Tag: police

  • ಅಣ್ಣ ಶ್ರೀಮಂತ ಆಗ್ಬಿಟ್ಟ ಅಂತ ತಮ್ಮ ಮಾಡಿದ್ದೆಂತ ನೀಚ ಕೆಲ್ಸ ಗೊತ್ತಾ? – ಹಂತಕ ಸಿಕ್ಕಿಬಿದ್ದಿದ್ದೇ ರೋಚಕ!

    ಅಣ್ಣ ಶ್ರೀಮಂತ ಆಗ್ಬಿಟ್ಟ ಅಂತ ತಮ್ಮ ಮಾಡಿದ್ದೆಂತ ನೀಚ ಕೆಲ್ಸ ಗೊತ್ತಾ? – ಹಂತಕ ಸಿಕ್ಕಿಬಿದ್ದಿದ್ದೇ ರೋಚಕ!

    ಚಿಕ್ಕೋಡಿ: ಅಣ್ಣ ಹೆಚ್ಚು ಹೆಚ್ಚು ಹಣ (Money) ಸಂಪಾದನೆ ಮಾಡಿ ಬೆಳವಣಿಗೆ ಆಗುವುದನ್ನು ಸಹಿಸದೇ, ಸ್ವಂತ ತಮ್ಮನೇ ಅಣ್ಣನನ್ನ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆಗೈದ ಘಟನೆ ಹುಕ್ಕೇರಿ (Hukkeri) ತಾಲೂಕಿನ ಪಾಶ್ಚಾಪೂರ ಗ್ರಾಮದದಲ್ಲಿ ನಡೆದಿದೆ.

    ಹಟ್ಟಿ ಆಲೂರು ಗ್ರಾಮದ ರಾಯಪ್ಪ ಕಮತಿ (28) ಹತ್ಯೆಯಾದ ದುರ್ದೈವಿ. ಈತನ ತಮ್ಮ ಬಸವರಾಜ ಕಮತಿ ಹತ್ಯೆಗೈದ ಆರೋಪಿಯಾಗಿದ್ದಾನೆ.

    ಒಂದು ತಿಂಗಳ ಹಿಂದೆ ಗ್ರಾಮದ ಹೊರವಲಯದಲ್ಲಿ ರಾಯಪ್ಪ ಕಮತಿ ಕುರಿ ಮೇಯಿಸಲು ತೆರಳಿದ್ದಾಗ ಹತ್ಯೆಯಾಗಿತ್ತು. ಈ ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರಿಗೆ (Police) ಯಾವುದೇ ಸುಳಿವು ಸಿಕ್ಕಿರಲಿಲ್ಲ. ಒಂದು ತಿಂಗಳ ತನಿಖೆ ಬಳಿಕ ಕೊಲೆ ಮಾಡಿರುವುದು ಹತ್ಯೆಯಾದವನ ತಮ್ಮನೇ ಎಂದು ಗೊತ್ತಾಗಿದೆ. ಇದನ್ನೂ ಓದಿ: ಸುಹಾಸ್ ಶೆಟ್ಟಿ ಹತ್ಯೆ ಕೇಸ್ – ಮಂಗಳೂರಿಗೆ ಆಗಮಿಸಿದ ಎನ್‍ಐಎ ತಂಡ

    ಯಮನಕನಮರಡಿ ಇನ್ಸ್‌ಪೆಕ್ಟರ್‌ ಜಾವೇದ ಮುಶಾಪುರೆ ಹಾಗೂ ಅವರ ತಂಡ ಕೊಲೆ ಆರೋಪಿಯನ್ನು ಪತ್ತೆಮಾಡಿದ್ದೇ ರೋಚಕ! ಅಷ್ಟಕ್ಕೂ ಆರೋಪಿ ಕೊಲೆಗೂ ಮುನ್ನ ಮೊಬೈಲ್‍ನ್ನು (Mobile) ಮನೆಯಲ್ಲೇ ಇಟ್ಟು ಹೋಗಿದ್ದ. ಇದರಿಂದ ಟೆಕ್ನಿಕಲ್ ಎವಿಡೆನ್ಸ್ ಕೂಡ ಸಿಕ್ಕಿರಲಿಲ್ಲ. ಹಂತಕ ಚಾಪೆ ಕೆಳಗೆ ತೂರಿದರೆ, ಪೊಲೀಸರು ರಂಗೋಲಿ ಕೆಳಗೆ ತೂರಿ ಆತನ ಬಾಯ್ಬಿಡಿಸಿದ್ದಾರೆ.

    ಕೊಲೆಗಾರ ಬಸವರಾಜ್, ಕೊಲೆ ಮಾಡಿ ಮನೆಗೆ ಬಂದು ಆರಾಮಾಗಿ ಯಾವುದೇ ಸಂಶಯ ಬಾರದಂತೆ ಇದ್ದ. ಈತನ ಅಣ್ಣ ನಾಪತ್ತೆ ಆಗಿದ್ದಾನೆ ಎಂಬ ವಿಚಾರ ಸುದ್ದಿಯಾಗುತ್ತದೆಯೋ ಆಗ ಮನೆಯಲ್ಲಿ, ಅಣ್ಣನನ್ನು ಹುಡುಕಲು ಹೇಳಿದ್ದಾರೆ. ಈ ವೇಳೆ ಆರೋಪಿ, ಅಣ್ಣನ ಮೊಬೈಲ್‍ಗೆ ಒಂದೇ ಸಲ ಕರೆ ಮಾಡಿ ಸುಮ್ಮನಾಗಿದ್ದ. ಇದು ಪೊಲೀಸರ ಗಮನಕ್ಕೆ ಬಂದ ಮೇಲೆ, ಅಣ್ಣನನ್ನು ಹುಡುಕಬೇಕಿದ್ದರೆ ಸತತವಾಗಿ ಆತನ ಮೊಬೈಲ್‍ಗೆ ಕರೆ ಮಾಡಬೇಕಿದ್ದ ತಮ್ಮ, ಯಾಕೆ ಒಂದೇ ಬಾರಿ ಕರೆ ಮಾಡಿದ್ದ ಎಂದು ಆಲೋಚಿಸಿದ್ದರು. ಆತನನ್ನು ಪೊಲೀಸರು ಕರೆದು ವಿಚಾರಣೆ ನಡೆಸಿದಾಗ, ಸತ್ಯ ಬಯಲಿಗೆ ಬಂದಿದೆ.

    ಅಣ್ಣ ಹೆಚ್ಚು ದುಡಿದು ಹೆಚ್ಚು ಸಂಪಾದನೆ ಮಾಡಿದ್ದನ್ನ ಸಹಿಸದೇ ಕೊಲೆ ಮಾಡಿರುವುದಾಗಿ ತಮ್ಮ ಬಸವರಾಜ್ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: 1.57 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದ ಕೇರ್ ಟೇಕರ್ ಲೇಡಿ ಅರೆಸ್ಟ್

  • ಬೆಂಗಳೂರು | 10 ಕೋಟಿ ಮೌಲ್ಯದ ಮಾದಕವಸ್ತು ಸಾಗಾಟ – ವಿದೇಶಿ ಮಹಿಳೆ ಅರೆಸ್ಟ್

    ಬೆಂಗಳೂರು | 10 ಕೋಟಿ ಮೌಲ್ಯದ ಮಾದಕವಸ್ತು ಸಾಗಾಟ – ವಿದೇಶಿ ಮಹಿಳೆ ಅರೆಸ್ಟ್

    ಬೆಂಗಳೂರು: 10 ಕೋಟಿ ರೂ. ಮೌಲ್ಯದ ಮಾದಕವಸ್ತು ಸಾಗಾಟ ಮಾಡುತ್ತಿದ್ದ ವಿದೇಶಿ ಮಹಿಳೆಯನ್ನು ಸಿಸಿಬಿ (CCB) ಮತ್ತು ಚಿಕ್ಕಜಾಲ ಪೊಲೀಸರು (Police) ಬಂಧಿಸಿದ್ದಾರೆ. ಬಂಧಿತ ಮಹಿಳೆಯಿಂದ 10 ಕೋಟಿ ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತು ವಶಕ್ಕೆ ಪಡೆದಿದ್ದಾರೆ.

    ಬಂಧಿತ ಮಹಿಳೆ ಕಳೆದ 3 ವರ್ಷದ ಹಿಂದೆ ಬ್ಯುಸಿನೆಸ್ ವೀಸಾದಲ್ಲಿ ಭಾರತಕ್ಕೆ (India) ಬಂದಿದ್ದಳು. ಆರಂಭದಲ್ಲಿ ನವದೆಹಲಿಯಲ್ಲಿ ವಾಸವಾಗಿದ್ದಳು. ನಂತರ ತೆಲಂಗಾಣ ಯೂನಿವರ್ಸಿಟಿಯಲ್ಲಿ ವ್ಯಾಸಂಗ ಮಾಡುವುದಾಗಿ ಎಜುಕೇಷನ್ ವೀಸಾ ಪಡೆದಿದ್ದಳು. ನಂತರ ಕಾಲೇಜಿಗೆ ದಾಖಲಾಗದೆ ಡ್ರಗ್ಸ್ ಪೆಡ್ಲಿಂಗ್‍ಗೆ ಇಳಿದಿದ್ದಳು. ಇದನ್ನೂ ಓದಿ: Plane Crash – ಪತ್ನಿಯ ಕೊನೆಯ ಆಸೆಯನ್ನು ಈಡೇರಿಸಿ ಹಿಂತಿರುಗುವಾಗ ಪತಿ ಸಾವು!

    ದೆಹಲಿಯಿಂದ ಬೆಂಗಳೂರಿಗೆ (Bengaluru) ಬಸ್ ಮೂಲಕ ಮಾದಕವಸ್ತು ಸಾಗಾಟ ಮಾಡಿದ್ದಳು. ಚಿಕ್ಕಜಾಲ ಠಾಣಾ ವ್ಯಾಪ್ತಿಯ ರಾಜಾನುಕುಂಟೆ ಬಳಿ ಮಾದಕವಸ್ತು ವ್ಯಾಪಾರ ಮಾಡುವಾಗ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಬಂಧಿತಳಿಂದ 5 ಕೆಜಿ 325ಗ್ರಾಂ ಎಂಡಿಎಂಎ ಹಾಗೂ ಆ್ಯಪಲ್ ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ.

    ಮಹಿಳೆ, ಹೊಸ ಚೂಡಿದಾರ್ ಡ್ರೆಸ್ ಪೀಸ್‍ಗಳ ಮಧ್ಯೆ ಮಾದಕವಸ್ತು ಅಡಗಿಸಿಕೊಂಡು ದೆಹಲಿಯಿಂದ ಬೆಂಗಳೂರಿಗೆ ತರುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ದುರಂತ – ಕಪ್ಪು ಪಟ್ಟಿ ಧರಿಸಿ ಟೀಂ ಇಂಡಿಯಾ ಆಟಗಾರರಿಂದ ಮೌನಾಚರಣೆ

  • ನನ್ನನ್ನು ಕಂಡರೆ ಸರ್ಕಾರಕ್ಕೆ ಭಯ, ಆರ್‌ಸಿಬಿ ಕೇಸ್‌ ತಿರುಗಿಸಲು ಮಾಹಿತಿ ಕೇಳಿರಬಹುದು: ಸೂಲಿಬೆಲೆ

    ನನ್ನನ್ನು ಕಂಡರೆ ಸರ್ಕಾರಕ್ಕೆ ಭಯ, ಆರ್‌ಸಿಬಿ ಕೇಸ್‌ ತಿರುಗಿಸಲು ಮಾಹಿತಿ ಕೇಳಿರಬಹುದು: ಸೂಲಿಬೆಲೆ

    – ನನ್ನ ವಿರುದ್ಧ 5 ಕೇಸ್‌ಗಳು ದಾಖಲು
    – ಸಿದ್ದರಾಮಯ್ಯ ಸಿಎಂ ಆದ ಮೇಲೆ ದಾಖಲಾದ ಕೇಸ್‌

    ಬೆಂಗಳೂರು: ನನ್ನ ಮೇಲೆ ಒಂದೇ ಒಂದು ಕೋಮುದ್ವೇಷದ ಪ್ರಕರಣವಿಲ್ಲ. ಆರ್‌ಸಿಬಿ ಕಾಲ್ತುಳಿತವನ್ನು (RCB Stampede) ಮರೆಸಲು ಜನರ ಮೂಡ್ ಡೈವರ್ಟ್ ಮಾಡಲು ಸರ್ಕಾರ ಹೀಗೆ ಮಾಡುತ್ತಿರಬಹುದು ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarti Sulibele) ಹೇಳಿದ್ದಾರೆ.

    ತನ್ನ ವಿರುದ್ಧ ಪೊಲೀಸ್‌ ಇಲಾಖೆ (Police Department) ಪ್ರಕರಣಗಳ ಬಗ್ಗೆ ಮಾಹಿತಿ ಕೇಳಿದ್ದಕ್ಕೆ ಪಬ್ಲಿಕ್‌ ಟಿವಿಗೆ ಪ್ರತಿಕ್ರಿಯಿಸಿದ ಅವರು, ಇದು ಕಾಂಗ್ರೆಸ್ (Congress) ಚಾಳಿಯಾಗಿದ್ದು ಹೊಸದೇನು ಅಲ್ಲ. ಸಿದ್ದರಾಮಯ್ಯ ಸರ್ಕಾರ ಹೆದರಿಕೊಂಡಿದ್ದು ಜಿಲ್ಲೆಗಳಿಗೆ ಹೋಗದಂತೆ ನಿರ್ಬಂಧ ಮಾಡಿ ಗೂಂಡಾ ಕಾಯ್ದೆ ಹಾಕಲು ಪ್ರಯತ್ನ ನಡೆಯುತ್ತಿರಬಹುದು ಎಂದು ತಿಳಿಸಿದರು.

     

    ನನ್ನ ಧ್ವನಿಯನ್ನು ಕಡಿಮೆ ಮಾಡಲು ಸರ್ಕಾರ ಈ ರೀತಿ ಮಾಡುತ್ತಿದೆ. ಇದಕ್ಕೆ ನಾನು ಹೆದರುವ ಜನ ನಾವಲ್ಲ. ಕಾಂಗ್ರೆಸ್‌ಗೆ ಮುಂದಿನ ದಿನಗಳಲ್ಲಿ ನಾನು ತೊಡಕಾಗಬಹುದು ಎಂಬ ಆತಂಕವಿದೆ. 2022-25 ರ ನನ್ನ ವಿರುದ್ಧದ ಪ್ರಕರಣಗಳ ಬಗ್ಗೆ ಕಷ್ಟ ಪಡುವ ಅಗತ್ಯವಿಲ್ಲ. ನಾನೇ ನನ್ನ ಕೇಸುಗಳ ಮಾಹಿತಿ ಕೊಡುತ್ತೇನೆ. ಕಾಂಗ್ರೆಸ್ ಸರ್ಕಾರ ಅದೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ಆಗಿರುವ ಎಫ್‌ಐಆರ್‌ಗಳು ಎಂದು ಹೇಳಿದರು.

    ನನ್ನ ಬಗ್ಗೆ ಸಿದ್ದರಾಮಯ್ಯ ಸರ್ಕಾರಕ್ಕೆ ಭಯ ಇದ್ದು ಒಟ್ಟು 5 ಕೇಸ್‌ಗಳು ದಾಖಲಾಗಿವೆ. ಎರಡು ಕೇಸ್ ಶಿವಮೊಗ್ಗದಲ್ಲಿ ದಾಖಲಾದರೆ ಇನ್ನು ಎರಡು ಟ್ವೀಟ್‌ಗೆ ಸಂಬಂಧಿಸಿದಂತೆ ದಾಖಲಾಗಿದೆ. ಸಿದ್ದರಾಮಯ್ಯ ವಿರುದ್ಧ ಮಾತನಾಡಿದ್ದಕ್ಕೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರ ಆಸ್ತಿಗೆ ಸಂಬಂಧಪಟ್ಟಂತೆ ಅರೋಗ್ಯ ಪದ ಬಳಕೆ ಮಾಡಿದ್ದೆ. ಅಯೋಗ್ಯ ಪದಕ್ಕೆ ಜಾತಿ ನಿಂದನೆ ಕೇಸ್ ಹಾಕಿದ್ದು ಇದು ಸುಪ್ರೀಂ ಕೋರ್ಟ್‌ನಲ್ಲಿದೆ ಎಂದರು.

    ನಾನು ಇತಿಹಾಸ ಅಷ್ಟೇ ಮಾತನಾಡುತ್ತೇನೆ. ಮಹಮ್ಮದ್‌  ಘಜ್ನಿ, ಘೋರಿ ಬಗ್ಗೆ ಮಾತನಾಡಿದರೆ ಮುಸ್ಲಿಮರಿಗೆ ಮಾತನಾಡಿದ್ದು ಎಂದರೆ ಹೇಗೆ ಎಂದು ಪ್ರಶ್ನಿಸಿದರು.

  • ಪೊಲೀಸರಿಂದ ಸರ್ಕಾರಕ್ಕೆ ಪತ್ರ – ಪ್ರಶ್ನೆ ಕೇಳಿದ್ದಕ್ಕೆ ಉತ್ತರ ನೀಡದೇ ತೆರಳಿದ ಡಿಕೆಶಿ

    ಪೊಲೀಸರಿಂದ ಸರ್ಕಾರಕ್ಕೆ ಪತ್ರ – ಪ್ರಶ್ನೆ ಕೇಳಿದ್ದಕ್ಕೆ ಉತ್ತರ ನೀಡದೇ ತೆರಳಿದ ಡಿಕೆಶಿ

    ಬೆಂಗಳೂರು: ಪೊಲೀಸರು ಸರ್ಕಾರಕ್ಕೆ ಬರೆದ ಪತ್ರದ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಯಾವುದೇ ಉತ್ತರ ನೀಡದೇ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ತೆರಳಿದ ಪ್ರಸಂಗ ಇಂದು ನಡೆಯಿತು.

    ವಿಧಾನಸೌಧದಲ್ಲಿ (Vidhana Soudha) ಆರ್‌ಸಿಬಿ ವಿಜಯೋತ್ಸವ ಆಚರಣೆಗೆ ಅವಕಾಶ ನೀಡಿದರೆ ಬಂದೋಬಸ್ತ್‌ಗೆ ಸಮಸ್ಯೆಯಾಗುತ್ತದೆ ಎಂದು ವಿಧಾನಸೌಧದ ಡಿಸಿಪಿ ಕರಿಬಸವನಗೌಡ ಅವರು ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ(DPAR) ಕಾರ್ಯದರ್ಶಿ ಸತ್ಯವತಿ ಅವರಿಗೆ ಪತ್ರ ಬರೆಯುವ ಮೂಲಕ ಸ್ಪಷ್ಟವಾಗಿ ತಿಳಿಸಿದ್ದರು.

    ಈ ಪತ್ರ ಬಹಿರಂಗವಾದ ಬೆನ್ನಲ್ಲೇ  ಇಂದು ಬೆಳಗ್ಗೆಯಿಂದ ಪಬ್ಲಿಕ್‌ ಟಿವಿ ವರದಿ ಪ್ರಸಾರ ಮಾಡಿತ್ತು. ಈ ಸಂಬಂಧ ಡಿಸಿಎಂ ಅಭಿಪ್ರಾಯ ಪಡೆಯಲು ಪಬ್ಲಿಕ್‌ ಟಿವಿ ಸದಾಶಿವನಗರಕ್ಕೆ ತೆರಳಿತ್ತು.

    ಪತ್ರದ ಬಗ್ಗೆ ಬಿಜೆಪಿಯವರು (BJP) ಒಂದು ಕಡೆ ಪ್ರತಿಭಟನೆ ಮಾಡುತ್ತಿದ್ದರೆ ಇನ್ನೊಂದು ಕಡೆ ಪೊಲೀಸರು ಸರ್ಕಾರಕ್ಕೆ ಬರೆದ ಪತ್ರ ಬಹಿರಂಗವಾಗಿದೆ. ಇದಕ್ಕೆ ಏನು ಹೇಳುತ್ತೀರಿ ಎಂದು ಪಬ್ಲಿಕ್‌ ಟಿವಿ ಪ್ರಶ್ನೆ ಮಾಡಿದೆ. ಈ ಪ್ರಶ್ನೆಗೆ ಡಿಕೆಶಿ ಯಾವುದೇ ಉತ್ತರ ನೀಡದೇ ಕಾರಿನಲ್ಲಿ ಮುಂದೆ ಸಾಗಿದರು. ಇದನ್ನೂ ಓದಿ: Exclusive | ಮತ್ತೊಂದು ಭಂಡಾಟ ಬಯಲು – ಸಿಬ್ಬಂದಿ, ಸಮಯಾವಕಾಶದ ಕೊರತೆ ಅಂದ್ರೂ ಡೋಂಟ್ ಕೇರ್ ಅಂದಿದ್ದ ಸರ್ಕಾರ

     

    ಡಿಸಿಪಿ ಬರೆದ ಪತ್ರದಲ್ಲಿ ಏನಿದೆ?
    ಆರ್‌ಸಿಬಿಗೆ ಅಭಿಮಾನಿಗಳ ಸಂಖ್ಯೆ ಜಾಸ್ತಿ ಇದ್ದು ವಿಧಾನಸೌಧ ಭದ್ರತಾ ವಿಭಾಗದಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಬಂದೋಬಸ್ತ್ ಕರ್ತವ್ಯಕ್ಕೆ ತೊಂದರೆಯಾಗುವ ಸಾಧ್ಯತೆಯಿದೆ.

    ಈ ರೀತಿ ಬೃಹತ್ ಕಾರ್ಯಕ್ರಮಕ್ಕೆ ಕಾನೂನು ಮತ್ತು ಸುವ್ಯವಸ್ಥೆ ಅಧಿಕಾರಿಗಳು ಹಾಗೂ ಸಂಚಾರ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಲು ಸಮಯ ಅವಕಾಶ ಬೇಕಿದೆ. ಇದನ್ನೂ ಓದಿ: ಆರ್‌ಸಿಬಿ ಅಂದ್ರೆ Real Culprits of Bangalore – ವಿಪಕ್ಷ ನಾಯಕ ಆರ್‌. ಅಶೋಕ್‌ ಲೇವಡಿ

    ವಿಧಾನಸೌಧದ ಸಚಿವಾಲಯ ಅಧಿಕಾರಿಗಳು ಸಿಬ್ಬಂದಿ ತಮ್ಮ ತಮ್ಮ ಕುಟುಂಬ ವರ್ಗದವರನ್ನು ಕರೆತರುವ ಸಾಧ್ಯತೆಗಳು ಹೆಚ್ಚಾಗಿದ್ದು ಸಿಬ್ಬಂದಿಗೆ ಕುಟುಂಬ ವರ್ಗದವರನ್ನು ಕರೆತರದಂತೆ ಆದೇಶಿಸಬೇಕು.

    ಭದ್ರತೆ ದೃಷ್ಟಿಯಿಂದ ಸಿಸಿಟಿವಿ ಅಳವಡಿಸಲು ಅವಶ್ಯಕತೆ ಇರುತ್ತದೆ ವಿಧಾನಸೌಧ ಕಟ್ಟಡವು ವೈಟಲ್ ಇನ್ಸ್ಟಾಲೇಶನ್ ಕಟ್ಟಡವಾಗಿದ್ದು ಸಿಸಿಟಿವಿ ಅವಶ್ಯಕತೆ ಹೆಚ್ಚಾಗಿರುತ್ತದೆ.

    ವೇದಿಕೆಯ ಮೇಲೆ ಆಟಗಾರರು ಹಾಗೂ ಮುಖ್ಯಮಂತ್ರಿ ಕುಳಿತುಕೊಳ್ಳುವ ವ್ಯವಸ್ಥೆ ಇರುವುದರಿಂದ ಲೋಕೋಪಯೋಗಿ ಇಲಾಖೆಯಿಂದ ಮುಂಚಿತವಾಗಿಯೇ ವೇದಿಕೆಯನ್ನು ಪರೀಕ್ಷಿಸಬೇಕು ಹಾಗೂ ಕನಿಷ್ಠ ಎರಡು ಗಂಟೆ ಆಯೋಜಕರಿಗೆ ಬಿಟ್ಟುಕೊಡಲು ತಿಳಿಸಬೇಕು.

  • ದಯಾನಂದ್‌ ಅಮಾನತು – ಸರ್ಕಾರದ ನಡೆ ಖಂಡಿಸಿ ಅಂಬೇಡ್ಕರ್‌ ಫೋಟೋ ಹಿಡಿದು ಹೆಡ್ ಕಾನ್‌ಸ್ಟೇಬಲ್‌ ಪ್ರತಿಭಟನೆ

    ದಯಾನಂದ್‌ ಅಮಾನತು – ಸರ್ಕಾರದ ನಡೆ ಖಂಡಿಸಿ ಅಂಬೇಡ್ಕರ್‌ ಫೋಟೋ ಹಿಡಿದು ಹೆಡ್ ಕಾನ್‌ಸ್ಟೇಬಲ್‌ ಪ್ರತಿಭಟನೆ

    ಬೆಂಗಳೂರು: ಪೊಲೀಸ್‌ ಕಮಿಷನರ್‌ ಬಿ.ದಯಾನಂದ್‌ (B.Dayanand) ಅವರನ್ನು ಅಮಾನತುಗೊಳಿಸಿದ್ದ ಸರ್ಕಾರ ಆದೇಶದ ವಿರುದ್ಧ ಮಡಿವಾಳ ಠಾಣೆಯ ಹೆಡ್‌ ಕಾನ್ಸ್‌ಟೇಬಲ್‌ ಒಬ್ಬರು ರಾಜಭವನಕ್ಕೆ ತೆರಳಿ ಪ್ರತಿಭಟನೆ ನಡೆಸಿದ್ದಾರೆ.

    ಹೆಡ್‌ ಕಾನ್ಸ್‌ಟೇಬಲ್‌ (Head Constable) ನರಸಿಂಹರಾಜು ಅವರು ಸರ್ಕಾರದ ನಡೆ ಖಂಡಿಸಿ ರಾಜ್ಯಪಾಲರಿಗೆ ದೂರು ನೀಡಲು ತೆರಳಿದ್ದರು. ಈ ವೇಳೆ ಅಂಬೇಡ್ಕರ್‌ ಫೋಟೋ ಹಿಡಿದು, ಕಪ್ಪುಪಟ್ಟಿ ಧರಿಸಿ ರಾಜಭವನದ ಎದುರು ಅವರು ಪ್ರತಿಭಟನೆ ನಡೆಸಿದ್ದಾರೆ. ದೂರಿನಲ್ಲಿ ಪೊಲೀಸ್‌ ಅಧಿಕಾರಿಗಳ ಅಮಾನತು ಆದೇಶ ರದ್ದು ಪಡಿಸಬೇಕು. ಈ ಮೂಲಕ ಪೊಲೀಸ್‌ ಇಲಾಖೆಗೆ ನೈತಿಕ ಸ್ಥೈರ್ಯ ತುಂಬಬೇಕು ಎಂದು ಬರೆದಿದ್ದಾರೆ. ಅವರನ್ನು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಕಾಲ್ತುಳಿತ ಪ್ರಕರಣ – ಬೆಂಗಳೂರು ಪೊಲೀಸ್‌ ಕಮಿಷನರ್‌ ಸೇರಿ 5 ಪೊಲೀಸ್‌ ಅಧಿಕಾರಿಗಳು ಸಸ್ಪೆಂಡ್‌

    ಬುಧವಾರ ಆರ್‌ಸಿಬಿ (RCB) ವಿಜಯೋತ್ಸವದ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತಕ್ಕೆ 11 ಅಭಿಮಾನಿಗಳು ಸಾವನ್ನಪ್ಪಿದ್ದರು. ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ವಿಧಾನಸೌಧ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಾಗರೋಪಾದಿಯಲ್ಲಿ ಜನ ನೆರೆದಿದ್ದರು. ಜನರಲ್ಲಿ ನೂಕುನುಗ್ಗಲಿಂದ ಕಾಲ್ತುಳಿತ ಉಂಟಾಗಿ ಈ ದುರಂತ ಸಂಭವಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸ್‌ ಕಮಿಷನರ್‌ ಸೇರಿದಂತೆ ಐವರು ಪೊಲೀಸ್‌ ಅಧಿಕಾರಿಗಳನ್ನು ಅಮಾನತುಗೊಳಿಸಿ ಸರ್ಕಾರ ಗುರುವಾರ ಆದೇಶ ಹೊರಡಿಸಿತ್ತು.

    ಪೊಲೀಸ್‌ ಕಮಿಷನರ್‌ ಬಿ.ದಯಾನಂದ್‌, ಅಡಿಷನಲ್‌ ಕಮಿಷನರ್‌ ವಿಕಾಸ್‌ ಕುಮಾರ್‌, ಸೆಂಟ್ರಲ್‌ ಡಿಸಿಪಿ ಶೇಖರ್‌ ತೆಕ್ಕಣ್ಣನವರ್‌, ಎಸಿಪಿ ಬಾಲಕೃಷ್ಣ, ಇನ್‌ಸ್ಪೆಕ್ಟರ್‌ ಗಿರೀಶ್‌ ಅವರನ್ನು ಅಮಾನತು ಮಾಡಲಾಗಿತ್ತು. ಇದನ್ನೂ ಓದಿ: ಬೆಂಗಳೂರು ನೂತನ ಪೊಲೀಸ್‌ ಕಮಿಷನರ್‌ ಆಗಿ ಸೀಮಂತ್‌ ಕುಮಾರ್‌ ಸಿಂಗ್‌ ನೇಮಕ

  • ಅತ್ಯಂತ ಕರಾಳ ದಿನ, ಡಿಸಿಎಂ ಅಪರಾಧಿ ಅನ್ನೋದು ರಾಜ್ಯಕ್ಕೆ ಗೊತ್ತಿದೆ: ಭಾಸ್ಕರ್‌ ರಾವ್‌ ಆಕ್ರೋಶ

    ಅತ್ಯಂತ ಕರಾಳ ದಿನ, ಡಿಸಿಎಂ ಅಪರಾಧಿ ಅನ್ನೋದು ರಾಜ್ಯಕ್ಕೆ ಗೊತ್ತಿದೆ: ಭಾಸ್ಕರ್‌ ರಾವ್‌ ಆಕ್ರೋಶ

    ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ (Chinnaswamy Stadium Stampede Case) ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಬಿ ದಯಾನಂದ್‌ (B Dayananda) ಅವರನ್ನು ಅಮಾನತು ಮಾಡಿದ್ದಕ್ಕೆ ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ (Bhaskar Rao) ಕಿಡಿಕಾರಿದ್ದಾರೆ.

    ಎಕ್ಸ್‌ನಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಅಮಾನತು ಕರ್ನಾಟಕ ಪೊಲೀಸ್ (Karnataka Police) ಇತಿಹಾಸದಲ್ಲಿ ಅತ್ಯಂತ ಕರಾಳ ದಿನ ಎಂದು ಪೋಸ್ಟ್‌ ಮಾಡಿದ್ದಾರೆ.


    ಪೋಸ್ಟ್‌ನಲ್ಲಿ ಏನಿದೆ?
    ಸಿದ್ದರಾಮಯ್ಯ (Siddaramaiah) ಅವರು ಭಯಗೊಂಡಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನು ಅಮಾನತು ಮಾಡಿರುವುದು ಕರ್ನಾಟಕ ಪೊಲೀಸ್ ಇತಿಹಾಸದಲ್ಲಿ ಅತ್ಯಂತ ಕರಾಳ ದಿನ. ಸತ್ಯ ಹೇಳಿದ್ದಕ್ಕೆ ಅವರಿಗೆ ಶಿಕ್ಷೆಯ ರೂಪದಲ್ಲಿ ಬಹುಮಾನ ನೀಡಿದ್ದಾರೆ. ಇದನ್ನೂ ಓದಿ: Stampede Case | ಸಿಎಂ ಸೂಚನೆ ಬೆನ್ನಲ್ಲೇ ನಾಲ್ವರು ಅರೆಸ್ಟ್‌, ಉಳಿದವರು ಎಸ್ಕೇಪ್‌

    ದಯಾನಂದ್‌ ಮತ್ತು ಅವರ ತಂಡ ಬೆಂಗಳೂರನ್ನು ಸುರಕ್ಷಿತವಾಗಿಡಲು ಇಡೀ ರಾತ್ರಿ ಶ್ರಮಿಸಿತ್ತು. ಸಾವಿನ ಪರೇಡ್‌ ನಡೆಸಲು ಕಾರಣರಾದ ಉಪಮುಖ್ಯಮಂತ್ರಿಯೇ ಈ ಪ್ರಕರಣದಲ್ಲಿ ಪ್ರಮುಖ ಅಪರಾಧಿ ಎಂದು ಕರ್ನಾಟಕದ ಎಲ್ಲರಿಗೂ ತಿಳಿದಿದೆ.

    ಯಾವುದೇ ಮುಖ್ಯಮಂತ್ರಿ ಇಷ್ಟು ಅಸಹಾಯಕ, ಹೇಡಿಯಾಗಲು ಸಾಧ್ಯವಿಲ್ಲ. ಸರ್ಕಾರದ ಕೈಗೆ ರಕ್ತ ಅಂಟಿಕೊಂಡಿದ್ದು ಈಗ ನಿಯಂತ್ರಣವನ್ನು ಕಳೆದುಕೊಂಡಿದ್ದು ಅಪಾಯದಲ್ಲಿದೆ.

  • ಆಸ್ಟ್ರೇಲಿಯಾ ಪೊಲೀಸರ ಕ್ರೌರ್ಯ – ಕೋಮಾಗೆ ಜಾರಿದ ಭಾರತೀಯ

    ಆಸ್ಟ್ರೇಲಿಯಾ ಪೊಲೀಸರ ಕ್ರೌರ್ಯ – ಕೋಮಾಗೆ ಜಾರಿದ ಭಾರತೀಯ

    – ನಾನೇನೂ ತಪ್ಪು ಮಾಡಿಲ್ಲ ಎಂದು ಕಿರುಚಿದರೂ ಬಿಡದ ಪೊಲೀಸರು

    ಕ್ಯಾನ್‌ಬೆರಾ: ಆಸ್ಟ್ರೇಲಿಯಾ (Australia) ಪೊಲೀಸರು (Police) ಭಾರತೀಯ (India) ಮೂಲದ ವ್ಯಕ್ತಿಯೊಬ್ಬರನ್ನು ನೆಲಕ್ಕೆ ಕೆಡವಿ ಕುತ್ತಿಗೆ ಮೇಲೆ ಮೊಣಕಾಲಿನಿಂದ ಒತ್ತಿ ಹಿಡಿದಿದ್ದರಿಂದ ಅವರು ಕೋಮಾಗೆ ಜಾರಿದ್ದಾರೆ ಎಂದು ವರದಿಯಾಗಿದೆ.

    ಅಡಿಲೇಡ್‌ ಪೊಲೀಸರು ಭಾರತೀಯ ಮೂಲದ ಗೌರವ್ ಕುಂಡಿ (42) ಅವರ ಜೊತೆ ಹಿಂಸಾತ್ಮಕವಾಗಿ ವರ್ತಿಸಿದ್ದು, ಅವರ ಮೆದುಳಿಗೆ ಹಾನಿಯಾಗಿದೆ ಎನ್ನಲಾಗಿದೆ. ಗುರುವಾರ ಮುಂಜಾನೆ ಅಡಿಲೇಡ್‌ನಲ್ಲಿ ಗೌರವ್ ಮತ್ತು ಅವರ ಸಂಗಾತಿ ಅಮೃತಪಾಲ್ ಕೌರ್ ಜೋರಾಗಿ ಮಾತನಾಡುತ್ತಿದ್ದರು. ಇದನ್ನು ಗಸ್ತು ತಿರುಗುತ್ತಿದ್ದ ಪೊಲೀಸರು ಕೌಟುಂಬಿಕ ಹಿಂಸಾಚಾರ ಎಂದು ತಪ್ಪಾಗಿ ಗ್ರಹಿಸಿ ಅವರನ್ನು ಬಂಧಿಸಲು ಮುಂದಾಗಿದ್ದಾರೆ. ಈ ವೇಳೆ ಈ ಅವಘಡ ಸಂಭವಿಸಿದೆ. ಇದನ್ನೂ ಓದಿ: ಪಾಕ್‌ನ 48 ಗಂಟೆಗಳ ಪ್ಲ್ಯಾನ್‌, 8 ಗಂಟೆಗಳಲ್ಲೇ ಬುಡಮೇಲು; ಸಿಡಿಎಸ್

    ಈ ವೇಳೆ ‘ನಾನು ಯಾವುದೇ ತಪ್ಪು ಮಾಡಿಲ್ಲ’ ಎಂದು ಗೌರವ್‌ ಕೂಗಿದ್ದಾರೆ. ಕೌರ್ ಈ ಕೃತ್ಯವನ್ನು ವೀಡಿಯೋ ಮಾಡುತ್ತಿದ್ದರು. ಈ ವೇಳೆ ಪೊಲೀಸರು ಅವರ ಕತ್ತಿನ ಮೇಲೆ ಮೊಣಕಾಲಿಟ್ಟಾಗ ನನಗೆ ಭಯವಾಗಿ ವೀಡಿಯೋ ಮಾಡುವುದನ್ನು ನಿಲ್ಲಿಸಿದೆ. ಗೌರವ್‌ ತಲೆ ರಸ್ತೆಗೆ ಬಡಿದು ಪ್ರಜ್ಞಾಹೀನರಾದರು ಎಂದು ಕೌರ್‌ ಹೇಳಿಕೊಂಡಿದ್ದಾರೆ.

    ಬಳಿಕ ಗೌರವ್‌ ಅವರನ್ನು ರಾಯಲ್ ಅಡಿಲೇಡ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರ ಮೆದುಳು ಮತ್ತು ಕುತ್ತಿಗೆಯ ನರಗಳಿಗೆ ತೀವ್ರ ಹಾನಿಯಾಗಿದೆ ಎಂದು ವೈದ್ಯರು ಹೇಳಿದ್ದಾರೆ. ದಕ್ಷಿಣ ಆಸ್ಟ್ರೇಲಿಯಾ ಪೊಲೀಸರು ಈ ಬಗ್ಗೆ ಆಂತರಿಕ ತನಿಖೆ ಪ್ರಾರಂಭಿಸಿದ್ದಾರೆ. ಪೊಲೀಸರ ಬಾಡಿ-ಕ್ಯಾಮ್ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಪಿಒಕೆ ಮೂಲದ ಉಗ್ರನ ಭೂಮಿ ವಶ

  • ಬೆಳಗಾವಿಯಲ್ಲಿ ಅಪ್ರಾಪ್ತೆಯ ಮೇಲೆ ಗ್ಯಾಂಗ್ ರೇಪ್| ಐವರನ್ನು ಬಂಧಿಸಿದ್ದೇವೆ: ಪರಮೇಶ್ವರ್‌

    ಬೆಳಗಾವಿಯಲ್ಲಿ ಅಪ್ರಾಪ್ತೆಯ ಮೇಲೆ ಗ್ಯಾಂಗ್ ರೇಪ್| ಐವರನ್ನು ಬಂಧಿಸಿದ್ದೇವೆ: ಪರಮೇಶ್ವರ್‌

    ಬೆಂಗಳೂರು: ಬೆಳಗಾವಿಯಲ್ಲಿ ನಡೆದ ಗ್ಯಾಂಗ್ ರೇಪ್ (Belagavi Minor Gang Rape Case) ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 5 ಜನರನ್ನು ಬಂಧನ ಮಾಡಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ (Parameshwar) ತಿಳಿಸಿದ್ದಾರೆ.

    ಘಟನೆ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬೆಳಗಾವಿಯಲ್ಲಿ ಗ್ಯಾಂಗ್ ರೇಪ್ ಪ್ರಕರಣ ಬಹಳ ಹಿಂದೆ ನಡೆದಿದೆ. ಡಿಸೆಂಬರ್, ಜನವರಿಯಲ್ಲಿ ನಡೆದಿರುವ ಘಟನೆಯ ಬಗ್ಗೆ ಯಾರು ದೂರು ಕೊಟ್ಟಿರಲಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಪ್ರಚೋದನಕಾರಿ ಭಾಷಣ – ಕಲ್ಲಡ್ಕ ಪ್ರಭಾಕರ ಭಟ್‌ ವಿರುದ್ಧ ಕೇಸ್‌ ದಾಖಲು

     

    ಈಗ ದೂರು ನೀಡಿದ್ದು ದೂರು ಆಧರಿಸಿ ಈಗಾಗಲೇ ಐದು ಜನರನ್ನ ಬಂಧನ ಮಾಡಲಾಗಿದೆ. ಬೆಳಗಾವಿ ಕಮಿಷನರ್‌ಗೆ ಕ್ರಮಕ್ಕೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಕೊಹ್ಲಿ ಮಾಲೀಕತ್ವದ ಬೆಂಗ್ಳೂರು ಪಬ್ ವಿರುದ್ಧ ಮತ್ತೊಂದು ಎಫ್‌ಐಆರ್

    ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಎಪಿಎಂಸಿ ಠಾಣೆಯಲ್ಲಿ 6 ಮಂದಿ ವಿರುದ್ಧ ಶನಿವಾರ ಎಫ್‌ಐಆರ್‌ ದಾಖಲಾಗಿತ್ತು. ಆರಂಭದಲ್ಲಿ ಒಬ್ಬನು ಬಾಲಕಿಯನ್ನು ಪರಿಚಯಿಸಿಕೊಂಡು, ಸ್ನೇಹ ಬೆಳೆಸಿದ್ದ. ಬಳಿಕ ಆತ ಮತ್ತು ಸ್ನೇಹಿತರು 2024ರ ಡಿಸೆಂಬರ್‌ನಲ್ಲಿ ಪುಸಲಾಯಿಸಿಕೊಂಡು ಹೋಗಿ ಅತ್ಯಾಚಾರ ಎಸಗಿದ್ದರು. ಅತ್ಯಾಚಾರದ ದೃಶ್ಯವನ್ನು ಆರೋಪಿಗಳು ವಿಡಿಯೊ ರೆಕಾರ್ಡ್ ಮಾಡಿದ್ದಾರೆ. ಅದನ್ನೇ ತೋರಿಸಿ ಬ್ಲ್ಯಾಕ್‌ಮೇಲ್‌ ಮಾಡಿ, 2025ರ ಜನವರಿಯಲ್ಲಿ ಮತ್ತೆ ಮೂವರು ಅತ್ಯಾಚಾರ ಮಾಡಿದ್ದಾರೆ. ಬೇರೆ ಬೇರೆ ಸ್ಥಳಗಳಲ್ಲಿ ಅತ್ಯಾಚಾರ ಮಾಡಲಾಗಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಪ್ರಯತ್ನಿಸಲಾಗುವುದು ಎಂದು ಬೆಳಗಾವಿ ನಗರ ಪೊಲೀಸ್‌ ಕಮಿಷನರ್‌ ಭೂಷಣ್‌ ಗುಲಾಬರಾವ್‌ ಬೊರಸೆ ಹೇಳಿದರು.

  • ಮಂಡ್ಯ ಮಗು ಸಾವಿನ ಬಳಿಕ ಎಚ್ಚೆತ್ತ ಪೊಲೀಸ್‌ ಇಲಾಖೆ – ಕದ್ದು ಮುಚ್ಚಿ ಗಾಡಿ ಹಿಡಿಯದಂತೆ ಡಿಜಿ & ಐಜಿಪಿ ಆದೇಶ

    ಮಂಡ್ಯ ಮಗು ಸಾವಿನ ಬಳಿಕ ಎಚ್ಚೆತ್ತ ಪೊಲೀಸ್‌ ಇಲಾಖೆ – ಕದ್ದು ಮುಚ್ಚಿ ಗಾಡಿ ಹಿಡಿಯದಂತೆ ಡಿಜಿ & ಐಜಿಪಿ ಆದೇಶ

    – ವಾಹನ ಸವಾರರ ಬೈಕ್ ಕೀ ಕಿತ್ತುಕೊಳ್ಳುವಂತಿಲ್ಲ

    ಬೆಂಗಳೂರು: ಮಂಡ್ಯ (Mandya) ಪೊಲೀಸರ (Police) ಅಮಾನವೀಯ ವರ್ತನೆಯಿಂದ ಮೂರು ವರ್ಷದ ಮಗು ಸಾವಿನ ಬಳಿಕ ಎಚ್ಚೆತ್ತ ಪೊಲೀಸ್ ಇಲಾಖೆ, ವಾಹನ ತಪಾಸಣೆಗೆ ( Vhicle Inspection) ಹೊಸ ರೂಲ್ಸ್‌ ಬಿಡುಗಡೆ ಮಾಡಿದೆ. ಡಿಜಿ & ಐಜಿಪಿ ಹೊಸ ರೂಲ್ಸ್ ಬಿಡುಗಡೆ ಮಾಡಿದ್ದಾರೆ.

    ಹೊಸ ಆದೇಶದಲ್ಲೇನಿದೆ?
    * ಸಕಾರಣವಿಲ್ಲದೆ ವಾಹನಗಳನ್ನ ತಡೆದು ತಪಾಸಣೆಗೆ ಒಳಪಡಿಸಬಾರದು
    * ಕಣ್ಣಿಗೆ ಕಾಣುವ (visible Violation) ಕಂಡುಬಂದಲ್ಲಿ ಮಾತ್ರವೇ ವಾಹನಗಳನ್ನ ನಿಲ್ಲಿಸಬೇಕು
    * ಹೆದ್ದಾರಿಯಲ್ಲಿ ಜಿಗ್ ಜ್ಯಾಗ್ ಮಾದರಿಯಲ್ಲಿ ಬ್ಯಾರಿಕೇಡ್ ಹಾಕಿ ವಾಹನಗಳನ್ನು ತಡೆಯಬಾರದು
    * ರಸ್ತೆಯಲ್ಲಿ ದಿಢೀರನೆ ಅಡ್ಡ ಬಂದು ವಾಹನಗಳನ್ನ ನಿಲ್ಲಿಸುವಂತೆ ಹೇಳಬಾರದು
    * ದ್ವಿಚಕ್ರವಾಹನದ ಹಿಂಬದಿ ಸವಾರನನ್ನ ಹಿಡಿದು ಎಳೆಯುವಂತಿಲ್ಲ
    * ವಾಹನಗಳ ಕೀ ಕಸಿಯುವುದನ್ನು ಮಾಡಬಾರದು
    * ವೇಗವಾಗಿ ಬರುವ ವಾಹನಗಳ ಬೆನ್ನಟ್ಟದೆ ನೊಂದಣಿ ಸಂಖ್ಯೆ ಗುರುತು ಮಾಡಿ ಕಂಟ್ರೋಲ್ ರೂಂ ಗೆ ಮಾಹಿತಿ ನೀಡುವುದು
    * ವಾಹನಗಳ ತಪಾಸಣೆ ವೇಳೆ ಪೊಲೀಸ್ರು ರಿಫ್ಲೆಕ್ಟೀವ್ ಜಾಕೆಟ್ ಧರಿಸಿರಬೇಕು
    * ಸಂಜೆ ಸಮಯದಲ್ಲಿ ಕಡ್ಡಾಯವಾಗಿ ಎಲ್ ಇ ಡಿ ಬಟನ್ ಬಳಸಬೇಕು
    * ವಾಹನಗಳ ತಪಾಸಣೆ ವೇಳೆ ಕಡ್ಡಾಯವಾಗಿ ಬಾಡಿವೋರ್ನ್ ಕ್ಯಾಮೆರಾ ಧರಿಸಿರಬೇಕು
    * ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಇತರೆ ರಸ್ತೆಗಳಲ್ಲಿ ಅತೀ ವೇಗವಾಗಿ ಚಲಿಸುವ ವಾಹನಗಳನ್ನ ತಡೆಯಬಾರದು
    * ತಪಾಸಣೆಯ ಸ್ಥಳದ 100 ರಿಂದ 150 ಮೀಟರ್ ಮೊದಲೇ ರಿಫ್ಲೆಕಟ್ಈವ್ ರಬ್ಬರ್ ಕೋನ್‌ಗಳ ಬಳಸಿ ಸುರಕ್ಷತಾ ಸಲಕರಣೆಗಳನ್ನು ಅಳವಡಿಸಿಕೊಳ್ಳಬೇಕು.

    ಮೇ 26 ರಂದು ಮಂಡ್ಯದಲ್ಲಿ ಟ್ರಾಫಿಕ್ ಪೊಲೀಸರ (Traffic Police) ಯಡವಟ್ಟಿನಿಂದ ಮೂರುವರೆ ವರ್ಷದ ಮಗು ಸಾವನ್ನಪ್ಪಿತ್ತು. ಮದ್ದೂರು (Maddur) ತಾಲೂಕಿನ ಗೊರವನಹಳ್ಳಿಯ ವಾಣಿ-ಅಶೋಕ್ ದಂಪತಿಯ ಪುತ್ರಿ ಹೃತೀಕ್ಷಾ ಮೃತಪಟ್ಟ ಬಾಲಕಿ. ನಾಯಿ ಕಚ್ಚಿದ್ದರಿಂದ ಆಸ್ಪತ್ರೆಗೆ ದಂಪತಿ ಕರೆದುಕೊಂಡು ಬರುತ್ತಿದ್ದರು. ಈ ವೇಳೆ, ಹಳೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪೊಲೀಸರು ಹೆಲ್ಮೆಟ್ ತಪಾಸಣೆಗೆ ಬೈಕ್ ಅಡ್ಡಗಟ್ಟಿದ್ದರು. ಈ ವೇಳೆ ಬೈಕ್ ಆಯಾ ತಪ್ಪಿ ಬಿದ್ದು, ಮಗುವಿನ ತಲೆಗೆ ಬಲವಾದ ಪೆಟ್ಟು ಬಿದ್ದು, ಸಾವನ್ನಪ್ಪಿತ್ತು. ಈ ಘಟನೆ ಬೆನ್ನಲ್ಲೇ ಟ್ರಾಫಿಕ್‌ ಪೊಲೀಸರ ಯಡವಟ್ಟಿನ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಪೊಲೀಸ್‌ ಇಲಾಖೆ ವಾಹನ ತಪಾಸಣೆಗೆ ಹೊಸ ನಿಯಮ ಜಾರಿ ಮಾಡಿದೆ.

  • ಮಂಗಳೂರಲ್ಲಿ ಸಾಲು ಸಾಲು ಹತ್ಯೆ ಬೆನ್ನಲ್ಲೇ ಇಬ್ಬರು ಐಪಿಎಸ್‌ ಅಧಿಕಾರಿಗಳ ಎತ್ತಂಗಡಿ

    ಮಂಗಳೂರಲ್ಲಿ ಸಾಲು ಸಾಲು ಹತ್ಯೆ ಬೆನ್ನಲ್ಲೇ ಇಬ್ಬರು ಐಪಿಎಸ್‌ ಅಧಿಕಾರಿಗಳ ಎತ್ತಂಗಡಿ

    • ನೂತನ ಕಮಿಷನರ್ ಆಗಿ ಸುಧೀರ್ ಕುಮಾರ್ ರೆಡ್ಡಿ, ಎಸ್‌ಪಿಯಾಗಿ ಡಾ‌.ಅರುಣ್.ಕೆ ನೇಮಕ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (Dakshina Kannada) ನಡೆದ ಸಾಲು ಸಾಲು ಹತ್ಯೆಗಳ ಬಳಿಕ ಇಬ್ಬರು ಐಪಿಎಸ್‌ ಅಧಿಕಾರಿಗಳನ್ನು ಸರ್ಕಾರ ಎತ್ತಂಗಡಿ ಮಾಡಿದೆ. ಮಂಗಳೂರು (Mangaluru) ಪೊಲೀಸ್ ಕಮಿಷನರ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

    ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹಾಗೂ ದಕ್ಷಿಣ ಕನ್ನಡ ಎಸ್‌ಪಿ ಯತೀಶ್.ಎನ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ. ಇಬ್ಬರನ್ನೂ‌ ಏಕಕಾಲಕ್ಕೆ ವರ್ಗಾವಣೆ ಮಾಡಿ‌ ಸರ್ಕಾರ ಆದೇಶ ಹೊರಡಿಸಿದೆ. ಇದನ್ನೂ ಓದಿ: ಸುಹಾಸ್ ಶೆಟ್ಟಿ ಹತ್ಯೆ ಕೇಸ್ – ಸಫ್ವಾನ್ ಗ್ಯಾಂಗ್‌ನ ಇಬ್ಬರು ಆರೋಪಿಗಳು ಅರೆಸ್ಟ್

    ಮಂಗಳೂರು ನೂತನ ಪೊಲೀಸ್ ಆಯುಕ್ತರಾಗಿ ಸುಧೀರ್ ಕುಮಾರ್ ರೆಡ್ಡಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಡಾ‌.ಅರುಣ್.ಕೆ ಅವರನ್ನು ನೇಮಕ ಮಾಡಲಾಗಿದೆ. ಮಂಗಳೂರು ನಗರ ಹಾಗೂ ದ.ಕ.ಜಿಲ್ಲಾ ವ್ಯಾಪ್ತಿಯಲ್ಲಿ ನಡೆದ ಸರಣಿ ಹತ್ಯೆಯ ಬಳಿಕ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಮಂಗಳೂರು ನಗರ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಒಂದು ತಿಂಗಳೊಳಗೆ ಮೂರು‌ ದ್ವೇಷದ ಹತ್ಯೆ ನಡೆದಿವೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿರೋ ಹಿನ್ನಲೆಯಲ್ಲಿ ಪೊಲೀಸ್ ಅಧಿಕಾರಿಗಳ ತಲೆದಂಡವಾಗಿದೆ.

    ಜಿಲ್ಲೆಯ ಕೊಳತ್ತಮಜಲು ಎಂಬಲ್ಲಿ ಮರಳು ಅನ್‌ಲೋಡ್ ಮಾಡುತ್ತಿದ್ದ ರಹೀಂ ಹಾಗೂ ಕಲಂದರ್ ಮೇಲೆ, ಇಬ್ಬರು ದುಷ್ಕರ್ಮಿಗಳು ತಲ್ವಾರ್‌ನಿಂದ ದಾಳಿ ನಡೆಸಿದ್ದರು. ಈ ವೇಳೆ ರಹೀಂ ಸ್ಥಳದಲ್ಲೇ ಮೃತಪಟ್ಟಿದ್ದರು. ಇತ್ತೀಚೆಗೆ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಎಂಬವರ ಹತ್ಯೆಯಾಗಿತ್ತು. ಸುಹಾಸ್‌ ಶೆಟ್ಟಿ ಬರುತ್ತಿದ್ದ ಇನ್ನೋವಾ ಕಾರನ್ನು ಮೀನಿನ ಟೆಂಪೋ ಹಾಗೂ ಒಂದು ಸ್ವಿಫ್ಟ್ ಕಾರು ಹಿಂಬಾಲಿಸಿಕೊಂಡು ಬಂದಿತ್ತು. ನಂತರ ಮೀನಿನ ಟೆಂಪೋವನ್ನು ಸುಹಾಸ್ ಇದ್ದ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆಸಲಾಗಿತ್ತು. ಡಿಕ್ಕಿ ಹೊಡೆದ ರಭಸಕ್ಕೆ ಇನ್ನೋವಾ ಕಾರು ಸಲೂನ್‌ಗೆ ನುಗ್ಗಿತ್ತು. ಬಳಿಕ ಸ್ವಿಫ್ಟ್ ಕಾರಿನಲ್ಲಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಸಾರ್ವಜನಿಕ ರಸ್ತೆಯಲ್ಲೇ ಅವರನ್ನು ಬರ್ಬರವಾಗಿ ಕೊಲೆಗೈದು ಅಲ್ಲಿಂದ ಪರಾರಿಯಾಗಿದ್ದರು. ಇದರ ಬೆನ್ನಲ್ಲೇ ಜಿಲ್ಲೆಯಲ್ಲಿ ಹಲವಾರ ಅಹಿತಕರ ಘಟನೆಗಳು ನಡೆದಿದ್ದವು. ಇದನ್ನೂ ಓದಿ: ಅಬ್ದುಲ್‌ ರಹಿಮಾನ್‌ ಹತ್ಯೆ ಕೇಸ್‌ – ಮೂವರು ಆರೋಪಿಗಳ ಬಂಧನ