Tag: police

  • ಪಾಕ್‌ ಪರ ಘೋಷಣೆ ಕೂಗಿದ್ದವನ ಹತ್ಯೆ ಕೇಸ್ – ಮೂವರು ಪೊಲೀಸರು ಸಸ್ಪೆಂಡ್

    ಪಾಕ್‌ ಪರ ಘೋಷಣೆ ಕೂಗಿದ್ದವನ ಹತ್ಯೆ ಕೇಸ್ – ಮೂವರು ಪೊಲೀಸರು ಸಸ್ಪೆಂಡ್

    ಮಂಗಳೂರು: ಕುಡುಪು (Kudupu) ಬಳಿ ನಡೆದಿದ್ದ ಕೇರಳ (Kerala) ಮೂಲದ ಮುಸ್ಲಿಂ ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್‌ ಸೇರಿ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ.

    ಕರ್ತವ್ಯ ಲೋಪ ಆರೋಪದಡಿ ಇನ್ಸ್‌ಪೆಕ್ಟರ್‌ ಶಿವಕುಮಾರ್, ಹೆಡ್ ಕಾನ್ಸ್‌ಟೇಬಲ್ ಚಂದ್ರ.ಪಿ ಮತ್ತು ಕಾನ್ಸ್‌ಟೇಬಲ್‌ ಯಲ್ಲಾಲಿಂಗ ಅವರನ್ನು ಅಮಾನತು ಮಾಡಲಾಗಿದೆ. ಮೂವರ ವಿರುದ್ಧ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದ ಆರೋಪ ಕೇಳಿ ಬಂದಿತ್ತು. ಇದನ್ನೂ ಓದಿ: ಕುಡುಪು ಕ್ರಿಕೆಟ್ ಮೈದಾನದಲ್ಲಿ ವ್ಯಕ್ತಿ ಕೊಲೆ ಕೇಸ್ – 20 ಆರೋಪಿಗಳು ಬಂಧನ

    ಶಿವಕುಮಾರ್ ಆರಂಭದಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿದ್ದರು. ವಿವಾದ ದೊಡ್ಡದಾದ ಮೇಲೆ ಕೊಲೆ ಪ್ರಕರಣ ದಾಖಲಿಸಿದ್ದರು. ಇದಾದ ಬಳಿಕ ಶಿವಕುಮಾರ್ ಅವರನ್ನು ಅಮಾನತು ಮಾಡುವಂತೆ ಗೃಹ ಸಚಿವರಿಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪತ್ರ ಬರೆದಿದ್ದರು.

    ಏನಿದು ಪ್ರಕರಣ?
    ಏ.27ರ ಭಾನುವಾರ ಸಂಜೆ 5:30ರ ಸುಮಾರಿಗೆ ಮಂಗಳೂರಿನ (Manglauru) ಹೊರವಲಯದ ಕುಡುಪು ಭಟ್ರಕಲ್ಲುರ್ಟಿ ದೈವಸ್ಥಾನದ ಸಮೀಪ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ತಕ್ಷಣ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಅನುಮಾನಾಸ್ಪದ, ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿದ್ದರು. ಮೃತದೇಹದ ಮರಣೋತ್ತರ, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮೃತನ ಬೆನ್ನಿಗೆ ಬಲವಾದ ಹೊಡೆತ ಬಿದ್ದಿದೆ. ಗಂಭೀರ ಗಾಯಗೊಂಡ ಕಾರಣದಿಂದ ಉಂಟಾದ ರಕ್ತಸ್ರಾವದಿಂದ ಆತ ಸಾವನ್ನಪ್ಪಿದ್ದಾನೆ ಎನ್ನಲಾಗಿತ್ತು.

    ಕೊಲೆಯಾಗಿದ್ದು ಯಾಕೆ?
    ಏ.27ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಕುಡುಪು ಭಟ್ರಕಲ್ಲುರ್ಟಿ ದೈವಸ್ಥಾನದ ಬಳಿ ಮೈದಾನದಲ್ಲಿ ಕ್ರಿಕೆಟ್ (Cricket) ಪಂದ್ಯಾವಳಿ ನಡೆಯುತ್ತಿತ್ತು. ಈ ಸಂದರ್ಭ ವಿಚಾರವೊಂದಕ್ಕೆ ಮೃತ ವ್ಯಕ್ತಿಗೆ ಅಲ್ಲಿದ್ದ ಸಚಿನ್ ಎಂಬಾತನೊಂದಿಗೆ ವಾಗ್ವಾದ ನಡೆದಿತ್ತು. ಈ ಸಂದರ್ಭ ಸಚಿನ್ ಆತನಿಗೆ ಥಳಿಸಿದ್ದು, ಬಳಿಕ ಅಲ್ಲಿದ್ದ 25ರಿಂದ 30 ಮಂದಿಯ ಗುಂಪು ಅಪರಿಚಿತ ವ್ಯಕ್ತಿಗೆ ಕೈಯಿಂದ ಮತ್ತು ಕಟ್ಟಿಗೆಯಿಂದ ಹೊಡೆದು, ಕಾಲಿನಿಂದ ಯದ್ವಾತದ್ವ ತುಳಿದು ಹಲ್ಲೆ ನಡೆಸಿದ್ದರು. ಈ ಸಂದರ್ಭ ಕೆಲವರು ತಡೆಯಲು ಯತ್ನಿಸಿದರೂ, ಆತನ ಮೇಲೆ ನಿರಂತರ ಹಲ್ಲೆ ನಡೆಸಿದ ಕಾರಣ ಗಂಭೀರವಾಗಿ ಗಾಯಗೊಂಡು ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದರು.‌

    ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನಿವಾಸಿ ದೀಪಕ್ ಕುಮಾರ್ ಎಂಬುವವರು 19 ಮಂದಿ ಮತ್ತು ಇತರರ ವಿರುದ್ಧ ನೀಡಿದ ದೂರಿನ ಆಧಾರದಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 37/2025, ಕಲಂ: 103(2), 115(2), 189(2), 190, 191(1), 191(3), 240 ಕಾಯ್ದೆಯಡಿ ಕೇಸ್ ದಾಖಲಾಗಿತ್ತು. ಪ್ರಕರಣ ಸಂಬಂಧ 20 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ವೇಳೆ ಮೃತಪಟ್ಟ ಯುವಕ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಕ್ಕೆ ಹಲ್ಲೆ ನಡೆಸಿದ್ದಾಗಿ ಆರೋಪಿಗಳು ತಿಳಿಸಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಹೇಳಿದ್ದರು. ಇದನ್ನೂ ಓದಿ: ಕುಡುಪು ಗುಂಪು ಹತ್ಯೆ ಪ್ರಕರಣ; ಸಿಐಡಿ ತನಿಖೆಗೆ ಕೆಪಿಸಿಸಿ ಪ್ರ.ಕಾರ್ಯದರ್ಶಿ ಇನಾಯತ್ ಅಲಿ ಆಗ್ರಹ

  • ನಿಮ್ಗೆ ಹುಚ್ಚು ಹಿಡಿದಿದ್ಯಾ? – ಪಾಕಿಸ್ತಾನದಲ್ಲಿ ಈಗ ಸೇನೆ Vs ಪೊಲೀಸ್‌ ಕಿತ್ತಾಟ

    ನಿಮ್ಗೆ ಹುಚ್ಚು ಹಿಡಿದಿದ್ಯಾ? – ಪಾಕಿಸ್ತಾನದಲ್ಲಿ ಈಗ ಸೇನೆ Vs ಪೊಲೀಸ್‌ ಕಿತ್ತಾಟ

    ಇಸ್ಲಾಮಾಬಾದ್‌: ಭಾರತದ (India) ವಿರುದ್ಧ ಯುದ್ಧಕ್ಕೆ ಸಿದ್ಧವಾಗುತ್ತಿರುವ ಪಾಕಿಸ್ತಾನ ಸೇನೆಗೆ (Pakistan Army) ಅಲ್ಲಿನ ಪೊಲೀಸರೇ (Police) ಶಾಕ್‌ ನೀಡಿದ್ದಾರೆ.

    ಖೈಬರ್ ಪಖ್ತುಂಖ್ವಾದ ಲಕಿ ಮಾರ್ವಾತ್‌ನಲ್ಲಿ ಪಾಕಿಸ್ತಾನ ಸೇನೆ ಮತ್ತು ಪಶ್ತೂನ್‌ ಪೊಲೀಸರು (Pashtun Police) ಮುಖಾಮುಖಿಯಾಗಿ ಪರಸ್ಪರ ಜಗಳ ಮಾಡಿಕೊಂಡಿದ್ದಾರೆ.

    ಪಶ್ತೂನ್‌ ಪೊಲೀಸರು ಸೈನಿಕರನ್ನು ಅಡ್ಡ ಹಾಕಿ, ಇಲ್ಲಿಗೆ ನೀವು ಯಾಕೆ ಬಂದಿದ್ದೀರಿ. ನಿಮಗೆ ಹುಚ್ಚು ಹಿಡಿದಿದ್ಯಾ? ನೀವು ಇಲ್ಲಿ ಏನು ಮಾಡುತ್ತಿದ್ದೀರಿ? ನಿಮ್ಮ ಜನರಲ್ ಬಂದರೂ ಸಹ ನೀವು ಇನ್ನೂ ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ ಎಂದು ಗದರಿದ್ದಾರೆ.

    ಪಾಕ್‌ ಸೈನಿಕರನ್ನು ಪೊಲೀಸರು ಕೆಣಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್‌ ಆಗಿದೆ. ಮುಂದಿನ ದಿನಗಳಲ್ಲಿ ಪೊಲೀಸರು ಮತ್ತು ಸೇನೆ ಮಧ್ಯೆ ನಡೆಯವ ಸಂಘರ್ಷ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.‌ ಇದನ್ನೂ ಓದಿ: ಭಾರತದ ವಿರುದ್ಧ ವಿಷ ಕಾರುತ್ತಿದ್ದ ಅಫ್ರಿದಿ ಬಾಯಿ ಬಂದ್‌!

    ಕಿತ್ತಾಟಕ್ಕೆ ಮೂಲ ಕಾರಣ ಏನು?
    ಪಶ್ತೂನ್‌ಗಳು ಇರಾನಿನ ಜನಾಂಗೀಯ ಗುಂಪಾಗಿದ್ದು ಇವರನ್ನು ಪಖ್ತೂನ್‌ಗಳು ಅಥವಾ ಪಠಾಣ್‌ಗಳು ಎಂದೂ ಕರೆಯುತ್ತಾರೆ. ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಾರೆ. ಪಶ್ತೂನ್‌ಗಳು ಪೂರ್ವ ಇರಾನಿನ ಭಾಷೆಯಾದ ಪಾಷ್ಟೋವನ್ನು ಮಾತನಾಡುತ್ತಾರೆ ಮತ್ತು ಸುನ್ನಿ ಮುಸ್ಲಿಮರಾಗಿದ್ದಾರೆ. ಇದನ್ನೂ ಓದಿ: Haveri | ಮಾರ್ಗ ಮಧ್ಯೆ ಸಾರಿಗೆ ಬಸ್ ನಿಲ್ಲಿಸಿ ನಮಾಜ್ ಮಾಡಿದ ಡ್ರೈವರ್

    ಪಶ್ತೂನ್‌ಗಳು ಪಾಕಿಸ್ತಾನವನ್ನು ವಿರೋಧಿಸಲು ಮುಖ್ಯ ಕಾರಣ ಡುರಾಂಡ್‌ ಗಡಿ (Durand Line) ರೇಖೆ. ಪಾಕಿಸ್ತಾನ ಮತ್ತು ಅಫ್ಘಾನ್‌ ಮಧ್ಯೆ 2,670 ಕಿ.ಮೀ ಉದ್ದದ ಗಡಿ ರೇಖೆ ಹಾದು ಹೋಗಿದೆ. ಅಫ್ಘಾನಿಸ್ತಾನದಲ್ಲಿ ಪಶ್ತೂನ್‌ ಬುಡಕಟ್ಟು ಜನಸಂಖ್ಯೆಯ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇತ್ತ ಪಾಕಿಸ್ತಾನದಲ್ಲೂ ಪಶ್ತೂನ್‌ ಜನ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಇಲ್ಲಿ ಕೆಲ ಸಂಬಂಧಿಕರು ಅಫ್ಘಾನಿಸ್ತಾನ ಭಾಗದಲ್ಲಿದ್ದರೆ ಇನ್ನು ಕೆಲವರು ಪಾಕಿಸ್ತಾನದಲ್ಲಿದ್ದಾರೆ. ಈ ಕಾರಣಕ್ಕೆ ಅಫ್ಘಾನಿಸ್ತಾನ ಇಲ್ಲಿಯವರೆಗೆ ಅದು ಗಡಿ ರೇಖೆ ಎಂಬುದನ್ನು ಒಪ್ಪಿಕೊಂಡಿಲ್ಲ.

    ಇತ್ತೀಚಿನ ದಿನಗಳಲ್ಲಿ ಕಿತ್ತಾಟ ಜಾಸ್ತಿಯಾಗಲು ಕಾರಣ ಫಾಟಾ ಪ್ರ್ಯಾಂತ್ಯದ ಬಿಕ್ಕಟ್ಟು. 1947ರಲ್ಲಿ ಪಾಕಿಸ್ತಾನ ರಚನೆಯಾದ ಬಳಿಕ 2017ರವರೆಗೆ ಈ Federally Administered Tribal Areas ಎಂದು ಕರೆಸಿಕೊಳ್ಳುವ ಪ್ರದೇಶದ ನಿಯಂತ್ರಣ ಪಾಕ್‌ ಬಳಿ ಇರಲಿಲ್ಲ. 2018ರಲ್ಲಿ ಪಾಕ್‌ ಸಂಸತ್ತು ಮಸೂದೆ ಪಾಸ್‌ ಮಾಡಿ ಅದು ತನ್ನ ಭಾಗ ಎಂದು ಘೋಷಿಸಿತು. ಈ ಪ್ರದೇಶವನ್ನು ಖೈಬರ್ ಪಖ್ತುಂಕ್ವಾದ ಜೊತೆ ವಿಲೀನಗೊಳಿಸಿತು. ಪಾಕಿಸ್ತಾನದ ಈ ನಿರ್ಧಾರ ತಾಲಿಬಾನ್‌ ಮತ್ತು ಪಶ್ತೂನ್‌ ಜನಾಂಗದವರನ್ನು ಕೆರಳಿಸಿದ್ದು ಈ ವಿಚಾರದ ಬಗ್ಗೆ ಆಗಾಗ ಗಲಾಟೆ ನಡೆಯುತ್ತಿರುತ್ತದೆ.

  • ಬಾರ್‌ನಲ್ಲಿ ಸೈಲೆನ್ಸ್ ಎಂದವನ ಕೊಲೆ – ನಾಲ್ವರ ಬಂಧನ

    ಬಾರ್‌ನಲ್ಲಿ ಸೈಲೆನ್ಸ್ ಎಂದವನ ಕೊಲೆ – ನಾಲ್ವರ ಬಂಧನ

    ಬೆಂಗಳೂರು: ಬಾರ್‌ವೊಂದರಲ್ಲಿ ಮಾತನಾಡಬೇಡಿ ಎಂದಿದ್ದಕ್ಕೆ ಯುವಕನ ಹತ್ಯೆ ಮಾಡಿದ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಕಳೆದ ಶುಕ್ರವಾರ ರಾತ್ರಿ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಶ್ಯಾನುಬೋಗನಹಳ್ಳಿ ತರಂಗಿಣಿ ಬಾರ್‌ನಲ್ಲಿ ಜೋರಾಗಿ ಮಾತನಾಡಬೇಡಿ ಎಂದಿದ್ದ ಕೆಂಚಗಯ್ಯನದೊಡ್ಡಿ ಸುರೇಶ್‌ನನ್ನು‌ ಕೊಂದಿದ್ದ ಆರೋಪಿಗಳನ್ನು ಬನ್ನೇರುಘಟ್ಟ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಇದನ್ನೂ ಓದಿ: ಮರದ ಮೇಲೆ ಕುಳಿತು ಇಡೀ ಕೃತ್ಯ ಸೆರೆ ಹಿಡಿದಿದ್ದ ರೀಲ್ಸ್‌ ವಿಡಿಯೋಗ್ರಾಫರ್‌ ಎನ್‌ಐಎಗೆ ಪ್ರಮುಖ ಸಾಕ್ಷಿ

    ಕೆಂಚಗಯ್ಯನದೊಡ್ಡಿ ದೊಡ್ಡಿ ನಿವಾಸಿಗಳಾದ ಕಾಂತಿಕುಮಾರ್, ಕಿರಣ್ ಕುಮಾರ್ ಮತ್ತು ಗೋಪಾಲ್ ಜೊತೆ ಓರ್ವ ಬಾಲಾಪರಾಧಿ ಕೂಡ ಅರೆಸ್ಟ್ ಆಗಿದ್ದಾನೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿ ವಿನೋದ್ ಕುಮಾರ್ ಇನ್ನೂ ಪತ್ತೆಯಾಗಿಲ್ಲ.

    ಶ್ಯಾನುಬೋಗನಹಳ್ಳಿ ತರಂಗಿಣಿ ಬಾರ್‌ನಲ್ಲಿ ಕುಡಿದ ನಶೆಯಲ್ಲಿದ್ದ ಕಾಂತಿಕುಮಾರ್ ಗ್ಯಾಂಗ್‌ಗೆ ಸುರೇಶ್ ಕುಡಿದ ನಶೆಯಲ್ಲಿ ಆವಾಜ್ ಹಾಕಿದ್ದ. ಜೋರಾಗಿ ಕಿರುಚಾಡಬೇಡಿ ಎಂದು ಆವಾಜ್ ಹಾಕಿದ್ದಾನೆ. ಅಷ್ಟಕ್ಕೆ ರೊಚ್ಚಿಗೆದ್ದಿದ್ದ ಆರೋಪಿ ಕಾಂತಿಕುಮಾರ್, ‘ನಾನು ಯಾರೂ ಗೊತ್ತಾ? ಕಾಂತ….! ನನ್ನ ಮುಂದೆ ತಲೆಯೆತ್ತಿ ಪ್ರಶ್ನೆ ಮಾಡ್ತಿಯಾ? ನಿನ್ನ ತಲೆ ಎತ್ತಿಬಿಡ್ತೀನಿ’ ಎಂದು ಅವಾಜ್ ಹಾಕಿದ್ದಾನೆ. ರಾತ್ರಿ 10 ಗಂಟೆ ಸುಮಾರಿಗೆ ‌ಕೊಂದು ಮುಗಿಸಿ ಎಸ್ಕೇಪ್ ಕೂಡ ಆಗಿದ್ದರು. ಈಗ ‌ಪೊಲೀಸರ ಅತಿಥಿಯಾಗಿದ್ದಾರೆ. ಇದನ್ನೂ ಓದಿ: Anytime, Anywhere – ಬ್ರಹ್ಮೋಸ್‌ ಹಾರಿಸಿ ಎಲ್ಲದ್ದಕ್ಕೂ ಸಿದ್ಧ ಎಂದ ನೌಕಾಸೇನೆ

  • ಚಾಮುಂಡಿ ಬೆಟ್ಟದಲ್ಲಿ ಹೊರ ರಾಜ್ಯದ ಯುವಕರಿಂದ ಅಸಭ್ಯ ವರ್ತನೆ

    ಚಾಮುಂಡಿ ಬೆಟ್ಟದಲ್ಲಿ ಹೊರ ರಾಜ್ಯದ ಯುವಕರಿಂದ ಅಸಭ್ಯ ವರ್ತನೆ

    ಮೈಸೂರು: ಚಾಮುಂಡಿ ಬೆಟ್ಟದಲ್ಲಿ (Chamundi Hills) ಹೊರ ರಾಜ್ಯದ ಯುವಕರ ಗುಂಪು ಬಟ್ಟೆ ಬಿಚ್ಚಿ ಅಸಭ್ಯ ವರ್ತಿಸಿದ್ದು, ಪೊಲೀಸರು ಅವರನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

    ಯುವಕರು ಸಾರ್ವಜನಿಕ ಸ್ಥಳದಲ್ಲಿ ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಾರೆ. ಇದರಿಂದ ಬೇಸತ್ತ ಜನ, ಫೋಟೋ ಸಮೇತ ಪೊಲೀಸರಿಗೆ ದೂರು ನಿಡಿದ್ದಾರೆ. ಬಳಿಕ ಚಾಮುಂಡಿ ಬೆಟ್ಟ ಠಾಣೆ ಪೊಲೀಸರು ಯುವಕರನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.

    ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸದಂತೆ ಯುವಕರಿಗೆ ಪೊಲೀಸರು ತಿಳುವಳಿಕೆ ಹೇಳಿದ್ದಾರೆ. ಅಲ್ಲದೇ ಮುಚ್ಚಳಿಕೆ ಪತ್ರ ಬರೆಸಿಕೊಂಡ ಠಾಣೆಯಿಂದ ಕಳುಹಿಸಿದ್ದಾರೆ.

    ಈ ಬಗ್ಗೆ ಸಾಮಾಜಿಕ ಜಾಲಾತಾಣದಲ್ಲಿ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕಾರ್ ಪೋಸ್ಟ್ ಹಂಚಿಕೊಂಡಿದ್ದಾರೆ.

  • ಕುತ್ತಿಗೆ ಹಿಡಿದು ಕೊಲೆಗೆ ಯತ್ನಿಸಿದ್ದ – ವಿಂಗ್‌ ಕಮಾಂಡರ್‌ ವಿರುದ್ಧ ಕೊನೆಗೂ ಎಫ್‌ಐಆರ್‌ ದಾಖಲು

    ಕುತ್ತಿಗೆ ಹಿಡಿದು ಕೊಲೆಗೆ ಯತ್ನಿಸಿದ್ದ – ವಿಂಗ್‌ ಕಮಾಂಡರ್‌ ವಿರುದ್ಧ ಕೊನೆಗೂ ಎಫ್‌ಐಆರ್‌ ದಾಖಲು

    ಬೆಂಗಳೂರು: ಸುಳ್ಳು ಕಥೆ ಕಟ್ಟಿದ ವಿಂಗ್‌ ಕಮಾಂಡರ್‌ (Wing Commandor) ವಿರುದ್ಧ ಕೊನೆಗೂ ಎಫ್‌ಐಆರ್‌ (FIR) ದಾಖಲಾಗಿದೆ.

    ಹಲ್ಲೆಗೆ ಒಳಗಾದ ವಿಕಾಸ್‌ ನೀಡಿದ ದೂರಿನ ಆಧಾರದಲ್ಲಿ ಬೈಯಪ್ಪನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಕಾರಿನ ನಂಬರ್‌ ಆಧಾರದಲ್ಲಿ ಶಿಲಾದಿತ್ಯಾ ಬೋಸೆ (Shiladitya Bose) ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ ಅಡಿ ಪ್ರಕರಣ ದಾಖಲಾಗಿದೆ.

    ಬಿಎನ್‌ಎಸ್ 109(ಕೊಲೆಯತ್ನ), 115(2)(ಮಾರಣಾಂತಿಕ ಹಲ್ಲೆ), 304(ಬಲವಂತವಾಗಿ ಮೈ ಮೇಲೆ ಇರುವ ವಸ್ತು ಕಿತ್ತುಕೊಳ್ಳುವುದು), 324(ಅರಿವಿಗೆ ಇದ್ದರೂ ವಸ್ತುಗಳನ್ನು ಉದ್ದೇಶ ಪೂರಕವಾಗಿ ಹಾಳು ಮಾಡುವುದು), 352 (ಶಾಂತಿ ಭಂಗ)ಸೆಕ್ಷನ್‌ ಅಡಿ ಎಫ್‌ಐಆರ್‌ ದಾಖಲಾಗಿದೆ. ಇದನ್ನೂ ಓದಿ: ಹಿಂದಿಯಲ್ಲಿ ಬೈದಿದ್ದು ಅರ್ಥ ಆಗಿಲ್ಲ ಎಂದಿದ್ದಕ್ಕೆ ಗಲಾಟೆ: ಯುವಕನ ತಾಯಿ ಅಳಲು

     

    ದೂರಿನಲ್ಲಿ ಏನಿದೆ?
    ಸೋಮವಾರ ಬೆಳಗ್ಗೆ ಸ್ನೇಹಿತನ ಬೈಕ್ ವಾಪಸ್ ನೀಡಲು ನಾನು ಹೋಗುತ್ತಿದ್ದೆ. ಟಿನ್‌ ಫ್ಯಾಕ್ಟರಿಯ ಬಳಿ ಬೈಕ್‌ಗೆ ಕಾರು ತಾಗಿದೆ. ಇದಕ್ಕೆ ಕಾರನ್ನು ಅಡ್ಡ ಹಾಕಿ ಗುದ್ದಿದ್ದು ಯಾಕೆ ಎಂದು ಕೇಳಿದೆ. ಪ್ರಶ್ನೆ ಮಾಡಿದ್ದಕ್ಕೆ ಕಾರಿನಲ್ಲಿದ್ದ ವ್ಯಕ್ತಿ ಕಾಲಿನಿಂದ ಒದ್ದು ಬೈಕನ್ನು ಕೆಳಗೆ ಬೀಳಿಸಿದ್ದಾನೆ.

    ನಾನು ಆಕ್ಷೇಪ ವ್ಯಕ್ತಪಡಿಸಿದಾಗ ನಿರಂತರವಾಗಿ ಹಲ್ಲೆ ಮಾಡಿದ್ದಾನೆ. ಸ್ನೇಹಿತನಿಗೆ ಕರೆ ಮಾಡಲು ಮುಂದಾದಾಗ ಮೊಬೈಲ್ ಎಸೆದಿದ್ದಾನೆ. ಜೊತೆಗೆ ಬೈಕ್‌ ಕೀ ಎಸೆಯುತ್ತಾನೆ. ಕುತ್ತಿಗೆ ಹಿಡಿದು ಸಾಯಿಸಲು ಯತ್ನಿಸಿದ್ದ ಎಂದು ವಿಕಾಸ್‌ ದೂರು ನೀಡಿದ್ದಾರೆ. ಇದನ್ನೂ ಓದಿ: ನೆಲಕ್ಕೆ ಬಿದ್ರೂ ಬಿಡದೇ ಡೆಲಿವರಿ ಬಾಯ್ ಮೇಲೆ ಹಲ್ಲೆ ಮಾಡಿ ವಿಂಗ್ ಕಮಾಂಡರ್ ದರ್ಪ

  • ಓಂ ಪ್ರಕಾಶ್‌ ಹತ್ಯೆಗೆ 1 ವಾರದಿಂದ ಸ್ಕೆಚ್‌ ಹಾಕಿದ್ದ ಪತ್ನಿ, ಪುತ್ರಿ!

    ಓಂ ಪ್ರಕಾಶ್‌ ಹತ್ಯೆಗೆ 1 ವಾರದಿಂದ ಸ್ಕೆಚ್‌ ಹಾಕಿದ್ದ ಪತ್ನಿ, ಪುತ್ರಿ!

    ಬೆಂಗಳೂರು: ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್‌ (Om Prakash) ಹತ್ಯೆಗೆ ಪತ್ನಿ ಪಲ್ಲವಿ ಮತ್ತು ಮಗಳು ಕೃತಿ ಒಂದು ವಾರದಿಂದ ಪ್ಲ್ಯಾನ್‌ ಮಾಡಿದ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ.

    ಓಂ ಪ್ರಕಾಶ್‌ ಒಂದಷ್ಟು ದಿನ ಬೇರೆ ಕಡೆ ಇದ್ದರು. ನಂತರ ಬಲವಂತವಾಗಿ ಅವರನ್ನು ಮನೆಗೆ ಕರೆದುಕೊಂಡು ಬರಲಾಗಿತ್ತು. ಮನೆಗೆ ಕರೆದುಕೊಂಡು ಬಂದ ನಂತರವೂ ಗಲಾಟೆ ನಡೆದಿತ್ತು. ಗಲಾಟೆ ಜೋರಾದ ಕಾರಣ ಓಂ ಪ್ರಕಾಶ್‌ ಅವರು ಸಹೋದರಿ ಸರಿತಾ ಮನೆಗೆ ತಂದೆ ಹೋಗಿದ್ದರು. ಶುಕ್ರವಾರ ಪುತ್ರಿ ಕೃತಿ ಸರಿತಾ ಅವರ ಮನೆಗೆ ಹೋಗಿ ಪೀಡಿಸಿ ಕರೆ ತಂದಿದ್ದಳು.

    ಮನೆಗೆ ಕರೆ ತಂದ ಬಳಿಕ ಮತ್ತೆ ಗಲಾಟೆ ನಡೆದಿದೆ. ಗಲಾಟೆ ನಡೆಯುತ್ತಿದ್ದಂತೆ ಈ ಮನುಷ್ಯನನ್ನು ಹೇಗಾದರೂ ಮಾಡಿ ಮುಗಿಸಿಬಿಡಬೇಕು ಎಂದು ಪ್ಲ್ಯಾನ್‌ ಮಾಡಿದ್ದಾರೆ. ಈ ಪ್ಲ್ಯಾನ್‌ನಂತೆ ಭಾನುವಾರ ಮಧ್ಯಾಹ್ನ ಮತ್ತೆ ಗಲಾಟೆ ಮಾಡಿದ್ದಾರೆ.

    ಗಲಾಟೆಯ ಬಳಿಕ ಓಂ ಪ್ರಕಾಶ್‌ ಅವರು ಊಟಕ್ಕೆ ಎರಡು ಮೀನು ತರಿಸಿದ್ದರು. ಮಧ್ಯಾಹ್ನ ಮೀನಿನ ಊಟ ಮಾಡುತ್ತಿದ್ದಾಗ ಪಲ್ಲವಿ (Pallavi) ಮತ್ತು ಕೃತಿ ದಾಳಿ ನಡೆಸಿ ಓಂ ಪ್ರಕಾಶ್‌ ಅವರನ್ನು ಹತ್ಯೆ ಮಾಡಿರುವ ವಿಚಾರ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಓಂ ಪ್ರಕಾಶ್ ಹತ್ಯೆ ಕೇಸ್‌ – ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದಾರಾ ಪತ್ನಿ ಪಲ್ಲವಿ?

     

    ಕೊಲೆ ಹೇಗಾಯ್ತು?
    ಹೆಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ (ಹೊಸೂರು ಸರ್ಜಾಪುರ ಲೇಔಟ್‌) ನಿವಾಸದಲ್ಲಿ ಮಧ್ಯಾಹ್ನ ಊಟಕ್ಕೆ ಓಂ ಪ್ರಕಾಶ್‌ ಎರಡು ಮೀನು ತರಿಸಿಕೊಂಡಿದ್ದರು. ಡೈನಿಂಗ್‌ ಟೇಬಲ್‌ನಲ್ಲಿ ಊಟ ಮಾಡುತ್ತಿದ್ದಾಗ ಜಗಳ ನಡೆದಿದೆ.

    ಜಗಳ ವಿಕೋಪಕ್ಕೆ ಹೋದಾಗ ಕಣ್ಣಿಗೆ ಖಾರದ ಪುಡಿ ಹಾಕಿ ಕೊಲೆ ಮಾಡಿದ್ದಾರೆ. ಕೊಲೆ (Murder)‌ ಮಾಡಿದ ನಂತರ ಮೇಲಿನ ಮಹಡಿಯ ಕೋಣೆಗಳಿಗೆ ಹೋಗಿದ್ದ ತಾಯಿ, ಮಗಳು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ.

    ಪೊಲೀಸರು (Police) ಮೊದಲು ಕೊಲೆಯಾದ ಜಾಗಕ್ಕೆ ಬಂದಾಗ ಕೃತಿ ರಂಪಾಟ ಮಾಡಿದ್ದಾಳೆ. ಪೊಲೀಸರು ಬಂದಾಗ ಬಾಗಿಲು ತೆಗೆಯದೇ ಲಾಕ್‌ ಮಾಡಿದ್ದಳು. ಕೊಲೆ ಮಾಡಿದವರು ಯಾರು ಎಂದು ಪ್ರಶ್ನೆ ಮಾಡಿದಾಗ ಪತ್ನಿ ಪಲ್ಲವಿ ನಾನೇ ಕೊಲೆ ಮಾಡಿದ್ದೇನೆ ಎಂದು ಹೇಳಿದ್ದಾಳೆ. ಮನೆಯ ಮೇಲಿದ್ದ ಕೃತಿ ಹೊರಗಡೆ ಬಾರದೇ ಇದ್ದಾಗ ಪೊಲೀಸರು ಬಾಗಿಲು ಒಡೆದು ಆಕೆಯನ್ನು ವಶಕ್ಕೆ ಪಡೆದಿದ್ದಾರೆ.

    ಕ್ರೈಂ ಸೀನ್ ಪರಿಶೀಲನೆ ವೇಳೆ ಊಟದ ತಟ್ಟೆ ಟೇಬಲ್ ಬಳಿ ಪತ್ತೆಯಾಗಿದ್ದು ಡೈನಿಂಗ್ ಹಾಲ್‌ನಲ್ಲಿ ರಕ್ತಸಿಕ್ತವಾಗಿ ಓಂ ಪ್ರಕಾಶ್ ಅವರ ಶವ ಪತ್ತೆಯಾಗಿದೆ. ಖಾರದಪುಡಿ ಎರಚಿ ಕೊಲೆ ಮಾಡಿರುವ ಕುರುಹುಗಳು ಪತ್ತೆಯಾಗಿವೆ. ಕೇವಲ ಚಾಕು ಅಷ್ಟೇ ಅಲ್ಲದೇ ಬಿಯರ್ ಬಾಟಲ್‌ನಿಂದ ಚುಚ್ಚಿರುವ ಸಾಧ್ಯತೆಯಿದೆ. ಯಾಕೆಂದರೆ ಓಂ ಪ್ರಕಾಶ್ ಮೃತದೇಹದ ಪಕ್ಕದಲಲ್ಲೇ ಒಡೆದ ಬಿಯರ್ ಬಾಟಲ್ ಕೂಡ ಪತ್ತೆಯಾಗಿದೆ.

  • ಬೈಕ್ ಸವಾರನಿಗೆ ಮನಸೋಇಚ್ಛೆ ಹಲ್ಲೆ ಮಾಡಿ ಕಥೆ ಕಟ್ಟಿದ ವಿಂಗ್ ಕಮಾಂಡರ್

    ಬೈಕ್ ಸವಾರನಿಗೆ ಮನಸೋಇಚ್ಛೆ ಹಲ್ಲೆ ಮಾಡಿ ಕಥೆ ಕಟ್ಟಿದ ವಿಂಗ್ ಕಮಾಂಡರ್

    – ಕನ್ನಡ ಮಾತನಾಡಿಲ್ಲ ಅಂತ ಹಲ್ಲೆ ಮಾಡಿದ್ದ ಎಂದು ವಿಂಗ್ ಕಮಾಂಡರ್ ಸುಳ್ಳು ಆರೋಪ
    – ಪ್ರಕರಣಕ್ಕೆ ಟ್ವಿಸ್ಟ್‌ ಕೊಟ್ಟ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಾರಾಮಾರಿಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ತನ್ನ ಮೇಲೆ ಹಲ್ಲೆ ಮಾಡಲಾಯಿತು ಎಂದು ಕಥೆ ಕಟ್ಟಿದ್ದ ವಿಂಗ್ ಕಮಾಂಡರ್‌ನ (Wing Commander) ಅಸಲಿಯತ್ತು ಈಗ ಬಯಲಾಗಿದೆ.

    ಬೈಕ್ ಸವಾರನಿಗೆ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಮನಸೋಇಚ್ಛೆ ಹಲ್ಲೆ ಮಾಡಿರುವುದು ಸಿಸಿಟಿವಿ ದೃಶ್ಯದಿಂದ ಬಯಲಾಗಿದೆ. ಹುಡುಗ ನೆಲದ ಮೇಲೆ ಬಿದ್ದರೂ ಬಿಡದೇ, ಸಿಕ್ಕಸಿಕ್ಕಂತೆ ವಿಂಗ್ ಕಮಾಂಡರ್ ಹಲ್ಲೆ ನಡೆಸಿ ದರ್ಪ ಮೆರೆದಿದ್ದಾರೆ. ಸ್ಥಳೀಯರು ಬಿಡಿಸಲು ಮುಂದಾದರೂ ಜಗ್ಗದೇ ಬೈಕ್ ಸವಾರನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಇದನ್ನೂ ಓದಿ: DRDO ಸ್ಟಿಕ್ಕರ್ ನೋಡಿ ಕೆರಳಿದ ಪುಂಡರು – ಕಾರು ಅಡ್ಡಗಟ್ಟಿ ವಿಂಗ್‌ ಕಮಾಂಡರ್‌ ಮೇಲೆ ಮಾರಣಾಂತಿಕ ಹಲ್ಲೆ

    ವಿಕಾಸ್ ಹಲ್ಲೆಗೊಳಗಾದ ಬೈಕ್ ಸವಾರ. ಗಲಾಟೆ ವೇಳೆ ಆತನ ಮೊಬೈಲ್‌ನ್ನು ವಿಂಗ್ ಕಮಾಂಡರ್ ಕಿತ್ತು ಎಸೆದಿದ್ದಾರೆ. ಮನಸೋಇಚ್ಛೆ ಹುಡುಗನ ಮೇಲೆ ಹಲ್ಲೆ ಮಾಡಿದ್ದಾರೆ. ಈ ಗಲಾಟೆಯಲ್ಲಿ ಬೈಕ್ ಕೀ ಮುಖಕ್ಕೆ ತಗುಲಿ ರಕ್ತ ಬಂದಿದೆ. ಇದನ್ನೇ ಕನ್ನಡ ಮತ್ತು ಹಿಂದಿ ಅಂತಾ ಗಾಸಿಪ್ ಮಾಡಿ ವಿಂಗ್‌ ಕಮಾಂಡರ್‌ ವೀಡಿಯೋ ವೈರಲ್ ಮಾಡಿದ್ದಾರೆ ಅನ್ನೋದು ಗೊತ್ತಾಗಿದೆ.

    ಪ್ರಕರಣ ಏನು?
    ಕಾರಿಗೆ ಬೈಕ್ ಹಿಂದಿನಿಂದ ಟಚ್ ಆಗಿದ್ದಕ್ಕೆ ಗಲಾಟೆಯಾಗಿದೆ ಎನ್ನಲಾಗಿತ್ತು. ಪ್ರಕರಣ ಸಂಬಂಧ ವಿಂಗ್ ಕಮಾಂಡರ್ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದರು. ವೀಡಿಯೋದಲ್ಲಿ, ‘ಬೈಕ್ ಸವಾರ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ಕನ್ನಡ ಮಾತನಾಡಿಲ್ಲ ಎಂದು ಹಲ್ಲೆ ಮಾಡಿದ. ನನ್ನ ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ. ಈ ವೇಳೆ ನನ್ನ ಮೇಲೆ ಹಲ್ಲೆ ಮಾಡಿದ. ಸ್ಥಳೀಯರು ಯಾರೂ ಕೂಡ ಸಹಾಯಕ್ಕೆ ಬರಲಿಲ್ಲ’ ಎಂದು ವಿಂಗ್ ಕಮಾಂಡರ್ ಆರೋಪ ಮಾಡಿದ್ದರು. ತಲೆಗೆ ಮತ್ತು ಮೂಗಿನ ಭಾಗಕ್ಕೆ ಪೆಟ್ಟಾಗಿದೆ ಎಂದು ಬ್ಯಾಂಡೇಜ್ ಹಾಕಿಸಿದ್ದರು. ಇದನ್ನೂ ಓದಿ: ಸರ್ಕಾರಿ ಗೌರವಗಳೊಂದಿಗೆ ನಿವೃತ್ತ ಡಿಜಿಪಿ ಓಂ ಪ್ರಕಾಶ್ ಅಂತ್ಯಕ್ರಿಯೆ

    ಆದರೆ, ಹಲ್ಲೆಗೆ ಸಂಬಂಧಿಸಿದ ವೀಡಿಯೋ ಈಗ ‘ಪಬ್ಲಿಕ್ ಟಿವಿ’ಗೆ ಲಭ್ಯವಾಗಿದ್ದು, ವಿಂಗ್ ಕಮಾಂಡರ್ ಅಸಲಿಯತ್ತು ಬಯಲಾಗಿದೆ. ವೀಡಿಯೋದಲ್ಲಿ ಬೈಕ್ ಸವಾರನ ಮೇಲೆ ವಿಂಗ್ ಕಮಾಂಡರ್ ಮಾರಣಾಂತಿಕ ಹಲ್ಲೆ ನಡೆಸಿರುವುದು ಕಂಡುಬಂದಿದೆ.

  • ಸಹೋದರಿಯನ್ನು ಚುಡಾಯಿಸಿದ್ದಕ್ಕೆ ಯುವಕನಿಗೆ ಚಾಕು ಇರಿದ ಅಪ್ರಾಪ್ತ!

    ಸಹೋದರಿಯನ್ನು ಚುಡಾಯಿಸಿದ್ದಕ್ಕೆ ಯುವಕನಿಗೆ ಚಾಕು ಇರಿದ ಅಪ್ರಾಪ್ತ!

    ಬಾಗಲಕೋಟೆ: ಸಹೋದರಿಯನ್ನು (Sister) ಚುಡಾಯಿಸಿದ್ದಕ್ಕೆ ಅಪ್ರಾಪ್ತನೊಬ್ಬ (Minor) ಯುವಕನ ಮೇಲೆ ಚಾಕು ಇರಿದ ಘಟನೆ ಬಾಗಲಕೋಟೆಯ (Bagalkote) ನವನಗರದ 48ನೇ ಸೆಕ್ಟರ್‌ನಲ್ಲಿ ನಡೆದಿದೆ.

    ಸಹೋದರಿಯನ್ನು ಚುಡಾಯಿಸಿದ ಮೊಹಮ್ಮದ್‌ ಆಸೀಫ್‌ ನದಾಫ್‌ ಮತ್ತು ಅಪ್ರಾಪ್ತನ ಮಧ್ಯೆ ಜಗಳ ಶುರುವಾಗಿದೆ. ನಂತರ ಮಾತಿಗೆ ಮಾತು ಬೆಳೆದು ಅಪ್ರಾಪ್ತ ಚಾಕು ಇರಿದಿದ್ದಾನೆ.

    ಗಲಾಟೆ ಯಾಕಾಯ್ತು?
    ಆಸೀಫ್‌ ಅಪ್ರಾಪ್ತನ ಸಹೋದರಿ ಸೈಕಲ್‌ ಅಡ್ಡಗಟ್ಟಿ ಚುಡಾಯಿಸಿದ್ದ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಆರಂಭದಲ್ಲಿ ಜಗಳ ನಡೆದಿತ್ತು. ಕಿತ್ತಾಟದ ವಿಚಾರ ತಿಳಿದು ಮುಸ್ಲಿಮ್‌ ಸಮಾಜದ ಹಿರಿಯರು ಇಬ್ಬರನ್ನು ಸಂಧಾನ ಮಾತುಕತೆಗೆ ಕರೆದಿದ್ದರು. ಇದನ್ನೂ ಓದಿ: ದಲಿತ ಯುವತಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ – ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ಸೂಸೈಡ್‌ ಆರೋಪ

    ಸಂಧಾನ ಮಾತುಕತೆ ವೇಳೆ ಆಸೀಫ್‌ ಹಾಗೂ ಅಪ್ರಾಪ್ತ ಬಾಲಕನ ಮಧ್ಯೆ ಮತ್ತೆ ಜಗಳ ಶುರುವಾಗಿದೆ. ಜಗಳ ಜೋರಾಗುತ್ತಿದ್ದಂತೆ ಬಾಲಕ ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಆಸೀಫ್‌ ತಲೆ, ಮೂಗು,ಕೆನ್ನೆಯ ಭಾಗಕ್ಕೆ  ಚಾಕು ಇರಿಯಲಾಗಿದೆ. ಇದನ್ನೂ ಓದಿ: ಇಬ್ರು ಹುಡ್ಗೀರು ನನ್ನ ಮಗಳ ಜೀವನ ಸರಿ ಮಾಡಿದ್ದಾರೆ: ವೈಷ್ಣವಿ ಗೌಡ ತಾಯಿ

    ಗಂಭೀರವಾಗಿ ಗಾಯಗೊಂಡ ಆಸೀಫ್‌ನನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ನವನಗರ ಪೊಲೀಸರು ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಯುವಕನ ಪೋಷಕರು ಆಸ್ಪತ್ರೆಯ ಮುಂದೆ ಕಣ್ಣೀರಿಟ್ಟಿದ್ದಾರೆ.

  • ಕಾರವಾರ| ಮಟ್ಕಾ ಆಡಿಸಲು ಲಂಚ ಪಡೆದ ಪೊಲೀಸ್‌ಗೆ 8 ವರ್ಷಗಳ ಬಳಿಕ ಜೈಲು ಶಿಕ್ಷೆ

    ಕಾರವಾರ| ಮಟ್ಕಾ ಆಡಿಸಲು ಲಂಚ ಪಡೆದ ಪೊಲೀಸ್‌ಗೆ 8 ವರ್ಷಗಳ ಬಳಿಕ ಜೈಲು ಶಿಕ್ಷೆ

    ಕಾರವಾರ: ಮಟ್ಕಾ ಆಡಿಸುವವರ ಬಳಿ ಲಂಚಕ್ಕೆ ಬೇಡಿಕೆ ಇಟ್ಟು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ ಪೊಲೀಸ್ ಸಿಬ್ಬಂದಿಗೆ 8 ವರ್ಷಗಳ ಬಳಿಕ ಕಾರವಾರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎರಡೂವರೆ ವರ್ಷ ಜೈಲು ಶಿಕ್ಷೆ ಹಾಗೂ 20 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

    ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಮೂಲದ ಪೊಲೀಸ್‌ ಸಿಬ್ಬಂದಿ ಮುರುಳೀಧರ ನಾಯ್ಕ ಶಿಕ್ಷೆಗೊಳಗಾದ ಆರೋಪಿ.

    2017ರಲ್ಲಿ ಪಿಗ್ನಿ ಏಜೆಂಟ್ ಚಂದ್ರಹಾಸ ಎನ್ನುವವರು ಮಟ್ಕಾ ಹಣವನ್ನು ಸಂಗ್ರಹಿಸುವ ವಿಷಯ ಅರಿತ ಪೊಲೀಸ್ ಸಿಬ್ಬಂದಿ ಮುರುಳೀಧರ ನಾಯ್ಕ ಅವರು ಪ್ರತಿ ಎರಡು ವಾರಕ್ಕೆ 22 ಸಾವಿರ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದರು.

    ಈ ಸಂಬಂಧ ಲೋಕಾಯುಕ್ತ ಪೊಲೀಸರಿಗೆ ಮಾಹಿತಿ ನೀಡಿ ದೂರು ನೀಡಿದ್ದ ಚಂದ್ರಹಾಸ್ ಎನ್ನುವವರು ಮುರುಳೀಧರ್ ನಾಯ್ಕ 22 ಸಾವಿರ ಲಂಚದ ಹಣ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದರು.
    ಈ ಪ್ರಕರಣ ಎಂಟು ವರ್ಷಗಳ ಸುದೀರ್ಘ ವಾದ-ಪ್ರತಿವಾದ ನಡೆದು ಕಾರವಾರದ ಜಿಲ್ಲಾ ನ್ಯಾಯಾಧೀಶ ಡಿ.ಎಸ್.ವಿಜಯಕುಮಾರ್ ತೀರ್ಪು ನೀಡಿದ್ದಾರೆ.

  • ದೆಹಲಿಯಲ್ಲಿ ಯುವಕನ ಬರ್ಬರ ಕೊಲೆ – ಲೇಡಿ ಡಾನ್‌ ಜಿಕ್ರಾ ತಂಡದಿಂದ ಕೃತ್ಯ

    ದೆಹಲಿಯಲ್ಲಿ ಯುವಕನ ಬರ್ಬರ ಕೊಲೆ – ಲೇಡಿ ಡಾನ್‌ ಜಿಕ್ರಾ ತಂಡದಿಂದ ಕೃತ್ಯ

    – ಪುತ್ರನ ಹತ್ಯೆ ಮಾಡುವುದಾಗಿ ಹಲವು ಬಾರಿ ಬೆದರಿಕೆ ಹಾಕಿದ್ದಳು: ತಂದೆ
    – 3 ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದ ಜಿಕ್ರಾ

    ನವದೆಹಲಿ: ದೆಹಲಿಯ (Delhi) ಸೀಲಾಂಪುರ್‌ನಲ್ಲಿ ಗುರುವಾರ ಸಂಜೆ ನಡೆದ 17 ವರ್ಷದ ಬಾಲಕನ ಕೊಲೆಯ (Murder) ಹಿಂದೆ ಲೇಡಿ ಡಾನ್  ಪಾತ್ರವಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

    ಗುರುವಾರ ಸಂಜೆ 7:30 ವೇಳೆಗೆ ತನ್ನ ಮನೆಯ ಸಮೀಪದ ಅಂಗಡಿಯಿಂದ ಹಾಲು ಖರೀದಿಸಲು ಹೋಗಿದ್ದ ಕುನಾಲ್ ಕುಮಾರ್‌ನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿತ್ತು.

    ಚಾಕುಗಳನ್ನು ಹಿಡಿದಿದ್ದ ಐವರು ಸೀಲಾಂಪುರ್‌ನ ಜೆ ಬ್ಲಾಕ್‌ನ ಕಿರಿದಾದ ಓಣಿಗಳಲ್ಲಿ ಪರಾರಿಯಾಗುವ ಮೊದಲು ಕುನಾಲ್‌ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

    ಕುಮಾರ್ ಕುಟುಂಬ ಮತ್ತು ಸ್ಥಳೀಯರು ಈ ಹತ್ಯೆಯನ್ನು ಜಿಕ್ರಾ (Ziqra) ಮತ್ತು ಆಕೆಯ ಸಹೋದರ ಸಾಹಿಲ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಆರೋಪ ಕೇಳಿ ಬರುತ್ತಿದ್ದಂತೆ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.  ಇದನ್ನೂ ಓದಿ: ಇಬ್ಬರು ಗಂಡು ಮಕ್ಕಳನ್ನು ಕೊಂದು ಐದನೇ ಮಹಡಿಯಿಂದ ಜಿಗಿದ ಮಹಿಳೆ

    ನನ್ನ ತಮ್ಮ ಹಾಲು ತರಲು ಹೊರಗೆ ಹೋಗಿದ್ದ. ಯಾರೋ ಅವನನ್ನು ಹೊರಗೆ ಕರೆದರು. ಕೇವಲ ಮೂರು ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಯಾದ ಜಿಕ್ರಾ ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾಳೆ ಎಂದು ಕುನಾಲ್‌ ಸಹೋದರಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾಳೆ.

    ಕುನಾಲ್‌ ತಂದೆ ಪ್ರತಿಕ್ರಿಯಿಸಿ, ಜಿಕ್ರಾ ಹಲವು ಬಾರಿ ನನ್ನ ಪುತ್ರನಿಗೆ ಬೆದರಿಕೆ ಹಾಕಿದ್ದಳು. ಅವಕಾಶ ಸಿಕ್ಕರೆ ನನ್ನ ಮಗನನ್ನು ಕೊಲ್ಲುವುದಾಗಿ ಹೇಳಿದ್ದಳು ಎಂದು ತಿಳಿಸಿದರು. ಇದನ್ನೂ ಓದಿ: ಬರ್ತ್‌ಡೇ ಖುಷಿಯಲ್ಲಿದ್ದ ಲವ್ಲಿ ಸ್ಟಾರ್ ಪ್ರೇಮ್‌ಗೆ ಶಾಕ್ ಕೊಟ್ಟ ನಿರ್ಮಾಪಕಿ

    ಯಾರು ಈ ಲೇಡಿ ಡಾನ್‌?
    ಇನ್‌ಸ್ಟಾಗ್ರಾಮ್‌ನಲ್ಲಿ ಲೇಡಿ ಡಾನ್ ಎಂದು ಕರೆದುಕೊಳ್ಳುವ ಜಿಕ್ರಾ ಗ್ಯಾಂಗ್‌ಸ್ಟಾರ್, ಕುಖ್ಯಾತ ದರೋಡೆಕೋರ ಹಾಶಿಮ್ ಬಾಬಾನ ಪತ್ನಿಯಾಗಿದ್ದಾಳೆ. ಕಳೆದ ವರ್ಷ ದಕ್ಷಿಣ ದೆಹಲಿಯ ಗ್ರೇಟರ್ ಕೈಲಾಶ್ ಪ್ರದೇಶದಲ್ಲಿ ಜಿಮ್ ಮಾಲೀಕ ನಾದಿರ್ ಶಾ ಕೊಲೆ ಸೇರಿದಂತೆ ಹಲವಾರು ಹೈ ಪ್ರೊಫೈಲ್ ಪ್ರಕರಣಗಳಲ್ಲಿ ಹಶಿಮ್‌ ಬಾಬಾನ ಪಾತ್ರವಿದ್ದು ಸದ್ಯ ಜೈಲಿನಲ್ಲಿದ್ದಾನೆ.

    ಜಿಕ್ರಾ ಸುಮಾರು 10 ರಿಂದ 15 ಯುವಕರ ಗುಂಪನ್ನು ಕಟ್ಟಿಕೊಂಡು ಸುತ್ತಾಡುತ್ತಿರುತ್ತಾಳೆ. ಸಾಮಾಜಿಕ ಜಾಲತಾಣದಲ್ಲಿ ಆಯುಧಗಳನ್ನು ಪ್ರದರ್ಶಿಸುವ ವಿಡಿಯೋವನ್ನು ಅಪ್ಲೋಡ್‌ ಮಾಡುತ್ತಿರುತ್ತಾಳೆ. ಕಳೆದ ತಿಂಗಳು ಜಿಕ್ರಾ ದೇಶೀಯ ಪಿಸ್ತೂಲ್ ಅನ್ನು ಪ್ರದರ್ಶಿಸುವ ವೀಡಿಯೊವನ್ನು ಪೋಸ್ಟ್‌ ಮಾಡಿದ್ದಳು. ಶಸ್ತಾಸ್ತ್ರ ಕಾಯ್ದೆಯಡಿಯಲ್ಲಿ ಆಕೆಯನ್ನು ಬಂಧಿಸಿ ಜೈಲಿಗೆ ಹಾಕಲಾಗಿತ್ತು ಮತ್ತು ವಿಡಿಯೋವನ್ನು ತೆಗೆಯಲಾಗಿತ್ತು.

    ಇನ್‌ಸ್ಟಾಗ್ರಾಮ್‌ನಲ್ಲಿ ಪ್ಯಾಲೆಸ್ತೀನ್‌ ಧ್ವಜವನ್ನು ಹಾಕಿರುವ ಈಕೆಯ sher_di_sherni_00 ಖಾತೆಯನ್ನು 15 ಸಾವಿರಕ್ಕೂ ಹೆಚ್ಚು ಮಂದಿ ಫಾಲೋ ಮಾಡುತ್ತಿದ್ದಾರೆ. ಜಿಕ್ರಾ ಆಗಾಗ ಪಿಸ್ತೂಲ್ ತೋರಿಸುತ್ತಾ ಸುತ್ತಾಡುತ್ತಾಳೆ ಎಂದು ಸ್ಥಳೀಯರು ಹೇಳಿದ್ದಾರೆ.