Tag: police

  • ಹಣ ಕೊಟ್ರೆ ಜೈಲಲ್ಲೇ ಅರಮನೆ ಸೌಕರ್ಯ: ಆರೋಪ ಸುಳ್ಳು ಎಂದ ಡಿಜಿ, ತನಿಖೆ ಮಾಡ್ಲಿ ಎಂದ ರೂಪಾ

    ಹಣ ಕೊಟ್ರೆ ಜೈಲಲ್ಲೇ ಅರಮನೆ ಸೌಕರ್ಯ: ಆರೋಪ ಸುಳ್ಳು ಎಂದ ಡಿಜಿ, ತನಿಖೆ ಮಾಡ್ಲಿ ಎಂದ ರೂಪಾ

    ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ ಕೈದಿ ಶಶಿಕಲಾಗೆ ಯಾವುದೇ ರಾಜಾತಿಥ್ಯ ನೀಡಲಾಗಿಲ್ಲ. ಡಿಐಜಿ ರೂಪಾ ಅವರ ಆರೋಪಗಳು ಎಲ್ಲವೂ ಸುಳ್ಳು ಎಂದು ಮಹಿಳಾ ಕಾರಾಗೃಹ ಡಿಜಿ ಸತ್ಯನಾರಾಯಣ ರಾವ್ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರೂಪಾ ಅವರು ಬಂದು ಹೊಸದಾಗಿ ಏನು ಡಿಸ್ಕವರಿ ಮಾಡಿಲ್ಲ. ಅವರ ಆರೋಪಗಳು ಎಲ್ಲವೂ ನಿರಾಧಾರ. ವಿಶೇಷ ಚಿಕಿತ್ಸೆಯನ್ನು ಯಾರಿಗೂ ನೀಡಿಲ್ಲ ಎಂದು ಹೇಳಿದರು.

    ರೂಪಾ ಅವರಿಗೆ ಜೈಲಿನ ಬಗ್ಗೆ ಏನು ಗೊತ್ತಿದೆ. ಭೇಟಿ ನೀಡುವುದು, ಫೋಟೋ ಕ್ಲಿಕ್ಕಿಸಿ ಮಾಧ್ಯಮಗಳ ಜೊತೆ ಕೂರುವುದು ಅವರ ಕೆಲಸ. ಫೋಟೋ ಕ್ಲಿಕ್ಕಿಸಿ ಮಾಧ್ಯಮದ ಮುಂದೆ ಹೋಗಿದ್ದಕ್ಕೆ ನಾನು ನೋಟಿಸ್ ಕೊಟ್ಟಿದ್ದೆ. ಈ ಮೆಮೋ ಕೊಟ್ಟಿದ್ದಕ್ಕೆ ನನ್ನ ಮೇಲೆ ಆರೋಪ ಮಾಡುತ್ತಾರೆ. ನಾನು ಕಚೇರಿಯಲ್ಲಿ ಇರುವ ತನಕ ಟಪಾಲು ಬಂದಿಲ್ಲ. ನಾನು ಹೊರಗೆ ಹೋದ ಮೇಲೆ ಟಪಾಲು ಕೊಟ್ಟಿದ್ದಾರೆ. ಮಾಧ್ಯಮವನ್ನು ಕಂಡರೆ ರೂಪಾ ಅವರಿಗೆ ಇಷ್ಟ ಎಂದು ಪ್ರತಿಕ್ರಿಯಿಸಿದ್ದಾರೆ.

    ಡಿಜಿ ಸತ್ಯನಾರಾಯಣ ಅವರ ಹೇಳಿಕೆಗಳಿಗೆ ಡಿಐಜಿ ರೂಪಾ ಅವರು ಪ್ರತಿಕ್ರಿಯಿಸಿ, ನಾನು ನಾಲ್ಕು ಪುಟದ ವರದಿ ನೀಡಿದ್ದೇನೆ. ನಾನು ಸುಮ್ಮನೆ ಇದ್ದರೆ ಅದು ತಪ್ಪಾಗುತ್ತದೆ. ನಾನು ನೀಡಿದ ವರದಿ ಸರಿ ಇದೆಯೋ ಇಲ್ಲವೋ ಎನ್ನುವುದಕ್ಕೆ ತನಿಖೆಯಾಗಲಿ. ಇದರಲ್ಲಿ ನನಗೆ ಏನು ವೈಯಕ್ತಿಕ ಲಾಭ ಇಲ್ಲ ಎಂದು ಅವರು ಹೇಳಿದ್ದಾರೆ.

    ಏನಿದು ವಿವಾದ?
    ಅಕ್ರಮ ಆಸ್ತಿ ಗಳಿಕೆ ಅರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಜಯಲಲಿತಾ ಆಪ್ತೆ ಶಶಿಕಲಾಗೆ ಪರಪ್ಪನ ಅಗ್ರಹಾರದಲ್ಲಿ ರಾಯಲ್ ಟ್ರೀಟ್‍ಮೆಂಟ್ ನೀಡಲಾಗುತ್ತಿದ್ದು, ಇದಕ್ಕಾಗಿ ಕಾರಾಗೃಹ ಮಹಾ ನಿರ್ದೇಶಕ ಸತ್ಯನಾರಾಯಣ್ ಅವರಿಗೆ 2 ಕೋಟಿ ಲಂಚ ನೀಡಿರುವ ಆರೋಪ ಕೇಳಿ ಬಂದಿದೆ.

    ಲಂಚ ಪಡೆದು ಶಶಿಕಲಾಗೆ ಜೈಲಿನಲ್ಲಿ ರಾಯಲ್ ಟ್ರೀಟ್‍ಮೆಂಟ್ ನೀಡುವುದರ ಜೊತೆಗೆ ಪ್ರತ್ಯೇಕ ಅಡುಗೆ ಮನೆಯನ್ನು ನಿರ್ಮಿಸಿಕೊಡಲಾಗಿದೆ ಎಂದು ಜೈಲು ಉಪ ನಿರೀಕ್ಷಕಿ ಡಿ. ರೂಪ ಅವರು ನೀಡಿರುವ ವರದಿಯಲ್ಲಿ ಉಲ್ಲೇಖವಾಗಿದೆ. ಇಷ್ಟೇ ಅಲ್ಲದೆ ಛಾಪಾಕಾಗದ ಹಗರಣದ ಅರೋಪಿ ಅಬ್ದುಲ್ ಕರೀಂ ಲಾಲ್ ತೆಲಗಿಗೆ ಸೇವೆ ಮಾಡಲು ಕೈಗೊಬ್ಬ, ಕಾಲಿಗೊಬ್ಬ ಕೈದಿಗಳನ್ನು ಇರಿಸಲಾಗಿದೆ. ಇದರ ಜೊತೆಗೆ ಜೈಲಿನಲ್ಲಿರುವ ಕೈದಿಗಳಿಗೆ ಗಾಂಜಾ ಸೇರಿದಂತೆ ಎಲ್ಲಾ ತರಹದ ಮಾದಕ ವಸ್ತುಗಳು ಸಪ್ಲೈ ಆಗುತ್ತಿದ್ದು ಜೈಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ 18 ಕೈದಿಗಳನ್ನು ಡ್ರಗ್ ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟೀವ್ ರಿಪೋರ್ಟ್ ಬಂದಿದೆ.

    ಈ ವೇಳೆ ವಿಚಾರಣಾಧೀನ ಕೈದಿಯೊರ್ವ ನರ್ಸ್ ಜೊತೆ ಅನುಚಿತ ವರ್ತನೆ ನಡೆಸಿದ್ದಾನೆ ಎನ್ನಲಾಗಿದೆ. ಜೈಲು ಉಪ ನಿರೀಕ್ಷಕಿ ರೂಪರವರು ಇದೇ ತಿಂಗಳ 10ರಂದು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ ಬಳಿಕ ಹಿರಿಯ ಅಧಿಕಾರಿಗಳಿಗೆ ನೀಡಿರುವ ವರದಿಯಿಂದ ಈ ಎಲ್ಲಾ ಅಕ್ರಮಗಳು ಬಹಿರಂಗವಾಗಿವೆ.

    ಹೀಗಾಗಿ ಇಬ್ಬರು ಅಧಿಕಾರಿಗಳು ಮಾಧ್ಯಮಗಳಿಗೆ ಏನು ಹೇಳಿದ್ದಾರೆ ಎನ್ನುವುದನ್ನು ತಿಳಿಸಲು ಇಲ್ಲಿ ವಿಡಿಯೋ ನೀಡಲಾಗಿದೆ.

     

  • ಕೋಳಿ ಜಗಳಕ್ಕೆ ಮೈಸೂರಿನಲ್ಲಿ ಜೆಡಿಎಸ್ ಮುಖಂಡ ಬಲಿ: ಕೈ ಕಾರ್ಯಕರ್ತರು ಪರಾರಿ

    ಕೋಳಿ ಜಗಳಕ್ಕೆ ಮೈಸೂರಿನಲ್ಲಿ ಜೆಡಿಎಸ್ ಮುಖಂಡ ಬಲಿ: ಕೈ ಕಾರ್ಯಕರ್ತರು ಪರಾರಿ

    ಮೈಸೂರು: ಕೋಳಿ ಜಗಳಕ್ಕೆ ಕಾಂಗ್ರೆಸ್‍ನ ಇಬ್ಬರು ಕಾರ್ಯಕರ್ತರು ಜೆಡಿಎಸ್ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಗುರುವಾರ ಹಲ್ಲೆಗೊಳಗಾದ ವ್ಯಕ್ತಿ ಮೃತಪಟ್ಟಿದ್ದಾರೆ.

    ಮೈಸೂರು ತಾಲೂಕು ಬೋರೆ ಆನಂದೂರು ಗ್ರಾಮದ ಮಂಜುನಾಥ್ ಇಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಹಲ್ಲೆ ಮಾಡಿದ ಬಳಿಕ ಆರೋಪಿಗಳಾದ ಪುನೀತ್ ಮತ್ತು ನಾರಾಯಣ್ ನಾಪತ್ತೆಯಾಗಿದ್ದಾರೆ.

     

     

     

     

    ಏನಿದು ಘಟನೆ?
    ಮಂಜುನಾಥ್ ಸ್ಥಳೀಯ ಜೆಡಿಎಸ್ ಮುಖಂಡರಾಗಿದ್ದು, ಪುನೀತ್ ಮತ್ತು ನಾರಾಯಣ್ ಕಾಂಗ್ರೆಸ್ ಕಾರ್ಯಕರ್ತರಾಗಿದ್ದಾರೆ. ಶುಕ್ರವಾರ ಪುನೀತ್ ಮತ್ತು ನಾರಾಯಣ್ ಗ್ರಾಮದಲ್ಲಿ ಕೋಳಿಯೊಂದರ ಮೇಲೆ ಬೈಕ್ ಮೇಲೆ ಹರಿಸಿದ್ದರು. ಈ ವೇಳೆ ಮಂಜುನಾಥ್ ಇಬ್ಬರಿಂದಲೂ ದಂಡ ಕಟ್ಟಿಸಿಕೊಂಡಿದ್ರು.

     

    ಈ ಹಿಂದೆ ಇವರ ನಡುವೆ ಜಿಲ್ಲಾ ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲಿ ವೈಷಮ್ಯದ ಹೊಗೆಯಾಡುತ್ತಿತ್ತು. ದಂಡ ಕಟ್ಟಿದ ಬಳಿಕ ಆಕ್ರೋಶಗೊಂಡ ಪುನೀತ್ ಮತ್ತು ನಾರಾಯಣ್ ಮಾರಕಾಸ್ತ್ರಗಳಿಂದ ಮಂಜುನಾಥ್ ಮೇಲೆ ಹಲ್ಲೆ ನಡೆಸಿದ್ದಾರೆ. ತೀವ್ರ ಗಾಯಗೊಂಡಿದ್ದ ಮಂಜುನಾಥ್ ರನ್ನು ಮೈಸೂರಿನ ಬೃಂದಾವನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಮಂಜುನಾಥ್ ಸಾವನ್ನಪ್ಪಿದ್ದಾರೆ.

    ಈ ಸಂಬಂಧ ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಾದ ಪುನೀತ್ ಮತ್ತು ನಾರಾಯಣ್ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

     

  • ಗ್ಯಾಸ್ ಕಟರ್‍ನಿಂದ ಬ್ಯಾಂಕ್ ಕಿಟಕಿ ಸರಳುಗಳನ್ನ ಕಟ್ ಮಾಡಿ ದರೋಡೆಗೆ ಯತ್ನ

    ಗ್ಯಾಸ್ ಕಟರ್‍ನಿಂದ ಬ್ಯಾಂಕ್ ಕಿಟಕಿ ಸರಳುಗಳನ್ನ ಕಟ್ ಮಾಡಿ ದರೋಡೆಗೆ ಯತ್ನ

    ಬೆಂಗಳೂರು: ಬ್ಯಾಂಕ್ ಕಿಟಕಿಯ ಸರಳುಗಳನ್ನ ಗ್ಯಾಸ್ ಕಟರ್ ಮೂಲಕ ಕಟ್ ಮಾಡಿ ಕಳ್ಳರು ದರೋಡೆಗೆ ಯತ್ನಿಸಿದ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಟಿ.ಬೇಗೂರು ಗ್ರಾಮದಲ್ಲಿ ನಡೆದಿದೆ.

    ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕಿನಲ್ಲಿ ತಡರಾತ್ರಿ ಈ ಕೃತ್ಯ ನಡೆದಿದೆ. ಟಿ.ಬೇಗೂರು ಪೊಲೀಸ್ ಚೌಕಿ ಪಕ್ಕದಲ್ಲಿರುವ ಈ ಬ್ಯಾಂಕ್ ನಲ್ಲಿ ಸುಮಾರು ಐದಾರು ಮಂದಿ ಕಳ್ಳರು ಬಂದು ಕಳ್ಳತನಕ್ಕೆ ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ.

    ಕಳ್ಳರು ಬ್ಯಾಂಕ್ ನಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ನಾಶಮಾಡಿ ಹಣವಿದ್ದ ಸ್ಟ್ರಾಂಗ್ ರೂಮ್ ಕಟ್ ಮಾಡಲು ಸಾಧ್ಯವಾಗದ ಕಾರಣ ಹಣ ದೋಚಲು ಆಗಲಿಲ್ಲ. ಸಿನಿಮೀಯ ರೀತಿಯಲ್ಲಿ ರೂಪರೇಶಗಳನ್ನ ಸಿದ್ದಪಡಿಸಸಿ ಬ್ಯಾಂಕ್ ಹಿಂಬದಿಯ ಕಿಟಕಿಯನ್ನ ಚೌಕಾರವಾಗಿ ಕಟ್ ಮಾಡಿ ದರೋಡೆಗೆ ಸಂಚು ಮಾಡಿದ್ದಾರೆ.

    ಈ ಕೃತ್ಯಕ್ಕೆ ಬಳಸಿದ್ದ ಗ್ಯಾಸ್ ಕಟರ್, ಇನ್ನಿತರ ಸಲಕರಣೆಗಳನ್ನ ಕಳ್ಳರು ಹೊಸದಾಗಿ ಖರೀದಿಸಿರುವ ಬಗ್ಗೆ ಪೊಲೀಸರು ಸಂಶಯವನ್ನು ವ್ಯಕ್ತಪಡಿಸಿದ್ದಾರೆ. ಕಳ್ಳರು ಎಲ್ಲಾ ಸಲಕರಣೆಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

    ನೆಲಮಂಗಲ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಸ್ನೇಹಿತನೊಂದಿಗೆ ಲೈಂಗಿಕವಾಗಿ ಸಹಕರಿಸುವಂತೆ ಹೇಳಿದ ಪ್ರಿಯಕರನ ವಿರುದ್ಧ ದೂರು

    ಸ್ನೇಹಿತನೊಂದಿಗೆ ಲೈಂಗಿಕವಾಗಿ ಸಹಕರಿಸುವಂತೆ ಹೇಳಿದ ಪ್ರಿಯಕರನ ವಿರುದ್ಧ ದೂರು

    ಚಿತ್ರದುರ್ಗ: ತನ್ನ ಗೆಳೆಯನೊಂದಿಗೆ ಲೈಂಗಿಕವಾಗಿ ಸಹಕರಿಸುವಂತೆ ಪೀಡಿಸುತ್ತಿದ್ದ ಪ್ರಿಯಕರನ ವಿರುದ್ಧ ನೊಂದ ಯುವತಿ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ

    ರಶ್ಮಿ (ಹೆಸರು ಬದಲಾಯಿಸಿದೆ) ಪ್ರಿಯಕರನ ವಿರುದ್ಧ ದೂರು ದಾಖಲಿಸಿದ ಯುವತಿ. ಪ್ರಕರಣ ದಾಖಲಾಗುತ್ತಿದ್ದಂತೆ ಪ್ರಿಯಕರ ಮತ್ತು ಆತನ ಸ್ನೇಹಿತ ನಾಪತ್ತೆಯಾಗಿದ್ದಾರೆ.

    ಇದನ್ನೂ ಓದಿ: ಹಾಸಿಗೆಯಲ್ಲಿ ಗೆಳೆಯ ಇದ್ದಿದ್ದನ್ನು ಗಂಡ ನೋಡಿದ್ದಕ್ಕೆ ಅತ್ಯಾಚಾರ ಆರೋಪ ಹೊರಿಸಿದ್ಲು!

    ಯುವತಿ ಆರೋಪ ಏನು?
    ಹೊಳಲ್ಕೆರೆ ತಾಲೂಕಿನ ಕಾಲಗೆರೆ ಗ್ರಾಮದ ಮಂಜುನಾಥ್ ನನ್ನನ್ನು ಪ್ರೀತಿಸುತ್ತಿದ್ದ. ಆದರೆ ನನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿ, ಚಿತ್ರದುರ್ಗ ತಾಲೂಕಿನ ಜಾನಕೊಂಡ ಗ್ರಾಮದ ಗೋಪಾಲ ಸ್ವಾಮಿ ದೇವಾಲಯದ ಬಳಿ ಅತ್ಯಾಚಾರ ನಡೆಸಿದ್ದ. ಇಷ್ಟಕ್ಕೆ ಸುಮ್ಮನಾಗದ ಮಂಜುನಾಥ್ ತನ್ನ ಯುವತಿಗೆ ಗೆಳೆಯ ನಾಗರಾಜ್‍ನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡುಗುವಂತೆ ಒತ್ತಾಯಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.

    ಇದನ್ನೂ ಓದಿ: ನಡುರಸ್ತೆಯಲ್ಲಿ ಮಹಿಳಾ ಟೆಕ್ಕಿಗೆ ಕಿಸ್ ಕೊಟ್ಟ ಕಾಮುಕರು

    ಪ್ರಕರಣ ದಾಖಲಾಗುತ್ತಿದ್ದಂತೆ ಮಂಜುನಾಥ್ ಮತ್ತು ನಾಗರಾಜ್ ಪರಾರಿಯಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

    ಇದನ್ನೂ ಓದಿ: ಲಿವಿಂಗ್ ಟುಗೆದರ್ ಬಳಿಕ ಕೈಕೊಟ್ಟ ಪ್ರಿಯಕರ – ನಟಿಗೆ ದೋಖಾ?

     

  • ಹಾಸ್ಟೆಲ್‍ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ

    ಹಾಸ್ಟೆಲ್‍ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ

    ಯಾದಗಿರಿ: ವಿದ್ಯಾರ್ಥಿನಿಯೋರ್ವಳು ವಸತಿ ನಿಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ.

    ಇಮಾಂಬಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ನಗರದ ಮಲ್ಲಿಕಾ ಡಿಗ್ರಿ ಕಾಲೇಜಿನಲ್ಲಿ ಬಿಕಾಂ ಪ್ರಥಮ ವರ್ಷದ ವ್ಯಾಸಂಗ ಮಡುತ್ತಿದ್ದು, ಮಾತಾ ಮಾಣಿಕೇಶ್ವರಿ ಕಾಲೊನಿಯಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಇಮಾಂಬಿ ವಾಸವಾಗಿದ್ದಳು.

    ಮೂಲತಃ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ನಾಚಾವಾರ ಗ್ರಾಮದ ನಿವಾಸಿಯಾಗಿರೋ ಇಮಾಂಬಿ ಯಾದಗಿರಿ ನಗರಕ್ಕೆ ವಿದ್ಯಾಭ್ಯಾಸಕ್ಕಾಗಿ ಆಗಮಿಸಿದ್ದಳು. ವಿದ್ಯಾರ್ಥಿನಿಯ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ನಗರ ಠಾಣಾ ಮತ್ತು ಮಹಿಳಾ ಪೊಲೀಸ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ಸಂಬಂಧ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಸ್ಪಾ, ಯುನಿಸೆಕ್ಸ್ ಸಲೂನ್ ಮೇಲೆ ಮಂಗ್ಳೂರು ಮೇಯರ್ ದಾಳಿ- ಅರೆಬೆತ್ತಲಾಗಿ ಓಟಕಿತ್ತ ಗ್ರಾಹಕರು

    ಸ್ಪಾ, ಯುನಿಸೆಕ್ಸ್ ಸಲೂನ್ ಮೇಲೆ ಮಂಗ್ಳೂರು ಮೇಯರ್ ದಾಳಿ- ಅರೆಬೆತ್ತಲಾಗಿ ಓಟಕಿತ್ತ ಗ್ರಾಹಕರು

    ಮಂಗಳೂರು: ಇಲ್ಲಿನ ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್ ತಮ್ಮ ಖದರ್ ತೋರಿಸಿದ್ದಾರೆ. ಸ್ಪಾ, ಯುನಿ ಸೆಕ್ಸ್ ಸಲೂನ್, ಆರ್ಯುವೇದಿಕ್ ಸೆಂಟರ್, ಸ್ಕಿಲ್ ಗೇಮ್ ಸೆಂಟರ್‍ಗಳ ಅಸಲಿ ಬಣ್ಣ ಬಯಲು ಮಾಡಿದ್ದಾರೆ. ಗಂಡಸರಿಗೆ ಹೆಣ್ಮಕ್ಕಳಿಂದ ಮಸಾಜ್ ಮಾಡಿಸುವ ದಂಧೆಯನ್ನು ಬಯಲು ಮಾಡಿದ್ದಾರೆ.

    ಮೇಯರ್ ದಾಳಿ ಮಾಡಿದ್ದಾರೆ ಅನ್ನೋದು ಗೊತ್ತಾಗ್ತಿದ್ದಂತೆ ಅರೆಬೆತ್ತಲಾಗಿದ್ದ ಕೆಲ ಗ್ರಾಹಕರು ತಮ್ಮ ಕೈಗೆ ಸಿಕ್ಕ ಬಟ್ಟೆಯಿಂದ ಮಾನ ಮುಚ್ಚಿಕೊಂಡು ಓಟ ಕಿತ್ತಿದ್ದಾರೆ.

    ಕಳೆದ ವಾರವಷ್ಟೇ ಬಡ ಮಹಿಳೆಯೊಬ್ಬರ ಸಂಕಷ್ಟಕ್ಕೆ ಸ್ಪಂದಿಸಿ, ಸ್ಕಿಲ್ ಗೇಮ್ ಅಡ್ಡೆ ಮೇಲೆ ದಾಳಿ ನಡೆಸಿ ಬಂದ್ ಮಾಡಿಸಿದ್ದ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್ ಇದೀಗ ಮತ್ತೆ ಮುಂದುವರೆದು ನಗರದಲ್ಲಿ ನಡೆಯುತ್ತಿರೋ ಅಡ್ಡ ಕಸುಬಿದಾರರ ಬೆವರಿಳಿಸಿದ್ದಾರೆ. ಮಹಾನಗರದ ಜ್ಯೋತಿ, ಬಿಜೈ ಹಾಗೂ ಬಲ್ಮಠದಲ್ಲಿ ನಡೆಯುತ್ತಿರೋ ನಾಲ್ಕು ಮಸಾಜ್ ಪಾರ್ಲರ್ ಮೇಲೆ ದಾಳಿ ನಡೆಸಿ ಬೀಗ ಜಡೆದಿದ್ದಾರೆ. ಅದ್ಯಾವುದೋ ಊರಿಂದ ಬಂದು ತೀಟೆ ತೀರಿಸಿಕೊಳ್ಳೋದಕ್ಕಾಗಿ ಬೆತ್ತಲಾಗೋ ಮಂದಿಯ ಕಚ್ಡಾತನ ಮೇಯರ್ ದಾಳಿ ವೇಳೆ ಬಟಾಬಯಲಾಗಿದೆ.

    ಮಂಗಳೂರು ಹುಡುಗಿಯರನ್ನು ನಾನು ಇರೋ ತನಕ ದಂಧೆಗೆ ಇಳಿಸಲಾರೆ. ಇದು ಮುಂಬೈಯಲ್ಲ ಮಂಗಳೂರು ಅಂತಾ ಮೇಯರ್ ಕವಿತಾ ಸನಿಲ್ ಅಕ್ರಮ ದಂಧೆಕೋರರ ವಿರುದ್ಧ ಗುಡುಗಿದ್ದಾರೆ. ಅಕ್ರಮಗಳಿಗೆ ಪಾಲಿಕೆ ವ್ಯಾಪ್ತಿಯಲ್ಲಿ ಜಾಗಕೊಡಲ್ಲ ಅಂತ ಹೇಳಿದ್ದಾರೆ.

    ಫಳ್ನೀರ್ ರಸ್ತೆಯಲ್ಲಿರೋ ಮೆಂಬರ್ಸ್ ಲಾಂಜ್ ಅನ್ನೋ ಸ್ಕಿಲ್ ಗೇಮ್‍ವೊಂದಕ್ಕೆ ದಾಳಿ ಮಾಡಿದಾಗ ಒಂದೊಮ್ಮೆ ಸ್ಕಿಲ್‍ಗೇಮ್ ಮಾಲಕಿ ಮೇಯರ್ ವಿರುದ್ಧ ಅಬ್ಬರಿಸೋದಕ್ಕೆ ಶುರುವಿಟ್ಟಿದ್ದಾಳೆ. ನಾವು ಪೊಲೀಸರಿಗೆ ಮಾಮೂಲು ಕೊಡ್ತೀವಿ ಅಂತ ಆರೊಪ ಬೇರೆ ಮಾಡ್ತಾಳೆ. ಇಷ್ಟೆಲ್ಲ ಕೇಳ್ತದ್ದಂತೆಯೇ ಮೇಯರ್ ನೇರ ಪೊಲೀಸ್ ಕಮೀಷನರ್ ರವರಿಗೆ ಕರೆ ಮಾಡಿ ವಿಷಯ ಮುಟ್ಟಿಸುತ್ತಾರೆ. ಡಿಸಿಪಿ ಶಾಂತರಾಜು ನೇತೃತ್ವದಲ್ಲಿ ಪೊಲೀಸ್ರು ಬಂದ್ರು ನಾನು ಬೀಗ ಹಾಕಲ್ಲ ಅಂತ ಸ್ಕಿಲ್ ಗೇಮ್ ಮಾಲಕಿ ಹಠಹಿಡಿದಿದ್ದಾಳೆ. ತದನಂತರ ಮಹಿಳಾ ಪೊಲೀಸರನ್ನು ಕರೆಸಿ ಆಕೆಯನ್ನು ವಶಪಡಿಸಿಕೊಂಡ ಘಟನೆಯೂ ನಡೆಯಿತು. ಈ ಹಿಂದೆ ಇದೇ ಸ್ಕಿಲ್ ಗೇಮ್ ಅಡ್ಡೆಗೆ ದಾಳಿ ನಡೆಸಿದಾಗ ಪೊಲೀಸ್ ದಾಳಿ ವಿರುದ್ಧ ಹೈಕೋರ್ಟ್ ನೀಡಿರೋ ತಡೆಯಾಜ್ಞೆಯ ಅಸ್ತ್ರ ಪ್ರಯೋಗಿಸಿದ್ದಳು. ಆ ಕಾರಣಕ್ಕಾಗಿ ನನಗೆ ನಿಮ್ ಟ್ರೇಡ್ ಲೈಸೆನ್ಸ್ ಅಗತ್ಯನೇ ಇಲ್ಲ ಅಂತ ಪಾಲಿಕೆ ಅಧಿಕಾರಿಗಳಿಗೆ ಸ್ಕಿಲ್ ಗೇಮ್ ಮಾಲಕಿ ಸುಜಿತಾ ರೈ ಸವಾಲು ಹಾಕಿದ್ಲು.

    ಮೇಯರ್ ರೈಡ್ ವೇಳೆ ಮುಕ್ಕಾಲು ನಗ್ನ ಸ್ಥಿತಿಯಲ್ಲಿದ್ದವರು ತುಂಡು ಬಟ್ಟೆ ಸಿಕ್ರೆ ಸಾಕು ಅಂತ ಎದ್ದು ಬಿದ್ದು ಓಡಿದ್ರು. ಚಡ್ಡಿಯಲ್ಲಿ ಮಲಗಿದ್ದವರಿಗೆ, ಎಣ್ಣೆ ಹಾಕಿ ಮಸಾಜ್ ಮಾಡೋ ಬಿಸ್ನೆಸ್ ಮಾಡೋರಿಗೆ ಸರಿಯಾಗಿ ಕವಿತಾ ಮೇಡಮ್ ಬೆವರು ಇಳಿಸಿದ್ರು.

    ಮಂಗಳೂರು ಮಹಾನಗರದೊಳಗೆ ಬೇರುಬಿಟ್ಟಿರೋ ಮಸಾಜ್ ಪಾರ್ಲರ್, ಸ್ಕಿಲ್‍ಗೇಮ್ ಅಡ್ಡೆಗಳಿಗೆ ಅಂಕುಶ ಹಾಕಲು ಲೇಡಿ ಮೇಯರ್ ಟೊಂಕ ಕಟ್ಟಿ ನಿಂತಿದ್ದಾರೆ. ಪೊಲೀಸರು ಮಾಡ್ಬೇಕಾಗಿದ್ದ ಕೆಲಸವನ್ನು ಸಾರ್ವಜನಿಕರ ಮಾಹಿತಿ ಆಧರಿಸಿ ತಾನೇ ಪಾಲಿಕೆ ಅಧಿಕಾರಿಗಳ ಜೊತೆಗೂಡಿ ಮಡೋದಕ್ಕೆ ಶುರುವಿಟ್ಟಿದ್ದಾರೆ. ಈ ಮೂಲಕ ಮೆಯರ್ ಕವಿತಾ ಸನಿಲ್ ಕಡಲತಡಿಯಲ್ಲಿದ್ದು ಕಚ್ಡಾ ದಂಧೆಗೆ ಇಳಿಯೋ ಮಂದಿಗೆ ಸಿಂಹಸ್ವಪ್ನರಾಗ ತೊಡಗಿರುವುದು ಸುಳ್ಳಲ್ಲ.

  • ಮುಂಬೈ ರೈಲಿನಲ್ಲಿ ಬೆಂಗ್ಳೂರು ಮೂಲದ ಯುವತಿ ಮುಂದೆ ಹಸ್ತಮೈಥುನ!

    ಮುಂಬೈ ರೈಲಿನಲ್ಲಿ ಬೆಂಗ್ಳೂರು ಮೂಲದ ಯುವತಿ ಮುಂದೆ ಹಸ್ತಮೈಥುನ!

    ಮುಂಬೈ: ಸ್ಥಳೀಯ ರೈಲಿನಲ್ಲಿ 22 ವರ್ಷದ ಯುವತಿಯೊಬ್ಬಳ ಎದುರು ವ್ಯಕ್ತಿಯೊಬ್ಬ ಹಸ್ತ ಮೈಥುನ ಮಾಡಿಕೊಂಡಿರುವ ಘಟನೆ ಜೂನ್ 15 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಈ ಹೇಯ ಕೃತ್ಯದ ಕುರಿತು ಬೆಂಗಳೂರು ಮೂಲದ ಯುವತಿ ಕೂಡಲೇ ರೈಲ್ವೆ ಹೆಲ್ಪ್‍ಲೈನ್‍ಗೆ ಕಾಲ್ ಮಾಡಿ ತಿಳಿಸಿದ್ದಾರೆ. ಆದರೆ ಅಲ್ಲಿಯ ಅಧಿಕಾರಿಗಳು ಯಾವುದೇ ಗಂಭೀರತೆ ಇಲ್ಲದೆ ಹಾಸ್ಯದದ ಮೂಲಕ ನಕ್ಕು ಫೋನ್ ಕರೆ ಸ್ಥಗಿತಗೊಳಿಸಿದ್ದಾರೆ.

    ಈ ಘಟನೆಯ ಕುರಿತು ಫೇಸ್‍ಬಕ್‍ನಲ್ಲಿ ಸವಿವರವಾಗಿ ಬರೆದುಕೊಂಡಿದ್ದು ಪೋಸ್ಟ್ ವೈರಲ್ ಆಗಿದೆ. ಇದೀಗ ವಿಚಾರ ತಿಳಿದ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಉನ್ನತ ಮಟ್ಟದ ತನಿಖೆ ನಡೆಸುತ್ತಿದ್ದಾರೆ.

    ರೈಲ್ವೆ ಸಚಿವ ಸುರೇಶ್ ಪ್ರಭು ಅವರು ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದು ಆರೋಪಿಯನ್ನು ಶೀಘ್ರ ವಶಕ್ಕೆ ಪಡೆಯಲು ಸೂಚಿಸಿದ್ದಾರೆ.

    ದಾದರ್ ಮೂಲದ ರೈಲಿನಲ್ಲಿ ಮಧ್ಯಾಹ್ನ ಈ ಘಟನೆ ನಡೆದಿದ್ದು, ಅಂಗವಿಕಲರ ಕಂಪಾರ್ಟ್‍ಮೆಂಟ್ ನಲ್ಲಿದ್ದ ವ್ಯಕ್ತಿ ಮಹಿಳೆಯರ ಕಂಪಾರ್ಟ್ ಮೆಂಟ್ ಬಳಿ ಬಂದು ಹಸ್ತಮೈಥುನ ಮಾಡಿರುವುದಾಗಿ ಯುವತಿ ವಿವರವಾಗಿ ಫೇಸ್‍ಬುಕ್ ನಲ್ಲಿ ಬರೆದುಕೊಂಡಿದ್ದಾಳೆ. ಮಾತ್ರವಲ್ಲದೆ ಹೆಲ್ಪ್ ಲೈನ್ ನಂಬರ್ ಗಳು ನಿಜವಾಗಿಯೂ ಉಪಯೋಗಕ್ಕೆ ಬರುತ್ತಾವೋ ಎಂದು ಪ್ರಶ್ನಿಸಿದ್ದಾಳೆ.

    ಇದನ್ನೂ ಓದಿ: ಬೆಂಗಳೂರಿನಿಂದ ಹೊರಟ ವಿಮಾನದಲ್ಲಿ ಮಹಿಳೆಯನ್ನು ಟಚ್ ಮಾಡಿ ಹಸ್ತಮೈಥುನ ಮಾಡ್ತಿದ್ದ ಉದ್ಯಮಿ ಅರೆಸ್ಟ್!

  • ಖಾಕಿ ತೊಟ್ಟರೂ ಮಕ್ಕಳಿಗೆ ಪಾಠ- ಸಾಮಾಜಿಕ ಅನಿಷ್ಠಗಳ ಬಗ್ಗೆ ಜಾಗೃತಿ

    ಖಾಕಿ ತೊಟ್ಟರೂ ಮಕ್ಕಳಿಗೆ ಪಾಠ- ಸಾಮಾಜಿಕ ಅನಿಷ್ಠಗಳ ಬಗ್ಗೆ ಜಾಗೃತಿ

    ಹಾವೇರಿ: ಇವತ್ತಿನ ದಿನಗಳಲ್ಲಿ ಮಕ್ಕಳಿಗೆ ಕಾನೂನು ಸುವ್ಯವಸ್ಥೆ, ಮೂಢನಂಬಿಕೆಗಳ ಬಗ್ಗೆ ತಿಳಿ ಹೇಳುವವರೇ ಕಡಿಮೆ. ಆದ್ರೆ ಇವತ್ತಿನ ನಮ್ಮ ಪಬ್ಲಿಕ್ ಹೀರೋ ಪೊಲೀಸ್ ಪೇದೆ ಅಶೋಕ್ ಎಂಬವರು ತಮ್ಮ ಬಿಡುವಿನ ವೇಳೆಯಲ್ಲಿ ಮಕ್ಕಳಿಗೆ ಕಾನೂನು ಜಾಗೃತಿ ಪಾಠ ಮಾಡುತ್ತಿದ್ದಾರೆ.

    ಹೌದು, ಅಶೋಕ್ ಕೊಂಡ್ಲಿ ಹಾವೇರಿಯ ಹಾನಗಲ್ ಪೊಲೀಸ್ ಠಾಣೆಯಲ್ಲಿ ಹವಾಲ್ದಾರರಾಗಿದ್ದಾರೆ. ಪೊಲೀಸ್ ಡ್ರೆಸ್‍ನಲ್ಲಿ ಇರೋವ್ರು ಹೀಗ್ಯಾಕೆ ಪಾಠ ಮಾಡ್ತಿದ್ದಾರೆ ಅಂತ ಅಚ್ಚರಿ ಪಡಬೇಡಿ. ಯಾಕಂದ್ರೆ ಇದು ಅವರ ಸಾಮಾಜಿಕ ಕಾಳಜಿಯಾಗಿದೆ.

    ಮೂಲತಃ ಧಾರವಾಡದ ಅಮ್ಮಿನಭಾವಿಯವರಾದ ಅಶೋಕ್ 1994ರಲ್ಲಿ ಪೊಲೀಸ್ ಪೇದೆ ಆಗಿ ಸೇರಿ 23 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಖಾಕಿ ತೊಟ್ಟಿದ್ದರೂ ಸಾಮಾಜಿಕ ಸೇವೆಯೆಡೆಗಿನ ತುಡಿತ ನಿಂತಿಲ್ಲ. ತಾವು ಸೇವೆ ಸಲ್ಲಿಸಿರೋ ಕಡೆಯಲ್ಲೆಲ್ಲಾ ಬಿಡುವಿನ ವೇಳೆ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಎರಡ್ಮೂರು ಗಂಟೆ ಮಕ್ಕಳಿಗೆ ಕಾನೂನು, ರಸ್ತೆ ನಿಯಮ, ಮೂಢನಂಬಿಕೆಗಳು, ಬಾಲ್ಯವಿವಾಹ, ದೌರ್ಜನ್ಯದಂತ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

    ಹೀಗೆ ಎರಡು ಸಾವಿರಕ್ಕೂ ಅಧಿಕ ಶಾಲೆ, ಸಭೆ, ಸಮಾರಂಭಗಳಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸಿದ್ದಾರೆ. ಅಶೋಕ್ ಕಾರ್ಯಕ್ಕೆ ಜಿಲ್ಲಾ ವರಿಷ್ಠಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವ ಇವರು ನಾ ಮರೆಯಲಿ ಹ್ಯಾಂಗ, ಹನಿಗವನಗಳು, ಮೋಡಗಳಿಲ್ಲದ ಮುಗಿಲು ಅಂತ ಮೂರು ಪುಸ್ತಕಗಳನ್ನ ಹೊರ ತಂದಿದ್ದಾರೆ. ಶೀಘ್ರವೇ ಕಾದಂಬರಿಯೊಂದನ್ನ ಹೊರತರಲಿದ್ದಾರೆ. ಜೊತೆಗೆ ಹಾಸ್ಯ ಕಲಾವಿದರೂ ಆಗಿದ್ದಾರೆ.

     

  • ಚಿಕ್ಕಬಳ್ಳಾಪುರಕ್ಕೆ ಸಿಎಂ ಭೇಟಿ: ರಾಶಿ ರಾಶಿ ಬೀಡಿ, ಸಿಗರೇಟ್, ಮದ್ಯದ ಪ್ಯಾಕೆಟ್ ಜಪ್ತಿ

    ಚಿಕ್ಕಬಳ್ಳಾಪುರಕ್ಕೆ ಸಿಎಂ ಭೇಟಿ: ರಾಶಿ ರಾಶಿ ಬೀಡಿ, ಸಿಗರೇಟ್, ಮದ್ಯದ ಪ್ಯಾಕೆಟ್ ಜಪ್ತಿ

    ಚಿಕ್ಕಬಳ್ಳಾಪುರ:  ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ನಗರದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ನಗರದ ಭಗತ್‍ಸಿಂಗ್ ಕ್ರೀಡಾಂಗಣದಲ್ಲಿ ಬೃಹತ್ ವೇದಿಕೆಯನ್ನ ನಿರ್ಮಾಣ ಮಾಡಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

    ಭದ್ರತೆ ದೃಷ್ಟಿಯಿಂದ ಸಿಎಂ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಸಾರ್ವಜನಿಕರನ್ನ ಕ್ರೀಡಾಂಗಣದ ಪ್ರವೇಶ ದ್ವಾರದಲ್ಲಿ ತೀವ್ರ ತಪಾಸಣೆ ನಡೆಸಲಾಗಿತ್ತು. ತಪಾಸಣೆ ವೇಳೆ ಸಾರ್ವಜನಿಕರ ಬಳಿ ರಾಶಿ ರಾಶಿ ಬೀಡಿ, ಬೆಂಕಿಪಟ್ಟಣ, ಸಿಗರೇಟ್ ಪಾಕೆಟ್, ಮದ್ಯದ ಪಾಕೆಟ್‍ಗಳು ದೊರೆತಿದ್ದು ಎಲ್ಲವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಪ್ರವೇಶ ದ್ವಾರದಲ್ಲೇ ಬೀಡಿ, ಬೆಂಕಿ ಪಟ್ಟಣ, ಗುಟ್ಕಾ, ಮದ್ಯದ ಪಾಕೆಟ್ ಗಳನ್ನು ರಾಶಿ ಮಾಡಿದ್ದು, ಬೀಡಿ ಪಾಕೆಟ್ ಗಳನ್ನ ಪೊಲೀಸರ ಕಣ್ಣು ತಪ್ಪಿಸಿ ಹಲವರು ಕದ್ದು ಒಯ್ದಿದ್ದಾರೆ. ಆದ್ರೆ ಬೀಡಿ ಸಿಗರೇಟನ್ನು ಕಸಿದುಕೊಂಡ ಪೊಲೀಸರ ಕ್ರಮಕ್ಕೆ ಹಲವರು ಆಕ್ಷೇಪ ಕೂಡ ವ್ಯಕ್ತಪಡಿಸಿದ್ದು ಕಂಡು ಬಂತು.

     

     

  • ಶರತ್ ಶವಯಾತ್ರೆ ವೇಳೆ ಕಲ್ಲು ತೂರಾಟ ಪೂರ್ವನಿಯೋಜಿತ ಕೃತ್ಯ: ಎಸ್‍ಪಿ ಸುಧೀರ್ ರೆಡ್ಡಿ

    ಶರತ್ ಶವಯಾತ್ರೆ ವೇಳೆ ಕಲ್ಲು ತೂರಾಟ ಪೂರ್ವನಿಯೋಜಿತ ಕೃತ್ಯ: ಎಸ್‍ಪಿ ಸುಧೀರ್ ರೆಡ್ಡಿ

    – ಸಹಜ ಸ್ಥಿತಿಯತ್ತ ಮಂಗಳೂರು

    ಮಂಗಳೂರು: ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಅವರ ಶವಯಾತ್ರೆಯ ವೇಳೆ ದಕ್ಷಿಣಕನ್ನಡ ಜಿಲ್ಲೆಯ ಬಿ.ಸಿ ರೋಡ್, ಕೈಕಂಬದಲ್ಲಿ ಶನಿವಾರ ನಡೆದ ಕಲ್ಲು ತೂರಾಟ ಪ್ರಕರಣ ಪೂರ್ವನಿಯೋಜಿತ ಕೃತ್ಯ ಎಂದು ಎಸ್‍ಪಿ ಸುಧೀರ್ ರೆಡ್ಡಿ ಹೇಳಿದ್ದಾರೆ.

    ಈ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕಲ್ಲು ತೂರಾಟ ಪ್ರಕರಣ ಸಂಬಂಧ ಬಂಧಿತರ ಸಂಖ್ಯೆ 13 ಕ್ಕೆ ಏರಿಕೆಯಾಗಿದೆ. ಕಳೆದ ರಾತ್ರಿ ಮತ್ತೆ ಮೂರು ಜನರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದ್ರು.

    ಇದೊಂದು ಪೂರ್ವ ನಿಯೋಜಿತ ಕೃತ್ಯ ಹೊರ ರಾಜ್ಯದಿಂದ ಬಂದವರಿಂದ ದುಷ್ಕೃತ್ಯವಾಗಿದೆ. ಗಲಾಟೆ ಎಬ್ಬಿಸಿದವರಲ್ಲಿ ಹೊರ ರಾಜ್ಯದ 3 ಮಂದಿ ಇದ್ದಾರೆ. ಸ್ಥಳೀಯರು ಅವರಿಗೆ ಸಹಕಾರ ಕೊಟ್ಟಿದ್ದಾರೆ. ಸ್ಥಳದಲ್ಲಿ ಉದ್ರಿಕ್ತರ ಗುಂಪು ಗಲಾಟೆ ಮಾಡಿದ್ದಲ್ಲ. ದುಷ್ಕರ್ಮಿಗಳ ಗುಂಪು ಸೇರಿಕೊಂಡು ಕಾನೂನು ಮೀರಿದ್ದಾರೆ ಎಂದು ಮಾಹಿತಿ ನೀಡಿದರು.

    ಈಗ ಜಿಲ್ಲೆಯಲ್ಲಿ 1300 ಪೊಲೀಸರಿಂದ ಬಂದೋಬಸ್ತ್ ಇದೆ. ಪೊಲೀಸರು ರಾತ್ತಿ ಹಗಲು ಗಸ್ತಿನಲ್ಲಿದ್ದಾರೆ. ಸ್ಥಳದಲ್ಲಿ 1 ಕೆಎಸ್‍ಆರ್‍ಪಿ, ನಾಲ್ಕೈದು ಜೀಪ್ ಗಳಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದಾರೆ. ಸದ್ಯಕ್ಕೆ ಮಂಗಳೂರು ಸಹಜ ಸ್ಥಿತಿಯತ್ತ ಮರಳುತ್ತಿದೆ ಎಂದು ಎಸ್‍ಪಿ ಸುಧೀರ್ ರೆಡ್ಡಿ ತಿಳಿಸಿದರು.

    ಬಿ.ಸಿ ರೋಡ್, ಕೈಕಂಬ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್.ಪಿ ಮತ್ತು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಬಿ.ಸಿ ರೋಡ್ ಪೊಲೀಸ್ ಠಾಣೆಯಲ್ಲಿ ಮುಂದಿನ ತೀರ್ಮಾನಗಳ ಬಗ್ಗೆ ಸಮಾಲೋಚನೆ ನಡೆಯಲಿದೆ. ಜಿಲ್ಲಾಧಿಕಾರಿ ಡಾ. ಜಗದೀಶ್, ಎಸ್‍ಪಿ ಸುಧೀರ್ ರೆಡ್ಡಿ ನೇತೃತ್ವದಲ್ಲಿ ಸಭೆ ನಡೆದ ನಂತರ ಎಲ್ಲ ಧರ್ಮದ ಮುಖಂಡರ ಶಾಂತಿ ಸಭೆ ಕರೆಯುವ ಸಾಧ್ಯತೆಯಿದೆ ಎಂದು ಹೇಳಿದರು.

    https://youtu.be/W_LO6IqC1t8

    https://youtu.be/TDEHgoWk-VE

    https://www.youtube.com/watch?v=dRXd-979Hng