Tag: police

  • ಜಾನುವಾರುಗಳ ಮೇಲೆ ದಾಳಿ ಮಾಡಿ ಆತಂಕಗೊಳಿಸಿದ್ದ ಚಿರತೆ ಕೊನೆಗೂ ಸೆರೆ

    ಜಾನುವಾರುಗಳ ಮೇಲೆ ದಾಳಿ ಮಾಡಿ ಆತಂಕಗೊಳಿಸಿದ್ದ ಚಿರತೆ ಕೊನೆಗೂ ಸೆರೆ

    ರಾಯಚೂರು: ರಾಯಚೂರಿನ ಲಿಂಗಸಗೂರು ತಾಲೂಕಿನ ಮುದಗಲ್ ಬಳಿಯ ಭೈರಪ್ಪನಗುಡ್ಡದಲ್ಲಿ ಕಳೆದ ಒಂದು ವಾರದಿಂದ ಬೀಡುಬಿಟ್ಟಿದ್ದ ಗಂಡು ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ.

    ಜಾನುವಾರುಗಳ ಮೇಲೆ ದಾಳಿ ಮಾಡಿ ಸುತ್ತಮುತ್ತ ಗ್ರಾಮಸ್ಥರಲ್ಲಿ ಭಯಹುಟ್ಟಿಸಿದ್ದ ಚಿರತೆ ಇದುವರೆಗೂ ಒಂದು ಆಕಳು ಕರು, ಆರು ಕುರಿ ಹಾಗೂ 20 ನಾಯಿಗಳ ಮೇಲೆ ದಾಳಿ ಮಾಡಿತ್ತು. ಚಿರತೆ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಭೈರಪ್ಪನಗುಡ್ಡದಲ್ಲಿ ಬೋನು ಇಟ್ಟು ಕಾರ್ಯಚರಣೆ ನಡೆಸಿದ್ದರು. ಗುಡ್ಡಕ್ಕೆ ಬಾರದಂತೆ ದನಗಾಯಿಗಳಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು ಪೊಲೀಸರು ಸಹ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು.

    ಕೊನೆಗೂ ಚಿರತೆ ಬೋನಿಗೆ ಬಿದ್ದಿದ್ದು ಸುತ್ತಮುತ್ತಲ ಗ್ರಾಮದ ಜನತೆ ನಿರಾಳರಾಗಿದ್ದಾರೆ. 8 ತಿಂಗಳ ಹಿಂದೆ ಇದೇ ಗುಡ್ಡದಲ್ಲಿ ಹಸಿವಿನಿಂದ ಸಾವನ್ನಪ್ಪಿದ್ದ ಗಂಡು ಚಿರತೆಯ ಶವ ಪತ್ತೆಯಾಗಿತ್ತು. ಇದಾದ ಬಳಿಕ ಪಕ್ಕದ ದುರ್ಗಮ್ಮ ದೇವಿ ಬೆಟ್ಟದಲ್ಲಿ ಕಾಣಿಸಿಕೊಂಡಿದ್ದ ಮತ್ತೊಂದು ಚಿರತೆ ಬೋನಿಗೆ ಬಿದ್ದಿತ್ತು. ಈ ಪ್ರದೇಶದಲ್ಲಿ ಕಾಣಿಸಿಕೊಂಡ ಮೂರನೇ ಚಿರತೆ ಇದಾಗಿದೆ.

     

  • ಫಿಲಂಗೆ ಕರೆದುಕೊಂಡು ಹೋಗೋ ನೆಪದಲ್ಲಿ 7ನೇ ತರಗತಿ ಬಾಲಕಿಯ ಮೇಲೆ ಗ್ಯಾಂಗ್‍ರೇಪ್

    ಫಿಲಂಗೆ ಕರೆದುಕೊಂಡು ಹೋಗೋ ನೆಪದಲ್ಲಿ 7ನೇ ತರಗತಿ ಬಾಲಕಿಯ ಮೇಲೆ ಗ್ಯಾಂಗ್‍ರೇಪ್

    – ಇಬ್ಬರು ಅಪ್ರಾಪ್ತರು ಸೇರಿ ಮೂವರ ಬಂಧನ

    ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮತ್ತೆ ಕಾಮಮೃಗಗಳ ಅಟ್ಟಹಾಸ ಮುಂದುವರೆದಿದೆ. ಫಿಲಂಗೆ ಕರೆದುಕೊಂಡು ಹೋಗುವ ನೆಪದಲ್ಲಿ ಬಾಲಕಿಯ ಮೇಲೆ ಮೂವರು ಯುವಕರು ಸಾಮೂಹಿಕ ಅತ್ಯಾಚಾರವೆಸಗಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಬಾಲಕಿ 7ನೇ ತರಗತಿ ವಿದ್ಯಾರ್ಥಿಯೆಂದು ತಿಳಿದುಬಂದಿದೆ. ಮೂವರಲ್ಲಿ ಒಬ್ಬಾತ ಬಾಲಕಿ ಕುಟುಂಬಕ್ಕೆ ಪರಿಚಯಸ್ಥನಾಗಿದ್ದ. ಅಲ್ಲದೆ ಮೂವರಲ್ಲಿ ಇಬ್ಬರು ಯುವಕರು ಅಪ್ರಾಪ್ತರೆಂದು ತಿಳಿದುಬಂದಿದೆ.

    ನಡೆದಿದ್ದೇನು?: ಮೇ 8ರಂದು ಬಾಲಕಿಯನ್ನ ಯಶವಂತಪುರಕ್ಕೆ ಫಿಲಂ ನೋಡಲು ಕರೆದುಕೊಂಡು ಬಂದಿದ್ದ ಆರೋಪಿ ರಾತ್ರಿ 8-30ರ ನಂತರ ಬಾಲಕಿಗೆ ಮತ್ತು ಬರುವ ಜ್ಯೂಸ್ ಕುಡಿಸಿ ಪೀಣ್ಯದ ಪಾಳು ಬಿದ್ದ ಮನೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ. ನಂತರ ಸ್ನೇಹಿತರಿಗೆ ಕರೆ ಮಾಡಿದ್ದು, ಅವರು ಸಹ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ರು. ಘಟನೆ ನಂತರ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ರು. ರಾತ್ರಿ 10-30ರ ನಂತರ ಎಚ್ಚರಗೊಂಡ ಬಾಲಕಿ ಮನೆ ಕಡೆ ಹೊರಟಾಗ ದಾರಿಯಲ್ಲಿ ಸಿಕ್ಕ ಸ್ನೇಹಿತೆ ಬಳಿ ನಡೆದ ವಿಚಾರವನ್ನೆಲ್ಲಾ ಹೇಳಿದ್ದಾಳೆ. ನಂತರ ಬಾಲಕಿ 5 ದಿನಗಳ ಕಾಲ ಸ್ನೇಹಿತೆಯ ಮನೆಯಲ್ಲೇ ಆಶ್ರಯ ಪಡೆದಿದ್ದಳು. ಅತ್ತ ಬಾಲಕಿಯ ತಾಯಿ ಮಗಳು ನಾಪತ್ತೆಯಾಗಿರೋ ಬಗ್ಗೆ ಮಿಸ್ಸಿಂಗ್ ಕಂಪ್ಲೆಂಟ್ ನೀಡಿದ್ರು.

    5 ದಿನಗಳ ನಂತರ ಮನೆಗೆ ಹೋದ ಬಾಲಕಿ ನಡೆದ ವಿಚಾರವನ್ನೆಲ್ಲಾ ತಾಯಿಗೆ ತಿಳಿಸಿದ್ದಾಳೆ. ಬಾಲಕಿಯ ತಾಯಿ ಮಗಳನ್ನು ಠಾಣೆಗೆ ಕರೆತಂದು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೆÇಲೀಸರು ಇಬ್ಬರು ಬಾಲಾಪರಾಧಿಗಳು ಸೇರಿದಂತೆ ಮೂವರನ್ನ ಬಂಧಿಸಿದ್ದಾರೆ.

  • ಮಹಿಳೆಯ ಕೊಲೆ, ನನ್ನನ್ನು ಹಿಡಿದು ಗಲ್ಲಿಗೇರಿಸಿ ಎಂದು ಆಕೆಯ ರಕ್ತದಲ್ಲೇ ಸಂದೇಶ- ಆರೋಪಿ ಮಗ ಪೊಲೀಸರ ವಶಕ್ಕೆ

    ಮಹಿಳೆಯ ಕೊಲೆ, ನನ್ನನ್ನು ಹಿಡಿದು ಗಲ್ಲಿಗೇರಿಸಿ ಎಂದು ಆಕೆಯ ರಕ್ತದಲ್ಲೇ ಸಂದೇಶ- ಆರೋಪಿ ಮಗ ಪೊಲೀಸರ ವಶಕ್ಕೆ

    ಮುಂಬೈ: ಮಹಿಳೆಯನ್ನ ಚಾಕುವಿನಿಂದ ಇರಿದು ಕೊಂದು ಆಕೆಯ ರಕ್ತದಲ್ಲಿ “ಈಕೆಯಿಂದ ಬೇಸತ್ತು ಹೋಗಿದ್ದೇನೆ, ನನ್ನನ್ನು ಹಿಡಿದು ಗಲ್ಲಿಗೇರಿಸಿ ಎಂದು ಬರೆದು ಕೊನೆಯಲ್ಲಿ ಸ್ಮೈಲಿಯನ್ನೂ ಬರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ 21 ವರ್ಷದ ಮಗನನ್ನು ಈಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ದೇಶದಲ್ಲಿ ಭಾರೀ ಸುದ್ದಿಯಾಗಿದ್ದ ಶೀನಾ ಬೋರಾ ಹತ್ಯೆ ಪ್ರಕರಣವನ್ನ ಮೊದಲಿಗೆ ತನಿಖೆ ಮಾಡಿದ್ದ ಮುಂಬೈನ ಪೊಲೀಸ್ ಅಧಿಕಾರಿ ಧ್ಯಾನೇಶ್ವರ್ ಗಾನೋರ್ ಅವರ ಪತ್ನಿ ದೀಪಾಲಿ ಕೊಲೆಯಾದ ಮಹಿಳೆ. ಬುಧವಾರದಂದು ದೀಪಾಲಿ ಮುಂಬೈನ ಸಾಂಟಾಕ್ರೂಜ್‍ನಲ್ಲಿರೋ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಧ್ಯಾನೇಶ್ವರ್ ಅವರು ಕೆಲಸ ಮುಗಿಸಿ ಮನೆಗೆ ಬಂದಾಗ ಹೆಂಡತಿ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನ ನೋಡಿದ್ದರು. ಅಲ್ಲದೆ ಶವದ ಪಕ್ಕದಲ್ಲಿ ಆಕೆಯದ್ದೇ ರಕ್ತದಿಂದ ಬರೆದ ಸಂದೇಶ ಕೂಡ ಇತ್ತು. ಈಕೆಯಿಂದ ಬೇಸತ್ತು ಹೋಗಿದ್ದೇನೆ, ನನ್ನನ್ನು ಹಿಡಿಯಿರಿ, ಗಲ್ಲಿಗೇರಿಸಿ ಎಂಬ ಸಾಲುಗಳ ಜೊತೆ ಕೊನೆಯಲ್ಲಿ ಸ್ಮೈಲಿ ಫೇಸ್ ಕೂಡ ಬರೆಯಲಾಗಿತ್ತು. ಇದರಿಂದ ಪೊಲೀಸರೇ ಬೆಚ್ಚಿ ಬಿದ್ದಿದ್ದರು.

    ದೀಪಾಲಿ ಕೊಲೆಯಾದ ದಿನದಿಂದ ಅವರ 21 ವರ್ಷದ ಮಗ ಸಿದ್ಧಾಂತ್ ಕಾಣೆಯಾಗಿದ್ದ. ಹೀಗಾಗಿ ಈತನೇ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ರು. ಸಿದ್ಧಾಂತ್ ಜೈಪುರಕ್ಕೆ ಪರಾರಿಯಾಗಿದ್ದಾನೆಂದು ತಿಳಿದು ಅಧಿಕಾರಿಗಳು ಕೂಡಲೇ 3 ಪೊಲೀಸರ ತಂಡವನ್ನ ಅಲ್ಲಿಗೆ ಕಳಿಸಿದ್ರು. ಆದ್ರೆ ಪೊಲೀಸರ ತಂಡ ಜೈಪುರ್‍ಗೆ ಹೋಗುವ ವೇಳೆಗೆ ಸಿದ್ಧಾಂತ್ ಜೋಧ್‍ಪುರಕ್ಕೆ ಹೋಗಿದ್ದ. ನಂತರ ಪೊಲೀಸರು ಸಿದ್ಧಾಂತ್‍ನ ಫೋಟೋವನ್ನ ಜೋಧ್‍ಪುರ್ ಪೊಲೀಸರೊಂದಿಗೆ ಹಂಚಿಕೊಂಡಿದ್ದು, ಅಲ್ಲಿ ಸಿದ್ಧಾಂತ್‍ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯಕ್ಕೆ ಆತನನ್ನು ಮುಂಬೈಗೆ ಕರೆತರಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ರಶ್ಮಿ ಕಾರಂಡಿಕ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರೆಸಿದ್ದು, ಸಿದ್ಧಾಂತ್‍ನನ್ನು ಇನ್ನೂ ಆರೋಪಿಯಾಗಿ ಮಾಡುವುದು ಬಾಕಿ ಇದೆ. ಎಫ್‍ಐಆರ್‍ನಲ್ಲಿ ಇನ್ನೂ ಅಪರಿಚಿತ ವ್ಯಕ್ತಿಗಳಿಂದ ಕೊಲೆ ಎಂದೇ ಇರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ.

  • ಮದ್ವೆಯಾಗಿ ವರ್ಷವಾದ್ರೂ ಮಂಚಕ್ಕೆ ಬಾರದ ಪತಿಯ ವಿರುದ್ಧ ದೂರು ದಾಖಲು

    ಮದ್ವೆಯಾಗಿ ವರ್ಷವಾದ್ರೂ ಮಂಚಕ್ಕೆ ಬಾರದ ಪತಿಯ ವಿರುದ್ಧ ದೂರು ದಾಖಲು

    ಬೆಂಗಳೂರು: ಮದುವೆಯಾಗಿ ವರ್ಷವಾದರೂ ಶಾರೀರಿಕ ಸಂಪರ್ಕಕ್ಕೆ ನಿರಾಕರಿಸುತ್ತಿದ್ದ ಪತಿಯ ವಿರುದ್ಧ ಪತ್ನಿ ವಿಜಯನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ತಮಿಳುನಾಡಿನ ವೇಲೂರು ಮೂಲದ ಬಾಲಾಜಿ ಎಂಬಾತನೊಂದಿಗೆ ಪೈಪ್‍ಲೈನ್ ನಿವಾಸಿಯಾಗಿರುವ ಮಹಿಳೆಯ ಜೊತೆ ಕಳೆದ ವರ್ಷ ಮದುವೆ ನಡೆದಿತ್ತು. ಪೋಷಕರು ಸುಮಾರು 15 ಲಕ್ಷ ರೂ. ಖರ್ಚು ಮಾಡಿ ಚಿನ್ನಾಭರಣ ಮತ್ತು ಬೆಳ್ಳಿಯನ್ನು ನೀಡಿ ಅದ್ಧೂರಿಯಾಗಿ ಮಗಳ ಮದುವೆಯನ್ನು ನೇರವೇರಿಸಿದ್ದರು.

    ಇದನ್ನೂ ಓದಿ: ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಆಸೆಪಟ್ಟ ಬೆಂಗಳೂರಿನ ಟೆಕ್ಕಿ ಪತಿ ವಿರುದ್ಧ ದೂರು 

    ಮದುವೆಯಾದ ನಂತರ ಫಸ್ಟ್ ನೈಟ್ ನೋ ಅಂದಿದ್ದ ಬಾಲಾಜಿ ಮತ್ಯಾವ ರಾತ್ರಿಗೂ ಒಪ್ಪಿರಲಿಲ್ಲ. ಪ್ರತಿದಿನ ಏನಾದ್ರೂ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದ. ಇದರಿಂದಾಗಿ ಸಂಶಯಗೊಂಡ ಮಹಿಳೆ ಪತಿರಾಯನ ಪುರುಷತ್ವದ ಬಗ್ಗೆ ಪರೀಕ್ಷೆ ಮಾಡಿಸಿದಾಗ, ತನ್ನ ಪತಿಗೆ ಪುರುಷತ್ವ ಇಲ್ಲ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

    ಇದನ್ನೂ ಓದಿ: ಹೆಂಡತಿಗೆ ವಯಾಗ್ರ ಮಾತ್ರೆ ತಿನ್ನಿಸಿ ಪೀಡಿಸ್ತಿದ್ನಂತೆ ಕಾಮುಕ ಪತಿ

    ಪುರುಷತ್ವ ಇಲ್ಲದ ವ್ಯಕ್ತಿಯೊಂದಿಗೆ ತನ್ನನ್ನು ಮೋಸದಿಂದ ಮದುವೆ ಮಾಡಿಸಲಾಗಿದೆ ಎಂದು ಸಂತ್ರಸ್ತೆ ಈಗ ಪತಿ ಹಾಗು ಆತನ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದಾರೆ. ಮದುವೆಯಲ್ಲಿ ತಮ್ಮ ಪೋಷಕರು ಖರ್ಚು ಮಾಡಿದ್ದ 15 ಲಕ್ಷ ರೂ. ಹಿಂದುರುಗಿಸಬೇಕೆಂಬ ಅಂಶವನ್ನು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ.

    ಇದನ್ನೂ ಓದಿ: ಗಂಡನ ಕಾಮದಾಟ ಬೇಸತ್ತು ಸುಪಾರಿ ಕೊಟ್ಟು ಗಂಡನನ್ನೇ ಕೊಲ್ಲಿಸಿದ್ಳು! 

    ಇದನ್ನೂ ಓದಿ: ನನ್ನ ಗಂಡನಿಗೆ ಪುರುಷತ್ವ ಇಲ್ಲ ಎಂದು ಪೊಲೀಸರಿಗೆ ಪತ್ನಿ ದೂರು 

    https://www.youtube.com/watch?v=74cON2kOniE

  • ಪ್ರಮೋಷನ್ ಸಿಗದಿದ್ದಕ್ಕೆ ಮನನೊಂದು ಮಹಿಳೆ ಆತ್ಮಹತ್ಯೆ

    ಪ್ರಮೋಷನ್ ಸಿಗದಿದ್ದಕ್ಕೆ ಮನನೊಂದು ಮಹಿಳೆ ಆತ್ಮಹತ್ಯೆ

    ಬೆಂಗಳೂರು: ತನ್ನ ಕನಸಿನಂತೆ ಪ್ರಮೋಷನ್ ದೊರೆತಿಲ್ಲ ಎನ್ನುವ ಕಾರಣಕ್ಕಾಗಿ ಮಹಿಳೆಯೊಬ್ಬರು ವಿದ್ಯಾರಣ್ಯಪುರ ತಿಂಡ್ಲುವಿನ ವಿಘ್ನೇಶ್ವರ ನಗರದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

    ಕಳೆದ ಕೆಲ ವರ್ಷಗಳಿಂದ ಆರ್.ಟಿ. ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ದಿವ್ಯಾ ದಮಯಂತಿ (26) ಎಂಬವರು ಆತ್ಮಹತ್ಯೆಗೆ ಶರಣಾದ ಮಹಿಳೆ.

    ದಿವ್ಯಾ ಅವರು ಕೆಲದಿನಗಳಿಂದ ಫ್ಲೋರ್ ಮ್ಯಾನೇಜರ್ ಹುದ್ದೆಯ ಪ್ರಮೋಷನ್ ನಿರೀಕ್ಷೆಯಲ್ಲಿದ್ದರು. ಆದರೆ ಇವರಿಗೆ ಪ್ರಮೋಷನ್ ನೀಡದೇ ಬೇರೊಬ್ಬ ಮಹಿಳೆಗೆ ಕಂಪನಿ ಪ್ರಮೋಷನ್ ನೀಡಿತ್ತು. ಈ ವಿಚಾರ ತಿಳಿದು ದಿವ್ಯಾ ಖಿನ್ನತೆ ಒಳಗಾಗಿದ್ದರು. ಈಗ ಈ ವಿಚಾರಕ್ಕೆ ಮನನೊಂದು ದಿವ್ಯಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ.

    ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ತನಗೆ ಸಿಗದವನು ಬೇರೊಬ್ಬಳಿಗೂ ಸಿಗಬಾರದೆಂದು ಆ್ಯಸಿಡ್ ಎರಚಿದ್ಳು!

    ತನಗೆ ಸಿಗದವನು ಬೇರೊಬ್ಬಳಿಗೂ ಸಿಗಬಾರದೆಂದು ಆ್ಯಸಿಡ್ ಎರಚಿದ್ಳು!

    ಹೈದ್ರಾಬಾದ: ಗುಂಟೂರು ಜಿಲ್ಲೆಯ ವೆನಿಗ್ಲಾಂಡಾದಲ್ಲಿ ಪ್ರಿಯತಮೆಯೊಬ್ಬಳು ಆಕೆಯ ಮಾಜಿ ಪ್ರೇಮಿ ಮೇಲೆ ಆ್ಯಸಿಡ್ ಎರಚಿ ಹತ್ಯೆ ಮಾಡಿರುವ ಘಟನೆ ಮಂಗಳವಾರ ನಡೆದಿದೆ.

    ಗುಂಟೂರು ಜಿಲ್ಲೆಯ ತಡಿಕೊಂಡ ಪಮುಲಪಡು ಗ್ರಾಮದ ಇಲಿಯಾಸ್ ಮತ್ತು ವೆನಿಗ್ಲಾಂಡದ ಹಿಮಾಬಿಂದು ನಾಲ್ಕು ವರ್ಷದಿಂದ ಪ್ರೀತಿಸುತ್ತಿದ್ದರು. ಬಿಂದು ಖಾಸಗಿ ಕಾಲೇಜಿನಲ್ಲಿ ಫಾರ್ಮಾಸಿ ಓದುತ್ತಿದ್ದರು. ಕಾಲೇಜು ಪದವಿ ದಿನಗಳಿಂದಲೂ ಇಲಿಯಾಸ್ ಮತ್ತು ಬಿಂದು ಸ್ನೇಹಿತರಾಗಿದ್ದರು.

    ಇದನ್ನೂ ಓದಿ: ಆ್ಯಸಿಡ್ ದಾಳಿಗೊಳಗಾದ ಯುವತಿಗೆ ಬಾಳುಕೊಟ್ಟಿತ್ತು ರಾಂಗ್ ನಂಬರ್!

    ಇದ್ದಕ್ಕಿದ್ದಂತೆ ಇವರ ಪ್ರೇಮ ಸಂಬಂಧವೂ ಮುರಿದು ಬಿದ್ದಿತ್ತು. ಮಂಗಳವಾರ ಇಲಿಯಾಸ್ ಮತ್ತೊಂದು ಹುಡುಗಿಯನ್ನು ವಿವಾಹವಾಗಿದ್ದಾನೆ. ಇದರಿಂದ ಅವಮಾನವಾದ ಬಿಂದು ಅದಕ್ಕಾಗಿ ಪ್ರತೀಕಾರ ತೀರಿಸಲು ಅದಕ್ಕಾಗಿ ಇಲಿಯಾಸ್‍ನ್ನು ಭೇಟಿಯಾಗಲು ಕರೆದು, ಅವನ ಮೇಲೆ ಆ್ಯಸಿಡ್ ಎರಚಿದ್ದಾಳೆ. ತೀವ್ರವಾಗಿ ಗಾಯಗೊಂಡ ಇಲಿಯಾಸ್ ಗುಂಟೂರು ಜನರಲ್ ಸರ್ಕಾರಿ ಆಸ್ಪತ್ರೆಯಲ್ಲಿ ಮೈತಪಟ್ಟಿದ್ದಾನೆ.

    ಇಲಿಯಾಸ್ ಕುಟುಂಬ ಸದಸ್ಯರು ಬಿಂದುವಿನ ಜೊತೆ ಸಂಬಂಧವಿರುವುದರ ಬಗ್ಗೆ ನಮಗೆ ತಿಳಿದಿರಲಿಲ್ಲ. ಈ ಘಟನೆ ನಡೆದ ಮೇಲೆಯೇ ನಮಗೆ ಅವರಿಬ್ಬರ ಸಂಬಂಧದ ಬಗ್ಗೆ ತಿಳಿದು ಬಂದಿದೆ ಎಂದು ಹೇಳಿದ್ದಾರೆ. ಮಂಗಲಗಿರಿ ಸಿ.ಐ. ಬ್ಯಹ್ಮಯ್ಯ ಅವರು ಬಿಂದು ಮತ್ತು ಆಕೆಯ ಕೃತ್ಯಕ್ಕೆ ಸಹಾಯ ಮಾಡಿದ ಇಬ್ಬರು ಪುರುಷರನ್ನು ಬಂಧಿಸಿದ್ದಾರೆ.

     

  • ಬಾಡಿಗೆ ಮನೆಗೆ ಬಂದ ಮೂರು ದಿನದಲ್ಲೇ ಮಹಿಳೆಯ ಹತ್ಯೆ: ಸ್ನೇಹಿತೆಯಿಂದಲೇ ಕೃತ್ಯ?

    ಬಾಡಿಗೆ ಮನೆಗೆ ಬಂದ ಮೂರು ದಿನದಲ್ಲೇ ಮಹಿಳೆಯ ಹತ್ಯೆ: ಸ್ನೇಹಿತೆಯಿಂದಲೇ ಕೃತ್ಯ?

    ಬೆಂಗಳೂರು: ನಗರದ ಈಜಿಪುರದ 20ನೇ ಕ್ರಾಸ್‍ನಲ್ಲಿ ಮಹಿಳೆಯೊಬ್ಬರ ಕೊಲೆಯಾಗಿದ್ದು, ಮಹಿಳೆಯ ಶವ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ಹೊನ್ನಮ್ಮ ಅಲಿಯಾಸ್ ಪ್ರಿಯಾ ಕೊಲೆಯಾದ ಮಹಿಳೆ. ಮೂರು ದಿನಗಳ ಹಿಂದೆ ಪ್ರಿಯಾ ಇಜಿಪುರದಲ್ಲಿ ಮನೆಯನ್ನು ಬಾಡಿಗೆ ಪಡೆದುಕೊಂಡು ವಾಸವಾಗಿದ್ದರು. ಮನೆಯ ಮಾಲೀಕರಿಗೆ ನಾನು ಮತ್ತು ಗೆಳತಿ ರಿಯಾ ಇಬ್ಬರೇ ವಾಸವಾಗಿರುವುದು ಎಂದು ತಿಳಿಸಿ ಬಾಡಿಗೆ ಹಣ 7,500 ರೂ. ಮತ್ತು ಮುಂಗಡವಾಗಿ 30,000 ರೂ. ನೀಡಿ ವಾಸವಾಗಿದ್ದರು.

    ಮಂಗಳವಾರ ಮನೆಯಿಂದ ವಾಸನೆ ಬರುತ್ತಿರುವುದನ್ನು ಗಮನಿಸಿದ ಮನೆಯ ಮಾಲೀಕ ಕಿಟಕಿಯಲ್ಲಿ ಇಣುಕಿ ನೋಡಿದಾಗ ಪ್ರಿಯಾ ಶವ ಕಂಡಿದೆ. ಮನೆಯ ಮಾಲೀಕ ಕೂಡಲೇ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಪ್ರಿಯಾ ಮೂಲತಃ ತಮಿಳುನಾಡು ಹೊಸೂರಿನ ಬಾಗಲೂರು ಗ್ರಾಮದವರು ಎಂದು ತಿಳಿದು ಬಂದಿದೆ.

    ಪ್ರಿಯಾ ಕಳೆದ ಆರು ತಿಂಗಳ ಹಿಂದೆ ಗಂಡನ ಜೊತೆ ಜಗಳ ಮಾಡಿಕೊಂಡು ಬೆಂಗಳೂರಿಗೆ ಬಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಇನ್ನೂ ಕೊಲೆಯಾದ ದಿನದಿಂದ ಪ್ರಿಯಾ ಗೆಳತಿ ರಿಯಾ ನಾಪತ್ತೆಯಾಗಿದ್ದಾಳೆ. ರಿಯಾ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಸಂಬಂಧ ವಿವೇಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಬೆಂಗಳೂರಿನಲ್ಲಿ ಮೂವರು ಪಾಕಿಸ್ತಾನಿ ಪ್ರಜೆಗಳು ಅರೆಸ್ಟ್

    ಬೆಂಗಳೂರಿನಲ್ಲಿ ಮೂವರು ಪಾಕಿಸ್ತಾನಿ ಪ್ರಜೆಗಳು ಅರೆಸ್ಟ್

    – ಬಂಧಿತರ ಬಳಿ ಇತ್ತು ಆಧಾರ್, ವೋಟರ್ ಐಡಿ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನೆಲೆಸಿದ್ದ ಮೂವರು ಪಾಕಿಸ್ತಾನಿ ಪ್ರಜೆಗಳು ಮತ್ತು ಓರ್ವ ಕೇರಳ ಮೂಲದ ವ್ಯಕ್ತಿಯನ್ನು ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ.

    ಸಮೀರಾ ಅಬ್ದುಲ್ ರೆಹಮಾನ್, ಕಿರೋನ್ ಗುಲಾಂ ಅಲಿ, ಖಾಸೀಫ್ ಶಂಶುದ್ದೀನ್ ಪಾಕ್ ಪ್ರಜೆಗಳಾಗಿದ್ದರೆ, ಮೊಹಮ್ಮದ್ ಶಿಹಾಬ್ ಕೇರಳ ಮೂಲದ ವ್ಯಕ್ತಿಯಾಗಿದ್ದಾನೆ. ಕಳೆದ ಎರಡು ತಿಂಗಳಿನಿಂದ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ ಇವರ ಬಳಿ ಆಧಾರ್ ಮತ್ತು ವೋಟರ್ ಐಡಿ ದಾಖಲೆಗಳು ಇರುವುದು ಪತ್ತೆಯಾಗಿದೆ.

    ಪಾಕಿಸ್ತಾನದಿಂದ ಬಹರೇನ್ ತೆರಳಿ ಅಲ್ಲಿಂದ ನೇಪಾಳಕ್ಕೆ ಬಂದು ಭಾರತನ್ನು ಇವರು ಪ್ರವೇಶಿಸಿದ್ದಾರೆ ಎನ್ನುವ ಮಾಹಿತಿ ಈಗ ಸಿಕ್ಕಿದೆ.

    ಸಿಕ್ಕಿ ಬಿದ್ದಿದ್ದು ಹೇಗೆ?
    ಕುಮಾರಸ್ವಾಮಿ ಲೇಔಟ್ ನಲ್ಲಿ ನೆಲೆಸಿದ್ದ ಇವರ ಚಲನವಲನಗಳು ಸ್ವಲ್ಪ ಅನುಮಾನ ಮೂಡಿಸುತ್ತಿತ್ತು. ಅನುಮಾನ ಬಂದ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಅನ್ವಯ ಕಳೆದ 15 ದಿನಗಳಿಂದ ಪೊಲೀಸರು ಈ ನಾಲ್ವರ ಚಲನವಲನದ ಮೇಲೆ ಒಂದು ಕಣ್ಣನ್ನು ಇಟ್ಟಿದ್ದರು. ಚಲನವಲನದ ಮೇಲೆ ಸಂಶಯ ಮೂಡಿದ ಹಿನ್ನೆಲೆಯಲ್ಲಿ ಪೊಲೀಸರು ಇವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಎಲ್ಲ ವಿಚಾರಗಳು ಈಗ ಬೆಳಕಿಗೆ ಬಂದಿದೆ. ಈಗ ಸಿಕ್ಕಿರುವುದು ಪ್ರಾಥಮಿಕ ಮಾಹಿತಿಯಾಗಿದ್ದು, ಬಂಧಿತರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು ಮತ್ತಷ್ಟು ಮಾಹಿತಿ ಸಿಗುವ ಸಾಧ್ಯತೆಯಿದೆ.

    ಬಂಧಿತರಿಗೆ ಕೇರಳ ಮೂಲದ ವ್ಯಕ್ತಿಯ ಪರಿಚಯವಾಗಿದ್ದು ಹೇಗೆ? ಅಷ್ಟೇ ಅಲ್ಲದೇ ಭಾರತಕ್ಕೆ ಬಂದ ಎರಡೇ ತಿಂಗಳಿನಲ್ಲಿ ಇವರಿಗೆ ಆಧಾರ್ ಕಾರ್ಡ್ ಮತ್ತು ವೋಟರ್ ಐಡಿ ಸಿಕ್ಕಿದ್ದು ಹೇಗೆ ಎನ್ನುವ ಪ್ರಶ್ನೆಗೆ ವಿಚಾರಣೆ ವೇಳೆ ಉತ್ತರ ಸಿಗಲಿದೆ.

    ಭಾರತದ ಮಹಾನಗರಗಳ ಮೇಲೆ ಪಾಕಿಸ್ತಾನಿ ಉಗ್ರರು ದಾಳಿ ನಡೆಸಲು ಸಿದ್ಧತೆ ನಡೆಸಲು ನಡೆಸುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಗುಪ್ತಚರ ಇಲಾಖೆ ಈ ಹಿಂದೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಬಂಧಿತರಿಗೆ ಉಗ್ರರ ಜೊತೆಗೆ ನಂಟು ಇದೆಯಾ ಎನ್ನುವ ಪ್ರಶ್ನೆ ಈಗ ಎದ್ದಿದೆ.

  • ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ 8 ಜನರಿಂದ ಗ್ಯಾಂಗ್ ರೇಪ್

    ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ 8 ಜನರಿಂದ ಗ್ಯಾಂಗ್ ರೇಪ್

    – ಪ್ರಕರಣ ಮುಚ್ಚಿ ಹಾಕಲು ಸಂತ್ರಸ್ತರಿಗೆ 50 ಸಾವಿರ ರೂ. ಆಫರ್

    ಹೈದರಾಬಾದ್: ಆಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ತಾಂಜಗಿ ಗ್ರಾಮದಲ್ಲಿ ಸ್ಥಳೀಯ ಜಾತ್ರೆಗೆ ಹೋಗಲು ನಿರ್ಧರಿಸಿದ್ದ ಬುಡಕಟ್ಟು ಜನಾಂಗದ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಗ್ರಾಮದ 8 ಜನರ ತಂಡ ಸಾಮೂಹಿಕ ಅತ್ಯಾಚಾರವೆಸಗಿದೆ.

    ಇಬ್ಬರು ಬಾಲಕಿಯರು ಖುಷಿಯಿಂದಲೇ ಜಾತ್ರೆಗೆ ಹೊರಟಿದ್ದರು. ಈ ಸಂದರ್ಭದಲ್ಲಿ ಅವರನ್ನು ಅತ್ಯಾಚಾರವೆಸಗಿ 50,000 ರೂ. ಪರಿಹಾರ ನೀಡಿ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ್ದಾರೆ.

    ಆರೋಪಿ ವಸಂತ್, ಚುನಾಯಿತ ಪ್ರತಿನಿಧಿಯೊಬ್ಬರ ಮಗನಾಗಿದ್ದರೆ, ಮತ್ತೊಬ್ಬ ಆರೋಪಿ ನಾಗೇಂದ್ರ ಹೆಡ್ ಕಾನ್ಸೇಟಬಲ್ ಒಬ್ಬರ ಪುತ್ರನಾಗಿದ್ದಾನೆ. ಈಗ ಇವರಿಬ್ಬರೂ ಸೇರಿದಂತೆ ಆರು ಜನ ಸ್ನೇಹಿತರು ತಲೆಮರೆಸಿಕೊಮಡಿದ್ದಾರೆ.

    ಜಾತ್ರೆಗೆ ಬಾಲಕಿಯರು ತೆರಳುತ್ತಿರುವಾಗ ಭಾರೀ ಮಳೆ ಬಂದ ಹಿನ್ನೆಲೆಯಲ್ಲಿ ಒಂದು ಅಂಗಡಿಯಲ್ಲಿ ಆಶ್ರಮ ಪಡೆದಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ ಆರೋಪಿಗಳು ಅತ್ಯಾಚಾರವೆಸಗಿ ಪರಾರಿಯಾಗಿದ್ದಾರೆ.

    ಈ ಸಂದರ್ಭದಲ್ಲಿ ಪೊಲೀಸರಿಗೆ ದೂರು ನೀಡುವ ಬದಲಾಗಿ ಬುಡಕಟ್ಟು ಸಮುದಾಯದ ಸಂಪ್ರದಾಯದ ಪ್ರಕಾರ ಗ್ರಾಮದ ಹಿರಿಯರನ್ನು ಭೇಟಿಯಾಗಿ ಪ್ರಕರಣದ ಮುಚ್ಚಿ ಹಾಕಲು ಮುಂದಾಗಿದ್ದಾರೆ.

    ಸ್ಥಳೀಯ ವರದಿಗಳು ಹೇಳುವ ಪ್ರಕಾರ ಇಬ್ಬರು ಅಪ್ರಾಪ್ತರಿಗೆ 50 ಸಾವಿರ ರೂ. ನೀಡಲು ಬಂದಾಗ ಅದನ್ನು ಅವರು ಒಪ್ಪಿಕೊಳ್ಳಲು ನಿರಾಕರಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಚಿಂತಾಪಲ್ಲಿ ಪೊಲೀಸರು ಅತ್ಯಾಚಾರ ಮತ್ತು ಪೋಸ್ಕೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ.

  • ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಜೀವಂತವಾಗಿದೆ ಬಾಲಕಾರ್ಮಿಕ ಪದ್ದತಿ!

    ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಜೀವಂತವಾಗಿದೆ ಬಾಲಕಾರ್ಮಿಕ ಪದ್ದತಿ!

    ಬೆಂಗಳೂರು: ನಗರದ ಪೊಲೀಸ ಕೇಂದ್ರ ಕಚೇರಿಯಲ್ಲಿಯೇ ಬಾಲ ಕಾರ್ಮಿಕ ಪದ್ದತಿ ಜೀವಂತವಾಗಿದೆ. ಕಮಿಷನರ್ ಕಚೇರಿಯ ಗ್ರೌಂಡ್ ಫ್ಲೋರ್ ನಲ್ಲಿ ಇರೋ ರೆಕಾರ್ಡ್ ಆಫೀಸ್ ಅಂದ್ರೆ ಎಸ್‍ಪಿಸಿ ಕೇಂದ್ರದಲ್ಲಿ ಬಾಲಕಾರ್ಮಿಕನೊಬ್ಬ ಕೆಲಸ ಮಾಡಿಕೊಂಡಿದ್ದಾನೆ.

    ಈ ಬಾಲಕ ಗ್ರೌಂಡ್ ಫ್ಲೋರ್ ಒಂದರಲ್ಲಿಯೇ ಕೆಲಸ ಮಾಡುವುದಿಲ್ಲ. ಕಮಿಷನರ್ ಛೇಂಬರ್ ಪಕ್ಕದಲ್ಲೂ ಡ್ಯೂಟಿ ಮಾಡ್ತಾನೆ. ತನ್ನ ಸ್ನೇಹಿತರ ಜೊತೆ ಸರಿಯಾಗಿ 11 ಗಂಟೆಗೆ ಬಂದು ಸಂಜೆವರೆಗೆ ಕೆಲಸ ಮಾಡಿ ಆಮೇಲೆ ಮನೆಗೆ ಹೋಗ್ತಾನೆ.

    ಕಾನೂನು ಪಾಲನೆ ಮಾಡೋರ ಬುಡದಲ್ಲೇ ಕಾನೂನಿನ ಕಗ್ಗೋಲೆ ನಡೆಯುತ್ತಿದೆ. ಸದ್ಯ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕಿದೆ.