Tag: police

  • ಮಹಿಳೆ ಮೇಲೆ ಪ್ಲಾಸ್ಟಿಕ್ ಹಲ್ಲಿ ಎಸೆದು ಲೈಂಗಿಕ ದೌರ್ಜನ್ಯ ಎಸಗಿದ್ದ ಕಾಮುಕ ಅರೆಸ್ಟ್

    ಮಹಿಳೆ ಮೇಲೆ ಪ್ಲಾಸ್ಟಿಕ್ ಹಲ್ಲಿ ಎಸೆದು ಲೈಂಗಿಕ ದೌರ್ಜನ್ಯ ಎಸಗಿದ್ದ ಕಾಮುಕ ಅರೆಸ್ಟ್

    ಬೆಂಗಳೂರು: ಮಹಿಳೆಯರ ಮೇಲೆ ಹಲ್ಲಿ ಎಸೆದು ಅಂಗಾಂಗಗಳನ್ನು ಮುಟ್ಟಿ ಲೈಂಗಿಕ ದೌರ್ಜನ್ಯವೆಸಗಿದ್ದ ಕಾಮುಕನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಮುರುಳಿ (35) ಬಂಧಿತ ಆರೋಪಿ. ಜೂನ್ 6ರಂದು ಇಂದಿರಾನಗರದ ಸಿಎಂಎಚ್ ರಸ್ತೆಯಲ್ಲಿ ಮಹಿಳೆ ಮೇಲೆ ಪ್ಲಾಸ್ಟಿಕ್ ಹಲ್ಲಿ ಎಸೆದು, ಅದನ್ನು ತೆಗೆಯುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ್ದನು. ಇಬ್ಬರು ಮಕ್ಕಳ ತಂದೆಯಾಗಿರುವ ಮುರುಳಿ ಮಹಿಳೆಯ ಮೇಲೆ ಜೇನು ಹುಳು ಕುಳಿತಿತ್ತು. ಹೀಗಾಗಿ ಅದನ್ನು ತೆಗೆಯಲು ಆಕೆಯನ್ನು ಮುಟ್ಟಿದ್ದೇನೆ ಎಂದು ಸಬೂಬು ಹೇಳಿದ್ದ. ಕೊನೆಗೆ ಪೊಲೀಸ್ ವಿಚಾರಣೆ ವೇಳೆಯಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

    ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ವಿಚಾರಣೆ ಮುಂದುವರೆದಿದೆ.

     

  • ಬೆಂಗ್ಳೂರಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು – ನಿನ್ನೆ ಕೊಲೆ ಮಾಡಿದ್ದವನ ಕಾಲಿಗೆ ಇಂದು ಬಿತ್ತು ಗುಂಡೇಟು

    ಬೆಂಗ್ಳೂರಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು – ನಿನ್ನೆ ಕೊಲೆ ಮಾಡಿದ್ದವನ ಕಾಲಿಗೆ ಇಂದು ಬಿತ್ತು ಗುಂಡೇಟು

    ಬೆಂಗಳೂರು: ಪೊಲೀಸರ ಮೇಲೆ ಅರೋಪಿ ಹಲ್ಲೆಗೆ ಯತ್ನಿಸಿದ್ದರಿಂದ ಅರೋಪಿ ಕಾಲಿಗೆ ಗುಂಡು ಹಾರಿಸಿರುವ ಘಟನೆ ಇಂದು ಮುಂಜಾನೆ ನಗರದ ಹೊರವಲಯ ಬನ್ನೇರುಘಟ್ಟ ಸಮೀಪದ ಸಕಲವಾರ ರಸ್ತೆಯ ಟಿಲಿಪ್ಸ್ ರೆಸಾರ್ಟ್ ಬಳಿ ಘಟನೆ ನಡೆದಿದೆ.

    ಮಂಜುನಾಥ್ ಪೊಲೀಸರಿಂದ ಗುಂಡೇಟು ತಿಂದ ಆರೋಪಿ. ಶನಿವಾರ ಹಾಡು ಹಗಲೇ ಆನೇಕಲ್ ತಾಲೂಕಿನ ಬೊಮ್ಮಸಂದ್ರ ಸಮೀಪದ ತಿರುಮಲ ಪೆಟ್ರೋಲ್ ಬಂಕ್ ಬಳಿ ಚಿಂತಲ ಮಡಿವಾಳ ನಿವಾಸಿ 26 ವರ್ಷದ ಮುನಿರಾಜು ಎಂಬಾತನನ್ನು ಅದೇ ಗ್ರಾಮದ ನಿವಾಸಿ ಮಂಜುನಾಥ್ ಮಚ್ಚಿನಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದನು.

    ಇಂದು ಪೊಲೀಸರು ಮಂಜುನಾಥನನ್ನು ಹಿಡಿಯಲು ಮುಂದಾದ ವೇಳೆ ಆರೋಪಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದನು. ಈ ಸಂದರ್ಭದಲ್ಲಿ ಪೊಲೀಸರು ಆರೋಪಿ ಮೇಲೆ ಗುಂಡು ಹಾರಿಸಿದ್ದಾರೆ. ಇದೀಗ ಗಾಯಾಳುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಒಂದೇ ತಿಂಗಳ ಅವಧಿಯಲ್ಲಿ ಪೊಲೀಸರಿಂದ ನಡೆದ 2 ನೇ ಶೂಟೌಟ್ ಇದಾಗಿದೆ. ಇದೇ 1ನೇ ತಾರೀಖು ಚಂದಾಪುರ ಸಮೀಪದ ಹೀಲಲಿಗೆ ಗ್ರಾಮದ ಬಿಜೆಪಿಯ ಮುಖಂಡ ಹರೀಶ್‍ನನ್ನು ಕೊಲೆ ಮಾಡಿದ್ದ ರಾಜ ಅಲಿಯಾಸ್ ರಾಜೇಶ್‍ನನ್ನು ಶೂಟೌಟ್ ಮಾಡಿದ್ದ ಪೊಲೀಸರು ಇದೀಗ ಇಂದು ಮತ್ತೊಂದು ಪ್ರಕರಣ ಕೊಲೆ ಆರೋಪಿ ಮಂಜ ಅಲಿಯಾಸ್ ಮೆಂಟಲ್ ಮಂಜುನಾಥನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

     

  • ಸಿಎಂ ಸಿದ್ದರಾಮಯ್ಯ ಸೊಸೆ ಮನೆಗೇ ಇಲ್ಲ ರಕ್ಷಣೆ – ಮಧ್ಯರಾತ್ರಿಯಲ್ಲಿ ಕದ ತಟ್ಟಿ, ಲೈಟ್ ಧ್ವಂಸ

    ಸಿಎಂ ಸಿದ್ದರಾಮಯ್ಯ ಸೊಸೆ ಮನೆಗೇ ಇಲ್ಲ ರಕ್ಷಣೆ – ಮಧ್ಯರಾತ್ರಿಯಲ್ಲಿ ಕದ ತಟ್ಟಿ, ಲೈಟ್ ಧ್ವಂಸ

    – ರಕ್ಷಣೆಗಾಗಿ ಪೊಲೀಸರ ಮೊರೆಹೋದ ಸ್ಮಿತಾ ರಾಕೇಶ್

    ಬೆಂಗಳೂರು: ಸಿಎಂ ಸಿದ್ದರಾಮಯ್ಯರ ಸೊಸೆ ಸ್ಮಿತಾ ರಾಕೇಶ್ ತಮಗೆ ಪೊಲೀಸ್ ರಕ್ಷಣೆ ನೀಡುವಂತೆ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ಮನವಿಯನ್ನು ಸಲ್ಲಿಸಿದ್ದಾರೆ.

    ತಮ್ಮ ನಿವಾಸದ ಹೊರಗೆ ರಾತ್ರಿಯಲ್ಲಿ ಅಪರಿಚಿತರು ಓಡಾಟ ನಡೆಸುತ್ತಾರೆ. ಎರಡು ದಿನದ ಹಿಂದೆ ಹಲಸಿನ ಮರ ಹಣ್ಣುಗಳನ್ನು ಮನೆಯ ಕಾಂಪೌಂಡ್‍ನಲ್ಲಿ ಕಿತ್ತು ಹಾಕಿದ್ದಾರೆ. ಲೈಟ್ ಅನ್ನು ಒಡೆದು ಹಾಕಿದ್ದಾರೆ. ಮನೆಯಲ್ಲಿ ನಾನು ಮತ್ತು ನನ್ನ ತಾಯಿ, ಮಕ್ಕಳು ವಾಸವಾಗಿದ್ದು ಯಾರೋ ತಿಳಿದವರೇ ಹೆದರಿಸುತ್ತಿದ್ದಾರೆ. ತಮಗೆ ಸೂಕ್ತ ರಕ್ಷಣೆ ನೀಡಿ ಎಂದು ಸ್ಮಿತಾ ರಾಕೇಶ್ ಪೊಲೀಸರಿಗೆ ಮನವಿ ಮಾಡಿದ್ದಾರೆ.

    ಮಲ್ಲೇಶ್ವರಂ ಪೊಲೀಸರು ಪ್ರಕರಣ ದಾಖಲಿಸಿಕೂಂಡು ತನಿಖೆ ಕೈಗೂಂಡಿದ್ದಾರೆ. ಈಗ ಪಿಂಕ್ ಹೊಯ್ಸಳ ಮತ್ತು ಪೊಲೀಸರನ್ನು ರಕ್ಷಣೆಗೆ ನಿಯೋಜಿಸಲಾಗಿದೆ.

     

  • ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಿ ಡಾರ್ಜಿಲಿಂಗ್‍ನಲ್ಲಿ ಬಿಜಿಎಂ ಸಂಘಟನೆಯಿಂದ ಘರ್ಷಣೆ

    ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಿ ಡಾರ್ಜಿಲಿಂಗ್‍ನಲ್ಲಿ ಬಿಜಿಎಂ ಸಂಘಟನೆಯಿಂದ ಘರ್ಷಣೆ

    ಡಾರ್ಜಿಲಿಂಗ್: ಗೂರ್ಖಾ ಜನಮುಕ್ತಿ ಮೋರ್ಚಾ ಪ್ರತಿಭಟನಾಕಾರರು ಪ್ರತ್ಯೇಕ ಗೂರ್ಖಾ ಲ್ಯಾಂಡ್ ರಾಜ್ಯಕ್ಕಾಗಿ ಡಾರ್ಜಿಲಿಂಗ್‍ನಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಶನಿವಾರ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಭಾರತೀಯ ಮೀಸಲು ಬಟಾಲಿಯನ್(ಐಆರ್‍ಬಿ) ಸಹಾಯಕ ಕಮಾಂಡೆಂಟ್ ಅವರನ್ನು ಹತ್ಯೆ ಮಾಡಲಾಗಿದೆ.

    ಪ್ರತ್ಯೇಕ ರಾಜ್ಯಕ್ಕೆ ಒತ್ತಾಯಿಸಿ ನಡೆಸುತ್ತಿರುವ ಅನಿರ್ಧಿಷ್ಠಾವಧಿ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆಯನ್ನು ಹತ್ತಿಕ್ಕುವ ಯತ್ನ ಮುಂದುವರಿದಿದ್ದು, ಪ್ರತಿಭಟನಾಕಾರರು ಪೊಲೀಸರತ್ತ ಕಲ್ಲು ತೂರಿದ್ದರಿಂದ ಘರ್ಷಣೆ ತೀವ್ರ ಸ್ವರೂಪ ಪಡೆದುಕೊಂಡಿದೆ.

    ಭದ್ರತಾ ಸಿಬ್ಬಂದಿ ಮತ್ತು ಗೂರ್ಖಾ ಜನ ಮುಕ್ತಿ ಮೋರ್ಚಾ(ಜಿಜೆಎಂ)ದೊಂದಿಗೆ ನಡೆದ ಘರ್ಷಣೆಯಲ್ಲಿ ಐಆರ್‍ಬಿ ಸಹಾಯಕ ಕಮಾಂಡೆಂಟ್ ಕಿರಣ್ ತಮಂಗ್ ಅವರು ಗಂಭೀವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

    ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಬಿಜೆಎಂ ಇಬ್ಬರು ಕಾರ್ಯಕರ್ತರು ಮೃತಪಟ್ಟಿದ್ದಾರೆ ಎಂದು ಗೂರ್ಖಾ ಜನ ಮುಕ್ತಿ ಮೋರ್ಚಾದ ಸಹಾಯಕ ಪ್ರಧಾನ ಕಾರ್ಯದರ್ಶಿ ಬಿನಯ್ ತಮಂಗ್ ಹೇಳಿದ್ದಾರೆ.

    ಪ್ರಸ್ತುತ ಡಾರ್ಜಿಲಿಂಗ್‍ನಲ್ಲಿ ಪರಿಸ್ಥಿತಿ ಹಿಂಸಾಚಾರಕ್ಕೆ ತಿರುಗಿದ್ದು, ಜಿಜೆಎಂ ಕಾರ್ಯಕರ್ತರು ಪೊಲೀಸರ ಮೇಲೆ ಪೆಟ್ರೋಲ್ ಬಾಂಬ್ ಹಾಗೂ ಕಲ್ಲುಗಳನ್ನು ಎಸೆಯುತ್ತಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಟೀಯರ್ ಗ್ಯಾಸ್ ಹಾಗೂ ಲಾಠಿ ಚಾರ್ಜ್ ನಡೆಸುತ್ತಿದ್ದಾರೆ.

    ಜಿಜೆಎಂ ಕಾರ್ಯಕರ್ತರು ಹಾಗೂ ಪೊಲೀಸರ ನಡುವಿನ ಘರ್ಷಣೆಯಲ್ಲಿ ಹಲವರು ಗಾಯಗೊಂಡಿದ್ದು, ಸಿಂಗ್ಮರಿ ಪ್ರದೇಶದಲ್ಲಿ ಸೇನೆ ನಿಯೋಜಿಸಲಾಗಿದೆ.

     

  • ಮಂಡ್ಯ: ಜೆಸಿಬಿ ಕದ್ದ ತಿಪಟೂರು ನಗರಸಭೆ ಸದಸ್ಯೆಯ ಗಂಡ ಅರೆಸ್ಟ್

    ಮಂಡ್ಯ: ಜೆಸಿಬಿ ಕದ್ದ ತಿಪಟೂರು ನಗರಸಭೆ ಸದಸ್ಯೆಯ ಗಂಡ ಅರೆಸ್ಟ್

    ಮಂಡ್ಯ: ಜೆಸಿಬಿ ಕಳ್ಳತನ ಮಾಡಿ ಮಾರಾಟ ಮಾಡಿದ್ದ ಪ್ರಕರಣ ಪತ್ತೆ ಹೆಚ್ಚಿರುವ ಜಿಲ್ಲೆಯ ಬೆಳ್ಳೂರು ಪೊಲೀಸರು ನಗರಸಭಾ ಸದಸ್ಯೆಯ ಪತಿ ಸೇರಿ ಮೂವರನ್ನು ಬಂಧಿಸಿದ್ದಾರೆ.

    ತುಮಕೂರು ಜಿಲ್ಲೆಯ ತಿಪಟೂರು ನಗರಸಭಾ ಸದಸ್ಯೆ ರೂಪ ಎಂಬವರ ಪತಿ ಅನೂಪ್ ಗೌಡ, ನೆಲಮಂಗಲದ ನಾಗರಾಜು, ಕಲಾಸಿಪಾಳ್ಯದ ನವೀದ್ ಖಾನ್ ಬಂಧಿತರು. ಫೆಬ್ರವರಿ 2ರಂದು ನಾಗಮಂಗಲ ತಾಲೂಕಿನ ಬೆಳ್ಳೂರಿನ ಬಳಿ ಪ್ರಕಾಶ್ ಎಂಬವರಿಗೆ ಸೇರಿದ ಜೆಸಿಬಿ ಕಳ್ಳತನವಾಗಿತ್ತು. ಈ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದ್ರೆ ಪ್ರಕರಣದ ಆರೋಪಿಗಳು ಪತ್ತೆಯಾಗಿರಲಿಲ್ಲ.

    ಜೂನ್ 13ರಂದು ಬೆಳ್ಳೂರಿನಲ್ಲಿ ಜೆಸಿಬಿ ನಿಲ್ಲಿಸಿದ ಸ್ಥಳದಲ್ಲಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ನಾಗರಾಜುನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಹಿಂದಿನ ಪ್ರಕರಣ ಬೆಳಕಿಗೆ ಬಂದಿದೆ. ಜೊತೆಗೆ ಅಂದು ಜೆಸಿಬಿ ಕಳ್ಳತನ ಮಾಡೋದಕ್ಕೆ ಯೋಜನೆ ರೂಪಿಸಿಕೊಟ್ಟಿದ್ದು ಅನೂಪ್ ಗೌಡ ಎಂಬುದನ್ನ ಒಪ್ಪಿಕೊಂಡಿದ್ದಾನೆ.

    ಕಳ್ಳತನದ ಬಳಿಕ ಜೆಸಿಬಿಯನ್ನು ಬಿಡಿ ಭಾಗಗಳಾಗಿ ಮಾಡಿ ಕಲಾಸಿಪಾಳ್ಯದ ನವೀದ್ ಖಾನ್ ಗೆ ಮಾರಾಟ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಅನೂಪ್ ಗೌಡ, ನವೀದ್ ಖಾನ್ ನನ್ನು ಬಂಧಿಸಲಾಗಿದೆ. ಇದೀಗ ಮೂವರು ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

  • ಮಸಾಜ್ ಪಾರ್ಲರ್ ಮೇಲೆ ದಾಳಿ ನಡೆಸಿದ ‘ಸಿಬಿಐ ಅಧಿಕಾರಿ’ ವಶಕ್ಕೆ!

    ಮಸಾಜ್ ಪಾರ್ಲರ್ ಮೇಲೆ ದಾಳಿ ನಡೆಸಿದ ‘ಸಿಬಿಐ ಅಧಿಕಾರಿ’ ವಶಕ್ಕೆ!

    ಬೆಂಗಳೂರು: ಸಿಬಿಐ ಹೆಸರನ್ನು ಹೇಳಿಕೊಂಡು ಮಸಾಜ್ ಪಾರ್ಲರ್ ಮೇಲೆ ದಾಳಿ ಮಾಡಿ ಯುವತಿಯರನ್ನ ಕೆಟ್ಟದಾಗಿ ನಡೆಸಿಕೊಂಡಿರುವ ಘಟನೆ ಬೆಂಗಳೂರಿನ ಬಾಣಸವಾಡಿಯಲ್ಲಿ ನಡೆದಿದೆ.

    ಶ್ರೀನಿವಾಸ್ ಮತ್ತು ಅವರ ತಂಡ ತಾವು ದೆಹಲಿಯ ನ್ಯಾಷನಲ್ ಇನ್ವೆಸ್ಟಿಗೇಷನ್ ಕ್ರೈಂ ಟೀಂ ಮತ್ತು ಸಿಬಿಐ ಅಧಿಕಾರಿಗಳು ಎಂದು ಸುಳ್ಳು ಹೇಳಿಕೊಂಡು ಶುಕ್ರವಾರ ಸಂಜೆ 5 ಗಂಟೆಗೆ ಮಸಾಜ್ ಪಾರ್ಲರ್ ಮನೆ ಮೇಲೆ ದಾಳಿ ಮಾಡಿದ್ದಾರೆ.

    ಮಸಾಜ್ ಪಾರ್ಲರ್ ಮನೆಯಲ್ಲಿ ಇದ್ದ ಆರು ಯುವತಿಯರನ್ನ ಇವರು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ಇವರು ವಿಡಿಯೋ ಮಾಡೋದನ್ನ ನೋಡಿ ಯುವತಿಯರು ಮುಖ ಮುಚ್ಚಿಕೊಂಡಿದ್ದಾರೆ. ಅದಕ್ಕೆ ಸಿಟ್ಟಾದ ಇವರು ಮುಖ ತೆಗೆಯದಿದ್ದರೆ ಟಿವಿಯಲ್ಲಿ ಹಾಕಿ, ನಡುರಸ್ತೆಯಲ್ಲಿ ಮೆರವಣಿಗೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಬಲವಂತವಾಗಿ ಯುವತಿಯರು ಮುಖ ಮುಚ್ಚಿಕೊಂಡಿದ್ದರೂ ಕೈ ತೆಗೆದು ಅವರ ಮೇಲೆ ದೌರ್ಜನ್ಯ ನಡೆಸಿದ್ದಾರೆ.

    ಸಾರ್ವಜನಿಕರು ನೇರವಾಗಿ ನುಗ್ಗಿ ದಾಳಿ ನಡೆಸುವಂತಿಲ್ಲ. ಸಂಬಂಧಪಟ್ಟ ಠಾಣೆಗೆ ತಿಳಿಸಿ ನಂತರ ಪೊಲೀಸರು ದಾಳಿ ನಡೆಸಬೇಕಾಗುತ್ತದೆ. ಆದರೆ ಇಲ್ಲಿ ಇವರೇ ಕಾನೂನು ಕೈಗೆ ತೆಗೆದುಕೊಂಡು ದಾಳಿ ನಡೆಸಿದ್ದಕ್ಕೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶ್ರೀನಿವಾಸ್ ಮತ್ತು ಗೌರಮ್ಮಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಹಲವು ವಿಸಿಟಿಂಗ್ ಕಾರ್ಡ್: ಶ್ರೀನಿವಾಸ್ ಹಲವು ಇಲಾಖೆ ಹೆಸರಿನಲ್ಲಿ ವಿಸಿಟಿಂಗ್ ಮಾಡಿಸಿದ್ದಾನೆ. ನ್ಯಾಷನಲ್ ಇನ್ವೆಸ್ಟಿಗೇಷನ್ ಬ್ಯುರೋ, ನ್ಯಾಷನಲ್ ಮಿಡಿಯಾ ಕೌನ್ಸಿಲ್, ಸಿಟಿಜನ್ ರೈಟ್ಸ್ ಪ್ರೊಟೆಕ್ಷನ್ ಕೌನ್ಸಿಲ್ ಹೆಸರಿನ ಕಾರ್ಡ್ ಬಳಸಿ ಬೆದರಿಕೆ ಹಾಕಿದ್ದಾನೆ.

  • ಹಲ್ಲಿ ಮೈಮೇಲೆ ಎಸೆದು ಯವತಿಯರ ಅಂಗಾಂಗ ಮುಟ್ಟೋ ಗ್ಯಾಂಗ್ ಬೆಂಗ್ಳೂರಲ್ಲಿದೆ ಎಚ್ಚರ!

    ಹಲ್ಲಿ ಮೈಮೇಲೆ ಎಸೆದು ಯವತಿಯರ ಅಂಗಾಂಗ ಮುಟ್ಟೋ ಗ್ಯಾಂಗ್ ಬೆಂಗ್ಳೂರಲ್ಲಿದೆ ಎಚ್ಚರ!

    ಬೆಂಗಳೂರು: ಯುವತಿಯರೇ ಎಚ್ಚರ. ನೀವು ಬೆಂಗಳೂರಿನ ರಸ್ತೆಗಳಲ್ಲಿ ಓಡಾಡುತ್ತೀರಿ ಎಂದರೆ ಸ್ವಲ್ಪ ಎಚ್ಚರದಿಂದಿರಿ. ಯುವತಿಯರ ಮೇಲೆ ದೌರ್ಜನ್ಯವೆಸಗಲು ಬೆಂಗಳೂರಿನಲ್ಲಿ ಯುವಕರು ಹೊಸ ಟೆಕ್ನಿಕ್ ಬಳಸುತ್ತಿದ್ದಾರೆ.

    ತಮ್ಮ ವಾಂಛೆ ತೀರಿಸಿಕೊಳ್ಳಲು ಯುವಕರು ಯುವತಿಯರ ಮೇಲೆ ಹಲ್ಲಿಯನ್ನು ಎಸೆಯುತ್ತಾರೆ. ಬಳಿಕ ಅದನ್ನು ತೆಗೆಯುವ ನೆಪದಲ್ಲಿ ಬಂದು ಅಂಗಾಂಗ ಮುಟ್ಟಿ ಕಿರುಕುಳ ಕೊಟ್ಟಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಆಗಿದ್ದೇನು?: ಬಿಹಾರ ಮೂಲದ ಯುವತಿಯೊಬ್ಬಳು ಬೆಂಗಳೂರಿಗೆ 15 ದಿವಸದ ಟ್ರೈನಿಂಗ್ ಗೆಂದು ಆಗಮಿಸಿದ್ದಾಳೆ. ಎರಡು ದಿನಗಳ ಹಿಂದೆ ಇಂದಿರಾನಗರದ ಸಿಎಂಎಚ್ ರಸ್ತೆಯಲ್ಲಿರುವ ಕಚೇರಿಯಲ್ಲಿ ಯುವತಿ ಟ್ರೈನಿಂಗ್ ಮುಗಿಸಿ ತಾನು ವಾಸವಿದ್ದ ಕಡೆ ಹೊರಟಿದ್ದಾಳೆ. ಈ ವೇಳೆ ರಸ್ತೆ ಬದಿಯಲ್ಲಿದ್ದ ಟೀ ಶಾಪ್ ಬಳಿ ಬಂದಾಗ ಕಾಮುಕರ ಗುಂಪು ಯುವತಿಯ ಮೇಲೆ ಹಲ್ಲಿಯನ್ನು ಎಸೆದಿದ್ದಾರೆ. ಬಳಿಕ ಅದೇ ಹಲ್ಲಿಯನ್ನು ತೆಗೆಯುವ ನೆಪದಲ್ಲಿ ಈ ಗುಂಪು ಯುವತಿಯ ಅಂಗಾಂಗಗಳನ್ನು ಮುಟ್ಟಿ ಕಿರುಕುಳ ನೀಡಿದ್ದಾರೆ.

    ಘಟನೆ ನಡೆದ ಬಳಿಕ ಯುವತಿ ಇಂದಿರಾನಗರ ಪೊಲೀಸರಿಗೆ ದೂರು ನೀಡಿದ್ದಾಳೆ. ಐಪಿಸಿ ಸೆಕ್ಷನ್ 354ರ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ. ಪೊಲೀಸರು ಘಟನೆ ನಡೆದ ಸ್ಥಳದಲ್ಲಿದ್ದ ಸಿಸಿಟಿವಿ ವೀಡಿಯೋ ವಶಪಡಿಸಿಕೊಂಡಿದ್ದು ಇದರ ನೆರವಿನಿಂದ ಆರೋಪಿಗಳನ್ನು ಹುಡುಕುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದೇ ವೇಳೆ ದೂರು ನೀಡಿದ ಯುವತಿ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

  • ಮಂಡ್ಯ: ಪಕ್ಷದವ್ರಿಗೆ ಕಿರುಕುಳ ಕೊಟ್ರೆ ಸುಮ್ಮನಿರಲ್ಲ, ಅಧಿಕಾರಕ್ಕೆ ಬಂದ್ಮೇಲೆ ಜಾಗ ತೋರಿಸ್ತೀವಿ- ಪೊಲೀಸರಿಗೆ ಬಿಎಸ್‍ವೈ ಧಮ್ಕಿ

    ಮಂಡ್ಯ: ಪಕ್ಷದವ್ರಿಗೆ ಕಿರುಕುಳ ಕೊಟ್ರೆ ಸುಮ್ಮನಿರಲ್ಲ, ಅಧಿಕಾರಕ್ಕೆ ಬಂದ್ಮೇಲೆ ಜಾಗ ತೋರಿಸ್ತೀವಿ- ಪೊಲೀಸರಿಗೆ ಬಿಎಸ್‍ವೈ ಧಮ್ಕಿ

    ಮಂಡ್ಯ: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಪೊಲೀಸ್ ಅಧಿಕಾರಿಗಳಿಗೆ ಮುಂದೆ ಅಧಿಕಾರಕ್ಕೆ ಬಂದಾಗ ನೋಡ್ಕೊತೀವಿ ಅಂತಾ ಅವಾಜ್ ಹಾಕಿದ್ದಾರೆ.

    ಗುರುವಾರದಂದು ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಬಿಜೆಪಿಯ ಜನ ಸಂಪರ್ಕ ಅಭಿಯಾನ-ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಬಿಎಸ್‍ವೈ, ಸ್ಥಳೀಯ ಪೊಲೀಸ್ ಅಧಿಕಾರಿಗಳು ಬಿಜೆಪಿ ಕಾರ್ಯಕ್ರಮಗಳಿಗೆ ಸ್ಥಳಾವಕಾಶ ನೀಡಲು ನಿರಾಕರಿಸಿದ್ದಲ್ಲದೇ ಬಿಜೆಪಿ ಮುಖಂಡರಿಗೆ ಕಿರುಕುಳ ನೀಡುತ್ತಿದ್ದಾರೆ. ಸಾರ್ವಜನಿಕ ಸಭೆಗೆ ಸಬ್ ಇನ್ಸ್ ಪೆಕ್ಟರ್ ಯೋಗಾನಂಜಪ್ಪ ಅನುಮತಿ ನೀಡದೇ ಕಿರುಕುಳ ನೀಡಿದ್ದಾರೆ. ಅಂತಹ ಅಧಿಕಾರಿಗಳ ಪಟ್ಟಿಯನ್ನು ನಾವು ಸಿದ್ಧಪಡಿಸ್ತೇವೆ. ಕಾಲ ಬಂದಾಗ ತೋರಿಸಬೇಕಾದ ಜಾಗ ತೋರಿಸ್ತೇವೆ. ಅದಕ್ಕೆ ಅವಕಾಶ ಕೊಡದೆ ನಿಮ್ಮ ನಡವಳಿಕೆ ತಿದ್ದುಕೊಳ್ಳಿ ಎಂದು ಬಹಿರಂಗ ಎಚ್ಚರಿಕೆ ನೀಡಿದ್ದಾರೆ.

    ಸರ್ಕಾರಗಳು ಬರುತ್ತೆ, ಹೋಗುತ್ತೆ. ಆದ್ರೆ ಪೊಲೀಸರು ಎಲ್ಲರಿಗೂ ಒಂದೇ ರೀತಿ ನಡೆದುಕೊಳ್ಳಬೇಕು. ಬಿಜೆಪಿಗರನ್ನ ಲಘುವಾಗಿ ಕಾಣೋದು ತರವಲ್ಲ. ಅದು ಖಾಕಿ ಬಟ್ಟೆ ತೊಟ್ಟವರಿಗೆ ಶೋಭೆ ತರುವಂತದ್ದಲ್ಲ ಅಂದ್ರು. ಎಲ್ಲರನ್ನ ಸಮಾನವಾಗಿ ಪರಿಗಣಿಸಬೇಕು ಎಂದು ಪೊಲೀಸರಿಗೆ ಯಡಿಯೂರಪ್ಪ ಎಚ್ಚರಿಕೆ ನೀಡಿದ್ರು.

  • ಮೋರಿ ಒಳಗೆ ಸುರಂಗ ಕೊರೆದು ಜ್ಯುವೆಲ್ಲರಿ ಅಂಗಡಿಗೆ ಕನ್ನ

    ಮೋರಿ ಒಳಗೆ ಸುರಂಗ ಕೊರೆದು ಜ್ಯುವೆಲ್ಲರಿ ಅಂಗಡಿಗೆ ಕನ್ನ

    – 40 ಲಕ್ಷ ರೂ. ಮೌಲ್ಯದ ಆಭರಣ ಕಳ್ಳತನ

    ಬೆಂಗಳೂರು: ಕಳ್ಳರ ಗುಂಪೊಂದು ಮೋರಿಯ ಒಳಗಿನಿಂದ ಚಿನ್ನದ ಅಂಗಡಿಗೆ ಕನ್ನ ಹಾಕಿ ಚಿನ್ನಾಭರಣವನ್ನು ಕದ್ದಿರುವ ಘಟನೆ ಬೆಂಗಳೂರಿನ ಕೆಆರ್‍ಪುರಂನಲ್ಲಿ ನಡೆದಿದೆ.

    ದೇವಸಂದ್ರ ಮುಖ್ಯರಸ್ತೆಯ ಬಾಲಾಜಿ ಜ್ಯುವೆಲ್ಲರಿ ಅಂಗಡಿಗೆ ಕಳ್ಳರು ಕನ್ನ ಹಾಕಿದ್ದು, ಗುರುವಾರ ಬೆಳಗ್ಗೆ ಮಾಲೀಕ ಮೋಹನ್ ಲಾಲ್ ಅವರು ಬಾಗಿಲು ತೆರೆದಾಗ ಕೃತ್ಯ ಬೆಳಕಿಗೆ ಬಂದಿದೆ.

    ಮೋರಿಯಿಂದ 6 ಅಡಿ ಉದ್ದದ ಸುರಂಗವನ್ನು ಕೊರೆದು ಮಧ್ಯಭಾಗವನ್ನು ಪ್ರವೇಶಿಸಿ ಚಿನ್ನ ಮತ್ತು ಬೆಳ್ಳಿಯನ್ನು ಕದ್ದಿದ್ದಾರೆ. ಈ ಕೃತ್ಯ ಬೆಳಕಿಗೆ ಬಂದ ಮೇಲೆ ಮಾಲೀಕ ಕೆಆರ್‍ಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಬೆಳ್ಳಿ ಸೇರಿದಂತೆ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. ವಿಷಯ ತಿಳಿದ ಕೆ.ಆರ್.ಪುರಂ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.

    ಬೆಳ್ಳಿ ಪತ್ತೆ: ಪೊಲೀಸರು ಸ್ಥಳಕ್ಕೆ ಆಗಮಿಸಿ ಸುರಂಗದ ಒಳಗಡೆ ನುಗ್ಗಿ ಪರಿಶೀಲಿಸಿದ್ದಾರೆ. ಈ ವೇಳೆ ಸುಮಾರು 40 ಕೆಜಿಯಷ್ಟು ಬೆಳ್ಳಿಯನ್ನು ಅಲ್ಲೆ ಬಿಟ್ಟು ಕಳ್ಳರು ಪರಾರಿಯಾಗಿದ್ದಾರೆ. ಅಂದಾಜು ಒಟ್ಟು 40 ಲಕ್ಷ ರೂ. ಮೌಲ್ಯದ ಆಭರಣಗಳು ಕಳ್ಳತನವಾಗಿದೆ ಎಂದು ಮಾಲೀಕ ತಿಳಿಸಿದ್ದಾರೆ.

    ಮೋರಿ ಮೇಲೆ ಕಲ್ಲಿನ ಸ್ಲ್ಯಾಬ್ ಹಾಕಲಾಗಿತ್ತು. ಸ್ಲ್ಯಾಬ್ ಇದ್ದ ಕಾರಣ ಸುರಂಗ ಕೊರೆದಿದ್ದ ವಿಚಾರ ಪತ್ತೆಯಾಗಿರಲಿಲ್ಲ. ಡಿಸಿಪಿ ಬೋರಲಿಂಗಯ್ಯ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಮುಂದುವರಿಯುತ್ತಿದೆ.

    ಪೊಲೀಸರು ಈಗ ಜ್ಯುವೆಲ್ಲರಿ ಒಳಗಡೆ ಇದ್ದ ಸಿಸಿಟಿವಿ ದೃಶ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಎಷ್ಟು ಜನ ಕಳ್ಳರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಮಾಹಿತಿ ಸಿಕ್ಕಿಲ್ಲ. ಎರಡು ಅಥವಾ ಮೂರು ಮಂದಿ ಈ ಕಳ್ಳತನದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

     

  • ಮಾವ ಮಂಚಕ್ಕೆ ಕರೆದ್ರೆ, ಗಂಡ ಹೋಗು ಅಂದನಂತೆ-ಕಾಮುಕರ ವಿರುದ್ಧ ನೊಂದ ಮಹಿಳೆ ದೂರು

    ಮಾವ ಮಂಚಕ್ಕೆ ಕರೆದ್ರೆ, ಗಂಡ ಹೋಗು ಅಂದನಂತೆ-ಕಾಮುಕರ ವಿರುದ್ಧ ನೊಂದ ಮಹಿಳೆ ದೂರು

    ತುಮಕೂರು: ಮಾವನೊಬ್ಬ ಮಗಳಂತಿರುವ ಸೊಸೆಯನ್ನು ಮಂಚಕ್ಕೆ ಕರೆದಿರುವ ಅಮಾನವೀಯ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನ ಇಪ್ಪಾಡಿ ಗ್ರಾಮದಲ್ಲಿ ನಡೆದಿದೆ.

    ಚಂದ್ರಯ್ಯ ಎಂಬಾತನೇ ಸೊಸೆಯನ್ನ ಮಂಚಕ್ಕೆ ಕರೆದ ಕಾಮುಕ ಮಾವ. ಮಾವನ ಕಾಮದಾಟವನ್ನು ಹೋಗಿ ಪತಿ ಪ್ರಭಾಕರ್‍ನಿಗೆ ತಿಳಿಸಿದ್ರೆ ಅವನೂ ಸ್ವಲ್ಪ ಅಡ್ಜಸ್ಟ್ ಮಾಡಿಕೋ ಎಂದು ಹೇಳಿದ್ದಾನೆ.

    ಪ್ರಭಾಕರ್ ಮೂರು ತಿಂಗಳ ಹಿಂದೆ ಮೈಸೂರು ಮೂಲದ ಗೀತಾ (ಹೆಸರು ಬದಲಾಯಿಸಿದೆ) ಎಂಬವರನ್ನು ಮದುವೆಯಾಗಿದ್ದನು. ಮದುವೆ ವೇಳೆ ಗೀತಾ ಪೋಷಕರು ವರದಕ್ಷಿಣೆ, ವರೋಪಚಾರ ಎಂದು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರು.

    ಇತ್ತ ಮದುವೆಯಾದ ಮೂರು ತಿಂಗಳು ಆಗುವಷ್ಟರಲ್ಲಿ ಪತಿ ಪ್ರಭಾಕರ, ಮಾವ ಚಂದ್ರಯ್ಯ, ಅತ್ತೆ ಸಂತೋಷಮ್ಮ ವರದಕ್ಷಿಣೆ ಕಿರುಕುಳ ಕೊಡಲು ಆರಂಭಿಸಿದ್ದಾರೆ. ಕೊನೆಗೆ ಮಾವ ಚಂದ್ರಯ್ಯ ಸೊಸೆ ಗೀತಾಳಿಗೆ ತನ್ನ ಜೊತೆ ಹಾಸಿಗೆ ಹಚಿಕೊಳ್ಳುವಂತೆ ಒತ್ತಾಯಿಸಿದ್ದಾನೆ. ಸ್ವತಃ ಗಂಡ ಪ್ರಭಾಕರ್ ಹಾಗು ಅತ್ತೆ ಇದಕ್ಕೆ ಕುಮ್ಮಕ್ಕೂ ನೀಡಿದ್ದಾರೆ ಎಂದು ಗೀತಾ ಆರೋಪ ಮಾಡಿದ್ದಾರೆ.

    ಸ್ನಾನ ಮಾಡುವುದನ್ನ ಬಗ್ಗಿ ನೋಡುತ್ತಿದ್ದ ಮಾವ: 55 ವರ್ಷದ ಮಾವ ಚಂದ್ರಯ್ಯ ಮನೆಯಲ್ಲಿ ಯಾರು ಇಲ್ಲದಿದ್ದಾಗ ಗೀತಾ ಸ್ನಾನ ಮಾಡುವಾಗ ಹೋಗಿ ಬಗ್ಗಿ ನೋಡುವುದು. ಬಾತ್ ರೂಂ ಒಳಗೆ ಹೋಗಿ ಮೈ ಮುಟ್ಟುವುದನ್ನು ಮಾಡುತಿದ್ದಾನಂತೆ. ಇನ್ನೂ ಚಂದ್ರಯ್ಯ ಟೈಂ ಸಿಕ್ಕಾಗೆಲ್ಲ ಸೊಸೆಯ ಕೈ ಹಿಡಿದು ನನಗೆ ಸಪೋರ್ಟ್ ಮಾಡು ಎಂದು ಹಿಂಸೆ ಕೊಡುತ್ತಿದ್ದನು.

    ಕೊನೆಗೆ ಗೀತಾ ಕಾಮುಕ ಮಾವನ ಮಾತುಗಳನ್ನು ಮೊಬೈಲ್ ಫೋನ್‍ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಈ ಸಂಬಂಧ ಗೀತಾ ತನ್ನ ಅತ್ತೆ, ಮಾವ, ಮೈದುನ, ಅತ್ತಿಗೆ ಹಾಗು ಗಂಡನ ವಿರುದ್ಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇತ್ತ ದೂರು ದಾಖಲಾಗುತ್ತಿದ್ದಂತೆ ಐವರು ನಾಪತ್ತೆಯಾಗಿದ್ದಾರೆ.