Tag: police

  • ಪತಿ ಗಂಡಸಲ್ಲ ಎಂದ ಪತ್ನಿ: ಸಾಯಲು ನೀರಿನ ಟ್ಯಾಂಕರ್ ಹತ್ತಿದ ಪತಿರಾಯ

    ಪತಿ ಗಂಡಸಲ್ಲ ಎಂದ ಪತ್ನಿ: ಸಾಯಲು ನೀರಿನ ಟ್ಯಾಂಕರ್ ಹತ್ತಿದ ಪತಿರಾಯ

    ಮೈಸೂರು: ನನ್ನ ಪತಿ ಗಂಡಸಲ್ಲ ಎಂದು ಹೆಂಡತಿ ಆರೋಪ ಮಾಡಿದಕ್ಕೆ ಮನನೊಂದ ಪತಿರಾಯ ಸಾಯಲು ಮೈಸೂರು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿಯ ನೀರಿನ ಟ್ಯಾಂಕರ್ ಹತ್ತಿದ್ದಾರೆ.

    ಅರುಣ್ ಕುಮಾರ್ ನೀರಿನ ಟ್ಯಾಂಕ್ ಏರಿದ ವ್ಯಕ್ತಿ. ಅರುಣ್ ಕುಮಾರ್ ನಗರದ ಗಾಯತ್ರಿಪುರಂ ನಿವಾಸಿ. ಪೇಂಟರ್ ಆಗಿ ಕೆಲಸ ಮಾಡಿಕೊಂಡಿರುವ ಅರುಣ್ 10 ವರ್ಷಗಳ ಹಿಂದೆ ಮದುವೆಯಾಗಿದ್ದರು. ಮದುವೆಯಾದ ನಂತರ ಮಕ್ಕಳಾಗದಕ್ಕೆ ಪತ್ನಿ ನೀನು ಗಂಡಸಲ್ಲ ಎಂದು ಹೇಳಿದ್ದಾರೆ.

    ಪತ್ನಿಯ ಮಾತುಗಳಿಂದ ಮನನೊಂದ ಅರುಣ್ ನೀರಿನ ಟ್ಯಾಂಕರ್ ಮೇಲಿಂದ ಕೆಳಗೆ ಬಿದ್ದು ಅಥವಾ ಕೈಯಲ್ಲಿರುವ ಪೆಟ್ರೋಲ್ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು.ಸ್ಥಳಕ್ಕಾಗಮಿಸಿದ ಲಕ್ಷ್ಮೀಪುರಂ ಪೊಲೀಸರು ಅವರನ್ನು ರಕ್ಷಿಸಿ, ಅರುಣ್‍ರನ್ನು ವಶಕ್ಕೆ ಪಡೆದಿದ್ದಾರೆ.

     

  • ಮಾಡಬಾರದ್ದನ್ನು ಮಾಡಿ ದಕ್ಷಿಣ ಭಾರತ ಹುಡುಗೀರು ಮದ್ವೆಯಾಗೋಕೆ ಲಾಯಕ್ಕಿಲ್ಲ ಎಂದ ವಂಚಕ!

    ಮಾಡಬಾರದ್ದನ್ನು ಮಾಡಿ ದಕ್ಷಿಣ ಭಾರತ ಹುಡುಗೀರು ಮದ್ವೆಯಾಗೋಕೆ ಲಾಯಕ್ಕಿಲ್ಲ ಎಂದ ವಂಚಕ!

    – ಹುಬ್ಬಳ್ಳಿಯಲ್ಲಿ ಆರ್‍ಪಿಎಫ್ ಮಹಿಳಾ ಪೇದೆಗೆ ವಂಚನೆ
    – ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ ರೈಲ್ವೇ ಎಂಜಿನಿಯರ್

    ಹುಬ್ಬಳ್ಳಿ: ಮಹಿಳಾ ಪೊಲೀಸ್ ಪೇದೆಗೆ ಮದುವೆಯಾಗುತ್ತೇನೆಂದು ನಂಬಿಸಿ ವಂಚಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ರೈಲ್ವೆ ಮಹಿಳಾ ಪೆÇಲೀಸ್ ಪೇದೆಯಾಗಿ ಕೆಲಸ ಮಾಡುತಿದ್ದ ಸೋನಿ (33) ಎಂಬ ಯುವತಿಗೆ ಸೌತ್ ವೆಸ್ಟರ್ನ್ ರೈಲ್ವೆ ಇಂಜಿನಿಯರ್ ಕಮಲೇಶ್ ಎಂಬ ಯುವಕ ಮದುವೆ ಆಗುವುದಾಗಿ ಹೇಳಿ ಯುವತಿಯೊಂದಿಗೆ ದೈಹಿಕ ಸಂಪರ್ಕ ಮಾಡಿ ಈಗ ಬೇರೊಂದು ಯುವತಿಯೊಂದಿಗೆ ಮದುವೆಗೆ ಮುಂದಾಗಿದ್ದಾನೆ. ವಂಚನೆಗೆ ಒಳಗಾದ ಯುವತಿ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

    ಯುವತಿಯ ದೂರಿನಲ್ಲಿ ಏನಿದೆ..?
    ನಾನು ಸೌತ್ ವೆಸ್ಟರ್ನ್ ರೈಲ್ವೆಯಲ್ಲಿ ಪ್ರೊಟೆಕ್ಷನ್ ಫೋರ್ಸ್ ಹುಬ್ಬಳ್ಳಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಮಹಿಳಾ ಪೊಲೀಸ್ ಪೇದೆಯಾಗಿ ಕೆಲಸ ಮಾಡುತ್ತಿದ್ದೆ. ಕಳೆದ ಎರಡು ವರ್ಷಗಳ ಹಿಂದೆ ನನಗೆ ಸೌತ್ ವೆಸ್ಟರ್ನ್ ರೈಲ್ವೆಯಲ್ಲಿ ಸೀನಿಯರ್ ಸೆಕ್ಷನ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಕಮಲೇಶ್ ಕುಮಾರ್ ಎಂಬುವರ ಪರಿಚಯವಾಯಿತು. ನಂತರ ನಾವಿಬ್ಬರ ಒಳ್ಳೆಯ ಸ್ನೇಹಿತರಾದೆವು. ನಂತರ ಕಮಲೇಶ್ ಆಗಾಗ ನನ್ನೊಂದಿಗೆ ಫೋನ್‍ನಲ್ಲಿ ಗಂಟೆಗಟ್ಟಲೆ ಮಾತನಾಡುತ್ತಿದ್ದ. ಕಮಲೇಶ್ ಒಂದು ದಿನ ನನ್ನನ್ನು ಪ್ರೀತಿಸುವುದಾಗಿ ಹೇಳಿದ. ಆದ್ರೆ ನಾ ಅದಕ್ಕೆ ಒಪ್ಪಲಿಲ್ಲ.

    ಒಂದು ದಿನ ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಇರುವ ತನ್ನ ಕ್ವಾಟರ್ಸ್‍ಗೆ ನನನ್ನು ಕರೆದ. ಆದ್ರೆ ನಾ ಹೋಗಲಿಲ್ಲ, ಇಲ್ಲ ನನ್ನ ಮನೆಯವರು ನಿಗಾಗಿ ಕಾಯುತ್ತಿದ್ದಾರೆ. ನಿನನ್ನು ಪರಿಚಯ ಮಾಡಿಕೊಡುವುದಿದೆ ಬಾ ಎಂದು ಕರೆದ. ಮಧ್ಯಪ್ರದೇಶದಿಂದ ನನ್ನ ತಂದೆ ತಾಯಿಗಳು ಬಂದಿದ್ದಾರೆ, ನೀ ಬರಲೇಬೇಕು ಎಂದು ಕೇಳಿಕೊಂಡ. ಹೀಗಾಗಿ ನಾನು ಅವನ ಮನೆಗೆ ಹೋಗಲು ಒಪ್ಪಿದೆ. ಅದೇ ಪ್ರಕಾರವಾಗಿ ನಾನು ಅವನ ಮನೆಗೆ ಹೋದೆ. ಆದ್ರೆ ಅವನ ಮನೆಯಲ್ಲಿ ಯಾರು ಇರಲಿಲ್ಲ. ಅದೇ ಸಮಯದಲ್ಲಿ ಕಮಲೇಶ್ ನನ್ನನ್ನು ಮದುವೆ ಆಗುವುದಾಗಿ ಹೇಳಿ ನನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ. ಆದ್ರೆ ನನಗೆ ತುಂಬಾ ಭಯವಾಯಿತು. ಆದ್ರೆ ಕಮಲೇಶ್ ನನ್ನ ಹಣೆಗೆ ಸಿಂಧೂರ ಇಟ್ಟು ನಮ್ಮ ಮದುವೆ ಆಗಿದೆ, ನೀ ಇನ್ನು ಭಯ ಪಡುವ ಚಿಂತೆ ಇಲ್ಲ ಎಂದು ಹೇಳಿ ನನ್ನನ್ನು ನಂಬಿಸಿದ. ನಂತರ ನಾನು ಅವನನ್ನು ನಂಬಿದೆ. ಹೀಗೆ ಹಲವಾರು ಸಾರಿ ಕಮಲೇಶ್ ನನ್ನನ್ನು ದೈಹಿಕವಾಗಿ ಬಳಸಿಕೊಂಡ. ನಂತರ ನನಗೆ ಅಪಾರ ಪ್ರೀತಿ ತೋರಿಸುತ್ತಿದ್ದ. ಬಳಿಕ ಕೆಲ ದಿನಗಳ ನಂತರ ನನ್ನಿಂದ ದೂರವಾಗ ತೊಡಗಿದ. ನನಗೆ ಅವನು ಇಲ್ಲದ ಜೀವನ ಬೇಸರವಾಗತೊಡಗಿತು. ನೀ ಯಾಕೆ ಹೀಗೆ ಮಾಡುತ್ತೀಯಾ ಎಂದು ಕೇಳಿದರೂ ಅವನು ನನಗೆ ಏನೂ ಹೇಳಲಿಲ್ಲ.

    ನೀನು ಹೀಗೆಲ್ಲಾ ಮಾಡಿದ್ರೆ ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ಕೊಡುತ್ತೇನೆ ಎಂದು ನಾನು ಹೇಳಿದಾಗ ನನ್ನ ಬಳಿ ನಿನ್ನ ಅಶ್ಲೀಲ ವಿಡಿಯೋ ಇದೆ. ಇದನ್ನು ಫೇಸ್ ಬುಕ್‍ನಲ್ಲಿ ಕಳಿಸುತ್ತೇನೆ ಎಂದು ಹೆದರಿಸಿದ. ಹೀಗಾಗಿ ಭಯದಿಂದ ಸುಮ್ಮನಾದೆ. ಬಳಿಕ ನೀ ಹೀಗೆ ತಾಳ್ಮೆಗೆಟ್ಟರೆ ಹೇಗೆ..? ನೀ ತಾಳ್ಮೆಯಿಂದ ಇದ್ದುಬಿಡು ನಾ ನಮ್ಮ ಮನೆಯಲ್ಲಿ ಒಪ್ಪಿಸಿ ಮದುವೆ ಆಗುತ್ತೇನೆ ಎಂದು ಹೇಳಿ ಮತ್ತೆ ನನ್ನ ಜೊತೆ ಲೈಂಗಿಕ ಸಂಪರ್ಕ ಮಾಡಿದ.

    ನಂತರ 2015ರ ಡಿಸೆಂಬರ್ ತಿಂಗಳಲ್ಲಿ ಆತನ ಊರಾದ ಹೊಸಂಗಾಬಾದ್ ಹೋಗಿ ತನ್ನ ಮನೆಯವರನ್ನು ಒಪ್ಪಿಸಿ, ಮದುವೆ ಆಗುತ್ತೇನೆ ಎಂದು ಊರಿಗೆ ಹೋದ. ಆದ್ರೆ ಕೆಲ ದಿನಗಳ ನಂತರ ಹುಬ್ಬಳ್ಳಿಗೆ ಬಂದ ಅವನು ನಾ ಬೇರೊಂದು ಹುಡುಗಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡೆ ಎಂದು ಹೇಳಿದ. ಅಲ್ಲದೆ ತನ್ನ ನಿಶ್ಚಿತಾರ್ಥದ ಫೋಟೋಗಳನ್ನು ಫೇಸ್ ಬುಕ್‍ನಲ್ಲಿ ಪ್ರಕಟಿಸಿದ.

    ಡಿಸೆಂಬರ್ 19ರಂದು ಆತನ ಮನೆಗೆ ಹೋಗಿ ನೀ ನನಗೆ ಮೋಸ ಮಾಡಿದೆ ಎಂದು ಹೇಳಿದೆ. ಆದಕ್ಕೆ ಆತ, ಸೌಥ್ ಕಿ ಲಡಕಿಯೋ ಸಿರ್ಫ್ ಯೂಸ್ ಕರ್ ಸಕತೆ ಹೈ. ಘರ್ ಬಸಾನೇ ಕೇ ಲಿಯೇ ತುಮ್ ಲೋಗ್ ಲಾಯಕ್ ನಹೀ ಹೈ ಎಂದು ಹೇಳಿದ. ಹೀಗಾಗಿ ಅವನ ಕಠೋರ ಮಾತುಗಳನ್ನು ಕೇಳಿದ ನನಗೆ ತುಂಬಾ ದುಃಖವಾಯಿತು. ನಂತರ ನನ್ನ ಮತ್ತು ಕಮಲೇಶ್ ವಿಚಾರ ಕಮಲೇಶ್ ಮದುವೆ ಆಗುತ್ತಿರುವ ಯುವತಿಯ ಮನೆಯಲ್ಲಿ ಗೊತ್ತಾಯಿತು. ಹೀಗಾಗಿ ಅವನ ನಿಶ್ಚಿತಾರ್ಥ ಕೂಡಾ ಮುರಿದು ಬಿದ್ದಿತ್ತು.

    ನಿನ್ನ ಜೊತೆ ದೇಹ ಹಂಚಿಕೊಂಡಿರುವ ನನಗೆ ನಿನ್ನ ಆಸರೆ ಬೇಕು, ನೀ ನನ್ನ ಮದುವೆಯಾಗಿ, ಈ ಸಮಾಜದಲ್ಲಿ ನನನ್ನು ಪತ್ನಿಯಾಗಿ ಸ್ವೀಕರಿಸು ಎಂದು ಅಂಗಲಾಚಿ ಕೇಳಿಕೊಂಡೆ. ಆದ್ರೆ ಅದಕ್ಕೆ ಅವನು ಒಪ್ಪಲಿಲ್ಲ. ನನಗೆ ದಾರಿ ಕಾಣದಾಯಿತು. ಹೀಗಾಗಿ ನಾನೇ ಅವನ ಊರಿಗೆ ಹೋಗಿ ಅವರ ಅಪ್ಪ, ಅಮ್ಮ, ಭಾವ, ಅತ್ತಿಗೆಗೆ ನಮ್ಮ ವಿಷಯ ಹೇಳಿದಿರಿ. ಆದ್ರೆ ಅದಕ್ಕೆ ಅವರು ನಿನ್ನ ಬಳಿ ಸಾಕ್ಷಿ ಇದೆಯಾ ಎಂದು ಕೇಳಿದ್ರು. ನನಗೆ ನನ್ನ ಜೀವನವೇ ಬೇಸರವಾಯಿತು. ನಾ ಮತ್ತೆ ಅಲ್ಲಿಂದ ಹುಬ್ಬಳ್ಳಿಗೆ ಬಂದೆ. ಇಲ್ಲಿ ಬಂದ ಮೇಲೆ ಅವನನ್ನು ಮದುವೆ ಆಗುವಂತೆ ಅಂಗಲಾಚಿ ಕೇಳಿಕೊಂಡೆ. ಪರಿ ಪರಿಯಾಗಿ ಬೇಡಿಕೊಂಡರೂ ಅವನು ನನ್ನನ್ನು ತಪ್ಪಿಸಿ ಓಡಾಡುತ್ತಿದ್ದಾನೆ.

    ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ನಾನು ಲಿಖಿತ ರೂಪದಲ್ಲಿ ದೂರು ನೀಡಿರುವೆ, ಆದ್ರೂ ಪ್ರಯೋಜನವಾಗಿಲ್ಲ. ಹೀಗಾಗಿ ನಾ ಇಂದು ಕೇಶ್ವಾಪುರ ಪೊಲೀಸ್ ಠಾಣೆಗೆ ದೂರು ನೀಡುತ್ತಿರುವೆ. ನೀವಾದರೂ ನನಗೆ ನ್ಯಾಯ ಕೊಡಿಸುತ್ತೀರಿ ಎಂಬ ನಂಬಿಕೆ ನನಗೆ ಉಳಿದಿದೆ.

    ಇಂತಿ ನಿಮ್ಮ,

    ನೊಂದವಳು

  • ಭೀಕರ ಬರವಿದ್ರೂ ಫಾರಿನ್ ಟೂರ್ ಮೂಡಲ್ಲಿ ಗೃಹಸಚಿವರು & ಟೀಂ

    ಭೀಕರ ಬರವಿದ್ರೂ ಫಾರಿನ್ ಟೂರ್ ಮೂಡಲ್ಲಿ ಗೃಹಸಚಿವರು & ಟೀಂ

    ರಕ್ಷಾಕಟ್ಟೆಬೆಳಗುಳಿ
    ಬೆಂಗಳೂರು: ರಾಜ್ಯದ ಜನ ಭೀಕರ ಬರದಿಂದ ತತ್ತರಿಸುತ್ತಿದ್ದಾರೆ. ಕ್ಷೇತ್ರದ ಜನ ಕುಡಿಯಲು ನೀರಿಲ್ಲದೇ ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಜನರ ಜೊತೆಗಿದ್ದು ಸಮಸ್ಯೆ ಬಗೆ ಹರಿಸಬೇಕಾದವರು ಮಾತ್ರ ಫಾರಿನ್ ಟೂರ್ ಮೂಡ್‍ನಲ್ಲಿದ್ದಾರೆ.

    ಹೌದು. ಬರದ ಸಮಸ್ಯೆಗೆ ಪರಿಹಾರ ಹುಡುಕಬೇಕಿರುವ ಗೃಹಸಚಿವ ಜಿ.ಪರಮೇಶ್ವರ್, ಬೇಸಿಗೆ ಧಗೆಯಿಂದ ಸ್ವಲ್ಪ ಕೂಲ್ ಆಗಿ ಬರಲು ಕಾನ್ಫರೆನ್ಸ್ ಹೆಸರಲ್ಲಿ ತಮ್ಮ ಹಳೇ ಟೀಂನೊಂದಿಗೆ ಫಾರಿನ್ ಟೂರ್ ಹೊರಟಿದ್ದಾರೆ.

    2016ರ ಜೂನ್‍ನಲ್ಲಿ ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ಗೃಹ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಸುಭಾಷ್ ಚಂದ್ರ, ಕೇಂದ್ರ ವಲಯ ಐಜಿಪಿ ಸೀಮಂತ್ ಕುಮಾರ್ ಸಿಂಗ್, ಪ್ರವೀಣ್ ಸೂದ್ ಅವರನ್ನೊಳಗೊಂಡ ಇದೇ ಟಿಂನೊಂದಿಗೆ ಡಾ. ಜಿ ಪರಮೇಶ್ವರ್ 10 ದಿನಗಳ ಕಾಲ ಜರ್ಮನಿ ಸುತ್ತಿ ಬಂದಿದ್ದರು. ಟ್ರಿಪ್ ಮುಗಿದ ಬೆನ್ನಲ್ಲೇ ಪ್ರವೀಣ್ ಸೂದ್ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಪ್ರಮೋಷನ್ ಪಡೆದರು. ಮತ್ತೆ ಅದೇ ಟೀಂ ಜೊತೆ ಇದೇ ತಿಂಗಳ 7 ರಂದು ಸರ್ಕಾರಿ ಖರ್ಚಿನಲ್ಲಿ ಲಂಡನ್ ಫ್ಲೈಟ್ ಹತ್ತಲು ರೆಡಿಯಾಗಿದ್ದಾರೆ ಪರಮೇಶ್ವರ್.

    ಅವ್ರೇ ಯಾಕೆ?
    ರಾಜ್ಯದಲ್ಲಿ 150ಕ್ಕೂ ಹೆಚ್ಚು ಜನ ಐಪಿಎಸ್ ಅಧಿಕಾರಿಗಳಿರುವಾಗ ಪದೇ ಪದೇ ಡಾ.ಜಿ ಪರಮೆಶ್ವರ್ ತಮ್ಮ ಟೂರ್‍ಗಳಿಗೆ ಇದೇ ಟೀಂ ಅನ್ನು ಆಯ್ಕೆ ಮಾಡ್ತಿರೋದ್ಯಾಕೆ? ಜೊತೆಗೆ ಕೆಲಸ ಮಾಡಲು ಆಗುವುದಿಲ್ಲ ಎಂದು ಸ್ವಯಂ ನಿವೃತ್ತಿ ತಗೆದುಕೊಂಡ ಕೆಂಪಯ್ಯ ಅವರು ಫಾರಿನ್ ಕಾನ್ಫರೆನ್ಸ್ ಗಳ  ಮೇಲೆ ಇಷ್ಟೊಂದು ಒಲವು ತೋರುತ್ತಿರುವ ಬಗ್ಗೆಯೂ ಗೃಹ ಇಲಾಖೆಯಲ್ಲಿ ಈಗ ಪಿಸು ಪಿಸು ಮಾತು ಶುರುವಾಗಿದೆ.

    ಕರ್ತವ್ಯದ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿರುವ ಮಂತ್ರಿಗಳು ಮತ್ತು ಪೊಲೀಸ್ ಅಧಿಕಾರಿಗಳು ವರ್ಷಕ್ಕೆ ಎರಡೂ ಫಾರಿನ್ ಟೂರ್ ಮಾಡುತ್ತಿರುವುದು ಎಷ್ಟು ಸರಿ ಎನ್ನುವುದೇ ನಮ್ಮ ಪ್ರಶ್ನೆ.

  • ಸ್ವಂತ ತಂಗಿಯನ್ನೇ ಮಂಚಕ್ಕೆ ಕರೆದ ಅಣ್ಣ: ದೂರು ದಾಖಲು

    ಸ್ವಂತ ತಂಗಿಯನ್ನೇ ಮಂಚಕ್ಕೆ ಕರೆದ ಅಣ್ಣ: ದೂರು ದಾಖಲು

    ಗದಗ: ಸ್ವಂತ ತಂಗಿಗೆ ಲೈಂಗಿಕ ಕಿರುಕುಳ ನೀಡಿರುವ ಕಾಮುಕ ಅಣ್ಣನೊಬ್ಬನ ಮೇಲೆ ಪ್ರಕರಣವೊಂದು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಫೆಬ್ರವರಿ 28 ರಂದು ಪ್ರಕರಣ ದಾಖಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    40 ವರ್ಷದ ಅಣ್ಣ ಉಮರ್‍ಸಾಬ್ ನದಾಫ್ ಕಳೆದ ಒಂದು ವರ್ಷದಿಂದ ನನ್ನ ಮೇಲೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ತನ್ನ 35 ವರ್ಷದ ಸಂತ್ರಸ್ತ ಮಹಿಳೆ ಮಾಧ್ಯಮಗಳ ಮುಂದೆ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.

    ಉಮರ್‍ಸಾಬ್‍ನಿಗೆ ಈಗಾಗಲೇ ಎರಡು ಮದುವೆಯಾಗಿದ್ದು, ಇಬ್ಬರು ಹೆಂಡತಿಯರು ಅವನನ್ನು ಬಿಟ್ಟು ಹೋಗಿದ್ದಾರೆ. ಇನ್ನು ಸಂತ್ರಸ್ತ ಮಹಿಳೆಗೂ ಮದುವೆಯಾಗಿದ್ದು ಗಂಡ ಇವರನ್ನು ಬಿಟ್ಟು ಹೋಗಿದ್ದರಿಂದ ಅಣ್ಣನ ಮನೆಯಲ್ಲಿ ವಾಸವಾಗಿದ್ದರು. ಅಣ್ಣನ ಲೈಂಗಿಕ ಕಿರುಕುಳದಿಂದ ಬೇಸತ್ತ ಮಹಿಳೆ ವಿಷ ಸೇವಿಸಿ ಅತ್ಮಹತ್ಯೆಗೂ ಪ್ರಯತ್ನಿಸಿದ್ದರು. ಆದರೂ ಕಾಮುಕ ಅಣ್ಣನ ದರ್ಪ ನಿಂತಿರಲಿಲ್ಲ.

    ಮಹಿಳಾ ಸಂಘಗಳ ಸಹಾಯದಿಂದಾಗಿ ಈಗ ನಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರು ದಾಖಲಾದ ಬಳಿಕ ಅಣ್ಣ ಉಮರ್‍ಸಾಬ್ ನಾಪತ್ತೆಯಾಗಿದ್ದಾನೆ. ನೊಂದ ಮಹಿಳೆ ಜಿಲ್ಲಾ ಆಸ್ಪತ್ರೆಯ ಮಹಿಳಾ ವಿಶೇಷ ಚಿಕಿತ್ಸಾ ಘಟಕದಲ್ಲಿ ದಾಖಲಾಗಿದ್ದಾರೆ.

     

  • ಅಪಘಾತದಲ್ಲಿ ಎರಡೂ ಕಾಲುಗಳು ಕಟ್ ಆದ್ರೂ ಆಸ್ಪತ್ರೆಗೆ ಸೇರಿಸದೇ ವಿಡಿಯೋ ಮಾಡಿದ್ರು!

    ಅಪಘಾತದಲ್ಲಿ ಎರಡೂ ಕಾಲುಗಳು ಕಟ್ ಆದ್ರೂ ಆಸ್ಪತ್ರೆಗೆ ಸೇರಿಸದೇ ವಿಡಿಯೋ ಮಾಡಿದ್ರು!

    ಚಿತ್ರದುರ್ಗ: ಅಪಘಾತ ನಡೆದಾಗ ಗಾಯಗೊಂಡವರ ರಕ್ಷಣೆಗೆ ಧಾವಿಸಿ ಎಂದು ಮಾಧ್ಯಮಗಳಲ್ಲಿ ಸಾಕಷ್ಟು ಬಾರಿ ವರದಿಯಾದರೂ ಜನರಿಗೆ ಮಾತ್ರ ಇನ್ನೂ ಸಹಾಯ ಪ್ರಜ್ಞೆ ಬಂದಿಲ್ಲ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ.

    ಅಪಘಾತದಿಂದಾಗಿ ತನ್ನ ಎರಡು ಕಾಲುಗಳನ್ನು ಕಳೆದುಕೊಂಡ ವ್ಯಕ್ತಿಯೊಬ್ಬರು ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದರೂ ನೆರದಿದ್ದ ಜನ ಮಾತ್ರ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸದೇ ಮೊಬೈಲ್‍ಗಳಲ್ಲಿ ದೃಶ್ಯ ಸೆರೆಹಿಡಿದಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

    ಆಗಿದ್ದೇನು?: ಫೆಬ್ರವರಿ 22 ರಂದು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಅಶೋಕ ಸಿದ್ದಾಪುರ ಗ್ರಾಮದಲ್ಲಿ ಆಟೋಗೆ ಲಾರಿ ಡಿಕ್ಕಿ ಹೊಡೆದು ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, 11 ಜನರು ಗಾಯಗೊಂಡಿದ್ದರು.

    ಆಟೋದಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಗನ್ನಿಗಮ್ಮನ ಹಳ್ಳಿಯ ನಿವಾಸಿ ರಮೇಶ್ (18) ಪ್ರಯಾಣಿಸುತ್ತಿದ್ದರು. ಲಾರಿ ಎರಡು ಕಾಲುಗಳ ಮೇಲೆ ಲಾರಿ ಹಾದು ಹೋಗಿದ್ದರಿಂದ ರಮೇಶ್ ಕಾಲು ತುಂಡಾಗಿತ್ತು. ಎರಡು ಗಂಟೆಗಳ ಚಿಕಿತ್ಸೆಗಾಗಿ ರಮೇಶ್ ಅಂಗಲಾಚಿದ್ರೂ ಸ್ಥಳೀಯರು ಸಹಾಯ ಹಸ್ತ ನೀಡದೇ ಮೂಕಪ್ರೇಕ್ಷಕರಾಗಿ ನಿಂತಿದ್ದರು.

    ಕೊನೆಗೆ ಅಂಬುಲೆನ್ಸ್ ಮುಖಾಂತರ ರಾಂಪುರ ಗ್ರಾಮದ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ರಮೇಶ್ ಅವರನ್ನು ಬಳ್ಳಾರಿಯ ಆಸ್ಪತ್ರೆಗೆ ದಾಖಲಿಸದ್ರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಕಳೆದ ತಿಂಗಳು ಇಂಹುದೇ ಪ್ರಕರಣ ಕೊಪ್ಪಳ ಹಾಗೂ ಯಾದಗಿರಿಯಲ್ಲೂ ಪ್ರಕರಣಗಳು ನಡೆದಿತ್ತು.

    https://youtu.be/AESbC8wVrcQ

  • ಹಾವೇರಿ: ಕೌಟುಂಬಿಕ ಕಲಹ ಪತಿಯಿಂದಲೇ ಪತ್ನಿ ಕೊಲೆ

    ಹಾವೇರಿ: ಕೌಟುಂಬಿಕ ಕಲಹ ಪತಿಯಿಂದಲೇ ಪತ್ನಿ ಕೊಲೆ

    ಹಾವೇರಿ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿ ತನ್ನ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ನಗರದ ವಿದ್ಯಾನಗರದ ಪಶ್ಚಿಮ ಬಡಾವಣೆಯಲ್ಲಿ ನಡೆದಿದೆ.

    ನಿರ್ಮಲಾ ಕಟ್ಟಿಮನಿ (40) ಗಂಡನಿಂದಲೇ ಕೊಲೆಯಾದ ಗೃಹಿಣಿ. ಪತಿ ನಾರಾಯಣಸ್ವಾಮಿ ಇಂದು ಬೆಳಗ್ಗೆ ಕುಡಿದ ಮತ್ತಿನಲ್ಲಿ ಬಂದು ಪತ್ನಿಯೊಂದಿಗೆ ಜಗಳವಾಡಿ ತಲೆಯ ಭಾಗಕ್ಕೆ ಸುತ್ತಿಗೆಯಿಂದ ಹೊಡೆದು ಹಾಗೂ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಕೊಲೆಗೆ ಕೌಟುಂಬಿಕ ಕಾರಣ ಎನ್ನಲಾಗಿದೆ.

    ಸ್ಥಳಕ್ಕೆ ನಗರ ಠಾಣಾ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿ ನಾರಾಯಣಸ್ವಾಮಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

     

  • ಭಾವಿ ಪತ್ನಿ ಆತ್ಮಹತ್ಯೆ ಪ್ರಕರಣ – ಮದುವೆ ಮುರಿದ ವರ ಅರೆಸ್ಟ್

    ಭಾವಿ ಪತ್ನಿ ಆತ್ಮಹತ್ಯೆ ಪ್ರಕರಣ – ಮದುವೆ ಮುರಿದ ವರ ಅರೆಸ್ಟ್

    ಬೆಂಗಳೂರು: ಕೊನೆ ಕ್ಷಣದಲ್ಲಿ ಮದುವೆ ಮುರಿದು ಬಿದ್ದಿದ್ರಿಂದ ಯುವತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ವರ ಕಾರ್ತಿಕ್ ಹಾಗೂ ಆತನ ತಾಯಿಯನ್ನು ಬಂಧಿಸಲಾಗಿದೆ.

    ಬೆಂಗಳೂರಿನ 32 ವರ್ಷದ ನಾಗಲಕ್ಷ್ಮಿ ಮತ್ತು ಕಾರ್ತಿಕ್‍ಗೆ ಕಳೆದ ವರ್ಷವೇ ನಿಶ್ಚಿತಾರ್ಥವಾಗಿತ್ತು. ಇದೇ ಮೇ 22ರಂದು ಇಬ್ಬರೂ ಸತಿ-ಪತಿಗಳಾಗಬೇಕಿತ್ತು. ಆದ್ರೆ ಮದುವೆ ನಿಶ್ಚಿತಾರ್ಥ ಬಳಿಕ ಕಾರ್ತಿಕ್ ತಂದೆ ಅಪಘಾತದಲ್ಲಿ ಮೃತಪಟ್ಟಿದ್ದರು. ಇದಕ್ಕೆ ಭಾವಿ ಪತ್ನಿ ಕಾಲ್ಗುಣವೇ ಕಾರಣ ಎಂದು ಭಾವಿಸಿದ ವರ ಕಾರ್ತಿಕ್ ಮದುವೆ ಆಗಲ್ಲ ಎಂದು ಹೇಳಿದ್ದ. ಇದರಿಂದ ಮನನೊಂದ ವಧು ನಾಗಲಕ್ಷ್ಮೀ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡ್ಕೊಂಡಿದ್ರು.

    ಸಾಯುವ ಮುನ್ನ ನಾಗಲಕ್ಷ್ಮೀ ಐದು ಪುಟಗಳ ಡೆತ್‍ನೋಟ್ ಬರೆದಿಟ್ಟಿದ್ರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ರಾಜರಾಜೇಶ್ವರಿ ನಗರ ಪೊಲೀಸರು ಹೈದ್ರಾಬಾದ್‍ನಲ್ಲಿದ್ದ ಕಾರ್ತಿಕ್ ಮತ್ತು ಅವನ ತಾಯಿಯನ್ನು ಬಂಧಿಸಿದ್ದಾರೆ. ಬಂಧಿತರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಮತ್ತು ವಂಚನೆ ಪ್ರಕರಣ ದಾಖಲಿಸಲಾಗಿದೆ.

  • ಬೆಂಗ್ಳೂರಲ್ಲಿ ಮತ್ತೊಂದು ಶೂಟೌಟ್: ದರೋಡೆಗೆ ಹೊಂಚು ಹಾಕಿದ್ದ ರೌಡಿಶೀಟರ್‍ಗೆ ಗುಂಡು

    ಬೆಂಗ್ಳೂರಲ್ಲಿ ಮತ್ತೊಂದು ಶೂಟೌಟ್: ದರೋಡೆಗೆ ಹೊಂಚು ಹಾಕಿದ್ದ ರೌಡಿಶೀಟರ್‍ಗೆ ಗುಂಡು

    ಬೆಂಗಳೂರು: ನಗರದಲ್ಲಿ ಮತ್ತೊಂದು ಶೂಟೌಟ್ ನಡೆದಿದೆ. ರಾಜಗೋಪಾಲ್ ನಗರದ ಪಿಳ್ಳಪ್ಪ ಕಟ್ಟೆ ಬಳಿ ಪವನ್ ಎಂಬ ರೌಡಿಶೀಟರ್ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.

    ಇಂದು ಬೆಳಗಿನ ಜಾವ ಕಾರ್ಯಾಚರಣೆ ನಡೆದಿದ್ದು, ದರೋಡೆಗೆ ಬಂದಿದ್ದ ರೌಡಿಶೀಟರ್ ಪವನ್ ಮೇಲೆ ರಾಜಗೋಪಾಲನಗರ ಇನ್ಸ್ ಪೆಕ್ಟರ್ ಮಿಥುನ್ ಶಿಲ್ಪಿ ನೇತೃತ್ವದಲ್ಲಿ ಶೂಟೌಟ್ ನಡೆದಿದೆ. ಗಾಯಾಳು ಪವನ್‍ನನ್ನು ಪೀಣ್ಯದ ಜೈ ಮಾರುತಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪವನ್ ಆಲಿಯಾಸ್ ಪಾಪಿರೆಡ್ಡಿ ಮೇಲೆ 20 ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಿವೆ. ದರೋಡೆಗೆ ಹೊಂಚು ಹಾಕುತ್ತಿದ್ದ ವೇಳೆಯೇ ಪವನ್ ಶೂಟೌಟ್‍ಗೆ ಗುರಿಯಾಗಿದ್ದಾನೆ.

    ಅತ್ತ ಕುಖ್ಯಾತ ಕಳ್ಳ ಕೊಮ್ಮಘಟ್ಟ ಮಂಜನ ಮೇಲೆ ಪೊಲೀಸರು ಮಂಗಳವಾರ ರಾತ್ರಿ ಗುಂಡಿನ ದಾಳಿ ನಡೆಸಿದ್ದಾರೆ. ನಗರದ ಸೋಲದೇವನಹಳ್ಳಿಯ ಆಚಾರ್ಯ ಕಾಲೇಜಿನ ಬಳಿ ಮಂಜ ಇದ್ದ ಬಗ್ಗೆ ಮಾಹಿತಿ ತಿಳಿದ ವಿದ್ಯಾರಣ್ಯಪುರ ಇನ್ಸ್ ಪೆಕ್ಟರ್ ಪುನೀತ್, ಆತನನ್ನು ಹಿಡಿಯಲು ಪ್ರಯತ್ನಿಸಿದ್ರು. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಮಂಜ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ. ಆತ್ಮರಕ್ಷಣೆಗಾಗಿ ಪೊಲೀಸರು ಎರಡು ಸುತ್ತು ಗುಂಡಿನ ದಾಳಿ ನಡೆಸಿದ್ದು, ಒಂದು ಗುಂಡು ಗಾಳಿಯಲ್ಲಿ ಹಾರಿದ್ರೆ, ಮತ್ತೊಂದು ಗುಂಡು ಈತನ ಕಾಲಿಗೆ ಬಿದ್ದಿದೆ. ಗುಂಡೇಟು ತಿಂದ ಮಂಜನನ್ನು ಪೊಲೀಸರು ಸ್ಥಳೀಯ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.

    ಕೊಮ್ಮಘಟ್ಟ ಮಂಜ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಕೆಲ ತಿಂಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಹೊರಗೆ ಬಂದಿದ್ದ ಮಂಜ ಈಗ ಮತ್ತೆ ಪೊಲೀಸರ ಅತಿಥಿಯಾಗಿದ್ದಾನೆ.

  • ಕುಖ್ಯಾತ ಕಳ್ಳ ಕೊಮ್ಮಘಟ್ಟ ಮಂಜನ ಮೇಲೆ ಪೊಲೀಸರ ಗುಂಡಿನ ದಾಳಿ

    ಕುಖ್ಯಾತ ಕಳ್ಳ ಕೊಮ್ಮಘಟ್ಟ ಮಂಜನ ಮೇಲೆ ಪೊಲೀಸರ ಗುಂಡಿನ ದಾಳಿ

    ಬೆಂಗಳೂರು: ನಗರ ಪೊಲೀಸರ ನಿದ್ದೆಗೆಡಿಸಿದ್ದ ಕುಖ್ಯಾತ ಕಳ್ಳ ಕೊಮ್ಮಘಟ್ಟ ಮಂಜನ ಮೇಲೆ ಪೊಲೀಸರು ಮಂಗಳವಾರ ರಾತ್ರಿ ಗುಂಡಿನ ದಾಳಿ ನಡೆಸಿದ್ದಾರೆ.

    ನಗರದ ಸೋಲದೇವನಹಳ್ಳಿಯ ಆಚಾರ್ಯ ಕಾಲೇಜಿನ ಬಳಿ ಮಂಜ ಇದ್ದ ಬಗ್ಗೆ ಮಾಹಿತಿ ತಿಳಿದ ವಿದ್ಯಾರಣ್ಯಪುರ ಇನ್ಸ್ ಪೆಕ್ಟರ್ ಪುನೀತ್, ಆತನನ್ನು ಹಿಡಿಯಲು ಪ್ರಯತ್ನಿಸಿದ್ರು. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಮಂಜ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ. ಆತ್ಮರಕ್ಷಣೆಗಾಗಿ ಪೊಲೀಸರು ಎರಡು ಸುತ್ತು ಗುಂಡಿನ ದಾಳಿ ನಡೆಸಿದ್ದು, ಒಂದು ಗುಂಡು ಗಾಳಿಯಲ್ಲಿ ಹಾರಿದ್ರೆ, ಮತ್ತೊಂದು ಗುಂಡು ಈತನ ಕಾಲಿಗೆ ಬಿದ್ದಿದೆ.

    ಗುಂಡೇಟು ತಿಂದ ಮಂಜನನ್ನು ಪೊಲೀಸರು ಸ್ಥಳೀಯ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಕೊಮ್ಮಘಟ್ಟ ಮಂಜ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಕೆಲ ತಿಂಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಹೊರಗೆ ಬಂದಿದ್ದ ಮಂಜ ಈಗ ಮತ್ತೆ ಪೊಲೀಸರ ಅತಿಥಿಯಾಗಿದ್ದಾನೆ.

     

  • ಶೋಭಾ ಡೇ ವ್ಯಂಗ್ಯ ಟ್ವೀಟ್ ನಂತರ ಮಧ್ಯಪ್ರದೇಶದ ಈ ಪೊಲೀಸ್ ಲೈಫೇ ಬದಲಾಯ್ತು

    ಶೋಭಾ ಡೇ ವ್ಯಂಗ್ಯ ಟ್ವೀಟ್ ನಂತರ ಮಧ್ಯಪ್ರದೇಶದ ಈ ಪೊಲೀಸ್ ಲೈಫೇ ಬದಲಾಯ್ತು

    ನವದೆಹಲಿ: ಮಧ್ಯಪ್ರದೇಶದ ಪೊಲೀಸ್ ಇನ್ಸ್ ಪೆಕ್ಟರೊಬ್ಬರ ಫೋಟೋ ಹಾಕಿ ಅಂಕಣಗಾರ್ತಿ ಶೋಭಾ ಡೇ ಮಾಡಿದ್ದ ಟ್ವೀಟ್‍ನಿಂದ ಪರೋಕ್ಷವಾಗಿ ಇದೀಗ ಆ ಅಧಿಕಾರಿಯ ಲೈಫೇ ಬದಲಾಗಿದೆ.

    180 ಕೆಜಿ ತೂಕವಿದ್ದ ಮಧ್ಯಪ್ರದೇಶದ ಇನ್ಸ್ ಪೆಕ್ಟರ್ ದೌಲತ್‍ರಾಮ್ ಅವರ ಫೋಟೋ ಹಾಕಿ ಶೋಭಾ ಡೇ, ಮುಂಬೈನ ಮುನ್ಸಿಪಲ್ ಚುನಾವಣೆ ದಿನದಂದು “ಇಂದು ಮುಂಬೈನಲ್ಲಿ ಭಾರೀ ಬಂದೋಬಸ್ತ್” ಎಂಬ ವ್ಯಂಗ್ಯಾತ್ಮಕ ಟ್ವೀಟ್ ಮಾಡಿದ್ದರು. ಇದಕ್ಕೆ ಮುಂಬೈ ಪೊಲೀಸರು ಪ್ರತಿಕ್ರಿಯಿಸಿ, ಇವರು ಮುಂಬೈ ಪೊಲೀಸ್ ಸಿಬ್ಬಂದಿಯಲ್ಲ ಎಂದು ಶೋಭಾಗೆ ಉತ್ತರ ನೀಡಿದ್ದರು. ಅಲ್ಲದೆ ಇದು ಹಳೆಯ ಫೋಟೋ ಎಂದು ಹೇಳಿ ಇತರೆ ಟ್ವಿಟ್ಟರ್ ಬಳಕೆದಾರರು ಕೂಡ ಶೋಭಾಗೆ ಬೆವರಿಳಿಸಿದ್ದರು. ಶೋಭಾರ ಈ ಟ್ವೀಟ್‍ನಿಂದ ದೌಲತ್‍ರಾಮ್ ಅವರೂ ನೊಂದುಕೊಂಡಿದ್ದರು. 1993ರಲ್ಲಿ ಪಿತ್ತಕೋಶದ ಸರ್ಜರಿ ಮಾಡಿಸಿಕೊಂಡ ನಂತರ ತೂಕ ಹೆಚ್ಚಾಯ್ತು ಎಂದು ಅವರು ಹೇಳಿದ್ದರು. ಆದ್ರೆ ಈ ಎಲ್ಲಾ ವಿವಾದದ ಮಧ್ಯೆ ಡಾ ಮುಫಾಝಲ್ ಲಕ್ಡಾವಾಲಾ ಎಂಬವರು ದೌಲತ್‍ರಾಮ್ ಅವರನ್ನು ಟ್ವಿಟ್ಟರ್ ಮೂಲಕ ಸಂಪರ್ಕಿಸಿ ಸಹಾಯ ಹಸ್ತ ಚಾಚಿದ್ದಾರೆ.

    ಪ್ರೀತಿಯ ಗೆಳೆಯ, ನಿಮಗೆ ವೈದ್ಯಕೀಯ ಚಿಕಿತ್ಸೆ ಬೇಕಿದ್ದರೆ ನಾನಿದ್ದೇನೆ. ಬಾರಿಯಾಟ್ರಿಕ್ ಸರ್ಜರಿಯಿಂದ ನಿಮಗೆ ಸಹಾಯವಾಗಬಹುದು. ದಯವಿಟ್ಟು ನನ್ನ ಮೇಲೆ ಭರವಸೆ ಇಡಿ. ಎಂದು ಲಕ್ಡಾವಾಲಾ ಟ್ವೀಟ್ ಮಾಡಿದ್ದರು.

    ದೌಲತ್‍ರಾಮ್ ಅವರ ಬಗ್ಗೆ ಕೇಳಿದಾಗ, ಟ್ವೀಟ್‍ವೊಂದರಿಂದ ಅವರ ಬಗ್ಗೆ ಸುದ್ದಿಯಾಗುತ್ತಿರುವುದು ಗೊತ್ತಾಯಿತು. ಒಬ್ಬರ ಆರೋಗ್ಯ ವೃದ್ಧಿಸುತ್ತದೆ, ಅವರ ಜೀವ ಉಳಿಯುತ್ತದೆ ಎಂದಾಗ ಅಂತಹವರಿಗೆ ಸಹಾಯ ಮಾಡುವುದು ವೈದ್ಯನಾದ ನನ್ನ ಕರ್ತವ್ಯ. ದೌಲತ್‍ರಾಮ್ ಅವರ ಬಗ್ಗೆ ಕೇಳಿದಾಗ ನಾನು ಅವರಿಗೆ ಸಹಾಯ ಮಾಡಬಹುದು ಎನ್ನಿಸಿತು. ಆದ್ದರಿಂದ ಅವರನ್ನು ಸಂಪರ್ಕಿಸಿದೆ ಎಂದು ಡಾ ಲಕ್ಡಾವಾಲಾ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    ವೈದ್ಯರು ಸಹಾಯ ಹಸ್ತ ಚಾಚಿದ ನಂತರ ದೌಲತ್ ರಾಮ್ ಅವರು ತಮ್ಮ ಕೆಲವು ಸ್ನೇಹಿತರ ಸಲಹೆ ಪಡೆದು ಚಿಕಿತ್ಸೆ ಪಡೆಯಲು ನಿರ್ಧರಿಸಿದ್ರು. ದೌಲತ್‍ರಾಮ್ ಸರ್ಜರಿಗೆ ಒಪ್ಪಿದ ನಂತರ ಡಾ ಲಕ್ಡಾವಾಲಾ ಹಿರಿಯ ಪೊಲೀಸ್ ಅಧಿಕಾರಿಗಳಾದ ಎಸ್‍ಪಿ ಮನೋಜ್ ಸಿಂಗ್ ಹಾಗೂ ಎಸಿಪಿ ರಾಜೇಶ್ ಸಾಗರ್ ಅವರೊಂದಿಗೆ ಮಾತನಾಡಿ ದೌಲತ್‍ರಾಮ್ ಅವರನ್ನು ಮುಂಬೈನ ಸೈಫೀ ಆಸ್ಪತ್ರೆಗೆ ಕರೆತಂದರು.

    ಸದ್ಯಕ್ಕೆ ದೌಲತ್‍ರಾಮ್ ಅವರನ್ನು ಹಲವು ರೀತಿಯ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪರೀಕ್ಷೆಗಳ ಮೂಲಕ ದೌಲತ್‍ರಾಮ್ ಅವರು ಯಾವ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬುದನ್ನು ಪತ್ತೆ ಮಾಡಿ, ಬಾರಿಯಾಟಿಕ್ ಸರ್ಜರಿ ಅವರಿಗೆ ಸಹಾಯವಾಗಬಲ್ಲುದೇ ಇಲ್ಲವೇ ಎಂಬ ಬಗ್ಗೆ ವೈದ್ಯರು ನಿರ್ಧರಿಸಲಿದ್ದಾರೆ. ದೌಲತ್‍ರಾಮ್ ಅವರ ವರದಿಯನ್ನು ವೈದ್ಯರ ತಂಡ ಪರಿಶೀಲಿಸಿದ ನಂತರ ಸರ್ಜರಿಯ ಬಗ್ಗೆ ನಿರ್ಧರಿಸಲಿದ್ದಾರೆ.

    ನಾನು ಮತ್ತು ನನ್ನ ತಂಡ ದೌಲತ್‍ರಾಮ್ ಅವರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡುವ ಭರವಸೆ ನೀಡುತ್ತೇವೆ. ಅವರು ಶೀಘ್ರವೇ ಗುಣಮುಖರಾಗಲಿ ಎಂದು ಆಶಿಸುತ್ತೇವೆ ಎಂದು ಡಾ ಲಕ್ಡಾವಾಲಾ ಹೇಳಿದ್ದಾರೆ.

    ಅಂದಹಾಗೆ ಲಕ್ಡಾವಾಲಾ ಅವರು ಈಜಿಪ್ಟ್‍ನಿಂದ ಮುಂಬೈಗೆ ಚಿಕಿತ್ಸೆಗೆಂದು ಬಂದಿರುವ 500 ಕೆಜಿ ತೂಕವಿರುವ ವಿಶ್ವದ ದಢೂತಿ ಮಹಿಳೆಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಾಗಿದ್ದಾರೆ.

    ಇದನ್ನೂ ಓದಿ: ತಮಾಷೆ ಮಾಡಲು ಹೋಗಿ ಮುಂಬೈ ಪೊಲೀಸರಿಂದಲೇ ಶೋಭಾ ಡೇ ಟ್ರಾಲ್!