Tag: police

  • ಪೊಲೀಸರಿದ್ರೂ ಮಹಿಳೆಯ ಸೀರೆ ಬಿಚ್ಚಿ ಹಲ್ಲೆ -ಹಾಸನದಲ್ಲೊಂದು ಅಮಾನವೀಯ ಕೃತ್ಯ

    ಪೊಲೀಸರಿದ್ರೂ ಮಹಿಳೆಯ ಸೀರೆ ಬಿಚ್ಚಿ ಹಲ್ಲೆ -ಹಾಸನದಲ್ಲೊಂದು ಅಮಾನವೀಯ ಕೃತ್ಯ

    ಹಾಸನ: ಜಮೀನು ವಿವಾದ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಮಹಿಳೆಯೊಬ್ಬರ ಸೀರೆ ಬಿಚ್ಚಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ದೊಡ್ಡ ಕುಂಚೇವು ಗ್ರಾಮದಲ್ಲಿ ಶುಕ್ರವಾರ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಗ್ರಾಮದ ರಾಜಮ್ಮ ಹಲ್ಲೆಗೊಳಗಾದ ಮಹಿಳೆ. ಗ್ರಾಮದ ಮಂಜೇಗೌಡ ಎಂಬವರು ಮಹಿಳೆಯರನ್ನು ಕರೆದುಕೊಂಡು ಬಂದು ಹಲ್ಲೆ ಮಾಡಿಸಿದ್ದಾರೆ ಎಂದು ರಾಜಮ್ಮ ಆರೋಪಿಸುತ್ತಿದ್ದಾರೆ.

    ರಾಜಮ್ಮ ಮತ್ತು ಪ್ರಮೀಳಾ ಕುಮಾರಿ ಎಂಬವರ ನಡುವೆ ಜಮೀನು ವಿವಾದ ಹಿನ್ನೆಲೆ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿತ್ತು. ಏಪ್ರಿಲ್ ನಲ್ಲಿ ನ್ಯಾಯಾಲಯದ ತೀರ್ಪು ಸಹ ಪ್ರಕಟವಾಗಿತ್ತು. ನ್ಯಾಯಾಲಯದ ತೀರ್ಪಿನ ಪ್ರಕಾರ ಪ್ರಮೀಳಾ ಕುಮಾರಿಗೆ 3 ಎಕೆರೆ 37 ಗುಂಟೆ ಜಮೀನು ನೀಡಲಾಗಿತ್ತು. ಆದರೆ ಪ್ರಮೀಳಾ ಉಳಿದ ಜಮೀನಿಗಾಗಿ ಗಲಾಟೆ ನಡೆಸುತ್ತಿದ್ದರು.

    ಶುಕ್ರವಾರ ಜಮೀನಿನಲ್ಲಿ ಇಬ್ಬರ ನಡುವೆ ಸಂಧಾನ ನಡೆಸಲು ರೈತ ಮುಖಂಡ ಎನ್ನಲಾದ ಮಂಜೇಗೌಡ ಎಂಬವರು ತಮ್ಮ ಸಹಚರರೊಂದಿಗೆ ಆಗಮಿಸಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ರೈತ ಸಂಘದ ಕಾರ್ಯಕರ್ತೆ ರಾಜಮ್ಮ ಅವರ ಸೀರೆ ಬಿಚ್ಚಿ ಹಲ್ಲೆ ನಡೆಸಿದ್ದಾರೆ.

    ಸ್ಥಳದಲ್ಲಿ ರೈತ ಸಂಘದ ಸದಸ್ಯರು, ಪೊಲೀಸರು ಮತ್ತು ಸ್ಥಳೀಯರಿದ್ರೂ ಯಾರು ನನ್ನ ಸಹಾಯಕ್ಕೆ ಬರಲಿಲ್ಲ ಎಂದು ರಾಜಮ್ಮ ಆರೋಪಿಸಿದ್ದಾರೆ. ಈ ಸಂಬಂಧ ಹೊಳೇನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://youtu.be/eplzsrcwbuA

  • ಆಸ್ತಿಗಾಗಿ ಸ್ವಂತ ಮಗನನ್ನು ಕಬ್ಬಿಣದ ರಾಡ್‍ನಿಂದ ಹೊಡೆದು ಕೊಲೆಗೈದ ಪೋಷಕರು

    ಆಸ್ತಿಗಾಗಿ ಸ್ವಂತ ಮಗನನ್ನು ಕಬ್ಬಿಣದ ರಾಡ್‍ನಿಂದ ಹೊಡೆದು ಕೊಲೆಗೈದ ಪೋಷಕರು

    ಚಾಮರಾಜನಗರ: ಆಸ್ತಿಗಾಗಿ ತಂದೆ, ತಾಯಿ ಮತ್ತು ಕಿರಿಯ ಮಗ ಮೂವರು ಸೇರಿ ಹಿರಿಯ ಮಗನನ್ನು ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಾಗೆಮರಳ್ಳಿ ಗ್ರಾಮದಲ್ಲಿ ನಡೆದಿದೆ.

    ಮುರುಗನ್ ಕೊಲೆಯಾದ ದುರ್ದೈವಿ. ತಂದೆ ಮಾರಪ್ಪ, ತಾಯಿ ಪುಷ್ಪ ಹಾಗು ತಮ್ಮ ಷಣ್ಮುಖ ಮೂವರು ಸೇರಿ ಮುರುಗನ್ ನನ್ನು ಕಬ್ಬಿಣದ ರಾಡಿನಿಂದ ತಲೆ ಭಾಗಕ್ಕೆ ಹೊಡೆದು ಕೊಲೆಗೈದಿದ್ದಾರೆ. ಭಾನುವಾರ ರಾತ್ರಿ ದನಗಳನ್ನು ಕೊಟ್ಟಿಗೆಯ ವಿಚಾರಚವಾಗಿ ಜಗಳ ನಡೆದಿತ್ತು. ಈ ವೇಳೆ ಮೂವರು ಸೇರಿ ಮುರುಗನ್ ಅವರನ್ನು ಕೊಲೆ ಮಾಡಿದ್ದಾರೆ.

    ಮುರುಗನ್ ಮತ್ತು ಷಣ್ಮುಖ ಇಬ್ಬರು ಸಹೋದರರು. ಇಬ್ಬರು ಬೇರೆ ಬೇರೆಯಾಗಿದ್ದು, ಮಾರಪ್ಪ ಮತ್ತು ಪುಷ್ಪಾ ಕಿರಿಯ ಮಗ ಷಣ್ಮುಖನೊಂದಿಗೆ ವಾಸವಾಗಿದ್ದರು. ಸಹೋದರರ ನಡುವೆ ಪದೇ ಪದೇ ಕೊಟ್ಟಿಗೆಯ ವಿಚಾರವಾಗಿ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಕೊಲೆಯ ನಂತರ ಮೂವರು ಆರೋಪಿಗಳು ನಾಪತ್ತೆಯಾಗಿದ್ದಾರೆ. ಸದ್ಯ ಮೃತ ದೇಹವನ್ನು ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಇರಿಸಲಾಗಿದೆ. ಈ ಸಂಬಂಧ ಕೆಲವಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ವಿಡಿಯೋ: ಗೋವುಗಳ ಅಕ್ರಮ ಸಾಗಾಟ- ಹಿಂದೂಪರ ಸಂಘಟನೆಯಿಂದ ವ್ಯಾನ್‍ಗೆ ಬೆಂಕಿ

    ವಿಡಿಯೋ: ಗೋವುಗಳ ಅಕ್ರಮ ಸಾಗಾಟ- ಹಿಂದೂಪರ ಸಂಘಟನೆಯಿಂದ ವ್ಯಾನ್‍ಗೆ ಬೆಂಕಿ

    ಕೊಡಗು: ಜಾನುವಾರುಗಳ ಕಳ್ಳ ಸಾಗಾಟಗಾರರ ವಿರುದ್ಧ ಅಕ್ರೋಶಗೊಂಡ ಸಾರ್ವಜನಿಕರು ವಾಹನಕ್ಕೆ ಬೆಂಕಿ ಹಚ್ಚಿದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆಯಲ್ಲಿ ನಡೆದಿದೆ.

    ಸೋಮವಾರಪೇಟೆ ತಾಲೂಕಿನ ತೋರೆನೂರು ಗ್ರಾಮದ ಬಳಿಯಿಂದ ಟೆಂಪೋ ಟ್ರಾವೆಲರ್‍ನಲ್ಲಿ ದನಗಳನ್ನು ಅಕ್ರಮವಾಗಿ ಮಂಗಳೂರಿಗೆ ಸಾಗಾಟ ಮಾಡಲಾಗ್ತಿತ್ತು. ಈ ಬಗ್ಗೆ ಸುದ್ದಿ ತಿಳಿದ ಪೊಲೀಸರು ಟಿಟಿ ವಾಹನ ಚೇಸ್ ಮಾಡುವ ಸಂದರ್ಭದಲ್ಲಿ ಹಿಂಬಾಲಿಸುತ್ತಿದ್ದ ಪೊಲೀಸರ ಬೈಕ್‍ಗೆ ಟಿಟಿ ವಾಹನದ ಚಾಲಕ ಡಿಕ್ಕಿ ಹೊಡೆದಿದ್ದಾನೆ. ಸುಮಾರು 20 ಕಿಲೋಮೀಟರ್ ವಾಹನ ಹಿಂಬಾಲಿಸಿದ ಪೊಲೀಸರು ಅರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಸ್ಥಳಕ್ಕಾಗಮಿಸಿದ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಹಾಗು ಸಾರ್ವಜನಿಕರು ಟೆಂಪೋಗೆ ಬೆಂಕಿ ಹಚ್ಚಿದ್ದಾರೆ. ಸದ್ಯ ಮಂಗಳೂರು ಮೂಲದವರು ಎನ್ನಲಾದ ಷರೀಫ್ ಹಾಗು ಮನ್ಸೂರ್ ಎಂಬವರನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ಈ ಸಂಬಂಧ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://youtu.be/WEt4Ww6cXLA

     

  • ಸಿನೀಮಿಯ ಮಾದರಿಯಲ್ಲಿ ಬೆಂಗಳೂರು ಪೊಲೀಸರಿಂದ ರೌಡಿ ನಾಗ ಅರೆಸ್ಟ್

    ಸಿನೀಮಿಯ ಮಾದರಿಯಲ್ಲಿ ಬೆಂಗಳೂರು ಪೊಲೀಸರಿಂದ ರೌಡಿ ನಾಗ ಅರೆಸ್ಟ್

    ಬೆಂಗಳೂರು: ಪೊಲೀಸರ ಕೈಗೆ ಸಿಗದೇ ನಿಗೂಢ ಸ್ಥಳದಿಂದ ಸಿಡಿ ರಿಲೀಸ್ ಮಾಡ್ತಿದ್ದ ರೌಡಿ ನಾಗನನ್ನು ಬೆಂಗಳೂರು ಪೊಲೀಸರ ವಿಶೇಷ ತಂಡ ಕೊನೆಗೂ ತಮಿಳುನಾಡಿನಲ್ಲಿ ಬಂಧಿಸಿದೆ.

    ಮಕ್ಕಳಾದ ಗಾಂಧಿ ಮತ್ತು ಶಾಸ್ತ್ರಿಯೊಂದಿಗೆ ಇದ್ದ ನಾಗನನ್ನು ಪೊಲೀಸರು ಸಿನಿಮೀಯ ಮಾದರಿಯಲ್ಲಿ ಬೆನ್ನತ್ತಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಪ್ರತಿ ದಿನ ಬಿಳಿ ಬಣ್ಣದ ಮಾರುತಿ ಓಮ್ನಿ ಕಾರಿನಲ್ಲಿ ಸುತ್ತಾಡುತ್ತಿದ್ದ ನಾಗ ದೇವಸ್ಥಾನ, ಹಾಗೂ ಮದುವೆ ಮಂಟಪಗಳ ಬಳಿ ಉಳಿದುಕೊಳ್ಳುತ್ತಿದ್ದ. ಇಂದು ಒಮ್ನಿ ಕಾರಿನಲ್ಲಿ ಹೋಗುತ್ತಿದ್ದಾಗ ಅರ್ಕಾಟ್ ಬಳಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ನಾಗನ ಮಗ ಗಾಂಧಿ ವಾಹನ ಚಲಾಯಿಸುತ್ತಿದ್ದ. ಪೊಲೀಸರು ಕೊನೆಗೆ ಒಂದೂವರೆ ಕಿ.ಮೀ ಬೆನ್ನೆಟ್ಟಿ ನಾಗನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ವಾಹನ ಸುತ್ತುವರೆಯುತ್ತಿದ್ದಂತೆ ನಾಗ ಕೂಗಡಿದ್ದ ಎನ್ನುವ ಮಾಹಿತಿ ಸಿಕ್ಕಿದೆ.

    ಎಸಿಪಿ ರವಿಕುಮಾರ್ ಸೂಚನೆಯಂತೆ ಶರಣಾಗುವಂತೆ ವಕೀಲ ಶ್ರೀರಾಮ ರೆಡ್ಡಿ ನಾಗನಿಗೆ ಸೂಚಿಸಿದ್ದರು. ಎರಡೂ ದಿನದ ಹಿಂದೆ ಶ್ರೀರಾಮ ರೆಡ್ಡಿ ಸೂಚಿಸಿದ್ದರೂ ನಾಗ ವಕೀಲರ ಮಾತನ್ನು ತಿರಸ್ಕರಿಸಿದ್ದ.

    ನಾಗ ತಮಿಳುನಾಡಿನಲ್ಲಿ ಇದ್ದಾನೆ ಎನ್ನುವ ಖಚಿತ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಆದರೆ ಎಲ್ಲಿ ಉಳಿದುಕೊಂಡಿದ್ದಾನೆ ಎನ್ನುವ ಮಾಹಿತಿ ಸಿಕ್ಕಿರಲಿಲ್ಲ. ಯಾಕೆಂದರೆ ಪ್ರತಿದಿನ ಬೇರೆ ಬೇರೆ ಸ್ಥಳಗಳನ್ನು ಬದಲಾಯಿಸುತ್ತಿದ್ದ. ಏಪ್ರಿಲ್ 14ರಂದು ಪೊಲೀಸರು ನಾಗನ ಮನೆ ಮೇಲೆ ದಾಳಿ ನಡೆಸಿದ್ದರು. ಅಂದಿನಿಂದ ನಾಪತ್ತೆಯಾಗಿದ್ದ ನಾಗನ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಅಂತಿಮವಾಗಿ ಪೊಲೀಸರು 27 ದಿನಗಳ ಬಳಿಕ ನಾಗನನ್ನು ಬಂಧಿಸಿದ್ದಾರೆ.

    ಬಾಂಬ್ ನಾಗನ ಮನೆಯ ಮೇಲೆ ನಡೆದ ದಾಳಿಯ ಸಂದರ್ಭದ ಫೋಟೋಗಳನ್ನು ಇಲ್ಲಿ ನೀಡಲಾಗಿದೆ.

  • ಪತ್ನಿ ನೇಣಿಗೆ ಶರಣಾಗಿದ್ದಕ್ಕೆ ಪತಿ, ಮಗ ಸಾವನ್ನಪ್ಪಿದ್ದಕ್ಕೆ ತಂದೆ: ಭಾಗಮಂಡಲದಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

    ಪತ್ನಿ ನೇಣಿಗೆ ಶರಣಾಗಿದ್ದಕ್ಕೆ ಪತಿ, ಮಗ ಸಾವನ್ನಪ್ಪಿದ್ದಕ್ಕೆ ತಂದೆ: ಭಾಗಮಂಡಲದಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

    ಕೊಡಗು: ಒಂದೇ ಕುಟುಂಬದ ಮೂವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆ ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ ನಡೆದಿದೆ. ಅಪ್ಪ, ಮಗ ಹಾಗೂ ಸೊಸೆ ಮಂಗಳವಾರ ಸಂಜೆ ಮನೆಯೊಳಗೆ ನೇಣಿಗೆ ಶರಣಾಗಿದ್ದಾರೆ.

    ಮಂಜುಳಾ(28), ಪ್ರದೀಪ್(32) ಹಾಗು ಗೋಪಾಲ್(64) ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು. 8 ತಿಂಗಳು ಹಿಂದೆ ಮಂಜುಳಾ ಅವರು ಪ್ರದೀಪ್ ಎಂಬವರೊಂದಿಗೆ ವಿವಾಹವಾಗಿದ್ದರು. ಮಂಜುಳಾ, ಪ್ರದೀಪ್ ಹಾಗೂ ಮಾವ ಒಂದು ಮನೆಯಲ್ಲಿ ವಾಸವಾಗಿದ್ದರು. ಆದರೆ ಮಂಜುಳಾ ಅವರ ಅತ್ತೆ ಹಾಗೂ ನಾದಿನಿ ಬೇರೊಂದು ಮನೆಯಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ.

    ಮನೆಯಲ್ಲಿ ಪ್ರತಿದಿನ ಜಗಳ ನಡೆಯುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಮಂಜುಳಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಜುಳಾ ನೇಣಿಗೆ ಶರಣಾದದನ್ನು ನೋಡಿದ ಪತಿ ಪ್ರದೀಪ್ ಹಾಗೂ ಮಾವ ಗೋಪಾಲಯ್ಯ ತಾವು ಹೆದರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮಂಜುಳಾ ಸಾಯುವ ಮುನ್ನ ಪತ್ರವೊಂದನ್ನ ಬರೆದಿಟ್ಟಿದ್ದು, ನನ್ನ ಸಾವಿಗೆ ಯಾರು ಕಾರಣರಲ್ಲ, ನನ್ನಿಂದ ಏನಾದ್ರೂ ತಪ್ಪಾಗಿದ್ರೆ ಕ್ಷಮಿಸಿ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಇಂತಿ ನಿಮ್ಮ ಪ್ರೀತಿಯ ಮಂಜುಳಾ ಎಂದು ಬರೆದಿದ್ದಾರೆ. ಈ ಸಂಬಂಧ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಚುಡಾಯಿಸಿದ್ದಕ್ಕೆ ಮನನೊಂದು ಯುವತಿ ಆತ್ಮಹತ್ಯೆ

    ಚುಡಾಯಿಸಿದ್ದಕ್ಕೆ ಮನನೊಂದು ಯುವತಿ ಆತ್ಮಹತ್ಯೆ

    ರಾಯಚೂರು: ಪದೇ ಪದೇ ಚುಡಾಯಿಸುತ್ತಿದ್ದ ಯುವಕನ ಕಿರುಕುಳಕ್ಕೆ ಬೇಸತ್ತು ರಾಯಚೂರಿನಲ್ಲಿ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ.

    18 ವರ್ಷದ ಹುಲಿಗೆಮ್ಮ ಆತ್ಮಹತ್ಯೆಗೆ ಶರಣಾದ ಯುವತಿ. ಅಂಬೇಡ್ಕರ್ ನಗರದ ನಿವಾಸಿಯಾದ ಹುಲಿಗೆಮ್ಮಳನ್ನ ಜಹೀರ್ ಎಂಬಾತ ಚುಡಾಯಿಸುತ್ತಿದ್ದ. ಈತನ ಕಾಟದಿಂದ ಬೇಸತ್ತು ಆತನ ಪೋಷಕರಿಗೆ ಹುಲಿಗೆಮ್ಮ ದೂರು ನೀಡಿದ್ದಳು.

    ಆದ್ರೆ ತಮ್ಮ ಮಗನಿಗೆ ಬುದ್ಧಿ ಹೇಳಬೇಕಾದ ಜಹೀರ್ ಪೋಷಕರು ಹುಲಿಗೆಮ್ಮಳಿಗೆ ಬೈದು ಕಳುಸಿದ್ದರು. ಇದರಿಂದ ಮನನೊಂದ ಹುಲಿಗೆಮ್ಮ ಸೋಮವಾರ ರಾತ್ರಿ ನಗರದ ಮಾವಿನಕೆರೆ ಪಕ್ಕದ ಕಲ್ಯಾಣಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಪೊಲೀಸ್ ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಮೃತದೇಹವನ್ನ ಹೊರತೆಗೆದಿದ್ದಾರೆ. ಘಟನೆ ಹಿನ್ನೆಲೆ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • 10 ವರ್ಷ ಪ್ರೀತಿಸಿ ಮದುವೆಯಾದ್ರು, ಆರೇ ತಿಂಗಳಿಗೆ ಹೆಂಡ್ತಿಯನ್ನ ಕೊಲೆಗೈದ!

    10 ವರ್ಷ ಪ್ರೀತಿಸಿ ಮದುವೆಯಾದ್ರು, ಆರೇ ತಿಂಗಳಿಗೆ ಹೆಂಡ್ತಿಯನ್ನ ಕೊಲೆಗೈದ!

    ಬಳ್ಳಾರಿ: ಹತ್ತು ವರ್ಷಗಳ ಕಾಲ ಪರಸ್ಪರ ಪ್ರೀತಿಸಿದ್ರು. ಸುತ್ತಾಡಿ ಮದುವೆಯೂ ಆದ್ರು. ಆದ್ರೆ ಆರೇ ತಿಂಗಳಿಗೆ ಹೆಂಡತಿ ಹೆಣವಾಗಿರುವ ಘಟನೆ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಅರಳಿಹಳ್ಳಿ ತಾಂಡಾದಲ್ಲಿ ನಡೆದಿದೆ.

    ಅಕ್ಕಪಕ್ಕದ ಮನೆಯವರಾಗಿದ್ದ ಅಕ್ಕಮ್ಮಬಾಯಿ ಮತ್ತು ಪೀರ್ಯಾನಾಯ್ಕ್ ಎಂಬವರು ಸುಮಾರು ಹತ್ತು ವರ್ಷಗಳಿಂದ ಪ್ರೀತಿ ಮಾಡಿದ್ದರು. ಆದರೆ ಸರ್ಕಾರಿ ಟೀಚರ್ ಕೆಲಸ ಸಿಕ್ಕಿದ್ದೆ ತಡ ಪೀರ್ಯಾನಾಯ್ಕ್ ಮದುವೆ ಆಗಲ್ಲ ಅಂತಾ ಹೇಳಿದ್ದ ಆದ್ರೂ ಹಠ ಮಾಡಿ ಅಕ್ಕಮ್ಮಬಾಯಿ ಮದುವೆ ಆಗಿದ್ದರು.

    ಪೀರ್ಯಾನಾಯ್ಕ್ ಒಂದು ದಿನ ತನ್ನ ಹೆಂಡತಿಯನ್ನು ಸುತ್ತಾಡಿಲು ಕರೆದುಕೊಂಡು ಹೋಗಿದ್ದ. ಹೀಗೆ ಹೊರ ಹೋದಾಗ ಪತ್ನಿಯನ್ನು ಕೊಲೆಗೈದು ಸುಟ್ಟು ಹಾಕಿ ತುಂಗಭದ್ರಾ ನದಿಗೆ ಎಸೆದಿದ್ದ. ನಂತರ ಯಾರಿಗೂ ಗೊತ್ತಾಗದಂತೆ ಮನೆಗೆ ವಾಪಸ್ಸಾಗಿದ್ದ. ಅಷ್ಟೆ ಅಲ್ಲದೇ ನನ್ನ ಹೆಂಡತಿ ಕಾಣೆಯಾಗಿದ್ದಾಳೆ ಅಂತ ಹಿರೇಹಡಗಲಿ ಠಾಣೆಯಲ್ಲಿ ದೂರು ಕೊಟ್ಟಿದ್ದ.

    ಗಂಡನ ವರ್ತನೆ ಮೇಲೆ ಸಂಶಯ ಹೊಂದಿದ್ದ ಅಕ್ಕಮ್ಮಬಾಯಿ ತನ್ನ ಜೀವಕ್ಕೆ ಏನಾದ್ರೂ ಆದ್ರೆ ನನ್ನ ಪತಿ ಪೀರ್ಯಾನಾಯ್ಕ್ ಕಾರಣ ಎಂದು ಮೆನಯಲ್ಲಿ ಪತ್ರವೊಂದನ್ನು ಬರೆದಿಟ್ಟಿದ್ದರು. ಇದ್ರ ನಡುವೆ ಪೀರ್ಯಾನಾಯ್ಕ್ ಮತ್ತೊಂದು ಹೊಸ ನಾಟಕ ಶುರು ಮಾಡಿದ್ದ. ತನ್ನ ಕೋಣೆಯಲ್ಲಿ ರಕ್ತ ಚೆಲ್ಲಿ ತನ್ನ ಕೊಲೆಯಾಗಿದೆ ಅಂತಾ ಎಲ್ಲರನ್ನೂ ನಂಬಿಸಿ ಊರು ಬಿಟ್ಟು ಗೋವಾಕ್ಕೆ ಓಡಿಹೋಗಿದ್ದ. ಅಲ್ಲಿ ಬಾರ್‍ವೊಂದರಲ್ಲಿ ಕೆಲಸಕ್ಕೆ ಸೇರಿದ್ದ.

    ಇತ್ತ ಅಕ್ಕಮ್ಮಬಾಯಿ ಮನೆಯವರು ಪೀರ್ಯಾನಾಯ್ಕ್ ವಿರುದ್ಧ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಹಗರಿಬೊಮ್ಮನಹಳ್ಳಿ ಠಾಣಾ ಪೊಲೀಸರು ಆರೋಪಿ ಪೀರ್ಯಾನಾಯ್ಕ್‍ನನ್ನು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ. ಪ್ರೀತಿಸಿ ಮದುವೆಯಾದ ಹೆಂಡತಿಯನ್ನೇ ಕೊಲೆ ಮಾಡಿ ಬಚಾವ್ ಆಗಲು ಯತ್ನಿಸಿದ್ದ ಪೀರ್ಯಾನಾಯ್ಕ್ ಈಗ ಜೈಲು ಸೇರಿದ್ದಾನೆ.

     

  • ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಆಸೆಪಟ್ಟ ಬೆಂಗಳೂರಿನ ಟೆಕ್ಕಿ ಪತಿ ವಿರುದ್ಧ ದೂರು

    ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಆಸೆಪಟ್ಟ ಬೆಂಗಳೂರಿನ ಟೆಕ್ಕಿ ಪತಿ ವಿರುದ್ಧ ದೂರು

    ಬೆಂಗಳೂರು: ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಆಸೆಪಟ್ಟ ಟೆಕ್ಕಿ ವಿರುದ್ಧ ಛತ್ತೀಸ್‌ಗಡದ ರಾಯಭಾಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈಗ ಪ್ರಕರಣ ಬೆಂಗಳೂರಿನ ವಿವೇಕನಗರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದೆ.

    ಛತ್ತೀಸ್‍ಗಡದ ಮೂಲದ ಹುಡುಗಿ ಆರು ವರ್ಷದ ಹಿಂದೆ ಸಾಫ್ಟ್ ವೇರ್ ಎಂಜಿನಿಯರ್ ಒಬ್ಬರನ್ನು ಮದುವೆಯಾಗಿದ್ದರು. ಈಜೀಪುರದಲ್ಲಿ ದಂಪತಿ ನೆಲೆಸಿದ್ದು, ಆರಂಭದಲ್ಲಿ ಸಂತೋಷದಲ್ಲಿದ್ದ ಪತ್ನಿಗೆ ನಂತರ ಪತಿಯ ವಿಕೃತ ಮನಸ್ಥಿತಿ ಗೊತ್ತಾಗಿದೆ.

    ಪ್ರತಿ ದಿನ ಬ್ಲೂ ಫಿಲ್ಮ್ ವೀಕ್ಷಿಸುವ ಚಟವನ್ನು ಹೊಂದಿದ್ದ ಈತ  ಅಸ್ವಾಭಾವಿಕ ಲೈಂಗಿಕ ಕ್ರಿಯೆಯ ವಿಡಿಯೋ ತೋರಿಸಿ ನೀನು ಈ ರೀತಿಯಾಗಿ ಸಹಕರಿಸು ಎಂದು ಪೀಡಿಸುತ್ತಿದ್ದ. ಆರಂಭದಲ್ಲಿ ಒಂದೆರಡು ಬಾರಿ ನಾನು ಒಪ್ಪಿ ಸಹಕರಿಸಿದ್ದೆ. ಈ ದೃಶ್ಯಗಳನ್ನು ಮೊಬೈಲ್ ನಲ್ಲಿ ಚಿತ್ರೀಸಿಕೊಂಡಿದ್ದ ಪತಿ  ನಂತರ ಪ್ರತಿ ಬಾರಿಯೂ ಈ ರೀತಿಯಾಗಿ ಸಹಕರಿಸು ಎಂದು ಒತ್ತಾಯಿಸುತ್ತಿದ್ದ.  ನಾನು ಒಲ್ಲೆ ಎಂದಿದ್ದಕ್ಕೆ ನಮ್ಮಿಬ್ಬರ ಲೈಂಗಿಕ ಕ್ರಿಯೆಯ ವಿಡಿಯೋವನ್ನು ನಿನ್ನ ತಂದೆಗೆ ವಾಟ್ಸಪ್ ಮಾಡುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ

    ಕಿರುಕುಳದ ಬಗ್ಗೆ ಮಾವನ ಹತ್ತಿರ ಹೇಳಿಕೊಂಡಿಲ್ಲ . ಆತ್ತೆ ಬಳಿ ಹೇಳಿದಾಗ ಅವರು ಅದನ್ನು ಗಂಭೀರವಾಗಿ ಸ್ವೀಕರಿಸಲಿಲ್ಲ. ಕೊನೆಗೆ ವಿಕೃತ ಪತಿಯ ಕಾಟ ತಡೆಯಲಾರದೆ ಗಂಡನನ್ನು ಬಿಟ್ಟು ಪತ್ನಿ ತಂದೆಯ ಮನೆಯಾದ ಛತ್ತೀಸ್‍ಗಡದ ರಾಯಭಾಗಕ್ಕೆ ತೆರಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಪ್ರಕರಣ ಈಗ ಬೆಂಗಳೂರಿನ ವಿವೇಕನಗರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದೆ.

    ಟೆಕ್ಕಿ ವಿರುದ್ಧ ಅಸ್ವಾಭಾವಿಕ ಲೈಂಗಿಕಕ್ರಿಯೆ (ಐಪಿಸಿ377), ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಇ ಹಾಗೂ 67ರ (ಅಶ್ಲೀಲ ದೃಶ್ಯ ರವಾನೆ) ಅಡಿ ಹಾಗೂ ತಾಯಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಡಿ ಪ್ರಕರಣ ದಾಖಲಾಗಿದೆ

    ಪ್ರಕರಣ ವರ್ಗಾವಣೆಯಾಗುತ್ತಿದ್ದಂತೆ ಮನೆಯಿಂದ ಟೆಕ್ಕಿ ಪರಾರಿಯಾಗಿದ್ದು, ಪೊಲೀಸರು ಆತನ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.

  • ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ತೆರಳಿದ್ದ ರಾಜ್ಯದ ಪೊಲೀಸರಿಗಿಲ್ಲ ರೈಲಿನಲ್ಲಿ ಸೀಟ್ ಭಾಗ್ಯ

    ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ತೆರಳಿದ್ದ ರಾಜ್ಯದ ಪೊಲೀಸರಿಗಿಲ್ಲ ರೈಲಿನಲ್ಲಿ ಸೀಟ್ ಭಾಗ್ಯ

    ಬೆಂಗಳೂರು: ಪೊಲೀಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ರೈಲಿನಲ್ಲಿ ಪ್ರಯಾಣಿಸಿದ್ದ ಮಹಿಳಾ ಪೇದೆಗಳು ಸೀಟ್ ಸಿಕ್ಕದೇ ಶೌಚಾಲಯದ ಬಳಿ ಮಲಗಿದ್ದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

    ಹೌದು. ಕೆಲ ತಿಂಗಳ ಹಿಂದೆ ಕಲಬುರಗಿಯಲ್ಲಿ ಪೊಲೀಸ್ ಕ್ರೀಡಾಕೂಟ ಆಯೋಜನೆಗೊಂಡಿತ್ತು. ಈ ಕ್ರೀಡಾಕೂಟಕ್ಕೆ ಬೆಂಗಳೂರಿನಿಂದ ಮಹಿಳಾ ಪೇದೆಗಳು ರೈಲಿನಲ್ಲಿ ತೆರಳಿದ್ದರು. ರೈಲಿನಲ್ಲಿ ಸೀಟ್ ಸಿಗದೇ ಇದ್ದ ಕಾರಣ ಪೇದೆಗಳು ಬೋಗಿ ಮತ್ತು ಶೌಚಾಲಯದ ಬಳಿ ಮಲಗಿ ಪ್ರಯಾಣಿಸಿದ್ದರು.

    ಪೇದೆಗಳ ಈ ಸ್ಥಿತಿಯನ್ನು ನೋಡಿದ ಸಹ ಪ್ರಯಾಣಿಕರೊಬ್ಬರು ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಈಗ ವೈರಲ್ ಆಗಿದೆ. ಯಾವುದೇ ವ್ಯವಸ್ಥೆ ಕಲ್ಪಿಸದ ಸರ್ಕಾರ ಬಗ್ಗೆ ಜನರು ವ್ಯಾಪಕ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

    ಈ ವಿಚಾರದ ಬಗ್ಗೆ ಪಬ್ಲಿಕ್ ಟಿವಿಗೆ ಕರ್ನಾಟಕ ರಾಜ್ಯ ಸರ್ಕಾರಿ ಎನ್‍ಪಿಎಸ್ ನೌಕರರರ ಸಂಘದ ಮುಖಂಡ ರಮೇಶ್ ಸಂಗ ಪ್ರತಿಕ್ರಿಯಿಸಿ, ನಾನು ಮಹಿಳಾ ಪೇದೆಗಳ ಜೊತೆ ಮಾತನಾಡಿದ್ದೆ. ಯಾಕೆ ಇಲ್ಲಿ ಮಲಗಿದ್ದೀರಿ ಎಂದು ಕೇಳಿದ್ದಕ್ಕೆ ಆರಂಭದಲ್ಲಿ ನಮಗೆ ಟಿಕೆಟ್ ಮಾಡಲಾಗುವುದು ಎಂದು ಸಂಘಟಕರು ತಿಳಿಸಿದ್ದರು. ಆದರೆ ಸ್ಟೇಷನ್ ಗೆ ಬಂದಾಗ ಟಿಕೆಟ್ ಮಾಡದೇ ಇರುವ ವಿಚಾರ ತಿಳಿಯಿತು. ಹೀಗಾಗಿ ನಾವು ಇಲ್ಲಿ ಮಲಗಿದ್ದೇವೆ ಎಂದು ತಿಳಿಸಿದರು ಎಂದು ಅವರು ಹೇಳಿದರು.

    https://www.youtube.com/watch?v=si_iv95E9Mg

     

     

  • ನಾನ್ಯಾಕೆ ಪತಿ ಮೇಲೆ ಗುಂಡು ಹಾರಿಸಿದೆ: ಮತ್ತಿನಲ್ಲಿ ಶೂಟೌಟ್ ಮಾಡಿದವಳ ಮಾತುಗಳು

    ನಾನ್ಯಾಕೆ ಪತಿ ಮೇಲೆ ಗುಂಡು ಹಾರಿಸಿದೆ: ಮತ್ತಿನಲ್ಲಿ ಶೂಟೌಟ್ ಮಾಡಿದವಳ ಮಾತುಗಳು

    ಬೆಂಗಳೂರು: ನನ್ನ ಪ್ರಾಣವನ್ನು ರಕ್ಷಿಸಿಕೊಳ್ಳಲು ನಾನು ಕಾರಿನಲ್ಲೇ ಪತಿ ಸಾಯಿರಾಂ ಮೇಲೆ 3 ಸುತ್ತು ಗುಂಡು ಹಾರಿಸಿದೆ ಎಂದು ಪತ್ನಿ ಹಂಸವೇಣಿ ಸೂರ್ಯ ಸಿಟಿ ಪೊಲೀಸರಲ್ಲಿ ವಿಚಾರಣೆಯ ಸಂದರ್ಭದಲ್ಲಿ ಹೇಳಿದ್ದಾಳೆ.

    ಶುಕ್ರವಾರ ಬ್ಯಾಂಕ್ ಕೆಲಸಕ್ಕೆಂದು ಪತಿ ಸಾಯಿರಾಂ ಜೊತೆ ಹೊಸೂರಿಗೆ ತೆರೆಳಿದ್ದೆ. ವಾಪಸ್ ಬರುವಾಗ ರೆಸ್ಟೋರೆಂಟ್‍ನಲ್ಲಿ ಪತಿ 6 ಪೆಗ್ ವಿಸ್ಕಿ ಕುಡಿದರೆ 2 ಬಿಯರ್ ಕುಡಿದೆ. ನನ್ನ ಗಂಡ ಯಾವಾಗಲು ಕುಡಿದು ಗಲಾಟೆ ಮಾಡುತಿದ್ದರು, ನಿನ್ನೆಯೂ ನನ್ನ ಮೇಲೆ ಹಲ್ಲೆ ನಡೆಸಿದ್ದರು. ಸಾಯಿರಾಂ ಆಂಧ್ರ ಮೂಲದವರಾಗಿದ್ದರೆ, ನಾನು ಬೆಂಗಳೂರಿನವಳೇ ಎಂದು ತಿಳಿಸಿದ್ದಾಳೆ.

    ನಮ್ಮಿಬ್ಬರದ್ದು ಶ್ರೀಮಂತ ಕುಟುಂಬವಾಗಿದ್ದು, ಒಟ್ಟಿಗೆ ಕುಡಿಯುತ್ತೇವೆ. ನಾವಿಬ್ಬರು ಪ್ರೀತಿಸಿ 27 ವರ್ಷಗಳ ಹಿಂದೆ ಮದುವೆಯಾಗಿದ್ದೇವೆ. ನಿನ್ನೆ ಕುಡಿದ ಅಮಲಿನಲ್ಲಿ ನನ್ನ ಮೇಲೆ ಪತಿ ಹಲ್ಲೆ ನಡೆಸಿದರು. ನನ್ನ ಬಳಿಯಿದ್ದ ರಿವಾಲ್ವರ್ ಕಿತ್ತುಕೊಂಡು ಮುಖಕ್ಕೆ ಗುದ್ದಿದ್ದರು. ರಿವಾಲ್ವರ್ ಯಾವಾಗಲು ನನ್ನ ಬಳಿಯೇ ಇರುತಿತ್ತು. ಪ್ರಾಣ ರಕ್ಷಿಸಿಕೊಳ್ಳಲು ನಾನು 3 ಸುತ್ತು ಗುಂಡು ಹಾರಿಸಿದೆ ಎಂದು ಆರೋಪಿ ಹಂಸ ಹೇಳಿಕೆ ನೀಡಿದ್ದಾಳೆ.

    ಪತ್ನಿಯಿಂದ ಗುಂಡೇಟು ತಿಂದ ಪತಿ ಸಾಯಿರಾಂ ಬೊಮ್ಮಸಂದ್ರ ಸ್ಪರ್ಶ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ವೈದ್ಯರು 48 ಗಂಟೆಗಳ ನಂತರ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಹಂಸ ಮತ್ತು ಸಾಯಿರಾಂ ಅತ್ತಿಬೆಲೆ ಸಮೀಪದ ಯಡವನಹಳ್ಳಿ ಗೇಟ್ ಬಳಿಯ ಮ್ಯಾಕ್ಸ್ ಹೋಟೆಲ್‍ನಲ್ಲಿ ಶುಕ್ರವಾರ ಮಧ್ಯಾಹ್ನ ಮದ್ಯಪಾನ ಮಾಡಿದ್ದಾರೆ. ಮದ್ಯಪಾನ ಮಾಡಿದ ಬಳಿಕ ಅಲ್ಲಿಯೇ ಇಬ್ಬರು ಜಗಳವಾಡಿದ್ದು ಹೋಟೆಲ್ ಸಿಬ್ಬಂದಿ ಇಬ್ಬರನ್ನು ಸಮಾಧಾನ ಮಾಡಿ ಕಳುಹಿಸಿದ್ದಾರೆ. ಕುಡಿದ ಮತ್ತಿನಲ್ಲಿ ತಮ್ಮ ಫಾರ್ಚುನರ್ ಕಾರಿನಲ್ಲಿ ಮನೆಗೆ ವಾಪಸ್ಸಾಗುತ್ತಿದ್ದಾಗಲೂ ಇಬ್ಬರ ಕಿತ್ತಾಟ ಮುಂದುವರಿದಿದೆ. ಈ ವೇಳೆ ಹಂಸವೇಣಿ ಬಾಯಿಗೆ ಸಾಯಿರಾಂ ಬಲವಾಗಿ ಬಾರಿಸಿದ್ದು ಬಾಯಿತುಂಬ ರಕ್ತ ಹೊರಬಂದಿದೆ. ಹೋಟೆಲ್‍ನಿಂದ ಸ್ವಲ್ಪ ದೂರ ಬರುತ್ತಿದ್ದಂತೆ ಚಂದಾಪುರ ಬಸ್‍ಸ್ಟಾಪ್ ಬಳಿ ಬಂದಾಗ ಸಾಯಿರಾಂ ಹೆಂಡತಿ ಮೇಲೆ ಕೋಪಿಸಿಕೊಂಡು ಕಾರಿನಿಂದ ಇಳಿದು ಬಿಎಂಟಿಸಿ ಬಸ್ ಹತ್ತಿದ್ದಾರೆ.

    ಗಂಡ ಬಿಎಂಟಿಸಿ ಬಸ್ ಹತ್ತಿದ್ದಕ್ಕೆ ಕೋಪಗೊಂಡ ಪತ್ನಿ ಹಂಸವೇಣಿ ಕಾರಿನಲ್ಲಿ ಫಿಲ್ಮ್ ಸ್ಟೈಲ್ ನಲ್ಲಿ ಫಾಲೋ ಮಾಡಿಕೊಂಡು ಎಲೆಕ್ಟ್ರಾನಿಕ್ ಸಿಟಿಯ ವೀರಸಂದ್ರ ಗೇಟ್ ಬಳಿ ಬಸ್ ಮುಂದೆ ಬಂದು ಕಾರನ್ನು ನಿಲ್ಲಿಸಿದ್ದಾಳೆ. ಬಸ್ ನಿಂದ ಗಂಡ ಇಳಿದ ಕೂಡಲೇ ಪರವಾನಿಗೆ ಪಡೆದಿದ್ದ ರಿವಾಲ್ವಾರ್ ನಿಂದ ಮೂರು ಸುತ್ತ ಗುಂಡು ಹಾರಿಸಿದ್ದಾಳೆ.

    ಈ ವೇಳೆ ಸಹಾಯಕ್ಕೆಂದು ತೆರಳಿದ ಪ್ರಯಾಣಿಕರ ಮೇಲೂ ಸಹ ಹಂಸವೇಣಿ ಗನ್ ತೋರಿಸಿ ಧಮ್ಕಿ ಹಾಕಿದ್ದರಿಂದ ಸ್ಥಳದಲ್ಲಿ ಕೆಲಕಾಲ ಅತಂಕದ ವಾತಾವರಣ ನಿರ್ಮಾಣವಾಗಿತ್ತು. ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಆಕೆಯ ರಿವಾಲ್ವರ್‍ನೊಂದಿಗೆ ಆಕೆಯನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ. ಹಂಸವೇಣಿ ಮೊದಲು ಚಂದಾಪುರದಲ್ಲಿ ರಿವಾಲ್ವಾರ್ ತೆಗೆದಿದ್ದರಿಂದ ಪ್ರಕರಣ ಸೂರ್ಯಸಿಟಿ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾವಣೆಯಾಗಿದೆ.

    ಗುಂಡಿನ ಮತ್ತಿನಲ್ಲಿದ್ದ ಹಂಸವೇಣಿ ವಿಚಾರಣೆ ವೇಳೆಯಲ್ಲಿ ಸಹ ಪೊಲೀಸರ ಮೇಲೆ ದರ್ಪ ತೋರಿದ್ದು ಏನಾಯಿತು ತಾಯಿ ಎಂದು ಪ್ರಶ್ನಿಸಿದ್ದಕ್ಕೆ, “ನಾನೇನು ನಿಮಗೆ ತಾಯಿನಾ?”ಎಂದು ಕೇಳಿದ್ದಾಳೆ. ಮೇಡಂ ಎಂದು ಕರೆದಿದ್ದಕ್ಕೆ, “ಮೇಡಂ ಎಂದರೆ ನಾನು ನಿಮಗೆ ಪಾಠ ಕಲಿಸಿದ ಗುರುವೇ” ಎಂದು ಪ್ರಶ್ನಿಸಿದ್ದಳು.