Tag: police

  • ಯಾದಗಿರಿ ಪಂಚಾಯ್ತಿ ಉಪಚುನಾವಣೆ ಕರ್ತವ್ಯದಲ್ಲಿದ್ದ ಚುನಾವಣಾಧಿಕಾರಿ ಹೃದಯಘಾತದಿಂದ ಸಾವು

    ಯಾದಗಿರಿ ಪಂಚಾಯ್ತಿ ಉಪಚುನಾವಣೆ ಕರ್ತವ್ಯದಲ್ಲಿದ್ದ ಚುನಾವಣಾಧಿಕಾರಿ ಹೃದಯಘಾತದಿಂದ ಸಾವು

    ಯಾದಗಿರಿ: ಯಾದಗಿರಿ ಪಂಚಾಯ್ತಿ ಉಪಚುನಾವಣೆಯ ಕರ್ತವ್ಯದಲ್ಲಿದ್ದ ಚುನಾವಣಾ ಅಧಿಕಾರಿ ಹೃದಯಘಾತದಿಂದ ಸಾವನ್ನಪ್ಪಿದ ಘಟನೆ ಸುರಪೂರ ತಹಶೀಲ್ದಾರ್ ಕಚೇರಿಯಲ್ಲಿ ನಡೆದಿದೆ.

    ಆರ್.ಆನಂದ(58) ಎಂಬವರನ್ನ ಕೆಂಭಾವಿ ಉಪತಹಶೀಲ್ದಾರ್ ಉಪಚುನಾವಣೆಯ ಚುನಾವಣಾ ಅಧಿಕಾರಿಯಾಗಿ ನಿಯೋಜಿಸಲಾಗಿತ್ತು. ಇಂದು ಸುರಪುರ ತಹಶೀಲ್ದಾರ್ ಕಚೇರಿಯಲ್ಲಿ ಹದನೂರ ಗ್ರಾಮದ ವಾಡ್9 ನಂ. 5ರ ಮತ ಏಣಿಕೆ ಪ್ರಕ್ರಿಯೆ ಪ್ರಾರಂಭವಾದ ನಂತರ ಅರ್.ಆನಂದ ಕೊಠಡಿಯ ಹೊರಗಡೆ ಟೀ ಕುಡಿಯುತ್ತಿರವಾಗ ಹೃದಘಾತ ಸಂಭವಿಸಿದೆ.

    ಆನಂದ ಅವರನ್ನ ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಆನಂದ ಸಾವನ್ನಪ್ಪಿದ್ದಾರೆ. ಈ ಕುರಿತು ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಕ್ರಮ ತಡೆಯಲು ಹೋದ ಪಿಡಿಓ ಮೇಲೆ ಜಾಲಿ ಮುಳ್ಳುಗಳಿಂದ ಹಲ್ಲೆ!

    ಅಕ್ರಮ ತಡೆಯಲು ಹೋದ ಪಿಡಿಓ ಮೇಲೆ ಜಾಲಿ ಮುಳ್ಳುಗಳಿಂದ ಹಲ್ಲೆ!

    ಚಿಕ್ಕಬಳ್ಳಾಪುರ: ಸರ್ಕಾರಿ ಜಾಗದಲ್ಲಿ ಮನೆಗೆ ಪಾಯ ಹಾಕುತ್ತಿದ್ದುದನ್ನ ಪ್ರಶ್ನೆ ಮಾಡಿದ ಪಿಡಿಓ ಅಧಿಕಾರಿಗೆ ಜಾಲಿ ಮರದ ಕೊಂಬೆಯಿಂದ ಹಲ್ಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಕ್ರಾಸ್ ನ ಜೆಪಿ ನಗರದಲ್ಲಿ ನಡೆದಿದೆ.

    ತಿರುಮಣಿ ಗ್ರಾಮ ಪಂಚಾಯ್ತಿಯ ಪಿಡಿಓ ಸುಭಾನ್ ಹಲ್ಲೆಗೊಳಗಾದ ಅಧಿಕಾರಿ. ಗ್ರಾಮದ ಗೋಪಾಲಪ್ಪ ಹಲ್ಲೆ ಮಾಡಿದ ವ್ಯಕ್ತಿ. ಬೀಚಗಾನಗಳ್ಳಿ ಕ್ರಾಸ್ ಜೆಪಿ ನಗರಕ್ಕೆ ಹೊಂದಿಕೊಂಡಿರುವ ತಿರುಮಣಿ ಗ್ರಾಮ ಪಂಚಾಯ್ತಿಗೆ ಸೇರಿದ ಸರ್ಕಾರಿ ಭೂಮಿಯಲ್ಲಿ ಗೋಪಾಲಪ್ಪ ಮನೆ ಕಟ್ಟಲು ಮುಂದಾಗಿದ್ದ. ಹೀಗಾಗಿ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಬೇಡ ಅಂತ ಪಿಡಿಓ ಸುಭಾನ್ ಗೋಪಾಲಪ್ಪಗೆ ತಾಕೀತು ಮಾಡಿದ್ದಾರೆ.

    ಪಿಡಿಓ ಮಾತಿನಿಂದ ಕೆರಳಿದ ಗೋಪಾಲಪ್ಪ ಅಲ್ಲೇ ಇದ್ದ ಓಣಗಿದ ಜಾಲಿ ಮುಳ್ಳುಗಳಿಂದ ತುಂಬಿದ ಕೊಂಬೆ ತೆಗೆದುಕೊಂಡು ಸುಭಾನ್ ಮೇಲೆ ಹಲ್ಲೆ ಮಾಡಿದ್ದಾರೆ. ಇದ್ರಿಂದ ಪಿಡಿಓ ಸುಭಾನ್ ತಲೆ, ಕುತ್ತಿಗೆ ಹಾಗೂ ಕೈಗೆ ಜಾಲಿ ಮುಳ್ಳುಗಳು ಚುಚ್ಚಿ ಗಾಯಗಳಾಗಿವೆ. ಘಟನೆ ವೇಳೆ ಪಿಡಿಓ ಸುಭಾನ್ ಸಹಾಯಕ್ಕೆ ಬಂದ ತಿರುಮಣಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಾಮಾಂಜಿನಪ್ಪ ಅವರ ಮೇಲೆ ಕೂಡ ಹಲ್ಲೆ ಮಾಡಲಾಗಿದೆ.

    ಗಾಯಾಳು ಸುಭಾನ್ ಗುಡಿಬಂಡೆ ಅವರು ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದು, ಈ ಸಂಬಂಧ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಗೋಪಾಲಪ್ಪ ವಿರುದ್ಧ ದೂರು ದಾಖಲಿಸಿದ್ದಾರೆ. ಘಟನೆ ನಂತರ ಊರು ಬಿಟ್ಟು ಗೋಪಾಲಪ್ಪ ಪರಾರಿಯಾಗಿದ್ದು, ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.

     

  • ಮಂಗ್ಳೂರಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತನ ಕೊಲೆಗೆ ಯತ್ನ-ಮಚ್ಚು ಲಾಂಗ್‍ಗಳಿಂದ ಹಲ್ಲೆ

    ಮಂಗ್ಳೂರಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತನ ಕೊಲೆಗೆ ಯತ್ನ-ಮಚ್ಚು ಲಾಂಗ್‍ಗಳಿಂದ ಹಲ್ಲೆ

    ಮಂಗಳೂರು: ಆರ್‍ಎಸ್‍ಎಸ್ ಕಾರ್ಯಕರ್ತರೊಬ್ಬರ ಮೇಲೆ 6 ಮಂದಿ ದುಷ್ಕರ್ಮಿಗಳ ತಂಡ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಬಿ.ಸಿ ರೋಡ್‍ನಲ್ಲಿ ನಡೆದಿದೆ.

    ಸಜೀಪದ ಕುಂದೂರು ನಿವಾಸಿ 28 ವರ್ಷದ ಶರತ್ ಮಡಿವಾಳ ಹಲ್ಲೆಗೊಳಗಾದ ಆರ್‍ಎಸ್‍ಎಸ್ ಕಾರ್ಯಕರ್ತನಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ. ಬಿ.ಸಿ.ರೋಡ್‍ನಲ್ಲಿ ಇಸ್ತ್ರಿ ಅಂಗಡಿ ಹೊಂದಿದ್ದ ಶರತ್, ಮಂಗಳವಾರ ರಾತ್ರಿ 9.30 ಸುಮಾರಿಗೆ ಅಂಗಡಿ ಮುಚ್ಚುತ್ತಿದ್ದಂತೆ ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳ ತಂಡ ಲಾಂಗು, ಮಚ್ಚುಗಳಿಂದ ಶರತ್ ಮೇಲೆ ಹಲ್ಲೆ ಮಾಡಿ ಪಲ್ಸರ್ ಬೈಕ್‍ನಲ್ಲಿ ಪರಾರಿಯಾಗಿದ್ದಾರೆ.

    ಶರತ್‍ರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಶರತ್ ಕುಟುಂಬಕ್ಕೆ ಆಧಾರವಾಗಿದ್ದು ಒಬ್ಬನೇ ಮಗನಾಗಿದ್ದು, ತಂದೆ ಮಗ ಇಬ್ಬರೂ ಇಸ್ತ್ರಿ ಅಂಗಡಿಯಲ್ಲೇ ದುಡಿಮೆ ಮಾಡ್ತಿದ್ರು. ಶರತ್ ಆರ್‍ಎಸ್‍ಎಸ್ ಕಾರ್ಯಕರ್ತನಾಗಿದ್ದು, ನಿರಂತರ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದರು. ಹೀಗಾಗಿಯೇ ಶರತ್‍ರನ್ನು ಗುರಿಯಾಗಿಸಿ ಕೊಲೆ ಯತ್ನ ನಡೆಸಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿವೆ.

    ಸ್ಥಳಕ್ಕೆ ಎಸ್‍ಪಿ ಸುಧೀರ್ ಕುಮಾರ್ ರೆಡ್ಡಿ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಸಿಸಿಬಿ ಎಸಿಪಿ ವೆಲೆಂಟೈನ್ ನೇತ್ರತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಮಂಗಳೂರು ಪೊಲೀಸ್ ಕಮೀಷನರ್ ಟಿ.ಆರ್.ಸುರೇಶ್ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

    ಈ ಹಿಂದೆ ನಡೆದ ಆರ್‍ಎಸ್‍ಎಸ್ ಕಾರ್ಯಕರ್ತರ ಕೊಲೆಗಳು:
    1. ಬೆಂಗಳೂರಿನ ಶಿವಾಜಿನಗರಲ್ಲಿ ಆರ್. ರುದ್ರೇಶ್ ಎಂಬ ಆರ್‍ಎಸ್‍ಎಸ್ ಕಾರ್ಯಕರ್ತರನ್ನ ಹತ್ಯೆ ಮಾಡಲಾಗಿತ್ತು. 2016 ಅಕ್ಟೋಬರ್ 16ರ ಭಾನುವಾರ ಆರ್‍ಎಸ್‍ಎಸ್ ಪಥಸಂಚಲ ಮುಗಿಸಿ ವಾಪಸ್ ಬರುವಾಗ ಬೈಕ್‍ನಲ್ಲಿ ಬಂದ ಕಿಡಿಗೇಡಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ರು.

    2. ಮೈಸೂರಿನಲ್ಲಿ ಮಾರ್ಚ್ 13ರಂದು ರಾಜು ಎಂಬವರನ್ನು ಹತ್ಯೆ ಮಾಡಲಾಗಿತ್ತು. ನೇತಾಜಿ ಸರ್ಕಲ್‍ನಲ್ಲಿ ನಿಂತಿದ್ದಾಗ ಬೈಕ್‍ನಲ್ಲಿ ಬಂದ ಕಿಡಿಗೇಡಿಗಳು ದೊಣ್ಣೆಯಿಂದ ಹೊಡೆದು ಸಾಯಿಸಿದ್ರು.

    3. ಬೊಮ್ಮಸಂದ್ರ ಮುನ್ಸಿಪಾಲಿಟಿ ಮೆಂಬರ್ ಕಿತ್ತಗಾನಹಳ್ಳಿ ವಾಸು ಎಂಬುವರನ್ನು ಮಾರ್ಚ್ 14ರಂದು ಕಿಡ್ನಾಪ್ ಮಾಡಿ ಹತ್ಯೆ ಮಾಡಲಾಗಿತ್ತು.

     

     

  • ವಿಧಾನಸೌಧದ ಎದುರು ಮಲ ಮೂತ್ರ ಮೈ ಮೇಲೆ ಸುರಿದುಕೊಂಡು ಪ್ರತಿಭಟನೆ

    ವಿಧಾನಸೌಧದ ಎದುರು ಮಲ ಮೂತ್ರ ಮೈ ಮೇಲೆ ಸುರಿದುಕೊಂಡು ಪ್ರತಿಭಟನೆ

    ಬೆಂಗಳೂರು: ಇಂದು ನಗರದಲ್ಲಿ ವಿಧಾನಸೌಧದ ಎದುರು ಮಲ ಮೂತ್ರ ಮೈ ಮೇಲೆ ಸುರಿದುಕೊಂಡು ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದ್ದಾರೆ.

    ಬೆಂಗಳೂರು ಪೂರ್ವ ತಾಲೂಕಿನ ವೈಟ್‍ಫೀಲ್ಡ್ ಬಳಿ ರಾಜಕಾಲುವೆ ಒತ್ತುವರಿ ವಿಚಾರ ಹಿನ್ನೆಲೆಯಲ್ಲಿ ಖಾಸಗಿ ಕಂಪನಿಯಿಂದ ಒತ್ತುವರಿಯಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಗುತ್ತಿತ್ತು. ಈ ವೇಳೆ ಆಕ್ರೋಶಗೊಂಡ ಪ್ರತಿಭಟನಾ ನಿರತ ಐವರು ವಿಧಾನಸೌಧದ ಗೇಟ್ ಬಳಿ ಮಲ ಮತ್ತು ಮೂತ್ರ ಮೈ ಮೇಲೆ ಸುರಿದುಕೊಂಡಿದ್ದಾರೆ.

    ಬೆಂಗಳೂರಿನ ವೈಟ್ ಫೀಲ್ಡ್ ಬಳಿ ರಾಜಕಾಲುವೆ ಒತ್ತುವರಿ ವಿಚಾರವಾಗಿ ದಲಿತರ ಗುಡಿಸಲುಗಳನ್ನ ನೆಲಸಮ ಮಾಡಲಾಯ್ತು. ಆದ್ರೆ ಆನಂತರ ಖಾಸಗಿ ಕಂಪನಿಯೊಂದು ರಾಜಕಾಲುವೆ ಒತ್ತುವರಿ ಮಾಡಿದ್ದಾರೆ. ಈ ಬಗ್ಗೆ ಬೆಂಗಳೂರು ಪೂರ್ವ ತಾಲುಕು ತಹಶೀಲ್ದಾರರಿಗೆ ಹಾಗೂ ಜಿಲ್ಲಾಧಾಕಾರಿಗಳಿಗೆ ದೂರು ನೀಡಿದ್ರು ಯಾವುದೇ ಕ್ರಮ ಕೈಗೊಂಡಿಲ್ಲ. ವೈಟ್ ಫೀಲ್ಡ್ ಅಲ್ಲದೇ ಬೆಂಗಳೂರಿನ ವಿವಿಧೆಡೆ ಖಾಸಗಿ ಕಂಪನಿಯವರು ರಾಜ ಕಾಲುವೆ ಒತ್ತುವರಿ ಮಾಡಿದ್ದಾರೆ. ಆದ್ರೆ ಅವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ತಿಲ್ಲ. ಬಡವರನ್ನ ಮಾತ್ರ ಒತ್ತುವರಿಯಲ್ಲಿ ಟಾರ್ಗೇಟ್ ಮಾಡಲಾಗ್ತಿದೆ ಅಂತಾ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

    ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡು, ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

  • ಮಹಿಳೆಯನ್ನ ಬೆತ್ತಲೆಗೊಳಿಸಿ ಥಳಿಸಿದ ಮಹಿಳೆ, ಸಹೋದರ

    ಮಹಿಳೆಯನ್ನ ಬೆತ್ತಲೆಗೊಳಿಸಿ ಥಳಿಸಿದ ಮಹಿಳೆ, ಸಹೋದರ

    ವಿಜಯಪುರ: ಮಹಿಳೆಯೋರ್ವಳನ್ನು ಬೆತ್ತಲೆಗೊಳಿಸಿ ಥಳಿಸಿದ ಅಮಾನವೀಯ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

    ಸಾವಿತ್ರಿ ದುಂಡಯ್ಯ ಗೋಡ್ಯಾಳ ಹಲ್ಲೆಗೊಳಗಾಗಿರುವ ಮಹಿಳೆ. ಸಾವಿತ್ರಿ ತಮ್ಮದೇ ಗ್ರಾಮದ ಮೌಲಾಲಿ ಎಂಬ ವ್ಯಕ್ತಿಯ ಜೊತೆ ನಿಂತುಕೊಂಡಿದ್ದರು. ಈ ವೇಳೆ ಸ್ಥಳಕ್ಕಾಗಮಿಸಿದ ಮೌಲಾಲಿ ಪತ್ನಿ ಸುಗರಾ ಮತ್ತು ಆಕೆಯ ಸಹೋದರ ಸಿಕಂದರ್ ಇಬ್ಬರೂ ಸಾವಿತ್ರಿಯವರನ್ನು ಸಾರ್ವಜನಿಕವಾಗಿ ಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದಾರೆ. ಸಾವಿತ್ರಿ ನನ್ನ ಪತ್ನಿ ಮೌಲಾಲಿ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಸುಗರಾ ಆರೋಪ ಮಾಡಿದ್ದಾರೆ.

    ಆರೋಪವನ್ನು ತಳ್ಳಿ ಹಾಕಿರುವ ಸಾವಿತ್ರಿ, ನನಗೂ ಮೌಲಾಲಿ ನಡುವೆ ಸಂಬಂಧವಿಲ್ಲ. ನಮ್ಮಿಬ್ಬರ ಮಧ್ಯೆ ಕೇವಲ ಹಣಕಾಸಿನ ವ್ಯವಹಾರವಿತ್ತು. ಸುಗರಾ ಹಾಗೂ ಸಿಕಂದರ್ ಚಾಕೂವಿನಿಂದ ನನ್ನ ಬಟ್ಟೆ ಹಾಗೂ ಮೌಲಾಲಿ ಬಟ್ಟೆ ಹರಿದುಹಾಕಿ ಬೆತ್ತಲೆ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

    ಹಲ್ಲೆಗೊಳಗಾದ ಸಾವಿತ್ರಿಯನ್ನು ಇಂಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಇದೂವರೆಗೂ ಯಾವುದೇ ದೂರುಗಳು ದಾಖಲಾಗಿಲ್ಲ. ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    https://www.youtube.com/watch?v=OmSaJj_UbpU

  • ಸಿಎಂ ಕಾರ್ಯಕ್ರಮದಲ್ಲಿ ಕ್ಯಾಂಡಿ ಕ್ರಶ್ ಆಡಿದ್ದಕ್ಕೆ 3 ಐಪಿಎಸ್ ಅಧಿಕಾರಿಗಳಿಗೆ ನೋಟಿಸ್

    ಸಿಎಂ ಕಾರ್ಯಕ್ರಮದಲ್ಲಿ ಕ್ಯಾಂಡಿ ಕ್ರಶ್ ಆಡಿದ್ದಕ್ಕೆ 3 ಐಪಿಎಸ್ ಅಧಿಕಾರಿಗಳಿಗೆ ನೋಟಿಸ್

    ಪಾಟ್ನಾ: ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಮಾದಕದ್ರವ್ಯಗಳ ಕಳ್ಳಸಾಗಣೆ ಬಗ್ಗೆ ನಡೆಯುತ್ತಿದ್ದ ಕಾರ್ಯಕ್ರಮದ ವೇಳೆ ಇಬ್ಬರು ಐಪಿಎಸ್ ಅಧಿಕಾರಿಗಳು ಫೋನ್‍ನಲ್ಲಿ ಕ್ಯಾಂಡಿ ಕ್ರಶ್ ಗೇಮ್ ಆಡಿದ್ದು, ಮತ್ತೊಬ್ಬರು ವಾಟ್ಸಪ್ ನೋಡುತ್ತಿದ್ದ ಕಾರಣ ಅವರಿಗೀಗ ನೋಟಿಸ್ ನೀಡಲಾಗಿದೆ.

    ಜೂನ್ 26ರಂದು ಬಿಹಾರದಲ್ಲಿ ಮಾದಕದ್ರವ್ಯಗಳ ಕಳ್ಳಸಗಣೆ ಹಾಗೂ ಅಪರಾಧ ಕೃತ್ಯಗಳ ಬಗ್ಗೆ ಚರ್ಚೆ ನಡೆಸಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯಮಂತ್ರಿ ನಿತೀಶ್ ಕುಮಾರ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ರು. ಬಿಹಾರದ ಪೊಲೀಸ್ ಮಹಾನಿರ್ದೇಶಕರು ಕೂಡ ಭಾಗಿಯಾಗಿದ್ರು. ಆದ್ರೆ ಈ ಕಾರ್ಯಕ್ರಮದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಮೊಬೈಲ್‍ನಲ್ಲಿ ಗೇಮ್ ಆಡುತ್ತಿದ್ದು, ಮತ್ತೊಬ್ಬ ಅಧಿಕಾರಿ ವಾಟ್ಸಪ್ ನೋಡುತ್ತಿದ್ದುದು ಕಂಡುಬಂದಿತ್ತು. ಈ ದೃಶ್ಯಗಳನ್ನ ಮಾಧ್ಯಮಗಳು ಪ್ರಸಾರ ಮಾಡಿದ್ದು, ಸಾಕಷ್ಟು ಸುದ್ದಿಯಾಗಿತ್ತು.

    ಈ ಹಿನ್ನೆಲೆಯಲ್ಲಿ ಪಾಟ್ನಾ ಎಸ್‍ಎಸ್‍ಪಿ ಮನು ಮಹಾರಾಜ್, ಸಿಟಿ ಎಸ್‍ಪಿ ಚಂದನ್ ಕುಮಾರ್ ಕುಶ್ವಾಹಾ ಹಾಗೂ ಐಪಿಎಸ್ ಅಧಿಕಾರಿ ಪಂಕಜ್ ಕುಮಾರ್ ರಾಜ್ ಅವರಿಗೆ ನೋಟಿಸ್ ನೀಡಲಾಗಿದೆ. ಈ ಬಗ್ಗೆ ಕೂಡಲೇ ವಿವರಣೆ ನೀಡುವಂತೆ ಅಧಿಕಾರಿಗಳಿಗೆ ಕೇಳಲಾಗಿದೆ.

    ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಇಲ್ಲಿನ ಸಹಾಯಕ ಪೊಲೀಸ್ ಮಹಾನಿರ್ದೇಶಕರಾದ ಎಸ್‍ಕೆ ಸಿಂಗಲ್, ಹಿರಿಯ ಪೊಲೀಸ್ ಅಧಿಕಾರಿಗಳಿಂದ ಈ ರೀತಿಯ ವರ್ತನೆ ನಿರೀಕ್ಷಿಸುವುದಿಲ್ಲ. ನಾವು ಅವರನ್ನು ಕೌನ್ಸೆಲಿಂಗ್ ಮಾಡುತ್ತೇವೆ ಎಂದಿದ್ದಾರೆ.

  • ರೆವೆನ್ಯೂ ಇನ್ಸ್ ಪೆಕ್ಟರ್‍ಗೆ ಜೀವಬೆದರಿಕೆ ಹಾಕಿದ ಶಾಸಕ ಬಂಡಿಸಿದ್ದೇಗೌಡ: ವಿಡಿಯೋ ನೋಡಿ

    ರೆವೆನ್ಯೂ ಇನ್ಸ್ ಪೆಕ್ಟರ್‍ಗೆ ಜೀವಬೆದರಿಕೆ ಹಾಕಿದ ಶಾಸಕ ಬಂಡಿಸಿದ್ದೇಗೌಡ: ವಿಡಿಯೋ ನೋಡಿ

    ಮಂಡ್ಯ: ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ಶ್ರೀರಂಗಪಟ್ಟಣ ಕಸಬಾದ ರೆವೆನ್ಯೂ ಇನ್ಸ್ ಪೆಕ್ಟರ್ ಕೋಟಿ ದೊಡ್ಡಯ್ಯ ಎಂಬವರ ಮೇಲೆ ಜೀವಬೆದರಿಕೆ ಹಾಕಿದ್ದಾರೆ.

    ಜೆಡಿಎಸ್ ಪಕ್ಷದಿಂದ ಅಮಾನತುಗೊಂಡಿರುವ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ದೂರವಾಣಿ ಕರೆ ಮಾಡಿ ಜಾತಿ ನಿಂದನೆ, ಅವಾಚ್ಯ ಶಬ್ಧ, ಸೊಂಟದ ಕೆಳಗಿನ ಭಾಷೆಗಳ ಬಳಕೆ ಮಾಡಿ ದಲಿತ ದೌರ್ಜನ್ಯ ಕಾಯ್ದೆ ಅಡಿ ಕೇಸ್ ಹಾಕುತ್ತೇನೆ ಅಷ್ಟೇ ಅಲ್ಲದೇ ಚಪ್ಪಲಿಯಲ್ಲಿ ಹೊಡೆದು ಮುಗಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೊಡ್ಡಯ್ಯ ಆರೋಪಿಸಿದ್ದಾರೆ.

    ನಿರಂತರ ದೌರ್ಜನ್ಯ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಶಾಸಕ ರಮೇಶ್ ಮತ್ತು ಬೆಂಬಲಿಗರ ವಿರುದ್ಧ ಮಂಡ್ಯ ಎಸ್‍ಪಿ ಅವರಿಗೆ ಕೋಟಿ ದೊಡ್ಡಯ್ಯ ದೂರು ನೀಡಿದ್ದಾರೆ.

    ರಾಜ್ಯಪಾಲರು, ಸಿಎಂ, ಲೋಕಾಯುಕ್ತ, ವಿಧಾನ ಸಭಾ ಸ್ಪೀಕರ್‍ಗೆ ದೂರು ನೀಡಿರುವ ಕೋಟಿ ದೊಡ್ಡಯ್ಯ ಆರೋಪಿತರ ವಿರುದ್ಧ ಕ್ರಮಕೈಗೊಳ್ಳಬೇಕು, ಜೀವ ಭಯ ಇರುವ ತನಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.

  • ಯೂಟ್ಯೂಬ್ ನೋಡಿ ಐಷಾರಾಮಿ ಬೈಕ್ ಕಳ್ಳತನ: ನಾಲ್ವರು ಖತರ್ನಾಕ್ ಕಳ್ಳರು ಅರೆಸ್ಟ್

    ಯೂಟ್ಯೂಬ್ ನೋಡಿ ಐಷಾರಾಮಿ ಬೈಕ್ ಕಳ್ಳತನ: ನಾಲ್ವರು ಖತರ್ನಾಕ್ ಕಳ್ಳರು ಅರೆಸ್ಟ್

    ಬೆಂಗಳೂರು: ಐಷಾರಾಮಿ ಬೈಕ್‍ಗಳನ್ನು ಕದ್ದು ತಮಿಳುನಾಡಿಗೆ ಮಾರಾಟ ಮಾಡುತ್ತಿದ್ದ ನಾಲ್ವರು ಕಳ್ಳರನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.

    ತಮಿಳುನಾಡಿನ ಪ್ರಭು(21), ದೊಡ್ಡನಾಗಮಂಗಲದ ಬಿ.ಕಾಂ ವಿದ್ಯಾರ್ಥಿಗಳಾದ ಅರುಣ್ ಸಾಯಿ(21), ಕಾರ್ತಿಕ್ (18) ಹಾಗೂ 17 ವರ್ಷದ ಪಿಯುಸಿ ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 30 ಲಕ್ಷ ರೂ. ಮೌಲ್ಯದ 28 ಬೈಕ್ ಗಳನ್ನು ಜಪ್ತಿ ಮಾಡಿದ್ದಾರೆ ಎಂದು ಆಗ್ನೇಯ ವಲಯದ ಡಿಸಿಪಿ ಬೋರಲಿಂಗಯ್ಯ ತಿಳಿಸಿದರು.

    ಆರೋಪಿಗಳ ಪೋಷಕರು ಕೂಲಿ ಕೆಲಸ ಮಾಡುತ್ತಿದ್ದ ಇವರ ವಿಲಾಸಿ ಜೀವನಕ್ಕೆ ಹಣದ ಅವಶ್ಯಕತೆ ಇತ್ತು. ವ್ಹೀಲಿಂಗ್ ಹಾಗೂ ಡ್ರ್ಯಾಗ್‍ರೇಸ್ ಮಾಡುವುದನ್ನು ಕಲಿತಿದ್ದ ಇವರು ರಾತ್ರಿ ಸಮಯದಲ್ಲಿ ಮೋಜುಗಾಗಿ ನಗರವನ್ನು ಸುತ್ತುತ್ತಿದ್ದರು. ಈ ವೇಳೆ ಐಷಾರಾಮಿ ಬೈಕ್‍ಗಳ ಮೇಲೆ ಇವರಿಗೆ ಆಸೆ ಹುಟ್ಟಿತ್ತು. ಇವುಗಳನ್ನು ಖರೀದಿಸಲು ಹಣ ಇಲ್ಲದ ಕಾರಣ ವಿದೇಶದಲ್ಲಿ ಬೈಕ್ ಗಳನ್ನು ಹೇಗೆ ಕದಿಯುತ್ತಾರೆ ಎನ್ನುವುದನ್ನು ಯೂಟ್ಯೂಬ್ ವಿಡಿಯೋ ಮೂಲಕ ತಿಳಿದುಕೊಂಡು ಕಳ್ಳತನಕ್ಕೆ ಇಳಿದಿದ್ದರು.

    ಬೆಳಗಿನ ಜಾವ ಕಳ್ಳತನ: ಮಡಿವಾಳ, ಎಚ್‍ಎಸ್‍ಆರ್ ಲೇಔಟ್, ಕೋರಮಂಗಲ, ಎಲೆಕ್ಟ್ರಾನಿಕ್‍ಸಿಟಿ, ಪರಪ್ಪನ ಅಗ್ರಹಾರ ಸುತ್ತಮುತ್ತಲು ಇರುವ ಪೇಯಿಂಗ್ ಗೆಸ್ಟ್ ಕಟ್ಟಡಗಳಲ್ಲಿ ಟೆಕ್ಕಿಗಳು ವಾಸವಾಗುತ್ತಿದ್ದಾರೆ. ಅಷ್ಟೇ ಅಲ್ಲದೇ ಇವರೆಲ್ಲ ರಾತ್ರಿ ತಡವಾಗಿ ಮಲಗಿ ಬೆಳಗ್ಗೆ ಲೇಟಾಗಿ ಏಳುತ್ತಾರೆ ಎನ್ನುವುದು ಇವರಿಗೆ ಗೊತ್ತಿತ್ತು. ಹೀಗಾಗಿ ಇವರು ಬೆಳಗಿನ ಜಾವ 3 ರಿಂದ 6 ಗಂಟೆ ನಡುವೆ ಬೈಕ್ ಕಳ್ಳತನ ಎಸಗುತ್ತಿದ್ದರು.

    ಕಳ್ಳತನ ಹೇಗೆ?
    ನಾಲ್ಕು ಜನರು ಗುಂಪಾಗಿ ಹೋಗಿ ಕಳ್ಳತನ ಎಸಗದೇ ಒಬ್ಬೊಬ್ಬರೇ ಬೇರೆ ಬೇರೆ ರಸ್ತೆಗಳಿಗೆ ಹೋಗುತ್ತಿದ್ದರು. ಆರಂಭದಲ್ಲಿ ಬೈಕಿನ ಹ್ಯಾಂಡಲ್ ಲಾಕ್ ಮುರಿಯುತ್ತಿದ್ದರು. ನಂತರ ಇಗ್ನೇಷನ್ ವಯರ್ ಕತ್ತರಿಸಿ, ವಯರ್‍ಗಳನ್ನು ಕನೆಕ್ಟ್ ಮಾಡಿ ಚಲಾಯಿಸಿಕೊಂಡು ಹೋಗುತ್ತಿದ್ದರು. ವಾರದಲ್ಲಿ ಒಂದು ಬಾರಿ ಮಾತ್ರ ಈ ಕೃತ್ಯಗಳನ್ನು ಎಸಗುತ್ತಿದ್ದರು ಎಂದು ಪೊಲೀಸರು ತಿಳಿಸಿದರು.

    ಬೈಕ್ ಮಾರಾಟ ಹೇಗೆ?
    6 ತಿಂಗಳಿನಲ್ಲಿ 50ಕ್ಕೂ ಹೆಚ್ಚು ಬೈಕ್‍ಗಳನ್ನು ಕದ್ದಿದ್ದ ಆರೋಪಿಗಳು ಅವುಗಳನ್ನು ತಮಿಳುನಾಡಿನ ವೇಲೂರು ಹಾಗೂ ಅಂಬೂರಿನಲ್ಲಿರುವ ಪರಿಚಿತ ವಾಹನ ಡೀಲರ್‍ಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಈ ಬೈಕ್‍ಗಳು ಬೆಂಗಳೂರಿನ ಫೈನಾನ್ಸ್ ನವರು ಜಪ್ತಿ ಮಾಡಿದ್ದ ವಾಹನಗಳು, ಮುಂಗಡವಾಗಿ 10 ಸಾವಿರ ಕೊಡಿ. ಬಳಿಕ ಈ ಬೈಕಿಗೆ ಸಂಬಂಧಿಸಿದ ಉಳಿದ ದಾಖಲೆಗಳನ್ನು ನೀಡುತ್ತೇವೆ ಎಂದು ನಂಬಿಸಿ ಮಾರಾಟ ಮಾಡುತ್ತಿದ್ದರು.

    ಪೊಲೀಸರು ಪತ್ತೆ ಹಚ್ಚಿದ್ದು ಹೇಗೆ?
    ಪ್ರತಿ ಬಾರಿಯೂ ಬೈಕ್ ಗಳು ಆಗ್ನೆಯ ವಿಭಾಗದಲ್ಲಿ ಕಳವು ಆಗುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳ ಪತ್ತೆಗೆ 24 ಜನರನ್ನು ಒಳಗೊಂಡ 3 ವಿಶೇಷ ತಂಡವನ್ನು ರಚಿಸಿದ್ದರು. ಕಳ್ಳತನ ಎಸಗಿದ್ದ ಸ್ಥಳದಲ್ಲಿದ್ದ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದರೂ ಆರೋಪಿಗಳ ಸುಳಿವು ಸಿಕ್ಕಿರಲಿಲ್ಲ. ಆರೋಪಿಗಳು ಬೈಕ್ ನಲ್ಲಿ ತಮಿಳುನಾಡಿಗೆ ತೆರಳುತ್ತಿರುವ ದೃಶ್ಯ ಅತ್ತಿಬೆಲೆ ಬಳಿ ಇರುವ ಟೋಲ್‍ಗೇಟ್ ನಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ಪತ್ತೆಯಾಗಿದ್ದರೂ ಚಹರೆ ಪತ್ತೆಯಾಗಿರಲಿಲ್ಲ.

    ಪೊಲೀಸರು ಬೈಕ್ ಗಳ ಕಳ್ಳತನ ಯಾವ ಸಮಯದಲ್ಲಿ ನಡೆದಿದೆ ಎನ್ನುವ ಮಾಹಿತಿ ಕಲೆ ಹಾಕಿದಾಗ ಬೆಳಗಿನ ಜಾವ ಕಳ್ಳತನ ನಡೆಯುತ್ತಿದೆ ಎನ್ನುವುದು ಗೊತ್ತಾಗಿದೆ. ಎಲ್ಲ ಕಳವು ಪ್ರಕರಣಗಳು 3 ರಿಂದ 6 ಗಂಟೆ ಒಳಗಡೆ ಆಗುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಬೈಕ್ ಕಳವಾದ ಪ್ರದೇಶಗಳಲ್ಲಿ ಚಿಂದಿ ಆಯುವವರ ವೇಷ ಧರಿಸಿ ಸುತ್ತಾಡಲು ಆರಂಭಿಸಿದರು. ಜುಲೈ 25ರ ಬೆಳಗ್ಗೆ 5 ಗಂಟೆಗೆ ಬಿಟಿಎಂ ಲೇಔಟ್‍ನಲ್ಲಿ ಬೈಕ್ ಕದಿಯಲು ಯತ್ನಿಸುತ್ತಿದ್ದಾಗ ಅರುಣ್ ಸಾಯಿ ಸಿಕ್ಕಿ ಬಿದ್ದಿದ್ದ. ಕೂಡಲೇ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಎಲ್ಲ ಆರೋಪಿಗಳ ಹೆಸರನ್ನು ಬಾಯಿಬಿಟ್ಟಿದ್ದಾನೆ ಎಂದು ತನಿಖಾ ಅಧಿಕಾರಿಗಳು ತಿಳಿಸಿದರು.

    ಮೋಜು ಮಸ್ತಿ: ಐಷಾರಾಮಿ ಬೈಕ್ ಗಳನ್ನು ಕದ್ದಿಯುತ್ತಿದ್ದ ನಾವು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದೆವು. 1.5 ಲಕ್ಷ ರೂ. ಮೌಲ್ಯದ ಬುಲೆಟ್ ಬೈಕನ್ನು ಕೇವಲ 10 ಸಾವಿರಕ್ಕೆ ಮಾರಾಟ ಮಾಡಿದ್ದೇವೆ. ಇದರಿಂದ ಗಳಿಸಿದ ಹಣದಲ್ಲಿ ಕೇರಳ, ಕರ್ನಾಟಕದ ಪ್ರವಾಸಿ ತಾಣಕ್ಕೆ ತೆರಳಿ ಸುತ್ತಾಡುತ್ತಿದ್ದೆವು ಎಂದು ಆರೋಪಿಗಳು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ.

     

  • ವೈದ್ಯರ ನಿರ್ಲಕ್ಷ್ಯದಿಂದ ಕೋಮಾ ಸೇರಿದ ಬಾಣಂತಿ

    ವೈದ್ಯರ ನಿರ್ಲಕ್ಷ್ಯದಿಂದ ಕೋಮಾ ಸೇರಿದ ಬಾಣಂತಿ

    ಕೋಲಾರ: ಜಿಲ್ಲೆಯ ಮಾಲೂರು ತಾಲೂಕಿನ ದೊಡ್ಡಕಡತೂರು ಗ್ರಾಮದ ಮಹಿಳೆಯೊಬ್ಬರು ವೈದ್ಯರ ನಿರ್ಲಕ್ಷ್ಯದಿಂದ ಕೋಮಾದ ಸ್ಥಿತಿಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

    ಬಾಣಂತಿ ದಿವ್ಯ ಎಂಬವರು ಗಂಡು ಮಗುವಿಗೆ ಜನ್ಮ ನೀಡಿದ ನಂತರ ಕೋಮಾದಲ್ಲಿದ್ದಾರೆ. ದಿವ್ಯ ಕಳೆದ ಮೂರು ತಿಂಗಳಿನಿಂದ ಕೋಮಾದಲ್ಲಿದ್ದು, ನಗರದ ಆರ್‍ಎಲ್ ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಮಾರ್ಚ್ 31ರಂದು ದಿವ್ಯಾ ಮಾಲೂರಿನ ಸೇಂಟ್ ಮಾರಿಸ್ ಖಾಸಗಿ ಅಸ್ಪತ್ರೆಯಲ್ಲಿ ಹೆರಿಗೆಗೆಂದು ದಾಖಲಾಗಿದ್ದರು.

    ಹೆರಿಗೆ ವೇಳೆ ಅತಿಯಾದ ಅರಿವಳಿಕೆ ಹೊಂದಿದ್ದ ಚುಚ್ಚುಮದ್ದು ನೀಡಿದ್ದ ಹಿನ್ನೆಲೆಯಲ್ಲಿ ಕೋಮಾ ಸ್ಥಿತಿಗೆ ತಲುಪಿದ್ದಾರೆ. ಇದಿಂಗೂ ಬಾಣಂತಿ ಜೀವಂತ ಶವವಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ವೈದ್ಯರ ನಿರ್ಲಕ್ಷ್ಯದ ಬಗ್ಗೆ ಬಾಣಂತಿಯ ಸಂಬಂಧಿಕರು ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿಗಳಿಗೆ ದೂರು ನೀಡಲು ನಿರ್ಧಾರ ಮಾಡಿದ್ದಾರೆ.

  • ತಂದೆಗೆ ಸಾರಾಯಿ ಕುಡಿಸಿ ಅವರ ಮುಂದೆಯೇ ಮಗಳನ್ನ ಅತ್ಯಾಚಾರಗೈದ ಕಾಮ ಪಿಶಾಚಿ

    ತಂದೆಗೆ ಸಾರಾಯಿ ಕುಡಿಸಿ ಅವರ ಮುಂದೆಯೇ ಮಗಳನ್ನ ಅತ್ಯಾಚಾರಗೈದ ಕಾಮ ಪಿಶಾಚಿ

    ಚಿತ್ರದುರ್ಗ: ತಂದೆಗೆ ಮದ್ಯಪಾನ ಮಾಡಿಸಿ ಅವರ ಮುಂದೆಯೇ ವ್ಯಕ್ತಿಯೊಬ್ಬ ವಿವಾಹಿತ ಮಗಳ ಮೇಲೆ ಅತ್ಯಾಚಾರ ಎಸಗಿರುವ ಅವಮಾನವೀಯ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮೇಕಾನಹಟ್ಟಿ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ರಾಮಚಂದ್ರ ಎಂಬಾತನೇ ಅತ್ಯಾಚಾರಗೈದ ಆರೋಪಿ. ಮಂಗಳವಾರ ರಾತ್ರಿ ಯುವತಿಯ ತಂದೆ ದ್ಯಾಮಾನಾಯ್ಕ್ ರಿಗೆ ಕಂಠಪೂರ್ತಿ ಕುಡಿಸಿದ್ದಾನೆ. ರಾತ್ರಿ ಸುಮಾರು 1 ಗಂಟೆಯ ವೇಳೆಗೆ ಯುವತಿ ಮನೆಗೆ ರಾಮಚಂದ್ರ ಬಂದಿದ್ದು, ಮನೆಯಲ್ಲಿದ್ದ ಯುವತಿಯ ತಾಯಿ ಬಾಗಿಲನ್ನು ತೆಗೆದಿದ್ದಾರೆ. ಈ ವೇಳೆ ಯುವತಿಯ ತಾಯಿಗೆ ಬಲವಾಗಿ ಹೊಡೆದಿದ್ದರಿಂದ ಆಕೆ ಪ್ರಜ್ಞೆ ತಪ್ಪಿದ್ದಾರೆ. ಮನೆಯಲ್ಲಿ ಒಂಟಿಯಾಗಿದ್ದ ಯುವತಿಯ ಮೇಲೆ ರಾಮಚಂದ್ರ ಅತ್ಯಾಚಾರ ಎಸೆಗಿದ್ದಾನೆ.

    ಯುವತಿಯ ತಂದೆ ದ್ಯಾಮಾನಾಯ್ಕ್

    ಅತ್ಯಾಚಾರದ ವೇಳೆಯಲ್ಲಿ ಮಗಳ ಕಿರುಚಾಟ ಕೇಳಿ ಎಚ್ಚರಗೊಂಡ ದ್ಯಾಮಾನಾಯ್ಕ್ ಅವರ ಮೇಲೆಯೂ ರಾಮಚಂದ್ರ ಹಲ್ಲೆ ಮಾಡಿದ್ದಾನೆ. ಪಕ್ಕದಲ್ಲಿಯೇ ಪ್ರಜ್ಞೆತಪ್ಪಿ ಬಿದ್ದಿದ್ದ ತಾಯಿ ಕೂಡ ಎಚ್ಚರಗೊಂಡಿದ್ದಾರೆ. ಅತ್ಯಾಚಾರದ ಬಳಿಕ ರಾಮಚಂದ್ರ, ವಿಷಯವನ್ನು ಯಾರಿಗಾದ್ರೂ ತಿಳಿಸದ್ರೆ ಕೊಲ್ಲುವುದಾಗಿ ಯುವತಿ ಹಾಗು ಆಕೆಯ ಮನೆಯವರಿಗೆ ಬೆದರಿಕೆ ಹಾಕಿ ಹೋಗಿದ್ದನು.

    ಮಂಗಳವಾರ ರಾತ್ರಿ ವಿಪರೀತ ಕುಡಿದಿದ್ದ ದ್ಯಾಮಾನಾಯ್ಕ್ ಬೆಳಗ್ಗೆ ರಕ್ತದ ವಾಂತಿ ಮಾಡಿಕೊಂಡಿದ್ದಾರೆ. ದ್ಯಾಮಾನಾಯ್ಕ್‍ರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಮಧ್ಯಾಹ್ನ ಸಾವನ್ನಪ್ಪಿದ್ದಾರೆ. ಈ ವೇಳೆ ಯುವತಿಯ ಮೇಲಿನ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಯುವತಿಗೆ ಈಗಾಗಲೇ ಮದುವೆಯಾಗಿದ್ದು, ಒಂದೂವರೆ ವರ್ಷದ ಹೆಣ್ಣು ಮಗುವಿದೆ. ಗಂಡನಿಂದ ಬೇರೆಯಾದ ಯುವತಿ ತವರು ಮನೆಯಲ್ಲಿ ಬಂದು ನೆಲೆಸಿದ್ದರು.

    ಈ ಸಂಬಂಧ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ರಾಮಚಂದ್ರನನ್ನ ಬಂಧಿಸಿದ್ದಾರೆ.

    ಯುವತಿಗೆ ಹೊಳಲಕ್ಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಮೂಲತಃ ವಿಜಯಪುರ ಜಿಲ್ಲೆಯ ಸವಳೂರು ತಾಂಡಾದ ನಿವಾಸಿಯಾಗಿರುವ ದ್ಯಾಮಾನಾಯ್ಕ್ ಕೆಲವು ವರ್ಷಗಳ ಹಿಂದೆ ಕುಟುಂಬ ಸಮೇತರಾಗಿ ಬಂಡೆ ಒಡೆಯುವ ಕೆಲಸಕ್ಕಾಗಿ ಮೇಕಾನಹಟ್ಟಿ ಗ್ರಾಮಕ್ಕೆ ಬಂದು ನೆಲೆಸಿದ್ದರು ಎಂದು ತಿಳಿದುಬಂದಿದೆ.