Tag: police

  • ಪೊಲೀಸರ ಮನೆಯಲ್ಲೇ ಕೈಚಳಕ ತೋರಿಸಿದ ಕಳ್ಳರು

    ಪೊಲೀಸರ ಮನೆಯಲ್ಲೇ ಕೈಚಳಕ ತೋರಿಸಿದ ಕಳ್ಳರು

    ಮಂಡ್ಯ: ಜಿಲ್ಲೆಯ ಕೆ.ಆರ್ ಪೇಟೆ ಪಟ್ಟಣದ ಹೊಸಹೊಳಲು ರಸ್ತೆಯಲ್ಲಿರುವ ಹೇಮಾವತಿ ಜಲಾಶಯದ ವಸತಿ ಸಮುಚ್ಚಯದಲ್ಲಿಯ ಪೊಲೀಸರೊಬ್ಬರ ಮನೆಯಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ.

    ಶೀಲಾ ಚಂದ್ರಶೇಖರ್ ಎಂಬವರ ಮನೆಯಲ್ಲಿ ಶುಕ್ರವಾರ ತಡರಾತ್ರಿ ಕಳ್ಳತನ ನಡೆದಿದೆ. ಶೀಲಾ ಅವರು ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ರೈಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಶೀಲಾ ಅವರ ಮನೆಯಲ್ಲಿ ಯಾರೂ ಇಲ್ಲದ ವೇಳೆ, ರಾತ್ರಿ ಬಾಗಿಲು ಮುರಿದು ಕಳ್ಳತನ ಮಾಡಲಾಗಿದೆ.

    ಮನೆಯ ಬಾಗಿಲು ಮುರಿದು ಒಳನುಗ್ಗಿರೋ ಕಳ್ಳರು ಬೀರುವಿನ ಬಾಗಿಲು ತೆರೆದು ಅದರೊಳಗಿದ್ದ ಸುಮಾರು ಒಂದು ಲಕ್ಷದ 20 ಸಾವಿರ ನಗದು ಹಣ ದೋಚಿದ್ದಾರೆ.

    ನಗದು ದೋಚಿದ ನಂತರ ಮನೆಯ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ಪರಾರಿಯಾಗಿದ್ದಾರೆ. ಇಂದು ಬೆಳಗ್ಗೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಕೆ.ಆರ್.ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕುಡಿದ ಮತ್ತಿನಲ್ಲಿ ಕಾರಿನಲ್ಲೇ ಸಿಇಒ ಪತಿಗೆ ಪತ್ನಿಯಿಂದ ಗುಂಡಿನ ದಾಳಿ

    ಕುಡಿದ ಮತ್ತಿನಲ್ಲಿ ಕಾರಿನಲ್ಲೇ ಸಿಇಒ ಪತಿಗೆ ಪತ್ನಿಯಿಂದ ಗುಂಡಿನ ದಾಳಿ

    ಬೆಂಗಳೂರು: ಕಾರಿನಲ್ಲಿ ಬರುತ್ತಿರುವಾಗ ಸಿಟ್ಟಾದ ಹೆಂಡತಿಯೊಬ್ಬಳು ಗಂಡನ ಮೇಲೆ ಗುಂಡು ಹಾರಿಸಿದ ಘಟನೆ ಹೊಸೂರು ಮುಖ್ಯ ರಸ್ತೆ ಹೆಬ್ಬಗೋಡಿ ಬಳಿ ಶುಕ್ರವಾರ ಸಂಜೆ ನಡೆದಿದೆ.

    ಎಚ್.ಎಸ್‍ಆರ್ ಲೇಔಟ್‍ನಲ್ಲಿರುವ ಕಂಪೆನಿಯೊಂದರ ಸಿಇಒ ಸಾಯಿರಾಂ ಮೇಲೆ ಪತ್ನಿ ಹಂಸ ಗುಂಡು ಹಾರಿಸಿದ್ದಾಳೆ. ಗಂಭೀರವಾಗಿ ಗಾಯಗೊಂಡಿರುವ ಸಾಯಿರಾಂ ಅವರನ್ನು ಸ್ಪರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪತ್ನಿ ಹಂಸಳನ್ನು ಈಗ ಬಂಧಿಸಿದ್ದಾರೆ.

    ಏನಿದು ಘಟನೆ:
    ಹೊಸೂರಿನಿಂದ ಬೆಂಗಳೂರಿಗೆ ದಂಪತಿ ಕಾರಿನಲ್ಲಿ ಬರುತ್ತಿದ್ದರು. ಬೆಂಗಳೂರಿನ ಹೊರವಲಯದ ಅತ್ತಿಬೆಲೆ ಸಮೀಪದ ಎಸ್.ಕೆ ಗಾರ್ಡನ್ ರೆಸ್ಟೋರೆಂಟ್‍ನಲ್ಲಿ ಇವರಿಬ್ಬರು ಮದ್ಯ ಸೇವಿಸಿದ್ದರು. ಬಳಿಕ ಅಲ್ಲಿಯೇ ಗಲಾಟೆ ಮಾಡಿಕೊಂಡು ಹೊರಟಿದ್ದಾರೆ. ಗಲಾಟೆ ಜೋರಾದಾಗ ಸಾಯಿರಾಂ ಹಂಸ ಮೇಲೆ ಹೊಡೆದಿದ್ದಾರೆ. ಗಲಾಟೆ ಜೋರಾಗುತ್ತಿದ್ದಂತೆ ವೀರಸಂದ್ರ ಸಿಗ್ನಲ್‍ನಲ್ಲಿ ಕಾರು ನಿಲ್ಲಿಸಿದ್ದಾಗ ಹೆಂಡತಿ ಗಂಡನ ಮೇಲೆ ಇದ್ದಕ್ಕಿದ್ದಂತೆ ಗುಂಡಿನ ದಾಳಿ ನಡೆಸಿದ್ದಾಳೆ.

    ಸಿಗ್ನಲ್ ನಲ್ಲಿ ಈ ದೃಶ್ಯವನ್ನು ನೋಡಿದ ಪಕ್ಕದಲ್ಲಿದ್ದವರು ಸಹಾಯಕ್ಕೆ ಬಂದಾಗ ಅವರ ಮೇಲೂ ಗುಂಡಿನ ದಾಳಿ ಮಾಡಲು ಹಂಸ ಮುಂದಾಗಿದ್ದಾಳೆ.  ಅಂಬುಲೆನ್ಸ್ ಬಂದ ಮೇಲೆ ಗಂಡನನ್ನು ಕರೆದೊಯ್ಯದಂತೆ ಪಟ್ಟು ಹಿಡಿದು ಕುಳಿತಿದ್ದಳು. ಕೊನೆಗೆ ಪೊಲೀಸರು ಆಕೆಯನ್ನು ಮನ ಒಲಿಸಿ ಅಂಬುಲೆನ್ಸ್ ನಲ್ಲಿ ಸಾಯಿರಾಂ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಈಗ ಸಾಯಿರಾಂ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೂರು ಗುಂಡುಗಳು ಹೊಟ್ಟೆಯಲ್ಲಿದ್ದು ಆಪರೇಷನ್ ನಡೆಯುತ್ತಿದೆ.

  • ಪತ್ನಿಗಾಗಿ ಪೊಲೀಸ್ ಠಾಣೆ ಎದುರು ಕ್ರಿಮಿನಾಶಕ ಕುಡಿದ ಪತಿ!

    ಪತ್ನಿಗಾಗಿ ಪೊಲೀಸ್ ಠಾಣೆ ಎದುರು ಕ್ರಿಮಿನಾಶಕ ಕುಡಿದ ಪತಿ!

    ರಾಯಚೂರು: ನನ್ನ ಪತ್ನಿಯನ್ನ ನನ್ನ ಮನೆಗೆ ಕಳುಹಿಸಿ ಕೊಡಿ ಅಂತ ಪತಿಯೊಬ್ಬ ಪೊಲೀಸ್ ಠಾಣೆ ಎದುರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಯಚೂರಿನ ಮಾನ್ವಿಯಲ್ಲಿ ನಡೆದಿದೆ.

    ಮಾನ್ವಿಯ ಗವಿಗಟ್ಟ ಗ್ರಾಮದ ಬಸವರಾಜ ಪೊಲೀಸ್ ಠಾಣೆ ಎದುರೇ ಕ್ರಿಮಿನಾಶಕ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಹಿರೇಕೊಟ್ನೆಕಲ್ ಗ್ರಾಮದ ಯುವತಿಯನ್ನ ಮದುವೆಯಾಗಿದ್ದ ಬಸವರಾಜ್ ಪತ್ನಿಗೆ ಕೌಟುಂಬಿಕ ಕಲಹ ಹಿನ್ನೆಲೆ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಗರ್ಭಿಣಿ ಪತ್ನಿ ತವರು ಮನೆ ಸೇರಿಕೊಂಡಿದ್ದಳು.

    ಬಸವರಾಜ್ ಪತ್ನಿಯ ತವರು ಮನೆಗೆ ತೆರಳಿ ಮರಳಿ ಬರುವಂತೆ ಒತ್ತಾಯ ಮಾಡಿದ್ದ ಆದ್ರೆ ಪ್ರಯೋಜನವಾಗಿರಲಿಲ್ಲ, ಜೊತೆಗೆ ಪತ್ನಿ ಕಡೆಯವರ ಜೊತೆ ಹೊಡೆದಾಟ ಮಾಡಿಕೊಂಡಿದ್ದ. ಪತ್ನಿಯನ್ನ ಅವರ ಪೋಷಕರು ಕಳುಹಿಸಲು ಒಪ್ಪದಿದ್ದಾಗ ಬಸವರಾಜ್ ಮಾನ್ವಿ ಪೊಲೀಸ್ ಠಾಣೆಗೆ ಬಂದು ದೂರು ನೀಡಲು ಮುಂದಾಗಿದ್ದ, ಆದ್ರೆ ಪೊಲೀಸರು ಬಸವರಾಜ್‍ಗೆ ಬುದ್ಧಿ ಹೇಳಿ ನಾಳೆ ಬಾ ಅಂತ ಕಳುಹಿಸಿದ್ದರು. ಇದರಿಂದ ಬೇಸತ್ತು ಮೊದಲೇ ಜೊತೆಗೆ ತಂದಿದ್ದ ಕ್ರಿಮಿನಾಶಕವನ್ನ ಎಲ್ಲರ ಎದುರೇ ಕುಡಿದಿದ್ದಾನೆ. ಕೂಡಲೇ ಬಸವರಾಜ್‍ನನ್ನ ಆಸ್ಪತ್ರೆಗೆ ಸೇರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

  • ಜಮೀನಿಗಾಗಿ ಮಹಿಳೆಯನ್ನು ಕಂಬಕ್ಕೆ ಕಟ್ಟಿ ಥಳಿಸಿದ ಕುಟುಂಬ

    ಜಮೀನಿಗಾಗಿ ಮಹಿಳೆಯನ್ನು ಕಂಬಕ್ಕೆ ಕಟ್ಟಿ ಥಳಿಸಿದ ಕುಟುಂಬ

    ಹಾಸನ: ಮಹಿಳೆಯೊಬ್ಬರನ್ನು ಕಂಬಕ್ಕೆ ಕಟ್ಟಿಹಾಕಿ ಥಳಿಸಿರುವ ಅಮಾನವೀಯ ಘಟನೆ ಹಾಸನ ತಾಲೂಕಿನ ತಿಮ್ಮೇನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಸುಜಾತಾ ಎಂಬವರೇ ಹಲ್ಲೆಗೊಳಗಾದ ಮಹಿಳೆ. ಜಮೀನು ಕಬಳಿಸುವ ಸಲುವಾಗಿ ಅದೇ ಗ್ರಾಮದ ಮಳಲಿಗೌಡ ಮತ್ತು ಅವನ ಕುಟುಂಬಸ್ಥರು ಸುಜಾತ ಅವರನ್ನು ಕಟ್ಟಿಹಾಕಿ ಹಲ್ಲೆ ಮಾಡಿದ್ದಾರೆ. ಸುಜಾತಾ ಅವರಿಗೆ ಬಂದಿದ್ದ ತಾಯಿಯ ಪಾಲಿನ 3 ಎಕರೆ ಜಮೀನು ಕಬಳಿಸಲು ಮಳಲಿಗೌಡ ಹಲ್ಲೆ ನಡೆಸಿದ್ದಾನೆ.

    ಸುಜಾತಾ ಪತಿ ಗಿಡ್ಡೆಗೌಡ

    ಸುಜಾತಾ ಅವರು ಪತಿ ಗಿಡ್ಡೆಗೌಡ ಎಂಬವರೊಂದಿಗೆ ವಾಸವಾಗಿದ್ದು, ತಿಮ್ಮೇನಹಳ್ಳಿಯಲ್ಲಿ ಸುಮಾರು 11 ವರ್ಷಗಳಿಂದ ವ್ಯವಸಾಯ ಮಾಡಿಕೊಂಡಿದ್ದರು. ಮುಳುಗಡೆಯಾಗಿದ್ದ ನಮ್ಮ ಆಸ್ತಿಯ ಬದಲಾಗಿ ಸರ್ಕಾರ ನಮಗೆ ಈ ಜಮೀನನ್ನು ನೀಡಿತ್ತು. ಕಳೆದ 11 ವರ್ಷಗಳಿಂದ ಇಲ್ಲಿ ನಾವೇ ಕೃಷಿ ಮಾಡುತ್ತಿದ್ದೇವೆ. ಈ ಜಮೀನಿನ ಮೇಲೆ ಲೋನ್ ಸಹ ತೆಗೆದುಕೊಂಡಿದ್ದೇವೆ. ಆದ್ರೆ ಈ ಜಮೀನು ಪಡೆಯುವ ದುರಾಲೋಚನೆಯಿಂದ ಮಳಲಿಗೌಡ ಮತ್ತು ಅವರ ಮನೆಯವರು ವಿನಾಕಾರಣ ನಮ್ಮ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ. ನನ್ನನ್ನು ಕಂಬಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆ ಎಂದು ಸುಜಾತಾ ಹೇಳಿದ್ದಾರೆ

    ಪತ್ನಿಯನ್ನು ಕಟ್ಟಿಹಾಕಿ ಹಲ್ಲೆ ನಡೆಸಿರುವ ವಿಷಯ ತಿಳಿದ ಪತಿ ಗಿಡ್ಡೇ ಗೌಡ ಹಾಸನ ಪೊಲೀಸರೊಂದಿಗೆ ಗ್ರಾಮಕ್ಕೆ ಆಗಮಿಸಿ ಸುಜಾತರನ್ನು ರಕ್ಷಿಸಿದ್ದಾರೆ. ಇನ್ನು ಗಾಯಗೊಂಡ ಸುಜಾತರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಮಳಲೀಗೌಡ, ಮಂಜುನಾಥ್, ಸಿಂಚನ್ ಹಾಗೂ ಆಶಾ ಎಂಬವರ ವಿರುದ್ಧ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

     

  • ಹುಡುಗರೇ ಬೀ ಕೇರ್‍ಫುಲ್.. ಫೇಸ್‍ಬುಕ್‍ನಲ್ಲಿದೆ ಹೋಮೊ ಸೆಕ್ಸ್ ಪೇಜ್!

    ಹುಡುಗರೇ ಬೀ ಕೇರ್‍ಫುಲ್.. ಫೇಸ್‍ಬುಕ್‍ನಲ್ಲಿದೆ ಹೋಮೊ ಸೆಕ್ಸ್ ಪೇಜ್!

    – ಹುಡುಗನ ಮೇಲೆ ಹುಡುಗರಿಂದಲೇ ಅತ್ಯಾಚಾರ, ಕೊಲೆ

    ಬೆಂಗಳೂರು: ನಗರದಲ್ಲಿ ಹುಡ್ಗಿರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಯತ್ನ ಪ್ರಕರಣಗಳು ಹೆಚ್ಚಾಗ್ತಿದ್ದು, ಹೆಣ್ಮಕ್ಕಳು ಸೇಫ್ ಅಲ್ಲ ಅಂತಾರೆ. ಇಲ್ಲಿ ಹೆಣ್ಣು ಮಕ್ಳಿಗೆ ಮಾತ್ರ ಅಲ್ಲ ಗಂಡು ಮಕ್ಕಳೂ ಸೇಫ್ ಅಲ್ಲ. ಗಂಡು ಮಕ್ಕಳ ಜೊತೆ ಲೈಂಗಿಕ ಸಂಪರ್ಕ ಹೊಂದೋದಕ್ಕೆ ಕೆಲವರು ಹೊಂಚು ಹಾಕುತ್ತಿದ್ದಾರೆ.

    ಜನವರಿಯಲ್ಲಿ ಹೊಸ ವರ್ಷ ಸಂಭ್ರಮಾಚರಣೆಯಾದಾಗಿನಿಂದ ಹೆಣ್ಣು ಮಕ್ಕಳ ಮೇಲೆ ಒಂದಲ್ಲ ಒಂದು ಲೈಂಗಿಕ ದೌರ್ಜನ್ಯ ಪ್ರರಕಣಗಳು ಬೆಳಕಿಗೆ ಬರ್ತಾನೆ ಇವೆ. ಆದರೆ ಹೆಣ್ಣು ಮಕ್ಕಳು ಮಾತ್ರ ಅಲ್ಲ ಗಂಡು ಮಕ್ಕಳಿಗೂ ಸಹ ಭದ್ರತೆ ಇಲ್ಲ. ಒಂಟಿಯಾಗಿದ್ರೆ ಗಂಡು ಮಕ್ಕಳ ಮೇಲೂ ಬೆಂಗಳೂರಲ್ಲಿ ಅತ್ಯಾಚಾರ ಆಗ್ತಾ ಇದೆ. ಅದು ಕೂಡ ಗಂಡು ಮಕ್ಕಳಿಂದಲೇ. ಬೆಂಗಳೂರು ಕರಗದ ದಿನ ಹುಡುಗನೊಂದಿಗೆ ಹೋಮೋ ಸೆಕ್ಸ್ ಮಾಡಲು ಹೋಗಿ ಹುಡಗನನ್ನೇ ಕೊಲೆ ಮಾಡಿ ಹೋಗಿದ್ದಾರೆ.

    ಹುಡುಗನನ್ನು ಕೊಲೆ ಮಾಡಿದ ಹುಡುಗ್ರು ಫೇಸ್‍ಬುಕ್ ಪೇಜ್‍ನಲ್ಲಿ ಹೋಮೋ ಸೆಕ್ಸ್ ಇಂಟ್ರೆಸ್ಟ್ ಇರೋರ ಗುಂಪು ಮಾಡಿಕೊಂಡು ಹುಡುಗ್ರನ್ನ ತಮ್ಮತ್ತ ಸೆಳೆಯುತ್ತಾರೆ. ಇತ್ತ ಬೆಂಗಳೂರಿನ ಕಲಾಸಿಪಾಳ್ಯ ಮಾರುಕಟ್ಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿರೋ ಮುರಳಿ ಕೊಲೆ ಪ್ರಕರಣದಲ್ಲಿ ‘ಗೇ’ ಹುಡುಗರ ಪಾತ್ರ ಇರೋದು ಗೊತ್ತಾಗಿದೆ. ಕರಗದ ದಿನವೂ ಇದೇ ರೀತಿ ಮುರಳಿ ಎಂಬವರೊಂದಿಗೆ ಲೈಂಗಿಕ ಸಂಪರ್ಕ ನಡೆಸಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಆದ್ರೆ ಕೊಲೆಗಾರ ಮಾತ್ರ ಇನ್ನೂ ಸಿಕ್ಕಿಲ್ಲ.

    ಕೊಲೆಯಾದ ಯುವಕನ ಶವ ಪರೀಕ್ಷೆಯ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.

  • ಹಾಸನ: ಪತಿಗೆ ವಿಷದ ಇಂಜೆಕ್ಷನ್ ನೀಡಿ ಕೊಲೆ ಕೇಸಿಗೆ ಮತ್ತೊಂದು ಟ್ವಿಸ್ಟ್

    ಹಾಸನ: ಪತಿಗೆ ವಿಷದ ಇಂಜೆಕ್ಷನ್ ನೀಡಿ ಕೊಲೆ ಕೇಸಿಗೆ ಮತ್ತೊಂದು ಟ್ವಿಸ್ಟ್

    ಹಾಸನ: ಪತ್ನಿಯೇ ಪತಿಗೆ ಜ್ಯೂಸ್ ನಲ್ಲಿ ನಿದ್ದೆ ಮಾತ್ರೆ ಕುಡಿಸಿ ಇಂಜೆಕ್ಷನ್ ನೀಡಿ ಹತ್ಯೆ ಮಾಡಿದ ಆರೋಪ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಆರೋಪಿಯಾಗಿರುವ ಪತ್ನಿಗೆ ಬೇರೊಬ್ಬನ ಜೊತೆ ಸ್ನೇಹ ಇರುವ ವಿಚಾರ ಈಗ ಬೆಳಕಿಗೆ ಬಂದಿದೆ.

    ಹಾಸನ ತಾಲೂಕು ಕಿತ್ತನಕೆರೆಯಲ್ಲಿ ಕೃಷಿ ಮಾಡುತ್ತಿದ್ದ ವಿಶ್ವನಾಥ್ ಮತ್ತು ಮೆಡಿಕಲ್ ಶಾಪ್ ನಲ್ಲಿ ಉದ್ಯೋಗದಲ್ಲಿದ್ದ ಕೌಶಿಕ ಗ್ರಾಮದ ಆಶಾ ಫೆಬ್ರವರಿಯಲ್ಲಿ ಮದುವೆಯಾಗಿದ್ದರು. ಆದರೆ ಈ ಮದುವೆಗೆ ಮೊದಲು ಸಂತೋಷ್ ಎಂಬಾತನ ಜೊತೆ ಆಶಾ ಸ್ನೇಹ ಬೆಳೆಸಿದ್ದಳು. ಕಳೆದ ಐದಾರು ವರ್ಷಗಳ ಹಿಂದಿನಿಂದಲೂ ಆಶಾ ಮತ್ತು ಸಂತೋಷ್ ಗೆಳೆತನ ಹೊಂದಿದ್ದು, ಮದುವೆಯಾಗಿ ಮೂರು ತಿಂಗಳಾಗಿದ್ದರೂ ಆಶಾ ಅಂತರ ಕಾಯ್ದುಕೊಂಡಿದ್ದಳು.

    ಪ್ರವಾಸ ಹೋಗಿದ್ದ ವೇಳೆ ಆಶಾಳಿಗೆ ಪರಿಚಯವಾಗಿದ್ದ ಸಂತೋಷ್ ನಂತರ ಆಕೆಯ ಜೊತೆ ನಿರಂತರ ಸಂಪರ್ಕದಲ್ಲಿದ್ದ. ಅಷ್ಟೇ ಅಲ್ಲದೇ ಆಶಾಳಿಗೆ ಮೊಬೈಲ್ ಕೊಡಿಸಿದ್ದ. ಈ ಎಲ್ಲ ಮಾಹಿತಿಯನ್ನು ಆಶಾಳ ಮಾವ ಬೋರಶೆಟ್ಟಿ ತಿಳಿಸಿದ್ದು, ಈ ಕೊಲೆಗೆ ಸಂತೋಷ್ ಸಂಚು ರೂಪಿಸಿರುವ ಶಂಕೆ ವ್ಯಕ್ತವಾಗಿದೆ.

    ಏನಿದು ಕೊಲೆ ಕೇಸ್?
    ವಿಶ್ವನಾಥ್ ಮತ್ತು ಆಶಾ, ಹತ್ತಿರದ ಸಂಬಂಧಿಗಳಾಗಿದ್ದರಿಂದ ಚಿಕ್ಕಂದಿನಿಂದಲೂ ಒಟ್ಟಿಗೆ ಬೆಳೆದಿದ್ದರು. ಈ ಕಾರಣಕ್ಕೆ ಫೆಬ್ರವರಿ 15 ರಂದು ಇವರಿಬ್ಬರ ಮದುವೆ ನಡೆದಿತ್ತು. ಮದುವೆಗೆ ಎರಡೂ ಮನೆಯವರ ಸಹಕಾರವಿತ್ತು. ಮದುವೆಯಾದ ಒಂದೆರಡು ತಿಂಗಳವರೆಗೂ ನವಜೋಡಿ ಸಂಬಂಧಿಕರ ಮನೆ, ಸಿನಿಮಾ ಹೀಗೆ ಎಲ್ಲಾ ಕಡೆ ಓಡಾಡಿಕೊಂಡಿದ್ದರು. ಆದ್ರೆ ಇಬ್ಬರ ನಡುವೆ ಏನಾಯಿತೋ ಏನೋ ಮದುವೆಯಾದ ಎರಡೇ ತಿಂಗಳಿಗೆ ದಾಂಪತ್ಯದಲ್ಲಿ ಬಿರುಕು ಮೂಡಿತ್ತು.

    ಆದರೆ ಸಂಬಂಧ ಹಾಳಾಗಲಿದೆ ಎನ್ನುವ ಒಂದೇ ಕಾರಣಕ್ಕೆ ಈ ವಿಷಯವನ್ನು ವಿಶ್ವನಾಥ್ ಯಾರ ಬಳಿಯೂ ಹೇಳಿರಲಿಲ್ಲ. ಕಳೆದ ಏಪ್ರಿಲ್ 24 ರಂದು ಸಂಬಂಧಿಕರ ಮಗುವಿನ ನಾಮಕರಣಕ್ಕೆ ಹೋಗಬೇಕು ಎಂದು ಗಂಡನೊಂದಿಗೆ ಹಾಸನಕ್ಕೆ ಆಶಾ ಹೋಗಿದ್ದಳು. ಮಹಾರಾಜ ಪಾರ್ಕ್ ನಲ್ಲಿ ಇಬ್ಬರು ಕುಳಿತುಕೊಂಡಿದ್ದ ವೇಳೆ ಏಕಾಏಕಿ ಕುಸಿದು ಬಿದ್ದ ವಿಶ್ವನಾಥ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಸಂಜೆ ಮನೆಗೆ ಬಂದ ವಿಶ್ವನಾಥ್ ನಡೆದ ಘಟನೆಯನ್ನು ವಿವರಿಸಿದ್ದಾರೆ. ಮಾರನೇ ದಿನ ಅನಾರೋಗ್ಯಕ್ಕೆ ತುತ್ತಾಗಿದ್ದ ವಿಶ್ವನಾಥ್ ಅವರನ್ನು ಹಾಸನ, ಅಲ್ಲಿಂದ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ವಿಶ್ವನಾಥ್ ಅವರು ಮೇ 2ರ ಸಂಜೆ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

    ವಿಶ್ವನಾಥ್ ಹೇಳಿದ್ದೇನು?
    ಮದುವೆಯಾದ ಬಳಿಕ ಹುಟ್ಟುವ ಮಗುವಿನ ಬಗ್ಗೆ ನಮ್ಮಲ್ಲಿ ಚರ್ಚೆ ನಡೆದಿತ್ತು. ಮಹಾರಾಜ ಪಾರ್ಕ್ ನಲ್ಲಿ ನಾವು ಕುಳಿತ್ತಿದ್ದಾಗ ಆಶಾ ಭವಿಷ್ಯದಲ್ಲಿ ಹುಟ್ಟುವ ಮಗು ಬೆಳ್ಳಗಿರಬೇಕು ಎಂದು ಹೇಳಿ ಮಾತ್ರೆ ಮತ್ತು ಜ್ಯೂಸ್ ನೀಡಿದ್ದಳು. ಆಕೆಯ ಮಾತನ್ನು ನಂಬಿ ನಾನು ಜ್ಯೂಸ್‍ನೊಂದಿಗೆ 4-5 ಮಾತ್ರೆ ನುಂಗಿದ್ದೇನೆ. ಬಳಿಕ ಆಕೆ ಇಂಜೆಕ್ಷನ್ ನೀಡಿದ್ದಾಳೆ. ಬಳಿಕ ನನಗೆ ಏನಾಯ್ತು ಗೊತ್ತಿಲ್ಲ ಎಂದು ಎಂದು ವಿಶ್ವನಾಥ್ ಸಂಬಂಧಿಕರಿಗೆ ಆಸ್ಪತ್ರೆಯಲ್ಲಿ ತಿಳಿಸಿದ್ದರು.

    ಸಂಬಂಧಿಕರು ಹೇಳೋದು ಏನು?
    ಗಂಡ ತನ್ನ ಬಣ್ಣಗೆ ಮ್ಯಾಚ್ ಆಗಲ್ಲ. ನನಗಿಂತ ಎತ್ತರ ಆಗಿದ್ದಾನೆ ಎಂದು ಆಶಾ ನಿಂದಿಸುತ್ತಿದ್ದಳು. ಆಶಾ ಮೊದಲೇ ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದುರಿಂದ ಆಕೆ ದುರುದ್ದೇಶದಿಂದಲೇ ಹೀಗೆ ಮಾಡಿದ್ದಾಳೆ. ಅಲ್ಲದೇ ಆಕೆಗೆ ಬೇರೊಬ್ಬರೊಂದಿಗೆ ಸಂಬಂಧ ಇಟ್ಟುಕೊಂಡಿದ್ದಳು. ಈ ವಿಚಾರ ತಿಳಿದು ಮುಂದೆ ಗಂಡ ಎಲ್ಲಿ ಅಡ್ಡಿ ಬರುತ್ತಾನೋ ಎಂಬ ಕಾರಣದಿಂದ ವಿಷದ ಜ್ಯೂಸ್ ನೀಡಿದ್ದಾಳೆ. ಪತಿ ಪ್ರಜ್ಞೆ ತಪ್ಪಿ ಬಿದ್ದ ಬಳಿಕ ಆಕೆ ಅಲ್ಲಿಂದ ಪರಾರಿಯಾಗಿದ್ದಾಳೆ ಎಂದು ವಿಶ್ವನಾಥ್ ಅವರ ತಂದೆ ಬೋರ ಶೆಟ್ಟಿ ಆರೋಪಿಸಿದ್ದಾರೆ.

    ತನಿಖೆ ಎಲ್ಲಿಯವರೆಗೆ ಬಂದಿದೆ?
    ವಿಶ್ವನಾಥ್ ಮನೆಯವರು ನೀಡಿದ ದೂರು ಆಧರಿಸಿ ಆಶಾಳನ್ನು ವಶಕ್ಕೆ ಪಡೆದಿರುವ ಹಾಸನ ಗ್ರಾಮಾಂತರ ಠಾಣೆ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಆ ವರದಿ ಬಂದ ನಂತರ ವಿಶ್ವನಾಥ್ ಸಾವಿನ ರಹಸ್ಯ ತಿಳಿಯಲಿದೆ ಎಂದು ಪೊಲೀಸ್ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

  • ಹೊಲದಲ್ಲಿ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ!

    ಹೊಲದಲ್ಲಿ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ!

    ಹುಬ್ಬಳ್ಳಿ: ಹೊಲದ ಬಳಿ ವ್ಯಕ್ತಿಯೊಬ್ಬರನ್ನು ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಕೊಲೈಗೈದ ಘಟನೆ ಹುಬ್ಬಳ್ಳಿಯ ಗಬ್ಬೂರ ಕ್ರಾಸ್ ಬಳಿ ನಡೆದಿದೆ.

    ಮೃತ ವ್ಯಕ್ತಿಯ ಬಗ್ಗೆ ಗುರುತು ಪತ್ತೆಯಾಗಿಲ್ಲ. ಆದ್ರೆ ಪೊಲೀಸರು ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ರೈತನ ಕೊಲೆಯಾಗಿರಬಹುದು ಅಂತಾ ಶಂಕಿಸಿದ್ದಾರೆ.

    ಬಸವರಾಜ ಸತ್ತೂರ ಎಂಬುವರ ಜಮೀನಿನಲ್ಲಿ ಹತ್ಯೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಹೊಲದ ಬಳಿ ಕರೆತಂದು ಕುತ್ತಿಗೆಗೆ ಮಚ್ಚಿನಿಂದ ಕೊಚ್ಚಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಸುಮಾರು 45ವರ್ಷ ವಯಸ್ಸಿನ ವ್ಯಕ್ತಿಯ ಶವವಾಗಿದೆ. ಕೊಲೆಯಾದ ವ್ಯಕ್ತಿ ಬಗ್ಗೆ ಇನ್ನಷ್ಟೇ ತಿಳಿದುಬರಬೇಕಿದೆ. ಮೃತ ವ್ಯಕ್ತಿ ರೈತನಿರಬೇಕು ಎಂಬುದು ಆತನ ಬಟ್ಟೆಗಳಿಂದ ಗೊತ್ತಾಗುತ್ತಿದ್ದು, ಹಳೇ ವೈಷಮ್ಯವೇ ಕೊಲೆಗೆ ಕಾರಣವಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

    ಈ ಸಂಬಂಧ ಬೆಂಡಿಗೇರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀನೆ ನಡೆಸಿದ್ದಾರೆ.

  • ಶಾಕಿಂಗ್ ವಿಡಿಯೋ: ಬೇಕಂತಲೇ ಪಾದಚಾರಿಯ ಮೇಲೆ ಕಾರ್ ಹರಿಸಿದ ಪೊಲೀಸ್

    ಶಾಕಿಂಗ್ ವಿಡಿಯೋ: ಬೇಕಂತಲೇ ಪಾದಚಾರಿಯ ಮೇಲೆ ಕಾರ್ ಹರಿಸಿದ ಪೊಲೀಸ್

    ಮುಂಬೈ: ಪೊಲೀಸ್ ಸಿಬ್ಬಂದಿಯೊಬ್ಬರು ವ್ಯಕ್ತಿಯ ಮೇಲೆ ಬೇಕಂತಲೇ ಕಾರ್ ಹರಿಸಲು ಮುಂದಾದ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸರೆಯಾಗಿದೆ.

    ಸಮವಸ್ತ್ರ ಧರಿಸದ ಈ ಪೊಲೀಸ್ ಪೇದೆಯನ್ನ ರಮೇಶ್ ಅವಾಟೆ ಎಂದು ಗುರುತಿಸಲಾಗಿದೆ. ಥಾಣೆಯ ಮಾರುಕಟ್ಟೆಯೊಂದರಲ್ಲಿ ರಮೇಶ್ ವ್ಯಕ್ತಿಯೊಬ್ಬರಿಗೆ ಕಾರಿನಿಂದ ಡಿಕ್ಕಿ ಹೊಡೆಯೋದನ್ನ ವಿಡಿಯೋದಲ್ಲಿ ನೋಡಬಹುದು. ನಂತರ ಪಾದಚಾರಿ ಅತುಲ್ ಪಾಟೇ ಪೇದೆ ರಮೇಶ್ ಅವರ ಇನ್ನೋವಾ ಕಾರಿನ ಮೇಲೆ ಬಿದ್ದಿದ್ದು, ರಮೇಶ್ ಕಾರನ್ನು ಹಾಗೆ ಚಾಲನೆ ಮಾಡಿಕೊಂಡು ಸ್ವಲ್ಪ ದೂರ ಹೋಗಿದ್ದಾರೆ.

    ನಂತರ ಅತುಲ್ ಕಾರಿನಿಂದ ಕೆಳಗೆ ಬಿದ್ದಿದ್ದು, ಅದೃಷ್ಟವಶಾತ್ ಅವರಿಗೆ ಯಾವುದೇ ಗಾಯಗಳಾಗಿಲ್ಲ.

    ಅತುಲ್ ಅವರು 3 ಲಕ್ಷ ರೂ ಸಾಲದ ಹಣವನ್ನ ಹಿಂದಿರುಗಿಸದೇ ಇದ್ದ ಕಾರಣ ರಮೇಶ್ ಈ ರೀತಿ ಮಾಡಿದ್ದಾರೆ ಎಂದು ವರದಿಯಾಗಿದೆ. ಸದ್ಯ ಪೇದೆ ರಮೇಶ್ ತಲೆಮರೆಸಿಕೊಂಡಿದ್ದಾರೆ.

    ಈ ಘಟನೆಯ ದೃಶ್ಯಾವಳಿ ಹತ್ತಿರದ ಅಂಗಡಿಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

  • ಕರ್ನಾಟಕದಲ್ಲಿ ಫಸ್ಟ್: ಅವಹೇಳನಕಾರಿ ಪೋಸ್ಟ್ ಪ್ರಕಟವಾಗಿದ್ದಕ್ಕೆ ವಾಟ್ಸಪ್ ಅಡ್ಮಿನ್ ಅರೆಸ್ಟ್

    ಕರ್ನಾಟಕದಲ್ಲಿ ಫಸ್ಟ್: ಅವಹೇಳನಕಾರಿ ಪೋಸ್ಟ್ ಪ್ರಕಟವಾಗಿದ್ದಕ್ಕೆ ವಾಟ್ಸಪ್ ಅಡ್ಮಿನ್ ಅರೆಸ್ಟ್

    ಕಾರವಾರ: ವಾಟ್ಸಪ್ ನಲ್ಲಿ ನೀವು ಅಡ್ಮಿನ್ ಆಗಿದ್ದೀರಾ? ಹಾಗಾದ್ರೆ ಹುಷಾರಾಗಿರಿ. ಗ್ರೂಪಿನಲ್ಲಿ ಬೇರೆಯವರು ಅವಹೇಳನಕಾರಿ ಸಂದೇಶ ಕಳುಹಿಸಿದ್ರೆ ನೀವು ಜೈಲಿಗೆ ಹೋಗಬೇಕಾದಿತು.

    ಹೌದು. ವಾಟ್ಸಪ್ ಗ್ರೂಪ್ ನಲ್ಲಿ ಅವಹೇಳನಕಾರಿ ಪೋಸ್ಟ್ ಪ್ರಕಟವಾಗಿದ್ದಕ್ಕೆ ಗ್ರೂಪ್ ಅಡ್ಮಿನ್ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ ಮೊದಲ ಪ್ರಕರಣ ಉತ್ತರಕನ್ನಡ ಜಿಲ್ಲೆಯ ಮುರ್ಡೇಶ್ವರದ ಬೈಲೂರಿನಲ್ಲಿ ನಡೆದಿದೆ.

    ಮುರ್ಡೇಶ್ವರದ ಬೈಲೂರು ವ್ಯಾಪ್ತಿಯ ದೊಡ್ಡಬಲ್ಸೆ ನಿವಾಸಿ ಕೃಷ್ಣ ಸಣ್ಣತಮ್ಮ ನಾಯ್ಕ(30) ಬಂಧಿತ ಆರೋಪಿ. ರಿಕ್ಷಾ ಚಾಲಕನಾಗಿದ್ದ ಈತ `ಡಿ ಬಲ್ಸೆ ಬಾಯ್ಸ್’ ಎಂಬ ವಾಟ್ಸಪ್ ಗ್ರೂಪಿನ ಅಡ್ಮಿನ್ ಆಗಿದ್ದ.

    ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ತಿರುಚಿ ಅಶ್ಲೀಲಗೊಳಿಸಿ ಅವಹೇಳನ ಮಾಡಿದ್ದ ಫೋಟೋ ಈ ಗ್ರೂಪ್ ನಲ್ಲಿ ಪ್ರಕಟವಾದ ಹಿನ್ನೆಲೆಯಲ್ಲಿ ಆನಂದ ಮಂಜುನಾಥ ನಾಯ್ಕ ಎಂಬುವರು ಮುರುಡೇಶ್ವರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿ ಗಣೇಶ ನಾಯ್ಕ ಎಂಬಾತನನ್ನೂ ಪೊಲೀಸರು ಬಂಧಿಸಿದ್ದು ಆತನಿಗೆ ನ್ಯಾಯಾಲಯದಲ್ಲಿ ಜಾಮೀನು ದೊರೆತಿದೆ. ಬಾಲಕೃಷ್ಣ ನಾಯ್ಕ ಎಂಬಾತ ತಲೆ ಮರೆಸಿಕೊಂಡಿದ್ದು ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ಏಪ್ರಿಲ್ ಕೊನೆಯ ವಾರದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಗಲಭೆಗಳಿಗೆ ಪ್ರಚೋದನೆ ನೀಡುವಂತಹ ವಿಚಾರಗಳನ್ನು ಹಾಕುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ಉತ್ತರಪ್ರದೇಶದ ವಾರಣಾಸಿ ಜಿಲ್ಲೆಯ ಪೊಲೀಸರು ಮುಂದಾಗಿದ್ದರು.

    ಈ ವಿಚಾರವಾಗಿ ವಾರಣಾಸಿಯ ಜಿಲ್ಲಾಧಿಕಾರಿ ಯೋಗೇಶ್ವರ್ ರಾಮ್ ಮಿಶ್ರಾ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿತಿನ್ ತಿವಾರಿ ಜಂಟಿ ಆದೇಶವನ್ನು ಹೊರಡಿಸಿದ್ದರು. ಈ ಆದೇಶದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ, ವದಂತಿಯನ್ನು ಹರಡಿದರೆ ಆ ಗ್ರೂಪಿನ ಅಡ್ಮಿನ್ ಮೇಲೆ ಸೈಬರ್ ಕ್ರೈಮ್ ಕಾನೂನು, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗುವುದು ಎಂದು ತಿಳಿಸಿದ್ದರು.

    ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ನ್ಯೂಸ್ ಹೆಸರಿನಲ್ಲಿ ಗ್ರೂಪ್‍ಗಳು ಕ್ರಿಯೇಟ್ ಆಗಿವೆ. ಆದರೆ ಈ ಗ್ರೂಪ್‍ಗಳಲ್ಲಿ ಸುಳ್ಳು ಸುದ್ದಿಗಳು ಪ್ರಕಟವಾಗುತ್ತಿದ್ದು, ಕ್ರಾಸ್ ಚೆಕ್ ಮಾಡದೇ ಸುದ್ದಿಗಳನ್ನು ಶೇರ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲು ಮುಂದಾಗಿದ್ದೇವೆ ಎಂದು ಜಿಲ್ಲಾಡಳಿತ ತಿಳಿಸಿತ್ತು.

    ಗ್ರೂಪಿನಲ್ಲಿ ಸದಸ್ಯನೊಬ್ಬ ಸುಳ್ಳು ಸುದ್ದಿ ಅಥವಾ ಧಾರ್ಮಿಕ ಸೌಹಾರ್ದತೆಗೆ ಅಡ್ಡಿ ತರುವಂತಹ ವಿಚಾರ, ವದಂತಿಯನ್ನು ಹಾಕಿದ್ರೆ ಅಡ್ಮಿನ್ ಆದವನು ಕೂಡಲೇ ಆತನನ್ನು ಗ್ರೂಪ್‍ನಿಂದ ಕಿತ್ತು ಹಾಕಬೇಕು. ಈ ರೀತಿಯ ಸಂದೇಶಗಳು ಹರಿದಾಡಿದರೆ ಜನರು ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ನೀಡಬಹುದು. ಬುಧವಾರ ಈ ಆದೇಶ ಪ್ರಕಟವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ವ್ಯಕ್ತಪಡಿಸಲು ಅವಕಾಶವಿದೆ. ಇದರ ಜೊತೆಗೆ ಜವಾಬ್ದಾರಿಯೂ ಇದೆ ಎಂದು ತಿಳಿಸಲಾಗಿತ್ತು.

    ಇದನ್ನೂ ಓದಿ:ವಾಟ್ಸಪ್‍ನಲ್ಲಿ ಸ್ಮೈಲೀ ಕಳುಹಿಸಿದ್ರೆ ಬೀಳುತ್ತೆ ಕೇಸ್!

  • ಬೆಂಗಳೂರಿನ ಸಾರ್ವಜನಿಕ ರಸ್ತೆಯಲ್ಲಿ ರಾತ್ರಿ ನಟಿಯನ್ನು ಎಳೆದಾಡಿ ಅಸಭ್ಯ ವರ್ತನೆ

    ಬೆಂಗಳೂರಿನ ಸಾರ್ವಜನಿಕ ರಸ್ತೆಯಲ್ಲಿ ರಾತ್ರಿ ನಟಿಯನ್ನು ಎಳೆದಾಡಿ ಅಸಭ್ಯ ವರ್ತನೆ

    ಬೆಂಗಳೂರು: ಕನ್ನಡ ಚಿತ್ರ ನಟಿಯನ್ನು ಇಬ್ಬರು  ಯುವಕರು ಭಾನುವಾರ ರಾತ್ರಿ ಎಳೆದಾಡಿ ಅಸಭ್ಯವಾಗಿ ವರ್ತಿಸಿರುವ ಘಟನೆ ಹೆಗ್ಗನಹಳ್ಳಿಯಲ್ಲಿ ನಡೆದಿದೆ.

    ಸಚಿನ್, ಪ್ರವೀಣ್ ವಿರುದ್ಧ ಈಗ ಚಿತ್ರ ನಟಿ ದೂರು ನೀಡಿದ್ದು, ರಾಜಗೋಪಾಲ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 354ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಸ್ತುತ ಆರೋಪಿಗಳಿಬ್ಬರೂ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

    ನಿನ್ನೆ ಶೂಟಿಂಗ್ ಮುಗಿಸಿ ಮನೆಗೆ ಕಾರಿನಲ್ಲಿ ಬರುತ್ತಿದ್ದಾಗ ಪ್ರವೀಣ್ ಕರೆ ಮಾಡಿ ಮದುವೆಯಾಗುವಂತೆ ಪೀಡಿಸಿದ್ದಾನೆ. ಹೆಗ್ಗನಹಳ್ಳಿಯಲ್ಲಿ ಕಾರು ನಿಲ್ಲಿಸಿದ್ದಾಗ ನನ್ನ ಮೇಲೆ ಇವರಿಬ್ಬರು ಅಸಭ್ಯವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ನೊಂದು ನಾನು ದೂರು ನೀಡಿದ್ದೇನೆ ಎಂದು ನಟಿ ಹೇಳಿದ್ದಾರೆ.

    ಚಿತ್ರ ನಟಿ ಈ ಹಿಂದೆ ಪೋಷಕರ ಜೊತೆ ಕೆ.ಟಿ.ಜಿ.ರಸ್ತೆಯಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಈ ವೇಳೆ ಸಚಿನ್ ಹಾಗೂ ಪ್ರವೀಣ್ ಪರಿಚಯ ನಟಿಗೆ ಆಗಿದ್ದು ಮೂವರು ಸ್ನೇಹಿತರಾಗಿದ್ದರು. ಮೂರು ವರ್ಷದ ಹಿಂದೆ ನಟಿ ತಂದೆ, ತಾಯಿ ಜೊತೆ ವಿಜಯನಗಕ್ಕೆ ಶಿಫ್ಟ್ ಆಗಿದ್ದರು.

    ಶಿಫ್ಟ್ ಆದ ಬಳಿಕ ಪ್ರವೀಣ್ ಅಲಿಯಾಸ್ ಪುಟ್ಟ ನಟಿಗೆ ಫೋನ್ ಮಾಡಿ ನನ್ನನ್ನು ಮದುವೆಯಾಗು ಎಂದು ಪೀಡಿಸುತ್ತಿದ್ದ. ಒಂದು ವೇಳೆ ಲವ್ ಮಾಡದೇ ಇದ್ದರೆ ನಿನಗೆ ಒಂದು ಗತಿ ಕಾಣಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ. ಈ ವೇಳೆ ನಟಿ, ನಿನ್ನನ್ನು ನಾನು ಪ್ರೀತಿ ಮಾಡುವುದಿಲ್ಲ ಎಂದು ಪರಿ ಪರಿಯಾಗಿ ಹೇಳಿದ್ದರೂ ಆತ ಪದೇ ಪದೇ ಪೀಡಿಸುತ್ತಿದ್ದ. ಅಷ್ಟೇ ಅಲ್ಲದೇ ತನ್ನ ಮೊಬೈಲ್‍ನಿಂದ ಅಸಭ್ಯವಾಗಿ ಅಶ್ಲೀಲ ಪದಗಳನ್ನು ಬಳಸಿ ಎಸ್‍ಎಂಎಸ್ ಮಾಡುತ್ತಿದ್ದ. ಎಷ್ಟೇ ಕೇಳಿಕೊಂಡು ಆತನು ನನ್ನನ್ನು ಚುಡಾಯಿಸುತ್ತಿದ್ದಿದ್ದನ್ನು ನಿಲ್ಲಿಸಿರಲಿಲ್ಲ ಎಂದು ನಟಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.