Tag: police

  • 5 ವರ್ಷ ಪ್ರೀತಿಸಿ ಈಗ ನೀನು ಕಪ್ಪಗಿದ್ಯ ಎಂದು ಬೇಡ ಅಂದ್ಳು

    5 ವರ್ಷ ಪ್ರೀತಿಸಿ ಈಗ ನೀನು ಕಪ್ಪಗಿದ್ಯ ಎಂದು ಬೇಡ ಅಂದ್ಳು

    ಬೆಂಗಳೂರು: ಅವರಿಬ್ಬರದೂ ಎಂಜಿನಿಯರ್ ಕಾಲೇಜ್‍ನಲ್ಲಿ ಶುರುವಾದ ಪ್ರೀತಿ. ಮೊದಲ ನೋಟಕ್ಕೆ ಒಬ್ಬರಿಗೊಬ್ಬರು ಲವ್ ಮಾಡಲು ಶುರು ಮಾಡಿದ್ರು. ಇಬ್ಬರ ನಡುವೆ ಗಾಢವಾದ ಪ್ರೀತಿ ಬೆಳೆದುಬಿಟ್ಟಿತ್ತು. ಎಲ್ಲೇ ಹೋದ್ರೂ ಇಬ್ಬರೂ ಜೊತೆ ಜೊತೆಯಾಗೇ ಹೋಗ್ತಿದ್ರು. ಆದ್ರೆ ಈಗ 5 ವರ್ಷದ ಪ್ರೀತಿಯನ್ನೇ ಯುವತಿ ತಿರಸ್ಕರಿಸಿದ್ದಾಳೆ.

    ಹೌದು. ಅಜಯ್ ಮತ್ತು ನಂದಿನಿಯ ಪ್ರೀತಿ ಐದು ವರ್ಷಗಳಿಂದ ಅಡ್ಡಿ ಆತಂಕಗಳಿಲ್ಲದೇ ಸಾಗಿತ್ತು. ಆದ್ರೆ ಅವನು ನಮ್ಮ ಜಾತಿಯವನಲ್ಲ, ನೋಡಲು ಕಪ್ಪಗಿದ್ದಾನೆ, ಅವನನ್ನ ಬಿಟ್ಟು ಬಿಡು ಅಂತಾ ಯುವತಿಗೆ ಆಕೆಯ ತಂದೆ ಹೇಳಿದ ಮೇಲೆ ಯುವತಿ ಅಜಯ್‍ನನ್ನ ದೂರ ಮಾಡಲು ಶುರು ಮಾಡಿದ್ದಾಳಂತೆ.

    ಯಾಕ್ ಹೀಗೆ ಮಾಡ್ತಿದ್ಯ? ಅಂತಾ ಕೇಳಲು ಮನೆ ಬಳಿ ಹೋದ ಅಜಯ್ ಮೇಲೆ ಬಾಗಲಗುಂಟೆ ಪೊಲಿಸ್ ಠಾಣೆಯಲ್ಲಿ ದೂರು ನೀಡಿ ಅಜಯ್‍ನನ್ನ ಜೈಲಿಗೆ ಕಳಿಸಿದ್ದಾರೆ. ಇ-ಮೇಲ್ ಕಳುಹಿಸಿದ್ದೀಯಾ, ಅದು ಮಾಡಿದ್ದೀಯಾ, ಇದು ಮಾಡಿದ್ದೀಯಾ ಅಂತ ಪೊಲೀಸರು ಹುಡುಗನ ಮೇಲೆ ದರ್ಪ ಮೆರೆದಿದ್ದಾರೆಂದು ಆರೋಪಿಸಲಾಗಿದೆ. ಹುಡುಗನ ಕಡೆ ಕೌಂಟರ್ ಕಂಪ್ಲೆಂಟ್ ತಗೋಳಿ ಅಂದ್ರೆ ಬೇಕಾಬಿಟ್ಟಿ ಸತಾಯಿಸಿದ್ದಾರಂತೆ. ನನ್ನನ್ನ ಅವಳು ಜೈಲಿಗೆ ಕಳಿಸಿದ್ರೂ ಪರವಾಗಿಲ್ಲ. ನಾನು ಅವಳನ್ನೇ ಮದುವೆಯಾಗ್ಬೇಕು ಅಂತಾ ಕಾದು ಕೂತಿದ್ದಾರೆ ಅಜಯ್.

    ಆದ್ರೆ ಸ್ಟೇಟ್‍ಮೆಂಟ್ ಮಾಡಿಸಿಕೊಳ್ಳೋ ಹೆಸರಿನಲ್ಲಿ ಬಾಗಲಗುಂಟೆ ಪೊಲೀಸರು ಜೇಬಿಂದ ಒಂದು ಸಾವಿರ ರೂಪಾಯಿ ಎತ್ತಿದ್ದಾರೆ ಎನ್ನಲಾಗಿದೆ. ಇತ್ತ ಓದೋ ವಯಸ್ಸಲ್ಲಿ ಮಾಡೊ ಪ್ರೀತಿನ ಉಳಿಸಿಕೊಳ್ಳೋರು ತುಂಬಾನೆ ಕಡಿಮೆ. ಅಪ್ಪಂದೋ ಅಮ್ಮಂದೋ ಸೆಂಟಿಮೆಂಟ್ ಇಟ್ಕೊಂಡು ಪ್ರೀತಿನ ನೆಗ್ಲೆಟ್ ಮಾಡೋರಿಗೆ ಯಾಕ್ರಿ ಬೇಕು ಪ್ರೀತಿ ಅನ್ನೋದು ಅಜಯ್ ಮಾತು.

  • ಲೈಂಗಿಕ ದೌರ್ಜನ್ಯಕ್ಕೆ ಮನನೊಂದಿದ್ದ ಯುವತಿ ನೇಣಿಗೆ ಶರಣು!

    ಲೈಂಗಿಕ ದೌರ್ಜನ್ಯಕ್ಕೆ ಮನನೊಂದಿದ್ದ ಯುವತಿ ನೇಣಿಗೆ ಶರಣು!

    ಕಲಬುರಗಿ: ಲೈಂಗಿಕ ದೌರ್ಜನ್ಯದಿಂದ ಮನನೊಂದಿದ್ದ ಯುವತಿಯೊಬ್ಬರು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಳಂದ ತಾಲೂಕಿನ ಚಿಂಚನಸೂರ ಗ್ರಾಮದಲ್ಲಿ ನಡೆದಿದೆ.

    18 ವರ್ಷದ ಯುವತಿ ಆತ್ಮಹತ್ಯೆಗೆ ಶರಣಾದ ದುರ್ದೈವಿ. ಯುವತಿ ಮೇಲೆ ಈ ಹಿಂದೆ ಅತ್ಯಾಚಾರ ಯತ್ನ ನಡೆದಿತ್ತು ಎನ್ನಲಾಗಿದ್ದು, ಇದರಿಂದ ಮಾನಸಿಕವಾಗಿ ತೀವ್ರ ಖಿನ್ನತೆಗೊಳಗಾಗಿ ಯುವತಿ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

    ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

     

  • ಬಿಗಿ ಬಂದೋಬಸ್ತ್ ನಲ್ಲಿ ತುಂಗಭದ್ರಾ ಜಲಾಶಯದಿಂದ ರಾಯಚೂರಿಗೆ ಕುಡಿಯಲು ನೀರು ಬಿಡುಗಡೆ

    ಬಿಗಿ ಬಂದೋಬಸ್ತ್ ನಲ್ಲಿ ತುಂಗಭದ್ರಾ ಜಲಾಶಯದಿಂದ ರಾಯಚೂರಿಗೆ ಕುಡಿಯಲು ನೀರು ಬಿಡುಗಡೆ

    ರಾಯಚೂರು: ಬರಗಾಲ ಹಿನ್ನೆಲೆ ಜಿಲ್ಲೆಗೆ ಕುಡಿಯುವ ನೀರಿಗಾಗಿ ತುಂಗಭದ್ರಾ ಜಲಾಶಯದಿಂದ ಟಿಎಲ್‍ಬಿಸಿ ಗೆ ಇಂದು ನೀರು ಹರಿಸಲಾಗಿದೆ. ನೀರಾವರಿ ಸಲಹಾ ಸಮಿತಿ ತೀರ್ಮಾನದಂತೆ ಏಪ್ರಿಲ್ 10 ರಿಂದ 20 ರವರೆಗೆ 0.9 ಟಿಎಂಸಿ ನೀರನ್ನ ಹರಿಸಲಾಗುತ್ತಿದೆ. ಈ ಹಿನ್ನೆಲೆ ತುಂಗಭದ್ರಾ ಎಡದಂಡೆ ಕಾಲುವೆಯಿಂದ ನೀರನ್ನ ಕದಿಯುವ ಸಾಧ್ಯತೆಯಿದ್ದು ಕಾಲುವೆ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪೊಲೀಸ್ ಸಿಬ್ಬಂದಿ, ಡಿಎಆರ್ ತುಕಡಿ ಹಾಗೂ 100 ಜನ ಗ್ಯಾಂಗ್ ಮನ್‍ಗಳಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

    ಜನ ಜಾನುವಾರುಗಳಿಗೆ ಕುಡಿಯುವ ನೀರನ್ನ ಒದಗಿಸುವ ಉದ್ದೇಶದಿಂದ ದೇವದುರ್ಗದ ಗಣೇಕಲ್ ಜಲಾಶಯ, ಸ್ಥಳೀಯ ಸಂಸ್ಥೆಗಳ ಮತ್ತು ಖಾಸಗಿ ಕೆರೆಗಳು ಹಾಗೂ ಜಿಲ್ಲಾ ಪಂಚಾಯ್ತಿಯ 267 ಕೆರೆಗಳನ್ನ ತುಂಬುವ ಉದ್ದೇಶ ಹೊಂದಲಾಗಿದೆ. ನೀರಿನ ಸಮರ್ಪಕ ಪೂರೈಕೆಗೆ ನೋಡಲ್ ಅಧಿಕಾರಿಗಳು, ಜಿಪಂ ಕುಡಿಯುವ ನೀರು ಸರಬರಾಜು ಅಧಿಕಾರಿಗಳ ತಂಡ ರಚಿಸಿದ್ದು ನೀರಿನ ಸಮಸ್ಯೆ ತಲೆದೋರದಂತೆ ವ್ಯವಸ್ಥೆ ಮಾಡಲಾಗಿದೆ ಅಂತ ಜಿಲ್ಲಾಧಿಕಾರಿ ಬಗಾದಿ ಗೌತಮ್ ಹೇಳಿದ್ದಾರೆ.

    ಸೋಮವಾರ ಬೆಳಗ್ಗೆ 6 ಗಂಟೆಗೆ ಜಲಾಶಯದಿಂದ ನೀರನ್ನ ಬಿಡಲಾಗಿದ್ದು, ಕಾಲುವೆ ಆಶ್ರಿತ ಕೆರೆಗಳಿಗೆ ತಲುಪಲು ಇನ್ನೂ ಎರಡು ದಿನಗಳು ಬೇಕಾಗುತ್ತದೆ. ಬೆಳೆಗಳಿಗೆ ಬಳಸದಂತೆ ಕೇವಲ ಕುಡಿಯುವ ನೀರಿನ ಅವಶ್ಯಕತೆಗೆ ಅನುಗುಣವಾಗಿ ಕಾಲುವೆಗೆ ನೀರನ್ನ ಹರಿಸಲಾಗುತ್ತಿದೆ.

     

  • ಬಿಸಿಲಿನ ಬೇಗೆಯಿಂದ ರಕ್ಷಿಸಿಕೊಳ್ಳಲು ಕಲಬುರಗಿ ಪೊಲೀಸರಿಗೆ ಕೂಲಿಂಗ್ ಗ್ಲಾಸ್!

    ಬಿಸಿಲಿನ ಬೇಗೆಯಿಂದ ರಕ್ಷಿಸಿಕೊಳ್ಳಲು ಕಲಬುರಗಿ ಪೊಲೀಸರಿಗೆ ಕೂಲಿಂಗ್ ಗ್ಲಾಸ್!

    ಕಲಬುರಗಿ: ಬಿಸಿಲಿನ ತಾಪಕ್ಕೆ ಕಲಬುರಗಿ ದೇಶದಲ್ಲಿಯೇ ನಾಲ್ಕನೇ ಸ್ಥಾನ ಪಡೆದಿದೆ. ಕೇಂದ್ರ ಹವಾಮಾನ ಇಲಾಖೆಯ ಈ ಮಾಹಿತಿ ಪ್ರಕಾರ ಮಹಾರಾಷ್ಟ್ರ ನಂಬರ್ ಒನ್ ಜಾಗದಲ್ಲಿದೆ. ಹೀಗಾಗಿ 42 ಡಿಗ್ರಿ ಉಷ್ಣಾಂಶದಲ್ಲಿ ಕೆಲಸ ಮಾಡೋ ಪೊಲೀಸರಿಗೆ ಸರ್ಕಾರ ಕೂಲ್ ಡೌನ್ ಅಂತ ಧೈರ್ಯ ಹೇಳ್ತಿದೆ.

    ಹೌದು. ಬಿಸಿಲೂರು ಎಂದೇ ಪ್ರಸಿದ್ಧಿಯಾಗಿರೋ ಕಲಬುರಗಿ ಇದೀಗ ಪಕ್ಕಾ ಸನ್ ಸಿಟಿಯಾಗಿದೆ. ಕಾರಣ 42 ಡಿಗ್ರಿಗೂ ಅಧಿಕ ತಲುಪಿರೋ ಉಷ್ಣಾಂಶ. ಇಂತಹ ಬಿಸಿಲಿಗೆ ಹೈರಾಣಾಗದಿರಲಿ ಅಂತ ಪೊಲೀಸ್ ಇಲಾಖೆ ಬಿಸಿಲಿನಲ್ಲಿ ಕರ್ತವ್ಯ ನಿರ್ವಹಿಸೋ ಸಿಬ್ಬಂದಿಗೆ ತಂಪು ಕನ್ನಡಕ ನೀಡ್ತಿದೆ. ಖುದ್ದು ಎಸ್ಪಿ ಶಶಿಕುಮಾರ್ ತಮ್ಮ ಸಿಬ್ಬಂದಿಗೆ ಮಜ್ಜಿಗೆ ನೀಡಿ ಸಂತೈಸಿದ್ದಾರೆ.

    ಎಲ್ಲೆಲ್ಲಿ ಎಷ್ಟು ಉಷ್ಣಾಂಶ ಇದೆ?: 

    ಮಹಾರಾಷ್ಟ್ರ ಚಂದ್ರಾಪುರ- 44.2 ಡಿಗ್ರಿ ಸೆಲ್ಸಿಯಸ್.
    ಮಹಾರಾಷ್ಟ್ರ ಬ್ರಹ್ಮಪುರಿ- 43..3 ಡಿಗ್ರಿ ಸೆಲ್ಸಿಯಸ್
    ಓರಿಸ್ಸಾ ಜರ್ಸುಗುಡಾ- 42.8 ಡಿಗ್ರಿ ಸೆಲ್ಸಿಯಸ್

    ಕರ್ನಾಟಕ…ಕಲಬುರಗಿ- 42.1 ಡಿಗ್ರಿ ಸೆಲ್ಸಿಯಸ್

    ಇಂತಹ ಸುಡುಬಿಸಿಲಿಗೆ ದೇಹ ದಣಿಯುತ್ತೆ ಮಾತ್ರವಲ್ಲ ಬಾಡಿ ಡಿಹೈಡ್ರೇಷನ್ ಆಗುತ್ತೆ. ಆದ್ದರಿಂದ ಎಳೆನೀರು, ಮಜ್ಜಿಗೆ ನೀಡ್ತಿರೋ ಜಿಲ್ಲಾಡಳಿತದ ಕ್ರಮಕ್ಕೆ ಪೇದೆಗಳು ಫುಲ್ ಖುಷ್ ಆಗಿದ್ದಾರೆ. ಇದಿಷ್ಟು ಏಪ್ರಿಲ್ ಬಿಸಿಲಾದ್ರೆ ಇನ್ನೂ ಮೇ ತಿಂಗಳಲ್ಲಿ ನೆಲ ಅದೆಷ್ಟು ಗರಂ ಆಗುತ್ತೋ ಅನ್ನೋ ಲೆಕ್ಕದಲ್ಲಿದ್ದಾರೆ ಜನ. ಹೀಗಾಗಿ ಜನ ಮಟಮಟ ಮಧ್ಯಾಹ್ನ ಹೊರಗೆ ಬರೋದೆ ದುಸ್ತರವಾಗೋ ಸಾಧ್ಯತೆ ಇದೆ.

  • ಬಾವಿಗೆ ಹಾರಿ ವಿವಾಹಿತ ಮಹಿಳೆ ಆತ್ಮಹತ್ಯೆ

    ಬಾವಿಗೆ ಹಾರಿ ವಿವಾಹಿತ ಮಹಿಳೆ ಆತ್ಮಹತ್ಯೆ

    ಮಂಗಳೂರು: ಮೂಡುಬಿದಿರೆಯ ಅಳಿಯೂರು ಎಂಬಲ್ಲಿ ಬಾವಿಗೆ ಹಾರಿ ವಿವಾಹಿತ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಸಂಧ್ಯಾ (32) ಆತ್ಮಹತ್ಯೆಗೆ ಶರಣಾದ ಮಹಿಳೆ. ಆರು ತಿಂಗಳ ಹಿಂದೆ ಸಂಧ್ಯಾ ಅವರು ವಕೀಲರೊಬ್ಬರನ್ನು ವಿವಾಹವಾಗಿದ್ದರು.

    ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ತೀರ್ಥಹಳ್ಳಿ ಮೂಲದ ಸಂಧ್ಯಾ ಈ ಹಿಂದೆ ಉಜಿರೆಯ ಎಸ್‍ಡಿಎಂ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

    ಸದಾ ನಗುಮುಖವನ್ನು ಹೊಂದಿದ್ದ ಸಂಧ್ಯಾ ಅವರು ಕಾಲೇಜಿನಲ್ಲಿ ವಿದ್ಯಾರ್ಥಿಗಳ, ಶಿಕ್ಷಕರ, ಆಡಳಿತ ಮಂಡಳಿಯವರ ಮೆಚ್ಚುಗೆಗೆ ಪಾತ್ರರಾಗಿದ್ದರು.

  • ಮನೆಗೆ ನುಗ್ಗಿ ಕಾಲೇಜು ವಿದ್ಯಾರ್ಥಿನಿಯ ಮೇಲೆ ರೇಪ್: ಕಾಮುಕ ಅರೆಸ್ಟ್

    ಮನೆಗೆ ನುಗ್ಗಿ ಕಾಲೇಜು ವಿದ್ಯಾರ್ಥಿನಿಯ ಮೇಲೆ ರೇಪ್: ಕಾಮುಕ ಅರೆಸ್ಟ್

    ಬೆಂಗಳೂರು: ಪರಿಚಿತ ಯುವಕನೊಬ್ಬ ಮನೆಗೆ ನುಗ್ಗಿ ಯುವತಿಯನ್ನು ಅತ್ಯಾಚಾರ ನಡೆಸಿರುವ ಘಟನೆ ನಗರದ ಕುಮಾರಸ್ವಾಮಿ ಲೇಔಟ್‍ನಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಚಂದ್ರಶೇಖರ್ ಬಂಧಿತ ಯುವಕ. ನೊಂದ ಯುವತಿಯ ಮನೆಯ ಬಳಿ ವಾಸವಾಗಿದ್ದ ಚಂದ್ರಶೇಖರ್ ಕಳೆದ 3 ತಿಂಗಳಿನಿಂದ ತನ್ನನ್ನು ಮದುವೆ ಆಗುವಂತೆ ಟಾರ್ಚರ್ ಕೊಡುತ್ತಿದ್ದನು. ತನ್ನ ಮೊಬೈಲ್ ನಂಬರ್ ನೀಡಿ ಕೊಟ್ಟು ಫೋನ್ ಮಾಡುವಂತೆ ಚಂದ್ರಶೇಖರ್ ಪೀಡಿಸುತ್ತಿದ್ದನು ಎಂದು ತಿಳಿದು ಬಂದಿದೆ.

    ಏಪ್ರಿಲ್ 7 ರಂದು ಮನಗೆ ನುಗ್ಗಿ ಯುವತಿ ಮೇಲೆ ಅತ್ಯಾಚಾರ ಎಸೆಗಿದ್ದಾನೆ. ಈ ವೇಳೆ ಯುವತಿ ತಾಯಿಯ ಕೈಗೆ ಚಂದ್ರಶೇಖರ್ ಸಿಕ್ಕಿದ್ದಾನೆ. ಇದರಿಂದ ಭಯಭೀತನಾದ ಚಂದ್ರ ಯುವತಿಯ ತಾಯಿಯನ್ನು ತಳ್ಳಿ ಮನೆಯಿಂದ ಪರಾರಿಯಾಗಿದ್ದನು.

    ಈ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಟ್ರ್ಯಾಕ್ಟರ್ ಶಬ್ದ ಕೇಳಿದ್ರೆ ಪ್ರತ್ಯಕ್ಷವಾಗೋ ಮಂಗ- 6 ತಿಂಗ್ಳಲ್ಲಿ 80ಕ್ಕೂ ಹೆಚ್ಚು ಜನರ ಮೇಲೆ ದಾಳಿ

    ಟ್ರ್ಯಾಕ್ಟರ್ ಶಬ್ದ ಕೇಳಿದ್ರೆ ಪ್ರತ್ಯಕ್ಷವಾಗೋ ಮಂಗ- 6 ತಿಂಗ್ಳಲ್ಲಿ 80ಕ್ಕೂ ಹೆಚ್ಚು ಜನರ ಮೇಲೆ ದಾಳಿ

    ಬೆಳಗಾವಿ: ಜಿಲ್ಲೆಯ ಅರಸಗಿ ಗ್ರಾಮದಲ್ಲಿ ಮಂಗವೊಂದು ಜನರ ನೆಮ್ಮದಿಯನ್ನು ಹಾಳು ಮಾಡಿದೆ. ಗ್ರಾಮದಲ್ಲಿ ಟ್ರ್ಯಾಕ್ಟರ್ ಶಬ್ದ ಕೇಳಿದ್ರೆ ಸಾಕು ಪ್ರತ್ಯಕ್ಷವಾಗುವ ಮಂಗ ಕಳೆದ 6 ತಿಂಗಳಿಂದ ಸುಮಾರು 80ಕ್ಕೂ ಹೆಚ್ಚು ಜನರ ಮೇಲೆ ದಾಳಿ ನಡೆಸಿದೆ.

    ಇತ್ತೀಚಿಗಷ್ಟೆ ಟ್ರ್ಯಾಕ್ಟರ್‍ನಲ್ಲಿ ಸುರಕ್ಷತೆಗಾಗಿ ಕಟ್ಟಿಗೆ ತೆಗೆದುಕೊಂಡು ಹೋಗ್ತಿದ್ದ ರೈತನ ಮೇಲೂ ಮಂಗ ಮಾರಣಾಂತಿಕ ಹಲ್ಲೆ ಮಾಡಿದ್ದು, ಹಲ್ಲೆಗೊಳಗಾದ ರೈತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇದರಿಂದಾಗಿ ಮಹಿಳೆಯರು, ಮಕ್ಕಳು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಇನ್ನು ಕೆಲಸಕ್ಕಾಗಿ ಹೊರಬರಲೇಬೇಕಾದ ಜನರು ಕೈಯಲ್ಲಿ ಕೋಲು ಹಿಡಿದುಕೊಂಡು ಓಡಾಡುವಂತಾಗಿದೆ.

    ಮಂಗನ ಕೀಟಲೆಯಿಂದ ತತ್ತರಿಸಿ ಹೋಗಿರುವ ಗ್ರಾಮಸ್ಥರು ಕಾಕತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದ್ರೆ ಪೊಲೀಸರು ಹಾಗು ಅರಣ್ಯ ಇಲಾಖೆ ಸಿಬ್ಬಂದಿ ಮಂಗನ ಸೆರೆಗೆ ಎಷ್ಟೇ ಪ್ರಯತ್ನಿಸಿದ್ರೂ ಮಂಗ ಮಾತ್ರ ಕೈಗೆ ಸಿಕ್ಕಿಲ್ಲ. ಮಂಗನ ಹಾವಳಿಯಿಂದ ಅಗಸಗಿ ಗ್ರಾಮದ ಜನರು ಆತಂಕದಲ್ಲಿ ಜೀವನ ಸಾಗಿಸಬೇಕಾಗಿದೆ.

     

  • ಬೆಂಗ್ಳೂರಿನಲ್ಲಿ ಇಂದಿನಿಂದ ಮಹಿಳೆಯರ ಸುರಕ್ಷತೆಗಾಗಿ `ಪಿಂಕ್ ಹೊಯ್ಸಳ’

    ಬೆಂಗ್ಳೂರಿನಲ್ಲಿ ಇಂದಿನಿಂದ ಮಹಿಳೆಯರ ಸುರಕ್ಷತೆಗಾಗಿ `ಪಿಂಕ್ ಹೊಯ್ಸಳ’

    ಬೆಂಗಳೂರು: ನಗರದಲ್ಲಿ ಇಂದಿನಿಂದ ಹೊಸ ಗಸ್ತು ವಾಹನಗಳು ರಸ್ತೆಗಿಳಿದಿವೆ. ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ 51 ಪಿಂಕ್ ಹೊಯ್ಸಳ ವಾಹನಗಳು ಸೇವೆಗೆ ಲಭ್ಯವಾಗಿವೆ.

    ಮಹಿಳೆಯರ ರಕ್ಷಣೆಗೆಂದೇ ಇರುವ ಪಿಂಕ್ ಹೊಯ್ಸಳ ವಾಹನವನ್ನು ಆ್ಯಪ್ ಮೂಲಕ ಮಹಿಳೆಯರು ತಮ್ಮ ಬಳಿ ಬರಮಾಡಿಕೊಳ್ಳಬಹುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಸಚಿವ ಜಿ. ಪರಮೇಶ್ವರ್ ಈ `ಸುರಕ್ಷ ಆ್ಯಪ್’ ಲೋಕಾರ್ಪಣೆ ಮಾಡಿದ್ದಾರೆ.

    ಬಳಿಕ ಮಾತನಾಡಿದ ಸಿಎಂ, ಬೆಂಗಳೂರಿನಲ್ಲಿ ಒಟ್ಟು 272 ಹೊಯ್ಸಳ ವಾಹನಗಳು ಕಾರ್ಯಾಚರಣೆ ಮಾಡಲಿವೆ. ವಾಹನಗಳನ್ನು ಕೊಟ್ಟ ತಕ್ಷಣ ಉದ್ದೇಶ ಸಫಲವಾಗದು. ಆದ್ರೆ ಅಪರಾಧಗಳನ್ನು ತಡೆದಾಗ ಸಫಲವಾಗುತ್ತದೆ ಅಂತಾ ಹೇಳಿದ್ರು.

    ವಿಧಾನಸೌಧದ ಮುಂಭಾಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಚಿವ ರೋಷನ್ ಬೇಗ್, ಮಾಜಿ ಸಚಿವ ದಿನೇಶ್ ಗುಂಡುರಾವ್, ಸಿಎಸ್ ಸುಭಾಷ್ ಚಂದ್ರ ಕುಂಟಿ, ಡಿಜಿ ಐಜಿ ಆರ್‍ಕೆ ದತ್ತಾ ಭಾಗಿಯಾಗಿದ್ದರು.

    ಸೇವೆ ಹೇಗೆ?: ಮಹಿಳೆಯರ ರಕ್ಷಣೆಗೆಂದೇ ಇರುವ ಪಿಂಕ್ ಹೊಯ್ಸಳ ವಾಹನದ ಸೇವೆ ಪಡೆಯಲು ಮೊದಲು `ಸುರಕ್ಷ’ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಬೇಕು. ಈ ವಾಹನದ ಅಗತ್ಯ ಬಿದ್ದಲ್ಲಿ ಆ್ಯಪ್‍ನಲ್ಲಿರೋ ಬಟನ್ ಒತ್ತಬೇಕು. ಈ ರೀತಿ ಮಾಡಿದ 15 ನಿಮಿಷದಲ್ಲಿ ಪಿಂಕ್ ಹೊಯ್ಸಳ ಸ್ಥಳಕ್ಕೆ ಬರಲಿದೆ. ಪ್ರತಿ ವಾಹನದಲ್ಲಿ ಮೂರು ಮಹಿಳಾ ಪೊಲೀಸರು ಇರುತ್ತಾರೆ. ಶಾಲೆ, ಮಹಿಳಾ ಕಾಲೇಜುಗಳು, ಆಫೀಸ್‍ಗಳು, ದೇವಸ್ಥಾನ, ಶಾಪಿಂಗ್ ಮಾಲ್, ಚಿತ್ರಮಂದಿರಗಳ ಬಳಿ ಈ ವಾಹನಗಳನ್ನ ನಿಯೋಜಿಸಲಾಗಿರುತ್ತದೆ. ವಿಶೇಷ ತರಬೇತಿ ಪಡೆದ ಸಿಬ್ಬಂದಿ, ಪೊಲೀಸ್ ಕಂಟ್ರೋಲ್ ರೂಮ್ 100 ಹಾಗೂ ಸುರಕ್ಷ ಆ್ಯಪ್ ಮೂಲಕ ಸ್ವೀಕರಿಸಿದ ದೂರಿನ ಆಧಾರದ ಮೇಲೆ ಕಾರ್ಯ ನಿರ್ವಹಿಸಲಿದ್ದಾರೆ. ಪೊಲೀಸ್ ಕಂಟ್ರೋಲ್ ರೂಮಿಗೆ ಯಾವುದಾದ್ರೂ ದೂರು ಬಂದ್ರೆ ಆ ಸ್ಥಳಕ್ಕೆ ಹತ್ತಿರವಿರುವ ಹೊಯ್ಸಳ ವಾಹನಕ್ಕೆ ಮಾಹಿತಿ ನೀಡಿ ಅಲ್ಲಿಗೆ ಹೋಗುವಂತೆ ಸೂಚಿಸಲಾಗುತ್ತದೆ. ಹೊಯ್ಸಳದಲ್ಲಿ ಜಿಪಿಎಸ್ ಹಾಗೂ ಕ್ಯಾಮೆರಾ ಅಳವಡಿಸಲಾಗಿರುತ್ತದೆ. ಕ್ಯಾಮೆರಾ ದೃಶ್ಯಾವಳಿಗಳನ್ನ ಪೊಲೀಸ್ ಕಂಟ್ರೋಲ್ ರೂಮಿನ ಸಿಬ್ಬಂದಿ ನಿರ್ವಹಣೆ ಮಾಡ್ತಾರೆ.

    ಈ ಹಿಂದೆ ಮಹಿಳೆಯರಿಗೆ ಸಂಬಂಧಿಸಿದ ತಂದರೆಗಳಿಗೆ ಸ್ಪಂದಿಸಲು ನಗರದ ಪೊಲೀಸರ ಬಳಿ 7 ಅಭಯ ವಾಹನಗಳು ಇದ್ದವು. ಇದೀಗ ಅಭಯ ವಾಹನಗಳ ಬದಲಾಗಿ ಪಿಂಕ್ ಹೊಯ್ಸಳ ವಾಹನಗಳು ಕಾರ್ಯ ನಿರ್ವಹಿಸಲಿವೆ.

  • ನೈಟ್ ರೌಂಡ್ಸ್ ವೇಳೆ ಚೀತಾ ಬೈಕ್‍ಗೆ ಕಾರು ಡಿಕ್ಕಿ – ಎಎಸ್‍ಐಗೆ ಗಂಭೀರ ಗಾಯ

    ನೈಟ್ ರೌಂಡ್ಸ್ ವೇಳೆ ಚೀತಾ ಬೈಕ್‍ಗೆ ಕಾರು ಡಿಕ್ಕಿ – ಎಎಸ್‍ಐಗೆ ಗಂಭೀರ ಗಾಯ

    ಬೆಂಗಳೂರು: ಪೊಲೀಸ್ ಚಿತಾ ಬೈಕ್‍ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಎಎಸ್‍ಐ ಜಗದೀಶ್ ಎಂಬವರಿಗೆ ಗಂಭಿರವಾಗಿ ಗಾಯವಾಗಿರೋ ಘಟನೆ ಬೆಂಗಳೂರಿನ ತಿಮ್ಮಯ್ಯ ಸರ್ಕಲ್ ಬಳಿ ನಡೆದಿದೆ.

    ಕಬ್ಬನ್ ಪಾರ್ಕ್ ಎಎಸ್‍ಐ ಆಗಿರೋ ಜಗದೀಶ್ ಅವರು ತಡರಾತ್ರಿ ನೈಟ್ ರೌಂಡ್ಸ್ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ಕಾರು ಚಲಾಯಿಸುತ್ತಿದ್ದ ರೋಹನ್ ಎಂಬಾತ ಹಿಂದಿನಿಂದ ಚಿತಾ ಬೈಕ್‍ಗೆ ಡಿಕ್ಕಿ ಹೊಡೆದಿದ್ದಾನೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಜಗದೀಶ್ ಅವರನ್ನ ಮಲ್ಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಕಾರ್ ಚಾಲಕ ರೋಹನ್‍ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಕ್ರಮ ಮದ್ಯ ಮಾರಾಟಗಾರನ ಬಂಧನಕ್ಕೆ ಆಗ್ರಹಿಸಿ ಮಹಿಳೆಯರಿಂದ ಪ್ರತಿಭಟನೆ

    ಅಕ್ರಮ ಮದ್ಯ ಮಾರಾಟಗಾರನ ಬಂಧನಕ್ಕೆ ಆಗ್ರಹಿಸಿ ಮಹಿಳೆಯರಿಂದ ಪ್ರತಿಭಟನೆ

    ಹಾವೇರಿ: ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲೆಯ ಹಾನಗಲ್ ತಾಲೂಕಿನ ಕೆಲವರಕೊಪ್ಪ ಗ್ರಾಮದ ಮಹಿಳೆಯರು ಭಾನುವಾರ ರಾತ್ರಿ ಆಡೂರು ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ಮಾಡಿದ್ದಾರೆ.

    ಕಳೆದ ಕೆಲವು ತಿಂಗಳಿನಿಂದ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಗ್ರಾಮದ ಜನರು ಭಾನುವಾರ ಸಂಜೆ ಹಿಡಿದು ಆಡೂರು ಠಾಣಾ ಪೊಲೀಸರಿಗೆ ಒಪ್ಪಿಸಿದ್ದರು. ಆದರೆ ಪೊಲೀಸರು ವ್ಯಕ್ತಿಯ ವಿರುದ್ಧ ಕ್ರಮಕೈಗೊಳ್ಳದೇ ಅವನನ್ನು ಕಳುಹಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಕೆಲವರಕೊಪ್ಪ ಗ್ರಾಮದ ಮಹಿಳೆಯರು ಠಾಣೆಯ ಮುಂದೆಯೇ ಪ್ರತಿಭಟನೆ ನಡೆಸಿದ್ದಾರೆ.

    ಈ ವೇಳೆ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದವನ ಮೇಲೆ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.