೇಹ ಬೆಳಸಿದ್ದ. ಅಲ್ಲದೇ ಒಟ್ಟೊಟ್ಟಿಗೆ ಕಂಪ್ಯೂಟರ್ ಕ್ಲಾಸ್‍ಗೂ ಹೋಗುತ್ತಿದ್ದರು. ಒಂದು ಸಲ ಯುವತಿಯ ಮೊಬೈಲ್‍ಗೆ ಕರೆಮಾಡಿದ್ದಾಗ ಅರುಣ್ ಕಾಲ್ ರೀಸಿವ್ ಮಾಡಿದ್ದ. ಇವರಿಬ್ಬರ ಸ್ನೇಹ ನೋಡಿ ಅರುಣ್ ಸಹಿಸಲಾಗದೆ ತಲೆಕಡೆಸಿಕೊಂಡಿದ್ದ.
ನಾನು ಪ್ರೀತಿಸುತ್ತಿರುವ ಹುಡುಗಿಯನ್ನ ನೀನು ಪ್ರೀತಿಸ್ತಿದ್ದಿಯಾ ಎಂದು ಚೇತನ್ ಮೇಲೆ ಸಿಟ್ಟುಮಾಡಿಕೊಂಡಿದ್ದ. ಇದೇ ಕಾರಣಕ್ಕೆ ಚೇತನ್‍ಗೆ ಯುವತಿ ಮೊಬೈಲ್‍ನಿಂದ ಕರೆ ಮಾಡಿ ಹೊರಗಡೆ ಕರೆಸಿಕೊಂಡು ಸ್ವಿಪ್ಟ್ ಕಾರ್‌ನಲ್ಲಿ ಅಪಹರಿಸಿದ್ದರು. ಬಳಿಕ ಬಾರ್ ಒಂದರಲ್ಲಿ ಕುಡಿದು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ಮಾಡಿದ್ದರು.
ಸದ್ಯ ಗಾಯಾಳು ಚೇತನ್‍ಗೆ ಖಾಸಗಿ ಆಸ್ಪತ್ರೆಯಲ್ಲಿ ಮುಂದುವರಿದಿದೆ. ಬಂಧಿತ ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.