Tag: police

  • ಚಾಕು ಹಿಡಿದು ಬಂದವನ ಮನವೊಲಿಸಿದ ಪೊಲೀಸ್-ಮನ ಮಿಡಿಯುವ ವಿಡಿಯೋ ನೋಡಿ

    ಚಾಕು ಹಿಡಿದು ಬಂದವನ ಮನವೊಲಿಸಿದ ಪೊಲೀಸ್-ಮನ ಮಿಡಿಯುವ ವಿಡಿಯೋ ನೋಡಿ

    ಬ್ಯಾಂಕಾಕ್: ಚಾಕು ಹಿಡಿದು ಠಾಣೆಯೊಳಗೆ ನುಗ್ಗಿದ್ದ ವ್ಯಕ್ತಿಯನ್ನು ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಮೃದು ಮಾತುಗಳಿಂದ ಮನವೊಲಿಸುವ ಮೂಲಕ ಎಲ್ಲರ ಮೆಚ್ಚುಗೆಯನ್ನು ಪಡೆದಿದ್ದಾರೆ.

    ಬ್ಯಾಂಕಾಕ್‍ನ ಹೂಯೆ ಕ್ವಾಂಗ್ ಪೊಲೀಸ್ ಠಾಣೆಯಲ್ಲಿ ಅಧಿಕಾರಿ ಅನಿರತ್ ಮಾಲೀ ಎಂಬವರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಚಾಕು ಹಿಡಿದು ಠಾಣೆಗೆ ನುಗ್ಗಿದ್ದಾನೆ. ಸ್ಥಳದಲ್ಲಿದ್ದ ಅನಿರತ್ ವ್ಯಕ್ತಿಯನ್ನು ಅತ್ಯಂತ ತಾಳ್ಮೆಯಿಂದ ಮೃದು ಮಾತುಗಳಿಂದ ಮಾತನಾಡಿಸಿದ್ದಾರೆ. ಅವರು ಏನು ಮಾತನಾಡುತ್ತಿದ್ದಾರೆ ಎಂಬುದು ವಿಡಿಯೋದಿಂದ ತಿಳಿಯದಿದ್ದರೂ ಕೊನೆಗೆ ವ್ಯಕ್ತಿ ಚಾಕುವನ್ನ ಪೊಲೀಸರ ಕೈಗೆ ನೀಡೋದನ್ನ ಕಾಣಬಹುದು. ಪೊಲೀಸ್ ಅಧಿಕಾರಿಯೂ ಕೂಡ ಆ ವ್ಯಕ್ತಿಯನ್ನು ಬಂಧನಕ್ಕೊಳಪಡಿಸದೆ, ಚಾಕುವನ್ನ ಪಕ್ಕಕ್ಕೆಸೆದು ಆತನನ್ನ ತಬ್ಬಿಕೊಂಡು ಸಮಾಧಾನಪಡಿಸಿದ್ದಾರೆ. ನಂತರ ಅಲ್ಲೇ ಇದ್ದ ಚೇರ್ ಮೇಲೆ ಕೂರಿಸಿದ್ದಾರೆ.

    ಠಾಣೆಗೆ ನುಗ್ಗಿದ ವ್ಯಕ್ತಿ ಓರ್ವ ಸಂಗೀತಗಾರನಾಗಿದ್ದು, ವೃತ್ತಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಆದರೆ ಕಳೆದ ಮೂರು ದಿನಗಳಿಂದ ಆತನಿಗೆ ಸಂಬಳವಾಗಿರಲಿಲ್ಲ. ಜೊತೆಗೆ ತನ್ನ ಗಿಟಾರ್ ಕೂಡ ಕಳೆದುಕೊಂಡು ಆತಂಕದಲ್ಲಿದ್ದ ಎನ್ನಲಾಗಿದೆ.

    ಅನಿರತ್ ಆ ವ್ಯಕ್ತಿಗೆ ತಮ್ಮಲ್ಲಿರುವ ಗಿಟಾರ್ ಕೊಡುವುದಾಗಿ ಹೇಳಿ, ಇಬ್ಬರೂ ಒಟ್ಟಿಗೆ ಹೊರಗಡೆ ಊಟಕ್ಕೆ ಹೋಗೋಣವೆಂದು ಹೇಳಿದ್ದಾಗಿ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    ಸಮಾಧಾನಗೊಂಡ ವ್ಯಕ್ತಿಯನ್ನು ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

     

    https://www.youtube.com/watch?v=SdTDKRTkXuM

  • ತಂಗಿಯನ್ನು ಭೇಟಿಯಾಗಲು ಬಂದಿದ್ದ ಅಣ್ಣ ಕೊಲೆಯಾದ

    ತಂಗಿಯನ್ನು ಭೇಟಿಯಾಗಲು ಬಂದಿದ್ದ ಅಣ್ಣ ಕೊಲೆಯಾದ

    ಗದಗ: ತಂಗಿಯನ್ನು ಭೇಟಿಯಾಗಲು ಬಂದಿದ್ದ ಅಣ್ಣನನ್ನು ದುಷ್ಕರ್ಮಿಗಳು ಕಲ್ಲು ಎತ್ತಿಹಾಕಿ ಕೊಲೆಗೈದಿರುವ ಘಟನೆ ಗದಗನ ಬೆಟಗೇರಿಯ ಶರಣ ಬಸವೇಶ್ವರ ನಗರದಲ್ಲಿ ನಡೆದಿದೆ.

    ಗದಗ ತಾಲೂಕಿನ ಹರ್ತಿ ಗ್ರಾಮದ 42 ವರ್ಷದ ಆನಂದ ಭಜಂತ್ರಿ ಕೊಲೆಯಾದ ವ್ಯಕ್ತಿ. ಆನಂದ್ ಎರಡು ದಿನಗಳ ಹಿಂದೆ ತಂಗಿಯನ್ನು ಭೇಟಿಯಾಗಲು ಬೆಟಗೇರಿಗೆ ಬಂದಿದ್ದರು. ಬುಧವಾರ ರಾತ್ರಿ ಊಟ ಮಾಡಿ ಮನೆಯ ಹತ್ತಿರದ ಖಾಲಿಯಿರುವ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಮಲಗಿದ್ದರು. ಆನಂದ್ ನಿದ್ರೆಯಲ್ಲಿದ್ದಾಗ ಯಾರೋ ದುಷ್ಕರ್ಮಿಗಳು ತಲೆ, ಮುಖದ ಭಾಗದ ಜಜ್ಜಿ ಕೊಲೆಮಾಡಿ ಪರಾರಿಯಾಗಿದ್ದಾರೆ.

    ಸ್ಥಳಕ್ಕೆ ಬೆಟಗೇರಿ ಪೊಲೀಸರು ಹಾಗೂ ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಬೆಟಗೇರಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಒಂದಲ್ಲ, ಎರಡಲ್ಲ ಮ್ಯಾಟ್ರಿಮೋನಿ ತಾಣದಲ್ಲಿ 75ಕ್ಕೂ ಹೆಚ್ಚು ಮಂದಿಗೆ ವಂಚಿಸಿದ್ದ ಕಾಮುಕ ಅರೆಸ್ಟ್!

    ಒಂದಲ್ಲ, ಎರಡಲ್ಲ ಮ್ಯಾಟ್ರಿಮೋನಿ ತಾಣದಲ್ಲಿ 75ಕ್ಕೂ ಹೆಚ್ಚು ಮಂದಿಗೆ ವಂಚಿಸಿದ್ದ ಕಾಮುಕ ಅರೆಸ್ಟ್!

    ಬೆಂಗಳೂರು: ನೀವು ಮ್ಯಾಟ್ರಿಮೋನಿ ತಾಣದಲ್ಲಿ ಮದುವೆಯಾಗಲು ಸೂಕ್ತ ವರನನ್ನು ಹುಡುಕುತ್ತಿದ್ದೀರಾ. ಹಾಗಾದ್ರೆ ನೀವು ಎಚ್ಚರವಾಗಿರುವುದು ಒಳಿತು. ಅಪ್ಪಿ ತಪ್ಪಿ ಸರಿಯಾಗಿ ಯೋಚಿಸದೇ ನಿರ್ಧಾರ ತೆಗೆದುಕೊಂಡರೆ ನೀವು ಮೋಸ ಹೋಗುವುದು ಖಂಡಿತ.

    ಹೌದು. ಒಂದಲ್ಲ ಎರಡಲ್ಲ, ಬರೋಬ್ಬರಿ 75 ಮಂದಿಗೆ ವಂಚನೆ ಎಸಗಿದ ಆರೋಪಿಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಹಾಸನ ಮೂಲದ ಸಾದತ್ ಖಾನ್ (28) ಬಂಧಿತ ಆರೋಪಿ. ಲೈಂಗಿಕವಾಗಿ ಬಳಸಿಕೊಂಡು ಅವರಿಂದಲೇ ಹಣ ಪಡೆದು ಪರಾರಿಯಾಗುತ್ತಿದ್ದ ಖದೀಮ ಕೊನೆಗೂ ಸಿಕ್ಕಿಬಿದ್ದಿದ್ದಾನೆ.

    ಮ್ಯಾಟ್ರಿಮೋನಿ ತಾಣದಲ್ಲಿನ ಪ್ರೊಫೈಲ್‍ಗಳನ್ನು ಟಾರ್ಗೆಟ್ ಮಾಡುತ್ತಿದ್ದ, ಈತ ನಾನು ಕೇಂದ್ರ ಸರ್ಕಾರದ ಉದ್ಯೋಗಿ/ ಕಂಪೆನಿಯ ಸಿಇಒ ಇತ್ಯಾದಿ ಹೆಸರಿನಲ್ಲಿ ಪ್ರೊಫೈಲ್ ಕ್ರಿಯೆಟ್ ಮಾಡುತ್ತಿದ್ದ. ಈ ವೆಬ್‍ಸೈಟ್ ಗಳಲ್ಲಿ ಯುವತಿಯರನ್ನು/ ವಿಚ್ಚೇದನವಾಗಿರುವ ಮಹಿಳೆಯರನ್ನು ಟಾರ್ಗೆಟ್ ಮಾಡಿ ಮದುವೆಯಾಗುವುದಾಗಿ ನಂಬಿಸಿ, ನಂತರ ಲೈಂಗಿಕವಾಗಿ ಬಳಸಿಕೊಂಡು ಅವರಿಂದಲೇ ಹಣ ಪಡೆದು ಸಾದತ್ ಖಾನ್ ಪರಾರಿಯಾಗುತ್ತಿದ್ದ.

    ಸುಮಾರು 40 ಕ್ಕೂ ಹೆಚ್ಚು ಮಹಿಳೆಯರಿಗೆ ಹಣ ಪಡೆದು ಮೋಸ ಮಾಡಿದ್ದು, 75 ರಿಂದ 100 ಹೆಣ್ಣುಮಕ್ಕಳನ್ನು ಲೈಂಗಿಕವಾಗಿ ಬಳಸಿರುವ ಮಾಹಿತಿ ಈಗ ಸಿಕ್ಕಿದೆ. ಬೆಂಗಳೂರಿನ ಯಲಹಂಕ, ಜಯನಗರ, ಮೈಸೂರು ಕೆ. ಅರ್.ಪುರ. ಧಾರವಾಡ ಸೇರಿದಂತೆ 8 ಕಡೆ ಅಧಿಕೃತ ದೂರು ದಾಖಲಾಗಿದೆ. ಪಿಯೂ ಓದಿದ ಬಳಿಕ ಐಟಿಐ ಮಾಡಿದ್ದ ಈತ ಹೇರ್ ಸ್ಟೈಲ್, ಬಾಡಿ ಸ್ಟ್ರಕ್ಚರ್, ಭಾಷೆ, ಊರು ಎಲ್ಲ ಬದಲಾಯಸಿಕೊಂಡಿದ್ದ. ಅನ್ ಲೈನ್‍ಲ್ಲಿ ಫಾರೀನ್ ಇಂಗ್ಲಿಷ್  ಶೈಲಿಯನ್ನು ಕಲಿತು ಯುವತಿಯರನ್ನು ಪಟಾಯಿಸುತ್ತಿದ್ದ. ಓರ್ವ ಮಹಿಳೆ ಬಳಿಯಿಂದ 20 ಲಕ್ಷ ಹಣ ಸುಲಿಗೆ ಮಾಡಿದ್ದಾನೆ. ನಿವೃತ್ತ ಸರ್ಕಾರಿ ಅಧಿಕಾರಿಯ ಮಗಳಿಗೂ ಮೋಸ ವಂಚಕ ಮೋಸ ಮಾಡಿದ್ದಾನೆ. ಪ್ರತಿಷ್ಠಿತ ಕಾಲೇಜಿನ ಪ್ರೊಫೆಸರ್, ಸರ್ಕಾರಿ ನೌಕರರು, ಟೆಕ್ಕಿಗಳು, ಕಾರ್ಪೊರೇಟ್ ಸಂಸ್ಥೆಯ ಮುಖ್ಯಸ್ಥರು ಸಹ ಇವನಿಂದ ಮೋಸ ಹೋಗಿದ್ದು, ಕೆಲ ಮಹಿಳೆಯರ ಸಂಪೂರ್ಣ ಆಸ್ತಿ ಕಿತ್ತುಕೊಂಡಿರುವ ವಿಚಾರ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

    ಈತನಿಗೆ ಇದೆ 17 ಹೆಸರು: ಅತಿಯಾದ ಕುಡುಕನಾದ ಈತನಿಗೆ ಹಣ ಬೇಕಿತ್ತು. ಹೀಗಾಗಿ ಸುಲಭವಾಗಿ ಯುವತಿಯರಿಂದ ಹಣ ಸಿಗುತ್ತದೆ ಎನ್ನುವ ಕಾರಣಕ್ಕೆ ಮ್ಯಾಟ್ರಿಮೋನಿ ತಾಣಗಳಲ್ಲಿ 17 ವಿವಿಧ ಹೆಸರಿಟ್ಟುಕೊಂಡು ಆರೋಪಿ ವಂಚಿಸುತ್ತಿದ್ದ. ಒಂದು ತಾಣದಲ್ಲಿ ಸರ್ಕಾರಿ ನೌಕರಿ, ಟೆಕ್ಕಿ, ಬ್ಯಾಂಕ್ ಮ್ಯಾನೇಜರ್ ಇತ್ಯಾದಿ ಹೆಸರುಗಳನ್ನು ನಮೂದಿಸಿ ಪರಿಚಯ ಮಾಡಿಕೊಂಡು ಯುವತಿಯರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ.

    ಮ್ಯಾಟ್ರಿಮೋನಿಯಲ್ಲಿ ಹೇಗೆ? ಸಾಧಾರಣವಾಗಿ ಮ್ಯಾಟ್ರಿಮೋನಿ ತಾಣಗಳಲ್ಲಿ ಸ್ವ ವಿವರದ ಮಾಹಿತಿಯ ಜೊತೆ ತನಗೆ ಬೇಕಾದ ವಧು/ ವರ ಹೇಗಿರಬೇಕು ಎನ್ನುವುದನ್ನು ತಿಳಿಸಲು ಆಯ್ಕೆಗಳಿರುತ್ತದೆ. ಈ ಆಯ್ಕೆಯಲ್ಲಿ ಯುವತಿಯರು ಯಾವ ರೀತಿಯ ವರ ಇರಬೇಕು ಎನ್ನುವುದನ್ನು ನಮೂದಿಸಿದ್ದಾರೋ, ಆ ಬೇಕಾಗಿದ್ದ ಮಾಹಿತಿಗೆ ಅನುಗುಣವಾಗಿ ಈತ ತನ್ನ ಪ್ರೊಫೈಲ್ ಕ್ರಿಯೆಟ್ ಮಾಡಿ ಟಾರ್ಗೆಟ್ ಆಗಿದ್ದ ಯುವತಿಯರನ್ನು ಖೆಡ್ಡಾಕ್ಕೆ ಬೀಳಿಸುತ್ತಿದ್ದ.

    ಲೈಫ್‍ಸ್ಟೈಲ್ ನೋಡಿ ಮನಸೋತ್ರು: ಹುಡುಗಿಯರು ಮತ್ತು ಮಹಿಳೆಯರು ಶ್ರೀಮಂತ ವರನನ್ನೇ ಹುಡುಕುತ್ತಿದ್ದಾರೆ ಎನ್ನುವುದು ಸಾದತ್‍ಗೆ ತಿಳಿದಿತ್ತು. ಇದಕ್ಕಾಗಿ ಈತ ಪರಸ್ಪರ ಪರಿಚಯವಾಗುವ ವೇಳೆ ಐಷಾರಾಮಿ ಕಾರುಗಳನ್ನು ಬುಕ್ ಮಾಡಿ ಸ್ಥಳಕ್ಕೆ ಬಂದು ಭೇಟಿ ಮಾಡುತ್ತಿದ್ದ. ಬೆನ್ಜ್, ಆಡಿ ಕಾರ್‍ಗಳನ್ನು ಬಾಡಿಗೆ ಪಡೆದು ಹೆಣ್ಣುಮಕ್ಕಳ ಮುಂದೆ ಓಡಾಡುತ್ತಿದ್ದ. ಪ್ರೊಫೈಲ್ ನೋಡಿ ಈತನಿಗೆ ಬಿದ್ದಿದ್ದ ಹುಡುಗಿಯರು ಈತನ ಹೈಫೈ ಲೈಫ್‍ಸ್ಟೈಲ್ ನೋಡಿ ಮನಸೋಲುತ್ತಿದ್ದರು.

    ಹಣ ಪಡೆದು ವಂಚನೆ: ಪರಿಚಯವಾದ ಹುಡುಗಿ ಬಳಿ ನನಗೆ ಸ್ವಲ್ಪ ಸಹಾಯ ಮಾಡಬೇಕು ಎಂದು ಎಂದು ಹೇಳಿ ಅವರಿಂದ ಹಣವನ್ನು ಪಡೆಯುತ್ತಿದ್ದ. ಪಡೆದ ಹಣದಲ್ಲಿ ಅರ್ಧ ಹಣವನ್ನು ತನ್ನ ಶೋಕಿ ಲೈಫ್ ಗೆ ಬಳಸುತ್ತಿದ್ದರೆ ಅರ್ಧ ಹಣವನ್ನು ಬೇರೆ ಯುವತಿಗೆ ನೀಡುತ್ತಿದ್ದ. ಈತನ ಈ ವಿಶೇಷ ಉಪಕಾರವನ್ನು ನೋಡಿ ಹುಡುಗಿಯರು ಸಾದತ್ ಮೇಲೆ ಮತ್ತಷ್ಟು ನಂಬಿಕೆ ಇಡುತ್ತಿದ್ದರು. ಈ ರೀತಿಯ ಸಹಾಯ ಮಾಡಿದ ಕೆಲ ದಿನಗಳ ಬಳಿಕ ಅದೇ ಹುಡುಗಿಯರಿಂದ ಹಣವನ್ನು ಪಡೆಯುತ್ತಿದ್ದ.

    ಬ್ಲ್ಯಾಕ್‌ಮೇಲ್‌ ಆಟ: ಯುವತಿಯರಿಗೆ ಈತನ ಮೇಲೆ ನಂಬಿಕೆ ಜಾಸ್ತಿ ಆಗುತ್ತಿದ್ದಂತೆ ಈತ ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಲೈಂಗಿಕವಾಗಿ ಬಳಸಿದ ಬಳಿಕ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡುವ ಮೂಲಕ ತನ್ನ ನಿಜರೂಪವನ್ನು ತೋರಿಸುತ್ತಿದ್ದ.

    ಬಂಧನವಾಗಿದ್ದ: ಈ ಹಿಂದೆ ಈ ಪ್ರಕರಣದಲ್ಲೇ ಪೊಲೀಸರು ಬಂಧಿಸಿದ್ದರು. ಆದರೆ ಜೈಲಿನಿಂದ ಜಾಮೀನು ಪಡೆದು ಬಿಡುಗಡೆಯಾಗಿ ಮತ್ತೆ ತನ್ನ ಹಳೆಯ ಚಾಳಿಯನ್ನು ಮುಂದುವರಿಸುತ್ತಿದ್ದ. ಸಾಫ್ಟ್ ವೇರ್ ಎಂಜಿನಿಯರ್, ಪ್ರೊಫೆಸರ್ ಉದ್ಯೋಗದಲ್ಲಿರುವ ಯುವತಿಯರು ಮತ್ತು ವಿಚ್ಛೆದಿತ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಕೃತ್ಯವನ್ನು ಎಸಗುತ್ತಿದ್ದ. ಲೈಂಗಿಕವಾಗಿ ಶೋಷಣೆಗೆ ಒಳಗಾದ ಯುವತಿಯರು/ ಮಹಿಳೆಯರು ಪೈಕಿ ಬಹುತೇಕ ಮಂದಿ ದೂರು ನೀಡದೇ ಇದ್ದ ಕಾರಣ ತನ್ನ ವಿಕೃತ ಆಟವನ್ನು ಮುಂದುವರಿಸುತ್ತಿದ್ದ.

    ಪೊಲೀಸರ ಮನವಿ: ಅರೋಪಿಯ ಎಲ್ಲಾ ಬ್ಯಾಂಕ್ ಖಾತೆಯನ್ನು ಸೀಜ್ ಮಾಡಲಾಗಿದೆ. ಈತ ಉಮೇಶ್ ರೆಡ್ಡಿಯ ರೀತಿಯ ಮತ್ತೊಬ್ಬ ವಿಕೃತ ಮನಸ್ಸಿನ ವ್ಯಕ್ತಿ. ಅನೇಕ ಮಹಿಳೆಯರು ಮರ್ಯಾದೆಗೆ ಅಂಜಿ ದೂರು ನೀಡಲು ಬರುತ್ತಿಲ್ಲ. ಈ ಹಿಂದೆ ಯಲಹಂಕದಲ್ಲಿ ಒಂದು ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ. ಧಾರವಾಡ ಠಾಣೆಯಲ್ಲಿ ಒಮ್ಮೆ ಅರೆಸ್ಟ್ ಆಗಿದ್ದ. ಜೈಲಿಗೆ ಹೋಗಿ ಬಂದ ಮೇಲೆ ಎಲ್ಲಾ ಬದಲಾಯಿಸಿಕೊಳ್ಳುತ್ತಾನೆ. ಪೊಲೀಸರು ಮಾರುವೇಷದಲ್ಲಿ ಹೋಗಿ ಲಾಡ್ಜ್ ನಲ್ಲಿ ಆರೋಪಿಯನ್ನು ಹಿಡಿದಿದ್ದಾರೆ. ಶ್ರೀಮಂತ ಮಹಿಳೆಯರ ಲೈಫ್ ಸ್ಟೈಲ್ ತಿಳಿದುಕೊಂಡಿದ್ದ ಈತ ಆನಂತರ, ಡೈವೋರ್ಸ್ ಆದ ಮಹಿಳೆಯರು, ಲೇಟ್ ಮದುವೆಯಾದವರು, ಗಂಡ ಹೆಂಡತಿಯರ ಸಬಂಧ ಸರಿಯಿಲ್ಲದವರನ್ನು ಟಾರ್ಗೆಟ್ ಮಾಡಿ ಕೃತ್ಯ ಎಸಗುತ್ತಿದ್ದ. ಈತನಿಂದ ನೊಂದವರು ಯಾರಾದರೂ ಇದ್ದರೆ ಬಂದು ದೂರು ಕೊಡಬಹುದು ಎಂದು ಈಶಾನ್ಯ ವಿಭಾಗದ ಡಿಸಿಪಿ ಡಾ. ಹರ್ಷಾ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

  • ಚಾಕಲೇಟ್ ಕೊಡಿಸೋದಾಗಿ ಹೇಳಿ 6ರ ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ಅರೆಸ್ಟ್

    ಚಾಕಲೇಟ್ ಕೊಡಿಸೋದಾಗಿ ಹೇಳಿ 6ರ ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ಅರೆಸ್ಟ್

    ತುಮಕೂರು: ಚಾಕೊಲೇಟ್ ಕೊಡಿಸೋದಾಗಿ ಪುಸಲಾಯಿಸಿ 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಘಟನೆ ತುಮಕೂರಿನಲ್ಲಿ ನಡೆದಿದೆ.

    ವೇದಮೂರ್ತಿ(35) ಅತ್ಯಾಚಾರ ಎಸಗಿದ ಕಾಮುಕ. ಶುಕ್ರವಾರ ಸಂಜೆ ವೇಳೆ ಬಾಲಕಿಯನ್ನು ಚಾಕಲೇಟ್ ಕೊಡಿಸೋದಾಗಿ ಹೇಳಿ ಮನೆಯ ಹಿಂಬದಿಯ ನಿಲಗಿರಿ ತೋಪಿಗೆ ಕರೆದುಕೊಂಡು ಹೋಗಿ ಈ ಕೃತ್ಯ ಎಸಗಿದ್ದಾನೆ.

    ಕುಡಿದ ಮತ್ತಿನಲ್ಲಿದ್ದ ಕಾಮುಕ ಮುಗ್ಧ ಬಾಲಕಿ ಕಿರುಚಿಕೊಂಡರೂ ಬಿಡದೆ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಈ ವಿಚಾರವನ್ನು ಬಾಲಕಿ ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಾಳೆ.

    ಈ ಸಂಬಂಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ.

     

  • ತನಿಖೆ ವೇಳೆ ತಪ್ಪಿಸಿಕೊಳ್ಳಲು ಪ್ಲಾನ್ – ಆತ್ಮರಕ್ಷಣೆಗಾಗಿ ಪೊಲೀಸರಿಂದ ಆರೋಪಿ ಕಾಲಿಗೆ ಫೈರಿಂಗ್

    ತನಿಖೆ ವೇಳೆ ತಪ್ಪಿಸಿಕೊಳ್ಳಲು ಪ್ಲಾನ್ – ಆತ್ಮರಕ್ಷಣೆಗಾಗಿ ಪೊಲೀಸರಿಂದ ಆರೋಪಿ ಕಾಲಿಗೆ ಫೈರಿಂಗ್

    ಬೆಂಗಳೂರು: ತಪ್ಪಿಸಿಕೊಳ್ಳಲು ಯತ್ನಿಸಿದ ಕೊಲೆ ಆರೋಪಿಯೊಬ್ಬನ ಕಾಲಿಗೆ ಪೊಲೀಸರು ಗುಂಡೇಟು ನೀಡಿ ಆಸ್ಪತ್ರೆಗೆ ದಾಖಲಿಸಿದ ಘಟನೆ ಬೆಂಗಳೂರಿನ ಹೆಚ್‍ಎಎಲ್‍ನಲ್ಲಿ ನಡೆದಿದೆ.

     

    ಗಾಯಾಳು ಆರೋಪಿಯನ್ನು ಜಾನ್ಸನ್ ಎನ್ನಲಾಗಿದ್ದು, ಈತ ಜೂನ್ 10 ರಂದು ನಡೆದ ಸಾಯಿ ಚರಣ್ ಕೊಲೆ ಪ್ರಕರಣದ ಮುಖ್ಯ ಆರೋಪಿಯಾಗಿದ್ದಾನೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮಾಡಲು ಹೋದ ಸಂದರ್ಭದಲ್ಲಿ ಆರೋಪಿ ಮೂತ್ರ ವಿಸರ್ಜನೆಗೆ ತೆರಳುತ್ತೇನೆಂದು ಪೆÇಲೀಸರ ಬಳಿ ಕೇಳಿ ಪರಾರಿಯಾಗಲು ಯತ್ನಿಸಿದ್ದಾನೆ.

    ಈ ವೇಳೆ ಪೊಲೀಸರು ಆತನನ್ನು ಹಿಡಿಯಲು ಮುಂದಾದಾಗ ಆರೋಪಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಲು ಯತ್ನಿಸಿದ್ದಾನೆ. ಪರಿಣಾಮ ಕಾಂತ ಮತ್ತು ಮಂಜೇಶ್ ಎಂಬ ಪೇದೆಗಳಿಬ್ಬರಿಗೆ ಗಾಯಗಳಾಗಿವೆ. ತಕ್ಷಣವೇ ಎಚ್‍ಎಎಲ್ ಪೊಲೀಸರು ಜಾನ್ಸನ್ ಕಾಲಿಗೆ ಗುಂಡು ಹಾರಿಸಿದ್ದಾರೆ. ಸದ್ಯ ಗಾಯಾಳು ಆರೋಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    https://www.youtube.com/watch?v=Us502DgmdJs

  • ಸೆಕ್ಸ್ ತಿರಸ್ಕರಿಸಿದ್ದಕ್ಕೆ ಯುವಕನ ಮರ್ಮಾಂಗವನ್ನೇ ಕತ್ತರಿಸಿದ್ಳು ಯುವತಿ!

    ಸೆಕ್ಸ್ ತಿರಸ್ಕರಿಸಿದ್ದಕ್ಕೆ ಯುವಕನ ಮರ್ಮಾಂಗವನ್ನೇ ಕತ್ತರಿಸಿದ್ಳು ಯುವತಿ!

    ನವದೆಹಲಿ: ಸೆಕ್ಸ್ ಮಾಡಲು ನಿರಾಕರಿಸಿದ್ದಕ್ಕೆ ಯುವತಿಯೊಬ್ಬಳು ಯುವಕನ ಮರ್ಮಾಂಗವನ್ನು ಕತ್ತರಿಸಿ ಪರಾರಿಯಾಗಿರುವ ಘಟನೆ ಬುಧವಾರ ರಾತ್ರಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ದೆಹಲಿಯ ಹೊರವಲಯದ ಮಂಗಳಪುರಿಯಲ್ಲಿ 22 ವರ್ಷದ ಯುವತಿ ಈ ಕೃತ್ಯವನ್ನು ಎಸಗಿದ್ದಾಳೆ. ಕೃತ್ಯ ಎಸಗಿದ ಬಳಿಕ ಯುವತಿ ತನ್ನ ಕುಟುಂಬದ ಸದಸ್ಯರ ಜೊತೆ ಪರಾರಿಯಾಗಿದ್ದಾಳೆ.

    35 ವರ್ಷದ ಸಂತ್ರಸ್ತ ಯುವಕನನ್ನು ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಸ್ತ್ರಚಿಕಿತ್ಸೆಯ ಬಳಿಕ ಆತನ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಆದರೆ ಮರ್ಮಾಂಗವನ್ನು ಜೋಡಿಸುವ ಪ್ರಯತ್ನ ಯಶಸ್ವಿಯಾಗಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಬೀದಿ ವ್ಯಾಪಾರಿಯಾಗಿರುವ ಯುವಕನನ್ನು ಬುಧವಾರ ರಾತ್ರಿ ಯುವತಿ ತನ್ನ ಮನೆಗೆ ಕರೆದಿದ್ದಾಳೆ. ಮನೆಗೆ ಬಂದ ಯುವಕನ ಜೊತೆ ಮದುವೆಯಾಗುವಂತೆ ಒತ್ತಡ ಹೇರಿದ್ದಾಳೆ. ಮದುವೆಯನ್ನು ನಿರಾಕರಿಸಿದ್ದಕ್ಕೆ ಯುವತಿ ಯುವಕನ್ನು ಬಾತ್ ರೂಮ್‍ನಲ್ಲಿ ಕೂಡಿ ಹಾಕಿ ವಿವಸ್ತ್ರಗೊಳಿಸಿ ಬಲವಂತವಾಗಿ ಸೆಕ್ಸ್ ಮಾಡುವಂತೆ ಒತ್ತಡ ಹಾಕಿದ್ದಾಳೆ.

    ತನ್ನ ಬೇಡಿಕೆಯನ್ನು ಯುವಕ ತಿರಸ್ಕರಿಸಿದ್ದಕ್ಕೆ ಆಡುಗೆ ಕೋಣೆಗೆ ಹೋಗಿ ಯುವತಿ ಹರಿತವಾದ ಚೂರಿಯನ್ನು ತಂದು, ನನ್ನ ಜೊತೆ ಸೆಕ್ಸ್ ಮಾಡದೇ ಇದ್ದರೆ ನಿನ್ನನ್ನು ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದ್ದಾಳೆ. ಬಳಿಕ ಅದೇ ಚೂರಿಯಿಂದ ಮರ್ಮಾಂಗವನ್ನು ಕತ್ತರಿಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

    ಈ ಸಂದರ್ಭದಲ್ಲಿ ಯುವತಿಯ ಸಹೋದರ ಮತ್ತು ಆತನ ಪತ್ನಿಯು ಮನೆಯಲ್ಲಿದ್ದರು. ಅವರು ಪ್ರಿಯತಮನಿಗೆ ಪಾಠ ಕಲಿಸುವಂತೆ ಆಕೆಗೆ ಪ್ರಚೋದನೆ ನೀಡುತ್ತಿದ್ದರು ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕೃತ್ಯ ನಡೆದ ಬಳಿಕ ಯುವಕ ಚೀರಾಡಿದ್ದಾನೆ. ಸಹಾಯಕ್ಕಾಗಿ ಚೀರಾಡುತ್ತಿರುವುದನ್ನು ಕೇಳಿಸಿದ ಸ್ಥಳೀಯರು ಯುವತಿಯ ಮನೆಯನ್ನು ಪ್ರವೇಶಿಸಿದ್ದಾರೆ. ಯುವಕನನ್ನು ನೋಡಿದ ಕೂಡಲೇ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುವ ವೇಳೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಯುವಕ ಬಿದ್ದಿದ್ದ.

    ಐಪಿಸಿ ಸೆಕ್ಷನ್ 326(ಮಾರಣಾಂತಿಕ ಹಲ್ಲೆ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಯುವತಿಯ ಬಂಧನಕ್ಕೆ ಬಲೆ ಪೊಲೀಸರು ಬಲೆ ಬೀಸಿದ್ದಾರೆ.

    ಕೆಲ ವರ್ಷದ ಹಿಂದೆ ಯುವಕ ಯುವತಿ ಭೇಟಿಯಾಗಿ ಸ್ನೇಹಿತರಾಗಿದ್ದರು. ಯುವತಿ ಯುವಕನನ್ನು ಇಷ್ಟಪಟ್ಟಿದ್ದರೆ, ಯುವಕನ ಪೋಷಕರು ಇವರಿಬ್ಬರ ಸಂಬಂಧವನ್ನು ವಿರೋಧಿಸಿದ್ದರು. ಹೀಗಾಗಿ ಈಕೆ ಯುವಕನ ಜೊತೆ ನನ್ನನ್ನು ಮದುವೆಯಾಗು ಎಂದು ದುಂಬಾಲು ಬೀಳುತ್ತಿದ್ದಳು.

    ಇದನ್ನೂ ಓದಿ: ಕೆಟ್ಟ ಕಾಫಿ ಕೊಟ್ಟದ್ದಕ್ಕೆ ಕೆನ್ನೆಗೆ ಏಟು: ಪತ್ನಿಯನ್ನು ಕೊಂದ ಪತಿ ಅರೆಸ್ಟ್

  • ಕೆಟ್ಟ ಕಾಫಿ ಕೊಟ್ಟದ್ದಕ್ಕೆ ಕೆನ್ನೆಗೆ ಏಟು: ಪತ್ನಿಯನ್ನು ಕೊಂದ ಪತಿ ಅರೆಸ್ಟ್

    ಕೆಟ್ಟ ಕಾಫಿ ಕೊಟ್ಟದ್ದಕ್ಕೆ ಕೆನ್ನೆಗೆ ಏಟು: ಪತ್ನಿಯನ್ನು ಕೊಂದ ಪತಿ ಅರೆಸ್ಟ್

    ಚಾಮರಾಜನಗರ: ಕೆಟ್ಟ ಕಾಫಿ ಕೊಟ್ಟಿದ್ದೀಯಾ ಎಂದು ಪತಿಯೊಬ್ಬ ಪತ್ನಿಯ ಕೆನ್ನೆ ಹೊಡೆದು ಕೊಲೆ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೆಲಂಬಳ್ಳಿ ಗ್ರಾಮದಲ್ಲಿ ಜರುಗಿದೆ.

    ಮಮತಾ (24) ಕೊಲೆಯಾದ ಮಹಿಳೆ. ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತಿ ಶಿವಕುಮಾರ್‍ನನ್ನು ಪೊಲೀಸರು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ವ್ಯವಸಾಯ ಮಾಡುತ್ತಿರುವ ಶಿವಕುಮಾರ್ ಮಮತಾ ದಂಪತಿಗೆ ಎರಡು ಗಂಡು ಮಕ್ಕಳಿದ್ದು, ಇಂದು ಬೆಳಗ್ಗೆ ಒಬ್ಬ ಮಗನನ್ನು ಶಿವಕುಮಾರ್ ಶಾಲೆಗೆ ಬಿಟ್ಟು ಮನೆಗೆ ಬಂದಿದ್ದಾನೆ. ಬೆಳಿಗ್ಗೆ ತಿಂಡಿ ತಿನ್ನುವ ವೇಳೆ ಮಮತಾ ನಿನ್ನೆಯ ಹಾಲನ್ನು ಹಾಕಿ ಕಾಫಿ ಮಾಡಿಕೊಟ್ಟಿದ್ದಾರೆ.

    ಕಾಫಿಯನ್ನು ಕುಡಿದ ಕೂಡಲೇ ಸಿಟ್ಟಾದ ಶಿವಕುಮಾರ್ ಕೆಟ್ಟ ಕಾಫಿ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿ, ಅಲ್ಲೇ ಪತ್ನಿಯ ಕೆನ್ನೆಗೆ ಬಲವಾಗಿ ಹೊಡೆದಿದ್ದಾನೆ. ಈ ಪೆಟ್ಟನ್ನು ತಾಳಲಾರದೇ ಮಮತಾ ಅಲ್ಲೇ ಕುಸಿದುಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪತ್ನಿ ಸಾವನ್ನಪ್ಪಿದ್ದನ್ನು ತಿಳಿದ ಶಿವಕುಮಾರ್ ಯಾರಿಗೂ ನನ್ನ ಮೇಲೆ ಅನುಮಾನ ಬಾರದೇ ಇರಲೆಂದು ಶವವನ್ನು ಸೀರೆ ಬಳಸಿ ಮೇಲಕ್ಕೆ ಕಟ್ಟಿ ಮನೆಯಿಂದ ಕಾಲ್ಕಿತ್ತಿದ್ದಾನೆ.

    ಬೆಳಕಿಗೆ ಬಂದಿದ್ದು ಹೇಗೆ?
    ಸಂಜೆ ವೇಳೆ ಮಮತಾ ಮನೆಗೆ ಪರಿಚಯಸ್ಥರು ಹೋಗಿದ್ದಾರೆ. ಈ ವೇಳೆ ಒಳಗಡೆ ಶವ ನೇತಾಡುತ್ತಿರುವುದನ್ನು ನೋಡಿ ಕೂಡಲೇ ಮಮತಾ ಪೋಷಕರಿಗೆ ಕರೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಪತಿ ಶಿವಕುಮಾರ್‍ಗೂ ಕರೆ ಮಾಡಿ ವಿಚಾರ ತಿಳಿಸಿದ್ದಾರೆ.

    ಪೊಲೀಸರು ಸ್ಥಳಕ್ಕೆ ಬಂದು ಆತ್ಮಹತ್ಯೆ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾರೆ. ಈ ಸಂದರ್ಭದಲ್ಲಿ ಪರಿಚಯದ ವ್ಯಕ್ತಿಗಳು ದಂಪತಿ ಮಧ್ಯೆ ಕೌಟುಂಬಿಕ ವಿಚಾರದ ಬಗ್ಗೆ ಗಲಾಟೆ ನಡೆಯುತ್ತಲೇ ಇತ್ತು ಎನ್ನುವುದನ್ನು ತಿಳಿಸಿದ್ದಾರೆ. ಈ ವಿಚಾರ ತಿಳಿದು ಪೊಲೀಸರು ಮತ್ತು ಪೋಷಕರಿಗೆ ಅನುಮಾನ ಬಂದು ಮತ್ತಷ್ಟು ಪ್ರಶ್ನೆ ಕೇಳಿದಾಗ ಶಿವಕುಮಾರ್ ನಡೆದ ಘಟನೆಯನ್ನು ವಿವರಿಸಿದ್ದಾನೆ ಎಂದು ಮಮತಾ ಸಹೋದರ ಪುನೀತ್ ಹೇಳಿದ್ದಾರೆ.

    ವಿಚಾರ ತಿಳಿದ ಮಮತಾ ಪೋಷಕರು ಶಿವಕುಮಾರ್ ವಿರುದ್ಧ ದೂರು ನೀಡಿದ್ದು, ಪೊಲೀಸರು ಶಿವಕುಮಾರ್‍ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

  • ಅಪಘಾತವಾಗಿ ಗಾಯಗೊಂಡಿದ್ದ ತಾಯಿಯನ್ನು ಹೊತ್ತುಕೊಂಡು ಆಸ್ಪತ್ರೆಗೆ ಸಾಗಿದ ಮಗ

    ಅಪಘಾತವಾಗಿ ಗಾಯಗೊಂಡಿದ್ದ ತಾಯಿಯನ್ನು ಹೊತ್ತುಕೊಂಡು ಆಸ್ಪತ್ರೆಗೆ ಸಾಗಿದ ಮಗ

    ಕಲಬುರಗಿ: ಅಪಘಾತವಾದಾಗ ಸಹಾಯಕ್ಕೆ ಧಾವಿಸಿ ಮಾನವೀಯತೆಯನ್ನು ತೋರಿಸಬೇಕೆಂದು ಎಲ್ಲರೂ ಹೇಳುತ್ತಾರೆ. ಆದರೆ ಅಪಘಾತವಾದ ಸಂದರ್ಭದಲ್ಲಿ ಮಾನವೀಯತೆ ಸತ್ತುಹೋಗುತ್ತದೆ ಎನ್ನುವುದಕ್ಕೆ ರಾಜ್ಯದಲ್ಲಿ ಮತ್ತೊಂದು ಪ್ರಕರಣ ಈಗ ಸಿಕ್ಕಿದೆ.

    ಬೈಕ್ ಅಪಘಾತ ನಡೆದು 108 ಅಂಬುಲೆನ್ಸ್ ಬರದ ಹಿನ್ನಲೆ ತಾಯಿಯನ್ನು ಹೊತ್ತು ಮಗ ಆಸ್ಪತ್ರಗೆ ಸಾಗಿರುವ, ಹೃದಯ ವಿದ್ರಾವಕ ಘಟನೆ ಕಲಬುರಗಿಯ ಉದನೂರ ಕ್ರಾಸ್ ಬಳಿ ಗುರುವಾರ ನಡೆದಿದೆ.

    ಏನಿದು ಘಟನೆ?
    ಮಗನನ್ನು ಭೇಟಿಯಾಗಲು ಸಿದ್ದಮ್ಮ ಎಂಬವರು ಬರುತ್ತಿದ್ದಾಗ ಪಲ್ಸರ್ ಬೈಕ್ ಸವಾರನೊಬ್ಬ ಡಿಕ್ಕಿ ಹೊಡೆದಿದ್ದಾನೆ. ಘಟನೆಯ ನಂತರ ತೀವ್ರ ರಕ್ತ ಸ್ರಾವದಲ್ಲಿ ಬಳಲುತ್ತಿದ್ದ ಸಿದ್ದಮ್ಮ ಅವರನ್ನು ಆಸ್ಪತ್ರಗೆ ದಾಖಲಿಸಲು ಮಗ ಮಹಾಂತೇಶ 108 ಅಂಬ್ಯುಲೆನ್ಸ್ ಗೆ ಕರೆ ಮಾಡುತ್ತಾರೆ.

    ವಿಚಾರ ತಿಳಿದರೂ ಒಂದು ಗಂಟೆಯಾದರೂ ಅಂಬುಲೆನ್ಸ್ ಸ್ಥಳಕ್ಕೆ ಬರಲೇ ಇಲ್ಲ. ಜನ ಸಾಮಾನ್ಯರು ಈ ದೃಶ್ಯವನ್ನು ನೋಡುತ್ತಿದ್ದರೆ ವಿನಾಃ ಯಾರೂ ಸಹಾಯ ಮಾಡಲು ಮುಂದಾಗಲೇ ಇಲ್ಲ.

    ಕೊನೆಗೆ ಯಾರ ಸಹಾಯ ಸಿಗದೇ ಇದ್ದಾಗ ತಾಯಿಯನ್ನ ಎತ್ತಿಕೊಂಡು ಆಸ್ಪತ್ರೆಗೆ ನಡೆದಿದ್ದಾರೆ. ಅಷ್ಟರಲ್ಲಿ  ಪೊಲೀಸ್ ಜೀಪೊಂದು ಬಂದು ಸಿದ್ದಮ್ಮ ಅವರನ್ನು ಆಸ್ಪತ್ರೆಗೆ ಸಾಗಿಸಿದೆ.

    ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಹಣವಿಲ್ಲ ಅಂತಾ ಪಬ್ಲಿಕ್ ಟಿವಿ ವರದಿ ನಂತರ, ಆಸ್ಪತ್ರೆಯ ಮುಖ್ಯಸ್ಥ ವಿಕ್ರಂ ರೆಡ್ಡಿ ಅವರು ಮಾನವೀಯತೆ ತೋರಿ ಉಚಿತ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಆದರೆ ಸಿದ್ದಮ್ಮ ಸ್ಥಿತಿ ಚಿಂತಾಜನಕವಾಗಿದೆ ಅಂತ ವೈದ್ಯರು ತಿಳಿಸಿದ್ದಾರೆ. ಅಪಘಾತಕ್ಕೆ ಕಾರಣವಾಗಿದ್ದ ಬೈಕ್ ಸವಾರನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    https://youtu.be/_FXNSRP_ceg

     

  • ಕಣ್ಣಿಗೆ ಖಾರದ ಪುಡಿ ಎರಚಿ ಮಹದಾಯಿ ಹೋರಾಟಗಾರನ ಹತ್ಯೆಗೆ ಯತ್ನ

    ಕಣ್ಣಿಗೆ ಖಾರದ ಪುಡಿ ಎರಚಿ ಮಹದಾಯಿ ಹೋರಾಟಗಾರನ ಹತ್ಯೆಗೆ ಯತ್ನ

    ಗದಗ: ಮಹದಾಯಿ, ಕಳಸಾ-ಬಂಡೂರಿ ಹೋರಾಟಗಾರ ಹಾಗೂ ವ್ಯಾಪಾರಿ ಅಂದಾನಗೌಡ ಪಾಟೀಲ್ ಮೇಲೆ ಮೂರು ಜನ ದುಷ್ಕರ್ಮಿಗಳು ಕಣ್ಣಿಗೆ ಖಾರದ ಪುಡಿ ಎರಚಿ ಹತ್ಯೆಗೆ ಯತ್ನಿಸಿರುವ ಘಟನೆ ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ತಡರಾತ್ರಿ ನಡೆದಿದೆ.

    ಮೂರು ಜನ ದುಷ್ಕರ್ಮಿಗಳು ತಡರಾತ್ರಿ ಎಪಿಎಂಸಿ ಆವರಣದ ಮನೆಗೆ ಬಂದಿದ್ದಾರೆ. ಕಳಸಾ ಬಂಡೂರಿ ಹೋರಾಟದ ವೇದಿಕೆಯಲ್ಲಿ ಗಲಾಟೆ ಆಗುತ್ತಿದೆ. ದಯವಿಟ್ಟು ಬಾಗಿಲು ತೆರೆಯಿರಿ ಎಂದು ಕೂಗಿದ್ದಾರೆ. ಅಂದಾನಗೌಡ ಅವರು ಬಾಗಿಲು ತೆರೆಯುತ್ತಿದ್ದಂತೆ ಮುಖಕ್ಕೆ ಖಾರದಪುಡಿ ಎರಚಿ ಹತ್ಯೆಗೆ ಯತ್ನಿಸಿದ್ದು, ಈ ವೇಳೆ ಕೂಗಾಟ, ಚಿರಾಟವಾಗಿದ್ದರಿಂದ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾಗಿ ಹಲ್ಲೆಗೊಳಗಾದ ಆನಂದಗೌಡ ಹೇಳಿದ್ದಾರೆ.

    ಇವರು ಹೋರಾಟಗಾರರು ಜೊತೆಗೆ ದಲಾಲಿ ಅಂಗಡಿ ವ್ಯಾಪಾರಿಯಾಗಿದ್ದು, ದುಷ್ಕರ್ಮಿಗಳು ಇಂತಹ ಕೃತ್ಯಕ್ಕೆ ಮುಂದಾಗಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಷಡ್ಯಂತರದಿಂದ ಹೋರಾಟ ಹತ್ತಿಕ್ಕಲು ಮುಂದಾದ್ರಾ? ಅಥವಾ ದಲಾಲಿ ಅಂಗಡಿ ವ್ಯಾಪಾರಿಯಾದ್ದರಿಂದ ದರೋಡೆಗೆ ಮುಂದಾಗಿದ್ರಾ ಎಂಬ ಅನುಮಾನ ಕಾಡುತ್ತಿದೆ.

    ಮನೆಯ ಅಲ್ಲಲ್ಲಿ ಖಾರದ ಪುಡಿಯ ಗುರುತುಗಳಿದ್ದು, ಸ್ಥಳಕ್ಕೆ ನರಗುಂದ ಪೊಲೀಸರು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ಗದಗ ಜಿಲ್ಲೆಯ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ನಪುಂಸಕ ಪತಿ ಮತ್ತು ಆತನ ಪೋಷಕರ ವಿರುದ್ಧ ಪತ್ನಿಯಿಂದ ದೂರು

    ನಪುಂಸಕ ಪತಿ ಮತ್ತು ಆತನ ಪೋಷಕರ ವಿರುದ್ಧ ಪತ್ನಿಯಿಂದ ದೂರು

    ನವದೆಹಲಿ: ನಪುಂಸಕ ಪತಿ ವಿರುದ್ಧ 25 ವರ್ಷದ ಪತ್ನಿಯೊಬ್ಬರು ದೂರು ನೀಡಿದ್ದಾರೆ.

    ನೋಯ್ಡಾ ಮಹಿಳಾ ಪೊಲೀಸ್ ಠಾಣೆಯಲ್ಲಿ ಗಂಡ ಮತ್ತು ನಪುಂಸಕತೆಯ ವಿಚಾರವನ್ನು ತಿಳಿಸದಕ್ಕೆ ಆತನ ಪೋಷಕರ ವಿರುದ್ಧ ದೂರು ಪತ್ನಿ ನೀಡಿದ್ದಾರೆ. ಅಷ್ಟೇ ಅಲ್ಲದೇ ಮದುವೆಯ ವೆಚ್ಚವನ್ನೂ ಭರಿಸುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ.

    ದೂರಿನಲ್ಲಿ ಏನಿದೆ?
    ಕೇಂದ್ರಿಯ ವಿಹಾರ್‍ನಲ್ಲಿ ನೆಲೆಸಿದ್ದ ವ್ಯಕ್ತಿಯ ಜೊತೆ 2015ರ ನವೆಂಬರ್‍ನಲ್ಲಿ ನನ್ನ ಮದುವೆ ನಡೆದಿತ್ತು. ಮದುವೆಯಾದ ಬಳಿಕ ನಾವಿಬ್ಬರೂ ಹನಿಮೂನ್‍ಗೆಂದು ಗೋವಾಕ್ಕೆ ತೆರಳಿದ್ವಿ. ಈ ಸಂದರ್ಭದಲ್ಲಿ ಗಂಡ ನಪುಂಸಕನಾಗಿರುವ ಬಗ್ಗೆ ಅನುಮಾನ ಮೂಡಿತ್ತು.

    ಇದಾದ ಬಳಿಕ ನಾನು ವೈದ್ಯರ ಬಳಿ ಹೋಗಿ ಸಮಸ್ಯೆ ಬಗೆಹರಿಸಿ ಎಂದು ಸಲಹೆ ನೀಡಿದ್ದೆ. ಸಾಕಷ್ಟು ಬಾರಿ ನಾನು ಹೇಳಿದ್ದರೂ ಆತ ನನ್ನ ಸಲಹೆಯನ್ನು ತಿರಸ್ಕರಿಸಿದ್ದ.

    ಮದುವೆಯಾದ ಆರಂಭದಲ್ಲಿ ಪತಿ ಬೆಳಗ್ಗೆ ಹೋಗಿ ಸಂಜೆ ಮನೆಗೆ ಬರುತ್ತಿದ್ದ. ಆದರೆ ನಾನು ಈ ವಿಚಾರವನ್ನು ಪ್ರಸ್ತಾಪ ಮಾಡಿದ ಬಳಿಕ ಆತ ತನ್ನ ಶಿಫ್ಟ್ ರಾತ್ರಿಗೆ ಬದಲಾಯಿಸಿದ. ಅಷ್ಟೇ ಅಲ್ಲದೇ ನನ್ನ ಜೊತೆ ಮಾತನಾಡದೇ ರಾತ್ರಿ ನಿದ್ದೆಗೆ ಜಾರುತ್ತಿದ್ದ.

    ಗಂಡನ ದೌರ್ಬಲ್ಯದ ಬಗ್ಗೆ ನಾನು ಎರಡೂ ಕುಟುಂಬದರ ಜೊತೆ ಮಾತನಾಡಿದೆ. ಈ ಸಂದರ್ಭದಲ್ಲಿ ಪತಿ ನಾನು ವೈದ್ಯರನ್ನು ಭೇಟಿಯಾಗುತ್ತೇನೆ ಎಂದು ಭರವಸೆ ನೀಡಿದ್ದ. ತದನಂತರ ನಾನು ತವರು ಮನೆಗೆ ಹೋಗಿದ್ದೆ. ತವರು ಮನೆಯಿಂದ ಮರಳಿ ಅತ್ತೆ ಮನೆಗೆ ಬಂದಾಗಲೂ ಹಿಂದಿನಂತೆ ಗಂಡ ನಡೆದುಕೊಳ್ಳುತ್ತಿದ್ದ. ಇದರಿಂದ ಮನನೊಂದು ಪತಿ ಮತ್ತು ನಪುಂಸಕತೆಯನ್ನು ಮುಚ್ಚಿಟ್ಟದ್ದಕ್ಕೆ ಆತನ ಪೋಷಕರ ವಿರುದ್ಧ ದೂರು ನೀಡುತ್ತಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.

    ಐಪಿಸಿ 498ಎ(ವರದಕ್ಷಿಣಿ ಕಿರುಕುಳ) ಐಪಿಸಿ 420(ವಂಚನೆ) ಅಡಿ ಪ್ರಕರಣ ದಾಖಲಾಗಿದೆ. ದಂಪತಿಯನ್ನು ಕರೆದು ಮಾತುಕತೆ ನಡೆಸುತ್ತೇವೆ ಎಂದು ಮಹಿಳಾ ಸ್ಟೇಷನ್ ಹೌಸ್ ಆಫೀಸರ್ ತಿಳಿಸಿದ್ದಾರೆ.