Tag: police

  • ಮಗನ ಚಿಕಿತ್ಸೆಗಾಗಿ ಬಂದ ಮಹಿಳೆಯನ್ನು ಮಂಚಕ್ಕೆ ಕರೆದ ಬಳ್ಳಾರಿಯ ವಿಮ್ಸ್ ವೈದ್ಯ!

    ಮಗನ ಚಿಕಿತ್ಸೆಗಾಗಿ ಬಂದ ಮಹಿಳೆಯನ್ನು ಮಂಚಕ್ಕೆ ಕರೆದ ಬಳ್ಳಾರಿಯ ವಿಮ್ಸ್ ವೈದ್ಯ!

    ಬಳ್ಳಾರಿ: ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ವಿವಾದ ಒಂದಲ್ಲ ಎರಡಲ್ಲ. ಈ ಬಾರಿ ಮಗನ ಚಿಕಿತ್ಸೆಗೆ ಬಂದ ಮಹಿಳೆಯೊಬ್ಬರನ್ನು ಆಸ್ಪತ್ರೆಯ ವೈದ್ಯ ಮಂಚಕ್ಕೆ ಕರೆದಿದ್ದಾನೆ.

    ಸೋಮಣ್ಣ ಎಂಬವನೇ ಆಸ್ಪತ್ರೆಗೆ ಬಂದ ಮಹಿಳೆಯನ್ನು ಮಂಚಕ್ಕೆ ಕರೆದ ವೈದ್ಯ. ಸೋಮಣ್ಣ ವಿಮ್ಸ್ ಆಸ್ಪತ್ರೆಯಲ್ಲಿ ಇಎನ್‍ಟಿ ವಿಭಾಗದ ವೈದ್ಯನಾಗಿ ಕೆಲಸ ಮಾಡಿಕೊಂಡಿದ್ದಾನೆ. ಮಗನ ಅಂಗವೈಕಲ್ಯ ದೃಢೀಕರಣ ಪತ್ರಕ್ಕಾಗಿ ಬಂದ ಮಹಿಳೆಗೆ ವೈದ್ಯ ಸೋಮಣ್ಣ ಲೈಂಗಿಕ ಕಿರುಕುಳ ನೀಡಿದ್ದಾನೆ.

    ನನ್ನ ಮಗನ ಅಂಗವೈಕಲ್ಯ ದೃಢೀಕರಣ ಪತ್ರಕ್ಕಾಗಿ ನಾನು ಆಸ್ಪತ್ರೆಗೆ ಆಗಮಿಸಿದ್ದೆ, ಆದರೆ ವೈದ್ಯ ಸೋಮಣ್ಣ ನನ್ನ ಜೊತೆ ಸಹಕರಿಸಿದರೆ ನಿನ್ನ ಮಗನಿಗೆ ಯಾವುದೇ ಪರೀಕ್ಷೆ ನಡೆಸದೇ ಅಂಗವೈಕಲ್ಯ ಪ್ರಮಾಣ ನೀಡುತ್ತೇನೆ ಎಂದು ಹೇಳಿ, ಈ ಸಂದರ್ಭದಲ್ಲಿ ಮಹಿಳೆಯ ಸೀರೆಗೆ ಕೈ ಹಾಕಿದನು ಎಂದು ಮಹಿಳೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ಮಹಿಳೆ ನೇರವಾಗಿ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ವೈದ್ಯನ ವಿರುದ್ಧ ದೂರು ದಾಖಲಿಸಿದ್ದಾರೆ.

    ದೂರು ದಾಖಲಾಗುತ್ತಿದ್ದಂತೆ ವೈದ್ಯ ಸೋಮಣ್ಣ ನಾಪತ್ತೆಯಾಗಿದ್ದಾನೆ. ದೂರು ದಾಖಲಿಸಿಕೊಂಡ ಪೊಲೀಸರು ಸೋಮಣ್ಣನ ಪತ್ತೆಗಾಗಿ ಬಲೆ ಬೀಸಿದ್ದಾರೆ.

     

  • ಹಾರ್ಡ್‍ವೇರ್ ಅಂಗಡಿಯ ಹಿಂಬಾಗಿಲು ಮುರಿದು ಕಳ್ಳತನ- ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ

    ಹಾರ್ಡ್‍ವೇರ್ ಅಂಗಡಿಯ ಹಿಂಬಾಗಿಲು ಮುರಿದು ಕಳ್ಳತನ- ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ

    ಮಂಡ್ಯ: ಹಾರ್ಡ್‍ವೇರ್ ಅಂಗಡಿಯ ಹಿಂಬಾಗಿಲು ಮುರಿದು ಒಳ್ಳನುಗ್ಗಿ ಇಬ್ಬರು ಕಳ್ಳರು ಹಣ ದೋಚಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯಲ್ಲಿ ನಡೆದಿದೆ. ಈ ಕಳ್ಳತನದ ದೃಶ್ಯಾವಳಿ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಮದ್ದೂರು-ಮಳವಳ್ಳಿ ಮುಖ್ಯರಸ್ತೆಯಲ್ಲಿರುವ ರಮೇಶ್ ಎಂಬವರಿಗೆ ಸೇರಿದ ಚೌಡೇಶ್ವರಿ ಗ್ಲಾಸ್ ಪ್ಲೈವುಡ್ ಆಂಡ್ ಹಾರ್ಡ್‍ವೇರ್ ಅಂಗಡಿಯಲ್ಲಿ ಕಳ್ಳತನ ನಡೆದಿದೆ. ಗುರುವಾರ ರಾತ್ರಿ ಒಳ್ಳನುಗಿರುವ ಕಳ್ಳರಿಬ್ಬರು, ಕ್ಯಾಶ್‍ಬಾಕ್ಸ್ ನಲ್ಲಿದ್ದ ಸುಮಾರು ಐದು ಸಾವಿರ ರೂಪಾಯಿ ದೋಚಿದ್ದಾರೆ. ಇದಲ್ಲದೆ ಇದೇ ರಸ್ತೆಯಲ್ಲಿರುವ ಯೋಗಾನಂದ್ ಎಂಬುವರಿಗೆ ಸೇರಿದ ಹಾರ್ಡ್ ವೇರ್ ಅಂಗಡಿಯಲ್ಲಿಯೂ ಕಳ್ಳತನವಾಗಿದೆ. ಅಂಗಡಿ ಬಾಗಿಲು ಮುರಿದು ಸುಮಾರು 35 ಸಾವಿರ ರೂಪಾಯಿ ದೋಚಿದ್ದಾರೆ.

    ಸ್ಥಳಕ್ಕೆ ಕೆ.ಎಂ.ದೊಡ್ಡಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಎರಡು ಕಳ್ಳತನವನ್ನು ಒಂದೇ ತಂಡ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.

    https://youtu.be/DTaGHvumzq8

  • ಕೋಟಿ ರೂ. ಮೆಕ್ಕೆಜೋಳ ಖರೀದಿಸಿ ರೈತರಿಗೆ ವ್ಯಾಪಾರಿಯಿಂದ ದೋಖಾ

    ಕೋಟಿ ರೂ. ಮೆಕ್ಕೆಜೋಳ ಖರೀದಿಸಿ ರೈತರಿಗೆ ವ್ಯಾಪಾರಿಯಿಂದ ದೋಖಾ

    – ಪೊಲೀಸರ ವಿರುದ್ಧವೇ ಡೆತ್‍ನೋಟ್ ಬರೆದು ಬೆದರಿಕೆ

    ಬಳ್ಳಾರಿ: ರೈತರು ಬರಗಾಲದಲ್ಲಿ ಕಷ್ಟಪಟ್ಟು ಬೆಳದಿದ್ದ ಮೆಕ್ಕೆಜೋಳವನ್ನು ಖರೀದಿ ಮಾಡಿದ್ದ ವ್ಯಾಪಾರಿಯೊಬ್ಬ ಹಣ ನೀಡದೇ ಮೋಸ ಮಾಡಿದ್ದಾನೆ. ರೈತರಿಗೆ ಹಣ ನೀಡಬೇಕೆಂದು ಪೊಲೀಸರು ಹೇಳಿದರೇ ಅವರ ವಿರುದ್ಧವೇ ಡೆತ್‍ನೋಟ್ ಬರೆದು ಬೆದರಿಕೆ ಹಾಕಿದ್ದಾನೆ.

    ಹಿರೇಹೆಗ್ಡಾಳ ಗ್ರಾಮ ಪಂಚಾಯತಿ ಸದಸ್ಯ, ದಲ್ಲಾಳಿ ಚಂದ್ರಪ್ಪ ಎಂಬವನೇ ರೈತರಿಗೆ ಹಣ ನೀಡದೇ ಸತಾಯಿಸುತ್ತಿರುವ ವ್ಯಕ್ತಿ. ಜಿಲ್ಲೆಯ ಕೂಡ್ಲಗಿ ತಾಲೂಕಿನ ಇಚಲ, ಬೊಮ್ಮನಹಳ್ಳಿ ಗ್ರಾಮ ಸೇರಿದಂತೆ ಸುತ್ತಲಿನ ಹಳ್ಳಿಗಳಿಂದ ನೂರಾರು ರೈತರ ಬಳಿ ಮೆಕ್ಕೆಜೋಳ ಖರೀದಿಸಿ ವ್ಯಾಪಾರಿ ಇದೂವರೆಗೂ ರೈತರಿಗೆ ಹಣ ನೀಡಿಲ್ಲ.

    ಚಂದ್ರಪ್ಪ ಕಲೆ ರೈತರಿಗೆ ಚೆಕ್ ನೀಡಿದ್ದಾನೆ.ಆದರೆ ಚಂದ್ರಪ್ಪ ನೀಡಿರುವ ಎಲ್ಲ ಚೆಕ್‍ಗಳು ಬೌನ್ಸ್ ಆಗಿವೆ. ಹೀಗಾಗಿ ಹಣ ಕೊಡಿಸುವಂತೆ ರೈತರು ಪೊಲೀಸ ಠಾಣೆ ಮೇಟ್ಟಿಲೇರಿದ್ರೆ, ಚಂದ್ರಪ್ಪ ಇದೀಗ ಪೊಲೀಸರನ್ನೆ ಬೆದರಿಸುತ್ತಿದ್ದಾನೆ. ರೈತರ ಹಣ ಕೊಡುವಂತೆ ತಾಕೀತೂ ಮಾಡಿದ ಕೂಡ್ಲಗಿ ಡಿವೈಎಸ್‍ಪಿ ತಮಗೆ ಕಿರುಕುಳ ನೀಡಿದ್ರೂ ಅಂತಾ ಪೊಲೀಸರ ವಿರುದ್ಧವೇ ವ್ಯಾಪಾರಿ ಚಂದ್ರಪ್ಪ ಡೆತ್‍ನೋಟ್ ಬರೆದಿಟ್ಟು ಪೊಲೀಸರನ್ನು ಬೆದರಿಸುತ್ತಿದ್ದಾನೆ.

    ರೈತರಿಂದ ಮೆಕ್ಕಜೋಳ ಖರೀದಿಸಿ ಹಣ ಕೊಡದೆ ಪೊಲೀಸರನ್ನೆ ಬೆದರಿಸುತ್ತಿರುವ ಚಂದ್ರಪ್ಪನಿಂದ ಹಣ ಪಡೆಯೋದೇಗೆ ಅಂತಾ ರೈತರು ಇದೀಗ ಕಂಗಾಲಾಗಿದ್ದಾರೆ. ಇತ್ತ ರೈತರು ನಮಗೆ ಹಣ ಕೊಡದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ.

     

  • ಮರ್ಯಾದಾ ಹತ್ಯೆ: ಮಗಳು, ಆಕೆಯ ಪ್ರಿಯಕರನನ್ನ ಕೊಚ್ಚಿ ಕೊಂದ ತಂದೆ

    ಮರ್ಯಾದಾ ಹತ್ಯೆ: ಮಗಳು, ಆಕೆಯ ಪ್ರಿಯಕರನನ್ನ ಕೊಚ್ಚಿ ಕೊಂದ ತಂದೆ

    ಬೆಳಗಾವಿ: ರಾಜ್ಯದಲ್ಲಿ ಮತ್ತೊಂದು ಮರ್ಯಾದೆ ಘಟನೆ ಬೆಳಕಿಗೆ ಬಂದಿದೆ. ಪೋಷಕರ ವಿರುದ್ಧವಾಗಿ ಅನ್ಯಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ಯುವತಿಯ ತಂದೆಯೆ ಮನೆಯಲ್ಲೇ ಕೊಚ್ಚಿ ಕೊಲೆ ಮಾಡಿ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ.

    ಕೊಲೆ ನಡೆದ ಸ್ಥಳ

    ಜಿಲ್ಲೆಯ ಸವದತ್ತಿ ತಾಲೂಕಿನ ಬೆಡಸೂರ ಗ್ರಾಮದಲ್ಲಿಯೆ ಮರ್ಯಾದೆ ಹತ್ಯೆ ನಡೆದಿದೆ. 45 ವರ್ಷದ ಯಲ್ಲಪ್ಪ ಭೀಮಪ್ಪ ಆಡೀನ್ ಎಂಬ ತಂದೆಯೆ ತನ್ನ ಸ್ವಂತ ಮಗಳನ್ನೇ ಹತ್ಯೆ ಮಾಡಿದ್ದಾನೆ. ರುಕ್ಮವ್ವ ಯಲ್ಲಪ್ಪ ಆಡೀನ್ (16) ಮತ್ತು ಮಂಜುನಾಥ್ ಪಡೇಶ್ವರ್ (21) ಕೊಲೆಯಾದ ಜೋಡಿಗಳು.

    ರುಕ್ಮವ್ವ ಅದೇ ಗ್ರಾಮದ ಮಂಜುನಾಥ್ ಎಂಬವರನ್ನು ಪ್ರೀತಿ ಮಾಡುತ್ತಿದ್ದರು. ರುಕ್ಮವ್ವ ಮತ್ತು ಮಂಜುನಾಥ್ ಇಬ್ಬರದೂ ಜಾತಿ ಬೇರೆಯಾಗಿದ್ದರಿಂದ ಪೋಷಕರ ವಿರೋಧವಿತ್ತು. ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ರುಕ್ಮವ್ವಳನ್ನು ಭೇಟಿಯಾಗಲು ಮಂಜುನಾಥ್ ಹೋಗಿದ್ದಾರೆ. ಆದರೆ ಅದೇ ವೇಳೆಗೆ ಮನೆಗೆ ಬಂದ ಯಲ್ಲಪ್ಪ ಇಬ್ಬರನ್ನು ಕಂಡು ಕೋಪದಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಕೊಲೆ ನಂತರ ನೇರವಾಗಿ ಪೊಲೀಸರಿಗೆ ಶರಣಾಗಿದ್ದಾನೆ. ಈ ಸಂಬಂಧ ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ಪಲ್ಟಿ-ನಾಲ್ವರ ದುರ್ಮರಣ-ನಾಲ್ವರು ಗಂಭೀರ

    ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ಪಲ್ಟಿ-ನಾಲ್ವರ ದುರ್ಮರಣ-ನಾಲ್ವರು ಗಂಭೀರ

    ವಿಜಯಪುರ: ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ಒಂದು ಪಲ್ಟಿ ಹೊಡೆದಿದ್ದು, ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ದೇವರಹಿಪ್ಪರಗಿ ಪಟ್ಟಣದ ಬಳಿ ನಡೆದಿದೆ.

    ಓರ್ವ ಮಹಿಳೆ ಸೇರಿದಂತೆ ಮೂವರು ಪುರುಷರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕೆಎ 48 ಎಂ 3625. ನಂಬರಿನ ಕ್ರೂಸರನ್ನು ಚಲಾಯಿಸುತ್ತಿದ್ದ ಚಾಲಕ ಅಬ್ದುಲ್ (35), ಮಹಾನಂದ ಕೆರೂರ (40), ಮಾನಿಂಗಸಾಹುಕಾರ ಕಾಸರ್ (50) ಮೃತ ದುರ್ದೈವಿಗಳು. ಮೃತ ಮಹಿಳೆಯ ಹೆಸರು ತಿಳಿದು ಬಂದಿಲ್ಲ. ಮೃತರು ಬಾಗಲಕೋಟೆ ಜಿಲ್ಲೆಯ ಜಮಖಂಡಿ ಬನಹಟ್ಟಿ ಗ್ರಾಮದವರು ಎಂದು ತಿಳಿದು ಬಂದಿದೆ.

    ಅಪಘಾತದಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ದೇವರ ಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.

     

     

  • 20 ರೂ. ಚಿಕನ್ ಕಬಾಬ್‍ಗಾಗಿ ಅಂಗಡಿ ಮಾಲೀಕನಿಗೆ ಚಾಕುವಿನಿಂದ ಇರಿದ!

    20 ರೂ. ಚಿಕನ್ ಕಬಾಬ್‍ಗಾಗಿ ಅಂಗಡಿ ಮಾಲೀಕನಿಗೆ ಚಾಕುವಿನಿಂದ ಇರಿದ!

    ರಾಯಚೂರು: 20 ರೂ. ಚಿಕನ್ ಕಬಾಬ್‍ಗಾಗಿ ಅಂಗಡಿ ಮಾಲೀಕನಿಗೆ ಪಾನಮತ್ತನೋರ್ವ ಚಾಕುವಿನಿಂದ ಇರಿದಿರುವ ಘಟನೆ ರಾಯಚೂರು ನಗರದಲ್ಲಿ ನಡೆದಿದೆ.

    ಶಾಕೀರ್ ಚಾಕುವಿನಿಂದ ಇರಿದ ಆರೋಪಿ. ಮಂಗಳವಾರ ರಾತ್ರಿ ನಗರದ ಅಶೋಕ ಡಿಪೋ ಬಳಿಯ ಮದೀನಾ ಚಿಕನ್ ಕಬಾಬ್ ಸೆಂಟರ್‍ನಲ್ಲಿ ಗಲಾಟೆ ನಡೆದಿದೆ. ಈ ಗಲಾಟೆಯಲ್ಲಿ ಗಾಯಗೊಂಡ ಭೀಮೇಶ್ ಹಾಗು ಅಂಗಡಿ ಮಾಲೀಕ ಅಜೀಮ್ ಎಂಬವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಏನಿದು ಘಟನೆ?: ಮಂಗಳವಾರ ರಾತ್ರಿ ಅಜೀಮ್ ಅವರ ಕಬಾಬ್ ಸೆಂಟರ್‍ಗೆ ಬಂದ ಶಾಕೀರ್ 20 ರೂ.ಗೆ ಚಿಕನ್ ಕಬಾಬ್ ಕೇಳಿದ್ದಾನೆ. ಆದರೆ ಅಜೀಮ್ 20 ರೂ.ಗೆ ಚಿಕನ್ ಕಬಾಬ್ ಬರಲ್ಲ ಎಂದು ಹೇಳಿದ್ದಾರೆ. ಪಾನಮತ್ತನಾದ ಶಾಕೀರ್ ಅಂಗಡಿ ಮಾಲೀಕ ಅಜೀಮ್ ಜೊತೆ ಜಗಳಕ್ಕೆ ಇಳಿದಿದ್ದಾನೆ. ಸ್ಥಳದಲ್ಲಿದ್ದ ಭೀಮೇಶ್ ಜಗಳ ಬಿಡಿಸಲು ಹೋದಾಗ ಶಾಕೀರ್ ಅಂಗಡಿಯಲ್ಲಿದ್ದ ಚಾಕುವಿನಿಂದ ಇಬ್ಬರಿಗೂ ಇರಿದಿದ್ದಾನೆ.

    ಭೀಮೇಶ್‍ರಿಗೆ ಅಂಗಡಿ ಮಾಲೀಕ ಅಜೀಮ್ ಹಲ್ಲೆ ಮಾಡಿದ್ದಾರೆ ಎಂದು ತಪ್ಪು ತಿಳಿದು ಭೀಮೇಶ್ ಕಡೆಯವರು ಅಜೀಮ್ ಮೇಲೆ ಹಲ್ಲೆ ಮಾಡಿದ್ದಾರೆ. ಚಾಕುವಿನಿಂದ ಇರಿದ ಆರೋಪಿ ಶಾಕೀರ್‍ನನ್ನ ಸದ್ಯಕ್ಕೆ ಪೊಲೀಸರು ಬಂಧಿಸಿದ್ದಾರೆ.

    ಈ ಸಂಬಂಧ ಸದರ ಬಜಾರ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

  • ವಿಡಿಯೋ: ಬೆಂಗ್ಳೂರಿನ ನಡುರಸ್ತೇಲಿ ರಿಯಲ್ ಫೈಟ್- 4 ಜನರ ಜೊತೆ ಒಬ್ಬನೇ ಗುದ್ದಾಡಿದ!

    ವಿಡಿಯೋ: ಬೆಂಗ್ಳೂರಿನ ನಡುರಸ್ತೇಲಿ ರಿಯಲ್ ಫೈಟ್- 4 ಜನರ ಜೊತೆ ಒಬ್ಬನೇ ಗುದ್ದಾಡಿದ!

    ಬೆಂಗಳೂರು: ಸ್ಕೂಟರ್‍ನಲ್ಲಿ ಬಂದ ಯುವಕನೊಬ್ಬ ಗೆಳೆಯನ ಜೊತೆ ಮಾತಾಡ್ಕೊಂಡು ನಿಂತಿರ್ತಾನೆ. ಈ ವೇಳೆ ಬೈಕ್‍ನಲ್ಲಿ ಬಂದ ಇಬ್ಬರು ಟೂಲ್ಸ್ ಓಪನ್ ಮಾಡಿ ಏಕಾಏಕಿ ಇವನಿಗೆ ಹೊಡೆಯುತ್ತಾರೆ. ಇದು ಬೆಂಗಳೂರು ನಗರದ ಹೊರವಲಯದ ಬ್ಯಾಡರಹಳ್ಳಿಯಲ್ಲಿ ನಡೆದ ಘಟನೆ.

    ವ್ಯಕ್ತಿಯೊಬ್ಬನನ್ನು ಹಲ್ಲೆ ಮಾಡಲು ನಾಲ್ವರು ದುಷ್ಕರ್ಮಿಗಳು ಬಂದಿರ್ತಾರೆ. ಆದರೆ ಆ ವ್ಯಕ್ತಿಯೇ ಅವರ ಕೈಲಿದ್ದ ಮಚ್ಚು ಕಸಿದುಕೊಂಡು ಅವರ ಮೇಲೆಯೇ ಹಲ್ಲೆ ಮಾಡಲು ಮುಂದಾಗ್ತಾನೆ. ವ್ಯಕ್ತಿ ಮಚ್ಚು ಹಿಡಿದು ಆರ್ಭಟಿಸಿದಾಗ ಕೊಲೆ ಮಾಡಲು ಬಂದಿದ್ದವರೆಲ್ಲಾ ಎದ್ನೋ ಬಿದ್ನೊ ಅಂತಾ ದಿಕ್ಕಾಪಾಲಾಗ್ತಾರೆ.

    ಇವರನ್ನೆಲ್ಲಾ ಓಡಿಸ್ಕೊಂಡು ಹೋಗಿ ವಾಪಸ್ ಬರ್ತಿದ್ದಾಗ ಮಾರುದ್ದದ ಮರ ಎತ್ಕೊಂಡ್ ಬಂದು ಇವನನ್ನ ಹೊಡೆಯೋದಕ್ಕೆ ಹೋಗ್ತಾರೆ. ಆದ್ರೂ ಬಗ್ಗದ ಈತ ದೊಣ್ಣೆ ಕಸಿದು ಮತ್ತೆ ಮಚ್ಚು ಹಿಡಿದು ಓಡಿಸ್ಕೊಂಡು ಹೋಗ್ತಾನೆ. ಇದೆಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಆದರೆ ಇದೂವರೆಗೂ ಈ ಸಂಬಂಧ ದೂರು ದಾಖಲಾಗಿಲ್ಲ. ಪೊಲೀಸ್ರು ಈ ವೀಡಿಯೋ ಇಟ್ಕೊಂಡು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

    https://youtu.be/g1PDmCgp76g

     

  • ಸೌಂಡ್ ಮಾಡದೇ, ರಸ್ತೆ ದಾಟುವವರೆಗೂ ತಳ್ಳಿ ಬೈಕ್ ಕದ್ದ ಕಳ್ಳರ ಕೈಚಳಕದ ವಿಡಿಯೋ ನೋಡಿ

    ಸೌಂಡ್ ಮಾಡದೇ, ರಸ್ತೆ ದಾಟುವವರೆಗೂ ತಳ್ಳಿ ಬೈಕ್ ಕದ್ದ ಕಳ್ಳರ ಕೈಚಳಕದ ವಿಡಿಯೋ ನೋಡಿ

    ಹುಬ್ಬಳ್ಳಿ: ಸೋಮವಾರ ರಾತ್ರಿ ಮನೆಯ ಮುಂದೆ ನಿಲ್ಲಿಸಿದ್ದ ಪಲ್ಸರ್ ಬೈಕ್ ಕಳ್ಳತನ ಮಾಡಿರುವ ಘಟನೆ ನಗರದ ಅಗಸರ ಓಣಿಯಲ್ಲಿ ನಡೆದಿದೆ. ಇಬ್ಬರು ಕಳ್ಳತನ ಮಾಡುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸರೆಯಾಗಿವೆ.

    ಮೊದಲು ರಸ್ತೆ ಬದಿಯಲ್ಲಿ ನಿಂತಿರುವ ಬೈಕ್ ಲಾಕ್ ಮುರಿದು ಕಳ್ಳತನ ಮಾಡಲು ಯತ್ನಿಸಿದ್ದಾರೆ. ಬೈಕ್‍ನ ಲಾಕ್ ಓಪನ್ ಆಗದೇಯಿದ್ದಾಗ ಅದೇ ರಸ್ತೆಯ ನಿವಾಸಿ ಪ್ರದೀಪ ಅಗಸಣ್ಣವರ್ ಎಂಬುವರ ಸೇರಿದ್ದ ಬೈಕ್ ಕದ್ದು ಪರಾರಿಯಾಗಿದ್ದಾರೆ.

    ಇನ್ನು ಬೈಕ್ ಕದ್ದು ಪರಾರಿಯಾಗುವಾಗ ಯಾರಿಗೂ ಸೌಂಡ್ ಆಗಬಾರದೆಂದು, ರಸ್ತೆ ದಾಟುವವರೆಗೂ ಬೈಕ್ ತಳ್ಳಿಕೊಂಡು ಹೋಗಿದ್ದಾರೆ. ಇನ್ನು ಕಳ್ಳರ ಕೈಚಳಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=BzJihWU88FQ

     

     

     

  • ಮರ್ಮಾಂಗಕ್ಕೆ ಹೊಡೆದು ವ್ಯಕ್ತಿ ಕೊಲೆ ಪ್ರಕರಣ: ಆರೋಪಿ ಬಂಧನ

    ಮರ್ಮಾಂಗಕ್ಕೆ ಹೊಡೆದು ವ್ಯಕ್ತಿ ಕೊಲೆ ಪ್ರಕರಣ: ಆರೋಪಿ ಬಂಧನ

    ಮೈಸೂರು: ಮರ್ಮಾಂಗಕ್ಕೆ ಹೊಡೆದು ವ್ಯಕ್ತಿಯೊಬ್ಬನ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶ್ವಸಿಯಾಗಿದ್ದಾರೆ.

    23 ವರ್ಷದ ನಂದೀಶ್ ಬಂಧಿತ ಆರೋಪಿ. ಬುಧವಾರ ನಂದೀಶ್ ಬನ್ನೂರಿನ ಬೇವಿಮನಹಳ್ಳಿ ಗ್ರಾಮದಲ್ಲಿ ಕೃಷ್ಣ ಎಂಬವರ ಮರ್ಮಾಂಗಕ್ಕೆ ಹಲ್ಲೆ ಮಾಡಿ ಕೊಲೆ ಮಾಡಿದ್ದನು. ಹಣಕಾಸಿನ ವಿಚಾರಕ್ಕೆ ಸಂಬಂಧಪಟ್ಟಂತೆ ಕೃಷ್ಣ ಮತ್ತು ನಂದೀಶ್ ನಡುವೆ ಗಲಾಟೆಯಾಗಿತ್ತು.

    ಬುಧವಾರ ಕೃಷ್ಣರಿಗೆ ಫೋನ್ ಮಾಡಿದ್ದ ನಂದೀಶ್ ಹಣ ನೀಡುವುದ್ದಾಗಿ ಹೇಳಿ ಕರೆಸಿಕೊಂಡು ಕೊಲೆ ಮಾಡಿದ್ದನು. ಕೊಲೆಯ ನಂತರ ನಂದೀಶ್ ನಾಪತ್ತೆಯಾಗಿದ್ದನು. ಈ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆನೇಕಲ್ ಪ್ರೇಮಿಗಳ ವೈರಲ್ ವಿಡಿಯೋ: ಅಪ್ರಾಪ್ತೆಯನ್ನು ಕಿಡ್ನಾಪ್ ಮಾಡಿದ್ದ ಆರೋಪಿ ಅರೆಸ್ಟ್

    ಆನೇಕಲ್ ಪ್ರೇಮಿಗಳ ವೈರಲ್ ವಿಡಿಯೋ: ಅಪ್ರಾಪ್ತೆಯನ್ನು ಕಿಡ್ನಾಪ್ ಮಾಡಿದ್ದ ಆರೋಪಿ ಅರೆಸ್ಟ್

    ಬೆಂಗಳೂರು: ಅಪ್ರಾಪ್ತೆಯನ್ನು ಕಿಪಡ್ ಮಾಡಿ, ತಮ್ಮ ಪ್ರೇಮಕ್ಕೆ ಪೊಲೀಸರು ಅಡ್ಡಿಪಡಿಸಿದರೆ ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಂದು ವಿಡಿಯೋ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹೊಸಕೋಟೆ ಪೊಲೀಸರು ಯಶ್ವಸಿಯಾಗಿದ್ದಾರೆ.

    ವೇಣು ಬಂಧಿತ ಆರೋಪಿ. ಮೂರು ದಿನಗಳ ಹಿಂದೆ ಅಪ್ರಾಪ್ತ ಯುವತಿಯನ್ನು ವೇಣು ಎಂಬಾತ ಅಪಹರಣ ಮಾಡಿದ್ದಾನೆ ಎಂದು ಬಾಲಕಿಯ ಪೋಷಕರು ನಗರದ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಪೊಲೀಸರು ವೇಣುಗೆ ಕರೆಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.

    ಇದನ್ನೂ ಓದಿ: ಮನೆ ಬಿಟ್ಟು ಓಡಿ ಹೋಗಿ, ನಮ್ಮನ್ನ ಹುಡ್ಕಬೇಡಿ ಎಂದು ಪೊಲೀಸರಿಗೆ ವಾಟ್ಸಪ್ ವಿಡಿಯೋ ಕಳಿಸಿದ್ರು-ವಿಡಿಯೋ ತಲುಪವ ಮುನ್ನ ಲವ್ ಸ್ಟೋರಿಗೊಂದು ಟ್ವಿಸ್ಟ್

    ಪೊಲೀಸರ ವಿಚಾರಣೆಗೆ ಹೆದರಿದ ವೇಣು ಅಪ್ರಾಪ್ತ ಯುವತಿಗೆ ಪುಸಲಾಯಿಸಿ ತಮ್ಮ ಪ್ರೀತಿಗೆ ಪೊಲೀಸರು ಅಡ್ಡಿಪಡಿಸುತ್ತಿದ್ದಾರೆ ಮತ್ತು ನಮ್ಮನ್ನು ದೂರ ಮಾಡಲು ಯತ್ನಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

    ಸೋಮವಾರ ತಡರಾತ್ರಿ ಹೊಸಕೋಟೆ ಪೊಲೀಸರು ವೇಣುನನ್ನು ಬಂಧಿಸಿದ್ದಾರೆ. ಅಪ್ರಾಪ್ತ ಬಾಲಕಿಯನ್ನು ಪೋಷಕರ ವಶಕ್ಕೆ ನೀಡಿದ್ದಾರೆ. ಇನ್ನು ವೇಣು ವಿರುದ್ಧ ಪೂಕ್ಸೋ ಕಾಯ್ದೆ ಅಡಿ, ಅಪಹರಣ ಹಾಗು ಆತ್ಮಹತ್ಯೆ ಪ್ರಚೋದನೆ ಕೇಸು ದಾಖಲಿಸಿದ್ದಾರೆ.

    https://www.youtube.com/watch?v=mHzsyglE0is