Tag: police

  • ಹೋಮೊ ಸೆಕ್ಸ್ ಗೆ ಬಂದವನನ್ನು ಕೊಲೆ ಮಾಡಿದ್ದ ಜೇಬುಗಳ್ಳ ಅರೆಸ್ಟ್!

    ಹೋಮೊ ಸೆಕ್ಸ್ ಗೆ ಬಂದವನನ್ನು ಕೊಲೆ ಮಾಡಿದ್ದ ಜೇಬುಗಳ್ಳ ಅರೆಸ್ಟ್!

    ಬೆಂಗಳೂರು: ಹೋಮೋಸೆಕ್ಸ್ ಮಾಡುವ ನೆಪದಲ್ಲಿ ಹುಡುಗನನ್ನು ದೋಚಲು ಹೋಗಿ ಕೊಲೆಗೈದಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸ್ರು ಯಶಸ್ವಿಯಾಗಿದ್ದಾರೆ. ಜೇಬುಗಳ್ಳತನ ಮಾಡುತ್ತಿದ್ದ ರಸೂಲ್ ಬಂಧಿತ ಆರೋಪಿ.

    ಮುರಳೀಧರ್ ಕೊಲೆಯಾದ ವ್ಯಕ್ತಿ. ಮುರಳೀಧರ್ ಸಲಿಂಗಕಾಮಕ್ಕಾಗಿ ರಸೂಲ್ @ ಆಕಾಶನನ್ನು ಸಂಪರ್ಕಿಸಿದ್ದನು. ಆದ್ರೆ ಮುರುಳೀಧರನನ್ನು ದೋಚುವ ಸಲುವಾಗಿ ಆಕಾಶ್ ಇದಕ್ಕೆ ಒಪ್ಪಿಕೊಂಡಿದ್ದನು.

    ಅಂದು ನಡೆದಿದ್ದೇನು?: ಕರಗದ ದಿನ ರಸೂಲ್ ಸಿಕ್ಕಸಿಕ್ಕವರ ಬಳಿಯಲ್ಲಿ ಜೇಬುಗಳ್ಳತನ ಮಾಡೋದಕ್ಕೆ ಪ್ಲಾನ್ ಮಾಡ್ತಿದ್ದ. ಅದೇ ಸಂದರ್ಭದಲ್ಲಿ ರಸೂಲ್‍ನ ಮುಂದೆ ಪ್ರತ್ಯಕ್ಷವಾದ ಮುರಳೀಧರ್ ಸಲಿಂಗಕಾಮಕ್ಕೆ ಆಹ್ವಾನ ನೀಡಿದ್ದಾನೆ. ಆಹ್ವಾನ ನೀಡಿದ ಮುರಳೀಧರ್‍ನ ಇದೇ ನೆಪದಲ್ಲಿ ದೋಚಬಹುದು ಅಂದುಕೊಂಡು ರಸೂಲ್ ಮುರಳೀ ಹಿಂದೆಯೇ ಹೋಗಿದ್ದ. ಆದ್ರೆ, ಮುರಳಿ ಆಕಾಶನನ್ನು ತಬ್ಬಿಕೊಳ್ಳಲು ಮುಂದಾಗಿದ್ದನು. ಕೊನೆಗೆ ರಸೂಲ್ ತನ್ನ ಬಳಿಯಿದಿದ್ದ ಚಾಕುವಿನಿಂದ ಮುರುಳೀಧರನನ್ನು ಇರಿದು ಕೊಲೆ ಮಾಡಿ ಪರಾರಿಯಾಗಿದ್ದ.

    ಇದನ್ನೂ ಓದಿ: ಹುಡುಗರೇ ಬೀ ಕೇರ್ ಫುಲ್.. ಫೇಸ್ ಬುಕ್ ನಲ್ಲಿದೆ ಹೋಮೊ ಸೆಕ್ಸ್ ಪೇಜ್!

    ಮುರಳೀಧರ್ -ಕೊಲೆಯಾದ ವ್ಯಕ್ತಿ

    ಕೊಲೆಯ ನಂತರ ಆಕಾಶ್ ಕಲಾಸಿಪಾಳ್ಯದಲ್ಲಿಯ ಶೌಚಾಲಯದಲ್ಲಿ ರಕ್ತದ ಕಲೆಯಾಗಿದ್ದ ಚಾಕು ಮತ್ತು ಬಟ್ಟೆಗಳನ್ನು ತೊಳೆದುಕೊಂಡಿದ್ದನು. ನಂತರ ಬಟ್ಟೆಗಳನ್ನು ಸುಟ್ಟು ಹಾಕಿದ್ದನು. ಈ ಸಂಬಂಧ ಕೆ.ಆರ್.ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

     

  • ಅನುರಾಗ್ ತಿವಾರಿ ನಿಗೂಢ ಸಾವು: ಹರ್ಷ ಗುಪ್ತಾಗೆ ನೋಟಿಸ್ ಜಾರಿ?

    ಅನುರಾಗ್ ತಿವಾರಿ ನಿಗೂಢ ಸಾವು: ಹರ್ಷ ಗುಪ್ತಾಗೆ ನೋಟಿಸ್ ಜಾರಿ?

    ಬೆಂಗಳೂರು: ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆಹಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಅವರಿಗೆ ನೋಟಿಸ್ ಜಾರಿಯಾಗಿದೆ ಎಂದು ಉನ್ನತ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    ಈಗಾಗಲೇ ಬೆಂಗಳೂರಿನಲ್ಲಿ ಬೀಡುಬಿಟ್ಟಿರುವ ವಿಶೇಷ ತನಿಖಾ ತಂಡ ಇಂದು ಖುದ್ದು ಹಾಜರಾಗುವಂತೆ ಹರ್ಷ ಗುಪ್ತಾಗೆ ಸೂಚನೆ ನೀಡಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

    ಶನಿವಾರ ತಿವಾರಿ ಸತ್ಯ ಹೆಸರಿನಲ್ಲಿ ಪಬ್ಲಿಕ್ ಟಿವಿ ಎಕ್ಸ್ ಕ್ಲೂಸಿವ್ ಸುದ್ದಿಯನ್ನು ಪ್ರಸಾರ ಮಾಡಿತ್ತು. ಈ ವೇಳೆ ಯಶ್ ಗುಪ್ತಾ ಹೆಸರಿನ ಅಧಿಕಾರಿ ಹೆಸರನ್ನು ಅನುರಾಗ್ ಸಹೋದರ ಮಯಾಂಕ್ ತಿಳಿಸಿದ್ದರು. ಈ ಸುದ್ದಿಯ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಹರ್ಷ ಗುಪ್ತಾ ಇದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಪ್ರತಿಕ್ರಿಯಿಸಿದ್ದರು.

    ಈ ನಡುವೆ ನಿಗೂಢ ಸಾವಿನ ಪ್ರಕರಣದ ತನಿಖೆಯನ್ನು ಸಿಬಿ ನಡೆಸಬೇಕೆಂದು ಆಗ್ರಹಿಸಿ ಪ್ರಧಾನಿ ಕಚೇರಿಗೆ ಅನುರಾಗ್ ಕುಟುಂಬ ಪತ್ರ ಬರೆದಿದೆ.

    ಇದನ್ನೂ ಓದಿ: Exclusive: ಅನುರಾಗ್ ತಿವಾರಿಗೆ ಇತ್ತು ಜೀವ‌ ಭಯ- 4-5 ತಿಂಗಳಿಂದ ಕೊಟ್ಟೇ ಇರಲಿಲ್ಲ ಸಂಬಳ

     

  • ಯುವತಿ ಅಲ್ಲ, ನನ್ನ ಮರ್ಮಾಂಗವನ್ನು ನಾನೇ ಕತ್ತರಿಸಿದೆ: ಕಾಮಿ ಸ್ವಾಮೀಜಿ

    ಯುವತಿ ಅಲ್ಲ, ನನ್ನ ಮರ್ಮಾಂಗವನ್ನು ನಾನೇ ಕತ್ತರಿಸಿದೆ: ಕಾಮಿ ಸ್ವಾಮೀಜಿ

    ತಿರುವನಂತಪುರಂ: ಅತ್ಯಾಚಾರಕ್ಕೆ ಯತ್ನಿಸಿದ್ದಕ್ಕೆ ನಾನು ಸ್ವಾಮೀಜಿಯ ಮರ್ಮಾಂಗವನ್ನೇ ಕತ್ತರಿಸಿದ್ದೇನೆ ಎಂದು ಯುವತಿ ಪೊಲೀಸರಿಗೆ ಹೇಳಿಕೆ ನೀಡಿದ್ದರೆ, ಸ್ವಾಮೀಜಿ ಮಾತ್ರ ಇದಕ್ಕೆ ತದ್ವಿರುದ್ಧವಾದ ಹೇಳಿಕೆ ನೀಡಿದ್ದಾನೆ.

    ಶ್ರೀಹರಿ ಅಲಿಯಾಸ್ ಗಣೇಶಾನಂದ ತೀರ್ಥಪಾದ ಸ್ವಾಮಿಯನ್ನು ಮಾಧ್ಯಮಗಳು ಪ್ರಶ್ನಿಸಿದ್ದಕ್ಕೆ ಆತ, ನನ್ನ ಮರ್ಮಾಂಗವನ್ನು ನಾನೇ ಕತ್ತರಿಸಿದ್ದೇನೆ. ಯುವತಿ ಸುಳ್ಳು ಹೇಳುತ್ತಿದ್ದಾಳೆ. ಆಕೆಯ ಮಾತನ್ನು ನಂಬಬೇಡಿ. ಸುಳ್ಳು ವರದಿಯನ್ನು ಪ್ರಸಾರ ಮಾಡಬೇಡಿ ಎಂದು ಹೇಳಿದ್ದಾನೆ.

    ಈ ಘಟನೆಯ ಬಗ್ಗೆ ಕೇರಳ ಮುಖ್ಯಮಮತ್ರಿ ಪಿಣರಾಯಿ ವಿಜಯನ್ ಪ್ರತಿಕ್ರಿಯಿಸಿ ಯುವತಿಯ ಧೈರ್ಯವನ್ನು ಮೆಚ್ಚಿಕೊಂಡಿದ್ದಾರೆ. ಹುಡುಗಿಯ ಉತ್ತಮವಾದ ಕೆಲಸವನ್ನೇ ಮಾಡಿದ್ದಾಳೆ ಎಂದು ಹೊಗಳಿದ್ದಾರೆ.

    23 ವರ್ಷದ ಕಾನೂನು ವಿದ್ಯಾರ್ಥಿನಿ ಶುಕ್ರವಾರ ರಾತ್ರಿ ಅತ್ಯಾಚಾರಕ್ಕೆ ಯತ್ನಿಸಿದ ಸ್ವಾಮೀಜಿ ಮರ್ಮಾಂಗವನ್ನು ಚಾಕುವಿನಿಂದ ಕತ್ತರಿಸಿದ್ದಳು. ತನ್ನ ಕೃತ್ಯದ ಬಳಿಕ ತಿರುವನಂತಪುರಂ ಪೊಲೀಸ್ ಠಾಣೆಗೆ ಕರೆ ಮಾಡಿ ತನ್ನ ಕೃತ್ಯದ ಬಗ್ಗೆ ಮಾಹಿತಿ ನೀಡಿದ್ದಳು.

    ಈ ಪ್ರಕರಣದ ಸಂಬಂಧ ಯುವತಿಯ ತಾಯಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡುತ್ತಿದ್ದಾರೆ. ಪೊಲೀಸರಿಗೆ ನೀಡಿದ ಹೇಳಿಕೆಯನ್ನು ಸ್ವಾಮೀಜಿ ನನ್ನ ಮೇಲೆ ಎಸಗುತ್ತಿದ್ದ ಕೃತ್ಯ ನನ್ನ ತಾಯಿಗೂ ತಿಳಿದಿತ್ತು ಎಂದು ಯುವತಿ ಹೇಳಿಕೆ ನೀಡಿದ್ದಳು.

    ಇದೇ ವೇಳೆ ಯುವತಿಯ ವಿರುದ್ಧ ಯಾವುದೇ ಕೇಸ್ ದಾಖಲಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಸ್ವಾಮೀಜಿಯ ಮರ್ಮಾಂಗವನ್ನೇ ಕತ್ತರಿಸಿದ ಕಾನೂನು ವಿದ್ಯಾರ್ಥಿನಿ.. ಏನಿದು ಘಟನೆ?

  • ರೇಪಿಸ್ಟ್ ಕಾಮಿ ಸ್ವಾಮೀಜಿಯ ಮರ್ಮಾಂಗವನ್ನೇ ಕಟ್ ಮಾಡಿದ್ಳು ಯುವತಿ!

    ರೇಪಿಸ್ಟ್ ಕಾಮಿ ಸ್ವಾಮೀಜಿಯ ಮರ್ಮಾಂಗವನ್ನೇ ಕಟ್ ಮಾಡಿದ್ಳು ಯುವತಿ!

    ತಿರುವನಂತಪುರಂ: ತನ್ನ ಮೇಲೆ ಅತ್ಯಾಚಾರ ಎಸಗಲು ಮುಂದಾಗಿದ್ದ ಸ್ವಾಮೀಜಿಯ ಮರ್ಮಾಂಗವನ್ನೇ ಯುವತಿಯೊಬ್ಬಳು ಕತ್ತರಿಸಿದ ಘಟನೆ ತಿರುವನಂತಪುರಂ ಸಮೀಪದ ಕನ್ನಮೂಲ ಎಂಬಲ್ಲಿ ನಡೆದಿದೆ.

    ಕೊಲ್ಲಂನ ಪನ್ಮನದಲ್ಲಿರುವ ಶ್ರೀಹರಿ ಅಲಿಯಾಸ್ ಗಣೇಶಾನಂದ ತೀರ್ಥಪಾದ ಸ್ವಾಮಿಯನ್ನು (53)ಈಗ ತಿರುವನಂತಪುರದಲ್ಲಿರುವ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.

    ಘಟನೆಯ ವಿವರ:
    ಶ್ರೀಹರಿ ಅಲಿಯಾಸ್ ಗಣೇಶಾನಂದ ಸ್ವಾಮೀಜಿ ಶುಕ್ರವಾರ ಯುವತಿಯ ಮನೆಗೆ ವಿಶೇಷ ಪೂಜೆಗೆಂದು ಆಗಮಿಸಿದ್ದಾನೆ. ರಾತ್ರಿ ಈತ ಅತ್ಯಾಚಾರಕ್ಕೆ ಯತ್ನಿಸಿದ್ದಾಗ ಯುವತಿ ಹರಿತವಾದ ಚೂರಿಯ ಸಹಾಯದಿಂದ ಮರ್ಮಾಂಗವನ್ನು ಕತ್ತರಿಸಿದ್ದಾಳೆ.

    ಶುಕ್ರವಾರ ಮಧ್ಯರಾತ್ರಿ 11.30ಕ್ಕೆ ಈ ಘಟನೆ ನಡೆದಿದೆ. ಈ ಘಟನೆಯ ಬಳಿಕ ಯುವತಿ ತಿರುವನಂತಪುರಂ ಪೊಲೀಸ್ ಠಾಣೆಗೆ ಕರೆ ಮಾಡಿ ನಾನು ಸ್ವಾಮೀಜಿಯ ಮರ್ಮಾಂಗವನ್ನು ಕತ್ತರಿಸಿದ್ದೇನೆ ಎಂದು ತಿಳಿಸಿದ್ದಾಳೆ.

    ಯುವತಿ ತನ್ನ ಹೇಳಿಕೆಯಲ್ಲಿ, ನಾನು ಹೈಸ್ಕೂಲ್ ಓದುತ್ತಿರುವಾಗಲೇ ಈತ ನನ್ನ ಮೇಲೆ ಅತ್ಯಾಚಾರ ಎಸಗುತ್ತಿದ್ದ. ಈತನ ಈ ಕೃತ್ಯ ನನ್ನ ತಾಯಿಗೆ ತಿಳಿದಿದೆ. ಶುಕ್ರವಾರ ಮನೆಗೆ ಬರುತ್ತಿರುವ ವಿಚಾರ ತಿಳಿದು ಆತನಿಗೆ ಪಾಠ ಕಲಿಸಬೇಕೆಂದು ನಿರ್ಧರಿಸಿದ್ದೆ. ಇದಕ್ಕಾಗಿ ನಾನು ಮೊದಲೇ ಹರಿತವಾದ ಚೂರಿಯನ್ನು ರೆಡಿ ಮಾಡಿ ಇಟ್ಟುಕೊಂಡಿದ್ದೆ ಎಂದು ಹೇಳಿದ್ದಾಳೆ.

    ಯಾಕೆ ಈ ರೀತಿ ಕೃತ್ಯ ಎಸಗಿದ್ದು ಎಂದು ಕೇಳಿದ್ದಕ್ಕೆ ಯುವತಿ, ದೇವಮಾನವ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಹೇಳಿದರೆ ಯಾರೂ ನಂಬುತ್ತಿರಲಿಲ್ಲ. ಈ ಕಾರಣಕ್ಕಾಗಿ ನನಗೆ ಬೇರೆ ದಾರಿ ಇಲ್ಲದೇ ಮರ್ಮಾಂಗವನ್ನೇ ಕತ್ತರಿಸಲು ಮುಂದಾದೆ ಎಂದು ತಿಳಿಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

    ಕೊಲ್ಲಂ ಮೂಲದ 54 ವರ್ಷದ ಹಿರಿಯ ವ್ಯಕ್ತಿ ನಸುಕಿನ ಜಾವ 12.39ಕ್ಕೆ ದಾಖಲಾಗಿದ್ದು, ಆಸ್ಪತ್ರೆಗೆ ಬರುವಾಗ ಮರ್ಮಾಂಗದ ಶೇ.90 ಭಾಗ ನೇತಾಡಿಕೊಂಡಿತ್ತು. ಯುರಲಾಜಿ ಮತ್ತು ಪ್ಲಾಸ್ಟಿಕ್ ಸರ್ಜನ್ ಗಳು ಕೂಡಲೇ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಈಗ ಆರೋಗ್ಯ ಸ್ವಲ್ಪ ಸುಧಾರಿಸಿದೆ ಎಂದು ತಿರುವನಂತಪುರಂ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

    ಪಿಟಾಯ್ ಪೊಲೀಸರು ಐಪಿಸಿ ಸೆಕ್ಷನ್ 376(ಅತ್ಯಾಚಾರ) ಮತ್ತು ಪೋಸ್ಕೋ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ನಮಗೂ ಆತನಿಗೂ ಸಂಬಂಧ ಇಲ್ಲ: ಆತನ ಗುರುತು ಪತ್ರದಲ್ಲಿ ಆಶ್ರಮದ ವಿಳಾಸ ಸಿಕ್ಕಿದ ಹಿನ್ನೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪನ್ಮನ ಆಶ್ರಮದ ಮುಖ್ಯಸ್ಥ ಪ್ರಣವನಂದ ಅವರು, ಈ ಹಿಂದೆ ಆತ ಆಶ್ರಮದಲ್ಲಿ ನೆಲೆಸಿದ್ದ ನಂತರ ಆಶ್ರಮವನ್ನು ತೊರೆದು ತಿರುವನಂತಪುರಂನಲ್ಲಿ ಹೋಟೆಲ್ ನಡೆಸುತ್ತಿದ್ದ. ನಮ್ಮ ಆಶ್ರಮಕ್ಕೆ ಮತ್ತು ಆತನಿಗೆ ಯಾವುದೇ ಸಂಬಂಧ ಇಲ್ಲ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ಪ್ಲಸ್ ಟು ಪರೀಕ್ಷೆಯಲ್ಲಿ 1200ಕ್ಕೆ 1180 ಅಂಕಗಳಿಸಿದ್ದ ವಿದ್ಯಾರ್ಥಿನಿ ಮಾಧ್ಯಮಗಳ ವರದಿಯಿಂದ ಮನನೊಂದು ಆತ್ಮಹತ್ಯೆ!

    ಇದನ್ನೂ ಓದಿ :ಶವದ ಮರ್ಮಾಂಗ ಹಿಡಿದು ಮಹಿಳೆ ರೋಧನೆ: ಕಲಬುರಗಿಯಲ್ಲೊಂದು ವಿಚಿತ್ರ ಘಟನೆ

  • ವಾಕಿಂಗ್ ವೇಳೆ ಲಾರಿ ಹರಿದು ವೃದ್ಧ  ಸಾವು!

    ವಾಕಿಂಗ್ ವೇಳೆ ಲಾರಿ ಹರಿದು ವೃದ್ಧ ಸಾವು!

    ಬಾಗಲಕೋಟೆ: ಪಾದಚಾರಿಯ ಮೇಲೆ ಲಾರಿ ಹರಿದ ಪರಿಣಾಮ ವೃದ್ಧ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಾಗಲಕೋಟೆಯ ನವನಗರದ ಜಿಲ್ಲಾಡಳಿತ ಭವನದ ಕ್ರಾಸ್ ಬಳಿ ಇಂದು ಬೆಳಗಿನ ಜಾವ ನಡೆದಿದೆ.

    ಮಲೀಕಸಾಬ್ ಬಾಗವಾನ (85) ಮೃತ ವೃದ್ಧ. ಮಲೀಕಸಾಬ್ ನವನಗರದ ಎಂಟನೇಯ ಸೆಕ್ಟರ್ ನಿವಾಸಿಯಾಗಿದ್ದು, ಬೆಳಗಿನ ಜಾವ ಎಂದಿನಂತೆ ವಾಕಿಂಗ್ ಮಾಡಲು ಮನೆಯಿಂದ ಹೊರಬಂದಿದ್ರು. ಈ ವೇಳೆ ಅವರ ಮೇಲೆ ಲಾರಿ ಹರಿದಿದೆ.

    ಲಾರಿ ಹಾಯ್ದರಿಂದ ತೀವ್ರವಾಗಿ ಗಾಯಗೊಂಡಿದ್ದ ಮಲೀಕಸಾಬ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ನಂತರ ಚಾಲಕ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮಲೀಕಸಾಬ್ ಸಂಬಂಧಿಗಳು ಲಾರಿಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಸಂಬಂಧ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಬಾಯ್ ಫ್ರೆಂಡ್ ಮೀಟ್ ಆಗದ್ದಕ್ಕೆ 4ನೇ ಫ್ಲೋರ್‍ನಿಂದ ಹಾರಿ ಟೆಕ್ಕಿ ಆತ್ಮಹತ್ಯೆ

    ಬಾಯ್ ಫ್ರೆಂಡ್ ಮೀಟ್ ಆಗದ್ದಕ್ಕೆ 4ನೇ ಫ್ಲೋರ್‍ನಿಂದ ಹಾರಿ ಟೆಕ್ಕಿ ಆತ್ಮಹತ್ಯೆ

    ಪುಣೆ: 23 ವರ್ಷದ ಟೆಕ್ಕಿಯೊಬ್ಬರು ತನ್ನ ಬಾಯ್ ಫ್ರೆಂಡ್ ಬಂದು ಭೇಟಿಯಾಗಿಲ್ಲ ಎಂದು ನಾಲ್ಕನೇಯ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಕೊಂಡ್ವಾ ಬುದ್ರಕ್‍ನ ಶಾಂತಿನಗರದ ಸೊಸೈಟಿಯಲ್ಲಿ ನಡೆದಿದೆ.

    ಜುಹಿ ನಿತಿನ್ ಗಾಂಧಿ (23) ಆತ್ಮಹತ್ಯೆಗೆ ಶರಣಾದ ಯುವತಿ. ಜುಹಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಜುಹಿ ಪುಣೆಯ ಕಾಲೇಜೊಂದರಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪದವಿ ಪಡೆದು ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಜುಹಿ ತಾಯಿ ಇತ್ತೀಚಿಗೆ ಶಸ್ತ್ರ ಚಿಕಿತ್ಸೆಗೊಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಮೂರು ದಿನಗಳ ರಜೆ ಪಡೆದು ಪುಣೆಗೆ ಆಗಮಿಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ಸತೀಶ್ ಗೋವೆಕರ್ ಹೇಳಿದ್ದಾರೆ.

    ಜುಹಿ ಗೆಳೆಯೆ ಪುಣೆಯ ಕಾಲೇಜಿನಲ್ಲಿ ಅಂತಿಮ ವರ್ಷದ ಇಂಜಿನೀಯರ್ ವಿದ್ಯಾರ್ಥಿಯಾಗಿದ್ದು, ಬೆಂಗಳೂರಿನಿಂದ ಪುಣೆಗೆ ಆಗಮಿಸಿ ಗೆಳಯನನ್ನು ಭೇಟಿಯಾಗಲು ಇಚ್ಛಿಸಿದ್ದರು. ಆದರೆ ಗೆಳಯನಿಗೆ ಪರೀಕ್ಷೆ ಪ್ರಾರಂಭವಾಗಿದ್ದರಿಂದ ಭೇಟಿ ಆಗಲು ಬಂದಿರಲಿಲ್ಲ. ಇದರಿಂದ ನಿರಾಶೆಗೊಂಡ ಜುಹಿ ಮನೆಯ ನಾಲ್ಕನೇಯ ಮಹಡಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

    ಜುಹಿ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ದೊರಕಿಲ್ಲ. ಜುಹಿಯ ಮೊಬೈಲ್ ಪರೀಕ್ಷಿಸಿದಾಗ ಕೊನೆಯ ಬಾರಿಗೆ ಗೆಳಯನೊಂದಿಗೆ ಮಾತನಾಡಿದ್ದು ತಿಳಿದು ಬಂದಿದೆ. ಯುವಕನ್ನು ಕರೆದು ವಿಚಾರಣೆ ನಡೆಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಇನ್ನು ಯುವಕನಿಗೆ ಪರೀಕ್ಷೆ ಇದ್ದಿದ್ರಿಂದ ಬಿಟ್ಟು ಕಳುಹಿಸಲಾಗಿದೆ ಎಂದು ಇನ್ಸ್ ಪೆಕ್ಟರ್ ಸತೀಶ್ ಗೋವೆಕರ್ ತಿಳಿಸಿದ್ದಾರೆ.

     

  • ಪೊಲೀಸರ ಮೇಲೆ ಲಾಂಗ್ ಬೀಸಿದ ರೌಡಿಶೀಟರ್ ಕಾಲಿಗೆ ಗುಂಡು ಹಾರಿಸಿದ ಪಿಎಸ್‍ಐ

    ಪೊಲೀಸರ ಮೇಲೆ ಲಾಂಗ್ ಬೀಸಿದ ರೌಡಿಶೀಟರ್ ಕಾಲಿಗೆ ಗುಂಡು ಹಾರಿಸಿದ ಪಿಎಸ್‍ಐ

    ಚಿಕ್ಕಬಳ್ಳಾಪುರ: ಪೊಲೀಸರ ಮೇಲೆ ಲಾಂಗ್ ಬೀಸಿದ ರೌಡಿಶೀಟರ್ ಕಾಲಿಗೆ ಪಿಎಸ್‍ಐ ರಿವಾಲ್ವರ್ ನಿಂದ ಗುಂಡು ಹಾರಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ನಗರ ಹೊರವಲಯದ ಕುಡುಮಲಕುಂಟೆ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

    ಭಕ್ತರಹಳ್ಳಿ ಶ್ರೀನಿವಾಸ್ ಅಲಿಯಾಸ್ ದಂಡು ಸೀನನ ಮೇಲೆ ಗೌರಿಬಿದನೂರು ನಗರ ಪೊಲೀಸ್ ಠಾಣೆಯ ಪಿಎಸ್‍ಐ ಸುಂದರ್ ಗುಂಡು ಹಾರಿಸಿದ್ದಾರೆ. ರಾಬರಿ ಪ್ರಕರಣ ಸಂಬಂಧ ರೌಡಿಶೀಟರ್ ಸೀನನನ್ನ ಖಚಿತ ಮಾಹಿತಿ ಮೇರೆಗೆ ಬಂಧಿಸಲು ತೆರಳಿದ್ದಾಗ ಈ ಘಟನೆ ನಡೆದಿದೆ.

    ಕುಡಮಲಕುಂಟೆ ಕೈಗಾರಿಕಾ ಪ್ರದೇಶದಲ್ಲಿ ಸಹಚರರ ಜೊತೆಗೂಡಿ ಇಂಡಿಕಾ ಕಾರಿನಲ್ಲಿದ್ದ ಸೀನನ ಮೇಲೆ ದಾಳಿ ನಡೆಸಿದಾಗ, ಸೀನ ಪ್ರತಿದಾಳಿ ಮಾಡಿ ಪೊಲೀಸರ ಮೇಲೆಯೇ ಲಾಂಗ್‍ನಿಂದ ಬೀಸಿದ್ದಾನೆ.

    ಇದ್ರಿಂದ ಆತ್ಮರಕ್ಷಣೆಗೆ ಅಂತ ಪಿಎಸ್‍ಐ ಸುಂದರ್ ತಮ್ಮ ರಿವಾಲ್ವರ್ ನಿಂದ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಹೇಳಿದ್ದಾರೆ. ಆದ್ರೂ ಶರಣಾಗದೆ ಪರಾರಿಯಾಗುತ್ತಿದ್ದ ಸೀನನ ಕಾಲಿಗೆ ಪಿಎಸ್‍ಐ ಗುಂಡು ಹಾರಿಸಿದ್ದು, ಸದ್ಯ ಗಾಯಾಳು ಸೀನನನ್ನ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿಲಾಗಿದೆ.

    ಪ್ರಕರಣ ಸಂಬಂಧ ಸೀನನ ಮೂವರು ಸಹಚರರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೌಡಿಶೀಟರ್ ಸೀನನ ಮೇಲೆ ಪೊಲೀಸರ ಮೇಲಿನ ಹಲ್ಲೆ ಸೇರಿದಂತೆ ಇನ್ನೂ ಹಲವು ಪ್ರಕರಣಗಳಿವೆ.

  • ಕ್ರೈಂ ಲೋಕದ ಅಪರೂಪದ ಕೇಸ್: ಜೀವಾಣುಗಳಿಂದ ಆರೋಪಿಗಳು ಅರೆಸ್ಟ್

    ಕ್ರೈಂ ಲೋಕದ ಅಪರೂಪದ ಕೇಸ್: ಜೀವಾಣುಗಳಿಂದ ಆರೋಪಿಗಳು ಅರೆಸ್ಟ್

    ಬೆಂಗಳೂರು: ಆರೋಪಿಗಳನ್ನ ಪತ್ತೆ ಹಚ್ಚಲು ಪೊಲೀಸರು ನಾನಾ ತಂತ್ರಗಳನ್ನ ಅನುಸರಿಸುತ್ತಾರೆ. ಆದರೆ ಇದೇ ಮೊದಲಬಾರಿಗೆ ಕೈಯಲ್ಲಿರೋ ಜೀವಾಣುಗಳ ಸಹಾಯದಿಂದ ಮೂವರು ಕೊಲೆ ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

    ಏಪ್ರಿಲ್ 4 ರಂದು ಜಯನಗರದ ಈಸ್ಟ್ ಎಂಡ್‍ನಲ್ಲಿದ್ದ 58 ವರ್ಷದ ಮಹಿಳೆ ಮಣಿ ಅವರ ಕೊಲೆ ಅವರ ಮನೆಯಲ್ಲೇ ನಡೆದಿತ್ತು. ಬೆಳಗ್ಗೆ ಎಂಟು ಘಂಟೆಗೆ ಮಣಿ ಅವರ ಮಗ ಶ್ರೀನಿವಾಸ್ ಎದ್ದು ಬಾಗಿಲು ತೆರೆಯಲು ಪ್ರಯತ್ನಿಸಿದಾಗ ಹೊರಗಿನಿಂದ ಚಿಲಕ ಹಾಕಲಾಗಿತ್ತು. ನಂತ್ರ ಪರಿಚಾರಕನಿಗೆ ಕರೆ ಮಾಡಿ ಕರೆಸಿಕೊಂಡು ಚಿಲಕ ಓಪನ್ ಮಾಡಿ ನೋಡಿದಾಗ ಮಣಿಯವರ ಕೊಲೆಯಾಗಿರೋದು ಗೊತ್ತಾಗುತ್ತದೆ.

    ತನಿಖೆ ಹೇಗೆ ನಡೆಯಿತು?
    ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ತಿಲಕನಗರ ಪೊಲೀಸರಿಗೆ ಆರೋಪಿಗಳನ್ನ ಹುಡುಕೋದು ಸವಾಲಿನ ಕೆಲಸವಾಗಿರುತ್ತೆ. ಕೊನೆಗೆ ಕಳ್ಳತನಕ್ಕೆ ಬಂದಿದ್ದ ಆರೋಪಿಗಳ ಫಿಂಗರ್ ಪ್ರಿಂಟ್ ಕಿಟಕಿ ಮೇಲೆ ಬಿದ್ದಿರುತ್ತೆ. ವಿಧಿ ವಿಜ್ಞಾನ ಪ್ರಯೋಗಾಲಯದ ನೆರವಿನಿಂದ ಕಳ್ಳರ ಫಿಂಗರ್ ಪ್ರಿಂಟ್ ಇದ್ದ ಜಾಗದಲ್ಲಿ ಜೀವಾಣುಗಳನ್ನು ಕಲೆಹಾಕಲಾಗುತ್ತದೆ. ಜೀವಾಣುಗಳನ್ನ ಮೈಕ್ರೊ ಸ್ಕೋಪಿಕಲ್ ಎಕ್ಸಾಮಿನೇಷನ್‍ಗೆ ಒಳಪಡಿಸಿದಾಗ ಪೊಲೀಸ್ರಿಗೆ ಒಂದು ಕ್ಲೂ ಸಿಗುತ್ತೆ. ಈ ತರಹದ ಜೀವಾಣುಗಳು ಚಿಂದಿ ಆಯೋರ ಬಳಿ ಹೆಚ್ಚಿಗೆ ಕಂಡುಬರೋದಾಗಿ ಗೊತ್ತಾಗುತ್ತೆ.

    ಈ ವಿಚಾರ ತಿಳಿದಿದ್ದೆ ತಡ ಆ ಪ್ರದೇಶದಲ್ಲಿರುವ ಚಿಂದಿ ಆಯೋರನ್ನೆಲ್ಲಾ ಕರೆದುಕೊಂಡು ಬಂದು ವಿಚಾರಣೆ ಮಾಡಿದಾಗ ಕೊಲೆ ಆರೋಪಿಗಳು ಸಿಕ್ಕಿಬಿಳ್ತಾರೆ. ಗಣೇಶ್ ಅಲಿಯಾಸ್ ಚಪ್ಪರ್, ಚಿನ್ನರಾಜು ಅಲಿಯಾಸ್ ಮಾಡು, ಶಕ್ತಿವೇಲು ಅಲಿಯಾಸ್ ಬಾಸ್‍ನನ್ನ ಪೊಲೀಸ್ರು ಬಂಧಿಸ್ತಾರೆ.

    ಅಂದು ನಡೆದಿದ್ದು ಏನು?
    ಶಕ್ತಿವೇಲುವಿನ ಆಜ್ಞೆ ಮೇರೆಗೆ ಮದ್ಯಪಾನ ಮಾಡಿಕೊಂಡು ನಾನು ಮಣಿ ಅವರ ಮನೆಗೆ ನುಗ್ಗಿದ್ದೆ. ಮಗ ಶ್ರೀನಿವಾಸ್ ಕಿಶೋರ್ ಮಲಗಿದ್ದ ಕೋಣೆಗೆ ಹೊರಗಿನಿಂದ ಚಿಲಕ ಹಾಕಿ ನಾನು ಮಣಿಯವರು ಮಲಗಿದ್ದ ರೂಮ್‍ಗೆ ಎಂಟ್ರಿ ಕೊಟ್ಟಿದ್ದೆ. ಅವರ ಕತ್ತಿನಲ್ಲಿದ್ದ ಸರವನ್ನ ಕಟ್ ಮಾಡಿ ಎಳೆದ ನಂತ್ರ ಅವರ ಕೈಯಲ್ಲಿದ್ದ ಬಳೆಯನ್ನ ಬಿಚ್ಚಲು ಪ್ರಯತ್ನಿಸಿದಾಗ ಎಚ್ಚರಗೊಂಡ ಮಣಿಯವರು ಕೂಗಿಕೊಂಡಿದ್ದರು. ಕೂಡಲೇ ನಾನು ಕಬ್ಬಿಣದ ರಾಡ್‍ನಿಂದ ಅವರ ತಲೆಗೆ ಎರಡು ಬಾರಿ ಹೊಡೆದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದೆ ಎಂದು ಗಣೇಶ ಪೊಲೀಸ್ ವಿಚಾರಣೆ ವೇಳೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

    ಆರೋಪಿಗಳ ಬಂಧನದಿಂದ 27 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದ್ದು, 9 ಮನೆಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ತಿಳಿಸಿದ್ದಾರೆ.

    ಅನಾಥರನ್ನಾಗಿ ಮಾಡಿತು ಕೊಲೆ
    ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಬಂದು ಶ್ರೀನಿವಾಸ್ ಕುಟುಂಬ ನೆಲೆ ಕಂಡುಕೊಂಡಿತ್ತು. ತುಂಬಾ ಸುಸಂಸ್ಕೃತ ಕುಟುಂಬದ ಹಿನ್ನೆಲೆ ಹೊಂದಿದ್ದ ಮಣಿಯವರ ಪತಿ 2014ರಲ್ಲಿ ಕ್ಯಾನ್ಸರ್‍ನಿಂದ ಮೃತಪಟ್ಟಿದ್ದರು. ತಾಯಿಯನ್ನು ನೋಡಿಕೊಳ್ಳುವ ಸಲುವಾಗಿ ಅಮೆರಿಕದಲ್ಲಿ ಸಿಕ್ಕಿದ್ದ ಕೆಲಸವನ್ನ ಶ್ರೀನಿವಾಸ್ ತಿರಸ್ಕರಿಸಿ ತಾಯಿಯ ಜೊತೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಆದರೆ ದುರ್ವಿಧಿ ಮಣಿಯವರನ್ನ ಕಿತ್ತುಕೊಂಡು ಶ್ರೀನಿವಾಸ್ ಅವರನ್ನು ಅನಾಥರನ್ನಾಗಿ ಮಾಡಿದೆ.

    ಮಾಡಿದ್ದುಣ್ಣೋ ಮಾರಾಯ ಅನ್ನೋ ಹಾಗೆ ಆರೋಪಿಗಳು ಜೈಲು ಸೇರಿದ್ದಾರೆ. ಜೀವಾಣುಗಳ ಸಹಾಯದಿಂದಲೂ ಆರೋಪಿಗಳನ್ನ ಹಿಡಿಯಬಹುದು ಎಂದು ತಿಲಕನಗರ ಇನ್ಸ್ ಪೆಕ್ಟರ್ ತನ್ವೀರ್ ಮತ್ತು ತಂಡ ಈಗ ತೋರಿಸಿಕೊಟ್ಟಿದೆ.

  • ಚಾಕ್ಲೇಟ್ ನೀಡುವುದಾಗಿ ಹೇಳಿ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ!

    ಚಾಕ್ಲೇಟ್ ನೀಡುವುದಾಗಿ ಹೇಳಿ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ!

    ಬೆಂಗಳೂರು: ಚಾಕ್ಲೇಟ್ ನೀಡುವುದಾಗಿ ಹೇಳಿ 10 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಕಾಮುಕನೊಬ್ಬ ದೌರ್ಜನ್ಯ ಏಸಗಿದ್ದಾನೆ ಎಂದು ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ನಗರದ ಗಿರಿನಗರ ಬಳಿಯ ನರಿಹಳ್ಳಿ ಲೇಔಟ್‍ನಲ್ಲಿ ಈ ಘಟನೆ ನಡೆದಿದೆ. ಅಂಗಡಿಯೊಂದರ ಮಾಲೀಕನಾಗಿರುವ ನಟರಾಜ್ ಎಂಬವನೇ ರಸ್ತೆಯಲ್ಲಿ ಹೋಗುತ್ತಿದ್ದ 10 ವರ್ಷದ ಬಾಲಕಿಯನ್ನು ಚಾಕ್ಲೇಟ್ ನೀಡುವುದಾಗಿ ಹೇಳಿ ಕರೆದಿದ್ದಾನೆ. ಚಾಕ್ಲೇಟ್‍ಗಾಗಿ ಅಂಗಡಿಯೊಳಗೆ ಬಂದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ್ದಾನೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: 6 ವರ್ಷದ ಮಗುವನ್ನು ಅತ್ಯಾಚಾರವೆಸಗಿ ಕೊಂದು, ಮನೆಯಲ್ಲೇ ಮೃತದೇಹ ಬಚ್ಚಿಟ್ಟಿದ್ದ ಕಾಮುಕ 

    ಈ ಸಂಬಂಧ ಬಾಲಕಿಯ ಪೋಷಕರು ದೂರು ದಾಖಲಿಸಿದ್ದು, ಪೊಲೀಸರು ಆರೋಪಿ ನಟರಾಜ್‍ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ಇದನ್ನೂ ಓದಿ: ಬೈಕ್‍ನಲ್ಲಿ ಬಂದು ಯುವತಿಯರ ಹಿಂಭಾಗಕ್ಕೆ ಹೊಡೆದು ಪರಾರಿಯಾಗ್ತಿದ್ದ ಕಾಮುಕ ಟೆಕ್ಕಿ ಅರೆಸ್ಟ್! 

    https://www.youtube.com/watch?v=0_4BMVbLA8g

  • ಬಾಡಿಗೆ ಕಟ್ಟಲಾಗದೆ ಸ್ವಂತ ಮನೆಗೆ ಬಂದ್ರೆ ಹೆತ್ತ ತಾಯಿಯನ್ನೇ ಹೊರಗಟ್ಟಿದ ಪೊಲೀಸ್

    ಬಾಡಿಗೆ ಕಟ್ಟಲಾಗದೆ ಸ್ವಂತ ಮನೆಗೆ ಬಂದ್ರೆ ಹೆತ್ತ ತಾಯಿಯನ್ನೇ ಹೊರಗಟ್ಟಿದ ಪೊಲೀಸ್

    ಬೆಂಗಳೂರು: ಪೊಲೀಸ್ ಮುಖ್ಯಪೇದೆ ತನ್ನ ಹೆತ್ತ ತಾಯಿಯನ್ನೇ ಬೀದಿಗಟ್ಟಿದ ಘಟನೆ ಬೆಂಗಳೂರಿನ ಚಂದ್ರಾಲೇಔಟ್‍ನ ಬಿಸಿಸಿ ಬಡಾವಣೆಯಲ್ಲಿ ನಡೆದಿದೆ.

    ಬ್ಯಾಟರಾಯನಪುರ ಠಾಣೆಯಲ್ಲಿ ಮುಖ್ಯಪೇದೆಯಾಗಿರೋ ಜಗದೀಶ್ ಕಳೆದ ರಾತ್ರಿ ವೃದ್ಧ ತಾಯಿ ಪದ್ಮಾವತಮ್ಮರನ್ನ ಮನೆಯಿಂದ ನಿರ್ದಯವಾಗಿ ಹೊರಗಟ್ಟಿದ್ದಾನೆ. ಐವರು ಉದ್ಯೋಗಸ್ಥ ಮಕ್ಕಳನ್ನ ಹೊಂದಿರುವ ಪದ್ಮಾವತಮ್ಮ ಬಿಸಿಸಿ ಬಡಾವಣೆಯಲ್ಲಿರುವ ನಾಲ್ಕು ಅಂತಸ್ತಿನ ಮನೆಯಲ್ಲಿ ವಾಸವಿದ್ದರು. ಜಗದೀಶ್ ಮತ್ತು ಅವರ ಪತ್ನಿಯ ನಿತ್ಯ ಕಿರುಕುಳದಿಂದ ಸ್ವಂತ ಮನೆಯಿದ್ದೂ ಬಾಡಿಗೆ ಮನೆಯಲ್ಲಿ ವಾಸವಿದ್ದರು.

    ಆದ್ರೆ ಬಾಡಿಗೆ ಕಟ್ಟಲಾಗದೆ ಸೋಮವಾರ ತನ್ನ ಸ್ವಂತ ಮನೆಗೆ ಬಂದ್ರೆ ಪುತ್ರ ಜಗದೀಶ್ ನಿರ್ದಾಕ್ಷಿಣ್ಯವಾಗಿ ಹೆತ್ತ ತಾಯಿಯನ್ನು ಮನೆಯಿಂದ ಹೊರಗಟ್ಟಿ ಅಮಾನವೀಯತೆ ಮೆರೆದಿದ್ದಾನೆ. ತನ್ನ ಉಳಿದ ಸಹೋದರರ ಮೇಲೂ ಖಾಕಿ ದರ್ಪ ತೋರಿಸಿರೋ ಜಗದೀಶ್ ವಿರುದ್ಧ ಸಹೋದರರೇ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.