Tag: police

  • ಸುತ್ತಾಡಲೆಂದು ಬೈಕ್ ನಲ್ಲಿ ಕರೆದುಕೊಂಡು ಹೋಗಿ ಪತ್ನಿಯನ್ನ ಕೊಲೆಗೈದ ಪತಿರಾಯ!

    ಸುತ್ತಾಡಲೆಂದು ಬೈಕ್ ನಲ್ಲಿ ಕರೆದುಕೊಂಡು ಹೋಗಿ ಪತ್ನಿಯನ್ನ ಕೊಲೆಗೈದ ಪತಿರಾಯ!

    ಯಾದಗಿರಿ: ಹೊರಗಡೆ ಸುತ್ತಾಡಲೆಂದು ಪತ್ನಿಯನ್ನು ಕರೆದುಕೊಂಡು ಹೋಗಿದ್ದ ಪತಿ ತನ್ನ ಪತ್ನಿಯನ್ನ ಬೈಕ್ ನಿಂದ ತಳ್ಳಿ ಕೊಲೆ ಮಾಡಿರುವ ಘಟನೆ ಯಾದಗಿರಿ ತಾಲೂಕಿನ ಯರಗೋಳ ಗ್ರಾಮದ ಬಳಿ ನಡೆದಿದೆ.

    ಅಶ್ವಿನಿ ಎಂಬವರೇ ಪತಿಯಿಂದ ಕೊಲೆಯಾದ ದುರ್ದೈವಿ. ಸಾಬಣ್ಣ ಎಂಬವನೇ ತನ್ನ ಪತ್ನಿಯನ್ನ ಕೊಲೆಗೈದ ಪತಿರಾಯ. ಅಶ್ವಿನಿ ಮತ್ತು ಸಾಬಣ್ಣ ಇಬ್ಬರಿಗೂ 6 ತಿಂಗಳ ಹಿಂದೆಯೇ ಮದುವೆಯಾಗಿತ್ತು. ಆದ್ರೆ ವರದಕ್ಷಿಣೆ ಆಸೆಗಾಗಿ ಸಾಬಣ್ಣ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂಬ ಆರೋಪಗಳು ಕೇಳಿ ಬಂದಿದೆ.

    ಬಾಗಲಕೋಟೆ ಜಿಲ್ಲೆಯ ಜಮಖಂಡಿ ಮೂಲದ ಅಶ್ವಿನಿ ಅವರನ್ನು ಯರಗೋಳ ಗ್ರಾಮದ ನಿವಾಸ ಸಾಬಣ್ಣನೊಂದಿಗೆ ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ವಿವಾಹದ ನಂತರ ನವದಂಪತಿ ಬೆಂಗಳೂರಿನಲ್ಲಿ ವಾಸವಾಗಿದ್ದರು. ದಂಪತಿ ಶನಿವಾರ ಸ್ವಗ್ರಾಮ ಯರಗೋಳಕ್ಕೆ ಬಂದಿದ್ದರು. ಸಾಬಣ್ಣ ಪತ್ನಿಗೆ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದನು ಎನ್ನಲಾಗಿದೆ.

    ಸದ್ಯ ಪೊಲೀಸರು ಆರೋಪಿ ಸಾಬಣ್ಣನನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

     

  • ನನ್ನನ್ನು ಹೊಡೆದು ಬಡಿದು ತಾಳಿ ಕಟ್ಟಿಸಿದ್ರು-2ನೇ ಪತಿಯಿಂದ ದೂರು

    ನನ್ನನ್ನು ಹೊಡೆದು ಬಡಿದು ತಾಳಿ ಕಟ್ಟಿಸಿದ್ರು-2ನೇ ಪತಿಯಿಂದ ದೂರು

    -ಮಾಜಿ ಪತಿಯೇ ಮುಂದೆ 2ನೇ ಮದ್ವೆಯಾದ ಪತ್ನಿ

    ಚಿಕ್ಕಬಳ್ಳಾಪುರ: ವಿಚ್ಛೇದಿತ ಪತ್ನಿಗೆ ಮಾಜಿ ಪತಿಯೇ ಮುಂದೆ ನಿಂತು ಮದುವೆ ಮಾಡಿಸಿದ ವಿಚಿತ್ರ ಪ್ರಕರಣ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿತ್ತು. ಸದ್ಯ ಈ ಪ್ರಕರಣಕ್ಕೆ ಟ್ವಸ್ಟ್ ಸಿಕ್ಕಿದೆ.

    ನನ್ನನ್ನು ಹೊಡೆದು ಬಡೆದು ಅಂದು ಮನೆಯಲ್ಲಿ ಕೂಡಿ ಹಾಕಿ ರಚನಾರಿಗೆ ಬಲವಂತವಾಗಿ ತಾಳಿ ಕಟ್ಟಿಸಿದ್ದಾರೆ ಎಂದು ರಚನಾರ ಎರಡನೇ ಪತಿ ಮಂಜುನಾಥ್ ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಏನಿದು ಪ್ರಕರಣ?: ರಚನಾ ಎಂಬವರು ತಮ್ಮ ಶಾಲಾ ವಾಹನದ ಚಾಲಕ ಮಂಜುನಾಥ್ ಎಂಬವರೊಂದಿಗೆ ಮನೆಯಲ್ಲಿ ದೇವರ ಮುಂದೆ ವಿವಾಹವಾಗಿದ್ದರು. ಈ ವೇಳೆ ರಚನಾರ ಮೊದಲ ಪತಿ ಈಶ್ವರ ಗೌಡ ಸಹ ಹಾಜರಾಗಿದ್ದು, ತಮ್ಮ ಮುಂದಾಳತ್ವದಲ್ಲಿಯೇ ತಮ್ಮ ಪತ್ನಿಯ ಮದುವೆಯನ್ನು ಮಾಡಿದ್ದರು.

     

    ಮಂಜುನಾಥ್ ಈ ಮೊದಲು ಈಶ್ವರಗೌಡ ಒಡೆತನದ ರಚನಾ ಕ್ರಿಯೇಟಿವ್ ಖಾಸಗಿ ಶಾಲೆಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಈ ವೇಳೆ ಲೈಂಗಿಕವಾಗಿ ರಚನಾ ತನ್ನನ್ನ ಬಳಸಿಕೊಂಡಿದ್ದಾರೆ. ಹಾಗಾಗಿ ನಾನು ಅವರ ಕಾಟ ತಾಳಲಾರದೆ ಕೆಲಸ ಬಿಟ್ಟು ಕೆಆರ್.ಪುರಂನ ಖಾಸಗಿ ಶಾಲೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದೆ. ಆದರೇ ಈಗ ತನ್ನನ್ನ ಕಿಡ್ನಾಪ್ ಮಾಡಿ ನನಗೆ ಹಿಗ್ಗಾಮುಗ್ಗಾ ಥಳಿಸಿ, ಬೆದರಿಸಿ ಬಲವಂತವಾಗಿ ಮದುವೆ ಮಾಡಿಸಿದ್ದಾರೆ ಅಂತ ಮಂಜುನಾಥ್ ಆರೋಪಿಸಿದ್ದಾರೆ.

    ಇತ್ತ ರಚನಾ ಕೂಡ ಚಿಂತಾಮಣಿ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದಾರೆ.

    ಇದನ್ನೂ ಓದಿ: ಮಾಜಿ ಗಂಡನ ಎದುರೇ 2ನೇ ಮದ್ವೆಯಾದ ಮಹಿಳೆ

     

  • ಸುಸೂ ಬಂತೆಂದು ಜೀಪಿನಿಂದ ಇಳಿದ ಆರೋಪಿ ಪೊಲೀಸ್ರಿಂದ ಎಸ್ಕೇಪ್!

    ಸುಸೂ ಬಂತೆಂದು ಜೀಪಿನಿಂದ ಇಳಿದ ಆರೋಪಿ ಪೊಲೀಸ್ರಿಂದ ಎಸ್ಕೇಪ್!

    ಬೆಂಗಳೂರು: ಪೊಲೀಸರ ವಶದಲ್ಲಿದ್ದ ಆರೋಪಿ ಪರಾರಿಯಾಗಿರೋ ಘಟನೆಯೊಂದು ನಗರದಲ್ಲಿ ನಡೆದಿದೆ.

    ಕುಖ್ಯಾತ ರೌಡಿ ಶೀಟರ್ ಪ್ರಶಾಂತ್ ಕುಮಾರ್ ಎಸ್ಕೇಪ್ ಅದ ಅರೋಪಿಯಾಗಿದ್ದು, ಶನಿವಾರ ರಾತ್ರಿ ಕೆಆರ್ ಪುರ ಬಳಿಯ ಐಟಿಐ ಗೇಟ್ ಬಳಿ ಈತ ಪರಾರಿಯಾಗಿದ್ದಾನೆ.

    ಪ್ರಕರಣವೊಂದರ ಸಂಬಂಧ ಆರೋಪಿ ಪ್ರಶಾಂತ್‍ನನ್ನು ಎಚ್‍ಎಎಲ್ ಪೊಲೀಸರು ಬಂಧಿಸಿದ್ದರು. ಬಳಿಕ ಆರೋಪಿ ಕೃತ್ಯ ಎಸಗಿದ್ದ ಸ್ಥಳಗಳ ಮಹಜರು ಮಾಡಲು ಹೋಗಿದ್ರು. ಈ ವೇಳೆ ಮೂತ್ರ ವಿಸರ್ಜನೆ ಮಾಡಬೇಕು ಅಂತ ಆರೋಪಿ ಹೇಳಿದ್ದನು. ಹೀಗಾಗಿ ಪೊಲೀಸರು ರಸ್ತೆ ಬದಿ ಜೀಪ್ ನಿಲ್ಲಿಸಿ ಆತನನ್ನು ಕರೆದುಕೊಂಡು ಹೋಗುತ್ತಿದ್ದರು. ಇದೇ ವೇಳೆ ಕರ್ತವ್ಯದಲ್ಲಿದ್ದ ಇಬ್ಬರು ಪೇದೆಗಳಾದ ಕಾಂತರಾಜು ಹಾಗೂ ರವಿಚಂದ್ರನನ್ನು ತಳ್ಳಿ ಪರಾರಿಯಾಗಿದ್ದಾನೆ.

    ಈ ಸಂಬಂಧ ಕೆಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಶವಯಾತ್ರೆಗೆ ಬಿಜೆಪಿ ಸಿದ್ಧತೆ- ಮೆರವಣಿಗೆಗೆ ಖಾಕಿ ಸರ್ಪಗಾವಲು

    ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಶವಯಾತ್ರೆಗೆ ಬಿಜೆಪಿ ಸಿದ್ಧತೆ- ಮೆರವಣಿಗೆಗೆ ಖಾಕಿ ಸರ್ಪಗಾವಲು

    ಮಂಗಳೂರು: 4 ದಿನಗಳ ಹಿಂದೆ ಹಲ್ಲೆಗೆ ಒಳಗಾಗಿದ್ದ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಪಾರ್ಥಿವ ಶರೀರದ ಮೆರವಣಿಗೆ ಬಳಿಕ ಇಂದು ಅಂತ್ಯಕ್ರಿಯೆ ನಡೆಯಲಿದೆ.

    ಮಳೆ ನಡುವೆಯೂ ಶವಯಾತ್ರೆಗೆ ಆರ್‍ಎಸ್‍ಎಸ್ ಹಾಗೂ ಬಿಜೆಪಿ ಸಿದ್ಧತೆ ನಡೆಸಿದೆ. ಬಿಜೆಪಿ ಹಿರಿಯ ನಾಯಕರು ಹಾಗೂ ಆರ್‍ಎಸ್‍ಎಸ್ ಮುಖಂಡರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ. ಮಂಗಳೂರಿನಿಂದ ಶರತ್ ಮನೆಯಿರುವ ಬಂಟ್ವಾಳದ ಸಜಿಪ ಗ್ರಾಮದವರೆಗೂ ಅಂತಿಮ ಶವಯಾತ್ರೆ ನಡೆಯಲಿದೆ. 9.30ರ ವೇಳೆಗೆ ಮಂಗಳೂರಿನ ಆಸ್ಪತ್ರೆಯಿಂದ ಮೆರವಣಿಗೆ ಆರಂಭವಾಗಲಿದೆ. ಹಿಂದೂ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಭಾಗವಹಿಸುವ ಸಾಧ್ಯತೆಯಿದೆ

    ಮಂಗಳೂರು ನಗರ ಹೊರತುಪಡಿಸಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ. ಪಾರ್ಥಿವ ಶರೀರದ ಮೆರವಣಿಗೆ ಹಿನ್ನೆಲೆಯಲ್ಲಿ ಮಂಗಳೂರು ತುಂಬೆಲ್ಲಾ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಯಾವುದೇ ಕ್ಷಣಗಳಲ್ಲಿ ಗಲಾಟೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

    ಜಿಲ್ಲೆಯಾದ್ಯಂತ ಒಟ್ಟು 2 ಸಾವಿರಕ್ಕೂ ಹೆಚ್ಚು ಪೊಲೀಸರನ್ನ ಭದ್ರತೆಗಾಗಿ ನಿಯೋಜಿಸಲಾಗಿದೆ. ಬಂಟ್ವಾಳ ತಾಲೂಕಿನ ಕಲ್ಲಡ್ಕ, ಬಿ.ಸಿ ರೋಡಿನಲ್ಲಿ ಸಿಆರ್‍ಪಿಎಫ್ ನಿಯೋಜನೆ ಮಾಡಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಆರ್‍ಎಎಫ್ ಪಡೆ ನಿಯೋಜನೆ, 4 ಕೆಎಸ್‍ಆರ್‍ಪಿ, 2 ಸಿಆರ್‍ಪಿಎಫ್, 2 ಆರ್‍ಎಎಫ್ ತಂಡ ನಿಯೋಜನೆ ಮಾಡಲಾಗಿದೆ. ಉಡುಪಿ, ಚಿಕ್ಕಮಗಳೂರಿನಿಂದ ಅಧಿಕಾರಿಗಳು ಹೆಚ್ಚುವರಿ ಪೊಲೀಸರನ್ನ ಕರೆಸಿಕೊಂಡಿಸಿದ್ದಾರೆ.

    ಇದನ್ನೂ ಓದಿ: ಚಿಕಿತ್ಸೆ ಫಲಕಾರಿಯಾಗದೆ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಸಾವು

  • ಪೆಟ್ರೋಲ್ ಕೇಳೋ ನೆಪದಲ್ಲಿ ಮಂಗ್ಳೂರಿನಲ್ಲಿ ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ದಾಳಿ

    ಪೆಟ್ರೋಲ್ ಕೇಳೋ ನೆಪದಲ್ಲಿ ಮಂಗ್ಳೂರಿನಲ್ಲಿ ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ದಾಳಿ

    ಮಂಗಳೂರು: ದುಷ್ಕರ್ಮಿಗಳ ತಂಡವೊಂದು ಪೆಟ್ರೋಲ್ ಕೇಳುವ ನೆಪದಲ್ಲಿ ಯುವಕರಿಬ್ಬರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಘಟನೆ ಮಂಗಳೂರಿನ ಅಡ್ಯಾರ್ ಪದವಿನಲ್ಲಿ ನಡೆದಿದೆ.

    ಕೇರಳದ ಮಲಪ್ಪುರಂ ನಿವಾಸಿ, ಮಂಗಳೂರಿನ ಖಾಸಗಿ ಕಾಲೇಜೊಂದರ 3ನೇ ವರ್ಷದ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಸಾಜಿದ್ ಹಾಗೂ ಆತನ ಸ್ನೇಹಿತನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.

    ಸಾಜಿದ್ ಮತ್ತು ಆತನ ಸ್ನೇಹಿತ ನೌಫಲ್ ಅಡ್ಯಾರ್ ಪದವಿನಿಂದ ಬಿತ್ತುಪಾದೆಗೆ ತೆರಳುತ್ತಿದ್ದಾಗ ವರ ತಂಡವೊಂದು ಪೆಟ್ರೋಲ್ ಖಾಲಿಯಾಗಿದ್ದು, ಪೆಟ್ರೋಲ್ ಇದ್ದರೆ ನೀಡಿ ಎಂದು ಕೇಳಿದೆ.

    ಸಾಜಿದ್ ಹಾಗೂ ನೌಫಲ್ ಪೆಟ್ರೋಲ್ ನೀಡಲು ಮುಂದಾಗುತ್ತಿದ್ದಂತೆ ಇವರ ಮೇಲೆ ದಾಳಿ ನಡೆದಿದೆ. ಘಟನೆಯಿಂದ ಸಾಜಿದ್ ನ ಕೈ ಹಾಗೂ ಹೊಟ್ಟೆಯ ಬಲಭಾಗಕ್ಕೆ ತೀವ್ರ ಗಾಯವಾಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.

  • RSS ಕಾರ್ಯಕರ್ತನ ಮೇಲೆ ಹಲ್ಲೆ: ಬಂಟ್ವಾಳ ಮತ್ತೆ ಉದ್ವಿಗ್ನ – ವಾಹನ ಸಂಚಾರ ಅಸ್ತವ್ಯಸ್ಥ

    RSS ಕಾರ್ಯಕರ್ತನ ಮೇಲೆ ಹಲ್ಲೆ: ಬಂಟ್ವಾಳ ಮತ್ತೆ ಉದ್ವಿಗ್ನ – ವಾಹನ ಸಂಚಾರ ಅಸ್ತವ್ಯಸ್ಥ

    ಮಂಗಳೂರು: ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮೇಲಿನ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ನಗರದ ಬಿ.ಸಿ.ರೋಡಿನಲ್ಲಿ ಸಂಘ ಪರಿವಾರ ಹಾಗು ಬಿಜೆಪಿ ಮುಖಂಡ ಮುಂದಾಳತ್ವದಲ್ಲಿ ಭಾರೀ ಪ್ರತಿಭಟನೆ ನಡೆಸಲಾಯಿತು.

    ಶುಕ್ರವಾರ ಹಿಂದೂ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಪ್ರತಿಭಟನಾ ಸ್ಥಳದಲ್ಲಿ ಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಜಮಾಯಿಸುತ್ತಿದ್ದಂತೆ ಸ್ಥಳದಲ್ಲಿದ್ದ ಸಾವಿರಕ್ಕೂ ಅಧಿಕ ಪೊಲೀಸರು ಅವರನ್ನು ಸುತ್ತುವರಿದರು.

    ಮುಂದಾಳತ್ವ ವಹಿಸಿದ್ದ ಮುಖಂಡರಾದ ಸಂಸದರಾದ ನಳಿನ್ ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ, ಶಾಸಕ ಸುನೀಲ್ ಕುಮಾರ್, ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಸೇರಿದಂತೆ ಸಂಘ ಪರಿವಾರದ ಹಲವು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು.

    ವಾಹನ ಸಂಚಾರಕ್ಕೆ ತಡೆ: ಈ ನಡುವೆಯ ಬಿ.ಸಿ.ರೋಡ್ ರಸ್ತೆಯಾಗಿ ವಾಹನ ಸಂಚಾರವನ್ನು ಪೊಲೀಸರು ತಡೆ ಹಿಡಿದಿದ್ದಾರೆ. ಮಂಗಳೂರಿನಿಂದ ಬಿ.ಸಿ.ರೋಡ್‍ನತ್ತ ತೆರಳುವ ವಾಹನಗಳನ್ನು ಫರಂಗಿಪೇಟೆಯಲ್ಲಿ ತಡೆ ಹಿಡಿಯಲಾಗಿದೆ. ಅದೇ ರೀತಿ ಕಲ್ಲಡ್ಕ ಕಡೆಯಿಂದ ಬರುವ ವಾಹನಗಳನ್ನು ಮೆಲ್ಕಾರ್‍ನಲ್ಲಿ ಪೊಲೀಸರು ತಡೆಹಿಡಿದಿದ್ದಾರೆ. ಈ ಮಾರ್ಗವಾಗಿ ಸಂಚರಿಸುವ ವಾಹನಗಳಿಗೆ ಪರ್ಯಾಯ ರಸ್ತೆಯ ಮೂಲಕ ಸಂಚರಿಸುವಂತೆ ಪೊಲೀಸರು ನಿರ್ದೇಶಿಸುತ್ತಿದ್ದಾರೆ.

    ಪೊಲೀಸರ ಈ ಕ್ರಮದಿಂದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿದೆ. ವಾಹನಗಳ ಭಾರೀ ಸಾಲುಗಳು ಹೆದ್ದಾರಿಯಲ್ಲಿ ಕಂಡುಬರುತ್ತಿದ್ದು, ಸಾರ್ವಜನಿಕರು ತೀವ್ರ ತೊಂದರೆಗೆ ಸಿಲುಕಿದ್ದಾರೆ.

    ಪ್ರತಿಭಟನೆ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿಪೊಲೀಸ್ ಬಂದೋಬಸ್ ಕೈಗೊಳ್ಳಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಮಂಗಳವಾರ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮೇಲೆ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ಮಾಡಿ, ಪರಾರಿಯಾಗಿದ್ದಾರೆ.

    ಹಲ್ಲೆಗೆ ಸಂಬಂಧಿಸಿದ ಆರೋಪಿಗಳ ಪತ್ತೆಗೆ ಆರು ತಂಡ ರಚಿಸಲಾಗಿದ್ದು, ಹಲವರನ್ನು ಈಗಾಗಲೇ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

     

  • ಶಾಲೆಗೆ ಹೋಗ್ತಿದ್ದ ವಿದ್ಯಾರ್ಥಿನಿಗೆ ನಿರಂತರ ಲೈಂಗಿಕ ಕಿರುಕುಳ ನೀಡ್ತಿದ್ದ ಆಟೋ ಚಾಲಕನಿಗೆ ಧರ್ಮದೇಟು

    ಶಾಲೆಗೆ ಹೋಗ್ತಿದ್ದ ವಿದ್ಯಾರ್ಥಿನಿಗೆ ನಿರಂತರ ಲೈಂಗಿಕ ಕಿರುಕುಳ ನೀಡ್ತಿದ್ದ ಆಟೋ ಚಾಲಕನಿಗೆ ಧರ್ಮದೇಟು

    ಕಲಬುರಗಿ: ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಗೆ ನಿರಂತರವಾಗಿ ದೈಹಿಕ ಹಾಗು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ಕಾಮುಕ ಆಟೋ ಚಾಲಕನೋರ್ವನಿಗೆ ಪೋಷಕರು ಧರ್ಮದೇಟು ನೀಡಿರುವ ಘಟನೆ ನಗರದ ಜೇವರ್ಗಿ ಕ್ರಾಸ್ ಬಳಿ ನಡೆದಿದೆ.

    ವಿದ್ಯಾರ್ಥಿನಿ ಶಾಲೆಗೆ ಹೋಗುವಾಗ ಆಟೋ ಚಾಲಕ ಅಶೋಕ್ ದೊಡ್ಡಮನಿ ಎಂಬಾತ ಬಾಲಕಿಯನ್ನು ನಿಲ್ಲಿಸಿ ಆಕೆಯ ಅಂಗಾಂಗಗಳನ್ನು ಮುಟ್ಟಿ ಲೈಂಗಿಕ ದೌರ್ಜನ್ಯ ನೀಡುತ್ತಿದ್ದನು. ಆಶೋಕನ ಕಿರುಕುಳ ತಾಳದ ವಿದ್ಯಾರ್ಥಿನಿ ಪೋಷಕರಿಗೆ ಮಾಹಿತಿ ತಿಳಿಸಿದ್ದಾಳೆ. ಮಾಹಿತಿ ತಿಳಿದ ಪೋಷಕರು ಬಾಲಕಿಯನ್ನು ಮುಂದೆ ಬಿಟ್ಟು ಫಾಲೋ ಮಾಡಿದ್ದಾರೆ. ಎಂದಿನಂತೆ ಕಾಮುಕ ಆಟೋ ಚಾಲಕ ಅಶೋಕ ದೊಡ್ಡಮನಿ ಬಾಲಕಿಯ ಅಂಗಾಗ ಮುಟ್ಟಿ ಪೀಡಿಸಲು ಮುಂದಾಗಿದ್ದಾನೆ. ಇದನ್ನು ಕಂಡ ಪೋಷಕರು ಕಿರುಚಿದಾಗ ಸ್ಥಳೀಯರು ಕಾಮುಕನನ್ನು ಹಿಡಿದು ಧರ್ಮದೇಟು ನೀಡಿದ್ದಾರೆ.

    ಮಾಹಿತಿ ಪಡೆದ ಪೊಲೀಸರು ಸ್ಥಳಕಾಗಮಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಬಾಲಕಿಯ ಭವಿಷ್ಯದ ದೃಷ್ಟಿಯಿಂದ ಪೋಷಕರು ಪ್ರಕರಣ ದಾಖಲಿಸಲು ಹಿಂಜರಿದಿದ್ದಾರೆ. ಸದ್ಯ ಆರೋಪಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿದ್ದು ಡಿವೈಎಸ್‍ಪಿ ಜಾಹ್ನವಿ ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ.

  • ಕೆಲಸಕ್ಕೆ ಲೇಟಾಗಿ ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸ್ರು, ಮೆಟ್ರೋ ಸಿಬ್ಬಂದಿ ಮಧ್ಯೆ ಜಟಾಪಟಿ: ವಿಡಿಯೋ ನೋಡಿ

    ಕೆಲಸಕ್ಕೆ ಲೇಟಾಗಿ ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸ್ರು, ಮೆಟ್ರೋ ಸಿಬ್ಬಂದಿ ಮಧ್ಯೆ ಜಟಾಪಟಿ: ವಿಡಿಯೋ ನೋಡಿ

    ಬೆಂಗಳೂರು: ನಗರದ ಸಿಟಿ ಸಿವಿಲ್ ಕೋರ್ಟ್ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ಸಿಬ್ಬಂದಿ ಮತ್ತು ಇಬ್ಬರು ಪೊಲಿಸರ ಮಧ್ಯೆ ಪರಸ್ಪರ ಹಲ್ಲೆ ನಡೆದ ಘಟನೆ ಇಂದು ಬೆಳಗ್ಗೆ ನಡೆದಿದೆ.

    ಮುಂಜಾನೆ 5 ಗಂಟೆಗೆ ಮೆಟ್ರೋ ಆರಂಭವಾಗುತ್ತಿದ್ದು, ಕೆಲವೊಂದು ಕಡೆಗಳಲ್ಲಿ ಪೊಲೀಸರು ಇರಬೇಕಾಗುತ್ತದೆ. ಆದ್ರೆ ಮೆಟ್ರೋ ನಿಲ್ದಾಣದಲ್ಲಿ ಬ್ಯಾಗ್ ಸ್ಕಾನರ್ ಮತ್ತು ಮೆಟಲ್ ಡಿಟೆಕ್ಟರ್ ಆಕ್ಟಿವ್ ಆಗಿರಲಿಲ್ಲ. ಹೀಗಾಗಿ ಪ್ರಯಾಣಿಕರು ತಪಾಸಣೆ ಮಾಡದೇ ನಿಲ್ದಾಣ ಪ್ರವೇಶ ಮಾಡಲಾಗುತ್ತಿತ್ತು. ಹೀಗಾಗಿ ಮೆಟ್ರೋ ಸಿಬ್ಬಂದಿ ಪೊಲೀಸರನ್ನು ಪ್ರಶ್ನಿಸಿದ್ದಾರೆ.

    ಕೆಲ ದಿನದಿಂದ ತಡವಾಗಿ ಬರುತ್ತಾ ಇದ್ದೀರಾ. ತುಂಬಾ ಸೆಕ್ಯುರಿಟಿ ಇರಬೇಕಾದ ಪ್ರದೇಶದಲ್ಲೇ ನೀವು ಹೀಗೆ ಮಾಡಬಾರದು. ಯಾಕಂದ್ರೆ ಏನಾದ್ರೂ ಹೆಚ್ಚು-ಕಮ್ಮಿಯಾದ್ರೆ ನಮ್ಮ ಮೇಲೆ ಬರುತ್ತೆ. ಹೀಗಾಗಿ ನಾಳೆಯಿಂದ ಬೇಗ ಬನ್ನಿ. ಇಲ್ಲವೆಂದಲ್ಲಿ ನಾವು ನಿಮ್ಮ ವಿರುದ್ಧ ದೂರು ನೀಡಬೇಕಾಗುತ್ತದೆ ಅಂತಾ ಎಚ್ಚರಿಕೆ ನೀಡಿದ್ದಾರೆ.

    ಈ ವೇಳೆ ಮೊದಲು ಪೊಲೀಸರೇ ಮೆಟ್ರೋ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಹಲ್ಲೆ ನಡೆಸಿದ ಮಾಹಿತಿ ಉಳಿದ ಮೆಟ್ರೋ ಸಿಬ್ಬಂದಿಗೆ ಸಿಕ್ಕಿದ ಕೂಡಲೇ ಎಲ್ಲರೂ ಒಂದಾಗಿ ಅಧಿಕಾರಿಗಳು ಬರೋ ಮೊದಲೇ ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಹೀಗಾಗಿ ಇಲ್ಲಿ ಇಬ್ಬರದ್ದೂ ತಪ್ಪು ಇರುವ ಬಗ್ಗೆ ಎದ್ದು ಕಾಣುತ್ತಿದೆ.

    ಒಟ್ಟಿನಲ್ಲಿ ಸಿಬ್ಬಂದಿ ಎಚ್ಚರಿಕೆಗೆ ಪೊಲೀಸರು ತಲೆಬಾಗುತ್ತಿದ್ದರೆ ಈ ಘಟನೆ ಆಗುತ್ತಿರಲಿಲ್ಲ. ಯಾಕಂದ್ರೆ ಮುಂದೆ ಮೆಟ್ರೋ ನಿಲ್ದಾಣದಲ್ಲಿ ಏನಾದ್ರು ಅನಾಹುತವಾದ್ರೆ ಅದು ಮೆಟ್ರೋ ಸಿಬ್ಬಂದಿ ಮೇಲೆ ಬೀಳುತ್ತದೆಯೇ ಹೊರತು ಪೊಲೀಸರ ಮೇಲಲ್ಲ ಮೆಟ್ರೋ ಸಿಬ್ಬಂದಿಗಳು ಹೇಳಿದ್ದಾರೆ.

    https://www.youtube.com/watch?v=TekmgZWK4LQ

  • 2ನೇ ಮದ್ವೆಯಾದ ಪತಿ, 2ನೇ ಪತ್ನಿಗೆ ಮಹಿಳೆಯಿಂದ ಗೂಸ

    2ನೇ ಮದ್ವೆಯಾದ ಪತಿ, 2ನೇ ಪತ್ನಿಗೆ ಮಹಿಳೆಯಿಂದ ಗೂಸ

    ತುಮಕೂರು: ಎರಡನೇ ಮದುವೆಯಾದ ಪತಿ ಹಾಗೂ ಎರಡನೇ ಪತ್ನಿಗೆ ಮೊದಲ ಪತ್ನಿ ಹಾಗೂ ಮನೆಯವರು ಗೂಸ ನೀಡಿದ ಘಟನೆ ತುಮಕೂರಿನ ಯಲ್ಲಾಪುರದಲ್ಲಿ ನಡೆದಿದೆ.

    ಪತ್ನಿಯಿಂದ ಥಳಿತಕ್ಕೊಳಗಾದ ಮಹೇಶ ತುಮಕೂರು ಬೆಸ್ಕಾಂ ನೌಕರ. ಮಹೇಶ್‍ಗೆ ಚಿತ್ರದುರ್ಗದ ಅಕ್ಷತಾ ಜೊತೆ 13 ವರ್ಷದ ಹಿಂದೆ ವಿವಾಹವಾಗಿತ್ತು. ಈಗ ಪತಿ ಮಹೇಶ ತನಗೆ ವಂಚಿಸಿ ಎರಡನೇ ಮದುವೆಯಾಗಿದ್ದಾನೆಂದು ಮೊದಲ ಪತ್ನಿ ಹೇಳಿದ್ದಾರೆ.

    ಮಹೇಶ ಎರಡನೆ ಪತ್ನಿ ಆಶಾಳೊಂದಿಗೆ ಯಲ್ಲಾಪುರದಲ್ಲಿ ವಾಸವಿದ್ದು, ಮನೆ ಮುಂದೆ ಮೊದಲ ಪತ್ನಿ ಅಕ್ಷತಾ ಹಾಗೂ ಮನೆಯವರು ಧರಣಿ ನಡೆಸಿದ್ದಾರೆ.

    ತುಮಕೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಕೆರೆಗೆ ಉರುಳಿ ಬಿದ್ದ ಖಾಸಗಿ ಬಸ್- 30ಕ್ಕೂ ಹೆಚ್ಚು ಜನರಿಗೆ ಗಾಯ

    ಕೆರೆಗೆ ಉರುಳಿ ಬಿದ್ದ ಖಾಸಗಿ ಬಸ್- 30ಕ್ಕೂ ಹೆಚ್ಚು ಜನರಿಗೆ ಗಾಯ

    ಹುಬ್ಬಳ್ಳಿ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್‍ವೊಂದು ಕೆರೆಗೆ ಉರುಳಿ ಬಿದ್ದ ಘಟನೆ ಹುಬ್ಬಳ್ಳಿ ಹೊರವಲಯದ ಪುನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ವರೂರ ಕ್ರಾಸ್ ಬಳಿ ನಡೆದಿದೆ.

    ವರೂರ ಕ್ರಾಸ್ ಬಳಿ ಇರುವ ಮಾಜಿ ಸಚಿವ ಬಸವರಾಜ ಹೊರಟ್ಟಿ ಅವರ ಫಾರ್ಮ್ ಹೌಸ್‍ನ ಕೆರೆಗೆ ಖಾಸಗಿ ಬಸ್‍ವೊಂದು ಉರುಳಿ ಬಿದ್ದಿದೆ. ಈ ಬಸ್ ಬೆಂಗಳೂರಿನಿಂದ ಮುಂಬೈಗೆ ಹೊರಟಿದ್ದ ವೇಳೆ ಈ ಘಟನೆ ಸಂಭವಿಸಿದೆ.

    ಘಟನೆಯಲ್ಲಿ ಬಸ್ ನಲ್ಲಿದ್ದ ಮೂವತ್ತಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.