Tag: police

  • ಅಪ್ರಾಪ್ತ ಬಾಲಕಿ ಮದುವೆ: ಮಕ್ಕಳ ರಕ್ಷಣಾ ತಂಡವನ್ನ ಕಂಡು ವಧು-ವರ ಪರಾರಿ

    ಅಪ್ರಾಪ್ತ ಬಾಲಕಿ ಮದುವೆ: ಮಕ್ಕಳ ರಕ್ಷಣಾ ತಂಡವನ್ನ ಕಂಡು ವಧು-ವರ ಪರಾರಿ

    ಕಲಬುರಗಿ: ಅಪ್ರಾಪ್ತ ವಯಸ್ಸಿನ ಬಾಲಕಿ ಮದುವೆ ತಡೆಯಲು ಹೋದ ಮಕ್ಕಳ ರಕ್ಷಣಾ ತಂಡವನ್ನು ಕಂಡು ಮದುವೆ ಮಂಟಪದಿಂದ ವಧು-ವರರಿಬ್ಬರೂ ಪರಾರಿಯಾಗಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ತೆಂಗಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಭೀಮೇಶ್ವರ ದೇವಾಸ್ಥಾನದಲ್ಲಿ ಸೋಮವಾರ ಮಧ್ಯಾಹ್ನ ಗ್ರಾಮದ ಅಪ್ರಾಪ್ತ ಬಾಲಕಿಯೊಂದಿಗೆ ಕಲಬುರ್ಗಿಯ ಶಹಾಬಜಾರ್ ಬಡಾವಣೆ ನಿವಾಸಿಯಾದ 24ರ ಹರೆಯದ ಯುವಕನ ವಿವಾಹ ನಡೆಯುತ್ತಿತ್ತು.

    ಈ ಬಗ್ಗೆ ವಿಷಯ ತಿಳಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕಾಧಿಕಾರಿ ಸಿ.ವಿ.ರಾಮನ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿವಶರಣಪ್ಪ ನೇತೃತ್ವದ ತಂಡ ಪೊಲೀಸರೊಂದಿಗೆ ದಾಳಿ ನಡೆಸಿತ್ತು. ಈ ವೇಳೆ ವಧು-ವರರಿಬ್ಬರೂ ಮಂಟಪದಿಂದ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸ್ಥಳದಲ್ಲಿ ಟೆಂಟು, ಸ್ಟೇಜ್, ಕುರ್ಚಿ, ವಿವಿಧ ತರಹದ ಅಡುಗೆ, ಮದುವೆ ದಿಬ್ಬಣ ಇದ್ದ ಆಧಾರದ ಮೇಲೆ ಕಾಳಗಿ ಪೊಲೀಸ್ ಠಾಣೆಯಲ್ಲಿ ವಧುವಿನ ಪಾಲಕರು ಮತ್ತು ವರನ ತಾಯಿ, ದೇವಾಲಯದ ಅರ್ಚಕ ಶರಣಯ್ಯ ಮಠಪತ್ತಿ, ದೇವಾಲಯದ ಸಮಿತಿ ಅಧ್ಯಕ್ಷ ಸೋಮಶೇಖರ ಪಟ್ಟೆದ್ ಹಾಗೂ ಲಗ್ನ ಪತ್ರಿಕೆಯಲ್ಲಿ ಸುಖಾಗಮನ ಬಯಸುವವರ ವಿರುದ್ಧ ಪ್ರಕರಣ ದಾಖಲಾಗಿದೆ.

     

  • ಬದುಕಲಿಲ್ಲ ಕಾವೇರಿ: ನಮ್ಗೆ ಪರಿಹಾರ ಬೇಡ, ತೆರೆದ ಬೋರ್‍ವೆಲ್‍ಗಳನ್ನು ಮುಚ್ಚಿಸಿ- ಸರ್ಕಾರಕ್ಕೆ ತಾಯಿಯ ಕಣ್ಣೀರಿನ ಮನವಿ

    ಬದುಕಲಿಲ್ಲ ಕಾವೇರಿ: ನಮ್ಗೆ ಪರಿಹಾರ ಬೇಡ, ತೆರೆದ ಬೋರ್‍ವೆಲ್‍ಗಳನ್ನು ಮುಚ್ಚಿಸಿ- ಸರ್ಕಾರಕ್ಕೆ ತಾಯಿಯ ಕಣ್ಣೀರಿನ ಮನವಿ

    ಬೆಳಗಾವಿ: ಅಥಣಿ ತಾಲೂಕಿನ ಝುಂಜರವಾಡದಲ್ಲಿ ಶನಿವಾರ ಸಂಜೆ ಕೊಳವೆ ಬಾವಿಗೆ ಬಿದ್ದಿದ್ದ 6 ವರ್ಷದ ಕಾವೇರಿ ಮಾದರ ಮೃತಪಟ್ಟಿದ್ದಾಳೆ.

    ಶನಿವಾರ ಸಂಜೆ ಕಾವೇರಿ ಕೊಳವೆ ಬಾವಿಯಲ್ಲಿ ಬಿದ್ದಿದ್ದಳು. 27 ಅಡಿ ಆಳದಲ್ಲಿ ಕಾವೇರಿಯ ಕೈಗಳು ಕ್ಯಾಮೆರಾಗೆ ಕಾಣಿಸಿದ್ದವು. ಹುಕ್ ಮೂಲಕ ಬಾಲಕಿಯನ್ನು ಐದಾರು ಬಾರಿ ಮೇಲೆತ್ತುವ ಪ್ರಯತ್ನ ಮಾಡಿದ್ರೂ ಯಶಸ್ವಿಯಾಗಲಿಲ್ಲ. ದೊಡ್ಡ ಗಾತ್ರದ ಬಂಡೆಗಳು ಸಿಕ್ಕಿರುವ ಕಾರಣ ಕಾರ್ಯಾಚರಣೆಗೆ ತೊಡಕಾಗಿತ್ತು. ಕೊಳವೆ ಬಾವಿ ಸುತ್ತ 20 ಬೋರ್‍ವೆಲ್‍ ಕೊರೆದು ಸಕ್ಕಿಂಗ್ ಮಷಿನ್ ಮೂಲಕ ಮಣ್ಣು ತೆಗೆಯುವ ಕಾರ್ಯ ನಡೆದಿತ್ತು.

    ಸರ್ಕಾರಕ್ಕೆ ಕಾವೇರಿ ತಾಯಿ ಮನವಿ: ನಮ್ಗೆ ಆಗಿರೋ ಆದ ಪರಿಸ್ಥಿತಿ ಬೇರೆಯವರಿಗೆ ಆಗೋದು ಬೇಡ, ಪರಿಹಾರವೂ ನಮ್ಗೆ ಬೇಡ. ರಾಜ್ಯದಲ್ಲಿ ಇರುವ ಎಲ್ಲಾ ತೆರೆದ ಬೋರ್‍ವೆಲ್‍ಗಳನ್ನ ಮುಚ್ಚಿಸಿ ಅಂತಾ ಕಾವೇರಿ ತಾಯಿ ಸವಿತಾ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದು, ನಮಗೆ ಪರಿಹಾರ ಬೇಡ ಏನೂ ಬೇಡ ಗೋಳಿಟ್ಟಿದ್ದಾರೆ.

    `ನನ್ನ ಮಗಳು ಮತ್ತ ತೊಡಿ ಮ್ಯಾಲ ಆಡಬೇಕು. ಹಸದ್ರ ಉಣ್ಣಾಕ್ ಕೇಳಬೇಕು. ನೀರಡಿಕಿ ಆದ್ರ ನಾ ನೀರ್ ಕುಡ್ಸಬೇಕು… ಅಲ್ಲೀಮಟಾ ನಂಗ ಏನೂ ಬ್ಯಾಡ….’ ಎಂದು ತಾಯಿ ಸವಿತಾ ಸತತ ರೋದಿಸಿದ್ದರಿಂದ ಹಲವು ಬಾರಿ ಪ್ರಜ್ಞಾಹೀನರಾಗಿದ್ರು. ತಕ್ಷಣವೇ ಸ್ಥಳದಲ್ಲಿದ್ದ ವೈದ್ಯಕೀಯ ಸಿಬ್ಬಂದಿ ಆಂಬುಲೆನ್ಸ್ ನಲ್ಲಿ ಕರೆದೊಯ್ದು ಚಿಕಿತ್ಸೆ ನೀಡಿ, ಚೇತರಿಸಿಕೊಂಡ ಬಳಿಕ ಕುಟುಂಬದವರ ಬಳಿ ಕಳಿಸಿಕೊಟ್ಟರು. ಹೀಗೆ ಅವರು ಪ್ರಜ್ಞೆ ತಪ್ಪುವುದು, ಚಿಕಿತ್ಸೆ ನೀಡಿ ಕರೆತರುವುದು ಐದಾರು ಬಾರಿ ನಡೆಯಿತು. ರೋಧನದ ನಡುವೆ ತೀವ್ರವಾದ ಬಿಸಿಲು ಇದ್ದುದರಿಂದ ಕಾವೇರಿ ತಾಯಿ ಮತ್ತೆ ಅಸ್ವಸ್ಥರಾಗಿದ್ದು, ಝುಂಜರವಾಡ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಸವಿತಾ ಬೆಳಗ್ಗೆ ಹಾಲು ಬ್ರೆಡ್ ಸೇವಿಸಿದ್ದಾರೆ ಅಂತಾ ಕೊಕಟ್ಟನೂರು ಪ್ರಾಥಮಿಕ ಆರೋಗ್ಯಾಧಿಕಾರಿ ಸುಕನ್ಯ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

    ಸಾಂತ್ವನ ಹೇಳಲು, ಮನೋಸ್ಥೈರ್ಯ ತುಂಬಲು ಸಂಬಂಧಿಕರು, ಜನಪ್ರತಿನಿಧಿಗಳು, ಜಿಲ್ಲಾಡಳಿತದ ಅಧಿಕಾರಿಗಳು ಕುಟುಂಬದವರ ಬಳಿ ತೆರಳುತ್ತಿದ್ದಂತೆಯೇ ಅವರ ದುಃಖದ ಕಟ್ಟೆಯೊಡೆಯುತ್ತಿತ್ತು. ರೋದನ ಮುಗಿಲು ಮುಟ್ಟುತ್ತಿತ್ತು. ನೆತ್ತಿ ಸುಡುವ ಬಿಸಿಲನ್ನು ಲೆಕ್ಕಿಸದೇ ಸಂಬಂಧಿಕರು, ನೆರೆಹೊರೆಯವರು ಜಾಲಿ ಮರದ ಕೆಳಗೆ ಕುಳಿತು ಒಬ್ಬರನ್ನೊಬ್ಬರು ಸಂತೈಸುತ್ತಿದ್ದರು. ಬಾಲಕಿಯ ಉಳಿವಿಗಾಗಿ ಒಂದೆಡೆ ಪ್ರಾರ್ಥಿಸುತ್ತಿದ್ದರೆ, ಇನ್ನೊಂದೆಡೆ ಕಣ್ಣೀರ ಕೋಡಿ ಹರಿಯುತ್ತಿದ್ದ ದೃಶ್ಯಗಳು ಸೋಮವಾರ ಬಾಲಕಿಯ ರಕ್ಷಣಾ ಕಾರ್ಯಾಚರಣೆ ಸ್ಥಳದಲ್ಲಿ ಗೋಚರಿಸಿತ್ತು,

    ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡದಲ್ಲಿ ಕೊಳವೆ ಬಾವಿಗೆ ಬಾಲಕಿ ಬಿದ್ದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‍ಡಿಆರ್‍ಎಫ್ ಸಿಬ್ಬಂದಿ, ಎಂಎಲ್‍ಐಆರ್‍ಸಿ ಸಿಬ್ಬಂದಿಗಳಿಂದ ಕಾರ್ಯಾಚರಣೆ ಶನಿವಾರ ರಾತ್ರಿಯಿಂದಲೇ ನಡೆದಿತ್ತು. ಅವಸರ ಮಾಡಿದ್ರೆ ಬಾಲಕಿ ಕಾವೇರಿ ದೇಹಕ್ಕೆ ತೊಂದರೆಯಾಗುವ ಸಾಧ್ಯತೆಗಳಿರುವ ನಿಟ್ಟಿನಲ್ಲಿ ಈವರೆಗೂ ಸೂಕ್ಷ್ಮವಾಗಿ ಕಾರ್ಯಾಚರಣೆ ಮಾಡಿದ್ದೇವು ಅಂತಾ ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹೇಳಿದ್ದಾರೆ.

    ಸತತ ಕಾರ್ಯಾಚರಣೆಯ ಬಳಿಕ ಬಾಲಕಿ ಪತ್ತೆಯಾಗದ ಹಿನ್ನೆಲೆಯಲ್ಲಿ ರಂಧ್ರ ನಿರ್ಮಾಣ ಮಾಡಲು ನಿರ್ಧರಿಸಿದ್ದೇವು. ಆದ್ರೆ ಈ ವೇಳೆ ಬಂಡೆ ಕಲ್ಲುಗಳು ಅಡ್ಡಿಪಡಿಸಿದವು. ನಂತ್ರ ಯಂತ್ರೋಪಕರಣಗಳನ್ನು ಬಳಸಿ ರಂಧ್ರ ಕೊರೆಯುವುದಾಗಿ ನಿರ್ಧರಿಸಲಾಯಿತು. ಅಂತೆಯೇ ಕಾರ್ಯಾಚರಣೆ ಕೊನೆ ಹಂತ ತಲುಪಿತು ಅಂತಾ ಎನ್‍ಡಿಆರ್‍ಎಫ್ ಟೀಂನ ಅಧಿಕಾರಿ ಭಜೇಂದರ್ ಪಬ್ಲಿಕ್ ಟಿವಿ ವರದಿಗಾರನ ಜೊತೆ ಮಾತನಾಡುತ್ತಾ ಹೇಳಿದ್ರು.

    ಬಾಲಕಿ ಕಾವೇರಿ ಕೊಳವೆ ಬಾವಿಯಲ್ಲಿ ಸಿಲುಕಿ 36 ಗಂಟೆ ನಂತ್ರ ಕೊಳವೆ ಬಾವಿ ಪಕ್ಕದಲ್ಲೇ 25 ಅಡಿ ಆಳದಲ್ಲಿ ಸುರಂಗ ಮಾರ್ಗ ನಿರ್ಮಾಣ ಮಾಡಲಾಯಿತು. ಬಾಲಕಿಯ ಕಾರ್ಯಾಚರಣೆಗೆ 2 ಹಿಟಾಚಿ, 2 ಜೆಸಿಬಿ ಬಳಕೆ ಮಾಡಲಾಗಿದ್ದು, ಇನ್ನು ಸ್ಥಳದಲ್ಲಿ ಅಗ್ನಿಶಾಮಕ ದಳ, ಎನ್‍ಡಿಆರ್‍ಎಫ್, ಎಂಎಲ್‍ಐಆರ್‍ಸಿ ಅಧಿಕಾರಿಗಳು ಹಾಗೂ ಹಟ್ಟಿ ಚಿನ್ನದ ಗಣಿಯ ನುರಿತ ತಜ್ಞರ ತಂಡವು ಕಾರ್ಯಾಚರಣೆ ನಡೆಸಿತ್ತು.

    ನಡೆದಿದ್ದೇನು?: ಅಜಿತ್ ಮಾದರ ಮತ್ತು ಸವಿತಾ  ದಂಪತಿ ಕೂಲಿ ಅರಸಿ ಬಾಗಲಕೋಟೆ ಜಿಲ್ಲೆಯಿಂದ ಇಲ್ಲಿಗೆ ಬಂದಿದ್ದರು. ಸಿಗೆ ಆರಂಭವಾದಾಗಿನಿಂದ ಕೆಲಸ ಸಿಗುವುದೂ ಕಡಿಮೆ ಆಗಿದೆ. ಹೀಗಾಗಿ ಅಜಿತ್ ಮಾದರ ಕೂಲಿ ಹುಡುಕಿಕೊಂಡು, ಸಿಕ್ಕಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಅಂತೆಯೇ ಬೆಳಗಾವಿಯಲ್ಲಿ ಬಂದು ಕುಟುಂಬ ನೆಲೆಸಿತ್ತು. ಹೆಂಡತಿ ಸವಿತಾ ಮಕ್ಕಳನ್ನು ನೋಡಿಕೊಂಡು ಮನೆಯಲ್ಲಿದ್ದರು.

    ಶನಿವಾರ ಸಂಜೆ ತೋಟದ ವಸತಿಯಲ್ಲಿ ದೊಡ್ಡ ಮಗಳು ಅನ್ನಪೂರ್ಣಾಳನ್ನು ಬಿಟ್ಟು, ಚಿಕ್ಕವರಾದ ಕಾವೇರಿ ಹಾಗೂ ಪವನ್‍ನನ್ನು ಕರೆದುಕೊಂಡು ಕಟ್ಟಿಗೆ ಆಯಲು ಬಂದಿದ್ದರು. ಈ ಹೊತ್ತಿನಲ್ಲಿ ಮಕ್ಕಳಿಬ್ಬರೂ ಹೊಲದ ದಾರಿಯ ಪಕ್ಕದಲ್ಲಿ ಆಡುತ್ತಿದ್ದರು. ಮೂರ್ನಾಲ್ಕು ದಿನಗಳ ಹಿಂದಷ್ಟೇ ಹೊಲವನ್ನು ಗಳೆ ಹೊಡೆದಿದ್ದರಿಂದ ದೊಡ್ಡ ದೊಡ್ಡ ಮಣ್ಣಿನ ಹೆಂಟೆಗಳು ಎದ್ದು ನಿಂತಿದ್ದವು. ಆ ಹೆಂಟೆಗಳ ನಡುವೆಯೇ ತೆರೆದ ಕೊಳವೆ ಬಾವಿ ಇರುವುದು ಮಕ್ಕಳಿಗೆ ತಿಳಿದಿರಲಿಲ್ಲ. ಆಡುತ್ತ ಹೋದ ಕಾವೇರಿ ಕಾಲು ಜಾರಿ ಬಿದ್ದಿದ್ದಳು. ಇದನ್ನು ಕಂಡ ಆಕೆಯ ತಮ್ಮ ಪವನ ಗಾಬರಿಯಿಂದ ಚೀರಿದ್ದ. ಮಗನ ದನಿ ಕೇಳುತ್ತಿದ್ದಂತೆಯೇ ಅಲ್ಲಿಗೆ ಧಾವಿಸಿದ ತಾಯಿಯ ಮುಂದೆ `ಅಕ್ಕ ಇದರಾಗ ಬಿದ್ಲು…’ ಎಂದು ಪವನ್ ಕುಣಿಯೊಂದನ್ನು ತೋರಿಸಿದ್ದಾನೆ. ಕೂಡಲೇ ಮಗಳ ರಕ್ಷಣೆಗೆ ಮುಂದಾದ ಸವಿತಾ, ಹಗ್ಗವೊಂದನ್ನು ಬಿಟ್ಟು ಕಾವೇರಿಯನ್ನು ಮೇಲಕ್ಕೆ ಎತ್ತುವ ಪ್ರಯತ್ನ ಮಾಡಿದ್ದರು.

  • ಖಾಸಗಿ ಬಸ್-ಕ್ಯಾಬ್ ನಡುವೆ ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ

    ಖಾಸಗಿ ಬಸ್-ಕ್ಯಾಬ್ ನಡುವೆ ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ

    ಬಳ್ಳಾರಿ: ಖಾಸಗಿ ಬಸ್ ಮತ್ತು ಸರಕು ಸಾಗಾಣೆ ಕ್ಯಾಬ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ಮೃತಪಟ್ಟು ಇಬ್ಬರು ಗಾಯಗೊಂಡಿರುವ ಘಟನೆ ಬಳ್ಳಾರಿ ತಾಲೂಕಿನ ಕೋಳೂರು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ-153 ರಲ್ಲಿ ಇಂದು ಬೆಳಗ್ಗೆ ನಡೆದಿದೆ.

    ಕ್ಯಾಬ್ ಚಾಲಕ ಉಪೇಂದ್ರ (30) ಸ್ಥಳದಲ್ಲೇ ಸಾವನ್ನಪ್ಪಿದ್ದು, ಕ್ಲೀನರ್ ಆಗಿದ್ದ ಉಪೇಂದ್ರನ ಸಹೋದರ ಪ್ರದೀಪ್ ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಬಸ್ ಚಾಲಕ ಸಹ ಗಾಯಗೊಂಡಿದ್ದಾರೆ. ಖಾಸಗಿ ಬಸ್ ಬೆಂಗಳೂರಿನಿಂದ ರಾಯಚೂರು ನಗರಕ್ಕೆ ಹೊರಟಿತ್ತು ಮತ್ತು ಕ್ಯಾಬ್ ಬೀದರ್ ನಿಂದ ಬೆಂಗಳೂರಿಗೆ ಹೊರಟಿತ್ತು ಎಂದು ತಿಳಿದುಬಂದಿದೆ.

    ಗಾಯಗೊಂಡವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಬಸ್‍ನಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಕಳುಹಿಸಿಕೊಡಲಾಗಿದೆ ಎಂದು ಸಿಪಿಐ ಶ್ರೀನಿವಾಸ್ ಹೇಳಿದ್ದಾರೆ.

     

     

  • ಹೈಟೆಕ್ ವೇಶ್ಯಾವಾಟಿಕೆಗೆ ಕಾವಲು ನಿಲ್ತಿದ್ದ ಪರಪ್ಪನ ಅಗ್ರಹಾರದ ಪೊಲೀಸ್ ಪೇದೆ ಅರೆಸ್ಟ್

    ಹೈಟೆಕ್ ವೇಶ್ಯಾವಾಟಿಕೆಗೆ ಕಾವಲು ನಿಲ್ತಿದ್ದ ಪರಪ್ಪನ ಅಗ್ರಹಾರದ ಪೊಲೀಸ್ ಪೇದೆ ಅರೆಸ್ಟ್

    ಬೆಂಗಳೂರು: ನಗರದ ಬಿಟಿಎಂ ಲೇಔಟ್‍ನ ಬಂಗಲೆಯೊಂದರಲ್ಲಿ ಹೈಟೆಕ್ ವೇಶ್ಯಾವಾಟಿಕೆಗೆ ಪೊಲೀಸ್ ಪೇದೆಯೇ ಕಾವಲು ನಿಲ್ಲತ್ತಿದ್ದ ವಿಚಾರ ಈಗ ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರದ ಪೊಲೀಸ್ ಪೇದೆ ಕರಿಬಸಪ್ಪನನ್ನು ಮೈಕೋ ಲೇಔಟ್ ಪೊಲೀಸರು ಈಗ ಬಂಧಿಸಿದ್ದಾರೆ.

    ಕಳೆದವಾರ ಮೈಕೋಲೇಔಟ್ ಪೊಲೀಸರು ಬಂಗಲೆ ಮೇಲೆ ದಾಳಿ ನಡೆಸಿ ಉಸ್ಮಾನ್, ನರೇಶ್ ಸಿಂಗ್, ಪರ್ವೇಜ್ ಖಾನ್ ಮತ್ತು ಶರವಣನನ್ನು ಬಂಧಿಸಿದ್ದರು. ವಿಚಾರಣೆಯ ಸಂದರ್ಭದಲ್ಲಿ ತಮ್ಮ ದಂಧೆಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಮುಖ್ಯ ಪೇದೆಯೊಬ್ಬರು ಸಹಾಯ ಮಾಡುತ್ತಿದ್ದರು ಎಂದು ಆರೋಪಿಗಳು ಹೇಳಿದ್ದರು. ಹೇಳಿಕೆಯ ಆಧಾರದಲ್ಲಿ ಈಗ ಕರಿಬಸಪ್ಪನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿ ಬಂಧಿಸಿದ್ದಾರೆ.

    ತಿಂಗಳಿಗೆ 5ಲಕ್ಷ ರೂ:
    ವೇಶ್ಯಾವಾಟಿಕೆಗೆ ಕಾವಲು ನಿಲ್ಲುತ್ತಿದ್ದ ಪೇದೆ ಕರಿಬಸಪ್ಪನಿಗೆ ತಿಂಗಳಿಗೆ 5 ಲಕ್ಷ ರೂ. ಮಾಮುಲು ಕೊಡಬೇಕಿತ್ತು. ಹಣ ಕೊಡದೇ ಇದ್ದರೆ ಇವನೇ ನಿಂತು ರೇಡ್ ಮಾಡಿಸುತ್ತಿದ್ದ. ಕ್ರೆಡಿಟ್ ಕಾರ್ಡ್ ನಲ್ಲಿ ಪಿಂಪ್‍ಗಳ ಹತ್ತಿರ ಕರಿಸಬಸಪ್ಪ ಹಣ ವಸೂಲಿ ಮಾಡುತ್ತಿದ್ದ.

    ತಿಂಗಳಿಗೆ 5 ಲಕ್ಷಕ್ಕೂ ಹೆಚ್ಚು ಮಾಮೂಲಿ ನೆಟ್‍ಬ್ಯಾಕಿಂಗ್‍ನಲ್ಲೇ ತೆಗೆದುಕೊಳ್ಳುತ್ತಿದ್ದ ಈತ ಎಸಿಪಿ ಕೂಡ ನನ್ನ ಕೈಯಲ್ಲಿ ಇದ್ದಾರೆ. ಇನ್ಸ್ ಪೆಕ್ಟರ್‍ಗೂ ನಾನೇ ಮಾಮೂಲಿ ಕೊಡುತ್ತೇನೆ ಎಂದು ಹೇಳುತ್ತಿದ್ದ ಎನ್ನುವ ವಿಚಾರ ಪೊಲೀಸ್ ತನಿಖೆಯಲ್ಲಿ ಈಗ ಬೆಳಕಿಗೆ ಬಂದಿದೆ.

    ಏನಿದು ಪ್ರಕರಣ?
    ಪ್ರಕರಣದ ಪ್ರಮುಖ ಆರೋಪಿ ಉಸ್ಮಾನ್ ವೆಬ್‍ಸೈಟ್ ತೆರೆದು ಈ ದಂಧೆ ನಡೆಸುತ್ತಿದ್ದ. ದಂಧೆಗೆ ಮುಂಬೈಯಿಂದ ಹುಡುಗಿಯರನ್ನು ವಿಮಾನದಲ್ಲಿ ಕರೆತರಲಾಗುತಿತ್ತು. ವೆಬ್‍ಸೈಟ್ ನಲ್ಲಿ ಹುಡುಗಿಯರ ಭಾವಚಿತ್ರವನ್ನು ಹಾಕಿ ಗಿರಾಕಿಗಳಿಗೆ ಆನ್‍ಲೈನ್ ನಲ್ಲಿ ಹಣವನ್ನು ಪಾವತಿ ಮಾಡುವಂತೆ ಹೇಳುತ್ತಿದ್ದ.

    ವಾರಾಂತ್ಯಗಳಲ್ಲಿ ಉಸ್ಮಾನ್ ಮುಂಬೈನಿಂದ ಮಹಿಳೆಯರನ್ನು ಕರೆತರುತ್ತಿದ್ದ. ವಿಮಾನದ ಟಿಕೆಟ್ ಗಳನ್ನು ಈತನೇ ಬುಕ್ ಮಾಡುತ್ತಿದ್ದ. ಸಿಇಒಗಳು, ಕಂಪನಿಯ ಅತಿಥಿಗಳು ಮಾತ್ರ ಮನೆಗೆ ಬರುತ್ತಾರೆಂದು ಹೇಳಿದ್ದ ಆರೋಪಿ ಉದ್ಯಮಿಯೊಬ್ಬರಿಂದ ಮನೆಯನ್ನು ಬೋಗ್ಯಕ್ಕೆ ಪಡೆದುಕೊಂಡಿದ್ದ. ಬಂಗಲೆ ವೇಶ್ಯಾವಾಟಿಕೆಗೆ ಬಳಕೆಯಾಗುತ್ತಿರುವ ವಿಚಾರ ಮನೆಯ ಮಾಲೀಕರಿಗೆ ತಿಳಿದಿರಲಿಲ್ಲ.

    ಶ್ರೀಮತರು, ದೊಡ್ಡ ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳು, ಟೆಕ್ಕಿಗಳನ್ನು ಸಂಪರ್ಕಿಸುತ್ತಿದ್ದ ಈತನ ತಂಡ ಗ್ರಾಹಕರಿಂದ 25 ಸಾವಿರ ರೂ., 30 ಸಾವಿರ ರೂ. ಚಾರ್ಜ್ ಮಾಡುತ್ತಿದ್ದರು. ದಾಳಿ ವೇಳೆ ನಾಲ್ಕು ಸ್ವೈಪಿಂಗ್ ಯಂತ್ರಗಳು ಸಿಕ್ಕಿತ್ತು. ಪ್ರತಿನಿತ್ಯ ಬರುವ ಗ್ರಾಹಕರಿಗೆ ವಾಟ್ಸಪ್‍ನಲ್ಲಿ ಯುವತಿಯರ ಭಾವಚಿತ್ರವನ್ನು ಕಳುಹಿಸಿ ಡೀಲ್ ನಡೆಸುತ್ತಿದ್ದರು.

  • ಬಸ್ಸಿನಲ್ಲಿ ಅಕ್ರಮವಾಗಿ ಸಾಗಿಸ್ತಿದ್ದ 1.30 ಕೋಟಿ ರೂ. ಹಳೇ ನೋಟ್‍ಗಳು ಜಪ್ತಿ- 3 ಮಹಿಳೆಯರು ವಶಕ್ಕೆ

    ಬಸ್ಸಿನಲ್ಲಿ ಅಕ್ರಮವಾಗಿ ಸಾಗಿಸ್ತಿದ್ದ 1.30 ಕೋಟಿ ರೂ. ಹಳೇ ನೋಟ್‍ಗಳು ಜಪ್ತಿ- 3 ಮಹಿಳೆಯರು ವಶಕ್ಕೆ

    ಉತ್ತರ ಕನ್ನಡ: ಬಸ್ಸಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1 ಕೋಟಿ 30 ಲಕ್ಷ ರೂ. ಮೌಲ್ಯದ ನಿಷೇಧಿತ 500 ಮತ್ತು 1 ಸಾವಿರ ಮುಖಬೆಲೆಯ ನೋಟುಗಳನ್ನು ಪೊಲೀಸರು ಜಪ್ತಿ ಮಾಡಿದ್ದು, ಹಣ ಸಾಗಿಸುತ್ತಿದ್ದ ಮೂವರು ಮಹಿಳೆಯರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಮುಂಡಗೋಡು ಮೂಲದ ಜಯಶ್ರೀ ಹನುಮಂತಗೌಳಿ, ಭವಾನಿ ಹಾಗೂ ಮೀನಾಕ್ಷಿ ಅಕ್ರಮವಾಗಿ ಹಣ ಸಾಗಿಸುತ್ತಿದ್ದವರು. ಗೋವಾದ ಮಡಗಾಂ ನಿಂದ ಮುಂಡಗೋಡಿಗೆ ಹಣ ಸಾಗಿಸುತ್ತಿರುವಾಗ ಕಾರವಾರದ ಮಾಜಾಳಿ ಚೆಕ್ ಪೋಸ್ಟ್ ಬಳಿ ಚಿತ್ತಾಕುಲ ಪೊಲೀಸರು ಹಣ ಜಪ್ತಿ ಮಾಡಿ ಮಹಿಳೆಯರನ್ನು ವಶಕ್ಕೆ ಪಡೆದಿದ್ದಾರೆ.

    ಮುಂಡಗೋಡು ಪಟ್ಟಣದ ವಾಣಿ ಪ್ರಭು ಎಂಬ ವೈದ್ಯೆಗೆ ಸೇರಿದ ಹಣವಿದು ಎಂದು ಮಹಿಳೆಯರು ಪೊಲೀಸರಿಗೆ ತಿಳಿಸಿದ್ದಾರೆ. ಈ ಸಂಬಂಧ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಆಸ್ತಿಗಾಗಿ ಒಂದು ವರ್ಷದ ಪುಟ್ಟ ಕಂದಮ್ಮನನ್ನ ಕೊಲೆಗೈದ ತಂದೆ!

    ಆಸ್ತಿಗಾಗಿ ಒಂದು ವರ್ಷದ ಪುಟ್ಟ ಕಂದಮ್ಮನನ್ನ ಕೊಲೆಗೈದ ತಂದೆ!

    ಯಾದಗಿರಿ: ಜಿಲ್ಲೆಯ ಸುರುಪುರ ತಾಲೂಕಿನ ಬೂದಿಹಾಳ ಗ್ರಾಮದಲ್ಲಿರುವ ಒಂದು ವರ್ಷದ ಮಗುವಿನ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಮೊದಲ ಪತ್ನಿಯ ಮಗಳಿಗೆ ಮುಂದೆ ಆಸ್ತಿ ಕೊಡಬೇಕಾಗುತ್ತದೆ ಎಂದು ತಂದೆ ತನ್ನ ಒಂದು ವರ್ಷದ ಮಗಳನ್ನು ಕೊಲೆ ಮಾಡಿರುವ ವಿಚಾರ ಪೊಲೀಸ್ ತನಿಖೆಯಿಂದ ಪ್ರಕಟವಾಗಿದೆ.

    ಎರಡು ಮದುವೆಯಾಗಿರುವ ಕಾಶಿನಾಥ್ ಎಂಬಾತನೇ ತನ್ನ ಮಗಳನ್ನು ಕೊಲೆ ಮಾಡಿರುವ ತಂದೆ. ಭೂಮಿಕಾಳ ತಂದೆ ಕಾಶಿನಾಥ್ ಮತ್ತು ಅವನ ಗೆಳೆಯನನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಕೊಡೆಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಏನಿದು ಪ್ರಕರಣ?
    ಕಾಶಿನಾಥ್ ಈ ಹಿಂದೆ ಲಕ್ಷ್ಮೀ ಎಂಬವರನ್ನು ಮದುವೆಯಾಗಿದ್ದ. ಭೂಮಿಕಾ ಜನಿಸಿದ ಮೇಲೆ ತಾಯಿ ಮಗಳನ್ನು ಕಾಶಿನಾಥ್ ಬಿಟ್ಟು ಬಂದಿದ್ದ. ಮೊದಲ ಪತ್ನಿಯಿಂದ ದೂರವಾದ ಕಾಶಿನಾಥ್, ಪಾರ್ವತಿ ಎಂಬವರನ್ನು ಎರಡನೇ ವಿವಾಹವಾಗಿದ್ದನು. ಎರಡನೇ ಮದುವೆಯ ನಂತ್ರ ಕಾಶಿನಾಥ್ ಮಂಗಳೂರಿನಲ್ಲಿ ನೆಲಸಿದ್ದನು. ಮೊದಲಿಗೆ ಭೂಮಿಕಾಳನ್ನು ಅಜ್ಜ-ಅಜ್ಜಿಯೇ ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿತ್ತು. ಭೂಮಿಕಾಳ ಅಜ್ಜ-ಅಜ್ಜಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದರು. ಆದರೆ ತನಿಖೆಯಲ್ಲಿ ತಂದೆಯೇ ಮಗಳನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

    ಮನೆಯಂಗಳದಲ್ಲಿ ಮಲಗಿದ್ದ ಮಗಳು ಭೂಮಿಕಾಳನ್ನು ಏಪ್ರಿಲ್ 11ಕ್ಕೆ ಕಾಶಿನಾಥ್ ಅಪಹರಿಸಿ ಕತ್ತು ಹಿಸುಕಿ ಕೊಲೆ ಮಾಡಿ, ಮಗಳ ದೇಹವನ್ನು ಗ್ರಾಮದ ಹೊರವಲಯದಲ್ಲಿ ಬಿಸಾಡಿಹೋಗಿದ್ದನು.

     

  • ಕಳ್ಳತನವಾಗಿದ್ದ ಕೆಎಎಸ್ ಅಧಿಕಾರಿ ಭೀಮಾನಾಯ್ಕ್ ಸಹೋದರನ ವಜ್ರ-ಚಿನ್ನಾಭರಣ ಪತ್ತೆ!

    ಕಳ್ಳತನವಾಗಿದ್ದ ಕೆಎಎಸ್ ಅಧಿಕಾರಿ ಭೀಮಾನಾಯ್ಕ್ ಸಹೋದರನ ವಜ್ರ-ಚಿನ್ನಾಭರಣ ಪತ್ತೆ!

    ಬಳ್ಳಾರಿ: ಸಂಡೂರು ತಾಲೂಕಿನ ಸುಶೀಲನಗರ ಗ್ರಾಮದಲ್ಲಿ ನಡೆದ ಕಳ್ಳತನ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದು, ಈ ಮೂಲಕ ಕೆಎಎಸ್ ಅಧಿಕಾರಿ ಭೀಮಾನಾಯ್ಕ್ ಸಹೋದರ ಕೃಷ್ಣಾನಾಯ್ಕ್ ಗೆ ಸೇರಿದ ವಜ್ರಾಭರಣಗಳು ಪತ್ತೆಯಾಗಿವೆ.

    ಸುಶೀಲನಗರ ನಿವಾಸಿ ಖೀರೂನಾಯ್ಕ ಬಂಧಿತ ಆರೋಪಿ. ಬಂಧಿತ ಆರೋಪಿಯಿಂದ ಸುಮಾರು 132.700 ಮಿ.ಗ್ರಾಂ ತೂಕದ ವಜ್ರ ಮತ್ತು ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ವಜ್ರಾಭರಣಗಳ ಮೌಲ್ಯ ಸುಮಾರು 15.90 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

    ಏನಿದು ಪ್ರಕರಣ?: 2017ರ ಜನವರಿ 3 ರಂದು ಸುಶೀಲ ನಗರ ಗ್ರಾಮದ ಉಮಾನಾಯ್ಕ್ ರ ಪತ್ನಿ ಜ್ಯೋತಿಬಾಯಿಯರನ್ನು ಕಟ್ಟಿ, ಜೀವ ಬೆದರಿಕೆ ಹಾಕಿ ಸುಮಾರು 17 ಲಕ್ಷ ರೂ. ಮೌಲ್ಯದ ಬಂಗಾರ ಮತ್ತು ವಜ್ರದ ಅಭರಣಗಳನ್ನು ದೋಚಿಕೊಂಡು ಪರಾಗಿಯಾಗಿದ್ದರು. ಈ ಸಂಬಂಧ ಜ್ಯೋತಿಬಾಯಿ ಸಂಡೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಈ ಬಂಗಾರದ ಆಭರಣಗಳು ಬೆಂಗಳೂರಿನ ವಿಶೇಷ ಭೂ ಸ್ವಾಧಿನಾಧಿಕಾರಿ ಹಾಗೂ ಕೆಎಎಸ್ ಅಧಿಕಾರಿ ಭೀಮಾನಾಯ್ಕ್ ಸಹೋದರ ಕೃಷ್ಣಾನಾಯ್ಕ್ ಗೆ ಸೇರಿದ್ದಾಗಿದೆ. ಕೃಷ್ಣಾನಾಯ್ಕ್ ರಿಂದ ತಗೆದುಕೊಂಡು ಬಂದಿದ್ದ ಬಂಗಾರದ ಆಭರಣಗಳನ್ನು ಜ್ಯೋತಿಭಾಯಿ ತಮ್ಮ ಮನೆಯಲ್ಲಿರಿಸಿದ್ದಾಗ ಆರೋಪಿಗಳು ಕಳ್ಳತನ ಮಾಡಿದ್ದರೆಂದು ದೂರು ದಾಖಲಾಗಿತ್ತು. ಕಳ್ಳತನದ ಆರೋಪಿ ಖೀರೂನಾಯ್ಕ್ , ಜ್ಯೋತಿಭಾಯಿ ಅವರ ಅಕ್ಕನ ಗಂಡ ಎಂದು ತಿಳಿದುಬಂದಿದೆ.

    ಬಳ್ಳಾರಿ ಡಿಸಿಬಿ ವಿಶೇಷ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಹಸನ್‍ಸಾಬ್ ಮತ್ತು ಪಿ.ಎಸ್.ಐ. ರಷೀದ್ ಅಹಮ್ಮದ್ ನೇತೃತ್ವದಲ್ಲಿ ಎಸ್.ದಿನಕರ, ಎಸ್.ಮಂಜುನಾಥ, ಸುಧೀರ್‍ಕುಮಾರ್, ಎಂ.ನವಾಬ್, ಬಿ.ಎಂ.ಸದ್ಯೋಜಾತಯ್ಯ, ಧಾರಾಸಿಂಗ್ ಉಮಾಮಹೇಶ್ವರ, ಕೆ.ಸುರೇಶ್, ಪಿ.ಲಲಿತಮ್ಮ ಅವರನ್ನು ಒಳಗೊಂಡ ತಂಡವನ್ನು ಈ ಪ್ರಕರಣದ ಪತ್ತೆಗಾಗಿ ನಿಯೋಜಿಸಲಾಗಿತ್ತು.

     

  • ಬೈಕ್‍ನಲ್ಲಿ ಲಿಫ್ಟ್ ಕೊಡಲು ನಿರಾಕರಿಸಿದ್ದಕ್ಕೆ ಎಂಜಿನಿಯರ್‍ಗೆ ಥಳಿಸಿದ ಪೊಲೀಸ್

    ಬೈಕ್‍ನಲ್ಲಿ ಲಿಫ್ಟ್ ಕೊಡಲು ನಿರಾಕರಿಸಿದ್ದಕ್ಕೆ ಎಂಜಿನಿಯರ್‍ಗೆ ಥಳಿಸಿದ ಪೊಲೀಸ್

    ಲಕ್ನೋ: ವ್ಯಕ್ತಿಯೊಬ್ಬರು ತನ್ನ ಬೈಕ್‍ನಲ್ಲಿ ಲಿಫ್ಟ್ ಕೊಡಲು ನಿರಾಕರಿಸಿದ್ದಕ್ಕೆ ಅವರನ್ನ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಥಳಿಸಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ಉತ್ತರಪ್ರದೇಶ ಪವರ್ ಕಾರ್ಪೋರೇಷನ್ ಲಿಮಿಟೆಡ್(ಯುಪಿಪಿಸಿಎಲ್)ನಲ್ಲಿ ಕಿರಿಯ ಎಂಜಿನಿಯರ್ ಆಗಿರೋ ಕೈಲಾಶ್ ಚಂದ್ ಅವರನ್ನ ಸಬ್ ಇನ್ಸ್ ಪೆಕ್ಟರ್ ಸುರೇಂದ್ರ ತ್ಯಾಗಿ ಥಳಿಸಿದ್ದಾರೆ.

    ಗುರುವಾರದಂದು ಸುರೇಂದ್ರ ತ್ಯಾಗಿ, ತನ್ನನ್ನು ಪೊಲೀಸ್ ಠಾಣೆವರೆಗೂ ಡ್ರಾಪ್ ಮಾಡುವಂತೆ ಕೈಲಾಶ್ ಅವರನ್ನ ಕೇಳಿದ್ರು. ಈ ವೇಳೆ ಕೈಲಾಶ್ ಲಿಫ್ಟ್ ಕೊಡಲು ನಿರಾಕರಿಸಿದ್ದು, ಕೋಪಗೊಂಡ ತ್ಯಾಗಿ ಅವರನ್ನ ಹೊಡೆದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ತ್ಯಾಗಿ ಅವರು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸಿಹಾನಿ ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ತ್ಯಾಗಿ ಅವರು ಲಿಫ್ಟ್ ಕೇಳಿದ ವೇಳೆ ಕೈಲಾಶ್, ಪವರ್ ಲೈನ್‍ವೊಂದರ ರಿಪೇರಿಗಾಗಿ ದೌಡಾಯಿಸುತ್ತಿದ್ದರು. ಹೀಗಾಗಿ ಲಿಫ್ಟ್ ಕೊಡಲು ನಿರಾಕರಿಸಿದ್ರು ಎಂದು ವರದಿಯಾಗಿದೆ. ಲಿಫ್ಟ್ ಕೊಡಲು ನಿರಾಕರಿಸಿದ್ದಕ್ಕೆ ಕೈಲಾಶ್‍ರನ್ನು ಥಳಿಸಿದ ತ್ಯಾಗಿ, ಇತರೆ ನಾಲ್ವರನ್ನು ಸಹಾಯಕ್ಕೆ ಕರೆದಿದ್ದು, ನಿನ್ನ ಮೇಲೆ ಸುಳ್ಳು ಕೇಸ್ ದಾಖಲಿಸ್ತೀನಿ ಅಂತ ಕೈಲಾಶ್‍ಗೆ ಬೆದರಿಕೆ ಹಾಕಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.

    ಕಿರಿಯ ಎಂಜಿನಿಯರ್‍ಗಳ ಒಕ್ಕೂಟದ ಅಧ್ಯಕ್ಷರಾದ ಸತ್ಯವೀರ್ ಸಿಂಗ್ ಪೊಲೀಸ್ ಠಾಣೆಗೆ ತೆರಳಿ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಕೈಲಾಶ್ ಮೇಲೆ ಹಲ್ಲೆ ಮಾಡಿದ ಇನ್ಸ್ ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳಲು ವಿಫಲರಾದ್ರೆ ಯುಪಿಪಿಸಿಎಲ್‍ನ ಕಿರಿಯ ಎಂಜಿನಿಯರ್‍ಗಳೆಲ್ಲರೂ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

  • ಪತ್ನಿಯ ಮೇಲೆ ಗುಂಡು ಹಾರಿಸಿದ ಮಾಜಿ ಸೈನಿಕ

    ಪತ್ನಿಯ ಮೇಲೆ ಗುಂಡು ಹಾರಿಸಿದ ಮಾಜಿ ಸೈನಿಕ

    ವಿಜಯಪುರ: ಮಾಜಿ ಸೈನಿಕನೊಬ್ಬ ತನ್ನ ಪತ್ನಿಯ ಮೇಲೆ ಗುಂಡು ಹಾರಿಸಿರುವ ಘಟನೆ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ.

    ಖಾಜಾ ಎಂಬವನೇ ಪತ್ನಿಯ ಮೇಲೆ ಗುಂಡು ಹಾರಿಸಿದ ಮಾಜಿ ಸೈನಿಕ. ಖಾಜಾ ಮತ್ತು ಪತ್ನಿ ಮಹಾದೇವಿ ನಡುವೆ ಕಳೆದ 12 ವರ್ಷಗಳಿಂದ ಆಸ್ತಿಗಾಗಿ ಜಗಳ ನಡೆಯುತ್ತಿತ್ತು. ಮಹಾದೇವಿ ನನಗೆ ಜೀವಾನಂಶ ನೀಡಬೇಕೆಂದು ಪತಿ ವಿರುದ್ಧ ಕೌಟುಂಬಿಕ ನ್ಯಾಯಾಲಯದಲ್ಲಿ ವಾದ ಹೂಡಿದ್ದರು. ಈ ಸಂಬಂಧ ಪತಿ-ಪತ್ನಿ ನಡುವೆ ಪ್ರತಿದಿನ ಜಗಳ ನಡೆಯುತ್ತಿತ್ತು.

    ಇಂದು ಇದೇ ವಿಷಯವಾಗಿ ಜಗಳ ನಡೆದಿದೆ. ಜಗಳದಲ್ಲಿ ಕೋಪಗೊಂಡ ಖಾಜಾ ರಿವಾಲ್ವಾರನಿಂದ ಫೈರ್ ಮಾಡಿದ್ದಾರೆ. ಗುಂಡು ನೇರವಾಗಿ ಮಹಾದೇವಿ ಅವರ ಕಾಲಿಗೆ ಗುಂಡು ತಗುಲಿದೆ. ಗಾಯಗೊಂಡ ಮಹಾದೇವಿ ಅವರನ್ನು ಮಹಾರಾಷ್ಟ್ರದ ಸೋಲಾಪುರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಸಂಬಂಧ ಇಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಖಾಜಾ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

     

  • ಮನೆ ಬಿಟ್ಟು ಓಡಿ ಹೋಗಿ, ನಮ್ಮನ್ನ ಹುಡ್ಕಬೇಡಿ ಎಂದು ಪೊಲೀಸರಿಗೆ ವಾಟ್ಸಪ್ ವಿಡಿಯೋ ಕಳಿಸಿದ್ರು

    ಮನೆ ಬಿಟ್ಟು ಓಡಿ ಹೋಗಿ, ನಮ್ಮನ್ನ ಹುಡ್ಕಬೇಡಿ ಎಂದು ಪೊಲೀಸರಿಗೆ ವಾಟ್ಸಪ್ ವಿಡಿಯೋ ಕಳಿಸಿದ್ರು

    -ವಿಡಿಯೋ ತಲುಪವ ಮುನ್ನ ಲವ್ ಸ್ಟೋರಿಗೊಂದು ಟ್ವಿಸ್ಟ್

    ಶಿವಮೊಗ್ಗ: ಫೇಸ್‍ಬುಕ್ ಮೂಲಕ ಪರಿಚಯವಾದ ಸ್ನೇಹ ಪ್ರೀತಿಗೆ ತಿರುಗಿ ಈಗ ಪರಸ್ಪರರು ಮೋಸದ ಆರೋಪ ಮಾಡುತ್ತಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

    ಪ್ರೀತಿ ಮಾಡಿ ಮನೆ ಬಿಟ್ಟು ಹೋದ ಪ್ರೇಮಿಗಳು ಶಿವಮೊಗ್ಗದ ಪೊಲೀಸರಿಗೆ ವಾಟ್ಸಪ್ ಮೂಲಕ `ನಮ್ಮನ್ನು ಹುಡುಕಬೇಡಿ’ ಅಂತಾ ಮೆಸೇಜ್ ಕೂಡ ಮಾಡಿದ್ದರು. ಪ್ರೇಮಿಗಳ ವಾಟ್ಸಪ್ ವಿಡಿಯೋ ಪೊಲೀಸರಿಗೆ ತಲುಪುವ ಮುನ್ನವೇ ಈ ಪ್ರೇಮಿಗಳು ಪರಸ್ಪರ ದೂರು, ಮೋಸದ ಆರೋಪ ಮಾಡುತ್ತಿದ್ದಾರೆ.

    ನಡೆದಿದ್ದೇನು?: ಶಿವಮೊಗ್ಗದ ಶೇಷಾದ್ರಿಪುರಂನ ಸೈಯ್ಯದ್ ಅಹ್ಮದ್ ಹಾಗೂ ಬಾಪೂಜಿ ನಗರದ ರೆಚೆಲ್ ಮಚಾಡೋ ಫೇಸ್ಬುಕ್ ಮೂಲಕ ಪರಿಚಯವಾಗಿತ್ತು. ಈ ಪರಿಚಯ ಪ್ರೀತಿಗೆ ಬದಲಾಗಿತ್ತು. ಭಿನ್ನ ಧರ್ಮೀಯರಾದ ಕಾರಣ ಎರಡೂ ಮನೆಯವರು ಒಪ್ಪಲಿಲ್ಲ. ಕೊನೆಗೆ ಇಬ್ಬರೂ ಕಳೆದ ವಾರ ಮನೆ ಬಿಟ್ಟು ಹೋಗಿದ್ದರು.

    ಈ ಮಧ್ಯೆ ಹುಡುಗಿಯ ಪೋಷಕರು ಕೋಟೆ ಠಾಣೆಗೆ ನಾಪತ್ತೆ ದೂರು ಸಲ್ಲಿಸಿದರು. ಆದ್ರೆ ಇತ್ತ ಈ ಜೋಡಿ ಒಟ್ಟಿಗೆ ನಿಂತು ವೀಡಿಯೋ ಮಾಡಿ, ಅದನ್ನು ಸ್ನೇಹಿತರ ಮೂಲಕ ಪೊಲೀಸರಿಗೆ ತಲುಪಿಸುವ ಪ್ರಯತ್ನ ಮಾಡಿದ್ದರು. ಈ ನಡುವೆ ಇಬ್ಬರನ್ನೂ ಪತ್ತೆ ಹಚ್ಚುವ ಕೆಲಸವನ್ನು ಪೊಲೀಸರು ಮಾಡುತ್ತಲೇ ಇದ್ದರು.

    ಒಂದು ವಾರದ ನಂತರ ಬಂದ ಹುಡುಗಿ ಸೀದಾ ಕೋಟೆ ಠಾಣೆಗೆ ತೆರಳಿ, ಸೈಯ್ಯದ್ ನನ್ನನ್ನು ಕಿಡ್ನಾಪ್ ಮಾಡಿ, ಅಕ್ರಮವಾಗಿ ಭಟ್ಕಳದ ಲಾಡ್ಜ್ ನಲ್ಲಿ ಇಟ್ಟಿದ್ದ, ಇಸ್ಲಾಂಗೆ ಮತಾಂತರವಾಗು ಎಂದು ಒತ್ತಾಯ ಮಾಡಿದ್ದ ಎಂದು ದೂರು ನೀಡಿದ್ದಾರೆ. ಆದ್ರೆ ಸಯ್ಯದ್ ಅಹ್ಮದ್ ಮಾತ್ರ ಆಕೆಯೇ ಇಷ್ಟಪಟ್ಟು ಬಂದದ್ದು ಎನ್ನುತ್ತಿದ್ದಾನೆ. ಒಟ್ಟಿನಲ್ಲಿ ಇವರಿಬ್ಬರಲ್ಲಿ ಯಾರು ಸರಿ? ಯಾರು ತಪ್ಪು? ಎಂಬುದನ್ನು ಕೋಟೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

    https://youtu.be/8h1yyUmf-R4