Tag: police

  • ಪಾಸ್ ಇದ್ರೂ ಇಳಿಸಿದ, ಇಂಗ್ಲಿಷ್ ಮಾತನಾಡಿದ್ದಕ್ಕೆ ಕಿರಿಕ್: ಬಿಎಂಟಿಸಿ ಕಂಡಕ್ಟರ್ ವಿರುದ್ಧ ಯುವತಿ ದೂರು

    ಪಾಸ್ ಇದ್ರೂ ಇಳಿಸಿದ, ಇಂಗ್ಲಿಷ್ ಮಾತನಾಡಿದ್ದಕ್ಕೆ ಕಿರಿಕ್: ಬಿಎಂಟಿಸಿ ಕಂಡಕ್ಟರ್ ವಿರುದ್ಧ ಯುವತಿ ದೂರು

    ಬೆಂಗಳೂರು: ಇಂಗ್ಲಿಷ್‍ನಲ್ಲಿ ಮಾತನಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಮತ್ತು ಬಸ್ ಪಾಸ್ ಇದ್ದರೂ ಪ್ರಯಾಣಿಕರನ್ನು ಬಲವಂತವಾಗಿ ಇಳಿಸಿದ್ದಕ್ಕೆ ಬಿಎಂಟಿಸಿ ಕಂಡಕ್ಟರ್ ವಿರುದ್ಧ ಯುವತಿಯೊಬ್ಬರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ.

    ಕಳೆದ ಶುಕ್ರವಾರ ಬನ್ನೇರುಘಟ್ಟದಿಂದ ಕೋರಮಂಗಲ ಕಡೆಗೆ ಸಂಚರಿಸುತ್ತಿದ್ದ ಬಸ್ ಕಂಡಕ್ಟರ್ ಮೇಲೆ ಈ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಯುವತಿ ಬೆಂಗಳೂರು ಪೊಲೀಸರಿಗೆ ಫೇಸ್‍ಬುಕ್‍ನಲ್ಲಿ ದೂರು ನೀಡಿದ್ದಾರೆ.

    ದೂರಿನಲ್ಲಿ ಏನಿದೆ?
    ಏಪ್ರಿಲ್ 14 ರಂದು ಸಂಜೆ 4.30ರ ವೇಳೆ ನಾನು ನನ್ನ ಸಹೋದರಿ ಮತ್ತು ಸ್ನೇಹಿತೆಯ ಜೊತೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಿಂದ ಕೋರಮಂಗಲಕ್ಕೆ ಹೋಗುವ ಕೆಎ 01 – ಎಫ್‍ಎ- 2274 ನಂಬರ್‍ನ ಬಸ್ಸಿನಲ್ಲಿ ಹತ್ತಿ ಪ್ರಯಾಣಿಸುತ್ತಿದ್ವಿ. ಮೂವರ ಬಳಿ ಒಂದು ದಿನ ಬಿಎಂಟಿಸಿ ಬಸ್ ಪಾಸ್ ಇತ್ತು. ಬಸ್‍ನಲ್ಲಿ ನಾವು ಅಧ್ಯಯನ ವಿಚಾರವಾಗಿ ಇಂಗ್ಲಿಷ್‍ನಲ್ಲಿ ಮಾತನಾಡುತ್ತಿದ್ದಾಗ, ಕಂಡಕ್ಟರ್ ನಮಗೆ ಜೋರು ಮಾಡಿದ. ಯಾಕೆ ಏನಾಯ್ತು ಎಂದು ಪ್ರಶ್ನಿಸಿದ್ದಕ್ಕೆ, ಇಂಗ್ಲಿಷ್‍ನಲ್ಲಿ ಮಾತನಾಡುವುದನ್ನು ನಿಲ್ಲಿಸಿ ಎಂದು ಹೇಳಿದ. ಕಂಡಕ್ಟರ್ ಮಾತು ಕೇಳಿ ನಮಗೆ ಶಾಕ್ ಆಯ್ತು.

    ಈ ವೇಳೆ ನಾನು ನಮ್ಮ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ನಮಗೆ ಇಷ್ಟವಾದ ಭಾಷೆಯಲ್ಲಿ ವ್ಯವಹಾರ ಮಾಡುವುದನ್ನು ನಿಲ್ಲಿಸಲು ಯಾರಿಗೂ ಸಾಧ್ಯವಿಲ್ಲ. ಅಷ್ಟೇ ಅಲ್ಲದೇ ನಾವು ಇಲ್ಲಿ ಜಗಳ ಮಾಡುತ್ತಿಲ್ಲ. ಯಾರಿಗೂ ತೊಂದರೆ ಕೊಡುತ್ತಿಲ್ಲ ಎಂದು ಹೇಳಿ ನಾವು ಮತ್ತೆ ಮಾತನಾಡಲು ತೊಡಗಿದ್ವಿ. ಈ ವೇಳೆ ಬಸ್ ಪಾಸ್ ಯಾರ ಜೊತೆ ಇದೆಯೋ ಅವರೆಲ್ಲ ಇಳಿಯಿರಿ. ಪಾಸ್ ಇರುವ ಮಂದಿಗೆ ಬಸ್ ನಲ್ಲಿ ಪ್ರಯಾಣಿಸಲು ಅನುಮತಿ ನೀಡಲ್ಲ ಎಂದು ಹೇಳಿದ. ಈ ವೇಳೆ ಕೆಲ ಪ್ರಯಾಣಿಕರನ್ನು ಯಾವುದೇ ಕಾರಣ ಇಲ್ಲದೇ ಬಲವಂತವಾಗಿ ಇಳಿಸಿದ. ನಮ್ಮಲ್ಲಿ ಬಸ್ ಪಾಸ್ ಇದ್ದರೂ ನಾವು ಇಳಿಯಲೇ ಇಲ್ಲ. ಈ ಪಾಸ್ ಮೂಲಕ ಎಸಿ ಅಲ್ಲದ ಬಸ್‍ನಲ್ಲಿ ದಿನವಿಡಿ ಸಂಚರಿಸಲು ನಿಯಮ ಇರುವ ಕಾರಣ ನಾವು ಇಳಿಯಲಿಲ್ಲ. ನಾವು ಡೈರಿ ಸರ್ಕಲ್ ವರೆಗೆ ಪ್ರಯಾಣಿಸಿದ ಬಳಿಕ ಬೇರೆ ಬಸ್ ಬದಲಾಯಿಸಿದ್ವಿ.

    ಕಂಡಕ್ಟರ್ ಕರ್ತವ್ಯದ ವೇಳೆ ನಿಯಮವನ್ನು ಉಲ್ಲಂಘಿಸಿದ್ದಾನೆ. ಆದರೆ ಬಸ್ ಕಂಡಕ್ಟರ್ ಈ ನಿಯಮವನ್ನು ಉಲ್ಲಂಘಿಸಿದ್ದು ಯಾಕೆ? ಆತನ ಪಾಕೆಟ್‍ನಲ್ಲಿ ಚಿಲ್ಲರೇ ಇದ್ದರೂ ಹಲವು ಮಂದಿಗೆ ಚಿಲ್ಲರೆ ನೀಡಿಲ್ಲ. ಅಷ್ಟೇ ಅಲ್ಲದೇ ಇಂಗ್ಲಿಷ್ ನಲ್ಲಿ ಮಾತನಾಡಿದ್ದಕ್ಕೆ ನಮ್ಮ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಹೀಗಾಗಿ ಆತನ ಫೋಟೋವನ್ನು ಇಲ್ಲಿ ನೀಡಿದ್ದು ಆತನ ಮೇಲೆ ಕ್ರಮವನ್ನು ಕೈಗೊಳ್ಳಬೇಕೆಂದು ನಾನು ವಿನಂತಿ ಮಾಡಿಕೊಳ್ಳುತ್ತೇನೆ.

  • ವಿಡಿಯೋ: ಪಲ್ಟಿ ಹೊಡೆದ ಟ್ಯಾಂಕರ್-ಅಡುಗೆ ಎಣ್ಣೆ ತುಂಬಿಕೊಳ್ಳಲು ಸ್ಥಳೀಯರ ಪೈಪೋಟಿ

    ವಿಡಿಯೋ: ಪಲ್ಟಿ ಹೊಡೆದ ಟ್ಯಾಂಕರ್-ಅಡುಗೆ ಎಣ್ಣೆ ತುಂಬಿಕೊಳ್ಳಲು ಸ್ಥಳೀಯರ ಪೈಪೋಟಿ

    ಕಲಬುರಗಿ: ಅಡುಗೆ ಎಣ್ಣೆಯ ಟ್ಯಾಂಕರ್ ಪಲ್ಟಿಯಾಗಿ ತೈಲವನ್ನು ಸ್ಥಳೀಯರು ತುಂಬಿಕೊಂಡು ಹೋಗಿದ್ದಾರೆ. ನಗರದ ಹೊರವಲಯದ ನೃಪತುಂಗ ಕಾಲೋನಿ ಬಳಿ ಟ್ಯಾಂಕರ್ ಪಲ್ಟಿ ಹೊಡೆದಿತ್ತು.

    ಹೈದ್ರಾಬಾದ್‍ನಿಂದ ನಗರದ ಇಂಡಸ್ಟ್ರೀಯಲ್ ಏರಿಯಾದ ಪಾರ್ಲೇ-ಜಿ ಬಿಸ್ಕಟ್ ಕಂಪನಿಗೆ ತೈಲ ಸರಬರಾಜು ಮಾಡಲಾಗುತ್ತಿತ್ತು. ಮಾರ್ಗ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿ ಟ್ಯಾಂಕರ್ ಪಲ್ಟಿಯಾಗಿದೆ.

    ಟ್ಯಾಂಕರ್ ಪಲ್ಟಿಯಾಗಿದನ್ನು ಕಂಡ ಸ್ಥಳೀಯರು ಸಿಕ್ಕಿದೆ ಚಾನ್ಸ್ ಅಂತಾ ನಾ ಮುಂದು.. ತಾ ಮುಂದು.. ಅಂತಾ ಎಣ್ಣೆಯನ್ನು ಬಿಂದಿಗೆ-ಬಕೆಟ್‍ಗಳಲ್ಲಿ ತುಂಬಿಕೊಂಡು ಹೋಗಿದ್ದಾರೆ. ಅಂದಾಜು 13 ಲಕ್ಷ ರೂಪಾಯಿ ಮೌಲ್ಯದ 20 ಟನ್ ನಷ್ಟು ತೈಲ ಇದೀಗ ಸ್ಥಳೀಯರ ಪಾಲಾಗಿದೆ ಎಂದು ಅಂದಾಜಿಸಲಾಗಿದೆ. ವಿಷಯ ತಿಳಿದು ವಿವಿ ಪೊಲೀಸರು ಸ್ಥಳಾಕ್ಕಗಮಿಸಿ ನೆರದಿದ್ದ ಜನರನ್ನು ಚದುರಿಸಿದ್ದಾರೆ.

    https://www.youtube.com/watch?v=2w81X5rGjnA

    https://www.youtube.com/watch?v=iXeLu3HnM6Q

     

     

  • ವಿಡಿಯೋ: ಕಂಠಪೂರ್ತಿ ಕುಡಿದು ರಸ್ತೆಯಲ್ಲಿ ಬಿದ್ದುಕೊಂಡ ಪೊಲೀಸಪ್ಪ!

    ವಿಡಿಯೋ: ಕಂಠಪೂರ್ತಿ ಕುಡಿದು ರಸ್ತೆಯಲ್ಲಿ ಬಿದ್ದುಕೊಂಡ ಪೊಲೀಸಪ್ಪ!

    ತುಮಕೂರು: ಇಂದು ಬೆಳಂಬೆಳಗ್ಗೆ ಪೊಲೀಸ್ ಪೇದೆಯೊಬ್ಬರು ಕಂಠಪೂರ್ತಿ ಕುಡಿದು ತುಮಕೂರಿನ ಖಾಸಗಿ ಬಸ್ ನಿಲ್ದಾಣದಲ್ಲಿ ಬಿದ್ದು ಸಾರ್ವಜನಿಕರಿಂದ ಛೀ.. ಥೂ ಎಂದು ಬೈಸಿಕೊಂಡಿದ್ದಾರೆ. ಈ ಪೊಲೀಸಪ್ಪನ ವರ್ತನೆಗೆ ಸಾರ್ವಜನಿಕರ ಎದುರು ಸಹದ್ಯೋಗಿಗಳು ಸಹ ಮಜುಗರ ಪಟ್ಟುಕೊಂಡಿದ್ದಾರೆ.

    ಜಬೀ ಎಂಬವರೇ ಫುಲ್ ಟೈಟ್ ಆಗಿ ರಸ್ತೆಯಲ್ಲಿ ಬಿದ್ದಿದ್ದ ಪೊಲೀಸ್ ಪೇದೆ. ಜಬೀ ಪಾವಗಡ ತಾಲೂಕಿನ ಅರಸೀಕೆರೆ ಠಾಣೆಯಲ್ಲಿ ಪೇದೆಯಾಗಿದ್ದಾರೆ. ಇಂದು ಠಾಣೆಯ ಕೆಲಸಕ್ಕಾಗಿ ತುಮಕೂರಿಗೆ ಆಗಮಿಸಿದ್ದ ಜಬೀ, ಕಂಠಪೂರ್ತಿ ಕುಡಿದು ಪ್ರಜ್ಞೆ ತಪ್ಪಿ ಬಸ್ ನಿಲ್ದಾಣದ ಬಾರ್ ಮುಂದೆಯೇ ಮಲಗಿದ್ದಾರೆ. ಸಮವಸ್ತ್ರದಲ್ಲಿಯೇ ಜಬೀ ಬಿದ್ದಿದ್ದನ್ನ ಕಂಡ ಸ್ಥಳೀಯರು ಮುಖದ ಮೇಲೆ ನೀರು ಸುರಿದಿದ್ದಾರೆ. ಆದ್ರೆ ನೀರು ಸುರಿದರೂ ಪೊಲೀಸಪ್ಪ ಎಚ್ಚರಗೊಂಡಿಲ್ಲ.

    ಕೊನೆಗೆ ಸ್ಥಳೀಯರು ನಗರ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು ಜಬೀ ಅವರನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

    https://www.youtube.com/watch?v=pg6_qeXrnkc

     

  • ಅಪ್ಪ-ಅಮ್ಮ ಹೊಡೀತಿದ್ದಾರೆ, ಬೇಗ ಬಾ ಎಂದ್ಲು ಯುವತಿ- ಮನೆಗೆ ಹೋದ ಪ್ರಿಯಕರ ಹೆಣವಾದ!

    ಅಪ್ಪ-ಅಮ್ಮ ಹೊಡೀತಿದ್ದಾರೆ, ಬೇಗ ಬಾ ಎಂದ್ಲು ಯುವತಿ- ಮನೆಗೆ ಹೋದ ಪ್ರಿಯಕರ ಹೆಣವಾದ!

    ಬೆಂಗಳೂರು: ಐದು ವರ್ಷ ಪ್ರೀತಿ ಮಾಡಿದ ಗೆಳತಿ ದಿಢೀರನೇ ಮೆಸಜ್ ಮಾಡಿ ಅಪ್ಪ ಅಮ್ಮ ಹೊಡೀತ್ತಿದ್ದಾರೆ. ಮನೆಗೆ ಬೇಗ ಬಾ ಎಂದು ಹೇಳಿದ್ದಳು. ಮೆಸೇಜ್ ನೋಡಿ ಗೆಳತಿಯ ಮನೆಗೆ ಹೋದ ಯುವಕ ಸಾವನ್ನಪ್ಪಿದ್ದಾರೆ.

    ನಗರದ ಹೊರವಲಯದ ಅವಲಹಳ್ಳಿ ನಿವಾಸಿ ಮೋಹನ್ ರಾಜ್ ಮೃತ ಯುವಕ. ಮೋಹನ್ ತನ್ನದೇ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದರು. ಅದರೆ ಇವರಿಬ್ಬರದು ಬೇರೆ ಬೇರೆ ಜಾತಿಯಾಗಿದ್ದರಿಂದ ಇಬ್ಬರ ಮನೆಯಲ್ಲೂ ವಿರೋಧವಿತ್ತು. ಹೀಗಿದ್ರೂ ಇವರಿಬ್ಬರೂ ಕಳೆದ ಐದು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು.

    ಇದನ್ನೂ ಓದಿ: 5 ವರ್ಷ ಪ್ರೀತಿಸಿ ಈಗ ನೀನು ಕಪ್ಪಗಿದ್ಯ ಎಂದು ಬೇಡ ಅಂದ್ಳು

    ರವಿವಾರ ರಾತ್ರಿ 11 ಗಂಟೆ ಸುಮಾರಿಗೆ ಮೋಹನ್‍ಗೆ ಯುವತಿ ಮೊಬೈಲ್ ನಿಂದ ಒಂದು ಮಸೇಜ್ ಬಂದಿತ್ತು. ನನ್ನ ಪೋಷಕರು ಹೊಡೆಯುತ್ತಿದ್ದಾರೆ, ಮನೆಗೆ ಬಾ ಎಂದು ಹೇಳಿದ್ದಳು. ಗಾಬರಿಗೊಂಡ ಮೋಹನ್ ಯುವತಿಯ ಮನೆಗೆ ಹೋಗಿದ್ದರು. ಆದರೆ ಯುವತಿಯ ಮನೆಯ ನಾಲ್ಕನೆಯ ಮಹಡಿಯಿಂದ ಬಿದ್ದಿದ್ದಾರೆ. ಕೂಡಲೇ ಮೋಹನ್‍ರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಮೋಹನ್ ಸಾವನ್ನಪ್ಪಿದ್ದಾರೆ.

    ಮೋಹನ್ ರಾಜ್ ತಂದೆ

    ನಮ್ಮ ಮಗನನ್ನು ಯುವತಿಯ ಮನೆಯವರು ಮಹಡಿಯಿಂದ ತಳ್ಳಿ ಕೊಲೆ ಮಾಡಿದ್ದಾರೆ ಎಂದು ಮೋಹನ್ ತಂದೆ ನಾರಾಯಣ್ ಆರೋಪ ಮಾಡುತ್ತಿದ್ದಾರೆ. ಈ ಸಂಬಂಧ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ತನಿಖೆಯಿಂದ ಮಾತ್ರ ಮೋಹನ್ ಸಾವಿನ ಸತ್ಯಾಂಶ ತಿಳಿಯಬೇಕಿದೆ.

  • ಹಣಕ್ಕಾಗಿ ಪತಿಯ ಹೆಣ ಬಿಟ್ಟು ಪರಾರಿಯಾದ ಪತ್ನಿ!

    ಹಣಕ್ಕಾಗಿ ಪತಿಯ ಹೆಣ ಬಿಟ್ಟು ಪರಾರಿಯಾದ ಪತ್ನಿ!

    ಬಾಗಲಕೋಟೆ: ಹಣದ ಮುಂದೆ ಮಾನವೀಯತೆಯ ಮೌಲ್ಯಗಳು ಹಾಗೂ ಸಂಬಂಧಗಳೂ ಉಳಿಯೋದಿಲ್ಲ ಅನ್ನೋದಕ್ಕೆ ಬಾಗಲಕೋಟೆ ಜಿಲ್ಲೆಯ ಹೊನ್ನಾಕಟ್ಟಿ ಗ್ರಾಮದಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ಹಣಕ್ಕಾಗಿ ಪತಿಯ ಶವವನ್ನೇ ರಾತ್ರೋ ರಾತ್ರಿ ಬಿಟ್ಟು ಪತ್ನಿ ಪರಾರಿಯಾಗಿದ್ದಾಳೆ.

    ಇದನ್ನೂ ಓದಿ: ಗಂಡನ ಕಾಮದಾಟ ಬೇಸತ್ತು ಸುಪಾರಿ ಕೊಟ್ಟು ಗಂಡನನ್ನೇ ಕೊಲ್ಲಿಸಿದ್ಳು!

    ರೇಣುಕಾ ಎಂಬ ಮಹಿಳೆ ಹಣಕ್ಕಾಗಿ ಪತಿಯ ಶವವನ್ನು ಬಿಟ್ಟು ಹೋದ ಪತ್ನಿ. ಸೋಮವಾರ ರಾತ್ರಿ ರೇಣುಕಾ ಪತಿ ಶಿವಲಿಂಗಪ್ಪ ಬೇವಿನಮಟ್ಟಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಶಿವಲಿಂಗಪ್ಪ ಅವರು ನಾಲ್ಕು ವರ್ಷದ ಹಿಂದೆ ತಮ್ಮ 13 ಎಕರೆ ಜಮೀನನ್ನು ಸುಮಾರು 80 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿದ್ದರು. ಸೋಮವಾರ ಶಿವಲಿಂಗಪ್ಪ ಮರಣ ಹೊಂದಿದ ನಂತರ ಮನೆಯಲ್ಲಿನ ಹಣ ಲಪಟಾಯಿಸಿ ರೇಣುಕಾ ರಾತ್ರೋ ರಾತ್ರಿ ಮಗನೊಂದಿಗೆ ಗ್ರಾಮದಿಂದ ಕಾಲ್ಕಿತ್ತಿದ್ದಾಳೆ.

    ರೇಣುಕಾಳಿಗೆ ಗ್ರಾಮಸ್ಥರು ಬುದ್ಧಿ ಹೇಳಲು ಹೋದ್ರೆ ಅವರ ಮೇಲೆಯೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಬೆದರಿಕೆ ಹಾಕಿ ಪರಾರಿಯಾಗಿದ್ದಾಳೆ. ಹೀಗಾಗಿ ಗ್ರಾಮದ ಜನತೆಯೇ ದುಡ್ಡು ಸೇರಿಸಿ ಶಿವಲಿಂಗಪ್ಪರ ಅಂತ್ಯಕ್ರಿಯೆ ಮಾಡಿ, ನಂತರ ಪತ್ನಿ ರೇಣುಕಾಳ ಮೇಲೆ ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಶಿವಲಿಂಗಪ್ಪರ ತಾಯಿ

     

  • ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕುವ ಮುನ್ನ ಈ ಸುದ್ದಿ ಓದಿ

    ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕುವ ಮುನ್ನ ಈ ಸುದ್ದಿ ಓದಿ

    ಬೆಂಗಳೂರು: ನೀವೇನಾದ್ರು ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕಿದ್ದೀರಾ? ಯಾರಾದ್ರೂ ಕೆಲಸ ಕೊಡಿಸುವ ಭರವಸೆ ನೀಡ್ತಿದ್ದಾರಾ? ಹಾಗಿದ್ರೆ ಹುಷಾರಾಗಿರಿ. ಯಾಕಂದ್ರೆ ಬೆಂಗಳೂರಿನಲ್ಲಿ ವಿದ್ಯಾವಂತ ನಿರುದ್ಯೋಗಿಗಳನ್ನೇ ಟಾರ್ಗೆಟ್ ಮಾಡೋ ಒಂದು ತಂಡ ಸರ್ಕಾರಿ ಕೆಲಸದ ಭರವಸೆ ನೀಡಿ ಕೋಟ್ಯಾಂತರ ರೂಪಾಯಿ ಹಣ ದೋಚುತ್ತಿದೆ.

    ಆಶಾ ಎಂಬ ಮಹಿಳೆ ವಿದ್ಯಾವಂತ ಯುವಕರಿಗೆ ಸರ್ಕಾರಿ ಕೆಲಸದ ಆಮಿಷವೊಡ್ಡಿ ಕೋಟಿ ಕೋಟಿ ರೂಪಾಯಿ ವಂಚನೆ ಮಾಡುತ್ತಿದ್ದಾಳೆ. ಈಕೆಯ ಹಿಂದೆ ಒಂದು ತಂಡವೇ ಇದೆ. ಆಶಾ ಮಗಳು ಪ್ರತೀಕ್ಷಾ, ಅಳಿಯ ಕಾರ್ತಿಕ್, ತಮಿಳುನಾಡು ಮೂಲದ ಸುಂದರವೇಲು, ಎಚ್‍ಎಎಲ್ ಮುಖ್ಯ ಎಂಜಿನಿಯರ್ ರವಿಕುಮಾರ್ ಅನ್ನೋರು ಈ ವಂಚನೆಯ ಜಾಲದಲ್ಲಿದ್ದಾರೆ. ಆಶಾ ಮತ್ತು ತಂಡ ಪ್ರತಿಷ್ಠಿತ ಹೋಟೆಲ್, ಕಾಫಿ ಡೇ, ಪಬ್‍ಗಳಲ್ಲಿ ನಡೆಸುವ ಡೀಲ್‍ಗಳೆಲ್ಲಾ ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ವಂಚಕರ ತಂಡ ಸರ್ಕಾರದ ಇಲಾಖೆಗಳ ನಕಲಿ ಸೀಲ್, ಸಹಿ ಹಾಗೂ ಲೆಟರ್ ಪ್ಯಾಡ್ ಹೊಂದಿದ್ದು, ಅಂಚೆ ಮೂಲಕ ಈ ಅಮಾಯಕರಿಗೆ ಆಫರ್ ಲೆಟರ್ ಕಳುಹಿಸಿ ಹಣ ದೋಚಿದ್ದಾರೆ. ನೆಲಮಂಗಲ ಸೇರಿದಂತೆ ಇತರೆ ಜಿಲ್ಲೆಗಳ ಜನ ಇವರ ವಂಚನೆಗೆ ಬಲಿಯಾಗಿದ್ದಾರೆ. ಖಾಸಗಿ ಕಾಲೇಜಿನ ಉಪಪ್ರಾಂಶುಪಾಲರೊಬ್ಬರು 17 ಲಕ್ಷ ರೂಪಾಯಿ ಕೊಟ್ಟು ಮೋಸ ಹೋಗಿದ್ದಾರೆ.

    ಮೋಸ ಹೋದವರು ಹಣ ಕೇಳಲು ಹೋದಾಗ ಆಶಾ ಚೆಕ್ ನೀಡಿದ್ದಳು. ಆದ್ರೆ ಆ ಚೆಕ್‍ಗಳು ಬೌನ್ಸ್ ಆಗಿವೆ. ಈಕೆಯ ವಿರುದ್ಧ ಜೆಪಿ ನಗರ, ಜಯನಗರ, ಮಲ್ಲೇಶ್ವರಂ, ಹಾಗೂ ನೆಲಮಂಗಲದಲ್ಲಿ ದೂರು ದಾಖಲಾಗಿದೆ. ಆದ್ರೆ ಪೊಲೀಸರು ಈಕೆಯನ್ನ ಬಂಧಿಸಿದ ಕೆಲವೇ ಗಂಟೆಗಳಲ್ಲಿ ಬೇಲ್ ಮೇಲೆ ಹೊರಬಂದಿದ್ದಾಳೆ. ಈಕೆಯಿಂದ ಮೋಸ ಹೋದ ಬಡವರು ದಿಕ್ಕು ತೋಚದಂತಾಗಿದ್ದಾರೆ. ಸಾಲ ಮಾಡಿ, ಮನೆ ಮಾರಿ, ಅಸ್ತಿ ಪತ್ರ ಅಡವಿಟ್ಟು ಹಣ ಕೊಟ್ಟವರು ಕಣ್ಣೀರು ಹಾಕ್ತಿದ್ದಾರೆ.

    ಪೊಲೀಸರು ವಂಚಕರ ವಿರುದ್ಧ ಕ್ರಮ ಕೈಗೊಂಡು ವಂಚನೆಗೆ ಒಳಗಾದವ್ರಿಗೆ ನ್ಯಾಯ ಕೊಡಿಸಬೇಕಿದೆ. ಸರ್ಕಾರಿ ಕೆಲಸದ ಆಸೆಯಲ್ಲಿರುವ ವಿದ್ಯಾವಂತ ನಿರುದ್ಯೋಗಿಗಳು ಎಚ್ಚೆತ್ತುಕೊಳ್ಳಬೇಕಿದೆ.

    https://www.youtube.com/watch?v=p7X1BHvZO7Y

     

  • ಹೆಂಡತಿಗೆ ವಯಾಗ್ರ ಮಾತ್ರೆ ತಿನ್ನಿಸಿ ಪೀಡಿಸ್ತಿದ್ನಂತೆ ಕಾಮುಕ ಪತಿ

    ಹೆಂಡತಿಗೆ ವಯಾಗ್ರ ಮಾತ್ರೆ ತಿನ್ನಿಸಿ ಪೀಡಿಸ್ತಿದ್ನಂತೆ ಕಾಮುಕ ಪತಿ

    ಬೆಂಗಳೂರು: ಮದುವೆಯ ನಂತರ ಎಲ್ಲರಿಗೂ ಸಂಸಾರದ ಚಿಂತೆಯಾದ್ರೆ ಇಲ್ಲೊಬ್ಬನಿಗೆ ಯಾವಾಗಲೂ ನೀಲಿ ಚಿತ್ರಗಳ ಚಿಂತೆ. ಮಲಗೋಕೆ ಮುನ್ನ ವಯಾಗ್ರ ಮಾತ್ರೆ ಕೊಟ್ಟು ಕಾಡುತ್ತಿದ್ದ ಎಂದು ಗಂಡನ ವಿರುದ್ಧ ದೂರು ದಾಖಲಾಗಿದೆ.

    ಮೊಹಮ್ಮದ್ ಇಮ್ರಾನ್ ಎಂಬಾತನೇ ತನ್ನ ಹೆಂಡತಿಗೆ ವಯಾಗ್ರ ಮಾತ್ರೆ ತಿನ್ನಿಸುತ್ತಿದ್ದ ಕಾಮುಕ ಪತಿ. ಮೂರು ವರ್ಷಗಳ ಹಿಂದೆ ಮಿನಾಜ್ (ಹೆಸರು ಬದಲಾಯಿಸಿದೆ) ಎಂಬವರ ಜೊತೆ ಈತನ ಮದುವೆಯಾಗಿತ್ತು. ಮಿನಾಜ್ ತವರು ಮನೆಯವರು ಸುಮಾರು ಆರೇಳು ಲಕ್ಷ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿದ್ದರು. ಆದರೆ ಇಮ್ರಾನ್ ತನ್ನ ಪತ್ನಿ ಮಿನಾಜ್‍ಗೆ ಮತ್ತಷ್ಟು ವರದಕ್ಷಿಣೆ ತರುವಂತೆ ಕಿರುಕುಳ ಕೊಡುತ್ತಿದ್ದ.

    ಇಮ್ರಾನ್‍ಗೆ ಪ್ರತಿದಿನ ಬ್ಲೂ ಫಿಲ್ಮ್‍ಗಳನ್ನು ನೋಡುವ ಚಟ ಸಹ ಇತ್ತು. ಪ್ರತಿ ದಿನ ವಯಾಗ್ರ ಮಾತ್ರೆ ಸೇವಿಸಿ, ಹೆಂಡತಿಗೂ ಸಹ ಬಲವಂತವಾಗಿ ವಯಾಗ್ರ ಮಾತ್ರೆ ಕೊಡುತ್ತಿದ್ದ. ನಂತರ ನೀಲಿ ಚಿತ್ರ ವೀಕ್ಷಣೆ ಮಾಡ್ಕೊಂಡು ಸೆಕ್ಸ್‍ಗೆ ಅಣಿಯಾಗಿ, ಫಿಲಂನಲ್ಲಿರುವಂತೆ ಹೆಂಡತಿಯೂ ಸಹಕರಿಸಬೇಕು. ಇಲ್ಲವಾದ್ರೆ ರಾತ್ರಿ ತುಂಬಾ ಹೊಡೆಯುತ್ತಿದ್ದ ಎಂದು ಆರೋಪಿಸಿ ದೂರು ದಾಖಲಾಗಿದೆ.

    ಇದನ್ನೂ ಓದಿ: ಗಂಡನ ಕಾಮದಾಟ ಬೇಸತ್ತು ಸುಪಾರಿ ಕೊಟ್ಟು ಗಂಡನನ್ನೇ ಕೊಲ್ಲಿಸಿದ್ಳು!

    ಮೂರು ದಿನದ ಹಸಿ ಬಾಣಂತಿ ಜೊತೆ ಮಲಗಿದ: ಮಿನಾಜ್ ಎರಡನೇ ಮಗುವಿಗೆ ಜನ್ಮ ನೀಡಿ ಮೂರು ದಿನಗಳಾಗಿತ್ತು. ಪತ್ನಿಯ ಮನೆಗೆ ಬಂದ ಮೊಹಮ್ಮದ್ ಇಮ್ರಾನ್, ಅತ್ತೆಯನ್ನ ಮನೆಯಿಂದ ಹೊರಗೆ ಕಳಿಸಿ ಬಲವಂತವಾಗಿ ಸೆಕ್ಸ್ ಮಾಡಿದ್ದಾನೆ. ನಂತ್ರ ನನ್ನ ಕೆಲಸ ಮುಗಿಯಿತು ಅಂತಾ ಮನೆಯಿಂದ ಹೊರಟಿದ್ದಾನೆ. ಇದೀಗ ವರದಕ್ಷಿಣೆಗಾಗಿ ಹೆಂಡ್ತಿಯನ್ನ ಮನೆಯಿಂದ ಹೊರಗೆ ಹಾಕಿದ್ದು, ಆಗ್ಗಾಗ್ಗೆ ಹೆಂಡ್ತಿ, ಬಾಮೈದನ ಮೇಲೆ ಗಲಾಟೆ ಮಾಡ್ತಿದ್ದಾನೆ. ನ್ಯಾಯಕ್ಕಾಗಿ ಕೋರ್ಟ್ ನಲ್ಲಿ ಮಿನಾಜ್ ಕುಟುಂಬ ಪಿಸಿಆರ್ ಅರ್ಜಿ ಹಾಕಿದ ಮೇಲೆ ಕೆ.ಜಿ.ಹಳ್ಳಿ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಆದರೆ ಇಮ್ರಾನ್‍ನನ್ನು ಇದೂವರೆಗೂ ಬಂಧಿಸಿಲ್ಲ.

    ಇದನ್ನೂ ಓದಿ: ನನ್ನ ಗಂಡನಿಗೆ ಪುರುಷತ್ವ ಇಲ್ಲ ಎಂದು ಪೊಲೀಸರಿಗೆ ಪತ್ನಿ ದೂರು

     

  • ಹಾವೇರಿ: ಸ್ಪರ್ಧೆ ನೋಡುತ್ತಿದ್ದಾಗ ಹೋರಿ ತಿವಿದು ವ್ಯಕ್ತಿ ಸಾವು

    ಹಾವೇರಿ: ಸ್ಪರ್ಧೆ ನೋಡುತ್ತಿದ್ದಾಗ ಹೋರಿ ತಿವಿದು ವ್ಯಕ್ತಿ ಸಾವು

    ಹಾವೇರಿ: ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿಯೊಂದು ತಿವಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಸವಣೂರು ಪಟ್ಟಣದಲ್ಲಿ ನಡೆದಿದೆ.

    ಶಿಗ್ಗಾಂವಿ ತಾಲೂಕಿನ ಹುಲಿಕಟ್ಟಿ ಗ್ರಾಮದ ನಿವಾಸಿಯಾದ 45 ವರ್ಷದ ರೇವಣಗೌಡ ಪಾಟೀಲ ಮೃತ ವ್ಯಕ್ತಿ. ಸವಣೂರು ಪಟ್ಟಣದಲ್ಲಿ ಇದೇ ಮೊದಲ ಬಾರಿಗೆ ಎಪಿಎಂಸಿ ಆವರಣದಲ್ಲಿ ಹೋರಿ ಬೆದರಿಸುವ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು. ಪಟ್ಟಣದ ವೀರಭದ್ರೇಶ್ವರ ಭಕ್ತ ಮಂಡಳಿ ಈ ಹೋರಿ ಸ್ಪಧೆಯನ್ನು ಏರ್ಪಡಿಸಿತ್ತು. ರೇವಣಗೌಡ ಅವರು ಸವಣೂರು ಪಟ್ಟಣದಲ್ಲಿ ನಡೆಯುತ್ತಿದ್ದ ಹೋರಿ ಬೆದರಿಸುವ ಸ್ಪರ್ಧೆಯನ್ನು ನೋಡಲು ಆಗಮಿಸಿದ್ದರು.

    ಸ್ಪರ್ಧೆಯನ್ನು ನೋಡುವಾಗ ಹೋರಿಯೊಂದು ನೇರವಾಗಿ ರೇವಣಗೌಡರ ಹೊಟ್ಟೆಗೆ ತಿವಿದಿದೆ. ತೀವ್ರವಾಗಿ ಗಾಯಗೊಂಡ ರೇವಣಗೌಡರನ್ನು ಸವಣೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಅಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ರೇವಣಗೌಡರು ಸಾವನ್ನಪ್ಪಿದ್ದಾರೆ.

    ಕಾರ್ಯಕ್ರಮ ಆಯೋಜಕರು ಯಾವುದೇ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳದ ಆರೋಪದ ಮೇಲೆ ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಎಐಎಡಿಎಂಕೆಯ ಚಿಹ್ನೆಗಾಗಿ ಲಂಚ ಆರೋಪ- ಶಶಿಕಲಾ ಸಂಬಂಧಿ ದಿನಕರನ್ ವಿರುದ್ಧ ಕೇಸ್

    ಎಐಎಡಿಎಂಕೆಯ ಚಿಹ್ನೆಗಾಗಿ ಲಂಚ ಆರೋಪ- ಶಶಿಕಲಾ ಸಂಬಂಧಿ ದಿನಕರನ್ ವಿರುದ್ಧ ಕೇಸ್

    ನವದೆಹಲಿ: ಎಐಎಡಿಎಂಕೆ ಪಕ್ಷದ ಚಿಹ್ನೆಗಾಗಿ ಚುನಾವಣಾ ಆಯೋಗಕ್ಕೆ ಲಂಚ ನೀಡಲು ಮುಂದಾಗಿದ್ದ ಆರೋಪದ ಮೇಲೆ ಶಶಿಕಲಾ ಸಂಬಂಧಿ ಟಿಟಿ ದಿನಕರನ್ ವಿರುದ್ಧ ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಎಐಎಡಿಎಂಕೆ ಪಕ್ಷದ ಉಪ ಪ್ರಧಾನ ಕಾರ್ಯದರ್ಶಿಯಾದ ದಿನಕರನ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಆರ್‍ಕೆ ನಗರದ ಉಪಚುನಾವಣೆ ಹಿನ್ನೆಲೆಯಲ್ಲಿ ಎಐಎಡಿಎಂಕೆಯ ಎರಡು ಬಣದ ನಡುವೆ ಚಿಹ್ನೆಗಾಗಿ ಪೈಪೋಟಿ ಏರ್ಪಟ್ಟಿದ್ದರಿಂದ ಚುನಾವಣಾ ಆಯೋಗ ಪಕ್ಷದ ಎರಡು ಎಲೆಯ ಚಿಹ್ನೆಯನ್ನು ತಡೆಹಿಡಿದಿತ್ತು. ಈ ಚಿಹ್ನೆಗಾಗಿ ದನಕರನ್ 50 ಕೋಟಿ ರೂ. ಲಂಚ ಕೊಡಲು ಸಿದ್ಧರಾಗಿದ್ದರು ಎಂದು ವರದಿಯಾಗಿದೆ.

    ಇದಕ್ಕೆ ಸಂಬಂಧಿಸಿದಂತೆ ಮಧ್ಯವರ್ತಿ ಸುಖೇಶ್ ಚಂದ್ರಶೇಖರ್‍ನನ್ನು ಪೊಲೀಸರು ಬಂಧಿಸಿದ್ದು, ಸುಖೇಶ್ ಬಳಿ 1.3 ಕೋಟಿ ರೂ. ಪತ್ತೆಯಾಗಿದೆ. ಇದು ಚುನಾವಣಾ ಆಯೋಗಕ್ಕೆ ನೀಡಲು ಇಟ್ಟುಕೊಂಡಿದ್ದ ಹಣ ಎಂದು ಹೇಳಲಾಗಿದೆ. ಲಂಚ ನೀಡಲು ಮುಂದಾಗದ್ದ ಬಗ್ಗೆ ಸುಖೇಶ್ ಒಪ್ಪಿಕೊಂಡಿದ್ದಾನೆಂದು ವರದಿಯಾಗಿದೆ. ಆದ್ರೆ ಈ ಪ್ರಕರಣದಲ್ಲಿ ಚುನಾವಣಾ ಆಯೋಗದ ಪಾತ್ರ ಇದೆಯೋ ಇಲ್ಲವೋ ಎಂದು ಹೇಳಲು ಯಾವುದೇ ಸಾಕ್ಷಿಗಳಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

    ಆದ್ರೆ ದಿನಕರನ್ ಈ ಆರೋಪಗಳನ್ನ ತಳ್ಳಿಹಾಕಿದ್ದು, ಸುಖೇಶ್ ಚಂದ್ರಶೇಖರ್ ಎಂಬ ಹೆಸರಿನ ಯಾವುದೇ ವ್ಯಕ್ತಿ ನನಗೆ ಗೊತ್ತಿಲ್ಲ. ನಾನು ನನ್ನ ಜೀವನದಲ್ಲೇ ಈ ವ್ಯಕ್ತಿಯ ಜೊತೆ ಮಾತನಾಡಿಲ್ಲ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

    ಬಂಧಿತ ಆರೋಪಿ ಸುಖೇಶ್‍ನಿಂದ ಪೊಲೀಸರು 1.3 ಕೋಟಿ ರೂ. ಹಣ, ಬಿಎಂಡ್ಬ್ಯೂ ಹಾಗೂ ಮರ್ಸಿಡಿಸ್ ಕಾರುಗಳನ್ನ ಜಪ್ತಿ ಮಾಡಿದ್ದಾರೆ.

  • ನಾಟಕದ ನೃತ್ಯಗಾರ್ತಿಗೆ ಹಣ ನೀಡೋ ವಿಚಾರಕ್ಕೆ ಜಗಳ- ವ್ಯಕ್ತಿಯ ಕೊಲೆ

    ನಾಟಕದ ನೃತ್ಯಗಾರ್ತಿಗೆ ಹಣ ನೀಡೋ ವಿಚಾರಕ್ಕೆ ಜಗಳ- ವ್ಯಕ್ತಿಯ ಕೊಲೆ

    ಕಲಬುರಗಿ: ನಾಟಕದಲ್ಲಿ ನೃತ್ಯ ಮಾಡುವ ಯುವತಿಗೆ ಹಣ ನೀಡುವ ವಿಚಾರದಲ್ಲಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಲಿಹಾಳ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.

    48 ವರ್ಷದ ಸಿದ್ದಯ್ಯ ಮೃತ ದುರ್ದೈವಿ. ಶುಕ್ರವಾರ ರಾತ್ರಿ ಗ್ರಾಮದಲ್ಲಿ `ತಾಳಿ ಹರೀಲಿಲ್ಲ, ಶೀಲ ಉಳೀಲಿಲ್ಲ’ ಎಂಬ ನಾಟಕ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಸಿದ್ದಯ್ಯ ನಾಟಕದ ಕಲಾವಿದೆಯೊಬ್ಬರಿಗೆ ಪದೇ ಪದೇ ಹಣ ನೀಡುತ್ತಿದ್ದರು. ಇದಕ್ಕೆ ಅದೇ ಗ್ರಾಮದ ಅಯ್ಯಪ್ಪ ಆಕ್ಷೇಪ ವ್ಯಕ್ತಪಡಿಸಿ ಕಲ್ಲಿನಿಂದ ಹಲ್ಲೆ ಮಾಡಿದ್ದಾನೆ.

    ಇದನ್ನೂ ಓದಿ: ಮಗಳಿಗೆ ನ್ಯಾಯ ಕೊಡಿಸಲಾಗ್ಲಿಲ್ಲ ಎಂಬ ಪಶ್ಚಾತ್ತಾಪದಿಂದ ಆತ್ಮಹತ್ಯೆಗೆ ಶರಣಾದ ತಂದೆ

    ಗಾಯಗೊಂಡ ಸಿದ್ದಯ್ಯ ಮನೆಗೆ ತೆರಳಿದ್ದರು. ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದ್ದರಿಂದ ಸಿದ್ದಯ್ಯ ಮನೆಯಲ್ಲಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಚಿತ್ತಾಪುರ ಠಾಣಾ ಪೊಲೀಸರು ಆಗಮಿಸಿದ್ದು, ಆರೋಪಿ ಅಯ್ಯಪ್ಪನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.