Tag: police

  • 4 ತಿಂಗಳ ಗರ್ಭಿಣಿಯನ್ನು 4ನೇ ಮಹಡಿಯಿಂದ ತಳ್ಳಿತು ದೆವ್ವ!

    4 ತಿಂಗಳ ಗರ್ಭಿಣಿಯನ್ನು 4ನೇ ಮಹಡಿಯಿಂದ ತಳ್ಳಿತು ದೆವ್ವ!

    ನವದೆಹಲಿ: ದೆವ್ವರೂಪಿ ಪತಿಯೊಬ್ಬ ತನ್ನ 4 ತಿಂಗಳ ಗರ್ಭಿಣಿ ಪತ್ನಿಯನ್ನು ಕಡ್ಟಡದ 4ನೇ ಮಹಡಿಯಿಂದ ತಳ್ಳಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ.

    ಫರಿ ಚೌಕಂಡಿ ನಿವಾಸಿಯಾಗಿರುವ ಅಮರ್ ಸಿಂಗ್(26) ಎಂಬಾತ ತನ್ನ ಗರ್ಭಿಣಿ ಪತ್ನಿ ಬಬಿತಾ ಜೊತೆ ಜಗಳವಾಡಿ ನಂತರ ಆಕೆಯನ್ನು ಕಟ್ಡಡದಿಂದ ಕೆಳಕ್ಕೆ ತಳ್ಳಿದ್ದಾನೆ.

    ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ದೆಹಲಿಯ ಸಫ್ದರ್‍ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಬಿತಾ ತಲೆ, ಬೆನ್ನೆಲುಬು ತುಂಬಾ ಗಾಯಗಳಾಗಿವೆ ಎಂದು ವೈದ್ಯರು ಪೊಲೀಸರಿಗೆ ತಿಳಿಸಿದ್ದಾರೆ.

    ಶನಿವಾರ ರಾತ್ರಿ 11 ಗಂಟೆಗೆ ಈ ಘಟನೆ ನಡೆದಿದ್ದು, ಭಾನುವಾರ ಬೆಳಗ್ಗೆ 4 ಗಂಟೆಗೆ ಬಬಿತಾ ಸಹೋದರ ಸತೀಂದರ್‍ಗೆ ಕರೆ ಮಾಡಿ ಅಮರ್ ಸಿಂಗ್ ದೆವ್ವವೊಂದು ಬಬಿತಾಳನ್ನು ಕಟ್ಟಡದಿಂದ ತಳ್ಳಿದೆ ಎಂದು ಕಟ್ಟು ಕತೆಯನ್ನು ಹೇಳಿದ್ದಾನೆ.

    ಈ ವೇಳೆ ದೆವ್ವ ಅಂದ್ರೆ ಏನು ಎಂದು ಪ್ರಶ್ನಿಸಿದ್ದಕ್ಕೆ ತನ್ನ ಹೇಳಿಕೆಯನ್ನು ಪದೇ ಪದೇ ಬದಲಾಯಿಸುತ್ತಲೇ ಇದ್ದ ಎಂದು ಸತೀಂದರ್ ಹೇಳಿದ್ದಾರೆ. 2016 ರಲ್ಲಿ ಅಮರ್ ಸಿಂಗ್ ಹಾಗೂ ಬಬಿತಾ ಅವರಿಗೆ ಮದುವೆಯಾಗಿದ್ದು, ಅವರಿಗೆ 8 ತಿಂಗಳ ಮಗುವಿದೆ. ಆಕೆ ಮತ್ತೆ ಗರ್ಭಿಣಿಯಾಗಿದ್ದು, ಅಮರ್ ಸಿಂಗ್ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ ಎಂದು ಸತೀಂದರ್ ತಿಳಿಸಿದ್ದಾರೆ.

    ಸತೀಂದರ್ ನೀಡಿದ ದೂರಿನ ಆಧಾರದಲ್ಲಿ ಅಮರ್ ಸಿಂಗ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುವುದು ಪೊಲೀಸ್ ಅಧಿಕಾರಿ ಜಹೀರ್ ಖಾನ್ ತಿಳಿಸಿದ್ದಾರೆ.

    ಇದನ್ನೂ ಓದಿ:ನಿಮ್ಮನ್ನ ಬಿಟ್ಟು ಹೋಗ್ತಿದ್ದೀನಿ, SORRY ಪ್ಲೀಸ್ ಅಳ್ಬೇಡಿ: ಗಂಡನಿಗೆ ಪತ್ರ ಬರೆದು ಮಗುವಿನೊಂದಿಗೆ ಬೇರೊಬ್ಬನ ಜೊತೆ ಪರಾರಿ!

  • ಮನೆಯಿಂದ ಕಾಣೆಯಾಗಿದ್ದ ಮೂವರು ಬಾಲಕರು ಶವವಾಗಿ ಪತ್ತೆ

    ಮನೆಯಿಂದ ಕಾಣೆಯಾಗಿದ್ದ ಮೂವರು ಬಾಲಕರು ಶವವಾಗಿ ಪತ್ತೆ

    ಬಳ್ಳಾರಿ: ರವಿವಾರ ಸಂಜೆ ಮನೆಯಿಂದ ಕಾಣೆಯಾಗಿದ್ದ ಮೂವರು ಬಾಲಕರು ಶವವಾಗಿ ಪತ್ತೆಯಾಗಿದ್ದಾರೆ.

    ಸಂಡೂರು ತಾಲೂಕಿನ ಬಂಡ್ರಿ ಗ್ರಾಮದಲ್ಲಿ ಮನೆಯಿಂದ ಮೂವರು ಬಾಲಕರು ಆಟವಾಡಲೆಂದು ಹೊರಹೋಗಿ ಕಾಣೆಯಾಗಿದ್ದರು. ಇಂದು ಗ್ರಾಮದ ಹೊರವಲಯದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

    ಮಾರುತಿ (10), ಮಹ್ಮದ್ ಸುಭಾನಿ(7) ಮತ್ತು ಗುರುರಾಜ್(9) ಮೃತಪಟ್ಟ ಬಾಲಕರು. ಈ ಮೂವರು ಬಾಲಕರು ಕಾಣೆಯಾದ ಬಗ್ಗೆ ಕೂಡ್ಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿತ್ತು.  ಪೊಲೀಸರು ಬಾಲಕರ ಪತ್ತೆಗಾಗಿ ಶೋಧ ನಡೆಸುತ್ತಿದ್ದರು.

    ಇಂದು ಮುಂಜಾನೆ ಮೂವರು ಬಾಲಕರ ಶವಗಳು ಗ್ರಾಮದ ಕೆರೆಯಲ್ಲಿ ಪತ್ತೆಯಾಗಿವೆ. ಹೀಗಾಗಿ ಬಾಲಕರು ಕೆರೆಯಲ್ಲಿ ಈಜಲು ಹೋಗಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಗ್ರಾಮಸ್ಥರು ಮತ್ತು ಪೋಲೀಸರು ಶವಗಳನ್ನು ಕೆರೆಯಿಂದ ಹೊರತಗೆಯುವ ಕಾರ್ಯ ನಡೆಸುತ್ತಿದ್ದಾರೆ. ಮೂವರು ಬಾಲಕರ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

     

     

     

     

  • ಅಪ್ರಾಪ್ತ ಬಾಲಕಿಯ ಮೇಲೆ ಗ್ಯಾಂಗ್ ರೇಪ್: ಒಂದು ವರ್ಷದ ಬಳಿಕ ನಾಲ್ವರು ಕಾಮುಕರು ಅರೆಸ್ಟ್

    ಅಪ್ರಾಪ್ತ ಬಾಲಕಿಯ ಮೇಲೆ ಗ್ಯಾಂಗ್ ರೇಪ್: ಒಂದು ವರ್ಷದ ಬಳಿಕ ನಾಲ್ವರು ಕಾಮುಕರು ಅರೆಸ್ಟ್

    ಧಾರವಾಡ: ಅಪ್ರಾಪ್ತ ಬಾಲಕಿಯ ಮೇಲೆ ಸಮೂಹಿಕ ಅತ್ಯಾಚಾರ ಎಸಗಿ ತಲೆ ಮರೆಸಿಕೊಂಡಿದ್ದ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

    ಅಣ್ಣಪ್ಪ ಅಲಿಯಾಸ್ ವಿರೇಂದ್ರ ಶೇರಖಾನೆ(23), ಅಮೀತ್ (20), ಸುನಿಲ್ ಮಾದರ(23) ಹಾಗೂ ವಿನೋದ್ ಯಲ್ಲಾಪುರ (20) ಬಂಧಿತ ಆರೋಪಿಗಳು. ಈ ನಾಲ್ವರಲ್ಲಿ ಅಣ್ಣಪ್ಪ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿ ಮದುವೆ ಆಗುವುದಾಗಿ ಹೇಳಿ ಅತ್ಯಾಚಾರ ಎಸಗಿದ್ದನು. ಅಪ್ಪಣ್ಣ ತನ್ನ ಮೂವರು ಸ್ನೇಹಿತರೊಂದಿಗೆ ಬಾಲಕಿಯನ್ನು ಹಳೆ ಹುಬ್ಬಳ್ಳಿಯ ಕೆಇಬಿ ಗ್ರಿಡ್ ನ ಪಾಳು ಕ್ವಾರ್ಟಸ್ ಗೆ ಕರೆದುಕೊಂಡು ಹೋಗಿ ನಿರಂತರ ಅತ್ಯಾಚಾರ ಮಾಡಿದ್ದರು.

    ಅತ್ಯಾಚಾರಕ್ಕೊಳಾಗದ ಬಾಲಕಿ ಮಗುವಿಗೂ ಸಹ ಜನ್ಮ ನೀಡಿದ್ದಳು. 2016ರ ಆರಂಭದಿಂದ ಕಾಮುಕರು ಅಪ್ರಾಪ್ತೆಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾರೆ. ಡಿಸೆಂಬರ್‍ನಲ್ಲಿ ಬಾಲಕಿ ಮಗುವಿಗೆ ಸಹ ಜನ್ಮ ನೀಡಿದ್ದಾಳೆ. ಆದರೆ ಪೋಷಕರು ಮರ್ಯಾದೆಗೆ ಹೆದರಿ ಸುಮ್ಮನಾಗಿದ್ರು. ಕೊನೆಗೆ ಅಪ್ರಾಪ್ತೆಯೇ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.

    ದೂರು ದಾಖಲಾದ ನಂತರ ಆರೋಪಿಗಳು ನಾಪತ್ತೆಯಾಗಿದ್ದರು. ಕೊನೆಗೂ ಇಂದು ಪೊಲೀಸರು ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶ್ವಸಿಯಾಗಿದ್ದಾರೆ.

     

  • ಅರೆಬೆಂದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ- ಯುವತಿಯ ತಾಯಿ ಸೇರಿ ನಾಲ್ವರ ಬಂಧನ

    ಅರೆಬೆಂದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ- ಯುವತಿಯ ತಾಯಿ ಸೇರಿ ನಾಲ್ವರ ಬಂಧನ

    ವಿಜಯಪುರ: ಶನಿವಾರದಂದು ಅರೆಬೆಂದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ತಾಯಿ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

    ಬೇರೆ ಜಾತಿಯ ಯುವಕನನ್ನ ಮದುವೆಯಾದ ಕಾರಣ ಮರ್ಯಾದಾ ಹತ್ಯೆಯಾಗಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ಈ ನಾಲ್ವರನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗುಂಡಕನಾಳ ಗ್ರಾಮದ ಹೊರವಲಯದಲ್ಲಿ ಯುವತಿಯೊಬ್ಬಳ ಶವ ಪತ್ತೆಯಾಗಿತ್ತು. ಆಕೆಯನ್ನು ಗುಂಡಕನಾಳ ಗ್ರಾಮದ ಬಾನು ಅತ್ತಾರ(20) ಎಂದು ಗುರುತಿಸಲಾಗಿತ್ತು. ಮೃತ ಯುವತಿ ಗರ್ಭಿಣಿಯಾಗಿದ್ದಳು ಎನ್ನಲಾಗಿದೆ. ಯುವತಿ ಅನ್ಯ ಜಾತಿಯ ಯುವಕಮೊಂದಿಗೆ ಪ್ರೀತಿಸಿ ಮದುವೆಯಾಗಿದ್ದಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

    ಕಳೆದ ಜನವರಿಯಲ್ಲಿ ಪ್ರೇಮಿ ಸಾಯಬಣ್ಣ ಶರಣಪ್ಪ ಕೊಣ್ಣೂರ ಜೊತೆ ಯುವತಿ ನಾಪತ್ತೆಯಾಗಿದ್ದಳು. ನಾಲ್ಕು ದಿನದ ಹಿಂದೆ ಯುವತಿ ಮತ್ತು ಪ್ರಿಯಕರ ಗೋವಾದಿಂದ ಸ್ವಗ್ರಾಮಕ್ಕೆ ಬಂದಿದ್ದರು. ಇಬ್ಬರೂ ಮನೆಯಲ್ಲಿದ್ದಾಗ ಯುವತಿಯ ಸಹೋದರ ಅಕ್ಬರ, ತಾಯಿ ರಂಜಾನಬಿ, ಯುವತಿಯ ಅಕ್ಕ ದಾವಲಬಿ, ಯುವತಿಯ ಅಕ್ಕನ ಗಂಡ ಜಿಲಾನಿ ಸೇರಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಬಾನು ಅತ್ತಾರ ಪತಿ ಸಾಯಬಣ್ಣ ಸರಣಪ್ಪ ಕೊಣ್ಣೂರ ಪರಾರಿಯಾಗಿದ್ದಾನೆ. ಯುವತಿಯ ಮೇಲೆ ಹಲ್ಲೆ ಮಾಡಿದ ನಂತರ ಆಕೆ ಪ್ರಜ್ಞೆ ತಪ್ಪಿ ಬಿದ್ದಾಗ ಯುವತಿಯ ಪೋಷಕರು ಶವ ಸುಟ್ಟುಹಾಕಲು ಯತ್ನಿಸಿದ್ದಾರೆ ಎಂದು ಹೇಳಲಾಗಿದೆ.

    ಪ್ರಕರಣ ಬೆಳಕಿಗೆ ಬಂದ ನಂತರ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಇದೀಗ ತಾಳಿಕೋಟೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.

     

  • ಅಕ್ರಮ ಸಂಬಂಧಕ್ಕಾಗಿ ಗಂಡನಿಗೇ ಸ್ಕೆಚ್ ಹಾಕಿದ್ಳು ಹೆಂಡ್ತಿ..?

    ಅಕ್ರಮ ಸಂಬಂಧಕ್ಕಾಗಿ ಗಂಡನಿಗೇ ಸ್ಕೆಚ್ ಹಾಕಿದ್ಳು ಹೆಂಡ್ತಿ..?

    ಬೆಂಗಳೂರು: ತನ್ನ ಅಕ್ರಮ ಸಂಬಂಧಕ್ಕಾಗಿ ಪ್ರಿಯಕರನ ಜೊತೆ ಸೇರಿ ಪತ್ನಿಯೊಬ್ಬಳು ಗಂಡನ ಕೊಲೆಗೆ ಸ್ಕೆಚ್ ಹಾಕಿದ್ದಾಳೆ ಎಂದು ಕಾಡುಗೋಡಿ ಪೊಲೀಸ್ ಸ್ಟೇಷನ್‍ನಲ್ಲಿ ಪ್ರಕರಣ ದಾಖಲಾಗಿದೆ.

    ಸುಧಾ ಎಂಬ ಮಹಿಳೆಯೇ ತನ್ನ ಪತಿ ಸೋಮಶೇಖರ್ ಕೊಲೆಗೆ ಸುಫಾರಿ ನೀಡಿದ್ದಳು ಎಂದು ದೂರು ದಾಖಲಾಗಿದೆ. ಸುಧಾ ತನ್ನ ಪ್ರಿಯಕರ ಅರುಣ್ ಎಂಬವನಿಗೆ ಸುಫಾರಿ ನೀಡಿದ್ದಳು. ಶುಕ್ರವಾರ ರಾತ್ರಿ ಗೆಳಯನ ಮನೆಗೆ ಹೋಗುವ ವೇಳೆ ಸೋಮಶೇಖರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.

    ಯಾರಿದು ಅರುಣ್: ಸುಧಾ ಮತ್ತು ಅರುಣ್ ಇಬ್ಬರೂ ಕ್ಲಾಸ್ ಮೆಟ್ ಆಗಿದ್ದರು. ಈ ನಡುವೆ ಇಬ್ಬರ ನಡುವೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ. ಸುಧಾ ಮತ್ತು ಸೋಮಶೇಖರ ಇಬ್ಬರಿಗೂ ವಿವಾಹವಾಗಿ ಹತ್ತು ವರ್ಷಗಳಾಗಿದ್ದು, ಕಳೆದ 5 ವರ್ಷಗಳಿಂದ ಅರುಣ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಸೋಮಶೇಖರ್ ಹೇಳ್ತಾರೆ.

    ಸುಧಾ ನಡವಳಿಕೆಯ ಬಗ್ಗೆ ಅನುಮಾನಗೊಂಡ ಸೋಮಶೇಖರ್ ಪತ್ನಿಯ ಮೊಬೈಲ್ ಚೆಕ್ ಮಾಡಿದಾಗ ಬರೋಬ್ಬರಿ 400 ಕಾಲ್ ರೆಕಾರ್ಡ್‍ಗಳು ಪತ್ತೆಯಾಗಿವೆ. ಈ ಎಲ್ಲಾ ಕಾಲ್ ರೆಕಾರ್ಡ್‍ಗಳನ್ನು ಕೇಳಿದ ಸೋಮಶೇಖರ್ ಗಾಬರಿಗೊಂಡಿದ್ದಾರೆ. ಈ ಕಾಲ್ ರೆಕಾರ್ಡ್‍ಗಳಲ್ಲಿ ಸುಧಾ ಮತ್ತು ಅರುಣ್ ಇಬ್ಬರೂ ಸೋಮಶೇಖರ್ ಕೊಲೆಗೆ ಸ್ಕೆಚ್ ಹಾಕಿರುವುದು ಗೊತ್ತಾಗಿದೆ.

    ಆಸ್ತಿಗಾಗಿ ಮಾಡಿದ್ರೂ ಪ್ಲಾನ್: ಇನ್ನು ಸುಧಾ ಮತ್ತು ಅರುಣ್ ಸೋಮಶೇಖರ್ ಅವರ ಆಸ್ತಿಯನ್ನು ಕಬಳಿಸಲು ಪ್ಲಾನ್ ಕೂಡ ಮಾಡಿದ್ದರು ಎಂದು ಫೋನ್ ರೆಕಾರ್ಡ್‍ನಲ್ಲಿ ತಿಳಿದಿದೆ. ಶುಕ್ರವಾರ ರಾತ್ರಿ ಸೋಮಶೇಖರ್ ಅವರ ಮೇಲೆ ಅರುಣ್ ಮತ್ತು ಪ್ರಸಾದ್ ಎಂಬವರು ಹಲ್ಲೆ ಮಾಡಿದ್ದಾರೆ. ಹಿಂಬದಿಯಿಂದ ರಾಡ್‍ನಿಂದ ತಲೆಗೆ ಹೊಡೆದು, ಎದೆಗೆ ಚಾಕುವಿನಿಂದ ಇರಿದಿದ್ದಾರೆ.

    ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವ ಸೋಮಶೇಖರ ಅವರನ್ನು ಕೆಆರ್ ಪುರಂ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆಸ್ತಿಯನ್ನು ನನ್ನ ಹೆಸರಿಗೆ ಬರೆದುಕೊಡು ಎಂದು ನನ್ನ ಹೆಂಡತಿ ಕಿರುಕುಳ ನೀಡುತ್ತಿದ್ದಾಳೆ ಎಂದು ಸೋಮಶೇಖರ್ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

     

  • 3ನೇ ಪತ್ನಿಗಾಗಿ 2ನೇ ಪತ್ನಿಯನ್ನ ಕೊಲೆಗೈದ ಪ್ರಕರಣ- ಠಾಣೆಗೆ ನುಗ್ಗಿ ಆರೋಪಿಗೆ ಗ್ರಾಮಸ್ಥರಿಂದ ಥಳಿತ

    3ನೇ ಪತ್ನಿಗಾಗಿ 2ನೇ ಪತ್ನಿಯನ್ನ ಕೊಲೆಗೈದ ಪ್ರಕರಣ- ಠಾಣೆಗೆ ನುಗ್ಗಿ ಆರೋಪಿಗೆ ಗ್ರಾಮಸ್ಥರಿಂದ ಥಳಿತ

    ಯಾದಗಿರಿ: ಕೊಲೆ ಆರೋಪಿಯಾಗಿ ಜೈಲಿನಲ್ಲಿದ್ದ ವಿನಾಯಕ ಎಂಬವನ ಮೇಲೆ ಹಲ್ಲೆ ನಡೆಸಲು ಗ್ರಾಮಸ್ಥರು ಪೊಲೀಸ್ ಠಾಣೆಗೆ ನುಗ್ಗಿ ಗಲಾಟೆ ನಡೆಸಿದ್ದಾರೆ. ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಪೊಲೀಸರು ಲಾಠಿ ಚಾರ್ಜ್ ನಡೆಸಿ ವಾತಾವರಣವನ್ನು ತಿಳಿಗೊಳಿಸಿದ್ದಾರೆ.

    ಏನಿದು ಗಲಾಟೆ?: ಶುಕ್ರವಾರ ವಿನಾಯಕ್ ರಾಠೋಡ್ ಎಂಬಾತ ತನ್ನ ಎರಡನೇ ಪತ್ನಿ ಅನಿತಾರನ್ನು ಕೊಲೆಗೈದು ಭೀಮಾ ನದಿಯಲ್ಲಿ ಬಿಸಾಡಿದ್ದನು. ಈ ಪ್ರಕರಣದಲ್ಲಿ ವಿನಾಯಕನ ಮೂರನೇ ಹೆಂಡತಿ ಚಾಂಗುಬಾಯಿ ಸಹ ಭಾಗಿಯಾಗಿದ್ದಾಳೆ. ಪೊಲೀಸರು ಆಕೆಯನ್ನು ಸಹ ಬಂಧಿಸಬೇಕೆಂದು ಅನಿತಾಳ ಸಂಬಂಧಿಕರು ಹಾಗು ಗ್ರಾಮಸ್ಥರು ಇಂದು ನಗರದ ಕನಕ ವೃತ್ತದ ವ ಗ್ರಾಮೀಣ ಪೊಲೀಸ್ ಠಾಣೆ ಮುಂದೆ ನೆರೆದಿದ್ದರು.

    ಈ ವೇಳೆ ಪೊಲೀಸ್ರು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ಏರ್ಪಟ್ಟಿದ್ದು, ಉದ್ರಿಕ್ತ ಗ್ರಾಮಸ್ಥರು ಠಾಣೆಯೊಳಗೆ ನುಗ್ಗಿ ಬಂಧಿಖಾನೆಯೊಳಗಿದ್ದ ಆರೋಪಿ ವಿನಾಯಕನ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಹೀಗಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಈ ವೇಳೆ ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

    ಇದನ್ನೂ ಓದಿ: 3ನೇ ಪತ್ನಿಗಾಗಿ 2ನೇ ಪತ್ನಿಯನ್ನ ಕೊಲೆಗೈದ- ಏನಿದು ಪ್ರಕರಣ?

  • ಅಪ್ಪ ಮಾಜಿ ಸಚಿವ, ಮಗ ಕಾಮುಕ: 300ಕ್ಕೂ ಹೆಚ್ಚು ಹುಡುಗಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದವ ಬೆಂಗಳೂರಿನಲ್ಲಿ ಅರೆಸ್ಟ್

    ಅಪ್ಪ ಮಾಜಿ ಸಚಿವ, ಮಗ ಕಾಮುಕ: 300ಕ್ಕೂ ಹೆಚ್ಚು ಹುಡುಗಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದವ ಬೆಂಗಳೂರಿನಲ್ಲಿ ಅರೆಸ್ಟ್

    ಬೆಂಗಳೂರು: ಅಪ್ಪ ಸಮಾಜದ ಕಲ್ಯಾಣಕ್ಕಾಗಿ ದುಡಿಯುತ್ತಿದ್ದರೆ, ಮಗ ಮಾತ್ರ ಹೆಣ್ಣು ಮಕ್ಕಳ ಬದುಕಿನಲ್ಲಿ ಚೆಲ್ಲಾಟ ಆಡುತ್ತಿದ್ದ. ಆದರೆ ಈಗ ಮಂಗಳೂರು ಮೂಲದ ಯುವತಿ ನೀಡಿದ ದೂರಿನಿಂದಾಗಿ ಕಾಮುಕ ಅರೆಸ್ಟ್ ಆಗಿದ್ದಾನೆ.

    ಕೆಲ ದಿನಗಳ ಹಿಂದೆ ಉದ್ಯೋಗಕ್ಕಾಗಿ ಆರಸಿ ಬಂದಿದ್ದ ಯುವತಿಯೊಬ್ಬರು ಎಚ್ ಆರ್ ಮ್ಯಾನೇಜರ್ ವಿರುದ್ಧ ಲೈಂಗಿಕ ದೌರ್ಜನ್ಯ ದೂರನ್ನು ಮೈ ಲೇಔಟ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದರು. ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ ಪೊಲೀಸರು ಆರೋಪಿ ಹಬೀಬ್ ಗಣಿಯನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಆತ ಜಮ್ಮು ಕಾಶ್ಮೀರದ ಮಾಜಿ ಸಮಾಜ ಕಲ್ಯಾಣ ಸಚಿವ ಅಬ್ದುಲ್ ಗಣಿ ಮಲ್ಲಿಕ್ ಪುತ್ರ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೇ 300ಕ್ಕೂ ಹೆಚ್ಚು ಯುವತಿಯರಿಗೆ ಆತ ಲೈಂಗಿಕ ಕಿರುಕುಳ ನೀಡಿರುವ ಮಾಹಿತಿಯೂ ಸಿಕ್ಕಿದೆ.

    ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದಿದ್ದ:
    ವಾಣಿಜ್ಯ ಪದವೀಧರನಾಗಿರುವ ಹಬೀಬ್ ಗನಿ ಉದ್ಯೋಗವನ್ನು ಅರಸಿ ನಗರಕ್ಕೆ ಬಂದಿದ್ದ. ಕಾಲ್‍ಸೆಂಟರ್‍ನಲ್ಲಿ ಕೆಲಸಕ್ಕೆ ಸೇರಿ ಪುಟ್ಟೇನಹಳ್ಳಿಯಲ್ಲಿ ವಾಸವಿದ್ದ. ಖಾಸಗಿ ಕಂಪೆನಿಗಳ ಸಂದರ್ಶನಕ್ಕೆ ಹೋಗುತ್ತಿದ್ದ ಆರೋಪಿಯು ಸ್ವಾಗತಕಾರರ ಕೊಠಡಿಯಲ್ಲಿರುತ್ತಿದ್ದ ಸಂದರ್ಶಕರ ಪುಸ್ತಕದಲ್ಲಿದ್ದ ವಿವರಗಳನ್ನು ಮೊಬೈಲ್‍ನಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದ.

    ಬಳಿಕ ಈ ನಂಬರ್ ಗಳಿಗೆ ತನ್ನ ಮೊಬೈಲ್ ನಿಂದ, ನಾನು ಮಾನವ ಸಂಪನ್ಮೂಲ ಅಧಿಕಾರಿ ಎಂದು ಪರಿಚಯಿಸಿ, ನಿಮಗೆ ಉದ್ಯೋಗ ಸಿಕ್ಕಿದೆ ಎಂದು ಯುವತಿಯರಿಗೆ ಕರೆ ಮಾಡುತ್ತಿದ್ದ. ಇದಾದ ಬಳಿಕ ಸಂದರ್ಶನ ಬರುವಂತೆ ಹೇಳಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಉತ್ತರ ಪ್ರದೇಶದ ವಿಳಾಸ ನೀಡಿ ಹಬೀಬ್ ಸಿಮ್ ಕಾರ್ಡ್ ಖರೀದಿಸಿದ್ದು, ಈ ಸಿಮ್ ಮೂಲಕ ತನ್ನ ಕೃತ್ಯವನ್ನು ಎಸಗುತ್ತಿದ್ದ.

    ಮಂಗಳೂರು ಯುವತಿಗೆ ಏನು ಮಾಡಿದ್ದ?
    ಮಂಗಳೂರು ಮೂಲದ ಯುವತಿಯೊಬ್ಬರು ಬಿಕಾಂ ಮುಗಿಸಿ ಬ್ಯಾಂಕ್ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದರು. ಮೇ 15 ರಂದು ಕಸ್ಟಮರ್ ಸಪೋರ್ಟ್ ಎಕ್ಸಿಕ್ಯೂಟಿವ್ ಹುದ್ದೆಗಾಗಿ ಖಾಸಗಿ ಬ್ಯಾಂಕ್‍ವೊಂದರಲ್ಲಿ ಸಂದರ್ಶನವನ್ನು ಅಟೆಂಡ್ ಮಾಡಿದ್ದರು. ನಾಲ್ಕು ಸುತ್ತಿನ ಸಂದರ್ಶನದಲ್ಲಿ ಪಾಸ್ ಆಗಿದ್ದ ಯುವತಿ ಐದನೇ ಸುತ್ತು ಮುಗಿದ ಬಳಿಕ ಫಲಿತಾಂಶಕ್ಕಾಗಿ ಕಾಯುತ್ತಿದ್ದರು.

    ಈ ವೇಳೆ ಯುವತಿಗೆ ಅಪರಿಚಿತ ನಂಬರ್‍ನಿಂದ ಕರೆ ಬಂದಿತ್ತು. ನಾನು ಬ್ಯಾಂಕ್‍ನ ಹೆಚ್‍ಆರ್, ನನ್ನ ಹೆಸರು ರೋಹನ್ ಎಂದು ಪರಿಚಯಿಸಿಕೊಂಡ ವ್ಯಕ್ತಿ ಏನೋ ಮುಖ್ಯವಾದ ವಿಷಯ ಚರ್ಚಿಸಬೇಕು ಎಂದು ಹೇಳಿ ಯುವತಿಯನ್ನು ಬ್ಯಾಂಕಿನಿಂದ ಹೊರಬರುವಂತೆ ಹೇಳಿದ್ದ. ಯುವತಿ ಹೊರಹೋದ ನಂತರ ಆ ವ್ಯಕ್ತಿ, ಅಂತಿಮ ಸುತ್ತಿನ
    ಸಂದರ್ಶನದಲ್ಲಿ ಫೇಲ್ ಆಗಿರುವುದಾಗಿ ಯುವತಿಗೆ ತಿಳಿಸಿದ್ದ.

    ಫೇಲ್ ಆಗಿದ್ದರೂ ನೀವು ಕೆಲಸಕ್ಕೆ ಸೇರಬಹುದು ಎಂದು ಯುವತಿಗೆ ಅಮಿಷವೊಡ್ಡಿದ್ದ. ಈ ಬಗ್ಗೆ ಚರ್ಚೆ ಮಾಡುವುದಿದೆ ಮನೆಗೆ ಬನ್ನಿ ಎಂದು ಕರೆದಿದ್ದ. ಇದಕ್ಕೆ ಯುವತಿ ನಿರಾಕರಿಸಿದ್ದಕ್ಕೆ ಇಲ್ಲಿ ತುಂಬಾ ಟ್ರಾಫಿಕ್ ಇದೆ. ನಿಮ್ಮ ಧ್ವನಿ ಕೇಳಿಸುತ್ತಿಲ್ಲ. ಕಾರು ಹತ್ತಿ ಎಂದು ಕರೆದಿದ್ದ. ಆದ್ರೆ ಕಾರು ಹತ್ತಲು ಯುವತಿ ನಿರಾಕರಿಸಿದ್ದು, ಈ ವೇಳೆ ಆತ ನಡುರಸ್ತೆಯಲ್ಲೇ ಯವತಿಯನ್ನ ಎಳೆದು ಕಾರಿನಲ್ಲಿ ಕೂರಿಸಲು ಮುಂದಾಗಿದ್ದ. ಆತನಿಂದ ತಪ್ಪಿಸಿಕೊಂಡು ಯುವತಿ ಕಚೇರಿಯೊಳಗೆ ತೆರಳಿದ್ರು. ಕಚೇರಿಯಲ್ಲಿ ವಿಚಾರಿಸಿದಾಗ ಆ ಹೆಸರಿನ ವ್ಯಕ್ತಿ ಕೆಲಸದಲ್ಲಿ ಇಲ್ಲ ಎಂಬುದು ಪತ್ತೆಯಾಗಿತ್ತು. ಈ ಬಗ್ಗೆ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

  • 17ನೇ ವಯಸ್ಸಿಗೆ ತಂದೆಯಾಗಿ, ಈಗ 25 ವರ್ಷದ ಹುಡುಗಿಯ ಪತಿ ಆಗಲಾರೆ ಎಂದ!

    17ನೇ ವಯಸ್ಸಿಗೆ ತಂದೆಯಾಗಿ, ಈಗ 25 ವರ್ಷದ ಹುಡುಗಿಯ ಪತಿ ಆಗಲಾರೆ ಎಂದ!

    ಬೆಂಗಳೂರು: ಯುವತಿಯ ಜೊತೆ ದೇಹ ಸಂಪರ್ಕ ಬೆಳೆಸಿ, ಈಗ ವಯಸ್ಸಿನಲ್ಲಿ 8 ವರ್ಷ ಹಿರಿಯಳಾಗಿರುವ ಯುವತಿಯನ್ನು ವರಿಸಲು ಸಾಧ್ಯವಿಲ್ಲ ಎಂದು ಹೇಳಿರುವ  ಆರೋಪವೊಂದು 17 ವರ್ಷದ ಹುಡುಗನ ವಿರುದ್ಧ ಕೇಳಿಬಂದಿದೆ.

    ಬೆಂಗಳೂರಿನ ಹುಡುಗಿ ತನಗಿಂತ 8 ವರ್ಷ ಚಿಕ್ಕವನಾಗಿರುವ ಅಪ್ರಾಪ್ತ ಹುಡುಗನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಳು. ಸುಮಾರು 2 ವರ್ಷಗಳಿಂದ ಪ್ರೀತಿಸುತ್ತಿದ್ದ ಪರಿಣಾಮ ಇದೀಗ 25 ವರ್ಷದ ಹುಡುಗಿ ಗರ್ಭಿಣಿಯಾಗಿದ್ದು, ನನ್ನನ್ನು ಮದುವೆಯಾಗು ಎಂದು ಪ್ರಿಯಕರನ ಹಿಂದೆ ದುಂಬಾಲು ಬಿದ್ದಿದ್ದಾಳೆ.

    ಮದುವೆ ವಿಚಾರ ಬಂದಿದ್ದೆ ತಡ ಹುಡುಗ ನಾನು ಇನ್ನೂ ಅಪ್ರಾಪ್ತ. ಹೀಗಾಗಿ 8 ವರ್ಷ ದೊಡ್ಡವಳಾಗಿರುವ ನಿನ್ನನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದು ಆಕೆಗೆ ಹೇಳಿದ್ದಾನೆ. ಅಷ್ಟೇ ಅಲ್ಲದೇ ಆಕೆ ನನಗೆ ಇಷ್ಟ ಇಲ್ಲ ಎಂದು ಹೇಳಿ ಮನೆಯಲ್ಲಿರುವ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

    ಈಗ ಅಪ್ರಾಪ್ತ ಹುಡುಗನ ಪೋಷಕರು ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಾಥಮಿಕ ತನಿಖೆಯ ವೇಳೆ ಇವರಿಬ್ಬರು ಪ್ರೀತಿಯಲ್ಲಿದ್ದ ವಿಚಾರ ಗೊತ್ತಾಗಿದೆ. ಯುವತಿಯನ್ನು ವೈದ್ಯಕೀಯ ಪರೀಕ್ಷೆ ಒಳಪಡಿಸಲಾಗಿದೆ ಎಂದು ಡಿಸಿಪಿ ಬೋರಲಿಂಗಯ್ಯ ಹೇಳಿದ್ದಾರೆ.

  • ಪೊಲೀಸ್ ಠಾಣೆಯಲ್ಲಿಯೇ ಮುಖ್ಯಪೇದೆ ಆತ್ಮಹತ್ಯೆ

    ಪೊಲೀಸ್ ಠಾಣೆಯಲ್ಲಿಯೇ ಮುಖ್ಯಪೇದೆ ಆತ್ಮಹತ್ಯೆ

    ಚಿಕ್ಕಬಳ್ಳಾಪುರ: ಪೊಲೀಸ್ ಠಾಣೆಯಲ್ಲಿಯೇ ಮುಖ್ಯಪೇದೆಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

    ಮಂಜುನಾಥ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಮುಖ್ಯಪೇದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದ್ದು, ವಿಶ್ರಾಂತಿ ಕೊಠಡಿಯ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತಹತ್ಯೆಗೆ ಶರಣಾಗಿದ್ದಾರೆ. ಆದ್ರೆ ಆತ್ಮಹತ್ಯೆಗೆ ಕಾರಣವೇನೆಂದು ತಿಳಿದುಬಂದಿಲ್ಲ.

    ಈ ಬಗ್ಗೆ ಚಿಕ್ಕಬಳ್ಳಾಪುರ ಎಸ್ಪಿ ಕಾರ್ತಿಕ್ ರೆಡ್ಡಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಮಂಜುನಾಥ್ ಕರ್ತವ್ಯ ನಿರತರಾಗಿದ್ದ ಸಂದರ್ಭದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದ್ರೆ ಆತ್ಮಹತ್ಯೆಯ ಅಸಲಿ ಕಾರಣವೇನೆಂದು ತಿಳಿದುಬಂದಿಲ್ಲ. ಹೀಗಾಗಿ ಈ ಪ್ರಕರಣವನ್ನು ತನಿಖೆ ನಡೆಸುವಂತೆ ಸಿಪಿಐ ಶೇಷಾದ್ರಿ ಅವರನ್ನು ನೇಮಕ ಮಾಡಲಾಗಿದೆ. ತನಿಖೆಯ ನಂತರವಷ್ಟೇ ಆತ್ಮಹತ್ಯೆಯ ಆಸಲಿ ಸತ್ಯ ತಿಳಿಯಲಿದೆ ಅಂತಾ ಹೇಳಿದ್ದಾರೆ.

     

  • ಕಸಾಯಿ ಖಾನೆಗೆ ಸಾಗಿಸುತ್ತಿದ್ದ 40 ಜಾನುವಾರುಗಳ ರಕ್ಷಣೆ

    ಕಸಾಯಿ ಖಾನೆಗೆ ಸಾಗಿಸುತ್ತಿದ್ದ 40 ಜಾನುವಾರುಗಳ ರಕ್ಷಣೆ

    ಬೆಂಗಳೂರು: ಯಾರಿಗೂ ತಿಳಿಯದಂತೆ ಲಾರಿಯಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 40 ಜಾನುವಾರಗಳನ್ನು ನಗರದ ಹೊರವಲಯದ ನೆಲಮಂಗಲ ಬಳಿ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

    ನೆಲಮಂಗಲ ತಾಲೂಕಿನ ಡಾಬಸ್‍ಪೇಟೆ ಬಳಿ ಲಾರಿಯಲ್ಲಿ ಜಾನುವಾರುಗಳನ್ನು ತುಮಕೂರು ಮಾರ್ಗವಾಗಿ ಬೆಂಗಳೂರು ನಗರಕ್ಕೆ ಸಾಗಿಸುತ್ತಿದ್ದ ವೇಳೆ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದಿದ್ದು, ಅದರಲ್ಲಿದ್ದ 40 ಜಾನುವಾರುಗಳನ್ನು ರಕ್ಷಿಸಿದ್ದಾರೆ.

    ಇನ್ನೂ ಲಾರಿಯಲ್ಲಿದ್ದ ಓರ್ವ ಪರಾರಿಯಾಗಿದ್ದು, ಉಳಿದ ಮೂವರನ್ನು ಪೊಲೀಸೆರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಡಾಬಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.