Tag: police

  • ಪ್ರೀತಿಸಿ ಮದ್ವೆಯಾದ ಬಳಿಕ ಹುಡ್ಗನ ಮನೆಗೆ ನುಗ್ಗಿ ದಾಂಧಲೆ- ಹುಡ್ಗಿ ಮನೆಯವ್ರು ಸುಮ್ಮನಾದ್ರೂ, ಸಮುದಾಯದವ್ರು ಬಿಡ್ತಿಲ್ಲ

    ಪ್ರೀತಿಸಿ ಮದ್ವೆಯಾದ ಬಳಿಕ ಹುಡ್ಗನ ಮನೆಗೆ ನುಗ್ಗಿ ದಾಂಧಲೆ- ಹುಡ್ಗಿ ಮನೆಯವ್ರು ಸುಮ್ಮನಾದ್ರೂ, ಸಮುದಾಯದವ್ರು ಬಿಡ್ತಿಲ್ಲ

    ಬಳ್ಳಾರಿ: ಇಲ್ಲೊಂದು ಜೋಡಿ ಪರಸ್ಪರ 5 ವರ್ಷಗಳ ಕಾಲ ಪ್ರೀತಿಸಿ ಒಬ್ಬರಿಗೊಬ್ಬರನ್ನ ಅರ್ಥಮಾಡಿಕೊಂಡು ಮದ್ವೆಯಾಗಿದ್ದಾರೆ. ಮೊದಲು ಹುಡ್ಗಿಯ ಕಡೆಯವರು ವಿರೋಧಿಸಿ ನಂತರ ಸುಮ್ಮನಾದರು. ಆದ್ರೆ ನಮ್ಮ ಮಾತು ಕೇಳದೆ ಹೇಗೆ ಮದ್ವೆ ಆಗಿದ್ದೀರಾ ಅಂತಾ ಅದೇ ಸಮಾಜದ ಮುಖಂಡರು ಆ ಪ್ರೇಮಿಗಳಿಗೆ ಕಾಟ ಕೊಡ್ತಿದ್ದಾರೆ.

     

     

    ಮಾಹೀನ್ ಮತ್ತು ಮಾನಸಿ ಪ್ರೀತಿಸಿ ಮದುವೆಯಾದ ಜೋಡಿ. ಬಳ್ಳಾರಿಯಲ್ಲಿ ಎದುರು ಬದುರು ಮನೆಯಲ್ಲಿ ವಾಸವಿದ್ದ ಕಾರಣ ಪರಿಚಯ ಪ್ರೇಮಕ್ಕೆ ತಿರುಗಿದೆ. 5 ವರ್ಷ ಲವ್ ಮಾಡಿ ದೂರದ ಔರಾಂಗಬಾದ್‍ನಲ್ಲಿ ಮದ್ವೆಯಾಗಿದ್ದಾರೆ.

    ಇವರಿಬ್ಬರ ಮದುವೆಗೆ ಹುಡ್ಗಿ ಪೋಷಕರ ವಿರೋಧವಿದೆ. ಹುಡ್ಗನ ಕುಟುಂಬಕ್ಕೆ ಕಾಟ ಶುರುವಾಗಿದೆ. ಕೊನೆಗೆ ಹುಡ್ಗಿ ಮನೆಯವ್ರು ಸುಮ್ಮನಾದ್ರೂ ಸಮುದಾಯದ ಮುಖಂಡರು ಸುಮ್ಮನಾಗಿಲ್ಲ. ಹುಡ್ಗನ ಮನೆ ಮೇಲೆ ದಾಳಿ ಮಾಡಿದ ಗುಂಪು ಕಿಟಕಿ ಗಾಜುಗಳನ್ನ ಒಡೆದು ಹಾಕಿದ್ದಾರೆ. ಅಷ್ಟೇ ಅಲ್ಲದೇ ಮಾಹೀನ್ ಪೋಷಕರ ಮೇಲೆ ಹಲ್ಲೆ ನಡೆಸಿ, ಸಮುದಾಯದಿಂದ ಬಹಿಷ್ಕಾರ ಹಾಕಿದ್ದಾರೆ.

    ಈ ಬಗ್ಗೆ ಹೊಸಪೇಟೆ ಠಾಣೆಗೆ ದೂರು ನೀಡಿದ್ರೂ ಪೊಲೀಸರು ಮಾತ್ರ ಕ್ರಮ ಕೈಗೊಂಡಿಲ್ಲ. ಬದ್ಲಿಗೆ ಪ್ರಭಾವಿಗಳ ಒತ್ತಡಕ್ಕೆ ಮಣಿದು, ಇವ್ರ ಮೇಲೆ ಶಾಂತಿಭಂಗದ ಕೇಸ್ ದಾಖಲಿಸಿದ್ದಾರೆ.

     

  • ಮಗುವಿಗೆ ವಿಷವುಣಿಸಿ ಆತ್ಮಹತ್ಯೆಗೆ ಶರಣಾದ ದಂಪತಿ!

    ಮಗುವಿಗೆ ವಿಷವುಣಿಸಿ ಆತ್ಮಹತ್ಯೆಗೆ ಶರಣಾದ ದಂಪತಿ!

    ಬಳ್ಳಾರಿ: ಜೀವನದಲ್ಲಿ ಜಿಗುಪ್ಸೆಗೊಂಡ ದಂಪತಿ ತಮ್ಮ ಮೂರು ವರ್ಷದ ಮಗುವಿಗೆ ವಿಷವುಣಿಸಿ ತಾವೂ ಸಹ ಆತ್ಮಹತ್ಯೆಗೆ ಶರಣಾದ ಘಟನೆ ಕೂಡ್ಲಗಿ ತಾಲೂಕಿನ ಕೊಟ್ಟೂರಿನಲ್ಲಿ ನಡೆದಿದೆ.

    ಆತ್ಮಹತ್ಯೆಗೆ ಶರಣಾದ ಮೃತ್ಯುಂಜಯ (55) ಪತ್ನಿ ಮಧು (33) ತಮ್ಮ ಮಗು ಬಿಂದು (3)ವಿಗೆ ವಿಷಕುಡಿಸಿ ತಾವೂ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಕೊಟ್ಟೂರು ಪಟ್ಟಣದ ರಿಯಲ್ ಎಸ್ಟೇಲ್ ಕೆಲಸ ಮಾಡುತ್ತಿದ್ದ ಮೃತ್ಯಂಜಯ ಬುಧವಾರ ಮುಂಜಾನೆ ಕೊಟ್ಟೂರಿನ ಹೊರವಲಯದ ಬಳಿ ಇರುವ ತಮ್ಮ ಜಮೀನಿನಲ್ಲಿ ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಿದ್ದಾರೆ.

    ಡೆತ್ ನೋಟ್‍ನಲ್ಲಿ ತಾವೂ ಜೀವನದಲ್ಲಿ ಜಿಗುಪ್ಸೆಗೊಂಡ ಪರಿಣಾಮ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿಟ್ಟಿದ್ದಾರೆ. ಅಷ್ಟೆ ಅಲ್ಲದೇ ತಮ್ಮ ಸಾವಿಗೆ ಯಾರು ಹೊಣೆಯಲ್ಲವೆಂದು ಡೆತ್ ನೋಟ್‍ನಲ್ಲಿ ನಮೂದಿಸಿದ್ದಾರೆ.

    ನಮಗೆ ಮೂರು ಮಕ್ಕಳಿದ್ದು, ಚಿಕ್ಕವಳಾಗಿರುವ ಹೆಣ್ಣು ಮಗುವನ್ನು ತಾವೂ ಕರೆದುಕೊಂಡು ಹೋಗುತ್ತಿರುವುದಾಗಿ ಡೆತ್ ನೋಟ್‍ನಲ್ಲಿ ಬರೆದಿದ್ದಾರೆ. ಇನ್ನಿಬ್ಬರು ಮಕ್ಕಳ ಪೈಕಿ ಒಂದು ಗಂಡು. ಒಂದು ಹೆಣ್ಣು ಮಗುವಿದೆ. ಈ ಮಕ್ಕಳು ಬುಧವಾರ ಶಾಲೆಗೆ ಹೋಗಿದ್ದರು. ಜೊತೆಗೆ ಈ ಮಕ್ಕಳು ಮೃತ ಮೃತ್ಯುಂಜಯನ ತಾಯಿಯ ಜೊತೆ ಅನೂನ್ಯವಾಗಿದ್ದಾರೆ. ಹೀಗಾಗಿ ಆ ಇಬ್ಬರು ಮಕ್ಕಳನ್ನು ಬಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಈ ಘಟನೆಯ ವಿಷಯ ತಿಳಿಯುತ್ತಿದ್ದಂತೆ ಬಳ್ಳಾರಿ ಎಸ್‍ಪಿ ಆರ್. ಚೇತನ ಕೊಟ್ಟೂರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಮುಂದುವರೆಸಿದ್ದಾರೆ. ಘಟನೆ ಕುರಿತು ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಾಜಿ ಪ್ರೇಯಸಿಗೆ ವಿಡಿಯೋ ಕಾಲ್ ಮಾಡಿ ನೇಣಿಗೆ ಶರಣಾದ ಪ್ರೇಮಿ

    ಮಾಜಿ ಪ್ರೇಯಸಿಗೆ ವಿಡಿಯೋ ಕಾಲ್ ಮಾಡಿ ನೇಣಿಗೆ ಶರಣಾದ ಪ್ರೇಮಿ

    ಥಾಣೆ: ಪ್ರೇಮ ವೈಫಲ್ಯದಿಂದ ಬೇಸತ್ತು ಯುವಕನೊಬ್ಬ ತನ್ನ ಮಾಜಿ ಪ್ರೇಯಸಿಗೆ ವಿಡಿಯೋ ಕಾಲ್ ಮಾಡಿ ಆಕೆಯ ಕಣ್ಣೆದುರೇ ಆತ್ಮಹತ್ಯೆಗೆ ಮಾಡಿಕೊಂಡಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ಹನಿ ಅಸ್ವಾನಿ (26) ಆತ್ಮಹತ್ಯೆಗೆ ಶರಣಾದ ಯುವಕ. ಮೇ 21ರಂದು ಉಲ್ಲಾಸನಗರದಲ್ಲಿರುವ ತಮ್ಮ ನಿವಾಸದಲ್ಲಿ ಹನಿ ಅಸ್ವಾನಿ ನೇಣಿಗೆ ಶರಣಾಗಿದ್ದು, ಈಗ ಆತನ ತಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಏನಿದು ಲವ್ ಸ್ಟೋರಿ?
    ಅಸ್ವಾನಿ ತನ್ನ ಕಾಲೇಜಿನ ಯುವತಿಯನ್ನು 6 ವರ್ಷದಿಂದ ಪ್ರೀತಿಮಾಡುತ್ತಿದ್ದ. ಯುವತಿ ಕೂಡ ಈತನನ್ನು ತುಂಬಾ ಪ್ರೀತಿಸುತ್ತಿದ್ದಳು. ಏನೋ ಒಂದು ಕಾರಣಕ್ಕೆ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿ ಲವ್ ಬ್ರೇಕಪ್ ಆಗಿತ್ತು.

    ಬ್ರೇಕಪ್ ಆಗಿದ್ದರೂ ಅಸ್ವಾನಿ ಪ್ರೀತಿ ಮಾಡಿದ ತನ್ನ ಹಳೇ ಪ್ರೇಯಸಿಯನ್ನು ಮರೆತಿರಲಿಲ್ಲ. ಮೇ 21 ರಂದು ಹನಿ ಅಸ್ವಾನಿ ಮತ್ತೆ ತನ್ನ ಮಾಜಿ ಪ್ರೇಯಸಿಯನ್ನು ಭೇಟಿಯಾಗಿದ್ದ. ಆ ವೇಳೆ ಇಬ್ಬರ ಮಧ್ಯೆ ಸಣ್ಣ ಜಗಳವಾಗಿತ್ತು. ಆತ ಇದರಿಂದ ನೊಂದು ತನ್ನ ಮನೆಗೆ ಬಂದು ತನ್ನ ಮಾಜಿ ಪ್ರೇಯಸಿಗೆ ವಿಡಿಯೋ ಕಾಲ್ ಮುಖಾಂತರ ಮಾತನಾಡುತ್ತಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ವಿಡಿಯೋ ಈಗ ಸಿಕ್ಕಿತು:
    ಹನಿ ನೇಣಿಗೆ ಶರಣಾಗುತ್ತಿರುವ ವಿಡಿಯೋ ಆತನ ಪೋಷಕರಿಗೆ ಕೆಲ ದಿನಗಳ ಹಿಂದೆ ಸಿಕ್ಕಿದೆ. ಈ ವಿಡಿಯೋವನ್ನು ಪೊಲೀಸರಿಗೆ ಜೂನ್ 18ರಂದು ತೋರಿಸಿ ದೂರು ನೀಡಿದ್ದಾರೆ. ಪೊಲೀಸರು ಹನಿ ಅಸ್ವಾನಿಯ ಮಾಜಿ ಪ್ರೇಯಸಿ ವಿರುದ್ಧ ಐಪಿಸಿ ಸೆಕ್ಷನ್ 306(ಆತ್ಮಹತ್ಯೆಗೆ ಪ್ರೇರಣೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

     

  • ನೇಣು ಬಿಗಿದ ಸ್ಥಿತಿಯಲ್ಲಿ ನಟಿ ಅಂಜಲಿ ಶ್ರೀವಾಸ್ತವ ಶವ ಪತ್ತೆ!

    ನೇಣು ಬಿಗಿದ ಸ್ಥಿತಿಯಲ್ಲಿ ನಟಿ ಅಂಜಲಿ ಶ್ರೀವಾಸ್ತವ ಶವ ಪತ್ತೆ!

    ಮುಂಬೈ: 29 ವರ್ಷದ ನಟಿ ಅಂಜಲಿ ಶ್ರೀವಾಸ್ತವ ಸೋಮವಾರದಂದು ಸಧೇರಿ ಅಪಾರ್ಟ್‍ಮೆಂಟ್‍ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆದರೆ ಪೊಲೀಸರು ಈಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

    ಈಕೆ ಸತ್ತ ಜಾಗದಲ್ಲಿ ಯಾವುದೇ ಡೆತ್ ನೋಟ್‍ಗಳು ಸಿಕ್ಕಿಲ್ಲ. ಹೀಗಾಗಿ ನಟಿಯ ಸಾವಿಗೆ ಕಾರಣವೇನೆಂದು ತಿಳಿದುಬಂದಿಲ್ಲ. ಸದ್ಯ ನಟಿ ಸಾವಿನ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೊಬೈಲ್ ಕರೆಗಳನ್ನು ಸ್ವೀಕರಿಸಲಿಲ್ಲ: ಮೊಬೈಲ್ ಕರೆಗಳನ್ನು ಬಹಳ ಗಂಟೆಗಳಿಂದ ಸ್ವೀಕರಿಸದಿರುವುದರಿಂದ ಅನುಮಾನಗೊಂಡ ಮನೆಯವರು ಅಪಾರ್ಟ್‍ಮೆಂಟ್ ಮಾಲೀಕರ ಸಹಾಯದಿಂದ ಬಾಗಿಲು ತೆರೆದು ನೋಡಿದಾಗ ಅಂಜಲಿಯ ಶವ ಫ್ಯಾನ್‍ಗೆ ಹಗ್ಗ ಕಟ್ಟಿ ನೇಣಿಗೆ ಶರಣಾಗಿದ್ದ ರೀತಿಯಲ್ಲಿ ಪತ್ತೆಯಾಗಿತ್ತು.

    ಹಲವು ಚಿತ್ರಗಳಲ್ಲಿ ನಟನೆ: ಇವರು ಇತ್ತೀಚಿನ ದಿನಗಳಲ್ಲಿ ಭೋಜ್‍ಪುರಿಯ ಕೆಹ ತ ದಿಲ್ ಮೇ ಬಾ ಎಂಬ ಚಿತ್ರದ ಶೂಟಿಂಗ್‍ಗೆ ಹೋಗಿದ್ದರು. ಇದಕ್ಕೂ ಮುನ್ನ ಅನೇಕ ಸಿನಿಮಾಗಳಲ್ಲಿ ಈಕೆ ನಟಿಸಿದ್ದಾರೆ.

     

  • ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿದ್ರೆ ದಂಡ!

    ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿದ್ರೆ ದಂಡ!

    ಮೊರಾದಾಬಾದ್: ಅತಿಯಾದರೆ ಅಮೃತವೂ ವಿಷ ಎಂಬ ಗಾದೆ ಮಾತು ಈಗಿನ ಸೆಲ್ಫಿ ಕ್ರೇಜ್ ಯುವಕರಿಗೆ ಅನ್ವಯಿಸುತ್ತದೆ. ಇಂದಿನ ಸ್ಮಾರ್ಟ್ ಫೋನ್ ಯುಗದಲ್ಲಿ ಸೆಲ್ಫಿ ಕ್ರೇಜ್ ಯಾರನ್ನೂ ಬಿಟ್ಟಿಲ್ಲ. ಈ ಸೆಲ್ಫಿ ಕ್ರೇಜ್ ಕೆಲವರ ಜೀವಕ್ಕೆ ಅಪಾಯವಾಗುತ್ತಿರುವ ಹಿನ್ನೆಲೆಯಲ್ಲಿ ಇಂತಹ ಅನಾಹುತ ತಡೆಯಲು ಉತ್ತರಪ್ರದೇಶ ಪೊಲೀಸರು ಮುಂದಾಗಿದ್ದಾರೆ.

    ರೈಲ್ವೆ ಹಳಿ, ಬಸ್ ನಿಲ್ದಾಣ, ಹೆದ್ದಾರಿ, ನದಿ ದಡ, ಎತ್ತರದ ಕಟ್ಟಡಗಳಂತಹ ಸ್ಥಳಗಲ್ಲಿ ಸೆಲ್ಫಿ ತೆಗೆದುಕೊಂಡವರ ಮೇಲೆ ದಂಡ ವಿಧಿಸಲಾಗುವುದು ಮತ್ತುಕಠಿಣ ಕ್ರಮ ಕೈಗೊಳ್ಳಲಾಗುವುದು ಮೊರಾದಾಬಾದ್ ಎಂದು ಪೊಲೀಸರು ಹೇಳಿದ್ದಾರೆ,

    ಯುವ ಜನತೆ ಸೆಲ್ಫಿ ತೆಗೆಯುವುದು ತಪ್ಪು ಎಂದು ನಾವು ಹೇಳುತ್ತಿಲ್ಲ. ಆದರೆ ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ನಾವು ದಂಡ ವಿಧಿಸಲು ಮುಂದಾಗಿದ್ದೇವೆ ಎಂದು ಎಸ್‍ಪಿ ಆಶೀಶ್ ಶ್ರೀವಾಸ್ತವ್ ಹೇಳಿದ್ದಾರೆ.

    ಕಳೆದ ತಿಂಗಳು ತೆಲಂಗಾಣದ ಸಿಕಂದರಾಬಾದ್ ಸಮೀಪ ಅಲ್ವಾಲ್ ರೈಲ್ವೆ ನಿಲ್ದಾಣದಲ್ಲಿ ಸೆಲ್ಫಿ ತಗೆದುಕೊಳ್ಳಲು ಹೋಗಿ  ಓರ್ವ ವ್ಯಕ್ತಿ ಮೃತಪಟ್ಟಿದ್ದ. ಅಲ್ಲದೆ ಇನ್ನೊಬ್ಬ ವ್ಯಕ್ತಿ ತನ್ನ ಕೈ ಕಳೆದುಕೊಂಡಿದ್ದ.

    ಇದನ್ನೂ ಓದಿ: ಸಮುದ್ರ ದಂಡೆಯ ಮೇಲೆ ಸೆಲ್ಫೀ ತೆಗೆಯಲು ಹೋದ ಯುವಕ ನೀರುಪಾಲು

  • ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಬೀದರ್ ಎಸಿಬಿ ಸಿಪಿಐ ಪತ್ನಿ

    ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಬೀದರ್ ಎಸಿಬಿ ಸಿಪಿಐ ಪತ್ನಿ

    ರಾಯಚೂರು: ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಬೀದರ್ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಸಿಪಿಐ ಪತ್ನಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಯಚೂರಿನ ಮಾನ್ವಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ಸಿಪಿಐ ಸಿದ್ದರಾಮಯ್ಯ ಸ್ವಾಮಿ ಪತ್ನಿ ಜಯಲಕ್ಷ್ಮಿ ಮಾನ್ವಿ ಪಟ್ಟಣದ ಬಸವೇಶ್ವರ ಕಾಲೋನಿಯ ಮನೆಯಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸ್ವತಃ ಸಿದ್ದರಾಮಯ್ಯ ಮಾನ್ವಿ ತಾಲೂಕಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ.

    ಜೂನ್ 17ರ ಸಂಜೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇನ್ನೋರ್ವ ಮಹಿಳೆ ಜೊತೆ ಸಿದ್ದರಾಮಯ್ಯ ಸ್ವಾಮಿ ಅಕ್ರಮ ಸಂಬಂಧ ಹೊಂದಿದ್ದು ಡೈವರ್ಸ್‍ಗಾಗಿ ಕಿರುಕುಳ ನೀಡುತ್ತಿದ್ದರು. ಅಷ್ಟೇ ಅಲ್ಲದೇ ಗಂಡನ ಮನೆಯವರು ನನ್ನನು ಮನೆಗೆ ಸೇರಿಸಿಕೊಳ್ಳುತ್ತಿಲ್ಲ ಎಂದು ಜಯಲಕ್ಷ್ಮಿ ಆರೋಪಿಸಿದ್ದಾರೆ

    ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಚಲಿಸುತ್ತಿದ್ದ ಕಾರಿನಲ್ಲೇ ಮಹಿಳೆ ಮೇಲೆ ಗ್ಯಾಂಗ್ ರೇಪ್ ಮಾಡಿ ಹೊರಕ್ಕೆ ಎಸೆದ್ರು!

    ಚಲಿಸುತ್ತಿದ್ದ ಕಾರಿನಲ್ಲೇ ಮಹಿಳೆ ಮೇಲೆ ಗ್ಯಾಂಗ್ ರೇಪ್ ಮಾಡಿ ಹೊರಕ್ಕೆ ಎಸೆದ್ರು!

    ಚಂಡೀಗಢ: ಚಲಿಸುತ್ತಿರುವ ಕಾರಿನಲ್ಲಿ ಮಹಿಳೆ ಮೇಲೆ ಮೂವರು ಕಾಮುಕರು ಗ್ಯಾಂಗ್ ರೇಪ್ ಎಸಗಿ ಕಾರಿನಿಂದ ರಸ್ತೆಗೆಸೆದ ಆರೋಪವೊಂದು ಕೇಳಿಬಂದಿದೆ.

    ಈ ಘಟನೆ ಉತ್ತರಪ್ರದೇಶದ ನೊಯ್ಡಾದಲ್ಲಿ ಸೋಮವಾರ ರಾತ್ರಿ ನಡೆದಿದೆ. ಮಹಿಳೆ ಮೂಲತಃ ರಾಜಸ್ತಾನದ ಭರತ್‍ಪುರದವರಾಗಿದ್ದು, ಸಂಬಂಧಿಕರ ಮನೆಗೆ ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

    ಏನಿದು ಪ್ರಕರಣ?: ರಾಜಸ್ಥಾನ ಮೂಲದ ಮಹಿಳೆ ಉತ್ತರಪ್ರದೇಶದ ಸೋಹ್ನಾ ಪ್ರದೇಶದಲ್ಲಿರುವ ತನ್ನ ಸಂಬಂಧಿಕ ಮನೆಗೆ ಕಳೆದ ವಾರ ಬಂದಿದ್ದರು. ಅಂತೆಯೇ ಮಹಿಳೆ ಕಳೆದ ರಾತ್ರಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಸುಮಾರು 8.30ರ ವೇಳೆಗೆ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಬಂದ ಕಾಮುಕರು ಚಲಿಸುತ್ತಿದ್ದ ಕಾರಿನಲ್ಲೇ ಗ್ಯಾಂಗ್ ರೇಪ್ ಎಸಗಿದ್ದಾರೆ. ಬಳಿಕ ನೊಯ್ಡಾ ಬಳಿ ಕಾರಿನಿಂದ ರಸ್ತೆಗೆಸೆದು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.

    ಮಹಿಳೆ ರಸ್ತೆ ಬದಿಯಲ್ಲಿ ಬಿದ್ದಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೇ ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಆದ್ರೆ ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.

    ಪ್ರಕರಣ ಸಂಬಂಧ ಯುವತಿಯ ವೈದ್ಯಕೀಯ ಪರೀಕ್ಷೆ ಈಗಾಗಲೇ ನಡೆದಿದ್ದು, ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ವರದಿ ಪೊಲಿಸರ ಕೈ ಸೇರಿದ ಬಳಿಕ ಆರೋಪಿಗಳ ಪತ್ತೆಗೆ ಬಲೆ ಬೀಸಲಿದ್ದಾರೆ ಎಂದು ವರದಿಯಾಗಿದೆ.

    ಚಲಿಸುತ್ತಿರುವ ಕಾರಿನಲ್ಲಿ ಗ್ಯಾಂಗ್ ರೇಪ್ ಮಾಡಿರುವುದು ಇದು ಮೊದಲ ಬಾರಿಯೇನಲ್ಲ. ಕಳೆದ ತಿಂಗಳು ತಾಯಿ ಮತ್ತು ಮಗಳು ಮನೆಗೆ ಆಟೋ ರಿಕ್ಷಾದಲ್ಲಿ ಮನೆಗೆ ತೆರಳುತ್ತಿದ್ದರು. ಮೂರು ಜನ ಕಾಮುಕರು ರಿಕ್ಷಾವನ್ನು ತಡೆದು ಮಗುವನ್ನು ಹೊರಗೆ ಎಸೆದು ಮಹಿಳೆಯ ಮೇಲೆ ಗ್ಯಾಂಗ್ ರೇಪ್ ನಡೆಸಲಾಗಿತ್ತು. ಹಾಗೂ ಕೆಲ ದಿನಗಳ ಹಿಂದೆ ಗುರ್‍ಗಾಂವ್‍ನಲ್ಲಿ 22 ವರ್ಷದ ಯುವತಿಯನ್ನು ಚಲಿಸುತ್ತಿರುವ ಕಾರಿನಲ್ಲಿ ಅತ್ಯಾಚಾರ ಮಾಡಿ ಮನೆಯ ಎದುರು ಎಸೆದು ಹೋಗಿರುವ ಘಟನೆ ನಡೆದಿತ್ತು.

  • ಆಟೋದಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕನಿಗೆ ಧರ್ಮದೇಟು

    ಆಟೋದಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕನಿಗೆ ಧರ್ಮದೇಟು

    ಮಂಗಳೂರು: ಆಟೋದಲ್ಲಿ ಬರುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕನಿಗೆ ಸ್ಥಳೀಯರು ಧರ್ಮದೇಟು ನೀಡಿ ಬುದ್ಧಿ ಕಲಿಸಿದ್ದಾರೆ.

    ಉಜಿರೆ ನಿವಾಸಿ ಮಹಮ್ಮದ್ ತಾಜುವುದ್ದೀನ್ ಎಂಬಾತನೇ ಧರ್ಮದೇಟು ತಿಂದ ವ್ಯಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಈ ಘಟನೆ ನಡೆದಿದೆ. ಕೊಯ್ಯೂರಿನಿಂದ ಬೆಳ್ತಂಗಡಿಗೆ ಕಡೆಗೆ ಆಟೋದಲ್ಲಿ ಬರುತ್ತಿದ್ದ ಯುವತಿಗೆ ತಾಜುವುದ್ದೀನ್ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ವೇಳೆ ಆಟೋದಲ್ಲಿದ್ದ ಸಹ ಪ್ರಯಾಣಿಕರು ತಾಜುವುದ್ದೀನ್ ಗೆ ಥಳಿಸಿ ಬೆಳ್ತಂಗಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಬೆಳ್ತಂಗಡಿ ಪೊಲೀಸರು ತಾಜಾವುದ್ದೀನ್‍ನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇದನ್ನೂ ಓದಿ: ನಡುರಸ್ತೆಯಲ್ಲೇ ಮಹಿಳಾ ಟೆಕ್ಕಿಗೆ ಕಿಸ್ ಮಾಡಿದ ಕಾಮುಕರು

  • ಪಲ್ಟಿ ಹೊಡೆದ ಖಾಸಗಿ ಬಸ್ -15 ಜನರಿಗೆ ಗಾಯ

    ಪಲ್ಟಿ ಹೊಡೆದ ಖಾಸಗಿ ಬಸ್ -15 ಜನರಿಗೆ ಗಾಯ

    ಹಾವೇರಿ: ಖಾಸಗಿ ಬಸ್‍ವೊಂದು ಪಲ್ಟಿಯಾಗಿದ್ದು, ಬಸ್‍ನಲ್ಲಿದ್ದ 15 ಜನರು ಗಾಯಗೊಂಡಿರುವ ಘಟನೆ ಜಲ್ಲೆಯ ಹಿರೇಕೆರೂರು ತಾಲೂಕಿನ ಹಿರೇಮೊರಬ ಗ್ರಾಮದ ಬಳಿ ನಡೆದಿದೆ.

    ಶ್ರೀನಿವಾಸ್ ಎಂಬವರಿಗೆ ಸೇರಿದ ಬಸ್ ಪಲ್ಟಿಯಾಗಿದೆ. ಬಸ್ ಚಾಲಕನ ನಿರ್ಲಕ್ಷ್ಯದಿಂದ ರಸ್ತೆ ಪಕ್ಕದ ಕಂದಕಕ್ಕೆ ಬಸ್ ಉರುಳಿದೆ ಎಂದು ಹೇಳಲಾಗಿದೆ. ಅಪಘಾತದ ಬಳಿಕ ಚಾಲಕ ಪರಾರಿಯಾಗಿದ್ದಾನೆ. ಬಸ್ ಉಕ್ಕಡಗಾತ್ರಿಯಿಂದ ಶಿವಮೊಗ್ಗ ಹೊರಟಿತ್ತು.

    ಸ್ಥಳಕ್ಕೆ ಹಿರೇಕೆರೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಗಾಯಾಳುಗಳನ್ನು ರಟ್ಟೀಹಳ್ಳಿ ಮತ್ತು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

     

  • ಪತ್ನಿ ಮನೇಲಿ ಇಲ್ಲವೆಂದು 15 ವರ್ಷದ ನಾದಿನಿಯನ್ನ ಅತ್ಯಾಚಾರಗೈದ ಬಾವ

    ಪತ್ನಿ ಮನೇಲಿ ಇಲ್ಲವೆಂದು 15 ವರ್ಷದ ನಾದಿನಿಯನ್ನ ಅತ್ಯಾಚಾರಗೈದ ಬಾವ

    ಜೈಪುರ: ಮನೆಯಲ್ಲಿ ಪತ್ನಿ ಇಲ್ಲವೆಂದು ಬಾವನೇ 15 ವರ್ಷದ ನಾದಿನಿಯನ್ನು ಅತ್ಯಾಚಾರಗೈದಿರುವ ಘಟನೆ ಶುಕ್ರವಾರ ರಾಜಸ್ಥಾನ ರಾಜ್ಯದ ಬುಂದಿ ಜಿಲ್ಲೆಯಲ್ಲಿ ನಡೆದಿದೆ.

    ಗಿರಾಜ್ ಮಾಳಿ(23) ಎಂಬಾತನೇ ತನ್ನ 15 ವರ್ಷದ ಅಪ್ರಾಪ್ತ ನಾದಿನಿಯ ಮೇಲೆ ಅತ್ಯಾಚಾರ ಎಸೆಗಿದ ಕಾಮುಕ. ಶುಕ್ರವಾರ ಮನೆಗೆ ಬಂದ ಗಿರಾಜ್‍ನಿಗೆ ಮನೆಯಲ್ಲಿ ತನ್ನ ಪತ್ನಿ ಇಲ್ಲವೆಂದು ತಿಳಿದಿದೆ. ಗಿರಾಜ್ ಪತ್ನಿ ಕೇಶವಾಪುರ ಗ್ರಾಮದಿಂದ ಹೊರ ಹೋಗಿರುವ ವಿಷಯ ತಿಳಿದಿದೆ. ಈ ವೇಳೆಯಲ್ಲಿ ಮನೆಯಲ್ಲಿದ್ದ ನಾದಿನಿಯ ಮೇಲೆ ಅತ್ಯಾಚಾರಗೈದಿದ್ದಾನೆ ಎಂದು ದಬ್ಲಾನ್ ಸ್ಟೇಶನ್ ಹೋಮ್ ಆಫೀಸರ್ ಸಂಜಯ್ ರಾಯಲ್ ಹೇಳಿದ್ದಾರೆ.

    ಶುಕ್ರವಾರ ಸಂಜೆ ಬಾಲಕಿ ತನಗಾಗಿರುವ ನೋವನ್ನು ತಿಳಿಸಿದಾಗ ಪ್ರಕರಣ ಬೆಳಕಿಗ ಬಂದಿದೆ. ಬಾಲಕಿಯನ್ನು ಬುಂದಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಶಿಫಾರಸ್ಸಿನ ಮೇರೆಗೆ ಬಾಲಕಿಯನ್ನು ಕೋಟಾದ ಜೆ.ಕೆ.ಲೋನ್ ಆಸ್ಪತ್ರೆಗೆ ರವಾನಿಸಲಾಗಿದೆ. ಬಾಲಕಿಯ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬಾಲಕಿಯ ಕುಟುಂಬಸ್ಥರ ಪೊಲೀಸ್ ಠಾಣೆಯಲ್ಲಿ ದೂರಿನ್ವಯ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇತ್ತ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ಗಿರಾಜ್ ನಾಪತ್ತೆಯಾಗಿದ್ದಾನೆ. ಪೊಲೀಸರು ಆರೋಪಿ ಪತ್ತೆಗಾಗಿ ಜಾಲ ಬೀಸಿದ್ದಾರೆ.