Tag: police

  • ಬ್ಲ್ಯಾಕ್ ಆಂಡ್ ವೈಟ್ ದಂಧೆ: 1 ಕೋಟಿಗೆ 30 ಲಕ್ಷ ಕಮಿಷನ್ ಪಡೆಯುತ್ತಿದ್ದ ಇಬ್ಬರು ಅರೆಸ್ಟ್

    ಬ್ಲ್ಯಾಕ್ ಆಂಡ್ ವೈಟ್ ದಂಧೆ: 1 ಕೋಟಿಗೆ 30 ಲಕ್ಷ ಕಮಿಷನ್ ಪಡೆಯುತ್ತಿದ್ದ ಇಬ್ಬರು ಅರೆಸ್ಟ್

    ಬೆಂಗಳೂರು: ಬ್ಲ್ಯಾಕ್  ಅಂಡ್ ವೈಟ್ ದಂಧೆ ನಡೆಸುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಜಿಮ್ಮಿ ರಾಹುಲ್ ಮತ್ತು ಅಜಯ್ ಬಂಧಿತ ಆರೋಪಿಗಳು. ಬಂಧಿತರಿಂದ 1 ಕೋಟಿ 28 ಲಕ್ಷ ರೂ. ಮೌಲ್ಯದ ಹಳೆಯ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಒಂದು ಕೋಟಿಗೆ ಮೂವತ್ತು ಲಕ್ಷ ಕಮಿಷನ್ ಆಧಾರದ ಮೇಲೆ ಹಣ ಬದಲಾವಣೆ ಮಾಡುತ್ತಿದ್ದರು. ಒಟ್ಟು 53 ಲಕ್ಷ ರೂ. ಮೌಲ್ಯದ ಒಂದು ಸಾವಿರ ರೂಪಾಯಿಯ ನೋಟುಗಳು ವಶಪಡಿಸಿಕೊಳ್ಳಲಾಗಿದೆ. ಉಳಿದವು 500 ರೂಪಾಯಿಯ ನೋಟುಗಳಾಗಿದೆ.

    ಜಿಮ್ಮಿ ರಾಹುಲ್ ಮೂಲತಃ ಮಂಗಳೂರಿನ ನಿವಾಸಿಯಾಗಿದ್ದು, ಅಜಯ್ ಮೂಲತಃ ಕೊಡಗು ನಿವಾಸಿಯಾಗಿದ್ದಾನೆ. ಇವರಿಬ್ಬರು ನಗರದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಅಕ್ರಮವಾಗಿ ಹಳೆಯ ನೋಟುಗಳಿಗೆ ಸೈಟ್ ಗಳನ್ನು ಮಾರಾಟ ಮಾಡುತ್ತಿದ್ದರು. ಇದೇ ರೀತಿ ಎರಡು ಕೋಟಿಗೂ ಹೆಚ್ಚು ಹಣ ಸಂಗ್ರಹ ಮಾಡಿದ್ದ ಇವರು ಸ್ಥಳೀಯವಾಗಿ ಹಣ ಬದಲಾವಣೆ ಮಾಡಲು ಹೋಗಿ ಮೂರು ಬಾರಿ  ಪೊಲೀಸರಿಂದ ಪರಾರಿಯಾಗಿದ್ದರು.

    ಬೆಂಗಳೂರಲ್ಲಿ ಸುಲಭವಾಗಿ ಹಣ ಬದಲಾವಣೆ ಮಾಡಬಹುದು ಎಂದು ತಿಳಿದು ನಗರಕ್ಕೆ ಬಂದಿದ್ದರು. ಚೀಟಿಂಗ್ ಗ್ಯಾಂಗ್ ನ ಜೊತೆ ಹಣ ಬದಲಾವಣೆ ಮಾಡುವುದಕ್ಕೆ ನಗರಕ್ಕೆ ಬಂದಿದ್ದರು. ಇವರ ಬಳಿ ಹಣ ಇದೆ ಎನ್ನುವ ಖಚಿತ ಮಾಹಿತಿಯನ್ನು ಆಧಾರಿಸಿ ಸಿಸಿಸಿ ಪೊಲೀಸರು ಇಂದು ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ.

  • ನಕಲಿ ದಾಖಲೆ ಸೃಷ್ಟಿಸಿ ಜಮೀನು ನಮ್ಮದು ಎಂದವರು ಪೊಲೀಸರ ಅತಿಥಿಯಾದ್ರು

    ನಕಲಿ ದಾಖಲೆ ಸೃಷ್ಟಿಸಿ ಜಮೀನು ನಮ್ಮದು ಎಂದವರು ಪೊಲೀಸರ ಅತಿಥಿಯಾದ್ರು

    ಚಿಕ್ಕೋಡಿ: ಚಿಕ್ಕೋಡಿ ತಾಲೂಕಿನ ವಡಗೋಲಾ ಗ್ರಾಮದಲ್ಲಿ ನಕಲಿ ದಾಖಲೆ ತಂದು ಉಳುಮೆ ಮಾಡುತ್ತಿರುವ ಜಮೀನು ನಮ್ಮದು ಎಂದುವರು ಈಗ ಪೊಲೀಸರ ಅತಿಥಿಯಾಗಿದ್ದಾರೆ.

    ವಡಗೋಲಾ ಗ್ರಾಮದ 7 ಎಕರೆ 10 ಗುಂಟೆ ಜಮೀನನ್ನು ಅಣ್ಣಪ್ಪ ಖೋತ ಎಂಬವರು ಕಳೆದ ಹಲವು ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿದ್ದಾರೆ. ಆದರೆ ಏಕಾಏಕಿ ವಿನೋದ್ ರಾವಸಾಬ್ ಹಳಕರ್ ಎಂಬವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನು ನಾನು ಖರೀದಿ ಮಾಡಿದ್ದು ಎಂದು ಹೇಳಿ ಗೇಣಿ ಹಣ ಕೊಡಿ ಎಂದು ಅವಾಜ್ ಹಾಕಿದ್ದರು.

    ಈ ಸಂದರ್ಭದಲ್ಲಿ ಅಣ್ಣಪ್ಪ ಮತ್ತು ವಿನೋದ್ ಇಬ್ಬರ ನಡುವೆ ಜಗಳ ನಡೆದಿದೆ. ಕೊನೆಗೆ ಸದಲಗಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ವಿನೋದ್ ಹಾಗು 10 ಜನರು ಸೇರಿ ಸೃಷ್ಟಿ ಮಾಡಿರುವ ದಾಖಲೆಗಳು ನಕಲಿ ಎಂದು ಪತ್ತೆಯಾಗಿದೆ.

    ಮೂಲತಃ ಜಮೀನು ಬಾಳಾ ಹರಿ ಟೊಣ್ಣೆ ಎಂಬುವುರಿಗೆ ಸೇರಿದ್ದಾಗಿದೆ. ಆದರೆ ಹಲವು ವರ್ಷಗಳಿಂದ ಕಾಣೆಯಾದ ಬಾಳಾ ಅವರ ಜಮೀನಿನಲ್ಲಿ ಅಣ್ಣಪ್ಪ ಕೃಷಿ ಮಾಡಿಕೊಂಡು ಬಂದಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ವಿನೋದ್ ಕಬ್ಜಾ ಪಡೆದುಕೊಳ್ಳುವ ಸಂಚು ರೂಪಿಸಿದ್ದು ಬಹಿರಂಗವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಜನ ನ್ಯಾಯಾಂಗ ಬಂಧನದಲ್ಲಿ ಇದ್ದು 6 ಜನ ತಲೆ ಮರೆಸಿಕೊಂಡಿದ್ದಾರೆ.

     

  • ಮಾರಕಾಸ್ತ್ರಗಳಿಂದ ಯುವಕನನ್ನು ಕೊಚ್ಚಿ ಕೊಂದ ದುಷ್ಕರ್ಮಿಗಳು

    ಮಾರಕಾಸ್ತ್ರಗಳಿಂದ ಯುವಕನನ್ನು ಕೊಚ್ಚಿ ಕೊಂದ ದುಷ್ಕರ್ಮಿಗಳು

    ಮಡಿಕೇರಿ: ಯುವಕನೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರೋ ಘಟನೆ ಮಡಿಕೇರಿ ನಗರದ ಕನ್ನಂಡ ಬಾಣೆ ಬಡಾವಣೆಯಲ್ಲಿ ನಡೆದಿದೆ. ಬುಧವಾರ ರಾತ್ರಿ ಸುಮಾರು 10.30 ಸುಮಾರಿಗೆ ಆಟೋದಲ್ಲಿ ಬಂದು ದುಷ್ಕರ್ಮಿಗಳಿಂದ ಈ ಕೃತ್ಯ ನಡೆದಿದೆ.

    23 ವರ್ಷದ ಗೋಕುಲ್ ಮೃತ ದುರ್ದೈವಿ. ರಾತ್ರಿ ತನ್ನ ಮನೆಯತ್ತ ಬೈಕ್ ನಲ್ಲಿ ತೆರಳುತ್ತಿದ್ದ ಗೋಕುಲ್ ಮೇಲೆ ಆಟೋದಲ್ಲಿ ಬಂದಿದ್ದ ಹಂತಕರ ತಂಡ ಏಕಾಏಕಿ ದಾಳಿ ನಡೆಸಿದ್ದಾರೆ. ಹಲ್ಲೆಯಿಂದ ಗೋಕುಲ್ ಕುತ್ತಿಗೆ ಹಾಗು ಎದೆ ಭಾಗಕ್ಕೆ ತೀವ್ರ ಪೆಟ್ಟು ಬಿದ್ದಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಗೋಕುಲ್‍ನನ್ನು ಗಮನಿಸಿದ ದಾರಿಹೋಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆತನನ್ನು ಆಸ್ಪತ್ರೆಗೆ ಕರೆದೊಯ್ಯೋ ಪ್ರಯತ್ನ ನಡೆದರೂ ಅಷ್ಟೊತ್ತಿಗಾಗಲೆ ಗೋಕುಲ್ ಮೃತಪಟ್ಟಿದ್ದಾರೆ.

    ಕೆಲ ದಿನಗಳ ಹಿಂದೆ ನಡೆದಿದ್ದ ಚಿಕ್ಕ ಗಲಾಟೆಯೇ ಗೋಕುಲ್ ಕೊಲೆಗೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ದುಶ್ಚಟಕ್ಕೆ ದಾಸನಾಗಿದ್ದ ಗೋಕುಲ್ ಸಾಕಷ್ಟು ಜನರೊಂದಿಗೆ ಜಗಳ ಮಾಡಿಕೊಂಡಿದ್ದ ಎಂದು ಹೇಳಲಾಗಿದ್ದು, ಇಂತಹದೇ ಒಂದು ಸಣ್ಣ ಕಲಹ ಕೊಲೆಯಲ್ಲಿ ಅಂತ್ಯವಾಗಿದೆ.

    ಕೊಲೆಯಾದ 50 ಮೀಟರ್ ದೂರದಲ್ಲಿ ಕೆ.ಎ.12 ಎ.6526 ನಂಬರ್‍ವುಳ್ಳ ಆಟೋವೊಂದು ಪತ್ತೆಯಾಗಿದೆ. ಆಟೋದಲ್ಲಿ ರಕ್ತದ ಕಲೆಗಳು ಗೋಚರಿಸಿದ್ದು, ಹಂತಕರು ಕೊಲೆಗೆ ಇದೇ ಆಟೋವನ್ನ ಬಳಸಿರಬಹುದು ಎಂದು ಶಂಕಿಸಲಾಗಿದೆ.

    ಸ್ಥಳಕ್ಕೆ ಎಸ್‍ಪಿ ರಾಜೇಂದ್ರ ಪ್ರಸಾದ್ ಭೇಟಿ ನೀಡಿದ್ದು, ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಕಾರ್ತಿಕ್ ಎಂಬಾತನನ್ನು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.

    ಕಾರ್ತಿಕ್

  • ಹೆಂಡತಿ ಮೊಬೈಲ್ ಎಂದು ಮಾವನಿಗೆ ಅಶ್ಲೀಲ ವಿಡಿಯೋ ಸೆಂಡ್ ಮಾಡಿದ್ದ ಅಳಿಯ ಅರೆಸ್ಟ್!

    ಹೆಂಡತಿ ಮೊಬೈಲ್ ಎಂದು ಮಾವನಿಗೆ ಅಶ್ಲೀಲ ವಿಡಿಯೋ ಸೆಂಡ್ ಮಾಡಿದ್ದ ಅಳಿಯ ಅರೆಸ್ಟ್!

    ಹುಬ್ಬಳ್ಳಿ: ಹೆಂಡತಿ ಎಂದು ತಿಳಿದು ಮಾವನ ಮೊಬೈಲ್‍ಗೆ ಅಶ್ಲೀಲ ವಿಡಿಯೋ ಸಂದೇಶ ಕಳುಹಿಸುತ್ತಿದ್ದ ಅಳಿಯನನ್ನು ಪೊಲೀಸರು ಬಂಧಿಸಿದ್ದಾರೆ.

    ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ನಿವಾಸಿ ಅರುಣ್ ನಾಯಕ್ ಬಂಧಿತ ಆರೋಪಿ. ಎರಡು ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ನೆಲೆಸಿದ್ದ ಡಾಕ್ಟರ್ ಜೊತೆ ಮದುವೆಯಾಗಿತ್ತು. ಆದರೆ ಮದುವೆ ನಂತರ ಪತ್ನಿ ಗಂಡನ ಮನೆ ತೊರೆದು ಹುಬ್ಬಳ್ಳಿಯ ತವರು ಮನೆಗೆ ಬಂದು ನೆಲೆಸಿದ್ದರು.

    ಕೆಲವು ದಿನಗಳ ಹಿಂದೆ ಪತ್ನಿ ತಮ್ಮ ತಂದೆಯ ಮೊಬೈಲ್‍ನಿಂದ ಪತಿ ಅರುಣ್‍ಗೆ ಕರೆ ಮಾಡಿದ್ದರು. ಅರುಣ್ ಇದುವೇ ತನ್ನ ಪತ್ನಿ ನಂಬರ್ ಎಂದು ತಿಳಿದು ನಿರಂತರವಾಗಿ ಮೊಬೈಲ್‍ಗೆ ಅಶ್ಲೀಲ ವಿಡಿಯೋ, ಚಿತ್ರ ಹಾಗೂ ಸಂದೇಶಗಳನ್ನು ಕಳುಹಿಸಿ ಮಾನಸಿಕ ಹಿಂಸೆ ನೀಡುತ್ತಿದ್ದನು. ಅಳಿಯನ ಕಾಮಾವತಾರ ಕಂಡ ಮಾವ ಮೋಹನ್ ಹೆಗಡೆ ಅಶೋಕ್ ನಗರದ ಪೊಲೀಸ್ ಠಾಣೆ ದೂರು ನೀಡಿದ್ದರು.

    ಕಳೆದ ಒಂದು ವರ್ಷದ ಹಿಂದೆ ವಿಚ್ಚೇದನ ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಕೋರ್ಟ್ ವಿಚಾರಣೆಗಾಗಿ ಮಾರ್ಚ್ 19 ಅಂದರೆ ಸೋಮವಾರ ಹುಬ್ಬಳ್ಳಿ ನಗರಕ್ಕೆ ಬಂದಿದ್ದ ಅರುಣ್ ನಾಯಕ್‍ನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

  • ಮದ್ಯಪಾನ ಬಿಡಿಸಲು ಸ್ವಾಮೀಜಿ ಕೊಟ್ಟ ನಾಟಿ ಔಷಧಿಗೆ ಯುವಕ ಬಲಿ

    ಮದ್ಯಪಾನ ಬಿಡಿಸಲು ಸ್ವಾಮೀಜಿ ಕೊಟ್ಟ ನಾಟಿ ಔಷಧಿಗೆ ಯುವಕ ಬಲಿ

    ಬೆಳಗಾವಿ: ಸ್ವಾಮೀಜಿಯೊಬ್ಬರು ಕುಡಿತ ಬಿಡಿಸಲು ಕೊಟ್ಟ ನಾಟಿ ಔಷಧಿ ಸೇವಿಸಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಮಾರ್ಚ್ 14 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣ್ಣಿಗೇರಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ.

    ಬೆಳಗಾವಿ ತಾಲೂಕಿನ ಜುಮನಾಳ ಗ್ರಾಮದ ನಿವಾಸಿ ಸಿದ್ದರಾಯ್ ನಾಯಕ್ (28) ಮೃತ ಯುವಕ. ಚಿಕ್ಕ ವಯಸ್ಸಿನಲ್ಲೇ ವಿಪರೀತ ಕುಡಿತಕ್ಕೆ ದಾಸರಾಗಿದ್ದ ಹಿನ್ನೆಲೆಯಲ್ಲಿ ಪೋಷಕರು ಸಿದ್ದರಾಯ್ ನಾಯಕ್‍ರನ್ನು ಹಣ್ಣಿಗೇರಿ ಗ್ರಾಮದ ಸ್ವಾಮೀಜಿ ಶಿವಪ್ಪ ಭಾವಿ ಎಂಬವರ ಬಳಿ ಚಿಕಿತ್ಸೆ ಪಡೆಯಲು ಕರೆ ತಂದಿದ್ದರು. ಸ್ವಾಮೀಜಿ ನೀಡಿದ್ದ ಔಷಧಿಯನ್ನು ಕುಡಿದ ಸಿದ್ದರಾಯ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಈ ವಿಷಯವಾಗಿ ದೂರು ದಾಖಲಿಸಿಕೊಳ್ಳದ ನೇಸರ್ಗಿ ಪಟ್ಟಣದ ಪೊಲೀಸರು ರಾಜಿ ಪಂಚಾಯತಿ ಮೂಲಕ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿದ್ದಾರೆ. ಈ ವಿಷಯ ಮಾಧ್ಯಮಗಳಿಗೆ ತಿಳಿಯುತ್ತಿದ್ದಂತೆ ನೇಸರ್ಗಿ ಠಾಣೆ ಪೊಲೀಸರು ಐಪಿಸಿ 328, 304(ಎ) ಅನ್ವಯ ದೂರು ದಾಖಲಿಸಿಕೊಂಡು ತಡರಾತ್ರಿ ಸ್ವಾಮಿಜೀ ಶಿವಪ್ಪ ಭಾವಿಯನ್ನು ವಶಕ್ಕೆ ಪಡೆದಿದ್ದಾರೆ.

    ಗ್ರಾಮದ ಪಂಚರು 3.5 ಲಕ್ಷ ರೂಪಾಯಿಗೆ ರಾಜಿ ಪಂಚಾಯತಿಯಲ್ಲಿ ಪ್ರಕರಣ ಇತ್ಯರ್ಥ ಪಡಿಸಿದ್ದರು. ಒಟ್ಟು ಮೊತ್ತದಲ್ಲಿ ಸಿದ್ದರಾಯ್ ಪೋಷಕರಿಗೆ 85 ಸಾವಿರ ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೂ ಮೃತನ ಕುಟುಂಬಕ್ಕೆ ಹಣ ದೊರಕಿಲ್ಲ. ಉಳಿದ ಹಣ ಯಾರ ಪಾಲಾಗಿದೆ ಎಂಬುದು ತನಿಖೆಯ ಮುಖಾಂತರ ತಿಳಿಯಬೇಕಿದೆ.

    ಕಳೆದ ಹಲವು ವರ್ಷಗಳಿಂದ ಸ್ವಾಮೀಜಿ ಶಿವಪ್ಪ ಭಾವಿ ಗ್ರಾಮದಲ್ಲಿ ಮದ್ಯಪಾನ ಬಿಡಿಸುವ ಕೆಲಸ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ. ಇನ್ನೂ ಯುವಕ ಸಿದ್ದರಾಯ್ ದೇಹವನ್ನು ಸುಟ್ಟು ಹಾಕಿದ್ದು, ಎಲ್ಲ ರೀತಿಯ ಸುಳಿವು ಮುಚ್ಚಿಹಾಕಲು ಪ್ರಯತ್ನಸಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

  • ನಿಧಿ ಆಸೆ ತೋರಿಸಿ ಚಿನ್ನದ ಒಡವೆ ಕದ್ದಿದ್ದ ಕಳ್ಳರ ಬಂಧನ

    ನಿಧಿ ಆಸೆ ತೋರಿಸಿ ಚಿನ್ನದ ಒಡವೆ ಕದ್ದಿದ್ದ ಕಳ್ಳರ ಬಂಧನ

    ಬಳ್ಳಾರಿ: ಮನೆಯಲ್ಲಿ ನಿಧಿ ತೆಗೆಯುವ ಆಸೆ ತೋರಸಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಚಿನ್ನದ ಒಡವೆಗಳನ್ನು ದೋಚಿ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಹೊಸಪೇಟೆ ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.

    ಜಮಖಂಡಿಯ ನಿವಾಸಿ ಕೃಷ್ಣಜೀ (45), ತೆಲಂಗಾಣದ ಆಧಿಲಾಬಾದ್ ಶೇಖ್ ರಹೀಂ(35), ರಾಯಚೂರನ ಹಾಜಿ ಬಾಬಾ(33) ಹಾಗೂ ಹೊಸಪೇಟೆ ನಗರದ ವೆಂಕಟೇಶ(43)ಬಂಧಿತ ಆರೋಪಿಗಳು. ಬಂಧಿತರಿಂದ 23 ಲಕ್ಷ ರೂಪಾಯಿ ಮೌಲ್ಯದ 800 ಗ್ರಾಂ. ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಮಾರ್ಚ್ 3 ರಂದು ಹೊಸಪೇಟೆ ನಗರದ ರಾಣಿಪೇಟೆ ನಿವಾಸಿ ಎಲ್.ನಾಯಕ್ ಎಂಬವರ ಮನೆಯಲ್ಲಿ ನಿಧಿ ಎಂದು ನಂಬಿಸಿ, ಮನೆಯಲ್ಲಿದ್ದ ಚಿನ್ನದ ಒಡೆವೆಗಳನ್ನು ಪೂಜೆಗೆ ಇರಿಸಿ ದೋಚಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ನಗರ ಠಾಣೆ ಪೆÇಲೀಸರು, ಆರೋಪಿಗಳ ಪತ್ತೆಗೆ ಶೋಧ ನಡೆಸಿದ್ದರು.

    ಪೊಲೀಸ್ ಇನ್ಸ್ ಪೆಕ್ಟರ್ ಲಿಂಗನಗೌಡ ನೆಗಳೂರು ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ. ಎಸ್‍ಪಿ ಆರ್.ಚೇತನ್ ಹಾಗೂ ಹೆಚ್ಚುವರಿ ಎಸ್‍ಪಿ ಝಂಡೇಕರರ್ ಅವರು ತಂಡದ ಕಾರ್ಯಾಚರಣೆಗೆ ಮೆಚ್ಚುಗೆ ಸೂಚಿಸಿದ್ದಾರೆ.

     

  • ಸಿಲಿಂಡರಿಗೆ ಬೆಂಕಿ ಹೊತ್ತಿಕೊಂಡ್ರೆ ಹೀಗೆ ಮಾಡಿ- ದೆಹಲಿ ಪೊಲೀಸ್ ಹೇಳಿಕೊಟ್ಟ ಐಡಿಯಾ ವೈರಲ್

    ಸಿಲಿಂಡರಿಗೆ ಬೆಂಕಿ ಹೊತ್ತಿಕೊಂಡ್ರೆ ಹೀಗೆ ಮಾಡಿ- ದೆಹಲಿ ಪೊಲೀಸ್ ಹೇಳಿಕೊಟ್ಟ ಐಡಿಯಾ ವೈರಲ್

    ನವದೆಹಲಿ: ಏಕಾಏಕಿ ಗ್ಯಾಸ್ ಸಿಲಿಂಡರಿಗೆ ಬೆಂಕಿ ಹೊತ್ತಿಕೊಂಡ್ರೆ ಮನೆ ಮಂದಿ ಗಾಬರಿಯಾಗಿ ದಿಕ್ಕುಪಾಲಾಗುವುದು ಸಹಜ. ಆದ್ರೆ ದೆಹಲಿಯ ಪೊಲೀಸರೊಬ್ಬರು ಬೆಂಕಿ ನಂದಿಸಲು ಸುಲಭವಾದ ಉಪಾಯವನ್ನು ಹೇಳಿಕೊಟ್ಟಿದ್ದಾರೆ. ಅವರು ಹೇಳಿಕೊಟ್ಟ ಐಡಿಯಾ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ.

    ಏನಿದು ಹೊಸ ಐಡಿಯಾ: ದೆಹಲಿಯ ಕಾಲೊನಿಯೊಂದರಲ್ಲಿ ನೆರೆದ ಜನರ ಗುಂಪಿನ ಮಧ್ಯೆ ಸಿಲಿಂಡರ್‍ನ ಇಟ್ಟು ಅದರಿಂದ ಗ್ಯಾಸ್ ಲೀಕ್ ಆಗುವಂತೆ ಮಾಡಿದ್ರು. ಈ ವೇಳೆ ಮತ್ತೊಬ್ಬ ಪೊಲೀಸ್ ಅದಕ್ಕೆ ಬೆಂಕಿ ಕೊಟ್ಟಿದ್ದಾರೆ. ಕೂಡಲೇ ಗ್ಯಾಸ್ ಸಿಲಿಂಡರ್ ಉರಿಯಲು ಪ್ರಾರಂಭವಾಯಿತು. ತಕ್ಷಣವೇ ಪೊಲೀಸ್ ಅದರ ಮೇಲೆ ಒದ್ದೆ ಬಟ್ಟೆ ಹಾಕಿ ಗಟ್ಟಿಯಾಗಿ ಮುಚ್ಚಿದ್ದಾರೆ. ಪರಿಣಾಮ ಕ್ಷಣಾರ್ಧದಲ್ಲೇ ಬೆಂಕಿ ನಂದಿ ಹೋಗಿದೆ. ನಂತ್ರ ಬಟ್ಟೆಯನ್ನು ತೆಗೆದು ಗ್ಯಾಸ್ ಆಫ್ ಮಾಡಿದ್ದಾರೆ.

    ಈ ವೀಡಿಯೋವನ್ನು ಪೊಲೀಸ್ ಸುಶೀಲ್ ಕುಮಾರ್ ತಮ್ಮ ಫೇಸ್ಬುಕ್ ವಾಲ್‍ನಲ್ಲಿ ಮಾರ್ಚ್ 19ರಂದು ಹಂಚಿಕೊಂಡಿದ್ದಾರೆ. ಸದ್ಯ ಈ ವೀಡಿಯೋವನ್ನು 60 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಮಾತ್ರವಲ್ಲದೇ 2 ಲಕ್ಷಕ್ಕೂ ಅಧಿಕ ಶೇರ್ ಆಗಿದೆ.

    ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ ಪೊಲೀಸ್‍ನ ಈ ಕಾರ್ಯಕ್ಕೆ ಹಲವು ಮಂದಿ ಭೇಷ್ ಅಂದಿದ್ದಾರೆ. `ನಿಮ್ಮ ಈ ಹೊಸ ಪ್ರಯೋಗ ಚಿಂತನಾತ್ಮಕವಾದುದು. ಇದೊಂದು ಸಾವು-ಬದುಕಿನ ವಿಚಾರವಾಗಿದ್ದು, ಎಲ್ಲರೂ ತಿಳಿದುಕೊಳ್ಳಲೇ ಬೇಕು ಅಂತಾ ಕಮೆಂಟ್ ಮೂಲಕ ಪೊಲೀಸ್ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

    https://www.youtube.com/watch?v=50v7HKeHHXw

  • ಹಾವೇರಿ: ಸಾರಿಗೆ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು

    ಹಾವೇರಿ: ಸಾರಿಗೆ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು

    ಹಾವೇರಿ: ಬೈಕ್‍ಗೆ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಗಜ್ಜೀಹಳ್ಳಿ ಗ್ರಾಮದ ಬಳಿ ನಡೆದಿದೆ.

    42 ವರ್ಷದ ರಾಮಪ್ಪ ಲಮಾಣಿ ಮೃತ ದುರ್ದೈವಿ. ರಾಮಪ್ಪ ಅವರ ಜೊತೆಯಲ್ಲಿ ಬೈಕ್‍ನಲ್ಲಿದ್ದ ಅವರ ಮಗಳು 17 ವರ್ಷದ ಶಿಲ್ಪಾ ಲಮಾಣಿಗೆ ಗಾಯಗಳಾಗಿದ್ದು, ಹಾನಗಲ್ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಮಪ್ಪ ಲಮಾಣಿ ಹಾನಗಲ್ ತಾಲೂಕಿನ ಬಾಳೂರು ತಾಂಡಾ ನಿವಾಸಿ ಎಂದು ತಿಳಿದು ಬಂದಿದೆ.

    ರಾಮಪ್ಪ ತಮ್ಮ ಮಗಳು ಶಿಲ್ಪಾಳನ್ನು ಟ್ಯೂಶನ್ ಕ್ಲಾಸ್‍ಗೆ ಬಿಡಲು ಹಾನಗಲ್ ಪಟ್ಟಣಕ್ಕೆ ಹೋಗುವ ವೇಳೆ ಅಪಘತ ಸಂಭವಿಸಿದೆ. ಸ್ಥಳಕ್ಕೆ ಹಾನಗಲ್ ಪೊಲೀಸ್ ಠಾಣೆಯ ಪಿಎಸ್‍ಐ ಟಿ.ಮಂಜಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಸ್ನಾನಕ್ಕೆ ತೆರಳಿದ್ದ ಬಾಲಕ ಕೆರೆಯಲ್ಲಿ ಸಾವು: ನಾಲ್ವರು ಪಾರು

    ಸ್ನಾನಕ್ಕೆ ತೆರಳಿದ್ದ ಬಾಲಕ ಕೆರೆಯಲ್ಲಿ ಸಾವು: ನಾಲ್ವರು ಪಾರು

    ರಾಯಚೂರು: ಜಿಲ್ಲೆಯ ಸಿಂಧನೂರಿನ ತಾಲೂಕಿನ ಮೂರು ಮೈಲ್ ಕ್ಯಾಂಪ್ ಬಳಿ ಕೆರೆಗೆ ಸ್ನಾನಕ್ಕೆ ತೆರಳಿದ್ದ ಯುವಕ ಜಲಸಮಾಧಿಯಗಿದ್ದಾನೆ.

    ಸಿಂಧನೂರು ಪಟ್ಟಣದ ನಿವಾಸಿ 16 ವರ್ಷದ ಹುಸೇನ್ ಮೃತ ದುರ್ದೈವಿ. ಹುಸೇನ್ ಜೊತೆಯಲ್ಲಿ ಇನ್ನೂ ನಾಲ್ಕು ಜನ ಭಾನುವಾರ ಕೆರೆಗೆ ಸ್ನಾನ ಮಾಡಲು ತೆರಳಿದ್ದರು. ಆದರೆ ಹುಸೇನ್ ಮಾತ್ರ ಕೆರೆಯ ಮದ್ಯದ ಆಳವಾದ ಸ್ಥಳದಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದಾನೆ.

    ಹುಸೇನ್ ಜಲಸಮಾಧಿ ಆಗಿದ್ರೂ, ಆತನ ಗೆಳೆಯರು ಭಯದಿಂದ ಯಾರಿಗೂ ತಿಳಿಸಿರಲಿಲ್ಲ. ತಮ್ಮ ಮಗ ಕಾಣದೇ ಇದ್ದಾಗ ಹುಸೇನ್ ಪೋಷಕರು ಇಂದು ಆತನ ಗೆಳೆಯರನ್ನು ವಿಚಾರಿಸಿದಾಗ ವಿಷಯ ತಿಳಿದಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ, ಹುಸೇನ್ ಮೃತ ದೇಹವನ್ನು ಹೊರ ತೆಗೆದಿದ್ದಾರೆ. ಈ ಸಂಬಂಧ ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಗುಂಡ್ಲುಪೇಟೆ ಉಪಚುನಾವಣೆ: ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ನಡುವೆ ಕಲ್ಲು ತೂರಾಟ

    ಗುಂಡ್ಲುಪೇಟೆ ಉಪಚುನಾವಣೆ: ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ನಡುವೆ ಕಲ್ಲು ತೂರಾಟ

    ಚಾಮರಾಜನಗರ: ಗುಂಡ್ಲುಪೇಟೆ ಉಪಚುನಾವಣಾ ಕಣ ಅಕ್ಷರಶಃ ರಣರಂಗವಾಗಿದೆ. ಒಂದು ಕಡೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದರೆ, ಮತ್ತೊಂದು ಕಡೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಕಲ್ಲು ತೂರಾಟ ನಡೆಯಿತು. ಇದನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಹರಸಾಹಸ ನಡೆಸಿದರು.

    ಗುಂಡ್ಲುಪೇಟೆ ಉಪಚುನಾವಣಾ ಕಣ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಇಂದು ಎರಡು ಪಕ್ಷದ ಅಭ್ಯರ್ಥಿಗಳು ಉಪಚುನಾವಣೆಯ ನಾಮಪತ್ರ ಸಲ್ಲಿಸಿದ್ರು. ಇದಕ್ಕೂ ಮುನ್ನ ಎರಡು ಪಕ್ಷದ ಅಭ್ಯರ್ಥಿಗಳು ಪಕ್ಷ ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ಗುಂಡ್ಲುಪೇಟೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ್ರು. ಬಿಜೆಪಿ ಅಭ್ಯರ್ಥಿ ನಿರಂಜನ್ ಕುಮಾರ್ ರಾಜ್ಯಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಮೆರವಣಿಗೆ ನಡೆಸಿದ್ರೆ, ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವ ಪ್ರಸಾದ್ ಅವರು ಸಚಿವ ಯು.ಟಿ.ಖಾದರ್ ಜೊತೆಗೂಡಿ ಭರ್ಜರಿ ರೋಡ್ ಶೋ ಮಾಡಿದ್ರು. ಈ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿಯ ಸಾವಿರಾರು ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ 766 ರಲ್ಲಿರುವ ತಾಲೂಕು ಕಚೇರಿ ಆವರಣದ ಮುಂದೆ ಜಮಾವಣೆಗೊಂಡರು.

    ಈ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಏರ್ಪಟ್ಟಿತು. ಇದಾದ ಬಳಿಕ ಎರಡು ಪಕ್ಷಗಳ ಕಾರ್ಯಕರ್ತರು ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಈ ಹಂತದಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪೊಲೀಸರು ಪ್ರಯತ್ನಿಸಿದರು. ಈ ವೇಳೆ ಪೊಲೀಸ್ ರ ಮಾತು ಕೇಳದೆ ಕಾರ್ಯಕರ್ತರು ಕಲ್ಲು ತೂರಾಟ ಮಾಡಲು ಮುಂದಾದರು. ಪರಿಸ್ಥಿತಿ ಉದ್ವಿಗ್ನ ಸ್ಥಿತಿಗೆ ತಲುಪಿದ ಕಾರಣ ಪೊಲೀಸರು ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ರು. ಕಲ್ಲು ತೂರಾಟ ಹಾಗೂ ಲಾಠಿ ಚಾರ್ಚ್ ವೇಳೆ ಎರಡು ಪಕ್ಷದ ಕಾರ್ಯಕರ್ತರಿಗೆ ಹಾಗೂ ಪೊಲೀಸರಿಗೆ ಸಣ್ಣ ಪುಟ್ಟಗಾಯಗಳಾಗಿದ್ದು, ಗಾಯಳುಗಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಒಟ್ಟಿನಲ್ಲಿ ಶಾಂತಿಯುತವಾಗಿ ನಡೆಯಬೇಕಿದ್ದ ನಾಮಪತ್ರ ಸಲ್ಲಿಕೆ ಕಾರ್ಯ, ಅಕ್ಷರಶಃ ರಣ ರಂಗವಾಗಿದ್ದು ಸುಳ್ಳಲ್ಲ. ದಿನದಿಂದ ದಿನಕ್ಕೆ ಚುನಾವಣಾ ಕಣ ರಂಗೇರುತ್ತಿದ್ದು, ಮುಂದಿನ ದಿಗಳಲ್ಲಿ ಎರಡು ಪಕ್ಷಗಳ ಚುನಾವಣಾ ಕುಸ್ತಿ ಯಾವ ಹಂತಕ್ಕೆ ತಲುಪುತ್ತದೆ ಎಂಬುದನ್ನು ಕಾದು ನೋಡಬೇಕಿದೆ