Tag: police

  • ಹುಡುಗ, ಹುಡುಗಿಯ ಲವ್ ಕೇಸ್‍ನಲ್ಲಿ ಉಪ್ಪಿಯ ಡಾ. ಮೋದಿ ಸ್ಕ್ರಿಪ್ಟ್ ಹೋಯ್ತು!

    ಹುಡುಗ, ಹುಡುಗಿಯ ಲವ್ ಕೇಸ್‍ನಲ್ಲಿ ಉಪ್ಪಿಯ ಡಾ. ಮೋದಿ ಸ್ಕ್ರಿಪ್ಟ್ ಹೋಯ್ತು!

    ಬೆಂಗಳೂರು: ಹುಡುಗ, ಹುಡುಗಿಯ ಲವ್, ಥಳಿತ ಕೇಸ್‍ನಲ್ಲಿ ನಟ ಉಪೇಂದ್ರ ಅವರ ಮುಂದಿನ ‘ಡಾಕ್ಟರ್ ಮೋದಿ’ ಸ್ಕ್ರಿಪ್ಟ್ ಕಾಪಿಯನ್ನು ಯುವತಿಯ ಪೋಷಕರು ಕದ್ದುಕೊಂಡು ಹೋಗಿದ್ದಾರೆಂಬ ಆರೋಪ ಕೇಳಿ ಬಂದಿದೆ.

    ಈ ಪ್ರಕರಣದ ಸಂಬಂಧ ಪ್ರಿಯಕರ ರಮೇಶ್ ತಾನು ಪ್ರೀತಿಸುತ್ತಿದ್ದ ಯುವತಿಯ ತಾಯಿ ವೇದಾವತಿ ಮತ್ತು ಮಾವ ರಮೇಶ್ ಮೇಲೆ ಎಚ್‍ಎಸ್‍ಆರ್ ಲೇಔಟ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಏನಿದು ಲವ್ ಸ್ಟೋರಿ?
    ತೀರ್ಥಹಳ್ಳಿ ಮೂಲದ ಎಂಕಾಂ ಓದಿರುವ ಶ್ರೀಕರ ಹಾಗೂ ಕೋಲಾರದ ಬಿಇ ಪದವೀಧರೆ ಶ್ವೇತಾಗೆ ಶಾದಿ ಡಾಟ್ ಕಾಂನಲ್ಲಿ ಪರಿಚಯವಾಗಿದೆ. ಈ ಪರಿಚಯ ಕೆಲ ದಿನಗಳ ಬಳಿಕ ಪ್ರೀತಿಗೆ ತಿರುಗಿದೆ. ನಗರದ ಪ್ರತಿಷ್ಠಿತ ಕಂಪೆನಿಗಳಲ್ಲಿ ಉದ್ಯೋಗ ಮಾಡಿಕೊಂಡಿದ್ದ ಇವರು ಕಳೆದ ಒಂದು ವರ್ಷ 8 ತಿಂಗಳಿನಿಂದ ಹೆಚ್‍ಎಸ್‍ಆರ್ ಲೇಔಟ್‍ನಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು.

    ಈ ಮಧ್ಯೆ ಶ್ವೇತಾ ಎರಡು ಭಾರಿ ಗರ್ಭವತಿಯಾಗಿದ್ದು, ತಾಯಿ ಅಬಾರ್ಷನ್ ಮಾಡಿಸಿದ್ದರಂತೆ. ಇದಾದ ಬಳಿಕ ಶ್ವೇತಾ ತಾಯಿ ವೇದಾವತಿ ಮತ್ತು ಮಾವ ರಮೇಶ್, ಕದ್ದು ಮುಚ್ಚಿ ಮದುವೆಯಾಗಿರುವುದು ಸರಿಯಲ್ಲ, ಅದ್ಧೂರಿಯಾಗಿ ಸಾರ್ವಜನಿಕವಾಗಿ ನಿಮ್ಮಿಬ್ಬರಿಗೂ ಮದುವೆ ಮಾಡಿಸುವುದಾಗಿ ಭರವಸೆ ನೀಡಿ ಮಗಳನ್ನು ಕೋಲಾರಕ್ಕೆ ಕರೆದೊಯ್ದಿದ್ದಾರೆ.

    ರಮೇಶ್ ಆರೋಪ ಏನು?
    ಊರಿಗೆ ಕರೆದೊಯ್ದ ನಂತರ ಶ್ವೇತಾ ಪೋಷಕರು ಮದುವೆ ವಿಚಾರ ಮಾತನಾಡಬೇಕು ಕೋಲಾರಕ್ಕೆ ಬಾ ಎಂದು ನನಗೆ ಫೋನ್ ಮಾಡಿ ತಿಳಿಸಿದ್ದರು. ಫೋನ್ ಕರೆಯ ಹಿನ್ನೆಲೆಯಲ್ಲಿ ಭಾನುವಾರ ಕೋಲಾರಕ್ಕೆ ಬಂದಾಗ ನನ್ನ ಮೇಲೆ ಮೇಲೆ ಶ್ವೇತಾ ತಾಯಿ ವೇದಾವತಿ ತಮ್ಮ ರಮೇಶ್ ಕೆಲ ಗೂಂಡಾಗಳನ್ನು ಕರೆಸಿ ಹಲ್ಲೆ ಮಾಡಿಸಿದ್ದಾರೆ. ಅಷ್ಟೇ ಅಲ್ಲದೇ ತಮ್ಮದೇ ಕಾರಿನಲ್ಲಿ ನನ್ನನ್ನು ಬೆಂಗಳೂರಿನ ಹೆಚ್‍ಎಸ್‍ಆರ್ ಲೇಔಟ್‍ನ ಮನೆಗೆ ಕರೆ ತಂದು ನನ್ನ ಮತ್ತು ಶ್ವೇತಾ ಮದುವೆಗೆ ಸಂಬಂಧಿಸಿದ ಫೋಟೋಗಳು, ಲವ್ ಲೆಟರ್ ಗಳು ಮತ್ತು ನನ್ನ ಆಫೀಸ್‍ಗೆ ಸಂಬಂಧಿಸಿದ ಕೆಲ ಡಾಟಾ ಮತ್ತು ಮಾರ್ಕ್ಸ್ ಕಾರ್ಡ್‍ಗಳನ್ನು ಕದ್ದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.

    ಮೋದಿ ಸ್ಕ್ರಿಪ್ಟ್ ಹೋಯ್ತು:
    ನಿರ್ದೇಶಕ ಉದಯ್ ಪ್ರಕಾಶ್ ಅವರಿಗೆ ಸಹಾಯಕನಾಗಿ ನಾನು ಕೆಲಸ ಮಾಡುತ್ತಿದ್ದು, ನಟ ಉಪೇಂದ್ರ ಅವರ ಮುಂದಿನ ಚಿತ್ರ ಡಾಕ್ಟರ್ ಮೋದಿಗೆ ಸ್ಕ್ರಿಪ್ಟ್ ಮಾಡಿದ್ದೆ. ಆ ಸ್ಕ್ರಿಪ್ಟ್ ಹಾರ್ಡ್ ಕಾಪಿಯನ್ನೂ ಶ್ವೇತಾ ಪೋಷಕರು ಕದ್ದುಕೊಂಡು ಹೋಗಿದ್ದಾರೆ. ಹೀಗಾಗಿ ನನಗೆ ಈ ಪ್ರಕರಣದಲ್ಲಿ ನ್ಯಾಯ ಒದಗಿಸಬೇಕೆಂದು ಎಚ್‍ಎಸ್‍ಆರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

  • ಬೆಂಗಳೂರಿಗೆ ಬಾಂಬ್ ಬೆದರಿಕೆ ಕರೆ: ಮೆಟ್ರೋ ಸ್ಟೇಷನ್‍ಗಳಲ್ಲಿ ಬಿಗಿ ಭದ್ರತೆ

    ಬೆಂಗಳೂರಿಗೆ ಬಾಂಬ್ ಬೆದರಿಕೆ ಕರೆ: ಮೆಟ್ರೋ ಸ್ಟೇಷನ್‍ಗಳಲ್ಲಿ ಬಿಗಿ ಭದ್ರತೆ

    ಬೆಂಗಳೂರು: ಸಿಲಿಕಾನ್ ಸಿಟಿಗೆ ಶನಿವಾರ ರಾತ್ರಿ ಬಾಂಬ್ ಬೆದರಿಕೆ ಕರೆ ಬಂದಿದೆ. ಈ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

    ಕರೆ ಮಾಡಿದ ವ್ಯಕ್ತಿ `ಬೆಂಗಳೂರು ಮೆಟ್ರೋ ಬಾಂಬ್’ ಎಂದು ಅರೆಬಿಕ್ ಭಾಷೆಯಲ್ಲಿ ಹೇಳಿದ್ದು, ಈ ಬಗ್ಗೆ ರಾಷ್ಟ್ರೀಯ ತನಿಖಾ ದಳದವರು ಬೆಂಗಳೂರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.

    ಕರೆ ಬಂದಿರುವ ಹಿನ್ನೆಲೆಯಲ್ಲಿ ಶನಿವಾರ ಇಡೀ ದಿನ ಮೆಟ್ರೋ ಸ್ಟೇಷನ್‍ನಲ್ಲಿ ತಪಾಸಣೆ ನಡೆಸಲಾಗಿತ್ತು. ಮಾತ್ರವಲ್ಲದೇ ಇಂದು ಕೂಡ ಬೆಂಗಳೂರು ಪೊಲೀಸರು ತಪಾಸಣೆ ಮುಂದುವರೆಸಿದ್ದಾರೆ.

    ಮೆಟ್ರೋ ಸ್ಟೇಷನ್ ಹಾಗೂ ಅನುಮಾನಾಸ್ಪದ ವ್ಯಕ್ತಿಗಳನ್ನು ಪೊಲೀಸರು ತಪಾಸಣೆ ಮಾಡುತ್ತಿದ್ದಾರೆ. ಕಬ್ಬನ್ ಪಾರ್ಕ್, ಎಂಜಿ ರಸ್ತೆ ಸೇರಿದಂತೆ ಪ್ರಮುಖ ಮೆಟ್ರೋ ಸ್ಟೇಷನ್‍ಗಳಲ್ಲಿ ಬಿಗಿಭದ್ರತೆ ಏರ್ಪಡಿಸಲಾಗಿದೆ.

  • ಟ್ರಾಫಿಕ್ ರೂಲ್ಸ್ ಪಾಲಿಸುವಂತೆ ಮಾಡಲು ಬಾಗಲಕೋಟೆ ಪೊಲೀಸರ ವಿನೂತನ ಪ್ರಯೋಗ

    ಟ್ರಾಫಿಕ್ ರೂಲ್ಸ್ ಪಾಲಿಸುವಂತೆ ಮಾಡಲು ಬಾಗಲಕೋಟೆ ಪೊಲೀಸರ ವಿನೂತನ ಪ್ರಯೋಗ

    ಬಾಗಲಕೋಟೆ: ನಗರದಲ್ಲಿ ಟ್ರಾಫಿಕ್ ನಿಯಮಗಳನ್ನ ಪಾಲನೆ ಮಾಡದ ವಾಹನ ಸವಾರರಿಗೆ ಬಾಗಲಕೋಟೆ ಗ್ರಾಮೀಣ ಠಾಣೆಯ ಪೊಲೀಸರು ಸಿಹಿ ಹಂಚುವ ಮೂಲಕ ಇನ್ನು ಮುಂದೆ ಕಡ್ಡಾಯವಾಗಿ ಟ್ರಾಫಿಕ್ ನಿಯಮಗಳನ್ನ ಪಾಲಿಸುವಂತೆ ತಿಳುವಳಿಕೆ ಹೇಳಿದ್ದಾರೆ.

    ಏಪ್ರಿಲ್ 3 ರವರೆಗೆ ಟ್ರಾಫಿಕ್ ನಿಯಮಗಳನ್ನ ಪಾಲಿಸದ ವಾಹನ ಸವಾರರ ಹೆಸರು ಮತ್ತು ವಾಹನದ ನಂಬರ್ ಗಳನ್ನ ಪೊಲೀಸರು ನಮೂದಿಸಿಕೊಂಡು ಫೈನ್ ಹಾಕದೇ ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದಾರೆ. ಏಪ್ರಿಲ್ 3 ರ ನಂತರ ಎರಡನೇ ಬಾರಿಗೂ ನಿಯಮಗಳನ್ನ ಪಾಲಿಸದವರಿಗೆ ದಂಡ ಮತ್ತು ವಾಹನ ಪರವಾನಿಗೆಯನ್ನ ರದ್ದುಗೊಳಿಸಲಾಗುವುದು ಎಂದು ಬಾಗಲಕೋಟೆ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಎಚ್ಚರಿಕೆ ನೀಡಿದ್ದಾರೆ.

    ಟ್ರಾಫಿಕ್ ಪೊಲೀಸರು ನಗರದ ವಿದ್ಯಾಗಿರಿ, ನವನಗರ, ಎಪಿಎಂಸಿ ಮುಂತಾದ 8 ಮುಖ್ಯ ಮಾರ್ಗಗಳಲ್ಲಿ ಪ್ರತಿಯೊಬ್ಬ ವಾಹನ ಸವಾರರನ್ನು ನಿಲ್ಲಿಸಿ ಮುನ್ಸೂಚೆನೆಯನ್ನು ನೀಡುತ್ತಿದ್ದಾರೆ. ಪೊಲೀಸ್ ಇಲಾಖೆಯ ಈ ವಿನೂತನ ಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

  • ವೀಡಿಯೋ: ಕಾರಿನಲ್ಲಿ ಬಂದು 1 ಲಕ್ಷ ರೂ. ಮೌಲ್ಯದ 15 ಸೀರೆ ಕದ್ದು ಪರಾರಿಯಾದ ಖತರ್ನಾಕ್ ಕಳ್ಳಿಯರು

    ವೀಡಿಯೋ: ಕಾರಿನಲ್ಲಿ ಬಂದು 1 ಲಕ್ಷ ರೂ. ಮೌಲ್ಯದ 15 ಸೀರೆ ಕದ್ದು ಪರಾರಿಯಾದ ಖತರ್ನಾಕ್ ಕಳ್ಳಿಯರು

    ಮಂಡ್ಯ: ಗ್ರಾಹಕರ ವೇಷದಲ್ಲಿ ಬಂದ ನಾಲ್ವರು ಖತರ್ನಾಕ್ ಮಹಿಳೆಯರು ಸುಮಾರು 1 ಲಕ್ಷ ರೂ. ಮೌಲ್ಯದ 15 ಸೀರೆಗಳನ್ನು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದ್ದು, ಇದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆಎಂ ದೊಡ್ಡಿಯಲ್ಲಿರುವ ರಂಗೋಲಿ ಸಿಲ್ಕ್ಸ್ ಬಟ್ಟೆ ಅಂಗಡಿಗೆ ಶುಕ್ರವಾರ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ನಾಲ್ವರು ಮಹಿಳೆಯರು ಬಂದಿದ್ದಾರೆ. ಕಾರಿನಲ್ಲಿ ಬಂದಿದ್ದ ತಮಿಳು ಮಾತನಾಡುತ್ತಿದ್ದ ಮಹಿಳೆಯರು ಸೀರೆ ತೆಗೆದುಕೊಳ್ಳಲು ಬಂದಿರುವುದಾಗಿ ಹೇಳಿ ಹಲವಾರು ಸೀರೆಗಳನ್ನ ತೆಗೆಸಿ ನೋಡುವ ನಾಟಕವಾಡಿದ್ದಾರೆ. ನಂತರ ತಮ್ಮ ಸುತ್ತ ಸೀರೆಯನ್ನು ಅಡ್ಡ ಹಿಡಿದು ಸೀರೆ ನೋಡುತ್ತಿರುವಂತೆ ನಟಿಸಿ ಅಂಗಡಿಯವನಿಗೆ ತಿಳಿಯದಂತೆ ತಾವು ಉಟ್ಟಿದ್ದ ಸೀರೆಯೊಳಗೆ ಹೊಸ ಸೀರೆಗಳನ್ನ ಬಚ್ಚಿಟ್ಟುಕೊಂಡಿದ್ದಾರೆ.

    ನಾಲ್ವರು ಮಹಿಳೆಯರು ಅಂಗಡಿಯ ಕೆಲಸಗಾರನ ಎದುರೇ ಸೀರೆಯನ್ನ ಅಡ್ಡ ಹಿಡಿದು 15 ಸೀರೆ ಎಗರಿಸಿ ತಾವು ಬಂದ ಕಾರಿನಲ್ಲೇ ಪರಾರಿಯಾಗಿದ್ದಾರೆ. ಮಹಿಳೆಯರು ಹೋದ ನಂತರ ಸೀರೆ ಕಳ್ಳತನ ಆಗಿರುವುದು ಗೊತ್ತಾಗಿದ್ದು ಅಂಗಡಿ ಮಾಲೀಕ ರವೀಂದ್ರ ಈ ಬಗ್ಗೆ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    https://www.youtube.com/watch?v=xRJvXG2noGo

     

  • ದಾವಣಗೆರೆಯಲ್ಲಿ ನವಿಲು ಬೇಟೆಯಾಡಿದ ಇಬ್ಬರ ಬಂಧನ

    ದಾವಣಗೆರೆಯಲ್ಲಿ ನವಿಲು ಬೇಟೆಯಾಡಿದ ಇಬ್ಬರ ಬಂಧನ

    ದಾವಣಗೆರೆ: ರಾಷ್ಟ್ರ ಪಕ್ಷಿ ನವಿಲನ್ನು ಬೇಟೆಯಾಡಿದ ಆರೋಪದ ಮೇಲೆ ಹರಿಹರ ಪೆÇಲೀಸರು ಇಬ್ಬರನ್ನು ಬಂಧಿಸಿದ್ದಾರೆ.

    ದಾವಣಗೆರೆ ನಗರದ ಎಸ್‍ಎಸ್ ಲೇಔಟ್ ನಿವಾಸಿ ಮೆಹಬೂಬ್ ಬಾಷಾ (55), ಟಿಪ್ಪು ನಗರದ ನಿವಾಸಿ ಇಕ್ಬಾಲ್ (28) ಬಂಧಿತ ಆರೋಪಿಗಳು. ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ಬಳಿ ಶುಕ್ರವಾರ ತಡ ರಾತ್ರಿ ನವಿಲನ್ನು ಬೇಟೆಯಾಡಲಾಗಿದ್ದು, ಹೆಣ್ಣು ನವಿಲನ್ನು ಗುಂಡಿಟ್ಟು ಕೊಲ್ಲಾಗಿದೆ.

    ಬಂಧಿತರಿಂದ ಲೈಸ್ಸನ್ಡ್ ಎಸ್‍ಬಿಬಿಎಲ್ ಗನ್ (ಸಿಂಗಲ್ ಬ್ಯಾರಲ್ ಬ್ರೀಚ್ ಲೋಡಿಂಗ್ ರೈಫಲ್) ವಶಪಡಿಸಿಕೊಳ್ಳಲಾಗಿದೆ. ಈ ಇಬ್ಬರು ನವಿಲು ಮಾಂಸ ಮಾರಾಟಕ್ಕಾಗಿ ಬೇಟೆಗೆ ಇಳಿದಿದ್ದು, ಹರಿಹರ ಸಿಪಿಐ ಜಯಣ್ಣ ಎಸ್.ನೇಮಗೌಡ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ.

    ಈ ಬಗ್ಗೆ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹೆಬ್ಬಗೋಡಿಯಲ್ಲಿ ಮಾಲೀಕನಿಗೆ ಚಾಕು ಹಾಕಿ ಅಂಗಡಿ ಲೂಟಿ

    ಹೆಬ್ಬಗೋಡಿಯಲ್ಲಿ ಮಾಲೀಕನಿಗೆ ಚಾಕು ಹಾಕಿ ಅಂಗಡಿ ಲೂಟಿ

    – ಅತ್ತಿಗುಪ್ಪೆಯಲ್ಲಿ ಯುವಕನನ್ನು ತಡೆದು ದರೋಡೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪುಂಡರು, ಪೋಕರಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಕತ್ತಲಾದ್ರೆ ಒಬ್ಬೊಬ್ಬರೇ ಓಡಾಡೋದು ಕಷ್ಟವಾಗಿದೆ. ಬೆಂಗಳೂರು ಬೀದಿಗಳಲ್ಲಿ ಹೆಣ್ಣುಮಕ್ಕಳಿಗೆ ಲೈಂಗಿಕ ದೌರ್ಜನ್ಯದ ಭೀತಿ ಒಂದೆಡೆಯಾದ್ರೆ, ಪುರುಷರ ಕೈಯಿಂದ ಹಣ, ಮೊಬೈಲ್ ಮತ್ತಿತರ ವಸ್ತುಗಳನ್ನು ದೋಚೋದು ಮತ್ತೊಂದೆಡೆ. ಎರಡೆರಡು ಬೈಕ್‍ಗಳಲ್ಲಿ ಬರ್ತಾರೆ. ಆಯಕಟ್ಟಿನ ಜಾಗದಲ್ಲಿ ಅಡ್ಡಹಾಕ್ತಾರೆ. ಚಾಕು ತೋರಿಸಿ, ಹಲ್ಲೆ ನಡೆಸಿ, ಕೈಯಲ್ಲಿ, ಜೇಬಲ್ಲಿ, ಮೈಯಲ್ಲಿ ಇರೋದನ್ನು ದೋಚ್ತಾರೆ.

    ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನಲ್ಲಿಯೂ ದರೋಡೆ ಪ್ರಕರಣಗಳು ಹೆಚ್ಚಾಗ್ತಿವೆ. ಕಳೆದ ರಾತ್ರಿ ಹೆಬ್ಬಗೋಡಿಯ ವಿನಾಯಕ ನಗರದಲ್ಲಿ ಉತ್ತರಪ್ರದೇಶ ಮೂಲದ ವಿಕಾಶ್ ಮಿಶ್ರಾ ಅನ್ನೋರ ಮೊಬೈಲ್ ಶಾಪ್‍ಗೆ ನುಗ್ಗಿದ ದುಷ್ಕರ್ಮಿಗಳು, ಅಂಗಡಿಯ ಮಾಲೀಕನಿಗೆ ಚಾಕುವಿನಿಂದ ಇರಿದು ಹಣ ಹಾಗೂ ಮೊಬೈಲ್‍ಗಳನ್ನ ದೋಚಿ ಪರಾರಿಯಾಗಿದ್ದಾರೆ.

    ಲಾಂಗು ಮಚ್ಚುಗಳಿಂದ ದುಷ್ಕರ್ಮಿಗಳು ಅಂಗಡಿ ಮೇಲೆ ದಾಳಿ ನಡೆಸಿದ್ದು, ರೌಡಿಶೀಟರ್ ನೇಪಾಳಿ ಮಂಜನ ಸಹಚರರಾದ ಕಫತ್ವಾಲ್ ಅಜಿತ್, ಚಂದನ್ ಸೇರಿದಂತೆ ಆರು ಮಂದಿಯ ತಂಡ ಈ ಕೃತ್ಯ ನಡೆಸಿದೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿರೋ ಅಂಗಡಿ ಮಾಲೀಕ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ಮಾಡ್ತಿದ್ದಾರೆ. ಘಟನೆ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದರೋಡೆಕೋರರ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

    ಮಾರ್ಚ್ 9ರಂದು ರಾತ್ರಿ ವಿಜಯನಗರದ ಅತ್ತಿಗುಪ್ಪೆಯಲ್ಲಿ ಮತ್ತೊಂದು ದರೋಡೆ ನಡೆದಿದೆ. ಮಾಜಿ ಕಾರ್ಪೋರೇಟರ್ ದೊಡ್ಡಣ್ಣ ಅವರ ಮನೆಯ ಮುಂದೆಯೇ ದರೋಡೆ ನಡೆದಿದೆ. ದಾರಿಯಲ್ಲಿ ಒಬ್ಬಂಟಿಯಾಗಿ ತೆರಳ್ತಿದ್ದ ಯುವಕನ ಮೇಲೆ ಬೈಕ್‍ಗಳಲ್ಲಿ ಬಂದ ಮೂವರು ದಾಳಿ ನಡೆಸಿದ್ದು, ಯುವಕನನ್ನು ಹಿಂಬದಿಯಿಂದ ನೂಕಿ, ಚಾಕು ತೋರಿಸಿ ಬೆದರಿಸಿದ್ದಾರೆ. ದರೋಡೆಕೋರರಿಗೆ ಹೆದರಿ ಮೊಬೈಲ್, ಪರ್ಸ್ ಕೊಟ್ಟು ಯುವಕ ಬಚಾವಾಗಿದ್ದಾನೆ. ದರೋಡೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    https://www.youtube.com/watch?v=nXnHzlW_434&feature=youtu.be

  • ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಎನ್‍ಆರ್‍ಪುರ ಠಾಣೆಯ ಪಿಎಸ್‍ಐ

    ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಎನ್‍ಆರ್‍ಪುರ ಠಾಣೆಯ ಪಿಎಸ್‍ಐ

    ಚಿಕ್ಕಮಗಳೂರು: ಆರೋಪಿಗಳನ್ನು ಠಾಣೆಯಿಂದ ಬಿಟ್ಟು ಕಳುಹಿಸಿ ಕರ್ತವ್ಯ ಲೋಪ ಎಸಗಿದ್ದಕ್ಕೆ ಪೊಲೀಸ್ ವರಿಷ್ಟಾಧಿಕಾರಿ ಶೋಕಾಸ್ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಎನ್‍ಆರ್‍ಪುರ ಠಾಣೆ ಪಿಎಸ್‍ಐ ಸುನೀತಾ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಭೇಟಿ ನೀಡಿ ಮನವೊಲಿಸಿದ ನಂತರ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅಣ್ಣಾಮಲೈ ಶುಕ್ರವಾರ ಮುಂಜಾನೆ 4.30ರವರೆಗೂ ಎನ್.ಆರ್.ಪುರದಲ್ಲೇ ಇದ್ದು, ಪರಿಸ್ಥಿತಿಯನ್ನು ನಿಭಾಯಿಸಿದರು.

    ಹನಿಟ್ರ್ಯಾಪ್ ಪ್ರಕರಣದ ಆರೋಪಿಗಳನ್ನು ಡಿಸಿಐಬಿ ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಒಪ್ಪಿಸಿದ್ದರು. ಠಾಣೆ ಪೊಲೀಸರು ಆರೋಪಿಗಳನ್ನು ಬಿಟ್ಟುಕಳುಹಿಸಿ, ನಂತರ ಪ್ರಕರಣ ದಾಖಲಿಸಿದ್ದರು. ಎಎಸ್ಪಿ ಅಣ್ಣಪ್ಪನಾಯ್ಕ ಅವರಿಗೆ ತನಿಖೆ ನಡೆಸಲು ಎಸ್ಪಿ ಸೂಚಿಸಿದ್ದರು.

    ಪ್ರಕರಣ ನಿರ್ವಹಿಸುವಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಜಗನ್ನಾಥ ಮತ್ತು ಪಿಎಸ್‍ಐ ಸುನೀತಾ ಕರ್ತವ್ಯ ಲೋಪ ಎಸಗಿರುವುದು ತನಿಖೆಯಲ್ಲಿ ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಎಸ್ಪಿ ಇಬ್ಬರಿಗೂ ನೋಟಿಸ್ ನೀಡಿದ್ದರು. ತಪ್ಪು ಮಾಡಿರುವುದು ಸಾಬೀತಾದರೆ ಇಬ್ಬರ ವಿರುದ್ಧವೂ ಕ್ರಮಜರುಗಿಸುವ ಅಧಿಕಾರ ತನಗೆ ಇದೆ ಎಂದು ಎಸ್ಪಿ ಇತ್ತೀಚೆಗಷ್ಟೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು.

    ಅಮಾನತು ಆಗುವ ಭೀತಿಯಲ್ಲಿ ಪಿಎಸ್ ಐ ಆತ್ಮಹತ್ಯೆಗೆ ಯತ್ನಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

  • ಮಂಡ್ಯ ಶಾಕಿಂಗ್: ಪ್ರೀತಿ ನಿರಾಕರಿಸಿದ್ದಕ್ಕೆ ಶಾಲೆಯ ಮೂರನೇ ಮಹಡಿಯಿಂದ ತಳ್ಳಿದ!

    ಮಂಡ್ಯ ಶಾಕಿಂಗ್: ಪ್ರೀತಿ ನಿರಾಕರಿಸಿದ್ದಕ್ಕೆ ಶಾಲೆಯ ಮೂರನೇ ಮಹಡಿಯಿಂದ ತಳ್ಳಿದ!

    ಮಂಡ್ಯ: ಪ್ರೀತಿ ನಿರಾಕರಿಸಿದಕ್ಕೆ ಅಪ್ರಾಪ್ತೆಯನ್ನ ಅಪ್ರಾಪ್ತ ಬಾಲಕನೊಬ್ಬ ಶಾಲೆಯ 3ನೇ ಮಹಡಿಯಿಂದ ಕೆಳಗೆ ತಳ್ಳಿರುವ ಅಘಾತಕಾರಿ ಘಟನೆ ಮಂಡ್ಯ ತಾಲೂಕಿನ ಕೊಮ್ಮೇರಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಕೊಮ್ಮೇರಹಳ್ಳಿಯ ಶಾಲೆಯಲ್ಲಿ 9 ನೇ ತರಗತಿಯಲ್ಲಿ ಓದುತ್ತಿರುವ ಬಾಲಕ ತನ್ನದೇ ಶಾಲೆಯ 7 ನೇ ವಿದ್ಯಾರ್ಥಿನಿಗೆ ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ. ಮಾರ್ಚ್ 16 ರಂದು ಫೀಸ್ ಕಟ್ಟಲು ಬಾಲಕಿ ಶಾಲೆಗ ಹೋದಾಗ ಹಿಂದಿನಿಂದ ಸ್ನೇಹಿತೆಯಂತೆ ಬಂದ ಅಪ್ರಾಪ್ತ, ಬಾಲಕಿಯ ಕಣ್ಣು ಮುಚ್ಚಿ ಶಾಲೆಯ 3ನೇ ಮಹಡಿಗೆ ಕರೆದುಕೊಂಡು ಹೋಗಿದ್ದಾನೆ. ಅನುಮಾನಗೊಂಡ ಬಾಲಕಿ, ಅವನ ಕೈ ಬಿಡಿಸಿಕೊಂಡು ನೋಡಿದಾಗ ಗಾಬರಿಯಾಗಿದ್ದಾಳೆ.

    ಮಹಡಿಯ ಮೇಲೂ ಸಹ ಬಾಲಕ ತನ್ನನ್ನು ಪ್ರೀತಿಸುವಂತೆ ಕೇಳಿದ್ದಾನೆ. ಇದಕ್ಕೆ ನಿರಾಕರಿಸಿ ಶಿಕ್ಷಕಿಯೊಬ್ಬರನ್ನು ಬಾಲಕಿ ಕೂಗಿದ್ದಾಳೆ. ಇದರಿಂದ ಹೆದರಿದ ಬಾಲಕ ವಿದ್ಯಾರ್ಥಿಯನ್ನು ಶಾಲೆಯ ಮೂರನೇ ಮಹಡಿಯಿಂದ ತಳ್ಳಿದ್ದಾನೆ. ಗಾಯಗೊಂಡ ಬಾಲಕಿ ಸದ್ಯ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಳೆ. ಇನ್ನು ಬಾಲಕ ನಾಪತ್ತೆಯಾಗಿದ್ದು, ಅತನ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ.

    ವಿದ್ಯಾರ್ಥಿನಿ ಶಾಲೆಯ ಶಿಕ್ಷಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಬದಲಾಗಿ ಶಿಕ್ಷಕರು ವಿದ್ಯಾರ್ಥಿನಿಗೆ ಮನೆಯಲ್ಲಿ ಪೋಷಕರಿಗೆ ತಿಳಿಸದಂತೆ ಹೇಳಿದ್ದರು. ಬಾಲಕ ಕಿರುಕುಳ ನೀಡುತ್ತಿರುವ ವಿಷಯ ತಿಳಿದಿದ್ದರೂ ಶಿಕ್ಷಣ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿನಿ ಹಾಗು ಆಕೆಯ ತಾಯಿ ಹೇಳಿದ್ದಾರೆ. ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಉಡುಪಿ ಚಿನ್ನದ ವ್ಯಾಪಾರಿಯ ಕಿಡ್ನಾಪ್ ಪ್ರಕರಣ- ಏಳು ಮಂದಿ ಚಿನ್ನ ಚೋರರು ಅಂದರ್!

    ಉಡುಪಿ ಚಿನ್ನದ ವ್ಯಾಪಾರಿಯ ಕಿಡ್ನಾಪ್ ಪ್ರಕರಣ- ಏಳು ಮಂದಿ ಚಿನ್ನ ಚೋರರು ಅಂದರ್!

    ಉಡುಪಿ: ಭಾರೀ ಕುತೂಹಲ ಕೆರಳಿಸಿದ್ದ ಇಲ್ಲಿನ ಚಿನ್ನದ ವ್ಯಾಪಾರಿಯ ಕಿಡ್ನಾಪ್ ಮತ್ತು ದರೋಡೆ ಕೇಸನ್ನು ಪೊಲೀಸರು ಬೇಧಿಸಿದ್ದಾರೆ. ಒಂದೂವರೆ ಕೆಜಿ ಚಿನ್ನದ ಜೊತೆ ಎರಡೂವರೆ ಲಕ್ಷ ರೂಪಾಯಿ ದೋಚಿ ತಲೆಮರೆಸಿಕೊಂಡಿದ್ದ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳದ ಚಿನ್ನದ ವ್ಯಾಪಾರಿ ಅಂತ ಪೊಲೀಸರ ಎದುರು ಪೋಸು ನೀಡಿದ್ದ ವ್ಯಕ್ತಿ ಮೇಲೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಉಡುಪಿ ಜಿಲ್ಲೆಯ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಚಿನ್ನದೊಂದಿಗೆ ಚಿನ್ನದ ವ್ಯಾಪಾರಿಯ ಕಿಡ್ನಾಪ್ ಪ್ರಕರಣಕ್ಕೆ ಪೊಲೀಸರು ಅಂತ್ಯ ಹಾಡಿದ್ದಾರೆ. ಕೇರಳದ ತ್ರಿಶೂರ್ ನ ಚಿನ್ನದ ವ್ಯಾಪಾರಿ ದಿಲೀಪ್ ದರೋಡೆ ಮಾಡಿದ ಕೇಸಲ್ಲಿ ಏಳು ಮಂದಿ ಆರೋಪಿಗಳು ಅಂದರ್ ಆಗಿದ್ದಾರೆ.

    ಏನಿದು ಪ್ರಕರಣ?: ಮಾರ್ಚ್ 17ರಂದು ಉಡುಪಿಯ ಪೆರ್ಡೂರಿನ ಗಾಯತ್ರಿ ಜ್ಯುವೆಲ್ಲರ್ಸ್‍ಗೆ ಚಿನ್ನದ ಆಭರಣಗಳನ್ನು ಕೊಟ್ಟು ಚಿನ್ನದ ವ್ಯಾಪಾರಿ ಉಡುಪಿ ನಗರಕ್ಕೆ ಬರ್ತಾಯಿದ್ರು. ದಿಲೀಪ್ ಪ್ರಯಾಣ ಮಾಡುತ್ತಿದ್ದ ಬಸ್ಸನ್ನು ಹತ್ತಿದ ದುಷ್ಕರ್ಮಿಗಳು ತಲೆಗೆ ಪಿಸ್ತೂಲ್ ಹಿಡಿದು ಬಸ್ಸಿನಿಂದ ಕೆಳಗೆ ಇಳಿಸಿದ್ದಾರೆ. ಬಳಿಕ ಸುಮಾರು 40 ಕಿಲೋಮೀಟರ್ ದೂರದ ಪಡುಬಿದ್ರೆ ಎಂಬಲ್ಲಿಗೆ ದಿಲೀಪ್‍ರನ್ನು ಕರೆದುಕೊಂಡು ಹೋಗಿ ಚಿನ್ನದ ಜೊತೆ ಸುಮಾರು ಎರಡೂವರೆ ಲಕ್ಷ ರೂಪಾಯಿಯನ್ನು ಕಸಿದುಕೊಂಡು ವ್ಯಾಪಾರಿಯನ್ನು ಪೊದೆಗೆ ಎಸೆದು ಪರಾರಿಯಾಗಿದ್ದರು. ಚಿನ್ನದ ಜೊತೆ ಹಣವನ್ನು ಕಳೆದುಕೊಂಡ ದಿಲೀಪ್ ಹಿರಿಯಡ್ಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ಚಿನ್ನ ದೋಚಿ ಬಿಟ್ಟು ಪರಾರಿಯಾದ ಸ್ಥಳವನ್ನು ಪಡುಬಿದ್ರೆ ಮತ್ತು ಕಾಪು ಪೊಲೀಸರು ಜಂಟಿ ಕಾರ್ಯಾಚರಣೆ ಮಾಡಿ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪೆರ್ಡೂರಿನ ಹರಿಕೃಷ್ಣ ಭಟ್ ದರೋಡೆಯ ಪ್ರಮುಖ ಆರೋಪಿ ಆರೋಪಿಯಾಗಿದ್ದು, ಕಿಡ್ನ್ಯಾಪ್‍ಗೆ ಸಹಕರಿಸಿದ ಕುಂದಾಪುರದ ಜಾವೆದ್, ಅಶ್ರಫ್, ಇಲಾಹಿತ್, ರವಿಚಂದ್ರ, ಸುಮಂತ್ ನನ್ನು ಅರೆಸ್ಟ್ ಮಾಡಿದ್ದಾರೆ.

    ಹರಿಕೃಷ್ಣ ಎಂಬುವವನ ಜ್ಯುವೆಲ್ಲರಿ ಶಾಪ್‍ಗೆ ದಿಲೀಪ್ ಹಲವಾರು ವರ್ಷಗಳಿಂದ ಚಿನ್ನದಾಭರಣಗಳನ್ನು ಸಪ್ಲೈ ಮಾಡ್ತಾಯಿದ್ದ. ಈ ಬಾರಿ ಆತನನ್ನೇ ದರೋಡೆ ಮಾಡಲು ಯತ್ನಿಸಲಾಯ್ತು. ಆದ್ರೆ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದ ಪ್ರಕರಣ ಹೊರಗೆ ಬಂತು. ಇದರ ಜೊತೆ ಕಾನೂನು ಬಾಹಿರವಾಗಿ ಯಾವುದೇ ಬಿಲ್ ಇಲ್ಲದ, ಟ್ಯಾಕ್ಸ್ ಕಟ್ಟದ ಚಿನ್ನಾಭರಣಗಳನ್ನು ಮಾರಾಟ ಮಾಡುವುದು ಅಪರಾಧ. ಹೀಗಾಗಿ ಕೇರಳ ಮೂಲದ ವ್ಯಕ್ತಿಯ ಮೇಲೂ ಪ್ರಕರಣ ದಾಖಲು ಮಾಡಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ ಬಾಲಕೃಷ್ಣ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.

    ಕೂತಲ್ಲೇ ಸುಲಭದಲ್ಲಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ಬಹುದು ಎಂಬ ಉದ್ದೇಶದಿಂದ ಆರೋಪಿಗಳೆಲ್ಲಾ ಸ್ಕೆಚ್ ಹೆಣೆದಿದ್ದರು. ಪ್ರಕರಣದಲ್ಲಿ ಇನ್ನಷ್ಟು ಮಂದಿ ಕೈವಾಡವಿದ್ದು ಐಡಿಯಾ ಕೊಟ್ಟು ಪ್ಲ್ಯಾನ್ ರೂಪಿಸಿದ್ದ ವ್ಯಕ್ತಿ ತಲೆಮರೆಸಿಕೊಂಡಿದ್ದಾನೆ. ಪೊಲೀಸರ ತಂಡ ಆ ವ್ಯಕ್ತಿಗಾಗಿ ಬಲೆ ಬೀಸಿದ್ದಾರೆ.

     

  • 4 ವರ್ಷಗಳಿಂದ ರೂಮಿನಲ್ಲೇ ಬಂಧಿಯಾಗಿದ್ದ ಅಮ್ಮ ಮಗಳನ್ನ ರಕ್ಷಿಸಿದ ಪೊಲೀಸರು!

    4 ವರ್ಷಗಳಿಂದ ರೂಮಿನಲ್ಲೇ ಬಂಧಿಯಾಗಿದ್ದ ಅಮ್ಮ ಮಗಳನ್ನ ರಕ್ಷಿಸಿದ ಪೊಲೀಸರು!

    ನವದೆಹಲಿ: 4 ವರ್ಷಗಳಿಂದ ಕೋಣೆಯೊಂದರಲ್ಲಿ ತಮ್ಮಷ್ಟಕ್ಕೆ ತಾವೇ ಬಂಧಿಯಾಗಿದ್ದರು ಎನ್ನಲಾದ ತಾಯಿ ಮಗಳನ್ನು ದೆಹಲಿ ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ.

    ಈ ಇಬ್ಬರು ಇಲ್ಲಿನ ಮಹಾವೀರ್ ಎನ್‍ಕ್ಲೇವ್ ನಿವಾಸಿಗಳಾಗಿದ್ದು ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. 42 ವರ್ಷದ ಕಲಾವತಿ ಮತ್ತು ಅವರ ಮಗಳಾದ 20 ವರ್ಷದ ದೀಪಾ ಮದಲನೇ ಮಹಡಿಯ ರೂಮಿನಲ್ಲಿ ಬಂಧಿಯಾಗಿದ್ದಾರೆ ಎಂದು ಪಕ್ಕದ ಮನೆಯವರು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಅಮ್ಮ ಮಗಳನ್ನ ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ.

    ಮಹಿಳೆಯ ಮಾವ ಕೂಡ ಇದೇ ಮನೆಯಲ್ಲಿ ವಾಸವಾಗಿದ್ದು ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಮಹಿಳೆಯರಿದ್ದ ರೂಮಿನ ಬಾಗಿಲು ತೆರೆದೇ ಇತ್ತು. ಇಬ್ಬರೂ ಅಪೌಷ್ಟಿಕತೆಗೆ ಒಳಗಾಗಿದ್ದರು. ಅನಾರೋಗ್ಯಕರ ಸ್ಥಿಯಲ್ಲಿ ವಾಸಿಸುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಮೊದಲಿಗೆ ಪೊಲೀಸರೊಂದಿಗೆ ಆಸ್ಪತ್ರೆಗೆ ಹೋಗಲು ತಾಯಿ ಹಾಗೂ ಮಗಳು ನಿರಾಕರಿಸಿದ್ದರು. ಇಬ್ಬರೂ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು. ಕಲಾವತಿ ಅವರ ಮಾವ ಮಹಾವೀರ್ ಮಿಶ್ರಾ ಪಕ್ಕದ ರೂಮಿನಲ್ಲೇ ವಾಸವಿದ್ದು, ಮಹಿಳೆಯರು ಕೇಳಿದಾಗ ದಿನಕ್ಕೆ ಒಂದು ಬಾರಿ ಊಟ ಕೊಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    2000ದಲ್ಲಿ ಹಂಡತಿ ತೀರಿಕೊಂಡಿದ್ದು, 4 ವರ್ಷಗಳ ಹಿಂದೆ ಇಬ್ಬರು ಗಂಡು ಮಕ್ಕಳು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ರು. ಅಂದಿನಿಂದ ಕಲಾವತಿ ಹಾಗೂ ದೀಪಾ ರೂಮಿನೊಳಗೆ ಬಂಧಿಯಾಗಿದ್ದಾರೆ. ನನ್ನ ಮಕ್ಕಳೊಂದಿಗೆ ಮಾತನಾಡಿದೆ ಎಂದು ಇಬ್ಬರೂ ಆಗಾಗ ಹೇಳುತ್ತಿದ್ದರು. ಎಷ್ಟೋ ದಿನ ಊಟ ಕೂಡ ಮಾಡುತ್ತಿರಲಿಲ್ಲ. ಸ್ಥಳೀಯ ವೈದ್ಯರೊಬ್ಬರು ಇವರಿಗೆ ಚಿಕಿತ್ಸೆ ನೀಡುತ್ತಿದ್ದರು. ನನ್ನ ಬಳಿ ಹೆಚ್ಚಿನ ಹಣ ಇರಲಿಲ್ಲವಾದ್ದರಿಂದ ಅವರನ್ನು ಆಸ್ಪತ್ರೆಗೆ ಸೇರಿಸಿರಲಿಲ್ಲ ಎಂದು ಮಹಾವೀರ್ ಮಿಶ್ರಾ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.