Tag: police

  • ಸಹಜ ಸ್ಥಿತಿಯತ್ತ ಕಲ್ಲಡ್ಕ- ಪ್ರಮುಖ ಆರೋಪಿ ಪೊಲೀಸರಿಂದ ಎಸ್ಕೇಪ್

    ಸಹಜ ಸ್ಥಿತಿಯತ್ತ ಕಲ್ಲಡ್ಕ- ಪ್ರಮುಖ ಆರೋಪಿ ಪೊಲೀಸರಿಂದ ಎಸ್ಕೇಪ್

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದಲ್ಲಿ ಗುಂಪು ಘರ್ಷಣೆಯಿಂದ ನಲುಗಿದ್ದ ಈಗ ಸಹಜ ಸ್ಥಿತಿಗೆ ಮರಳಿದೆ. ಈ ನಡುವೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿ ಆಸ್ಪತ್ರೆಗೆ ದಾಖಲಾಗಿದ್ದ ಹಿಂದೂ ಮುಖಂಡನೊಬ್ಬ ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದಾನೆ.

    ಇರಿತಕ್ಕೊಳಗಾಗಿ ಮಂಗಳೂರು ಜಿಲ್ಲೆಯ ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿಂದೂ ಜಾಗರಣ ವೇದಿಕೆ ಮುಖಂಡ ರತ್ನಾಕರ ಶೆಟ್ಟಿ ಪೊಲೀಸರ ಕಾವಲಿನ ಮಧ್ಯೆಯೇ ರಾತ್ರಿ ಹೊತ್ತಿನಲ್ಲಿ ಪರಾರಿಯಾಗಿದ್ದಾನೆ.

    ಪ್ರಕರಣ ಸಂಬಂಧಿಸಿ ಕಾವಲಿದ್ದ ಪುತ್ತೂರು ಠಾಣೆಯ ಪಿಎಸ್‍ಐ ಓಮನ, ಹೆಡ್ ಕಾನ್ಸ್ ಟೇಬಲ್ ರಾಧಾಕೃಷ್ಣ ಹಾಗೂ ಪೇದೆ ರಮೇಶ್ ಲಮಾಣಿ ಅವರನ್ನು ದ.ಕ. ಎಸ್ಪಿ ಭೂಷಣರಾವ್ ಬೋರಸೆ ಅಮಾನತು ಮಾಡಿದ್ದಾರೆ.

    ರಾತ್ರಿ ಹೊತ್ತಿನಲ್ಲಿ ಪೊಲೀಸರು ನಿದ್ದೆಗೆ ಜಾರಿದ್ದ ವೇಳೆ ಆರೋಪಿ ಪರಾರಿಯಾಗಿದ್ದರಿಂದ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಅಮಾನತು ಶಿಕ್ಷೆ ವಿಧಿಸಲಾಗಿದೆ.

     

    ಕಳೆದ ಜೂನ್ 13ರಂದು ರತ್ನಾಕರ ಶೆಟ್ಟಿ ಮತ್ತು ಖಲೀಲ್ ಎಂಬುವರ ನಡುವಿನ ಜಗಳದ ನೆಪದಲ್ಲಿ ಕಲ್ಲಡ್ಕದಲ್ಲಿ ಗುಂಪು ಘರ್ಷಣೆ, ಕಲ್ಲು ತೂರಾಟ ನಡೆದಿತ್ತು. ಇವರಿಬ್ಬರೂ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.

  • ಸ್ನೇಹಿತನಿಂದ ಹೆಂಡ್ತಿ ಸೀರೆ ಎಳೆಸಿ ಪತಿಯಿಂದಲೇ ಮಾನಭಂಗಕ್ಕೆ ಯತ್ನ!

    ಸ್ನೇಹಿತನಿಂದ ಹೆಂಡ್ತಿ ಸೀರೆ ಎಳೆಸಿ ಪತಿಯಿಂದಲೇ ಮಾನಭಂಗಕ್ಕೆ ಯತ್ನ!

    ಬೆಂಗಳೂರು: ಕಟ್ಟಿಕೊಂಡ ಹೆಂಡತಿ ಮೇಲೆ ಯಾರಾದರೂ ಕಣ್ಣು ಹಾಕಿದ್ರೆ ಅವರ ಮೇಲೆ ಹಲ್ಲೆಗೆ ಮುಂದಾಗುತ್ತಾರೆ. ಅಂತದ್ರಲ್ಲಿ ಪಾಪಿ ಪತಿಯೊಬ್ಬ ಸ್ನೇಹಿತನ ಜೊತೆ ಸೇರಿ ಕೈ ಹಿಡಿದ ಧರ್ಮಪತ್ನಿಯ ಮಾನಭಂಗಕ್ಕೆ ಯತ್ನಿಸಿದ್ದಾನೆ.

    ಬೆಂಗಳೂರಿನ ಏರ್‍ಪೋರ್ಟ್ ಬಳಿಯ ಸಾದಹಳ್ಳಿ ಗೇಟ್ ಬಳಿ ಈ ಘಟನೆ ನಡೆದಿದ್ದು, ಈ ಘಟನೆಯ ಸೂತ್ರದಾರ ಮುನಿರಾಜು. ಈತ ಮೊದಲ ಮದುವೆಯಾಗಿ 18 ವರ್ಷಗಳೇ ಕಳೆದಿತ್ತು. ಆದ್ರೆ ಮೊದಲ ಹೆಂಡತಿಗೆ ಗೊತ್ತಾಗದ ಹಾಗೆ ಮತ್ತೊಂದು ಮದುವೆ ಮಾಡಿಕೊಂಡಿದ್ದ.

    ಕಳೆದ ಮೂರು ದಿನಗಳ ಹಿಂದೆ ಸ್ನೇಹಿತನ ಜೊತೆ ಮುನಿರಾಜ ತನ್ನ ಮೊದಲ ಹೆಂಡತಿಯ ಮನೆಗೆ ಬಂದಿದ್ದಾನೆ. ಚೆನ್ನಾಗಿ ಕುಡಿದು ಸ್ನೇಹಿತನ ಜೊತೆಯಲ್ಲಿ ಹಾಸಿಗೆ ಹಂಚಿಕೊಳ್ಳುವಂತೆ ಪಾಪಿ ಪತಿ ಹೇಳಿದ್ದಾನೆ. ಆದರೆ ಈ ಮಾತು ಪತ್ನಿಯನ್ನ ಕೆರಳಿಸಿದೆ. ಇದಕ್ಕೆ ಬಿಲ್‍ಕುಲ್ ಒಪ್ಪದ ಪತ್ನಿಯನ್ನ ಪತಿ ಹಾಗು ಆತನ ಸ್ನೇಹಿತ ಸೇರಿ ಸೀರೆ ಹಿಡಿದು ಎಳೆದಾಡಿದ್ದಾರೆ. ಅಲ್ಲದೇ ಕಾಮುಕರು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ.

    ಈ ವೇಳೆ ತಾಯಿಯ ಸಹಾಯಕ್ಕೆ ಬಂದ ಮಕ್ಕಳನ್ನು ಇದೇ ನೀಚರು ಥಳಿಸಿದ್ದಾರೆ. ಮಕ್ಕಳ ಕೂಗಾಟ ಕೇಳಿದ ಸ್ಥಳೀಯರು ಮನೆ ಬಳಿ ಬಂದು ಆರೋಪಿಗಳಾದ ಮುನಿರಾಜು ಆತನ ಸ್ನೇಹಿತರಾದ ರವಿ ಮತ್ತು ಸುಬ್ರಮಣಿಯನ್ನ ಬಂಧಿಸಿದ್ದಾರೆ.

    ಸದ್ಯ ಬೆಂಗಳೂರು ಏರ್‍ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸ್ರು ಆರೋಪಿಗಳ ವಿಚಾರಣೆ ನಡೆಸ್ತಿದ್ದಾರೆ.

    https://www.youtube.com/watch?v=a9QGXgvv6kM

     

  • ಲಿವಿಂಗ್ ಟುಗೆದರ್ ಬಳಿಕ ಕೈಕೊಟ್ಟ ಪ್ರಿಯಕರ – ನಟಿ ಕಮ್ ಮಾಡೆಲ್‍ಗೆ ದೋಖಾ?

    ಲಿವಿಂಗ್ ಟುಗೆದರ್ ಬಳಿಕ ಕೈಕೊಟ್ಟ ಪ್ರಿಯಕರ – ನಟಿ ಕಮ್ ಮಾಡೆಲ್‍ಗೆ ದೋಖಾ?

    – ಆಕೆ ಮಾಡೆಲ್ ಅಲ್ಲ, ವೇಶ್ಯಾವಾಟಿಕೆಯಿಂದ ಹಣ ಸಂಪಾದಿಸ್ತಿದ್ದಾಳೆ
    – ನನ್ನ ವಿರುದ್ಧ ಆರೋಪ ಸುಳ್ಳು: ಯುವಕನಿಂದ ದೂರು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲೊಂದು ಲವ್ ಸೆಕ್ಸ್ ದೋಖಾ ಪ್ರಕರಣ ಬೆಳಕಿಗೆ ಬಂದಿದೆ. ಲಿವಿಂಗ್ ಟುಗೆದರ್ ಬಳಿಕ ನಟಿ ಕಮ್ ಮಾಡೆಲ್ ಆಗಿರುವ ಯುವತಿಗೆ ಪ್ರಿಯಕರ ಕೈಕೊಟ್ಟು ಪರಾರಿಯಾಗಿದ್ದಾನೆ ಎಂದು ನಟಿಯಿಂದ ಸದಾಶಿವ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇತ್ತ ಯುವಕನೂ ಯುವತಿಯ ವಿರುದ್ಧ ದೂರು ನೀಡಿದ್ದು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

    ಯುವತಿ ದೂರಿನಲ್ಲಿ ಏನಿದೆ? ಯಶವಂತಪುರದ ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಉಲ್ಲಾಸ್ ಜೊತೆ ನನಗೆ ಪ್ರೀತಿ ಇತ್ತು. ಕಳೆದ ಒಂದು ವರ್ಷದಿಂದ ನಾವಿಬ್ಬರು ಸ್ನೇಹಿತರಾಗಿದ್ದೇವು. 8 ತಿಂಗಳ ಹಿಂದೆ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತ್ತು. 2 ತಿಂಗಳ ಹಿಂದೆ ಉಲ್ಲಾಸ್ ಮತ್ತು ನಾನು ಲಿವಿಂಗ್ ಟುಗೆದರ್ ಆಗಿ ಒಂದೇ ಮನೆಯಲ್ಲಿ ವಾಸವಾಗಿದ್ದೇವು. ಆದರೆ ಆದರೆ ಈಗ ನನ್ನನ್ನು ಮದುವೆಯಾಗುದಿಲ್ಲ ಎಂದು ಉಲ್ಲಾಸ್ ಹೇಳಿದ್ದು ನನಗೆ ಮೋಸವಾಗಿದೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಜೂನ್ 2ರಂದು ಸ್ವಂತ ಊರು ಮೈಸೂರಿಗೆ ಹೋಗಿದ್ದ ಉಲ್ಲಾಸ್, ಮನೆಯಲ್ಲಿ ಮದುವೆಗೆ ಒಪ್ಪುತ್ತಿಲ್ಲ ಎಂದು ತಿಳಿಸಿದ್ದಾನೆ. ಅಷ್ಟೇ ಅಲ್ಲದೇ ಗೆಳೆಯ ಪ್ರೀತಂ ಎಂಬಾತನೊಂದಿಗೆ ಬಂದು ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ನಟಿ ಉಲ್ಲಾಸ್ ಪಟೇಲ್ ವಿರುದ್ಧ ರೇಪ್, ವಂಚನೆ ದೂರು ದಾಖಲಿಸಿದ್ದಾರೆ.

    ನಟಿ ವಿರುದ್ಧ ದೂರು ದಾಖಲು: ಇತ್ತ ನಟಿ ದೂರು ದಾಖಲಿಸುತ್ತಿದ್ದಂತೆ ಉಲ್ಲಾಸ್ ಕೂಡ ಯುವತಿಯ ವಿರುದ್ಧ ಸಂಜಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನನಗೆ ಯುವತಿ ಫೇಸ್ ಬುಕ್ ಮೂಲಕ ಪರಿಚಯವಾಗಿದ್ದು, ಹಿಂದೆ ನಾವು ಸ್ನೇಹಿತರಾಗಿದ್ದೇವು. ಇವಳು ವೇಶ್ಯಾವಾಟಿಕೆ ಮಾಡುತ್ತಿದ್ದು, ಇವಳ ಖಾತೆಗೆ ಹಣಗಳು ಜಮೆ ಆಗುತ್ತಿದೆ. ನಟಿ ನನ್ನ ವಿರುದ್ಧ ಆಧಾರವಿಲ್ಲದೇ ದೂರು ನೀಡಿದ್ದಾಳೆ ಎಂದು ಆರೋಪಿಸಿದ್ದಾರೆ.

    ಆಕೆ ನಕಲಿ ತಾಳಿ ಕಟ್ಟಿಕೊಂಡು ಸುಳ್ಳು ಹೇಳುತ್ತಿದ್ದಾಳೆ. ಹಣಕ್ಕಾಗಿ ನನಗೆ ಈ ರೀತಿಯಾಗಿ ಕಿರುಕುಳ ನೀಡುತ್ತಿದ್ದಾಳೆ. ಆಕೆಯ ಡೈರಿಯಲ್ಲಿ ಎಲ್ಲ ಮಾಹಿತಿ ಇದೆ ಎಂದು ಉಲ್ಲಾಸ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

     

  • ತಂದೆಯಿಂದಲೇ ಹೆಣ್ಣು ಮಗು ಮಾರಾಟಕ್ಕೆ ಯತ್ನ

    ತಂದೆಯಿಂದಲೇ ಹೆಣ್ಣು ಮಗು ಮಾರಾಟಕ್ಕೆ ಯತ್ನ

    ಮಂಡ್ಯ: ತಂದೆಯಿಂದಲೇ ಹೆಣ್ಣು ಮಗು ಮಾರಾಟಕ್ಕೆ ಯತ್ನ ನಡೆದಿರುವ ಘಟನೆ ಜಿಲ್ಲೆಯ  ಶ್ರೀರಂಗಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದಿದೆ.

    ಬೆಂಗಳೂರು ಮೂಲದ ವಿನೋದ್ ಎಂಬಾತ ತನ್ನ ಹೆಣ್ಣು ಮಗು ಅಂಜಲಿ (3)ಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಅಂತ ಶಂಕೆ ವ್ಯಕ್ತಪಡಿಸಲಾಗಿದೆ.

    ಅಲ್ಲಿಯ ಸ್ಥಳಿಯರು ಹೆಣ್ಣು ಮಗುವನ್ನು ರಕ್ಷಣೆ ಮಾಡಿದ್ದಾರೆ. ವಿಚಾರ ತಿಳಿದು ಕೂಡಲೇ ಪೊಲೀಸ್ ಆಗಮಿಸಿ ತಂದೆ ಮಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸವಿತಾ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡುವಂತೆ ಆಗ್ರಹಿಸಿ ಬೆತ್ತಲೆ ಪ್ರತಿಭಟನೆ

    ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡುವಂತೆ ಆಗ್ರಹಿಸಿ ಬೆತ್ತಲೆ ಪ್ರತಿಭಟನೆ

    ಹಾವೇರಿ: ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡುವಂತೆ ಆಗ್ರಹಿಸಿ ಸರ್ಕಾರದ ವಿರುದ್ಧ ರೈತರೊಬ್ಬರು ಹಾವೇರಿಯಲ್ಲಿ ಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ.

    ನಗರದ ಹೊಸಮನಿ ಸಿದ್ದಪ್ಪ ಸರ್ಕಲ್ ಬಳಿ ರೈತ ಕಾಳಪ್ಪ ಲಮಾಣಿ ಬೆತ್ತಲಾಗಿ ಪ್ರತಿಭಟನೆ ನಡೆಸಿದ್ದಾರೆ. ಇನ್ನೂ ಇದೇ ವೇಳೆ ಚಂದ್ರಪ್ಪ ಎಂಬವರು ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಹುಚ್ಚವ್ವನಹಳ್ಳಿ ಮಂಜುನಾಥ ಬಣದ ಕಾರ್ಯಕರ್ತರು ನಗರದ ಮುರುಘರಾಜೇಂದ್ರಮಠದಿಂದ ಅರೆಬೆತ್ತಲೆ ಪ್ರತಿಭಟನೆ ಪ್ರಾರಂಭಿಸಿ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಲ ರೈತರು ಬೇವಿನಸೊಪ್ಪು ಕಟ್ಟಿಕೊಂಡು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.

    ಇದೂವರೆಗೂ ಜಿಲ್ಲೆಯ ಯಾವ ರೈತರಿಗೂ ಬಗರ್ ಹುಕುಂ ಪತ್ರವನ್ನು ನೀಡಿಲ್ಲ. ಈ ಹಿನ್ನೆಲೆಯಲ್ಲಿ ರೈತರು ರಾಣೇಬೆನ್ನೂರು ಪಟ್ಟಣದಲ್ಲಿ ಪ್ರತಿಭಟನೆ ಕೈಗೊಂಡಿದ್ರೂ, ಯಾವ ಅಧಿಕಾರಿಗಳು ಗಮನ ಹರಿಸಿರಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ರೈತ ಕಾಳಪ್ಪ ಸಾರ್ವಜನಿಕವಾಗಿ ಬೆತ್ತಲಾಗುವ ಮೂಲಕ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

    ವಿಷ ಸೇವಿಸಿದ ರೈತ ಚಂದ್ರಪ್ಪ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತಿಭಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ರೈತರ ಮನವೊಲಿಸುವಲ್ಲಿ ನಿರತರಾಗಿದ್ದಾರೆ. ಮುನ್ನೇಚ್ಚರಿಕಾ ಕ್ರಮವಾಗಿ ಪ್ರತಿಭಟನಾ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

    https://www.youtube.com/watch?v=ODhN2OQZmUI

     

  • ಚಿತ್ರದುರ್ಗ: ಮಾಂಗಲ್ಯ ಸರ ಕದ್ದು ಮಿಂಚಿನಂತೆ ಪರಾರಿಯಾಗ್ತಿದ್ದ ಕಳ್ಳರ ಬಂಧನ

    ಚಿತ್ರದುರ್ಗ: ಮಾಂಗಲ್ಯ ಸರ ಕದ್ದು ಮಿಂಚಿನಂತೆ ಪರಾರಿಯಾಗ್ತಿದ್ದ ಕಳ್ಳರ ಬಂಧನ

    ಚಿತ್ರದುರ್ಗ: ಮಹಿಳೆಯರ ಮಾಂಗಲ್ಯ ಸರ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಬಂಧಿಸುವಲ್ಲಿ ಚಳ್ಳಕೆರೆ ಪೊಲೀಸರು ಯಶ್ವಸಿಯಾಗಿದ್ದಾರೆ.

    ದಾದಾಪೀರ್(27) ಮತ್ತು ಶ್ರೀನಿವಾಸ್(39) ಬಂಧಿತ ಆರೋಪಿಗಳು. ಇಬ್ಬರೂ ಇಮಾಂಪುರ ಹಾಗು ಕುರುಡಿಹಳ್ಳಿಯ ನಿವಾಸಿಗಳು. ಜಿಲ್ಲೆಯ ಚಳ್ಳಕೆರೆ ನಗರದಲ್ಲಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಮಾಂಗಲ್ಯ ಸರ ಕದ್ದು ಮಿಂಚಿನಂತೆ ಪರಾರಿಯಾಗುತ್ತಿದ್ದರು.

    ಇಂದು ಬೆಳಗಿನ ಜಾವ ಎಸ್ಪಿ ಅರುಣ್ ರಂಗರಾಜನ್ ನೇತೃತ್ವದಲ್ಲಿ ನಗರದ ಬಳ್ಳಾರಿ ರಸ್ತೆಯ ಹೀರೋ ಹೊಂಡ ಶೋರೂಂ ಬಳಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 4.53 ಲಕ್ಷ ಮೌಲ್ಯದ 185 ಗ್ರಾಂ ಚಿನ್ನಾಭರಣ ಹಾಗೂ ಒಂದು ಬೈಕ್ ವಶಕ್ಕೆ ಪಡೆದಿದ್ದಾರೆ.

     

  • 9 ವರ್ಷದ ಮಗಳ ಮುಂದೆಯೇ ತಾಯಿಯ ಮೇಲೆ ನೆರೆಮನೆಯವನಿಂದ ಅತ್ಯಾಚಾರ

    9 ವರ್ಷದ ಮಗಳ ಮುಂದೆಯೇ ತಾಯಿಯ ಮೇಲೆ ನೆರೆಮನೆಯವನಿಂದ ಅತ್ಯಾಚಾರ

    ಕೋಲ್ಕತ್ತಾ: ಮಧ್ಯ ವಯಸ್ಕ ಮಹಿಳೆಯನ್ನು ಆಕೆಯ 9 ವರ್ಷದ ಮಗಳ ಮುಂದೆಯೇ ನೆರೆಮನೆಯ ವ್ಯಕ್ತಿಯೊಬ್ಬ ಅತ್ಯಾಚಾರ ಎಸೆಗಿರುವ ಘಟನೆ ಕೊಲ್ಕತ್ತಾದಲ್ಲಿ ಭಾನುವಾರ ನಡೆದಿದೆ.

    ಆಶೀಶ್ ಪಟೇಲ್ (30) ಅತ್ಯಾಚಾರಗೈದ ಕಾಮುಕ. ಆಶೀಶ್ ಮಹಿಳೆಯ ಮನೆಯಲ್ಲಿ ಆಕೆಯ ಪತಿಯಿಲ್ಲದ ವೇಳೆ ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸ್ ಆಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಭಾನುವಾರ ಬೆಳಗಿನ ಜಾವ ಸುಮಾರು 3 ಗಂಟೆಯ ವೇಳೆಗೆ ಮನೆಗೆ ನುಗ್ಗಿದ ಆಶೀಶ್ ನನ್ನ ಮಗಳ ಮುಂದೆ ನನ್ನನ್ನು ಅತ್ಯಾಚಾರಗೈದು ಹಲ್ಲೆ ಮಾಡಿದ್ದಾನೆ. ಈ ವೇಳೆ ನನ್ನ ಮಗಳ ಮೇಲೆಯೂ ಹಲ್ಲೆ ಮಾಡಿದ್ದಾನೆ ಎಂದು ಸಂತ್ರಸ್ಥ ಮಹಿಳೆ ತಿಳಿಸಿದ್ದಾರೆ.

    ಸದ್ಯ ಪೊಲೀಸರು ಆರೋಪಿ ಆಶೀಶ್ ಪಟೇಲ್ ನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

     

  • ತನ್ನನ್ನು ಕಡೆಗಣಿಸಿದ್ದಕ್ಕೆ ಮಾಜಿ ಗೆಳೆಯನಿಗೆ ಆ್ಯಸಿಡ್ ಎರಚಿದ್ಳು!

    ತನ್ನನ್ನು ಕಡೆಗಣಿಸಿದ್ದಕ್ಕೆ ಮಾಜಿ ಗೆಳೆಯನಿಗೆ ಆ್ಯಸಿಡ್ ಎರಚಿದ್ಳು!

    ಮುಂಬೈ: 25 ವರ್ಷದ ಯುವತಿಯೊಬ್ಬಳು ತನ್ನನ್ನು ಕಡೆಗಣಿಸಿದ್ದಕ್ಕೆ ಮಾಜಿ ಪ್ರಿಯಕರನಿಗೆ ಆ್ಯಸಿಡ್ ಎರಚಿರುವ ಘಟನೆ ಮುಂಬೈನ ಗೋರೆಗಾಂವ್‍ನಲ್ಲಿ ನಡೆದಿದೆ.

    26 ವರ್ಷದ ಓಂ ಸಿಂಗ್ ಸೋಲಂಕಿ ಆ್ಯಸಿಡ್ ದಾಳಿಗೆ ಒಳಗಾದ ಯುವಕ. ಓಂ ಸಿಂಗ್ ಅವರ ಮುಖ ಮತ್ತು ಕುತ್ತಿಗೆ ಭಾಗಗಳಲ್ಲಿ ಗಂಭೀರ ಪ್ರಮಾಣದ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಓ ಸಿಂಗ್ ಮೇಲೆ ಆ್ಯಸಿಡ್ ಮಾಡಿದ್ದ ಮೀರಾ ಪ್ರಕಾಶ್ ಶರ್ಮಾ ಎಂಬ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೀರಾ ಥಾಣೆ ಜಿಲ್ಲೆಯ ನಲ್ಲಸೊಪರಾ ನಿವಾಸಿಯಾಗಿದ್ದು, ಶನಿವಾರ ಸಂಜೆ ಸುಮಾರು 6ಗಂಟೆಗೆ ಪಶ್ಚಿಮ ಗೋರೆಗಾಂವ್‍ನ ಎಂ.ಜಿ.ರೋಡ್ ಬಳಿಯ ಹಿರೇನ್ ಶಾಪಿಂಗ್ ಸೆಂಟರ್‍ನಲ್ಲಿ ಮೀರಾ ತನ್ನ ಮಾಜಿ ಪ್ರಿಯಕರ ಓಂ ಸಿಂಗ್ ಮುಖದ ಮೇಲೆ ಆ್ಯಸಿಡ್ ಎರಚಿದ್ದಾಳೆ.

    ಇದನ್ನೂ ಓದಿ:  ತನಗೆ ಸಿಗದವನು ಬೇರೊಬ್ಬಳಿಗೂ ಸಿಗಬಾರದೆಂದು ಆ್ಯಸಿಡ್ ಎರಚಿದ್ಳು!

    ಕೆಲವು ದಿನಗಳಿಂದ ಓಂ ಸಿಂಗ್ ತನ್ನ ಗೆಳತಿ ಮೀರಾಳನ್ನು ಕಡೆಗಣಿಸುತ್ತಿದರು. ಮೀರಾ ಹಲವು ಕಾರ್ಯಕ್ರಮಗಳಲ್ಲಿ ಓಂ ನನ್ನು ಭೇಟಿಯಾಗಲು ಪ್ರಯತ್ನಿಸಿದ್ದಳು. ಆದರೆ ಓಂ ಆಕೆಯನ್ನು ಭೇಟಿಯಾಗಲು ನಿರಾಕರಿಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಪ್ರಿಯಕರನ ನಡವಳಿಕೆಯಿಂದ ಬೇಸತ್ತ ಮೀರಾ ಶನಿವಾರ ಸಂಜೆ ಓಂ ಸಿಂಗ್ ಅವರ ಅಂಗಡಿಗೆ ಬಂದಿದ್ದಾಳೆ. ಈ ಮಧ್ಯೆ ಇಬ್ಬರ ನಡುವೆ ಬಿರುಸಿನ ಮಾತುಕತೆ ನಡೆದಿದೆ. ಕೊನೆಗೆ ಮೀರಾ ತನ್ನ ಹ್ಯಾಂಡ್ ಬ್ಯಾಗ್‍ನಿಂದ ಆ್ಯಸಿಡ್ ತೆಗೆದು ಓಂ ಮೇಲೆ ಎರಚಿದ್ದಾಳೆ.

    ಈ ಸಂಬಂಧ ಮೀರಾಳನ್ನು ಪೊಲೀಸರು ಬಂಧಿಸಿದ್ದು, ಐಪಿಸಿ ಸೆಕ್ಷನ್ 326 (ಎ), 323 ಹಾಗು 504 ಕಲಂಗಳನ್ವಯ ಅಡಿಯಲ್ಲಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ಇದನ್ನೂ ಓದಿ: ಆ್ಯಸಿಡ್ ದಾಳಿಗೊಳಗಾದ ಯುವತಿಗೆ ಬಾಳುಕೊಟ್ಟಿತ್ತು ರಾಂಗ್ ನಂಬರ್!

  • ಡಿವೈಡರ್‍ಗೆ ಬೈಕ್ ಡಿಕ್ಕಿ- ರಸ್ತೆಗೆ ಬಿದ್ದಿದ್ದ ಯುವತಿ ಮೇಲೆ ಹರಿದ ಐರಾವತ ಬಸ್

    ಡಿವೈಡರ್‍ಗೆ ಬೈಕ್ ಡಿಕ್ಕಿ- ರಸ್ತೆಗೆ ಬಿದ್ದಿದ್ದ ಯುವತಿ ಮೇಲೆ ಹರಿದ ಐರಾವತ ಬಸ್

    ಮಂಡ್ಯ: ರಸ್ತೆ ಡಿವೈಡರಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಹಿಂಬದಿ ಕುಳಿತಿದ್ದ ಯುವತಿ ಪಕ್ಕದ ರಸ್ತೆಗೆ ಬಿದ್ದು, ಆಕೆಯ ಮೇಲೆ ಐರಾವತ ಬಸ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಗ್ರಾಮದ ಬಳಿ ನಡೆದಿದೆ.

    ಶ್ವೇತಾ (24) ಎಂಬವರೇ ಅಪಘಾತದಲ್ಲಿ ಸಾವನ್ನಪ್ಪಿದ ಯುವತಿ. ಬೈಕ್ ಸವಾರ ಮಹೇಶ್ (26) ಎಂಬವರಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಮಹೇಶ್ ಮತ್ತು ಶ್ವೇತಾ ಇಬ್ಬರೂ ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಬೈಕ್‍ನಲ್ಲಿ ಬೆಂಗಳೂರಿನಿಂದ ಮೈಸೂರಿನ ಕಡೆಗೆ ಪ್ರಯಾಣಿಸುತ್ತಿದ್ದಾಗ ಸುಮಾರು ಬೆಳಗ್ಗೆ 7 ಗಂಟೆಗೆ ಬೈಕ್ ನಿಯಂತ್ರಣ ತಪ್ಪಿ ಡಿವೈಡರ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಹಿಂದೆ ಕುಳಿತಿದ್ದ ಶ್ವೇತಾ ಡಿವೈಡರ್ ಹಾರಿ ಪಕ್ಕದ ರಸ್ತೆಗೆ ಬಿದ್ದಿದ್ದಾರೆ. ಇದೇ ಸಮಯಕ್ಕೆ ಎದುರುಗಡೆಯಿಂದ ಬರುತ್ತಿದ್ದ ಐರಾವತ ಬಸ್ ಶ್ವೇತಾ ಮೇಲೆ ಹರಿದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಘಟನೆಯಲ್ಲಿ ಗಾಯಗೊಂಡ ಮಹೇಶ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ರಾಯಚೂರು: ನಕಲಿ ಹತ್ತಿಬೀಜ ಮಾರಾಟ ಜಾಲ ಪತ್ತೆ

    ರಾಯಚೂರು: ನಕಲಿ ಹತ್ತಿಬೀಜ ಮಾರಾಟ ಜಾಲ ಪತ್ತೆ

    ರಾಯಚೂರು: ನಕಲಿ ಹತ್ತಿ ಬೀಜ ಮಾರಾಟ ಜಾಲವನ್ನ ರಾಯಚೂರಿನ ಕ್ರೈಂ ಬ್ರ್ಯಾಂಚ್ ಹಾಗೂ ಮಾನ್ವಿ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ.

    ಆಂಧ್ರಪ್ರದೇಶದಲ್ಲಿ ತಯಾರಾಗುವ ಕಾವ್ಯ ಹೆಸರಿನ ನಕಲಿ ಹತ್ತಿ ಬೀಜವನ್ನ ಮಾರುತ್ತಿದ್ದ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ. ಮಾನ್ವಿಯ ಕಲಂಗೇರಾ ಗ್ರಾಮದ ಅಶೋಕ್ ಹಾಗೂ ಭೀಮಣ್ಣ ಬಂಧಿತ ಆರೋಪಿಗಳು. 4 ಲಕ್ಷ 73 ಸಾವಿರ ರೂಪಾಯಿ ಮೌಲ್ಯದ ಒಟ್ಟು 520 ಪ್ಯಾಕೇಟ್‍ಗಳನ್ನ ಮಾರಾಟ ಮಾಡಿದ್ದ ಆರೋಪಿಗಳಿಂದ 1 ಲಕ್ಷ ರೂಪಾಯಿ ನಗದು ಜಪ್ತಿ ಮಾಡಲಾಗಿದೆ.

    ಆಂಧ್ರಪ್ರದೇಶದ ನಂದ್ಯಾಲ ಮೂಲದ ರಹಿಮಾನ್ ಎಂಬವನಿಂದ ಕಮಿಷನ್ ಆಧಾರದ ಮೇಲೆ ಇಬ್ಬರು ಆರೋಪಿಗಳು ನಕಲಿ ಬೀಜ ಮಾರಾಟ ಮಾಡುತ್ತಿದ್ದರು. ಆದ್ರೆ ಕಡಿಮೆ ಬೆಲೆಯ ಆಸೆ ಹಾಗೂ ಸುಳ್ಳು ಭರವಸೆಗಳಿಂದಾಗಿ ಸಿಕ್ಕ ಬೀಜಗಳನ್ನ ಕೊಂಡು ಬಿತ್ತನೆ ಮಾಡುವ ರೈತರು ಈಗ ಆತಂಕಕ್ಕೊಳಗಾಗಿದ್ದಾರೆ.

    ಪೊಲೀಸರ ದಾಳಿ ಹಿನ್ನೆಲೆ ಪ್ರಕರಣ ಬೆಳಕಿಗೆ ಬಂದಿದ್ದು ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.