Tag: police

  • ಮಗಳಿಗೆ ನ್ಯಾಯ ಕೊಡಿಸಲಾಗ್ಲಿಲ್ಲ ಎಂಬ ಪಶ್ಚಾತ್ತಾಪದಿಂದ ಆತ್ಮಹತ್ಯೆಗೆ ಶರಣಾದ ತಂದೆ

    ಮಗಳಿಗೆ ನ್ಯಾಯ ಕೊಡಿಸಲಾಗ್ಲಿಲ್ಲ ಎಂಬ ಪಶ್ಚಾತ್ತಾಪದಿಂದ ಆತ್ಮಹತ್ಯೆಗೆ ಶರಣಾದ ತಂದೆ

    ಶಿವಮೊಗ್ಗ: ಪ್ರೀತಿಸಿ ಮೋಸ ಹೋದ ಮಗಳಿಗೆ ನ್ಯಾಯ ಕೊಡಿಸಲು ಸಾಧ್ಯವಾಗದ ಕೊರಗಿನಲ್ಲಿ ತಂದೆಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗದ ಮಲವಗೊಪ್ಪದಲ್ಲಿ ನಡೆದಿದೆ.

    ಮಲವಗೊಪ್ಪ ಗ್ರಾಮದ ನಿವಾಸಿ ದೇವಾನಾಯ್ಕ್ ಆತ್ಮಹತ್ಯೆ ಮಾಡಿಕೊಂಡ ತಂದೆ. ದೇವಾನಾಯ್ಕ್ ಅವರ ಮಗಳು ಶಿಲ್ಪಾ ತಮ್ಮದೇ ಬಡಾವಣೆಯ ಮಂಜಾ ನಾಯ್ಕ್ ಎಂಬಾತನನ್ನು ಪ್ರೀತಿಸಿದ್ದರು. ನಾಲ್ಕು ವರ್ಷ ಶಿಲ್ಪಾಳನ್ನ ಪ್ರೀತಿ ಮಾಡಿದ ಮಂಜ ಕೊನೆಗೆ ಮದುವೆ ಆಗುವುದಿಲ್ಲ ಎನ್ನತೊಡಗಿದ. ಈ ಬಗ್ಗೆ ಗ್ರಾಮಸ್ಥರು ಪಂಚಾಯ್ತಿ ಮಾಡಿ ಮಂಜನ ಮನೆಯವರನ್ನು ಮದುವೆಗೆ ಒಪ್ಪಿಸಿದ್ದರು.

    ಆದರೆ, ಮಂಜ ಕಳೆದ ತಿಂಗಳು 24ರಂದು ಧರ್ಮಸ್ಥಳಕ್ಕೆ ಹೋಗಿ ಬೇರೆ ಯುವತಿ ಜೊತೆ ಮದುವೆ ಆಗಿದ್ದ. ಈ ಬಗ್ಗೆ ಶಿವಮೊಗ್ಗ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಂಜ ನಾಯ್ಕ್, ಆತನ ತಂದೆ ಹಾಗೂ ಇನ್ನಿತರರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳಿಸಿದ್ದರು.

    ಇತ್ತೀಚೆಗೆ ಇವರೆಲ್ಲರೂ ಜಾಮೀನಿನ ಮೇಲೆ ಬಿಡುಗಡೆಯಾಗಿ ಊರಲ್ಲಿ ಅಡ್ಡಾಡಿಕೊಂಡಿದ್ದರು. ಹೀಗಾಗಿ ಮಗಳಿಗೆ ನ್ಯಾಯ ಸಿಗಲಿಲ್ಲ ಎಂದು ದೇವಾನಾಯ್ಕ್ ಕೊರಗುತ್ತಿದ್ದರು. ನಿನ್ನೆ ಸಂಜೆ ಗ್ರಾಮದ ಕೆಲವರು ಮಗಳಿಗೆ ನ್ಯಾಯ ಕೊಡಿಸದ ತಂದೆ ಎಂದು ಹೀಯಾಳಿಸಿದ್ದರು ಎನ್ನಲಾಗಿದೆ. ಇದರಿಂದ ತೀವ್ರವಾಗಿ ನೊಂದ ದೇವಾನಾಯ್ಕ್ ರಾತ್ರಿ ಮನೆಯ ಹಿತ್ತಲಿನಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

     

  • ಪೊಲೀಸ್ ದಾಳಿ ಬಗ್ಗೆ ವಾರದ ಹಿಂದೆಯೇ ಸುಳಿವು- 40 ಕೋಟಿ ರೂ. ಹೊಸ ನೋಟ್‍ಗಳೊಂದಿಗೆ ನಾಗ ಎಸ್ಕೇಪ್

    ಪೊಲೀಸ್ ದಾಳಿ ಬಗ್ಗೆ ವಾರದ ಹಿಂದೆಯೇ ಸುಳಿವು- 40 ಕೋಟಿ ರೂ. ಹೊಸ ನೋಟ್‍ಗಳೊಂದಿಗೆ ನಾಗ ಎಸ್ಕೇಪ್

    ಬೆಂಗಳೂರು: ಶ್ರೀರಾಮಪುರದ ರೌಡಿಶೀಟರ್ ನಾಗ 40 ಕೋಟಿ ರೂಪಾಯಿ ಹೊಸ ನೋಟ್‍ಗಳೊಂದಿಗೆ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.

    ಬ್ಲಾಕ್ ಅಂಡ್ ವೈಟ್ ದಂಧೆಯಲ್ಲಿ ಬರೋಬ್ಬರಿ 200 ಕೋಟಿ ರೂ. ವ್ಯವಹಾರ ಮಾಡಿದ್ದು, 40 ಕೋಟಿ ರೂಪಾಯಿ ಪಿಂಕ್ ನೋಟು ಮಾಡಿಕೊಂಡು ತಮಿಳುನಾಡಿಗೆ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಪೊಲೀಸರಿಗೆ ಹಳೇನೋಟು, ವೈಟ್ ಪೇಪರ್ ತೋರಿಸಿ, ಹೊಸ ನೋಟುಗಳೊಂದಿಗೆ ಪರಾರಿಯಾಗೋ ಮೂಲಕ ಚಳ್ಳೆಹಣ್ಣು ತಿನ್ನಿಸಿದ್ದಾನಂತೆ.

    ಹೆಣ್ಣೂರು ಪೊಲೀಸರು ಕೋರ್ಟಿಗೆ ಹೋಗಿ ಸರ್ಚ್‍ವಾರೆಂಟ್ ಪಡೆದುಕೊಂಡಿದ್ದಾರೆ ಎಂಬ ವಿಷಯ ತಿಳಿದ ಕೂಡಲೇ ಅಲರ್ಟ್ ಆದ ನಾಗ, ಹಳೇನೋಟು ಮನೆಯಲ್ಲಿ ಬಿಟ್ಟು ತಮಿಳುನಾಡಿಗೆ ಪರಾರಿಯಾಗಿದ್ದನಂತೆ. ಬರೀ ಕಾಯಿನ್ ಬೂತ್‍ನಿಂದ್ಲೆ ಆಟವಾಡ್ತಿಸ್ತಿರೋ ನಾಗ, ತಾನಿರುವ ಸ್ಥಳದ ಮಾಹಿತಿ ಮಾತ್ರ ಬಿಟ್ಟುಕೊಡ್ತಿಲ್ಲ. ಸಾಲದ್ದಕ್ಕೆ ಮೊಬೈಲ್ ಕೂಡ ಬಳಕೆ ಮಾಡದೇ ಪೊಲೀಸರನ್ನು ಇಡೀ ತಮಿಳುನಾಡು ಸುತ್ತುವಂತೆ ಮಾಡ್ತಿದ್ದಾನೆ.

    ನಾಗನ ಮನೆಯಲ್ಲಿ ಸಿಕ್ಕಿರೋ ಬಿಳಿ ಪೇಪರ್, ಹಳೇ ನೋಟುಗಳು ಯಾರದ್ದು ಅನ್ನೋದು ಈಗಿರೋ ಪ್ರಶ್ನೆ. ನಾಗ ಕೇವಲ ರೌಡಿಸಂ ಫೀಲ್ಡನ್ನು ಮಾತ್ರ ಆಯ್ಕೆ ಮಾಡಿಕೊಂಡಿರಲಿಲ್ಲ. ಬದಲಿಗೆ ಕ್ರಿಕೆಟ್ ಬೆಟ್ಟಿಂಗ್, ಬ್ಲಾಕ್ ಅಂಡ್ ವೈಟ್ ದಂಧೆಯಲ್ಲೂ ಎಕ್ಸ್ ಪರ್ಟ್ ಆಗಿದ್ದು, ದೊಡ್ಡ ಕುಳಗಳಿಗೆ ನಾಮ ಇಟ್ಟಿದ್ದಾನೆ.

  • ಚೀಟಿ ವ್ಯವಹಾರದಲ್ಲಿ ಲಕ್ಷ-ಲಕ್ಷ ಮೋಸ- ತಲೆಮರೆಸಿಕೊಂಡಿದ್ದ ವಂಚಕಿಗೆ ಬಿತ್ತು ಗೂಸಾ

    ಚೀಟಿ ವ್ಯವಹಾರದಲ್ಲಿ ಲಕ್ಷ-ಲಕ್ಷ ಮೋಸ- ತಲೆಮರೆಸಿಕೊಂಡಿದ್ದ ವಂಚಕಿಗೆ ಬಿತ್ತು ಗೂಸಾ

    ಬೆಂಗಳೂರು: ಚೀಟಿ ವ್ಯವಹಾರದಲ್ಲಿ ಲಕ್ಷ-ಲಕ್ಷ ಹಣ ಪಡೆದು ಮೋಸ ಮಾಡಿ 15 ದಿನದಿಂದ ತಲೆಮರೆಸಿಕೊಂಡಿದ್ದ ವಂಚಕಿಯನ್ನು ಹಿಡಿದು ಚೆನ್ನಾಗಿ ಥಳಿಸಿದ ಘಟನೆ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ.

    ರಾಜರಾಜೇಶ್ವರಿ ನಗರದ ರತ್ನಮ್ಮ ಎಂಬಾಕೆ ಸುಮಾರು 50 ಕ್ಕೂ ಹೆಚ್ಚು ಮಂದಿ ಬಳಿ ಚೀಟಿ ಕಟ್ಟಿಸಿಕೊಂಡು ಹಣ ನೀಡದೇ ವಂಚಿಸಿದ್ದಳು. ಪ್ರತಿನಿತ್ಯ ಚೀಟಿ ಕಟ್ಟಿರುವ ಮಂದಿ ಹಣ ನೀಡುವಂತೆ ಒತ್ತಾಯಿಸಿ ರಾತ್ರಿ ಮನೆ ಬಳಿ ಜಮಾಯಿಸಿ ರತ್ನಮ್ಮಳಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

    ಕಳೆದ ಹದಿನೈದು ದಿನಗಳಿಂದ ತಲೆ ಮರೆಸಿಕೊಂಡಿದ್ದ ರತ್ನಮ್ಮ, ಶನಿವಾರ ದೀಢಿರ್ ಮನೆಗೆ ಬಂದು ಸೇರಿಕೊಂಡಿದ್ದಳು. ಈ ವಿಚಾರ ತಿಳಿದ ವಂಚನೆಗೊಳಗಾದವರು ರಾತ್ರಿ ಮನೆ ಬಳಿ ಬಂದು ರತ್ನಮ್ಮಳನ್ನ ಹೊರಗೆ ಕರೆದು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

    ಮನೆ ಬಳಿ ಗಲಾಟೆ ಹೆಚ್ಚಾಗುತ್ತಿದ್ದಂತೆ ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಸದ್ಯ ಮೋಸ ಹೋದವರೆಲ್ಲರು ಸೇರಿಕೊಂಡು ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಸೂಕ್ತ ಕ್ರಮ ಜರುಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಹದನೈದು ವರ್ಷದಿಂದ ಚೀಟಿ ವ್ಯವಹಾರ ಮಾಡ್ತಿದ್ದ ರತ್ನಮ್ಮ, ಕೆಲ ದಿನಗಳಿಂದ ಚೀಟಿ ಹಣ ವಾಪಸ್ ನೀಡದೇ ಮೋಸ ಮಾಡ್ತಿದ್ಲು. ಹಣ ಕೇಳಿದ್ರೆ ಹೆಸರು ಬರೆದಿಟ್ಟು ನೇಣು ಹಾಕಿಕೊಳ್ಳುವುದಾಗಿ ಬೆದರಿಸುತ್ತಿದ್ದಳು ಅಂತಾ ವಂಚನೆಗೊಳಗಾದವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

    https://www.youtube.com/watch?v=TIhVzpxkS84&feature=youtu.be

  • ನಾಗನ ಮೇಲೆ ಮತ್ತೆ ರೌಡಿಶೀಟ್ ಓಪನ್- ಪತ್ನಿಯ ವಿರುದ್ಧ ದಾಖಲಾಗಿವೆ 4 ಕೇಸ್

    ನಾಗನ ಮೇಲೆ ಮತ್ತೆ ರೌಡಿಶೀಟ್ ಓಪನ್- ಪತ್ನಿಯ ವಿರುದ್ಧ ದಾಖಲಾಗಿವೆ 4 ಕೇಸ್

    ಬೆಂಗಳೂರು: ಕೋಟ್ಯಾಂತರ ರೂಪಾಯಿ ಹಳೇ ನೋಟು ಬದಲಾವಣೆ ದಂಧೆ ಪ್ರಕರಣದ ಹಿನ್ನೆಲೆಯಲ್ಲಿ ಪರಾರಿಯಾಗಿರೋ ನಾಗರಾಜ್ ಅಲಿಯಾಸ್ ನಾಗನ ಮೇಲೆ ಮತ್ತೆ ರೌಡಿಶೀಟ್ ಓಪನ್ ಆಗಿದೆ.

    ಕೊಲೆ ಯತ್ನ, ದರೋಡೆ ಪ್ರಕರಣದಲ್ಲಿ ಮಾರ್ಚ್‍ನಲ್ಲೇ ರೌಡಿಶೀಟರ್ ಪಟ್ಟಿಗೆ ನಾಗನ ಹೆಸರನ್ನು ಮತ್ತೆ ಸೇರಿಸಲಾಗಿದೆ. ಡಿಸೆಂಬರ್‍ನಲ್ಲಿ ನಾಗನ ವಿರುದ್ಧ ಕಿಡ್ನ್ಯಾಪ್, ರಾಬರಿ ಪ್ರಕರಣ ದಾಖಲಾಗಿತ್ತು. ಪೆಟ್ರೋಲ್ ಬಂಕ್ ಆರಂಭಕ್ಕೆ ಜಾಗ ಕೊಡಿಸುವುದಾಗಿ ವೃದ್ಧರೊಬ್ಬರ ಅಪಹರಣ ಮಾಡಿ 6.5 ಲಕ್ಷ ರಾಬರಿ ಮಾಡಿದ್ದ. ಡಿಸೆಂಬರ್‍ನಲ್ಲೇ ದಾಬಸ್‍ಪೇಟೆಯಲ್ಲಿ ಮತ್ತೊಂದು ಕಿಡ್ನ್ಯಾಪ್ ಪ್ರಕರಣ ಕೂಡ ದಾಖಲಾಗಿತ್ತು. ಫೆಬ್ರವರಿ ಅಂತ್ಯದಲ್ಲಿ ನಾಗನ ಇಬ್ಬರು ಮಕ್ಕಳಾದ ಗಾಂಧಿ ಹಾಗೂ ಶಾಸ್ತ್ರಿಯನ್ನೂ ಪೊಲೀಸರು ರೌಡಿಶೀಟರ್ ಪಟ್ಟಿಗೆ ಸೇರಿಸಿದ್ದರು. ಕೊಲೆ ಯತ್ನ, ರಾಬರಿ, ಕಿಡ್ನ್ಯಾಪ್ ಸೇರಿದಂತೆ ಮಕ್ಕಳ ಮೇಲೆ 7 ಪ್ರಕರಣ ದಾಖಲಾಗಿತ್ತು. ನಾಗನ ಪತ್ನಿ ಲಕ್ಷ್ಮಿ ವಿರುದ್ಧವೂ 4 ಪ್ರಕರಣ ದಾಖಲಾಗಿದೆ.

    ನಾಗನ ಮನೆಯಲ್ಲಿ ಪತ್ತೆಯಾದ 14.80 ಕೋಟಿ ಹಳೆ ನೋಟುಗಳನ್ನ ಆರ್‍ಬಿಐ ವಶಕ್ಕೆ ಒಪ್ಪಿಸಲಾಗಿದೆ. ಪ್ರಕರಣವನ್ನ ಇಡಿಗೆ ನೀಡಲು ಹಿರಿಯ ಪೊಲೀಸ್ ಅಧಿಕಾರಿಗಳು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.

    ನಾಪತ್ತೆಯಾಗಿರುವ ನಾಗನಿಗಾಗಿ ಬೆಂಗಳೂರು ಪೊಲೀಸರು ಹುಡುಕಾಟ ತೀವ್ರಗೊಳಿಸಿದ್ದಾರೆ. ತಮಿಳುನಾಡಿನ ಜೋಲಾರ್ ಪೇಟೆ ಬಳಿ ಇರುವ ಕಾಟ್‍ಪಾಡಿಯಲ್ಲಿ ಕರ್ನಾಟಕ ಪೊಲೀಸರ ತಂಡ ಬೀಡು ಬಿಟ್ಟಿದೆ. ಶುಕ್ರವಾರದಂದು ಎಸ್ಕೇಪ್ ಆಗಿರುವ ನಾಗ ದಾಬಸ್‍ಪೇಟೆಯ ರೆಸಾರ್ಟ್‍ವೊಂದಕ್ಕೆ ತೆರಳಿ ಅಲ್ಲಿ ಹಣ ವಸೂಲಿ ಮಾಡಿ ಅಲ್ಲಿಂದ ಧರ್ಮಪುರಿಗೆ ಹೋಗಿ ಸಂಬಂಧಿಕರ ಮನೆಯಲ್ಲಿರುವ ಶಂಕೆ ಇದೆ. ನಾಗನ ಹುಡುಕಾಟಕ್ಕಾಗಿ ನಾಲ್ಕು ವಿಶೇಷ ತಂಡಗಳನ್ನ ರಚಿಸಲಾಗಿದೆ. ಹೆಣ್ಣೂರು, ಶ್ರೀರಾಮಪುರ ಹಾಗೂ ಸಿಸಿಬಿ ಸೇರಿದಂತೆ ನಾಲ್ಕು ತಂಡಗಳಿಂದ ನಾಗನಿಗಾಗಿ ಶೋಧ ನಡೆಯುತ್ತಿದೆ. ನಾಗ ಮೊಬೈಲ್ ಬಳಕೆ ಮಾಡದ್ದರಿಂದ ಪೊಲೀಸರ ಶೋಧಕ್ಕೆ ತೊಂದರೆಯಾಗಿದೆ. ತಾಂತ್ರಿಕವಾಗಿ ಯಾವುದೇ ವಸ್ತುಗಳನ್ನ ನಾಗ ಬಳಕೆ ಮಾಡಿಲ್ಲ.

    https://www.youtube.com/watch?v=ehMXPLXNDUc

  • ಕಾರುಗಳ ನಡುವೆ ಡಿಕ್ಕಿ – ಇಬ್ಬರ ಸಾವು, ಮಂತ್ರಾಲಯಕ್ಕೆ ಹೊರಟ್ಟಿದ್ದವರಿಗೆ ಗಾಯ

    ಕಾರುಗಳ ನಡುವೆ ಡಿಕ್ಕಿ – ಇಬ್ಬರ ಸಾವು, ಮಂತ್ರಾಲಯಕ್ಕೆ ಹೊರಟ್ಟಿದ್ದವರಿಗೆ ಗಾಯ

    ರಾಯಚೂರು: ಜಿಲ್ಲೆಯ ಮಾನ್ವಿ ಪಟ್ಟಣದ ಹೊರವಲಯದ ಆಟೋನಗರ ಬಳಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    35 ವರ್ಷದ ಸುರೇಶ್ ರೆಡ್ಡಿ ಹಾಗೂ ಗಂಗಾಧರ್ ಸಾವನ್ನಪ್ಪಿರುವ ದುರ್ದೈವಿಗಳು. ಅಪಘಾತದಲ್ಲಿ ಮೂರು ಜನರಿಗೆ ಗಾಯಗಳಾಗಿವೆ. ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೊರಟಿದ್ದ ಇನ್ನೋವಾ ಕಾರು ಹಾಗೂ ರಾಯಚೂರಿನಿಂದ ಮಾನ್ವಿಗೆ ಹೊರಟಿದ್ದ ಸ್ವಿಫ್ಟ್ ಕಾರಿನ ನಡುವೆ ಈ ಅಪಘಾತ ಸಂಭವಿಸಿದೆ.

    ಸ್ವಿಫ್ಟ್ ಕಾರಿನಲ್ಲಿದ್ದ ಗಣದಿನ್ನಿಯ ವಕೀಲ ಸುರೇಶ್ ರೆಡ್ಡಿ ಹಾಗೂ ಗುತ್ತಿಗೆದಾರ ಗಂಗಾಧರ್ ಸಾವನ್ನಪ್ಪಿದ್ದಾರೆ. ಇನ್ನೋವಾ ಕಾರಿನಲ್ಲಿದ್ದವರಿಗೆ ಗಾಯಗಳಾಗಿದ್ದು ಮಾನ್ವಿ ಹಾಗೂ ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಿನ ಜಾವ ಅತೀ ವೇಗದ ವಾಹನ ಚಾಲನೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

     

  • ಸಿಸಿಟಿವಿ ನೋಡ್ತಾ ಪೊಲೀಸರ ಕಣ್ತಪ್ಪಿಸಿ ಬಾಂಬ್ ನಾಗ ಎಸ್ಕೇಪ್ – ಯಾರು ಈ ಬಾಂಬ್ ನಾಗ? ಈ ಸುದ್ದಿ ಓದಿ

    ಸಿಸಿಟಿವಿ ನೋಡ್ತಾ ಪೊಲೀಸರ ಕಣ್ತಪ್ಪಿಸಿ ಬಾಂಬ್ ನಾಗ ಎಸ್ಕೇಪ್ – ಯಾರು ಈ ಬಾಂಬ್ ನಾಗ? ಈ ಸುದ್ದಿ ಓದಿ

    ಬೆಂಗಳೂರು: ಮಾಜಿ ರೌಡಿ ಶೀಟರ್ ನಾಗರಾಜ್ ಅಲಿಯಾಸ್ ನಾಗನ ಮನೆ ಮೇಲೆ ಪೊಲೀಸರು ಇಂದು ಬೆಳಿಗ್ಗೆ ದಾಳಿ ನಡೆಸಿದ್ದು, ಈ ವೇಳೆ ಪೊಲೀಸರ ಕಣ್ತಪ್ಪಿಸಿ ಬಾಂಬ್ ನಾಗ ಪರಾರಿಯಾಗಿದ್ದಾನೆ.

    ಅಕ್ರಮ ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದ ಆರೋಪದಡಿ ಪೊಲೀಸರು ನಾಗನನ್ನು ಬಂಧಿಸಲು ಹೋಗಿದ್ದರು. ಈ ವೇಳೆ ಕಂಪ್ಯೂಟರಸೈಡ್ ಲಾಕ್ ಇರುವ ಕಟ್ಟಡದ ಕೊನೆ ಅಂತಸ್ತಿನಲ್ಲಿ ನಾಗ ಅವಿತು ಕುಳಿತಿದ್ದು, ಕೊಠಡಿಯಲ್ಲೇ ಕುಳಿತು ಸಿಸಿಟಿವಿ ದೃಶ್ಯಾವಳಿ ಮೂಲಕ ಪೊಲೀಸರ ತಪಾಸಣೆಯನ್ನು ವೀಕ್ಷಿಸುತ್ತಿದ್ದನು. ಇದೀಗ ಆತ ಮನೆಯ ಟೆರೆಸ್ ಮೂಲಕ ಎಸ್ಕೇಪ್ ಆಗಿದ್ದಾನೆ. ಪೊಲೀಸರು ಬಾಗಿಲು ಒಡೆದು ಒಳಹೋದಾಗ ಪತ್ನಿ ಮಾತ್ರ ಇದ್ದರು.

    ಏನಿದು ಪ್ರಕರಣ?: ಕಳೆದ ಮಾರ್ಚ್ 18ರಂದು ರಿಯಲ್ ಎಸ್ಟೇಟ್ ಉದ್ಯಮಿ ಉಮೇಶ್ ಎಂಬುವರನ್ನ ಅಪಹರಿಸಲಾಗಿತ್ತು. ಕಿಡ್ನ್ಯಾಪ್ ತಂಡ ಶ್ರೀರಾಮಪುರದ ನಾಗನ ಮನೆಗೆ ಉಮೇಶ್‍ರನ್ನ ಕರೆ ತಂದು 50 ಲಕ್ಷ ರೂ. ಹಣ ವಸೂಲಿ ಮಾಡಿದ್ರು. ಕೊಲೆ ಬೆದರಿಕೆ ಇದ್ದ ಕಾರಣ ಉದ್ಯಮಿ ಉಮೇಶ್ ಯಾವುದೇ ದೂರು ನೀಡಿರಲಿಲ್ಲ. ನಂತರ ಏಪ್ರಿಲ್ 07 ರಂದು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಉಮೇಶ್ ದೂರು ದಾಖಲಿಸಿದ್ರು. ಹೀಗಾಗಿ ಕೋರ್ಟ್‍ನಿಂದ ಸರ್ಚ್ ವಾರೆಂಟ್ ತಂದು ಹೆಣ್ಣುರು ಇನ್ಸ್ ಪೆಕ್ಟರ್ ಶ್ರೀನಿವಾಸ್, ಮಲ್ಲೇಶ್ವರಂ ಎಸಿಪಿ ಸೇರಿದಂತೆ 40 ಕ್ಕೂ ಹೆಚ್ಚು ಪೊಲೀಸರು ನಾಗನ ಮನೆ ಹಾಗೂ ಸ್ನೇಹ ಸೇವಾ ಸಮಿತಿ ಕಚೇರಿಯಲ್ಲಿ ಮೇಲೆ ದಾಳಿ ಮಾಡಿದ್ದಾರೆ. ಪೊಲೀಸರು ತಪಾಸಣೆಗೆ ಬಂದಾಗ ರೌಡಿ ನಾಗ ಬಾಗಿಲು ಹಾಕಿಕೊಂಡಿದ್ದಾನೆ.

    ಯಾರು ಈ ಬಾಂಬ್ ನಾಗ?: ತನ್ನ 20ನೇ ವಯಸ್ಸಿಗೆ ರೌಡಿಸಂಗೆ ಕಾಲಿಟ್ಟಿದ್ದ ನಾಗರಾಜ್, 80ರ ದಶಕದಲ್ಲಿ ಬೆಂಗಳೂರನ್ನೇ ನಡುಗಿಸಿದ್ದ ರೌಡಿಶೀಟರ್. 1981 ರಿಂದ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದು, 1984-85ರಲ್ಲಿ ರೌಡಿ ಗ್ಯಾಂಗ್ ಜೊತೆ ಸೇರಿ ಮಾಮೂಲಿ ವಸೂಲಿಗೆ ರೌಡಿಶೀಟರ್ ರಾಜೇಂದ್ರನಿಗೆ ಬೆದರಿಕೆ ಹಾಕಿದ್ದ. ಈ ಸಂದರ್ಭದಲ್ಲಿ ರೌಡಿಶೀಟರ್‍ಗಳಾದ ರಾಜೇಂದ್ರ ಮತ್ತು ಜೀಬ್ರಾ ಮುನಿಸ್ವಾಮಿ ನಾಗರಾಜನ ಮೇಲೆ ದಾಳಿ ಮಾಡಿದ್ದರು. ಆ ನಂತ್ರ ಶ್ರೀರಾಮಪುರದ ಅರುಣಾ ಥಿಯೇಟರ್ ಬಳಿ ನಾಗರಾಜನ ಮೇಲೆ ಬಾಂಬ್ ದಾಳಿ ನಡೆಯುತ್ತದೆ. ಅಂದಿನಿಂದ ನಾಗರಾಜನಿಗೆ ಬಾಂಬ್ ನಾಗ ಎಂದು ಹೆಸರು ಬಂದಿದೆ.

    ನಾಗನ ವಿರುದ್ಧದ ಪ್ರಕರಣ: ದರೋಡೆ, ಬೆದರಿಕೆ, ಹಲ್ಲೆ, ಕಿಡ್ನ್ಯಾಪ್, ಕೊಲೆ ಯತ್ನ ಸೇರಿದಂತೆ ಸುಮಾರು 32 ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ. ನೆಲಮಂಗಲ, ಶ್ರೀರಾಮಪುರ, ಹೆಣ್ಣೂರು ಠಾಣೆ ಸೇರಿದಂತೆ ಸಿಸಿಬಿಗೂ ಈತ ಬೇಕಾಗಿದ್ದ. ಶಿವಕಾಶಿಯಲ್ಲಿ ಪಟಾಕಿ ತಯಾರಿಸೋದನ್ನ ಕಲಿತಿದ್ದ ನಾಗ ಚಕ್ರಿ ಮೇಲೆ ದಾಳಿ ಮಾಡಿದ್ದ. ತಮಿಳುನಾಡಿನಿಂದ ಗೂಂಡಾಗಳನ್ನ ಕರೆಯಿಸಿ ಬೆದರಿಕೆ, ಸುಲಿಗೆ, ವಸೂಲಿ ಮಾಡ್ತಿದ್ದ. ಇನ್ನು ಈತನ ವಿರುದ್ಧ ಚುನಾವಣೆಗೆ ಸಂಬಂಧಿಸಿದಂತೆ 3 ಕೇಸ್, ಕರ್ತವ್ಯಕ್ಕೆ ಅಡ್ಡಪಡಿಸಿದಂತೆ 5 ಕೇಸ್, ಕೆಒಪಿಡಿ ಕಾಯ್ದೆಯಡಿ 7 ಕೇಸುಗಳಿವೆ.

    ಮುಖ್ಯವಾಗಿರೋ ಕೇಸ್: 1990 ರ ಜೂ.8 ರಂದು ಸಂಜೆ 7 ಗಂಟೆಗೆ ಸಹಚರರೊಂದಿಗೆ ಸೇರಿ ಸೆಲ್ವಕುಮಾರಿ ಅಲಿಯಾಸ್ ಸೆಲ್ವ ನಯಾನಿ ಎಂಬವರನ್ನು ಅಪಹರಿಸಿದ್ದ. ಈ ವೇಳೆ ಸೆಲ್ವ ಕುಮಾರ್ ರಕ್ಷಣೆಗೆ ಬಂದ ಸ್ಥಳಿಯರ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದ.

    ಸುಲಿಗೆ ಪ್ರಕರಣ: ಮೇ.11 1992 ರಾತ್ರಿ 9 ಗಂಟೆ ಸುಮಾರಿಗೆ ಹನುಮಂತನಗರದಲ್ಲಿ ಪ್ರಭಾಕರ್ ಎಂಬವರಿಗೆ ಹಣ ಕೊಡುವಂತೆ ಒತ್ತಾಯಿಸಿದ್ದು, ಈ ವೇಳೆ ಅವರು ಹಣ ನೀಡಲು ನೀರಾಕರಿಸಿದಾಗ ಹಲ್ಲೆ ಮಾಡಿದ್ದ. ಅಲ್ಲದೇ ಪ್ರಾಣ ಬೆದರಿಕೆ ಕೂಡ ಹಾಕಿದ್ದ. ಹೀಗಾಗಿ ಸುಲಿಗೆ ಪ್ರಕರಣದಲ್ಲೂ ನಾಗ ಬಂಧನವಾಗಿದ್ದ.

    ನಕಲಿ ದಾಖಲೆ: ಫೆ.10 1998ರಲ್ಲಿ ಸಾಲ ಪಡೆಯಲು ಚಿಕ್ಕಪೇಟೆಯ ಬ್ಯಾಂಕ್‍ವೊಂದಕ್ಕೆ ನಕಲಿ ದಾಖಲೆ ಒದಗಿಸಿ ಸಿಕ್ಕಿಬಿದ್ದಿದ್ದ.

    ಇದನ್ನೂ ಓದಿ: ಬಾಂಬ್ ನಾಗನ ಮನೆಯಲ್ಲಿ ಮೊದಲ ಮಹಡಿಯಲ್ಲೇ 100 ಕೋಟಿ ರೂ. ಹಳೇ, ಹೊಸ ನೋಟು ಪತ್ತೆ- ಬೆಚ್ಚಿಬಿದ್ದ ಪೊಲೀಸರು

    ಅತಿಕ್ರಮಣ ಪ್ರವೇಶ: 4 ಆಗಸ್ಟ್ 2004ರಂದು ಓಕಳಿಪುರಂನಲ್ಲಿ ರಘುನಾಥ್ ಅನ್ನೋರ ಮನೆಗೆ ಅತಿಕ್ರಮಣ ಪ್ರವೇಶ ಮಾಡಿ ಕ್ಷುಲ್ಲಕ ಕಾರಣಕ್ಕೆ ಗೇಟ್ ಮುರಿದು ಹಾಕಿ ಕೊಲೆ ಬೆದರಿಕೆ ಹಾಕಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 27 2006ರಲ್ಲಿ ಶಿಕ್ಷೆ ವಿಧಿಸಲಾಗಿತ್ತು.

    ಕೊಲೆ ಯತ್ನ: 2010ರ ಜೂನ್ 21ರಂದು ಮಲ್ಲೇಶ್ವರಂ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಮನೆ ಹೋಟೆಲ್ ಮುಂಭಾಗದಲ್ಲಿ ಮಾಜಿ ಕಾರ್ಪೋರೇಟರ್ ಗೋವಿಂದರಾಜು ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಲ್ಲೆ ನಡೆಸಲಾಗಿತ್ತು.

    ಪತ್ನಿ ಪಾಲಿಕೆಯ ಮಾಜಿ ಸದಸ್ಯೆ: 2 ಬಾರಿ ಬಿಬಿಎಂಪಿ ಕಾರ್ಪೋರೇಟರ್ ಆಗಿದ್ದ ನಾಗನ ಪತ್ನಿಯೂ ಮಾಜಿ ಪಾಲಿಕೆ ಸದಸ್ಯೆ. 2002-07 ರವರೆಗೆ ಗಂಡ-ಹೆಂಡತಿ ಕಾರ್ಪೋರೇಟರ್ ಆಗಿದ್ದು, ಏಕಕಾಲದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ನಾಗ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‍ನಿಂದ ಸ್ಪರ್ಧಿಸಿದ್ದ. ಆದ್ರೆ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ವಿರುದ್ಧ ಸಣ್ಣ ಅಂತರದಲ್ಲಿ ಸೋತಿದ್ದ. ಬಳಿಕ ಬಿಎಸ್‍ಆರ್ ಪಕ್ಷಕ್ಕೂ ಸೇರ್ಪಡೆ ಆಗಿ ಕಚೇರಿ ಒಳಗೆ ಶ್ರೀರಾಮುಲು ಖುದ್ದಾಗಿ ಕರೆದುಕೊಂಡು ಹೋಗಬೇಕೆಂದು ಹಠ ಹಿಡಿದಿದ್ದ. ಕೊನೆಗೆ ಶ್ರೀರಾಮುಲು ಖುದ್ದಾಗಿ ಕರೆದುಕೊಂಡು ಹೋಗಿ ಪಕ್ಷಕ್ಕೆ ಸೇರಿಸಿಕೊಂಡಿದ್ದರು.

    ನಾಗನ ಮಕ್ಕಳ ಮೇಲೂ ಪ್ರಕರಣಗಳಿವೆ: ಬಾಂಬ್ ನಾಗನಿಗೆ ಈಗ 54 ವರ್ಷ, ಇಬ್ಬರು ಮಕ್ಕಳು ಇದ್ದಾರೆ. ಮಕ್ಕಳ ಮೇಲೂ ದೊಂಬಿ ಹಾಗೂ ಕೊಲೆ ಯತ್ನ ಪ್ರಕರಣ ದಾಖಲಾಗಿವೆ. ಬಹುತೇಕ ಪ್ರಕರಣಗಳು ಖುಲಾಸೆಯಾಗಿದ್ದು, ಇತ್ತೀಚೆಗೆ ಉದ್ಯಮಿ ಅಪಹರಿಸಿ ಸುದ್ದಿಯಾಗಿದ್ದ. ಇತ್ತೀಚೆಗೆ ರೌಡಿಶೀಟರ್ ಪಟ್ಟಿಯಿಂದ ನಾಗನ ಹೆಸರು ಕೈಬಿಡುವಂತೆ ಕೋರ್ಟ್ ಕೂಡ ಆದೇಶ ನೀಡಿತ್ತು.

  • ಮಾಜಿ ರೌಡಿಶೀಟರ್ ಬಾಂಬ್ ನಾಗನ ಮನೆ ಮೇಲೆ ಪೊಲೀಸರ ದಾಳಿ – 6 ಗಂಟೆಯಿಂದ ನಡೀತಿದೆ ಆಪರೇಷನ್ ನಾಗ

    ಮಾಜಿ ರೌಡಿಶೀಟರ್ ಬಾಂಬ್ ನಾಗನ ಮನೆ ಮೇಲೆ ಪೊಲೀಸರ ದಾಳಿ – 6 ಗಂಟೆಯಿಂದ ನಡೀತಿದೆ ಆಪರೇಷನ್ ನಾಗ

    – ಮೊದಲ ಮಹಡಿಯಲ್ಲೇ 100 ಕೋಟಿ ಹಳೇ, ಹೊಸ ನೋಟು ಪತ್ತೆ- ಬೆಚ್ಚಿಬಿದ್ದ ಪೊಲೀಸರು

    ಬೆಂಗಳೂರು: ಮಾಜಿ ರೌಡಿ ಶೀಟರ್ ನಾಗರಾಜ್ ಅಲಿಯಾಸ್ ನಾಗನ ಮನೆ ಮೇಲೆ ಪೊಲೀಸರು ಇಂದು ಬೆಳಿಗ್ಗೆ ದಾಳಿ ನಡೆಸಿದ್ದಾರೆ. ಶ್ರೀರಾಮಪುರದ ನಿವಾಸದ ಮೇಲೆ ಹೆಣ್ಣೂರು ಪೊಲೀಸರು ದಾಳಿ ಮಾಡ್ತಿದ್ದಂತೆ ನಾಗ ಮನೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದು, ಮನೆ ಬಾಗಿಲು ತೆಗೆಸಲು ಬೆಳಗ್ಗಿನಿಂದ ಪೊಲೀಸರು ಪ್ರಯತ್ನಿಸುತ್ತಿದ್ದರು. ಆದ್ರೆ ಈಗ ನಾಗ ಪರಾರಿಯಾಗಿದ್ದಾನೆ ಎಂದು ಹೇಳಲಾಗ್ತಿದೆ.

    ಅಕ್ರಮ ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದ ಆರೋಪದಡಿ ಪೊಲೀಸರು ನಾಗನನ್ನು ಬಂಧಿಸಲು ಹೋಗಿದ್ದರು. ಮಾರ್ಚ್ 18ರಂದು ರಿಯಲ್ ಎಸ್ಟೇಟ್ ಉದ್ಯಮಿ ಉಮೇಶ್ ಎಂಬುವರನ್ನ ಅಪಹರಿಸಲಾಗಿತ್ತು. ಕಿಡ್ನ್ಯಾಪ್ ತಂಡ ಶ್ರೀರಾಮಪುರದ ನಾಗನ ಮನೆಗೆ ಉಮೇಶ್‍ರನ್ನ ಕರೆತಂದು 50 ಲಕ್ಷ ರೂ. ಹಣ ವಸೂಲಿ ಮಾಡಿದ್ರು. ಕೊಲೆ ಬೆದರಿಕೆ ಇದ್ದ ಕಾರಣ ಉದ್ಯಮಿ ಉಮೇಶ್ ಯಾವುದೇ ದೂರು ನೀಡಿರಲಿಲ್ಲ. ನಂತರ ಏಪ್ರಿಲ್ 07 ರಂದು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಉಮೇಶ್ ದೂರು ದಾಖಲಿಸಿದ್ರು. ಹೀಗಾಗಿ ಕೋರ್ಟ್‍ನಿಂದ ಸರ್ಚ್ ವಾರೆಂಟ್ ತಂದು ಹೆಣ್ಣೂರು ಇನ್ಸ್ ಪೆಕ್ಟರ್ ಶ್ರೀನಿವಾಸ್, ಮಲ್ಲೇಶ್ವರಂ ಎಸಿಪಿ ಸೇರಿದಂತೆ 40 ಕ್ಕೂ ಹೆಚ್ಚು ಪೊಲೀಸರು ನಾಗನ ಮನೆ ಹಾಗೂ ಸ್ನೇಹ ಸೇವಾ ಸಮಿತಿ ಕಚೇರಿಯ ಮೇಲೆ ದಾಳಿ ಮಾಡಿದ್ದಾರೆ.

    ಬೆಳಗ್ಗೆ 7 ಗಂಟೆಗೆ ಪೊಲೀಸರು ಬಂದಿರೋ ವಿಚಾರ ತಿಳಿದ ನಾಗ, ಮನೆ ಹಾಗೂ ಕಚೇರಿ ಲಾಕ್ ಮಾಡಿಕೊಂಡಿದ್ದಾನೆ. ಸುತ್ತಿಗೆಯಿಂದ ಕೀ ಹಾಗೂ ಮನೆಯ ಮುಂದಿನ ಗ್ರಿಲ್ ಕಂಬಿಗಳನ್ನು ಒಡೆದು ಪೊಲೀಸರು ಒಳ ಪ್ರವೇಶಿಸಿದ್ದಾರೆ. ಪೊಲೀಸರು ದಾಳಿ ನಡೆಸಿದ ವೇಳೆ ನಾಗನ ಮನೆಯಲ್ಲಿ 100 ಕೋಟಿ ರೂಪಾಯಿಗೂ ಹೆಚ್ಚು ಹಳೆಯ ಮತ್ತು ಹೊಸ ನೋಟುಗಳು ಪತ್ತೆಯಾಗಿವೆ. ಅಲ್ಲದೆ ಲಾಂಗು, ಕತ್ತಿ, ಡ್ಯಾಗರ್ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಇದುವರೆಗೂ ಪೊಲೀಸರು 4 ಮಹಡಿಯನ್ನ ಶೋಧಿಸಿದ್ದು, 5ನೇ ಮಹಡಿಯಿಂದ ಟೆರೆಸ್‍ಗೆ ಹೋಗಿ ಅಲ್ಲಿಂದ ಬಾಂಬ್ ನಾಗ ಎಸ್ಕೇಪ್ ಆಗಿದ್ದಾನೆ ಎನ್ನಲಾಗಿದೆ.


    ಸಿಸಿಟಿವಿ ನೋಡ್ತಾ ಪೊಲೀಸರ ಕಣ್ತಪ್ಪಿಸಿ ಎಸ್ಕೇಪ್: ಕಂಪ್ಯೂಟರೈಸ್ಡ್ ಲಾಕ್ ಇರುವ ಕಟ್ಟಡದ ಕೊನೆ ಅಂತಸ್ತಿನಲ್ಲಿ ನಾಗ ಅವಿತು ಕುಳಿತಿದ್ದು, ಕೊಠಡಿಯಲ್ಲೇ ಕುಳಿತು ಸಿಸಿಟಿವಿ ದೃಶ್ಯಾವಳಿ ಮೂಲಕ ಪೊಲೀಸರ ತಪಾಸಣೆಯನ್ನು ವೀಕ್ಷಿಸುತ್ತಿದ್ದ ಎನ್ನಲಾಗಿತ್ತು. ಆದ್ರೆ ಮನೆಯ ಟೆರೆಸ್ ಮೂಲಕ ಎಸ್ಕೇಪ್ ಆಗಿರುವ ಶಂಕೆ ವ್ಯಕ್ತವಾಗಿದೆ. ಬಾಗಿಲು ಒಡೆದು ಒಳಹೋದಾಗ ಇದ್ದದ್ದು ಪತ್ನಿ ಮಾತ್ರ.

    ಬ್ಲಾಕ್ ಅಂಡ್ ವೈಟ್ ಮನಿ ದಂಧೆಯಲ್ಲಿ ತೊಡಗಿದ್ದ ಬಾಂಬ್ ನಾಗ 8 ಉದ್ಯಮಿಗಳನ್ನು ಕಿಡ್ನ್ಯಾಪ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹಣ ಬದಲಾವಣೆ ಮಾಡಿಕೊಡುವುದಾಗಿ ನಂಬಿಸಿ ಉದ್ಯಮಿಗಳಿಗೆ ವಂಚಿಸಿದ್ದು, ಉದ್ಯಮಿಗಳನ್ನು ಕರೆತಂದು ಹಣ ವಸೂಲಿ ಮಾಡುತ್ತಿದ್ದ ಎನ್ನಲಾಗಿದೆ. ಆದರೆ ಹೆಣ್ಣೂರು ಠಾಣೆಯಲ್ಲಿ ಮಾತ್ರ ಉಮೇಶ್ ಅವರ ಅಪಹರಣದ ಕುರಿತು 1 ದೂರು ದಾಖಲಾಗಿತ್ತು.

    ಬಾಂಬ್ ನಾಗ ಎಂದು ಹೆಸರು ಬಂದಿದ್ದೇಗೆ?: ಶ್ರೀರಾಮಪುರದ ಅರುಣಾ ಥಿಯೇಟರ್ ಬಳಿ ರೌಡಿಶೀಟರ್ ರಾಜೇಂದ್ರ ಎಂಬಾತ ನಾಗರಾಜನ ಮೇಲೆ ದಾಳಿ ಮಾಡಿದ್ದ. ನಾಗರಾಜನ ಮೇಲೆ ಬಾಂಬ್ ದಾಳಿ ನಡೆದಿತ್ತು. ಅಂದಿನಿಂದ ನಾಗರಾಜನಿಗೆ ಬಾಂಬ್ ನಾಗ ಎಂದು ಹೆಸರು ಬಂದಿದೆ. ಈತ 20ನೇ ವಯಸ್ಸಿಗೆ ರೌಡಿಸಂಗೆ ಕಾಲಿಟ್ಟಿದ್ದ. ದರೋಡೆ, ಬೆದರಿಕೆ, ಹಲ್ಲೆ, ಕಿಡ್ನ್ಯಾಪ್, ಕೊಲೆ ಯತ್ನ ಸೇರಿದಂತೆ ಬಾಂಬ್ ನಾಗನ ಮೇಲೆ 32 ಪ್ರಕರಣ ದಾಖಲಾಗಿದ್ದವು. ನೆಲಮಂಗಲ, ಶ್ರೀರಾಮಪುರ, ಹೆಣ್ಣೂರು ಠಾಣೆ ಸೇರಿದಂತೆ ಸಿಸಿಬಿಯಲ್ಲೂ ಬಾಂಬ್ ನಾಗನ ವಿರುದ್ಧ ದೂರು ದಾಖಲಾಗಿತ್ತು. ಇವುಗಳಲ್ಲಿ ಬಹುತೇಕ ಪ್ರಕರಣಗಳು ಖುಲಾಸೆಯಾಗಿದೆ. ಇತ್ತೀಚೆಗೆ ರೌಡಿಶೀಟರ್ ಪಟ್ಟಿಯಿಂದ ಹೆಸರು ಕೈಬಿಡುವಂತೆ ಕೋರ್ಟ್ ಆದೇಶ ನೀಡಿತ್ತು.

  • ಸಿಎಂ ಗೃಹ ಕಚೇರಿಗೆ ಮುತ್ತಿಗೆ ಭೀತಿ: ರಾತ್ರೋರಾತ್ರಿ ಸಾವಿರಾರು ತುಂಗಭದ್ರಾ ಕಾರ್ಮಿಕರ ಬಂಧನ

    ಸಿಎಂ ಗೃಹ ಕಚೇರಿಗೆ ಮುತ್ತಿಗೆ ಭೀತಿ: ರಾತ್ರೋರಾತ್ರಿ ಸಾವಿರಾರು ತುಂಗಭದ್ರಾ ಕಾರ್ಮಿಕರ ಬಂಧನ

    -ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಾದಯಾತ್ರೆ ಹೊರಟಿದ್ದ ಕಾರ್ಮಿಕರು

    ರಾಯಚೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಯಚೂರು ಸೇರಿ ವಿವಿಧೆಡೆಯಿಂದ ಬೆಂಗಳೂರಿಗೆ ಪಾದಯಾತ್ರೆ ಹೊರಟಿದ್ದ 800 ಹೆಚ್ಚು ತುಂಗಭದ್ರಾ ವಲಯ ಹಂಗಾಮಿ ಕಾರ್ಮಿಕರನ್ನ ಬಂಧಿಸಲಾಗಿದೆ.

    ಬುಧವಾರ ಮಧ್ಯರಾತ್ರಿ ಬೆಂಗಳೂರಿಗೆ ಹೋಗದಂತೆ ತುಮಕೂರು ಬಳಿ ಬಂಧಿಸಿ ರಾಯಚೂರು ಸೇರಿ ಆಯಾ ಜಿಲ್ಲೆಗಳಿಗೆ ಕರೆತರಲಾಗಿದೆ. ಕಾರ್ಮಿಕ ಮುಖಂಡರನ್ನ ಪೊಲೀಸ್ ಠಾಣೆಗಳಲ್ಲಿ ಬಂಧಿಸಿಡಲಾಗಿದೆ.

    ವೇತನ ಹೆಚ್ಚಳ, ಗುತ್ತಿಗೆ ಕಾರ್ಮಿಕ ಪದ್ದತಿ ರದ್ದತಿ, ಸಮಾನ ಕೆಲಸಕ್ಕೆ ಸಮಾನ ವೇತನಕ್ಕೆ ಆಗ್ರಹಿಸಿ ಏಪ್ರಿಲ್ 4 ರಿಂದ ಬಳ್ಳಾರಿ ಮುನಿರಾಬಾದ್‍ನಿಂದ ಕಾರ್ಮಿಕರು ಬೃಹತ್ ಪಾದಯಾತ್ರೆ ಜಾಥಾ ನಡೆಸಿದ್ದರು. ಅಂಬೇಡ್ಕರ್ ಜಯಂತಿಯಂದು ಮುಖ್ಯಮಂತ್ರಿಗಳ ಗೃಹ ಕಚೇರಿ ಮುತ್ತಿಗೆ ಹಮ್ಮಿಕೊಂಡಿದ್ದರು. ಹೀಗಾಗಿ ಮಾರ್ಗ ಮಧ್ಯದಲ್ಲೆ ಕಾರ್ಮಿಕರನ್ನ ಬಂಧಿಸಲಾಗಿದೆ. ಬಂಧನವೇಳೆ ಪೊಲೀಸರು ಕನಿಷ್ಠ ಸೌಜನ್ಯವನ್ನೂ ತೋರಿಸಿಲ್ಲ ಅಂತ ಆರೋಪಿಸಿರುವ ಕಾರ್ಮಿಕರು ಹೋರಾಟ ಮುಂದುವರೆಸುವ ಎಚ್ಚರಿಕೆ ನೀಡಿದ್ದಾರೆ.

     

  • ಮದುವೆ ಮುಗಿಸಿ ಬರ್ತಿದ್ದ ವೇಳೆ ಪಲ್ಟಿ ಹೊಡೆದ ಬಸ್-60 ಜನ್ರಿಗೆ ಗಾಯ

    ಮದುವೆ ಮುಗಿಸಿ ಬರ್ತಿದ್ದ ವೇಳೆ ಪಲ್ಟಿ ಹೊಡೆದ ಬಸ್-60 ಜನ್ರಿಗೆ ಗಾಯ

    ರಾಮನಗರ: ಮದುವೆ ಮುಗಿಸಿ ಹಿಂದಿರುಗುವ ವೇಳೆ ಬಸ್ಸೊಂದು ಪಲ್ಟಿ ಹೊಡೆದ ಪರಿಣಾಮ 60 ಜನರು ಗಾಯಗೊಂಡಿರುವ ಘಟನೆ ರಾಮನಗರ ತಾಲೂಕಿನ ಬೆಜ್ಜರಹಳ್ಳಿ ಕಟ್ಟೆ ಗ್ರಾಮದ ಸಮೀಪ ನಡೆದಿದೆ.

    ಬುಧವಾರ ಕರೇನಹಳ್ಳಿ ಗ್ರಾಮದ ಗ್ರಾಮಸ್ಥರು ಮಾಗಡಿ ತಾಲೂಕಿನ ಕರ್ಲಳ್ಳಿ ಎತ್ತೋಕಲ್ಲು ಬಸವಣ್ಣನ ದೇವಾಲಯ ಬಳಿ ನಡೆಯುತ್ತಿದ್ದ ಮದುವೆಗೆ ಹೋಗಿದ್ದರು. ಮದುವೆ ಮುಗಿಸಿಕೊಂಡು ವಾಪಾಸ್ಸಾಗುವ ವೇಳೆ ಬಸ್ ಪಲ್ಟಿ ಹೊಡೆದಿದೆ. ಬಸ್ ನಲ್ಲಿ ಸುಮಾರು 60 ಜನರಿದ್ದು ಬಹುತೇಕವಾಗಿ ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಇಬ್ಬರಿಗೆ ಗಂಭೀರ ಗಾಯಗಳಾಗಿವೆ.

    ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.

     

  • ಮದುವೆಯಾಗಿ 10 ವರ್ಷವಾದ್ರೂ ಹತ್ರಕ್ಕೆ ಬಾರದ ಪತಿಯ ವಿರುದ್ಧ ದೂರು ದಾಖಲು

    ಮದುವೆಯಾಗಿ 10 ವರ್ಷವಾದ್ರೂ ಹತ್ರಕ್ಕೆ ಬಾರದ ಪತಿಯ ವಿರುದ್ಧ ದೂರು ದಾಖಲು

    ಬೆಂಗಳೂರು: ನನ್ನ ಪತಿಗೆ ಪುರಷತ್ವವಿಲ್ಲ ಎಂದು ಗೃಹಿಣಿಯೊಬ್ಬರು ನಗರದ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಮೇರಿ (ಹೆಸರು ಬದಲಾಯಿಸಿದೆ) ಎಂಬ ಮಹಿಳೆ ಪತಿ ಆಂಟೋನಿ ಪ್ರವೀಣ ವಿರುದ್ಧ ದೂರು ದಾಖಲಿಸಿದ್ದಾರೆ. ಮದುವೆಯಾಗಿ ಹತ್ತು ವರ್ಷವಾದರೂ ಪತಿ ನನ್ನ ಮೈ ಮುಟ್ಟಿಲ್ಲ. ದೈಹಿಕ ಸಂಪರ್ಕಕ್ಕೆ ಕರೆದರೆ ಜಗಳದ ನೆಪ ಮಾಡಿ ಎಸ್ಕೇಪ್ ಆಗ್ತಾನೆ ಎಂದು ದೂರಿನಲ್ಲಿ ಹೇಳಿದ್ದಾರೆ.

    ಮೇರಿ ಮತ್ತು ಆಂಟೋನಿ 2007 ರಲ್ಲಿ ಬೆಂಗಳೂರಿನಲ್ಲಿ ಮದುವೆಯಾಗಿದ್ದರು. ಮದುವೆಯ ನಂತರ ಮೈಕೋ ಲೇಔಟ್ ನ ಸಾರ್ವಭೌಮ ನಗರದಲ್ಲಿ ವಾಸವಾಗಿದ್ದರು. ಮದುವೆಯ ನಂತರ ಮೇರಿ ಅವರು ಫರ್ಟಿಲಿಟಿ ಚಿಕಿತ್ಸೆ ಪೆಡದು ಮಗು ಪಡೆದಿದ್ದಾರೆ. ಗಂಡನಿಗೆ ಪುರಷತ್ವ ಇಲ್ಲದಿರುವುದು ಗೊತ್ತಿದ್ರೂ ವಂಚಿಸಿ ಮದುವೆ ಆಗಿದ್ದಾನೆ. ಅಲ್ಲದೇ ಅನುಮಾನದಿಂದ ಗಂಡ ಚಿತ್ರಹಿಂಸೆ ನೀಡುತ್ತಿದ್ದಾನೆ ಎಂದು ಪ್ರಕರಣ ದಾಖಲಿಸಿದ್ದಾರೆ.